All posts by nagaraj11081993

‘ಡಾನ್ 3’ ಸಿನಿಮಾ ಬಗ್ಗೆ ಕೊನೆಗೂ ಬಾಯ್ಬಿಟ್ಟ ಫರ್ಹಾನ್ ಅಖ್ತರ್ – Kannada News | Farhan Akhtar talks about Don 3 movie, says he learned valid lesson

ಡಾನ್’ (Don) ಸಿನಿಮಾ ಸರಣಿ ಭಾರತದ ಬಲು ಜನಪ್ರಿಯ ಆಕ್ಷನ್ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಮೊದಲಿಗೆ ಅಮಿತಾಬ್ ಬಚ್ಚನ್ ನಟಿಸಿದ್ದ ಸಿನಿಮಾವನ್ನು ಶಾರುಖ್ ಖಾನ್ ನಾಯಕನನ್ನಾಗಿ ಹಾಕಿಕೊಂಡು ರೀಮೇಕ್ ಮಾಡಿಲಾಯ್ತು. ಸಿನಿಮಾ ನಿರ್ದೇಶನ ಮಾಡಿದ್ದು ಫರ್ಹಾನ್ ಅಖ್ತರ್, ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಬಳಿಕ ‘ಡಾನ್’ ಹೆಸರು, ಪಾತ್ರವನ್ನೇ ಇರಿಸಿಕೊಂಡು ಹೊಸದೊಂದು ಥ್ರಿಲ್ಲರ್ ಕತೆ ಹೆಣೆದ ಫರ್ಹಾನ್ ಅಖ್ತರ್ ಅದನ್ನು 2011 ರಲ್ಲಿ ರಿಲೀಸ್ ಮಾಡಿದರು. ಆ ಸಿನಿಮಾದಲ್ಲಿಯೂ ಶಾರುಖ್ ಖಾನ್ ನಾಯಕ. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆಗಿನಿಂದಲೂ ‘ಡಾನ್ 3’ಗಾಗಿ ಅಭಿಮಾನಿಗಳು ಕೇಳುತ್ತಿದ್ದರು. ಫರ್ಹಾನ್ ಕತೆ ರೆಡಿ ಇರಿಸಿಕೊಂಡು ಸಿನಿಮಾ ಪ್ರಾರಂಭಿಸಲು ಶುರು ಮಾಡಿದ್ದರು. ರಣ್ವೀರ್ ಸಿಂಗ್ ನಾಯಕ ಎನ್ನಲಾಯ್ತು. ಆದರೆ ರಣ್ವೀರ್ ಮತ್ತು ಫರ್ಹಾನ್ ನಡುವೆ ಭಿನ್ನಾಭಿಪ್ರಾಯ ತಲೆದೂರಿ ಸಿನಿಮಾ ನಿಂತು ಹೋಗಿದೆ. ಇದೀಗ ಫರ್ಹಾನ್ ಅಖ್ತರ್ ‘ಡಾನ್ 3’ ಬಗ್ಗೆ ಮಾತನಾಡಿದ್ದಾರೆ.

ಹಾಲಿವುಡ್ ರಿಪೋರ್ಟರ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಫರ್ಹಾನ್, ‘ಡಾನ್ 3’ ದೊಡ್ಡ ಪಾಠ ಕಲಿಸಿದೆ. ನಾನು ಕಲಿತ ಪಾಠವೆಂದರೆ ಅನಿರೀಕ್ಷಿತವಾದುದನ್ನು ನಿರೀಕ್ಷಿಸಬಾರದು ಎಂದು. ಯಾವುದೂ ಕೂಡ ಸಿನಿಮಾ ಆಗಿ ಪರದೆಯ ಮೇಲೆ ಬರುವವರೆಗೆ ಅದು ಖಚಿತ ಎಂದು ಭಾವಿಸುವಂತಿಲ್ಲ’ ಎಂದು ಅವರು ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಎದುರಾಗುವ ಇಂತಹ ಸವಾಲುಗಳನ್ನು ಸಾಮಾನ್ಯ ಎಂಬಂತೆ ಸ್ವೀಕರಿಸುವುದಾಗಿ ಅವರು ತಿಳಿಸಿದ್ದಾರೆ.

2023ರಲ್ಲಿ ‘ಡಾನ್ 3’ ಸಿನಿಮಾ ಘೋಷಿಸಲಾಯ್ತು. ಸಿನಿಮಾಕ್ಕೆ ಶಾರುಖ್ ಖಾನ್ ಬದಲಿಗೆ ರಣ್ವೀರ್ ಸಿಂಗ್ ನಾಯಕ ಎಂದೂ ಸಹ ಘೋಷಿಸಲಾಗಿತ್ತು. ‘ಧುರಂಧರ್ 2’ ಸಿನಿಮಾದ ಬಳಿಕ ‘ಡಾನ್ 3’ ಸಿನಿಮಾವನ್ನು ಫರ್ಹಾನ್ ಅಖ್ತರ್ ಶುರು ಮಾಡಬೇಕಿತ್ತು. ರಣ್ವೀರ್ ಕತೆ ಸಹ ಕೇಳಿದ್ದರು. ರಣ್ವೀರ್ ಅವರಿಗೆ ಅಡ್ವಾನ್ಸ್ ಸಹ ನೀಡಲಾಗಿತ್ತು. ಆದರೆ, ರಣವೀರ್ ಅವರ ಇತ್ತೀಚಿನ ಸಿನಿಮಾ ‘ಧುರಂಧರ್’ ಯಶಸ್ಸಿನ ನಂತರ, ಸ್ಕ್ರಿಪ್ಟ್ ವಿಚಾರದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಅವರು ಈ ಯೋಜನೆಯಿಂದ ಇದ್ದಕ್ಕಿದ್ದಂತೆ ಹೊರನಡೆದರು.

ಇದನ್ನೂ ಓದಿ:‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ

ರಣವೀರ್ ಅವರ ಈ ನಿರ್ಧಾರದಿಂದಾಗಿ ಫರ್ಹಾನ್ ಅವರ ಎಕ್ಸೆಲ್ ಎಂಟರ್ಟೈನ್‌ಮೆಂಟ್ ಸಂಸ್ಥೆಗೆ ಸುಮಾರು 40 ಕೋಟಿ ನಷ್ಟವಾಗಿದೆ ಎಂದು ವರದಿಯಾಗಿದೆ. ಇದಕ್ಕಾಗಿ ನಿರ್ಮಾಪಕರ ಸಂಘದ ಮೊರೆ ಕೂಡ ಹೋಗಲಾಗಿತ್ತು. ಬಳಿಕ ಸ್ಟಾರ್ ನಟ ಆಮಿರ್ ಖಾನ್ ಅವರು ಮಧ್ಯಸ್ಥಿಕೆ ವಹಿಸಿ ಇಬ್ಬರ ನಡುವೆ ಸಂಧಾನ ಮಾಡಿದ್ದಾರೆ. ರಣವೀರ್ ಸಿಂಗ್ ಅವರು ಪಡೆದಿದ್ದ 10 ಕೋಟಿ ಮುಂಗಡ ಹಣವನ್ನು ಮರಳಿಸಿದ್ದಾರೆ. ಮತ್ತು ತಮ್ಮ ಮುಂದಿನ ಚಿತ್ರ ‘ಪ್ರಳಯ’ದಲ್ಲಿ ಪಾಲನ್ನು ನೀಡುವ ಮೂಲಕ ನಷ್ಟ ಭರಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ನಿರ್ಮಾಣ ಸಂಸ್ಥೆಯು ಈ ಬಗ್ಗೆ ಯಾವುದೇ ಅಧಿಕೃತ ಒಪ್ಪಂದ ನಡೆದಿಲ್ಲ ಎಂದಿದೆ.

ಸದ್ಯಕ್ಕೆ ‘ಡಾನ್ 3’ ಭವಿಷ್ಯ ಅನಿಶ್ಚಿತವಾಗಿದೆ. ಫರ್ಹಾನ್ ಅಖ್ತರ್ ಅವರೇ ಸ್ವತಃ ಡಾನ್ ಪಾತ್ರದಲ್ಲಿ ನಟಿಸುತ್ತಾರೆಯೇ ಅಥವಾ ಶಾರುಖ್ ಖಾನ್ ಅವರೇ ಮತ್ತೆ ಡಾನ್ ಪಾತ್ರದಲ್ಲಿ ನಟಿಸುತ್ತಾರಾ? ಅಥವಾ ಹೊಸ ನಟನನ್ನು ಹುಡುಕುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಫರ್ಹಾನ್ ಅಖ್ತರ್, ನಿರ್ದೇಶಕ ಆಗಿರುವ ಜೊತೆಗೆ ನಟ ಮತ್ತು ಸಂಗೀತಗಾರ ಸಹ ಆಗಿದ್ದಾರೆ. ಕಳೆದ ವರ್ಷ ಅವರ ನಟನೆಯ ‘120 ಬಹದ್ಧೂರ್’ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಫರ್ಹಾನ್ ಖಾನ್ ಅವರು 2011 ರಲ್ಲಿ ಬಿಡುಗಡೆ ಆದ ‘ಡಾನ್ 3’ ಬಳಿಕ ಇನ್ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಆದರೆ ಈಗ ನಿರ್ದೇಶಕನಾಗಿ ಕಮ್​​ಬ್ಯಾಕ್ ಮಾಡುವ ಹೊತ್ತಲ್ಲೇ ಅವರಿಗೆ ಸಂಕಷ್ಟ ಎದುರಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೆರಿಗೆಗೂ ಮೊದಲೇ ಮೃತಪಟ್ಟ ಹಸುಗೂಸು: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಪುಟ್ಟ ಜೀವ? – Kannada News | Newborn Dies: Medical Negligence Allegations Rock Karnataka Hospital and Spark Protests

ರಾಯಚೂರು/ಹಾವೇರಿ, ಏಪ್ರಿಲ್​​ 28: ಹೆರಿಗೆಗೂ ಮೊದಲೇ  ಹಸುಗೂಸು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಜಂಗಮರ ಹಳ್ಳಿ ಗ್ರಾಮದ ಗುಂಡಪ್ಟ ಅವರ ಪತ್ನಿ ಪರಮ್ಮಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು ಎನ್ನಲಾಗಿದೆ.

ನಿನ್ನೆಯಿಂದ ಸಹಜ ಹೆರಿಗೆ ಆಗಲಿದೆ ಎಂದು ವೈದ್ಯರು ಹೇಳಿದ್ದರಾದರೂ ಅದು ಸಾಧ್ಯವಾಗದೇ ಇದಲ್ಲಿ ಸಿಜರಿಯನ್ ನಡೆಸುವಂತೆ ಪರಮ್ಮ ಕಡೆಯವರು ವೈದ್ಯರಿಗೆ ತಿಳಿಸಿದ್ದರು. ಇಂದು ಮುಂಜಾನೆ ಇಂಜೆಕ್ಷನ್ ನೀಡಿ ಸಹಜ ಹೆರಿಗೆಗೆ ಆಸ್ಪತ್ರೆಯವರು ಯತ್ನಿಸಿದ್ದು, ಅದು ನೆರವೇರದ ಕಾರಣ ಸಿಜರಿಯನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಆದರೆ ಅದಾಗಲೇ ಮಗು ಮೃತಪಟ್ಟಿತ್ತು ಎನ್ನಲಾಗಿದೆ. ಸಿಂಧನೂರು ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಸ್ಪತ್ರೆ ಆಡಳಿತಾಧಿಕಾರಿಯಿಂದ ಸ್ಪಷ್ಟನೆ

ಇನ್ನು ಮಗು ಮೃತಪಟ್ಟಿರುವ ಬಗ್ಗೆ ಸಿಂಧನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕಾವೇರಿ ಪ್ರತಿಕ್ರಿಯೆ ನೀಡಿದ್ದಾರೆ. ಹೆರಿಗೆಗಾಗಿ ಬೆಳಿಗ್ಗೆ 6 ಗಂಟೆಗೆ ಔಷಧಿ ನೀಡಿದ್ದೆವು. ಆಗ ಮಗು ಸುಸ್ತಾಗಿದೆ ಎಂಬ ಬಗ್ಗೆ ಗೊತ್ತಾಗಿದೆ. ತಂತ್ರಜ್ಞಾನದ ಮೂಲದ ಮಗುವಿನ ಹಾರ್ಟ್ ಬೀಟ್ ಪತ್ತೆ ಮಾಡಿದ್ದು, ಕೂಡಲೇ ಸಿಜರಿಯನ್​​ಗೆ ಸಿದ್ಧರಾಗಿದ್ದೇವೆ. ಆ ಬಳಿಕ ಮಗುವಿನ ಸ್ಥಿತಿ ಗಂಭೀರವಾಗಿತ್ತು. ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದರೂ ಜೀವ ಉಳಿಸಲು ಆಗಲಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್

ಆಪರೇಷನ್​​ ವೇಳೆ ಕೋಮಾಗೆ ಹೋದ ಬಾಲಕ

ಇತ್ತ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಯೂ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಹರ್ನಿಯಾ ಆಪರೇಷನ್​​ ವೇಳೆ 7 ವರ್ಷದ ಚಾಂದ್​​ಪೀರ್ ಸಾಬ್ ದೊಡ್ಡಮನಿ ಎಂಬ ಬಾಲಕ ಕೋಮಾಗೆ ಹೋಗಿದ್ದು, ಜಿಲ್ಲಾಸ್ಪತ್ರೆ ವೈದ್ಯ, ಸಿಬ್ಬಂದಿ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೋಮಾಗೆ ಹೋದ ಬಾಲಕನನ್ನ ಖಾಸಗಿ ಆಸ್ಪತ್ರೆಗೆ ವೈದ್ಯರು ರೆಫರ್​​ ಮಾಡಿದ್ದು, ಬಾಲಕನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣವನ್ನು ಕುಟುಂಬದ ಸದಸ್ಯರು ಖರ್ಚು ಮಾಡಿದ್ದಾರೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಾಂದ್​​ಪೀರ್​​ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹರ್ನಿಯಾ ಆಪರೇಷನ್​ ಮಾಡಿದ ವೈದ್ಯರ ವಿರುದ್ಧ ದೂರು ದಾಖಲಾಗಬೇಕು. ತನಿಖೆ ನಡೆಸಿ ಬಾಲಕನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸೋದಾಗಿ ಸ್ಥಳೀಯರು ಕೂಡ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:56 pm, Tue, 28 April 26

Source link

ಗುಂಡ್ಲುಪೇಟೆಯಲ್ಲಿ ಫ್ಯಾಮಿಲಿ ಜೊತೆ ಯೂನಿಫಾರ್ಮ್‌ನಲ್ಲಿ ಶೋಕಿ; ಇನ್ಸ್‌ಪೆಕ್ಟರ್ ಜೈ ಕುಮಾರ್ ವಿಡಿಯೋ ವೈರಲ್ – Kannada News | Gundlepet Police Controversy: CPI Jai Kumar’s Family Trip in Uniform, Buffer Zone Violation

ಚಾಮರಾಜನಗರ, ಏ.28: ಕಾನೂನು ಪಾಲಿಸಬೇಕಾದ ಅಧಿಕಾರಿಯೇ ನಿಯಮಗಳನ್ನು ಗಾಳಿಗೆ ತೂರಿ ಶೋಕಿ ಮಾಡುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ (CPI) ಜೈ ಕುಮಾರ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಪೊಲೀಸ್ ಯೂನಿಫಾರ್ಮ್‌ನಲ್ಲಿಯೇ ಓಪನ್ ಜೀಪ್‌ನಲ್ಲಿ ಸುತ್ತಾಡಿ ಈಗ ಸುದ್ದಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಊಟಿ ರಸ್ತೆಯ ಬಳಿಯಿರುವ ಇಕ್ರಮ್ ಸಿದ್ದಿಕಿ ಫಾರ್ಮ್ ಹೌಸ್ ಸುತ್ತಮುತ್ತ ಇನ್ಸ್‌ಪೆಕ್ಟರ್ ಜೈ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಬಿಂದಾಸ್ ಆಗಿ ರೌಂಡ್ಸ್ ಹಾಕಿದ್ದಾರೆ. ಈ ಪ್ರದೇಶವು ಬಫರ್ ಝೋನ್ (ಕಾಡಂಚಿನ ಪ್ರದೇಶ) ವ್ಯಾಪ್ತಿಗೆ ಬರುತ್ತದೆ. ಕೇವಲ ಫ್ಯಾಮಿಲಿ ಜೊತೆ ಸುತ್ತಾಡಿದ್ದು ಮಾತ್ರವಲ್ಲದೆ, ಆ ವಿಡಿಯೋಗೆ ಸಖತ್ ಬಿಲ್ಡಪ್ ನೀಡುವ ಸಾಂಗ್ ಏಡಿಟ್​​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಪೊಲೀಸ್ ಸಮವಸ್ತ್ರದ ಘನತೆಯನ್ನು ಮರೆತು, ಕಾಡಂಚಿನ ಪ್ರದೇಶದಲ್ಲಿ ಶೋಕಿ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸ್ ಇಲಾಖೆಯ ವಾಹನ ಮತ್ತು ಸಮವಸ್ತ್ರವನ್ನು ವೈಯಕ್ತಿಕ ಪ್ರಚಾರಕ್ಕೆ ಹಾಗೂ ಫ್ಯಾಮಿಲಿ ಪ್ರವಾಸಕ್ಕೆ ಬಳಸಿಕೊಂಡಿರುವ ಇನ್ಸ್‌ಪೆಕ್ಟರ್ ನಡೆಗೆ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗಿ ಭದ್ರತೆ ನಡುವೆ 5 ಬಾರಿ ಏಮ್ಸ್​ ಆಸ್ಪತ್ರೆಗೆ ಭೇಟಿ ನೀಡಿದ ಮುಂಬೈ ದಾಳಿಯ ಆರೋಪಿ ರಾಣಾ – Kannada News | 26/11 attack accused Tahawwur Rana visits 5 times to AIIMS amid tight security

ನವದೆಹಲಿ, ಏಪ್ರಿಲ್ 28: ಮುಂಬೈನ 26/11 ಭಯೋತ್ಪಾದಕ ದಾಳಿಯ ಆರೋಪಿ ತಹಾವೂರ್ ರಾಣಾ (Tahawwur Rana) ಬಿಗಿ ಭದ್ರತೆಯ ನಡುವೆ 5 ಬಾರಿ AIIMSಗೆ ಭೇಟಿ ನೀಡಿದ್ದಾರೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಕೈವಾಡಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ನಲ್ಲಿ ಅಮೆರಿಕದಿಂದ ಗಡಿಪಾರಾಗಿದ್ದ ತಹಾವೂರ್ ರಾಣಾ, ವೈದ್ಯಕೀಯ ಚಿಕಿತ್ಸೆಗಾಗಿ ಕಳೆದ 1 ತಿಂಗಳಲ್ಲಿ 5 ಬಾರಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು, ತಹಾವೂರ್ ರಾಣಾ ಏಮ್ಸ್​ಗೆ ಮೊದಲ ಬಾರಿ ಮಾರ್ಚ್ 31ರಂದು ಭೇಟಿ ನೀಡಿದ್ದರು. ನಂತರ ಏಪ್ರಿಲ್ 6, ಏಪ್ರಿಲ್ 7, ಏಪ್ರಿಲ್ 20 ಮತ್ತು ಏಪ್ರಿಲ್ 21ರಂದು 4 ಬಾರಿ ಭೇಟಿ ನೀಡಿದ್ದಾರೆ. ಅವರು ಆರೋಗ್ಯ ತಪಾಸಣೆಗೆ ಬರುವಾಗ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ತಿಹಾರ್ ಜೈಲಿನಲ್ಲಿರುವ ಕೈದಿಗಳನ್ನು ನ್ಯಾಯಾಲಯ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ಜವಾಬ್ದಾರಿಯನ್ನು ಎನ್‌ಎವಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮಾಟಮಂತ್ರದ ಶಂಕೆ ಒಡಹುಟ್ಟಿದವನನ್ನು ಕೊಂದು, ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

“ಪ್ರತಿ ಬಾರಿಯೂ, ರಾಣಾ ಅವರನ್ನು ಹೃದ್ರೋಗ, ಸಾಮಾನ್ಯ ಔಷಧ, ಮೂತ್ರಪಿಂಡಶಾಸ್ತ್ರ ವಿಭಾಗಗಳು ಮತ್ತು ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಭಾರೀ ಪೊಲೀಸ್ ಬೆಂಗಾವಲಿನಡಿಯಲ್ಲಿ ಸಾಗಿಸಲಾಗುತ್ತಿತ್ತು. ಕೆಲವು ಗಂಟೆಗಳ ಕಾಲ ಪರೀಕ್ಷೆ ನಡೆಸಿದ ನಂತರ ಅದೇ ದಿನ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಹಲವು ಬಾರಿ ತಪಾಸಣೆ ಮತ್ತು ಪರೀಕ್ಷೆಗಳನ್ನು ನಡೆಸಿದ ನಂತರ ಮೇ 4ರಂದು ಅವರಿಗೆ ವೈದ್ಯಕೀಯ ಚಿಕಿತ್ಸೆಗೆ ದಿನಾಂಕ ಸಿಕ್ಕಿದೆ. ಅವರ ಆರೋಗ್ಯ ಸ್ಥಿತಿಯ ಕುರಿತು ದೆಹಲಿ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಸಂಪೂರ್ಣ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು.

ಇದನ್ನೂ ಓದಿ: ಗಂಡನ ತಂಗಿಯನ್ನೇ ಆತನ ಎರಡನೇ ಹೆಂಡತಿಯೆಂದ ಪತ್ನಿ; ವಿಚ್ಛೇದನಕ್ಕಾಗಿ ಎಷ್ಟೆಲ್ಲ ನಾಟಕ!

65 ವರ್ಷದ ರಾಣಾ ಅವರನ್ನು ಪ್ರಸ್ತುತ ತಿಹಾರ್ ಜೈಲು ಸಂಖ್ಯೆ 2ರಲ್ಲಿ ಇರಿಸಲಾಗಿದೆ. ತಿಹಾರ್ ಜೈಲಿನಲ್ಲಿರುವ ಹೆಚ್ಚಿನ ಅಪಾಯದ ಕೈದಿಗಳಿಗಾಗಿ ಮೀಸಲಾದ ವಾರ್ಡ್‌ನಲ್ಲಿ ಅವರನ್ನು ಇರಿಸಲಾಗಿದೆ. ಇದಲ್ಲದೆ, ಅವರನ್ನು ಇರಿಸಲಾಗಿರುವ ಬ್ಲಾಕ್ ಜೈಲು ಸಂಕೀರ್ಣದೊಳಗಿನ ಇತರರಿಗಿಂತ ಕಡಿಮೆ ಜನದಟ್ಟಣೆಯಿಂದ ಕೂಡಿದೆ. 26/11 ಲಷ್ಕರ್-ಎ-ತೈಬಾ ಸ್ಕೌಟ್ ಡೇವಿಡ್ ಕೋಲ್ಮನ್ ಹೆಡ್ಲಿಯ ಆಪ್ತ ಸಹಚರ ರಾಣಾ ಅವರನ್ನು ಕರೆತರಲಾಯಿತು. ಏಪ್ರಿಲ್ 10, 2025ರಂದು ಭಾರತಕ್ಕೆ ಅಮೆರಿಕದಿಂದ ಹಸ್ತಾಂತರ ಮಾಡಲಾಯಿತು. ಮುಂಬೈನಲ್ಲಿ 26/11 ದಾಳಿಗೆ ಕುಮ್ಮಕ್ಕು ನೀಡಿದ ಆರೋಪ ಅವರ ಮೇಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಜಾಗತಿಕ ಅನಿಮೆ ಅವಾರ್ಡ್ಸ್ 2026: ಟೋಕಿಯೋದಲ್ಲಿ ಮಿಂಚಲಿರುವ ರಶ್ಮಿಕಾ ಮಂದಣ್ಣ – Kannada News | Rashmika Mandanna to present at 10th Global Anime Awards 2026 Tokyo

ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಅದಕ್ಕೆ ಹಲವು ಉದಾಹರಣೆಗಳು ಸಿಗುತ್ತಿವೆ. ಜಪಾನ್‌ನ ಟೋಕಿಯೋದಲ್ಲಿ ಮೇ 23ರಂದು ನಡೆಯಲಿರುವ ಪ್ರತಿಷ್ಠಿತ 10ನೇ ಗ್ಲೋಬಲ್ ಅನಿಮೆ ಅವಾರ್ಡ್ಸ್ (Global Anime Awards) ಸಮಾರಂಭದಲ್ಲಿ ರಶ್ಮಿಕಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಹೆಮ್ಮ ತಂದಿದೆ.

ರಶ್ಮಿಕಾ ಮಂದಣ್ಣ ಅವರು ಈ ಹಿಂದೆ 2024ರಲ್ಲಿ ಈ ಅನಿಮೆ ಅವಾರ್ಡ್ಸ್‌ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಈ ಜಾಗತಿಕ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಭಾರತೀಯ ಚಿತ್ರರಂಗದ ಮೊದಲ ನಟಿಯರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಎರಡನೇ ಬಾರಿಗೆ ಅವರಿಗೆ ಈ ಆಹ್ವಾನ ಬಂದಿರುವುದು ಅವರ ಜಾಗತಿಕ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಈ ಬಾರಿ ಪ್ರಶಸ್ತಿ ಪ್ರದಾನ ಮಾಡುವವರ ಪಟ್ಟಿಯಲ್ಲಿ ರಶ್ಮಿಕಾ ಅವರ ಜೊತೆಗೆ ಖ್ಯಾತ ಗಾಯಕ ದಿ ವೀಕೆಂಡ್ ಸೇರಿದಂತೆ ವಿಶ್ವದ ವಿವಿಧ ದೇಶಗಳ ಪ್ರಸಿದ್ಧ ತಾರೆಯರು ಇರಲಿದ್ದಾರೆ. ಇದು ಸಿನಿಮಾ, ಸಂಗೀತ ಮತ್ತು ಅನಿಮೇಷನ್ ಲೋಕದ ಸಂಗಮಕ್ಕೆ ಸಾಕ್ಷಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಇರುವ ಹಲವು ಗಣ್ಯರ ಜೊತೆಗೆ ರಶ್ಮಿಕಾ ಮಂದಣ್ಣ ಅವರಿಗೂ ಆಹ್ವಾನ ಬಂದಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಅವರಿಗೆ ಮೊದಲಿನಿಂದಲೂ ‘ಅನಿಮೆ’ ಎಂದರೆ ಪಂಚಪ್ರಾಣ. ಅನಿಮೆ ಕಥೆಗಳು ಮತ್ತು ಅಲ್ಲಿನ ಪಾತ್ರಗಳ ಬಗ್ಗೆ ಅವರು ಹಲವು ಬಾರಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಗಿಷ್ಟವಾದ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

ಇದನ್ನೂ ಓದಿ: ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ

ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ‘ಮೈಸಾ’, ‘ರಣಬಾಲಿ’ ಮುಂತಾದ ಸಿನಿಮಾಗಳು ಈಗ ಅವರ ಕೈಯಲ್ಲಿವೆ. ಈ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಲುಕ್ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ: ಹಣಕ್ಕೆ ಬೇಡಿಕೆ ಇಟ್ಟಿದ್ದರಾ ಪೊಲೀಸರು? – Kannada News | Student Dies After Police Allegedly Demand Money in Ganja Case

ಧಾರವಾಡ, ಏಪ್ರಿಲ್​​ 28: ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಗಿರಿನಗರದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ನಿವಾಸಿ ಆದಿತ್ಯ ಮ್ಯಾಗೇರಿ(20) ನೇಣಿಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಗಿರಿನಗರ ಬಡಾವಣೆಯಲ್ಲಿ ರೂಮ್ ಮಾಡಿಕೊಂಡಿದ್ದ ವಿದ್ಯಾರ್ಥಿ ಆದಿತ್ಯಗೆ 2 ದಿನಗಳಿಂದ ಪೊಲೀಸರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಗಾಂಜಾ ಸೇವನೆ ಆರೋಪದಲ್ಲಿ ಆದಿತ್ಯ ಸೇರಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ನೆಗೆಟಿವ್​ ವರದಿ ಬಂದಿದ್ದರಿಂದ ಆದಿತ್ಯನನ್ನು ಬಿಟ್ಟು ಕಳುಹಿಸಲಾಗಿತ್ತು. ನಂತರ ಹಣ ನೀಡುವಂತೆ ಪೊಲೀಸರು ಆದಿತ್ಯನಿಗೆ ಕಾಡುತ್ತಿದ್ದ ಆರೋಪವನ್ನು ಮೃತ ವಿದ್ಯಾರ್ಥಿ ಆದಿತ್ಯ ತಾಯಿ ಕವಿತಾ ಮಾಡಿದ್ದಾರೆ. ಪೊಲೀಸರು ಹಣ ಕೇಳಿದ್ದರಿಂದ ಆತಂಕಗೊಂಡಿದ್ದ ವಿದ್ಯಾರ್ಥಿ ಆದಿತ್ಯ ನಿನ್ನೆ ತಾಯಿಯ ಬಳಿ 2 ಸಾವಿರ ಹಣ ಕೇಳಿದ್ದ. ಆದರೆ ಆಕೆ ಹಣ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಆದಿತ್ಯ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗಂಧದ ನಾಡಿನ ಸೋಪಿಗೆ ಆಂಧ್ರ-ತೆಲಂಗಾಣದಲ್ಲಿ ಭಾರಿ ಕ್ರೇಜ್: ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕಕ್ಕಿಂತ ನೆರೆ ರಾಜ್ಯಗಳಲ್ಲೇ ಹೆಚ್ಚು ಮಾರಾಟ! – Kannada News | Mysore Sandal Soap: M.B. Patil Reveals KSDLs Significant Financial Achievements

ಬೆಂಗಳೂರು, ಏ.28: ಕರ್ನಾಟಕದ ಐಕಾನಿಕ್ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆ.ಎಸ್.ಡಿ.ಎಲ್) ಇತ್ತೀಚೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಮೈಸೂರು ರಾಜರ ಕಾಲದಲ್ಲಿ ಆರಂಭವಾದ ಈ ಸಂಸ್ಥೆ ಇಂದು ಹಲವು ಉದ್ಯಮಗಳಲ್ಲಿ ಮೇಲ್ಪಂತಿಯಾಗಿದೆ. ಪ್ರಸ್ತುತ ಕೆ.ಎಸ್.ಡಿ.ಎಲ್‌ನ ವಾರ್ಷಿಕ ವಹಿವಾಟು 2 ಸಾವಿರ ಕೋಟಿ ರೂಪಾಯಿ ತಲುಪಿದೆ. ರಾಜ್ಯವಾರು ಮಾರಾಟದ ಅಂಕಿಅಂಶಗಳನ್ನು ನೀಡಿದ ಅವರು, ಕರ್ನಾಟಕ ಮತ್ತು ಗೋವಾದಲ್ಲಿ ಶೇ. 14 ರಷ್ಟು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಶೇ. 45 ರಷ್ಟು, ಮತ್ತು ದೆಹಲಿಯಲ್ಲಿ ಶೇ. 6 ರಷ್ಟು ಮಾರಾಟವಿದೆ ಎಂದು ಹೇಳಿದರು. ಈ ಹಿಂದೆ ಇ-ಕಾಮರ್ಸ್‌ನಲ್ಲಿ ಸೊನ್ನೆ ಮಟ್ಟದಲ್ಲಿದ್ದ ಕೆ.ಎಸ್.ಡಿ.ಎಲ್ ಈಗ 500 ಕೋಟಿ ರೂಪಾಯಿ ವಹಿವಾಟು ತಲುಪಿದೆ. ಡೀಲರ್ ನೆಟ್‌ವರ್ಕ್ ಅನ್ನು 471 ರಿಂದ 1000ಕ್ಕೂ ಹೆಚ್ಚು ಮಾಡುವ ಮೂಲಕ ವಿಸ್ತರಿಸಲಾಗಿದೆ. ತಿಂಗಳಿಗೆ 20-30 ಕೋಟಿ ರೂಪಾಯಿ ವ್ಯವಹಾರ ನಡೆಸುವ ಈ ಸಂಸ್ಥೆಯ ಯಶಸ್ಸಿಗೆ ಕಾರ್ಮಿಕರು, ಸಿಬ್ಬಂದಿ ಮತ್ತು ಅಧ್ಯಕ್ಷರಾದ ಸಿ.ಎಸ್. ನಾಡಗೌಡರ ಕೊಡುಗೆ ಅಪಾರ ಎಂದು ಪಾಟೀಲ್ ಶ್ಲಾಘಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ – Kannada News | Virat Kohli Creates New World Record With 9000 Runs

ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಯಾವುದೇ ಬ್ಯಾಟರ್ ಟಿ20 ಕ್ರಿಕೆಟ್​ನಲ್ಲಿ ಒಂದೇ ತಂಡದ ಪರ ಕಣಕ್ಕಿಳಿದು 9 ಸಾವಿರ ರನ್​ಗಳಿಸಿಲ್ಲ. ಈ ಪಟ್ಟಿಯಲ್ಲಿ 9012 ರನ್​ಗಳೊಂದಿಗೆ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್​) 6,013 ರನ್​ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಜೇಮ್ಸ್ ವಿನ್ಸ್ (ಹ್ಯಾಂಪ್​ಶೈರ್) 5,934 ರನ್​ಗಳೊಂದಿಗೆ ತೃತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Source link

ಮೂರೇ ದಿನಕ್ಕೆ 2100 ಕೋಟಿ ಗಳಿಸಿದ ‘ಮೈಖಲ್’: ಭಾರತದಲ್ಲಿ ಎಷ್ಟು? – Kannada News | Michael movie collection report, how much in India

ಭಾರತದ ಹಲವಾರು ಸಿನಿಮಾಗಳು 100 ಕೋಟಿ ಗಳಿಕೆ ಮಾಡಲು ಒದ್ದಾಡುತ್ತಿವೆ. ಸೂಪರ್ ಹಿಟ್ ಸಿನಿಮಾ ಸಹ 500 ಕೋಟಿ ಗಳಿಸುವಷ್ಟರಲ್ಲಿ ಹೆಣಗಾಡುತ್ತದೆ. ಇತ್ತೀಚೆಗೆ ಬ್ಲಾಕ್ ಬಸ್ಟರ್ ಆದ ‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿ ಒಂದೂವರೆ ತಿಂಗಳಿಗೆ ಸುಮಾರು 1800 ಕೋಟಿ ಗಳಿಕೆ ಮಾಡಿದೆ. ಆದರೆ ಇಲ್ಲೊಂದು ಹಾಲಿವುಡ್ ಸಿನಿಮಾ, ಅದೂ ಬಿಡುಗಡೆ ಆದ ಬಳಿಕ ಬಹುತೇಕ ಋಣಾತ್ಮಕ ವಿಮರ್ಶೆಗಳನ್ನೇ ಪಡೆಯುತ್ತಿರುವ ಸಿನಿಮಾ ಬಿಡುಗಡೆ ಆದ ಮೂರೇ ದಿನಗಳಲ್ಲಿ 2100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.

ವಿಶ್ವದ ಡ್ಯಾನ್ಸಿಂಗ್ ಲಿಜೆಂಡ್ ಮೈಖಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ಏಪ್ರಿಲ್ 24 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಯ್ತು. ಮೈಖಲ್ ಜಾಕ್ಸನ್ ಜೀವನ ಆಧರಿಸಿದ ಸಿನಿಮಾ ಆದ್ದರಿಂದ ಭಾರಿ ಕುತೂಹಲವನ್ನು ಈ ಸಿನಿಮಾ ಹುಟ್ಟುಹಾಕಿತ್ತು. ಸಿನಿಮಾನಲ್ಲಿ, ಮೈಖಲ್ ಜಾಕ್ಸನ್ ಅವರ ಹತ್ತಿರದ ಸಂಬಂಧಿಯೇ ಆಗಿರುವ ಜಾಫರ್ ಜಾಕ್ಸನ್ ಅವರು ಮೈಖಲ್ ಜಾಕ್ಸನ್ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಬಿಡುಗಡೆ ಆದ ಮೂರು ದಿನಗಳಲ್ಲಿ 220 ಮಿಲಿಯನ್​​ಗೂ ಹೆಚ್ಚು ಮೊತ್ತ ಅಂದರೆ ಭಾರತದ ರೂಪಾಯಿಗಳ ಲೆಕ್ಕದಲ್ಲಿ 2100 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಇದು, ಬಯೋಪಿಕ್ ಆಧರಿಸಿದ ಸಿನಿಮಾ ಒಂದು ಗಳಿಸಿರುವ ಬಲು ದೊಡ್ಡ ಮೊತ್ತವಾಗಿದೆ. ಈ ಹಿಂದೆ ಖ್ಯಾತ ಗಾಯಕ ಬೊಹಿಮಿಹೆನ್ ರ್ಯಾಪಸ್​ಡಿ (ಪ್ರಿನ್ಸ್) ಜೀವನ ಆಧರಿಸಿದ ಸಿನಿಮಾ 141 ಮಿಲಿಯನ್ ಡಾಲರ್ 1300 ಕೋಟಿಗೂ ಹೆಚ್ಚು ಮೊತ್ತವನ್ನು ಮೊದಲ ವಾರ ಗಳಿಸಿತ್ತು. ಆ ದಾಖಲೆಯನ್ನು ‘ಮೈಖಲ್’ ಸಿನಿಮಾ ಮೊದಲ ಮೂರು ದಿನದಲ್ಲೇ ಮುರಿದಿದೆ.

ಇದನ್ನೂ ಓದಿ:ಈ ಸಿನಿಮಾ ದಾಖಲೆ ಮುರಿಯೋದು ‘ಧುರಂಧರ್ 2’ ಚಿತ್ರಕ್ಕೆ ಅಸಾಧ್ಯ?

ಸಿನಿಮಾದ ಬಗ್ಗೆ ಋಣಾತ್ಮಕ ವಿಮರ್ಶೆಗಳು ವ್ಯಕ್ತವಾಗಿವೆ. ಲಿಜೆಂಡರಿ ವ್ಯಕ್ತಿಯ ಬಗ್ಗೆ ಇನ್ನೂ ಒಳ್ಳೆಯ ರೀತಿಯಲ್ಲಿ ಸಿನಿಮಾ ಮಾಡಬಹುದಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಇದೆಲ್ಲದರ ನಡುವೆಯೂ ಸಹ ಸಿನಿಮಾ ಭಾರಿ ಕಲೆಕ್ಷನ್ ಮಾಡುತ್ತಿದೆ. ಇನ್ನು ಈ ಸಿನಿಮಾ ಭಾರತದಲ್ಲಿ ಸಹ ತಮ್ಮ ಮ್ಯಾಜಿಕ್ ಮಾಡುತ್ತಿದೆ. ‘ಧುರಂಧರ್ 2’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳ ಪ್ರಬಲ ಪೈಪೋಟಿಯ ನಡುವೆಯೂ ಸಹ ‘ಮೈಖಲ್’ ಸಿನಿಮಾ ಮೂರು ದಿನಗಳಲ್ಲಿ ಸುಮಾರು 25 ಕೋಟಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್, ಅನುಪಮ್ ಖೇರ್ ಇನ್ನೂ ಕೆಲವು ಖ್ಯಾತನಾಮರು ‘ಮೈಖಲ್’ ಸಿನಿಮಾ ವೀಕ್ಷಿಸಿದ್ದಾರೆ.

ಮೈಖಲ್ ಜಾಕ್ಸನ್ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದು, ಸಿನಿಮಾ ಸಾಧಾರಣವಾಗಿದ್ದರೂ ಸಹ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ ಹಾಗಾಗಿ ಈ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಭಾರತದಲ್ಲೂ ಸಹ ಉತ್ತಮ ಗಳಿಕೆಯ ಮುನ್ಸೂಚನೆಯನ್ನು ನೀಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘3 ಈಡೀಯಟ್ಸ್’ ಚಿತ್ರಕ್ಕೆ ಬರ್ತಿದೆ ಸೀಕ್ವೆಲ್; ಘೋಷಿಸಿದ ಆಮಿರ್ ಖಾನ್ – Kannada News | 3 Idiots Sequel Confirmed: Aamir Khan Announces Rajkumar Hirani to Direct

2009ರಲ್ಲಿ ಬಂದ ‘3 ಈಡಿಯಟ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಲಿವುಡ್​​ನಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಈಗಿನ ಕಾಲದಲ್ಲಿ ಈ ಚಿತ್ರ ತೆರೆಗೆ ಬಂದಿದ್ದರೆ ಸಿನಿಮಾ ಸುಮಾರು ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುತ್ತಿತ್ತೇನೋ. ಈಗ ಆಮಿರ್ ಖಾನ್ ಅವರು ‘3 ಈಡಿಯಟ್ಸ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿದೆ ಎಂದಿದ್ದಾರೆ. ರಾಜ್​​ಕುಮಾರ್ ಹಿರಾನಿ ಅವರು ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ.

ರಾಜ್​​ಕುಮಾರ್ ಹಿರಾನಿಗೆ ಸಾಕಷ್ಟು ಮೈಲೇಜ್ ತಂದುಕೊಟ್ಟ ಚಿತ್ರ ಎಂದರೆ ಅದು ‘3 ಈಡಿಯಟ್ಸ್’ ಸಿನಿಮಾ. ಈ ಚಿತ್ರದಲ್ಲಿ ಆಮಿರ್ ಖಾನ್, ಆರ್​ ಮಾಧವನ್, ಶರ್ಮಣ್ ಜೋಶಿ, ಕರೀನಾ ಕಪೂರ್ ಮೊದಲಾದವರು ನಟಿಸಿದ್ದರು.ಈ ಸಿನಿಮಾ ರಿಲೀಸ್ ಆಗಿ 2 ದಶಕ ಪೂರೈಸುತ್ತಾ ಬಂದರೂ ಇದು ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂಬ ಚರ್ಚೆ ಸಾಕಷ್ಟು ಮೊದಲಿನಿಂದಲೂ ಇತ್ತು. ಈಗ ಅದು ನಿಜವಾಗಿದೆ.

ನಿರ್ದೇಶಕ ರಾಜ್​​ಕುಮಾರ್ ಹಿರಾನಿ ಹಾಗೂ ಬರಹಗಾರ ಅಭಿಜಾತ್ ಜೋಶಿ ಅವರು ‘3 ಈಡಿಯಟ್ಸ್’ ಸೀಕ್ವೆಲ್ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದಾರೆ. ಈ ಬಾರಿಯೂ ಚಿತ್ರದ ಕಥೆ ಕಾಲೇಜ್​​ನಲ್ಲಿ ಸಾಗುತ್ತದೆಯೇ ಅಥವಾ ಬೇರೆ ವಿಷಯವನ್ನು ಹೇಳಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ದಾದಾ ಸಾಹೇಬ್ ಫಾಲ್ಕೆ’ ಮೇಲೂ ಆಮಿರ್ ಖಾನ್ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರೋ ಅವರು, ‘ದಾದಾ ಸಾಹೇಬ್ ಫಾಲ್ಕೆ ಚಿತ್ರ ಸಾಕಷ್ಟು ಸ್ಫೂರ್ತಿದಾಯಕ. ರಾಜು (ರಾಜ್​​ಕುಮಾರ್ ಹಿರಾನಿ) ಅವರು ಇದರ ಮೇಲೆ ಕೆಲಸ ಮಾಡುತ್ತಿದ್ದಾರೆ. 3 ಡ್ರಾಫ್ಟ್​​ಗಳನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಸ್ಕ್ರಿಪ್ಟ್ ಬಗ್ಗೆ ಖುಷಿ ಇಲ್ಲ. ಮುಂದಿನ ದಿನಗಳಲ್ಲಿ ಪುನಃ ಬರೆಯಬಹುದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?

ರಾಜ್‌ಕುಮಾರ್ ಹಿರಾನಿ ಪ್ರಸ್ತುತ ‘3 ಈಡಿಯಟ್ಸ್’ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಆಮಿರ್ ಹೇಳಿದ್ದಾರೆ. ‘ನಾನು ಕಥೆಯನ್ನು ಕೇಳಿದ್ದೇನೆ ಮತ್ತು ಅದು ತುಂಬಾ ಚೆನ್ನಾಗಿ ಬಂದಿದೆ’ ಎಂದಿದ್ದಾರೆ ಆಮಿರ್ ಖಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link