ಗ್ಯಾಸ್ ಟ್ರಬಲ್: ನಾಡಿನಿಂದ ಕಾಡಿಗೆ, ಅರಣ್ಯದಲ್ಲಿ ಸೌದೆಗಾಗಿ ಮುಗಿಬಿದ್ದ ಜನ
ಕಾರವಾರ, (ಮಾರ್ಚ್ 31): ಗಲ್ಫ್ ರಾಷ್ಟ್ರಗಳ ಕಾಳಗ ಕೊನೆ ಆಗುತ್ತಿಲ್ಲ. ಜನರ ಪರದಾಟ ಅಂತ್ಯವಾಗುತ್ತಿಲ್ಲ. ಗ್ಯಾಸ್ ಅಭಾವದಿಂದ ಹತ್ತಾರು ಸಮಸ್ಯೆ ಉದ್ಭವ ಆಗಿವೆ. ಗ್ಯಾಸ್ ಸಿಲಿಂಡರ್ (lpg Gas cylinder) ಸಿಗದಿದ್ದಕ್ಕೆ ಹಳ್ಳಿ ಕಡೆ ಜನರು ಸೌದೆ ಒಲೆ ಮೊರೆ ಹೋಗಿದ್ದು, ಸೌದೆಗಾಗಿ (Wood) ಅರಣ್ಣದಲ್ಲಿ ಮುಗಿಬಿದ್ದಿದ್ದಾರೆ. ಹೌದು…ಉತ್ತರ ಕನ್ನಡ (Uttara Kananda) ಜಿಲ್ಲೆಯ ಮುಂಡಗೋಡಿನ ಕೆಎಫ್ಡಿಸಿ ಅರಣ್ಯ ಪ್ರದೇಶದಲ್ಲಿ ಜನರು ಸೌದೆಗಾಗಿ ಮುಗಿದ್ದಿದ್ದಾರೆ. ಪ್ರತಿ ವರ್ಷ ಅಕೇಶಿಯಾ ಮರಗಳ ಕಟಾವಿನ ಬಳಿಕ ಅರಣ್ಯ ಇಲಾಖೆ, ಸಣ್ಣಪುಟ್ಟ…