Gold Rates: ಚಿನ್ನದ ಬೆಲೆ ಭರ್ಜರಿ ಹೆಚ್ಚಳ; ಇಲ್ಲಿದೆ ದರಪಟ್ಟಿ
ಬೆಂಗಳೂರು, ಮಾರ್ಚ್ 29: ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇದರ ಬೆಲೆ (Gold Rates) ಸತತವಾಗಿ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ಗ್ರಾಂಗೆ ಬರೋಬ್ಬರಿ 310 ರೂನಷ್ಟು ಹೆಚ್ಚಿದೆ. ಬೆಳ್ಳಿ ಬೆಲೆಯಲ್ಲೂ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,35,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,48,090 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ….