Category Archives: Blog

Your blog category

ಶಾಸಕರ ಫೋಟೋಶೂಟ್ ಬಗ್ಗೆ ಭಾರೀ ಚರ್ಚೆ: ಕಾಶಪ್ಪನವರ್ ಏನಂದ್ರು ನೋಡಿ!

ಶಾಸಕರ ಫೋಟೋಶೂಟ್ ಬಗ್ಗೆ ಭಾರೀ ಚರ್ಚೆ: ಕಾಶಪ್ಪನವರ್ ಏನಂದ್ರು ನೋಡಿ!

ಬೆಂಗಳೂರು, (ಮಾರ್ಚ್ 25): ರಾಜ್ಯ ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ವಿಜಯನಂದ ಕಾಶಪ್ಪನವರ್ ಪ್ರತಿಕ್ರಿಯಿಸಿದ್ದು, ಸಂಪುಟ ಪುನರ್​ ರಚನೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅವಧಿಗೂ ಮುನ್ನವೇ ಫೋಟೋ ಶೂಟ್ ಬಗ್ಗೆ ಭಾರೀ ಚರ್ಚೆ: ಸಿಎಂ ಬದಲಾವಣೆಯೋ? ಸ್ಪೀಕರ್ ಚೇಂಜ್? ಸಂಪುಟ ಪುನರ್ ರಚನೆಯೋ?

Source link

ಲ್ಯಾಂಬೋರ್ಗಿನಿ ಕಾರು ಜಪ್ತಿ ಮಾಡಿದ ಸಾರಿಗೆ ಅಧಿಕಾರಿಗಳಿಗೆ ಹೈಕೋರ್ಟ್ ಶಾಕ್: 1 ವಾರದಲ್ಲಿ ಕಾರು ಹಿಂದಿರುಗಿಸಿ

ಬೆಂಗಳೂರು, ಮಾ.24: ಮನೆಯ ಕಾರಿನ ಶೆಡ್​​​​ನಲ್ಲಿದ್ದ ವಿಲಾಸಿ ಲ್ಯಾಂಬೋರ್ಗಿನಿ ಕಾರನ್ನು ಕಾನೂನು ಬಾಹಿರವಾಗಿ ಜಪ್ತಿ ಮಾಡಿದ್ದ ಸಾರಿಗೆ ಇಲಾಖೆಯ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿರುವ ನ್ಯಾಯಾಲಯ, ಒಂದು ವಾರದಲ್ಲಿ ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ರಾತ್ರಿ ವೇಳೆಯಲ್ಲಿ ಅರ್ಜಿದಾರರ ಮನೆಯ ಕಾರಿನ ಶೆಡ್​​​ಗೆ ನುಗ್ಗಿ ಕಾರನ್ನು ಸೀಜ್ ಮಾಡಿದ ವಿಧಾನವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ತರಾಟೆಗೆ ತೆಗೆದುಕೊಂಡಿದೆ. ಇದು ಕಾನೂನಿನ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೈ ಕಾರ್ ಕೇರ್’ ಮಾಲೀಕ ಜೆ. ರಾಮಕೃಷ್ಣಯ್ಯ ವಿರುದ್ಧ ಕಾರು ನೋಂದಣಿ ಸಂಬಂಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಇದನ್ನೂ ಓದಿ: ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್! ವಯಸ್ಸಿನ ಪರೀಕ್ಷೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಯಾರಿಗೆ ಶಿಕ್ಷೆ?

ಸಾರಿಗೆ ಅಧಿಕಾರಿಗಳು ಎಷ್ಟೇ ಉತ್ತಮರಾಗಿದ್ದರೂ ತಮ್ಮ ಕರ್ತವ್ಯವನ್ನು ಕಾನೂನಿನ ಚೌಕಟ್ಟಿನಲ್ಲೇ ನಿರ್ವಹಿಸಬೇಕು. ಈ ಪ್ರಕರಣದಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಮುಟ್ಟುಗೋಲು ಹಾಕಿಕೊಳ್ಳಲಾದ ಲ್ಯಾಂಬೋರ್ಗಿನಿ ಕಾರನ್ನು ಮುಂದಿನ ಒಂದು ವಾರದೊಳಗೆ ಮಾಲೀಕರಿಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾರಣಾಸಿಯನ್ನೇ ಮರುಸೃಷ್ಟಿಸಿದ ರಾಜಮೌಳಿ; ಫೋಟೋ ವೈರಲ್

ಮಹೇಶ್ ಬಾಬು ಹಾಗೂ ಎಸ್​​ಎಸ್​ ರಾಜಮೌಳಿ ಒಟ್ಟಾಗಿ ‘ವಾರಣಾಸಿ’ (Varanasi) ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಈಗ ಹೈದರಾಬಾದ್​ ಅಲ್ಲಿ ಅವರು ವಾರಣಾಸಿ ನಗರವನ್ನೇ ಧರೆಗಿಳಿಸಿದ್ದಾರೆ. ಅಲ್ಲಿ ಸಿನಿಮಾದ ಶೂಟ್ ಮಾಡಲಾಗುತ್ತಿದೆ. ತುಂಬಾನೇ ಕಟ್ಟುನಿಟ್ಟಾಗಿ ಸಿನಿಮಾ ಮಾಡಲಾಗುತ್ತಿದೆ. ಕಠಿಣ ನಿಯಮಕ್ಕೆ ಈ ಹಿಂದೆ ರಾಜಮೌಳಿ ಮಾಡಿದ ತಪ್ಪೇ ಕಾರಣ ಎಂದು ಹೇಳಲಾಗುತ್ತಿದೆ.

ರಾಜಮೌಳಿ ಅವರು ಎಲ್ಲಾ ವಿಷಯಗಳನ್ನು ಗುಟ್ಟಾಗಿ ಇಡಲು ಇಷ್ಟಪಡುತ್ತಾರೆ. ಯಾವುದೇ ಘೋಷಣೆ ಇದ್ದರೂ ಅದನ್ನು ಸರಿಯಾದ ಸಮಯಕ್ಕೆ, ಅದ್​ದೂರಿಯಾಗಿ ಮಾಡಬೇಕು ಎಂಬುದು ಅವರ ಉದ್ದೇಶ. ‘ವಾರಣಾಸಿ’ ವಿಷಯದಲ್ಲೂ ಹಾಗೆಯೇ ಮಾಡಬೇಕು ಎಂದುಕೊಂಡಿದ್ದರು. ಆದರೆ, ಹಾಗಾಗಿಲ್ಲ. ಮೊದಲ ಹಂತದ ಶೂಟ್ ವೇಳೆ ಮಹೇಶ್​ ಬಾಬು, ಪೃಥ್ವಿರಾಜ್​ ಸುಕುಮಾರ್ ವಿಡಿಯೋಗಳು ಲೀಕ್ ಆದವು. ಆ ಬಳಿಕ ಎಚ್ಚೆತ್ತುಕೊಂಡಿರೋ ಅವರು, ತುಂಬಾನೇ ಸ್ಟ್ರಿಕ್ಟ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಆದರೂ ಫೋಟೋ ಲೀಕ್ ಆಗಿದೆ.

ಟೀಸರ್ ಲಾಂಚ್ ವೇಳೆ ಅನೇಕ ಅಂತಾರಾಷ್ಟ್ರೀಯ ಪತ್ರಕರ್ತನ್ನು ಕರೆಸಲಾಗಿತ್ತು. ಅವರೆಲ್ಲರಿಗೂ ಸಿನಿಮಾ ಸೆಟ್​​​ಗೆ ಭೇಟಿ ಕೊಡಿಸಲಾಗಿತ್ತು. ಆದರೆ, ಅಲ್ಲಿ ಯಾವುದೇ ಲೀಕ್ ಆಗದಂತೆ ಕಠಿಣ ಕ್ರಮ ಕೈಗೊಂಡಿತ್ತು. ಈ ಅವಧಿಯಲ್ಲಿ ಯಾವುದೇ ಟೀಸರ್​ ಆಗಲೀ, ವಿಡಿಯೋ ಆಗಲಿ ಲೀಕ್ ಆಗಿರಲಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ‘ವಾರಣಾಸಿ’ ಸೆಟ್ ಫೋಟೋ ಎಂದು ಕೆಲವು ಫೋಟೋಗಳು ಲೀಕ್ ಆಗಿವೆ.

ಇದನ್ನೂ ಓದಿ: ‘ವಾರಣಾಸಿ’ ಸೆಟ್ ಸೇರಲು ರೆಡಿ ಆದ ಸುದೀಪ್​; ಯಾವಾಗ, ಎಷ್ಟು ದಿನ?

ಸದ್ಯ ವಾರಣಾಸಿಯ ದೇವಸ್ಥಾನ, ಸೆಟ್​​​ನ ಮ್ಯಾಪ್ ಎಲ್ಲವೂ ಲೀಕ್ ಆಗಿವೆ. ವಾರಣಾಸಿಯಲ್ಲೇ ಹೋಗಿ ಶೂಟ್ ಮಾಡಬೇಕು ಎಂದರೆ ಅದು ಅಸಾಧ್ಯವಾದ ಮಾತು. ಈ ಕಾರಣದಿಂದ ವಾರಣಾಸಿ ನಗರವನ್ನು ರೀಕ್ರಿಯೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅವಧಿಗೂ ಮುನ್ನವೇ ಫೋಟೋ ಶೂಟ್ ಬಗ್ಗೆ ಭಾರೀ ಚರ್ಚೆ: ಸಿಎಂ ಬದಲಾವಣೆಯೋ? ಸ್ಪೀಕರ್ ಚೇಂಜ್? ಸಂಪುಟ ಪುನರ್ ರಚನೆಯೋ?

ಬೆಂಗಳೂರು, (ಮಾರ್ಚ್ 25): ಸರ್ಕಾರದ (Karnataka Government) ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ (MLAs Group photoshoot) ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಸಾಮಾನ್ಯವಾಗಿ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ತೆಗೆದುಕೊಳ್ಳುವುದು ಸಂಪ್ರದಾಯವಾಗಿದೆ. ಆದ್ರೆ, ಅವಧಿಗೂ ಮುನ್ನವೇ ಸ್ಫೀಕರ್ ಯುಟಿ ಖಾದರ್,  (UT Khader)ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ. ಹೌದು.. ಶೀಘ್ರದಲ್ಲೇ ಸಂಪುಟಕ್ಕೆ ಸರ್ಜರಿಯಾಗಲಿದ್ದು, ಸ್ಪೀಕರ್ ಖಾದರ್‌ ಅವರು ಸಹ ಸಂಪುಟ ಸೇರುವ ಸಾಧ್ಯತೆಯಿದ ಹೀಗಾಗಿಯೇ ವಿಧಾನಸಭೆ ಮುಕ್ತಾಯಕ್ಕೂ ಮೊದಲೇ ಫೋಟೋ ಶೂಟ್‌ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅವಧಿಗೂ ಮುನ್ನವೇ 16 ವಿಧಾನಸಭೆಯ ಸದಸ್ಯರ ಗ್ರೂಪ್ ಫೋಟೋ ಹಿಂದಿನ ಮರ್ಮ ಏನು ಎನ್ನುವ ಬಗ್ಗೆ ಶಾಸಕರಲ್ಲಿಯೂ ಗೊಂದಲ ಉಂಟಾಗಿದೆ. ವಿಧಾನಸೌಧದ ಪಡಸಾಲೆಗಳಲ್ಲಿ ಕೂಡ ಇದೇ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಪರಸ್ಪರ ಶಾಸಕರು ಕಾರಣಗಳನ್ನು ಊಹಿಸುತ್ತಿದ್ದಾರೆ. ಫೋಟೋ ಶೂಟ್ ಹಿಂದೆ ಏನಾದರೂ ರಾಜಕೀಯ ಸಂದೇಶವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಇದನ್ನೂ ನೋಡಿ: ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!

ಫೋಟೋ ಶೂಟ್ ಬಗ್ಗೆ ಬಿಸಿಬಿಸಿ ಚರ್ಚೆ

ವಿಧಾನಸೌಧದ ಒಳಗಡೆ, ವಿಶೇಷವಾಗಿ ಪಡಸಾಲೆಗಳಲ್ಲಿ, ಈ ವಿಷಯವೇ ಪ್ರಮುಖ ಚರ್ಚೆಯಾಗಿದ್ದು, ಶಾಸಕರು ಪರಸ್ಪರ ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಸಿಗದಿರುವುದರಿಂದ ಈ ಎಲ್ಲಾ ಪ್ರಶ್ನೆ ಗೊಂದಲ ಅನುಮಾನಗಳು ಹೆಚ್ಚುತ್ತಿದೆ

ಕೆಲವರು ಈ ಬೆಳವಣಿಗೆಯನ್ನು ಮುಖ್ಯಮಂತ್ರಿ ಬದಲಾವಣೆಯ ಮುನ್ಸೂಚನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಸಿಎಂ ಬದಲಾವಣೆ ಸಂಭವಿಸಿದರೆ, ಸಂಪುಟದಲ್ಲಿ ಹಾಗೂ ವಿವಿಧ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಬಹುದು. ಇದೇ ಕಾರಣಕ್ಕಾಗಿ ಮುಂಚಿತವಾಗಿ ನೆನಪಿಗಾಗಿ ಫೋಟೋ ಶೂಟ್ ನಡೆಸಲಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಇನ್ನೂ ಕೆಲವರು ಇದು ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಗೆ ಮುನ್ನ ನಡೆಯುವ ಸಿದ್ಧತೆಯಾಗಿರಬಹುದೇ ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಸಂಪುಟ ಪುನಾರಚನೆಯಲ್ಲಿ ಸ್ಪೀಕರ್ ಯುಟಿ ಖಾದರ್​​ಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಸಹ ಗ್ರೀನ್ ಸಿಗ್ನಲ್ ಕೊಟ್ಟಿರುವ ಸಾಧ್ಯತೆಗಳಿವೆ. ಹೀಗಾಗಿ ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಸ್ಪೀಕರ್‌ಗೆ ಮುನ್ಸೂಚನೆ ಸಿಕ್ಕಿರುವುದರಿಂದಲೇ ಈ ಫೋಟೋ ಶೂಟ್ ಮಾಡಿಸಿದ್ದಾರೆಯೇ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಸಂಪುಟ ಪುನಾರಚನೆಗೆ ತೀವ್ರ ಒತ್ತಡ

ರಾಜ್ಯ ಸರ್ಕಾರದ ಸಂಪುಟ ಪುನರ್‌ರಚನೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಆಕಾಂಕ್ಷಿಗಳು ಸಭೆಗಳನ್ನು ನಡೆಸಿ ಸಂಪುಟ ಪುನರ್‌ರಚನೆಗೆ ಒತ್ತಡ ಹೇರುತ್ತಿದ್ದಾರೆ. ಹೈಕಮಾಂಡ್ ನಾಯಕರಿಗೆ ಪತ್ರವನ್ನು ಬರೆದಿದ್ದು, ಮೊದಲ ಬಾರಿ ಶಾಸಕರಾಗಿರುವವರು ನಮಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ‌. ಅಲ್ಲದೇ ಎರಡು ವರ್ಷ ಪೂರ್ಣಗೊಳಿಸಿರುವ ಸಚಿವರನ್ನು ಬಿಟ್ಟು ಇನ್ನುಳಿದ ಎರಡುವರೆ ವರ್ಷ ಅವಧಿಗೆ ಬೇರೆಯವರನ್ನ ಸಚಿವರನ್ನಾಗಿ ಮಾಡಬೇಕೆನ್ನುವುದು ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆಯೇ ಸ್ಪೀಕರ್ ಯು.ಟಿ ಖಾದರ್ ಅವರು ಶಾಸಕರ ಫೋಟೋಶೂಟ್ ನಡೆಸಿದ್ದಾರೆ.

ವಿಪಕ್ಷದ ಶಾಸಕರಿಂದ ನಾನಾ ವ್ಯಾಖ್ಯಾನ

ವಿಪಕ್ಷದ ಕೆಲವು ಶಾಸಕರು ಫೋಟೋ ಶೂಟ್ ಬಗ್ಗೆ ನಾನಾ ವ್ಯಾಖ್ಯಾನ ನೀಡುತ್ತಿದ್ದಾರೆ. ಹೌದು..ಅವಧಿ ದಿಢೀರ್ ಆಗಿ ಸ್ಪೀಕರ್ ಫೋಟೋ ಶೂಟ್ ಮಾಡಿಸಿಕೊಂಡ ಉದ್ದೇಶ ಏನು ಎಂಬುವುದು ಕುತೂಹಲವಾಗಿದೆ. ಇದು ಸಂಪುಟ ಪುನಾರಚನೆ ಆಗಲಿದೆ ಎಂಬ ಸುಳಿವು ಆಗಿರಬಹುದು ಎನ್ನುತ್ತಾರೆ.ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ಈ ಕುರಿತು ವಿಪಕ್ಷ ಬಿಜೆಪಿ ಸಹ ಟ್ವೀಟ್ ಮಾಡಿದ್ದು, ಇದು ಸಿಎಂ ಸಿದ್ದರಾಮಯ್ಯ ಔಟ್​ಗೋಯಿಂಗ್ ಫೋಟೋಶೂಟ್ ಅಲ್ವಾ? ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿ ಪೋಸ್ಟ್ ಮಾಡಿದೆ.

ಗ್ರೂಪ್ ಫೋಟೋಗೆ 3 ಕಾರಣ ಕೊಟ್ಟ ಬಿಜೆಪಿ ಶಾಸಕ

ಕರ್ನಾ ಟಕ ವಿಧಾನಸಭೆಯ ಸಭಾಧ್ಯಕ್ಷರು  ಯು. ಟಿ.ಖಾದರ್ ತಮ್ಮ ಅವಧಿಯಲ್ಲಿ ವಿಶಿಷ್ಟ ಕೆಲಸಗಳನ್ನು ಮಾಡುವುದರಲ್ಲಿ ಇವರಿಗೆ ವಿಪರೀತ ಉಮೇದು. ರಾಜ್ಯದ ಮಾಜಿ ಧೀಮಂತ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರು 50 ರ ದಶಕದಲ್ಲಿ ಕೇವಲ  1.50 ಕೋಟಿ ಹಣದಲ್ಲಿ ನಿರ್ಮಿಸಿದ ಭವ್ಯ ವಿಧಾನಸೌಧಕ್ಕೆ 84 ಲಕ್ಷ ರೂ. ವೆಚ್ಚದಲ್ಲಿ ಹೊಸ ಬಾಗಿಲನ್ನು ನಿರ್ಮಿಸಿದ ಹೆಗ್ಗಳಿಕೆ ನಮ್ಮ ಈ ಸಭಾಧ್ಯಕ್ಷರದ್ದು. ಹಳೆಯ ಬಾಗಿಲು ಹಾಳಾಗಿ ಹೋಗಿತ್ತೇ? ಶಿಥಿಲವಾಗಿತ್ತೇ? ಗೆದ್ದಲು ತಿಂದಿತ್ತೇ? ಅಥವಾ ಯಾರಾದರೂ ಬಾಗಿಲು ಹಳೆದಾಗಿದೆ, ಬದಲಾಯಿಸಿ ಎಂದು ಕೇಳಿದ್ದರೇ?. ಹೊಸ ಬಾಗಿಲು ಹಾಕಿಸುವುದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ. ಈಗ ಮತ್ತೊಂದು ಹೊಸ ಕಾರ್ಯ ಮಾಡಲು ನಮ್ಮ ಸಭಾಧ್ಯಕ್ಷರು ಇಳಿದಿದ್ದಾರೆ. ವಿಧಾನ ಸಭೆಯ ಎಲ್ಲಾ ಸದಸ್ಯರ ಗ್ರೂಪ್ ಫೋಟೋ ಯೋಜಿಸಲಾಗಿದೆ. ಸಾಮಾನ್ಯವಾಗಿ ಶಾಸಕರ ಗ್ರೂಪ್ ಫೋಟೋ ತೆಗೆಯುವುದು ಐದು ವರ್ಷ ಅವಧಿಯ ಕೊನೆಯಲ್ಲಿ. ಅಂದರೆ 2028 ಮಾರ್ಚ್- ಏಪ್ರಿಲ್ ತಿಂಗಳಲ್ಲಿ. ಹೀಗಿದ್ದಾಗ ಈ ಗ್ರೂಪ್ ಫೋಟೋ ಅಗತ್ಯವೇನಿತ್ತು? ಹಾಗೆ ಯೋಚಿಸಿದಾಗ ಕಾರಣಗಳು ಈ ಕೆಳಕಂಡಂತಿರಬಹುದು.

  1. A) ಈ ಅಧಿವೇಶನದ ನಂತರ  ಖಾದರ್ ರವರು ಸಭಾಧ್ಯಕ್ಷರ ಸ್ಥಾನದಿಂದ ಸಚಿವ ಸ್ಥಾನಕ್ಕೆ ಹೋಗುವ ಇರಾದೆ ಹೊಂದಿರಬಹುದು. ಮತ್ತು ಅದಕ್ಕೆ ಹಸಿರು ನಿಶಾನೆಯೂ ದೊರಕಿರಬಹುದು.
  2.  ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬದಲಾಗುತ್ತಾರೆಯೇ? ಅವರು ಮುಖ್ಯಮಂತ್ರಿ ಆಗಿರುವಾಗ ಒಂದು ಫೋಟೋ ಇರಲಿ ಎಂದೇ? ಅಥವಾ
  3. ಮಧ್ಯಂತರ ಚುನಾವಣೆ ನಡೆಯುತ್ತದೆಯೇ?
    ಈ ಮೇಲಿನ ಮೂರು ಕಾರಣಗಳಲ್ಲಿ ಯಾವುದು ಈ ಮಧ್ಯಂತರ ಗ್ರೂಪ್ ಫೋಟೋಗೆ ಕಾರಣ?

ಒಟ್ಟಿನಲ್ಲಿ ಅವಧಿಗೂ ಮುನ್ನವೇ 16ನೇ ವಿಧಾನಸಭೆ ಸದಸ್ಯರ ಗ್ರೂಫ್​ ಫೋಟೋ ಶೂಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮ್ಯೂಚುವಲ್ ಫಂಡ್​ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಪ್ಲಾನ್

ನವದೆಹಲಿ, ಮಾರ್ಚ್ 25: ಮ್ಯೂಚುವಲ್ ಫಂಡ್​ಗಳಲ್ಲಿ (Mutual Funds) ಹೂಡಿಕೆ ಮಾಡಬಹುದಾದಂತಹ ಗಿಫ್ಟ್ ಕಾರ್ಡ್ ಅಥವಾ ಗಿಫ್ಟ್ ಪಿಪಿಐ (PPI- Pre Paid Instrument) ಅನ್ನು ಹೊರತರಲು ಸೆಬಿ ಯೋಜಿಸಿದೆ. ಪಿಪಿಐ ಎಂಬುದು ಒಂದು ರೀತಿಯಲ್ಲಿ ಪ್ರೀಪೇಡ್ ಕಾರ್ಡ್. ಈ ಪ್ರೀಪೇಡ್ ಕಾರ್ಡ್ ಬಳಸಿ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಯಾರು, ಯಾರಿಗೆ ಬೇಕಾದರೂ ಈ ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಕೊಡಬಹುದು.

ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?

ಯಾವುದೇ ಮ್ಯೂಚುವಲ್ ಫಂಡ್ ಸಂಸ್ಥೆಯಿಂದ ಗಿಫ್ಟ್ ಕಾರ್ಡ್ ಅಥವಾ ಪ್ರೀಪೇಡ್ ಕಾರ್ಡ್ (ಪಿಪಿಐ) ಅನ್ನು ಖರೀದಿಸಬಹುದು. ಒಂದು ಗಿಫ್ಟ್ ಕಾರ್ಡ್​ನ ಮೌಲ್ಯ 10,000 ರೂ ಮೀರುವಂತಿಲ್ಲ. ಈ ಕಾರ್ಡ್ ಅನ್ನು ಖರೀದಿಸಿದವರು ಯಾರಿಗೆ ಬೇಕಾದರೂ ಗಿಫ್ಟ್ ಆಗಿ ಕೊಡಬಹುದು. ಅವರು ಕಾರ್ಡ್ ಅನ್ನು ರಿಡೀಮ್ ಮಾಡಿ ಆ ಹಣವನ್ನು ಮ್ಯೂಚುವಲ್ ಫಂಡ್ ಸಂಸ್ಥೆಯ ಯಾವುದೇ ಫಂಡ್ ಸ್ಕೀಮ್​ಗಳಲ್ಲಿ ಹೂಡಿಕೆಗೆ ಬಳಸಬಹುದು. ರಿಡೀಮ್ ಮಾಡಿದ ಹಣ ಪೂರ್ಣವಾಗಿ ಹೂಡಿಕೆಗೆ ಬಳಕೆ ಆಗಬೇಕು. ಅರ್ಧ ಮಾತ್ರ ಮಾಡುತ್ತೇನೆ, ಸ್ವಲ್ಪ ಮಾಡುತ್ತೇನೆ ಎಂದರೆ ಅದಕ್ಕೆ ಅವಕಾಶ ಇರುವುದಿಲ್ಲ. ಇದೆ ಸೆಬಿ ಮುಂದಿರುವ ಪ್ರಸ್ತಾವವಾಗಿದೆ.

ಇದನ್ನೂ ಓದಿ: ಸರ್ಕಾರದ ಸುಕನ್ಯಾ ಸಮೃದ್ದಿ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?

ಪ್ರಸ್ತಾವಿತ ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಸ್ಕೀಮ್ ಬಗ್ಗೆ

  • ಗಿಫ್ಟ್ ಪಿಪಿಐನ ಗರಿಷ್ಠ ಮೌಲ್ಯ 10,000 ರೂ ಇರಬಹುದು.
  • ಒಂದು ವರ್ಷದಲ್ಲಿ ಒಂದು ಮ್ಯೂಚುವಲ್ ಫಂಡ್ ಸಂಸ್ಥೆಯಲ್ಲಿ ಈ ರೀತಿ ಗಿಫ್ಟ್ ಕಾರ್ಡ್​ಗಳ ಮೂಲಕ ಗರಿಷ್ಠ 50,000 ರೂ ಹೂಡಿಕೆಗೆ ಮಾತ್ರ ಅವಕಾಶ ಇರುತ್ತದೆ.
  • ಈ ಗಿಫ್ಟ್ ಕಾರ್ಡ್ ಅಥವಾ ಪಿಪಿಐ ಒಂದು ವರ್ಷದವರೆಗೆ ಮಾನ್ಯವಿರುತ್ತದೆ. ಅದನ್ನು ಬಳಸದಿದ್ದರೆ ಖರೀದಿದಾರರಿಗೆ ಹಣ ಮರಳುತ್ತದೆ.
  • ಗಿಫ್ಟ್ ಕಾರ್ಡ್​ನಿಂದ ಕ್ಯಾಷ್ ಪಡೆಯಲು ಆಗುವುದಿಲ್ಲ. ಮ್ಯೂಚುವಲ್ ಫಂಡ್ ಯುನಿಟ್​ಗಳನ್ನು ಮಾತ್ರವೇ ಖರೀದಿಸಬಹುದು.
  • ಗಿಫ್ಟ್ ಕಾರ್ಡ್ ಬಳಸುವ ವ್ಯಕ್ತಿಯ ಹೆಸರಿನಲ್ಲೇ ಹೂಡಿಕೆ ಆಗಬೇಕು.
  • ಗಿಫ್ಟ್ ಕಾರ್ಡ್​ನ ಎಲ್ಲಾ ಹಣವೂ ಮ್ಯೂಚುವಲ್ ಫಂಡ್ ಯುನಿಟ್​ಗಳ ಖರೀದಿಗೆ ಬಳಕೆ ಆಗಬೇಕು.
  • ಗಿಫ್ಟ್ ಕಾರ್ಡ್​ಗಳನ್ನು ನೀಡಲು ಆಗುವ ವೆಚ್ಚವನ್ನು ಮ್ಯೂಚುವಲ್ ಫಂಡ್ ಸಂಸ್ಥೆಗಳೇ ಭರಿಸಬೇಕು. ಹೂಡಿಕೆದಾರರಿಂದ ಈ ವೆಚ್ಚ ಭರಿಸುವಂತಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್​ನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದವ ಈಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿಗೆ ಅಧ್ಯಕ್ಷ

2026 ರ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಮಾಲೀಕರ ಕೈಸೇರಿದೆ. 2008 ರಿಂದ ಐಪಿಎಲ್‌ನಲ್ಲಿ ಆಡುತ್ತ ಬಂದಿರುವ ಆರ್​ಸಿಬಿ ಇದುವರೆಗೆ ಒಮ್ಮೆ ಮಾತ್ರ ಚಾಂಪಿಯನ್ ಆಗಿದೆ, ಅದು ಕಳೆದ ಆವೃತ್ತಿಯಲ್ಲಿ. ಅಂದರೆ ಸತತ 18 ವರ್ಷಗಳ ಕಾಯುವಿಕೆಯ ಬಳಿಕ ಏಕೈಕ ಟ್ರೋಫಿ ಗೆದ್ದಿರುವ ಆರ್​ಸಿಬಿ, ಇದೀಗ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇಲ್ಲಿ ಅಚ್ಚರಿಯ ಸಂಗತಿ ಏನೆಂದರೆ ಒಂದು ಕಾಲದಲ್ಲಿ ಇದೇ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿ ಕೇವಲ 30 ಲಕ್ಷ ರೂ. ಮೂಲ ಬೆಲೆಗೆ ಮಾರಾಟವಾಗಿದ್ದ ಆಟಗಾರನೊಬ್ಬ ಇದೀಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿ ತಂಡಕ್ಕೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ.

ಮೇಲೆ ಹೇಳಿದಂತೆ ಕಳೆದ ವರ್ಷ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾರಾಟದ ಬಗ್ಗೆಗಿನ ಸುದ್ದಿ ಕಳೆದ ವರ್ಷವೇ ಹೊರಬಿದ್ದಿತ್ತು. ಅದರಂತೆ ಮಾರ್ಚ್​ 24, 2026 ರಂದು ಆರ್​ಸಿಬಿ ಅಧಿಕೃತವಾಗಿ ಹೊಸ ಮಾಲೀಕರ ಪಾಲಾಗಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್‌ಸ್ಟೋನ್ ಜಂಟಿಯಾಗಿ 16,600 ಕೋಟಿಗೆ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿವೆ.

ಆದರೆ ಈ ನಾಲ್ಕು ಕಂಪನಿಗಳಲ್ಲಿ ಯಾವ ತಂಡ ಆರ್​ಸಿಬಿಯಲ್ಲಿ ಹೆಚ್ಚಿನ ಪಾಲು ಹೊಂದಿದೆ? ಅಥವಾ ಈ ತಂಡದಲ್ಲಿ 4 ಕಂಪನಿಗಳ ಪಾಲು ಎಷ್ಟೇಷ್ಟು ಎಂಬುದು ಇನ್ನು ಖಚಿತವಾಗಿಲ್ಲ. ಆದಾಗ್ಯೂ ಆದಿತ್ಯ ಬಿರ್ಲಾ ಗ್ರೂಪ್ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರನ್ನು ಆರ್‌ಸಿಬಿಯ ಹೊಸ ಅಧ್ಯಕ್ಷನಾಗಿ ಘೋಷಿಸಲಾಗಿದೆ. ಅಷ್ಟಕ್ಕೂ ಈ ಆರ್ಯಮಾನ್ ವಿಕ್ರಮ್ ಬಿರ್ಲಾ ಯಾರು ಎಂಬುದನ್ನು ನೋಡುವುದಾದರೆ.. ಬಿರ್ಲಾ ಗ್ರೂಪ್‌ನ ಮಾಲೀಕರಾದ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ. ಕೇವಲ 28 ವರ್ಷ ವಯಸ್ಸಿನಲ್ಲಿಯೇ ಐಪಿಎಲ್‌ನ ಅತ್ಯಂತ ದುಬಾರಿ ತಂಡದ ಮಾಲೀಕರಾಗಿರುವ ಆರ್ಯಮಾನ್ ವಿಕ್ರಮ್ ಬಿರ್ಲಾ, ಈ ಹಿಂದೆ ಇದೇ ಐಪಿಎಲ್‌ನಲ್ಲಿ ತಂಡವೊಂದರ ಸದಸ್ಯರಾಗಿದ್ದರು. ಆದಾಗ್ಯೂ ಆರ್ಯಮಾನ್​ಗೆ ಆಟಗಾರನಾಗಿ ಐಪಿಎಲ್​ಗೆ ಪಾದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ. ಅಂದರೆ ಆರ್ಯಮಾನ್ ಹರಾಜಿನಲ್ಲಿ ಖರೀದಿಯಾದರೂ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ.

ಆರ್ಯಮಾನ್ ವಿಕ್ರಮ್ ಬಿರ್ಲಾ ಉದ್ಯಮಿಯಾಗಿ ಹೆಸರು ಮಾಡುವುದಕ್ಕೂ ಮೊದಲು ಒಬ್ಬ ಕ್ರಿಕೆಟಿಗರಾಗಿದ್ದರು. ಮಧ್ಯಪ್ರದೇಶದ ಪರ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿರುವ ಅವರು 13 ಪಂದ್ಯಗಳಲ್ಲಿ 450 ರನ್ ಕಲೆಹಾಕಿದ್ದಾರೆ. ಇದಾದ ನಂತರ 2018 ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ, ಆರ್ಯಮಾನ್ ಅವರನ್ನು 30 ಲಕ್ಷಕ್ಕೆ ಖರೀದಿಸಿತು. ಆ ಸಮಯದಲ್ಲಿ ಅವರಿಗೆ ಕೇವಲ 20 ವರ್ಷ ವಯಸ್ಸಾಗಿತ್ತು, ಆದರೆ ಆ ಇಡೀ ಆವೃತ್ತಿಯಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ.

ಇದಾದ ಒಂದು ವರ್ಷದ ನಂತರ ಅಂದರೆ 2019 ರಲ್ಲಿ ತಮ್ಮ ಕೊನೆಯ ದೇಶೀಯ ಪಂದ್ಯವನ್ನು ಆಡಿದ ಆರ್ಯಮಾನ್ ವಿಕ್ರಮ್ ಬಿರ್ಲಾ, ಆ ಬಳಿಕ ತಮ್ಮ ತಂದೆಯ ಜೊತೆ ಕುಟುಂಬ ವ್ಯವಹಾರದಲ್ಲಿ ಸೇರಿಕೊಂಡರು. ಇದೀಗ ಎಂಟು ವರ್ಷಗಳ ನಂತರ, ಆರ್ಯಮಾನ್ ಬಿರ್ಲಾ ಐಪಿಎಲ್‌ನ ಅತ್ಯಂತ ದುಬಾರಿ ತಂಡದ ಮಾಲೀಕರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಕಾಕತಾಳೀಯವಾಗಿ, ರಾಜಸ್ಥಾನ ರಾಯಲ್ಸ್‌ನ ಮಾರಾಟವನ್ನು ಘೋಷಿಸಿದ ಅದೇ ದಿನದಂದು ಅವರನ್ನು ಆರ್‌ಸಿಬಿಯ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಒಂದೆಡೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅಮೆರಿಕದ ಒಕ್ಕೂಟವು 15,300 ಕೋಟಿಗೆ ಖರೀದಿಸಿದರೆ, ಇತ್ತ ಬಿರ್ಲಾ ಗ್ರೂಪ್ ಒಕ್ಕೂಟವು ಆರ್‌ಸಿಬಿಯನ್ನು 16,600 ಕೋಟಿಗೆ ಖರೀದಿಸುವ ಮೂಲಕ ಅತ್ಯಂತ ದುಬಾರಿ ತಂಡದ ಮಾಲೀಕ ಎನಿಸಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್! ವಯಸ್ಸಿನ ಪರೀಕ್ಷೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಯಾರಿಗೆ ಶಿಕ್ಷೆ?

ಬೆಂಗಳೂರು, ಮಾ.25: ಪಬ್ ಮತ್ತು ಬ್ರೀವರಿಗಳಲ್ಲಿ ಅಪ್ರಾಪ್ತರು ಮದ್ಯಪಾನ ಮಾಡುವ ಪ್ರವೃತ್ತಿಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಡಿವಾಣ ಹಾಕಿದೆ. ಅಪ್ರಾಪ್ತರನ್ನು ಮದ್ಯಪಾನದ ವ್ಯಸನದಿಂದ ರಕ್ಷಿಸುವುದು ಆಡಳಿತ ಮಂಡಳಿಯ ನೈತಿಕ ಮತ್ತು ಶಾಸನಾತ್ಮಕ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬ್ರೀವರಿಗಳಿಗೆ ಗ್ರಾಹಕರು ಪ್ರವೇಶಿಸುವಾಗಲೇ ಅವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಮದ್ಯ ಸರಬರಾಜು ಮಾಡುವ ಸಂದರ್ಭದಲ್ಲೂ ಸಿಬ್ಬಂದಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ.

“ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಎಂಬ ಎಚ್ಚರಿಕೆ ಫಲಕಗಳನ್ನು ಪ್ರತಿಯೊಂದು ಬ್ರೀವರಿಯಲ್ಲಿ ಎದ್ದು ಕಾಣುವಂತೆ ಹಾಕಿರಬೇಕು. ಅಪ್ರಾಪ್ತರು ಬ್ರೀವರಿಗಳ ಒಳಗೆ ಕದ್ದುಮುಚ್ಚಿ ಮದ್ಯಪಾನ ಮಾಡಿದರೂ ಸಹ, ಅದಕ್ಕೆ ಅಲ್ಲಿನ ಆಡಳಿತ ಮಂಡಳಿಯೇ ಸಂಪೂರ್ಣ ಹೊಣೆಯಾಗುತ್ತದೆ. ಈ ಜವಾಬ್ದಾರಿಯಿಂದ ಮಾಲೀಕರು ನುಣುಚಿಕೊಳ್ಳಲು ಸಾಧ್ಯವಿಲ್ಲ.

ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್​​​ಗೆ ಮಾನಸಿಕ ತಪಾಸಣೆ ಮಾಡಿಸಿ, ಚುನಾವಣಾ ಆಯೋಗಕ್ಕೆ ಮನವಿ

ರಾಜರಾಜೇಶ್ವರಿ ನಗರದ ಬ್ರೀವರಿ ಮಾಲೀಕ ವಿ. ಚಿಟ್ಟಿಬಾಬು ವಿರುದ್ಧ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಮದ್ಯಪಾನದಿಂದ ಅಪ್ರಾಪ್ತರನ್ನು ಕಾಪಾಡುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಡಿಜಿಟಲ್ ಹಕ್ಕಿದೆ ಜಿದ್ದಾಜಿದ್ದಿ: ಅಂತಿಮ ಗೆಲುವು ಯಾರಿಗೆ?

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2′ (Dhuandhar 2) ಸಿನಿಮಾ ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 800 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಕೆ ಮಾಡಿ ಇತಿಹಾಸ ಸೃಷ್ಟಿಸುತ್ತಿದೆ. ಈಗಾಗಲೇ ‘ಜವಾನ್’, ‘ಪುಷ್ಪ 2’ ಇನ್ನೂ ಕೆಲವು ಸಿನಿಮಾಗಳ ದಾಖಲೆಗಳನ್ನು ಮುರಿದು ಹಾಕಿದೆ ಈ ಸಿನಿಮಾ. ಚಿತ್ರಮಂದಿರದಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವೀಕೆಂಡ್ ಮಾತ್ರವಲ್ಲ, ವಾರದ ದಿನಗಳಲ್ಲಿಯೂ ಸಹ ಶೋಗಳು ಭರ್ತಿ ಆಗುತ್ತಿವೆ. ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರುವ ಈ ಸಿನಿಮಾ ಒಟಿಟಿಯಲ್ಲಿಯೂ ದೊಡ್ಡ ಮ್ಯಾಜಿಕ್ ಮಾಡುವುದು ಬಹುತೇಕ ಖಾತ್ರಿ. ಅಂದಹಾಗೆ ಸಿನಿಮಾದ ಒಟಿಟಿ ಹಕ್ಕು ಯಾರ ಬಳಿ ಇದೆ?

ಈ ಹಿಂದೆ 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಮೊದಲ ಭಾಗದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿತ್ತು. ಎರಡನೇ ಭಾಗವೂ ನೆಟ್​​ಫ್ಲಿಕ್ಸ್ ಪಾಲಾಗಲಿದೆ ಎನ್ನಲಾಗಿತ್ತು. ಆದರೆ ಹಾಗಾಗಿಲ್ಲ, ಸಿನಿಮಾದ ಎರಡನೇ ಭಾಗ ನೆಟ್​​ಫ್ಲಿಕ್ಸ್ ಬದಲಿಗೆ ಜಿಯೋ ಹಾಟ್​​ಸ್ಟಾರ್ ಪಾಲಾಗಿದೆ. ಜಿಯೋ ಹಾಟ್‌ಸ್ಟಾರ್ ಭರ್ಜರಿ ಆಫರ್ ನೀಡುವ ಮೂಲಕ ‘ಧುರಂಧರ್ 2’ ಸಿನಿಮಾದ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.

ಮೂಲಗಳ ಪ್ರಕಾರ, ಜಿಯೋ ಹಾಟ್‌ಸ್ಟಾರ್ ಈ ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ ಸುಮಾರು 150 ಕೋಟಿ ರೂಪಾಯಿಗಳನ್ನು ನೀಡಿದೆ ಎನ್ನಲಾಗುತ್ತಿದೆ. ಮೊದಲ ಭಾಗಕ್ಕೆ ನೆಟ್‌ಫ್ಲಿಕ್ಸ್ ನೀಡಿದ್ದ ಮೊತ್ತಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು ಎನ್ನಲಾಗಿದೆ. ನೆಟ್‌ಫ್ಲಿಕ್ಸ್ ಆರಂಭದಲ್ಲಿ ಎರಡೂ ಭಾಗಗಳನ್ನು ಒಟ್ಟಾಗಿ ಖರೀದಿಸಲು ಆಸಕ್ತಿ ತೋರಿತ್ತು. ಆದರೆ ಚಿತ್ರದ ಯಶಸ್ಸಿನ ಮೇಲೆ ನಂಬಿಕೆ ಇಟ್ಟಿದ್ದ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್, ಎರಡನೇ ಭಾಗಕ್ಕಾಗಿ ಪ್ರತ್ಯೇಕವಾಗಿ ದೊಡ್ಡ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದರಿಂದ, ಚಿತ್ರತಂಡವು ಅಧಿಕೃತವಾಗಿ ಒಟಿಟಿ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಇನ್ನು ಸಿನಿಮಾದ ಟಿವಿ ರೈಟ್ಸ್ ಸ್ಟಾರ್ ಸಂಸ್ಥೆಯ ಪಾಲಾಗಿದೆ.

ಇದನ್ನೂ ಓದಿ;ಆರು ದಿನಕ್ಕೆ 900 ಕೋಟಿ ಗಳಿಸಿದ ‘ಧುರಂಧರ್ 2’; ಆದರೂ, ಒಂದು ವಿಷಯದಲ್ಲಿ ಚಿತ್ರಕ್ಕೆ ಸೋಲು

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ನಂತರ ಅಂದರೆ ಮೇ ಅಂತ್ಯ ಅಥವಾ ಜೂನ್ 2026ರ ಆರಂಭದಲ್ಲಿ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆಯಿದೆ. ಈ ಸಿನಿಮಾ ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಸ್ಟ್ರೀಮಿಂಗ್ ಆಗಲಿದೆ. ಜಿಯೋ ಹಾಟ್​​ಸ್ಟಾರ್ ನಲ್ಲಿ ಯಾವುದೇ ಹೆಚ್ಚುವರಿ ಶುಲ್ಕದ ಅವಶ್ಯಕತೆ ಇಲ್ಲದೆ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾಚಿಕೆಯಾಗುವುದಿಲ್ಲವೇ?; 4 ವರ್ಷದ ಮಗು ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ, ಮಾರ್ಚ್ 25: ಹರಿಯಾಣದ ಗುರುಗ್ರಾಮದಲ್ಲಿ 4 ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದ ತನಿಖೆ ವೇಳೆ ಹರಿಯಾಣ ಪೊಲೀಸರು ಸೂಕ್ಷ್ಮತೆಯಿಲ್ಲದೆ ವರ್ತಿಸಿದ್ದಾರೆ, ಮಗುವಿನ ಬಳಿ ಯಾವುದೇ ಪುರಾವೆಗಳಿಲ್ಲವೆಂದು ನಿರೂಪಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಹರಿಯಾಣ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. 4 ವರ್ಷದ ಮಗುವಿನ ಮೇಲಿನ ಅತ್ಯಾಚಾರದಲ್ಲಿ ಸಾಕ್ಷಿಗಳು ಸ್ಪಷ್ಟವಾಗಿದ್ದರೂ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ. ಹಾಗೇ, ಅತ್ಯಾಚಾರಕ್ಕೊಳಗಾದ ಮಗು ಮತ್ತು ಆಕೆಯ ಪೋಷಕರೊಂದಿಗೆ ಪೊಲೀಸ್ ಅಧಿಕಾರಿಗಳ ನಡವಳಿಕೆಯನ್ನು ನ್ಯಾಯಾಲಯವು ಟೀಕಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣದ ತನಿಖೆಗೆ ಎಸ್​ಐಟಿ ರಚಿಸಲು ಆದೇಶಿಸಿದೆ. “ಸಂಪೂರ್ಣ ಮನುಷ್ಯ ಸಂವೇದನೆ”ಯೊಂದಿಗೆ ಈ ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಆದೇಶಿಸಲಾಗಿದೆ. ಹಾಗೇ, ಗುರುಗ್ರಾಮ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅರೋರಾ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ. ಮಗುವಿನ ವೈದ್ಯಕೀಯ ವರದಿಯನ್ನು ಬದಲಾಯಿಸಿದ ವೈದ್ಯರ ವಿರುದ್ಧವೂ ನ್ಯಾಯಾಲಯವು ದೋಷಾರೋಪಣೆ ಮಾಡಿದೆ.

“ಕಮಿಷನರ್‌ನಿಂದ ಸಬ್-ಇನ್‌ಸ್ಪೆಕ್ಟರ್‌ವರೆಗಿನ ಇಡೀ ಪೊಲೀಸ್ ಪಡೆ ಅತ್ಯಾಚಾರಕ್ಕೊಳಗಾದ ಆ ಮಗುವಿನ ಬಳಿ ಯಾವುದೇ ಪುರಾವೆಗಳಿಲ್ಲ ಅಥವಾ ಪೋಷಕರ ಬಳಿ ಯಾವುದೇ ಸಾಕ್ಷಿಗಳಿಲ್ಲ ಎಂದು ಸಾಬೀತುಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಇಂತಹ ಕೃತ್ಯ ಮಾಡಲು ನಿಮಗೆ ನಾಚಿಕೆಯಾಗಬೇಕು. ಸ್ವಲ್ಪವೂ ಮನುಷ್ಯತ್ವವಿಲ್ಲದೆ ಆ ಕುಟುಂಬದೊಂದಿಗೆ ವರ್ತಿಸಲಾಗಿದೆ” ಎಂದು ಸಿಜೆಐ ನೇತೃತ್ವದ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ

ಗುರುಗ್ರಾಮದ ಪೊಲೀಸರ ನಿಷ್ಕ್ರಿಯತೆಯನ್ನು ಆರೋಪಿಸಿ ಮಗುವಿನ ಪೋಷಕರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಪ್ರಯತ್ನ ಪಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿದೆ. ಇದಕ್ಕೂ ಮೊದಲು, ಆರೋಪಿಯ ಸಮ್ಮುಖದಲ್ಲಿ ಮ್ಯಾಜಿಸ್ಟ್ರೇಟ್ ಮಗುವನ್ನು ಹೇಗೆ ಪ್ರಶ್ನಿಸಿದರು ಎಂಬುದರ ಕುರಿತು ನ್ಯಾಯಾಲಯವು ಪೊಲೀಸರು ಮತ್ತು ಜಿಲ್ಲಾ ನ್ಯಾಯಾಂಗದಿಂದ ಉತ್ತರಗಳನ್ನು ಕೇಳಿತ್ತು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6ರಿಂದ ಸೆಕ್ಷನ್ 10ಕ್ಕೆ ಅಪರಾಧವನ್ನು ಏಕೆ ಇಳಿಸಲಾಗಿದೆ? ಎಂದು ನ್ಯಾಯಪೀಠ ಕೇಳಿತು. ಸೆಕ್ಷನ್ 6 ಅಪರಾಧ ಸಾಬೀತಾದರೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಸೆಕ್ಷನ್ 10ರ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ಮಾತ್ರ ನೀಡಲಾಗುತ್ತದೆ. ಇಲ್ಲಿಯೂ ಮಗುವಿನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ. “ನೀವು ಆ 4 ವರ್ಷದ ಮಗುವಿನ ಮುಗ್ಧತೆಯನ್ನು ಕೂಡ ನಂಬಿಲ್ಲ. ಆ ಮಗುವಿಗೆ ಸುಳ್ಳು ಹೇಳಲು ಕೂಡ ಬರುವುದಿಲ್ಲ. ಆದರೂ ಆ ಮಗುವಿಗೆ ಹಾಗೂ ಅವರ ಪೋಷಕರಿಗೆ ಹಿಂಸೆ ನೀಡಿದ್ದೀರಿ. ನಿಮಗೆ ಬೇಕಾದಂತೆ ಹೇಳಿಕೆ ಪಡೆಯಲು ಯತ್ನಿಸಿದ್ದೀರಿ. ಇದು ನಾಚಿಕೆಗೇಡು. ರಾಜ್ಯಕ್ಕೆ ಕಾನೂನಿನ ಬಗ್ಗೆ ಗೌರವವಿದ್ದರೆ ಆ ಅಧಿಕಾರಿಗಳನ್ನು ತಕ್ಷಣ ವರ್ಗಾಯಿಸಬೇಕು. ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ ಎಂದು ನೀವು ಹೇಳುತ್ತೀರಿ. 15 ದಿನಗಳಿಂದ ನೀವು ಏನನ್ನೂ ಮಾಡಿಲ್ಲ. ಈ ಪ್ರಕರಣ ನಮ್ಮ ಗಮನಕ್ಕೆ ಬಂದ ತಕ್ಷಣ ನೀವು ಬಂಧಿಸಲು ಪ್ರಾರಂಭಿಸಿದಿರಿ. ಪೊಲೀಸರು ಈ ರೀತಿ ಸಂವೇದನಾರಹಿತರಾಗಿ ಕೆಲಸ ಮಾಡಬಾರದು” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ಇದನ್ನೂ ಓದಿ: ಯಾರನ್ನೂ ನಂಬಬೇಡಿ; ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸದಂತೆ ಸುಪ್ರೀಂ ಕೋರ್ಟ್ ಸಲಹೆ

“ಅಫಿಡವಿಟ್‌ನಲ್ಲಿ ಎಲ್ಲೆಡೆ ಮಗುವಿನ ಹೆಸರನ್ನು ಉಲ್ಲೇಖಿಸಲಾಗಿದೆ. ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸಬಾರದು ಎಂಬ ಕಿಂಚಿತ್ ತಿಳುವಳಿಕೆಯೂ ಪೊಲೀಸರಿಗೆ, ವಕೀಲರಿಗೆ ಇಲ್ಲವೇ? ಇದುವರೆಗೂ ಆ ಮಗುವಿನ ಮನೆಗೆ ಪೊಲೀಸರು ಭೇಟಿ ನೀಡಿಲ್ಲ. ಪೊಲೀಸರು ಮಹಾರಾಜರೇ? ಅವರು ಯಾಕೆ ಮಗುವಿನ ಮನೆಗೆ ತೆರಳಿ ಮಾಹಿತಿ ಪಡೆಯಲಿಲ್ಲ? ಪೊಲೀಸರು ಪದೇಪದೆ ಪೊಲೀಸ್ ಠಾಣೆಗೆ ಕರೆಸಿ ಇನ್ನಿಲ್ಲದ ರೀತಿ ಪ್ರಶ್ನಿಸಿ ಮಗುವಿಗೆ ಮಾನಸಿಕ ಹಿಂಸೆ ನೀಡಿದ್ದೀರಿ. ಇದರಿಂದ ಮಗುವಿನ ಆಘಾತ ಇನ್ನಷ್ಟು ಹೆಚ್ಚಾಗಿದೆ. ಇಂತಹ ಬೇಜವಾಬ್ದಾರಿ ವರ್ತನೆಯನ್ನು ಕೋರ್ಟ್ ಸಹಿಸುವುದಿಲ್ಲ” ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.

“ಈ ಪ್ರಕರಣದಲ್ಲಿ ಇನ್ನೂ ಆಳವಾದ ತನಿಖೆಯ ಅಗತ್ಯವಿದೆ. ಮಗು ಮತ್ತು ಆಕೆಯ ಪೋಷಕರ ಘನತೆಯನ್ನು ಕಾಪಾಡುವ ಸಂಪೂರ್ಣ ಮಾನವೀಯ ವಿಧಾನದೊಂದಿಗೆ ಈ ಘಟನೆಯನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಸಂಪೂರ್ಣವಾಗಿ ತನಿಖೆ ಮಾಡಬೇಕೆಂದು ನಮಗೆ ತೋರುತ್ತದೆ. ಇದು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಲಾದ ಒಂದು ಸ್ಪಷ್ಟ ಪ್ರಕರಣವಾಗಿದೆ. ಹೀಗಾಗಿ, ಹೊಸದಾದ ಎಸ್​ಐಟಿ ರಚನೆಯಾಬೇಕು. ಹೊಸದಾಗಿ ತನಿಖೆ ನಡೆಯಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಏನಿದು ಪ್ರಕರಣ?:

ಗುರುಗ್ರಾಮದ ಸೆಕ್ಟರ್ 54ರಲ್ಲಿರುವ ಅಪಾರ್ಟ್​ಮೆಂಟ್​​ನಲ್ಲಿ ಸುಮಾರು 2 ತಿಂಗಳ ಕಾಲ 4 ವರ್ಷದ ಮಗುವಿನ ಮೇಲೆ ಮನೆಕೆಲಸದಾಕೆಯ ಜೊತೆಗೆ ಬರುತ್ತಿದ್ದ ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಮಗುವಿನ ಪೋಷಕರು ಮಾಡಿದ ಆರೋಪಗಳ ನಂತರ, ಫೆಬ್ರವರಿ 4ರಂದು ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಪೊಲೀಸರ ಪ್ರಕಾರ, ಈ ಘಟನೆ ಡಿಸೆಂಬರ್ 2025 ಮತ್ತು ಜನವರಿ 2026ರ ನಡುವೆ ನಡೆದಿದ್ದರೂ ಆ ಬಾಲಕಿ ತನ್ನ ತಾಯಿಗೆ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ತಿಳಿಸಿದ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಮಗು ಮೊದಮೊದಲು ತನ್ನ ಅಪ್ಪ-ಅಮ್ಮನ ಬಳಿ ಯಾವ ವಿಚಾರವನ್ನೂ ಹೇಳಿರಲಿಲ್ಲ. ಯಾರಿಗೂ ಹೇಳಬಾರದೆಂದು ಮನೆಕೆಲಸದಾಕೆ ಆ ಮಗುವಿಗೆ ಹೆದರಿಸಿದ್ದಳು. ಮನೆಯಲ್ಲಿ ಆ ಮಗುವಿನ ಪೋಷಕರು ಇಲ್ಲದಿದ್ದಾಗ ಈ ಅತ್ಯಾಚಾರ ನಡೆಸಲಾಗುತ್ತಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಪೆದ್ದಿ’ ಸಿನಿಮಾ ಶೂಟಿಂಗ್ ವೇಳೆ ರಾಮ್ ಚರಣ್‌ಗೆ ಗಾಯ; ಕಣ್ಣಿನ ಮೇಲ್ಭಾಗ 4 ಹೊಲಿಗೆ

ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಅವರು ‘ಪೆದ್ದಿ’ (Peddi) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬೇಸರದ ವಿಷಯ ಏನೆಂದರೆ, ಈ ಸಿನಿಮಾದ ಚಿತ್ರೀಕರಣದ ವೇಳೆ ರಾಮ್ ಚರಣ್ ಅವರು ಗಾಯಗೊಂಡಿದ್ದಾರೆ. ಮಂಗಳವಾರ (ಮಾರ್ಚ್ 24) ಹೈದರಾಬಾದ್‌ನಲ್ಲಿ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುವಾಗ ಈ ಘಟನೆ ನಡೆದಿದೆ. ರಾಮ್ ಚರಣ್ (Ram Charan) ಕಣ್ಣಿಗೆ ಗಾಯವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಆದ್ದರಿಂದ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ದೊಡ್ಡ ಗಾಯ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ರಾಮ್ ಚರಣ್ ಅವರ ಆಪ್ತ ಮೂಲಗಳು, ನಟನ ಕಣ್ಣಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿವೆ. ‘ಮಂಗಳವಾರ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ರಾಮ್ ಚರಣ್ ಅವರ ಕಣ್ಣಿನ ಮೇಲ್ಭಾಗದಲ್ಲಿ ಸಣ್ಣ ಗಾಯವಾಗಿದೆ. ಇದಕ್ಕಾಗಿ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ಆದರೆ ಅವರ ಕಣ್ಣು ಸುರಕ್ಷಿತವಾಗಿದೆ. ಇದು ಸಣ್ಣ ಗಾಯವಾದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಅವರ ತಂಡ ಸ್ಪಷ್ಟಪಡಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.

ಗಾಯವಾದರೂ ಸಹ ರಾಮ್ ಚರಣ್ ಅವರು ಕೆಲಸಕ್ಕೆ ವಿರಾಮ ನೀಡಿಲ್ಲ. ವೈದ್ಯಕೀಯ ಚಿಕಿತ್ಸೆಯ ನಂತರ ಅವರು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ವಿಶ್ರಾಂತಿ ಪಡೆಯದೆ ಕೆಲಸಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಅವರ ವೃತ್ತಿಪರತೆಗೆ ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಿನಿಮಾಗೆ ‘ಉಪ್ಪೇನಾ’ ಖ್ಯಾತಿಯ ಬುಚ್ಚಿಬಾಬು ಸನಾ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರು ನಾಯಕಿಯಾಗಿ ನಟಿಸುತ್ತಿದ್ದು, ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ಕುತೂಹಲ ಮೂಡಿಸಿದೆ. ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಎ.ಆರ್. ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ಸಾಕಿದ ಹಕ್ಕಿಯೊಂದಿಗೆ ರಾಮ್ ಚರಣ್ ಮಾತುಕತೆ: ವಿಡಿಯೋ

‘ವೃದ್ಧಿ ಸಿನಿಮಾಸ್’ ಮೂಲಕ ‘ಪೆದ್ದಿ’ ಸಿನಿಮಾ ನಿರ್ಮಾಣ ಆಗುತ್ತಿದೆ. ಮೊದಲು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಬಳಿಕ ರಿಲೀಸ್ ದಿನಾಂಕ ಮುಂದೂಡಲಾಯಿತು. ಏಪ್ರಿಲ್ 30ರಂದು ವಿಶ್ವದಾದ್ಯಂತ ಈ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ. ರಾಮ್ ಚರಣ್ ಅವರ ಜನ್ಮದಿನದ (ಮಾರ್ಚ್ 27) ಪ್ರಯುಕ್ತ ಚಿತ್ರದ ವಿಶೇಷ ಟೀಸರ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link