ಇಂಧನ ಕೊರತೆ ವದಂತಿ: ಕೊಪ್ಫಳದಲ್ಲಿ ಪೆಟ್ರೋಲ್ ತುಂಬಿಸಲು ಬ್ಯಾರಲ್ ತಂದ ಜನ!
ಕೊಪ್ಪಳ, ಮಾರ್ಚ್ 29: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ವದಂತಿಗಳು ಹಬ್ಬಿದ್ದು, ಇದು ಜನರಲ್ಲಿ ಆತಂಕ ಸೃಷ್ಟಿಸಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಬ್ಯಾರಲ್, ಬಾಟಲ್ ಹಾಗೂ ಕ್ಯಾನ್‌ಗಳಲ್ಲಿ ಇಂಧನ ಸಂಗ್ರಹಿಸಲು ಜನರು ಮುಗಿಬಿದ್ದಿದ್ದಾರೆ. ಬಂಕ್ ಸಿಬ್ಬಂದಿ ಇಂಧನ ಲಭ್ಯತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮನವಿ ಮಾಡುತ್ತಿದ್ದರೂ, ಬೆಲೆ ಏರಿಕೆ ಅಥವಾ ಪೂರೈಕೆ ವ್ಯತ್ಯಯದ ಭೀತಿಯಿಂದ ಜನರು ಇದಕ್ಕೆ ಕಿವಿಗೊಡುತ್ತಿಲ್ಲ.ಮುಂದೆ ಸಮಸ್ಯೆ ಆಗಬಹುದು ಅಥವಾ ಬೆಲೆ ಹೆಚ್ಚಳ ಆಗಬಹುದು ಎಂಬ ಭೀತಿಯಿಂದ ಜನರು ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ….