All posts by nagaraj11081993

‘ಧುರಂಧರ್ 2’ ಬಳಿಕ ಆದಿತ್ಯ ಧರ್ ಮುಂದೆ ಮೂರು ದಾರಿ

‘ಧುರಂಧರ್ 2’ ಬಳಿಕ ಆದಿತ್ಯ ಧರ್ ಮುಂದೆ ಮೂರು ದಾರಿ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಸಿನಿಮಾ, ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ‘ಧುರಂದರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಆದಿತ್ಯ ಧರ್, ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಸೇರಿಬಿಟ್ಟಿದ್ದಾರೆ. ಇದೀಗ ಆದಿತ್ಯ ಧರ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಿನಿಮಾ ಪ್ರೇಕ್ಷಕರಿಗೆ ಮೂಡಿದೆ. ಆದಿತ್ಯ ಧರ್ ಅವರ ಮುಂದೆ ಸದ್ಯಕ್ಕೆ ಮೂರು ಹಾದಿ ಇದೆ. ಅವರು ಯಾವುದು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಆದಿತ್ಯ ಧರ್, ಅವರು ಐತಿಹಾಸಿಕ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೌರ್ಯ ಸಾಮ್ರಾಜ್ಯದ ದೊರೆ ಚಂದ್ರಗುಪ್ತ ಮೌರ್ಯನ ಕತೆಯನ್ನು ಸಿನಿಮಾ ಮಾಡುವ ಯೋಜನೆ ಅವರ ಮುಂದಿದೆ. ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯರ ಕತೆಯನ್ನು ಆದಿತ್ಯ ಧರ್ ತೆರೆ ಮೇಲೆ ತರಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಚಂದ್ರಗುಪ್ತ ಮೌರ್ಯನಾಗಿ ರಣ್ವೀರ್ ಸಿಂಗ್ ಮತ್ತು ಚಾಣಕ್ಯನಾಗಿ ಆದಿತ್ಯ ಅವರ ನೆಚ್ಚಿನ ನಟ ಅಕ್ಷಯ್ ಖನ್ನಾ ನಟಿಸಲಿದ್ದಾರಂತೆ.

ಆದಿತ್ಯ ಧರ್ ಅವರಿಗೆ ಅಶ್ವತ್ಥಾಮನ ಕುರಿತು ಸಿನಿಮಾ ಮಾಡುವ ಕನಸು ಹಲವು ವರ್ಷಗಳಿಂದಲೂ ಇದೆ. ಈ ವಿಷಯವನ್ನು ಈ ಹಿಂದೆಯೂ ಸಹ ಅವರು ಹೇಳಿಕೊಂಡಿದ್ದರು. ಆದರೆ ಅದಕ್ಕೆ ಅತಿಯಾದ ವಿಎಫ್​​ಎಕ್ಸ್, ಸೆಟ್​ಗಳ ಅವಶ್ಯಕತೆ ಇದೆ, ಅದಕ್ಕೆ ಭಾರಿ ಬಂಡವಾಳ ಬೇಕಾಗುತ್ತದೆ ಎಂದು ಆದಿತ್ಯ ಹೇಳಿದ್ದರು. ಇದೀಗ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿದ್ದು, ಎರಡೂ ಸಿನಿಮಾಗಳಿಗೆ ಆದಿತ್ಯ ಧರ್ ಸಹ ನಿರ್ಮಾಪಕರೂ ಸಹ ಆಗಿರುವ ಕಾರಣ, ಇದೀಗ ‘ಅಶ್ವತ್ಥಾಮ’ ಸಿನಿಮಾ ಮಾಡುವಷ್ಟು ಬಂಡವಾಳ ಒಟ್ಟುಗೂಡಿರುವ ಕಾರಣ ಹಾಗೂ ಆದಿತ್ಯ ಮೇಲೆ ಬಂಡವಾಳ ಹೂಡಲು ದೊಡ್ಡ ನಿರ್ಮಾಣ ಸಂಸ್ಥೆಗಳು ರೆಡಿಯಾಗಿವೆ ಹಾಗಾಗಿ ಇದೀಗ ಅವರು ‘ಅಶ್ವತ್ಥಾಮ’ ಸಿನಿಮಾಕ್ಕೆ ಕೈ ಹಾಕುವ ಸಾಧ್ಯತೆಯೂ ಇದೆ.

ಇದನ್ನೂ ಓದಿ:‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

ಇನ್ನು ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರ ಮೊದಲ ಸಿನಿಮಾ ಮಾದರಿಯಲ್ಲೇ ಭಾರತೀಯ ಸೇನೆಯ ಆಪರೇಷನ್ ಒಂದರ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದಿತ್ಯ ಧರ್ ನಿರ್ದೇಶನ ಮಾಡಿದ್ದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ಭಾರತೀಯ ಸೇನೆಯ ಕುರಿತಾಗಿಯೇ ಮತ್ತೊಂದು ಸಿನಿಮಾವನ್ನು ಆದಿತ್ಯ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಮೂರು ಸಿನಿಮಾಗಳಲ್ಲಿ ಆದಿತ್ಯ ಅವರು ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!

ಕೊಡಗು, ಏಪ್ರಿಲ್​ 04: ಪ್ರವಾಸಿಗರ ಬಸ್​​ವೊಂದು ಕಾರಿನ‌ ಮೇಲೆ ಉರುಳಿ ಬಿದ್ದಿರುವಂತಹ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರು ಪವಾಡ ಸದೃಶ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ‌ ಸುದೀಪ್​ ಅತಿ ವೇಗವಾಗಿ ಬಸ್ ಚಲಾಯಿಸಿದ್ದಾರೆ. ಈ ವೇಳೆ ರಸ್ತೆ‌ ಬದಿ‌ ನಿಂತಿದ್ದ ಕಾರಿನ‌ ಮೇಲೆ ಬಸ್ ಉರುಳಿ ಬಿದ್ದಿದೆ. ಸದ್ಯ ​​ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

DC vs MI Playing XI: ಟಾಸ್ ಗೆದ್ದ ಡೆಲ್ಲಿ; ನಾಯಕ ಸೇರಿದಂತೆ ಮುಂಬೈ ತಂಡದಲ್ಲಿ 3 ಬದಲಾವಣೆ

ಐಪಿಎಲ್ 19 ನೇ ಸೀಸನ್​ನ ಮೊದಲ ಡಬಲ್ ಹೆಡರ್​ನ ಮೊದಲ ಮತ್ತು ಎಂಟನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯ ದೆಹಲಿಯ ತವರು ಮೈದಾನದಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಸೀಸನ್​ನಲ್ಲಿ ಎರಡೂ ತಂಡಗಳ ಎರಡನೇ ಪಂದ್ಯ ಇದಾಗಿದೆ. ಎರಡೂ ತಂಡಗಳು ಸೀಸನ್ ಅನ್ನು ಗೆಲುವಿನೊಂದಿಗೆ ಆರಂಭಿಸಿವೆ. ಆದ್ದರಿಂದ, ಎರಡೂ ತಂಡಗಳು ಈ ಗೆಲುವಿನ ಓಟವನ್ನು ಮುಂದುವರೆಸಲು ಪ್ರಯತ್ನಿಸಲಿವೆ.

ಟಾಸ್ ಗೆದ್ದ ಡೆಲ್ಲಿ

ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ಹೀಗಾಗಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಬಳಿಕ ಮಾತನಾಡಿದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದರು. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಈ ಪಂದ್ಯದಲ್ಲೂ ಆಡಲಿದೆ. ಇನ್ನು ಮುಂಬೈ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯದ ಕಾರಣ ಈ ಪಂದ್ಯವನ್ನು ಆಡುತ್ತಿಲ್ಲ. ಅವರ ಬದಲಿಗೆ ದೀಪಕ್ ಚಾಹರ್ ಆಡುತ್ತಿದ್ದಾರೆ. ಹಾಗೆಯೇ ಟ್ರೆಂಟ್ ಬೌಲ್ಟ್ ಬದಲಿಗೆ ಕಾರ್ಬಿನ್ ಬಾಷ್ ಆಡುತ್ತಿದ್ದರೆ, ಗಜಾನಫರ್ ಬದಲಿಗೆ ಮಿಚೆಲ್ ಸ್ಯಾಂಟ್ನರ್ ಆಡುತ್ತಿದ್ದಾರೆ.

ಮುಂಬೈ-ಡೆಲ್ಲಿ ಮುಖಾಮುಖಿ ದಾಖಲೆ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದುವರೆಗೆ 37 ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 21 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 16 ಪಂದ್ಯಗಳನ್ನು ಗೆದ್ದಿದೆ. ಅಂದರೆ ಈ ಮುಖಾಮುಖಿಯಲ್ಲಿ ಮುಂಬೈ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಅವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಅದರಲ್ಲಿ ಮುಂಬೈ ಇಂಡಿಯನ್ಸ್, ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡವನ್ನು ಮಣಿಸಿದೆ. ಹೀಗಾಗಿ ಗೆದ್ದ ತಂಡಗಳ ನಡುವಿನ ಕಾಳಗ ತೀವ್ರ ಕುತೂಹಲ ಕೆರಳಿಸಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ (ನಾಯಕ), ನಮನ್ ಧೀರ್, ಶೆರ್ಫಾನೆ ರುದರ್‌ಫೋರ್ಡ್, ಶಾರ್ದೂಲ್ ಠಾಕೂರ್, ದೀಪಕ ಚಾಹರ್, ಮಿಚೆಲ್ ಸ್ಯಾಂಟ್ನರ್, ಜಸ್ಪ್ರೀತ್ ಬುಮ್ರಾ, ಕಾರ್ಬಿನ್ ಬಾಷ್.

ಡೆಲ್ಲಿ ಕ್ಯಾಪಿಟಲ್ಸ್‌: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ವಿಪ್ರಜ್ ನಿಗಮ್, ಕುಲ್ದೀಪ್ ಯಾದವ್, ಲುಂಗಿ ಎನ್‌ಗಿಡಿ, ಮುಖೇಶ್ ಕುಮಾರ್, ಟಿ ನಟರಾಜನ್.

Source link

‘ರಾಮನ ಪಾತ್ರಕ್ಕೆ ರಣಬೀರ್ ಸೂಕ್ತ ಅಲ್ಲ’; ಲಕ್ಷ್ಮಣ ಪಾತ್ರಧಾರಿಯ ನೇರ ಹೇಳಿಕೆ

ಒಂದು ಸಿನಿಮಾ ಅಥವಾ ಸೀರಿಸ್ ಮಾಡಿ ಅದು ಗಮನಸೆಳೆದರೆ ಅದು ಬ್ರ್ಯಾಂಡ್ ಆಗಿ ಬಿಡುತ್ತದೆ. ನಂತರ ಅದೇ ರೀತಿಯ ಪ್ರಾಜೆಕ್ಟ್ ಮಾಡಿದರೆ ಜನರು ಬೇಡ ಬೇಡ ಎಂದರೂ ಅದನ್ನು ಮೂಲ ಸೃಷ್ಟಿಗೆ ಹೋಲಿಕೆ ಮಾಡಿಯೇ ಮಾಡುತ್ತಾರೆ. ಈಗ ‘ರಾಮಾಯಣ’ ಸಿನಿಮಾದ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಈ ಮೊದಲು ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಪ್ರಸಾರ ಕಂಡಿತ್ತು. ಈಗ ನಿತೇಶ್ ತಿವಾರಿದ ನಿರ್ದೇಶನದ ಹೊಸ ರಾಮಾಯಣವನ್ನು ಅನೇಕರು ಆ ಧಾರಾವಾಹಿಗೆ ಹೋಲಿಕೆ ಮಾಡುತ್ತಿದ್ದಾರೆ. ವಿಎಫ್​​ಎಕ್ಸ್ ಬಗ್ಗೆಯೂ ಕೆಲವರು ಅಪಸ್ವರ ತೆಗೆದಿದ್ದಾರೆ.

ರಮಾನಂದ್ ಸಾಗರ್ ಅವರ ‘ರಾಮಾಯಣ’ ಐಕಾನಿಕ್ ಎನಿಸಿಕೊಂಡಿದೆ. ಈ ಸೀರಿಸ್​​ನಲ್ಲಿ ಸುನೀಲ್ ಲಹರಿ ಅವರು ಲಕ್ಷ್ಮಣನ ಪಾತ್ರ ಮಾಡಿದ್ದರು. ಅವರು ಟೀಸರ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರಿಗೆ ರಾಮನ ಪಾತ್ರ ರಣಬೀರ್ ಸೂಕ್ತ ಅಲ್ಲ ಎನಿಸಿದೆ. ತಮ್ಮ ಅಭಿಪ್ರಾಯವನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದಾರೆ.

‘ರಣಬೀರ್ ರಾಮನಾಗಿ ಚೆನ್ನಾಗಿ ಕಾಣುತ್ತಾರೆ ನಿಜ, ಆದರೆ ಮುಗ್ಧತೆ ಸ್ವಲ್ಪ ಕಡಿಮೆ ಕಾಣುತ್ತದೆ. ಅರುಣ್ ಗೋವಿಲ್ (ರಾಮಾಯಣ ಸರಣಿಯಲ್ಲಿ ರಾಮನ ಪಾತ್ರಧಾರಿ) ಅವರ ತಾಳ್ಮೆ, ಶಾಂತತೆ ಮತ್ತು ಮುಗ್ಧತೆ ಇಲ್ಲಿ ಕಾಣುತ್ತಿಲ್ಲ. ಆದರೆ, ರಣಬೀರ್ ತಮ್ಮ ನಟನೆಯ ಮೂಲಕ ಪಾತ್ರ ಸಮರ್ಥಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ’ ಎಂದಿದ್ದಾರೆ ಸುನೀಲ್. ರಾಮನ ಪಾತ್ರದಲ್ಲಿ ನಟಿಸಿದ ಅರುಣ್ ಗೋವಿಲ್ ಅವರನ್ನು ಅನೇಕರು ಈಗಲೂ ಪೂಜ್ಯ ಭಾವನೆಯಲ್ಲೇ ಕಾಣುತ್ತಾರೆ.

‘ರಣಬೀರ್ ಕಪೂರ್ ಲುಕ್ ಹಾರ್ಷ ಆಗಿ ಕಾಣುತ್ತದೆ. ಅವರು ಭರತ ಅಥವಾ ಲಕ್ಷ್ಮಣನ ಪಾತ್ರಕ್ಕೆ ಹೆಚ್ಚು ಸೂಕ್ತರಾಗುತ್ತಿದ್ದರು. ಈ ರೀತಿಯ ಪಾತ್ರಗಳಿಗೆ ಯಾವಾಗಲೂ ಹೊಸ ಮುಖವನ್ನು ತರಬೇಕು. ಯಾವುದೇ ವಿವಾದ ಇಲ್ಲದವರಾದರೆ ಇನ್ನೂ ಉತ್ತಮ. ಆಗ ಎಲ್ಲರೂ ಪಾತ್ರ ಒಪ್ಪುತ್ತಾರೆ’ ಎಂದು ಸುನೀಲ್ ಹೇಳಿದ್ದಾರೆ. ರಣಬೀರ್ ಕಪೂರ್ ಅನೇಕ ನಟಿಯರ ಜೊತೆ ಸುತ್ತಾಡಿದ್ದಾರೆ, ಮದ್ಯ ಸೇವನೆ ಮಾಡುತ್ತಾರೆ ಎಂಬ ಆರೋಪ ಇದ್ದು, ಒಂದು ವರ್ಗದ ಜನರು ಅವರನ್ನು ರಾಮನಾಗಿ ಸ್ವೀಕರಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಾವಣನ ಪಾತ್ರ ಮಾಡಿದ ಯಶ್​ನ ಹಾಡಿ ಹೊಗಳಿದ ರಣಬೀರ್ ಕಪೂರ್

ಹಳೆಯ ಮಹಭಾರತದಲ್ಲಿ ಕೃಷ್ಣನ ಪಾತ್ರ ಮಾಡಿದ್ದ ನಿತೀಶ್ ಭಾರದ್ವಾಜ್ ಅವರಿಗೆ ‘ರಾಮಾಯಣ’ ಟೀಸರ್ ಇಷ್ಟ ಆಗಿದೆ. ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ್ದ ದೀಪಿಕಾ ಚಿಖಲಿಯಾ ಕೂಡ ಧಾರಾವಾಹಿ ಇಷ್ಟಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

ನಾಳೆ ಬೆಂಗಳೂರಲ್ಲಿ RCB, CSK ಮ್ಯಾಚ್​​: ಅಭಿಮಾನಿಗಳಿಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಸೂಚನೆ

ಬೆಂಗಳೂರು, ಏಪ್ರಿಲ್​​ 04: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​ ನಡುವೆ ನಡೆಯಲಿರುವ ಐಪಿಎಲ್​​ ಕ್ರಿಕೆಟ್​​ ಪಂದ್ಯಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಐಪಿಎಲ್‌ ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿಗೆ ಬರುವುದು ಬೇಡ. ಒಂದೊಮ್ಮೆ ಅದಾಗಿಯೂ ಬಂದಲ್ಲಿ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಖಡಕ್​​ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಈ ಹಿಂದೆ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆದ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಅದೇ ರೀತಿ ನಾಳಿನ ಮ್ಯಾಚ್​​ ವೇಳೆಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ನಿರ್ಧಾರಗಳನ್ನ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ.

ಕಳೆದ ಮ್ಯಾಚ್​​ ಸಂದರ್ಭ ಆಗಮನ ಮತ್ತು ನಿರ್ಗಮನ ಸೇರಿ ಸುಮಾರು 32 ಸಾವಿರ ಜನ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ನಾಳಿನ ಪಂದ್ಯಕ್ಕೂ ಆಗಮಿಸಲಿರುವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಬಸ್​​ಗಳನ್ನೇ ಬಳಸಿ ಎಂದು ಕೇಳಿಕೊಳ್ಳೋದಾಗಿ ಅವರು ಹೇಳಿದ್ದಾರೆ. ಕಳೆದ  ಪಂದ್ಯದ ವೇಳೆ ಹಲವರ ಮೊಬೈಲ್‌ಫೋನ್‌ ಕಳ್ಳತನ ಆಗಿತ್ತು. ಆ ಸಂಬಂಧ ಸುಮಾರು ಜನರು ದೂರು ನೀಡಿದ್ದು, 71 ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಕೃತ್ಯ ಎಸಗಿರೋದು ಹೊರ ರಾಜ್ಯದಿಂದ ಬಂದವರು. ಹೀಗಾಗಿ ಸಾರ್ವಜನಿಕರು ತಮ್ಮ ಮೊಬೈಲ್​​ ಸೇರಿದಂತೆ ಇನ್ನಿತರ ವಸ್ತುಗಳ ಬಗ್ಗೆ ಮ್ಯಾಚ್​​ ವೇಳೆ ಗಮನವಹಿಸಿ ಎಂದೂ ಸೀಮಾಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.

ಇದನ್ನೂ ಓದಿ: ಅತ್ತ ಗ್ಯಾಸ್​​ಗಾಗಿ ಆಟೋ ಚಾಲಕರ ಪರದಾಟ; ಇತ್ತ ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು

ಮೆಟ್ರೋ ಸಂಚಾರ ಸಮಯ ವಿಸ್ತರಣೆ

ನಾಳೆ ನಡೆಯಲಿರುವ ಐಪಿಎಲ್​​ ಪಂದ್ಯದ ಪ್ರಯುಕ್ತ ನಮ್ಮ ಮೆಟ್ರೋ ರೈಲುಗಳ ಸಂಚಾರ ಸಮಯ ವಿಸ್ತರಣೆ ಮಾಡಿರುವ ಬಗ್ಗೆ ಈಗಾಗಲೇ ಬಿಎಂಆರ್​​ಸಿಎಲ್​​ ಪ್ರಕಟಣೆ ಮೂಲಕ ತಿಳಿಸಿದೆ. ಅಭಿಮಾನಿಗಳಿಗೆ ಸುಲಭ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮುಂದಿನ ದಿನದ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ವೈಟ್‌ಫೀಲ್ಡ್ (ಕಾಡುಗೋಡಿ)ಯಿಂದ ರಾತ್ರಿ 12.30ಕ್ಕೆ, ಚೆಲ್ಲಘಟ್ಟದಿಂದ ರಾತ್ರಿ 12.45ಕ್ಕೆ, ರೇಷ್ಮೆ ಸಂಸ್ಥೆ ಮತ್ತು ಮಾದಾವರದಿಂದ ರಾತ್ರಿ 12.45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 12.30ಕ್ಕೆ ಹಾಗೂ ಆರ್.ವಿ. ರಸ್ತೆಯಿಂದ ರಾತ್ರಿ 2.00ಕ್ಕೆ ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮಜೆಸ್ಟಿಕ್​​ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಓ ಮೈ ಗಾಡ್! ಭಾರತದ ಈ ಪ್ರದೇಶಗಳನ್ನು ಛಿದ್ರ ಛಿದ್ರ ಮಾಡಲು ನಡೆದಿತ್ತು ದೊಡ್ಡ ಪ್ಲಾನ್: ಪಾಕ್ ಹ್ಯಾಂಡ್ಲರ್ ಸಂಚು ಹೇಗಿತ್ತು?

ಲಖನೌ, ಏ.4: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ಹೊಂಚು ಹಾಕಿದ್ದ ಭಯೋತ್ಪಾದನಾ ಜಾಲವೊಂದನ್ನು ಉತ್ತರ ಪ್ರದೇಶದ ಎಟಿಎಸ್ (ATS) ಯಶಸ್ವಿಯಾಗಿ ಭೇದಿಸಿದೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಗ್ಯಾಂಗ್‌ನ ಮುಖ್ಯಸ್ಥ ಮೀರತ್ ನಿವಾಸಿ ಸಾಕಿಬ್ ಅಲಿಯಾಸ್ ಡೆವಿಲ್ ಸೇರಿದಂತೆ ಗೌತಮ್ ಬುದ್ಧ ನಗರದ ವಿಕಾಸ್ ಗಹ್ಲಾವತ್ ಅಲಿಯಾಸ್ ರೌನಕ್, ಲೋಕೇಶ್ ಅಲಿಯಾಸ್ ಪಪ್ಲಾ ಮತ್ತು ಮೀರತ್‌ನ ಅರ್ಬಾಬ್ ಎಂಬುವವರನ್ನು ಎಟಿಎಸ್ ತಂಡ ಬಂಧಿಸಿದೆ. ಈ ಗುಂಪು ಪ್ರತಿಷ್ಠಿತ ಸಂಸ್ಥೆಗಳು, ವಾಹನಗಳು ಮತ್ತು ರೈಲ್ವೇ ಸಿಗ್ನಲ್ ಬಾಕ್ಸ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ಭಯದ ವಾತಾವರಣ ಸೃಷ್ಟಿಸಲು ಯೋಜಿಸಿತ್ತು. ಈಗಾಗಲೇ ಕೆಲವು ಕಡೆ ಸಣ್ಣ ಪುಟ್ಟ ಅಗ್ನಿ ಅವಘಡಗಳನ್ನು ಎಸಗಿದ್ದರು.

ಸಾಕಿಬ್ ಟೆಲಿಗ್ರಾಮ್, ಸಿಗ್ನಲ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಎನ್‌ಕ್ರಿಪ್ಟೆಡ್ ಆಪ್‌ಗಳ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಇವರ ಸಂಪರ್ಕ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಹಲವು ಸಂಖ್ಯೆಗಳು ಸಹ ಪತ್ತೆಯಾಗಿವೆ. ಕೃತ್ಯ ಎಸಗಿದ ನಂತರ ಅದರ ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಪ್ರತಿಯಾಗಿ QR ಕೋಡ್‌ಗಳ ಮೂಲಕ ಹಣವನ್ನು ಪಡೆಯುತ್ತಿದ್ದರು.

ಇದನ್ನೂ ಓದಿ: ಗಂಡು ಮಗು ಬೇಕೆಂಬ ಹಠಕ್ಕೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನೇ ಕೊಂದು ಈಜುಕೊಳಕ್ಕೆ ಎಸೆದ ಕಟುಕ ತಂದೆ

ಸಾಮಾಜಿಕ ಜಾಲತಾಣಗಳ ಮೂಲಕ ವಿಕಾಸ್ ಮತ್ತು ಲೋಕೇಶ್‌ನನ್ನು ಹಣದ ಆಮಿಷವೊಡ್ಡಿ ಈ ಜಾಲಕ್ಕೆ ಸೇರಿಸಿಕೊಳ್ಳಲಾಗಿತ್ತು. ಇವರಿಗೆ ಅಲ್-ಖೈದಾ ಮತ್ತು ಗಜ್ವಾ-ಎ-ಹಿಂದ್‌ನಂತಹ ಉಗ್ರಗಾಮಿ ವಿಚಾರಧಾರೆಗಳಿಂದ ಪ್ರೇರೇಪಿಸಲಾಗುತ್ತಿತ್ತು. ಆರೋಪಿಗಳಿಂದ ಸ್ಫೋಟಕ ಪದಾರ್ಥಗಳು, ಉರಿಯುವ ದ್ರವಗಳು, 7 ಮೊಬೈಲ್ ಫೋನ್‌ಗಳು, 24 ಕರಪತ್ರಗಳು ಮತ್ತು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ 2 ರಂದು ಲಖನೌ ರೈಲ್ವೇ ನಿಲ್ದಾಣದ ಬಳಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಇವರು ಸಂಚು ರೂಪಿಸಿದ್ದರು, ಆದರೆ ಎಟಿಎಸ್ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅತ್ತ ಗ್ಯಾಸ್​​ಗಾಗಿ ಆಟೋ ಚಾಲಕರ ಪರದಾಟ: ಇತ್ತ ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು

ಬೆಂಗಳೂರು, ಏಪ್ರಿಲ್​ 04: ಗಲ್ಫ್​​​ ರಾಷ್ಟ್ರಗಳಲ್ಲಿನ ಯುದ್ಧದಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇತ್ತ ಗ್ಯಾಸ್​ಗಾಗಿ ಬಂಕ್​ಗಳ ಮುಂದೆ ಆಟೋ ಚಾಲಕರು ಕ್ಯೂನಿಂತಿದ್ದಾರೆ. ಈ ಮಧ್ಯೆ ವಿಧಾನಸೌಧದಲ್ಲಿ ಐಪಿಎಲ್ ಟಿಕೆಟ್​ಗಾಗಿ ಶಾಸಕರ ಪಿಎಗಳು ಕ್ಯೂನಿಂತಿದ್ದಾರೆ. ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಪಂದ್ಯ ನಡೆಯಲಿದೆ. ಹೀಗಾಗಿ ವಿಧಾನಸೌಧದ ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಕೊಠಡಿಯಲ್ಲಿ ಪ್ರತಿಯೊಬ್ಬ ಶಾಸಕರಿಗೆ ತಲಾ 3 ಐಪಿಎಲ್ ಟಿಕೆಟ್ ವಿತರಣೆ ಮಾಡಲಾಗಿದೆ. ಸರತಿಸಾಲಿನಲ್ಲಿ ನಿಂತು ಶಾಸಕರ ಪಿಎಗಳು ಟಿಕೆಟ್ ಪಡೆದುಕೊಂಡಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

DC vs MI IPL 2026 Live Score: ಸತತ 2ನೇ ಗೆಲುವಿನ ಹುಡುಕಾಟದಲ್ಲಿ ಡೆಲ್ಲಿ- ಮುಂಬೈ – Kannada News | Delhi Capitals vs Mumbai Indians IPL 2026 Live Cricket Score DC vs MI Match on 4th April latest news in Kannada

ಐಪಿಎಲ್ 2026 ರ 8 ನೇ ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಇದರಲ್ಲಿ ಆತಿಥೇಯ ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರಸ್ಪರ ಮುಖಾಮುಖಿಯಾಗಿವೆ. ಎರಡೂ ತಂಡಗಳು ಈ ಆವೃತ್ತಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ್ದು, ಈಗ ಸತತ ಎರಡನೇ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಅವಕಾಶವನ್ನು ಹೊಂದಿವೆ. ದೆಹಲಿ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದರೆ, ಇತ್ತ ಮುಂಬೈ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ದಾಖಲೆ ಗೆಲುವು ಸಾಧಿಸಿತ್ತು.

Source link

RCBಯ 5ನೇ ವಿದೇಶಿ ಆಟಗಾರ… ವಿರಾಟ್ ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್​..!

ಐಪಿಎಲ್ 2026ರ ಸೀಸನ್ ಆರಂಭವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರ ಸುದ್ದಿ ವೈರಲ್ ಆಗಿತ್ತು. ಅದೇನೆಂದರೆ, “ಈ ಬಾರಿ ಆರ್‌ಸಿಬಿ ತಂಡದಲ್ಲಿ 5 ವಿದೇಶಿ ಆಟಗಾರರು ಆಡುತ್ತಿದ್ದಾರೆ” ಎಂಬುದು. ಐಪಿಎಲ್ ನಿಯಮದ ಪ್ರಕಾರ ಪ್ಲೇಯಿಂಗ್ ಇಲೆವೆನ್​ನಲ್ಲಿ ಕೇವಲ ನಾಲ್ವರು ವಿದೇಶಿಯರಿಗೆ ಮಾತ್ರ ಅವಕಾಶವಿದೆ, ಹಾಗಿದ್ದ ಮೇಲೆ ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿಬರಬಹುದು.

ಆದರೆ ಅಸಲಿ ವಿಷಯ ಎಂದರೆ, ಇಲ್ಲಿ 5ನೇ ವಿದೇಶಿ ಆಟಗಾರ ಬೇರೆ ಯಾರೂ ಅಲ್ಲ, ಅದು ನಮ್ಮ ವಿರಾಟ್ ಕೊಹ್ಲಿ! ಕೊಹ್ಲಿ ಅವರು ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ, ಅಭಿಮಾನಿಗಳು ತಮಾಷೆಯಾಗಿ ಅವರನ್ನು “ಓವರ್‌ಸೀಸ್ ಪ್ಲೇಯರ್” (ವಿದೇಶಿ ಆಟಗಾರ) ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಚಾಯಿಸಿದ್ದರು.

ಇದನ್ನೇ  ಆರ್‌ಸಿಬಿ ಇನ್ಸೈಡರ್ ಶೋನಲ್ಲಿ ಮಿಸ್ಟರ್ ನಾಗ್ಸ್ (ದಾನಿಶ್ ಸೇಠ್) ಪ್ರಸ್ತಾಪಿಸಿ ಕೊಹ್ಲಿಯ ಕಾಲೆಳೆದಿದ್ದಾರೆ. ನೀವು ಆರ್​ಸಿಬಿಯ 5ನೇ ವಿದೇಶಿ ಆಟಗಾರನಲ್ಲವೇ ಎಂದು ಕೇಳಿದಾಗ, ಕೊಹ್ಲಿ ನಗುತ್ತಾ, “ನನಗೇನು ಗೊತ್ತು, ನನ್ನನ್ನೇಕೆ ಕೇಳುತ್ತಿದ್ದೀಯಾ? ವಿದೇಶಿ ಆಟಗಾರರನ್ನೇ ಕೇಳು. ನಾನು ವಿದೇಶಿ ಆಟಗಾರನಲ್ಲ” ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

 

Source link

Indian Railways Jobs 2026: ಭಾರತೀಯ ರೈಲ್ವೆಯಲ್ಲಿ ಬೃಹತ್ ಉದ್ಯೋಗಾವಕಾಶ; 6,565 ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆಯು 2026 ನೇ ಸಾಲಿನಲ್ಲಿ ನಿರುದ್ಯೋಗಿ ಯುವಕರಿಗೆ ಬೃಹತ್ ಉದ್ಯೋಗಾವಕಾಶ ವನ್ನು ಘೋಷಿಸಿದೆ. ಒಟ್ಟು 6,565 ತಂತ್ರಜ್ಞ (Technician) ಹುದ್ದೆಗಳ ಭರ್ತಿಗೆ ರೈಲ್ವೆ ಸಚಿವಾಲಯವು ಅಧಿಕೃತವಾಗಿ ಅನುಮೋದನೆ ನೀಡಿದ್ದು, ಈ ಪ್ರಕ್ರಿಯೆಯನ್ನು ರೈಲ್ವೆ ನೇಮಕಾತಿ ಮಂಡಳಿ (RRB) ಮೂಲಕ ಶೀಘ್ರದಲ್ಲೇ ಆರಂಭಿಸಲಾಗುವುದು. ರೈಲ್ವೆ ಮಂಡಳಿಯು ಈಗಾಗಲೇ ಎಲ್ಲಾ ವಲಯಗಳಿಂದ ಖಾಲಿ ಹುದ್ದೆಗಳ ಪಟ್ಟಿಯನ್ನು ಪಡೆದಿದ್ದು, ಮುಂದಿನ ಒಂದು ವಾರದೊಳಗೆ ಅಂತಿಮ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ.

39 ವಿಭಾಗಗಳಲ್ಲಿ ನೇಮಕಾತಿ ಮತ್ತು ಸರಳೀಕರಣ:

ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ತಾಂತ್ರಿಕ ಕೊರತೆಯನ್ನು ನೀಗಿಸಲು 39 ವಿವಿಧ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ. ವಿಶೇಷವಾಗಿ ಮೆಕ್ಯಾನಿಕಲ್ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಹೆಚ್ಚಿನ ತಂತ್ರಜ್ಞರ ಅಗತ್ಯವಿರುವುದರಿಂದ ಈ ಹಂತವು ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಈ ಬಾರಿ ನೇಮಕಾತಿಯನ್ನು ಪಾರದರ್ಶಕವಾಗಿಸಲು ಎಲ್ಲಾ ವರ್ಗದ ಹುದ್ದೆಗಳನ್ನು ಸಂಯೋಜಿಸಲಾಗಿದ್ದು, ಅಭ್ಯರ್ಥಿಗಳ ಅರ್ಹತೆ ಮತ್ತು ವೈದ್ಯಕೀಯ ಮಾನದಂಡಗಳ ಆಧಾರದ ಮೇಲೆ ಆಯಾ ವಲಯಗಳಿಗೆ ನೇಮಕ ಮಾಡಲಾಗುತ್ತದೆ.

ವಲಯವಾರು ಖಾಲಿ ಹುದ್ದೆಗಳ ಹಂಚಿಕೆ:

ರೈಲ್ವೆಯ ವಿವಿಧ ವಲಯಗಳಲ್ಲಿ ಮಂಜೂರಾದ ಹುದ್ದೆಗಳ ವಿವರ ಇಂತಿದೆ:

  • ಪ್ರಮುಖ ವಲಯಗಳು: ಕೇಂದ್ರ ರೈಲ್ವೆಯಲ್ಲಿ ಅತಿ ಹೆಚ್ಚು ಅಂದರೆ 870 ಹುದ್ದೆಗಳಿವೆ. ದಕ್ಷಿಣ ರೈಲ್ವೆ (785), ಈಶಾನ್ಯ ಗಡಿನಾಡು ರೈಲ್ವೆ (701), ಆಗ್ನೇಯ ರೈಲ್ವೆ (576), ಮತ್ತು ಪಶ್ಚಿಮ ರೈಲ್ವೆ (544) ವಲಯಗಳಲ್ಲಿ ಗಮನಾರ್ಹ ಸಂಖ್ಯೆಯ ಹುದ್ದೆಗಳು ಖಾಲಿ ಇವೆ.
  • ಕರ್ನಾಟಕ ವಲಯ: ನೈಋತ್ಯ ರೈಲ್ವೆ (SWR) ವ್ಯಾಪ್ತಿಯಲ್ಲಿ 240 ತಂತ್ರಜ್ಞ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
  • ಉತ್ಪಾದನಾ ಘಟಕಗಳು: ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 236 ಮತ್ತು ಉತ್ತರ ಮಧ್ಯ ರೈಲ್ವೆಯಲ್ಲಿ 268 ಹುದ್ದೆಗಳು ಲಭ್ಯವಿವೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಲೋಕೋ ಪೈಲಟ್ ಹುದ್ದೆಗಳ ಬೃಹತ್ ಅಧಿಸೂಚನೆ:

ತಂತ್ರಜ್ಞ ಹುದ್ದೆಗಳ ಜೊತೆಗೆ ರೈಲ್ವೆ ಇಲಾಖೆಯು ರೈಲು ಚಾಲಕರ ನೇಮಕಾತಿಗೂ ಆದ್ಯತೆ ನೀಡಿದೆ. ವಿವಿಧ ವಲಯಗಳಲ್ಲಿ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳು ಖಾಲಿ ಇದ್ದು, ಈಗಾಗಲೇ ಈ ಕುರಿತು ಪ್ರಾಥಮಿಕ ಸೂಚನೆಯನ್ನು ನೀಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೇ 15, 2026 ರಿಂದ ಆನ್‌ಲೈನ್ ಮೂಲಕ ತಮ್ಮ ನೋಂದಣಿಯನ್ನು ಪ್ರಾರಂಭಿಸಬಹುದು.

ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ:

ಈ ಬೃಹತ್ ನೇಮಕಾತಿ ಪ್ರಕ್ರಿಯೆಯು ಕೇವಲ ಉದ್ಯೋಗ ಸೃಷ್ಟಿಯಷ್ಟೇ ಅಲ್ಲದೆ, ರೈಲ್ವೆ ಕಾರ್ಯಾಚರಣೆಯನ್ನು ಮತ್ತಷ್ಟು ಸುಗಮಗೊಳಿಸಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಪೂರಕವಾಗಿದೆ. ಸಾವಿರಾರು ಯುವಕರಿಗೆ ಸರ್ಕಾರಿ ಕೆಲಸದ ಕನಸನ್ನು ನನಸು ಮಾಡಿಕೊಳ್ಳಲು ಈ ನೇಮಕಾತಿ ಅಭಿಯಾನವು ಒಂದು ಸುವರ್ಣ ಅವಕಾಶವಾಗಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link