All posts by nagaraj11081993

ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕದಿಂದ ಗ್ರೀನ್ ಸಿಗ್ನಲ್ – Kannada News | India’s Russia Oil Deal: US Greenlights Imports Amid Hormuz Crisis and Energy Woes

ಪುಟಿನ್, ಮೋದಿ, ಟ್ರಂಪ್ Image Credit source: The New Indian Express

ನವದೆಹಲಿ, ಮಾರ್ಚ್​ 06: ಅಮೆರಿಕ-ಇಸ್ರೇಲ್ ಜತೆಗಿನ ಸಂಘರ್ಷದಿಂದಾಗಿ, ಇರಾನ್(Iran) ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ, ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಇದು ಭಾರತದ ಇಂಧನ ಅಗತ್ಯಗಳಿಗೆ ಸಂಬಂಧಿಸಿದಂತೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಹೀಗಾಗಿ ಭಾರತಕ್ಕೆ ಸಹಾಯ ಮಾಡಲು ರಷ್ಯಾ ಮುಂದೆ ಬಂದಿದೆ. ತಮ್ಮ ರಾಷ್ಟ್ರದಿಂದ ತೈಲ ಆಮದು ಮಾಡಿಕೊಳ್ಳಿ ಎಂದು ಪುಟಿನ್ ಹೇಳಿದ್ದಾರೆ. ಇದಕ್ಕೆ ಅಮೆರಿಕ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ.

30 ದಿನಗಳ ಕಾಲ ರಷ್ಯಾದಿಂದ ಭಾರತ ತೈಲ ಖರೀದಿ ಮಾಡಬಹುದು ಎಂದು ಅಮೆರಿಕ ಹೇಳಿದೆ. ಒಂದು ಸಮಯದಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ ಎನ್ನುವ ಕಾರಣಕ್ಕೆ ಹೆಚ್ಚುವರಿ ಸುಂಕ ವಿಧಿಸಲಾಗಿತ್ತು.

ಭಾರತವು ತನ್ನ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಗಮನಾರ್ಹ ಭಾಗವನ್ನು ಅರಬ್ ದೇಶಗಳಿಂದ ಈ ಸಮುದ್ರ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ. ಈ ಮಾರ್ಗವು ದೀರ್ಘಕಾಲದವರೆಗೆ ಮುಚ್ಚಲ್ಪಟ್ಟರೆ, ದೇಶವು ಕಚ್ಚಾ ತೈಲ ಮತ್ತು ಅನಿಲದ ಕೊರತೆಯನ್ನು ಎದುರಿಸಬೇಕಾಗುತ್ತದೆ.
ರಷ್ಯಾದಿಂದ ತೈಲ ಖರೀದಿಸುವುದು ಸುಲಭವಲ್ಲ.

ರಷ್ಯಾದ ತೈಲ ಖರೀದಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇಕಡಾ 25 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದ್ದರು. ಇದರಿಂದಾಗಿ ಒಟ್ಟು ಸುಂಕವು ಶೇ. 50 ಕ್ಕೆ ಏರಿತ್ತು. ಭಾರತ-ಯುಎಸ್ ಮಧ್ಯಂತರ ಒಪ್ಪಂದದಲ್ಲಿ, ರಷ್ಯಾದಿಂದ ತೈಲ ಖರೀದಿಸದಿರುವ ಷರತ್ತಿನ ಮೇಲೆ ಮಾತ್ರ ಭಾರತಕ್ಕೆ ದಂಡದಿಂದ ವಿನಾಯಿತಿ ನೀಡಲಾಯಿತು.

ಬಿಕ್ಕಟ್ಟಿನ ಸಮಯದಲ್ಲಿ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸಲು ರಷ್ಯಾ ಸಿದ್ಧವಾಗಿದೆ ಎಂದು ಕೈಗಾರಿಕಾ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ . ಭಾರತ ಸರ್ಕಾರ ಅದನ್ನು ವಿನಂತಿಸಿದರೆ, ಭಾರತದ ನೀರಿನ ಬಳಿ ಹಡಗುಗಳಲ್ಲಿ ಸುಮಾರು 9.5 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವಿದ್ದು, ಅದು ಕೆಲವೇ ವಾರಗಳಲ್ಲಿ ತಲುಪಬಹುದು.

ಮತ್ತಷ್ಟು ಓದಿ: ನಿಮ್ಮ ಮೇಲೆ ದಾಳಿ ನಿಲ್ಲಬೇಕಾದರೆ ಅಮೆರಿಕನ್ನರನ್ನು ಹೊರಹಾಕಿ; ಗಲ್ಫ್ ದೇಶಗಳಿಗೆ ಇರಾನ್ ಎಚ್ಚರಿಕೆ

ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?

ಹಾರ್ಮುಜ್ ಜಲಸಂಧಿಯು ಇರಾನ್ ಮತ್ತು ಓಮನ್ ನಡುವಿನ ಸಮುದ್ರ ಮಾರ್ಗವಾಗಿದೆ. ಇದು ಪರ್ಷಿಯನ್ ಕೊಲ್ಲಿಯನ್ನು ಒಮನ್ ಕೊಲ್ಲಿಗೆ ಮತ್ತು ನಂತರ ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಭಾರತವು ತನ್ನ ಕಚ್ಚಾ ತೈಲದ ಅಗತ್ಯದ ಸರಿಸುಮಾರು 40 ಪ್ರತಿಶತವನ್ನು ಈ ಸಮುದ್ರ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ. ಸೌದಿ ಅರೇಬಿಯಾ, ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈತ್‌ನಂತಹ ಪಶ್ಚಿಮ ಏಷ್ಯಾದ ದೇಶಗಳು ಸಹ ಈ ಮಾರ್ಗದ ಮೂಲಕ ಭಾರತಕ್ಕೆ ಕಚ್ಚಾ ತೈಲವನ್ನು ಕಳುಹಿಸುತ್ತವೆ.

ಅಮೆರಿಕ ಮತ್ತು ಚೀನಾ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಖರೀದಿದಾರ ರಾಷ್ಟ್ರವಾಗಿದೆ. ದೇಶದ ಸಂಸ್ಕರಣಾಗಾರಗಳು ಪ್ರತಿದಿನ ಸುಮಾರು 5.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುತ್ತವೆ. ಭಾರತದ ಕಚ್ಚಾ ತೈಲ ಅಗತ್ಯಗಳಲ್ಲಿ ಶೇ.40 ವರೆಗೆ ಪೂರೈಸಲು ರಷ್ಯಾ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಉದ್ಯಮದ ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ.

ಕೈಗಾರಿಕಾ ದತ್ತಾಂಶಗಳು ಭಾರತದ ರಷ್ಯಾದ ಕಚ್ಚಾ ತೈಲ ಆಮದು ಜನವರಿ 2026 ರಲ್ಲಿ ದಿನಕ್ಕೆ ಸುಮಾರು 1.1 ಮಿಲಿಯನ್ ಬ್ಯಾರೆಲ್‌ಗಳಿಗೆ ಇಳಿದಿದೆ ಎಂದು ತೋರಿಸಿವೆ, ಇದು ನವೆಂಬರ್ 2022 ರ ನಂತರದ ಅತ್ಯಂತ ಕಡಿಮೆ. ನವದೆಹಲಿಯು ಅಮೆರಿಕದ ಸುಂಕಗಳಿಂದ ಪರಿಹಾರವನ್ನು ಕೋರಿತು, ಒಟ್ಟು ತೈಲ ಆಮದಿನಲ್ಲಿ ಮಾಸ್ಕೋದ ಪಾಲನ್ನು ಶೇಕಡಾ 21.2 ಕ್ಕೆ ಇಳಿಸಿತು. ಫೆಬ್ರವರಿ 2026 ರಲ್ಲಿ ಈ ಪಾಲು ಸುಮಾರು ಶೇಕಡಾ 30 ಕ್ಕೆ ಏರಿತು.

ಭಾರತದ ಹೆಚ್ಚುತ್ತಿರುವ ತೊಂದರೆಗಳನ್ನು ನೋಡಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೊಮ್ಮೆ ಸಹಾಯಹಸ್ತ ಚಾಚಿದ್ದಾರೆ. ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಅವರು ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಇಂಧನ ಪೂರೈಕೆಯಲ್ಲಿ ಅಡಚಣೆಯ ಹೊರತಾಗಿಯೂ, ರಷ್ಯಾ ಭಾರತದ ಅಗತ್ಯಗಳನ್ನು ಪೂರೈಸುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು.

ತೈಲದ ಜೊತೆಗೆ, ರಷ್ಯಾ ಭಾರತಕ್ಕೆ ದ್ರವೀಕೃತ ನೈಸರ್ಗಿಕ ಅನಿಲ (LNG) ವನ್ನು ಸಹ ನೀಡಿದೆ. ಕತಾರ್ ಭಾರತದ ಅತಿದೊಡ್ಡ ಅನಿಲ ರಫ್ತುದಾರ, ಆದರೆ ಯುದ್ಧದಿಂದಾಗಿ, ಕತಾರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ, ಅನಿಲ ಪೂರೈಕೆಗೆ ಬೆದರಿಕೆಯನ್ನು ಒಡ್ಡಿದೆ. ಪುಟಿನ್ ಅವರು ರಷ್ಯಾ ಯುರೋಪ್‌ಗೆ ಪೂರೈಕೆಯನ್ನು ನಿಲ್ಲಿಸಬಹುದು ಎಂದು ಹೇಳಿದ್ದಾರೆ.

ಇರಾನ್ ಮತ್ತು ಮಧ್ಯಪ್ರಾಚ್ಯ ದೇಶಗಳು ಯುದ್ಧದಲ್ಲಿ ತೊಡಗಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಇದು ಸಂಭವಿಸಿದಲ್ಲಿ, ಯುರೋಪ್ ತೊಂದರೆಗಳನ್ನು ಎದುರಿಸಬಹುದು. ಜಾಗತಿಕ ಪೂರೈಕೆ ಸರಪಳಿಗಳು ಯುದ್ಧದ ಹಿಡಿತದಲ್ಲಿರುವ ಸಮಯದಲ್ಲಿ ರಷ್ಯಾ ಯುರೋಪಿನ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಯುರೋಪ್ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಲು ನಿರಂತರವಾಗಿ ಯೋಜಿಸುತ್ತಿದೆ.

ಉಕ್ರೇನ್ ಯುದ್ಧದ ನಂತರ, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದವು. ಅಮೆರಿಕದ ಪ್ರಭಾವದ ಅಡಿಯಲ್ಲಿ, ಯುರೋಪ್ ಸಹ ಅವರ ಪರವಾಗಿ ನಿಂತು ರಷ್ಯಾದ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು, ಆದಾಗ್ಯೂ ಯುರೋಪ್ ಇದರಿಂದ ಸಂಪೂರ್ಣವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು? – Kannada News | Vijay Deverakonda and Rashmika Wedding: How much virosh Couple spend on marriage

ಕಳೆದ ಒಂದು ವಾರದಿಂದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿವಾಹದ ಸುದ್ದಿ ಎಲ್ಲೆಡೆ ಟ್ರೆಂಡಿಂಗ್‌ನಲ್ಲಿದೆ. ವಿರೋಶ್ ವಿವಾಹದ ಹೆಸರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ವಿಜಯ್-ರಶ್ಮಿಕಾ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾದರು. ಅದಾದ ನಂತರ, ವಿಜಯ್ ಊರಲ್ಲಿ ಔತಣಕೂಟವಿತ್ತು, ಸತ್ಯ ನಾರಾಯಣ ವ್ರತ, ಇಡೀ ಹಳ್ಳಿಗೆ ಊಟ, ಹೈದರಾಬಾದ್‌ನಲ್ಲಿ ಅಭಿಮಾನಿಗಳಿಗೆ ಒಂದು ಔತಣಕೂಟ ಆಯೋಜಿಸಲಾಯಿತು. ಅಂತಿಮವಾಗಿ, ಚಲನಚಿತ್ರ ಮತ್ತು ರಾಜಕೀಯ ಸೆಲೆಬ್ರಿಟಿಗಳಿಗೆ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದರು.

ವಿರೋಶ್ ಆಫ್ ವೆಡ್ಡಿಂಗ್ ಸುಮಾರು ಒಂದು ವಾರದವರೆಗೆ ಟ್ರೆಂಡಿಂಗ್‌ನಲ್ಲಿತ್ತು. ವಿಜಯ್ ದೇವರಕೊಂಡ-ರಶ್ಮಿಕಾ ಅವರ ವಿವಾಹಕ್ಕೆ ಖರ್ಚು ಮಾಡಿದ ಮೊತ್ತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  ರಾಜಸ್ಥಾನದ ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹಕ್ಕೆ ಹೆಚ್ಚು ಮೊತ್ತ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಕೆಲವೇ ಜನರ ಸಮ್ಮುಖದಲ್ಲಿ ಮದುವೆ ನಡೆದರೂ, ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ವಿಜಯ್ ಅವರ ತವರು, ಸತ್ಯನಾರಾಯಣ ವ್ರತದೊಂದಿಗೆ, ಗ್ರಾಮಸ್ಥರಿಗೆ ಅದ್ಧೂರಿ ಔತಣಕೂಟವನ್ನು ಏರ್ಪಡಿಸಿತು. ಸಂಗೀತ ಕಾರ್ಯಕ್ರಮ, ಅಭಿಮಾನಿಗಳಿಗೆ ಹಬ್ಬ, ದೇಶಾದ್ಯಂತ ಸಿಹಿತಿಂಡಿಗಳ ವಿತರಣೆ, ಹಲವಾರು ದೇವಾಲಯಗಳಲ್ಲಿ ಅನ್ನಸಂತರ್ಪಣೆ ಮತ್ತು ಅಂತಿಮವಾಗಿ ಹೈದರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ ಸಮಾರಂಭದಂತಹ ಕಾರ್ಯಕ್ರಮಗಳಿಗೆ ಭಾರಿ ಮೊತ್ತದ ಹಣವನ್ನು ಖರ್ಚು ಮಾಡಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಹೇಗಿದ್ದಾರೆ ನೋಡಿ ರಶ್ಮಿಕಾ ತಂದೆ-ತಾಯಿ, ತಂಗಿ; ರಿಸೆಪ್ಶನ್​ ಅಲ್ಲಿ ಗಮನ ಸೆಳೆದ ಫ್ಯಾಮಿಲಿ ಫೋಟೋ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹಕ್ಕೆ 15 ಕೋಟಿ ಖರ್ಚಾಗಿದೆ ಎಂದು ಕೆಲವರು ಹೇಳಿದ್ದಾರೆ. ದೇಶದ ಪ್ರಮುಖ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ವಿವಾಹವನ್ನು ಆಯೋಜಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ವಿವಾಹದ ವೆಚ್ಚವನ್ನು ಒಟ್ಟಾಗಿ ಭರಿಸಿದ್ದಾರಂತೆ. ಮದುವೆಗಾಗಿ ಅವರು ಸುಮಾರು 3 ಕೆಜಿ ಚಿನ್ನ ಮತ್ತು ದುಬಾರಿ ಬಟ್ಟೆಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇವರ ವಿವಾಹವನ್ನು ಪ್ರಸಾರ ಮಾಡಲು ಒಟಿಟಿ ಕಂಪನಿಗೆ ಹಕ್ಕು ನೀಡಲಾಗಿದೆ ಎನ್ನಲಾಗಿತ್ತು, ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರಿಂದಲೂ ಸಹ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಜೇಕಬ್ ಬೆಥೆಲ್ – Kannada News | Jacob bethell Creates New World Record in Cricket

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ ನಡೆದ ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಯುವ ದಾಂಡಿಗ ಜೇಕಬ್ ಬೆಥೆಲ್ (Jacob bethell) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಬೆಥೆಲ್ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಸಹ ಮಾಡದ ವಿಶೇಷ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಬಿಸಿಲಿನ ಝಳ! ಇನ್ನೂ ಕೆಲ ದಿನ ಇದೇ ಪರಿಸ್ಥಿತಿ – Kannada News | Bengaluru temperature: Dry weather in Karnataka, raise in temperature

ಬೆಂಗಳೂರಿನಲ್ಲಿ ಹೆಚ್ಚಾಯ್ತು ಬಿಸಿಲಿನ ಝಳ! ಇನ್ನೂ ಕೆಲ ದಿನ ಇದೇ ಪರಿಸ್ಥಿತಿ

ಬೆಂಗಳೂರು, ಮಾರ್ಚ್​ 06: ಇಂದು ಬೆಂಗಳೂರಿನಲ್ಲಿ ತಾಪಮಾನದಲ್ಲಿ  (Weather Forecast) ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬಂದಿದೆ. ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಎಲ್ಲೆಲ್ಲಿ ಒಣ ಹವೆ?

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶ್ವಾನಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸತೀಶ್; ಸುತ್ತಿಕೊಂಡು ಬಂದ ಕರ್ಮ – Kannada News | Big Boss Satish Dog Controversy: Breeder Faces Legal Action Over Derogatory Animal Comments

ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ (Satish) ಅವರು ತಮ್ಮನ್ನು ತಾವು ಡಾಗ್ ಬ್ರೀಡರ್ ಎಂದು ಕರೆದುಕೊಂಡಿದ್ದಾರೆ. ಲಕ್ಷದಿಂದ ಹಿಡಿದು ಕೋಟಿವರೆಗಿನ ಡಾಗ್ ತಳಿಗಳನ್ನು ಖರೀದಿಸಿದ್ದಾಗಿ ಅವರು ಹೇಳುತ್ತಾರೆ. ಆದರೆ, ಅವರಿಗೆ ಪ್ರಾಣಿಗಳ ಮೇಲೆ ಸ್ವಲ್ಪವೂ ಪ್ರೀತಿ ಇದ್ದಂತೆ ಇಲ್ಲ. ಈ ವಿಷಯ ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚೆಗೆ ಸತೀಶ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅವರು ಶ್ವಾನಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಸ್ ಮಾಡಲಾಗಿದೆ.

ಸತೀಶ್ ಹಾಗೂ ಸೋಶಿಯಲ್ ಮೀಡಿಯಾ ಇನ್​​ಫ್ಲುಯೆನ್ಸರ್ ನಕ್ಕನ್​ಲೇ ಸುಭಾಷ್ ವಿಡಿಯೋ ಒಂದನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಶ್ವಾನಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಸುಭಾಷ್ ಕೇಳಿದ ಪ್ರಶ್ನೆ ಅಸಹ್ಯವಾಗಿದ್ದರೆ, ಸತೀಶ್ ಕೊಟ್ಟ ಉತ್ತರ ಕೂಡ ಅಷ್ಟೇ ಕೆಟ್ಟದಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸುಭಾಷ್​ ಅವರಿಗಂತೂ ಪ್ರಾಣಿಗಳ ಬಗ್ಗೆ ಗೌರವ ಇಲ್ಲ. ಸತೀಶ್ ಡಾಗ್ ಬ್ರೀಡರ್. ಅವರಿಗಾದರೂ ಪ್ರಾಣಿಗಳ ಮೇಲೆ ಪ್ರೀತಿ ಬೇಡವೇ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ‘ನಿಜವಾದ ಡಾಗ್​ ಬ್ರೀಡರ್​​ಗಳು ಶ್ವಾನಗಳ ಮೇಲೆ ಯಾವ ರೀತಿ ಪ್ರೀತಿ ತೋರಿಸುತ್ತಾರೆ, ಅವುಗಳನ್ನು ಎಷ್ಟು ಗೌರವಿಸುತ್ತಾರೆ ಎಂಬುದನ್ನು ನೋಡಿಲ್ಲ ಎಂದು ಎಲ್ಲಾದರೂ ನೋಡಿ ಕಲಿತಿಕೊಳ್ಳಿ’ ಎಂದು ಕೆಲವರು ಸತೀಶ್​​ಗೆ ಕಿವಿಮಾತು ಹೇಳಿದ್ದರು. ಈಗ ಸತೀಶ್ ತಮ್ಮ ಹೇಳಿಕೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ: ‘ನಾನು ಮೀಟರ್ ಇರೋವ್ನು, ಸಿಎಂ ಹೇಳಿದ್ರೂ ವಿಡಿಯೋ ಡಿಲೀಟ್ ಮಾಡಲ್ಲ’; ಸತೀಶ್

ಅನಿಮಲ್​ ವೆಲ್​​ಫೇರ್ ಸಪೋರ್ಟ್​ ಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಲಾಯರ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ. ‘ಸೋಶಿಯಲ್ ಮೀಡಿಯದಲ್ಲಿ ಕೆಟ್ಟ ಕೆಟ್ಟ ವಿಡಿಯೋಗಳನ್ನು ಮಾಡಿ ಹಾಕುವ ಮುನ್ನ ಎಚ್ಚರ’ ಎಂದು ಅವರು ಕಿವಿ ಮಾತು ಹೇಳಿದ್ದಾರೆ. ಸತೀಶ್ ಅವರು ಏನೇ ಆದರೂ ಸರಿ ಪ್ರಚಾರ ಸಿಗಲಿ ಎಂದು ಬಯಸುತ್ತಾರೆ.ಅದು ಕೆಲವೊಮ್ಮೆ ಮಿತಿ ಮೀರಿದ್ದು ಇದೆ. ಈಗ ಅವರು ಮಾಡಿದ ತಪ್ಪಿಗೆ ತೊಂದರೆ ಅನುಭವಿಸುವಂತಾಗಿದೆ.

ಇತ್ತೀಚೆಗೆ ಮೂತ್ರ ಮಾಡುವಾಗಿನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ ಸತೀಶ್, ಅದಕ್ಕೆ ಸುದೀಪ್ ಹಾಡು ಹಾಕಿದ್ದರು. iದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಆದರೆ, ಈ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈಗ ಅವರು ಬೇರೆ ಪ್ರಕರಣದಲ್ಲಿ ಸಂಕಷ್ಟ ಎದುರಿಸುವಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:10 am, Fri, 6 March 26

Source link

Sanju Samson: ನನಗಲ್ಲ, ಈ ಪ್ರಶಸ್ತಿ ಅವರಿಗೆ ಕೊಡ್ಬೇಕಿತ್ತು..! – Kannada News | Sanju Samson Says Jasprit Bumrah deserves the POTM award

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಟೀಮ್ ಇಂಡಿಯಾ ಫೈನಲ್​ಗೇರಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 89 ರನ್ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 246 ರನ್​ಗಳಿಸಿ ವಿರೋಚಿತವಾಗಿ 7 ರನ್​ಗಳಿಂದ ಸೋಲೊಪ್ಪಿಕೊಂಡಿದ್ದರು. ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯವಾಯ್ತು. ಅತ್ತ ಗೆದ್ದು ಬೀಗಿದ ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸಿದೆ.

ಇನ್ನು ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಯಾಮ್ಸನ್, ಈ ಗೌರವಕ್ಕೆ ಜಸ್​ಪ್ರೀತ್ ಬುಮ್ರಾ ಹೆಚ್ಚು ಅರ್ಹರು. ಹೀಗಾಗಿ ಅವರಿಗೆ ನೀಡಬೇಕಿತ್ತು ಎಂದರು.

ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್‌ನಲ್ಲಿ ಜಸ್​ಪ್ರೀತ್ ಬುಮ್ರಾ ತಮ್ಮ 4 ಓವರ್‌ಗಳಲ್ಲಿ ಕೇವಲ 33 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಅದರಲ್ಲೂ ವಿಶೇಷವಾಗಿ 16ನೇ ಓವರ್​ನಲ್ಲಿ ಕೇವಲ 8 ರನ್​ ನೀಡಿದ್ದರು. ಇದಾದ ಬಳಿಕ 18ನೇ ಓವರ್‌ನಲ್ಲಿ ಕೇವಲ 6 ರನ್ ಮಾತ್ರ ನೀಡಿ ಇಡೀ ಪಂದ್ಯದ ಗತಿಯನ್ನು ಬದಲಿಸಿದ್ದರು.

ಜಸ್​ಪ್ರೀತ್ ಬುಮ್ರಾ ಅವರ ಈ ಬೌಲಿಂಗ್​​ನಿಂದಾಗಿ ನಾವು ಇಂದು ಪಂದ್ಯ ಗೆದ್ದಿದ್ದೇವೆ. ಅವರು ಅಂತಹ ಬೌಲಿಂಗ್ ಮಾಡದಿದ್ದರೆ ನಾವು ಈ ಪಂದ್ಯ ಗೆಲ್ಲುತ್ತಿರಲಿಲ್ಲ. ಅವರು ‘ಒಂದು ಪೀಳಿಗೆಯ ಅಪರೂಪದ ಬೌಲರ್’. ಹಾಗಾಗಿ ಈ ಪ್ರಶಸ್ತಿ ಅವರಿಗೆ ಸಲ್ಲಬೇಕಿತ್ತು ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇದೀಗ ತನ್ನ ಭರ್ಜರಿ ಇನಿಂಗ್ಸ್​ಗೆ ದೊರಕಿದ್ದ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಜಸ್​ಪ್ರೀತ್ ಬುಮ್ರಾಗೆ ಅರ್ಪಿಸುವ ಮೂಲಕ ಸಂಜು ಸ್ಯಾಮ್ಸನ್ ಎಲ್ಲರ ಮನ ಗೆದ್ದಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಎರಡು ಗೆಲುವುಗಳಲ್ಲಿ ಸ್ಯಾಮ್ಸನ್ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: IND vs ENG: ಟೀಮ್ ಇಂಡಿಯಾ ಗೆಲುವಿಗೆ ಇವರೇ ಕಾರಣ..!

ಇದಕ್ಕೂ ಮುನ್ನ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಬಾರಿಸಿ ಟೀಮ್ ಇಂಡಿಯಾಗೆ ಗೆಲುವು ತಂದು ಕೊಟ್ಟಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಇನಿಂಗ್ಸ್ ಆಡುವ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ.

Source link

ಅಯ್ಯಯ್ಯೋ.. ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ; ಪೆಟ್ಟಾಯ್ತಾ? – Kannada News | Naga Chaitanya Falldown From Chair in film Vrushakarma Event

ನಾಗ ಚೈತನ್ಯ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೋಗಿ ಜಾರಿ ಬಿದ್ದ ಘಟನೆಯೊಂದು ನಡೆದಿದೆ. ಅವರ ಮುಂದಿನ ಸಿನಿಮಾ ವೃಷಕರ್ಮ ಚಿತ್ರದ ಈವೆಂಟ್ ಅಲ್ಲಿ ಭಾಗಿ ಆದರು. ಅವರು ಬಂದು ಕುರ್ಚಿ ಮೇಲೆ ಕೂರಲು ಪ್ರಯತ್ನಿಸಿದರು ಮತ್ತು ಅದು ಹಿಂದಕ್ಕೆ ಭಾಗಿತು. ಇದರಿಂದ ಅವರು ಬಿದ್ದರು. ಈ ಪರಿಸ್ಥಿತಿಯನ್ನು ಅವರು ನಗುತ್ತಲೇ ಹ್ಯಾಂಡಲ್ ಮಾಡಿದರು. ಅವರ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಕೆಲವೊಮ್ಮೆ ಸೆಲೆಬ್ರಿಟಿಗಳು ಈ ರೀತಿ ಆದಾಗ ಸಿಟ್ಟಾಗುತ್ತಾರೆ. ಅಲ್ಲಿದ್ದವರನ್ನು ಬಯ್ಯುತ್ತಾರೆ. ಆದರೆ, ಅವರು ಹಾಗೆ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇಶದ 9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯಪಾಲರ ಬದಲಾವಣೆ! ಇಲ್ಲಿದೆ ಲಿಸ್ಟ್ – Kannada News | India Governor Reshuffle 2026: Major Governor and LG Transfers in Delhi, Ladakh, Telangana and More

ದೇಶದ 9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯಪಾಲರ ಬದಲಾವಣೆ!

ನವದೆಹಲಿ, ಮಾರ್ಚ್​ 06: ಭಾರತದ ರಾಷ್ಟ್ರಪತಿ ಭವನವು ಶುಕ್ರವಾರದಂದು ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಮಹತ್ವದ ರಾಜ್ಯಪಾಲರ (Governors) ಹಾಗೂ ಲೆಫ್ಟಿನೆಂಟ್ ಗವರ್ನರ್‌ಗಳ ಪುನರ್‌ವ್ಯವಸ್ಥೆಯನ್ನು ಘೋಷಿಸಿದೆ. ದೆಹಲಿ, ಲಡಾಖ್, ತೆಲಂಗಾಣ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಹಿಮಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ರಾಷ್ಟ್ರಪತಿ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಹಲವು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು ವರ್ಗಾವಣೆ ಮಾಡಲಾಗಿದ್ದು, ಕೆಲವರನ್ನು ಹೊಸ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಸಂಬಂಧಿತ ಅಧಿಕಾರಿಗಳು ತಮ್ಮ ಹುದ್ದೆಗಳನ್ನು ಸ್ವೀಕರಿಸುವ ದಿನಾಂಕದಿಂದ ಈ ನೇಮಕಾತಿಗಳು ಜಾರಿಗೆ ಬರಲಿವೆ ಎಂದು ತಿಳಿಸಲಾಗಿದೆ.

ಎಲ್ಲೆಲ್ಲಿ  ಗವರ್ನರ್ ವರ್ಗಾವಣೆ?

ದೆಹಲಿಯ ಪ್ರಸ್ತುತ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿನಯ್ ಕುಮಾರ್ ಸಕ್ಸೇನಾರನ್ನು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ಅಮೆರಿಕಾದಲ್ಲಿ ಭಾರತದ ಮಾಜಿ ರಾಯಭಾರಿಯಾಗಿದ್ದ ತರಣ್ಜಿತ್ ಸಿಂಗ್ ಸಂಧುರನ್ನು ದೆಹಲಿಯ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿರುವ ಶಿವ ಪ್ರತಾಪ್ ಶುಕ್ಲಾ ಅವರನ್ನು ತೆಲಂಗಾಣ ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಪ್ರಸ್ತುತ ತೆಲಂಗಾಣ ರಾಜ್ಯಪಾಲರಾಗಿರುವ ಜಿಷ್ಣು ದೇವ್ ವರ್ಮಾರನ್ನು ಮಹಾರಾಷ್ಟ್ರ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದೇ ವೇಳೆ, ನಂದ ಕಿಶೋರ್ ಯಾದವ್ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ನಿವೃತ್ತ ಸೇನಾ ಅಧಿಕಾರಿಯಾದ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸ್ನೈನ್ ಅವರನ್ನು ಬಿಹಾರ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ತಮಿಳುನಾಡಿನ ರಾಜ್ಯಪಾಲರಾಗಿರುವ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಕೇರಳದ ಪ್ರಸ್ತುತ ರಾಜ್ಯಪಾಲರಾಗಿರುವ ರಾಜೇಂದ್ರ ವಿಶ್ವನಾಥ ಅರ್‌ಲೆಕರ ಅವರು ತಮಿಳುನಾಡು ರಾಜ್ಯಪಾಲರ ಕಾರ್ಯಭಾರವನ್ನು ವಹಿಸಲಿದ್ದಾರೆ. ಅಲ್ಲದೇ ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕವೀಂದರ್ ಗುಪ್ತಾ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.

ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕಾತಿ/ವರ್ಗಾವಣೆಗಳ ಪಟ್ಟಿ

  • ವಿನಯ್ ಕುಮಾರ್ ಸಕ್ಸೇನಾ – ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ (ಪ್ರಸ್ತುತ ದೆಹಲಿ ಎಲ್‌ಜಿ)
  • ತರಣ್ಜಿತ್ ಸಿಂಗ್ ಸಂಧು – ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ
  • ಶಿವ ಪ್ರತಾಪ್ ಶುಕ್ಲಾ – ತೆಲಂಗಾಣ ರಾಜ್ಯಪಾಲರಾಗಿ ನೇಮಕ (ಪ್ರಸ್ತುತ ಹಿಮಾಚಲ ಪ್ರದೇಶ ರಾಜ್ಯಪಾಲ)
  • ಜಿಷ್ಣು ದೇವ್ ವರ್ಮಾ – ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕ (ಪ್ರಸ್ತುತ ತೆಲಂಗಾಣ ರಾಜ್ಯಪಾಲ)
  • ನಂದ ಕಿಶೋರ್ ಯಾದವ್ – ನಾಗಾಲ್ಯಾಂಡ್ ರಾಜ್ಯಪಾಲರಾಗಿ ನೇಮಕ
  • ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೈನ್ – ಬಿಹಾರ ರಾಜ್ಯಪಾಲರಾಗಿ ನೇಮಕ
  • ಆರ್.ಎನ್. ರವಿ – ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕ (ಪ್ರಸ್ತುತ ತಮಿಳುನಾಡು ರಾಜ್ಯಪಾಲ)
  • ರಾಜೇಂದ್ರ ವಿಶ್ವನಾಥ ಅರ್‌ಲೆಕರ – ತಮಿಳುನಾಡು ರಾಜ್ಯಪಾಲರ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ (ಪ್ರಸ್ತುತ ಕೇರಳ ರಾಜ್ಯಪಾಲ)
  • ಕವೀಂದರ್ ಗುಪ್ತಾ – ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ನೇಮಕ (ಪ್ರಸ್ತುತ ಲಡಾಖ್ ಎಲ್‌ಜಿ)

ಈ ಬದಲಾವಣೆಗಳು ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳ ಆಡಳಿತ ವ್ಯವಸ್ಥೆಯಲ್ಲಿ ಸಮತೋಲನ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಉದ್ದೇಶದಿಂದ ಕೈಗೊಂಡ ಕ್ರಮವೆಂದು ರಾಜಕೀಯ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಾರೆ, ಆದ್ರೂ ಗಾಯವಾಗಲ್ಲ ರಕ್ತ ಬರಲ್ಲ! – Kannada News | Devotees Break Coconuts on Heads Without Injury: Unique Mugumaramma Festival Tradition in Chamarajanagar

ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಿರುವುದುImage Credit source: tv9

ಚಾಮರಾಜನಗರ, ಮಾರ್ಚ್ 6: ದೇವರಿಗೆ ಪೂಜೆ ಸಲ್ಲಿಸುವ ವೇಳೆ ತೆಂಗಿನಕಾಯಿ ಒಡೆಯುವುದು ಸಾಮಾನ್ಯ ಸಂಪ್ರದಾಯ. ಆದರೆ ಚಾಮರಾಜನಗರ (Chamarajanagar) ಜಿಲ್ಲೆಯ ಒಂದು ಗ್ರಾಮದಲ್ಲಿ ನಡೆಯುವ ಹಬ್ಬದಲ್ಲಿ ಭಕ್ತರ ತಲೆಯ ಮೇಲೆಯೇ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ. ಈ ಅಪರೂಪದ ಆಚರಣೆ ಗಡಿ ನಾಡು ಚಾಮರಾಜನಗರ ಜಿಲ್ಲೆಯ ಕಮರವಾಡಿ ಗ್ರಾಮದಲ್ಲಿ ನಡೆಯುವ ಗ್ರಾಮದೇವತೆ ಮೂಗುಮಾರಮ್ಮ ಜಾತ್ರೆಯ ವಿಶೇಷವಾಗಿದೆ.

ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಪ್ರತಿ ವರ್ಷ ಮೂಗುಮಾರಮ್ಮ ದೇವಿಯ ಜಾತ್ರೆ ಮೂರು ದಿನಗಳ ಕಾಲ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ಹರಕೆ ಹೊತ್ತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದು ದೇವಿಗೆ ಪೂಜೆ ಸಲ್ಲಿಸುವುದು. ಜಾತ್ರೆಯ ಮೊದಲ ದಿನ ದೇವಿಯ ಮೆರವಣಿಗೆ ನಡೆಯುವ ವೇಳೆ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ತಲೆಯ ಮೇಲೆ ತೆಂಗಿನ ಕಾಯಿ ಒಡೆಯುವ ವಿಡಿಯೋ


ಜಾತ್ರೆಯ ಎರಡನೇ ದಿನ ದೇವಿಗೆ ವಿವಿಧ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ಮೂರನೇ ದಿನ ಗ್ರಾಮಸ್ಥರು ಮನೆ ಮನೆಗೆ ತೆರಳಿ ಅಕ್ಕಿ, ಬೆಲ್ಲ ಸೇರಿದಂತೆ ಪಡಿತರ ಸಂಗ್ರಹಿಸುವ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಪದ್ಧತಿ ಕೂಡ ನಡೆಯುತ್ತದೆ. ಗ್ರಾಮದ ಪ್ರತಿಯೊಂದು ಮನೆಯ ಮುಂದೆಯೇ ಈ ಪೂಜೆ ನೆರವೇರಿಸಲಾಗುತ್ತದೆ.

ಗಾಯವಾಗಲ್ಲ, ರಕ್ತ ಬರಲ್ಲ!

ಆಶ್ಚರ್ಯಕರ ಸಂಗತಿ ಏನೆಂದರೆ, ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದರೂ ಅವರಿಗೆ ಯಾವುದೇ ರೀತಿಯ ಗಾಯವಾಗುವುದಿಲ್ಲ, ರಕ್ತವೂ ಹರಿಯುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಇದು ಗ್ರಾಮದೇವತೆ ಮೂಗುಮಾರಮ್ಮನ ಪವಾಡ ಎಂದು ಭಕ್ತರು ನಂಬಿಕೆ ವ್ಯಕ್ತಪಡಿಸುತ್ತಾರೆ. ತಲೆಯ ಮೇಲೆ ಹೊಡೆಯುವ ತೆಂಗಿನಕಾಯಿ ಒಂದೇ ಹೊಡೆತದಲ್ಲಿ ಎರಡು ಭಾಗಗಳಾಗಿ ಒಡೆಯುವುದು ಈ ಆಚರಣೆಯ ವಿಶೇಷವಾಗಿದೆ.

ಇದನ್ನೂ ಓದಿ: ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ಚಾಮರಾಜನಗರ ಗೂಳಿಪುರದಲ್ಲಿ ವಿಶೇಷ ಹಬ್ಬ, ವಿಡಿಯೋ ಇಲ್ಲಿದೆ ನೋಡಿ

ತಲೆತಲಾಂತರಗಳಿಂದ ನಡೆದುಬರುತ್ತಿರುವ ಈ ಅಪರೂಪದ ಸಂಪ್ರದಾಯವನ್ನು ಇಂದಿಗೂ ಗ್ರಾಮಸ್ಥರು ಭಕ್ತಿಭಾವದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ವಿಶಿಷ್ಟ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ಜನರ ಗಮನ ಸೆಳೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಟೀಮ್ ಇಂಡಿಯಾ ಗೆಲುವಿಗೆ ಇವರೇ ಕಾರಣ..! – Kannada News | Reasons why India beat England in the semi final

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್​ಗೆ ಸೋಲುಣಿಸಿ ಟೀಮ್ ಇಂಡಿಯಾ ಫೈನಲ್​ಗೇರಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ರಣರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 253 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 246 ರನ್​ಗಳಿಸಿ 7 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಅಂದರೆ ಇಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಸೋಲಿನ ಅಂತರ ಕೇವಲ 7 ರನ್​ಗಳು ಮಾತ್ರ. ಈ ಅಂತರ ಸೃಷ್ಟಿಯಾಗಿದ್ದು ಹೇಗೆ? ಈ ಗೆಲುವಿಗೆ ಕಾರಣಕರ್ತರು ಯಾರೆಂದು ನೋಡುವುದಾದರೆ….

  • ಸಂಜು ಸ್ಯಾಮ್ಸನ್ ಅಬ್ಬರ: ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಬಂದ ಸಂಜು ಸ್ಯಾಮ್ಸನ್ ಕೇವಲ 42 ಎಸೆತಗಳಲ್ಲಿ 89 ರನ್ (7 ಸಿಕ್ಸರ್, 8 ಬೌಂಡರಿ) ಸಿಡಿಸಿ ಭಾರತಕ್ಕೆ ಬೃಹತ್ ಮೊತ್ತದ ಅಡಿಪಾಯ ಹಾಕಿಕೊಟ್ಟಿದ್ದರು. ಈ ಒಂದು ಭರ್ಜರಿ ಇನಿಂಗ್ಸ್ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಕಾರಣವಾಯಿತು.
  • ತಿಲಕ್ ವರ್ಮಾ 3 ಸಿಕ್ಸ್​: ಟೀಮ್ ಇಂಡಿಯಾ ಪರ ಎಲ್ಲಾ ಬ್ಯಾಟರ್​ಗಳು ಅಬ್ಬರಿಸಿದರೂ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ತಿಲಕ್ ವರ್ಮಾ ಅವರ ಮೂರು ಸಿಕ್ಸ್​. ಏಕೆಂದರೆ 18ನೇ ಓವರ್​ನ ಮುಕ್ತಾಯದ ವೇಳೆಗೆ ಕ್ರೀಸ್​ಗೆ ಆಗಮಿಸಿದ ತಿಲಕ್ ವರ್ಮಾ ಜೋಫ್ರಾ ಅರ್ಚರ್ ಎಸೆದ 19ನೇ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿದ್ದರು. ಈ ಮೂಲಕ 7 ಎಸೆತಗಳಲ್ಲಿ 21 ರನ್​ಗಳ ಕೊಡುಗೆ ನೀಡಿದ್ದರು.
  • ಬುಮ್ರಾ ಮ್ಯಾಜಿಕ್ ಸ್ಪೆಲ್: ಇಂಗ್ಲೆಂಡ್ ತಂಡವು ಗೆಲುವಿನ ಹಾದಿಯಲ್ಲಿದ್ದಾಗಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅಂದರೆ ಅಂತಿಮ ಎರಡು ಓವರ್​ಗಳಲ್ಲಿ ಬುಮ್ರಾ ನೀಡಿದ್ದರು ಕೇವಲ 14 ರನ್​ಗಳು ಮಾತ್ರ.
  • 16ನೇ ಓವರ್​ನಲ್ಲಿ 8 ರನ್ ನೀಡಿದ್ದ ಬುಮ್ರಾ 18ನೇ ಓವರ್​ನಲ್ಲಿ ಬಿಟ್ಟುಕೊಟ್ಟಿದ್ದು ಕೇವಲ 6 ರನ್​​ಗಳು ಮಾತ್ರ. ಈ ಎರಡು ಓವರ್​ಗಳು ಇಂಗ್ಲೆಂಡ್​ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿತು.
  • ಅಕ್ಷರ್ ಪಟೇಲ್ ಕೈಚಳಕ: ಅಕ್ಷರ್ ಪಟೇಲ್ ಹಿಡಿದ ಎರಡು ಅದ್ಭುತ ಕ್ಯಾಚ್‌ಗಳು ಪಂದ್ಯದ ಗತಿಯನ್ನು ಬದಲಿಸಿದವು. ಮೊದಲಿಗೆ ಹ್ಯಾರಿ ಬ್ರೂಕ್ ಅವರ ಅದ್ಭುತ ಕ್ಯಾಚ್ ಹಿಡಿದಿದ್ದ ಅಕ್ಷರ್ ಪಟೇಲ್, ಆ ಬಳಿಕ ಡೇಂಜರಸ್ ವಿಲ್ ಜ್ಯಾಕ್ಸ್ ಅವರ ರಿಲೇ ಕ್ಯಾಚ್ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.

ಅಂದರೆ ಇಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ 7 ರನ್​ಗಳ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿದ್ದು ಅಕ್ಷರ್ ಪಟೇಲ್ ಅವರ ಅತ್ಯದ್ಭುತ ಫೀಲ್ಡಿಂಗ್ ಹಾಗೂ ಜಸ್​ಪ್ರೀತ್ ಬುಮ್ರಾ ಅವರ ಮಿಂಚಿನ ದಾಳಿ ಎನ್ನಬಹುದು.

ಇದನ್ನೂ ಓದಿ: IND vs ENG: ಒಬ್ಬ ಮಾಡಿದ ತಪ್ಪಿಗೆ ಭಾರೀ ಬೆಲೆ ತೆತ್ತ ಇಂಗ್ಲೆಂಡ್

ಅದರಲ್ಲೂ ನಿರ್ಣಾಯಕ ಹಂತದಲ್ಲಿ 2 ಓವರ್​ಗಳಲ್ಲಿ ಕೇವಲ 14 ರನ್ ನೀಡುವ ಮೂಲಕ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟಿದ್ದರು. ಬುಮ್ರಾ ಅವರ ಈ ಬುಮ್ರಾಸ್ತ್ರದಿಂದ ಭಾರತ ತಂಡವು 7 ರನ್​ಗಳ ಜಯ ಸಾಧಿಸಲು ಸಾಧ್ಯವಾಯಿತು ಎಂದರೂ ತಪ್ಪಾಗಲಾರದು.

Source link