Category Archives: Blog

Your blog category

ಶ್ರೀದೇವಿ ಹಾದಿಯಲ್ಲಿ ಸಾಗಿದ ಜಾನ್ವಿ ಕಪೂರ್; ಆ ಒಂದು ಕೆಲಸಕ್ಕೆ ಭಾರೀ ಮೆಚ್ಚುಗೆ

ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್ (Janhvi Kapoor) ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಪ್ರಯತ್ನದಲ್ಲಿ ಇದ್ದಾರೆ. ಸ್ಟಾರ್ ಹಿನ್ನೆಲೆಯಿಂದ ಬಂದರೂ ಸಹ ವೃತ್ತಿಜೀವನದ ಆರಂಭದಲ್ಲೇ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಅವರು, ಸದ್ಯ ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ. ಸದ್ಯಕ್ಕೆ ಜಾನ್ವಿ ಅವರ ಸಂಪೂರ್ಣ ಗಮನ ಪ್ಯಾನ್-ಇಂಡಿಯಾ ಸಿನಿಮಾಗಳ ಮೇಲಿದ್ದು, ದಕ್ಷಿಣ ಭಾರತದತ್ತ ಹೆಜ್ಜೆ ಇಟ್ಟಿದ್ದಾರೆ. ಅವರು ಶ್ರೀದೇವಿ ಹಾದಿಯಲ್ಲೇ ಸಾಗುತ್ತಿದ್ದಾರೆ.

ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ ‘ಪೆದ್ದಿ’ ಜೂನ್ 4 ರಂದು ಅದ್ಧೂರಿಯಾಗಿ ತೆರೆಕಾಣಲು ಸಿದ್ಧವಾಗಿದೆ. ಈ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಎದುರು ಬರಲು ಜಾನ್ವಿ ಮತ್ತೊಮ್ಮೆ ರೆಡಿ ಆಗಿದ್ದಾರೆ. ಅವರು ತಮಗೆ ಸಿಕ್ಕ ಯಾವುದೇ ಅವಕಾಶವನ್ನು ಕೈಬಿಡುತ್ತಿಲ್ಲ.

ಇತ್ತೀಚೆಗೆ ನಡೆದ ‘ಪೆದ್ದಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ಎಲ್ಲರಿಗೂ ಅಚ್ಚರಿ ಮೂಡಿಸಿದರು. ವೇದಿಕೆಯ ಮೇಲೆ ತಡಬಡಾಯಿಸದೇ ಅತ್ಯಂತ ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ತೆಲುಗಿನಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು. ಪ್ರೇಕ್ಷಕರನ್ನು ರಂಜಿಸುವುದೇ ನನ್ನ ಜೀವನದ ನಿಜವಾದ ಉದ್ದೇಶ ಎಂದರು. ‘ಪ್ರತಿಯೊಬ್ಬರೂ ತಮ್ಮ ಜೀವನದ ಉದ್ದೇಶವನ್ನು ಕಂಡುಕೊಳ್ಳಬೇಕು’ ಎಂಬ ಈ ಸಿನಿಮಾದ ಸಂದೇಶವನ್ನೇ ತಮ್ಮ ಜೀವನಕ್ಕೂ ಹೋಲಿಸಿ ಅವರು ಮಾತನಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಒಂದು ಕಾಲದಲ್ಲಿ ನಟಿ ಶ್ರೀದೇವಿ ಅವರು ಟಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದರು. ತೆಲುಗು ಚಿತ್ರರಂಗವನ್ನು ಆಳಿದ್ದ ಶ್ರೀದೇವಿ ಅವರಿಗೆ ಅಲ್ಲಿ ಅಪಾರ ಅಭಿಮಾನಿ ಬಳಗವಿತ್ತು. ಈಗ ಜಾನ್ವಿ ಕಪೂರ್ ಕೂಡ ತಾಯಿಯ ಹಾದಿಯಲ್ಲೇ ಸಾಗಲು ಸಿದ್ಧರಾಗುತ್ತಿದ್ದಾರೆ ಎಂಬುದಕ್ಕೆ ಅವರು ಈ ಕಾರ್ಯಕ್ರಮದಲ್ಲಿ ಅರಳು ಹುರಿದಂತೆ ತೆಲುಗಿನಲ್ಲಿ ಮಾತನಾಡಿದ್ದೇ ಸಾಕ್ಷಿ. ತೆಲುಗು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಗೌರವ ಈ ಭಾಷಣದಲ್ಲಿ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: ಕನ್ನಡ ಕಲಿತು ವೇದಿಕೆ ಮೇಲೆ ಮಾತನಾಡಿದ ಜಾನ್ವಿ ಕಪೂರ್ 

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆಯಾಗುತ್ತಿದೆ. ಒಂದು ವೇಳೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆದರೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜಾನ್ವಿ ಕಪೂರ್ ಅವರ ಬೇಡಿಕೆ ದುಪ್ಪಟ್ಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ರೀತಿ ಅವರು ಮುಂದುವರಿದರೆ, ತಾಯಿಯಂತೆ ಟಾಲಿವುಡ್‌ನ ಮುಂದಿನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಿಂದೂ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಹಾಲು ಅಥವಾ ಎಣ್ಣೆ ಚೆಲ್ಲುವುದಕ್ಕೆ ವಿಶೇಷ ಅರ್ಥವಿದೆ. ಪದೇ ಪದೇ ಹಾಲು ಆಕಸ್ಮಿಕವಾಗಿ ಚೆಲ್ಲಿದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಸಮೃದ್ಧಿ, ದೈವಬಲ, ಗ್ರಹಬಲ ವೃದ್ಧಿ ಮತ್ತು ಅದೃಷ್ಟದ ಆಗಮನವನ್ನು ಸೂಚಿಸುತ್ತದೆ. ಹಾಲು ಚಂದ್ರನ ಪ್ರತೀಕವಾಗಿದ್ದು, ವಿಷ್ಣು ಅನುಗ್ರಹವನ್ನು ತರುತ್ತದೆ. ಗೃಹ ಪ್ರವೇಶಗಳಲ್ಲಿ ಹಾಲು ಉಕ್ಕಿಸುವುದು ಇದೇ ನಂಬಿಕೆಗೆ ಕಾರಣ. ಇದು ಮನೆಗೆ ಶಾಂತಿ, ನೆಮ್ಮದಿ, ಹಣಕಾಸಿನ ಯೋಗ ಮತ್ತು ಆರೋಗ್ಯವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಪದೇ ಪದೇ ಎಣ್ಣೆ, ಅಡುಗೆ ಎಣ್ಣೆ ಅಥವಾ ತಲೆ ಎಣ್ಣೆ ಚೆಲ್ಲುವುದು ಅಶುಭ ಸಂಕೇತವಾಗಿದೆ. ಇದನ್ನು ಶನಿ ಗ್ರಹಕ್ಕೆ ಸಂಬಂಧಿಸಿದ್ದು ಎಂದು ಪರಿಗಣಿಸಲಾಗುತ್ತದೆ. ಇದು ಸಾಲಬಾಧೆ, ಆರ್ಥಿಕ ಸಂಕಷ್ಟ, ಅನಾರೋಗ್ಯ ಅಥವಾ ಮನೆಯಲ್ಲಿ ಕಲಹಗಳನ್ನು ಸೂಚಿಸಬಹುದು. ಎಣ್ಣೆ ಚೆಲ್ಲಿದಾಗ, ಜಾಗೃತಿಯಿಂದ ಇರಬೇಕು ಮತ್ತು ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ದೀಪ ಹಚ್ಚಿ ಪ್ರಾರ್ಥಿಸುವುದು ಉತ್ತಮ ಪರಿಹಾರವೆಂದು ನಂಬಲಾಗಿದೆ. ಈ ನಂಬಿಕೆಗಳು ಹಿಂದೂ ಧರ್ಮಗ್ರಂಥಗಳು ಮತ್ತು ವಾಸ್ತುಶಾಸ್ತ್ರದಲ್ಲಿ ವಿವರಣೆಯನ್ನು ಹೊಂದಿವೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆರ್ಥಿಕ ಭಯ ಎದುರಿಸಲಾಗದು

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಮಂಗಳ ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಮೂಲಾ, ಯೋಗ : ಸಿದ್ಧ, ಕರಣ : ಗರಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:36 – 17:12, ಯಮಗಂಡ ಕಾಲ 09:09 – 10:46, ಗುಳಿಕ ಕಾಲ 12:22 – 13:59

ಮೇಷ ರಾಶಿ: ಇಂದು ನಿಮ್ಮ ಆದಾಯದ ಮೂಲಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆಸ್ತಿಯಿಂದ ಲಾಭ ಉಂಟಾಗಲಿದೆ. ಏಕಾಭಿಪ್ರಾಯದಿಂದ ಒಂಟಿಯಾಗಬೇಕಾಗುವುದು. ಹಣದ ವಿಷಯಗಳಲ್ಲಿ ಯಾರನ್ನೂ ಹೆಚ್ಚು ನಂಬಬೇಡಿ. ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ, ಆದರೆ ತಾಳ್ಮೆಯೇ ನಿಮ್ಮ ಅಸ್ತ್ರವಾಗಬೇಕು. ಉತ್ತರಿಸಲು ಹೋಗದೇ ಅಲೆಗಳು ಶಾಂತವಾಗುವವರೆಗೆ ಸುಮ್ಮನಿರಿ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು.

ವೃಷಭ ರಾಶಿ: ಉದ್ವಿಗ್ನಗೊಳ್ಳದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆಯಿದೆ. ಕೆಲಸ ಚುರುಕುಗೊಳ್ಳಬೇಕು ಮತ್ತು ಇದರಿಂದ ನಿಮಗೆ ಬೆಂಬಲವೂ ಸಿಗುತ್ತದೆ. ನಿಮ್ಮ ಮಾತಿಗೆ ಅಪಾರ್ಥದ ಲೇಪ ಅಂಟಿಕೊಳ್ಳಬಹುದು. ದೂರ ಪ್ರಯಾಣದ ಸಾಧ್ಯತೆ ಇರಬಹುದು. ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಅಧಿಕಾರಿಗಳೂ ನಿಮಗೆ ಬೆಂಬಲ ನೀಡುತ್ತಾರೆ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ.

ಮಿಥುನ ರಾಶಿ: ಭೂಮಿಯ ಪಾಲನೆಯನ್ನು ಮಾಡಿಕೊಕೊಂಡು ಹೋಗುವುದು ನಿಮಗೆ ಕಷ್ಟವಾಗುವುದು. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಕೆಟ್ಟ ಕೆಲಸವನ್ನು ಮಾಡಿ ಸಂಭಾವಿತರಂತೆ ತೋರಿಸಿಕೊಳ್ಳುವಿರಿ. ವೃತ್ತಿಪರ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕೆಲಸದಲ್ಲಿಯೂ ಅತ್ಯುತ್ತಮ ಸಾಧನೆ ಇರುತ್ತದೆ. ದಿನವು ಅನುಕೂಲಕರವಾಗಿದೆ. ಕಾಲಹರಣಕ್ಕಾಗಿ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ.

ಕರ್ಕಾಟಕ ರಾಶಿ: ಸಣ್ಣ ಖರ್ಚುಗಳಿಗೆ ಸ್ವಂತ ಹಣವನ್ನು ಬಳಸಿ, ಪರರ ಸಹಾಯ ಬೇಡ. ಸ್ಥಾನಮಾನಕ್ಕಾಗಿ ಮುಸುಕಿನ ಗುದ್ದಾಟ ನಡೆಯಬಹುದು. ನಿಮ್ಮ ಮೇಲೆ ನಿಮಗೆ ವಿಶ್ವಾಸವಿದ್ದರೆ, ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ನಡೆದಂತೆ ನುಡಿಯುವುದು ನಿಮಗೆ ಕಷ್ಟವಾಗುವುದು. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು.

ಸಿಂಹ ರಾಶಿ: ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಂಟುವ ಕುದುರೆ ವೇಗವಾಗಿ ಸಾಗದು. ಕೆಲಸದಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ. ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಆದಾಯವು ಸುಧಾರಿಸುತ್ತದೆ. ಭೂಮಿಗೆ ಸಂಬಂಧಿಸಿದ ಪ್ರಯೋಜನಗಳ ಸಾಧ್ಯತೆ ಇದೆ. ಸಹೋದರರ ನಡುವೆ ಪ್ರೀತಿ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು.

ಕನ್ಯಾ ರಾಶಿ: ಕೋಪವನ್ನು ಹತೋಟಯಲ್ಲಿ ಇಟ್ಟುಕೊಳ್ಳಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಲಾಭದ ಸಮಯ ಉರುಳಿಹೋಗಬಹುದು. ನೀವು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತೀರಿ ಮತ್ತು ಸಕಾರಾತ್ಮಕವಾಗಿ ಉಳಿಯುತ್ತೀರಿ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತೀರಿ. ಯಾವ ಉದ್ಯಮವನ್ನೂ ನೀವು ಹಗುರಾಗಿ ಕಾಣುವುದು ಬೇಡ. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯ ಕಾರಣದಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.‌

ತುಲಾ ರಾಶಿ: ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ಪರರನ್ನು ನೋಡಿ ಇರುವ ವಸ್ತುವಿನಲ್ಲಿ ಸುಖಪಡಲಾರಿರಿ. ನಿಮ್ಮ ಸಂಗಾತಿಯೊಂದಿಗಿನ ವಿವಾದಗಳು ಕೊನೆಗೊಳ್ಳುತ್ತವೆ. ಚಿಂತೆಗಳು ಕೊನೆಗೊಳ್ಳುತ್ತವೆ ಮತ್ತು ಹಣ ಸಿಗುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಹೊಸ ಕೆಲಸಗಳು ದೊರೆಯುತ್ತವೆ. ಅನಿರೀಕ್ಷಿತ ವಾರ್ತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು.

ವೃಶ್ಚಿಕ ರಾಶಿ: ನಿಮ್ಮ ಮಾತು ಆದಷ್ಟು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ವಿದೇಶಕ್ಕೆ ಪ್ರಯಾಣಕ್ಕೆ ಸಂಬಂಧಿತ ಸಮಸ್ಯೆಗಳು ಬಗೆಹರಿಯುತ್ತವೆ. ಅಪಾಯದ ಮುನ್ಸೂಚನೆಯನ್ನು ಅಲ್ಲಗಳೆಯುವುದು ಬೇಡ. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಕೆಲವೊಮ್ಮೆ ನೀವೇ ಸಮಸ್ಯೆಯನ್ನು ತಂದುಕೊಂಡು ಕಷ್ಟಪಡುವಿರಿ.

ಧನು ರಾಶಿ: ನಿಮ್ಮ ಆರ್ಥಿಕ ನೆಲೆ ಬಲವಾಗಿ ಉಳಿಯುತ್ತದೆ. ವಿಶೇಷ ಆತಿಥ್ಯವನ್ನು ನೀವಿಂದು ಪಡೆದು ಖುಷಿಪಡುವಿರಿ. ಯೋಜನೆಗಳು ಯಶಸ್ವಿಯಾಗುತ್ತವೆ, ಚಿಂತನಶೀಲವಾಗಿ ಕೆಲಸ ಮಾಡಿ ಮತ್ತು ತಾಳ್ಮೆಯಿಂದ ಕೆಲಸ ಮಾಡಿ. ನಿಮ್ಮ ಪ್ರತಿಭೆಗೆ ಸ್ಥಳ ಹುಡುಕುವಿರಿ. ವಾಹನದ ವಿಚಾರದಲ್ಲಿ ನಿಮಗೆ ಗೊಂದಲ ನಿವಾರಣೆಯಾಗದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು.

ಮಕರ ರಾಶಿ: ಅನಾರೋಗ್ಯದ ಕಾರಣಕ್ಕಾಗಿ ಅಧಿಕ ಖರ್ಚು ಆಗಲಿದೆ. ಮಾನಸಿಕವಾದ ಉಲ್ಲಾಸವಿರಲಿದೆ. ಆರ್ಥಿಕ ಸಂಕಷ್ಟದಿಂದ ಕೆಲವು ಕೆಲಸವನ್ನು ಮುಂದೂಡುವಿರಿ. ಕಠಿಣ ಪರಿಶ್ರಮದಿಂದ ನೀವು ಎಲ್ಲರಿಗಿಂತ ಮುಂದೆ ಸಾಗುತ್ತೀರಿ. ನಿಮ್ಮ ಯೋಜನೆ ಉತ್ತಮವಾಗಿರುತ್ತದೆ. ಹೊಸ ಅವಕಾಶ ಸಿಗುವ ಸಾಧ್ಯತೆ ಇದೆ. ನೀವು ತಾಳ್ಮೆ ಮತ್ತು ತಿಳುವಳಿಕೆಯಿಂದ ವರ್ತಿಸಬೇಕಾಗುತ್ತದೆ. ಭೂಮಿಯ ಮೇಲೆ ಹೂಡಿಕೆ‌ ಮಾಡಲು ನಿಮಗೆ ಅವಕಾಶ ಸಿಗಬಹುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು.

ಕುಂಭ ರಾಶಿ: ಸಂಗಾತಿಯ ಜೊತೆ ಆಪ್ತವಾಗಿ ಮಾತನಾಡಲು ಇಷ್ಟವಾಗದು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಿದರೆ ಫಲಿತಾಂಶ ಉತ್ತಮ. ಸೌಹಾರ್ದ ಮಾತುಕತೆಗಳಿಂದ ವಿವಾದ ಇತ್ಯರ್ಥವಾಗಲಿದೆ. ಮನೆಯವರ ಜೊತೆ ಸಮಯ ಕಳೆಯುವ ಅವಕಾಶ ಸಿಗಬಹುದು. ಆರ್ಥಿಕವಾಗಿ ಸ್ಥಿರತೆ ಇದೆ, ಆದರೆ ಅಪರೂಪದ ಖರ್ಚುಗಳಿಗೆ ಸಿದ್ಧರಾಗಿ. ಇನ್ನೊಬ್ಬರ ಮೇಲೆ ನಿಮಗರ ಪಶ್ಚಾತ್ತಾಪ‌ಭಾವ ಬರುವುದು. ಸಮಯಕ್ಕೆ ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ.

ಮೀನ ರಾಶಿ: ನಿಮ್ಮ ಕೆಲಸದ ಮೇಲೆ ಮಾತ್ರ ನೀವು ಗಮನಹರಿಸಿದರೆ ಉತ್ತಮ. ಒತ್ತಡದಲ್ಲಿ ಅನ್ವೇಷಣೆ ಆಗಿರಬರದು. ಕೆಲವೊಂದು ಬಲವಾದ ನಿರ್ಧಾರಗಳು ತೆಗೆದುಕೊಳ್ಳಬೇಕಾದ ಗೊಂದಲದ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ತಾಳ್ಮೆಯೊಂದಿಗೆ ನಿರ್ಧಾರ ಮಾಡಿ, ತಕ್ಷಣದ ಪ್ರತಿಕ್ರಿಯೆ ಬೇಡ. ಕೆಲವೊಂದು ಸ್ನೇಹಿತರು ನಿಮ್ಮಿಂದ ಸಹಾಯ ಅಪೇಕ್ಷಿಸಬಹುದು, ಹಿರಿಯರ ಸಲಹೆಯನ್ನು ಒಡೆಯಿರಿ. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ.

ಲೋಹಿತ ಹೆಬ್ಬಾರ್-8762924271 (what’s app only)

Source link

IPL 2026: ಅತಿ ಹೆಚ್ಚು ಪಂದ್ಯ ಶ್ರೇಷ್ಠ; ಅಗ್ರಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

Source link

ವಿಚ್ಛೇದನ ಸಿಗೋ ತನಕ ಸಿನಿಮಾ ಮಾಡಲ್ಲ ಅಂತ ಹೇಳಿ ಈಗ ಉಲ್ಟಾ ಹೊಡೆದ ಜಯಂ ರವಿ

ಪತ್ನಿ ಆರತಿ ಅವರಿಂದ ವಿಚ್ಛೇದನ ಪಡೆಯುವವರೆಗೂ ಚಿತ್ರರಂಗದಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ತಮಿಳು ನಟ ಜಯಂ ರವಿ (Jayam Ravi), ಈಗ ಚಿತ್ರಪ್ರೇಮಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸಿನಿಮಾ ಯೂನಿಮ್ಯಾಟಿಕ್ ಯೂನಿವರ್ಸ್ (LCU) ಸೇರುವ ಮೂಲಕ ಜಯಂ ರವಿ ಚಿತ್ರರಂಗಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಲೋಕೇಶ್ ಕನಕರಾಜ್ ಪ್ರಸ್ತುತಪಡಿಸುತ್ತಿರುವ ‘ಬೆಂಜ್’ (Benz) ಚಿತ್ರಕ್ಕೆ ಜಯಂ ರವಿ (ರವಿ ಮೋಹನ್) ಆಯ್ಕೆಯಾಗಿದ್ದಾರೆ.

ಜಯಂ ರವಿ ಅವರು ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್​ನ ಭಾಗವಾಗಿರುವುದು ಈ ಮೂಲಕ ಖಚಿತವಾಗಿದೆ. ಸ್ವತಃ ನಿರ್ದೇಶಕ ಲೋಕೇಶ್ ಕನಕರಾಜ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ‘ನಮ್ಮ ಯೂನಿವರ್ಸ್‌ಗೆ ಸುಸ್ವಾಗತ ರವಿ ಸರ್’ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಕೂಡಲೇ ಜನರಿಗೆ ರವಿ ಮೋಹನ್ ಅವರ ವೈಯಕ್ತಿಕ ವಿಷಯ ನೆನಪಾಗಿದೆ.

ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಜಯಂ ರವಿ, ತಮ್ಮ ವೈಯಕ್ತಿಕ ಜೀವನದ ಏರುಪೇರುಗಳಿಂದ ಬೇಸತ್ತು ಕಠಿಣ ನಿರ್ಧಾರ ಪ್ರಕಟಿಸಿದ್ದರು. ‘ನನ್ನ ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ನನ್ನ ಯಾವುದೇ ಸಿನಿಮಾಗಳು ತೆರೆಗೆ ಬರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ನಟಿಸಲು ಸಾಧ್ಯವಾಗುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಎದುರಿಸುತ್ತಿರುವ ಸೈಬರ್ ಬುಲ್ಲಿಂಗ್ ಮತ್ತು ನಿಂದನೆಗಳನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನನ್ನ ವೈಯಕ್ತಿಕ ಜೀವನ ಸರಿಯಾಗುವವರೆಗೂ ಕ್ಯಾಮೆರಾ ಮುಂದೆ ನಿಲ್ಲಲ್ಲ’ ಎಂದು ಭಾವುಕರಾಗಿದ್ದರು.

ಅಲ್ಲದೇ, ‘ನನ್ನ ನಿರ್ಧಾರದಿಂದ ಯಾರಿಗೂ ತೊಂದರೆಯಾಗಬಾರದು. ನಿರ್ಮಾಪಕರಿಂದ ಪಡೆದ ಹಣವನ್ನು ಹಿಂತಿರುಗಿಸಿಯಾದರೂ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತೇನೆ’ ಎಂದಿದ್ದರು. ಆದರೆ ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಲೋಕೇಶ್ ಕನಕರಾಜ್ ಅವರಂತಹ ದೊಡ್ಡ ನಿರ್ದೇಶಕನ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ರವಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ

ಈ ನಡುವೆ ಜಯಂ ರವಿ ಅವರೊಂದಿಗೆ ಆಪ್ತವಾಗಿ ಗುರುತಿಸಿಕೊಂಡಿದ್ದ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಸಂಬಂಧದ ವದಂತಿಗಳು ಇತ್ತೀಚೆಗೆ ಜೋರಾಗಿದ್ದವು. 2025ರಲ್ಲಿ ಇಬ್ಬರೂ ಒಂದೇ ರೀತಿಯ ಉಡುಪು ಧರಿಸಿ ಮದುವೆಯೊಂದರಲ್ಲಿ ಭಾಗವಹಿಸಿದ್ದರು. ಆದರೆ ಇತ್ತೀಚೆಗಷ್ಟೇ ಕೆನಿಶಾ, ‘ನಾನು ಈ ಕಥೆಯೊಳಗೆ ಪ್ರೀತಿಯಿಂದ ಬಂದೆ, ಆದರೆ ಈಗ ಮೌನವಾಗಿ ಹೊರನಡೆಯುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಜಯಂ ರವಿ ಜೊತೆಗಿನ ಬ್ರೇಕ್‌ಅಪ್ ಮುನ್ಸೂಚನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹವಾಮಾನ ಬದಲಾವಣೆ ಕೀಲು ನೋವಿನ ಹೆಚ್ಚಳಕ್ಕೆ ಕಾರಣವಾಗುತ್ತಾ? ತಡೆಗಟ್ಟಲು ಏನು ಮಾಡಬಹುದು?

ಇತ್ತೀಚೆಗೆ ದೇಶದ ಹಲವು ಭಾಗಗಳಲ್ಲಿ ಹವಾಮಾನದಲ್ಲಿ ನಿರಂತರ ಬದಲಾವಣೆ ಕಂಡುಬರುತ್ತಿದೆ. ಕೆಲವೊಮ್ಮೆ ಮಳೆ, ಮತ್ತೆ ಕೆಲವೊಮ್ಮೆ ಬಿಸಿಲು ಮತ್ತು ತಾಪಮಾನದಲ್ಲಿನ ಏರಿಳಿತಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ವಿಶೇಷವಾಗಿ ಕೀಲು ನೋವು (Joint Pain) ಮತ್ತು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಹವಾಮಾನ ಬದಲಾದಾಗ ನೋವು ಮತ್ತು ಬಿಗಿತ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆ ಎಲ್ಲರಿಗೂ ಒಂದೇ ರೀತಿಯಾಗಿ ಕಂಡುಬರುವುದಿಲ್ಲವಾದರೂ ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಹವಾಮಾನ ಬದಲಾವಣೆಗೂ ಕೀಲು ನೋವಿಗೂ ಏನು ಸಂಬಂಧ, ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೀಲು ನೋವಿಗೂ ಹವಾಮಾನಕ್ಕೂ ಏನು ಸಂಬಂಧ?

ತಜ್ಞರ ಪ್ರಕಾರ, ತಾಪಮಾನ, ಗಾಳಿಯ ಒತ್ತಡ (Atmospheric Pressure) ಮತ್ತು ತೇವಾಂಶದಲ್ಲಾಗುವ ಬದಲಾವಣೆಗಳು ಕೆಲವರ ಕೀಲುಗಳ ಮೇಲೆ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಕೀಲುಗಳಲ್ಲಿ ಬಿಗಿತ, ಭಾರವಾದ ಅನುಭವ ಹಾಗೂ ನೋವು ಹೆಚ್ಚಾಗಬಹುದು. ಬೆಳಿಗ್ಗೆ ಎದ್ದಾಗ ಅಥವಾ ಹೆಚ್ಚು ಸಮಯ ಒಂದೇ ಸ್ಥಿತಿಯಲ್ಲಿ ಕುಳಿತಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳಬಹುದು. ಆದರೆ ಹವಾಮಾನ ಬದಲಾವಣೆಯ ಪರಿಣಾಮ ಎಲ್ಲರಲ್ಲೂ ಒಂದೇ ರೀತಿಯಾಗಿ ಕಾಣಿಸುವುದಿಲ್ಲ. ಕೆಲವರಿಗೆ ಯಾವುದೇ ರೀತಿಯ ಸಮಸ್ಯೆ ಆಗದೇ ಇರಬಹುದು, ಇನ್ನು ಕೆಲವರಿಗೆ ನೋವಿನ ಅನುಭವ ಹೆಚ್ಚಾಗಿ ಕಾಣಿಸಬಹುದು.

ಯಾರಿಗೆ ಹೆಚ್ಚು ತೊಂದರೆ ಉಂಟಾಗಬಹುದು?

ಈ ಕೆಳಗಿನ ಸಮಸ್ಯೆಗಳಿರುವವರಿಗೆ ಹವಾಮಾನ ಬದಲಾವಣೆಯ ಪರಿಣಾಮ ಹೆಚ್ಚು ಕಂಡುಬರಬಹುದು:

  • ಸಂಧಿವಾತ (Arthritis)
  • ಆಸ್ಟಿಯೋಆರ್ಥ್ರೈಟಿಸ್ (Osteoarthritis)
  • ರುಮಟಾಯ್ಡ್ ಆರ್ಥ್ರೈಟಿಸ್ (Rheumatoid Arthritis)
  • ಹಳೆಯ ಕೀಲು ಅಥವಾ ಮೂಳೆ ಗಾಯಗಳು
  • ವಯೋವೃದ್ಧರಲ್ಲಿ ಕಂಡುಬರುವ ಕೀಲು ಸಮಸ್ಯೆಗಳು

ಇಂತಹ ವ್ಯಕ್ತಿಗಳಲ್ಲಿ ಕೀಲು ನೋವು, ಬಿಗಿತ ಮತ್ತು ಅಸಹಜತೆ ಹೆಚ್ಚಾಗುವ ಸಾಧ್ಯತೆ ಇದೆ.

ಕೀಲು ನೋವನ್ನು ಕಡಿಮೆ ಮಾಡಲು ಏನು ಮಾಡಬೇಕು?

  • ಪ್ರತಿದಿನ ಲಘು ವ್ಯಾಯಾಮ ಮಾಡಿ
  • ಹೆಚ್ಚು ಸಮಯ ಒಂದೇ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಡಿ
  • ಸಾಕಷ್ಟು ನೀರು ಕುಡಿಯಿರಿ
  • ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧ ಆಹಾರ ಸೇವಿಸಿಹವಾಮಾನ ತಣ್ಣಗಿದ್ದರೆ ದೇಹವನ್ನು ಬೆಚ್ಚಗಿರಿಸಿಕೊಳ್ಳಿ
  • ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಿರಿ

ಹವಾಮಾನ ಬದಲಾದಾಗ ಕೀಲು ನೋವು ಹೆಚ್ಚಾಗುವುದು ಕೆಲವರಲ್ಲಿ ಸಾಮಾನ್ಯವಾಗಿರಬಹುದು. ಆದರೆ ನೋವು ನಿರಂತರವಾಗಿ ಮುಂದುವರಿದರೆ ಅಥವಾ ದಿನನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸರಿಯಾದ ಜೀವನಶೈಲಿ, ವ್ಯಾಯಾಮ ಮತ್ತು ಪೌಷ್ಟಿಕ ಆಹಾರದಿಂದ ಕೀಲುಗಳ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈಕಮಾಂಡ್ ಕೈ ಸೇರಿದ ಮೊದಲ ಹಂತದ ಪಟ್ಟಿ: ಇಲ್ಲಿದೆ ಡಿಕೆಶಿ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ವಿವರ

ಬೆಂಗಳೂರು, (ಜೂನ್ 01): ರಾಜ್ಯ ರಾಜಕಾರಣದಲ್ಲಿ (Karnataka Politics) ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸಲೀಸಾಗಿ ಆಗಿದೆ. ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ. ಶಿವಕುಮಾರ್ (Dk Shivakumar) ಯಾವುದೇ ಗೊಂದಲ, ಗಲಾಟೆ ಪವರ್ ಶೇರ್ ಮಾಡಿಕೊಂಡಿದ್ದಾರೆ. ಕುರ್ಚಿ ಬದಲಾಗುವ ಮೊದಲು ಹಾಗೂ ಬಳಿಕವೂ ತಾವು ಜೋಡೆತ್ತು ಅಂತ್ಲೇ ಬಿಂಬಿಸಿಕೊಳ್ತಿದ್ದಾರೆ. ಆದ್ರೆ ಅಧಿಕಾರ ಹಸ್ತಾಂತರದ ಕಗ್ಗಂಟು ಬಿಡಿಸುವಲ್ಲಿ ಯಶಸ್ವಿಯಾದ ಹೈಕಮಾಂಡ್​ಗೆ ಈಗ ಸರ್ಕಾರ ರಚನೆಯ ಸರ್ಕಸ್ ಶುರುವಾಗಿದೆ. ಸಚಿವ ಸಂಪುಟದಲ್ಲಿ ಯಾರನ್ನ ಸೇರಿಸ್ಬೇಕು? ಸಿದ್ದರಾಮಯ್ಯ ಸಂಪುಟದಲ್ಲಿದ್ದ ಇನ್ಯಾರನ್ನ ಕೈಬಿಡಬೇಕು ಅನ್ನೋ ಚರ್ಚೆ ದೆಹಲಿ ಮಟ್ಟದಲ್ಲಿ ನಡೀತಿದೆ. ಹೀಗಾಗಿ ನಮಗೂ ಒಂದು ಅವಕಾಶ ಸಿಗ್ಲಿ ಎಂದು ಹೊಸಬರು ಟವಲ್ ಹಾಕಿದ್ರೆ, ಸಿದ್ದರಾಮಯ್ಯರ ಸಂಪುಟದಲ್ಲಿದ್ದ ನಾಯಕರು ದೆಹಲಿ ಪರೇಡ್ ಶುರು ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಮೊದಲ ಹಂತದ ಸಂಭಾವ್ಯ ಸಚಿವರ ಪಟ್ಟಿ ಹೈಕಮಾಂಡ್​​​ ಕೈಸೇರಿದೆ.

ಇದನ್ನೂ ನೋಡಿ: ಸಿದ್ದರಾಮಯ್ಯ ಪುತ್ರನಿಗೆ ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ 10 ರಿಂದ 12 ಸಚಿವರ ಮೊದಲ ಪಟ್ಟಿಯನ್ನು ಕೆ.ಸಿ.ವೇಣುಗೋಪಾಲ್​ ಅವರಿಗೆ ನೀಡಿದ್ದು, ಈ ಪಟ್ಟಿಯನ್ನು ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಪರಿಶೀಲಿಸಿ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಲಿದ್ದಾರೆ. ಇನ್ನು ಸಂಭಾವ್ಯ ಸಚಿವ ಪಟ್ಟಿಯನ್ನು ನೋಡುವುದಾದರೆ, ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್, ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಡಾ.ಯತೀಂದ್ರ ಅಥವಾ ಭೈರತಿ ಸುರೇಶ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ್ ಅಥವಾ ಈಶ್ವರ ಖಂಡ್ರೆ. ಹೀಗೆ 10 ರಿಂದ 12 ಸಚಿವರು ಜೂನ್ 3ರಂದೇ ಡಿಕೆ ಶಿವಕುಮಾರ್ ಜೊತೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ: ನಗದು, ಚಿನ್ನಾಭರಣ ಸೇರಿದಂತೆ 18 ಕೋಟಿ ರೂ ಫ್ರೀಜ್

ಬೆಂಗಳೂರು, ಜೂನ್​ 01: ನಗರದಲ್ಲಿ ದೀಪಕ್ ಕೇಬಲ್ ಇಂಡಿಯಾ ಲಿಮಿಡೆಟ್​​ನಿಂದ ವಿವಿಧ ಬ್ಯಾಂಕ್​ಗಳಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ದಾಳಿ ವೇಳೆ ಕಂಪನಿಗೆ ಸಂಬಂಧಿಸಿದ 1.27 ಕೋಟಿ ರೂ ನಗದು ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 18 ಕೋಟಿ ರೂ ಹಣವನ್ನೂ ಫ್ರೀಜ್ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಮಾಹಿತಿ ನೀಡಿದೆ.

ಮುಖ್ಯಾಂಶಗಳು

  • ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ ಕೇಸ್​
  • ಕಂಪನಿಗೆ ಸಂಬಂಧಿಸಿದ 1.27 ಕೋಟಿ ನಗದು ಮತ್ತು ಚಿನ್ನಾಭರಣ ಜಪ್ತಿ
  • ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ 18 ಕೋಟಿ ಹಣ ಫ್ರೀಜ್

ಬ್ಯಾಂಕ್​​ಗಳಿಗೆ 899 ಕೋಟಿ ರೂ ವಂಚನೆ 

ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿ ಎಸ್​​ಬಿಐ ಸೇರಿದಂತೆ ವಿವಿಧ ಬ್ಯಾಂಕ್​ಗಳಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಸಾಲ ಪಡೆದುಕೊಂಡಿತ್ತು. ಆದರೆ, ಆ ಸಾಲದ ಹಣವನ್ನು ಉದ್ದೇಶಿತ ಉದ್ದೇಶಕ್ಕೆ ಬಳಸದೆ, ಬೇರೆ ಕಡೆಗೆ ವರ್ಗಾವಣೆ ಮಾಡುವ ಮೂಲಕ ಒಟ್ಟು 899 ಕೋಟಿ ರೂ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ವಂಚನೆಗೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿತ್ತು. ಸಿಬಿಐ ದಾಖಲಿಸಿದ್ದ ಇದೇ ಪ್ರಕರಣದ ಆಧಾರದ ಮೇಲೆ ಇದೀಗ ಇಡಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: ‘ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ’: ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ

ಬೆಂಗಳೂರಿನ ಇ.ಡಿ ಅಧಿಕಾರಿಗಳ ನೇತೃತ್ವದ ತಂಡವು ಇತ್ತೀಚೆಗೆ ಅಂದರೆ ಮೇ 21 ಹಾಗೂ ಮೇ 29ರಂದು ದೀಪಕ್ ಕೇಬಲ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಕೆ. ವೆಂಕಟೇಶ್ವರ್ ರಾವ್ ಮತ್ತು ಅಧುನಿಕ್ ಕಾರ್ಪೊರೇಷನ್ ಲಿಮಿಟೆಡ್‌ನ ನಿರ್ದೇಶಕ ಮಹೇಶ್ ಅಗರ್ವಾಲ್ ಅವರಿಗೆ ಸೇರಿದ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಡಿ ದಾಳಿ: ನೆರೆ ರಾಜ್ಯದ ಚುನಾವಣೆಗೆ ದೊಡ್ಡ ಮೊತ್ತದ ಹಣ ಹೋಗಿರೋ ಶಂಕೆ

ಇನ್ನು ದಾಳಿ ಸಂದರ್ಭದಲ್ಲಿ ವಂಚನೆಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಜಪ್ತಿ ಮಾಡಲಾದ ನಗದು, ಚಿನ್ನಾಭರಣ ಹಾಗೂ ಫ್ರೀಜ್ ಮಾಡಲಾದ ಬ್ಯಾಂಕ್ ಖಾತೆಗಳ ವಿವರಗಳೊಂದಿಗೆ ಇಡಿ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರು ವಾತಾವರಣದಲ್ಲಿ ಬದಲಾವಣೆ: ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ

ಪ್ರಾತಿನಿಧಿಕ ಚಿತ್ರImage Credit source: gettyimages

ಬೆಂಗಳೂರು, ಜೂನ್​ 01: ಸಿಲಿಕಾನ್ ಸಿಟಿಯಲ್ಲಿ (bangaluru) ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ಮಳೆ ಮತ್ತು ಅತಿಯಾದ ಸೆಕೆಯ ವಾತಾವರಣವು ಸಾರ್ವಜನಿಕರನ್ನು, ಅದರಲ್ಲೂ ಮುಖ್ಯವಾಗಿ ಪುಟಾಣಿ ಮಕ್ಕಳನ್ನು (Children) ಹೈರಾಣಾಗಿಸಿದೆ. ಹವಾಮಾನ ವೈಪರೀತ್ಯದ ಬೆನ್ನಲ್ಲೇ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಡೆಂಗ್ಯೂ ಸೇರಿ ವೈರಾಣು ಜ್ವರಗಳ ಪ್ರಕರಣಗಳು ತೀವ್ರವಾಗಿ ಉಲ್ಬಣಿಸುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಪೋಷಕರಿಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಬದಲಾವಣೆ ಹವಾಮಾನದಿಂದ ಮಕ್ಕಳ ಮೇಲೆ ಪರಿಣಾಮ
  • ಮಕ್ಕಳಲ್ಲಿ ಹೆಚ್ಚಿದ ಡೆಂಗ್ಯೂ, ವೈರಲ್ ಜ್ವರದ ಆತಂಕ
  • ತೀವ್ರ ನಿಗಾ ವಹಿಸುವಂತೆ ಪೋಷಕರಿಗೆ ವೈದ್ಯರು ಎಚ್ಚರಿಕೆ

ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ

ರಾಜಧಾನಿಯಲ್ಲಿ ಕಳೆದೊಂದು ವಾರದಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಇದರೊಂದಿಗೆ ಬಿಸಿಲು ಮತ್ತು ಉಸಿರುಕಟ್ಟುವ ಸೆಕೆಯ ವಾತಾವರಣವೂ ನಿರ್ಮಾಣವಾಗಿದೆ. ಈ ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ನೆಗಡಿ, ಕೆಮ್ಮು, ಶೀತ ಮತ್ತು ತೀವ್ರ ಜ್ವರದ ಸಮಸ್ಯೆಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದ್ದ ಡೆಂಗ್ಯೂ ಜ್ವರದ ಪ್ರಕರಣಗಳು ಇದೀಗ ಮಕ್ಕಳಲ್ಲಿ ಮತ್ತೆ ಪತ್ತೆಯಾಗುತ್ತಿದ್ದು, ಒಟ್ಟಾರೆ ವೈರಲ್ ಜ್ವರದ ಪ್ರಕರಣಗಳಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳವಾಗಿದೆ.

ಶಾಲೆ ಆರಂಭದ ಹೊತ್ತಲ್ಲೇ ಸೊಳ್ಳೆಗಳ ಕಾಟ

ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಇದು ಸೊಳ್ಳೆಗಳ ಉತ್ಪತ್ತಿಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ಡೆಂಗ್ಯೂ ಕಾಯಿಲೆಯು ವೇಗವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಸಿದೆ. ಇದರ ನಡುವೆ, ಶಾಲೆಗಳು ಆರಂಭ ಬೆನ್ನಲ್ಲೇ ಮಕ್ಕಳಲ್ಲಿ ಡಯೇರಿಯಾ (ಅತಿಸಾರ) ಮತ್ತು ನ್ಯುಮೋನಿಯಾ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ. ಹೀಗಾಗಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಹೊರಗಿನ ಆಹಾರವನ್ನು ನೀಡಬಾರದು ಎಂದು ವೈದ್ಯರು ಪೋಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಕ್ಕಳಲ್ಲಿ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳು ಯಾವವು?

  • ವೈರಾಣು ಜ್ವರ ಮತ್ತು ತೀವ್ರ ಚಳಿ ಜ್ವರ
  • ಡೆಂಗ್ಯೂ ಮತ್ತು ಶೀತ ಜ್ವರ
  • ನೆಗಡಿ, ಕೆಮ್ಮು ಮತ್ತು ಗಂಟಲು ನೋವು
  • ಉಸಿರಾಟದ ತೊಂದರೆ ಮತ್ತು ತಲೆನೋವು
  • ತೀವ್ರವಾದ ಸುಸ್ತು, ಮೈಕೈ ನೋವು ಮತ್ತು ವಾಂತಿ

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ‘ಟ್ರಾನ್ಸ್‌ಪ್ಲಾಂಟ್’ ದಂಧೆಗೆ ಬೀಳುತ್ತಾ ಬ್ರೇಕ್? ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!

ಒಟ್ಟಿನಲ್ಲಿ ಮಳೆ, ಬಿಸಿಲಿನಿಂದ ಬದಲಾದ ವಾತವರಣ ಹಿನ್ನೆಲೆ ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಆರ್​​ಸಿಬಿಗೆ ಆಘಾತ; ಟಿಮ್ ಡೇವಿಡ್​ಗೆ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ

ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಸಂತಸದಲ್ಲಿದ್ದ ಆರ್​ಸಿಬಿ ತಂಡಕ್ಕೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್​ಗೆ ಬಿಸಿಸಿಐ ಒಂದು ಪಂದ್ಯದಿಂದ ನಿಷೇಧದ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿದ್ದು, 2 ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ. ಇದರನ್ವಯ ಟಿಮ್ ಡೇವಿಡ್ 2027 ರ ಆವೃತ್ತಿಯ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ.

ಅಷ್ಟಕ್ಕೂ ಟಿಮ್ ಡೇವಿಡ್​ ವಿರುದ್ಧ ಬಿಸಿಸಿಐ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಕಾರಣವೆನೆಂದರೆ, ಗುಜರಾತ್ ವಿರುದ್ಧದ ಫೈನಲ್ ಪಂದ್ಯದ ವೇಳೆ ಟಿಮ್ ಡೇವಿಡ್ ಕೋಪದಿಂದ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದಿದ್ದರು. ಟಿಮ್ ಡೇವಿಡ್ ಅವರ ಈ ಕೃತ್ಯ ಐಪಿಎಲ್​ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುವ ಕಾರಣ ಆಸ್ಟ್ರೇಲಿಯಾದ ಈ ಸ್ಟಾರ್ ಬ್ಯಾಟ್ಸ್​ಮನ್ ವಿರುದ್ಧ ಬಿಸಿಸಿಐ ಕ್ರಮ ಜರುಗಿಸಿದೆ.

ದಂಡದ ಜೊತೆಗೆ ಡಿಮೆರಿಟ್ ಅಂಕ

ವಾಸ್ತವವಾಗಿ ಟಿಮ್ ಡೇವಿಡ್, ಗುಜರಾತ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಇನ್ನಿಂಗ್ಸ್​ನ 10 ನೇ ಓವರ್‌ನಲ್ಲಿ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಉಲ್ಲಂಘನೆಯಾಗಿದೆ. ಪಂದ್ಯದ ಸಮಯದಲ್ಲಿ ಆಟಗಾರ, ತಂಡದ ಅಧಿಕಾರಿ, ಅಂಪೈರ್, ಪಂದ್ಯದ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯ ಕಡೆಗೆ ಆಕ್ರಮಣಕಾರಿ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡು ಅಥವಾ ಕ್ರಿಕೆಟ್ ಸಾಮಗ್ರಿಯನ್ನು (ನೀರಿನ ಬಾಟಲ್, ಇತ್ಯಾದಿ) ಎಸೆಯುವುದು ಈ ನಿಯಮದ ಉಲ್ಲಂಘನೆಯಾಗಲಿದೆ. ಹೀಗಾಗಿ ಬಿಸಿಸಿಐ, ಟಿಮ್ ಡೇವಿಡ್ ಅವರ ಪಂದ್ಯ ಶುಲ್ಕದ 50 ಪ್ರತಿಶತ ಮೊತ್ತವನ್ನು ದಂಡವಾಗಿ ವಿಧಿಸಿದ್ದು, ಎರಡು ಡಿಮೆರಿಟ್ ಅಂಕಗಳನ್ನು ನೀಡಿದೆ.

ಒಂದು ಪಂದ್ಯದಿಂದ ನಿಷೇಧ

ಈ ಆವೃತ್ತಿಯಲ್ಲಿ ಟಿಮ್ ಡೇವಿಡ್ ಬಿಸಿಸಿಐನಿಂದ ದಂಡನೆಗೆ ಗುರಿಯಾಗುತ್ತಿರುವುದು ಇದು ಮೂರನೇ ಬಾರಿಗೆ. ಇದಕ್ಕೂ ಮೊದಲು, ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಯಮ ಉಲ್ಲಂಘಸಿದ್ದ ಡೇವಿಡ್​ಗೆ ಒಂದು ಡಿಮೆರಿಟ್ ಪಾಯಿಂಟ್ ಅಂಕ ನೀಡಿತ್ತು. ಇದಾದ ಬಳಿಕ ಅದೇ ಮುಂಬೈ ವಿರುದ್ಧ ನಡೆದಿದ್ದ 54 ನೇ ಪಂದ್ಯದಲ್ಲಿ ಇದೇ ರೀತಿ ಮಾಡಿದ್ದ ಟಿಮ್​ಗೆ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಿತ್ತು. ಒಟ್ಟಾರೆಯಾಗಿ ಮೂರು ಪಂದ್ಯಗಳಿಂದ ಟಿಮ್ ಐದು ಡಿಮೆರಿಟ್ ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ ನಿಯಮಗಳ ಪ್ರಕಾರ ಟಿಮ್ ಅವರನ್ನು ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.

ಈ ಆವೃತ್ತಿಯಲ್ಲಿ ಟಿಮ್ ಪ್ರದರ್ಶನ

ಟಿಮ್ ಡೇವಿಡ್ ಸತತ ಎರಡನೇ ಬಾರಿಗೆ ಆರ್‌ಸಿಬಿ ಚಾಂಪಿಯನ್ ತಂಡದ ಭಾಗವಾಗಿದ್ದ್ದಾರೆ. ಫೈನಲ್ ಪಂದ್ಯದಲ್ಲಿ ನಿರ್ಣಾಯಕ 24 ರನ್ ಬಾರಿಸಿದ್ದ ಟಿಮ್ ಡೇವಿಡ್ ಆಡಿದ 16 ಪಂದ್ಯಗಳಲ್ಲಿ 33.88 ಸರಾಸರಿಯಲ್ಲಿ 305 ರನ್ ಬಾರಿಸಿದರು. ಇದರಲ್ಲಿ 23 ಸಿಕ್ಸರ್‌ಗಳು ಸೇರಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link