Category Archives: Blog

Your blog category

ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾದ ಫರ್ನಿಚರ್ ಅಂಗಡಿ: ಕೋಟ್ಯಾಂತರ ರೂ. ಮೌಲ್ಯದ ಪೀಠೋಪಕರಣಗಳು ಅಗ್ನಿಗಾಹುತಿ

ಬೆಳಗಾವಿ, ಮೇ 30: ಜಿಲ್ಲೆಯ ಮೂಡಲಗಿ ತಾಲೂಕಿನ ಸಂಗನಕೆರೆ ಕ್ರಾಸ್ ಬಳಿ ಇರುವ ಎಸ್‌ಎಂಕೆ ಫರ್ನಿಚರ್ ಅಂಗಡಿಯಲ್ಲಿ ಮಧ್ಯರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಮತ್ತು ಇತರೆ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೆಂಕಿ ಸ್ಫೋಟದ ಮಾದರಿಯಲ್ಲಿ ಹರಡಿರುವುದು ಕಂಡುಬಂದಿದೆ. ಅದೃಷ್ಟವಶಾತ್, ಮಧ್ಯರಾತ್ರಿ ಘಟನೆ ನಡೆದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಂಗಡಿಗೆ ಕಾವಲಿದ್ದ ಸೆಕ್ಯೂರಿಟಿ ಗಾರ್ಡ್ ಹೊರಗಡೆ ಮಲಗಿದ್ದರಿಂದ ಆತ ಸುರಕ್ಷಿತವಾಗಿ ಪಾರಾಗಿದ್ದಾನೆ. ಬೆಂಕಿ ಹೊತ್ತಿಕೊಂಡ ಕೂಡಲೇ ಸೆಕ್ಯೂರಿಟಿ ಗಾರ್ಡ್‌ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಷ್ಟರಲ್ಲಿ ಸಂಪೂರ್ಣ ಅಂಗಡಿ ಭಸ್ಮವಾಗಿತ್ತು. ಈ ಸಂಬಂಧ ಘಟಪ್ರಭ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಬ್ಲಾಸ್ಟ್ ಕಾರಣವಾಗಿರಬಹುದು ಎಂಬ ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಮುಹೂರ್ತ ಬಹುತೇಕ ಫಿಕ್ಸ್

ಬೆಂಗಳೂರು, ಮೇ 30: ಡಿಕೆ ಶಿವಕುಮಾರ್ ಜೂನ್ 3 ರಂದು ಲೋಕಭವನದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ ಎಂಬುದು ತಿಳಿದುಬಂದಿದೆ. ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿ ಮಾರ್ಗದರ್ಶನ ಮತ್ತು ಶುಭ ಮುಹೂರ್ತದ ಆಧಾರದ ಮೇಲೆ ಈ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸುವುದರಿಂದ ಜನಸಂದಣಿ ಮತ್ತು ಸಂಭಾವ್ಯ ಅಹಿತಕರ ಘಟನೆಗಳನ್ನು ತಪ್ಪಿಸಲು ಲೋಕಭವನವನ್ನು ಆಯ್ಕೆ ಮಾಡಲಾಗಿದೆ.

ರಾಜ್ಯಪಾಲರನ್ನು ಬೆಳಗ್ಗೆ ಭೇಟಿ ಮಾಡಿದ ನಂತರ, ಡಿ ಕೆ ಶಿವಕುಮಾರ್ ಅವರು ನಾಗರಭಾವಿಯಲ್ಲಿರುವ ಶಾಖಾಮಠಕ್ಕೆ ಭೇಟಿ ನೀಡಿ ಅಜ್ಜಯ್ಯನವರ ಆಶೀರ್ವಾದ ಪಡೆದರು. ಸಿಎಲ್‌ಪಿ ಸಭೆ ಸಂಜೆ 4 ಗಂಟೆಗೆ ನಡೆಯಲಿದ್ದು, ಅದರಲ್ಲಿ ಡಿಕೆ ಶಿವಕುಮಾರ್ ಅವರನ್ನು ಅಧಿಕೃತವಾಗಿ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಡಿಕೆ ಶಿವಕುಮಾರ್ ಅವರೊಂದಿಗೆ 12 ರಿಂದ 14 ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯಗೆ ಪಕ್ಷದಲ್ಲಿ ಮಹತ್ವದ ಹುದ್ದೆ? ಹೈಕಮಾಂಡ್ ಸೀಕ್ರೆಟ್ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

ಬೆಂಗಳೂರು, ಮೇ,30: ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯ ಬಗ್ಗೆ ಸತೀಶ್ ಜಾರಕಿಹೊಳಿ ಅವರು ಮಾತನಾಡಿದ್ದಾರೆ. “ಇವತ್ತಿನ ಸಿಎಲ್‌ಪಿ ಸಭೆಯದ್ದು ಕೇವಲ ಒನ್‌ಲೈನ್ ಅಜೆಂಡಾ (One-line Agenda), ಅದರಲ್ಲಿ ಎರಡನೇ ಮಾತಿಲ್ಲ. ಡಿ.ಕೆ. ಶಿವಕುಮಾರ್ ಅವರೇ ನೂತನ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರರಷ್ಟು ಪಕ್ಕಾ ಆಗಿದೆ” ಎಂದು ಪ್ರಭಾವಿ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅಧಿಕೃತವಾಗಿ ಘೋಷಿಸಿದ್ದಾರೆ. ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಒಳಗಿನ ಪ್ರಮುಖ ಬೆಳವಣಿಗೆಗಳ ಸುಳಿವು ನೀಡಿದರು.

ರಾಜಭವನಕ್ಕೆ ಹೋಗಿರೋದು ಟೈಮ್, ಪ್ಲೇಸ್ ಫಿಕ್ಸ್ ಮಾಡೋಕೆ!:

ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರದ ಮುಂದಿನ ಪ್ರಕ್ರಿಯೆಗಳ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, “ಸಿದ್ದರಾಮಯ್ಯನವರೇ ಈಗಾಗಲೇ ಎಲ್ಲವನ್ನೂ ಅನೌನ್ಸ್ ಮಾಡಿದ್ದಾರೆ. ಡಿಕೆಶಿ ಸಿಎಂ ಆಗುವುದು ಖಚಿತವಾಗಿರುವುದರಿಂದ, ಪ್ರಮಾಣ ವಚನ ಸ್ವೀಕಾರದ ನಿಖರವಾದ ಸಮಯ ಮತ್ತು ಸ್ಥಳವನ್ನು ನಿಗದಿಪಡಿಸುವ ಸಲುವಾಗಿಯೇ ನಾಯಕರು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ” ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಗಾದಿ ಹಾಗೂ ಕ್ಯಾಬಿನೆಟ್ ರೇಸ್ ಯಾರಿಗೆ?:

ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಾ. ಜಿ. ಪರಮೇಶ್ವರ್ ಅವರ ಹೆಸರು ಕೇಳಿಬರುತ್ತಿರುವ ಹಾಗೂ ತಮಗೂ ಅಧ್ಯಕ್ಷ ಪಟ್ಟದ ಜೊತೆಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಯಾವುದೇ ದೊಡ್ಡ ಪೋಸ್ಟ್ ಇದ್ದರೂ ಅಲ್ಲಿ ಎರಡು ಮೂರು ಹೆಸರುಗಳು ಚರ್ಚೆಯಲ್ಲಿ ಇರುವುದು ಸಹಜ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಹೊಸ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದನ್ನು ಎಐಸಿಸಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಕ್ಯಾಬಿನೆಟ್‌ನಲ್ಲಿ ಹಳಬರು ಮತ್ತು ಹೊಸಬರು ಇಬ್ಬರೂ ಇರಬೇಕಾಗುತ್ತದೆ” ಎಂದರು.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್​​ಗೆ ಮತ್ತೊಂದು ಹೆಸರು ಸಪ್ರೈಸ್​ ಎಂಟ್ರಿ: ಸತೀಶ್​​ಗೆ ಮುಳುವಾಗುತ್ತಾ 2 ಸ್ಥಾನಗಳ ಬೇಡಿಕೆ?

ಸಿದ್ದರಾಮಯ್ಯ ಮುಂದಿನ ಹಾದಿ ಏನು?:

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಯಾವ ದೊಡ್ಡ ಜವಾಬ್ದಾರಿ ನೀಡಲಾಗುತ್ತದೆ ಎಂಬ ಕುರಿತು ಮಾತನಾಡಿದ ಸಚಿವರು, “ಸಿದ್ದರಾಮಯ್ಯ ಅವರಿಗೆ ಹುದ್ದೆ ನೀಡುವ ವಿಚಾರವಾಗಿ ಇಂದಿನ ಶಾಸಕಾಂಗ ಪಕ್ಷದ (CLP) ಸಭೆಯಲ್ಲೇ ಪ್ರಮುಖ ತೀರ್ಮಾನ ಕೈಗೊಳ್ಳಲಾಗುತ್ತದೆ. ಇನ್ನು ಎರಡು ಮೂರು ದಿನಗಳಲ್ಲಿ ಎಲ್ಲವೂ ಸಂಪೂರ್ಣವಾಗಿ ಸ್ಪಷ್ಟವಾಗಲಿದ್ದು, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ” ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆಗುತ್ತಿರುವ ಡಿ.ಕೆ ಶಿವಕುಮಾರ್​ಗೆ ಒಳ್ಳೆಯದಾಗಲಿ ಎಂದು ದರ್ಗಾದಲ್ಲಿ ಪ್ರಾರ್ಥನೆ

ಬೆಂಗಳೂರು, ಮೇ 30: ಚನ್ನಪಟ್ಟಣದ ಆಖೀಲ್ ಶಾ ಖಾದ್ರಿ ದರ್ಗಾದಲ್ಲಿ ಚನ್ನಪಟ್ಟಣ ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕರ್ನಾಟಕದಲ್ಲಿ ನಡೆಯಲಿರುವ ಸಚಿವ ಸಂಪುಟ ರಚನೆ ಹಾಗೂ ನಾಯಕತ್ವ ಬದಲಾವಣೆಯ ಕುರಿತು ಈ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು.

ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿರುವ ಡಿಕೆ ಶಿವಕುಮಾರ್‌ಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು. ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರಕಲಿ ಹಾಗೂ ಚನ್ನಪಟ್ಟಣ ಶಾಸಕರಾದ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಮುಖಂಡರು ಮತ್ತು ಸದಸ್ಯರು ಸಾಮೂಹಿಕವಾಗಿ ಬೇಡಿಕೊಂಡರು. ಕಾಂಗ್ರೆಸ್ ಪಕ್ಷದ ಸದಸ್ಯರು ಸಹ ಈ ಪ್ರಾರ್ಥನೆಯಲ್ಲಿ ಭಾಗವಹಿಸಿ, ತಮ್ಮ ಉದ್ದೇಶಗಳು ಯಶಸ್ವಿಯಾಗಲಿ ಎಂದು ಕೋರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆ ವಯಸ್ಸಲ್ಲಿ ಗೋಲಿ ಆಡೋಕೂ ಬರ್ತಾ ಇರಲಿಲ್ಲ’; ಸೂರ್ಯವಂಶಿ ಬಗ್ಗೆ ಅಮಿತಾಭ್ ಮೆಚ್ಚುಗೆ

15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಅಬ್ಬರದ ಆಟಕ್ಕೆ ಇಡೀ ದೇಶವೇ ಫಿದಾ ಆಗಿದೆ. ಐಪಿಎಲ್​​ನಲ್ಲಿ ಆರ್​​ಆರ್ ಪರ ಆಡಿದ ಅವರು, ದಾಖಲೆಯ ಮೇಲೆ ದಾಖಲೆ ಬರೆದಿದ್ದಾರೆ. ಬಾಲಿವುಡ್‌ನ ನಟ ಅಮಿತಾಭ್ ಬಚ್ಚನ್ ಅವರು (Amitabh Bachchan) ವೈಭವ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ವೈಭವ್ ಅವರ ಖುಷಿಯನ್ನು ಹೆಚ್ಚಿಸಿದೆ.

ಅಮಿತಾಭ್ ಬಚ್ಚನ್ ಅವರು ಬಾಲಿವುಡ್ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರಿಂದ ಆಶೀರ್ವಾದ ಸಿಕ್ಕರೆ ಸಾಕು ಎಂದು ಅನೇಕರು ಬಯಸುತ್ತಾ ಇರುತ್ತಾರೆ. ಈಗ ವೈಭವ್​​ಗೆ ಹೊಗಳಿಕೆ ಹಾಗೂ ಆಶೀರ್ವಾದ ಎರಡೂ ಒಂದರಲ್ಲೇ ಸಿಕ್ಕಿದೆ. ‘ನನಗೆ 15 ವರ್ಷವಿದ್ದಾಗ ಗೋಲಿ ಆಡಲು ಸಹ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಈ ಹುಡುಗ ಈ ವಯಸ್ಸಿಗೆ ಇಷ್ಟು ಅದ್ಭುತವಾಗಿ ಆಡುತ್ತಿದ್ದಾನೆ’ ಎಂದು ಬಿಗ್ ಬಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದ ವದಂತಿಗೆ ತೆರೆ ಎಳೆದ ಅಮಿತಾಭ್ ಬಚ್ಚನ್; ಎಂದಿನಂತೆ ಫ್ಯಾನ್ಸ್ ದರ್ಶನ

ಅಮಿತಾಭ್ ಮಾತ್ರವಲ್ಲದೆ ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡೂಲ್ಕರ್ ಕೂಡ ಇತ್ತೀಚೆಗೆ ಟ್ವಿಟರ್ ಖಾತೆಯಲ್ಲಿ ವೈಭವ್ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದ್ದಾರೆ. ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ 15 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಈ ವರ್ಷದ ಅಂಕಿ-ಅಂಶ ಅಚ್ಚರಿ ತರಿಸುವಂತಿದೆ.

  • ಒಟ್ಟು ಪಂದ್ಯಗಳು: 16
  • ಒಟ್ಟು ರನ್‌ಗಳು: 776
  • ಬ್ಯಾಟಿಂಗ್ ಸರಾಸರಿ: 48.50
  • ಸ್ಟ್ರೈಕ್ ರೇಟ್: 237.31
  • ಅರ್ಧಶತಕಗಳು: 5
  • ಶತಕಗಳು: 1
  • ಒಟ್ಟು ಸಿಕ್ಸರ್‌ಗಳು: 72 (ಒಂದೇ ಐಪಿಎಲ್ ಸೀಸನ್‌ನಲ್ಲಿ ಬ್ಯಾಟರ್ ಒಬ್ಬರು ಬಾರಿಸಿದ ಗರಿಷ್ಠ ಸಿಕ್ಸರ್ ದಾಖಲೆ)
  • ಗರಿಷ್ಠ ಸ್ಕೋರ್: 103

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಡಿಕೆ ಶಿವಕುಮಾರ್​​ ಪಟ್ಟಾಭಿಷೇಕಕ್ಕೆ ಅಜ್ಜಯ್ಯನ ಮುಹೂರ್ತ ಫಿಕ್ಸ್!: ಜಾತಕದ ಆಧಾರದ ಮೇಲೆ ದಿನಾಂಕ ನಿಗದಿ

ಬೆಂಗಳೂರು, ಮೇ.30 : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಕೊನೆಗೂ ದಿನಾಂಕ ಮತ್ತು ಶುಭ ಮುಹೂರ್ತ ನಿಗದಿಯಾಗಿದೆ. ತಮ್ಮ ಪ್ರತಿಯೊಂದು ರಾಜಕೀಯ ಹೆಜ್ಜೆಯಲ್ಲೂ ಆರಾಧ್ಯ ದೈವವಾಗಿ ನಂಬಿರುವ ತುಮಕೂರು ಜಿಲ್ಲೆಯ ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಅಜ್ಜಯ್ಯ ಪೀಠದ ಆದೇಶದಂತೆ, ಜೂನ್ 3ರಂದು (ಬುಧವಾರ) ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಪಕ್ಕಾ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜಕೀಯ ವಲಯದಲ್ಲಿ ಈ ಮುನ್ನ ಮೇ 31 ಅಥವಾ ಜೂನ್ 1ರಂದು ಪ್ರಮಾಣ ವಚನ ನಡೆಯಲಿದೆ ಎಂಬ ಚರ್ಚೆಗಳಿದ್ದವು. ಆದರೆ, ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಜಾತಕ ಮತ್ತು ಗ್ರಹಗತಿಗಳ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಅಜ್ಜಯ್ಯನ ಪೀಠದ ಶ್ರೀಗಳು, ಜೂನ್ 3ರ ಬುಧವಾರದಂದು ಅತ್ಯಂತ ಶ್ರೇಷ್ಠ ಹಾಗೂ ವಿಜಯದಾಯಕ ಮುಹೂರ್ತವಿದೆ ಎಂದು ತಿಳಿಸಿದ್ದಾರೆ. ಅಜ್ಜಯ್ಯನವರ ವಾಕ್ಯ ಹಾಗೂ ಪೀಠದ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸುವ ಡಿಕೆಶಿ, ಇದೇ ದಿನಾಂಕವನ್ನು ಅಂತಿಮಗೊಳಿಸುವಂತೆ ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನವರ ಪೀಠದ ಪರಮ ಭಕ್ತರಾಗಿದ್ದು, ವಿಧಾನಸಭಾ ಚುನಾವಣೆ, ಸಿಎಂ ರೇಸ್ ಹಾಗೂ ಇತ್ತೀಚಿನ ರಾಜಕೀಯ ಬಿಕ್ಕಟ್ಟುಗಳ ಸಂದರ್ಭದಲ್ಲೂ ಪೀಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. “ಅಜ್ಜಯ್ಯನವರು ಹೇಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಈಗ ಅವರೇ ನೀಡಿದ ಮುಹೂರ್ತದ ಪ್ರಕಾರ ಪದಗ್ರಹಣ ನಡೆಯಲಿದೆ” ಎಂದು ಅವರ ಆಪ್ತ ವಲಯದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜಭವನದಲ್ಲಿ ದಿನಾಂಕದ ಅಧಿಕೃತ ಪ್ರಕಟಣೆಯ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಜೂನ್ 3ರ ಮಹೂರ್ತದ ಸುದ್ದಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಸಡಗರ ತಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

International Potato Day 2026: ಅಂತರರಾಷ್ಟ್ರೀಯ ಆಲೂಗಡ್ಡೆ ದಿನ; ಆರೋಗ್ಯದ ರಹಸ್ಯ ಮತ್ತು ಆಯುರ್ವೇದದ ಮಹಿಮೆ!

ಅಂತರರಾಷ್ಟ್ರೀಯ ಆಲೂಗಡ್ಡೆ ದಿನImage Credit source: Pinterest

ಜಗತ್ತಿನ ಅರ್ಧಕ್ಕಿಂತ ಹೆಚ್ಚು ಮನೆಗಳ ಅಡುಗೆಮನೆಯಲ್ಲಿ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ತರಕಾರಿ ಎಂದರೆ ಅದು ಆಲೂಗಡ್ಡೆ. ಆದರೆ ಇದು ಕೇವಲ ಒಂದು ಸಾಧಾರಣ ತರಕಾರಿ ಮಾತ್ರವಲ್ಲ; ಕೋಟ್ಯಂತರ ಜನರ ಹೊಟ್ಟೆ ತುಂಬಿಸುವ, ಲಕ್ಷಾಂತರ ರೈತರ ಜೀವನಾಧಾರವಾಗಿದೆ. ಈ ಮಹತ್ವದ ಬೆಳೆಯನ್ನು ಗೌರವಿಸಲು ಮತ್ತು ಜಾಗತಿಕ ಆಹಾರ ಭದ್ರತೆಯಲ್ಲಿ ಇದರ ಪಾತ್ರವನ್ನು ಸ್ಮರಿಸಲು ವಿಶ್ವಸಂಸ್ಥೆಯು ಪ್ರತಿ ವರ್ಷ ಮೇ 30ರಂದು ‘ಅಂತರರಾಷ್ಟ್ರೀಯ ಆಲೂಗಡ್ಡೆ ದಿನ’ ಎಂದು ಆಚರಿಸುತ್ತದೆ. ಜಾಗತಿಕ ತಾಪಮಾನ ಏರಿಕೆ ಮತ್ತು ನೀರಿನ ಕೊರತೆಯ ಇಂದಿನ ಯುಗದಲ್ಲಿ, ಗೋಧಿ ಮತ್ತು ಅಕ್ಕಿಗಿಂತ ಕಡಿಮೆ ನೀರು ಬೇಡುವ, ಕಡಿಮೆ ಅವಧಿಯಲ್ಲಿ ಕೈಗೆ ಬರುವ ಹಾಗೂ ಕಡಿಮೆ ಜಾಗದಲ್ಲಿ ಹೆಚ್ಚು ಕ್ಯಾಲೊರಿ ಉತ್ಪಾದಿಸುವ ಆಲೂಗಡ್ಡೆ ಜಗತ್ತಿಗೆ ಒಂದು ಭರವಸೆಯ ಬೆಳೆಯಾಗಿದೆ.

ಆಲೂಗಡ್ಡೆಯ ತಾಯ್ನಾಡು ಮತ್ತು ಇತಿಹಾಸ:

ಆಲೂಗಡ್ಡೆಯ ಮೂಲ ತಾಯ್ನಾಡು ದಕ್ಷಿಣ ಅಮೆರಿಕದ ಆಂಡೀಸ್ ಪರ್ವತ ಪ್ರದೇಶವಾಗಿದೆ. ಪೆರು ಮತ್ತು ಬೊಲಿವಿಯಾ ದೇಶಗಳ ಗಡಿಯಲ್ಲಿರುವ ಟಿಟಿಕಾಕಾ ಸರೋವರದ ಸುತ್ತಮುತ್ತ ಸುಮಾರು 8000 ವರ್ಷಗಳ ಹಿಂದೆ ಇಂಕಾ ನಾಗರಿಕತೆಯ ಜನರು ಮೊಟ್ಟಮೊದಲ ಬಾರಿಗೆ ಆಲೂಗಡ್ಡೆಯನ್ನು ಬೆಳೆಸಿದರು. ತದನಂತರ 16ನೇ ಶತಮಾನದಲ್ಲಿ ಸ್ಪ್ಯಾನಿಷ್ ವಸಾಹತುಗಾರರು ಬಟಾಟೆಯನ್ನು ಯುರೋಪಿಗೆ ಕೊಂಡೊಯ್ದರು ಮತ್ತು ಅಲ್ಲಿಂದ ಅದು ಜಗತ್ತಿನಾದ್ಯಂತ ಹರಡಿತು. 18 ಮತ್ತು 19ನೇ ಶತಮಾನಗಳಲ್ಲಿ ಯುರೋಪಿನ ಜನಸಂಖ್ಯೆ ವೇಗವಾಗಿ ಹೆಚ್ಚಲು ಆಲೂಗಡ್ಡೆಯ ಕೊಡುಗೆ ಅಪಾರ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಭಾರತಕ್ಕೆ ಆಲೂಗಡ್ಡೆ ಬಂದದ್ದು ಪೋರ್ಚುಗೀಸರ ಮೂಲಕ ಸುಮಾರು ೧೭ನೇ ಶತಮಾನದಲ್ಲಿ ಎಂಬ ಇತಿಹಾಸವಿದ್ದು, ಇಂದು ಭಾರತವು ವಿಶ್ವದ ಪ್ರಮುಖ ಬಟಾಟೆ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಅಂತರರಾಷ್ಟ್ರೀಯ ಆಲೂಗಡ್ಡೆ ದಿನದ ಹಿನ್ನೆಲೆ ಮತ್ತು ಥೀಮ್:

2008ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು (FAO) “ಅಂತರರಾಷ್ಟ್ರೀಯ ಆಲೂಗಡ್ಡೆ ವರ್ಷ” ಆಚರಿಸಿ ಇದರ ಜಾಗತಿಕ ಮಹತ್ವವನ್ನು ಸಾರಿತು. ಇದರ ಮುಂದುವರಿದ ಭಾಗವಾಗಿ ಜುಲೈ 2023ರ FAO ಸಮ್ಮೇಳನದಲ್ಲಿ ಮೇ 30ಅನ್ನು ಅಂತರರಾಷ್ಟ್ರೀಯ ಆಲೂಗಡ್ಡೆ ದಿನವಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು ಮತ್ತು ಡಿಸೆಂಬರ್ 2023ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇದಕ್ಕೆ ಅಧಿಕೃತ ಅನುಮೋದನೆ ನೀಡಿತು. ಮೊದಲ ಆಚರಣೆಯು ಮೇ 30, 2024ರಂದು ನಡೆದಿದ್ದು, ಈ ದಿನಾಂಕವನ್ನು ಆಲೂಗಡ್ಡೆ ತಾಯ್ನಾಡಾದ ಪೆರುವಿನ ರಾಷ್ಟ್ರೀಯ ಬಟಾಟೆ ದಿನದ ನೆನಪಿಗಾಗಿ ಆಯ್ಕೆ ಮಾಡಲಾಗಿದೆ. “ಆಲೂಗಡ್ಡೆ ಬೆಳೆಯುವಲ್ಲಿ, ಜೀವನೋಪಾಯ ಅರಳುತ್ತದೆ” ಎಂಬುದು 2026ರ ಸಾಲಿನ ವಿಶೇಷ ಥೀಮ್ (ಸಂದೇಶ) ಆಗಿದ್ದು, ಆಲೂಗಡ್ಡೆ ಕೃಷಿಯನ್ನು ಬಲಪಡಿಸುವ ಮೂಲಕ ಗ್ರಾಮೀಣ ಬಡತನ ಕಡಿಮೆ ಮಾಡಬಹುದು ಮತ್ತು ಮಹಿಳಾ ರೈತರ ಸಬಲೀಕರಣ ಸಾಧಿಸಬಹುದು ಎಂಬುದನ್ನು ಇದು ಬಿಂಬಿಸುತ್ತದೆ.

ಪೋಷಣೆ, ಆರೋಗ್ಯ ಮತ್ತು ಆಯುರ್ವೇದದ ದೃಷ್ಟಿಕೋನ:

ಅನೇಕರು ಆಲೂಗಡ್ಡೆಯನ್ನು ಆರೋಗ್ಯಕ್ಕೆ ಹಾನಿಕಾರಕ ಎಂದು ಭಾವಿಸುತ್ತಾರೆ, ಆದರೆ ನಿಜವಾಗಿ ಆಲೂಗಡ್ಡೆ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಇದರಲ್ಲಿ ವಿಟಮಿನ್ C, ಪೊಟ್ಯಾಸಿಯಂ, ವಿಟಮಿನ್ B6, ಫೈಬರ್ ಮತ್ತು ಉತ್ತಮ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ಒಂದು ಮಧ್ಯಮ ಗಾತ್ರದ ಆಲೂಗಡ್ಡೆ ದಿನದ ವಿಟಮಿನ್ C ಅವಶ್ಯಕತೆಯ ಸುಮಾರು ಮೂರನೇ ಒಂದು ಭಾಗವನ್ನು ಪೂರೈಸಬಲ್ಲದು. ಆಯುರ್ವೇದದ ಪ್ರಕಾರ, ಆಲೂಗಡ್ಡೆಯು ದೇಹಕ್ಕೆ ಶಕ್ತಿ ಮತ್ತು ಬಲ ನೀಡುತ್ತದೆ, ಆಮ್ಲತೆ (Acidity) ಮತ್ತು ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ, ಮೂತ್ರಪಿಂಡಗಳ ಕಾರ್ಯಕ್ಕೆ ನೆರವಾಗುತ್ತದೆ ಹಾಗೂ ಚರ್ಮದ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ. ಆಲೂಗಡ್ಡೆ ಆರೋಗ್ಯಕ್ಕೆ ಸಮಸ್ಯೆಯಲ್ಲ, ಅದನ್ನು ಅತಿಯಾಗಿ ಎಣ್ಣೆಯಲ್ಲಿ ಕರಿಯುವುದು ಮತ್ತು ಮಿತಿಮೀರಿ ಸೇವಿಸುವುದು ಮಾತ್ರ ರಕ್ತದ ಸಕ್ಕರೆ ಏರಿಕೆ, ತೂಕ ಹೆಚ್ಚಳ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ದುಷ್ಪರಿಣಾಮ ತಡೆಯುವ ಆಯುರ್ವೇದ ಉಪಾಯಗಳು:

ಆಲೂಗಡ್ಡೆಯ ನಕಾರಾತ್ಮಕ ಪರಿಣಾಮಗಳನ್ನು ತಡೆಯಲು ಕೆಲವು ಸುಲಭ ಆಯುರ್ವೇದ ಉಪಾಯಗಳಿವೆ. ಇದನ್ನು ಎಣ್ಣೆಯಲ್ಲಿ ಕರಿಯುವುದಕ್ಕಿಂತ ಹಬೆಯಲ್ಲಿ ಬೇಯಿಸಿ ತಿನ್ನುವುದು ಉತ್ತಮ ಹಾಗೂ ತೊಗಟೆಯೊಂದಿಗೆ ತಿಂದರೆ ಫೈಬರ್ ಹೆಚ್ಚಾಗಿ ದೊರೆಯುತ್ತದೆ. ಬೇಯಿಸಿದ ಆಲೂಗಡ್ಡೆಯನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಟ್ಟು ಸೇವಿಸಿದರೆ ಅದರಲ್ಲಿ “ರೆಸಿಸ್ಟೆಂಟ್ ಸ್ಟಾರ್ಚ್” ಹೆಚ್ಚಾಗಿ ರಕ್ತದ ಸಕ್ಕರೆ ಏರಿಕೆಯನ್ನು ತಗ್ಗಿಸುತ್ತದೆ. ಅಡುಗೆಯಲ್ಲಿ ಹಿಂಗು, ಜೀರಿಗೆ, ಅರಿಶಿನ, ಶುಂಠಿ ಮತ್ತು ಮೆಣಸಿನಂತಹ ಮಸಾಲೆಗಳನ್ನು ಬಳಸುವುದರಿಂದ ಇದು ಸುಲಭವಾಗಿ ಜೀರ್ಣವಾಗುತ್ತದೆ.

ಇದನ್ನೂ ಓದಿ: ಜೂನ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ

ಮೊಳಕೆ ಬಂದ ಆಲೂಗಡ್ಡೆ: ವಹಿಸಬೇಕಾದ ಕಟ್ಟುನಿಟ್ಟಿನ ಎಚ್ಚರಿಕೆ:

ಆಲೂಗಡ್ಡೆಯನ್ನು ಹೆಚ್ಚು ದಿನ ಇಟ್ಟಾಗ ಅದರ ಮೇಲೆ ಮೂಡುವ ಚಿಗುರು ಅಥವಾ ಮೊಳಕೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮೊಳಕೆ ಒಡೆದ ಮತ್ತು ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯಲ್ಲಿ ‘ಸೊಲನೈನ್’ ಮತ್ತು ‘ಚಾಕೊನೈನ್’ ಎಂಬ ಎರಡು ವಿಷಕಾರಿ ರಾಸಾಯನಿಕಗಳು ಹೆಚ್ಚಾಗುತ್ತವೆ. ಇವು ಶಾಖವನ್ನು ತಡೆಯಬಲ್ಲ ವಿಷಕಾರಿ ಅಂಶಗಳಾಗಿದ್ದರಿಂದ ಬೇಯಿಸಿದರೂ ಅಥವಾ ಕರಿದರೂ ಸಂಪೂರ್ಣ ನಾಶವಾಗುವುದಿಲ್ಲ. ಇಂತಹ ಬಟಾಟೆ ತಿಂದರೆ ಸಣ್ಣ ಪ್ರಮಾಣದಲ್ಲಿ ತಲೆನೋವು, ವಾಕರಿಕೆ, ಹೊಟ್ಟೆನೋವು ಕಾಣಿಸಿಕೊಳ್ಳಬಹುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಜ್ವರ, ರಕ್ತದೊತ್ತಡ ಕುಸಿತದಂತಹ ಗಂಭೀರ ನರಮಂಡಲದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಸಣ್ಣ ಮೊಳಕೆ ಇದ್ದರೆ ಆ ಭಾಗವನ್ನು ಆಳವಾಗಿ ಕತ್ತರಿಸಿ ಬಳಸಿ, ಆದರೆ ಹಸಿರು ಬಣ್ಣ ಅಥವಾ ಸುಕ್ಕುಗಟ್ಟಿದ ಬಟಾಟೆ ಇದ್ದರೆ ಅದನ್ನು ಸಂಪೂರ್ಣವಾಗಿ ಬಿಸಾಡುವುದು ಸುರಕ್ಷಿತ. ಇದನ್ನು ತಡೆಯಲು ಆಲೂಗಡ್ಡೆಯನ್ನು ಯಾವಾಗಲೂ ಕತ್ತಲೆ, ಒಣ ಹಾಗೂ ತಂಪಾದ ಜಾಗದಲ್ಲಿ ಸಂಗ್ರಹಿಸಬೇಕು ಮತ್ತು ಈರುಳ್ಳಿ ಜೊತೆಗೆ ಇಡಬಾರದು.

ಭಾರತ ಹಾಗೂ ಕರ್ನಾಟಕದಲ್ಲಿ ಆಲೂಗಡ್ಡೆ ಸ್ಥಾನ:

ಭಾರತದಲ್ಲಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ಪ್ರಮುಖ ಆಲೂಗಡ್ಡೆ ಉತ್ಪಾದಕ ರಾಜ್ಯಗಳಾಗಿವೆ. ನಮ್ಮ ಕರ್ನಾಟಕದಲ್ಲಿ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಆಲೂಗಡ್ಡೆ ಕೃಷಿ ಹೆಚ್ಚಾಗಿ ಕಂಡುಬರುತ್ತದೆ. ಕನ್ನಡಿಗರ ದೈನಂದಿನ ಅಡುಗೆಯಲ್ಲಂತೂ ಆಲೂಗಡ್ಡೆ ಪಲ್ಯ, ಮಸಾಲೆ ದೋಸೆ, ಸಾಂಬಾರು, ಬಜ್ಜಿ, ಚಾಟ್ ಸೇರಿದಂತೆ ಅನೇಕ ಸವಿಯಾದ ತಿನಿಸುಗಳಲ್ಲಿ ಆಲೂಗಡ್ಡೆ ಪ್ರಮುಖ ಮತ್ತು ಅನಿವಾರ್ಯ ಸ್ಥಾನವನ್ನು ಪಡೆದುಕೊಂಡಿದೆ. ಒಂದು ಸಾಮಾನ್ಯ ಆಲೂಗಡ್ಡೆಯ ಹಿಂದೆ ಸಾವಿರಾರು ವರ್ಷಗಳ ಇತಿಹಾಸ, ಕೋಟ್ಯಂತರ ಜನರ ಬದುಕು ಮತ್ತು ಜಾಗತಿಕ ಆಹಾರ ಭದ್ರತೆಯ ಕಥೆಯಿದೆ. ಸರಿಯಾದ ಅಡುಗೆ ವಿಧಾನ ಮತ್ತು ಮಿತ ಪ್ರಮಾಣದೊಂದಿಗೆ ಸೇವಿಸಿದರೆ ಆಲೂಗಡ್ಡೆ ಎಂದಿಗೂ ನಮ್ಮ ಆರೋಗ್ಯದ ಉತ್ತಮ ಮಿತ್ರನಾಗಿರಬಲ್ಲದು.

ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ(08384225836)

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

96 ರನ್​ಗಳಿಸಿ ಬಂದ ವೈಭವ್​ನ ಗದರಿಸಿದ ರಿಯಾನ್ ಪರಾಗ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಸೀಸನ್-19 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ ಪ್ರವೇಶಿಸಲು ಮುಖ್ಯ ಕಾರಣ ವೈಭವ್ ಸೂರ್ಯವಂಶಿಯ ಪ್ರಚಂಡ ಬ್ಯಾಟಿಂಗ್ ಹಾಗೂ ಜೋಫ್ರಾ ಆರ್ಚರ್ ಅವರ ನಿಖರ ದಾಳಿ. ಈ ಇಬ್ಬರ ಅತ್ಯುತ್ತಮ ಪ್ರದರ್ಶನದ ಫಲವಾಗಿ ಆರ್​ಆರ್​ ತಂಡವು ಈ ಬಾರಿ ಕ್ವಾಲಿಫೈಯರ್-2 ಪಂದ್ಯವಾಡಿತ್ತು. ಆದರೆ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಎಲ್ಲರೂ ವಿಫಲರಾದರೂ ವೈಭವ್ ಸೂರ್ಯವಂಶಿ ಮಾತ್ರ ತಮ್ಮ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಮುಲ್ಲನ್​ಪುರ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ 47 ಎಸೆತಗಳಲ್ಲಿ 96 ರನ್ ಸಿಡಿಸಿದ್ದರು. ಹೀಗೆ ಆರ್​ಆರ್ ತಂಡವು 200ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಕೊನೆಯ ಎರಡು ಓವರ್​ಗಳಿರುವಾಗ ಔಟ್ ಆಗಿದ್ದರು.

ಹೀಗೆ ಔಟಾಗಿ ಡಗೌಟ್​ನಲ್ಲಿ ಬಂದು ಕುಳಿತಿದ್ದ ವೈಭವ್ ಸೂರ್ಯವಂಶಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಆಕ್ರೋಶಭರಿತರಾಗಿ ಮಾತನಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಔಟಾದ ನಿರಾಸೆಯೊಂದಿಗೆ ಕೂತಿದ್ದ ವೈಭವ್ ಸೂರ್ಯವಂಶಿ ಬಳಿ ಬಂದ ನಾಯಕ ರಿಯಾನ್ ಪರಾಗ್, ಕೈ ಸನ್ನೆ ಮಾಡುತ್ತಾ ಗದರಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಅತ್ತ ವೈಭವ್ ತಲೆ ತಗ್ಗಿಸಿ ನಾಯಕನ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಿಯಾನ್ ಪರಾಗ್ ನಡಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 214 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡವು 18.4 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದೆ.

 

 

Source link

ಭೀಮಾ ನದಿ ತೀರದಲ್ಲಿ ಮತ್ತೆ ರಕ್ತಚರಿತ್ರೆ: 6 ಜನರ ಭೀಕರ ಕೊಲೆ!

ವಿಜಯಪುರ, ಮೇ,30: ಜಿಲ್ಲೆಯ ಚಡಚನ ತಾಲೂಕಿನ ಗೋವಿಂದಪುರ ಗ್ರಾಮದ ಬಳಿ ಭೀಮಾ ನದಿ ತಟದಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಹಾಗೂ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರು ದಾರುಣವಾಗಿ ಹತ್ಯೆಯಾಗಿದ್ದಾರೆ. ನಿರಾಳೆ ಕುಟುಂಬದ ದುಂಡಪ್ಪ ಶಿವಪುತ್ರ, ಚಂದ್ರಕಾಂತ್, ರಾಹುಲ್, ಸಮರ್ಥ್ ಹಾಗೂ ಅವರ ಜೊತೆಗಿದ್ದ ಶಬ್ಬೀರ್ ಅತ್ತಾರ್ ಎಂಬುವರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ಜಮೀನನ್ನು ನಿರಾಳೆ ಕುಟುಂಬದವರು ಇತ್ತೀಚೆಗೆ ಖರೀದಿಸಿದ್ದರು. 15ರಿಂದ 20 ಮಂದಿ ಯುವಕರ ತಂಡ ಬೈಕ್‌ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು ಹಾರಿಸಿ ಹತ್ಯೆ ನಡೆಸಿದೆ. ಈ ಘಟನೆಯಿಂದ ವಿಜಯಪುರ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ. ಚಡಚನ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವ್ಯಕ್ತಿಯ ಡ್ಯಾನ್ಸ್​ಗೆ ಮನಸೋತ ಆನೆ ಮಾಡಿದ್ದೇನು ನೋಡಿ

ಸಂತೋಷ ಎಂಬುದು ಕೇವಲ ನಮ್ಮೊಂದಿಗೆ ಇಟ್ಟುಕೊಳ್ಳುವ ಭಾವವಲ್ಲ, ಅದು ಹಂಚಿದರೆ ಮಾತ್ರ ದುಪ್ಪಟ್ಟಾಗುತ್ತದೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಮತ್ತು ಮನುಷ್ಯನ ನಡುವಿನ ಅಪರೂಪದ ಬಾಂಧವ್ಯದ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬರು ಆನೆಯೊಂದರ ಮುಂದೆ ನಿಂತು ಅತ್ಯಂತ ಉತ್ಸಾಹದಿಂದ ನೃತ್ಯ (Dance) ಮಾಡಲು ಪ್ರಾರಂಭಿಸುತ್ತಾರೆ. ಮೊದಲ ಕೆಲವು ಸೆಕೆಂಡುಗಳ ಕಾಲ ಆ ಆನೆಯು ಆ ವ್ಯಕ್ತಿಯ ನೃತ್ಯವನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತದೆ. ತಕ್ಷಣವೇ ಆನೆಯು ಕೂಡ ತನ್ನ ಸೊಂಡಿಲು ಮತ್ತು ಕಾಲುಗಳನ್ನು ಆಡಿಸುತ್ತಾ, ಪೂರ್ಣ ಮನಸ್ಸಿನಿಂದ ಆತನೊಂದಿಗೆ ಹೆಜ್ಜೆ ಹಾಕಲು ಶುರು ಮಾಡುತ್ತದೆ.

ಆನೆಯ ಮುಖದಲ್ಲೂ ಆ ಕ್ಷಣ ಸಂತೋಷ ಎದ್ದು ಕಾಣುತ್ತಿತ್ತು. ಈ ವಿಡಿಯೋ ಇಡೀ ಇಂಟರ್ನೆಟ್ ಲೋಕದ ಜನರ ಮನಗೆದ್ದಿದ್ದು, ನಿಜವಾದ ಆನಂದಕ್ಕೆ ಯಾವುದೇ ಭಾಷೆಯ ಹಂಗಿಲ್ಲ, ಕೇವಲ ಶುದ್ಧ ಭಾವನೆಗಳಿದ್ದರೆ ಸಾಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link