ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್ಆರ್ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ – Kannada News
ನವದೆಹಲಿ, ಜೂನ್ 5: ಎನ್‌ಆರ್‌ಐಗಳು (ಅನಿವಾಸಿ ಭಾರತೀಯರು) ಮತ್ತು ಒಸಿಐಗಳು (OCI – ಸಾಗರೋತ್ತರ ಭಾರತೀಯ ನಾಗರಿಕರು) ಸೆಬಿ (SEBI) ಬಳಿ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲದೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ (stock market) ನೇರವಾಗಿ ಹೂಡಿಕೆ ಮಾಡಲು ಇರುವ ಹಣದ ಮಿತಿಯನ್ನು ಸರ್ಕಾರ ಹೆಚ್ಚಿಸುತ್ತಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆ ನಂತರದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಹೊರಗೆಡವಿದ್ದಾರೆ. ಈವರೆಗೆ ಇಂತಹ ಹೂಡಿಕೆಗೆ ಕಟ್ಟುನಿಟ್ಟಾದ ಮಿತಿಗಳಿದ್ದವು. ಆ ಮಿತಿಗಳನ್ನು ಸಡಿಲಗೊಳಿಸುವುದರಿಂದ, ಅನಿವಾಸಿ ಭಾರತೀಯರಿಗೆ ಭಾರತದ…