Video: ನೆಲದಿಂದ ನೂರಾರು ಅಡಿ ಎತ್ತರದಲ್ಲಿ ನಡುಕ ಹುಟ್ಟಿಸುವ ಅಪಘಾತ, ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ, ಬೆಚ್ಚಿ ಬೀಳಿಸುವ ವಿಡಿಯೋ – Kannada News | Mid Air Collision in Austria Sends Woman Paraglider Crashing in Terrifying Incident
ವಿಯೆನ್ನಾ, ಮೇ 25: ಆಸ್ಟ್ರಿಯಾದ ರಮಣೀಯ ಸ್ಕ್ಮಿಟೆನ್‌ಹೋಹೆ ಪರ್ವತದ ಮೇಲೆ ಮೇ 23 ರಂದು ಸಂಭವಿಸಿದ ಭೀಕರ ವೈಮಾನಿಕ ಅಪಘಾತದಲ್ಲಿ, 44 ವರ್ಷದ ಸಬ್ರಿನಾ ಎಂಬ ಮಹಿಳೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಕೆ ಆಕಾಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ, ‘ಸೆಸ್ನಾ 172’ ಎಂಬ ಸಣ್ಣ ವಿಮಾನವೊಂದು ಇದ್ದಕ್ಕಿದ್ದಂತೆ ಬಂದು ಅವರ ಪ್ಯಾರಾಚೂಟ್‌ಗೆ ಡಿಕ್ಕಿ ಹೊಡೆದಿದೆ. ವಿಮಾನದ ರೆಕ್ಕೆ ಮತ್ತು ಪ್ರೊಪೆಲ್ಲರ್ ತಗುಲಿ ಪ್ಯಾರಾಗ್ಲೈಡರ್‌ನ ಮೇಲಿನ ಭಾಗ ಸಂಪೂರ್ಣವಾಗಿ ಚೂರುಚೂರಾಗಿ ಮಹಿಳೆ ಸಾವಿರಾರು ಅಡಿ ಎತ್ತರದಿಂದ ನೇರ ನೆಲಕ್ಕೆ…