All posts by nagaraj11081993

ಸ್ಯಾಂಡಲ್​​ವುಡ್​ ಕಡೆಗಣಿಸಿದ ಫಿಲ್ಮ್​​ಫೇರ್​​ಗೆ ಛೀಮಾರಿ ಹಾಕಿದ ಕನ್ನಡಿಗರು

ಸ್ಯಾಂಡಲ್​​ವುಡ್​ ಕಡೆಗಣಿಸಿದ ಫಿಲ್ಮ್​​ಫೇರ್​​ಗೆ ಛೀಮಾರಿ ಹಾಕಿದ ಕನ್ನಡಿಗರು

ಕನ್ನಡ ಚಿತ್ರರಂಗವನ್ನು ಅನೇಕ ಕಡೆಗಳಲ್ಲಿ ಕಡೆಗಣಿಸುವ ಕೆಲಸ ಆಗುತ್ತಲೇ ಬರುತ್ತಿದೆ. ಈ ಮೊದಲು ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂದ ನಟರನ್ನು ಕಡೆಗಣಿಸಿದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಈಗ ಫಿಲ್ಮ್​​ಫೇರ್ (Filma Fare) ಅದೇ ತಪ್ಪನ್ನು ಮಾಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ. ತಪ್ಪನ್ನು ತಿದ್ದುಕೊಂಡು ಅವರು ಕ್ಷಮೆ ಕೇಳಬೇಕು ಎಂಬ ಆಗ್ರಹಕೂಡ ವ್ಯಕ್ತವಾಗಿದೆ.

ಫಿಲ್ಮ್​ ಫೇರ್ ಅವಾರ್ಡ್ ಆರಂಭ ಆಗಿದ್ದು 1954ರಲ್ಲಿ. ಹಿಂದಿ ಸಿನಿಮಾ ರಂಗದ ಕಲಾವಿದರು ಹಾಗೂ ತಂತ್ರಜ್ಞರನ್ನು ಗೌರವಿಸುವ ಉದ್ದೇಶದಿಂದ ಇದನ್ನು ಮಾಡಲಾಯಿತು. ಆ ಬಳಿಕ 1964ರಲ್ಲಿ ‘ಫಿಲ್ಮ್​ ಫೇರ್ ಸೌತ್’ ಅವಾರ್ಡ್ ಕಾರ್ಯಕ್ರಮ ಆರಂಭಿಸಲಾಯಿತು. ಈಗ ಫಿಲ್ಮ್​​ ಫೇರ್ ಮ್ಯಾಗಜಿನ್ ಫೋಟೋಶೂಟ್ ಮಾಡಿಸಲಾಗಿದೆ. ಇದರಲ್ಲಿ ಕನ್ನಡ ಚಿತ್ರರಂಗದವರನ್ನು ಕಡೆಗಣಿಸಲಾಗಿದೆ.

ಇದನ್ನೂ ಓದಿ: 15ನೇ ವಯಸ್ಸಿಗೆ ನಟಿ; 8 ಫಿಲ್ಮ್​ಫೇರ್ ಅವಾರ್ಡ್; ಜಯಾ ಬಚ್ಚನ್ ನಡೆದು ಬಂದ ಹಾದಿ

ಫಿಲ್ಮ್​​ಫೇರ್ ಮ್ಯಾಗಜಿನ್ ಮುಖಪುಟ ರಿವೀಲ್ ಮಾಡಲಾಗಿದೆ. ಇದರಲ್ಲಿ ತಮಿಳಿನಿಂದ ಶಿವಕಾರ್ತಿಕೇಯ, ಅರವಿಂದ್ ಸ್ವಾಮಿ, ಮಲಯಾಳಂನಿಂದ ಮಮ್ಮೂಟ್ಟಿ, ತೆಲುಗಿನಿಂದ ಅಲ್ಲು ಅರ್ಜುನ್ ಇದ್ದಾರೆ. ದಕ್ಷಿಣದ ನಟಿಯರಾದ ಭಾವನಾ, ಕಾಜಲ್ ಅಗರ್​​​ವಾಲ್, ಸಾಯಿ ಪಲ್ಲವಿ ಪೋಸ್ಟರ್​​​ನಲ್ಲಿದ್ದಾರೆ. ಆದರೆ ಎಲ್ಲಿಯೂ ಕನ್ನಡದ ಕಲಾವಿದರಿಲ್ಲ.

ಯಶ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕಿಚ್ಚ ಸುದೀಪ್ ಪರಿಚಯ ಇಡೀ ದೇಶದವರಿಗೆ ಇದೆ. ‘ಕಾಂತಾರ’ ಮೂಲಕ ರಿಷಬ್ ಶೆಟ್ಟಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಶಿವರಾಜ್​​​ಕುಮಾರ್ ಅತ್ಯಂತ ಹಿರಿಯ ನಟರು. ರುಕ್ಮಿಣಿ ವಸಂತ್ ಕೂಡ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಇವರ ಪೈಕಿ ಯಾರಾದರೂ ಒಬ್ಬರಾದರೂ ಮ್ಯಾಗಜಿನ್ ಶೂಟ್​​​ನಲ್ಲಿ ಇರಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಗೂಗಲ್ ಮ್ಯಾಪ್ ತಂದ ಆಪತ್ತು! ಕಬ್ಬಿಣದ ಸರಳುಗಳಿಂದ ತುಂಬಿದ್ದ ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು

ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿ ಭೀಕರ ಅಪಘಾತಕ್ಕೀಡಾಗಿದೆ. ಆಂಧ್ರದಿಂದ ಸುಂಕದಕಟ್ಟೆ ಕಡೆಗೆ ಬರುತ್ತಿದ್ದ ಈ ಲಾರಿ ಗೂಗಲ್ ಮ್ಯಾಪ್ ದೋಷದಿಂದಾಗಿ ಇಳಿಜಾರು ರಸ್ತೆಯಲ್ಲಿ ಬಂದಿದೆ. ಅಸಲಿಗೆ ಲಾರಿ ಹೋಗಲು ಸೂಕ್ತವಲ್ಲದ ರಸ್ತೆ ಅದಾಗಿತ್ತು. ಅಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗಿದ್ದ ಎರ್ಟಿಗಾ ಕಾರಿಗೆ ಡಿಕ್ಕಿಯಾಗಿ ತುಸು ದೂರ ಎಳೆದುಕೊಂಡು ಹೋಗಿದ್ದು, ಸ್ಕ್ರ್ಯಾಪ್ ಗೋಡೌನ್​ಗೆ ನುಗ್ಗಿದೆ. ಅಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ 23 ವರ್ಷದ ಅಂಬಾದಾಸ್ ಎಂಬ ಕ್ಯಾಬ್ ಚಾಲಕ ಕಾರಿನಲ್ಲಿ ಸಜೀವ ದಹನವಾಗಿದ್ದಾರೆ.

ಅಪಘಾತದಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆತನನ್ನು ರಕ್ಷಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಣೆಯಲ್ಲಿ ಬರೆದಿದ್ರೆ ಸಿಗ್ತಾಳೆ; ಕಾವ್ಯಾ, ಕಾವ್ಯಾ ಎಂದಿದ್ದಕ್ಕೆ ಗಿಲ್ಲಿ ಉತ್ತರ

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳಾದ ಕಾವ್ಯಾ ಹಾಗೂ ಗಿಲ್ಲಿ ನಟ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಬಾಂಧವ್ಯ ಬಿಗ್ ಬಾಸ್​ ಇಂದ ಹೊರ ಬಂದ ಬಳಿಕವೂ ಮುಂದುವರಿದಿದೆ. ಕಾವ್ಯಾ ಅವರನ್ನು ಗಿಲ್ಲಿ ಮದುವೆ ಆಗಬೇಕು ಎಂದು ಅನೇಕರು ಅಂದುಕೊಂಡಿದ್ದೂ ಇದೆ. ಆದರೆ, ಅದು ಸಾಧ್ಯವಿಲ್ಲ ಎಂಬುದು ಗಿಲ್ಲಿ ಉತ್ತರ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅವರು ಅನೇಕ ಬಾರಿ ಹೇಳಿದ್ದು ಇದೆ. ಹೀಗಿರುವಾಗಲೇ ಗಿಲ್ಲಿ ನಟ ಅವರು ವೇದಿಕೆ ಏರಿದಾಗ ‘ಕಾವ್ಯಾ ಕಾವ್ಯಾ’ ಎಂಬ ಚೀರಾಟ ಕೇಳಿದೆ. ‘ಗೌರಿ ಕಲ್ಯಾಣ’ ಸೀರಿಯಲ್ ಸಂತೆಯಲ್ಲಿ ಈ ಘಟನೆ ನಡೆಯಿತು ಮತ್ತು ಹಣೆಯಲ್ಲಿ ಬರೆದಿದ್ರೆ ಸಿಗ್ತಾಳೆ ಎಂದು ಗಿಲ್ಲಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rates: ಆಭರಣ ಚಿನ್ನದ ಬೆಲೆ 13,265 ರೂ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 27: ಚಿನ್ನದ ಬೆಲೆ ಏರಿಳಿತದ ಹಂತಕ್ಕೆ ಜಾರಿದೆ. ನಿನ್ನೆ ಒಂದೇ ದಿನದಲ್ಲಿ ಒಮ್ಮೆ ಹೆಚ್ಚಾಗಿ ನಂತರ ಕುಸಿದಿತ್ತು. ಇವತ್ತು ಶುಕ್ರವಾರ ಇದರ ಬೆಲೆಯಲ್ಲಿ ಅಲ್ಪ ಹೆಚ್ಚಳ ಆಗಿದೆ. ಗುರುವಾರ ಬೆಳಗ್ಗೆ ಆಭರಣ ಚಿನ್ನದ ಬೆಲೆ (Gold Rates) ಗ್ರಾಮ್ಗೆ 13,465 ರೂಗೆ ಏರಿತ್ತು. ನಂತರ 13,250 ರೂಗೆ ಕುಸಿದಿತ್ತು. ಇವತ್ತು 15 ರೂ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ ಶುಕ್ರವಾರ ಒಂದೇ ದಿನದಲ್ಲಿ 10-15 ರೂ ಕುಸಿತವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 27ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,471 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,265 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,853 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,471 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,265 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,265 ರೂ
  • ಚೆನ್ನೈ: 13,430 ರೂ
  • ಮುಂಬೈ: 13,265 ರೂ
  • ದೆಹಲಿ: 13,280 ರೂ
  • ಕೋಲ್ಕತಾ: 13,265 ರೂ
  • ಕೇರಳ: 13,265 ರೂ
  • ಅಹ್ಮದಾಬಾದ್: 13,270 ರೂ
  • ಜೈಪುರ್: 13,280 ರೂ
  • ಲಕ್ನೋ: 13,280 ರೂ
  • ಭುವನೇಶ್ವರ್: 13,265 ರೂ

ಇದನ್ನೂ ಓದಿ: Gold Coin: ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಗೋಲ್ಡ್ ಕಾಯಿನ್​ಗೆ ಭಾರೀ ಬೇಡಿಕೆ!

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 547 ರಿಂಗಿಟ್ (12,881 ರುಪಾಯಿ)
  • ದುಬೈ: 490 ಡಿರಾಮ್ (12,578 ರುಪಾಯಿ)
  • ಅಮೆರಿಕ: 139.50 ಡಾಲರ್ (13,157 ರುಪಾಯಿ)
  • ಸಿಂಗಾಪುರ: 177.60 ಸಿಂಗಾಪುರ್ ಡಾಲರ್ (13,031 ರುಪಾಯಿ)
  • ಕತಾರ್: 496 ಕತಾರಿ ರಿಯಾಲ್ (12,825 ರೂ)
  • ಸೌದಿ ಅರೇಬಿಯಾ: 506 ಸೌದಿ ರಿಯಾಲ್ (12,717 ರುಪಾಯಿ)
  • ಓಮನ್: 52.85 ಒಮಾನಿ ರಿಯಾಲ್ (12,845 ರುಪಾಯಿ)
  • ಕುವೇತ್: 40.24 ಕುವೇತಿ ದಿನಾರ್ (12,373 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹೋದ ತೈಲ ಟ್ಯಾಂಕರ್​ಗೆ ಬೆಂಕಿ

ಟೆಹ್ರಾನ್, ಮಾರ್ಚ್​ 27: ಭಾರತ ಸೇರಿದಂತೆ ಇರಾನ್​ನ 5 ಸ್ನೇಹಿತ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಇರಾನ್ ಅನುಮತಿ ನೀಡಿದೆ. ಚೀನಾ, ರಷ್ಯಾ, ಪಾಕಿಸ್ತಾನ, ಇರಾಕ್ ಮತ್ತು ಭಾರತದ ಎರಡು ಹಡಗುಗಳು ಕೆಲವು ರಾತ್ರಿಗಳ ಹಿಂದೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಿವೆ.ಅಮೆರಿಕ, ಇಸ್ರೇಲ್ ಮತ್ತು ಕೆಲವು ಗಲ್ಫ್ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿ ನೀಡಲಾಗುವುದಿಲ್ಲ. ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹಾದುಹೋದ ಹಡಗಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Ram Navami 2026: ರಾಮ ನವಮಿ ಬಳಿಕ ಈ ಎರಡು ರಾಶಿಗಳಿಗೆ ಶುಭ ದಿನಗಳು ಆರಂಭ

ಇಂದು ದೇಶಾದ್ಯಂತ ಶ್ರೀ ರಾಮ ನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಪವಿತ್ರ ದಿನದಂದು ಒಂದು ಅಪರೂಪದ ಗ್ರಹಗಳ ಸಂಯೋಗ ಸಂಭವಿಸುತ್ತಿದೆ. ಈ ಜ್ಯೋತಿಷ್ಯ ವಿದ್ಯಮಾನವು 12 ರಾಶಿಗಳ ಮೇಲೆ ಪ್ರಭಾವ ಬೀರಿದರೂ, ವಿಶೇಷವಾಗಿ ಎರಡು ರಾಶಿಚಕ್ರದವರಿಗೆ ಇದು ಸುವರ್ಣ ಕಾಲವನ್ನು ಹೊತ್ತು ತರಲಿದೆ. ಕಳೆದ ಕೆಲವು ಸಮಯದಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದ ಈ ರಾಶಿಗಳ ಜನರಿಗೆ ಶ್ರೀರಾಮನ ಆಶೀರ್ವಾದದಿಂದ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗಲಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಈ ರಾಮ ನವಮಿಯು ಜೀವನದ ಹೊಸ ಅಧ್ಯಾಯಕ್ಕೆ ದಾರಿಯಾಗಲಿದೆ. ಎಷ್ಟೇ ಕಷ್ಟ ಬಂದರೂ ಎದೆಗುಂದದ ನಿಮ್ಮ ಸ್ವಭಾವಕ್ಕೆ ಈಗ ತಕ್ಕ ಪ್ರತಿಫಲ ಸಿಗಲಿದೆ. ದಂಪತಿಗಳ ನಡುವೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೂರವಾಗಿ, ಪ್ರೀತಿ ಮತ್ತು ವಿಶ್ವಾಸ ಚಿಗುರಲಿದೆ.ದೀರ್ಘಕಾಲದ ಆರ್ಥಿಕ ಬಿಕ್ಕಟ್ಟುಗಳು ಬಗೆಹರಿಯಲಿವೆ. ಸಾಲದ ಬಾಧೆಯಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಲಿದ್ದು, ನಿರೀಕ್ಷೆಗೂ ಮೀರಿ ಲಾಭ ಗಳಿಸುವಿರಿ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮೇಷ ರಾಶಿ:

ಶ್ರೀರಾಮನ ಕೃಪಾಕಟಾಕ್ಷದಿಂದ ಮೇಷ ರಾಶಿಯವರ ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ವಿದೇಶಕ್ಕೆ ಹೋಗುವ ಹಂಬಲವಿದ್ದವರಿಗೆ ವೀಸಾ ಸಮಸ್ಯೆಗಳು ಬಗೆಹರಿದು ಶುಭ ಸುದ್ದಿ ಸಿಗಲಿದೆ. ಹಳೆಯ ಆಸ್ತಿ ಅಥವಾ ಜಮೀನಿನ ಮಾರಾಟದಿಂದ ನಿರೀಕ್ಷಿತ ಬೆಲೆ ದೊರೆತು ಹಠಾತ್ ಹಣದ ಹರಿವು ಹೆಚ್ಚಾಗಲಿದೆ. ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಮನ್ನಣೆ ಸಿಗಲಿದ್ದು, ಕೀರ್ತಿ ಹೆಚ್ಚಾಗಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉರುಳು ಸೇವೆಯ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹತ್ತಾರು ಕಾರ್ಯಕರ್ತರು!

ದಾವಣಗೆರೆ, ಮಾರ್ಚ್​ 27: ದಾವಣಗೆರೆ ನಗರದಲ್ಲಿ ರಾಜಕೀಯ ಬೆಳವಣಿಗೆಯೊಂದು ಗಮನ ಸೆಳೆದಿದೆ. ಹತ್ತಾರು ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ಕಾರ್ಯಕರ್ತರು ದುರ್ಗಾಂಬಿಕಾ ದೇವಿಗೆ ಉರುಳು ಸೇವೆ ಸಲ್ಲಿಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿ ಪಕ್ಷ ಬದಲಾವಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಭಾವಚಿತ್ರವನ್ನು ಹಿಡಿದುಕೊಂಡು, ಬಿಜೆಪಿ ಪಕ್ಷಕ್ಕೆ ಜೈಕಾರ ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Rama Navami: ರಾಮನವಮಿ ಇಂದು ಏಕೆ ಆಚರಿಸಲಾಗುತ್ತದೆ? ಪಂಚಾಂಗ ಹೇಳುವುದೇನು?

ಶ್ರೀರಾಮ ನವಮಿಯ ಮಹತ್ವ ಮತ್ತು ಅದರ ಆಚರಣೆಯ ವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಶ್ರೀರಾಮ ನವಮಿಯೂ ಒಂದು. ತ್ರೇತಾಯುಗದಲ್ಲಿ ಶ್ರೀ ಮಹಾವಿಷ್ಣು ಮರ್ಯಾದಾ ಪುರುಷೋತ್ತಮನಾಗಿ ಅವತರಿಸಿದ ದಿನವೇ ಈ ಶ್ರೀರಾಮ ನವಮಿ. ರಾಮ ನವಮಿಯನ್ನು ಮಾರ್ಚ್ 26 ರಂದು ಆಚರಿಸಲಾಗುವುದು, ಆದರೆ ಮಹಾ ನವಮಿಯನ್ನು ಮಾರ್ಚ್ 27 ರಂದು ಆಚರಿಸಲಾಗುವುದು. ಅದು ಯಾಕೆ ಅಷ್ಟಮಿ ದಿನ ರಾಮನವಮಿಯನ್ನು ಆಚರಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಇಂದು ಶ್ರೀರಾಮ ನವಮಿ ಆಚರಣೆ ಏಕೆ?

ಪಂಚಾಂಗದ ಪ್ರಕಾರ, ನಿನ್ನೆ ರಾತ್ರಿ 11 ಗಂಟೆ 48 ನಿಮಿಷಕ್ಕೆ ನವಮಿ ಪ್ರಾರಂಭವಾಗಿ, ಇಂದು ಬೆಳಿಗ್ಗೆ 10 ಗಂಟೆ 6 ನಿಮಿಷಕ್ಕೆ ಮುಕ್ತಾಯಗೊಂಡರೂ, ಸೂರ್ಯೋದಯದಲ್ಲಿ ಯಾವ ತಿಥಿ ಇರುತ್ತದೆಯೋ, ಅಂದೇ ಆ ಸಂಪೂರ್ಣ ದಿನವನ್ನು ಆಚರಿಸುವ ಸಂಪ್ರದಾಯವಿದೆ. ಹಾಗಾಗಿ ಇಂದು ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಅಲ್ಲದೆ, ಇಂದು ಮಧ್ಯಾಹ್ನ 3 ಗಂಟೆ 24 ನಿಮಿಷದ ತನಕ ಪುನರ್ವಸು ನಕ್ಷತ್ರವೂ ಇರುವುದು ವಿಶೇಷ. ಇದು ಸಾಕ್ಷಾತ್ ಶ್ರೀರಾಮಚಂದ್ರರ ಜನ್ಮದಿನ.

ಶ್ರೀರಾಮ ನವಮಿ ಆಚರಣೆಗಳು ಹಳ್ಳಿಗಳಿಂದ ಹಿಡಿದು ದೇಶಾದ್ಯಂತ ವಿವಿಧ ರೂಪಗಳಲ್ಲಿ ನಡೆಯುತ್ತವೆ. ಈ ಸಂದರ್ಭದಲ್ಲಿ ಪಾನಕ, ಹೆಸರುಬೇಳೆ, ಪ್ರಸಾದ, ನೈವೇದ್ಯಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತದೆ. ಶ್ರೀರಾಮ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ಅಭಿಷೇಕ ಹಾಗೂ ಕಲ್ಯಾಣೋತ್ಸವಗಳನ್ನು ನಡೆಸಲಾಗುತ್ತದೆ. ಈ ಆಚರಣೆಗಳು ಬಾಂಧವ್ಯಗಳನ್ನು ಬಲಪಡಿಸುತ್ತವೆ. ಅಲ್ಲದೆ, ಪಾನಕ ಮತ್ತು ಹೆಸರುಬೇಳೆಯಂತಹ ಆಹಾರ ಪದಾರ್ಥಗಳು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.

ಚೈತ್ರ ಮಾಸದ ಶುಕ್ಲಪಕ್ಷದ ಒಂಬತ್ತನೇ ದಿನವನ್ನು ಶ್ರೀರಾಮಚಂದ್ರರ ನವಮಿ ಎಂದು ಆಚರಿಸಲಾಗುತ್ತದೆ. ಇದು ಧರ್ಮದ ವಿಜಯದ ದಿನ. ಶ್ರೀರಾಮಚಂದ್ರರು ಸದಾ ಧರ್ಮ ಮಾರ್ಗದಲ್ಲಿಯೇ ನಡೆದ ಅದ್ಭುತ ಭಗವಂತನ ಸ್ವರೂಪವಾಗಿದ್ದರಿಂದ, ಅವರ ಆದರ್ಶ ಪಾಲನೆ ಈ ಹಬ್ಬದ ಮುಖ್ಯ ಉದ್ದೇಶ. ವಸಂತ ನವರಾತ್ರಿಯ ಮುಕ್ತಾಯವನ್ನೂ ಸಹ ಈ ದಿನ ಸೂಚಿಸುತ್ತದೆ. ಭಾರತದಾದ್ಯಂತ ಈ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವರು ರಾಮಾಯಣ ಪಾರಾಯಣ ಮಾಡಿದರೆ, ಇನ್ನು ಕೆಲವರು ಭಜನೆಗಳನ್ನು ನಡೆಸುತ್ತಾರೆ.

ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ಮಂತ್ರವನ್ನು ಪಠಿಸುವುದು ಈ ದಿನದ ಪ್ರಮುಖ ಆಚರಣೆಗಳಲ್ಲಿ ಒಂದು. ಈ ಮಹಾಮಂತ್ರವನ್ನು ಎಷ್ಟು ಹೆಚ್ಚಾಗಿ ಪಠಿಸುತ್ತೇವೆಯೋ, ಅಷ್ಟು ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ನೆಮ್ಮದಿ, ಶತ್ರುಕಾಟ, ಗ್ರಹಕಾಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಕೇವಲ ಈ ಮಹಾಮಂತ್ರವನ್ನು ಪಠಿಸುವುದರಿಂದ ವಿಷ್ಣು ಸಹಸ್ರನಾಮವನ್ನು ಸಂಪೂರ್ಣವಾಗಿ ಓದಿದ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ: ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ, ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಕೆಲವು ಕಡೆ ಸೀತಾರಾಮ ಕಲ್ಯಾಣೋತ್ಸವಗಳನ್ನು, ವಿಶೇಷವಾಗಿ ರಾಮಾ-ಸೀತಾ ವಿವಾಹ ಮಹೋತ್ಸವಗಳನ್ನು ಆಚರಿಸಲಾಗುತ್ತದೆ. ಪಾನಕ, ಹೆಸರುಬೇಳೆ, ಮಜ್ಜಿಗೆ (ಬೆಲ್ಲ ಮತ್ತು ಒಣಶುಂಠಿ ಸೇರಿಸಿದ ನೀರು ಮಜ್ಜಿಗೆ) ದಾನ ಮಾಡುವುದು ಸಹ ಪುಣ್ಯ ಕಾರ್ಯವೆಂದು ನಂಬಲಾಗಿದೆ. ಇತರರ ಆರೋಗ್ಯದ ಬಗ್ಗೆ ಗಮನ ನೀಡಿದಾಗ, ಅದರ ಸತ್ಫಲ ನಮಗೆ ದ್ವಿಗುಣವಾಗಿ ದೊರೆಯುತ್ತದೆ.

ಕೆಲವು ಪ್ರದೇಶಗಳಲ್ಲಿ ಶೋಭಾಯಾತ್ರೆಗಳನ್ನು ಆಯೋಜಿಸಲಾಗುತ್ತದೆ. ರಾಮನ, ಸೀತೆಯ, ಲಕ್ಷ್ಮಣನ, ಹನುಮನ ವೇಷಧಾರಿಗಳು ಮೆರವಣಿಗೆಗಳಲ್ಲಿ ಪಾಲ್ಗೊಂಡು ಭಕ್ತರನ್ನು ರಂಜಿಸುತ್ತಾರೆ. ಈ ಹಬ್ಬದ ಮುಖ್ಯ ಉದ್ದೇಶ ಸತ್ಯತೆ, ತಾಳ್ಮೆ, ಸಹನೆ, ಇವೆಲ್ಲವನ್ನೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮತ್ತು ಶ್ರೀರಾಮಚಂದ್ರರ ಆದರ್ಶಗಳನ್ನು ಪಾಲಿಸುವುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮನೆ ಹುಡುಕುವುದು ಈಗ ‘ಮಿಷನ್ ಇಂಪಾಸಿಬಲ್’! ಬ್ಯಾಚುಲರ್ಸ್ ಸಂಕಷ್ಟ ಕೇಳೋರು ಯಾರು?

ಬೆಂಗಳೂರು, ಮಾ.27: ನಗರದಲ್ಲಿ ಮನೆಗಳು ಬಾಡಿಗೆಗೆ ಸಿಗುವುದು ತುಂಬಾ ಕಷ್ಟ, ಅದರಲ್ಲೂ ಬ್ಯಾಚುನರ್ಲ್​​​ಗಳಿಗೆ ಮನೆ ನೀಡಲು ಯೋಚನೆ ಮಾಡುತ್ತಾರೆ. ಮತ್ತು ಅವರ ಬಜೆಟ್​​ ಕೂಡ 10 ಸಾವಿರದ ಒಳಗೆ ಇರುತ್ತದೆ. ಆದರೆ ಇದೀಗ 10 ಸಾವಿರಕ್ಕೆ ಮನೆ ಸಿಗುವುದು ಕಷ್ಟವಾಗಿದೆ. ಈ ಬಗ್ಗೆ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸುವ ಕನಸು ಹೊತ್ತು ಬರುವವರಿಗೆ ಈಗ ‘ಬಾಡಿಗೆ ಮನೆ’ ಎನ್ನುವುದು ಮರೀಚಿಕೆಯಾಗುತ್ತಿದೆ. ನಗರದ ಐಟಿ ಹಬ್‌ಗಳ ಸುತ್ತಮುತ್ತಲಷ್ಟೇ ಅಲ್ಲದೆ, ಸಾಮಾನ್ಯ ಪ್ರದೇಶಗಳಲ್ಲೂ ಬಾಡಿಗೆ ದರ ಗಗನಕ್ಕೇರಿದ್ದು, ಬಜೆಟ್ ಸ್ನೇಹಿ ಮನೆಗಳನ್ನು ಹುಡುಕುವುದು ಒಂದು ದೈನಂದಿನ ಹೋರಾಟವಾಗಿ ಮಾರ್ಪಟ್ಟಿದೆ.

ನಗರಕ್ಕೆ ಹೊಸದಾಗಿ ಕೆಲಸಕ್ಕೆ ಸೇರುವವರು ಅಥವಾ ವೃತ್ತಿಜೀವನ ಆರಂಭಿಸುವವರಿಗೆ 10,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಕನಿಷ್ಠ ಸೌಲಭ್ಯವಿರುವ 1 BHK ಮನೆ ಸಿಗುವುದು ಅಸಾಧ್ಯವಾಗಿದೆ. ಯುವತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಂತೆ, ವಸತಿ ಪಡೆಯಲು ಕೇವಲ 7 ದಿನಗಳು ಬಾಕಿ ಇದ್ದರೂ ಸೂಕ್ತ ಮನೆ ಸಿಗದೆ ಆತಂಕ ಎದುರಿಸುತ್ತಿದ್ದಾರೆ. ಸತತ ಪ್ರಯತ್ನಗಳ ಹೊರತಾಗಿಯೂ ಅಗತ್ಯಕ್ಕೆ ತಕ್ಕ ಮನೆ ದೊರೆಯುತ್ತಿಲ್ಲ.

ಇದನ್ನೂ ಓದಿ: ರಾಜ್ಯದ ಈ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ; 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಆನ್‌ಲೈನ್ ಪಟ್ಟಿಗಳ ಮೂಲಕ ಅಂತ್ಯವಿಲ್ಲದ ಬ್ರೌಸಿಂಗ್, ದಲ್ಲಾಳಿಗಳ ಕಾಟ, ಮತ್ತು ಹೆಚ್ಚಿನ ಬಾಡಿಗೆ ಅಥವಾ ಠೇವಣಿ ಕಾರಣದಿಂದ ಎದುರಾಗುವ ನಿರಾಕರಣೆಗಳು ಬಾಡಿಗೆದಾರರನ್ನು ಹತಾಶೆಗೊಳಿಸುತ್ತಿವೆ. ಸ್ಥಳ, ಸೌಕರ್ಯಗಳು ಮತ್ತು ವಿಸ್ತೀರ್ಣದ ವಿಚಾರದಲ್ಲಿ ರಾಜಿ ಮಾಡಿಕೊಂಡ ನಂತರವೂ ಬಜೆಟ್‌ನಲ್ಲಿ ಮನೆ ಹುಡುಕುವುದು ಸಮಯದ ವಿರುದ್ಧದ ಓಟದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೊಕ್ಕೊಟ್ಟು ಫ್ಲೈಓವರ್‌ ಬಳಿ ರೌಡಿಶೀಟರ್‌ ಭೀಕರ ಹತ್ಯೆ: ಗ್ಯಾಂಗ್​ವಾರ್​ಗೆ ಹೋಯ್ತಾ ಜೀವ?

ಮಂಗಳೂರು, ಮಾರ್ಚ್​ 27: ನಗರದ (Mangalore) ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಶುಕ್ರವಾರ ನಸುಕಿನ ಜಾವ ರೌಡಿಶೀಟರ್‌ನೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಮೃತರನ್ನು ತಲಪಾಡಿ ಸಮೀಪದ ಮುಳ್ಳುಗುಡ್ಡೆ ನಿವಾಸಿ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್ (46) ಎಂದು ಗುರುತಿಸಲಾಗಿದೆ. ಕೊಲೆಗೆ ನೈಜ ಕಾರಣವೇನೆಂಬುದು ತಿಳಿಯಬೇಕಿದೆ.

ಆರಿಫ್ ಬೈಕ್​ಗೆ ಕಾರಿನಿಂದ ಡಿಕ್ಕಿ

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ರೌಡಿಶೀಟರ್ ಆಗಿದ್ದ ಆರಿಫ್, ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಹಲ್ಲೆಗೊಳಗಾಗಿದ್ದಾನೆ. ಆರಿಫ್ ತೆರಳುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ರಸ್ತೆ ಮೇಲೆ ಬಿದ್ದಾಗ, ಕಾಯುತ್ತಾ ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಯ ಭಾಗಕ್ಕೆ ಕಡಿದು ಕೊಲೆಗೈದಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಇದನ್ನೂ ಓದಿ ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ? ಅಕ್ರಮ ಸಂಬಂಧಕ್ಕೆ ಕೊಲೆಯಾದ ರಂಜಿತ್ ತಾಯಿ ಅಳಲು

ಈ ಮೊದಲೂ ನಡೆದಿತ್ತು ಕೊಲೆ ಯತ್ನ

ಆರಿಫ್ ವಿರುದ್ಧ ಹಿಂದೆಯೂ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. 2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಆತನ ಮೇಲೆ ಕೊಲೆ ಯತ್ನ ನಡೆದಿತ್ತು. ಹೀಗಾಗಿ ಈ ಹತ್ಯೆಗೆ ಗ್ಯಾಂಗ್‌ವಾರ್ ಹಿನ್ನೆಲೆ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ತನಿಖೆಯ ಬಳಿಕವೇ ತಿಳಿಯಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link