Headlines

ಇಂದಿನಿಂದ ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದು; ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ಬಂದ್ – Kannada News | Bengaluru Train Disruptions: Vande Bharat, Kaveri Express Services Affected Till August

ಬೆಂಗಳೂರು, ಜೂ.18: ರೈಲ್ವೆ ಹಳಿಗಳ ಸುಧಾರಣೆ, ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯವು ರಾಜ್ಯದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಿದೆ. ಹೊಳೆನರಸೀಪುರ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ರಸ್ತೆ ಕೆಳಸೇತುವೆ ನಿರ್ಮಾಣ ಹಾಗೂ ಬೆಂಗಳೂರಿನ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ (KSR) ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಜೂನ್ 18 ರಿಂದ ಆಗಸ್ಟ್ ತಿಂಗಳವರೆಗೆ ಹಲವು ಪ್ರಮುಖ ರೈಲುಗಳನ್ನು ರದ್ದು ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ. ಹೊಳೆನರಸೀಪುರ ಮಾರ್ಗ:…

Read More

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು? – Kannada News | Sudeep acting along with Prabhas in Spirit movie

ಸುದೀಪ್ (Sudeep), ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಪ್ಯಾನ್ ಇಂಡಿಯಾ ನಟ ಎನಿಸಿಕೊಂಡಿದ್ದವರು. ಅವರ ನಟನಾ ಪ್ರತಿಭೆಗೆ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಭಾಷೆಗಳಿಂದ ದೊಡ್ಡ ಅವಕಾಶಗಳೇ ಬಂದಿದ್ದವು. ಅಮಿತಾ ಬಚ್ಚನ್ ಸೇರಿದಂತೆ ಇನ್ನೂ ಹಲವರೊಟ್ಟಿಗೆ ಸಮನಾದ ಪಾತ್ರಗಳಲ್ಲಿ ಸುದೀಪ್ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರು ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರಿಗೆ ಮತ್ತೆ ಪರ ಭಾಷೆಗಳ ಸಿನಿಮಾಗಳಿಂದ ಆಫರ್​​ಗಳು ಬರುತ್ತಿವೆ. ಇದೀಗ ಪ್ರಭಾಸ್ ಅವರ…

Read More

Karnataka MLC Elections: ವಿಧಾನಸೌಧದಲ್ಲಿ ಮತದಾನಕ್ಕೂ ಮುನ್ನ ಜೆಡಿಎಸ್ ಮೀಟಿಂಗ್! – Kannada News | JDS MLAs Meet in Vidhana Soudha Ahead of MLC Elections to Prevent Cross Voting

ಬೆಂಗಳೂರು, ಜೂನ್ 18: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಮತದಾನಕ್ಕೂ ಮುನ್ನ ಜೆಡಿಎಸ್ ಶಾಸಕರ ಸಭೆಯು ವಿಧಾನಸೌಧದಲ್ಲಿ ನಡೆಯಿತು. ಈ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಭಾಗಿಯಾಗಿದ್ದರು. ಜೆಡಿಎಸ್ ತನ್ನ ಶಾಸಕರ ಮೇಲೆ ವಿಶೇಷ ನಿಗಾ ವಹಿಸಿದ್ದು, ಪಕ್ಷದ ಅಭ್ಯರ್ಥಿ ಗೆಲ್ಲುವುದು ಒಂದು ಭಾಗವಾದರೆ, ಅತಿ ಮುಖ್ಯವಾಗಿ ಅಡ್ಡ ಮತದಾನ ನಡೆಯದಂತೆ ನೋಡಿಕೊಳ್ಳುವುದು ಪಕ್ಷದ ಪ್ರಮುಖ ಉದ್ದೇಶವಾಗಿತ್ತು. ಜೆಡಿಎಸ್‌ನ ಲೆಕ್ಕಾಚಾರದ ಪ್ರಕಾರ, ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವುದು, ಎಲ್ಲಾ ಜೆಡಿಎಸ್ ಮತಗಳು ತಮ್ಮ ಅಭ್ಯರ್ಥಿಗೆ ಬೀಳುವಂತೆ ಮಾಡುವುದು…

Read More

ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಬಯಲು; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ – Kannada News | PM Kisan scheme 23rd installment to be released in Tarakeshwar, West Bengal on June 20th

ನವದೆಹಲಿ, ಜೂನ್ 18: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 23ನೇ ಕಂತಿನ ಹಣ ಬಿಡುಗಡೆಯಾಗುವ ದಿನಾಂಕ ಬಹಿರಂಗಗೊಂಡಿದೆ. ಜೂನ್ 20, ಶನಿವಾರದಂದು 2,000 ರೂಗಳ ಕಂತು ಬಿಡುಗಡೆ ಆಗಲಿದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್​ನಿಂದ ಇದು ಟ್ವೀಟ್ ಆಗಿದೆ. ಮಾರ್ಚ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಸ್ಸಾಂ ಭೇಟಿ ವೇಳೆ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9.32 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ…

Read More

ಸ್ವಿಮ್ಮಿಂಗ್ ಪೂಲ್​ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನ ಪ್ರಾಣ ಉಳಿಸಿದ ಕಸ್ಟಮ್ಸ್​ ಜಾರಿ ಅಧಿಕಾರಿ – Kannada News | Florida Hero: ICE Officer Saves Drowning Child with CPR in Pool

ಸ್ವಿಮ್ಮಿಂಗ್ ಪೂಲ್ -ಸಾಂದರ್ಭಿಕ ಚಿತ್ರImage Credit source: Districts ಫ್ಲೋರಿಡಾ, ಜೂನ್ 18: ಸ್ವಿಮ್ಮಿಂಗ್​ ಪೂಲ್​(Swimming Pool)ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ಆರು ವರ್ಷದ ಬಾಲಕನನ್ನು ಅಮೆರಿಕದ ಕಸ್ಟಮ್ಸ್​ ಜಾರಿ ಅಧಿಕಾರಿ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ಪಾಸ್ಕೊ ಕೌಂಟಿಯ ಈಜುಕೊಳದಲ್ಲಿ ಮುಳುಗಿದ್ದ ಬಾಲಕ ಪ್ರಜ್ಞಾಹೀನನಾಗಿ ತೇಲುತ್ತಿದ್ದ. ಅದೇ ಪೂಲ್ ಬಳಿ ಇದ್ದ ಐಸಿಇ ಅಧಿಕಾರಿ ಗ್ರೆಗೊರಿ ಸಿಮಂಡ್ಸ್ ಇದನ್ನು ಗಮನಿಸಿದ್ದಾರೆ, ಬಾಲಕ ಸಂಕಷ್ಟದಲ್ಲಿರುವುದನ್ನು ಕಂಡ ತಕ್ಷಣ ಅವರು ಸೆಕೆಂಡ್ ಕೂಡ ಯೋಚಿಸದೆ, ಧರಿಸಿದ್ದ ಬಟ್ಟೆ…

Read More

ಗೂಗಲ್, ಫೇಸ್​​ಬುಕ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಪ್ರೀತಿ ಜಿಂಟಾ – Kannada News | Preity Zinta to file suit against Google, Meta over deepfake

ನಟಿಯರಿಗೆ ಡೀಫ್​​ಫೇಕ್ ಕಾಟ ಇತ್ತೀಚೆಗೆ ಬಹಳ ಹೆಚ್ಚಾಗಿದೆ. ಹಲವಾರು ನಟಿಯರು ಡೀಪ್​​ಫೇಕ್ ಕಾಟಕ್ಕೆ ಬಲಿಯಾಗಿದ್ದಾರೆ. ರಶ್ಮಿಕಾ, ಈಗ ರುಕ್ಮಿಣಿ ಸೇರಿದಂತೆ ಹಲವಾರು ನಟಿಯರಿಗೆ ಡೀಪ್​​ಫೇಕ್ ವಿಡಿಯೋಗಳು ಕಾಟ ಕೊಟ್ಟಿವೆ. ಕೆಲವು ನಟಿಯರು ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿ ಸುಮ್ಮನಾಗಿದ್ದಾರೆ. ಆದರೆ ನಟಿ ಪ್ರೀತಿ ಜಿಂಟಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದು, ಗೂಗಲ್ ಮತ್ತು ಫೇಸ್​​ಬುಕ್ (ಮೆಟಾ) ವಿರುದ್ಧವೇ ದೂರು ನೀಡಲು ಸಜ್ಜಾಗಿದ್ದಾರೆ. ಅವರ ಈ ಸಾಹಸಕ್ಕೆ ನ್ಯಾಯಾಲಯದ ಅನುಮತಿಯೂ ಸಹ ದೊರಕಿದೆ. ನಟಿ…

Read More

‘ಈ ಚಿತ್ರಕ್ಕೆ ಕಾಯಬೇಡಿ’; ‘ಆಲ್ಫಾ’ ಟ್ರೇಲರ್​ಗೆ ನೆಟ್ಟಿಗರ ಹಿಗ್ಗಾಮುಗ್ಗಾ ಟ್ರೋಲ್ – Kannada News | Alpha Trailer Trolled: YRF Spy Universe’s New Film Disappoints Audience and Fans

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ, ಆಲಿಯಾ ಭಟ್ ಹಾಗೂ ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಆಲ್ಫಾ’ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಯಶ್ ರಾಜ್​​​ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನ ಮೊದಲ ಚಿತ್ರ ಇದಾಗಿರುವುದರಿಂದ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಟ್ರೇಲರ್ ಕಂಡ ಪ್ರೇಕ್ಷಕರು ತೀವ್ರ ನಿರಾಶೆ ವ್ಯಕ್ತಪಡಿಸಿದ್ದು, ಕಾಮೆಂಟ್ ಸೆಕ್ಷನ್‌ನಲ್ಲಿ ತರಹೇವಾರಿ ಜೋಕ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಟ್ರೇಲರ್​​ನಲ್ಲಿ ಕಲರ್ ಗ್ರೇಡಿಂಗ್ ಹಾಗೂ ಆ್ಯಕ್ಷನ್ ಸೀನ್‌ಗಳನ್ನು…

Read More

‘ನೀವು ಯಾರಿಗೆ ಹೇಳ್ತೀರೋ ಅವರಿಗೇ ವೋಟ್ ಹಾಕ್ತೀನಿ’: ಆರ್. ಅಶೋಕ್‌ಗೆ ಶಾಸಕ ಯತ್ನಾಳ್ ಭರವಸೆ

  ವಿಧಾನ ಪರಿಷತ್ ಚುನಾವಣೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್ ಬಿಜೆಪಿಯ ಮತದಾನದ ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು. ಬಿಜೆಪಿಯ ಅಭ್ಯರ್ಥಿ ಗೆಲ್ಲಲು ಅಗತ್ಯವಿರುವಷ್ಟು ಮತಗಳನ್ನು ಪಕ್ಷ ಪಡೆದುಕೊಂಡಿದ್ದು, ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದರು. ಜೆಡಿಎಸ್‌ ಗೆಲ್ಲಬೇಕು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು. ಜೆಡಿಎಸ್‌ಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಲಾಗಿದೆ ಎಂದು ಅಶೋಕ್ ಖಚಿತಪಡಿಸಿದರು. ಬಿಜೆಪಿ ಅಭ್ಯರ್ಥಿಯ ಎರಡನೇ ಪ್ರಾಶಸ್ತ್ಯದ…

Read More

ಲೋಕೇಶ್ ಕನಗರಾಜ್ ಬಳಿಕ ಮತ್ತೊಬ್ಬ ತಮಿಳು ಸ್ಟಾರ್ ನಿರ್ದೇಶಕನ ಸಿನಿಮಾನಲ್ಲಿ ಉಪ್ಪಿ – Kannada News | Upendra to act in Karthik Subbaraj’s new movie

ಉಪೇಂದ್ರ (Upendra) ಅವರಿಗೆ ಕನ್ನಡ ಮಾತ್ರವಲ್ಲದೆ ಪರ ಭಾಷೆಗಳಲ್ಲಿಯೂ ಭರ್ಜರಿ ಬೇಡಿಕೆ ಇದೆ. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಉಪೇಂದ್ರಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದೆ. ಅಲ್ಲಿನ ಕೆಲವು ಸ್ಟಾರ್ ನಟ, ನಿರ್ದೇಶಕರುಗಳು ಸಹ ಉಪೇಂದ್ರ ಅವರ ಅಭಿಮಾನಿಗಳು. 2008 ರಲ್ಲಿ ‘ಸತ್ಯ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದ ಉಪೇಂದ್ರ, ಇತ್ತೀಚೆಗಷ್ಟೆ ರಜನೀಕಾಂತ್ ನಟಿಸಿ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಉಪ್ಪಿಗೆ ತಮಿಳಿನಿಂದ ಬುಲಾವ್…

Read More

IPL 2027: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್​! – Kannada News | IPL 2027 is likely to begin on March 10

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 ಆರಂಭಕ್ಕೆ ತಾತ್ಕಾಲಿಕ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಐಪಿಎಲ್ 2027 ಮಾರ್ಚ್ 10 ರಿಂದ ಶುರುವಾಗಲಿದೆ. ಅಲ್ಲದೆ ಫೈನಲ್ ಪಂದ್ಯವನ್ನು ಮೇ 15 ರೊಳಗೆ ಮುಗಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಹಾಗೂ ಆಟಗಾರರ ಹಿತದೃಷ್ಟಿಯಿಂದ ಪ್ರಸ್ತುತ ಇರುವ 74 ಪಂದ್ಯಗಳ ಸ್ವರೂಪದಲ್ಲೇ 2027ರ ಐಪಿಎಲ್ ಟೂರ್ನಿ ಮುಂದುವರಿಯಲಿದೆ.  ಇದರೊಂದಿಗೆ, ಭಾರತದ ತೀವ್ರ ಹವಾಮಾನ ವೈಪರೀತ್ಯ ಹಾಗೂ ಮುಂಗಾರು ಮಳೆಯಿಂದ…

Read More