All posts by nagaraj11081993

ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ 8 ಆಟಗಾರರ ಪಟ್ಟಿ ಪ್ರಕಟ

Source link

Karnataka Budget 2026: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ !

ಬೆಂಗಳೂರು, ಮಾರ್ಚ್​ 06: ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2026ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬೆಂಗಳೂರಿನ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯನ್ನು ಇನ್ನು ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಈ ಹೆಸರು ಬದಲಾವಣೆಯು ರಾಜ್ಯದ ಗೌರವಾನ್ವಿತ ವ್ಯಕ್ತಿಗೆ ಸಲ್ಲಿಸಲಾದ ಗೌರವವಾಗಿದೆ.

ಮರುನಾಮಕರಣದ ಜೊತೆಗೆ, ರಾಜ್ಯದ ವಿವಿಧ ಭಾಗಗಳಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಹಲವಾರು ಹೊಸ ಯೋಜನೆಗಳನ್ನು ಸಹ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅದರಂತೆ, ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರೂ ವೆಚ್ಚದಲ್ಲಿ ಎರಡು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಸರ್ಕಾರ ಯೋಜಿಸಿದೆ. ಇವು ಸ್ಥಳೀಯ ಜನರಿಗೆ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸಲಿವೆ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್​ಡೇಟ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್​ನಲ್ಲಿ ಸಿದ್ದರಾಮಯ್ಯ ಭರಪೂರ ಕೊಡುಗೆ

ಬೆಂಗಳೂರು, ಮಾರ್ಚ್ 6: ದಾಖಲೆಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 2026–27ನೇ ಸಾಲಿನ ಕರ್ನಾಟಕ ಆಯವ್ಯಯದಲ್ಲಿ (Karnataka Budget 2026) ರಾಜ್ಯ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ಬೆಂಬಲ ನೀಡುವಂತೆ ನಗರ ಅಭಿವೃದ್ಧಿಗೆ ಒಟ್ಟು 7,000 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಜೆಟ್​​ನಲ್ಲಿ ಘೋಷಿಸಿದೆ.

ಬೆಂಗಳೂರು ನಗರದಲ್ಲಿ ರಸ್ತೆ, ಮೂಲಸೌಕರ್ಯ, ಪಾದಚಾರಿ ಮಾರ್ಗ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ನಗರದ ಐದು ನಗರ ಪಾಲಿಕೆಗಳಲ್ಲಿ 1,233 ಕೋಟಿ ರೂಪಾಯಿ ವೆಚ್ಚದಲ್ಲಿ ವಾರ್ಡ್ ಮಟ್ಟದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.

1,700 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್

ಇದರ ಜೊತೆಗೆ 1,700 ಕೋಟಿ ರೂಪಾಯಿ ವೆಚ್ಚದಲ್ಲಿ 158 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತದೆ. ಮತ್ತೊಂದೆಡೆ 1,936 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಮುಖ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ.

ಸಿಲ್ಕ್ ಬೋರ್ಡ್ ಟು ಕೆಆರ್ ಪುರಂ ಔಟರ್ ರಿಂಗ್ ರೋಡ್​ಗೆ 450 ಕೋಟಿ ರೂ.

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಆರ್ ಪುರಂ ಮೆಟ್ರೋ ನಿಲ್ದಾಣದವರೆಗೆ ಹೊರವರ್ತುಲ ರಸ್ತೆ (Outer Ring Road) ಅಭಿವೃದ್ಧಿಗೆ 450 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಜೊತೆಗೆ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವುದು ಮತ್ತು ಕೆರೆಗಳ ಅಭಿವೃದ್ಧಿಗಾಗಿ 273 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರಿನ 450 ಕಿಲೋಮೀಟರ್‌ಗೂ ಹೆಚ್ಚು ರಸ್ತೆಗೆ ವೈಟ್ ಟಾಪಿಂಗ್ ಮಾಡುವ ಯೋಜನೆಯೂ ಸರ್ಕಾರದ ಗಮನ ಸೆಳೆದಿದೆ. ಇದಕ್ಕಾಗಿ ಸುಮಾರು 3,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ನಗರದ ಪಾದಚಾರಿಗಳ ಸುರಕ್ಷತೆ ಮತ್ತು ಸೌಲಭ್ಯ ಹೆಚ್ಚಿಸಲು 500 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸಲಾಗಿದೆ. ಇದೇ ವೇಳೆ ಸಂಚಾರ ಸುಗಮತೆಗೆ ಹಾಗೂ ಸುರಕ್ಷತೆಗೆ 100 ಸ್ಕೈವಾಕ್‌ಗಳನ್ನು ನಿರ್ಮಿಸುವುದಕ್ಕೂ ಸರ್ಕಾರ ನಿರ್ಧರಿಸಿದೆ.

ಇದರ ಜೊತೆಗೆ ನಗರ ಸೌಂದರ್ಯ ಹೆಚ್ಚಳಕ್ಕೂ ಒತ್ತು ನೀಡಲಾಗಿದ್ದು, 175 ಪ್ರಮುಖ ಜಂಕ್ಷನ್‌ಗಳನ್ನು ಆಧುನಿಕವಾಗಿ ಅಭಿವೃದ್ಧಿಪಡಿಸುವ ಯೋಜನೆ ಕೂಡ ಬಜೆಟ್‌ನಲ್ಲಿ ಪ್ರಕಟವಾಗಿದೆ.

ಬೆಂಗಳೂರಿಗೆ ಇನ್ನೂ ಏನೇನು ಕೊಡುಗೆ?

ಬೆಂಗಳೂರು ಹೊರವಲಯದ ವಸತಿ ಪ್ರದೇಶಗಳಲ್ಲಿ ಸೆರೆಹಿಡಿದ ಚಿರತೆಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪನೆ ಘೋಷಿಸಲಾಗಿದೆ. ಬೆಂಗಳೂರಿನ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ಉದ್ಯಾನ ನಿರ್ಮಾಣ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ಅನುದಾನ: ಗೃಹಿಣಿಯರಿಗೆ ಬಜೆಟ್​ನಲ್ಲಿ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ

ಒಟ್ಟಾರೆ, ಈ ಬಜೆಟ್‌ನಲ್ಲಿ ಘೋಷಿಸಲಾದ ವಿವಿಧ ಯೋಜನೆಗಳು ಡಿ.ಕೆ. ಶಿವಕುಮಾರ್ ಅವರ ‘ಬ್ರ್ಯಾಂಡ್ ಬೆಂಗಳೂರು’ ಕನಸಿಗೆ ಮತ್ತಷ್ಟು ಬಲ ನೀಡುವಂತೆ ಕಂಡುಬಂದಿವೆ. ರಸ್ತೆ, ಸಂಚಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ನೀಡಿರುವ ಹೆಚ್ಚಿನ ಅನುದಾನದಿಂದ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ವೇಗ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್​ಡೇಟ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಭಾರತದಲ್ಲಿ ನೆಲೆಸುವ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕೆನಡಿಯನ್ ವ್ಯಕ್ತಿ

ವಿದೇಶಿಗರಿಗೆ ಭಾರತದ ಅಂದ್ರೆ (foreigner) ಅದೇನೋ ಸೆಳೆತ. ಹೀಗಾಗಿ ಆಚಾರ ವಿಚಾರ, ಉಡುಗೆ ತೊಡುಗೆಯನ್ನು ಇಷ್ಟ ಪಟ್ಟು ತಮ್ಮ ಕುಟುಂಬದೊಂದಿಗೆ ಇಲ್ಲೇ ಜೀವನ ಕಟ್ಟಿಕೊಳ್ಳೋದು ಇದೆ. ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ವಾಸಿಸುತ್ತಿರುವ ಕೆನಡಾದ ವ್ಯಕ್ತಿಯೊಬ್ಬರು ತಾನು ಮಾತ್ರ ಭಾರತದಲ್ಲಿ ನೆಲೆಸಲು ಯಾಕೆ ಆಯ್ಕೆ ಮಾಡಿಕೊಂಡೆ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಕ್ಯಾಲೆಬ್ ಫ್ರೀಸೆನ್ (@caleb_friesen) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ವಾಸಿಸುವ ಕ್ಯಾಲೆಬ್ ಫ್ರೈಸೆನ್ ಎಂಬ ವ್ಯಕ್ತಿಯೂ ಆಗಾಗ್ಗೆ ಕೇಳುವ ಪ್ರಶ್ನೆಗೆ ಉತ್ತರಿಸಿದ್ದಾರೆ. ನೀವು ಭಾರತದಲ್ಲಿ ವಾಸಿಸಲು ಏಕೆ ಆಯ್ಕೆ ಮಾಡುತ್ತೀರಿ? ನನಗೆ ಈ ಪ್ರಶ್ನೆ ತುಂಬಾ ಬರುತ್ತದೆ. ಆದರೆ ಈ ಪ್ರಶ್ನೆಯೂ ಅಪನಂಬಿಕೆಯ ಭಾವನೆಯನ್ನು ಹೊಂದಿರುತ್ತದೆ. ನೀವು ಭಾರತದಲ್ಲಿ ಏಕೆ ವಾಸಿಸುತ್ತಿದ್ದೀರಿ ಎಂಬುದು ಮಾತ್ರವಲ್ಲ? ಯಾರಾದರೂ ಸ್ವಯಂಪ್ರೇರಣೆಯಿಂದ ಭಾರತದಲ್ಲಿರಲು ಏಕೆ ಬಯಸುತ್ತಾರೆ ಎಂಬುದು ಕೂಡ ಅದೇ ಆಗಿದೆ?. ಈ ಪ್ರಶ್ನೆಯೂ ಕೆಲವು ಭಾರತೀಯರಲ್ಲಿ ವಿದೇಶಿ ಆಯ್ಕೆಗಳನ್ನು ಅಂತರ್ಗತವಾಗಿ ಉತ್ತಮವೆಂದು ನೋಡುವ ವಿಶಾಲ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಭಾರತೀಯ ಪೋಷಕರಲ್ಲಿ ಬಹುತೇಕರು ತಮ್ಮ ಮಕ್ಕಳು ವಿದೇಶದಲ್ಲಿ ನೆಲೆಸಬೇಕೆಂದು ಬಯಸುತ್ತಾರೆ. ಪೋಷಕರೊಂದಿಗಿನ ಸಂಭಾಷಣೆಗಳು ಹೆಚ್ಚಾಗಿ ಹೆಚ್ಚಿನ ಸಂಬಳ ಗಳಿಸುವುದು ಅಥವಾ ವಿದೇಶದಲ್ಲಿ ಮನೆ ಖರೀದಿಸುವತ್ತ ಕೇಂದ್ರೀಕರಿಸುತ್ತವೆ. ಇದೆಲ್ಲವೂ ಮೇಲ್ನೋಟದ ವಿಷಯ. ವಿದೇಶದಲ್ಲಿ ಯಶಸ್ಸು ಅಗತ್ಯವಾಗಿ ತೃಪ್ತಿ ಅಥವಾ ಸಂತೋಷಕ್ಕೆ ಕಾರಣವಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಹೆಚ್ಚು ಅಭಿವೃದ್ಧಿ ಹೊಂದಿದ ದೇಶದಲ್ಲಿ ವಾಸಿಸುವುದರಿಂದ ಸ್ವಯಂಚಾಲಿತವಾಗಿ ಉತ್ತಮ ಜೀವನ ಸಿಗುತ್ತದೆ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಹೆಚ್ಚು ಅಭಿವೃದ್ಧಿ ಹೊಂದಿದ ಸ್ಥಳದಲ್ಲಿ ವಾಸಿಸುವುದರಿಂದ ನೀವು ಸಂತೋಷವಾಗಿರುತ್ತೀರಿ ಎಂಬ ಅಭಿಪ್ರಾಯವು ಇದೆ. ಆದರೆ ಆ ಸ್ಥಳಗಳಲ್ಲಿಯೂ ಸಮಸ್ಯೆಗಳಿವೆ. ನ್ಯೂಯಾರ್ಕ್, ಲಂಡನ್, ಸಿಂಗಾಪುರ ಈ ಎಲ್ಲಾ ದೇಶಗಳಲ್ಲಿ ವಿಭಿನ್ನ ರೀತಿಯ ಸಮಸ್ಯೆಗಳಿವೆ. ನಾನು ಇರುವ ಸ್ಥಳ ಭಾರತ. ನಾನು ಎಲ್ಲೇ ಇದ್ದರೂ, ನಾನು ಆಶಾವಾದಿಯಾಗಿರಲು ಮತ್ತು ನನಗಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಿಮ್ಮ ಮಾತು ಸತ್ಯ, ಸಂಬಳ ಆಸ್ತಿ ಗಳಿಕೆಗಿಂತ ಸಂತೋಷ ಮುಖ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ಹೆಚ್ಚಿನ ಪೋಷಕರಿಗೆ ಮಕ್ಕಳನ್ನು ಒಳ್ಳೆಯ ಉದ್ಯೋಗ ಸಿಗುವ ಸಂಬಳದಲ್ಲಿ ನೋಡುವುದರಲ್ಲಿ ಖುಷಿ. ಹೀಗಾಗಿ ವಿದೇಶಕ್ಕೆ ಓದಲು ಹಾಗೂ ಉದ್ಯೋಗಕ್ಕೆ ಕಳುಹಿಸಿಕೊಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಹೇಳಿದ್ದು ತುಂಬಾ ಸರಿ… ಇದೆಲ್ಲ ಮನಸ್ಥಿತಿಗೆ ಸಂಬಂಧ ಪಟ್ಟದ್ದು. ನಿಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಸುಧಾರಿಸಬಹುದಾದ ಯಾವುದೇ ದೇಶವನ್ನು ನೀವು ಇಡೀ ಜಗತ್ತಿನಲ್ಲಿ ಕಾಣಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ ಪ್ರತಿಯೊಂದು ದೇಶದಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಇದು ಭಾರತಕ್ಕೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮದ್ಯ ಪ್ರಿಯರಿಗೆ ಬಿಗ್​​ ಶಾಕ್​​ ನೀಡಿದ ಸಿದ್ದರಾಮಯ್ಯ: ಬಜೆಟ್​​​ನಲ್ಲಿ ಮಹತ್ವದ ನಿರ್ಧಾರ – Kannada News | Karnataka Budget: Siddaramaiah Revamps Liquor Tax for Rs45,000 Cr Revenue Goal

ಬೆಂಗಳೂರು, ಮಾ. 6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾ.6) ತಮ್ಮ 17ನೇ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಲು ಹೊಸ ತಂತ್ರ ರೂಪಿಸಿದ್ದಾರೆ. ಮದ್ಯದ ಮೇಲೆ ವಿಧಿಸುವ ತೆರಿಗೆಯ ಸ್ವರೂಪವನ್ನು ಬದಲಾಯಿಸುವ ಮೂಲಕ ರಾಜ್ಯದ ರಾಜಸ್ವ (Revenue) ಸಂಗ್ರಹವನ್ನು ಗಣನೀಯವಾಗಿ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಅಥವಾ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ವಿಧಿಸಲು ಸರ್ಕಾರ ತೀರ್ಮಾನಿಸಿದೆ.

ರಾಜ್ಯಾದ್ಯಂತ ಏಕರೂಪದ ಅಬಕಾರಿ ಸುಂಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಎಕ್ಸ್-ಫ್ಯಾಕ್ಟರಿ (Ex-factory) ದರಪಟ್ಟಿಯ ಆಧಾರದ ಮೇಲೆ ತೆರಿಗೆಯನ್ನು ಲೆಕ್ಕ ಹಾಕಲಾಗುತ್ತದೆ. ಮದ್ಯದ ಬೆಲೆಯನ್ನು ಒಂದೇ ಬಾರಿಗೆ ಏರಿಸುವ ಬದಲು ಹಂತಹಂತವಾಗಿ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಮಾಡಿ ಸಿಎಂ ಘೋಷಣೆ

ಕಳೆದ ವರ್ಷ ಫೆಬ್ರವರಿ ಅಂತ್ಯದವರೆಗೆ ಅಬಕಾರಿ ಇಲಾಖೆಯಿಂದ 36,492 ಕೋಟಿ ರೂ. ರಾಜಸ್ವ ಸಂಗ್ರಹವಾಗಿತ್ತು (12.7% ಬೆಳವಣಿಗೆ). ಆದರೆ, 2026-27ನೇ ಸಾಲಿಗೆ ಬರೋಬ್ಬರಿ 45,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Budget 2026: ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್​​​​​ ನ್ಯೂಸ್: ಸಿದ್ದರಾಮಯ್ಯ ಬಜೆಟ್​​​ನಲ್ಲಿ ಭರಪೂರ ಕೊಡುಗೆ – Kannada News | Karnataka Budget 2026 27: CM Siddaramaiah Announces 56,432 Job Hirings, 5 Year Age Relaxation

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ (Siddaramaiah) 2026-27ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಅನ್ನು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದು, ರಾಜ್ಯದ ಅಭಿವೃದ್ಧಿಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಉದ್ಯೋಗ ನೇಮಕಾತಿಯಲ್ಲಿ ನ್ಯಾಯಾಲಯದ ಪ್ರಕರಣಗಳಿಂದ ಉಂಟಾಗಿದ್ದ ವಿಳಂಬವನ್ನು ಗಮನಿಸಿ, ಅಭ್ಯರ್ಥಿಗಳಿಗೆ ಒಂದು ಬಾರಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಕರ್ನಾಟಕದ ಆರ್ಥಿಕ ಪ್ರಗತಿಗಾಗಿ ಕಾರ್ಮಿಕ ಕಲ್ಯಾಣ, ಪ್ರಾದೇಶಿಕ ಸಮಾನತೆ, ವ್ಯಾಪಾರ ಮತ್ತು ಕೈಗಾರಿಕೆ ವೃದ್ಧಿ, ಪ್ರವಾಸೋದ್ಯಮ, ಹಸಿರು ಆರ್ಥಿಕತೆ, ಹಾಗೂ ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆ ಸೇರಿದಂತೆ ಹಲವು ಆರ್ಥಿಕ ಪ್ರಮೇಯಗಳನ್ನು ಸರ್ಕಾರ ಅನುಸರಿಸುತ್ತಿದೆ. ರಾಜ್ಯದ 45ಕ್ಕೂ ಹೆಚ್ಚು ಉತ್ಪನ್ನಗಳಿಗೆ ಭೌಗೋಳಿಕ ಸೂಚಕ (GI) ಮಾನ್ಯತೆ ದೊರೆತಿದ್ದು, ಇದು ಹೊಸ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಕಳೆದ ವರ್ಷ 8,600 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 2026-27ರಲ್ಲಿ 4,000 ಕೋಟಿ ರೂ. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಬಳಿಕ ರಶ್ಮಿಕಾಗೆ ಕನ್ನಡ ಹಾಡಿನ ಮೇಲೆ ಪ್ರೀತಿ – Kannada News | Rashmika Mandanna used Elamma Tulasi song for her wedding reception video

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26ರಂದು ಬಲು ಅದ್ಧೂರಿಯಾಗಿ ರಾಜಸ್ಥಾನದಲ್ಲಿ ನೆರವೇರಿದೆ. ಅವರ ಮದುವೆಯ ಚಿತ್ರಗಳೂ ಈಗಲೂ ವೈರಲ್ ಪಟ್ಟಿಯಲ್ಲಿ ಟಾಪ್​​ನಲ್ಲಿವೆ. ಮದುವೆಗೆ ರಶ್ಮಿಕಾ ಮತ್ತು ವಿಜಯ್ ಅವರು ಧರಿಸಿದ್ದ ಉಡುಪು, ಆಭರಣಗಳು ಸಖತ್ ಟ್ರೆಂಡ್ ಆಗುತ್ತಿವೆ. ಅದಾದ ಬಳಿಕ ಮಾರ್ಚ್ 04ರಂದು ಈ ಇಬ್ಬರೂ ಅದ್ಧೂರಿಯಾಗಿ ಆರತಕ್ಷತೆ ಸಹ ಮಾಡಿಕೊಂಡರು. ಆದರೆ ಈ ವೇಳೆ ರಶ್ಮಿಕಾರ ಉಡುಪಿನ ಆಯ್ಕೆ ಸಖತ್ ಗಮನ ಸೆಳೆಯಿತು.

ರಶ್ಮಿಕಾ, ತೆಲಂಗಾಣಕ್ಕೆ ಸೊಸೆಯಾಗಿ ಹೋಗಿದ್ದು, ಆದರೆ ಮದುವೆ ಸಂದರ್ಭದಲ್ಲಿ ತಮ್ಮ ಕನ್ನಡತನವನ್ನು ಬಿಟ್ಟುಕೊಡಲಿಲ್ಲ. ಆರತಕ್ಷತೆಗೆ ರಶ್ಮಿಕಾ, ಮೈಸೂರು ರೇಷ್ಮೆ ಧರಿಸಿದ್ದರು, ಮಾತ್ರವಲ್ಲದೆ ಕರ್ನಾಟಕದ ಲಾಂಛನವಾದ ಗಂಡಭೇರುಂಡ ಎಂಬ್ರಾಯ್ಡಿರಿ ಆ ಸೀರೆಯ ಮೇಲಿತ್ತು. ಮಾತ್ರವಲ್ಲದೆ ರಶ್ಮಿಕಾ ಧರಿಸಿದ್ದ ರವಿಕೆಯ ಹಿಂಬಧಿಯಲ್ಲಿ ಕೊಡವರ ಕತ್ತಿ, ಬಂದೂಕಿನ ಲಾಂಛನವೂ ಇತ್ತು. ಇದೀಗ ಆರತಕ್ಷತೆಯ ಬಳಿಕ ವಿಡಿಯೋ ಒಂದಕ್ಕೆ ರಶ್ಮಿಕಾ ಹಂಚಿಕೊಂಡಿದ್ದು, ವಿಡಿಯೋದ ಹಿನ್ನೆಲೆಯಲ್ಲಿ ಕನ್ನಡದ ಹಾಡನ್ನೇ ಬಳಕೆ ಮಾಡಿದ್ದಾರೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ಮದುವೆ ಆರತಕ್ಷತೆಯ ಕ್ಯೂಟ್ ವಿಡಿಯೋ ಅನ್ನು ರಶ್ಮಿಕಾ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಿಡಿಯೋದ ಹಿನ್ನೆಲೆ ಹಾಡಾಗಿ ಕನ್ನಡದ ‘ಏಳಮ್ಮ ತುಳಸಿ’ ಹಾಡನ್ನು ಬಳಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಈ ಹಾಡು ಸಖತ್ ವೈರಲ್ ಆಗಿದೆ. ಯುವ ಸಂಗೀತ ನಿರ್ದೇಶಕ ಸುಮೇಧ್ ಸಂಗೀತ ನಿರ್ದೇಶಿಸಿರುವ ‘ಏಳಮ್ಮ ತುಳಸಿ’ ಹಾಡು ಯೂಟ್ಯೂಬ್​​ನಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದು, ಅದೇ ಹಾಡನ್ನು ಇದೀಗ ರಶ್ಮಿಕಾ ತಮ್ಮ ಮದುವೆ ಆರತಕ್ಷತೆಯ ವಿಡಿಯೋಕ್ಕೆ ಹಿನ್ನೆಲೆಯಾಗಿ ಬಳಸಿಕೊಂಡಿದ್ದಾರೆ. ರಶ್ಮಿಕಾರನ್ನು ಕಳೆದ ಕೆಲ ವರ್ಷಗಳಿಂದ ಕನ್ನಡ ವಿರೋಧಿ ಎಂಬಂತೆ ಚಿತ್ರಿಸಲಾಗಿತ್ತು, ಆದರೆ ಮದುವೆಯಂಥಹಾ ಮಹತ್ವದ ಸನ್ನಿವೇಶದಲ್ಲಿ ರಶ್ಮಿಕಾ ತಮ್ಮ ಕನ್ನಡತನವನ್ನು ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಸಮುದಾಯದ ಪ್ರತಿನಿಧಿತ್ವವನ್ನು ಸಹ ಪ್ರದರ್ಶಿಸಿದ್ದಾರೆ.

ರಶ್ಮಿಕಾ ಬಳಸಿರುವ ‘ಏಳಮ್ಮ ತುಳಸಿ’ ಹಾಡು ಪುರಂದರ ದಾಸರ ರಚನೆಯಾಗಿದೆ. ಹಾಡಿಗೆ ಅದ್ಭುತವಾಗಿ ರಾಗ ಸಂಯೋಜನೆ ಮಾಡಿದ್ದಾರೆ ಸಂಗೀತ ನಿರ್ದೇಶಕ ಕೆ ಸುಮೇಧ್. ಅದ್ಭುತ ಹಾಡಿಗೆ ಅಷ್ಟೇ ಅದ್ಭುತವಾದ ದೃಶ್ಯಗಳನ್ನು ಸಹ ಸಂಯೋಜಿಸಲಾಗಿದೆ. ಒಂದು ತಿಂಗಳಲ್ಲಿ ಈ ಹಾಡು 70 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಸಿನಿಮಾದ ಹಾಡು ರಾಜ್ಯದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲಿಯೂ ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುಕ್ಕೆ ಹಾಗೂ ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಗುಡ್​​​ ನ್ಯೂಸ್ ನೀಡಿದ ಸಿದ್ದರಾಮಯ್ಯ – Kannada News | Karnataka Budget Boost: Kukke and Kollur Temples Get Development Authorities

ಬೆಂಗಳೂರು: ಇಂದು (ಮಾ.6) 17ನೇ ಬಜೆಟ್​​​ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರಾವಳಿಗೆ ಹೆಚ್ಚು ಮಹತ್ವದ ನೀಡಿದ್ದಾರೆ. ಬಜೆಟ್​​​ ಆರಂಭದಲ್ಲಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯದ ಅತಿ ಹೆಚ್ಚು ಆದಾಯ ತರುವ ಹಾಗೂ ಲಕ್ಷಾಂತರ ಭಕ್ತರು ಭೇಟಿ ನೀಡುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳ ಮೂಲಸೌಕರ್ಯ ವೃದ್ಧಿಗೆ ಸರ್ಕಾರ ಮುಂದಾಗಿದೆ. ಬಜೆಟ್‌ನಲ್ಲಿ ಘೋಷಿಸಲಾದ ಈ ಪ್ರಾಧಿಕಾರಗಳು ದೇವಾಲಯಗಳ ಆಡಳಿತ ಮತ್ತು ಭಕ್ತರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಿವೆ.

ಪ್ರಾಧಿಕಾರ ರಚನೆಯ ಪ್ರಮುಖ ಉದ್ದೇಶಗಳು:

ಸಮಗ್ರ ಅಭಿವೃದ್ಧಿ: ದೇವಾಲಯದ ಸುತ್ತಮುತ್ತಲಿನ ರಸ್ತೆಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು.

ಭಕ್ತರ ಸೌಲಭ್ಯ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳು, ಸರತಿ ಸಾಲಿನ ವ್ಯವಸ್ಥೆ ಮತ್ತು ದಾಸೋಹ ಭವನಗಳ ಆಧುನೀಕರಣ.

ಪರಿಸರ ಸಂರಕ್ಷಣೆ: ಕುಕ್ಕೆ ಸುಬ್ರಹ್ಮಣ್ಯವು ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿದೆ. ಪ್ರಾಧಿಕಾರ ರಚನೆಯಿಂದ ಇಲ್ಲಿನ ಪರಿಸರ ಸಮತೋಲನ ಕಾಪಾಡುತ್ತಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.

ಆಡಳಿತಾತ್ಮಕ ಪಾರದರ್ಶಕತೆ: ದೇವಾಲಯದ ಆದಾಯವನ್ನು ಸಮರ್ಪಕವಾಗಿ ಆಯಾ ಕ್ಷೇತ್ರಗಳ ಅಭಿವೃದ್ಧಿಗೇ ಬಳಸಲು ಈ ಸ್ವಾಯತ್ತ ಪ್ರಾಧಿಕಾರಗಳು ನೆರವಾಗಲಿವೆ.

ಇದನ್ನೂ ಓದಿ: Karnataka Budget 2026 LIVE: 18 ವರ್ಷದವರೆಗಿನ ಮಧುಮೇಹ ರೋಗಿಗಳಿಗೆ ಉಚಿತ ಇನ್ಸುಲಿನ್ ಪೆನ್: ಸಿದ್ದರಾಮಯ್ಯ

ಈ ಘೋಷಣೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಧಾರ್ಮಿಕ ಪ್ರವಾಸೋದ್ಯಮಕ್ಕೆ ದೊಡ್ಡ ಬಲ ನೀಡಲಿದೆ. ಹಂಪಿ ಅಥವಾ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರಗಳ ಮಾದರಿಯಲ್ಲಿಯೇ ಇವು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಬಜೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ಅನುದಾನ: ಗೃಹಿಣಿಯರಿಗೆ ಬಜೆಟ್​ನಲ್ಲಿ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ – Kannada News | Karnataka Budget 2026: CM Siddaramaiah Allocates Rs 28608 Crore for Gruha Lakshmi Scheme, Big Relief for Women

ಬಜೆಟ್​ನಲ್ಲಿ ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ (Siddaramaiah) 2026-27ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ದಾಖಲೆಯ 17ನೇ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ರಾಜ್ಯದ ಅಭಿವೃದ್ಧಿ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಬಜೆಟ್‌ನಲ್ಲಿ ವಿಶೇಷವಾಗಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು. ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಬೆಂಗಳೂರಿನಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ

ಆರೋಗ್ಯ ಕ್ಷೇತ್ರದಲ್ಲೂ ಹಲವು ಘೋಷಣೆಗಳನ್ನು ಮಾಡಲಾಗಿದೆ. ಬೆಂಗಳೂರಿನಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಇದೇ ವೇಳೆ ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್, ಕೊಪ್ಪಳ, ಚಿತ್ರದುರ್ಗ, ಮಂಡ್ಯ, ಭದ್ರಾವತಿ ಮತ್ತು ಕೆಜಿಎಫ್ ಪ್ರದೇಶಗಳಲ್ಲಿನ ESI ಆಸ್ಪತ್ರೆಗಳನ್ನು ಉನ್ನತೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ವಿಜಯಪುರದಲ್ಲಿ 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ ನಿರ್ಮಾಣ ಘಟಕ ಸ್ಥಾಪಿಸುವ ಯೋಜನೆಯನ್ನೂ ಘೋಷಿಸಲಾಗಿದೆ.

ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಸಿಎಂ, ಕರ್ನಾಟಕ ಆರ್ಥಿಕ ಅಭಿವೃದ್ಧಿಯಲ್ಲಿ ದೇಶದ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಜೊತೆಗೆ ಒಕ್ಕೂಟ ಸರ್ಕಾರವು ರಾಜ್ಯಗಳತ್ತ ಇನ್ನಷ್ಟು ಸಂವೇದನಾಶೀಲವಾಗಿ ವರ್ತಿಸಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: 10.15ಕ್ಕೇ ಸಿದ್ದರಾಮಯ್ಯ ಬಜೆಟ್ ಮಂಡನೆ ಏಕೆ? ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೊಟ್ಟರು ಅಚ್ಚರಿಯ ಕಾರಣ! ನಿಜವಿರಬಹುದೇ?

ಒಟ್ಟಾರೆ, 2026-27ರ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳು, ಆರೋಗ್ಯ, ಮೂಲಸೌಕರ್ಯ ಹಾಗೂ ಕೃಷಿ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿರುವುದು ಗಮನಾರ್ಹವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೈಲೆಂಟ್ ಮಾಡಲು ಬಂದು, ಸೈಲೆಂಟ್ ಆಗಿ ‘ಸೋಲಿಸಿದ’ ಸ್ಯಾಮ್ ಕರನ್..! – Kannada News | Sam Curran came to silence the crowd, but left in silence

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ಆಲ್​ರೌಂಡರ್, ಸ್ಯಾಮ್ ಕರನ್ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುತ್ತೇವೆ ಎಂದು ಸವಾಲು ಹಾಕಿದ್ದರು. ಈ ಸವಾಲಿನ ಮುಕ್ತಾಯದಲ್ಲಿ ಸೈಲೆಂಟ್ ಆಗಿದ್ದ ಸ್ಯಾಮ್ ಕರನ್. ಅದು ಸಹ ಸೈಲೆಂಟ್ ಆಗಿ ತನ್ನದೇ ತಂಡವನ್ನು ಸೋಲಿಸುವ ಮೂಲಕ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಬರೋಬ್ಬರಿ 253 ರನ್​ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು ಟಾಮ್ ಬ್ಯಾಂಟನ್, ವಿಲ್ ಜ್ಯಾಕ್ಸ್​ ಕೂಡ ಅಲ್ಪ ಮೊತ್ತದ ಕಾಣಿಕೆ ನೀಡಿದ್ದರು.

ಈ ಮೂಲಕ ಇಂಗ್ಲೆಂಡ್ ತಂಡವು 14 ಓವರ್​ಗಳ ಮುಕ್ತಾಯದ ವೇಳೆ ಬರೋಬ್ಬರಿ 172 ರನ್ ಕಲೆಹಾಕಿದ್ದರು. ಆದರೆ ಈ ರನ್ ಗತಿ ಕುಂಠಿತವಾಗಿದ್ದೇ ಸ್ಯಾಮ್ ಕರನ್ ಎಂಟ್ರಿಯೊಂದಿಗೆ. ನಿರ್ಣಾಯಕವಾಗಿದ್ದ ಕೊನೆಯ 6 ಓವರ್​ಗಳ ವೇಳೆ ಬ್ಯಾಟಿಂಗ್​ಗೆ ಆಗಮಿಸಿದ ಸ್ಯಾಮ್ ಕರನ್ 14 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 18 ರನ್​ಗಳು ಮಾತ್ರ.

ಅಂದರೆ ನಿರ್ಣಾಯಕ ಹಂತದಲ್ಲಿ ಸ್ಯಾಮ್ ಕರನ್ ಕೇವಲ 128ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದರು. ಅಂದರೆ ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿಯ ಓವರ್​ಗಳಲ್ಲಿ ಹೆಚ್ಚಿನ ಬಾಲ್ ಎದುರಿಸಿದ್ದ ಕರನ್ ಸಿಂಗಲ್ ಹಾಗೂ ಡಬಲ್​ ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ನಿಧಾನಗತಿಯ ಬ್ಯಾಟಿಂಗ್ ಇಂಗ್ಲೆಂಡ್​ನ ಚೇಸಿಂಗ್ ಮೇಲೆ ಪರಿಣಾಮ ಬೀರಿತು ಎಂದರೆ ತಪ್ಪಾಗಲಾರದು.

ಇದಕ್ಕೂ ಮುನ್ನ ಬೌಲಿಂಗ್​ನಲ್ಲಿ 4 ಓವರ್​ಗಳಲ್ಲಿ ಬರೋಬ್ಬರಿ 53 ರನ್ ಚಚ್ಚಿಸಿಕೊಂಡಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಅಂದರೆ ಬೌಲಿಂಗ್​ನಲ್ಲಿ 13.20ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟ ಸ್ಯಾಮ್ ಕರನ್ ಬ್ಯಾಟಿಂಗ್​ನಲ್ಲಿ ಕಲೆಹಾಕಿದ್ದು ಕೇವಲ 18 ರನ್​ಗಳು ಮಾತ್ರ.

ಇದನ್ನೂ ಓದಿ: ಯಾರಿಂದಲೂ ಸಹ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಜೇಕಬ್ ಬೆಥೆಲ್

ಸ್ಯಾಮ್ ಕರನ್​ನ ಈ ಕಳಪೆ ಪ್ರದರ್ಶನವು ಇಂಗ್ಲೆಂಡ್ ತಂಡದ ಸೋಲಿಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ. ಅಂದರೆ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡಲು ಬಂದು, ಸ್ಯಾಮ್ ಕರನ್ ಸೈಲೆಂಟ್ ಆಗಿಯೇ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದ್ದರು ಎಂಬುದಕ್ಕೆ ಈ ಪ್ರದರ್ಶನದ ಅಂಕಿ ಅಂಶಗಳೇ ಸಾಕ್ಷಿ.

Source link