Category Archives: Blog

Your blog category

IPL 2026: ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್; ವಿಡಿಯೋ ನೋಡಿ – Kannada News | Virat Kohli Shines with 81 as RCB Beats GT in IPL 2026; Bags MoM, Smart TV and Phone!

ಐಪಿಎಲ್ 2026 ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಈ ಆವೃತ್ತಿಯ ಐದನೇ ಗೆಲುವು ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಹೀಗಾಗಿ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಇದರ ಜೊತೆಗೆ ಅವರಿಗೆ ವಿಶೇಷ ಬಹುಮಾನ ನೀಡಲಾಗಿದೆ.

ವಾಸ್ತವವಾಗಿ ಪಂದ್ಯ ಶ್ರೇಷ್ಠ ವಿರಾಟ್ ಕೊಹ್ಲಿಗೆ ಆರ್‌ಸಿಬಿ ಡ್ರೆಸ್ಸಿಂಗ್ ಕೋಣೆಯಲ್ಲಿ ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್‌ಫೋನ್ ಸೇರಿದಂತೆ ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಲಾಯಿತು. ಈ ಪ್ರಶಸ್ತಿಗಳನ್ನು ಆರ್‌ಸಿಬಿ ಪ್ರಾಯೋಜಕರು ಪ್ರದಾನ ಮಾಡಿದ್ದು, ಇದರಲ್ಲಿ ಸುಮಾರು 40,000 ರೂ. ಬೆಲೆಯ 43 ಇಂಚಿನ LED ಸ್ಮಾರ್ಟ್ ಟಿವಿ. ಹಾಗೂ 45,000 ರೂ ಮೌಲ್ಯದ ಸ್ಮಾರ್ಟ್‌ಫೋನ್ ಕೊಹ್ಲಿಗೆ ಬಹುಮಾನವಾಗಿ ಸಿಕ್ಕಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಡಿದ ಕೊನೆಯ ಲೀಗ್ ಪಂದ್ಯ ಇದಾಗಿದ್ದರಿಂದ ಕೊಹ್ಲಿಯ ಇನ್ನಿಂಗ್ಸ್ ವಿಶೇಷವಾಗಿತ್ತು. ಈ ಅರ್ಧಶತಕದೊಂದಿಗೆ, ಕೊಹ್ಲಿ 328 ರನ್‌ಗಳೊಂದಿಗೆ ಐಪಿಎಲ್ 2026 ರಲ್ಲಿ ತಾತ್ಕಾಲಿಕವಾಗಿ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

Source link

ನಿಂಬೆ ರಸ ಹಚ್ಚುವುದರಿಂದ ನಿಜಕ್ಕೂ ಕೂದಲು ಬಿಳಿಯಾಗುತ್ತದೆಯೇ? ಸತ್ಯಾಸತ್ಯತೆ ತಿಳಿಯಿರಿ – Kannada News | Is it true that applying lemon juice turns hair white? know the truth behind it

ನಿಂಬೆ ಹಣ್ಣಿನಲ್ಲಿ (lemon) ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್‌, ಎಲೆಕ್ಟ್ರೋಲೈಟ್‌ ಅಂಶಗಳಿದ್ದು, ಇದು ದೇಹ ಮತ್ತು ಚರ್ಮವನ್ನು ಆರೋಗ್ಯಯುತವಾಗಿಡಲು ಸಹಕಾರಿ. ಇದೇ ಕಾರಣಕ್ಕೆ ನಿಂಬೆ ರಸವನ್ನು ಸೇವನೆ ಮಾಡಬೇಕು ಅನ್ನೋದು. ನಿಂಬೆ ರಸ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನಿಜ, ಆದ್ರೆ ನಿಂಬೆ ರಸವನ್ನು ಅಪ್ಪಿತಪ್ಪಿಯೂ ಕೂದಲಿಗೆ ಹಚ್ಚಬಾರದು. ಏಕೆಂದರೆ ನಿಂಬೆಯಲ್ಲಿರುವ ಆಮ್ಲೀಯ ಅಂಶವು ಕೂದಲನ್ನು ಬೇಗನೇ ಬಿಳಿಯಾಗಿಸುತ್ತದೆ ಎಂದು ಹಲವರು ಹೇಳುವುದುಂಟು. ಹಾಗಿದ್ದರೆ ನಿಜಕ್ಕೂ ನಿಂಬೆ ರಸ ಕೂದಲನ್ನು ಬಿಳಿಯಾಗಿಸುತ್ತಾ, ತಜ್ಞರು ಈ ಬಗ್ಗೆ ಏನೆನ್ನುತ್ತಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನಿಂಬೆ ರಸ ಹಚ್ಚಿದ್ರೆ ಕೂದಲು ಬಿಳಿಯಾಗುತ್ತಾ?

ತಜ್ಞರ ಪ್ರಕಾರ, ಕೂದಲಿಗೆ ನಿಂಬೆ ಹಚ್ಚುವುದರಿಂದ ಕೂದಲು ಬೇಗನೆ ಬಿಳಿಯಾಗುತ್ತದೆ ಎಂಬುದು ಮಿಥ್ಯ.  ನಿಂಬೆಯಲ್ಲಿರುವ ಆಮ್ಲೀಯ ಅಂಶ ಕೂದಲನ್ನು ಬಿಳಿಯಾಗಿಸಲು ಸಾಧ್ಯವಿಲ್ಲ. ನೆತ್ತಿಯ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ನಿಂಬೆ ರಸವನ್ನು ಬಳಸಬಹುದು. ಹೌದು ನಿಂಬೆ ರಸದಲ್ಲಿರುವ ಅಂಶಗಳು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ತಲೆಹೊಟ್ಟು ಮತ್ತು ಸೋಂಕುಗಳನ್ನು ನಿವಾರಿಸುತ್ತದೆ. ನಿಂಬೆ ರಸವು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಆದರೆ ನಿಂಬೆ ರಸವನ್ನು ಸರಿಯಾದ ರೀತಿಯಲ್ಲಿ ಹಚ್ಚುವುದು ತುಂಬಾನೇ ಮುಖ್ಯ.

ಕೂದಲಿಗೆ ನಿಂಬೆ ರಸ ಹಚ್ಚುವ ಸರಿಯಾದ ವಿಧಾನ ಯಾವುದು?

ತಜ್ಞರ ಪ್ರಕಾರ, ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹೇಗೆ ಹಚ್ಚಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ, ಅದು ಹಾನಿಯನ್ನುಂಟುಮಾಡಬಹುದು. ಯಾವಾಗಲೂ ನಿಮ್ಮ ಕೂದಲಿಗೆ ನೇರವಾಗಿ ನಿಂಬೆ ರಸವನ್ನು ಹಚ್ಚುವುದನ್ನು ತಪ್ಪಿಸಿ. ನೀವು ನಿಂಬೆ ರಸವನ್ನು ಎಣ್ಣೆ ಅಥವಾ ಅಲೋವೆರಾದಂತಹ ಯಾವುದನ್ನಾದರೂ ಬೆರೆಸಿ ಹಚ್ಚಬಹುದು.

  • ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಕೂದಲಿನ ಸೋಂಕು ಮತ್ತು ತಲೆಹೊಟ್ಟು ನಿವಾರಿಸುತ್ತದೆ. ಇದಕ್ಕಾಗಿ, ನಿಂಬೆ ರಸವನ್ನು ತೆಂಗಿನಕಾಯಿ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಬಹುದು.
  • ನಿಂಬೆ ರಸವನ್ನು ಹರಳೆಣ್ಣೆ ಜೊತೆ ಬೆರೆಸಿ ಕೂದಲಿಗೆ ಹಚ್ಚಬಹುದು. 3-4 ಹನಿ ನಿಂಬೆ ರಸವನ್ನು ಒಂದು ಟೀ ಚಮಚ ಕ್ಯಾಸ್ಟರ್ ಆಯಿಲ್ ಜೊತೆ ಬೆರೆಸಿ ಕೂದಲಿಗೆ ಹಚ್ಚಿ.
  • ನಿಂಬೆ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಅದನ್ನು ನಿಮ್ಮ ನೆತ್ತಿಗೆ ಹಚ್ಚಿ ಅರ್ಧ ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
  • ಮೆಂತ್ಯ ಪೇಸ್ಟ್ ಅನ್ನು ನಿಂಬೆ ರಸದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಇದು ತಲೆಹೊಟ್ಟು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.
  • ತಲೆಹೊಟ್ಟು, ಕಿರಿಕಿರಿ ಮತ್ತು ಶುಷ್ಕತೆಯನ್ನು ತೊಡೆದುಹಾಕಲು ನಿಮ್ಮ ಶಾಂಪೂಗೆ ನಿಂಬೆ ರಸವನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: ಊಟವಾದ ತಕ್ಷಣ ಮಾಡುವ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು

ಕೂದಲಿಗೆ ನಿಂಬೆ ರಸ ಹಚ್ಚುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:

  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ನೇರವಾಗಿ ಹಚ್ಚುವುದನ್ನು ನೀವು ತಪ್ಪಿಸಬೇಕು, ಏಕೆಂದರೆ ಇದು ಕೂದಲಿಗೆ ಹಾನಿಯನ್ನುಂಟುಮಾಡಬಹುದು.
  • ಪ್ರತಿದಿನ ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚುವುದನ್ನು ತಪ್ಪಿಸಿ, ಏಕೆಂದರೆ ಇದು ತುರಿಕೆಗೆ ಕಾರಣವಾಗಬಹುದು.
  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚುವ ಮೊದಲು ಯಾವಾಗಲೂ ಪ್ಯಾಚ್ ಟೆಸ್ಟ್ ಮಾಡಿ, ಏಕೆಂದರೆ ಅದು ನಿಮ್ಮ ನೆತ್ತಿಯನ್ನು ಕೆರಳಿಸಬಹುದು.
  • ನಿಮ್ಮ ಕೂದಲು ಮತ್ತು ನೆತ್ತಿಗೆ ನಿಂಬೆ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಹಚ್ಚುವುದನ್ನು ತಪ್ಪಿಸಿ, ಏಕೆಂದರೆ ಇದು ನೆತ್ತಿ ಒಣಗಲು ಕಾರಣವಾಗಬಹುದು.
  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚಲು ಬಯಸಿದರೆ, ನೀವು ಪ್ರತಿ 15-20 ದಿನಗಳಿಗೊಮ್ಮೆ ಹಚ್ಚಿದರೆ ಸಾಕು. ನೆತ್ತಿಯ ಸಮಸ್ಯೆ ಇದ್ದರೆ, ತಜ್ಞರ ಸಲಹೆಯ ಮೇರೆಗೆ ಮಾತ್ರ ನಿಂಬೆ ರಸವನ್ನು ಬಳಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: 3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ – Kannada News | Muzaffarnagar Monkey’s Viral ‘Mother’s Love’: Monkey Hugs Baby for Two Hours

ಉತ್ತರ ಪ್ರದೇಶದ ಮುಜಫರ್ ನಗರದ ಚರಥವಾಲ್ ಪಟ್ಟಣದಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವಿನ ವಿಶಿಷ್ಟ ಬಂಧವನ್ನು ಸಾರುವ ಅಪರೂಪದ ಘಟನೆಯೊಂದು ನಡೆದಿದೆ. ಸ್ಥಳೀಯ ನಿವಾಸಿ ತಹ್ಸೀನ್ ಎಂಬುವವರ ಮನೆಗೆ ನುಗ್ಗಿದ ಮಂಗವೊಂದು, ಅಲ್ಲಿನ ಮೂರು ತಿಂಗಳ ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ತನ್ನದೇ ಮಗು ಎಂಬಂತೆ ಸುಮಾರು ಎರಡು ಗಂಟೆಗಳ ಕಾಲ ಗಾಢವಾಗಿ ಅಪ್ಪಿಕೊಂಡಿದೆ. ಮಗುವನ್ನು ಯಾರಿಗೂ ಕೊಡದಂತೆ ಬಿಗಿಯಾಗಿ ಹಿಡಿದುಕೊಂಡ ಮಂಗನ ನಡವಳಿಕೆಯಿಂದ ಮನೆಯವರು ಮತ್ತು ನೆರೆಹೊರೆಯವರಲ್ಲಿ ಮಗುವಿನ ಸುರಕ್ಷತೆಯ ಬಗ್ಗೆ ತೀವ್ರ ಭಯ ವ್ಯಕ್ತವಾಗಿತ್ತು. ಆದರೆ, ಆ ಮಂಗ ಮಗುವಿಗೆ ಯಾವುದೇ ಅಪಾಯ ಮಾಡದೆ, ತಾಯಿಯಂತೆ ಮಮತೆಯಿಂದ ಮುದ್ದಾಡುತ್ತಿರುವ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ಅಂತಿಮವಾಗಿ ಮಗು ಸುರಕ್ಷಿತವಾಗಿ ಪೋಷಕರ ಕೈಸೇರಿದ್ದು, ಮಗುವಿನ ಮೇಲಿನ ಮಂಗನ ಈ ‘ಅಮ್ಮನ ಪ್ರೀತಿ’ಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮತ್ತೊಂದು ತಿರುವು ಪಡೆದ ಪಂಚಮಸಾಲಿ ಗುರುಪೀಠ ಸಂಘರ್ಷ: ಶ್ರೀಗಳಿಗೆ ಭಕ್ತರ ಆನೆಬಲ – Kannada News | Panchamasali Gurupeeth conflict takes another turn: devotees support Vachananda Swamiji

ದಾವಣಗೆರೆ, ಏಪ್ರಿಲ್​ 25: ವಚನಾಂದ ಸ್ವಾಮೀಜಿಯ (Vachananda Swamiji) ಸಂಘರ್ಷ ತೀವ್ರ ಸ್ವರೂಪ ಪಡೆದಿದೆ. ಮಠದಿಂದ ಉಚ್ಚಾಟನೆ ಆದರೂ ಹಠದಿಂದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸ್ವಾಮೀಜಿ ಶಕ್ತಿ ಪ್ರದರ್ಶನಕ್ಕೆ ನಿನ್ನೆ ಹರಿಹರ ಪಂಚಮಸಾಲಿ ಮಠ ವೇದಿಕೆ ಆಗಿತ್ತು. ಸ್ವಾಮೀಜಿಗೆ ಭಕ್ತರ ಬೆಂಬಲ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಟ್ರಸ್ಟಿನವರು, ಇದೀಗ ಲೆಕ್ಕ ನೀಡಲು ಮುಂದಾಗಿದ್ದಾರೆ. ಆದರೆ ರಾಜ್ಯಾದ್ಯಂತ ಭಕ್ತರನ್ನ ಕರೆಯಿಸಿ ಲೆಕ್ಕಾ ಕೊಡಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಸ್ವಾಮೀಜಿ ಹಾಗೂ ಧರ್ಮದರ್ಶಿ ಸಮಿತಿ ನಡುವಿನ ಸಂಘರ್ಷ ಮುಂದುವರೆದಿದೆ.

ಈ ಸಂಘರ್ಷಕ್ಕೆ ಅಸಲಿ ಕಾರಣವೇನು?

ಈ ಸಂಘರ್ಷಕ್ಕೆ ಮೂಲ ಕಾರಣ ಏಪ್ರಿಲ್ 13ರಂದು ನಡೆದ ಆ ಘಟನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠ. ಒಂದು ಕಡೆ ಲೆಕ್ಕ ಕೊಡಿ ಎಂದು ಭಕ್ತರು ಸಂಘರ್ಷಕ್ಕಿಳಿದಿದ್ದರು. ಇನ್ನೊಂದು ಕಡೆ ಟ್ರಸ್ಟನವರು ಪೊಲೀಸ್ ಭದ್ರತೆಯಲ್ಲಿ ಬಂದು ಸಭೆ ನಡೆಸಿ ಮಠದ ವಚನಾನಂದ ಸ್ವಾಮೀಜಿಯನ್ನ ಪೀಠದಿಂದ ಉಚ್ಛಾಟನೆ ಮಾಡಿದ್ದರು. ಇದೇ ವೇಳೆ ಸ್ವಾಮೀಜಿ ಹಾಗೂ ಪೊಲೀಸರ ನಡುವೆ ಸಂಘರ್ಷ ಉಂಟಾಗಿತ್ತು. ಸುಮಾರು 15 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಲೆಕ್ಕ ಕೊಡಿ ಎಂದು ಸ್ವಾಮೀಜಿ ಕಡೆ ಭಕ್ತರು ಆರೋಪಿಸಿದ್ದರು. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಠ ಬಿಟ್ಟು ಸ್ವಾಮೀಜಿ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಭಕ್ತರು ಸ್ವಾಮೀಜಿಯನ್ನ ಬಿಟ್ಟು ಕೊಡಲಿಲ್ಲ. ಹೀಗಾಗಿ ಸ್ವಾಮೀಜಿ ಮಠದಲ್ಲಿಯೇ ಪೂಜೆ ಮಾಡುತ್ತಾ, ಬಂದ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ಲೆಕ್ಕ ಕೊಡುತ್ತೇವೆ ಎಂದ ಟ್ರಸ್ಟಿಗಳು

ಇದೆಲ್ಲದರ ಮಧ್ಯೆ ನಿನ್ನೆ ಸುದ್ದಿಗೋಷ್ಠಿ ಮಾಡಿರುವ ಟ್ರಸ್ಟಿಗಳು, 2008ರಲ್ಲಿ ಮಠ ಆರಂಭವಾಗಿದೆ. ಅಲ್ಲಿಂದ 2026 ವರೆಗಿನ ಲೆಕ್ಕ ಕೊಡುತ್ತೇವೆ ಎಂದು ಹೇಳಿದ್ದಾರೆ. ಟ್ರಸ್ಟಿಗಳ ಈ ಹೇಳಿಕೆ ಸದ್ಯ ಅಚ್ಚರಿಗೆ ಕಾರಣವಾಗಿದೆ. ಆದರೆ ತರಾತುರಿಯಲ್ಲಿ ಲೆಕ್ಕ ಪಡೆಯಲ್ಲ. ಬದಲಿಗೆ ರಾಜ್ಯಾದ್ಯಂತ ಭಕ್ತರನ್ನ ಕರೆಯಿಸಿ ಲೆಕ್ಕಾ ಕೊಡಿ ಎಂಬ ಮಾತುಗಳು ಸ್ವಾಮೀಜಿ ಪರ ಭಕ್ತರಿಂದ ಕೇಳಿ ಬರುತ್ತಿವೆ.

ಇದನ್ನೂ ಓದಿ: ವಚನಾನಂದ ಸ್ವಾಮೀಜಿ, ಮಠದ ಟ್ರಸ್ಟ್​​ ನಡುವೆ ಹೊಸ ಸಂಘರ್ಷ: ಡಿಸಿ, ಎಸ್ಪಿಗೆ ದೂರು

ಒಟ್ಟಾರೆ ಸ್ವಾಮೀಜಿ ಹಾಗೂ ಧರ್ಮದರ್ಶಿ ಸಮಿತಿ ನಡುವೆ ಸಂಘರ್ಷ ಮುಂದುವರೆದಿದ್ದು, ಇಬ್ಬರು ಸಮಬಲದ ಹೋರಾಟ ನಡೆಸಿದ್ದಾರೆ. ಲೆಕ್ಕಾ ಕೊಡಿ ಅಂದರೆ ಸ್ವಾಮೀಜಿಯನ್ನೇ ಪೀಠದಿಂದ ಉಚ್ಛಾಟನೆ ಮಾಡಿದ್ದ ಧರ್ಮದರ್ಶಿ ಸಮಿತಿ ಇದೀಗ ರಾಗ ಬದಲಾಯಿಸಿದ್ದು, ಏಪ್ರಿಲ್​ 27ಕ್ಕೆ ಲೆಕ್ಕಾ ಕೊಡಲು ಮುಂದಾಗಿದೆ. ಆದರೆ ಇದನ್ನ ಒಪ್ಪಲು ಸ್ವಾಮೀಜಿ ಪರ ಭಕ್ತರು ಸಿದ್ಧಲಿಲ್ಲ. ರಾಜ್ಯಾದ್ಯಂತ ಎಷ್ಟು ಜನ ಭಕ್ತರು ಹಣ ಕೊಟ್ಟಿದ್ದು, ಅವರ ಪಟ್ಟಿ ಕೊಡಿ. ಮೇಲಾಗಿ ಲೆಕ್ಕ ಕೊಡುವ ಮೊದಲು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಪ್ರಕರಣ ನೀಡಿ ಎಂದು ಪಟ್ಟುಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಡಿಗೆ ಹಣವೇ ಗತಿ, ನಟನೆ ಬಿಟ್ಟು ಊರಿಗೆ ಹೋಗುವ ನಿರ್ಧಾರ: ಅವಕಾಶಗಳಿಲ್ಲ ಎಂದ ದಿಗಂತ್ – Kannada News | Diganth Manchale said he is not getting enough movie offers planning to quit acting

ನಟ ದಿಗಂತ್ (Diganth) ಕನ್ನಡ ಚಿತ್ರರಂಗದ ಬಲು ಜನಪ್ರಿಯ ನಟ. ಚಿತ್ರರಂಗಕ್ಕೆ ಕಾಲಿರಿಸಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಟಿ ಸಮಂತಾರ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಕನ್ನಡದಲ್ಲಿಯೂ ದಿಗಂತ್ ಅವರ ಹೊಸ ಸಿನಿಮಾ ‘ರುದ್ರ ಕಾಲ’ ಸೆಟ್ಟೇರಿದೆ. ಸಿನಿಮಾ ಮುಹೂರ್ತದಲ್ಲಿ ಕನ್ನಡ ಚಿತ್ರರಂಗ, ಇಲ್ಲಿನ ನಟರ ಪರಿಸ್ಥಿತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ದಿಗಂತ್, ತಮಗೆ ಸಹ ಅವಕಾಶಗಳ ಕೊರತೆ ಕಾಡುತ್ತಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವಾರು ನಿರ್ಮಾಪಕರು ಸಿನಿಮಾ ಮಾಡಲು ಭಯ ಪಡುತ್ತಿದ್ದಾರೆ. ಸಿನಿಮಾಗಳು ಗೆಲ್ಲದಂತೆ ಆಗಿವೆ. ಒಟಿಟಿಗಳಂತೂ ಕನ್ನಡ ಸಿನಿಮಾಗಳಿಗೆ ಯಾವ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ಸ್ವತಃ ನನಗೆ ಅವಕಾಶಗಳ ಕೊರತೆ ಎದುರಾಗಿದ್ದು, ನಟನೆ ಬಿಟ್ಟು ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳೋಣ ಎನಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ:ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

‘ಆರು ತಿಂಗಳ ಹಿಂದೆ ಎರಡು ನಿರ್ಮಾಪಕರು ಸಿನಿಮಾ ಮಾಡೋಣ ಎಂದು ಬಂದರು. ಆದರೆ ಅದಾದ ಮೇಲೆ ಇಲ್ಲ ಈಗ ಸಮಯ ಸರಿಯಾಗಿಲ್ಲ ಈಗ ಬೇಡ ಎಂದರು. ಯಾವ ಮಟ್ಟಿಗೆ ಪರಿಸ್ಥಿತಿ ಆಗಿದೆಯೆಂದರೆ. ನಂದಿ ಬೆಟ್ಟದ ಸಮೀಪ ಗೇಟೆಡ್ ಕಮ್ಯೂನಿಟಿಯಲ್ಲಿ ನನ್ನ ಒಂದು ಮನೆ ಇತ್ತು. ಅದನ್ನು ಬಾಡಿಗೆ ಕೊಟ್ಟೆ, ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವಂತಾಗಿತ್ತು. ತೀರ್ಥಹಳ್ಳಿಗೆ ವಾಪಸ್ಸಾಗಿ, ಅಲ್ಲಿ ಕೃಷಿ ಮಾಡೋಣ, ನಟನೆ ಸಾಕು ಎಂದು ನಿರ್ಧರಿಸಿದ್ದೆ’ ಎಂದು ದಿಗಂತ್ ಹೇಳಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆದರೆ ಇತ್ತೀಚೆಗೆ ಸಿನಿಮಾ ಮಾಡಲು ಮುಂದೆ ಬರುವವರ ಸಂಖ್ಯೆಯೇ ಕಡಿಮೆ ಆಗಿಬಿಟ್ಟಿದೆ. ಎಲ್ಲರಿಗೂ ಆತಂಕ ಇದೆ. ಚಿತ್ರರಂಗದಲ್ಲಿ ಯಾಕೆ ಯಶಸ್ಸಿನ ಸಂಖ್ಯೆ ಕಡಿಮೆ ಆಯ್ತೋ ತಿಳಿಯುತ್ತಿಲ್ಲ’ ಎಂದಿದ್ದಾರೆ. ದಿಗಂತ್ ಪ್ರಸ್ತುತ ‘ರುದ್ರ ಕಾಲ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನಲ್ಲಿ ಸಮಂತಾ ಋತ್ ಪ್ರಭು ಜೊತೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ತೆಲುಗಿನಲ್ಲಿ ತುಸು ಅವಕಾಶಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ ನಟ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವ ಅಭ್ಯಾಸವಿದ್ಯಾ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ – Kannada News | Walking on Empty Stomach in Hot Weather: Do’s and Don’ts

ದೇಶದ ಹಲವು ಭಾಗಗಳಲ್ಲಿ ಬೇಸಿಗೆ ಶಾಖ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡುವವರು ಕೆಲವು ಸಲಹೆಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಬೇಸಿಗೆ ಎಲ್ಲಾ ಸಮಯದ ಹಾಗಲ್ಲ. ಎಷ್ಟು ಕಾಳಜಿ ವಹಿಸಿದರೂ ಸಾಲುವುದಿಲ್ಲ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ವಾಕ್ (Walking) ಮಾಡುವುದು ಸುರಕ್ಷಿತವೇ, ಆರೋಗ್ಯ ತಜ್ಞರ ಅಭಿಪ್ರಾಯವೇನು, ಯಾರು ಹೆಚ್ಚು ಅಪಾಯದಲ್ಲಿದ್ದಾರೆ, ಹೀಗೆ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ವಾಕ್ ಸುರಕ್ಷಿತವೇ?

ತಜ್ಞರು ಹೇಳುವಂತೆ, ಇದು ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದವರು ಮತ್ತು ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಶನ್) ಇಲ್ಲದಿದ್ದರೆ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡಬಹುದು. ಆದರೆ, ಎಲ್ಲರಿಗೂ ಇದು ಸೂಕ್ತವಾಗಿರುವುದಿಲ್ಲ. ವಾಕ್ ಹೋದಾಗ ತುಂಬಾ ಆಯಾಸ, ದಣಿವು ಕಂಡುಬರುತ್ತಿದ್ದರೆ ವೈದ್ಯರ ಸಂಪರ್ಕ ಮಾಡಿ.

ಯಾರು ಎಚ್ಚರಿಕೆ ವಹಿಸಬೇಕು?

ಮಧುಮೇಹ (ಡಯಾಬಿಟೀಸ್) ಇರುವವರು ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದನ್ನು ತಪ್ಪಿಸಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಅಕಸ್ಮಾತ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ, ಇದು ತಲೆಸುತ್ತು ಅಥವಾ ದುರ್ಬಲತೆಯನ್ನು ಉಂಟುಮಾಡಬಹುದು. ಇಂತಹವರು ಬೆಳಿಗ್ಗೆ ಸ್ವಲ್ಪ ಪ್ರೋಟೀನ್ ಇರುವ ಆಹಾರ ಸೇವನೆ ಮಾಡಬೇಕು. ಉದಾಹರಣೆಗೆ ನೆನೆಸಿದ ಕಡಲೆ ತಿಂದು ವಾಕ್‌ಗೆ ಹೋಗುವುದು ಉತ್ತಮ.

ಇದನ್ನೂ ಓದಿ: ಬೆಳಗಿನ ನಡಿಗೆ ಅಥವಾ ಊಟದ ನಂತರದ ನಡಿಗೆ ಯಾವುದು ಉತ್ತಮ?

ಬೇಸಿಗೆಯಲ್ಲಿ ಏಕೆ ಹೆಚ್ಚಿನ ಜಾಗ್ರತೆ ಅಗತ್ಯ?

ಬೇಸಿಗೆಯಲ್ಲಿ ಹೆಚ್ಚು ಬೆವರು ಬರುತ್ತದೆ, ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿರುವಾಗ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ. ತಲೆನೋವು, ದಣಿವು ಮತ್ತು ಡಿಹೈಡ್ರೇಶನ್ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ವಾಕ್‌ಗೆ ಹೊರಡುವ ಮೊದಲು ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. ಜೊತೆಗೆ ಬೆಳಗ್ಗೆ 5ರಿಂದ 6 ಗಂಟೆಯೊಳಗೆ ವಾಕ್ ಮಾಡುವುದು ಉತ್ತಮ. ನಂತರ ಸೂರ್ಯನ ತಾಪಮಾನ ಹೆಚ್ಚುತ್ತಾ ಹೋಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ತಿಂಗಳಿಂದ ಮುಚ್ಚಿದ್ದ ಇರಾನ್​ನ ಟೆಹ್ರಾನ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಆರಂಭ – Kannada News | Iran Reopens Tehran International Airport Resumes commercial Flights After 2 Month War

ಟೆಹ್ರಾನ್, ಏಪ್ರಿಲ್ 25: ಸುಮಾರು 2 ತಿಂಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷ ಆರಂಭವಾದ ನಂತರ ಇರಾನ್ (Iran) ಇಂದು ಮೊದಲ ಬಾರಿಗೆ ಟೆಹ್ರಾನ್‌ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಹಾರಾಟವನ್ನು ಪುನರಾರಂಭಿಸಿತು. ಟೆಹ್ರಾನ್​ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ತಾನ್‌ಬುಲ್, ಮಸ್ಕತ್ ಮತ್ತು ಮದೀನಾಗೆ ವಿಮಾನಗಳು ಹೊರಟಿವೆ. ಅಮೆರಿಕದೊಂದಿಗೆ ಕದನ ವಿರಾಮದ ನಂತರ ಇರಾನ್ ಈ ತಿಂಗಳ ಆರಂಭದಲ್ಲಿ ತನ್ನ ವಾಯುಪ್ರದೇಶವನ್ನು ಮತ್ತೆ ತೆರೆದಿತ್ತು. ಇದು 2 ದೇಶಗಳ ನಡುವಿನ ಹಗೆತನವನ್ನು ಕೊನೆಗೊಳಿಸಿತು.

ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ಗೆ ಬಂದ ನಂತರ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪಾಕಿಸ್ತಾನದ ಮಿಲಿಟರಿ ಮತ್ತು ರಾಜಕೀಯ ನಾಯಕತ್ವದೊಂದಿಗೆ 2 ಸುತ್ತಿನ ಮಾತುಕತೆಗಳನ್ನು ನಡೆಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಇರಾನ್ ನಿಯೋಗವು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ಮುಂದುವರಿಸಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಮೆರಿಕದ ರಾಯಭಾರಿಗಳು ಇಂದು ಇಸ್ಲಾಮಾಬಾದ್‌ಗೆ ಆಗಮಿಸುವ ನಿರೀಕ್ಷೆಯಿದೆ. ಟೆಹ್ರಾನ್‌ನೊಂದಿಗೆ ಕದನ ವಿರಾಮ ಮಾತುಕತೆಗಳನ್ನು ಪುನರುಜ್ಜೀವನಗೊಳಿಸುವ ಹೊಸ ಪ್ರಯತ್ನದಲ್ಲಿ ಡೊನಾಲ್ಡ್ ಟ್ರಂಪ್ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ ಎಂದು ಶ್ವೇತಭವನ ದೃಢಪಡಿಸಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ

ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಸಂಘರ್ಷಕ್ಕೆ ಕಾರಣವಾಗಿತ್ತು. ಅದಾಗಿ 2 ತಿಂಗಳವರೆಗೆ ಯುದ್ಧ ಮುಂದುವರೆದಿತ್ತು. ಇದರಿಂದ ಇರಾನ್‌ನ ವಾಯುಪ್ರದೇಶವು ಮುಚ್ಚಲ್ಪಟ್ಟಿತ್ತು. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿತ್ತು.

ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮದ ವಿಸ್ತರಣೆಯನ್ನು ಘೋಷಿಸಿದ ನಂತರ ರಾಜತಾಂತ್ರಿಕತೆಗೆ ಹೆಚ್ಚಿನ ಸಮಯಕ್ಕಾಗಿ ಪಾಕಿಸ್ತಾನ ಮನವಿ ಮಾಡಿತ್ತು. ಇದಾದ ನಂತರ ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ಅನ್ನು ಮಾತುಕತೆಗೆ ಮತ್ತೆ ಒಟ್ಟು ಸೇರಿಸಲು ಪ್ರಯತ್ನ ಮಾಡುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:20 pm, Sat, 25 April 26

Source link

ಬೆಂಗಳೂರಿನ ಬಿಇಎಂಎಲ್​ ಘಟಕಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ: ಮೆಟ್ರೋ ಬೋಗಿಗಳ ಪರಿಶೀಲನೆ​​​ – Kannada News | Bangaluru: Ashwini Vaishnaw Inspects BEML Metro Coaches for Pink Line

ಬಿಇಎಂಎಲ್​ ಘಟಕಕ್ಕೆ ಸಚಿವ ಅಶ್ವಿನಿ ವೈಷ್ಣವ್ ಭೇಟಿImage Credit source: pib twitter

ಬೆಂಗಳೂರು, ಏಪ್ರಿಲ್​ 25: ನಗರದ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಘಟಕಕ್ಕೆ ಕೇಂದ್ರ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw)  ಶನಿವಾರ ಭೇಟಿ ನೀಡಿದರು. ಅಲ್ಲಿ ಉತ್ಪಾದನೆಗೊಳ್ಳುತ್ತಿರುವ ಮೆಟ್ರೋ ಬೋಗಿಗಳನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಕಾರ್ಯಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು. ಜೊತೆಗೆ ಬಿಇಎಂಎಲ್​​ನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಬಿಇಎಂಎಲ್​ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ‌ಲೈನ್ ಮಾರ್ಗಕ್ಕಾಗಿ ಬಿಇಎಂಎಲ್​ ಚಾಲಕ ರಹಿತ ಎಂಜಿನ್​​​ ರೈಲು ಕೋಚ್​ಗಳನ್ನು ನಿರ್ಮಿಸುತ್ತಿದೆ. ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ‌ಲೈನ್ ಮಾರ್ಗದ 6 ಮೆಟ್ರೋ ಸ್ಟೇಷನ್​​ಗಳನ್ನು, ಮೇನಲ್ಲಿ ಓಪನ್ ಮಾಡಲು ಬಿಎಂಆರ್​​ಸಿಎಲ್​​ ತಯಾರಿ ನಡೆಸಿದೆ. ಆದರೆ ಟೆಸ್ಟಿಂಗ್ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ, ಓಪನ್ ‌ಆಗುವುದು ಡೌಟ್ ಎನ್ನಲಾಗುತ್ತಿದೆ.

PIB ಟ್ವಿಟ್​​

ಜೂನ್ ಅಥವಾ ಜುಲೈನಲ್ಲಿ ಈ ಮಾರ್ಗ ಓಪನ್ ಆಗಲಿದೆ ಎನ್ನಲಾಗುತ್ತಿದೆ. ಪ್ರತಿ ಮಾರ್ಗ ಓಪನ್ ಮಾಡುವ ವೇಳೆ ರೈಲು ಇರುತ್ತಿರಲಿಲ್ಲ, ಆದರೆ ಈ ಬಾರಿ ಪಿಂಕ್ ಲೈನ್​​ಗಾಗಿ ಈಗಾಗಲೇ ಬಿಇಎಂಎಲ್​​ನಿಂದ 5 ರೈಲುಗಳು ಬಂದಿದ್ದರು, ಈ ಬಾರಿ ಟೆಸ್ಟಿಂಗ್ ಕೆಲಸ ಮುಗಿಯದ ಹಿನ್ನೆಲೆ, ಮೆಟ್ರೋ ವಿಳಂಬ ಆಗುತ್ತಿದೆ. ಪಿಂಕ್‌ ಲೈನ್​ಗಾಗಿ ಒಟ್ಟು ಬಿಇಎಂಎಲ್​​ನಲ್ಲಿ 23 ರೈಲುಗಳಿಗೆ ಆರ್ಡರ್ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಖಾಸಗಿ ಕಂಪನಿ ವಿಭಿನ್ನ ಪ್ಲಾನ್: ಮೆಟ್ರೋ ಬಳಸುವ ಉದ್ಯೋಗಿಗಳಿಗೆ ಸಿಗಲಿದೆ ತಿಂಗಳಿಗೆ 2,000 ರೂ!

ಕಾಳೇನ ಅಗ್ರಹಾರ ಟು ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿರುವ ಪಿಂಕ್ ಲೈನ್ 21.25 ಕಿಮೀ ವಿಸ್ತೀರ್ಣ, 18 ಮೆಟ್ರೋ ಸ್ಟೇಷನ್​​ಗಳನ್ನು ಹೊಂದಿದೆ. 12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳಿವೆ. ಉಳಿದ 13.76. ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​ ಆಗಲಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

DC vs PBKS IPL 2026 Live Score: ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ – Kannada News | Delhi Capitals vs Punjab Kings IPL 2026 Live Cricket Score DC vs PBKS Match on 25th April latest news in Kannada

  • 25 Apr 2026 03:09 PM (IST)

    DC vs PBKS IPL 2026: ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI

    ಶ್ರೇಯಸ್ ಅಯ್ಯರ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯ್​ಕುಮಾರ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

  • 25 Apr 2026 03:08 PM (IST)

    DC vs PBKS IPL 2026: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI

    ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಸಮೀರ್ ರಿಜ್ವಿ, ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

  • 25 Apr 2026 03:03 PM (IST)

    DC vs PBKS IPL 2026: ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Source link

    ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜತೆ ಸಂಸಾರ: ಇದೇನಿದು ವಿದ್ಯೆ ಕಲಿಸುವ ಗುರುವಿನ ಆಟ? – Kannada News | A Government Teacher Cheating His niece after engagement at koppal

    ಕೊಪ್ಪಳ, (ಏಪ್ರಿಲ್ 25): ವಿದ್ಯೆ ಕಲಿಸಬೇಕಾದ ಗುರುವೇ ಇಲ್ಲಿ ಕಾಮಪಿಶಾಚಿಯಾಗಿದ್ದಾನೆ. ಮದುವೆಯಾಗುವುದಾಗಿ (Marriage)  ನಂಬಿಸಿ ಸ್ವಂತ ಅತ್ತೆ ಮಗಳನ್ನೇ ಐದು ವರ್ಷಗಳಿಂದ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಈಗ ಕೈಕೊಟ್ಟಿದ್ದಾನೆ. ಅಲ್ಲದೇ ಮತ್ತೊಬ್ಬಳ ಜೊತೆ ಮದುವೆಯಾಗಿದ್ದಾನೆ. ಹೌದು…ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಬಸವರಾಜ ಎನ್ನುವ ಸರ್ಕಾರಿ ಶಿಕ್ಷಕ, ಅತ್ತೆ ಮಗಳ ಜೊತೆ ಹಿರಿಯರ ಸಮ್ಮುಖದಲ್ಲೇ ನಿಶ್ಚಿತಾರ್ಥ (engagement) ಮಾಡಿಕೊಂಡಿದ್ದ. ಆದ್ರೆ, ಇದೀಗ ಬಸವರಾಜ ಮತ್ತೋರ್ವಳ ಜೊತೆ ಮದುವೆಯಾಗಿದ್ದು, ವಿವಾಹ ನೋಂದಣಿ ಪತ್ರವನ್ನು ಅತ್ತೆ ಮಗಳಿಗೆ ಕಳುಹಿಸಿದ್ದಾನೆ. ಇದರಿಂದ ಕಂಗಾಲದ ಯುವತಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    ಸರಕಾರಿ ಶಿಕ್ಷಕನಾಗಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಬಸವರಾಜ ಹರಿಜನ್ ಎಂಬಾತ ತನ್ನ ನೈತಿಕತೆಯನ್ನೇ ಮರೆತು ವರ್ತಿಸಿದ್ದಾನೆ. ಹುಲಸನಟ್ಟಿ ಮೂಲದ ಯುವತಿ ಕರೆಮ್ಮಾ ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗಿನಿಂದಲೂ ಬಸವರಾಜನ ಜೊತೆ ಸಂಪರ್ಕವಿತ್ತು. ಸ್ವಂತ ಅತ್ತೆ ಮಗ ಎನ್ನುವ ಕಾರಣಕ್ಕೆ ಯುವತಿ ಆತನನ್ನು ಕುರುಡಾಗಿ ನಂಬಿದ್ದಳು. ನೌಕರಿ ಸಿಕ್ಕ ತಕ್ಷಣ ಮದುವೆಯಾಗುವುದಾಗಿ ನಂಬಿಸಿದ್ದ ಬಸವರಾಜ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇಷ್ಟೇ ಅಲ್ಲದೆ, ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ. ಆದರೆ, ಯಾವಾಗ ಸರಕಾರಿ ಶಿಕ್ಷಕನ ನೌಕರಿ ಭದ್ರವಾಯಿತೋ, ಆಗ ಈತನ ಬುದ್ಧಿ ಬದಲಾಗಿದೆ. ಪ್ರೀತಿಸಿದ ಅತ್ತೆ ಮಗಳನ್ನು ನಡುನೀರಲ್ಲಿ ಬಿಟ್ಟು, ರತ್ನವ್ವ ಎಂಬ ಯುವತಿಯೊಂದಿಗೆ ರಹಸ್ಯವಾಗಿ ವಿವಾಹವಾಗಿದ್ದಾನೆ.

    ಇದನ್ನೂ ಓದಿ: ನವ ವಿವಾಹಿತೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​: ಮುಸ್ಲಿಂ ಯುವಕನ ಜೊತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

    ಮೋಸ ಮಾಡಿದ್ದಷ್ಟೇ ಅಲ್ಲದೆ ಬಸವರಾಜ, ರತ್ನವ್ವಳೊಂದಿಗೆ ತಾನು ಮಾಡಿಕೊಂಡ ಮದುವೆಯ ನೋಂದಣಿ ಪತ್ರವನ್ನು ಸಂತ್ರಸ್ತ ಯುವತಿಯ ಮನೆಗೆ ಕಳುಹಿಸಿದ್ದಾನೆ. ಇದರಿಂದ ಕಂಗಾಲಾದ ಯುವತಿ ಮತ್ತು ಆಕೆಯ ಪೋಷಕರು ಈಗ ನ್ಯಾಯಕ್ಕಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹಿರಿಯರ ಸಮ್ಮುಖದಲ್ಲಿ ನಿಶ್ವಯ ಮಾಡಿಕೊಂಡು ಇದೀಗ ಮತ್ತೊಂದು ಮದುವೆಯಾಗಿರುವ ಬಸವರಾಜ್ ಗೆ ತಕ್ಕ ಶಿಕ್ಷೆ ಆಗಬೇಕು ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link