Category Archives: Blog

Your blog category

ಮುಂದಿನ ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿಗೆ ಇಲ್ಲ ಅವಕಾಶ..!

Source link

ಸುನಾಮಿ ಉಯ್ಯಾಲೆ ದುರಂತ: ಎಲ್ಲರನ್ನೂ ಸಾವಿನ ದವಡೆಯಿಂದ ಕಾಪಾಡಿ ಪ್ರಾಣ ಬಿಟ್ಟ ಪೊಲೀಸ್ ಅಧಿಕಾರಿ ಜಗದೀಶ್ ಪ್ರಸಾದ್ ಯಾರು? – Kannada News | Surajkund Tsunami Swing Tragedy: Police Officer Jagadish Prasad’s Heroic Sacrifice

ಫರೀದಾಬಾದ್, ಫೆಬ್ರವರಿ 09: ಹರಿಯಾಣದ ಫರೀದಾಬಾದ್​​ನಲ್ಲಿ ನಡೆದ 39ನೇ ಸೂರಜ್​ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ದೊಡ್ಡ ಅಪಘಾತ(Accident)ವೊಂದು ಸಂಭವಿಸಿತ್ತು. ಸುನಾಮಿ ಉಯ್ಯಾಲೆ ಕಳಚಿಬಿದ್ದು ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಹಾಗಾದರೆ ಎಲ್ಲರನ್ನೂ ರಕ್ಷಿಸಲು ಹೋಗಿ ಪ್ರಾಣಬಿಟ್ಟ ಪೊಲೀಸ್ ಅಧಿಕಾರಿ ಜಗದೀಶ್ ಪ್ರಸಾದ್ ಯಾರು ಎನ್ನುವ ಮಾಹಿತಿ ಇಲ್ಲಿದೆ.

ಸೂರಜ್‌ಕುಂಡ್ ಜಾತ್ರೆಯಲ್ಲಿ ನಡೆದ ಅಪಘಾತವು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು, ಸುನಾಮಿ ಹೆಸರಿನ ಉಯ್ಯಾಲೆ ಇದ್ದಕ್ಕಿದ್ದಂತೆ ಮುರಿದು ಬಿದ್ದಿತ್ತು, ಅಲ್ಲಿ ಭದ್ರತಾ ಉಸ್ತುವಾರಿ ವಹಿಸಿದ್ದ ಇನ್ಸ್​ಪೆಕ್ಟರ್ ಜಗದೀಶ್ ಪ್ರಸಾದ್ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಸಹಾಯಕ್ಕೆ ಮುಂದಾದರು.

ಪ್ರಸಾದ್ ಅವರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿ ಜನಸಮೂಹವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಈ ಮಧ್ಯೆ ಉಯ್ಯಾಲೆಯ ಭಾರವಾದ ಭಾಗವು ಅವರ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡರು. ಅವರನ್ನು ತಕ್ಷಣವೇ ಬಿಕೆ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು. ಮೂಲತಃ ಮಥುರಾ ಮೂಲದ ಪ್ರಸಾದ್ ಅವರ ನಿವೃತ್ತಿಗೆ ಕೇವಲ ಎರಡು ವರ್ಷಗಳು ಬಾಕಿ ಉಳಿದಿದ್ದವು.

ಮತ್ತಷ್ಟು ಓದಿ: ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು, 13 ಜನರಿಗೆ ಗಾಯ

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಫರೀದಾಬಾದ್ ಉಪ ಆಯುಕ್ತ ಆಯುಷ್ ಸಿಂಗ್ ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಜಾತ್ರೆಯಲ್ಲಿ ಗೇಟ್ ಕುಸಿದು ಇಬ್ಬರು ಗಾಐಗೊಂಡಿದ್ದರು, ಆಡಳಿತವು ಮನರಂಜನಾ ಪ್ರದೇಶವನ್ನು ಸ್ಥಳಾಂತರಿಸಿ ತನಿಖೆಯನ್ನು ಪ್ರಾರಂಭಿಸಿತ್ತು. 2025ರ ಏಪ್ರಿಲ್​ನಲ್ಲಿ ದೆಹಲಿಯ ಕಪಶೇರಾದ ಫನ್ ಅಂಡ್ ಫುಡ್ ವಿಲೇಜ್​ನಲ್ಲಿ ರೋಲರ್ ಕೋಸ್ಟರ್ ಅಪಘಾತ ಸಂಭವಿಸಿತ್ತು. 24 ವರ್ಷದ ಪ್ರಿಯಾಂಕಾ ರಾವತ್ ತನ್ನ ಮದುವೆಗೆ ಕೆಲವು ತಿಂಗಳಿರುವಾಗ ಸೀಟ್ ಬೆಲ್ಟ್​ ತುಂಡಾದ ಪರಿಣಾಮ ಬಿದ್ದು ಸಾವನ್ನಪ್ಪಿದ್ದರು.

ಆಕೆ ತನ್ನ ಫಿಯಾನ್ಸಿ ಜತೆ ಉದ್ಯಾನಕ್ಕೆ ಹೋಗಿದ್ದರು, ಈ ಘಟನೆಯು ಇಂಥಾ ಮನರಂಜನಾ ಉದ್ಯಾನಗಳಲ್ಲಿನ ಸುರಕ್ಷತೆಯ ಮಾನದಂಡಗಳ ಕಡೆಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೈಸೂರು ಕೆಸರೆ ಬಡಾವಣೆಯಲ್ಲಿ 4ಕ್ಕೂ ಹೆಚ್ಚು ಗೋದಾಮುಗಳಿಗೆ ಬೆಂಕಿ!

ಮೈಸೂರು, ಫೆಬ್ರುವರಿ 09: ಮೈಸೂರು ನಗರದ ಕೆಸರೆ ಬಡಾವಣೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಸಮೀಪದ, ಓಲ್ಡ್ ಐಟಿಐ (Old ITI) ಪ್ರದೇಶದಲ್ಲಿರುವ ನಾಲ್ಕಕ್ಕೂ ಹೆಚ್ಚು ಗೋದಾಮುಗಳಿಗೆ ಬೆಂಕಿ ತಗುಲಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಮೈಸೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆ ಹಲವು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

ಈ ಅನಾಹುತದಿಂದ ಸುತ್ತ ಮುತ್ತ ದಟ್ಟ ಹೊಗೆ ಆವರಿಸಿದ್ದು, ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯೂ ನಿಯೋಜನೆಗೊಂಡಿದ್ದು, ಪರಿಸ್ಥಿತಿ ನಿಭಾಯಿಸಲು ನೆರವಾಗಿದ್ದಾರೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲವು ಮೂಲಗಳ ಪ್ರಕಾರ, ದುಷ್ಕರ್ಮಿಗಳ ಕೃತ್ಯದಿಂದ ಬೆಂಕಿ ತಗುಲಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಯಾಂಡ್​​ವಿಚ್​ ಆಗೋದನ್ನು ತಪ್ಪಿಸಿಕೊಳ್ಳಲು ನಿರ್ಧರಿಸಿದ ಸಲ್ಮಾನ್ ಖಾನ್ – Kannada News | Salman Khan’s ‘Battle of Galwan’ Shifts to Aug 15: To Aviod big clash

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​​ನ ಸ್ಟಾರ್ ಹೀರೋ ಎಂಬುದು ನಿಜ. ಆದರೆ, ಈಗ ಅವರಿಗೆ ಮೊದಲಿನ ಬೇಡಿಕೆ ಉಳಿದುಕೊಂಡಿಲ್ಲ. ಅವರ ವೃತ್ತಿ ಜೀವನ ಡಲ್ ಆಗಿದೆ. ಮೊದಲಿನಷ್ಟು ಖಡಕ್ ಸಿನಿಮಾಗಳನ್ನು ನೀಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಬಾಲಿಶ ಸ್ಕ್ರಿಪ್ಟ್​​ಗ ಆಯ್ಕೆ ಕಾರಣಕ್ಕೆ ಸಿನಿಮಾ ಓಡುತ್ತಿಲ್ಲ. ಹೀಗಿರುವಾಗಲೇ ಈಗ ಸಲ್ಮಾನ್ ಖಾನ್ ಅವರು ಸ್ಯಾಂಡ್​​ವಿಚ್ ಆಗೋದನ್ನು ತಪ್ಪಿಸಿಕೊಳ್ಳಲು ಒಂದು ಪ್ಲ್ಯಾನ್ ರೂಪಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್​ ಅಲ್ಲಿ ಸಲ್ಮಾನ್ ಖಾನ್ ಅವರ ಹವಾ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ದೊಡ್ಡ ಹೀರೋಗಳ ಚಿತ್ರಗಳು ಬದಿಗೆ ಸರಿಯುತ್ತಿದ್ದವು. ಆದರೆ, ಈಗ ಪರಿಸ್ಥಿತಿ ಆ ರೀತಿ ಇಲ್ಲ. ಅವರ ಸಿನಿಮಾ ರಿಲೀಸ್ ಆಗುತ್ತದೆ ಎಂದರೆ ಯಾರೊಬ್ಬರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇದು ನಿರ್ಮಾಪಕರ ಭಯಕ್ಕೆ ಕಾರಣ ಆಗಿದೆ. ಅವರ ನಟನೆಯ ‘ಬ್ಯಾಟಲ್ ಆಫ್ ಗಲ್ವಾನ್’ ಏಪ್ರಿಲ್ 17ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗ ಅದು ಮುಂದಕ್ಕೆ ಹೋಗಿದೆ.

ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ತೆರೆಗೆ ಬರುತ್ತಿವೆ. ಇಷ್ಟೇ ಅಲ್ಲ, ಏಪ್ರಿಲ್ 30ಕ್ಕೆ ತೆಲುಗಿನ ಪೆದ್ದಿ, ಕನ್ನಡದ ‘ಕೆಡಿ’ ಚಿತ್ರಗಳು ಬರುತ್ತಿವೆ. ಇದರ ಮಧ್ಯೆ ಬಂದರೆ ಸ್ಯಾಂಡ್​​ವಿಚ್ ಆಗೋದು ಫಿಕ್ಸ್ ಎಂಬುದು ಸಲ್ಲು ನಿರ್ಮಾಪಕರ ಆತಂಕ. ಇದಲ್ಲದೆ, ಸಿನಿಮಾ ಕೆಲಸ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಈ ವಿಷಯದಲ್ಲಿ ಆತುರ ಮಾಡೋದು ಬೇಡ ಎಂಬುದು ಅವರ ಆಲೋಚನೆ.

ಈ ಎಲ್ಲಾ ಕಾರಣದಿಂದ ಸಲ್ಮಾನ್ ಖಾನ್ ಅವರ ಚಿತ್ರವನ್ನು ಸ್ವತಂತ್ರ್ಯ ದಿನಾಚರಣೆಗೆ ಮುಂದೂಡಡಲಾಗಿದೆ. ಮೇ ತಿಂಗಳಲ್ಲಿ ಐಪಿಎಲ್ ಅಬ್ಬರ ಜೋರಿರುತ್ತದೆ. ಆ ಬಳಿಕ ಮಳೆಗಾಲ. ಹೀಗಾಗಿ, ಆಗಸ್ಟ್ 15ನ್ನು ತಂಡ ಆಯ್ಕೆ ಮಾಡಿಕೊಂಡಿದೆ.

ಇದನ್ನೂ ಓದಿ: ಪ್ರೇಮಿಗಳಿಗಾಗಿ ಮತ್ತೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸಿನಿಮಾ ‘ತೇರೆ ನಾಮ್’

‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ದೇಶಭಕ್ತಿ ಕಥೆಯ ಸಿನಿಮಾ. ಚೀನಾ ಹಾಗೂ ಭಾರತದ ಗಡಿ ಗಲ್ವಾನ್​​ನಲ್ಲಿ ನಡೆದ ಫೈಟ್ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಹೀಗಾಗಿ ಆಗಸ್ಟ್ 15 ಒಳ್ಳೆಯ ಆಯ್ಕೆ ಎಂಬುದು ತಂಡದ ಆಲೋಚನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು: ಭಾರಿ ಅಗ್ನಿ ಅವಘಡ, ಧಗಧಗ ಹೊತ್ತಿ ಉರಿದ 4 ಗೋದಾಮುಗಳು – Kannada News | Massive Fire Breaks Out in Mysuru Warehouses Near Kesare Layout, Several Godowns Gutted

ಮೈಸೂರು, ಫೆಬ್ರವರಿ 9: ಮೈಸೂರು ನಗರದ ಹೊರವಲಯದ ಕೆಸರೆ ಬಡಾವಣೆಯಲ್ಲಿ ಭಾನುವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿ ನಾಲ್ಕಕ್ಕೂ ಅಧಿಕ ಗೋದಾಮುಗಳು ಬೆಂಕಿಗಾಹುತಿಯಾಗಿವೆ. ಮೈಸೂರು-ಬೆಂಗಳೂರು ಹೆದ್ದಾರಿ ಸಮೀಪದಲ್ಲಿರುವ ಈ ಗೋದಾಮುಗಳಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದ್ದು, ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ವ್ಯಾಪಿಸಿದೆ. ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಬಳಿಕ ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು.

ಅದೃಷ್ಟವಶಾತ್, ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಹಳೆಯ ವಸ್ತುಗಳು ಮತ್ತು ಸುಲಭವಾಗಿ ಹೊತ್ತಿ ಉರಿಯುವ ಸಾಮಗ್ರಿಗಳು ಇದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿತು ಎಂದು ತಿಳಿದುಬಂದಿದೆ. ಬೆಂಕಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿರುವ ಸಾಧ್ಯತೆ ಇದೆ. ಕುಡಿದ ಮತ್ತಿನಲ್ಲಿ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಘಟನೆಯು ಮೈಸೂರಿನ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೆಬ್ರವರಿ ತಿಂಗಳಲ್ಲಿ ಮೇಷ ರಾಶಿಯವರಿಗೆ ಯಾವ ದಶೆ ಉತ್ತಮ, ಮಧ್ಯಮ, ಅಧಮ? – Kannada News | Aries February 2026: Planetary Dasha Effects; Good, Moderate and Challenging Phases

ಗ್ರಹಗಳ ದಶೆ ಫಲ ಕೊಡುವ ಕಾಲವೆನ್ನುವುದು ಸರ್ವವಿದಿತ. ಜನ್ಮ ದಿನಾಂಕ ಸಮಯಗಳ ಮೇಲೆ ಈಗ ಅಗುವ ದಶೆಯನ್ನು ಕಂಡುಕೊಳ್ಳುವುದು ಉತ್ತಮವಾದರೂ, ಮೇಷದವರಿಗೆ ಯಾವ ಗ್ರಹಗಳ ದಶೆ ಅನುಕೂಲ ಎನ್ನುವುದನ್ನು ಸಾಮನ್ಯವಾಗಿ ಹೇಳುವುದು. ಫೆಬ್ರವರಿ 2026ರ ವರ್ತಮಾನದ ಗ್ರಹಗತಿಗಳನ್ನು ಗಮನಿಸಿದರೆ, ಮೇಷ ರಾಶಿಯವರಿಗೆ ಈ ತಿಂಗಳು ಮಿಶ್ರ ಫಲಿತಾಂಶಗಳಿವೆ. ನಿಮ್ಮ ಜನ್ಮ ಜಾತಕದಲ್ಲಿ ಈ ಕೆಳಗಿನ ಗ್ರಹಗಳ ದಶೆ ಅಥವಾ ಅಂತರ್ದಶೆ ನಡೆಯುತ್ತಿದ್ದರೆ, ಅದರ ಪ್ರಭಾವ ಹೀಗಿರುತ್ತದೆ.

ಉತ್ತಮ ಫಲ ನೀಡುವ ದಶೆ: ​ಈ ಗ್ರಹಗಳ ದಶೆ ನಡೆಯುತ್ತಿದ್ದರೆ ನಿಮಗೆ ಈ ತಿಂಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು

ಶುಕ್ರ ದಶೆ: ಫೆಬ್ರವರಿಯಲ್ಲಿ ಶುಕ್ರನು ನಿಮ್ಮ ರಾಶಿಯ ಲಾಭ ಸ್ಥಾನದಲ್ಲಿ ಇರುವುದರಿಂದ, ಶುಕ್ರ ದಶೆ ಅಥವಾ ಅಂತರ್ದಶೆ ನಡೆಯುವವರಿಗೆ ಆರ್ಥಿಕ ಲಾಭ, ಹೊಸ ಗೆಳೆತನ ಮತ್ತು ಮೋಜು-ಮಸ್ತಿಯಿಂದ ಕೂಡಿದ ಸಮಯ ಇದಾಗಿರುತ್ತದೆ.

ರವಿ ದಶೆ: ಫೆಬ್ರವರಿ 15ರವರೆಗೆ ಸೂರ್ಯನು ಹತ್ತನೇ ಮನೆಯಲ್ಲಿ ಇರುವುದರಿಂದ, ಈ ಸಮಯದಲ್ಲಿ ಸೂರ್ಯನ ಅಂತರ್ದಶೆ ನಡೆಯುತ್ತಿದ್ದರೆ ಉದ್ಯೋಗದಲ್ಲಿ ಗೌರವ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ಗುರು ದಶೆ: ಗುರುವು ಮೂರನೇ ರಾಶಿಯಲ್ಲಿ ಇದ್ದರೂ ನಿಮ್ಮ ರಾಶಿಯ ಮೇಲೆ ಶುಭ ದೃಷ್ಟಿ ಬೀರುವುದರಿಂದ, ಗುರುವಿನ ದಶೆ ನಡೆಯುವವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ಬುದ್ಧಿವಂತಿಕೆಯಿಂದ ಕಾರ್ಯಸಿದ್ಧಿಯಾಗಲಿದೆ.

​ಮಧ್ಯಮ ಫಲ ನೀಡುವ ದಶೆ
​ಈ ಗ್ರಹಗಳ ದಶೆಗಳು ಅತಿಯಾದ ನಿರೀಕ್ಷೆಗಿಂತ ಸಾಮಾನ್ಯ ಫಲಿತಾಂಶಗಳನ್ನು ನೀಡುತ್ತವೆ.

​ಮಂಗಳ ದಶೆ: ನಿಮ್ಮ ರಾಶ್ಯಾಧಿಪತಿಯಾದ ಮಂಗಳನು ಈ ಸಮಯದಲ್ಲಿ ಸ್ವಕ್ಷೇತ್ರ ಅಥವಾ ಉಚ್ಚ ಸ್ಥಾನದಲ್ಲಿ ಇಲ್ಲದಿದ್ದರೆ, ಸ್ವಲ್ಪ ಹಠಾತ್ ಕೋಪ ಮತ್ತು ಅವಸರದ ನಿರ್ಧಾರಗಳಿಗೆ ಕಾರಣವಾಗಬಹುದು. ಮಂಗಳ ದಶೆ ನಡೆಯುತ್ತಿದ್ದರೆ ಆರೋಗ್ಯದ ಬಗ್ಗೆ ಗಮನವಿರಲಿ.

ಬುಧ ದಶೆ: ಬುಧನು ಕುಂಭ ರಾಶಿಯಲ್ಲಿ ಶುಕ್ರನ ಜೊತೆ ಇರುವುದರಿಂದ ವ್ಯಾಪಾರಸ್ಥರಿಗೆ ಇದು ಮಧ್ಯಮದಿಂದ ಉತ್ತಮ ಫಲ ನೀಡುತ್ತದೆ. ಆದರೆ ಸಂವಹನದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು.

​ಎಚ್ಚರಿಕೆಯಿಂದ ಇರಬೇಕಾದ ದಶೆ
ಶನಿ ದಶೆ: ಶನಿಯ ದಶೆ ಅಥವಾ ಅಷ್ಟಮ ಶನಿ/ಅರ್ಧಾಷ್ಟಮ ಶನಿಯ ಪ್ರಭಾವವಿದ್ದರೆ ಕೆಲಸದಲ್ಲಿ ವಿಳಂಬ ಮತ್ತು ಮಾನಸಿಕ ಒತ್ತಡವಿರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಬಹುದು.

ರಾಹು-ಕೇತು ದಶೆ: ಈ ಗ್ರಹಗಳ ದಶೆ ನಡೆಯುತ್ತಿದ್ದರೆ ಅನಿರೀಕ್ಷಿತ ಖರ್ಚುಗಳು ಮತ್ತು ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು.

ಸುಬ್ರಹ್ಮಣ್ಯ ಹಾಗೂ ಗುರುವಿನ ಉಪಾಸನೆಯಿಂದ ತೊಂದರೆಗಳಿಂದ ಮುಕ್ತರಾಗಬಹುದು.

ಲೋಹಿತ ಹೆಬ್ಬಾರ್

Source link

Horoscope Today 09 February: ಇಂದು ಈ ರಾಶಿಯವರು ಅತಿಯಾದ ಸಂಕಟವನ್ನು ತೋರ್ಪಡಿಸಲಾರರು

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ಶೂಲಿ, ಕರಣ : ಭದ್ರ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 25 pm, ಇಂದಿನ ಶುಭಾಶುಭ ಕಾಲ : ರಾಹು 08:18 – 09:45, ಯಮಗಂಡ ಕಾಲ 11:12 – 12:39, ಗುಳಿಕ ಕಾಲ 14:05 – 15:32.

ಮೇಷ ರಾಶಿ: ಉತ್ಸಾಹವು ಎಷ್ಟೇ ಇದ್ದರೂ ನೆಮ್ಮದಿಯ ಮನಸ್ಸಿನಿಂದ ನಿರ್ಧಾರಿಸಿ. ಹಿರಿಯರಿಂದ ಉತ್ತಮ ವಿಚಾರಗಳನ್ನು ತಿಳಿಯುವಿರಿ. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ಸಾಲದಿಂದ ಮುಕ್ತರಾಗಲು ನೀವು ಧೈರ್ಯದಿಂದ ಹೆಜ್ಜೆ ಹಾಕಬೇಕಾದೀತು. ನಿಮ್ಮ ಪ್ರಗತಿಗೆ ಶತ್ರುಗಳು ಅಡ್ಡಗಾಲು ಹಾಕಬಹುದು. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವಿರಿ. ಕೋಪವನ್ನು ಅಧಿಕಾರಿಗಳಿಂದ ನಿಯಂತ್ರವಿಟ್ಟು ಮಾಡನಾಡಬ ಮೆಚ್ಚುಗೆ ಗಳಿಸುವಿರಿ. ನಿಮ್ಮ ಮಕ್ಕಳ ಬಗ್ಗೆ ಗಮನ ಹೆಚ್ಚು ಬೇಕು. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯೋಗವನ್ನು ಹೇಳಿಕೊಳ್ಳುವಿರಿ.

ವೃಷಭ ರಾಶಿ: ದೇವತಾಕಾರ್ಯಗಳಲ್ಲಿ ಆಸಕ್ತಿ, ಶ್ರದ್ಧೆಯಿಂದ ಭಾಗವಹಿಸುವಿರಿ. ಕಛೇರಿಯಲ್ಲಿ ಅಧಿಕಾರಿಗಳು ನಿಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಮಾಡಬಹುದು. ಯಾರಿಗೂ ಸಾಲವನ್ನು ಕೊಡುವುದು ಬೇಡ. ನಿಮಗೆ ಸಲ್ಲಬೇಕಾದುದರ ಬಗ್ಗೆ ಮಾತ್ರ ಗಮನವಿರಲಿ. ನಿಮ್ಮ ಸಂಬಂಧಗಳನ್ನು ಬಳಸದೇ ದೂರವಾಗುವುದು. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ಸರಿಮಾಡಿಕೊಳ್ಳುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಬೇಡ.

ಮಿಥುನ ರಾಶಿ: ನಿಮ್ಮ ಮನಸ್ಸಿನ ಉತ್ಸಾಹವನ್ನು ಶರೀರ ತಡೆದುಕೊಳ್ಳಲಾಗದು. ನಿಮ್ಮ ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಕೆಲಸದ ಅನ್ವೇಷಣೆಯಲ್ಲಿ ತೊಡಗುವಿರಿ. ನಿಮ್ಮ ಉದ್ಯೋಗದ ಸ್ಥಳವನ್ನು ನೀವು ಬದಲಾಯಿಸುವಿರಿ. ಉತ್ಪಾದನೆಯ ಖರ್ಚನ್ನು ಹೆಚ್ಚು ಮಾಡಿ ಮಾರಾಟ ಮಾಡಬೇಕಾಗಬಹುದು. ಪ್ರಾಮಾಣಿಕತೆಯಿಂದ ನಿಮಗೆ ಉನ್ನತ ಸ್ಥಾನವನ್ನು ನಿರೀಕ್ಷಿಸುವಿರಿ. ದಾನವಾಗಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆದು ಅಹಂಕಾರ ಮಡುವುದು ಬೇಡ.

ಕರ್ಕಾಟಕ ರಾಶಿ: ಚರಾಸ್ತಿಯಲ್ಲಿ ಗೊಂದಲ ಇರುವುದು. ಮನೆಯ ಸ್ವಚ್ಛತೆಯ ಬಗ್ಗೆ ಕಾಳಜಿ ಇರಲಿದೆ. ಪ್ರಯತ್ನಿಸಿದ ಕಾರ್ಯಕ್ಕೆ ಫಲವನ್ನು ನಿರ್ದಿಷ್ಟ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿ ಸಿಗುವಲಿದೆ. ಅಸೂಯೆಯಿಂದ ನಿಮ್ಮ ಇತರ ಕೆಲಸಗಳನ್ನು ಹಾಳುಮಾಡಿಕೊಳ್ಳುವಿರಿ. ಎಲ್ಲವನ್ನೂ ತಿಳಿದುಕೊಂಡರೂ ಹಿಂದೆ ಸರಿಯುವಿರಿ. ಹಲವು ವರ್ಷಗಳ ಅನಂತರ ನಿಮ್ಮ ವಾಸಸ್ಥಾನ ಬದಲಾಯಿಸುವಿರಿ. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ‌ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.‌

ಸಿಂಹ ರಾಶಿ: ನಿಮಗೆ ಸಿಗದೇ ಇರುವುದು ನಿಮ್ಮದಲ್ಲ ಎಂಬ ಸಮಾಧಾನ ಇರಲಿ. ನಿಮ್ಮ ಯೋಚನೆಯ ಕ್ರಮವನ್ನು ಬದಲಿಸಿಕೊಳ್ಳಲು ಸೂಕ್ತ. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ಧಾರ್ಮಿಕ ನಂಬಿಕೆಯನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಸ್ಥಾನಚ್ಯುತಿಯ ಭಯವು ಇರುವುದು. ಮನೆಯ ಪರಿಸ್ಥಿತಿಯನ್ನು ನೆನೆದು ಸಂಕಟವಾಗುವುದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವರು. ನೇರ ನಡೆಗೆ ನೀವು ಪ್ರಸಿದ್ಧರಾಗಿರುವಿರಿ.

ಕನ್ಯಾ ರಾಶಿ; ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾತುಗಳು ನಿಖರವಾಗಿ ಇರಲಿ. ಸುಳ್ಳು ಲೆಕ್ಕಾಚಾರವನ್ನು ನೀವು ಹೊರತೆಗೆಯುವಿರಿ. ಖರ್ಚಿನ ನಿಯಂತ್ರಣವನ್ನು ಮಾಡುವುದು ಕಷ್ಟವಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಿಯಮಗಳನ್ನು ಹಾಕಿಕೊಳ್ಳುವುದು ಉತ್ತಮ. ಸಹೋದ್ಯೋಗಿಗಳ ಜೊತೆ ಸಲುಗೆಯಿಂದ ಇರುವಿರಿ. ಸಮಾಜಮುಖೀ ಕಾರ್ಯಗಳಿಗೆ ಕುಟುಂಬದ ಬೆಂಬಲವು ಸಿಗುವುದು. ಬಂಧುಗಳಿಂದ ನಿಮಗೆ ಇಂದು ಆಲಸ್ಯದ ಪಟ್ಟವು ಸಿಗಬಹುದು. ಉದ್ಯಮದ ವೀಕ್ಷಣೆಗೆ ಹೊರಡುವಿರಿ.‌

ತುಲಾ ರಾಶಿ: ಏನೂ ಲಾಭವಿಲ್ಲದೇ ಪ್ರಯಾಣವು ನಿಮಗೆ ಬೇಸರ ಎನಿಸುವುದು. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ಸ್ತ್ರೀಯರ ಜೊತೆ ಕಲಹವಾಗಲಿದೆ. ನಿಮ್ಮ ಪಾಲಿನದ್ದಷ್ಟನ್ನು ಜೋಪಾನವಾಗಿ ಇರಿಸಿಕೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೌಕರರು ಒಪ್ಪುವುದಿಲ್ಲ. ಅನಿರೀಕ್ಷಿತ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಸಣ್ಣ ವಿಚಾರಗಳಿಗೂ ಕೋಪದಿಂದ ಜೊತೆಗಾರರಿಗೂ ನಿರಾಸಕ್ತಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು.

ವೃಶ್ಚಿಕ ರಾಶಿ: ಬರಬೇಕಾದುದು ಬಾರದಿದ್ದರೆ, ಇಲ್ಲವೇ ಇಲ್ಲ ಎಂದು ಕಾಣಿಸುವುದು. ಆಲಸ್ಯದಿಂದ ಮುಖ್ಯ ಕೆಲಸವನ್ನೇ ಮರೆಯುವಿರಿ. ದಾಂಪತ್ಯವನ್ನು ಹಿರಿಯರೇ ಬಂದು ಸರಿಮಾಡಬೇಕಾಗವುದು. ಸ್ವಂತ ಉದ್ಯೋಗಸ್ಥರು ಲಾಭ ಗಳಿಸುವರು. ಹೊಸತನ್ನು ಕಲಿಯುವ ಅವಕಾಶವನ್ನು ಹುಡುಕಿಕೊಳ್ಳುವಿರಿ. ಉದ್ಯೋಗದಲ್ಲಿ ದಿಕ್ಕು ತಪ್ಪುವ ಸಂಭವ ಬರಬಹುದು. ನಿಮಗೆ ಕೊಟ್ಟ ಕೆಲಸವನ್ನು ಹಂಚಿಕೊಂಡು ಕೆಲಸವನ್ನು ಮಾಡಿ. ಉದ್ಯಮದ‌ ಬೆಳವಣಿಗೆಗೆ ಉತ್ತಮ‌ ಅವಕಾಶವನ್ನು ಕಾಯುತ್ತಿರುವಿರಿ.

ಧನು ರಾಶಿ: ಹಿರಿಯ ಮಕ್ಕಳು ನಿಮ್ಮ ಮಾತಿಗೆ ಸ್ಪಂದಿಸುವನು. ಆಸ್ತಿಯ ಖರೀದಿಗೆ ಬೇಕಾದ ನಿಶ್ಚಲತೆ ಇರದು. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಯಾವುದೋ ಯೋಚನೆಯಲ್ಲಿ ಮುಖ್ಯ ಕಾರ್ಯಗಳು ಮರೆತುಹೋಗಬಹುದು. ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನಾತ್ಮಕ ತೊಂದರೆ ಬರುವುದು. ಒಂದು ಪೈಸೆಯನ್ನೂ ಸುಮ್ಮನೇ ಖರ್ಚಾಗಲು ಬಿಡುವುದಿಲ್ಲ ಮತ್ತು ಮಾಡಿದ್ದರ ಪೂರ್ಣ ಲೆಕ್ಕ ಇಡುವಿರಿ. ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ‌ ಫಲಿತಾಂಶವು ಕೊಡುವುದು.

ಮಕರ ರಾಶಿ: ಜ್ಞಾನಸಂಪಾದನೆಗೆ ಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಿರಿ. ಕೆಲವನ್ನು ನೀವಾಗಿಯೇ ತಂದುಕೊಳ್ಳುವಿರಿ. ವೃತ್ತಿಯಲ್ಲಿ ನಿಮಗೆ ತಪ್ಪಿನ ಭಯವು ಕಾಡಲಿದ್ದು ಯಾರ ಬಳಿಯಾದರೂ ಹೇಳಿಕೊಳ್ಳಿ. ನಿಮ್ಮ ಸಾಮರ್ಥ್ಯವು ಇಂದು‌ ಕಾಣಿಸಿಕೊಳ್ಳದು. ಒತ್ತಡವನ್ನು ನಿಭಾಯಿಸಕೊಳ್ಳಲು ಕಷ್ಟವಾದೀತು. ಸಹೋದ್ಯೋಗಿಗಳ ಜೊತೆ ಮನಸ್ತಾಪ ಬಂದು ಜಗಳವಾಡುವಿರಿ. ಮೇಲಧಿಕಾರಿಗಳ ಜೊತೆ ವಿನಾಕಾರಣ ವಾಗ್ವಾದ ಬೇಡ. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು.

ಕುಂಭ ರಾಶಿ: ಆರ್ಥಿಕತೆಯು ನಿಮ್ಮನ್ನು ಚಿಂತೆಗೀಡುಮಾಡುವುದು. ನಿಮ್ಮ ತಪ್ಪುಗಳೇ ಫಲಿತಾಂಶದಲ್ಲಿ ಬರುವುದು. ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗುವುದು. ವಾಹನ ಖರೀದಿಯ ವ್ಯವಹಾರವು ನಿಮಗೆ ಸರಿಯಾಗದು. ಮಂದಗತಿಯ ಕಾರ್ಯಕ್ಕೆ ನಿಮ್ಮನ್ನು ಯಾರಾದರೂ ಹೀಯಾಳಿಸಬಹುದು. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡುವುದು. ಇರುವ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಸದುಪಯೋಗ ಆಗುವಂತೆ ಮಾಡಿ.

ಮೀನ ರಾಶಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮವನ್ನು ಹಾಕುವಿರಿ. ಇಂದು ಪರೋಪಕಾರಕ್ಕೆ ನಿಮ್ಮ ಮನಸ್ಸು ಕರಗುವುದು. ಸ್ತ್ರೀಯರು ಈ ದಿನವನ್ನು ಬಹಳ ಉತ್ಸಾಹದಿಂದ ಕಳೆಯುವರು. ಅನುಭವಸ್ಥರ ಮಾರ್ಗದರ್ಶವನ್ನು ನೀವು ಪಡೆಯುವಿರಿ. ಕುಟುಂಬದ ಸೌಖ್ಯದಲ್ಲಿ ನೀವು ಭಾಗಿಯಾಗುವಿರಿ. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಮಾಡಿಕೊಳ್ಳುವಿರಿ. ಮಕ್ಕಳಿಂದ ಆಗುವ ಅಸಮಾಧಾನವನ್ನು ಸಹಿಸಲಾರಿರಿ. ವಿರೋಧಿಗಳ ಮಾತನ್ನು ನೀವು ನಿರ್ಲಕ್ಷಿಸುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 9ರ ದಿನಭವಿಷ್ಯ

ಈ ದಿನ ನರಸಿಂಹ ದೇವರ ದೇವಸ್ಥಾನಕ್ಕೆ ತೆರಳಿ, ಕೆಂಪು ಬಣ್ಣದ ಹೂವಿನಿಂದ ಕಟ್ಟಿದಂಥ ಮಾಲೆಯೊಂದನ್ನು ಸಮರ್ಪಣೆ ಮಾಡುವುದರಿಂದ ಬಹಳ ಪ್ರಯತ್ನ ಮಾಡುತ್ತಿದ್ದ ಪ್ರಾಜೆಕ್ಟ್ ಗಳು, ಹಣಕಾಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಇತರರ ವೈಯಕ್ತಿಕ ವಿಷಯಗಳಲ್ಲಿ ನೀವಾಗಿಯೇ ಸಲಹೆ- ಸೂಚನೆ ನೀಡುವುದಕ್ಕೆ ಹೋಗಬೇಡಿ. ಕೃಷಿಯನ್ನೇ ತಮ್ಮ ವೃತ್ತಿಯಾಗಿ ಮಾಡಿಕೊಂಡವರು ಜಮೀನಿನಲ್ಲಿ ಕೆಲವು ಕೆಲಸಗಳನ್ನು ಮಾಡಿಸುವ ನಿಟ್ಟಿನಲ್ಲಿ ಮಾತುಕತೆ ಆಡಲಿದ್ದೀರಿ. ಒಂದು ವೇಳೆ ಯಾವುದೇ ಕೆಲಸವನ್ನು ತಕ್ಷಣಕ್ಕೆ ಮಾಡಿಸುವುದು ಬೇಡ ಎಂದೆನಿಸಿದ್ದಲ್ಲಿ ಸ್ವಲ್ಪ ಸಮಯ ಮುಂದಕ್ಕೆ ಹಾಕುವುದು ಉತ್ತಮ ಎನಿಸಿಕೊಳ್ಳುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಈ ಹಿಂದೆ ನೀವಾಗಿಯೇ ಹೇಳಿದ್ದ ಕೆಲವು ಸಲಹೆ- ನಿರ್ಧಾರಗಳನ್ನು ಬದಲಿಸುವುದಕ್ಕೆ ಮುಂದಾಗುತ್ತೀರಿ. ಇದೇ ವೇಳೆ ಹೂಡಿಕೆ ವಿಚಾರವಾಗಿ ಕುಟುಂಬದವರ ಜತೆಗೆ ಗಂಭೀರವಾದ ಚರ್ಚೆ ನಡೆಸಲಿದ್ದೀರಿ. ಈ ಹಿಂದೆ ಯಾವಾಗಲೋ ನೋಡಿಕೊಂಡು ಬಂದಿದ್ದ ಸ್ಥಳದ ಖರೀದಿಗೆ ಈ ದಿನ ಇನ್ನೊಮ್ಮೆ ಅವಕಾಶ ತೆರೆದುಕೊಳ್ಳಲಿದೆ. ಎಷ್ಟೇ ಹತ್ತಿರದವರೇ ಆದರೂ ಸಾಧಕ-ಬಾಧಕಗಳನ್ನು ಅಳೆದು ನೋಡದೆ ನಿರ್ಧಾರವನ್ನು ಮಾಡಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಎಲ್ಲವೂ ಮೊದಲಿನಂತಿಲ್ಲ ಎಂದು ಅನಿಸುವುದಕ್ಕೆ ಶುರು ಆಗುತ್ತದೆ. ಹೇಳಿದ ತಕ್ಷಣ ಆಗುತ್ತಿದ್ದ ಕೆಲಸಗಳು ಆಗುವುದಿಲ್ಲ. ಅದೇ ರೀತಿ ನಿಮ್ಮ ಎದುರು ನಿಂತು ಮಾತನಾಡುವುದಕ್ಕೆ ಸಹ ಅಂಜುತ್ತಿದ್ದವರು ಈ ದಿನ ಟೀಕೆ, ಆಕ್ಷೇಪ ಅಥವಾ ಆರೋಪಗಳನ್ನು ಮಾಡಬಹುದು. ನಿಮಗೆ ಮಾಹಿತಿ ಇಲ್ಲದ ವಿಷಯದಲ್ಲಿ ನಿಮ್ಮ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಿದ್ದಾರೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 8ರ ದಿನಭವಿಷ್ಯ

ಶಂಕರಾಚಾರ್ಯರಿಂದ ರಚಿತವಾದ ತ್ರಿಪುರಸುಂದರಿ ಅಷ್ಟಕಂ ಶ್ರವಣ ಮಾಡಿ. ಒತ್ತಡ, ಅಂಜಿಕೆ ಹಾಗೂ ಭಾವನೆಗಳ ಏರಿಳಿತದಿಂದ ಹೊರಬರುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ. ದೀರ್ಘ ಪ್ರಯಾಣ ಮಾಡುತ್ತಾ ಇದ್ದೀರಿ ಅಂತಾದಲ್ಲಿ ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮಗೆ ಅಂದುಕೊಂಡಿದ್ದೆಲ್ಲ ಸರಿ ಎಂದೆನಿಸದರೆ ಸಾಲದು, ವಾಸ್ತವಕ್ಕೆ ಹತ್ತಿರ ಇರುವ ರೀತಿಯಲ್ಲಿ ಇದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇನ್ನು ನೀವಾಗಿಯೇ ಗಂಭೀರವಾದ ವಿಚಾರ ಮಾತನಾಡುತ್ತಿದ್ದೀರಿ ಎಂದಾದಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹೇಳಿದ್ದೇ ಹೇಳಿ ಎದುರಿನಲ್ಲಿ ಇರುವವರಿಗೆ ನಿಮ್ಮ ಮೇಲೆ ಗೌರವ ಕಡಿಮೆ ಆಗುವಂತೆ ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಒಳ್ಳೆ ಮೊತ್ತವೇ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು, ಮಾಡಿದ ಕೆಲಸ ಅಥವಾ ಪ್ರಾಜೆಕ್ಟ್ ನಿಂದ ಬಹಳ ಕಡಿಮೆ ಹಣ ಸಿಗಬಹುದು. ಮನೆಯಿಂದ ಹೊರಗೆ ಊಟ- ತಿಂಡಿ ಮಾಡುವಂಥವರು ಸ್ವಚ್ಛತೆ ಬಗ್ಗೆ ಜಾಸ್ತಿ ಗಮನ ನೀಡಿ. ಸ್ನೇಹಿತರು ಅಥವಾ ಸಂಬಂಧಿಕರ ಒತ್ತಡಕ್ಕೆ ಮಣಿದು, ಮನೆಯ ಹೊರಗಿನಊಟ ಮಾಡಿದಿರೋ ಆರೋಗ್ಯ ಕೈ ಕೊಡುವ ಎಲ್ಲ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿರೀಕ್ಷೆಗೂ ಮೀರಿದ ಆದಾಯ ಬರುವಂಥ ಸೂಚನೆಗಳು ದೊರೆಯಲಿವೆ. ಮನರಂಜನೆಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವಂಥವರಿಗೆ ಬಹಳ ಒಳ್ಳೆ ಸಮಯ ಇದಾಗಿರಲಿದೆ. ಸಂಗೀತಗಾರರು, ಸ್ಟ್ಯಾಂಡ್ ಅಪ್ ಕಮೆಡಿಯನ್ ಗಳು, ಮ್ಯಾಜಿಕ್ ಮಾಡುವಂಥವರು ಮತ್ತು ಅದನ್ನೇ ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಸಿಹಿ ಪದಾರ್ಥಗಳ ವಿಚಾರವಾಗಿ ಹತೋಟಿಯಲ್ಲಿರಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 9ರ ದಿನಭವಿಷ್ಯ 

ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿರುವವರು ಅಥವಾ ಉದ್ಯೋಗ ಜೀವನ ಆರಂಭ ಮಾಡಬೇಕಿರುವವರು ಈಶ್ವರನಿಗೆ ಹಾಲಿನ ಅಭಿಷೇಕವನ್ನು ಮಾಡಿಸಬಹುದು, ಸಾಧ್ಯವಿದ್ದಲ್ಲಿ ನೀವೇ ಮನೆಯಲ್ಲಿ ಇಟ್ಟುಕೊಂಡಿರುವ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಅನುಕೂಲ ಒದಗಿ ಬರಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಬಹಳ ಸಮಯದಿಂದ ನೀವು ಅಂದುಕೊಳ್ಳುತ್ತಿದ್ದ ಹಲವು ವಿಷಯಗಳನ್ನು ತಾರ್ಕಿಕ ಅಂತ್ಯ ತಲುಪಿಸುವುದಕ್ಕೆ ನಿರ್ಧಾರ ಮಾಡುತ್ತೀರಿ. ಅದಕ್ಕಾಗಿ ಸಮಯ- ಹಣವನ್ನು ಸಹ ಮೀಸಲಿಡುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ಈ ಕಾರಣದಿಂದಾಗಿ ನಿಂತು ಹೋಗಿದ್ದ ಕೆಲಸ- ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಅಷ್ಟೇ ಅಲ್ಲ, ವೇಗ ಕೂಡ ಸಿಗಲಿದೆ. ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಕೆಲವರು ನಿಮಗೆ ಬೆಂಬಲ ನೀಡಲಿದ್ದಾರೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಅನಾರೋಗ್ಯದ ಕಾರಣಕ್ಕೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗಲಿದೆ. ಇದಕ್ಕೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ವೆಚ್ಚ ಆಗಲಿದೆ. ಜತೆಗೆ ಇವೇ ಪರೀಕ್ಷೆಗಳನ್ನು ಇನ್ನೊಮ್ಮೆ ಮಾಡಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಆದ್ದರಿಂದ ವೈದ್ಯರು ಸೂಚಿಸಿದ ಕಡೆಯಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಎಲ್ಲಿ ಮತ್ತು ಯಾರಿಗೆ ಸ್ಪಷ್ಟತೆ ನೀಡಬೇಕಿದೆಯೋ ಅವರಿಗೆ ಸರಿಯಾದ ಉತ್ತರವನ್ನು ನೀಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮ ಆಪ್ತರು ಎನಿಸಿಕೊಂಡವರು ತಮ್ಮ ಮೇಲೆ ಬಂದ ನಿಂದೆ ಅಥವಾ ಆರೋಪವನ್ನು ನಿಮ್ಮ ಕಡೆಗೆ ತಿರುಗಿಸುವಂಥ ಸಾಧ್ಯತೆಗಳಿವೆ. ಫೋನ್ ರೆಕಾರ್ಡಿಂಗ್ ಅಥವಾ ನಿಮ್ಮದೇ ವಿಡಿಯೋ ಇಂಥದ್ದನ್ನು ಬಳಸಿಕೊಂಡು, ಕೆಲವರು ಪಿತೂರಿ ಮಾಡಬಹುದು. ಮುಕ್ತ ಮನಸ್ಸಿನಿಂದ ಇದ್ದಲ್ಲಿ ಸಮಸ್ಯೆಯಿಂದ ಹೊರಬರುವಂಥ ಮಾರ್ಗ ಗೋಚರ ಆಗಲಿದೆ. ಸುಖಾಸುಮ್ಮನೆ ಗಾಬರಿ ಆಗಬೇಡಿ. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ.

ಲೇಖನ- ಸ್ವಾತಿ ಎನ್.ಕೆ.

Source link