Category Archives: Blog

Your blog category

ವಿಜಯಪುರದಲ್ಲಿ ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸೈಕ್ಲಿಂಗ್ ಲೀಗ್‌: ಇಲ್ಲಿವೆ ರೇಸ್‌ನ ರೋಚಕ ಕ್ಷಣಗಳು!

Source link

ಆಟವಾಡುವ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣ ಸಾವು – Kannada News | Tragedy in Doddaballapur: Two Children Drown to Death After Falling into Farm Pond

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವುImage Credit source: Tv9 Kannada

ದೊಡ್ಡಬಳ್ಳಾಪುರ, ಜೂನ್​​ 14: ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವವರ ಸರಣಿ ರಾಜ್ಯದಲ್ಲಿ ಮುಂದುರಿದಿದೆ. ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಪೋಷಕರು ಇಲ್ಲದಿದ್ದಾಗ ಆಟ ಆಡಲು ಹೋಗಿದ್ದ ದಕ್ಷಾ(11), ಧನುಷ್(4) ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮುಖ್ಯಾಂಶಗಳು

  • ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣ ಸಾವು
  • ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟದಲ್ಲಿ ಘಟನೆ
  • ಪೋಷಕರಿಲ್ಲದ ವೇಲೆ ಆಡಲು ಹೋಗಿ ಭಾರಿ ದುರಂತ

ಕೃಷಿ ಹೊಂಡಕ್ಕಿರಲಿಲ್ಲ ಬೇಲಿ!

ಇನ್ನು ಮಕ್ಕಳು ಮೃತಪಟ್ಟಿರುವ ಕೃಷಿ ಹೊಂಡ ರೈತ ಗುರುಮೂರ್ತಿ ಎಂಬುವವರಿಗೆ ಸೇರಿದ್ದು, ಇದಕ್ಕೆ ಕನಿಷ್ಠ ಬೇಲಿಯನ್ನೂ ಹಾಕಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಗುರುಮೂರ್ತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಫೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕಸ್ಟಮ್ಸ್​​ ಅಧಿಕಾರಿಗಳ ಭರ್ಜರಿ ಬೇಟೆ; ಬೆಂಗಳೂರು ಏರ್​ಪೋರ್ಟ್​​ನಲ್ಲಿ 1.37 ಕೋಟಿ ಮೌಲ್ಯದ ಬಂಗಾರ ವಶಕ್ಕೆ

ಮೇಲಿಂದ ಮೇಲೆ ದುರಂತ

ಕೃಷಿ ಹೊಂಡ, ಕೆರೆ, ಸಂಪ್​​ ಮುಂತಾದವುಗಳಿಗೆ ಬಿದ್ದು ಮಕ್ಕಳೇ ಬಲಿಯಾಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿವೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರದಲ್ಲಿ ಮನೆ ಮುಂದಿನ ನೀರಿನ ಸಂಪ್​ಗೆ ಬಿದ್ದು 2 ವರ್ಷದ ಮಗು ಮೃತಪಟ್ಟಿರುವ ಘಟನೆ ನಿನ್ನೆ (ಜೂನ್​​ 13) ವರದಿಯಾಗಿತ್ತು. ಅತ್ತ ಬಾಗಲಕೋಟೆಯಲ್ಲಿಯೂ ನೀರಿನ ಟ್ಯಾಂಕ್​ನಲ್ಲಿ ಮುಳುಗಿ 18 ತಿಂಗಳ ಹೆಣ್ಣು ಮಗು ದಾರುಣ ಅಂತ್ಯ ಕಂಡ ಘಟನೆ ಜೂನ್​​ 8ರಂದು ನಡೆದಿತ್ತು. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ದುರಂತವೀಗ ರಾಜ್ಯದಲ್ಲಿ ನಡೆದಿರೋದು ಆತಂಕ ಹೆಚ್ಚಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಆರ್ಡರ್ ಆರ್ಡರ್, ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ನುಗ್ಗಿ ನ್ಯಾಯಾಧೀಶರ ಜಾಗದಲ್ಲಿ ಕುಳಿತ ಮಹಿಳೆ – Kannada News | Varanasi Court Chaos: Woman Sits on Judge’s Chair, Shouts Order Order Security Tightened

ವಾರಾಣಸಿ, ಜೂನ್ 14: ವಾರಾಣಸಿ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಅಸಾಮಾನ್ಯ ಘಟನೆಯೊಂದು ಸಂಭವಿಸಿದೆ. ಮಹಿಳೆಯೊಬ್ಬರು ನ್ಯಾಯಾಲಯ(Court)ಕ್ಕೆ ನುಗ್ಗಿ ನ್ಯಾಯಾಧೀಶರ ಜಾಗದಲ್ಲಿ ಕುಳಿತು ಆರ್ಡರ್ ಆರ್ಡರ್ ಎಂದು ಕೂಗಿದ್ದಾರೆ. ನ್ಯಾಯಾಲಯದ ಸಿಬ್ಬಂದಿ ಮತ್ತು ಪೊಲೀಸರು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿ ಪರಿಸ್ಥಿತಿಯನ್ನು ಸುಸ್ಥಿತಿಗೆ ತಂದಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತ ಘಟನೆ ಇದಾಗಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನ್ಯಾಯಾಲಯದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಯಜುವೇಂದ್ರ ವಿಕ್ರಮ್ ಸಿಂಗ್ ಅವರು ರಜೆಯಲ್ಲಿದ್ದ ಸಮಯದಲ್ಲಿ, ಬೆಳಗ್ಗೆ 9 ಗಂಟೆಗೆ ನ್ಯಾಯಾಲಯದ ಕೋಣೆಗೆ ಪ್ರವೇಶಿಸಿದ ಮಹಿಳೆಯೊಬ್ಬರು ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತು ಆರ್ಡರ್ ಆರ್ಡರ್ ಎಂದು ಕೂಗಿದ್ದಾರೆ.
ಅಲ್ಲಿ ನೆರೆದಿದ್ದ ವಕೀಲರು ಹಾಗೂ ನ್ಯಾಯಾಲಯದ ನೌಕರರು ಆಕೆಯ ಸ್ಥಿತಿಯನ್ನು ಅರಿತು, ಯಾವುದೇ ಆತುರದ ಕ್ರಮಕ್ಕೆ ಮುಂದಾಗದೆ ಅತ್ಯಂತ ತಾಳ್ಮೆಯಿಂದ ಆಕೆಯನ್ನು ಮನವೊಲಿಸಲು ಯತ್ನಿಸಿದರು.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕ್ಯಾಂಟ್ ಪೊಲೀಸ್ ಠಾಣೆಯ ಮಹಿಳಾ ಅಧಿಕಾರಿಗಳ ತಂಡವು ಅತ್ಯಂತ ಚಾಕಚಕ್ಯತೆಯಿಂದ ಮಹಿಳೆಯನ್ನು ಕುರ್ಚಿಯಿಂದ ಕೆಳಗಿಳಿಸಿ, ಕೋರ್ಟ್ ರೂಮ್‌ನಿಂದ ಹೊರಗೆ ಕರೆತಂದಿತು. ಪ್ರಾಥಮಿಕ ತನಿಖೆಯಲ್ಲಿ ಆಕೆಯ ನಡವಳಿಕೆಯು ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಕೂಡಿದೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ, ಪೊಲೀಸರು ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದೆ, ಮಾನವೀಯತೆಯ ಆಧಾರದ ಮೇಲೆ ಆಕೆಯನ್ನು ಸುರಕ್ಷಿತವಾಗಿ ಕುಟುಂಬಸ್ಥರ ವಶಕ್ಕೆ ಹಸ್ತಾಂತರಿಸಿದ್ದಾರೆ.

ಮತ್ತಷ್ಟು ಓದಿ: ಪ್ರೀತಿಯ ಗೆಲುವು: ನ್ಯಾಯಾಧೀಶರ ಮುಂದೆಯೇ ವಿಚ್ಛೇದನ ಪತ್ರ ಹರಿದು ಗಂಡನನ್ನು ಅಪ್ಪಿಕೊಂಡ ಹೆಂಡತಿ

ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯದ ಆಡಳಿತ ಮಂಡಳಿ, ಇಂತಹ ನಿರ್ಬಂಧಿತ ಪ್ರದೇಶಗಳಿಗೆ ಸಾರ್ವಜನಿಕರ ಮುಕ್ತ ಪ್ರವೇಶವನ್ನು ತಡೆಯಲು ತನಿಖೆಗೆ ಆದೇಶಿಸಿದೆ. ಭದ್ರತಾ ಲೋಪವನ್ನು ಸರಿಪಡಿಸಲು ಮತ್ತು ಇನ್ನು ಮುಂದೆ ಇಂತಹ ಗೊಂದಲಗಳು ಮರುಕಳಿಸದಂತೆ ನ್ಯಾಯಾಲಯ ಸಂಕೀರ್ಣದಾದ್ಯಂತ ಕಟ್ಟುನಿಟ್ಟಿನ ತಪಾಸಣಾ ವ್ಯವಸ್ಥೆ ಹಾಗೂ ಸಿಸಿಟಿವಿ ಕಣ್ಗಾವಲನ್ನು ಮತ್ತಷ್ಟು ಬಲಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಡಿಯೋ

ಸ್ಥಳೀಯ ವಕೀಲರ ಪ್ರಕಾರ ಆಕೆ ಈ ಹಿಂದೆಯೂ ಇಂತಹ ಪ್ರಯತ್ನ ಮಾಡಿದ್ದರು ಎನ್ನಲಾಗಿದ್ದು, ಪ್ರಸ್ತುತ ತನಿಖೆಯು ನ್ಯಾಯಾಲಯಗಳ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಅಭೇದ್ಯಗೊಳಿಸಲು ನೆರವಾಗಲಿದೆ. ಅಧಿಕಾರಿಗಳ ತ್ವರಿತ ಸ್ಪಂದನೆಯಿಂದಾಗಿ ನ್ಯಾಯಾಲಯದ ಸಾಮಾನ್ಯ ಕಲಾಪಗಳು ಶೀಘ್ರದಲ್ಲೇ ಯಥಾಸ್ಥಿತಿಗೆ ಮರಳಿದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Somvati Amavasya 2026: ಜೂ. 15 ಸೋಮವತಿ ಅಮಾವಾಸ್ಯೆ ; ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು? – Kannada News | Somvati Amavasya 2026: Date, Puja Vidhi and Benefits for Pitru, Shiva, Lakshmi Blessings

ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯ ದಿನವು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ವಿಶೇಷವಾಗಿ, ಸೋಮವಾರದಂದು ಬರುವ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಈ ದಿನವನ್ನು ಶಿವ, ಲಕ್ಷ್ಮಿ ದೇವಿ ಹಾಗೂ ಪೂರ್ವಜರ (ಪಿತೃಗಳ) ವಿಶೇಷ ಆಶೀರ್ವಾದ ಪಡೆಯಲು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಅದರಲ್ಲೂ 2026 ರ ಅಧಿಕ ಜ್ಯೇಷ್ಠ ಮಾಸದಲ್ಲಿ ಬರುವ ಈ ಸೋಮವತಿ ಅಮಾವಾಸ್ಯೆಯು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತಷ್ಟು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ಜೂನ್ 14 ಅಥವಾ ಜೂನ್ 15? ಗೊಂದಲಕ್ಕೆ ಇಲ್ಲಿದೆ ಪರಿಹಾರ:

ಕ್ಯಾಲೆಂಡರ್ ಪ್ರಕಾರ ಅಮಾವಾಸ್ಯೆಯ ತಿಥಿಯು ಜೂನ್ 14 ರಂದು ಮಧ್ಯಾಹ್ನ 12:20 ಕ್ಕೆ ಆರಂಭವಾಗಿ, ಜೂನ್ 15, 2026 ರಂದು ಬೆಳಿಗ್ಗೆ 8:24 ಕ್ಕೆ ಮುಕ್ತಾಯವಾಗುತ್ತದೆ. ಶಾಸ್ತ್ರಗಳ ಪ್ರಕಾರ, ಸೂರ್ಯೋದಯದ ಸಮಯದಲ್ಲಿ ಯಾವ ತಿಥಿ ಇರುತ್ತದೆಯೋ ಆ ದಿನವೇ ಹಬ್ಬ ಅಥವಾ ವ್ರತವನ್ನು ಆಚರಿಸಬೇಕು. ಆದ್ದರಿಂದ, ಜೂನ್ 15ರ ಸೋಮವಾರದಂದು ಸೂರ್ಯೋದಯದ ಸಮಯದಲ್ಲಿ ಅಮಾವಾಸ್ಯೆ ಇರುವುದರಿಂದ, ಜೂನ್ 15 ರಂದೇ ಸೋಮವತಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ತಿಥಿಯು ಬೆಳಿಗ್ಗೆ 8:24 ರವರೆಗೆ ಮಾತ್ರ ಇರುವುದರಿಂದ, ಆ ಸಮಯಕ್ಕೆ ಮುಂಚಿತವಾಗಿ ಪ್ರಮುಖ ಪೂಜೆಗಳು ಮತ್ತು ತರ್ಪಣಗಳನ್ನು ಪೂರ್ಣಗೊಳಿಸುವುದು ಸೂಕ್ತ.

ಈ ದಿನದ ವಿಶೇಷತೆ ಮತ್ತು ಮಹತ್ವ:

ಸೋಮಾವತಿ ಅಮಾವಾಸ್ಯೆಯಂದು ಮಾಡುವ ಧಾರ್ಮಿಕ ಕಾರ್ಯಗಳಿಗೆ ಸಾವಿರ ಪಟ್ಟು ಹೆಚ್ಚಿನ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಶಿವನ ಆರಾಧನೆ ಮಾಡುವುದರಿಂದ ಕೋಟಿ ಯಜ್ಞಗಳ ಪುಣ್ಯ ಲಭಿಸುತ್ತದೆ. ಅಲ್ಲದೆ, ಪಿತೃ ತರ್ಪಣ ಮಾಡುವುದರಿಂದ ಪಿತೃ ದೋಷಗಳು ನಿವಾರಣೆಯಾಗುತ್ತವೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಮಂತ್ರ ಜಪ ಮಾಡುವುದರಿಂದ ಅಕ್ಷಯ ಪುಣ್ಯ ಲಭಿಸುತ್ತದೆ. ಇದು ಅಧಿಕ ಮಾಸದಲ್ಲಿ ಬಂದಿರುವುದರಿಂದ, ಈ ದಿನ ಮಾಡುವ ಪ್ರತಿಯೊಂದು ಸತ್ಕರ್ಮವೂ ಶಾಶ್ವತ ಫಲಿತಾಂಶಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಶುಭ ಮುಹೂರ್ತಗಳು ಮತ್ತು ಪೂಜಾ ವಿಧಾನ:

ಈ ಪವಿತ್ರ ದಿನದಂದು ಪೂಜಾ ಕಾರ್ಯಗಳನ್ನು ನೆರವೇರಿಸಲು ಜ್ಯೋತಿಷ್ಯ ಶಾಸ್ತ್ರವು ಕೆಲವು ನಿರ್ದಿಷ್ಟ ಶುಭ ಸಮಯಗಳನ್ನು ಸೂಚಿಸಿದೆ:

  • ಬ್ರಹ್ಮ ಮುಹೂರ್ತ: ಬೆಳಿಗ್ಗೆ 4:00 ರಿಂದ 5:30 (ಈ ಸಮಯದಲ್ಲಿ ಎದ್ದು ಸ್ನಾನ ಮಾಡುವುದು ಶ್ರೇಷ್ಠ).
  • ಪಿತೃ ತರ್ಪಣ ಸಮಯ: ಬೆಳಿಗ್ಗೆ 6:00 ರಿಂದ 8:00 ರ ನಡುವೆ ಪಿತೃಗಳಿಗೆ ತರ್ಪಣ ನೀಡುವುದು ಅತ್ಯಂತ ಶುಭ.

ಸರಳ ಪೂಜಾ ವಿಧಾನ:

ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ನಂತರ ಶಿವಲಿಂಗಕ್ಕೆ ನೀರು ಮತ್ತು ಹಾಲಿನ ಅಭಿಷೇಕ ಮಾಡಿ, ಬಿಲ್ವದಳಗಳನ್ನು ಸಮರ್ಪಿಸಬೇಕು. ಈ ಸಮಯದಲ್ಲಿ “ಓಂ ನಮಃ ಶಿವಾಯ” ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಬೇಕು. ಬಳಿಕ ಪಿತೃದೇವತೆಗಳಿಗೆ ನೈವೇದ್ಯ ಅರ್ಪಿಸಿ, ಬಡವರಿಗೆ ದಾನ ಧರ್ಮ ಮಾಡಬೇಕು. ಸಂಜೆ ಮನೆಯಲ್ಲಿ ದೀಪ ಬೆಳಗಿಸಿ ಶಿವ-ಪಾರ್ವತಿಯರನ್ನು ಪ್ರಾರ್ಥಿಸಬೇಕು.

ಕಷ್ಟ ನಿವಾರಣೆಗೆ ಮಾಡಬೇಕಾದ ಪ್ರಮುಖ ದಾನಗಳು:

ಶಾಸ್ತ್ರಗಳ ಪ್ರಕಾರ, ಸೋಮವತಿ ಅಮಾವಾಸ್ಯೆಯಂದು ಮಾಡುವ ದಾನಗಳು ಪೂರ್ವಜರ ಆತ್ಮಕ್ಕೆ ಶಾಂತಿ ನೀಡುವುದಲ್ಲದೆ, ಶನಿದೋಷದ ಕಷ್ಟಗಳನ್ನು ಕಡಿಮೆ ಮಾಡುತ್ತದೆ. ಈ ದಿನ ಕೆಳಗಿನ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರ:

  • ಕಪ್ಪು ಎಳ್ಳು, ಭತ್ತ ಮತ್ತು ಗೋಧಿ
  • ಬಟ್ಟೆಗಳು, ಛತ್ರಿ ಮತ್ತು ಪಾದರಕ್ಷೆಗಳು
  • ಕುಡಿಯುವ ನೀರಿನ ಪಾತ್ರೆಗಳು ಮತ್ತು ಅನ್ನದಾನ
  • ಗೋಸೇವೆ (ಹಸುಗಳಿಗೆ ಆಹಾರ ನೀಡುವುದು)

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಆರ್ಥಿಕ ಸಮಸ್ಯೆಗಳ ನಿವಾರಣೆಗೆ ವಿಶೇಷ ಪರಿಹಾರಗಳು:

ನಿಮ್ಮ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದ್ದರೆ, ಈ ಶುಭ ದಿನದಂದು ಕೆಲವು ಸರಳ ತಾಂತ್ರಿಕ/ಧಾರ್ಮಿಕ ಪರಿಹಾರಗಳನ್ನು ಮಾಡಿಕೊಳ್ಳಬಹುದು:

  • ಲಕ್ಷ್ಮೀ ಕಟಾಕ್ಷಕ್ಕಾಗಿ: ಅಮಾವಾಸ್ಯೆಯ ದಿನ ಬೆಳಿಗ್ಗೆ, ಲಕ್ಷ್ಮಿ ದೇವಿಯ ಚಿತ್ರದ ಮುಂದೆ 11 ಹಸುವಿನ ತುಪ್ಪದ ದೀಪಗಳನ್ನು ಬೆಳಗಿಸಿ. “ಓಂ ಶ್ರೀ ಮಹಾಲಕ್ಷ್ಮಿ ನಮಃ” ಮಂತ್ರವನ್ನು 108 ಬಾರಿ ಪಠಿಸಿ.
  • ಸಾಲದ ಹೊರೆಯಿಂದ ಮುಕ್ತಿ: 11 ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು ಸ್ವಲ್ಪ ಅರಿಶಿನವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಲಕ್ಷ್ಮಿ ದೇವಿಯ ಪಾದದ ಬಳಿ ಇರಿಸಿ. ಮರುದಿನ ಅದನ್ನು ನಿಮ್ಮ ಹಣದ ಪೆಟ್ಟಿಗೆಯಲ್ಲಿ (ಲಾಕರ್) ಇಡಿ.
  • ಹಣದ ಹರಿವು ಹೆಚ್ಚಿಸಲು: ಸೋಮಾವತಿ ಅಮಾವಾಸ್ಯೆಯ ತಿಥಿಯ ಸಮಯದಲ್ಲಿ ಅರಳಿ (ರವಿ) ವೃಕ್ಷಕ್ಕೆ ನೀರು ಹಾಕಿ, 108 ಪ್ರದಕ್ಷಿಣೆ ಹಾಕುವುದು ಅತ್ಯಂತ ಪ್ರಯೋಜನಕಾರಿ.
  • ವ್ಯಾಪಾರ ಅಭಿವೃದ್ಧಿಗಾಗಿ: ಪೂಜಾ ಕೋಣೆಯಲ್ಲಿ 11 ಹಳದಿ ಕವಡೆಗಳನ್ನು (ಚಿಪ್ಪುಗಳನ್ನು) ಇರಿಸಿ ಲಕ್ಷ್ಮಿ ಅಷ್ಟೋತ್ತರವನ್ನು ಭಕ್ತಿಯಿಂದ ಪಠಿಸಿ.
  • ಪಿತೃ ದೋಷ ತಡೆಗೆ: ಕಪ್ಪು ಎಳ್ಳಿನಿಂದ ಪಿತೃಗಳಿಗೆ ತರ್ಪಣ ಅರ್ಪಿಸುವುದು ಮತ್ತು ಕಾಗೆಗಳಿಗೆ ಅನ್ನ ನೀಡುವುದರಿಂದ ಪೂರ್ವಜರ ಆಶೀರ್ವಾದ ಸಿಕ್ಕು, ಆರ್ಥಿಕ ಪ್ರಗತಿಯ ಹಾದಿ ಸುಗಮವಾಗುತ್ತದೆ.

ಅಮಾವಾಸ್ಯೆಯಂದು ಮಾಡಬಾರದ ತಪ್ಪುಗಳು:

ಈ ಪವಿತ್ರ ದಿನದಂದು ಕೆಲವು ನಕಾರಾತ್ಮಕ ಕೆಲಸಗಳಿಂದ ದೂರವಿರಬೇಕು. ಮನೆಯಲ್ಲಿ ಅನಗತ್ಯ ಕೋಪ, ಜಗಳ ಮಾಡಬಾರದು. ಮದ್ಯಪಾನ ಮತ್ತು ಮಾಂಸಾಹಾರ ಸೇವನೆ ಸಂಪೂರ್ಣ ನಿಷಿದ್ಧ. ಈ ದಿನ ಯಾರಿಂದಲೂ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಳ್ಳಬಾರದು. ಹಿರಿಯರನ್ನು, ವಿಶೇಷವಾಗಿ ತಂದೆ-ತಾಯಿಯರನ್ನು ಅವಮಾನಿಸಬಾರದು ಅಥವಾ ಅವರ ಆರೈಕೆಯನ್ನು ನಿರ್ಲಕ್ಷಿಸಬಾರದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

FIFA World Cup 2026: ಗೆಲ್ಲದ ಬ್ರೆಝಿಲ್, ಸೋಲದ ಮೊರಾಕೊ..! – Kannada News | FIFA World Cup 2026: Brazil vs Morocco Highlights

ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ಗ್ರೂಪ್ ‘ಸಿ’ ನ ರೋಚಕ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಮೊರಾಕೊ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿವೆ. ಆಫ್ರಿಕನ್ ಚಾಂಪಿಯನ್ಸ್ ಮೊರಾಕೊ ಆರಂಭದಲ್ಲೇ ಮುನ್ನಡೆ ಸಾಧಿಸಿ ಬ್ರೆಝಿಲ್‌ಗೆ ಶಾಕ್ ನೀಡಿತಾದರೂ, ವಿನೀಸಿಯಸ್ ಜೂನಿಯರ್ ಅವರ ಅದ್ಭುತ ಗೋಲಿನ ನೆರವಿನಿಂದ ಬ್ರೆಝಿಲ್ ಸೋಲಿನಿಂದ ಪಾರಾಯಿತು ಎನ್ನಬಹುದು.

ಪಂದ್ಯದ ಆರಂಭದಲ್ಲೇ ಮೊರಾಕೊ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮಿಡ್‌ಫೀಲ್ಡ್‌ನಲ್ಲಿ ಬ್ರೆಝಿಲ್ ಮಾಡಿದ ತಪ್ಪನ್ನು ಬಳಸಿಕೊಂಡ ಬ್ರಾಹಿಂ ಡಿಯಾಜ್, ಇಸ್ಮಾಯಿಲ್ ಸೈಬಾರಿ ಅವರಿಗೆ ಅದ್ಭುತ ಪಾಸ್ ನೀಡಿದರು. ಸೈಬಾರಿ ಚೆಂಡನ್ನು ಬ್ರೆಝಿಲ್ ಗೋಲ್‌ಕೀಪರ್ ಅಲಿಸನ್ ಬೆಕರ್ ತಲೆಯ ಮೇಲಿಂದ ನೆಟ್‌ಗೆ ತಳ್ಳುವ ಮೂಲಕ ಮೊರಾಕೊ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ಕೇವಲ 10 ನಿಮಿಷಗಳಲ್ಲಿ ಮೊರಾಕೊಗೆ ತಿರುಗೇಟು ನೀಡಿತು. ಎಡಭಾಗದಿಂದ ಚೆಂಡನ್ನು ಪಡೆದ ಸ್ಟಾರ್ ಆಟಗಾರ ವಿನೀಸಿಯಸ್ ಜೂನಿಯರ್, ಮೊರಾಕೊದ ರಕ್ಷಣಾ ಕೋಟೆಯನ್ನು ಭೇದಿಸಿದರು. ಅಲ್ಲದೆ ಭರ್ಜರಿ ಆಂಗಲ್ಡ್ ಶಾಟ್ ಮೂಲಕ ಚೆಂಡನ್ನು ಗೋಲ್ ಪೋಸ್ಟ್‌ನ ಮೇಲ್ಭಾಗಕ್ಕೆ ತಲುಪಿಸಿದರು. ವಿನೀಸಿಯಸ್ ಜೂನಿಯರ್ ಬಾರಿಸಿದ ಈ ಅದ್ಭುತ ಗೋಲು ನೋಡಿ ಇಡೀ ಪ್ರೇಕ್ಷಕರು ರೋಮಾಂಚನಭರಿತರಾದರು.

ಇನ್ನು ದ್ವಿತೀಯಾರ್ಧದಲ್ಲಿ ನ್ಯೂಜೆರ್ಸಿಯ ಅತಿಯಾದ ಹವಾಮಾನ ಮತ್ತು ತೇವಾಂಶದಿಂದಾಗಿ ಆಟಗಾರರ ವೇಗ ಸ್ವಲ್ಪ ಕಡಿಮೆಯಾಯಿತು. ಬ್ರೆಝಿಲ್ ತನ್ನ ಮಿಡ್‌ಫೀಲ್ಡ್ ರಕ್ಷಣೆಯನ್ನು ಬಲಪಡಿಸಿಕೊಂಡರೆ, ಮೊರಾಕೊದ ಗೋಲ್‌ಕೀಪರ್ ಯಾಸಿನ್ ಬೌನೊ ಅವರು ರಫಿನ್ಹಾ ಅವರ ಕೆಲವು ಅಪಾಯಕಾರಿ ಗೋಲು ಯತ್ನಗಳನ್ನು ಯಶಸ್ವಿಯಾಗಿ ತಡೆದರು. ಪರಿಣಾಮ ಪಂದ್ಯವು ಸಮಬಲದೊಂದಿಗೆ ಸಾಗಿತು.

ಇದಾದ ಬಳಿಕ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಮೊರಾಕೊದ ನೀಲ್ ಎಲ್ ಐನೌಯಿ ಹೊಡೆದ ಆಕರ್ಷಕ ಕಿಕ್ ಶಾಟ್​ ಅನ್ನು ಬ್ರೆಝಿಲ್ ಗೋಲ್ ಕೀಪರ್ ಅಲಿಸನ್ ಬೆಕರ್ ಅದ್ಭುತವಾಗಿ ಡೈವ್ ಮಾಡುವ ಮೂಲಕ ತಡೆದರು. ಇದರೊಂದಿಗೆ ಪಂದ್ಯವು 1-1 ರಿಂದ ಡ್ರಾದಲ್ಲಿ ಕೊನೆಗೊಂಡಿತು.

https://www.youtube.com/watch?v=W04R3OuWnNo

ಅಂದರೆ ಈ ಬಾರಿಯ ಟೂರ್ನಿಯಲ್ಲಿ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿರುವ ಬ್ರೆಝಿಲ್ ತಂಡವು ಗೆಲುವಿನೊಂದಿಗೆ ಅಭಿಯಾನ ಆರಂಭಿಸುವಲ್ಲಿ ವಿಫಲವಾಗಿದೆ. ಅತ್ತ ಫಿಫಾ ಅಂಗಳದ ಡಾರ್ಕ್ ಹಾರ್ಸ್ ಎಂದೇ ಗುರುತಿಸಿಕೊಂಡಿರುವ ಮೊರಾಕೊ ಮೊದಲ ಮ್ಯಾಚ್​ನಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲಾ ತಂಡಗಳಿಗೆ ಎಚ್ಚರಿಕೆ ರವಾನಿಸಿದೆ.

ಇದನ್ನೂ ಓದಿ: ಗಿಲ್ ಗಿಲಕ್ಕು… ಒಂದೇ ಕೈಯಲ್ಲಿ ಅತ್ಯದ್ಭುತ ಕ್ಯಾಚ್..!

ಇದೀಗ ಮೊದಲ ಪಂದ್ಯ ಡ್ರಾ ಮಾಡಿಕೊಂಡಿರುವ ಬ್ರೆಝಿಲ್ ತಂಡವು ತನ್ನ ಮುಂದಿನ ಪಂದ್ಯವನ್ನು ಹೈಟಿ ವಿರುದ್ಧ ಆಡಲಿದೆ. ಇನ್ನು ಮೊರಾಕೊ ತಂಡವು ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಗಳ ಮೂಲಕ ಯಾವ ತಂಡ ಗೆಲುವಿನ ಖಾತೆ ತೆರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿನಿತ್ಯ ಭಕ್ತ ಸಾಗರ: ವಸತಿಗೂ ಪರದಾಟ – Kannada News | Heavy Rush at Mantralayam: Devotees Struggle for Accommodation as Lodge Prices Skyrocket

ರಾಯಚೂರು, ಜೂನ್​​ 14: ಮಳೆಯ ನಡುವೆಯೂ ಮಂತ್ರಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿರುವ ಪರಿಣಾಮ, ಸುತ್ತಮುತ್ತಲಿನ ವಸತಿಗೃಹಗಳ ಸುಮಾರು 3 ಸಾವಿರ ರೂಮ್​​ಗಳು ಫುಲ್​​ ಆಗುತ್ತಿವೆ. ಹೀಗಾಗಿ ಕನಿಷ್ಠ ವಸತಿಗೂ ಭಕ್ತರು ಪರದಾಡಬೇಕಾದ ಸ್ಥಿತಿ ಇದ್ದು, ಮಠದಿಂದ ಭಕ್ತರಿಗಾಗಿ ಕಲ್ಯಾಣ ಮಂಟಪಗಳಲ್ಲಿ ಮಾಡಿರುವ ವ್ಯವಸ್ಥೆಯೂ ಸಾಲದಂತಾಗಿದೆ. ಹೀಗಾಗಿ ಮಠದ ಪ್ರಾಂಗಣದಲ್ಲೇ ಭಕ್ತರು ಮಲಗುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದೆಡೆ ಖಾಸಗಿ ವಸತಿ ಗೃಹಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಭಕ್ತರ ಸುಲಿಗೆಗೆ ಇಳಿದಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಾಹಿದ್ ಕಪೂರ್ ಬಟ್ಟೆ ಹರಿದು, ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್; ವಿಡಿಯೋ ವೈರಲ್ – Kannada News | Fans breach security at Cocktail 2 Pune event Kriti Sanon shields Rashmika Mandanna

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ (Cocktail 2) ಚಿತ್ರದ ಪ್ರಚಾರದ ವೇಳೆ ಭಾರಿ ನೂಕುನುಗ್ಗಲು ಉಂಟಾಗಿದೆ. ಈ ಚಿತ್ರದಲ್ಲಿ ನಟಿಸಿರುವ ಶಾಹಿದ್ ಕಪೂರ್, ಕೃತಿ ಸನನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರದ ಪ್ರಚಾರಕ್ಕಾಗಿ ಪುಣೆಯ ಮಾಲ್ ಒಂದರಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಮಿತಿ ಮೀರಿ ವರ್ತಿಸಿದ್ದಾರೆ. ಜನರು ಸೆಕ್ಯೂರಿಟಿ ಬ್ಯಾರಿಕೇಡ್‌ಗಳನ್ನು ಮುರಿದು ನಟ-ನಟಿಯರತ್ತ ನುಗ್ಗಿದ್ದಾರೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ರಶ್ಮಿಕಾ, ಶಾಹಿದ್ ಕಪೂರ್ ಮತ್ತು ಕೃತಿ ಸನನ್ (Kriti Sanon) ಅವರು ಅರ್ಧದಲ್ಲೇ ಕಾರ್ಯಕ್ರಮ ಮೊಟಕುಗೊಳಿಸಿ ಹೊರನಡೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ಅಭಿಮಾನಿಗಳು ನೆಚ್ಚಿನ ತಾರೆಯರೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿರುವುದು ಕಂಡುಬಂದಿದೆ. ಜನಜಂಗುಳಿಯ ಮಧ್ಯೆ ಸಿಲುಕಿದ ಶಾಹಿದ್ ಕಪೂರ್ ಅವರ ಬಟ್ಟೆಯನ್ನು ಎಳೆಯುವಷ್ಟರ ಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ತೀವ್ರ ಆಕ್ರೋಶಗೊಂಡ ಶಾಹಿದ್ ಅವರು ಜನರನ್ನು ತಳ್ಳುತ್ತಾ ಮುಂದೆ ಸಾಗಿದ್ದಾರೆ.

ಅತಿಯಾದ ಜನದಟ್ಟಣೆ ಮತ್ತು ತಳ್ಳಾಟದ ಮಧ್ಯೆ, ಕೃತಿ ಸನನ್ ಅವರು ಸಹನಟಿ ರಶ್ಮಿಕಾ ಮಂದಣ್ಣ ಅವರನ್ನು ಭದ್ರವಾಗಿ ಹಿಡಿದುಕೊಂಡು ರಕ್ಷಿಸುತ್ತಾ ಮುನ್ನಡೆದಿದ್ದಾರೆ. ಜನಸಮೂಹದಿಂದ ರಶ್ಮಿಕಾಗೆ ಯಾವುದೇ ತೊಂದರೆಯಾಗದಂತೆ ಕೃತಿ ತುಂಬಾ ಜಾಗರೂಕತೆಯಿಂದ ಅವರನ್ನು ಮುನ್ನಡೆಸಿದ್ದು, ಇಬ್ಬರು ನಟಿಯರು ಒಬ್ಬರಿಗೊಬ್ಬರು ರಕ್ಷಣೆ ನೀಡುತ್ತಾ ಭದ್ರತಾ ಸಿಬ್ಬಂದಿಯ ನೆರವಿನಿಂದ ಮಾಲ್‌ನಿಂದ ಹೊರಬಂದಿದ್ದಾರೆ.

ವೈರಲ್ ವಿಡಿಯೋ:

ಕೃತಿ ಸನೂನ್ ಅವರ ಈ ಸಮಯಪ್ರಜ್ಞೆ ಮತ್ತು ರಶ್ಮಿಕಾ ಮೇಲಿನ ಕಾಳಜಿಗೆ ಇಂಟರ್ನೆಟ್‌ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ತಂಗಿಯನ್ನು ರಕ್ಷಿಸಿದ ರೀತಿಯಲ್ಲಿ ಕೃತಿ ಸನನ್ ಅವರು ರಶ್ಮಿಕಾ ಮಂದಣ್ಣ ಮೇಲೆ ಕಾಳಜಿ ತೋರಿಸಿದ್ದಾರೆ’ ಎಂಬ ಕಮೆಂಟ್​ಗಳು ಬಂದಿವೆ. ಮತ್ತೊಂದೆಡೆ, ಮಾಲ್‌ನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡದ ಆಯೋಜಕರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ಈ ಗದ್ದಲದ ಬೆನ್ನಲ್ಲೇ ಚಿತ್ರತಂಡವು ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿರುವುದಾಗಿ ಘೋಷಿಸಿದೆ. ಈ ಚಿತ್ರವು 2012ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ‘ಕಾಕ್‌ಟೇಲ್’ ಚಿತ್ರದ ಮುಂದುವರಿದ ಭಾಗವಲ್ಲ, ಬದಲಿಗೆ ಇದೊಂದು ಸಂಪೂರ್ಣ ಹೊಸ ಕಥೆಯನ್ನೊಳಗೊಂಡ ‘ಸ್ಪಿರಿಚುಯಲ್ ಸೀಕ್ವೆಲ್’ ಆಗಿದೆ. ಹೋಮಿ ಅದಾಜಾನಿಯಾ ಅವರು ನಿರ್ದೇಶನದ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Mantra Pronunciation: ಮಂತ್ರಗಳನ್ನು ತಪ್ಪಾಗಿ ಉಚ್ಛರಿಸಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು?

ಸನಾತನ ಧರ್ಮದಲ್ಲಿ ಮಂತ್ರಗಳಿಗೆ ಅಪಾರವಾದ ಶಕ್ತಿಯಿದೆ. ಮಂತ್ರ ಎಂದರೆ ‘ಮನನಾತ್ ತ್ರಾಯತೇ ಇತಿ ಮಂತ್ರಃ’ — ಯಾವುದನ್ನು ಪದೇ ಪದೇ ಮನನ ಮಾಡುವುದರಿಂದ ಮನಸ್ಸಿಗೆ ರಕ್ಷಣೆ ಸಿಗುತ್ತದೆಯೋ ಅದೇ ಮಂತ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಮಂತ್ರಗಳನ್ನು ಪಠಿಸುವಾಗ ಉಚ್ಚಾರಣೆಯಲ್ಲಿ (Pronunciation) ಸಾಕಷ್ಟು ದೋಷಗಳು ಕಂಡುಬರುತ್ತಿವೆ. ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಈ ತಪ್ಪುಗಳನ್ನು ಹೇಗೆ ನೋಡಬೇಕು ಮತ್ತು ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದರ ವಿಶ್ಲೇಷಣೆ ಇಲ್ಲಿದೆ.

ಧ್ವನಿ ವಿಜ್ಞಾನ ಮತ್ತು ಸಂಸ್ಕೃತದ ತಳಹದಿ:

ಸಂಸ್ಕೃತವನ್ನು ‘ದೇವಭಾಷೆ’ ಎಂದು ಕರೆಯಲಾಗುತ್ತದೆ. ಇದರ ಪ್ರತಿಯೊಂದು ಅಕ್ಷರಕ್ಕೂ, ಸ್ವರಕ್ಕೂ ಅದರದೇ ಆದ ಕಂಪನ (Vibration) ಮತ್ತು ಶಕ್ತಿಯಿದೆ. ಸಂಸ್ಕೃತದ ವರ್ಣಮಾಲೆಯು ಕೇವಲ ಅಕ್ಷರಗಳ ಗುಂಪಲ್ಲ, ಅದು ಶರೀರದ ಚಕ್ರಗಳನ್ನು ಜಾಗೃತಗೊಳಿಸುವ ಧ್ವನಿ ವಿಜ್ಞಾನವಾಗಿದೆ.

ಉಚ್ಚಾರಣಾ ದೋಷಗಳು ಮತ್ತು ಶಾಸ್ತ್ರಗಳ ಎಚ್ಚರಿಕೆ:

ಪಾಣಿನೀಯ ಶಿಕ್ಷಾ ಮತ್ತು ವೇದಾಂಗಗಳಲ್ಲಿ ಮಂತ್ರಗಳ ಉಚ್ಚಾರಣೆಯ ಬಗ್ಗೆ ಕಟ್ಟುನಿಟ್ಟಾದ ನಿಯಮಗಳಿವೆ. ತಪ್ಪು ಉಚ್ಚಾರಣೆಯು ಮಂತ್ರದ ಮೂಲ ಉದ್ದೇಶವನ್ನೇ ಬದಲಾಯಿಸಬಹುದು. ಉದಾಹರಣೆಗೆ, ‘ಸ್ವಜನ’ (ನನ್ನ ಸ್ವಂತ ಜನ) ಎಂಬುದನ್ನು ತಪ್ಪು ಉಚ್ಚಾರಣೆಯಿಂದ ‘ಶ್ವಜನ’ ಎಂದರೆ ‘ನಾಯಿ’ ಎಂದರ್ಥವಾಗುತ್ತದೆ. ‘ಸಕಲ’ (ಎಲ್ಲವೂ) ಎಂಬುದನ್ನು ‘ಶಕಲ’ ಎಂದರೆ ‘ತುಂಡು’ ಎಂದಾಗುತ್ತದೆ. ಯಜ್ಞ-ಯಾಗಾದಿಗಳಲ್ಲಿ ಅಥವಾ ಉನ್ನತ ತಾಂತ್ರಿಕ ಮಂತ್ರಗಳನ್ನು ಪಠಿಸುವಾಗ ತಪ್ಪುಗಳಾದರೆ, ಅದು ನಿರೀಕ್ಷಿತ ಫಲದ ಬದಲು ನಕಾರಾತ್ಮಕ ಪರಿಣಾಮವನ್ನು ಬೀರಬಹುದು ಎಂಬ ನಂಬಿಕೆಯಿದೆ. ಇದಕ್ಕೆ ಪ್ರಸಿದ್ಧವಾದ ‘ವೃತ್ರಾಸುರನ ಕಥೆ’ ಸಾಕ್ಷಿಯಾಗಿದ್ದು, ಮಂತ್ರದ ‘ಸ್ವರ’ ತಪ್ಪಿದ್ದರಿಂದ ಇಂದ್ರನನ್ನು ಕೊಲ್ಲುವ ಮಗನನ್ನು ಪಡೆಯುವ ಬದಲು ಇಂದ್ರನಿಂದ ಸಾಯುವ ಮಗ ಹುಟ್ಟುವಂತಾಯಿತು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮಂತ್ರ ಪಠಣದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಕ್ರಮಗಳು:

ಮಂತ್ರ ಪಠಣದಲ್ಲಿ ಉನ್ನತಿಯನ್ನು ಹೊಂದಲು ಮತ್ತು ತಪ್ಪುಗಳನ್ನು ತಿದ್ದಿಕೊಳ್ಳಲು ಕೆಲವು ಸರಳ ಹಾಗೂ ಪ್ರಾಯೋಗಿಕ ಕ್ರಮಗಳನ್ನು ಅನುಸರಿಸಬಹುದು:

  • ಗುರುಮುಖೇನ ಕಲಿಕೆ: ಧರ್ಮದ ಪ್ರಕಾರ, ಮಂತ್ರಗಳನ್ನು ಕೇವಲ ಪುಸ್ತಕ ಅಥವಾ ಅಂತರ್ಜಾಲ ನೋಡಿ ಕಲಿಯುವುದಕ್ಕಿಂತ ಒಬ್ಬ ಯೋಗ್ಯ ಗುರುವಿನಿಂದ ಕೇಳಿ ಕಲಿಯುವುದು (ಶ್ರುತಿ) ಅತ್ಯಂತ ಶ್ರೇಷ್ಠ ಹಾಗೂ ಸುರಕ್ಷಿತ ಮಾರ್ಗವಾಗಿದೆ.
  • ನಿಧಾನವಾಗಿ ಪಠಿಸುವುದು: ವೇಗವಾಗಿ ಮಂತ್ರಗಳನ್ನು ಒಪ್ಪಿಸುವ ಗಡಿಬಿಡಿಯಲ್ಲಿ ತಪ್ಪುಗಳು ಹೆಚ್ಚಾಗುತ್ತವೆ. ಆದ್ದರಿಂದ ಪ್ರತಿ ಪದವನ್ನು ಬಿಡಿಸಿ, ನಿಧಾನವಾಗಿ ಮತ್ತು ಸ್ಪಷ್ಟವಾಗಿ ಪಠಿಸುವುದನ್ನು ರೂಢಿಸಿಕೊಳ್ಳಬೇಕು.
  • ಅರ್ಥವನ್ನು ಅರಿತುಕೊಳ್ಳುವುದು: ಮಂತ್ರದ ಆಳವಾದ ಅರ್ಥವನ್ನು ತಿಳಿದು ಪಠಿಸಿದಾಗ, ಉಚ್ಚಾರಣೆಯ ತಪ್ಪುಗಳು ತಾವಾಗಿಯೇ ಕಡಿಮೆಯಾಗುತ್ತವೆ ಮತ್ತು ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.
  • ಮಾನಸ ಜಪದ ಮೊರೆ ಹೋಗುವುದು: ಒಂದು ವೇಳೆ ಸಂಸ್ಕೃತದ ಕಠಿಣ ಪದಗಳ ಉಚ್ಚಾರಣೆ ತುಂಬಾ ಕಷ್ಟವೆನಿಸಿದರೆ, ಮಂತ್ರವನ್ನು ಜೋರಾಗಿ ಹೇಳುವ ಬದಲು ಮನಸ್ಸಿನಲ್ಲೇ ನೆನೆಯುವುದು (ಮಾನಸ ಜಪ) ಅತ್ಯಂತ ಶಕ್ತಿಯುತ ಮಾರ್ಗವಾಗಿದೆ.

ಭಕ್ತಿಯೇ ಧರ್ಮದ ಪರಮ ಸತ್ಯ:

ಸನಾತನ ಧರ್ಮವು ಎಂದಿಗೂ ಭಕ್ತರಲ್ಲಿ ಭಯವನ್ನು ಹುಟ್ಟಿಸುವುದಿಲ್ಲ. ನಾವು ತಿಳಿಯದೆ ಮಾಡುವ ತಪ್ಪುಗಳಿಗೆ ಪ್ರಾಯಶ್ಚಿತ್ತ ಮತ್ತು ಕ್ಷಮೆಯ ಮಾರ್ಗವನ್ನು ಅದು ತೋರಿಸಿಕೊಟ್ಟಿದೆ. ಇದಕ್ಕಾಗಿಯೇ ಮಂತ್ರ ಪಠಣದ ಕೊನೆಯಲ್ಲಿ “ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ…” ಎಂದು ಹೇಳಿ ದೇವರಿಗೆ ಶರಣಾಗುವ ಅದ್ಭುತ ಸಂಪ್ರದಾಯ ನಮ್ಮಲ್ಲಿದೆ. ನಮ್ಮ ಪ್ರಯತ್ನ ಸದಾ ಶುದ್ಧ ಉಚ್ಚಾರಣೆಯ ಕಡೆಗೆ ಇರಲಿ, ಆದರೆ ನಮ್ಮ ಹೃದಯದಲ್ಲಿ ಭಗವಂತನ ಮೇಲಿನ ನಿಷ್ಕಲ್ಮಷ ಭಕ್ತಿ ಇರಲಿ. ಭಕ್ತಿಪೂರ್ವಕವಾಗಿ ಕಲಿತು, ಸ್ಪಷ್ಟವಾಗಿ ಪಠಿಸುವುದೇ ನಿಜವಾದ ಧರ್ಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Telangana Earthquake: ತೆಲಂಗಾಣದಲ್ಲಿ 3.8 ತೀವ್ರತೆಯ ಭೂಕಂಪ – Kannada News | Telangana Earthquake: 3.8 Magnitude Quake Hits Bhadradri Kothagudem, No Damage Reported

ತೆಲಂಗಾಣ, ಜೂನ್ 14: ತೆಲಂಗಾಣದ ಭದ್ರಾದ್ರಿ ಕೊತ್ತಗೊಡಂ ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ (ಜೂನ್ 14) ಬೆಳಗಿನ ಜಾವ ಲಘು ಭೂಕಂಪ(Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.8 ರಷ್ಟು ದಾಖಲಾಗಿದ್ದರೂ, ಯಾವುದೇ ರೀತಿಯ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸದಿರುವುದು ಇಡೀ ರಾಜ್ಯವು ನಿರಾಳವಾಗುವಂತೆ ಮಾಡಿದೆ.

ಬೆಳಗಿನ ಜಾವ 2.26 ರ ಸುಮಾರಿಗೆ ಜನರು ಗಾಢ ನಿದ್ರೆಯಲ್ಲಿದ್ದಾಗ ಈ ಕಂಪನ ಸಂಭವಿಸಿದೆ. ಹಠಾತ್ ಜಾಗೃತರಾದ ಸ್ಥಳೀಯ ನಿವಾಸಿಗಳು ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣವೇ ತಮ್ಮ ಮನೆಗಳಿಂದ ಹೊರಗೆ ಬಂದು ಮುಕ್ತ ಪ್ರದೇಶಗಳಲ್ಲಿ ಆಶ್ರಯ ಪಡೆದರು. ತೀವ್ರತೆ ಅತ್ಯಂತ ಕಡಿಮೆ ಇದ್ದ ಕಾರಣ ಜಿಲ್ಲೆಯ ಯಾವುದೇ ಭಾಗದಲ್ಲೂ ಮನೆಗಳು ಕುಸಿತಗೊಂಡ ಅಥವಾ ಯಾರಿಗಾದರೂ ಗಾಯಗಳಾದ ವರದಿಗಳು ಬಂದಿಲ್ಲ.

ಭೂಕಂಪದ ಕೇಂದ್ರಬಿಂದು ಮತ್ತು ತಾಂತ್ರಿಕ ವಿವರಗಳುರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರಬಿಂದು ಭದ್ರಾಚಲಂನಿಂದ ನೈಋತ್ಯಕ್ಕೆ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ (17.492° ಉತ್ತರ ಅಕ್ಷಾಂಶ ಮತ್ತು 80.894° ಪೂರ್ವ ರೇಖಾಂಶ). ಆಳ: ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಟೆಕ್ಟೋನಿಕ್ ಪ್ಲೇಟ್‌ಗಳ ಸಾಮಾನ್ಯ ಚಲನೆಯಿಂದಾಗಿ ಈ ಕಂಪನ ಉಂಟಾಗಿದೆ. ಕೇಂದ್ರಬಿಂದುವಿನಿಂದ 25 ಕಿ.ಮೀ ದೂರದಲ್ಲಿರುವ ಪಲ್ವಂಚ ಸೇರಿದಂತೆ ಭದ್ರಾಚಲಂ, ಸಾತುಪಲ್ಲಿ ಮತ್ತು ಕೊತ್ತಗೊಡಂ ಭಾಗಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ.

ಮತ್ತಷ್ಟು ಓದಿ: Philippines Earthquake: ದಕ್ಷಿಣ ಫಿಲಿಪೈನ್ಸ್​​ನಲ್ಲಿ 7.8 ತೀವ್ರತೆಯ ಭೂಕಂಪ, ಓರ್ವ ಸಾವು, ಹಲವರಿಗೆ ಗಾಯ, ಸುನಾಮಿ ಎಚ್ಚರಿಕೆ

ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿವೆ
ಆರಂಭದಲ್ಲಿ ಭೂಕಂಪದ ತೀವ್ರತೆಯನ್ನು 3.5 ಎಂದು ಅಂದಾಜಿಸಲಾಗಿದ್ದರೂ, ನಂತರ ಅದನ್ನು ನಿಖರವಾಗಿ 3.8 ಕ್ಕೆ ಪರಿಷ್ಕರಿಸಲಾಯಿತು. ಮುಖ್ಯ ಕಂಪನದ ನಂತರ ಸುಮಾರು 25 ನಿಮಿಷಗಳ ಕಾಲ ಸಣ್ಣ ಪ್ರಮಾಣದ ಕಂಪನಗಳು ಕಾಣಿಸಿಕೊಂಡಿದ್ದರಿಂದ ಜನರು ಸ್ವಲ್ಪ ಸಮಯ ಹೊರಾಂಗಣದಲ್ಲೇ ಕಳೆದರು. ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ತಿಳಿಯಾಗಿದ್ದು, ಕಂದಾಯ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಇದೇ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ, ಅಂದರೆ ಫೆಬ್ರವರಿ 18, 2022 ರಂದು ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದಕ್ಕೆ ಹೋಲಿಸಿದರೆ ಪ್ರಸ್ತುತ ಸಂಭವಿಸಿರುವ ಭೂಕಂಪವು ಅತ್ಯಂತ ಸೌಮ್ಯವಾಗಿದ್ದು, ಜನಜೀವನ ಯಥಾಸ್ಥಿತಿಗೆ ಮರಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಾಂತಿ ಒಪ್ಪಂದದ ಸನಿಹದಲ್ಲಿ ಇರಾನ್-ಅಮೆರಿಕ: ಇರಾನ್ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ಪ್ರಕಟ – Kannada News | Iran US Peace Deal Nears: Khamenei Funeral Dates Set, Hormuz Strait to Open

ಟೆಹ್ರಾನ್, ಜೂನ್ 14: ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಉದ್ವಿಗ್ನತೆಗೆ ಕಾರಣವಾಗಿದ್ದ ಸಂಘಷಘ ಕೊನೆಗೊಂಡು ಶಾಶ್ವತ ಶಾಂತಿ ನೆಲೆಸಯವ ಅತ್ಯಂತ ಆಶಾದಾಯಕ ಬೆಳವಣಿಗೆಗಗಳು ಜಾಗತಿಕ ವೇದಿಕೆಯಲ್ಲಿ ನಡೆಯುತ್ತಿವೆ. ಇರಾನ್​ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತಂದೆ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅವರ ಅಂತ್ಯಕ್ರಿಯೆಯ ಅಧಿಕೃತ ದಿನಾಂಕಗಳನ್ನು ಇರಾನ್ ಪ್ರಕಟಿಸಿದ್ದು. ಮತ್ತೊಂದೆಡೆ ಅಮೆರಿಕದೊಂದಿಗಿನ ಐತಿಹಾಸಿಕ ಶಾಂತಿ ಒಪ್ಪಂದವು ಅಂತಿಮ ಘಟ್ಟಕ್ಕೆ ತಲುಪಿದೆ.

ಅಲಿ ಖಮೇನಿ ಅಂತ್ಯಕ್ರಿಯೆ ವಿಳಂಬಕ್ಕೆ ಕಾರಣವೇನು?
ಫೆಬ್ರವರಿ 28ರಂದು 86 ವರ್ಷದ ಅಯತೊಲ್ಲಾ ಅಲಿ ಖಮೇನಿ ನಿಧನರಾಗಿದ್ದರು, ಆರು ದಿನಗಳ ಅಂತ್ಯಕ್ರಿಯೆ ಕಾರ್ಯಕ್ರಮ ಜಯಲೈನಲ್ಲಿ ನಡೆಯಲಿವೆ ಎಂದು ಇರಾನ್ ಫಾರ್ಸ್​ ಸುದ್ದಿ ಸಂಸ್ಥೆ ತಿಳಿಸಿದೆ.
ಅಂತ್ಯಕ್ರಿಯೆಯನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ ಮೊಹರಂ ಆರಂಭದಲ್ಲಿ ನಡೆಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ಪ್ರವಾದಿ ಮೊಹಮ್ಮದರ ಮೊಮ್ಮಗ ಇಮಾಮ್ ಹುಸೇನ್‌ಗಾಗಿ ಕರ್ಬಲಾ ಕದನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಾರ್ವಜನಿಕರು ನಡೆಸುವ ವಾರ್ಷಿಕ ಶೋಕಾಚರಣೆಗೆ ಮೊದಲ ಆದ್ಯತೆ ನೀಡಲು ಇರಾನ್ ಸರ್ಕಾರವು ಈ ನಿರ್ಧಾರವನ್ನು ಜುಲೈಗೆ ಮುಂದೂಡಿದೆ.

ಜುಲೈ 4 ಮತ್ತು 5, ಟೆಹ್ರಾನ್‌ನ ಇಮಾಮ್ ಖೊಮೇನಿ ಪ್ರಾರ್ಥನಾ ಮೈದಾನದಲ್ಲಿ ಸಾರ್ವಜನಿಕ ಬೀಳ್ಕೊಡುಗೆ

ಜುಲೈ 6: ಮುಖ್ಯ ಶ್ರದ್ಧಾಂಜಲಿ ಮೆರವಣಿಗೆ

ಜುಲೈ 7 ಮತ್ತು 9: ಕ್ರಮವಾಗಿ ಕೋಮ್ ಮತ್ತು ಅವರ ತವರು ಮಶಾದ್ ನಗರಗಳಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಲಿವೆ.

ಮತ್ತಷ್ಟು ಓದಿ: ಇರಾನ್ ಸರ್ವೋಚ್ಚ ನಾಯಕನೇ ನಮ್ಮ ಟಾರ್ಗೆಟ್ ಎಂದ ಇಸ್ರೇಲ್; ಯಾರು ಈ ಖಮೇನಿ?

ಇತಿಹಾಸ ಸೃಷ್ಟಿಸಲಿರುವ ಶಾಂತಿ ಒಪ್ಪಂದ ಮತ್ತು ಮುಕ್ತ ಜಲಮಾರ್ಗ
ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ಅಮೆರಿಕ-ಇರಾನ್ ನಡುವಿನ ಸಂಘರ್ಷವು ಈಗ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ. ಉಭಯ ದೇಶಗಳು ಜಾಗತಿಕ ಇಂಧನ ಮತ್ತು ಆರ್ಥಿಕ ಸ್ಥಿರತೆಗೆ ಪೂರಕವಾದ ಒಪ್ಪಂದಕ್ಕೆ ಸಹಿ ಹಾಕಲು ದಿನಗಣನೆ ಆರಂಭಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಒಪ್ಪಂದವು ಅತ್ಯಂತ ಸನಿಹದಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೆಯೇ, ಜಾಗತಿಕ ತೈಲ ಸಾಗಣೆಯ ಪ್ರಮುಖ ನರನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯು ಜಗತ್ತಿನ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಮಧ್ಯಸ್ಥಿಕೆ ಮತ್ತು ಡಿಜಿಟಲ್ ಮುನ್ನಡೆ
ಈ ಐತಿಹಾಸಿಕ ಒಪ್ಪಂದವನ್ನು ಯಶಸ್ವಿಗೊಳಿಸುವಲ್ಲಿ ನೆರೆಯ ರಾಷ್ಟ್ರಗಳು ಮಹತ್ವದ ರಾಜತಾಂತ್ರಿಕ ಪಾತ್ರ ವಹಿಸಿವೆ. ಪ್ರಮುಖ ಸಂಧಾನಕಾರ ದೇಶಗಳಲ್ಲಿ ಒಂದಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ದೇಶವು ಎಲೆಕ್ಟ್ರಾನಿಕ್ ಸಹಿಗೆ (Electronic Signature) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಪ್ರಕಟಿಸಿದ್ದಾರೆ. ಮುಂದಿನ 24 ಗಂಟೆಗಳ ಒಳಗೆ ಈ ಒಪ್ಪಂದವು ಅಧಿಕೃತಗೊಳ್ಳುವ ಸಾಧ್ಯತೆಗಳಿದ್ದು, ಇದು ಇಡೀ ಮಧ್ಯಪ್ರಾಚ್ಯದಲ್ಲಿ ಅಭಿವೃದ್ಧಿ ಮತ್ತು ದೀರ್ಘಕಾಲೀನ ಶಾಂತಿಗೆ ಬಲವಾದ ಅಡಿಪಾಯವನ್ನು ನಿರ್ಮಿಸಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link