All posts by nagaraj11081993

ಹಾಸ್ಯ ಪಾತ್ರ ಮಾಡಿಕೊಂಡಿದ್ದವನಿಗೆ ಗಂಭೀರ ಕ್ಯಾರೆಕ್ಟರ್ ಕೊಟ್ಟಿದ್ದಾರೆ; ಕಿರುತೆರೆಯಲ್ಲಿ ಎಸ್​ ನಾರಾಯಣ್ – Kannada News | S Narayan Acting in Krishna Rukku Serial he is doing serial Character

ಎಸ್​ ನಾರಾಯಣ್ ಅವರಿಗೆ ಕಿರುತೆರೆ ಹೊಸದಲ್ಲ. ಅವರು ಈ ಮೊದಲು ಧಾರಾವಾಹಿಗಳಲ್ಲಿ ನಟಿಸಿದ್ದರು. ಈಗ ಅವರು ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಸೂರ್ಯ ಪ್ರಕಾಶ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದ ನಾರಾಯಣ್ ಅವರು, ಈ ಬಾರಿ ಗಂಭೀರ ಪಾತ್ರ ಮಾಡುತ್ತಿದ್ದಾರೆ. ಪಾತ್ರದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VIDEO: ಅದು ಔಟ್ ಅಲ್ಲಮ್ಮ… ಹೆಂಡ್ತಿ ಕುಣಿಯುವುದನ್ನು ತಡೆದ ಧೋನಿ – Kannada News | IND vs ENG: MS Dhoni’s Reaction To Wife Sakshi’s Celebration

ಮಾರ್ಚ್ 5, 2026 ರಂದು ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ, ಸಾಕ್ಷಿ ಧೋನಿ ಅವರ ಸಂಭ್ರಮಕ್ಕೆ ಎಂ.ಎಸ್. ಧೋನಿ ನೀಡಿದ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್​ 18ನೇ ಓವರ್‌ನಲ್ಲಿ ಜಸ್​ಪ್ರೀತ್ ಬುಮ್ರಾ ಎಸೆದ ಚೆಂಡನ್ನು ಇಂಗ್ಲೆಂಡ್ ಬ್ಯಾಟರ್ ಸ್ಯಾಮ್ ಕರನ್ ನೇರವಾಗಿ ಬಾರಿಸಿದರು.

ಬುಮ್ರಾ ಅದನ್ನು ಅದ್ಭುತವಾಗಿ ಹಿಡಿದರು. ಇದನ್ನು ನೋಡಿ ಗ್ಯಾಲರಿಯಲ್ಲಿದ್ದ ಸಾಕ್ಷಿ ಅವರು ‘ಕ್ಲೀನ್ ಕ್ಯಾಚ್’ ಎಂದು ಭಾವಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಆದರೆ, ಆ ಚೆಂಡು ಬುಮ್ರಾ ಕೈ ಸೇರುವ ಮೊದಲು ನೆಲಕ್ಕೆ ತಗುಲಿತ್ತು.

ಇತ್ತ ಪತ್ನಿಯ ಈ ಅತಿಯಾದ ಸಂಭ್ರಮವನ್ನು ನೋಡಿದ ಧೋನಿ, ತಮ್ಮ ಎಂದಿನ ‘ಕ್ಯಾಪ್ಟನ್ ಕೂಲ್’ ಶೈಲಿಯಲ್ಲಿ ಅತ್ಯಂತ ಶಾಂತವಾಗಿ “ಅದು ಔಟ್ ಅಲ್ಲ, ಸುಮ್ಮನೆ ಕುಳಿತುಕೋ” ಎಂಬಂತೆ ಸನ್ನೆ ಮಾಡಿದರು. ಧೋನಿಯ ಈ ಮುಗುಳ್ನಗೆಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

 

Source link

National Dentists Day 2026: ಇಂದು ರಾಷ್ಟ್ರೀಯ ದಂತವೈದ್ಯರ ದಿನ; ನಗುವಿನ ಹಿಂದಿನ ನಿಜವಾದ ಶಿಲ್ಪಿಗಳು – Kannada News | National Dentists’ Day: Why Oral Health and Your Dentist’s Role Matter

ಒಂದು ಸುಂದರವಾದ ನಗು ಸಾವಿರ ಮಾತುಗಳನ್ನು ಹೇಳುತ್ತದೆ. ಆದರೆ ಆ ನಗುವಿನ ಹಿಂದೆ ಇರುವ ನಿಜವಾದ ಶಿಲ್ಪಿಗಳು ದಂತವೈದ್ಯರು. ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿ, ನೋವನ್ನು ನಿವಾರಿಸಿ, ಆತ್ಮವಿಶ್ವಾಸದ ನಗುವನ್ನು ನೀಡುವವರು ಇವರೇ. ಈ ಮಹತ್ವದ ಸೇವೆಯನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 6 ರಂದು ರಾಷ್ಟ್ರೀಯ ದಂತವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ದಂತವೈದ್ಯರ ಸೇವೆಯನ್ನು ಗುರುತಿಸುವುದರ ಜೊತೆಗೆ, ಬಾಯಿ ಮತ್ತು ಹಲ್ಲಿನ ಆರೋಗ್ಯದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೂ ಈ ದಿನದ ಪ್ರಮುಖ ಉದ್ದೇಶವಾಗಿದೆ.

ದಂತವೈದ್ಯರು ಪ್ರತಿದಿನ ಅನೇಕ ರೋಗಿಗಳ ನೋವನ್ನು ನಿವಾರಿಸುತ್ತಾರೆ. ಹಲ್ಲಿನ ನೋವು ಎಷ್ಟು ತೀವ್ರವಾಗಿರುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಅಂಥ ನೋವನ್ನು ಶಮನ ಮಾಡಿ, ರೋಗಿಗಳ ಮುಖದಲ್ಲಿ ಮತ್ತೆ ನಗು ಮೂಡಿಸುವುದು ದಂತವೈದ್ಯರ ದೊಡ್ಡ ಸೇವೆ. ಅವರ ಶ್ರಮ ಮತ್ತು ಸಮರ್ಪಣೆಯನ್ನು ಸಮಾಜ ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ದಂತವೈದ್ಯರ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನೆನಪಿಸುವ ಅವಕಾಶ ಸಿಗುತ್ತದೆ.

ಈ ದಿನವು ಬಾಯಿ ಮತ್ತು ಹಲ್ಲಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದಕ್ಕೂ ಸಹಾಯ ಮಾಡುತ್ತದೆ. ಭಾರತದಲ್ಲಿ ಹಲವರು ಹಲ್ಲಿನ ಆರೋಗ್ಯವನ್ನು ಕಡೆಗಣಿಸುತ್ತಾರೆ. ನೋವು ಬಂದಾಗ ಮಾತ್ರ ವೈದ್ಯರನ್ನು ಸಂಪರ್ಕಿಸುವುದು ಸಾಮಾನ್ಯ. ಆದರೆ ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ. ಸರಿಯಾದ ಆರೈಕೆ ಮತ್ತು ನಿಯಮಿತ ಪರೀಕ್ಷೆಗಳಿಂದ ಅನೇಕ ಸಮಸ್ಯೆಗಳನ್ನು ಆರಂಭದಲ್ಲೇ ತಡೆಗಟ್ಟಬಹುದು ಎಂಬುದನ್ನು ಜನರಿಗೆ ತಿಳಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ದಂತ ವಿಜ್ಞಾನವು ವರ್ಷಗಳಿಂದ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಹಿಂದಿನ ಕಾಲದಲ್ಲಿ ಹಲ್ಲಿನ ಸಮಸ್ಯೆಗಳಿಗೆ ಮುಖ್ಯವಾಗಿ ಹಲ್ಲು ತೆಗೆದುಹಾಕುವುದು ಮಾತ್ರ ಪರಿಹಾರವಾಗಿತ್ತು. ಆದರೆ ಇಂದಿನ ಕಾಲದಲ್ಲಿ ಇಂಪ್ಲಾಂಟ್, ಬ್ರೇಸಸ್ ಮತ್ತು ಕಾಸ್ಮೆಟಿಕ್ ಡೆಂಟಿಸ್ಟ್ರಿ ಮುಂತಾದ ಆಧುನಿಕ ಚಿಕಿತ್ಸೆಗಳ ಮೂಲಕ ಹಲ್ಲುಗಳನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು. ಈ ವಿಜ್ಞಾನ ಪ್ರಗತಿಯನ್ನು ಸ್ಮರಿಸುವುದಕ್ಕೂ ರಾಷ್ಟ್ರೀಯ ದಂತವೈದ್ಯರ ದಿನ ಒಂದು ಉತ್ತಮ ಸಂದರ್ಭವಾಗಿದೆ.

ಮಕ್ಕಳಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಕೂಡ ಬಹಳ ಮುಖ್ಯ. ಭಾರತದಲ್ಲಿ ಬಹಳಷ್ಟು ಮಕ್ಕಳು ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶಾಲಾ ಮಟ್ಟದಲ್ಲೇ ಹಲ್ಲಿನ ಆರೈಕೆ ಕುರಿತು ಶಿಕ್ಷಣ ನೀಡುವುದರಿಂದ ಮಕ್ಕಳಲ್ಲಿ ಉತ್ತಮ ಅಭ್ಯಾಸಗಳು ಬೆಳೆಸಬಹುದು. ಚಿಕ್ಕಂದಿನಿಂದಲೇ ಸರಿಯಾದ ಹಲ್ಲು ತಿಕ್ಕುವ ವಿಧಾನ ಮತ್ತು ಸ್ವಚ್ಛತೆಯ ಅಭ್ಯಾಸ ಕಲಿಸಿದರೆ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.

ದಂತವೈದ್ಯರು ಕೇವಲ ಹಲ್ಲುಗಳನ್ನು ಸರಿಪಡಿಸುವ ವೈದ್ಯರು ಮಾತ್ರವಲ್ಲ; ಅವರು ನಮ್ಮ ಒಟ್ಟಾರೆ ಆರೋಗ್ಯದ ರಕ್ಷಕರಾಗಿದ್ದಾರೆ. ಬಾಯಿಯ ಆರೋಗ್ಯವು ದೇಹದ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಬಾಯಿ ಸ್ವಚ್ಛವಾಗಿರದಿದ್ದರೆ ಹೃದಯ ರೋಗ, ಮಧುಮೇಹ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಹಲ್ಲಿನ ಆರೈಕೆ ಜೀವನದ ಪ್ರಮುಖ ಭಾಗವಾಗಿದೆ.

ಇದನ್ನೂ ಓದಿ: ಮಗು ಹುಟ್ಟುವ ಮುನ್ನವೇ ಶ್ರವಣ ಸಾಮರ್ಥ್ಯ ಪತ್ತೆಹಚ್ಚಲು ಏಮ್ಸ್‌ನ ಹೊಸ ಪ್ರಯತ್ನ!

ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸರಳ ನಿಯಮಗಳನ್ನು ಪಾಲಿಸುವುದು ಅಗತ್ಯ. ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕುವುದು, ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಬಳಕೆ, ನಿಯಮಿತವಾಗಿ ಬ್ರಷ್ ಬದಲಾಯಿಸುವುದು, ಊಟದ ನಂತರ ಬಾಯಿ ಚೆನ್ನಾಗಿ ಮುಕ್ಕಳಿಸುವುದು, ಸಿಹಿ ಮತ್ತು ಜಿಗುಟಾದ ಆಹಾರವನ್ನು ಕಡಿಮೆ ಸೇವಿಸುವುದು ಹಲ್ಲಿನ ಆರೋಗ್ಯಕ್ಕೆ ಸಹಾಯಕವಾಗುತ್ತದೆ. ತಂಬಾಕು, ಗುಟ್ಕಾ ಮತ್ತು ಧೂಮಪಾನದಿಂದ ದೂರವಿರುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ಕೂಡ ಬಹಳ ಮುಖ್ಯ. ಜೊತೆಗೆ ಆರು ತಿಂಗಳಿಗೆ ಒಮ್ಮೆ ದಂತವೈದ್ಯರನ್ನು ಭೇಟಿ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಒಟ್ಟಿನಲ್ಲಿ, ನಮ್ಮ ನಗುವನ್ನು ಕಾಪಾಡುವ ದಂತವೈದ್ಯರ ಸೇವೆ ಸಮಾಜಕ್ಕೆ ಅಮೂಲ್ಯವಾಗಿದೆ. ವರ್ಷಗಳ ಅಧ್ಯಯನ ಮತ್ತು ಅನುಭವದ ಮೂಲಕ ಅವರು ರೋಗಿಗಳ ನೋವನ್ನು ಕಡಿಮೆ ಮಾಡಿ ಆರೋಗ್ಯಕರ ಜೀವನ ನೀಡುತ್ತಾರೆ. ಆದ್ದರಿಂದ ರಾಷ್ಟ್ರೀಯ ದಂತವೈದ್ಯರ ದಿನದಂದು ಅವರ ಸೇವೆಯನ್ನು ಗೌರವಿಸಿ, ಹಲ್ಲಿನ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳೋಣ ಮತ್ತು ನಮ್ಮ ನಗುವನ್ನು ಸದಾ ಸುಂದರವಾಗಿ ಕಾಪಾಡಿಕೊಳ್ಳೋಣ.

ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ 08384225836.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ – Kannada News | The Keral Story 2 Movie Free Show For Girls In Mangalore

ಲವ್​ ಜಿಹಾದ್ ಕುರಿತಂತೆ ಬಂದಿರೋ ‘ದಿ ಕೇರಳ ಸ್ಟೋರಿ 2’ ಸಿನಿಮಾ ಚರ್ಚೆ ಹುಟ್ಟುಹಾಕಿದೆ. ಪುತ್ತೂರಿನ GL ONE ಮಾಲ್ ಅಲ್ಲಿ 16 ವರ್ಷದಿಂದ 22 ವರ್ಷದ ಕಾಲೇಜು ವಿದ್ಯಾರ್ಥಿನಿಯರಿಗೆ ಈ ಚಿತ್ರವನ್ನು ಉಚಿತ ಪ್ರದರ್ಶನ ಮಾಡಲಾಗಿದೆ. ಸೀತಾ ಪರಿವಾರ್ ಸಂಘಟನೆಯ ಕಡೆಯಿಂದ ಈ ಕೆಲಸ ಆಗಿದೆ. ಇದಕ್ಕೆ ಬಿಜೆಪಿ-ಹಿಂದು ಮುಖಂಡರು ಸಾಥ್ ಕೊಟ್ಟಿದ್ದಾರೆ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಿಜಾಬ್ ಧರಿಸಿ ಹೋಳಿಯಾಡಿದ ಯುವಕರಿಗೆ ಸಂಕಷ್ಟ! ಐವರ ವಿರುದ್ದ ದೂರು ದಾಖಲು – Kannada News | Kalaburagi Holi Hijab Row: 5 got notice for Hurting Religious Sentiments in Nimburga

ಹಿಜಾಬ್ ಧರಿಸಿ ಹೋಳಿಯಾಡಿದ ಯುವಕರಿಗೆ ಸಂಕಷ್ಟ! ಐವರ ವಿರುದ್ದ ದೂರು ದಾಖಲು

ಕಲಬುರಗಿ, ಮಾರ್ಚ್​ 06: ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ವೇಳೆ ಹಿಜಾಬ್ (ಬುರ್ಖಾ) ಧರಿಸಿ ಹೋಳಿ (Holi Wearing Hijab) ಆಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಯುವಕರನ್ನು ಬಂಧಿಸಿರುವ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬುರ್ಖಾ ಹಾಕಿ ಗರ್ಭಿಣಿಯಂತೆ ಪೋಸ್ ಕೊಟ್ಟ ಯುವಕ!

ಹೋಳಿ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿನ ಯುವಕರು ಒಟ್ಟಾಗಿ ಸೇರಿ ಬಣ್ಣದಾಟ ಆಡುತ್ತಾ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದರು. ಇದೇ ವೇಳೆ ಕೆಲವರು ತಮ್ಮ ಸ್ನೇಹಿತನಿಗೆ ಬುರ್ಖಾ ಮತ್ತು ಹಿಜಾಬ್ ಧರಿಸಿ ಬಣ್ಣದಾಟ ಆಡಲು ಹೇಳಿ, ವಿವಿಧ ರೀತಿಯಲ್ಲಿ ಡ್ಯಾನ್ಸ್ ಮಾಡಿಸಿ ಅದರ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಆ ಯುವಕ ಗರ್ಭಿಣಿಯಂತೆ ಫೋಟೋ ತೆಗೆದುಕೊಂಡಿರುವುದು ಕೂಡ ವೈರಲ್ ಆಗಿದೆ.

ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮುಸ್ಲಿಂ ಸಮುದಾಯದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಹಾಗೂ ಬುರ್ಖಾ ಧರಿಸಿ ಈ ರೀತಿಯಾಗಿ ವಿಡಿಯೋ ಮಾಡಿ ಹರಿಬಿಟ್ಟಿರುವುದು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ ಎಂದು ಆರೋಪಿಸಿ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆಯಲ್ಲಿ ಭಾಗಿಯಾಗಿದ್ದ ಐವರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಗ್ರಾಮದಲ್ಲಿ ಯಾವುದೇ ಉದ್ವಿಗ್ನತೆ ಉಂಟಾಗದಂತೆ ಎರಡು ಸಮುದಾಯದ ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸಲಾಗಿದೆ.

ಇದನ್ನೂ ಓದಿ ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

ಹೋಳಿ ಹಬ್ಬದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಣ್ಣದಾಟದ ನಂತರ ಅಣಕು ಶವಯಾತ್ರೆ ಮಾಡುವ ಪದ್ಧತಿಯೂ ಕೆಲ ಕಡೆಗಳಲ್ಲಿ ಇದ್ದು, ಅದರ ಭಾಗವಾಗಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಬುರ್ಖಾ ಧರಿಸಿ ಈ ರೀತಿಯ ವರ್ತನೆ ಯಾಕೆ ಮಾಡಿದ್ದಾರೆ ಎಂಬುದು ತನಿಖೆಯ ನಂತರವೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Suryakumar Yadav: ನಾವು ಇನ್ನೆಷ್ಟು ರನ್​ಗಳಿಸಬೇಕು ಅಂತ ಕೇಳಿದೆ..! – Kannada News | Suryakumar yadav post match presentation after IND vs ENG Match

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 246 ರನ್​ಗಳಿಸುವ ಮೂಲಕ 7 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡರು.

ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ. ಅತ್ತ ಏಳು ರನ್​ಗಳ ಜಯ ಸಾಧಿಸಿದ ಟೀಮ್ ಇಂಡಿಯಾ ಫೈನಲ್​ಗೇರಿದೆ. ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದೊಂದು ನಂಬಲಾಗದ ಅನುಭವ. ಭಾರತದಲ್ಲಿ ಆಡುವುದು, ಅದ್ಭುತ ತಂಡವನ್ನು ಮುನ್ನಡೆಸುವುದು, ಆ ತಂಡವನ್ನು ಫೈನಲ್​ಗೆ ಕೊಂಡೊಯ್ಯುವುದು ನಿಜಕ್ಕೂ ವಿಶೇಷ ಅನುಭವ. ನಮ್ಮ ತಂಡಕ್ಕೆ ಈ ಪಂದ್ಯ ಎಷ್ಟು ಮುಖ್ಯ ಎಂಬುದು ಚೆನ್ನಾಗಿ ಗೊತ್ತಿತ್ತು. ಅದರಲ್ಲೂ ಸಂಜು ಸ್ಯಾಮ್ಸನ್​ಗೆ ಬ್ಯಾಟಿಂಗ್​ಗೆ ತೆರಳಿದಾಗ ಏನು ಮಾಡಬೇಕೆಂದು ತಿಳಿದಿದ್ದರು.

ವಿಕೆಟ್ ಬಿದ್ದಾಗಲೂ, ಪಿಚ್​ ಬ್ಯಾಟಿಂಗ್​ ಉತ್ತಮವಾಗಿದೆ ಎಂದು ಅವರಿಗೆ ತಿಳಿದಿತ್ತು. ಹೀಗಾಗಿಯೇ ಅವರು ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. ಸಂಜು ಸ್ಯಾಮ್ಸನ್ ಪಾಲಿಗೆ ಇಂದು ವಿಶೇಷ ಇನಿಂಗ್ಸ್ ಆಗಿತ್ತು. ಈ ಇನಿಂಗ್ಸ್ ನೆರವಿನೊಂದಿಗೆ ನಾವು ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇಷ್ಟೊಂದು ದೊಡ್ಡ ಸ್ಕೋರ್​ಗಳಿಸದರೂ ಇಂಗ್ಲೆಂಡ್ ತಂಡದ ಚೇಸಿಂಗ್ ಪ್ರಯತ್ನ ಮೆಚ್ಚಲೇಬೇಕು. ನಾನು ಇದನ್ನೇ ಹ್ಯಾರಿ ಬ್ರೂಕ್​ಗೆ ಕೇಳಿದೆ, ನಿಮ್ಮ ವಿರುದ್ಧ ಗೆಲ್ಲಲು ನಾವು ಇನ್ನೂ ಎಷ್ಟು ಸ್ಕೋರ್ ಮಾಡಬೇಕು?” ಅಂತ. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತ. ಅಂತಹದೊಂದು ಚೇಸಿಂಗ್ ಕ್ರೆಡಿಟ್ ಅವರಿಗೆ ಸಲ್ಲಬೇಕು.

ಏಕೆಂದರೆ ಪಂದ್ಯದುದ್ದಕ್ಕೂ ಇಂಗ್ಲೆಂಡ್ ತಂಡ ಮ್ಯಾಚ್​ನಲ್ಲಿದ್ದರು. ಆದರೆ ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಮತ್ತು ಇತರ ಬೌಲರ್‌ಗಳು ಪಂದ್ಯದ ದಿಕ್ಕನ್ನು ಬದಲಿಸಿದ ರೀತಿ ನಂಬಲಾಗದದು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಅವರ ಸಾಮರ್ಥ್ಯ ಮತ್ತು ಅವರು ಕೆಲ ವರ್ಷಗಳಿಂದ ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇಂದು ಸಹ ಇಡೀ ಪಂದ್ಯದ ಚಿತ್ರಣ ಬದಲಿಸುವಲ್ಲಿ ಜಸ್​ಪ್ರೀತ್ ಬುಮ್ರಾ ಪ್ರಮುಖ ಪಾತ್ರವಹಿಸಿದರು.

ಇನ್ನು ನಮ್ಮ ಫೀಲ್ಡಿಂಗ್ ಕೋಚ್ ದಿಲೀಪ್ ಟಿ ಅವರಿಗೂ ನಾವು ಸ್ವಲ್ಪ ಕ್ರೆಡಿಟ್ ನೀಡಬೇಕು. ಅವರು ಅಭ್ಯಾಸ ಅವಧಿಗಳಲ್ಲಿ ಹುಡುಗರೊಂದಿಗೆ ಕೆಲಸ ಮಾಡುತ್ತಿರುವ ರೀತಿ ಆಟಗಾರರನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿಸುತ್ತದೆ. ಅದರ ಫಲವಾಗಿ ಟೀಮ್ ಇಂಡಿಯಾ ಫೀಲ್ಡರ್​ಗಳು ಅತ್ಯುತ್ತಮ ಕ್ಯಾಚ್​ಗಳನ್ನು ಹಿಡಿದಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

ಇದನ್ನೂ ಓದಿ: ಯಾರಿಂದಲೂ ಸಹ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಜೇಕಬ್ ಬೆಥೆಲ್

ಫೈನಲ್​ಗೂ ಮುನ್ನ  ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಇದೀಗ ಇದೇ ಉತ್ಸಾಹದಲ್ಲೇ ಫೈನಲ್​ಗೆ ಹೋಗುತ್ತಿದ್ದೇವೆ. ಭಾರತದಲ್ಲಿ ಆಡುವುದು ಮತ್ತು ಪ್ರಶಸ್ತಿಗಾಗಿ ಸೆಣಸುವುದು ಅದ್ಭುತ ಅನುಭವ. ಹೀಗಾಗಿ ನಾವೆಲ್ಲರೂ ಆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

Source link

Video: ಭಾರತದೊಂದಿಗಿನ ಸಂಬಂಧ ಹಾಳಾಗಲು ಬಿಡುವುದಿಲ್ಲ: ಅಬ್ದುಲ್ ಮಜೀದ್ ಹಕಿಮೆಲಾಹಿ – Kannada News | Centuries of Bond Iran Representative Backs Strong Ties With India

ಇರಾನ್, ಮಾರ್ಚ್​ 06: ಅಮೆರಿಕ ಇಸ್ರೇಲ್ ಇರಾನ್ ಮೇಲೆ ಕಳೆದ ಒಂದು ವಾರದಿಂದ ದಾಳಿ ನಡೆಸುತ್ತಿದೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ. ಇದರಿಂದ ಭಾರತಕ್ಕೆ ಸೇರಿದಂತೆ ಹಲವು ದೇಶಗಳಿಗೆ ತೈಲ ಪೂರೈಕೆಯಲ್ಲಿ ವ್ಯಕ್ತಿಯ ಉಂಟಾಗುವ ಸಾಧ್ಯತೆ ಇದೆ. ನಮ್ಮದು ಇಂದು ನಿನ್ನೆಯ ಸಂಬಂಧವಲ್ಲ,  ಭಾರತದೊಂದಿಗಿನ ಸಂಬಂಧ ಎಂದೂ ಹಾಳಾಗಲು ಬಿಡುವುದಿಲ್ಲ ಎಂದು ಇರಾನ್​ನ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕಿಮೆಲಾಹಿ ಹೇಳಿದ್ದಾರೆ.

ಈಗ 30 ದಿನಗಳ ಕಾಲ ರಷ್ಯಾದಿಂದ ಭಾರತ ತೈಲ ಖರೀದಿ ಮಾಡಬಹುದು ಎಂದು ಅಮೆರಿಕ ಹೇಳಿದೆ. ಒಂದು ಸಮಯದಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ ಎನ್ನುವ ಕಾರಣಕ್ಕೆ ಹೆಚ್ಚುವರಿ ಸುಂಕ ವಿಧಿಸಲಾಗಿತ್ತು. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗುತ್ತಿದ್ದಂತೆ ಮಧ್ಯಂತರ ಸರ್ವೋಚ್ಚ ನಾಯಕನನ್ನು ನೇಮಿಸಲಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೇಸರದಲ್ಲಿರೋ ಫೋಟೋ ಪೋಸ್ಟ್ ಮಾಡಿದ ರಕ್ಷಿತ್ ಶೆಟ್ಟಿ; ಅದೇ ಕಾರಣವಾ? – Kannada News | Amid Rashmika Mandanna Post Rakshit Shetty Posted ‘777 Charlie’ Sad Scene Now

ರಕ್ಷಿತ್ ಶೆಟ್ಟಿ (Rakshith Shetty) ಅವರು ಇತ್ತೀಚೆಗೆ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಈವೆಂಟ್​​​ಗಳಿಗೆ ಅವರ ಹಾಜರಿ ಇಲ್ಲ. ‘ರಿಚರ್ಡ್ ಆ್ಯಂಟನಿ’ ಸಿನಿಮಾ ಘೋಷಣೆ ಮಾಡಿ ಹಲವು ಸಮಯ ಕಳೆದರೂ ಆ ಚಿತ್ರದ ಬಗ್ಗೆ ಯಾವುದೇ ಅಪ್​​ಡೇಟ್ ಇಲ್ಲ. ಈ ಎಲ್ಲ ವಿಷಯದಲ್ಲಿ ಫ್ಯಾನ್ಸ್​ಗೆ ಬೇಸರ ಇದೆ. ಹೀಗಿರುವಾಗಲೇ ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಫೋಟೋನ ಪೋಸ್ಟ್ ಮಾಡಿದ್ದಾರೆ. ಈ ಫೋಟೋನ ರಕ್ಷಿತ್ ಹಂಚಿಕೊಂಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.

‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿದ್ದು 2022ರ ಜೂನ್ ಅಲ್ಲಿ. ಆ ಬಳಿಕ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಪಾರ್ಟ್ ಎ ಹಾಗೂ ಬಿಗಳು ರಿಲೀಸ್ ಆದವು. ಈಗ ರಕ್ಷಿತ್ ತೆರೆಮೇಲೆ ಕಾಣಿಸುತ್ತಿಲ್ಲ. ಅವರು ತಮ್ಮ ಹುಟ್ಟೂರಾದ ಉಡುಪಿಯಲ್ಲಿ ಸ್ಕ್ರಿಪ್ಟ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈಗ ಅವರು ಏಕಾಏಕಿ ‘777 ಚಾರ್ಲಿ’ ಸಿನಿಮಾದ ಸ್ಯಾಡ್ ದೃಶ್ಯದ ಫೋಟೋನ ಫೇಸ್​​​ಬುಕ್ ಕವರ್ ಪೇಜ್ ಆಗಿ ಪೋಸ್ಟ್ ಮಾಡಿರೋದು ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ರಕ್ಷಿತ್ ವಿಷಯದಲ್ಲಿ ರಶ್ಮಿಕಾ ವಿವಾಹ ಟ್ರೋಲ್​ ಮಾಡಿದವರಿಗೆ ಖಡಕ್ ತಿರುಗೇಟು ಕೊಟ್ಟ ಕನ್ನಡತಿ

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆ ಬಳಿಕ ನಿಶ್ಚಿತಾರ್ಥ ಮುರಿದು ಬಿತ್ತು.ಇದಕ್ಕೆ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಆ ಬಳಿಕ ವಿಜಯ್ ಜೊತೆ ರಶ್ಮಿಕಾ ಆಪ್ತತೆ ಬೆಳೆಸಿಕೊಂಡರು. ಈಗ ಅವರು ಮದುವೆ ಆಗಿದ್ದಾರೆ. ಅವರು ಕಲರ್​​ಫುಲ್ ಫೋಟೋಗಳನ್ನು ಹಾಕುತ್ತಾ ಮಿಂಚುತ್ತಿದ್ದಾರೆ. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಬೇಸರದಲ್ಲಿರೋ ಫೋಟೋನೇ ಪೋಸ್ಟ್ ಮಾಡಿದ್ದು ಅಚ್ಚರಿ ಮೂಡಿಸಿದೆ.

ಕಮೆಂಟ್ ಬಾಕ್ಸ್ ಅಲ್ಲಿ ಕೆಲವರು ರಕ್ಷಿತ್ ಶೆಟ್ಟಿಗೆ ಸ್ಫೂರ್ತಿ ತುಂಬಿದ್ದಾರೆ. ‘ಹಳೆಯದನ್ನು ಮರೆತು ಮುಂದೆ ಸಾಗಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ಕಂಬ್ಯಾಕ್ ಬೇರೆಯವರಿಗೆ ಸ್ಲಿಪ್ಪರ್ ಶಾಟ್ ಆಗಬೇಕು’ ಎಂದು ಬರೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇದ್ದಿದ್ದು ಕಡಿಮೆ. ಫೇಸ್​​​ಬುಕ್​​ ಅಲ್ಲಿ ಅವರ ಕೊನೆಯ ಪೋಸ್ಟ್ ಬಂದಿದ್ದು 2025ರ ಏಪ್ರಿಲ್​​ನಲ್ಲಿ. ಆ ಬಳಿಕ ಅವರು ಪೋಸ್ಟ್ ಮಾಡುತ್ತಿರುವ ಫೋಟೋ ಇದೇ ಆಗಿದೆ. ಫೋಟೋ ಪೋಸ್ಟ್​ ಮಾಡಿ ಬಹಳ ದಿನ ಕಳೆದಿದೆ ಎಂಬ ಕಾರಣಕ್ಕೂ ಅವರು ಈ ಫೋಟೋ ಹಂಚಿಕೊಂಡಿರಬಹುದು ಎಂದು ಊಹಿಸಲಾಗುತ್ತಿದೆ. ಇನ್ನೂ ಕೆಲವರು ರಕ್ಷಿತ್​​ಗೆ ‘ಚಾರ್ಲಿ’ ಸಿನಿಮಾ ನೆನಪಾಗಿರಬೇಕು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬಿಸಿಲ ಬೇಗೆಯಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಕಳಪೆ ಏರ್ ಕ್ವಾಲಿಟಿ ಆತಂಕ! – Kannada News | Bangalore Air Pollution Crisis: Bengaluru AQI gets worse including Udupi and Mangalore

ಬಿಸಿಲ ಬೇಗೆಯಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಕಳಪೆ ಏರ್ ಕ್ವಾಲಿಟಿ ಆತಂಕ!

ಬೆಂಗಳೂರು, ಮಾರ್ಚ್​ 06​: ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 170ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಕಲಬುರ್ಗಿಯ AQI 160 ಇದ್ದು, 200ರ ಗಡಿ ತಲುಪುವ ಆತಂಕ ಎದುರಾಗಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –170
  • ಮಂಗಳೂರು-174
  • ಮೈಸೂರು –164
  • ಬೆಳಗಾವಿ – 161
  • ಕಲಬುರ್ಗಿ-160
  • ಶಿವಮೊಗ್ಗ – 158
  • ಬಳ್ಳಾರಿ – 158
  • ಹುಬ್ಬಳ್ಳಿ- 163
  • ಉಡುಪಿ –162
  • ವಿಜಯಪುರ –150

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೇವನಹಳ್ಳಿ ಬಳಿ ಭೀಕರ ಅಪಘಾತ: ಅತಿವೇಗವಾಗಿ ಬಂದು ಪಲ್ಟಿಯಾದ ಕ್ಯಾಂಟರ್ ಲಾರಿ, ಬೆಚ್ಚಿಬೀಳಿಸುವ ವಿಡಿಯೋ ವೈರಲ್ – Kannada News | Canter Accident Caught on CCTV Near Devanahalli, Bengaluru: Truck Overturns on Highway, Vehicles Escape Narrowly

ದೇವನಹಳ್ಳಿ, ಮಾರ್ಚ್ 6: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಇರಿಗೇನಹಳ್ಳಿ ಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬಂದ ಕ್ಯಾಂಟರ್ ಹೆದ್ದಾರಿಯಲ್ಲಿ ಉರುಳಿಬಿದ್ದು ನಂತರವೂ ತುಸು ದೂರ ಜಾರಿಕೊಂಡು ಹೋಗಿದೆ. ಈ ಭಯಾನಕ ಘಟನೆಯ ವಿಡಿಯೋ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಯಾಂಟರ್ ಅಡ್ಡಾದಿಡ್ಡಿಯಾಗಿ ಹೆದ್ದಾರಿಯಲ್ಲಿ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಾಣಿಸುತ್ತದೆ. ಕೆಲವು ಕ್ಷಣಗಳಲ್ಲೇ ನಿಯಂತ್ರಣ ತಪ್ಪಿದ ಕ್ಯಾಂಟರ್ ರಸ್ತೆಯ ಮಧ್ಯೆ ಉರುಳಿಬಿದ್ದು ಭೀಕರ ಅಪಘಾತ ಸಂಭವಿಸಿದೆ. ಮದ್ಯಪಾನ ಮಾಡಿ ಚಾಲನೆ ಮಾಡಿರುವುದೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಅಪಘಾತದ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮೂರು ಬೈಕ್‌ಗಳು, ಒಂದು ಕಾರು ಹಾಗೂ ಒಂದು ಟಿಪ್ಪರ್ ಅಪಾಯದಿಂದ ಪಾರಾಗಿವೆ. ನಾಲ್ಕೈದು ವಾಹನಗಳ ಮಧ್ಯೆ ನುಗ್ಗಿಬಂದ ಕ್ಯಾಂಟರ್ ಕೊನೆಗೆ ಖಾಲಿ ರಸ್ತೆಯಲ್ಲಿ ಉರುಳಿಬಿದ್ದಿದೆ.

ಅಪಘಾತದ ರಭಸಕ್ಕೆ ರಸ್ತೆ ತುಂಬಾ ದಟ್ಟವಾದ ಧೂಳು ಆವರಿಸಿಕೊಂಡಿದ್ದು, ಕೆಲ ಕ್ಷಣಗಳ ಕಾಲ ಸುತ್ತಮುತ್ತ ಗಾಬರಿ ಮೂಡಿಸಿತು. ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣವೇ ಕ್ಯಾಂಟರ್ ಚಾಲಕನ ರಕ್ಷಣೆಗೆ ಧಾವಿಸಿದರು. ಅಪಘಾತ ಭೀಕರವಾಗಿದ್ದರೂ ಅದೃಷ್ಟವಶಾತ್ ಕ್ಯಾಂಟರ್ ಚಾಲಕ ಮತ್ತು ಕ್ಲೀನರ್ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link