Category Archives: Blog

Your blog category

Horoscope Today 25 February​: ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಮಾಡಬೇಕಾದೀತು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 25, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶುಕ್ಲಪಕ್ಷ ನವಮಿ, ರೋಹಿಣಿ ನಕ್ಷತ್ರದ ವಿಶೇಷ ದಿನವಾಗಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ವೃಷಭ ರಾಶಿಯ ರೋಹಿಣಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ.

ಡಾ. ಗುರೂಜಿ ಅವರು ಪ್ರತಿ ರಾಶಿಚಕ್ರ ಚಿಹ್ನೆಗೆ ನಿರ್ದಿಷ್ಟವಾದ ಫಲಗಳನ್ನು ವಿವರಿಸಿದ್ದಾರೆ. ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು, ಕುಟುಂಬದ ಸಮಸ್ಯೆಗಳು, ಮಕ್ಕಳ ಆರೋಗ್ಯದ ಕಾಳಜಿ, ಮತ್ತು ವ್ಯಾಪಾರದಲ್ಲಿ ಲಾಭದಂತಹ ವಿಷಯಗಳನ್ನು ವಿಶ್ಲೇಷಿಸಲಾಗಿದೆ. ಪ್ರತಿದಿನದ ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳ ಬಗ್ಗೆಯೂ ಸಲಹೆ ನೀಡಿದ್ದಾರೆ.

 

 

Source link

ವಿಜಯ್ ಮತ್ತು ರಶ್ಮಿಕಾ ಮದುವೆಯ ಆಗಮಿಸುತ್ತಿರುವ ಅತಿಥಿಗಳು: ಪಟ್ಟಿ ಇಲ್ಲಿದೆ – Kannada News | Rashmika Mandanna and Vijay Deverakonda marriage here is the guest list

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಆಗುತ್ತಿದ್ದಾರೆ. ರಾಜಸ್ಥಾನದ ಉದಯಪುರದ ಸಮೀಪದಲ್ಲಿರುವ ಐಶಾರಾಮಿ ರೆಸಾರ್ಟ್​​ನಲ್ಲಿ ಇವರಿಬ್ಬರ ಮದುವೆ ನಡೆಯುತ್ತಿದೆ. ಈಗಾಗಲೇ ಒಂದು ವಾರದಿಂದಲೂ ಮದುವೆ ಶಾಸ್ತ್ರಗಳು, ಕಾರ್ಯಕ್ರಮಗಳು ಆರಂಭವಾಗಿದ್ದು, ಇಂದು (ಫೆಬ್ರವರಿ 25) ಮತ್ತು ನಾಳೆ (ಫೆಬ್ರವರಿ 26) ಹಳದಿ, ಮೆಹಂದಿ ಮತ್ತು ಮಾಂಗಲ್ಯಧಾರಣೆಯಂಥಹ ಪ್ರಮುಖ ಕಾರ್ಯಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಾರೆ. ಮದುವೆಗೆ ಅತ್ಯಂತ ಕಡಿಮೆ ಮಂದಿಯನ್ನು ರಶ್ಮಿಕಾ ಮತ್ತು ವಿಜಯ್ ಆಹ್ವಾನಿಸಿದ್ದು ಪಟ್ಟಿ ಇಲ್ಲಿದೆ ನೋಡಿ…

ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಸಂಬಂಧಿಗಳು ಕಳೆದ ಒಂದು ವಾರದಿಂದಲೂ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಇನ್ನೂ ಕೆಲವೇ ಕೆಲವು ಅತ್ಯಾಪ್ತ ಗೆಳೆಯ-ಗೆಳತಿಯರನ್ನಷ್ಟೆ ಮದುವೆಗೆ ಆಹ್ವಾನಿಸಿದ್ದಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ. ಈಗಾಗಲೇ ಕೆಲವು ಗೆಳೆಯರು, ಚಿತ್ರರಂಗದ ಕೆಲವು ಪ್ರಮುಖರು ಉದಯಪುರ ತಲುಪಿದ್ದು ಮದುವೆಯಲ್ಲಿ ಭಾಗಿ ಸಹ ಆಗಿದ್ದಾರೆ. ಅಂಥಹವರ ಪಟ್ಟಿ ಇಲ್ಲಿದೆ ನೋಡಿ.

ತರುಣ್ ಭಾಸ್ಕರ್ ಮತ್ತು ಇಶಾ ರೆಬ್ಬಾ ಅವರುಗಳು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆಯಲ್ಲಿ ಭಾಗಿ ಆಗಿದ್ದಾರೆ. ತರುಣ್ ಭಾಸ್ಕರ್, ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಪೆಳ್ಳಿ ಚೂಪುಲು’ ಸಿನಿಮಾದ ನಿರ್ದೇಶಕ. ವಿಜಯ್ ಅವರಿಗೆ ನಾಯಕನಾಗಿ ಅವಕಾಶ ಕೊಟ್ಟ ಮೊದಲ ನಿರ್ದೇಶಕ. ಇಶಾ ರೆಬ್ಬ, ವಿಜಯ್ ದೇವರಕೊಂಡ ಪೋಷಕ ಪಾತ್ರಧಾರಿಯಾಗಿ ನಟಿಸಿದ್ದ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ನಾಯಕಿ ಆಗಿದ್ದರು. ತರುಣ್ ಹಾಗೂ ನಟಿ ಇಶಾ ರೆಬ್ಬ ನಡುವೆ ಆಪ್ತ ಸಂಬಂಧವಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರಿಗೂ ಆಪ್ತವಾಗಿರುವ ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಅವರು ಸಹ ಮದುವೆಯಲ್ಲಿ ಭಾಗಿ ಆಗಿದ್ದರು. ಶ್ರಾವ್ಯಾ ಅವರು ಚಿತ್ರರಂಗದ ಬಲು ಬೇಡಿಕೆಯ ಸ್ಟೈಲಿಸ್ಟ್ ಆಗಿದ್ದಾರೆ. ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಆಶಿಕಾ ರಂಗನಾಥ್ ಸಹ ರಶ್ಮಿಕಾ-ವಿಜಯ್ ಮದುವೆಯಲ್ಲಿ ಭಾಗಿ ಆಗಿದ್ದಾರೆ. ಆಶಿಕಾ ರಂಗನಾಥ್ ಅವರು ರಶ್ಮಿಕಾರ ಆಪ್ತ ಗೆಳತಿಯರಲ್ಲಿ ಒಬ್ಬರು ಎನ್ನಲಾಗುತ್ತಿದೆ.

ರಶ್ಮಿಕಾರ ಈ ಹಿಂದಿನ ಸಿನಿಮಾ ‘ದಿ ಗರ್ಲ್​​ಫ್ರೆಂಡ್’ ನಿರ್ದೇಶನ ಮಾಡಿರುವ ನಿರ್ದೇಶಕ ರಾಹುಲ್ ರವಿಂದ್ರನ್ ಅವರು ಸಹ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ‘ದಿ ಗರ್ಲ್​ಫ್ರೆಂಡ್’ ನಿರ್ದೇಶನದ ವೇಳೆ ರಶ್ಮಿಕಾ ಹಾಗೂ ರಾಹುಲ್ ನಡುವೆ ಒಳ್ಳೆಯ ಗೆಳೆತನ ಏರ್ಪಟ್ಟಿದೆ. ಈ ಬಗ್ಗೆ ಸ್ವತಃ ರಶ್ಮಿಕಾ ಹೇಳಿಕೊಂಡಿದ್ದರು. ಅದೇ ಕಾರಣಕ್ಕೆ ಇದೀಗ ಅವರು ಮದುವೆಗೆ ಆಹ್ವಾನಿಸಲ್ಪಟ್ಟಿದ್ದು, ಮದುವೆಗೆ ಹಾಜರಿ ಹಾಕಿದ್ದಾರೆ.

ಇವರಷ್ಟೆ ಅಲ್ಲದೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ಇನ್ನೂ ಕೆಲವು ಸಿನಿಮಾ ಸೆಲೆಬ್ರಿಟಿಗಳು ವಿಜಯ್-ರಶ್ಮಿಕಾ ಮದುವೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ವಿಜಯ್ ಅವರ ಕೆಲವು ಕಾಲೇಜು ದಿನಗಳ ಗೆಳೆಯರು ಮತ್ತು ರಶ್ಮಿಕಾ ಅವರ ಕೆಲವು ಅತ್ಯಾಪ್ತ ಗೆಳತಿಯರು ಸಹ ಮದುವೆಯಲ್ಲಿ ಭಾಗಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವೈದ್ಯರು, ಗುತ್ತಿಗೆದಾರರು: ಮಾರ್ಚ್ 11 ರಿಂದ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್ – Kannada News | Karnataka Government Faces Twin Protests: Contractors Demand Dues, Doctors Announce OPD Shutdown from March 11

ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವೈದ್ಯರು, ಗುತ್ತಿಗೆದಾರರುImage Credit source: tv9

ಬೆಂಗಳೂರು, ಫೆಬ್ರವರಿ 25: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಗುತ್ತಿಗೆದಾರರು ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಏಕಕಾಲದಲ್ಲಿ ತೀವ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಗುತ್ತಿಗೆದಾರರು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು 37,000 ಕೋಟಿ ರೂಪಾಯಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಲವು ಬೇಡಿಕೆಗಳ ಪಟ್ಟಿಯನ್ನೇ ಸರ್ಕಾರದ ಮುಂದಿಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ವೈದ್ಯರ ಬೇಡಿಕೆಗಳೇನು?

  1. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲ ಕಾಲಕ್ಕೆ ಸಮರ್ಪಕವಾಗಿ ಔಷಧಗಳ ಸರಬರಾಜು.
  2. ವೃಂದ ಮತ್ತ ನೇಮಕಾತಿ ನಿಯಮಗಳನ್ನ ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡುವುದು.
  3. ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನ ಪ್ರಕಟಿಸುವುದು.
  4. ಕಳೆದ ಐದು ವರ್ಷಗಳಿಂದ ತಡೆ ಹಿಡಿಯಲಾದ ಮುಂಬಡ್ತಿಯನ್ನ ನೀಡುವುದು.
  5. ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ಮಾಡುವುದು.
  6. ಕೇಂದ್ರ ಪುರಸ್ಕೃತ ಯೋಜನೆಯಡಿ 6 ಸಾವಿರ ನೌಕರರಿಗೆ ಪ್ರತಿತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆ ನೀಡುವುದು.
  7. ಖಾಲಿ ಇರುವ ವೈದ್ಯರು,ಅರೆ ವೈದ್ಯರ ಹುದ್ದೆಯನ್ನ ಕೂಡಲೇ ಭರ್ತಿ ಮಾಡುವುದು.

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ಮಾರ್ಚ್ 11ರಿಂದ ಮುಷ್ಕರ ಮಾಡುವುದಾಗಿ ಘೋಷಿಸಿದೆ. ಸರ್ಕಾರದ ಜೊತೆ ನಡೆದ ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಎರಡು ಹಂತಗಳಲ್ಲಿ ವೈದ್ಯರ ಮುಷ್ಕರ

ಮುಷ್ಕರವನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತವಾಗಿ ಮಾರ್ಚ್ 11ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಡಿಸ್ಪೆನ್ಸರಿಗಳಲ್ಲಿ ಕಪ್ಪು ಪಟ್ಟಿಧರಿಸಿ ಹೊರ ರೋಗಿ (ಓಪಿಡಿ) ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ತುರ್ತು ಸೇವೆಗಳು ಮಾತ್ರ ಮುಂದುವರಿಯಲಿವೆ. ಎರಡನೇ ಹಂತವಾಗಿ ಮಾರ್ಚ್ 16ರಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ತುಂಬಾ ತಾಳ್ಮೆಯಿಂದ ಇದ್ದೇವೆ. ಹತ್ತಾರು ಸಭೆಗಳನ್ನು ನಡೆಸಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ವರ್ಷಗಳಿಂದ ಕಾದಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶ ನಮಗಿಲ್ಲ. ಆದರೆ ಸರ್ಕಾರ ಸ್ಪಂದಿಸದ ಕಾರಣ ಮುಷ್ಕರಕ್ಕೆ ಹೋಗುವುದು ಅನಿವಾರ್ಯವಾಗಿದೆ ಎಂದು ವೈದ್ಯರ ಸಂಘದ ಅಧ್ಯಕ್ಷ ಡಾ ರವೀಂದ್ರನಾಥ್ ಮೇಟಿ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗ್ತಿಲ್ಲ ಔಷಧಿ

ಕೌನ್ಸೆಲಿಂಗ್ ಸರಿಯಾಗಿ ಮಾಡಿಲ್ಲ, ಪರಸ್ಪರ ವರ್ಗಾವಣೆ ಆಗಿಲ್ಲ, ಅಂಗವಿಕಲರಿಗೆ ನ್ಯಾಯಯುತ ವರ್ಗಾವಣೆ ನೀಡಿಲ್ಲ. ಕಾಲಕಾಲಕ್ಕೆ ಔಷಧ ಪೂರೈಕೆ ಆಗುತ್ತಿಲ್ಲ. ಔಷಧಗಳಿಲ್ಲದಿದ್ದರೂ ಇದೆ ಎಂದು ತೋರಿಸಲಾಗುತ್ತಿದೆ. ಸರ್ಕಾರವೇ ತಂದ ನಿಯಮ ಪ್ರಕಾರ ಹೊರಗಡೆಗೆ ಚೀಟಿ ಬರೆಯಬಾರದು, ಆದರೆ ಅನಿವಾರ್ಯವಾಗಿ ಬರೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ರವೀಂದ್ರನಾಥ್ ಮೇಟಿ ಆರೋಪಿಸಿದ್ದಾರೆ.

ಇತ್ತೀಚೆಗೆ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದರೂ ಔಷಧ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. 496 ಔಷಧಗಳಲ್ಲಿ ಕೇವಲ 26 ಮಾತ್ರ ಸರಬರಾಜಾಗುತ್ತಿವೆ. ಹಲವೆಡೆ ಐವಿ ಫ್ಲೂಯಿಡ್ ಕೊರತೆ ಉಂಟಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ನೌಕರರ ಸಂಘದ ಬೆಂಬಲ

ವೈದ್ಯರ ಬೇಡಿಕೆಗಳು ನ್ಯಾಯಯುತವಾಗಿವೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ದೊಡ್ಡದು. ಚರ್ಚೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕು. ಅಧಿಕಾರಿಗಳು ಪ್ರತಿಷ್ಠೆಗೆ ತೆಗೆದುಕೊಳ್ಳಬಾರದು. ನಾವು ಕಾನೂನಿನಡಿಯಲ್ಲಿ ಕೇಳುತ್ತಿದ್ದೇವೆ. ಪ್ರಮೋಷನ್ ಇಲ್ಲ, ವೇತನ ಹೆಚ್ಚಳವಿಲ್ಲ, ಗೌರವವಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಹೋಗಬೇಕಾಗಿದೆ. ಸರ್ಕಾರ ತಕ್ಷಣ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಗುತ್ತಿಗೆದಾರರಿಂದ ಸರ್ಕಾರಕ್ಕೆ ಫೆಬ್ರವರಿ ಡೆಡ್​​ಲೈನ್

ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ 37,000 ಕೋಟಿ ರೂಪಾಯಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರು ಆಗ್ರಹಿಸಿದ್ದಾರೆ. ಈ ಹಣ ಲೋಕೋಪಯೋಗಿ, ಜಲಸಂಪನ್ಮೂಲ, ಆರ್‌ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿದೆ. ಬಾಕಿ ಪಾವತಿಸದಿದ್ದಲ್ಲಿ ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಿ ಮಾರ್ಚ್ 6ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಳಿಯಲಿದೆಯಾ, ಉಳಿಯಲಿದೆಯಾ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ – Kannada News | Sahibzada farhan Chasing On Virat Kohli’s Iconic World Record

T20 World Cup 2026: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಾಹಿಬ್​ಝಾದ ಫರ್ಹಾನ್ (Sahibzada farhan) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ನಮೀಬಿಯ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಾಹಿಬ್​ ಇದೀಗ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.

ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಾಹಿಬ್​ಝಾದ ಫರ್ಹಾನ್ 45 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 63 ರನ್​ ಬಾರಿಸಿದ್ದಾರೆ.

ಈ 63 ರನ್​ಗಳೊಂದಿಗೆ ಸಾಹಿಬ್​ಝಾದ ಫರ್ಹಾನ್ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈವರೆಗೆ 5 ಇನಿಂಗ್ಸ್ ಆಡಿರುವ ಸಾಹಿಬ್ ಒಟ್ಟು 283 ರನ್​ಗಳಿಸಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿಯ ಐತಿಹಾಸಿಕ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ.

ವಿರಾಟ್ ಕೊಹ್ಲಿ 2014ರ ಟಿ20 ವಿಶ್ವಕಪ್​ನಲ್ಲಿ 6 ಇನಿಂಗ್ಸ್​ಗಳ ಮೂಲಕ ಬರೋಬ್ಬರಿ 319 ರನ್​ ಗಳಿಸಿದ್ದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. 

ಇದೀಗ ಈ ದಾಖಲೆ ಮುರಿಯಲು ಸಾಹಿಬ್​ಝಾದ ಫರ್ಹಾನ್​ಗೆ ಕೇವಲ 37 ರನ್​ಗಳ ಅವಶ್ಯಕತೆಯಿದೆ. ಅಂದರೆ ಸೂಪರ್-8 ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 37 ರನ್ ಬಾರಿಸಿದರೆ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಬಹುದು. ಅದರಂತೆ ಫೆಬ್ರವರಿ 28 ರಂದು ಸಾಹಿಬ್​ಝಾದ ಫರ್ಹಾನ್ ಹೊಸ ಇತಿಹಾಸ ಬರೆಯಲಿದ್ದಾರಾ ಕಾದು ನೋಡಬೇಕಿದೆ.

Published On – 8:42 am, Wed, 25 February 26

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆ; 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​! – Kannada News | Bengaluru temperature: Heat wave alert in Bengaluru, Thunderstorm and light rain in few places of Karnataka

ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ

ಬೆಂಗಳೂರು, ಫೆಬ್ರವರಿ 25: ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ಕಡೆಗಳಲ್ಲಿ ಗುಡುಗು ಸಹಿತ (Weather Forecast) ಮಳೆಯಾಗಿರುವುದೂ ಕಂಡುಬಂದಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಲಘು ಮಳೆಯಾಗಲಿದ್ದು, ಬಿರುಗಾಳಿಯೂ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ

ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಎಲ್ಲೆಲ್ಲಿ ಮಳೆ?

ಉತ್ತರ ಒಳನಾಡಿನ ಯಾದಗಿರಿ, ರಾಯಚೂರು ಜಿಲ್ಲೆಗಳು ಸೇರಿದಂತೆ ದಕ್ಷಿಣದ ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರಿನಲ್ಲಿ ಗುಡುಗು-ಸಿಡಿಲು ಸಹಿತ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಶಿವಮೊಗ್ಗ,ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Bengaluru Air Quality: ಉಡುಪಿ ಸೇರಿ ರಾಜ್ಯದ ಹಲವೆಡೆ ಕುಸಿದ ವಾಯು ಗುಣಮಟ್ಟ! – Kannada News | Bangalore Air Pollution Crisis: Mangalore and Udupi’s Air quality is getting worse

ಉಡುಪಿ ಸೇರಿ ರಾಜ್ಯದ ಹಲವೆಡೆ ಕುಸಿದ ವಾಯು ಗುಣಮಟ್ಟ

ಬೆಂಗಳೂರು, ಫೆಬ್ರವರಿ 25: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಉಡುಪಿಯ AQI ಇನ್ನಷ್ಟು ಹದಗೆಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 163ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಉಡುಪಿಯ ಏರ್ ಕ್ವಾಲಿಟಿ 175 ಆಗಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಉಡುಪಿಯ ಏರ್ ಕ್ವಾಲಿಟಿ ಇಂದು 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –163
  • ಮಂಗಳೂರು-170
  • ಮೈಸೂರು –138
  • ಬೆಳಗಾವಿ – 166
  • ಕಲಬುರ್ಗಿ-129
  • ಶಿವಮೊಗ್ಗ – 174
  • ಬಳ್ಳಾರಿ – 120
  • ಹುಬ್ಬಳ್ಳಿ- 152
  • ಉಡುಪಿ –175
  • ವಿಜಯಪುರ –151

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮದುವೆ ಆಯ್ತು, ಮರುದಿನವೇ ರದ್ದಾಯ್ತು, ಗಂಡನ ಬಿಟ್ಟು ಪ್ರೇಮಿಯನ್ನು ಆರಿಸಿಕೊಂಡ ನವ ವಧು – Kannada News | Woman Cancels Marriage Day After, Chooses Lover, Hamirpur Shocker

ಹಮೀರ್​ಪುರ, ಫೆಬ್ರವರಿ 25: ಮದುವೆ ಎಂಬುದು ಮಕ್ಕಳಾಟವಲ್ಲ, ಇತ್ತೀಚಿನ ದಿನಗಳಲ್ಲಿ ಯಾರನ್ನೋ ಇಷ್ಟ ಪಟ್ಟು ಇನ್ಯಾರನ್ನೋ ಮದುವೆ(Marriage)ಯಾಗಿ, ಬಳಿಕ ಗಂಡನನ್ನು ಕೊಲೆ ಮಾಡಿಸುವ ಪ್ರಕರಣಗಳು ಸಾಕಷ್ಟು ನಮ್ಮ ಕಣ್ಣಮುಂಣದಿವೆ. ಇಲ್ಲೊಬ್ಬ ಮಹಿಳೆ ಮದುವೆಯ ಮರುದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿ ಪತಿ ಬಿಟ್ಟು ಪ್ರೇಮಿಯೊಂದಿಗೆ ಬದುಕುವುದಾಗಿ ಹೇಳಿದ್ದಾಳೆ.

ಮದುವೆಯಾದ ಮರುದಿನವೇ ಮಹಿಳೆ ಗಂಡನ ಬಿಟ್ಟು ಪ್ರೇಮಿಯ ಜತೆ ಬದುಕುವುದಾಗಿ ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ನಡೆದಿದೆ. ಮದುವೆಯಾದ ಮರುದಿನ ಬೆಳಿಗ್ಗೆ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಬಂದು ತನ್ನ ಗಂಡನ ಬದಲು ತನ್ನ ಪ್ರೇಮಿಯೊಂದಿಗೆ ವಾಸಿಸಲು ಬಯಸುವುದಾಗಿ ಹೇಳಿದ್ದು, ಕೆಲವೇ ಗಂಟೆಗಳಲ್ಲಿ ವಿವಾಹ ಕೊನೆಗೊಂಡಿತ್ತು.

ಮಂಗಳವಾರ ತಡರಾತ್ರಿ ವಿವಾಹವಾದ ಮಹಿಳೆಯನ್ನು ಪತಿಯ ಮನೆಗೆ ಕರೆದೊಯ್ಯಲಾಯಿತು, ಆದರೆ ಮದುವೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿ ಬೆಳಗಿನ ಜಾವ ಪೊಲೀಸ್ ಠಾಣೆಗೆ ತೆರಳಿದ್ದರು ಎನ್ನಲಾಗಿದೆ.
ಅಲ್ಲಿ, ಕುಟುಂಬದ ಒತ್ತಡದಿಂದ ತನ್ನ ಮೇಲೆ ಬಲವಂತವಾಗಿ ಮದುವೆ ಮಾಡಲಾಗಿದೆ ಮತ್ತು ಬದಲಿಗೆ ತನ್ನ ಪ್ರೇಮಿಯೊಂದಿಗೆ ವಾಸಿಸಲು ಬಯಸಿರುವುದಾಗಿ ಆಕೆ ಅಧಿಕಾರಿಗಳಿಗೆ ಹೇಳಿದ್ದಾಳೆ.

ಪೊಲೀಸರು ಎರಡೂ ಕುಟುಂಬಗಳನ್ನು ಠಾಣೆಗೆ ಕರೆಸಿ ಹಲವಾರು ಗಂಟೆಗಳ ಕಾಲ ಕೌನ್ಸೆಲಿಂಗ್ ನಡೆಸಿದರು. ರಾಜಿ ಮಾಡಿಕೊಳ್ಳುವ ಪ್ರಯತ್ನಗಳ ಬಿಟ್ಟು, ಮಹಿಳೆ ತನ್ನ ನಿರ್ಧಾರದ ಬಗ್ಗೆ ದೃಢವಾಗಿ ನಿಂತಿದ್ದಳು. ಯಾವುದೇ ಹಿಂದಿನ ಸಂಬಂಧದ ಬಗ್ಗೆ ತಿಳಿದಿರಲಿಲ್ಲ ಮತ್ತು ಅವಳ ಇಚ್ಛೆ ಮೊದಲೇ ತಿಳಿದಿದ್ದರೆ ಈ ಮದುವೆಯೇ ಆಗುತ್ತಿರಲಿಲ್ಲ ಎಂದು ವರ ಪೊಲೀಸರಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ

ಒಟ್ಟಿಗೆ ಬಾಳುವ  ಯಾವುದೇ ಸಾಧ್ಯತೆ ಇಲ್ಲದ ಕಾರಣ, ಎರಡೂ ಕಡೆಯವರು ಅದೇ ದಿನ ಪರಸ್ಪರ ಒಪ್ಪಿಗೆಯ ಮೂಲಕ ಬೇರೆಯಾಗಲು ಒಪ್ಪಿಕೊಂಡರು. ಮಹಿಳೆ ತನ್ನ ಕುಟುಂಬದೊಂದಿಗೆ ಹಿಂತಿರುಗಿದಳು, ಆದರೆ ವರನ ಕುಟುಂಬವು ಔಪಚಾರಿಕವಾಗಿ ಮದುವೆ ರದ್ದು ಮಾಡಲು ಕ್ರಮಗಳನ್ನು ಪ್ರಾರಂಭಿಸಿತು.
ಎರಡೂ ಕಡೆಯವರು ಬೇರೆಯಾಗಲು ಒಪ್ಪಿಕೊಂಡಿದ್ದಾರೆ. ಮಹಿಳೆ ತನ್ನ ಕುಟುಂಬದೊಂದಿಗೆ ಹಿಂತಿರುಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಮುದ್ದು ಸೊಸೆ’ ಧಾರಾವಾಹಿ: ವಿದ್ಯಾಳ ಬಾಳಲ್ಲಿ ಬಂತು ದೊಡ್ಡ ಬಿರುಗಾಳಿ – Kannada News | Muddu Sose Serial: Trivikram and Pratima To Part Away A Big Twist

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ’ಮುದ್ದುಸೊಸೆ’ ಧಾರಾವಾಹಿಗೆ ದೊಡ್ಡ ವೀಕ್ಷಕರ ಬಳಗ ಇದೆ. ಈ ಧಾರಾವಾಹಿಯು ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯು ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ತ್ರಿವಿಕ್ರಂ ಹಾಗೂ ಪ್ರತಿಮಾ ಠಾಕೂರ್ ಅವರು ಇದರಲ್ಲಿ ನಟಿಸುತ್ತಿದ್ದಾರೆ. ಆರಂಭದಿಂದಲೂ ತನ್ನ ವೇಗವಾದ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಈ ಧಾರಾವಾಹಿ ಮನೆ ಮಾತಾಗಿದೆ.

ಕಥಾನಾಯಕಿ ವಿದ್ಯಾಳ ಬಾಳಲ್ಲಿ ಬಿರುಗಾಳಿ ಬೀಸುವಂತೆ ಘಟನೆ ನಡೆದಿದೆ. ಆಕೆ ಅಗ್ನಿಪರೀಕ್ಷೆಗೆ ಸಿದ್ಧಳಾಗಿದ್ದಾಳೆ. ಕೇವಲ ಸಂಸಾರದ ಕಲಹವಲ್ಲದೆ, ಅಸ್ತಿತ್ವ ಮತ್ತು ಸಂಬಂಧದ ನಡುವಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗಿದೆ. ಒಂದೇ ತಿಂಗಳಲ್ಲಿ ಈ ಧಾರಾವಾಹಿ ಎಂಟಕ್ಕೂ ಅಧಿಕ ತಿರುವುಗಳನ್ನು ಪಡೆದುಕೊಂಡಿತ್ತು. ಈ ಮೂಲಕ ವೇಗವಾಗಿ ಧಾರಾವಾಹಿಯ ಕಥೆಸಾಗುತ್ತಿದೆ ಎಂಬುದರ ಸೂಚನೆ ಇದಾಗಿದೆ. ಈಗ ಮತ್ತೊಂದ ಟ್ವಿಸ್ಟ್‌ ಜೊತೆಗೆ ಆಗಮಿಸಲಾಗುತ್ತಿದೆ.

ಭದ್ರ ಮತ್ತು ವಿನಂತಿ ಒಂದೇ ಹಾಸಿಗೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದು ವಿರೋಧಿಗಳ ಪ್ಲ್ಯಾನ್. ಇವರ ಸಂಸಾರ ಹಾಳು ಮಾಡಲು ನಡೆದಿರುವ ಕುತಂತ್ರ. ಈ ಹಠಾತ್ ಬೆಳವಣಿಗೆಯಿಂದ ಕುಪಿತನಾದ ಭದ್ರನ ತಂದೆ ಶಿವರಾಮೇಗೌಡ ಮಗ ಹಾಗೂ ವಿನಂತಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾನೆ.

ಈ ವೇಳೆ ವಿದ್ಯಾಳ ಮುಂದೆ ಎರಡು ಕಠಿಣ ಆಯ್ಕೆಗಳನ್ನು ಮಾವ ಇಟ್ಟಿದ್ದಾನೆ. ವಿಚ್ಛೇದನ ಕೊಡೋದು ಹಾಗೂ ಶೇ.50 ಆಸ್ತಿ ಪಡೆದು ಮನೆಯಿಂದ ಹೊರ ಹೋಗುವುದು ಅಥವಾ ಭದ್ರನ ಮೊದಲ ಪತ್ನಿಯಾಗಿ ಮನೆಯಲ್ಲೇ ಉಳಿದುಕೊಳ್ಳಬೇಕು. ಈಗ ವಿದ್ಯಾಳು, ಭದ್ರನ ಎರಡನೇ ಮದುವೆಗೆ ಸಮ್ಮತಿಸಿ, ಮನೆಯಲ್ಲೇ ಉಳಿಯೋದಾಗಿ ಹೇಳಿದ್ದಾನೆ.

ಇದನ್ನೂ ಓದಿ: ಕಲರ್ಸ್ ಕನ್ನಡ ‘ಯಜಮಾನ’ ಧಾರಾವಾಹಿಗೆ ಯಮುನಾ ಶ್ರೀನಿಧಿ ಎಂಟ್ರಿ

ಇಡೀ ಪ್ರಪಂಚವೇ ಭದ್ರನ ಮೇಲೆ ಬೆರಳು ತೋರಿಸುತ್ತಿದ್ದರೂ, ತನ್ನ ಪತಿಯ ಮೇಲೆ ವಿದ್ಯಾಳಿಗೆ ಅಚಲವಾದ ನಂಬಿಕೆಯಿದೆ. ತನ್ನ ಗಂಡನ ವಿರುದ್ಧ ದೊಡ್ಡ ಪಿತೂರಿ ನಡೆದಿದೆ ಎಂಬ ಸತ್ಯವನ್ನು ಅರಿತಿರುವ ವಿದ್ಯಾ, ಆಸ್ತಿ ಅಥವಾ ರಾಜಿ ಯಾವುದಕ್ಕೂ ಬಗ್ಗದೆ ತನ್ನ ಮೌಲ್ಯಗಳಿಗಾಗಿ ನಿಂತಿದ್ದಾಳೆ. ಇದು ಸುಳ್ಳು ಎಂಬುದನ್ನು ಆಕೆ ಸಾಬೀತು ಮಾಡುವಳಿದ್ದಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ವಿದ್ಯಾರ್ಹತೆ ಏನು? ಇಲ್ಲಿದೆ ವಿವರ – Kannada News | Vijay Devarakonda And Rashmika Mandanna Education qualification Who is more educated

ಪ್ರೇಮ ಪಕ್ಷಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ವಿವಾಹ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರ ಅರಮನೆಯಲ್ಲಿ ನಡೆಯಲಿದೆ. ಈ ತಾರೆಯರ ವಿವಾಹದ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗಿವೆ. ವಿಜಯ್ ಮತ್ತು ರಶ್ಮಿಕಾ ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಆಪ್ತರೊಂದಿಗೆ ಈಗಾಗಲೇ ಉದಯಪುರ ತಲುಪಿದ್ದಾರೆ. ಅವರ ಶಿಕ್ಷಣದ ಬಗ್ಗೆ ಇಲ್ಲಿದೆ ಮಾಹಿತಿ.

ಇವರು ವಿವಾಹವಾಗುತ್ತಿದ್ದಂತೆ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ’ದಿ ವೆಡ್ಡಿಂಗ್ ಆಫ್ ವಿರೋಶ್’ ಎಂದು ಹೆಸರು ಇಡಲಾಗಿದೆ. ವಿಜಯ್ ಮತ್ತು ರಶ್ಮಿಕಾ ಅವರ ಹಳೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಮತ್ತು ಅವರ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇಬ್ಬರಲ್ಲಿ ಯಾರು ಹೆಚ್ಚು ಅಧ್ಯಯನ ಮಾಡಿದ್ದಾರೆ? ವಿಜಯ್ ಮತ್ತು ರಶ್ಮಿಕಾ ಅವರ ನಿಜವಾದ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ.

ರಶ್ಮಿಕಾ ಮಂದಣ್ಣ ಕೊಡಗಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ, ಅವರು ಬೆಂಗಳೂರಿನ ಎಂಎಸ್ ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಿಂದ ಪದವಿ ಪಡೆದರು. ರಶ್ಮಿಕಾ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಗಳನ್ನು ಪೂರ್ಣಗೊಳಿಸಿದ್ದಾರೆ.

ವಿಜಯ್ ದೇವರಕೊಂಡ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಹೇಳುವುದಾದರೆ ಅವರು ಅನಂತಪುರ ಜಿಲ್ಲೆಯ ಪುಟ್ಟಪರ್ತಿಯಲ್ಲಿರುವ ಸತ್ಯ ಸಾಯಿ ಹೈಯರ್ ಸೆಕೆಂಡರಿ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅದರ ನಂತರ, ಅವರು ಹೈದರಾಬಾದ್‌ನ ಭದ್ರಕಾ ಕಾಲೇಜ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್‌ನಿಂದ ಬಿ.ಕಾಂ ಪದವಿಯನ್ನು ಪಡೆದರು. ಇದರರ್ಥ ಇಬ್ಬರೂ ಪದವೀಧರರಾಗಿದ್ದರೂ, ಪದವಿ ಸಂಖ್ಯೆಗಳ ವಿಷಯದಲ್ಲಿ ಇಬ್ಬರೂ ಸರಿ ಸಮಾನರಾಗಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್

ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26ರಂದು ಮದುವೆ ಆಗುತ್ತಿದ್ದಾರೆ. ಇವರ ಮದುವೆ ನೋಡಲು ಎಲ್ಲರೂ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್​ಗೇರಲು ಇನ್ನೂ ಇದೆ ಚಾನ್ಸ್​..! – Kannada News | How can pakistan qualify for semi final in T20 World Cup 2026

T20 World Cup 2026: ಟಿ20 ವಿಶ್ವಕಪ್​ನ 45ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸೋಲನುಭವಿಸಿದೆ. ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿದ್ದರು.

165 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 19.1 ಓವರ್​ಗಳಲ್ಲಿ 166 ರನ್​ ಬಾರಿಸಿ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಿದೆ.

ಇತ್ತ ಸೋತಿರುವ ಪಾಕಿಸ್ತಾನ್ ತಂಡ ಇನ್ನೂ ಸಹ ಟೂರ್ನಿಯಿಂದ ಹೊರಬಿದ್ದಿಲ್ಲ. ಬದಲಾಗಿ ಮುಂದಿನ ಪಂದ್ಯಗಳ ಮೂಲಕ ಸೆಮಿಫೈನಲ್​ಗೇರಬಹುದು. ಆದರೆ ಇಂತಹದೊಂದು ಅವಕಾಶ ಸೃಷ್ಟಿಯಾಗಲು ಉಳಿದ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಿದೆ.

ಪಾಕಿಸ್ತಾನ್ ತಂಡದ ಸೆಮಿಫೈನಲ್ ಸಮೀಕರಣ ಹೀಗಿದೆ:

  • ಶ್ರೀಲಂಕಾ ವಿರುದ್ಧ ಗೆಲುವು: ಪಾಕಿಸ್ತಾನ್ ತಂಡವು ಫೆಬ್ರವರಿ 28 ರಂದು ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯ ಸಾಧಿಸಲೇಬೇಕು.
  • ನ್ಯೂಝಿಲೆಂಡ್​ ಸೋಲು: ಪಾಕಿಸ್ತಾನ್ ತಂಡವು ಸೆಮಿಫೈನಲ್‌ಗೆ ಸುಲಭವಾಗಿ ಅರ್ಹತೆ ಪಡೆಯಬೇಕಾದರೆ, ನ್ಯೂಝಿಲೆಂಡ್ ತಂಡವು ತನ್ನ ಉಳಿದ ಎರಡೂ ಪಂದ್ಯಗಳಲ್ಲಿ, ಅಂದರೆ ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೋಲಬೇಕು.
  • 3 ಅಂಕಗಳು: ನ್ಯೂಝಿಲೆಂಡ್ ತಂಡವು ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೋತರೆ ಒಂದು ಅಂಕದಲ್ಲೇ ಉಳಿಯಲಿದೆ. ಈ ವೇಳೆ ಪಾಕಿಸ್ತಾನ್ ತಂಡವು ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿ ಒಟ್ಟು 3 ಅಂಕಗಳೊಂದಿಗೆ ಸೆಮಿಫೈನಲ್​ಗೇರಬಹುದು.
  • ನೆಟ್ ರನ್ ರೇಟ್: ಒಂದು ವೇಳೆ ನ್ಯೂಝಿಲೆಂಡ್ ಒಂದು ಪಂದ್ಯ ಗೆದ್ದರೆ, ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ಎರಡೂ ತಲಾ 3 ಪಾಯಿಂಟ್ ಪಡೆಯುತ್ತವೆ. ಆಗ ಪಾಕಿಸ್ತಾನವು ಉತ್ತಮ ರನ್ ರೇಟ್ ಆಧಾರದ ಮೇಲೆ ಮಾತ್ರ ಸೆಮಿಫೈನಲ್ ಪ್ರವೇಶಿಸಬಹುದು.
  • ಪಂದ್ಯ ರದ್ದಾದರೆ: ಫೆಬ್ರವರಿ 28 ರಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ್  ಗೆಲ್ಲಲೇಬೇಕು. ಒಂದು ವೇಳೆ ಈ ಪಂದ್ಯ ಸೋತರೆ ಅಥವಾ ಮಳೆಯಿಂದ ರದ್ದಾದರೆ ಪಾಕಿಸ್ತಾನ್ ಟೂರ್ನಿಯಿಂದ ಹೊರಬೀಳಲಿದೆ.

ಅಂದರೆ ಈಗಾಗಲೇ ಸೆಮಿಫೈನಲ್​ಗೆ ಪ್ರವೇಶಿಸಿರುವ ಇಂಗ್ಲೆಂಡ್ ತಂಡದ ಮುಂದಿನ ಗೆಲುವು ಪಾಕ್ ತಂಡದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಗೆಲ್ಲುವುದನ್ನು ಪಾಕಿಸ್ತಾನ್ ಎದುರು ನೋಡಬೇಕು.

ಇದನ್ನೂ ಓದಿ: ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಬಾಬರ್ ಆಝಂ

ಇನ್ನು ನ್ಯೂಝಿಲೆಂಡ್ ವಿರುದ್ಧ ಶ್ರೀಲಂಕಾ ಗೆದ್ದರೆ ಪಾಕಿಸ್ತಾನ್ ತಂಡದ ಹಾದಿ ಸುಗಮವಾಗಲಿದೆ. ಏಕೆಂದರೆ ಈ ಗೆಲುವಿನೊಂದಿಗೆ ಲಂಕಾ ಪಡೆ ಪಡೆಯಲಿರುವುದು ಕೇವಲ 2 ಪಾಯಿಂಟ್ಸ್ ಮಾತ್ರ. ಅಲ್ಲದೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಗೆದ್ದರೆ ಒಟ್ಟು ಪಾಯಿಂಟ್ಸ್ 3 ಆಗಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಸೆಮಿಫೈನಲ್​ಗೆ ಅರ್ಹತೆ ಪಡೆಯಬಹುದು.

Source link