Headlines

nagaraj11081993

ರಜೆ ನೀಡದೆ ಸಂಬಳವನ್ನೂ ಕಟ್ ಮಾಡಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್​ಗೆ ಶೂಟ್ ಮಾಡಿ ಕೊಂದ ಸೆಕ್ಯುರಿಟಿ

ಗಾಜಿಯಾಬಾದ್, ಮಾರ್ಚ್ 18: ರಜೆ ನಿರಾಕರಿಸಿದ ಕಾರಣದಿಂದ ಮತ್ತು ಸಂಬಳವನ್ನು ಕಡಿತ ಮಾಡಿದ್ದರಿಂದ ಕೋಪಗೊಂಡ ಸೆಕ್ಯುರಿಟಿ ಗಾರ್ಡ್ ಬ್ಯಾಂಕ್ ಮ್ಯಾನೇಜರ್​ಗೆ ಗುಂಡಿಕ್ಕಿ ಕೊಂದಿದ್ದಾರೆ. ಗಾಜಿಯಾಬಾದ್‌ನ ಗಡಿಯ ಸಮೀಪವಿರುವ ಬಲರಾಮ್ ನಗರದಲ್ಲಿರುವ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಪಿಎಸ್‌ಬಿ) ಶಾಖೆಯಲ್ಲಿ ಸೋಮವಾರ (ಮಾರ್ಚ್ 17) ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಬ್ಯಾಂಕ್ ಮ್ಯಾನೇಜರ್ ಅನ್ನು ಬಿಹಾರದ ಪಾಟ್ನಾದ ಅಭಿಷೇಕ್ ಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಅವರು ಸಾಹಿಬಾಬಾದ್ ಬಳಿಯ ಭೋಪ್ರಾದಲ್ಲಿ ಎತ್ತರದ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಶಂಕಿತ ಗಾರ್ಡ್…

Read More

ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು

ಕೊಪ್ಪಳ, (ಮಾರ್ಚ್ 18): ನಾಲ್ಕೈದು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ಭಾರಿ ಪ್ರಮಾಣದಲ್ಲಿ ಒಡೆದಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ಕಾಲುವೆಗೆ ಜಲಾಶಯದ ಅಧಿಕಾರಿಗಳು ನೀರು ಬಿಟ್ಟಿದ್ದರು. ಒಟ್ಟು ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಕಾಲುವೆಯಿಂದ ನೀರು ಬಿಡಲಾಗಿತ್ತು. ಆದರೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಕಾಲುವೆ ಒಡೆದಿದ್ದು, ನೀರು ಪಕ್ಕದ ಜಮೀನು ಹಾಗೂ ರೆಸಾರ್ಟ್ ಗಳಿಗೆ ನೀರು ನುಗ್ಗಿದೆ. ಇನ್ನು ಇದೇ ವೇಲೆ ಸ್ಥಳೀಯರ ಬಲೆಗೆ…

Read More

ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ಒಣ ಕೆಮ್ಮಿನ ಸಮಸ್ಯೆ: ತಡೆಗಟ್ಟಲು ಈ ಸಲಹೆ ಪರಿಣಾಮಕಾರಿ

ದೇಶದ ಹಲವು ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದೆ. ಬೆಳಿಗ್ಗೆ ಬಿಸಿಲು ಸಂಜೆಯಾಗುತ್ತಿದ್ದಂತೆ ತಂಪಾದ ವಾತಾವರಣ ಇನ್ನು ಕೆಲವು ಕಡೆಗಳಲ್ಲಿ ಮಳೆ ಇರುವುದರಿಂದ ದೇಹಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅನೇಕರಲ್ಲಿ ಒಣ ಕೆಮ್ಮಿನ (Dry Cough) ಸಮಸ್ಯೆ ಹೆಚ್ಚಾಗುತ್ತಿದೆ. ಹವೆಯಲ್ಲಿ ಇರುವ ಧೂಳು, ಹೊಗೆ, ಸಣ್ಣ ಸಣ್ಣ ಕಣಗಳು ಮತ್ತು ಮಾಲಿನ್ಯ ಕೆಮ್ಮನ್ನು ಪ್ರೇರೇಪಿಸುತ್ತವೆ. ಅದರಲ್ಲಿಯೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ಸಮಸ್ಯೆಯನ್ನು ಸಮಯಕ್ಕೆ…

Read More

ಇರಾನ್ ಅನ್ನು ಸಂಪೂರ್ಣವಾಗಿ ಮುಗಿಸಿಬಿಡಬೇಕು; ಮತ್ತೆ ಸಿಡಿದೆದ್ದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 18: “ಭಯೋತ್ಪಾದಕ ದೇಶವಾದ ಇರಾನಿನಲ್ಲಿ ಉಳಿದಿರುವುದನ್ನು ಎಲ್ಲವನ್ನೂ ನಾವು ಮುಗಿಸಿದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಬಳಸುವ ದೇಶಗಳೂ ಅದಕ್ಕೆ ಕೈಜೋಡಿಸಿದರೆ ಏನಾಗುತ್ತದೆ ಎಂದು ನಾನು ಯೋಚಿಸುತ್ತಿದ್ದೇನೆ. ಈ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ಅನ್ನು “ಮುಗಿಸಿಬಿಡಲು” ಸೂಚಿಸಿದ್ದಾರೆ. ಮತ್ತು ಅಮೆರಿಕ-ಇಸ್ರೇಲ್ ದಾಳಿಗಳ ನಂತರ ಟೆಹ್ರಾನ್ ಅದನ್ನು ಮುಚ್ಚಿದ ನಂತರ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಅವಲಂಬಿಸಿರುವ ರಾಷ್ಟ್ರಗಳನ್ನು ಈ ಮಾರ್ಗವನ್ನು ಸುರಕ್ಷಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಇರಾನ್‌ನ ಸುಪ್ರೀಂ ನಾಯಕ…

Read More

ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ

ನಟ ವಿನೋದ್ ರಾಜ್ (Vinod Raj) ಅವರು ತಮ್ಮ ಸಾಮಾಜಿಕ ಕಾರ್ಯದಿಂದ ಆಗಾಗ್ಗೆ ಗಮನ ಸೆಳೆಯುತ್ತಿದ್ದಾರೆ. ತಾಯಿಯ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ, ಕೋವಿಡ್ ಸಮಯದಲ್ಲಿ ಊರಿನ ಸ್ವಚ್ಛತೆ ಇನ್ನೂ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿರುವ ನಟ ವಿನೋದ್ ರಾಜ್, ಇದೀಗ ಭಾವೈಕ್ಯತೆಯನ್ನು ಸಾರಿದ್ದಾರೆ. ವಿನೋದ್ ರಾಜ್ ಅವರು ರಂಜಾನ್​​ನ ಸಮಯದಲ್ಲಿ ಮಸೀದಿಗಳಲ್ಲಿ ಹಣ್ಣು-ಹಂಪಲು ವಿತರಣೆ ಮಾಡಿದ್ದು, ಮುಸ್ಲಿಂ ಗೆಳೆಯರೊಡನೆ ಮಾತನಾಡಿ ಎಲ್ಲರೂ ಒಟ್ಟಾಗಿ ಬಾಳೋಣ ಎಂದಿದ್ದಾರೆ. ವಿನೋದ್ ಅವರು ಮಸೀದಿಗಳಲ್ಲಿ ಹಣ್ಣು-ಹಂಪು ವಿತರಣೆ ಮಾಡಿರುವ ವಿಡಿಯೋಗಳು ಇಲ್ಲಿವೆ…

Read More

ದೀರ್ಘಾಯುಷ್ಯ ನಿಮ್ಮದಾಗಬೇಕೇ? ಹಾಗಿದ್ರೆ ಪಾಲಿಸಿ ಈ ಸಲಹೆ

ಹಿಂದೆಲ್ಲಾ ನಮ್ಮ ಹಿರಿಯರು ನೂರು ಕಾಲ ಆರೋಗ್ಯವಂತರಾಗಿ ಬದುಕು ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣವೇ ಕಳಪೆ ಜೀವನಶೈಲಿ (Lifestyle) ಮತ್ತು ಅನಾರೋಗ್ಯಕರ ಆಹಾರ ಪದ್ಧತಿ. ಹೀಗಿರುವಾಗ ಆರೋಗ್ಯವಂತರಾಗಿ ನೂರು ಕಾಲ ಜೀವಿಸಬೇಕು ಎಂಬ ಬಯಕೆ ನಿಮಗಿದ್ದರೆ, ಜೀವನಶೈಲಿಯಲ್ಲಿ ಈ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಿ. ಇದರಿಂದ ಖಂಡಿತವಾಗಿಯೂ ದೀರ್ಘಾಯುಷ್ಯ ನಿಮ್ಮದಾಗುತ್ತದೆ. ದೀರ್ಘಾಯುಷ್ಯ ನಿಮ್ಮದಾಗಲು ಈ ಸಲಹೆ ಪಾಲಿಸಿ: ಸಮತೋಲಿತ ಆಹಾರ ಸೇವಿಸಿ: ನೀವು ಏನು…

Read More

ಲೋಪ ಆರೋಪ ಬೆನ್ನಲ್ಲೇ ಜಿಬಿಎ ಮತದಾರರ ಪಟ್ಟಿ ಆಕ್ಷೇಪಣೆಗೆ ನೀಡಿದ್ದ ಕಾಲಾವಕಾಶ ವಿಸ್ತರಣೆ

ಬೆಂಗಳೂರು, ಮಾರ್ಚ್​ 18: ಐದು ನಗರ ಪಾಲಿಕೆಗಳ ವಾರ್ಡ್‌ವಾರು ಮತದಾರರ ತಾತ್ಕಾಲಿಕ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆಯಲ್ಲಿ ನಾಗರಿಕರಿಗೆ ನೀಡಿದ್ದ ದೂರು ಹಾಗೂ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಇದೀಗ ಮುಂದೂಡಲಾಗಿದೆ. ಜನರು ತಮ್ಮ ಅಸಮ್ಮತಿ ಅಥವಾ ತಿದ್ದುಪಡಿ ಸಲಹೆಗಳನ್ನು ಮಾರ್ಚ್ 30ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಈ ಮೊದಲು ಮಾರ್ಚ್​ 20ರವರೆಗೆ ಮಾತ್ರ ಕಾಲಾವಕಾಶ ನಿಗದಿಯಾಗಿತ್ತು. ಆದರೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಡೆದ ಸಭೆಯಲ್ಲಿ ಇನ್ನಷ್ಟು…

Read More

IPL 2026: ಐಪಿಎಲ್ ಫೈನಲ್​ಗಳಲ್ಲಿ ಸೋಲಿಲ್ಲದ ಸರದಾರರು

2026 ರ ಐಪಿಎಲ್ ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಇದು ಈ ಲೀಗ್​ನ 19ನೇ ಆವೃತ್ತಿಯಾಗಿದ್ದು, ಕಳೆದ 18 ಆವೃತ್ತಿಗಳಲ್ಲಿ ಸಾವಿರಾರು ದಾಖಲೆಗಳು ಸೃಷ್ಟಿಯಾಗಿವೆ. ಇದು ಈ ಲೀಗ್​ನ ಯಶಸ್ಸಿಗೂ ಕಾರಣವಾಗಿದೆ. ಅಂತಹ ದಾಖಲೆಗಳಲ್ಲಿ ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ನಡೆದಿರುವ 18 ಫೈನಲ್‌ಗಳಲ್ಲಿ ಎಂದಿಗೂ ಸೋತಿಲ್ಲದ 16 ಆಟಗಾರರ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಆರು ವಿದೇಶಿ ಆಟಗಾರರಿದ್ದರೆ, 10 ಭಾರತೀಯ ಆಟಗಾರರು ಸೇರಿದ್ದಾರೆ. ರೋಹಿತ್ ಶರ್ಮಾ ಒಬ್ಬ ಆಟಗಾರನಾಗಿ ಅತಿ ಹೆಚ್ಚು ಐಪಿಎಲ್ ಫೈನಲ್‌ಗಳನ್ನು ಗೆದ್ದಿದ್ದಾರೆ….

Read More

‘ಧುರಂಧರ್ 2’ ಪ್ರೀಮಿಯರ್ ರದ್ದು, ‘ಉಸ್ತಾದ್ ಭಗತ್ ಸಿಂಗ್​​’ಗೆ ಭರ್ಜರಿ ಲಾಭ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ನಾಳೆ (ಮಾರ್ಚ್ 19) ಬಿಡುಗಡೆ ಆಗುತ್ತಿದೆ. ಆದರೆ ಇಂದಿನಿಂದಲೇ ದೇಶದ ಹಲವು ನಗರಗಳಲ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ದುಬಾರಿ ಬೆಲೆಯ ಈ ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್ ಬೆಲೆಯನ್ನು ನಾಲ್ಕೈದು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಸಹ ಮಾಡಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಸೆನ್ಸಾರ್​​ನಿಂದ ಸಮಸ್ಯೆ ಎದುರಾದ ಕಾರಣ ಇದೀಗ ಭಾರತದಲ್ಲಿ ಹಿಂದಿ ಪ್ರೀಮಿಯರ್ ಶೋ ಹೊರತಾಗಿ ಇತರೆ ಭಾಷೆಯ ಎಲ್ಲ ಪ್ರೀಮಿಯರ್…

Read More

Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ

ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ.  ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಪ್ರತಿಯೊಬ್ಬರೂ ಬೇವು ಬೆಲ್ಲವನ್ನು ಹಂಚುತ್ತಾರೆ. ಬೇವು ಬೆಲ್ಲದ ಜೊತೆ ರುಚಿ ರುಚಿಯಾದ ಬಗೆಬಗೆ ಅಡುಗೆಗಳನ್ನೂ ಮಾಡಲಾಗುತ್ತದೆ. ಅದರಲ್ಲೂ ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಇರಲೇಬೇಕು. ಸಾಮಾನ್ಯವಾಗಿ ಒಬ್ಬಟ್ಟನ್ನು ಮೈದಾ ಹಿಟ್ಟು ಬಳಸಿ…

Read More