Category Archives: Blog

Your blog category

ಭಾರತದ ವಿರುದ್ಧ ಪಂದ್ಯವಾಡಲು 3 ಬೇಡಿಕೆ ಮುಂದಿಟ್ಟ ಪಾಕಿಸ್ತಾನ್! – Kannada News | Pakistan’s Conditions To Play The Match Against India

ಟಿ20 ವಿಶ್ವಕಪ್ 2026 ರಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆಯಾ? ಈ ಪ್ರಶ್ನೆಗೆ ಇನ್ನೂ ಸಹ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಏಕೆಂದರೆ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಘೋಷಿಸಿದೆ. ಇದರ ಬೆನ್ನಲ್ಲೇ ಐಸಿಸಿ, ಪಾಕ್ ಕ್ರಿಕೆಟ್ ಬೋರ್ಡ್​ನ ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ಅತ್ತ ಐಸಿಸಿ ಅಧಿಕಾರಿಗಳು ಪಾಕಿಸ್ತಾನದಲ್ಲಿದ್ದು, ಈ ಮೂಲಕ ಪಿಸಿಬಿ ಜೊತೆ ಚರ್ಚೆ ಮುಂದುವರೆಸಿದ್ದಾರೆ. ಈ ಚರ್ಚೆಯ ನಡುವೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆ ಬೇಡಿಕೆಗಳಾವುವು ಎಂದು ನೋಡುವುದಾದರೆ…

  1. ಆದಾಯ ಹೆಚ್ಚಳ: ಐಸಿಸಿಯಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆದಾಯವನ್ನು ಹೆಚ್ಚಿಸಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ. ಈ ಬೇಡಿಕೆಗೆ ಸಮ್ಮತಿಸುವುದಾದರೆ ಮಾತ್ರ ಭಾರತದ ವಿರುದ್ಧ ಕಣಕ್ಕಿಳಿಯುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.
  2. ದ್ವಿಪಕ್ಷೀಯ ಸರಣಿ: ಭಾರತ ಮತ್ತು ಪಾಕಿಸ್ತಾನ್ ನಡುವಣ ದ್ವಿಪಕ್ಷೀಯ ಸರಣಿಯನ್ನು ಮತ್ತೆ ಆರಂಭಿಸಬೇಕೆಂದು ಪಿಸಿಬಿ ಆಗ್ರಹಿಸಿದೆ. ಇದಕ್ಕಾಗಿ ಐಸಿಸಿ ಮುಖ್ಯ ಪಾತ್ರವಹಿಸಬೇಕು. ಈ ಮೂಲಕ ಭಾರತ ಮತ್ತು ಪಾಕಿಸ್ತಾನ್ ನಡುವಣ ಸರಣಿಯನ್ನು ಪುನಃಸ್ಥಾಪಿಸುವ ಭರವಸೆ ನೀಡಬೇಕೆಂದು ಪಿಸಿಬಿ ಆಗ್ರಹಿಸಿದೆ.
  3. ಹ್ಯಾಂಡ್​ಶೇಕ್: ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು. ಪಂದ್ಯಗಳ ವೇಳೆ ಹ್ಯಾಂಡ್​ಶೇಕ್ ಪ್ರೋಟೋಕಾಲ್​ ಜಾರಿ ಮಾಡಬೇಕು. ಈ ಪ್ರೊಟೋಕಾಲ್​ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಹ್ಯಾಂಡ್​ಶೇಕ್ ಮಾಡುವುದನ್ನು ಕಡ್ಡಾಯ ಮಾಡಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ.

ಸದ್ಯ ಈ ಮೂರು ಬೇಡಿಕೆಗಳೊಂದಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಅಧಿಕಾರಿಗಳ ನಡುವೆ ಚರ್ಚೆ ಮುಂದುವರೆದಿದೆ. ಅಲ್ಲದೆ ಇಂದು (ಫೆ.9) ಐಸಿಸಿ-ಪಿಸಿಬಿ ಅಧಿಕಾರಿಗಳ ನಡುವೆ ಲಾಹೋರ್​ನಲ್ಲಿ ಈ ಕುರಿತಾದ ವಿಶೇಷ ಸಭೆ ನಡೆಯಲಿದ್ದು, ಈ ವೇಳೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಪಾಕಿಸ್ತಾನ್ ಪಂದ್ಯವನ್ನು ಬಹಿಷ್ಕರಿಸುತ್ತಿರುವುದೇಕೆ?

ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಾಂಗ್ಲಾದೇಶ್ ತಂಡದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರ ಮಾಡಬೇಕೆಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಆಗ್ರಹಿಸಿತ್ತು.

ಆದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಅಲ್ಲದೆ ಬಾಂಗ್ಲಾ ತಂಡವು ಭಾರತದಲ್ಲೇ ಆಡಬೇಕೆಂದು ಸೂಚಿಸಿದ್ದರು. ಐಸಿಸಿಯ ಈ ಸೂಚನೆಯನ್ನು ತಿರಸ್ಕರಿಸಿದ್ದರಿಂದ ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಕೈ ಬಿಡಲಾಯಿತು.

ಇತ್ತ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವ ಐಸಿಸಿ ಹಾಗೂ ಬಿಸಿಸಿಐ ಕ್ರಮವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಖಂಡಿಸಿದೆ. ಇದೇ ಕಾರಣಕ್ಕೆ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ.

ಅದರಂತೆ ಫೆಬ್ರವರಿ 15 ಕ್ಕೆ ನಿಗದಿಯಾಗಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕ್ ತಂಡ ಕಣಕ್ಕಿಳಿಯುವುದಿಲ್ಲ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಇತ್ತ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಆದಾಯಕ್ಕೆ ಆರ್ಥಿಕ ಹೊಡೆತ ಬೀಳಲಿದೆ. ಹೀಗಾಗಿ ಇದೀಗ ಐಸಿಸಿ ಅಧಿಕಾರಿಗಳು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮನವೊಲಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: ಮುಂದಿನ ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿಗೆ ಇಲ್ಲ ಅವಕಾಶ..!

ಇದೇ ವೇಳೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕೂಡ ತನ್ನ ಬೇಡಿಕೆಗಳನ್ನು ಐಸಿಸಿಯ ಮುಂದಿಟ್ಟಿದ್ದು, ಈ ಬೇಡಿಕೆಗಳನ್ನು ಪೂರೈಸಿದರೆ ಮಾತ್ರ ಭಾರತದ ವಿರುದ್ಧ ಕಣಕ್ಕಿಳಿಯುವುದಾಗಿ ತಿಳಿಸಿದೆ. ಅದರಂತೆ ಪಿಸಿಬಿಯ ಬೇಡಿಕೆಗೆ ಐಸಿಸಿ ಒಪ್ಪಿಗೆ ಸೂಚಿಸಲಿದೆಯಾ ಕಾದು ನೋಡಬೇಕಿದೆ.

Source link

ಇಬ್ಬರು ಅರ್ಧಶತಕ ಬಾರಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ವಿಲ್ ಜಾಕ್ಸ್​​ಗೆ..!

Source link

ನೈಜೀರಿಯಾ: ಕಾನೋದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಅಪಘಾತ, 30 ಮಂದಿ ಸಾವು – Kannada News | Deadly Road Tragedy in Kano, Passenger Truck Crash Claims 30 Lives

ಕಾನೋ, ಫೆಬ್ರವರಿ 09: ಉತ್ತರ ನೈಜೀರಿಯಾ(Nigeria)ದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಪರಿಣಾಮ ಸುಮಾರು 30 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕಾನೋ ರಾಜ್ಯದ ಗೆಜಾವಾ ಪ್ರದೇಶದ ಕ್ವಾನಾರ್ ಬಾರ್ಡೆ ಪಟ್ಟಣದ ಪ್ರಮುಖ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ದೊಡ್ಡ ಟ್ರೇಲರ್ ಟ್ರಕ್ ಅದಾಗಿದ್ದು, ಅತಿ ವೇಗದಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನೋ ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಟ್ರಕ್ ಕಾನೋದಿಂದ ಗುಜುಂಗು ಪಟ್ಟಣದ ಕಡೆಗೆ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುತ್ತಿತ್ತು. ಅದು ಉರುಳಿದಾಗ ಅದರಲ್ಲಿದ್ದ ಅನೇಕರು ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಇತರ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಅಧಿಕಾರಿಗಳು ಅಪಘಾತಕ್ಕೆ ಅಜಾಗರೂಕ ಚಾಲನೆಯೇ ಕಾರಣ ಎಂದು ಆರೋಪಿಸಿದ್ದಾರೆ.

ಈ ಘಟನೆಯನ್ನು ಹೃದಯವಿದ್ರಾವಕ ಮತ್ತು ಸಂತ್ರಸ್ತ ಕುಟುಂಬಗಳಿಗೆ ಮಾತ್ರವಲ್ಲದೆ ಕಾನೋ ರಾಜ್ಯದ ಇಡೀ ಜನರಿಗೆ ದೊಡ್ಡ ನಷ್ಟ ಎಂದು ರಾಜ್ಯಪಾಲ ಅಬ್ಬಾ ಕಬೀರ್ ಯೂಸುಫ್ ಹೇಳಿದ್ದಾರೆ.

ಮತ್ತಷ್ಟು ಓದಿ: ನೈಜೀರಿಯಾದಲ್ಲಿ ಮನೆಗಳು ಭಸ್ಮ, ಅಂಗಡಿಗಳ ಲೂಟಿ, ಕಟ್ಟಿಹಾಕಿ 162 ಜನರ ಬಲಿ ಪಡೆದ ಇಸ್ಲಾಮಿಕ್ ಭಯೋತ್ಪಾದಕರು

ನೈಜೀರಿಯಾದಲ್ಲಿ ಭೀಕರ ದಾಳಿ
ಪಶ್ಚಿಮ ನೈಜೀರಿಯಾದ ಎರಡು ಹಳ್ಳಿಗಳ ಮೇಲೆ ಸಶಸ್ತ್ರ ಹೋರಾಟಗಾರರು ನಡೆಸಿದ ದಾಳಿಯಲ್ಲಿ ಕನಿಷ್ಠ 162 ಜನರು ಸಾವನ್ನಪ್ಪಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕ್ವಾರಾ ರಾಜ್ಯದ ಎರಡು ಗ್ರಾಮೀಣ ಸಮುದಾಯಗಳಾದ ವೊರೊ ಮತ್ತು ನುಕುದಲ್ಲಿ ಮಂಗಳವಾರ ಸಂಜೆ ಹಿಂಸಾಚಾರ ನಡೆದಿದೆ. ಸಂಸತ್ತಿನಲ್ಲಿ ಈ ಪ್ರದೇಶವನ್ನು ಪ್ರತಿನಿಧಿಸುವ ಶಾಸಕ ಮೊಹಮ್ಮದ್ ಒಮರ್ ಬಯೋ ಬುಧವಾರ ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ.

ಬಯೋ ಪ್ರಕಾರ, ದಾಳಿಕೋರರು ಇಸ್ಲಾಮಿಕ್ ಸ್ಟೇಟ್ ಜೊತೆ ಸಂಪರ್ಕ ಹೊಂದಿದ್ದಾರೆಂದು ನಂಬಲಾದ ಸಶಸ್ತ್ರ ಗುಂಪಿನ ಲಕುರಾವಾ ಸದಸ್ಯರಾಗಿದ್ದರು. ಆ ಗುಂಪು ಹಳ್ಳಿಗಳಿಗೆ ನುಗ್ಗಿ ನಿವಾಸಿಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿತು ಎಂದು ಅವರು ಹೇಳಿದರು. ಯಾವುದೇ ಗುಂಪು ಅಧಿಕೃತವಾಗಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:29 am, Mon, 9 February 26

Source link

ಕೇವಲ 22 ಎಸೆತಗಳಲ್ಲಿ ಕ್ರಿಸ್ ಗೇಲ್ ಭರ್ಜರಿ ದಾಖಲೆ ಮುರಿದ ಹೆಟ್ಮೆಯರ್ – Kannada News | Shimron hetmyer breaks Chris Gayle’s Record in T20 World Cup 2026

ಟಿ20 ವಿಶ್ವಕಪ್​ನ ಆರಂಭದಲ್ಲೇ ವೆಸ್ಟ್ ಇಂಡೀಸ್ ದಾಂಡಿಗ ಶಿಮ್ರಾನ್ ಹೆಟ್ಮೆಯರ್ (Shimron hetmyer) ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ 15 ವರ್ಷಗಳ ಹಿಂದೆ ಕ್ರಿಸ್ ಗೇಲ್ ಬರೆದಿದ್ದ ಭರ್ಜರಿ ದಾಖಲೆಯನ್ನು ಮುರಿದಿದ್ದಾರೆ. ಅದು ಕೂಡ ಕೇವಲ 22 ಎಸೆತಗಳಲ್ಲಿ ಎಂಬುದು ವಿಶೇಷ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದೂ ಶುಷ್ಕ ವಾತಾವರಣ ಮುಂದುವರಿಕೆ – Kannada News | Bengaluru temperature: clear sky in Bengaluru, Dry weather all over Karnataka

ರಾಜ್ಯದಲ್ಲಿ ಇಂದೂ ಶುಷ್ಕ ವಾತಾವರಣ ಮುಂದುವರಿಕೆ

ಬೆಂಗಳೂರು, ಫೆಬ್ರುವರಿ 09: ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ (Weather Forecast) ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಚಳಿಯ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Honeymoon Murder: ಏಳು ವರ್ಷಗಳ ಹಿಂದೆ ಮೊದಲ ಭೇಟಿ, 2024ರಲ್ಲಿ ಒಂದಾದ್ರು, 1 ವರ್ಷದ ನಂತರ ಇಬ್ಬರೂ ಸೇರಿ ಕೊಲೆ ಮಾಡಿದ್ರು – Kannada News | Rajasthan Honeymoon Murder: Wife and her Lover Arrested for Husband’s Brutal Killing

ಜೈಪುರ, ಫೆಬ್ರವರಿ 09: ಏಳು ವರ್ಷಗಳ ಹಿಂದೆ ಆಕಸ್ಮಿಕವಾಗಿ ಆಗಿದ್ದ ಭೇಟಿ ಇಂದು ಇಬ್ಬರೂ ಸೇರಿ ಒಂದು ಕೊಲೆಯನ್ನೇ ಮಾಡುವ ಹಂತಕ್ಕೆ ಬಂದು ತಲುಪಿದೆ. ಜನವರಿ 30ರಂದು ರಾಜಸ್ಥಾನದಲ್ಲಿ ನವ ವಿವಾಹಿತ ಮಹಿಳೆಯೊಬ್ಬರು ತನ್ನ ಮದುವೆ(Marriage)ಯಾಗಿ ಮೂರೇ ತಿಂಗಳಿಗೆ ಪ್ರಿಯಕರನ ಜತೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದಳು. ಆರೋಪಿ 23 ವರ್ಷದ ಅಂಜಲಿ, 25 ವರ್ಷದ ಸಂಜಯ್ ಅವರನ್ನು ತಾನು ವೇಟರ್ ಆಗಿ ಕೆಲಸ ಮಾಡುತ್ತಿದ್ದ ಸಮಾರಂಭವೊಂದರಲ್ಲಿ ಭೇಟಿಯಾದಳು. ಮೊದಲು ಆರಂಭವಾದ ಮಾತು ಕತೆ ನಂತರ ಆತ ಮೊಬೈಲ್ ಸಂಖ್ಯೆಯನ್ನು ಕೊಡುವವರೆಗೆ ಬಂದಿತ್ತು. ಆದರೆ ಆ ಸಮಯದಲ್ಲಿ ಅಂಜಲಿ ಬಳಿ ಮೊಬೈಲ್ ಫೋನ್ ಇರಲಿಲ್ಲ, ಇಬ್ಬರೂ ಸಂಪರ್ಕ ಕಳೆದುಕೊಂಡರು.

2024ರಲ್ಲಿ ಅಂಜಲಿ ಕೊನೆಗೂ ಫೋನ್ ಖರೀದಿಸಿ ಆಕೆ ಸಂಜಯ್ ಜತೆ ಮತ್ತೆ ಸಂಪರ್ಕಕ್ಕೆ ಬಂದಳು, ಕ್ರಮೇಣವಾಗಿ ಅವರ ನಡುವೆ ಮಾತುಕತೆ ಹೆಚ್ಚಾಗಿತ್ತು. ಆದರೆ ಆಕೆಯ ಕುಟುಂಬದವರ ಪ್ಲ್ಯಾನ್ ಬೇರೆಯೇ ಇತ್ತು. ಸಂಜಯ್ ಜತೆ ಸಂಬಂಧ ಹೊಂದಿದ್ದಾಳೆಂದು ತಿಳಿದ ಬಳಿಕವೂ ಬೇರೆ ವರನನ್ನು ನೋಡಿ ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು.
ಅಕ್ಟೋಬರ್ 30, 2025ರಂದು ಅಂಜಲಿಯ ಕುಟುಂಬ ರಾವ್ಲಾದ ಎಂಕಾ ಪದವೀಧರ ಆಶಿಶ್ ಕುಮಾರ್ ಅವರೊಂದಿಗೆ ವಿವಾಹ ಏರ್ಪಡಿಸಿದ್ದರು. ಅಂಜಲಿ ಬಿಕಾಂ ಪದವೀಧರೆಯಾಗಿದ್ದಾರೆ. ಮದುವೆಯ ನಂತರ ಅವರು ರಾವ್ಲಾಗೆ ತೆರಳಿದ್ದರು, ಆದರೆ ಆಕೆಯ ಮನಸ್ಸಿಗೆ ಸಮಾಧಾನವಿರಲಿಲ್ಲ.

ರಾವ್ಲಾದಲ್ಲಿ ಗಂಡನ ಮನೆ ಸಾದುಲ್ಶಹರ್‌ನಲ್ಲಿರುವ ಅವರ ಹುಟ್ಟೂರು ನಡುವಿನ 225 ಕಿಲೋಮೀಟರ್ ಅಂತರವಿತ್ತು. ಅದು ಆಕೆಗೆ ತಲೆನೋವಾಗಿ ಪರಿಣಮಿಸಿತ್ತು. ಆಕೆ ಸಂಜಯ್ ಜತೆ ಸಂಪರ್ಕದಲ್ಲಿದ್ದಳು. ಕೊಲೆಗೆ ಸುಮಾರು 16 ದಿನಗಳ ಮೊದಲು ಅಂಜಲಿ ತನ್ನ ಹೆತ್ತವರ ಮನೆಗೆ ಭೇಟಿ ನೀಡಿದ್ದಳು. ಪೊಲೀಸರ ಪ್ರಕಾರ, ಆ ಸಮಯದಲ್ಲಿ ಆಕೆ ಸಂಜಯ್ ಜತೆ ಸೇರಿ ಪತಿ ಆಶಿಶ್​ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.

ಮತ್ತಷ್ಟು ಓದಿ: ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ತಾಳಿ ಕಟ್ಟುವ ಶುಭ ವೇಳೆ ನಡೆದಿದ್ದೇನು?

ಮದುವೆಯ ನಂತರ ಅವರು ನೇರವಾಗಿ ಭೇಟಿಯಾಗದಿದ್ದರೂ , ಆಗಾಗ ವಾಟ್ಸಾಪ್​ನಲ್ಲಿ ಕರೆ ಮಾಡಿ ಮಾತನಾಡುತ್ತಿದ್ದರು. ಕೊಲೆಯಾದ ದಿನ ಇಬ್ಬರೂ 5 ರಿಂದ 7 ಬಾರಿ ಮಾತನಾಡಿದ್ದರು. ಜನವರಿ 30 ರ ರಾತ್ರಿ, ಊಟದ ನಂತರ, ಅಂಜಲಿ ತನ್ನ ಪತಿಯನ್ನು ತನ್ನೊಂದಿಗೆ ವಾಕ್ ಮಾಡಲು ಹೋಗುವಂತೆ ಕೇಳಿಕೊಂಡಳು. ನಂತರ ಅವರು ಇರುವ ಸ್ಥಳದ ಬಗ್ಗೆ ಸಂಜಯ್‌ಗೆ ದೂರವಾಣಿ ಮೂಲಕ ತಿಳಿಸಿದ್ದಳು.

ಸಂಜಯ್, ತನ್ನ ಇಬ್ಬರು ಸಹಚರರಾದ ರೋಹಿತ್ ಅಲಿಯಾಸ್ ರಾಕಿ ಮತ್ತು ಬಾದಲ್ ಅಲಿಯಾಸ್ ಸಿದ್ಧಾರ್ಥ್ ಜೊತೆ ಪೊದೆಗಳಲ್ಲಿ ಅಡಗಿ ಕಾಯುತ್ತಿದ್ದರು. ಅಂಜಲಿ ತನ್ನ ಪತಿಯೊಂದಿಗೆ ಸ್ಥಳಕ್ಕೆ ಬಂದ ತಕ್ಷಣ ಅವರಿಗೆ ಸಂಕೇತ ನೀಡಿದ್ದಳು, ಗುಂಪು ಆಶಿಶ್ ಮೇಲೆ ಹೊಂಚು ಹಾಕಿ, ಕೋಲುಗಳಿಂದ ಪದೇ ಪದೇ ಹೊಡೆದರು, ಆಶಿಶ್ ಕೆಳಗೆ ಬಿದ್ದಾಗ ಆರೋಪಿಗಳು ಮಫ್ಲರ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಘಟನೆಯನ್ನು ದರೋಡೆ ಎಂದು ಬಿಂಬಿಸಲು ಅಂಜಲಿ ತನ್ನ ಕಿವಿಯೋಲೆ ಮತ್ತು ಆಶಿಶ್​ನ ಮೊಬೈಲ್ ಅನ್ನು ದಾಳಿಕೋರರಿಗೆ ಕೊಟ್ಟಿದ್ದಾಳೆ. ಆಕೆಯೂ ಪ್ರಜ್ಞೆ ಕಳೆದುಕೊಂಡವಳಂತೆ ರಸ್ತೆಯಲ್ಲಿ ಮಲಗಿದ್ದಳು.

ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಶಿಶ್ ತಲೆಯ ಹಿಂಭಾಗದಲ್ಲಿ ತೀವ್ರವಾದ ಗಾಯಗಳಾಗಿದ್ದು, ಕತ್ತು ಹಿಸುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು.ಈಗ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ವ್ಯಕ್ತಿಗಳನ್ನು 5 ದಿನಗಳ ಕಾಲ ವಶಕ್ಕೆ ಪಡೆಯಲಾಗಿದ್ದು, ಅಂಜಲಿಯನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆದು ನಂತರ ಬಿಕಾನೇರ್ ಜೈಲಿಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:09 am, Mon, 9 February 26

Source link

ಭರ್ಜರಿ ಚೇಸಿಂಗ್… ವಿಶ್ವಕಪ್​​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ನೇಪಾಳ – Kannada News | Nepal Team Created New World Record in T20 World Cup 2026

ಟಿ20 ವಿಶ್ವಕಪ್​​ನಲ್ಲಿ ನೇಪಾಳ ತಂಡವು ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಇಂಗ್ಲೆಂಡ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​​ನ 5ನೇ ಮ್ಯಾಚ್​​ನಲ್ಲಿ ನೇಪಾಳ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.

Source link

‘ಅದಕ್ಕೆ ದೊಡ್ಡೋರು ಅನ್ನೋದು’; ಸುದೀಪ್ ಬಗ್ಗೆ ಧನ್ವೀರ್ ಮೆಚ್ಚುಗೆ – Kannada News | Dhanveer Happy about Kichcha Sudeep Appreciation in Darshan matter

ಚಿತ್ರರಂಗ ಒಟ್ಟಾಗಿ ಸಾಗಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಇದಕ್ಕೆ ಪ್ರತಿಕೂಲವಾಗಿ ಘಟನೆಗಳು ನಡೆದಿದ್ದೇ ಹೆಚ್ಚು. ದರ್ಶನ್ ಬಗ್ಗೆ ಸುದೀಪ್ ಅವರು ಸದಾ ಮೆಚ್ಚುಗೆ ಸೂಚಿಸಿ ಮಾತನಾಡುತ್ತಾರೆ. ಆದರೆ, ಇಬ್ಬರ ಅಭಿಮಾನಿಗಳ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾತನಾಡಿದ್ದ ಸುದೀಪ್ (Sudeep) ಅವರು, ದರ್ಶನ್ ಆಪ್ತ ಧನ್ವೀರ್ ಬಗ್ಗೆ ಮಾತನಾಡಿದ್ದರು. ಈ ವಿಷಯಕ್ಕೆ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ.

ವಿನಯ್ ಹಾಗೂ ಧನ್ವೀರ್ ಪೋಸ್ಟ್ ಹಾಕಿಕೊಂಡು ಕಿರಿಕ್ ಮಾಡಿಕೊಂಡ ಬಗ್ಗೆ ಸುದೀಪ್ ಮಾತನಾಡಿದ್ದರು. ‘ನನಗೆ ಧನ್ವೀರ್ ಹಾಗೂ ವಿನಯ್ ಇಬ್ಬರೂ ಒಂದೇ. ಅವರಿಬ್ಬರೂ ಚಿತ್ರರಂಗದ ಯಂಗ್​ಸ್ಟರ್ಸ್​. ಧನ್ವೀರ್​​ನ ನಾನು ನೋಡಿದ್ದೇನೆ. ಅವರು ಆ ಹೀರೋ ಜೊತೆ ಓಡಾಡೋದು ನೋಡಿದ್ದೇನೆ. ಏನೇ ಆದರೂ ಆ ಹೀರೋ ಜೊತೆ ನಿಲ್ಲುತ್ತೇನೆ ಎಂಬ ನೀಯತ್ತು ಇದೆಯಲ್ಲ ಅದು ಬೇಕು’ ಎಂದಿದ್ದರು ಕಿಚ್ಚ.

ಈ ವಿಷಯವಾಗಿ ಧನ್ವೀರ್ ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಊ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಾನು ಆ ವಿಡಿಯೋ ನೋಡಿದೆ. ದೊಡ್ಡವರು ಎಂಬುದು ಹೇಳೋದು ಇದಕ್ಕೆ. ಅವರಿಗೆ ಎಲ್ಲವೂ ಗೊತ್ತಿರುತ್ತದೆ. ಅದಕ್ಕೆ ಅವರು ದೊಡ್ಡ ಮಾತು ಆಡ್ತಾರೆ’ ಎಂದರು ಧನ್ವೀರ್.

ಇದೇ ವೇಳೆ ವಿನಯ್ ಗೌಡಗೆ ಟಾಂಗ್ ಕೂಡ ಕೊಟ್ಟಿದ್ದಾರೆ. ‘ಆಗದೆ ಇದ್ದವರು ಎಲ್ಲೋ ಕುಳಿತುಕೊಂಡು ಮಾತನಾಡ್ತಾರೆ’ ಎಂದಿದ್ದಾರೆ. ‘ದೊಡ್ಡವರು ಮಾತನಾಡೋದು ಕೇಳಿ ನಮಗೆ ಖುಷಿ ಆಯ್ತು’ ಎಂದು ಧನ್ವೀರ್ ಹೇಳಿದ್ದಾರೆ.

ಇದನ್ನೂ ಓದಿ: ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್

ಸುದೀಪ್​​ಗೆ ಅನೇಕ ಯುವ ಹೀರೋಗಳು ನೀಯತ್ತು ತೋರಿಸುತ್ತಾರೆ. ಈ ನೀಯತ್ತು ಸುದೀಪ್​​ಗೆ ಇಷ್ಟ. ಬೇರೆ ನಟರಿಗೂ ಯುವ ಹೀರೋಗಳು ನೀಯತ್ತು ತೋರಿಸುತ್ತಾರೆ ಎಂದರೆ ಅದು ಹೆಮ್ಮೆ ಪಡೋ ವಿಷಯವೇ ಸರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ? – Kannada News | Daily Devotional: The Divine Parijatha, Benefits of Growing This Auspicious Plant Near Your Home

ಬೆಂಗಳೂರು, ಫೆಬ್ರುವರಿ​ 09: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ?ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯ ಹತ್ತಿರ ಸಣ್ಣ ಪುಟ್ಟ ಗಿಡಗಳನ್ನು ಬೆಳೆಸುವುದು ಸಾಮಾನ್ಯ. ಆದರೆ ಕೆಲವು ಗಿಡಗಳು ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ವಿಶೇಷ ಮಹತ್ವವನ್ನು ಹೊಂದಿವೆ. ಅವುಗಳಲ್ಲಿ ಪಾರಿಜಾತ ಗಿಡವು ಅತಿ ಪ್ರಮುಖವಾದುದು. ಪಾರಿಜಾತವನ್ನು ದೇವಲೋಕದ ಗಿಡ ಎಂದು ಕರೆಯಲಾಗುತ್ತದೆ. ಇದರ ಹೂವುಗಳು ರಾತ್ರಿಯ ಸಮಯದಲ್ಲಿ ಸುಗಂಧವನ್ನು ಬೀರುತ್ತವೆ.

ಮನೆಯಲ್ಲಿ ಪಾರಿಜಾತ ಗಿಡವನ್ನು ಬೆಳೆಸಬಹುದೇ ಎಂಬ ಪ್ರಶ್ನೆಗೆ ಉತ್ತರ ಹೌದು. ಇದನ್ನು ಉತ್ತರ-ಈಶಾನ್ಯ ಅಥವಾ ದಕ್ಷಿಣ-ನೈರುತ್ಯ ದಿಕ್ಕಿನಲ್ಲಿ ಬೆಳೆಸುವುದು ಶುಭ ಎಂದು ವಾಸ್ತು ಹೇಳುತ್ತದೆ. ಇದು ವಾಸ್ತು ದೋಷಗಳನ್ನು ನಿವಾರಿಸಿ, ಮನೆಯ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಪ್ರಸಾರ ಮಾಡುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ಪಾರಿಜಾತವೂ ಒಂದು. ಇದನ್ನು ಮಹಾಲಕ್ಷ್ಮಿಯ ಸಹೋದರ ಎಂದು ಸಹ ಪರಿಗಣಿಸಲಾಗುತ್ತದೆ. ಮನೆಯ ಸುತ್ತಲೂ ಪಾರಿಜಾತ ಗಿಡವಿದ್ದರೆ ಮಹಾಲಕ್ಷ್ಮಿ, ಮಹಾಸರಸ್ವತಿ, ಮಹಾಕಾಳಿ ಈ ತ್ರಿಶಕ್ತಿಗಳ ಅನುಗ್ರಹ ಇರುತ್ತದೆ ಎಂದು ನಂಬಲಾಗಿದೆ. ಸೂರ್ಯನ ಕಿರಣಗಳು ಇದಕ್ಕೆ ಬೀಳುವುದು ಅವಶ್ಯಕ. ನೆಲಕ್ಕೆ ಬಿದ್ದ ಹೂವುಗಳನ್ನು ಸಹ ಪೂಜೆಗೆ ಬಳಸಬಹುದು ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

Video: ಪೀರಗಢಿ ಫ್ಲೈಓವರ್‌ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಶವ ಪತ್ತೆ – Kannada News | Mystery Deaths on Delhi Flyover: Three Found Lifeless Inside Locked Car

ನವದೆಹಲಿ, ಫೆಬ್ರವರಿ 09: ದೆಹಲಿಯ ಪೀರಗಢಿ ಫ್ಲೈಓವರ್ ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮೂವರ ಶವ ಪತ್ತೆಯಾಗಿದೆ. ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಪ್ರೋಲಾ ನಿವಾಸಿ ರಣಧೀರ್ ಸಿಂಗ್ (60 ವರ್ಷ), ಲಕ್ಷ್ಮಿ ದೇವಿ (40 ವರ್ಷ) ಮತ್ತು ಶಿವ ನರೇಶ್ ಸಿಂಗ್ (47 ವರ್ಷ) ಎಂದು ಗುರುತಿಸಲಾಗಿದೆ. ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಶವಪರೀಕ್ಷೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ತುಂಬಾ ಹೊತ್ತಿನಿಂದ ಕಾರು ಅಲ್ಲೇ ನಿಂತಿದ್ದರಿಂದ ಅನುಮಾನಗೊಂಡ ಜನರು ಹತ್ತಿರಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link