nagaraj11081993

ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

ಟೆಹ್ರಾನ್, ಏಪ್ರಿಲ್ 1: ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ(Murder) ನಡೆದು ಒಂದು ತಿಂಗಳು ಕಳೆದಿದೆ. ಅವರ ಸಾವಿನ ಬಳಿಕ ಮಗ ಮೊಜ್ತಬಾ ಖಮೇನಿಯವರನ್ನು ನೂತನ ಸರ್ವೋಚ್ಚ ನಾಯಕನನ್ನಾಗಿ ನೇಮಿಸಲಾಯಿತು. ಅಧಿಕಾರ ವಹಿಸಿಕೊಂಡ ಬಳಿಕ ಮೊಜ್ತಬಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರು ತಮ್ಮ ತಂದೆಯ ಅಂತ್ಯಕ್ರಿಯೆಗೂ ಬಂದಿಲ್ಲ.ಅವರು ಪತ್ರದ ಮೂಲದ ತಮ್ಮ ಹೇಳಿಕೆ ನೀಡುತ್ತಿದ್ದು, ಅವರ ಆರೋಗ್ಯ ಹಾಗೂ ಅವರೆಲ್ಲಿದ್ದಾರೆ ಎನ್ನುವ ಅನುಮಾನ ಕಾಡಿದೆ. ಕೆಲವರು ಗಂಭೀರವಾಗಿ ಗಾಯಗೊಂಡಿರಬಹುದು ಅಥವಾ ಮೃತಪಟ್ಟಿರಬಹುದು ಎಂದು ಹೇಳಿದ್ದಾರೆ….

Read More

ಅತೀ ವೇಗ… ಬೆನ್​ ಡಕೆಟ್​ಗೆ ಬರೋಬ್ಬರಿ 1,100 ಪೌಂಡ್ ಫೈನ್..!

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಬೆನ್ ಡಕೆಟ್ ಇತ್ತೀಚೆಗೆ ಎರಡು ಪ್ರಮುಖ ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಒಂದು, ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹಿಂದೆ ಸರಿದಿರುವುದು. ಮತ್ತೊಂದು, ಅತಿವೇಗದ ಚಾಲನೆಗಾಗಿ ನ್ಯಾಯಾಲಯದಿಂದ ದಂಡಕ್ಕೆ ಗುರಿಯಾಗಿರುವುದು. ಬೆನ್ ಡಕೆಟ್ ಅವರು ತಮ್ಮ ಲ್ಯಾಂಡ್ ರೋವರ್ ಕಾರನ್ನು ನಿಗದಿಗಿಂತ ಹೆಚ್ಚಿನ ವೇಗದಲ್ಲಿ ಚಲಾಯಿಸಿದ್ದಕ್ಕಾಗಿ ದಂಡ ತೆತ್ತಿದ್ದಾರೆ. ಆಗಸ್ಟ್ 24, 2025 ರಂದು ಸ್ಟಾಫರ್ಡ್‌ಶೈರ್‌ನ ಎ50 ರಸ್ತೆಯಲ್ಲಿ ಡಕೆಟ್​ 93 ಮೈಲಿ ವೇಗದಲ್ಲಿ ಕಾರು ಚಲಾಯಿಸಿದ್ದರು. ಈ ರಸ್ತೆಯಲ್ಲಿ ಗಂಟೆಗೆ 70…

Read More

ತೆಲಂಗಾಣ ಟೆಕ್ಕಿ ದಂಪತಿಯ ಜೀವವನ್ನೇ ತೆಗೆಯಿತು ಎಐ! ಆಗಿದ್ದೇನು ಗೊತ್ತಾ?

ಬೆಂಗಳೂರು, ಏಪ್ರಿಲ್ 01: ಮಂಗಳವಾರ ಬೆಳಗ್ಗೆ ತೆಲಂಗಾಣ ಮೂಲದ ಟೆಕ್ಕಿ ದಂಪತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪ್ರಾಥಮಿಕವಾಗಿ ಕೌಟುಂಬಿಕ ಕಲಹದ ಹಿನ್ನೆಲೆ ಗಂಡ-ಹೆಂಡತಿ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಟೆಕ್ಕಿ ಸಾವಿಗೆ ನಿಜವಾದ ಕಾರಣ ಈಗ ಬಯಲಾಗಿದೆ. ಕೃತಕ ಬುದ್ಧಿಮತ್ತೆ (AI) ಹೊಡೆತಕ್ಕೆ ಕೆಲಸ ಕಳೆದುಕೊಂಡಿದ್ದ ಭಾನು ಚಂದರ್ ರೆಡ್ಡಿ, ಖಿನ್ನತೆಯಿಂದ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ತೆಲಂಗಾಣ ಮೂಲದ 32 ವರ್ಷದ ಭಾನು ಚಂದರ್ ರೆಡ್ಡಿ…

Read More

ಎಲೆಕ್ಟ್ರಿಕ್ ಕಾರು ಪ್ರಿಯರಿಗೆ ಶಾಕ್: ಇನ್ಮುಂದೆ ಕರ್ನಾಟಕದಲ್ಲಿ ಇವಿ ವಾಹನಗಳೂ ದುಬಾರಿ! ಕಾರಣ ಇಲ್ಲಿದೆ

ಬೆಂಗಳೂರು, ಏಪ್ರಿಲ್ 1: ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ಉತ್ತೇಜಿಸಲು ಕಳೆದ ಹತ್ತು ವರ್ಷಗಳಿಂದ ನೀಡಲಾಗುತ್ತಿದ್ದ ರಸ್ತೆ ತೆರಿಗೆ (Road Tax) ವಿನಾಯಿತಿಯನ್ನು ಹಿಂಪಡೆಯಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಸಂಬಂಧ ‘ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ವಿಧೇಯಕ 2026’ಕ್ಕೆ ಈಗಾಗಲೇ ಅನುಮೋದನೆ ಪಡೆಯಲಾಗಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಯಾವ ಇವಿ ವಾಹನಕ್ಕೆ ಎಷ್ಟು ತೆರಿಗೆ? ಹೊಸ ನಿಯಮದ ಪ್ರಕಾರ, ಎಲೆಕ್ಟ್ರಿಕ್ ಕಾರುಗಳು, ಜೀಪುಗಳು ಮತ್ತು ಖಾಸಗಿ ಬಸ್‌ಗಳ…

Read More

UPSC Free Coaching: UPSC ಆಕಾಂಕ್ಷಿಗಳಿಗೆ ಗುಡ್​ನ್ಯೂಸ್; ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿ

ನಾಗರಿಕ ಸೇವಾ ಪರೀಕ್ಷೆಗಳ (UPSC) ತಯಾರಿಯಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI) ವಿಶ್ವವಿದ್ಯಾಲಯವು ಒಂದು ಅದ್ಭುತ ಅವಕಾಶವನ್ನು ಹೊತ್ತು ತಂದಿದೆ. 2027ರ ಯುಪಿಎಸ್‌ಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಗಮನಾರ್ಹ ಅಂಶ: ಈ ತರಬೇತಿ ಕಾರ್ಯಕ್ರಮದ ಪ್ರವೇಶ ಪರೀಕ್ಷೆಯು ದೇಶದ ಪ್ರಮುಖ 13 ನಗರಗಳಲ್ಲಿ ನಡೆಯಲಿದ್ದು, ನಮ್ಮ ಬೆಂಗಳೂರಿನಲ್ಲಿಯೂ ಪರೀಕ್ಷಾ ಕೇಂದ್ರವಿರಲಿದೆ. ಇದರಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ದೆಹಲಿ…

Read More

IPL 2026: RCB ತಂಡದ ಏಪ್ರಿಲ್ ತಿಂಗಳ ವೇಳಾಪಟ್ಟಿ ಇಲ್ಲಿದೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಆರ್‌ಸಿಬಿ ತನ್ನ ಎರಡನೇ ಪಂದ್ಯದಲ್ಲಿ ಬದ್ಧ ವೈರಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಎದುರಿಸಲಿದೆ. ಹೈವೋಲ್ಟೇಜ್ ಪಂದ್ಯವೆಂದೇ ಬಿಂಬಿತವಾಗಿರುವ ಈ ಮ್ಯಾಚ್​ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ… ಪಂದ್ಯ ಯಾವಾಗ? ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಏಪ್ರಿಲ್ 5 ರಂದು ನಡೆಯಲಿದೆ. ಅಂದರೆ…

Read More

ಏಪ್ರಿಲ್ 4ರಿಂದ ಜೀ ಕನ್ನಡದಲ್ಲಿ ‘ಜೋಡಿ ನಂ.1′ ಶೋ; ಜಡ್ಜ್​​-ಸ್ಪರ್ಧಿ ಇಬ್ಬರೂ ಸೂಪರ್

ಜೀ ಕನ್ನಡದಲ್ಲಿ ಹೊಸ ಹೊಸ ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಾ ಇರುತ್ತವೆ. ಎಲ್ಲಾ ರಿಯಾಲಿಟಿ ಶೋಗಳು ಸಾಕಷ್ಟು ಮನರಂಜನೆ ನೀಡುವ ರೀತಿಯಲ್ಲಿ ಇದೆ. ಈಗ ಹೊಸ ರಿಯಾಲಿಟಿ ಶೋ ಪ್ರಸಾರ ಕಾಣಲು ರೆಡಿ ಆಗಿದೆ. ಅದುವೇ ‘ಜೋಡಿ ನಂಬರ್ 1’. ಏಪ್ರಿಲ್ 4ರಂದು ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣಲಿದೆ. ‘ಅಮೃತಧಾರೆ’ ಧಾರಾವಾಹಿ ಜೋಡಿ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಸೇರಿದಂತೆ ಅನೇಕರು ಜಡ್ಜ್ ಸ್ಥಾನದಲ್ಲಿ ಇದ್ದಾರೆ ಅನ್ನೋದು ವಿಶೇಷ. ಜೀ ಕನ್ನಡದಲ್ಲಿ…

Read More

ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಸಿದ್ಧಗಂಗಾ ಮಠದ ಗುಣಗಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ತುಮಕೂರು, ಏಪ್ರಿಲ್​​ 01: ದೇಶದ ವಿಕಾಸಕ್ಕೆ ಸಿದ್ಧಗಂಗಾ ಮಠದ ಪಾತ್ರ ಬಹುದೊಡ್ಡದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಸಿದ್ಧಗಂಗಾಮಠದ ವಸ್ತು ಪ್ರದರ್ಶನಾಲಯ ಮೈದಾನದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ಧಗಂಗಾ ಮಠಕ್ಕೆ ಬಂದಿರುವುದಕ್ಕೆ ನನಗೆ ಖುಷಿಯಾಗಿದೆ. ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ‌ ಆಶ್ರಯದ ಮೂಲಕ ಮಠ ಸೇವೆ ಸಲ್ಲಿಸಿದ್ದು, ದಯವೇ ಧರ್ಮದ ಮೂಲವಯ್ಯ ಎಂಬಂತೆ ಶ್ರೀಮಠ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ‘ಸ್ವಾಮೀಜಿಗಳ ದಾರಿ ಪವಾಡ ಎನ್ನಬಹುದು…

Read More

Phone Hijack Scam: ಫೋನ್ ಹೈಜಾಕ್ ಹಗರಣ ಎಂದರೇನು?: ಲಕ್ಷಾಂತರ ಹಣ ಕಳೆದುಕೊಳ್ಳುವ ಮುನ್ನ ಎಚ್ಚರ

ಬೆಂಗಳೂರು (ಏ. 01): ಸೈಬರ್ ಅಪರಾಧಿಗಳು (Cyber Attack) ಜನರನ್ನು ವಂಚಿಸಲು ನಿರಂತರವಾಗಿ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಡಿಜಿಟಲ್ ಬಂಧನದ ನಂತರ, ಹೊಸ ರೀತಿಯ ವಂಚನೆಗಳು ಇದೀಗ ಚಾಲ್ತಿಯಲ್ಲಿದೆ. ಹ್ಯಾಕರ್‌ಗಳು ಬಳಕೆದಾರರ ಫೋನ್‌ಗಳನ್ನು ಹೈಜಾಕ್ ಮಾಡಿ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹ್ಯಾಕರ್‌ಗಳು ಮಹಿಳೆಯೊಬ್ಬರಿಗೆ 13 ರೂಪಾಯಿ ಪಾವತಿಸಲು ಕೇಳಿದರು. ಇದರ ಬೆನ್ನಲ್ಲೇ ಹ್ಯಾಕರ್ಸ್ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ಇದು ನಿಮಗೆ ಆಗದಂತೆ ತಡೆಯಲು, ನೀವು ಏನೆಲ್ಲ ಎಚ್ಚರವಹಿಸಬೇಕು ಎಂಬುದನ್ನು ನಾವು ಹೇಳುತ್ತೇವೆ. ಫೋನ್ ಅನ್ನು ಹೇಗೆ ಹೈಜಾಕ್…

Read More

Gold Rates: ಗ್ರಾಮ್​ಗೆ 200 ರೂ ಏರಿದ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 1: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಏರಿಕೆ ಕಂಡಿವೆ. ನಿನ್ನೆ ಗ್ರಾಮ್​ಗೆ 185 ರೂ ಹೆಚ್ಚಿದ್ದ ಚಿನ್ನದ ಬೆಲೆ ಇಂದು ಬುಧವಾರ 200 ರೂ ಏರಿದೆ. ಎರಡು ದಿನದಲ್ಲಿ ಬಹುತೇಕ 400 ರೂಗಳಷ್ಟು ಹೆಚ್ಚಳ ಆಗಿದೆ. ಅಪರಂಜಿ ಚಿನ್ನದ ಬೆಲೆ (Gold Rates) 15,000 ರೂ ಗಡಿದಾಟಿದೆ. ವಿದೇಶಗಳಲ್ಲೂ ಅನೇಕ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಇದೇ ವೇಳೆ, ಬೆಳ್ಳಿ ಬೆಲೆಯೂ ನಿನ್ನೆಯಂತೆ ಇವತ್ತೂ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ…

Read More