All posts by nagaraj11081993

Optical Illusion: ನಿಮ್ಮ ಕಣ್ಣಿಗೊಂದು ಸವಾಲ್‌; ಈ ಚಿತ್ರದಲ್ಲಿ ಮರೆಮಾಡಲಾಗಿರುವ ಕಪ್ ಕೇಕ್ ಗುರುತಿಸಬಲ್ಲಿರಾ

Optical Illusion: ನಿಮ್ಮ ಕಣ್ಣಿಗೊಂದು ಸವಾಲ್‌; ಈ ಚಿತ್ರದಲ್ಲಿ ಮರೆಮಾಡಲಾಗಿರುವ ಕಪ್ ಕೇಕ್ ಗುರುತಿಸಬಲ್ಲಿರಾ

ಮನಸ್ಸು ಹಾಗೂ ಮೈಂಡ್ ರಿಲ್ಯಾಕ್ಸ್ ಆಗಬೇಕೆಂದರೆ ಟ್ರಿಕ್ಕಿ ಒಗಟುಗಳತ್ತ ಗಮನ ಹರಿಸುವುದು ಒಳ್ಳೆಯದು. ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಹೆಚ್ಚಿನವರು ಇಂತಹ ಒಗಟನ್ನು ಬಿಡಿಸಲು ಹೋಗಿ ವಿಫಲರಾಗುತ್ತಾರೆ. ಇದೀಗ ನೀವು ನಿಮ್ಮ ಮೆದುಳಿನ ತೀಕ್ಷ್ಣತೆಯನ್ನು ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ.  ಈ ಚಿತ್ರದಲ್ಲಿ ಕಾಡು ಪ್ರಾಣಿಗಳಿದ್ದು, ಇದರ ನಡುವೆ ಕಪ್ ಕೇಕನ್ನು ಮರೆ ಮಾಡಲಾಗಿದೆ. ಈ ಕಠಿಣ ಸವಾಲಿನ ಚಿತ್ರದಲ್ಲಿ ಮರೆಮಾಡಲಾಗಿರುವ  ಗುಪ್ತ ವಸ್ತುವನ್ನು 10 ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ನೀವು ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಲು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ನಿಮಗೇನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಚಿತ್ರದಲ್ಲಿ ಕಾಡಿನ ಸುಂದರವಾದ ಚಿತ್ರಣವಿದೆ. ಹಚ್ಚ ಹಸಿರಿನಿಂದ ಕೂಡಿದ ಸಣ್ಣ ಸಸ್ಯಗಳು, ಮರಗಳು ಹಾಗೂ ವಿವಿಧ ಪ್ರಾಣಿಗಳು ಇವೆ. ಇದೆಲ್ಲದರ ನಡುವೆ ಕಪ್ ಕೇಕ್ ಇದೆ. ನೀವು ಈ ವಸ್ತುವನ್ನು ಕಂಡು ಹಿಡಿಯಲು ಸಾಧ್ಯವೇ ಎಂದು ನೋಡಿ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಚುಕ್ಕೆಗಳಿಲ್ಲದ ಶ್ವಾನವನ್ನು ಜಸ್ಟ್ 5 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ

ಕಪ್ ಕೇಕ್ ನಿಮ್ಮ ಕಣ್ಣಿಗೆ ಕಾಣಿಸಿತೇ?

ಇಲ್ಯೂಷನ್ ಚಿತ್ರಗಳು ಭ್ರಮೆಯಲ್ಲಿ ಸಿಲುಕಿಸುವ ಕಾರಣ ಗುಪ್ತ ವಸ್ತುಗಳನ್ನು ಕಂಡು ಹಿಡಿಯುವುದು ಅಸಾಧ್ಯ.  ನೀವು ಕಣ್ಣು ಅಗಲಿಸಿ  ಈ ಚಿತ್ರ ನೋಡಿದರೂ ಕಪ್ ಕೇಕ್ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ಈ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ ಚಿಂತಿಸಬೇಡಿ. ಕೆಳಗಿನ ಚಿತ್ರದಲ್ಲಿ ಕಪ್ ಕೇಕ್‌ನ್ನು ನಾವೇ ಗುರುತಿಸಿದ್ದು, ನಿಮ್ಮ ಮೆದುಳಿಗೆ ಕೆಲಸ ನೀಡುವುದನ್ನು ಕಡಿಮೆ ಮಾಡಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಟಿ20 ವಿಶ್ವಕಪ್ ಗೆದ್ದು ಅಗಲಿದ ಅಪ್ಪನ ಬಗ್ಗೆ ರಿಂಕು ಸಿಂಗ್ ಭಾವುಕ ಸಂದೇಶ

ಟಿ20 ವಿಶ್ವಕಪ್ (T20 World Cup) ಸಮಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ರಿಂಕು ಸಿಂಗ್ (Rinku Singh) ಅವರ ತಂದೆ ಸಾವನ್ನಪ್ಪಿದ್ದು ಎಲ್ಲರಿಗೂ ತಿಳಿದಿರುವಂತದ್ದೆ. ಸೂಪರ್ 8 ಸುತ್ತು ನಡೆಯುವ ಸಂದರ್ಭದಲ್ಲಿ ರಿಂಕು ಸಿಂಗ್ ಇದ್ದಕ್ಕಿದ್ದಂತೆ ತಂಡ ತೊರೆದಿದ್ದರು. ರಿಂಕು ಅವರ ತಂದೆಯ ಸ್ಥಿತಿ ಗಂಭೀರವಾಗಿದ್ದರಿಂದ ರಿಂಕು ತಂಡವನ್ನು ತೊರೆದು ಮನೆಗೆ ಮರಳಿದ್ದರು. ಆದರೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ರಿಂಕು ಅವರ ತಂದೆ ಬದುಕುಳಿಯಲಿಲ್ಲ. ಈ ನೋವಿನ ನಡುವೆಯ ರಾಷ್ಟ್ರೀಯ ಕರ್ತವ್ಯಕ್ಕಾಗಿ ರಿಂಕು ಸಿಂಗ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ಟಿ20 ವಿಶ್ವಕಪ್ ಗೆದ್ದು ತನ್ನ ಬದುಕು ಬದಲಿಸಿದ ತಂದೆಯ ಬಗ್ಗೆ ರಿಂಕು ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಅಪ್ಪ..

ತನ್ನ ತಂದೆಯೊಂದಿಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ರಿಂಕು ಸಿಂಗ್, ‘ನಾನು ನಿಮ್ಮೊಂದಿಗೆ ಮಾತನಾಡದೆ ಇಷ್ಟು ದಿನಗಳನ್ನು ಎಂದಿಗೂ ಕಳೆದಿಲ್ಲ. ನೀವು ಇಲ್ಲದೆ ನಾನು ಹೇಗೆ ಮುಂದುವರಿಯುತ್ತೇನೆ ಎಂದು ನನಗೆ ತಿಳಿದಿಲ್ಲ, ಆದರೆ ನನಗೆ ಪ್ರತಿ ಹಂತದಲ್ಲೂ ನೀವು ಬೇಕಾಗುತ್ತೀರಿ. ಕರ್ತವ್ಯ ಮೊದಲು ಎಂದು ನೀವು ನನಗೆ ಕಲಿಸಿದ್ದೀರಿ, ಆದ್ದರಿಂದ ನಾನು ಮೈದಾನದಲ್ಲಿ ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೆ. ಈಗ ನಿಮ್ಮ ಕನಸು ನನಸಾಗಿದೆ, ನೀವು ಈಗ ನನ್ನೊಂದಿಗೆ ಇದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಂತೋಷದಲ್ಲೂ ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಅಪ್ಪಾ’ ಎಂದು ರಿಂಕು ಸಿಂಗ್ ಬರೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಪ್ರದರ್ಶನ

ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಅವರ ಬ್ಯಾಟ್ ಮೌನವಾಗಿತ್ತು. ಈ ಪಂದ್ಯಾವಳಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ರಿಂಕು 8 ಸರಾಸರಿಯಲ್ಲಿ ಕೇವಲ 29 ರನ್ ಗಳಿಸಿದರು. ರಿಂಕು ಸಿಂಗ್ ವೈಫಲ್ಯದ ನಂತರ, ಭಾರತ ತಂಡವು ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿತು, ಸಂಜು ಮತ್ತು ಅಭಿಷೇಕ್ ಶರ್ಮಾ ಅವರನ್ನು ಇನ್ನಿಂಗ್ಸ್ ಆರಂಭಿಕರನ್ನಾಗಿ ಕಣಕ್ಕಿಳಿಸಿತು. ರಿಂಕು ಸಿಂಗ್ ಬದಲಿಗೆ ಅವರ ಸ್ಥಾನದಲ್ಲಿ ತಿಲಕ್ ವರ್ಮಾ ಅವರನ್ನು ಆಡಿಸಲಾಯಿತು. ಬ್ಯಾಟಿಂಗ್ ಸಂಯೋಜನೆಯಲ್ಲಿನ ಈ ಬದಲಾವಣೆಯು ಭಾರತೀಯ ತಂಡದ ಬ್ಯಾಟಿಂಗ್ ಅನ್ನು ಬಲಪಡಿಸಿತು, ಇದರ ಪರಿಣಾಮವಾಗಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತು.

T20 World Cup: ತಂಡವನ್ನು ತೊರೆದು ಇದ್ದಕ್ಕಿದ್ದಂತೆ ಮನೆಗೆ ಮರಳಿದ ರಿಂಕು ಸಿಂಗ್

ಟೀಂ ಇಂಡಿಯಾದಲ್ಲಿ ರಿಂಕು ಸ್ಥಾನ

ರಿಂಕು ಸಿಂಗ್ ಅವರ ಕಳಪೆ ಪ್ರದರ್ಶನದ ನಂತರ, ಅವರು ಟಿ20 ತಂಡದಲ್ಲಿ ಉಳಿಯುತ್ತಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಆದಾಗ್ಯೂ, ರಿಂಕು ಈಗ ಐಪಿಎಲ್ ಮೇಲೆ ಗಮನ ಹರಿಸಬೇಕಾಗಿದೆ. ರಿಂಕು ಸಿಂಗ್ ಮಾರ್ಚ್ 28 ರಂದು ಪ್ರಾರಂಭವಾಗುವ ಐಪಿಎಲ್ 2026 ರಲ್ಲಿ ಕೆಕೆಆರ್ ಪರ ಆಡಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್ ಗೆದ್ದು ಅಗಲಿದ ಅಪ್ಪನಿಗೆ ರಿಂಕು ಸಿಂಗ್ ಭಾವುಕ ಸಂದೇಶ

ಟಿ20 ವಿಶ್ವಕಪ್ ಸಮಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಸಾವನ್ನಪ್ಪಿದ್ದು ಎಲ್ಲರಿಗೂ ತಿಳಿದಿರುವಂತದ್ದೆ. ಸೂಪರ್ 8 ಸುತ್ತು ನಡೆಯುವ ಸಂದರ್ಭದಲ್ಲಿ ರಿಂಕು ಸಿಂಗ್ ಇದ್ದಕ್ಕಿದ್ದಂತೆ ತಂಡ ತೊರೆದಿದ್ದರು. ರಿಂಕು ಅವರ ತಂದೆಯ ಸ್ಥಿತಿ ಗಂಭೀರವಾಗಿದ್ದರಿಂದ ರಿಂಕು ತಂಡವನ್ನು ತೊರೆದು ಮನೆಗೆ ಮರಳಿದ್ದರು. ಆದರೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ರಿಂಕು ಅವರ ತಂದೆ ಬದುಕುಳಿಯಲಿಲ್ಲ. ಈ ನೋವಿನ ನಡುವೆಯ ರಾಷ್ಟ್ರೀಯ ಕರ್ತವ್ಯಕ್ಕಾಗಿ ರಿಂಕು ಸಿಂಗ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ಟಿ20 ವಿಶ್ವಕಪ್ ಗೆದ್ದು ತನ್ನ ಬದುಕು ಬದಲಿಸಿದ ತಂದೆಯ ಬಗ್ಗೆ ರಿಂಕು ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಅಪ್ಪ..

ತನ್ನ ತಂದೆಯೊಂದಿಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ರಿಂಕು ಸಿಂಗ್, ‘ನಾನು ನಿಮ್ಮೊಂದಿಗೆ ಮಾತನಾಡದೆ ಇಷ್ಟು ದಿನಗಳನ್ನು ಎಂದಿಗೂ ಕಳೆದಿಲ್ಲ. ನೀವು ಇಲ್ಲದೆ ನಾನು ಹೇಗೆ ಮುಂದುವರಿಯುತ್ತೇನೆ ಎಂದು ನನಗೆ ತಿಳಿದಿಲ್ಲ, ಆದರೆ ನನಗೆ ಪ್ರತಿ ಹಂತದಲ್ಲೂ ನೀವು ಬೇಕಾಗುತ್ತೀರಿ. ಕರ್ತವ್ಯ ಮೊದಲು ಎಂದು ನೀವು ನನಗೆ ಕಲಿಸಿದ್ದೀರಿ, ಆದ್ದರಿಂದ ನಾನು ಮೈದಾನದಲ್ಲಿ ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೆ. ಈಗ ನಿಮ್ಮ ಕನಸು ನನಸಾಗಿದೆ, ನೀವು ಈಗ ನನ್ನೊಂದಿಗೆ ಇದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಂತೋಷದಲ್ಲೂ ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಅಪ್ಪಾ’ ಎಂದು ರಿಂಕು ಸಿಂಗ್ ಬರೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಪ್ರದರ್ಶನ

ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಅವರ ಬ್ಯಾಟ್ ಮೌನವಾಗಿತ್ತು. ಈ ಪಂದ್ಯಾವಳಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ರಿಂಕು 8 ಸರಾಸರಿಯಲ್ಲಿ ಕೇವಲ 29 ರನ್ ಗಳಿಸಿದರು. ರಿಂಕು ಸಿಂಗ್ ವೈಫಲ್ಯದ ನಂತರ, ಭಾರತ ತಂಡವು ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿತು, ಸಂಜು ಮತ್ತು ಅಭಿಷೇಕ್ ಶರ್ಮಾ ಅವರನ್ನು ಇನ್ನಿಂಗ್ಸ್ ಆರಂಭಿಕರನ್ನಾಗಿ ಕಣಕ್ಕಿಳಿಸಿತು. ರಿಂಕು ಸಿಂಗ್ ಬದಲಿಗೆ ಅವರ ಸ್ಥಾನದಲ್ಲಿ ತಿಲಕ್ ವರ್ಮಾ ಅವರನ್ನು ಆಡಿಸಲಾಯಿತು. ಬ್ಯಾಟಿಂಗ್ ಸಂಯೋಜನೆಯಲ್ಲಿನ ಈ ಬದಲಾವಣೆಯು ಭಾರತೀಯ ತಂಡದ ಬ್ಯಾಟಿಂಗ್ ಅನ್ನು ಬಲಪಡಿಸಿತು, ಇದರ ಪರಿಣಾಮವಾಗಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತು.

ಟೀಂ ಇಂಡಿಯಾದಲ್ಲಿ ರಿಂಕು ಸ್ಥಾನ

ರಿಂಕು ಸಿಂಗ್ ಅವರ ಕಳಪೆ ಪ್ರದರ್ಶನದ ನಂತರ, ಅವರು ಟಿ20 ತಂಡದಲ್ಲಿ ಉಳಿಯುತ್ತಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಆದಾಗ್ಯೂ, ರಿಂಕು ಈಗ ಐಪಿಎಲ್ ಮೇಲೆ ಗಮನ ಹರಿಸಬೇಕಾಗಿದೆ. ರಿಂಕು ಸಿಂಗ್ ಮಾರ್ಚ್ 28 ರಂದು ಪ್ರಾರಂಭವಾಗುವ ಐಪಿಎಲ್ 2026 ರಲ್ಲಿ ಕೆಕೆಆರ್ ಪರ ಆಡಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

ನವದೆಹಲಿ, ಮಾರ್ಚ್ 10: ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರ ವಿರುದ್ಧ ಪ್ರತಿಪಕ್ಷಗಳ ಒಂದು ಗುಂಪು ಇಂದು ಅವಿಶ್ವಾಸ ನಿರ್ಣಯ ಮಂಡಿಸಿದೆ. ಸ್ಪೀಕರ್ ಆಡಳಿತ ಪಕ್ಷಕ್ಕೆ ಅನುಕೂಲಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಸಮಯ ನೀಡದಿರುವ ಮೂಲಕ ಪಕ್ಷಪಾತದ ಧೋರಣೆ ತಳೆದಿದ್ದಾರೆ ಎಂದು ಉಲ್ಲೇಖಿಸಿ ವಿರೋಧ ಪಕ್ಷದ 118 ಸಂಸದರು ಈ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.

ಅವಿಶ್ವಾಸ ನಿರ್ಣಯವನ್ನು ಓದುವಾಗ, ವಿರೋಧ ಪಕ್ಷದ ಮಹಿಳಾ ಸಂಸದರು ಪ್ರಧಾನಿಯ ಮೇಲೆ ದೈಹಿಕ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಸ್ಪೀಕರ್ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಜಾವೇದ್ ಹೇಳಿದ್ದಾರೆ. ಈ ನಿರ್ಣಯವನ್ನು ಮಂಡಿಸಿದ ಕೂಡಲೇ, ಕಾರ್ಯವಿಧಾನದ ನಿಯಮಗಳು ಮತ್ತು ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಯಾರು ಅಧ್ಯಕ್ಷತೆ ವಹಿಸಬೇಕು ಎಂಬುದರ ಕುರಿತು ವಿರೋಧ ಪಕ್ಷದ ಮತ್ತು ಖಜಾನೆ ಪೀಠಗಳ ನಡುವೆ ಸದನವು ಬಿಸಿ ಚರ್ಚೆಗೆ ಸಾಕ್ಷಿಯಾಯಿತು.

ಇದನ್ನೂ ಓದಿ: ಸಂಸತ್ತಿನಲ್ಲಿ ರಾಜಕೀಯ ಸಮರ, ಮಾರ್ಚ್​ 9ರಂದು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ

ಈ ವೇಳೆ AIMIM ಸಂಸದ ಅಸಾದುದ್ದೀನ್ ಓವೈಸಿ, ಸಂಸದೀಯ ನಿಯಮಗಳನ್ನು ಉಲ್ಲೇಖಿಸಿ ಮತ್ತು ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯು ಪರಿಗಣನೆಯಲ್ಲಿರುವಾಗ, ಸ್ಪೀಕರ್ ಅವರು ಕಲಾಪಗಳ ಅಧ್ಯಕ್ಷತೆ ವಹಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಚರ್ಚೆ ಮುಂದುವರಿಯುವ ಮೊದಲು ಯಾರು ಅಧ್ಯಕ್ಷತೆ ವಹಿಸಬೇಕು ಎಂಬುದರ ಕುರಿತು ಸದನವು ಮೊದಲು ಒಮ್ಮತಕ್ಕೆ ಬರಬೇಕು ಎಂದು ಅವರು ಸೂಚಿಸಿದರು.

ಟಿಎಂಸಿ ಸಂಸದ ಸೌಗತ ರಾಯ್ ಕೂಡ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದ ಉಪಸಭಾಪತಿಯನ್ನು ನೇಮಿಸದಿದ್ದಕ್ಕಾಗಿ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಎನ್​ಡಿಎ ಸರ್ಕಾರವನ್ನು ಟೀಕಿಸಿದರು. ಈ ಚರ್ಚೆಯ ಸಮಯದಲ್ಲಿ ಅಧ್ಯಕ್ಷತೆ ವಹಿಸುವ ಜಗದಾಂಬಿಕಾ ಪಾಲ್ ಅವರ ಅಧಿಕಾರವನ್ನು ಪ್ರಶ್ನಿಸಿದ ಕೆ.ಸಿ ವೇಣುಗೋಪಾಲ್, ಜಗದಾಂಬಿಕಾ ಪಾಲ್ ಅವರನ್ನು ಅಧ್ಯಕ್ಷರ ಸಮಿತಿಗೆ ಸ್ಪೀಕರ್ ಅವರೇ ನೇಮಿಸಿದ್ದಾರೆ. ಹೀಗಾಗಿ, ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಅವರು ಅಧ್ಯಕ್ಷತೆ ವಹಿಸುವುದು ಎಷ್ಟು ಸೂಕ್ತ? ಎಂದು ಹೇಳಿದರು.

ಇದನ್ನೂ ಓದಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್, ಸಹಿ ಹಾಕಲ್ಲ ಎಂದ ಟಿಎಂಸಿ ಶಾಸಕರು

ಕೊನೆಗೂ ಜಗದಾಂಬಿಕಾ ಪಾಲ್ ಅವರೇ ಸದನವನ್ನು ಮುನ್ನಡೆಸಿದರು. ಅವಿಶ್ವಾಸ ನಿರ್ಣಯದ ಕುರಿತು ಎನ್​ಡಿಎ ಸರ್ಕಾರದ ಕಡೆಯಿಂದ ಚರ್ಚೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಅನುರಾಗ್ ಠಾಕೂರ್, ನಿಶಿಕಾಂತ್ ದುಬೆ, ರವಿಶಂಕರ್ ಪ್ರಸಾದ್ ಮತ್ತು ಭರ್ತೃಹರಿ ಮಹ್ತಾಬ್ ಸೇರಿದಂತೆ ಹಲವಾರು ಬಿಜೆಪಿ ಸಂಸದರು ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವಿರೋಧ ಪಕ್ಷದಿಂದ, ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್, ಮನೀಶ್ ತಿವಾರಿ, ದೀಪೇಂದರ್ ಸಿಂಗ್ ಹೂಡಾ ಮತ್ತು ಜೋತಿಮಣಿ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುವಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಜನವರಿ 28ರಂದು ಪ್ರಾರಂಭವಾದ ಸಂಸತ್ತಿನ ಬಜೆಟ್ ಅಧಿವೇಶನವು ಏಪ್ರಿಲ್ 2ರಂದು ಮುಕ್ತಾಯಗೊಳ್ಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಒಂದು ದಿನಕ್ಕೆ ನೀವು ಎಷ್ಟು ಪ್ರಮಾಣದ ಬಿಯರ್​​ ಕುಡಿಯಬಹುದು ಗೊತ್ತಾ? ಇಲ್ಲಿದೆ ಮಾಹಿತಿ

Source link

ಯುದ್ಧದ ಎಫೆಕ್ಟ್: ಬೆಂಗಳೂರಿನ ಪಿಜಿಗಳಿಗೂ ಸಂಕಷ್ಟ; ಊಟದ ಮೆನುನೇ ಚೇಂಜ್

ಬೆಂಗಳೂರು, ಮಾರ್ಚ್​ 10: ಮಧ್ಯಪ್ರಾಚ್ಯದಲ್ಲಿನ ಯುದ್ಧ (iran israel war) ಎಷ್ಟರಮಟ್ಟಿಗೆ ಎಫೆಕ್ಟ್ ತಟ್ಟಿದೆ ಅಂದರೆ ಸದ್ಯ ದೇಶಾದ್ಯಂತ ಗ್ಯಾಸ್​ ಸಿಲಿಂಡರ್​​​ಗೆ ಹಾಹಾಕರ ಉಂಟಾಗಿದೆ. ಕಮರ್ಷಿಯಲ್ ಸಿಲಿಂಡರ್​​ಗೆ 115 ರೂ ಏರಿಕೆ ಆಗಿದ್ದು, ಇದು ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಇತ್ತ ಬೆಂಗಳೂರಿನ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿರುವುದು ಇಡೀ ಹೋಟೆಲ್​​ ​ಉದ್ಯಮ ಸೇರಿದಂತೆ ಇದೀಗ (PG) ಪಿಜಿ ಮಾಲೀಕರಿಗೂ ಆತಂಕ ಶುರುವಾಗಿದೆ.

ಪಿಜಿ ಮಾಲೀಕರಿಗೂ ತಟ್ಟಿದ ಯುದ್ಧದ ಎಫೆಕ್ಟ್

ಸಿಲಿಕಾನ್​ ಸಿಟಿ ಬೆಂಗಳೂರಿಗೆ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ಹೀಗೆ ಆಗಮಿಸುವವರು ಹೆಚ್ಚಾಗಿ ಪಿಜಿಗಳನ್ನೇ ಅವಲಂಬಿಸುತ್ತಾರೆ. ಆದರೆ ಪ್ರಸ್ತುತ ನಗರದಲ್ಲಿ 15 ಸಾವಿರ ಪಿಜಿಗಳಲ್ಲಿದ್ದು, 10 ಲಕ್ಷಕ್ಕೂ ಹೆಚ್ಚರು ಜನರು ವಾಸಿಸುತ್ತಿದ್ದಾರೆ. ಇನ್ನು ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇದೀಗ ಉಂಟಾಗಿರುವ ಗ್ಯಾಸ್ ಕೊರತೆಯಿಂದಾಗಿ ಪಿಜಿ ಮಾಲೀಕರು ಅಡುಗೆ ಮಾಡುವುದಕ್ಕೂ ಚಿಂತಿಸುವಂತಾಗಿದೆ.

ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿಕೆ ನೀಡಿದ್ದು, ಪಿಜಿಗಳಿಗೆ ಕಮರ್ಷಿಯಲ್ ಗ್ಯಾಸ್‌ ಸಿಗುತ್ತಿಲ್ಲ. ಸದ್ಯ ಇನ್ನೊಂದು ವಾರ ಇರುವ ಸಿಲಿಂಡರ್​ನಲ್ಲೇ ಮ್ಯಾನೇಜ್ ಮಾಡುತ್ತೇವೆ. ಮುಂದೆ‌ ಹೇಗೆ ಎಂಬ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.

ಊಟದ ಮೆನು ಕೂಡ ಚೇಂಜ್​​

ಇದರಿಂದ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಿಜಿಗಳಲ್ಲಿ ಚಪಾತಿ, ರೊಟ್ಟಿ ಮಾಡದಂತೆ ನಿರ್ಧರಿಸಲಾಗಿದೆ. ಅನ್ನ, ಸಾಂಬಾರ್, ಪಲಾವ್ ಹೀಗೆ ಗ್ಯಾಸ್ ಕಡಿಮೆ ಬಳಕೆ ಆಗುವ ಪದಾರ್ಥಗಳನ್ನು ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಪಿಜಿಗಳಲ್ಲಿ ಇಂದಿನಿಂದಲೇ ಹೊಸ ಮೆನು ಜಾರಿ ಆಗುತ್ತೆ. ಕಮರ್ಷಿಯಲ್ ಗ್ಯಾಸ್ ದರ ಹೆಚ್ಚಾದರೂ ಹೆಚ್ಚಳ ಮಾಡಲ್ಲ. ಸದ್ಯ ನಾವೇ ಭರಿಸುತ್ತೇವೆ. ಇದೇ ದರ ಮುಂದುವರೆದರೆ ನೋಡಬೇಕಾಗುತ್ತೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕಿದೆ ಎಂದು ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಬದಲಾವಣೆಯ ಗಾಳಿ

2026 ರ ಟಿ20 ವಿಶ್ವಕಪ್ (T20 World Cup) ಗೆದ್ದ ಟೀಂ ಇಂಡಿಯಾಗೆ (Team India) ಬಿಸಿಸಿಐನಿಂದ ಭರ್ಜರಿ ಬಹುಮಾನ ಘೋಷಣೆಯಾಗಿದೆ. ಐಸಿಸಿ ನೀಡಿದ 27.48 ಕೋಟಿ ರೂಗಳ ಜೊತೆಗೆ ಬಿಸಿಸಿಐನಿಂದ 131 ಕೋಟಿ ರೂ. ಬಹುಮಾನ ಸಿಕ್ಕಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಪಾಳದಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ತಂಡವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮಖ ಪಾತ್ರವಹಿಸಿದ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ (T. Dilip) ಅವರನ್ನು ಈ ಹುದ್ದೆಯಿಂದ ತೆಗೆದುಹಾಕಬಹುದು ಎಂದು ಹೇಳಲಾಗಲುತ್ತಿದೆ. 2021 ರಿಂದ ತಂಡದ ಫೀಲ್ಡಿಂಗ್‌ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್ ಇಷ್ಟರಲ್ಲೇ ಈ ಹುದ್ದೆಯಿಂದ ಕೆಳಗಿಳಿಯಬಹುದು

ಅತಿ ಹೆಚ್ಚು ಕ್ಯಾಚ್‌ ಕೈಬಿಟ್ಟ ಭಾರತ

ವಾಸ್ತವವಾಗಿ, ಟೀಂ ಇಂಡಿಯಾ ಪ್ರಶಸ್ತಿ ಗೆದ್ದರೂ, ತಂಡದ ಫೀಲ್ಡಿಂಗ್‌ ಮಾತ್ರ ಕಳಪೆಯಾಗಿತ್ತು. ಹಲವಾರು ಪಂದ್ಯಗಳಲ್ಲಿ ತಂಡವು ಸಾಕಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿತ್ತು. ಹೀಗಾಗಿ ಇಡೀ ಪಂದ್ಯಾವಳಿಯಲ್ಲಿ ತಂಡದ ಫೀಲ್ಡಿಂಗ್‌ನಲ್ಲಿನ ಲೋಪಗಳು ಸಾಕಷ್ಟು ಚರ್ಚೆಯಾಗಿದ್ದವು. ಅಲ್ಲದೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡ ಎಂಬ ಬೇಡದ ದಾಖಲೆ ಕೂಡ ಟೀಂ ಇಂಡಿಯಾ ಪಾಲಾಗಿದೆ ಅಂತಹ ಪರಿಸ್ಥಿತಿಯಲ್ಲಿ, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಭವಿಷ್ಯದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಇದಕ್ಕೆ ಇನ್ನೊಂದು ದೊಡ್ಡ ಕಾರಣವೆಂದರೆ ಟಿ. ದಿಲೀಪ್ ಅವರ ಒಪ್ಪಂದವು ಜೂನ್ 2026 ರಲ್ಲಿ ಮುಕ್ತಾಯಗೊಳ್ಳುತ್ತಿದೆ. ಪ್ರಸ್ತುತ ಸನ್ನಿವೇಶವನ್ನು ನೋಡಿದರೆ, ಬಿಸಿಸಿಐ ದಿಲೀಪ್ ಅವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸುವ ಸಾಧ್ಯತೆಗಳಿಲ್ಲ. ಹೀಗಾಗಿ ಅವರ ಬದಲಿಯಾಗಿ ವಿದೇಶಿ ಫೀಲ್ಡಿಂಗ್ ಕೋಚ್ ನೇಮಕಕ್ಕೆ ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿದೆ.

ಒಪ್ಪಂದ 2ನೇ ಬಾರಿಗೆ ವಿಸ್ತರಣೆ

ಮೇಲೆ ಹೇಳಿದಂತೆ 2021 ರಿಂದ ಟೀಂ ಇಂಡಿಯಾದ ಫೀಲ್ಡಿಂಗ್‌ ಕೋಚ್ ಆಗಿರುವ ದಿಲೀಪ್, ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಈ ಹುದ್ದೆಗೇರಿದ್ದರು. 2024 ರ ಟಿ 20 ವಿಶ್ವಕಪ್ ನಂತರ ಅವರ ಅಧಿಕಾರಾವಧಿ ಕೊನೆಗೊಂಡಿತ್ತಾದರೂ ಅವರ ಒಪ್ಪಂದವನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಯಿತು. ಆದಾಗ್ಯೂ, ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಲಾಗಿತ್ತು.

ಆದರೆ ರೋಹಿತ್ ಶರ್ಮಾ ಮತ್ತೆ ದಿಲೀಪ್ ಅವರನ್ನೇ ಈ ಹುದ್ದೆಯಲ್ಲಿ ಮುಂದುವರೆಸುವಂತೆ ಬಿಸಿಸಿಐ ಬಳಿ ವಿನಂತಿಸಿಕೊಂಡಿದ್ದರು. ರೋಹಿತ್ ಅವರ ಹಸ್ತಕ್ಷೇಪದಿಂದಾಗಿ, ದಿಲೀಪ್ ಒಂದು ವರ್ಷದ ವಿಸ್ತರಣೆಯನ್ನು ಪಡೆದು ಇಂಗ್ಲೆಂಡ್ ಪ್ರವಾಸಕ್ಕಾಗಿ ತಂಡವನ್ನು ಸೇರಿಕೊಂಡಿದ್ದರು. ಆ ಬಳಿಕ ಟಿ20 ವಿಶ್ವಕಪ್​ನಲ್ಲಿಯೂ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆದಾಗ್ಯೂ, ಭವಿಷ್ಯದಲ್ಲಿ ಅವರು ತಂಡದ ಭಾಗವಾಗುತ್ತಾರೆಯೇ ಎಂಬುದು ಈಗ ಬಿಸಿಸಿಐ ಕೈಯಲ್ಲಿದೆ.

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೂರ್ನಮೆಂಟ್ ತಂಡ ಪ್ರಕಟಿಸಿದ ಐಸಿಸಿ

ವಿದೇಶಿ ಫೀಲ್ಡಿಂಗ್ ಕೋಚ್ ಹುಡುಕಾಟದಲ್ಲಿ ಬಿಸಿಸಿಐ

ಕಳೆದ ವರ್ಷ ಟಿ. ದಿಲೀಪ್ ತಂಡಕ್ಕೆ ಮರು ಪ್ರವೇಶ ಪಡೆಯಲು ಪ್ರಮುಖ ಕಾರಣವೆಂದರೆ ಅವರ ಬದಲಿಯಾಗಿ ಸೂಕ್ತ ಫೀಲ್ಡಿಂಗ್ ಕೋಚ್ ಸಿಗದೆ ಇದ್ದದ್ದು. ವರದಿಗಳ ಪ್ರಕಾರ, ಬಿಸಿಸಿಐ ವಿದೇಶಿ ಫೀಲ್ಡಿಂಗ್ ಕೋಚ್ ಅನ್ನು ಹುಡುಕುತ್ತಿತ್ತು, ಆದರೆ ಅಭ್ಯರ್ಥಿ ಸಿಗದಿದ್ದಾಗ, ದಿಲೀಪ್ ಅವರನ್ನು ಮುಂದುವರೆಸಲಾಯಿತು. ಇದೀಗ ದಿಲೀಪ್ ಅವರನ್ನು ಬದಲಿಸಲು ಬಿಸಿಸಿಐಗೆ ಸಾಕಷ್ಟು ಸಮಯವಿದ್ದು, ಅವರ ಸ್ಥಾನಕ್ಕೆ ಬೇರೋಬ್ಬ ಫೀಲ್ಡಿಂಗ್‌ ಕೋಚ್ ಬರುವ ಸಾಧ್ಯತೆಗಳು ಹೆಚ್ಚಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?

ಡಾ. ಬಸವರಾಜ ಗುರೂಜಿಯವರು 2026ರ ಯುಗಾದಿ ಪರಾಭವನಾಮ ಸಂವತ್ಸರದ ವೃಶ್ಚಿಕ ರಾಶಿಯ ಭವಿಷ್ಯವನ್ನು ವಿವರಿಸಿದ್ದಾರೆ. ಈ ವರ್ಷವು ವೃಶ್ಚಿಕ ರಾಶಿಯವರಿಗೆ ಉತ್ತಮ ಫಲಗಳನ್ನು ನೀಡಲಿದೆ. ಗುರು ಗ್ರಹವು 8ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಸಂಚಾರ ಮಾಡುವುದರಿಂದ ಅದೃಷ್ಟ ಕೂಡಿ ಬರುವ ಕಾಲ ಇದಾಗಿದೆ. ಶನಿಯು ಪಂಚಮದಲ್ಲಿದ್ದರೆ, ರಾಹು ನಾಲ್ಕರಿಂದ ಮೂರಕ್ಕೆ ಮತ್ತು ಕೇತು ಹತ್ತರಿಂದ ಒಂಬತ್ತಕ್ಕೆ ಸಂಚಾರ ಮಾಡಲಿದೆ.

ಆರೋಗ್ಯ ಸ್ಥಿತಿ ಉತ್ತಮವಾಗಿರಲಿದ್ದು, ಸುಖ-ದುಃಖದ ಅನುಪಾತ 6:3 ಇರಲಿದೆ. ವೃತ್ತಿ, ವ್ಯಾಪಾರ ಹಾಗೂ ಆರ್ಥಿಕವಾಗಿ ಸಬಲತೆಯನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ಪ್ರಗತಿ, ಬಾಕಿ ವಸೂಲಿ, ಅರ್ಧಂಬರ್ಧ ಕೆಲಸಗಳ ಪೂರ್ಣ, ಅಣ್ಣ-ತಮ್ಮಂದಿರಿಂದ ಸಹಕಾರ ದೊರೆಯಲಿದೆ. ರಿಯಲ್ ಎಸ್ಟೇಟ್, ಭೂ ವ್ಯಾಪಾರಿಗಳು, ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಇದು ಜಾಕ್‌ಪಾಟ್ ವರ್ಷವೆಂದು ಗುರುಗಳು ಹೇಳಿದ್ದಾರೆ. ಕೋಪ-ತಾಪಗಳನ್ನು ಕಡಿಮೆ ಮಾಡಿಕೊಳ್ಳುವುದು ಮುಖ್ಯ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಮಹಿಳೆಯರನ್ನು ಕಾಡಬಹುದು. ಪಾಲುದಾರಿಕೆ ಮತ್ತು ಆಸ್ತಿ ವಿಚಾರಗಳಲ್ಲಿ ಎಚ್ಚರ ಅಗತ್ಯ. ಒಟ್ಟಾರೆಯಾಗಿ, ಶೇ.75 ಶುಭಫಲಗಳನ್ನು ವೃಶ್ಚಿಕ ರಾಶಿಯವರು ನಿರೀಕ್ಷಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

Source link

ವ್ಹಾವ್! ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ

ಬೆಂಗಳೂರು, (ಮಾರ್ಚ್ 10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು (Bengaluru) ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ (international bus station)ತಲೆ ಎತ್ತಲಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಇಂದು (ಮಾರ್ಚ್ 10) ವಿಧಾನಪರಿಷತ್​​ನಲ್ಲಿ ಉತ್ತರ ನೀಡಿದ ರಾಮಲಿಂಗಾರೆಡ್ಡಿ ಅವರು, ಈಗ ಮೆಜೆಸ್ಟಿಕ್​ ವ್ಯಾಪ್ತಿಯಲ್ಲಿ 32 ಎಕರೆ ಜಾಗ ಇದೆ. ಪ್ರತಿದಿನ ಇಲ್ಲಿ 11 ಸಾವಿರ ಬಸ್​​ಗಳ ಸಂಚಾರ ಇರುತ್ತೆ. ಮೆಜೆಸ್ಟಿಕ್​​ನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶವಿದೆ. ಸಿಂಗಾಪುರಕ್ಕಿಂತಲೂ ಅತ್ಯುತ್ತಮ ಬಸ್​ ನಿಲ್ದಾಣ ಮಾಡುತ್ತೇವೆ. ಬಸ್​​​ ನಿಲ್ದಾಣ ಸಂಬಂಧ ವರದಿ ಪಡೆಯಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ಯಾಬಿನೆಟ್​​​​ನಲ್ಲಿ ಇಟ್ಟು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

‘ಪ್ರಾಜೆಕ್ಟ್ ಮೆಜೆಸ್ಟಿಕ್​​’ ಹೆಸರಿನಲ್ಲಿ ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಬಸ್​ ನಿಲ್ದಾಣ ಮಾಡಲಾಗುತ್ತೆ. ತಜ್ಞರ ಸಲಹೆ ಪಡೆದು ಬಸ್​​ ನಿಲ್ದಾಣ ನಿರ್ಮಿಸಲು ನಿರ್ಧರಿಸಿದ್ದೇವೆ. ಸಿಂಗಾಪುಕ್ಕಿಂತ ಉತ್ತಮ ಅಂತಾರಾಷ್ಟ್ರೀಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Anganwadi Recruitment 2026: ಕಲಬುರಗಿ ಅಂಗನವಾಡಿ ನೇಮಕಾತಿ; 412 ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾಗಿದ್ರೆ ಸಾಕು!

ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (WCD) ಕಲಬುರಗಿ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 412 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ 89 ಅಂಗನವಾಡಿ ಕಾರ್ಯಕರ್ತೆಯರು ಮತ್ತು 323 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಲಭ್ಯವಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 16ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಅಗತ್ಯ.

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಕನಿಷ್ಠ ಪಿಯುಸಿ (PUC) ಉತ್ತೀರ್ಣರಾಗಿರಬೇಕು ಮತ್ತು ಸಹಾಯಕಿಯರ ಹುದ್ದೆಗೆ 10ನೇ ತರಗತಿ ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ (karnemakaone.kar.nic.in) ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಶೈಕ್ಷಣಿಕ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರವನ್ನು ಸಿದ್ಧಪಡಿಸಿಕೊಂಡು, ಅಧಿಸೂಚನೆಯಲ್ಲಿನ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಲು ಇಲಾಖೆ ಸೂಚಿಸಿದೆ. ಆನ್‌ಲೈನ್ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ಸುರಕ್ಷಿತವಾಗಿಟ್ಟುಕೊಳ್ಳುವುದು ಅವಶ್ಯಕ. ಫೆಬ್ರವರಿ 20 ರಿಂದ ಪ್ರಾರಂಭವಾದ ಈ ಅರ್ಜಿ ಪ್ರಕ್ರಿಯೆಯು ಮಾರ್ಚ್ 16 ರಂದು ಮುಕ್ತಾಯಗೊಳ್ಳಲಿದ್ದು, ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಆಡಳಿತ ಮಂಡಳಿ ತಿಳಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link