Category Archives: Blog

Your blog category

ಕೊಲ್ಕತ್ತಾದ ಆರ್​ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣದ ಸಿಬಿಐ ಮರುತನಿಖೆಗೆ ಹೈಕೋರ್ಟ್ ಆದೇಶ – Kannada News | Calcutta High Court orders fresh CBI SIT probe into RG Kar rape case

ಕೊಲ್ಕತ್ತಾ, ಮೇ 21: ಕೊಲ್ಕತ್ತಾ ಹೈಕೋರ್ಟ್ ಆರ್‌ಜಿ ಕರ್ (RG Kar Hospital) ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪುರಾವೆಗಳನ್ನು ನಾಶಪಡಿಸಲು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ನಡೆದಿದೆ ಎನ್ನಲಾದ ಸಂಚಿನ ಕುರಿತು ಕೇಂದ್ರ ತನಿಖಾ ಸಂಸ್ಥೆಯ (CBI) ಹೊಸ ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸುವಂತೆ ಇಂದು ಮಹತ್ವದ ಆದೇಶ ನೀಡಿದೆ.

ಹೈಕೋರ್ಟ್ ಆದೇಶದ ಪ್ರಮುಖ ಮುಖ್ಯಾಂಶಗಳು:

ತ್ರಿಸದಸ್ಯ ಸಿಬಿಐ ಎಸ್‌ಐಟಿ ರಚನೆ:

ಜಂಟಿ ನಿರ್ದೇಶಕರ (ಪೂರ್ವ ವಲಯ) ನೇತೃತ್ವದಲ್ಲಿ ಮೂರು ಸದಸ್ಯರ ಹೊಸ ಸಿಬಿಐ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ನ್ಯಾಯಮೂರ್ತಿಗಳಾದ ಶಂಪಾ ಸರ್ಕಾರ್ ಮತ್ತು ತೀರ್ಥಂಕರ್ ಘೋಷ್ ಅವರಿದ್ದ ವಿಭಾಗೀಯ ಪೀಠವು ಆದೇಶಿಸಿದೆ. ಈ ತಂಡವು ತನಿಖೆ ನಡೆಸಿ ಜೂನ್ 24 ಅಥವಾ 25ರ ಒಳಗಾಗಿ ನ್ಯಾಯಾಲಯಕ್ಕೆ ವಿವರವಾದ ವರದಿಯನ್ನು ಸಲ್ಲಿಸಬೇಕಿದೆ.

ಸಂಚು ಮತ್ತು ಪುರಾವೆ ನಾಶದ ಆರೋಪ:

2024ರಲ್ಲಿ ನಡೆದ ಈ ಭೀಕರ ಘಟನೆಯ ನಂತರ ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಲು ದೊಡ್ಡ ಮಟ್ಟದ ಸಂಚು ನಡೆದಿದೆ ಎಂದು ಮೃತ ಯುವ ವೈದ್ಯೆಯ ಪೋಷಕರು 2025ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅಪರಾಧದ ಸ್ವರೂಪ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಪರಿಗಣಿಸಿ ಈ ಮರುತನಿಖೆಯ ಆದೇಶ ನೀಡಿದೆ.

ಇದನ್ನೂ ಓದಿ: ಆರ್​ಜಿ ಕರ್ ಪ್ರಕರಣ, ಆರೋಪಿ ಸಂಜಯ್​ಗೆ ಮರಣದಂಡನೆ ಕೋರಿ ಕೋಲ್ಕತ್ತಾ ಹೈಕೋರ್ಟ್​ ಮೆಟ್ಟಿಲೇರಿದ ಬಂಗಾಳ ಸರ್ಕಾರ

ಘಟನೆಗಳ ಮರುಪರಿಶೀಲನೆಗೆ ಸೂಚನೆ:

2024ರ ಆಗಸ್ಟ್ 9ರಂದು ಸಂತ್ರಸ್ತೆ ಇತರ ಜೂನಿಯರ್ ವೈದ್ಯರೊಂದಿಗೆ ರಾತ್ರಿ ಊಟ ಮಾಡಿದ ಸಮಯದಿಂದ ಹಿಡಿದು, ಆಸ್ಪತ್ರೆಯ ತುರ್ತು ನಿಗಾ ವಿಭಾಗದ ಮೂರನೇ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ ಆಕೆಯ ಶವ ಪತ್ತೆಯಾದ ಮತ್ತು ಮರುದಿನ ಅತ್ಯಂತ ಆತುರವಾಗಿ ಶವಸಂಸ್ಕಾರ ನಡೆದವರೆಗಿನ ಎಲ್ಲಾ ಘಟನೆಗಳ ಸರಣಿಯನ್ನು ಮತ್ತೊಮ್ಮೆ ತನಿಖೆ ಮಾಡಲು ಎಸ್‌ಐಟಿಗೆ ಹೈಕೋರ್ಟ್ ಸೂಚಿಸಿದೆ.

ಈ ನ್ಯಾಯಾಲಯದ ಆದೇಶ ಬರುವ ಕೆಲವೇ ದಿನಗಳ ಮುನ್ನ ಅಂದರೆ ಮೇ 15ರಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮಾಜಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಮತ್ತು ಇಬ್ಬರು ಉಪ ಪೊಲೀಸ್ ಕಮಿಷನರ್‌ಗಳಾದ ಇಂದಿರಾ ಮುಖರ್ಜಿ ಹಾಗೂ ಅಭಿಷೇಕ್ ಗುಪ್ತಾ ಅವರನ್ನು ಅಮಾನತುಗೊಳಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಮತ್ತು ಸಂತ್ರಸ್ತೆಯ ಪೋಷಕರಿಗೆ ಹಣದ ಆಮಿಷ ಒಡ್ಡಿದ ಆರೋಪ ಇವರ ಮೇಲಿದೆ.

ಇದನ್ನೂ ಓದಿ: ನಾನು ಮುಗ್ಧ ಎಂದ ಆರ್‌ಜಿ ಕರ್ ಕೊಲೆ ಪ್ರಕರಣ ಆರೋಪಿ, ಭಾವುಕರಾದ ವೈದ್ಯೆಯ ತಂದೆ; ಇಂದು ಕೋರ್ಟ್​ನಲ್ಲಿ ನಡೆದಿದ್ದೇನು?

ಆರ್‌ಜಿ ಕರ್ ಆಸ್ಪತ್ರೆಯ ಘಟನೆಯು ಇತ್ತೀಚೆಗೆ ನಡೆದ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಪ್ರಮುಖ ಚರ್ಚಾ ವಿಷಯವಾಗಿತ್ತು. ಮೃತ ವೈದ್ಯೆಯ ತಾಯಿ ರತ್ನಾ ದೇವನಾಥ್ ಅವರು ಬಿಜೆಪಿಯಿಂದ ಪಾನಿಹಟಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಟಿಎಂಸಿ (TMC) ಸರ್ಕಾರದ ಹಿರಿಯ ನಾಯಕರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎಂದು ಅವರು ಆರೋಪಿಸಿದ್ದರು.

ಏನಿದು ಘಟನೆ?:

2024ರ ಆಗಸ್ಟ್ 9ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ 31 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ದೇಶಾದ್ಯಂತ ವೈದ್ಯರು ಮತ್ತು ಸಾರ್ವಜನಿಕರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಅಕ್ಟೋಬರ್ 2024ರಲ್ಲಿ ಸಲ್ಲಿಕೆಯಾಗಿದ್ದ ಚಾರ್ಜ್‌ಶೀಟ್ ಆಧಾರದ ಮೇಲೆ ಸಂಜಯ್ ರಾಯ್ ಎಂಬ ಆರೋಪಿಗೆ ಜೈಲು ಶಿಕ್ಷೆಯಾಗಿದೆ. ಈಗ ಹೈಕೋರ್ಟ್ ಈ ಹೊಸ ತನಿಖೆಗೆ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!

ಬೆಂಗಳೂರು, ಮೇ 21: ಸಂಜೆ ಆಗ್ತಿದ್ದಂತೆ ಬೆಂಗಳೂರಿಗೆ ಮಳೆರಾಯ ಕಾಲಿಟ್ಟಿದ್ದ. ಇದೇ ಮಳೆ ಹತ್ತಾರು ಅವಾಂತರ ಸೃಷ್ಟಿಸಿದೆ. ಮರಗಳನ್ನ ಧರೆಗುರುಳಿಸಿ ವಾಹನಗಳನ್ನ ಜಖಂಗೊಳಿಸಿದೆ. ಭಾರೀ ಮಳೆಯಿಂದಾಗಿ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿತ್ತು. ದ್ವಿಚಕ್ರ ವಾಹನ ಸವಾರರು ರಸ್ತೆಗಳಲ್ಲಿ ಪರದಾಡುವಂತಾಯಿತು. ರಾಜಾಜಿನಗರದಲ್ಲಿ ಬೃಹದಾಕಾರದ ಮರವೊಂದು ಉರುಳಿ ಬಿದ್ದು, ಕಾರು ಮತ್ತು ಬೈಕ್‌ಗಳು ಜಖಂಗೊಂಡಿವೆ. ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ಬೃಹತ್ ಮರ ಧರೆಗೆ ಉರುಳಿತ್ತು. ಇದ್ರಿಂದ ಎರಡು ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವರದರಾಜಸ್ವಾಮಿ ದೇಗುಲದಲ್ಲಿದ್ದ ಮರ ದೇಗುಲದ ಮೇಲ್ಚಾವಣಿ ಮೇಲೆ ಬಿದ್ದಿದೆ. ಇನ್ನು ಪುಲಿಕೇಶಿನಗರದ ಮುಖ್ಯ ರಸ್ತೆಯಲ್ಲೂ ಮರ ಉರುಳಿ ಬಿದ್ದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

GT vs CSK: ಪಂದ್ಯದ ಆರಂಭದಲ್ಲೇ ಗಾಯಗೊಂಡು ಮೈದಾನದಿಂದ ಹೊರ ನಡೆದ ಸಂಜು – Kannada News | CSK IPL 2026 Playoff Crisis: Sanju Samson Suffers Finger Injury vs GT

ಐಪಿಎಲ್ 2026 (IPL 2026) ರ ಲೀಗ್ ಹಂತದಲ್ಲೇ ಪಯಣ ಮುಗಿಸುವ ಹಂತದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಈ ಹಂತದಲ್ಲೂ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅನೇಕ ಪ್ರಮುಖ ಆಟಗಾರರು ಈಗಾಗಲೇ ಗಾಯಗಳಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಈಗ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಕೂಡ ಆ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯುತ್ತಿರುವ ತಂಡದ ಕೊನೆಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಬೆರಳಿಗೆ ಗಂಭೀರ ಗಾಯವಾಗಿದೆ. ಹೀಗಾಗಿ ವಿಕೆಟ್‌ಕೀಪಿಂಗ್ ಮಾಡುತ್ತಿದ್ದ ಸಂಜು ನೋವಿನಿಂದ ನರಳುತ್ತ್ತಲೇ ಮೈದಾನ ತೊರೆದಿದ್ದಾರೆ.

ಎಡಗೈ ಕಿರುಬೆರಳಿಗೆ ಗಾಯ

ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್​ನ ಆರಂಭದಲ್ಲೇ ಸಂಜು ಗಾಯಕ್ಕೆ ತುತ್ತಾದರು. ಸಿಎಸ್‌ಕೆ ಬೌಲರ್ ಸ್ಪೆನ್ಸರ್ ಜಾನ್ಸನ್ ಎಸೆದ ಚೆಂಡನ್ನು ಸಂಜು ಸ್ಯಾಮ್ಸನ್ ಹಿಡಿಯಲು ಪ್ರಯತ್ನಿಸಿದರು. ಆದರೆ, 144 ಕಿ.ಮೀ ವೇಗದಲ್ಲಿ ಬಂದ ಚೆಂಡು ಅನಿರೀಕ್ಷಿತವಾಗಿ ಸ್ವಿಂಗ್ ಆಯಿತು. ಅದನ್ನು ಹಿಡಿಯುವ ಯತ್ನದಲ್ಲಿ ಸಂಜು ಅವರ ಎಡಗೈ ಕಿರುಬೆರಳಿಗೆ ಚೆಂಡು ರಬಸವಾಗಿ ಬಡಿಯಿತು. ಇದರಿಂದ ಸಂಜುಗೆ ತೀವ್ರ ನೋವಿನಿಂದ ನರಳಲಾರಂಭಿಸಿದರು. ಕೂಡಲೇ ತಂಡದ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದರು, ಆದರೆ ನೋವು ಕಡಿಮೆಯಾಗಲಿಲ್ಲ. ಆದ್ದರಿಂದ ಸಂಜು ಸ್ಯಾಮ್ಸನ್ ಮೈದಾನವನ್ನು ತೊರೆದು ಪೆವಿಲಿಯನ್ ಕಡೆಗೆ ನಡೆದರು. ಸಂಜು ಬದಲಿಗೆ ಉರ್ವಿಲ್ ಪಟೇಲ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.

ಗಾಯದ ಸುಳಿಯಲ್ಲಿ ಸಿಎಸ್​ಕೆ

ಮೇಲೆ ಹೇಳಿದಂತೆ ಈ ಸೀಸನ್ ಆರಂಭದಿಂದಲೂ ಚೆನ್ನೈ ತಂಡ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಈಗಾಗಲೇ, ಎಂಎಸ್ ಧೋನಿ ಮತ್ತು ನಾಥನ್ ಎಲ್ಲಿಸ್ ಅವರಂತಹ ಸ್ಟಾರ್ ಆಟಗಾರರು ವಿವಿಧ ಗಾಯಗಳಿಂದ ಬಳಲುತ್ತಿದ್ದಾರೆ. ಕೆಲವರು ಇಡೀ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ತಂಡಕ್ಕೆ ಬೆನ್ನೆಲುಬಾಗಿದ್ದ ಸಂಜು ಸ್ಯಾಮ್ಸನ್ ಕೂಡ ಇದೀಗ ಗಾಯಕ್ಕೆ ತುತ್ತಾಗಿದ್ದಾರೆ.

GT vs CSK IPL 2026 Live Score: ವಿಕೆಟ್ ಹುಡುಕಾಟದಲ್ಲಿ ಸಿಎಸ್​ಕೆ

ಬ್ಯಾಟಿಂಗ್‌ ಮಾಡ್ತಾರಾ ಸಂಜು?

ಸಂಜು ಸ್ಯಾಮ್ಸನ್ ಪ್ರಸ್ತುತ ಚೆನ್ನೈ ತಂಡದ ಫಿಸಿಯೋಗಳ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆರಳಿನ ಗಾಯದಿಂದಾಗಿ ಕೀಪಿಂಗ್ ಕಷ್ಟವಾಗಿದ್ದರೂ, ಅವರು ಬ್ಯಾಟಿಂಗ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಚೆನ್ನೈ ತಂಡಕ್ಕೆ ಬ್ಯಾಟಿಂಗ್ ಪ್ರಾರಂಭಿಸಲು ಇನ್ನೂ ಸಮಯವಿರುವುದರಿಂದ, ಸಂಜು ಸ್ಯಾಮ್ಸನ್ ನೋವು ನಿವಾರಕಗಳನ್ನು ತೆಗೆದುಕೊಂಡರೂ ಸಹ ಈ ನಿರ್ಣಾಯಕ ರನ್ ಚೇಸ್‌ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತದೆ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಸಂಜು ಬ್ಯಾಟಿಂಗ್ ಮಾಡಲು ಬಾರದಿದ್ದರೆ, ಅದು ಚೆನ್ನೈ ತಂಡದ ಗೆಲುವಿನ ಸಾಧ್ಯತೆಗಳಿಗೆ ಧಕ್ಕೆ ತರಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:38 pm, Thu, 21 May 26

Source link

‘ಕೆಜಿಎಫ್ 3’ ಸದ್ಯಕ್ಕಿಲ್ಲ, ‘ಡ್ರ್ಯಾಗನ್’ ಬಳಿಕ ‘ಸಲಾರ್ 2’ ಕೆಲಸ ಶುರು; ಪ್ರಶಾಂತ್ ನೀಲ್ ಸ್ಪಷ್ಟನೆ – Kannada News | Prashanth Neel will shoot Salaar 2 after Jr NTR starrer Dragon movie KGF 3 not soon

ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಕಾಂಬಿನೇಷನ್‌ನ ‘ಸಲಾರ್: ಪಾರ್ಟ್ 1 – ಸೀಸ್‌ಫೈರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಈಗ ಚಿತ್ರದ ಮುಂದಿನ ಭಾಗ ‘ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ’ (Salaar 2) ಚಿತ್ರಕ್ಕಾಗಿ ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ, ಈ ಬಿಗ್ ಬಜೆಟ್ ಸೀಕ್ವೆಲ್ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮಹತ್ವದ ಅಪ್ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ‘ಕೆಜಿಎಫ್ 3’ (KGF 3) ಕುರಿತು ಅಪ್​ಡೇಟ್ ತಿಳಿಯಲು ಕಾದಿದ್ದ ಅಭಿಮಾನಿಗಳಿಗೆ ಬೇಸರ ಆಗಿದೆ.

ಪ್ರಶಾಂತ್ ನೀಲ್ ಸದ್ಯ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅಭಿನಯದ ‘ಡ್ರ್ಯಾಗನ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವು 2027ರ ಜೂನ್ 11ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ಈ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರದ ಚಿತ್ರೀಕರಣ ಮುಗಿದ ತಕ್ಷಣವೇ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ‘ಸಲಾರ್ 2’ ಚಿತ್ರದ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

‘ಗಲಾಟಾ ಪ್ಲಸ್’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ನೀಲ್, ‘ಡ್ರ್ಯಾಗನ್ ಸಿನಿಮಾ ಮುಗಿದ ತಕ್ಷಣವೇ ‘ಸಲಾರ್ 2’ ಶೂಟಿಂಗ್ ಆರಂಭವಾಗಲಿದೆ’ ಎಂದಿದ್ದಾರೆ. ಇದೇ ವೇಳೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಕೆಜಿಎಫ್: ಚಾಪ್ಟರ್ 3’ ಚಿತ್ರದ ಬಗ್ಗೆಯೂ ಮಾತನಾಡಿದ ಅವರು, ‘ಕೆಜಿಎಫ್ ಫ್ರಾಂಚೈಸಿಗೆ ನಾನು ಯಾವಾಗ ಮರಳುತ್ತೇನೆ ಎಂಬ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ತಿಳಿಸಿದ್ದಾರೆ.

ತಮ್ಮ ಡಾರ್ಕ್ ಥೀಮ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್, ‘ಡ್ರ್ಯಾಗನ್’ ಚಿತ್ರದ ನಂತರ ಈ ಶೈಲಿಯ ಸಿನಿಮಾಗಳಿಗೆ ವಿರಾಮ ನೀಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಹೆಚ್ಚು ಬಣ್ಣಗಳಿಂದ ಕೂಡಿರುವ ಪೌರಾಣಿಕ ಕಥಾಹಂದರ ಹೊಂದಿರುವ ಚಿತ್ರ ಸರಣಿಯೊಂದನ್ನು ಮಾಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಇದರೊಂದಿಗೆ, ಒಂದು ಸಣ್ಣ ಬಜೆಟ್‌ನ ಭಾವನಾತ್ಮಕ ಕೌಟುಂಬಿಕ ಡ್ರಾಮಾ ಸಿನಿಮಾ ಮಾಡುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಕೆಗಳಿಂದ ರೋಸಿಹೋದ ಪ್ರಶಾಂತ್ ನೀಲ್, ಬದಲಾಗುವ ನಿರ್ಧಾರ ಮಾಡಿದ ನಿರ್ದೇಶಕ

‘ಸಲಾರ್ 1’ ಚಿತ್ರದಲ್ಲಿ ದೇವ (ಪ್ರಭಾಸ್) ಮತ್ತು ವರದರಾಜ ಮನ್ನಾರ್ (ಪೃಥ್ವಿರಾಜ್) ನಡುವಿನ ಸ್ನೇಹ ಹಾಗೂ ರಾಜಕೀಯ ದ್ರೋಹದ ಕಥೆಯನ್ನು ತೋರಿಸಲಾಗಿತ್ತು. ಎರಡನೇ ಭಾಗದಲ್ಲಿ ಇವರಿಬ್ಬರ ನಡುವಿನ ಮಹಾ ಯುದ್ಧ ಮತ್ತು ಸಿಂಹಾಸನಕ್ಕಾಗಿ ನಡೆಯುವ ಸಂಘರ್ಷವನ್ನು ಅನಾವರಣಗೊಳಿಸಲಾಗುತ್ತದೆ. ಚಿತ್ರದಲ್ಲಿ ಜಗಪತಿ ಬಾಬು, ಬಾಬಿ ಸಿಂಹ, ಈಶ್ವರಿ ರಾವ್, ಶ್ರುತಿ ಹಾಸನ್ ಮತ್ತು ಶ್ರಿಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಜೆಪಿ ಸೇರಿದ ರಾಜಣ್ಣ: ಹಿರಿಯೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು, ಉಪಚುನಾವಣೆ ಅಖಾಡಕ್ಕೆ ರಂಗು – Kannada News | Rajanna Joins BJP For Contest In Hiriyur By Election, JDS also Plan for Ticket

ಚಿತ್ರದುರ್ಗ/ಬೆಂಗಳೂರು, (ಮೇ 21): ಹಿರಿಯ ನಾಯಕ ಹಾಗೂ ಸಚಿವ ಡಿ. ಸುಧಾಕರ್ (D Sudhakar) ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ (Hiriyur By Election) ಎದುರಾಗಿದೆ. ಚುನಾವಣೆಗೆ ದಿನಾಂಕ ಘೋಷಣೆ ಮೊದಲೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದಕ್ಕೆ ಪೂರಕವೆಂಬಂತೆ ಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಅವರು ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ. ಇನ್ನೊಂದೆಡೆ ಮಿತ್ರ ಪಕ್ಷ ಜೆಡಿಎಸ್ (JDS)​​​ ಸಹ ಬೇರೆಯದ್ದೇ ಲೆಕ್ಕಚಾರಗಳನ್ನ ಹಾಕುತ್ತಿದೆ.

ಮುಖ್ಯಾಂಶಗಳು

  • ರಂಗೇರಿದ ಹಿರಿಯೂರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ರಾಜಕೀಯ
  • ಸಚಿವ ಡಿ ಸುಧಾಕರ್ ನಿಧನದಿಂದ ಹಿರಿಯೂರು ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆ
  • ಕ್ಷೇತ್ರಕ್ಕಾಗಿ ದೋಸ್ತಿಗಳಾದ ಜೆಡಿಎಸ್-ಬಿಜೆಪಿಯಲ್ಲಿ ಫೈಟ್
  • ಕಾಂಗ್ರೆಸ್​​​ನಲ್ಲೂ ಗರಿಗೆದರಿದ ರಾಜಕೀಯ ಬೆಳವಣಿಗಳು

ಮೈತ್ರಿ ಪಾಳಯದಲ್ಲಿ ಬಿಗ್ ಫೈಟ್

ಕೋಟೆಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಭರ್ಜರಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ಅದರಲ್ಲೂ ಮೈತ್ರಿ ಪಾಳಯದಲ್ಲಿ ಟಿಕೆಟ್‌ಗಾಗಿ ಒಳಗೊಳಗೇ ಬಿಗ್ ಫೈಟ್ ಶುರುವಾಗಿದೆ. ಹೌದು… ಹಿರಿಯೂರು ಕ್ಷೇತ್ರದ ಮೇಲೆ ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಕಣ್ಣಿಟ್ಟಿದ್ದು, ಈ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನವರನ್ನೇ ಕಣಕ್ಕಿಳಿಸಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭರ್ಜರಿ ಪ್ಲಾನ್ ಮಾಡಿದ್ದಾರೆ. ಇನ್ನೊಂದೆಡೆ ಬಿಜೆಪಿ ಸಹ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು, ಇದಕ್ಕಾಗಿ ರಾಜಣ್ಣ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.

ಇದನ್ನೂ ನೋಡಿ: ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ಹೀಗಿದೆ ದಳಪತಿಗಳ ಲೆಕ್ಕಾಚಾರ

ರಾಜಣ್ಣನನ್ನ ಕಣ್ಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್

ಮೈತ್ರಿ ಧರ್ಮದ ಪ್ರಕಾರ ಜೆಡಿಎಸ್ ಹಿರಿಯೂರು ಸೀಟಿಗೆ ಬೇಡಿಕೆ ಇಡುತ್ತಿದ್ದರೆ, ಇತ್ತ ಬಿಜೆಪಿ ಮಾತ್ರ ಒಳಗೊಳಗೇ ಬೇರೆಯದೇ ಆದ ಬ್ರಹ್ಮಾಸ್ತ್ರವನ್ನು ರೆಡಿ ಮಾಡಿಕೊಂಡಿದೆ. ಹಿರಿಯೂರು ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ‘ಕಾಡುಗೊಲ್ಲ’ ಸಮುದಾಯದ ಮತಗಳನ್ನು ಸೆಳೆಯಲು ಅದೇ ಸಮುದಾಯದ ಪ್ರಭಾವಿ ನಾಯಕನನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದ್ದು, ಅದಕ್ಕಾಗಿಯೇ ತಟಸ್ಥರಾಗಿದ್ದ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ಅವರನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಇದರಿಂದ ಇಂದು ರಾಜಣ್ಣ ಅವರನ್ನು ಅದ್ಧೂರಿಯಾಗಿ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮೈಸೂರು ಸಂಸದ ಯದುವೀರ್ ಒಡೆಯರ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಂತಹ ಘಟಾನುಘಟಿ ನಾಯಕರ ಸಮ್ಮುಖದಲ್ಲೇ ರಾಜಣ್ಣ ಮರಳಿ ಕಮಲ ಮುಡಿದಿದ್ದಾರೆ.

ಕಾಂಗ್ರೆಸ್‌ನಿಂದ ಪೂರ್ಣಿಮಾ ಶ್ರೀನಿವಾಸ್?

ಇಷ್ಟು ದೋಸ್ತಿಗಳ ಕಥೆಯಾದರೆ ಇನ್ನು ಕಾಂಗ್ರೆಸ್ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ಇದೆ. ಈ ರೇಸ್‌ನಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರು ಮುಂಚೂಣಿಯಲ್ಲಿದೆ.ಈ ಹಿಂದೆ ಇದೇ ಹಿರಿಯೂರು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕಿಯಾಗಿದ್ದ ಪೂರ್ಣಿಮಾ, ಕಳೆದ ಚುನಾವಣೆಯಲ್ಲಿ (2023) ಸೋತ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಅನುಕಂಪದ ಮೇಲೆ ಮೃತ ಸುಧಾಕರ್ ಅವರ ಪುತ್ರ ಸುಹಾಸ್‌ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್​​​ನಲ್ಲೂ ಸಹ ಟಿಕೆಟ್ ಫೈಟ್ ಜೋರಾಗಿದ್ದು, ಹೈಕಮಾಂಡ್ ಅನುಕಂಪಕ್ಕೆ ಮನ್ನಣೆ ನೀಡುತ್ತಾರಾ ಇಲ್ಲ ಪೂರ್ಣಿಮಾ ಶ್ರೀನಿವಾಸ್ ಗೆ ಮಣೆ ಹಾಕುತ್ತಾ ಎನ್ನುವುದ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SRH vs RCB: ಕೊನೆಯ ಲೀಗ್ ಪಂದ್ಯದಲ್ಲಿ ಆರ್​ಸಿಬಿಗೆ ಸನ್‌ರೈಸರ್ಸ್ ಎದುರಾಳಿ; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | RCB vs SRH IPL 2026 Hyderabad: Top 2 Spot Battle Date, Time, Venue

ಹೈದರಾಬಾದ್‌ನಲ್ಲಿ ನಡೆಯಲಿರುವ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಮುಖಾಮುಖಿಯಾಗಲಿದ್ದು, ಅಗ್ರ ಎರಡು ಸ್ಥಾನಗಳಿಸುವ ಗುರಿಯನ್ನು ಹೊಂದಿವೆ. ಆರ್‌ಸಿಬಿ ಪ್ರಸ್ತುತ 18 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಸನ್‌ರೈಸರ್ಸ್ ವಿರುದ್ಧದ ಗೆಲುವು ಆರ್​ಸಿಬಿಗೆ ಮೊದಲ ಸ್ಥಾನ ಮತ್ತು ಫೈನಲ್ ತಲುಪಲು ಎರಡು ಅವಕಾಶಗಳನ್ನು ನೀಡುತ್ತದೆ. ಇತ್ತ ಸನ್‌ರೈಸರ್ಸ್ ಕೂಡ ಆಡಿರುವ 13 ಪಂದ್ಯಗಳಿಂದ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಆರ್​ಸಿಬಿ ವಿರುದ್ಧ ಗೆಲ್ಲಲೇಬೇಕಾಗಿದೆ.

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಯಾವಾಗ ನಡೆಯಲಿದೆ?

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಮೇ 22 ರಂದು ನಡೆಯಲಿದೆ.

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಎಲ್ಲಿ ನಡೆಯಲಿದೆ?

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್​ನಲ್ಲಿ ನಡೆಯಲಿದೆ.

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಎಷ್ಟು ಗಂಟೆಗೆ ಆರಂಭ?

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವ ವೀಕ್ಷಕರಿಗೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

IPL 2026: ‘ಈ ವರ್ಷವೂ ಆರ್‌ಸಿಬಿಯದ್ದೇ ಟ್ರೋಫಿ’; ಭವಿಷ್ಯ ನುಡಿದ ಸೆಹ್ವಾಗ್

ಉಭಯ ತಂಡಗಳು

ಸನ್ ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್ (ನಾಯಕ), ಸಲೀಲ್ ಅರೋರಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅನಿಕೇತ್ ವರ್ಮಾ, ಅಭಿಷೇಕ್ ಶರ್ಮಾ, ಆರ್. ಅಂಬ್ರಿಸ್, ಹರ್ಷ್ ದುಬೆ, ಕ್ರೆನ್ಸ್ ಫುಲೆತ್ರಾ, ಲಿಯಾಮ್ ಲಿವಿಂಗ್‌ಸ್ಟೋನ್, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಲ್ ಪಟೇಲ್, ಶಿವಂಗ್ ಕುಮಾರ್, ಅಮಿತ್ ಕುಮಾರ್, ಜೆರಾಲ್ಡ್ ಕೋಟ್ಜಿ, ಪ್ರಫುಲ್ ಹಿಂಗೆ, ದಿಲ್ಶನ್ ಮಧುಶಂಕ, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಓಂಕಾರ್ ತರ್ಮಲೆ, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲಿಪ್ ಸಾಲ್ಟ್, ಜಿತೇಶ್ ಶರ್ಮಾ, ಜಾಕೋಬ್ ಬೆಥೆಲ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಅಭಿನಂದನ್ ಸಿಂಗ್, ಜೋಶ್ ಹ್ಯಾಜಲ್‌ವುಡ್, ರಸಿಕ್ ಸಲಾಂ ದಾರ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಸ್ವಪ್ನಿಲ್ ಸಿಂಗ್, ನುವಾನ್ ತುಷಾರ, ವೆಂಕಟೇಶ್ ಅಯ್ಯರ್, ಜಾಕೋಬ್ ಡಫಿ, ಮಂಗೇಶ್ ಯಾದವ್, ಜೋರ್ಡಾನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ಸಾತ್ವಿಕ್ ದೇಸ್ವಾಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಲೋಡಿಯೆಂದೇ ಟ್ರೆಂಡ್ ಆಗಿರುವ ಮೆಲೋನಿಯ ಆಸ್ತಿ ಎಷ್ಟು? ಇಟಲಿ ಪ್ರಧಾನಿ ಕುರಿತ ರೋಚಕ ಸಂಗತಿಗಳಿವು – Kannada News | Giorgia meloni Net Worth and Family Interesting Facts about Italy PM

ನವದೆಹಲಿ, ಮೇ 21: ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿ ಮತ್ತು ಜಾಗತಿಕ ರಾಜಕಾರಣದ ಅತ್ಯಂತ ಪ್ರಭಾವಶಾಲಿ ನಾಯಕಿಯರಲ್ಲಿ ಒಬ್ಬರಾದ ಜಾರ್ಜಿಯಾ ಮೆಲೋನಿ (Giorgia Meloni) ಅವರ ಜೀವನದ ರೋಚಕ ಕಥೆ ಮತ್ತು ಅವರ ಆಸ್ತಿ ವಿವರಗಳ ಮಾಹಿತಿ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಸ್ನೇಹಿತೆ ಎಂದೇ ಬಿಂಬಿಸಲ್ಪಟ್ಟಿರುವ ಮೆಲೋನಿ ಇಟಲಿಯ ಪ್ರಧಾನಿ. ಮೋದಿ ಹಾಗೂ ಮೆಲೋನಿಯವರ ಭೇಟಿಯ ಫೋಟೋಗಳು, ವಿಡಿಯೋಗಳು, ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇವರಿಬ್ಬರ ಅಭಿಮಾನಿಗಳು ಈ ಜೋಡಿಗೆ ಮೆಲೋಡಿ ಎಂದು ಹೆಸರಿಟ್ಟಿದ್ದಾರೆ.

ಜಾರ್ಜಿಯಾ ಮೆಲೋನಿ 1977ರ ಜನವರಿ 15ರಂದು ಇಟಲಿಯ ರೋಮ್ ನಗರದಲ್ಲಿ ಜನಿಸಿದರು. ಇವರ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ಇವರಿಗೆ ಕೇವಲ ಒಂದೂವರೆ ವರ್ಷ ವಯಸ್ಸಾಗಿದ್ದಾಗ ಇವರ ತಂದೆ ಫ್ರಾನ್ಸೆಸ್ಕೊ ಮೆಲೋನಿ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಸ್ಪೇನ್‌ಗೆ ಓಡಿಹೋದರು. ತಾಯಿಯೇ ಇವರನ್ನು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಸಾಕಿ ಬೆಳೆಸಿದರು. ಮೆಲೋನಿ ಅವರು ರೋಮ್‌ನ ಅತ್ಯಂತ ಬಡ ಮತ್ತು ಕಾರ್ಮಿಕ ವರ್ಗದವರು ವಾಸಿಸುವ ‘ಗರ್ಬಟೆಲ್ಲಾ’ ಎಂಬ ಪ್ರದೇಶದಲ್ಲಿ ಬೆಳೆದರು.

Pm Modi With Meloni

ಮೆಲೋನಿ ಅವರು ಭಾಷಾಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಕುಟುಂಬಕ್ಕೆ ಆಸರೆಯಾಗಲು ಅವರು ರೆಸ್ಟೋರೆಂಟ್​ಗಳಲ್ಲಿ ಬಾರ್‌ಮೇಡ್ ಆಗಿ, ಮನೆಗಳಲ್ಲಿ ಬೇಬಿಸಿಟ್ಟರ್ ಆಗಿ ಮತ್ತು ರೋಮ್‌ನ ಪ್ರಸಿದ್ಧ ನೈಟ್ ಕ್ಲಬ್‌ಗಳಲ್ಲಿ ಕೆಲಸ ಮಾಡಿದ್ದರು. ಮೆಲೋನಿ ಅವರು ತಮ್ಮ 15ನೇ ವಯಸ್ಸಿನಲ್ಲೇ ರಾಜಕೀಯಕ್ಕೆ ಪ್ರವೇಶಿಸಿದರು. ಇಟಲಿಯ ಕಮ್ಯುನಿಸ್ಟ್ ವಿರೋಧಿ ಮತ್ತು ರಾಷ್ಟ್ರೀಯತಾವಾದಿ ‘ಯೂತ್ ಫ್ರಂಟ್’ ಸೇರಿದರು. ಚುರುಕಾದ ಮಾತುಗಾರಿಕೆ ಮತ್ತು ಧೈರ್ಯದಿಂದಾಗಿ ಅವರು ವಿದ್ಯಾರ್ಥಿ ನಾಯಕಿಯಾಗಿ ಬೆಳೆದರು.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ತಮ್ಮ 29ನೇ ವಯಸ್ಸಿನಲ್ಲಿ ಇಟಲಿಯ ಸಂಸತ್ ಸದಸ್ಯೆಯಾಗಿ ಆಯ್ಕೆಯಾದರು. ಇಟಲಿಯ ಅಂದಿನ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ಸರ್ಕಾರದಲ್ಲಿ ‘ಯುವಜನ ಕಲ್ಯಾಣ ಸಚಿವೆ’ ಆಗಿ ನೇಮಕಗೊಂಡರು. ಇದರೊಂದಿಗೆ ಇಟಲಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2012ರಲ್ಲಿ ಮೆಲೋನಿ ತಮ್ಮದೇ ಆದ ‘ಬ್ರದರ್ಸ್ ಆಫ್ ಇಟಲಿ’ (Brothers of Italy) ಎಂಬ ಬಲಪಂಥೀಯ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. 2022ರ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಪಕ್ಷವು ಭರ್ಜರಿ ಜಯ ಗಳಿಸಿತು. ಅಕ್ಟೋಬರ್ 2022ರಲ್ಲಿ ಜಾರ್ಜಿಯಾ ಮೆಲೋನಿ ಇಟಲಿಯ ಮೊಟ್ಟಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದರು.

Pm Modi With Meloni

ಜಾರ್ಜಿಯಾ ಮೆಲೋನಿ ಅವರಿಗೆ ‘ಜಿನೆವ್ರಾ’ ಎಂಬ ಮಗಳಿದ್ದಾಳೆ. ತಮ್ಮ ದೀರ್ಘಕಾಲದ ಸಂಗಾತಿಯಾಗಿದ್ದ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೋ ಅವರೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಕಾರಣ ಅವರು 2023ರಲ್ಲಿ ವಿಚ್ಛೇದನ ಪಡೆದಿದ್ದರು. ಈಗ ಅವರು ತಮ್ಮ ಮಗಳೊಂದಿಗೆ ವಾಸವಾಗಿದ್ದಾರೆ.


ಅನೇಕ ಪಾಶ್ಚಿಮಾತ್ಯ ದೇಶಗಳ ನಾಯಕರಿಗೆ ಹೋಲಿಸಿದರೆ ಜಾರ್ಜಿಯಾ ಮೆಲೋನಿ ತೀರಾ ಶ್ರೀಮಂತ ಹಿನ್ನೆಲೆಯಿಂದ ಬಂದವರಲ್ಲ. ಇಟಲಿಯ ಅಧಿಕೃತ ಆಸ್ತಿ ಘೋಷಣೆಗಳ ಪ್ರಕಾರ ಅವರ ಆಸ್ತಿ ವಿವರ ಹೀಗಿದೆ. ಮೆಲೋನಿ ಅವರ ಒಟ್ಟು ಆಸ್ತಿಯ ಮೌಲ್ಯ ಸರಿಸುಮಾರು 2 ಮಿಲಿಯನ್ ಯೂರೋಗಳಿಂದ 2.5 ಮಿಲಿಯನ್ ಯೂರೋಗಳು (ಭಾರತೀಯ ರೂ.ಗಳಲ್ಲಿ ಸುಮಾರು 18ರಿಂದ 22 ಕೋಟಿ).

ಇದನ್ನೂ ಓದಿ: ವೆಲ್​ಕಮ್ ಟು ರೋಮ್, ಮೈ ಫ್ರೆಂಡ್, ರೋಮ್​ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಸ್ವಾಗತಿಸಿ, ಸೆಲ್ಫಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ

ರೋಮ್ ನಗರದಲ್ಲಿ ಅವರು ತಮ್ಮ ಮಗಳೊಂದಿಗೆ ವಾಸಿಸಲು ಇತ್ತೀಚೆಗೆ ದೊಡ್ಡದೊಂದು ಸುಸಜ್ಜಿತ ಮನೆಯನ್ನು ಖರೀದಿಸಿದ್ದಾರೆ. ಇದರ ಮೌಲ್ಯ ಸುಮಾರು 1 ಮಿಲಿಯನ್ ಯೂರೋಗಳಿಗಿಂತ ಅಧಿಕ ಎನ್ನಲಾಗಿದೆ. ಇಟಲಿಯ ಪ್ರಧಾನ ಮಂತ್ರಿಯಾಗಿ ಅವರಿಗೆ ವಾರ್ಷಿಕವಾಗಿ ಸುಮಾರು 80,000ದಿಂದ 1 ಲಕ್ಷ ಯೂರೋಗಳ (ಸುಮಾರು 70ರಿಂದ 90 ಲಕ್ಷ ರೂ.) ಸಂಬಳ ಸಿಗುತ್ತದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಇವರ ರಾಜತಾಂತ್ರಿಕ ಸ್ನೇಹ ಮತ್ತು “ಮೆಲೋಡಿ” (#Melodi) ಎಂಬ ಸಾಮಾಜಿಕ ಮಾಧ್ಯಮಗಳ ಟ್ರೆಂಡ್ ಭಾರತದಲ್ಲೂ ಇವರನ್ನು ಅತ್ಯಂತ ಜನಪ್ರಿಯಗೊಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 8:08 pm, Thu, 21 May 26

Source link

GT vs CSK: ಕೊನೆಯ ಲೀಗ್ ಪಂದ್ಯದಲ್ಲೂ ಕಣಕ್ಕಿಳಿಯದ ಧೋನಿ – Kannada News | MS Dhoni Misses Entire IPL 2026 League Stage; CSK Fans Disappointed by Injury

ಐಪಿಎಲ್ 2026 (IPL 2026) ರ 66 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (GT vs CSK) ಪರಸ್ಪರ ಮುಖಾಮುಖಿಯಾಗಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ 14 ನೇ ಮತ್ತು ಕೊನೆಯ ಪಂದ್ಯ ಇದಾಗಿದೆ. ಅಂದರೆ ಲೀಗ್ ಹಂತದಲ್ಲಿ ಈ ಎರಡು ತಂಡಗಳಿಗೆ ಯಾವುದೇ ಪಂದ್ಯ ಬಾಕಿ ಉಳಿದಿಲ್ಲ. ಇದರಲ್ಲಿ ಗುಜರಾತ್ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಆದರೆ ಸಿಎಸ್​ಕೆಗೆ ಪ್ಲೇಆಫ್‌ ಹಾದಿ ಭಾಗಶಃ ಮುಚ್ಚಿದೆ. ಇದರರ್ಥ ಸಿಎಸ್​ಕೆಗೆ ಈ ಸೀಸನ್​ನಲ್ಲಿ ಇದೇ ಕೊನೆಯ ಪಂದ್ಯ. ಹೀಗಾಗಿ ಈ ಪಂದ್ಯದಲ್ಲಾದರೂ ಎಂಎಸ್ ಧೋನಿ (MS Dhoni) ಆಡುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಧೋನಿ ಈ ಪಂದ್ಯದಲ್ಲೂ ಕಣಕ್ಕಿಳಿಯಲಿಲ್ಲ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದರು. ಇದಾದ ಬಳಿಕ ತಂಡದ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ರುತುರಾಜ್ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ ಎಂದರು. ಇದನ್ನು ಕೇಳಿದ ಫ್ಯಾನ್ಸ್ ಧೋನಿ ಈ ಪಂದ್ಯದಲ್ಲಿ ಆಡಬಹುದು ಎಂದುಕೊಂಡಿದ್ದರು. ಆದರೆ ಆ ಎರಡು ಬದಲಾವಣೆಗಳಲ್ಲಿ ಧೋನಿ ಹೆಸರು ಇರಲಿಲ್ಲ. ಹೀಗಾಗಿ ಈ ಸೀಸನ್​ನಲ್ಲಿ ಧೋನಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಧೋನಿ ಒಂದೇ ಒಂದು ಲೀಗ್ ಪಂದ್ಯವನ್ನು ಆಡದಿರುವುದು ಇದೇ ಮೊದಲು.

ಸೀಸನ್​ ಆರಂಭದಲ್ಲಿ ಗಾಯಗೊಂಡ ಧೋನಿ

ಸೀಸನ್ ಆರಂಭಕ್ಕೂ ಮುನ್ನವೇ ಧೋನಿ ಕಾಲಿನ ಗಾಯಕ್ಕೆ ಒಳಗಾದರು. ಆರಂಭದಲ್ಲಿ ಅವರು ಎರಡು ವಾರಗಳ ನಂತರ ತಂಡಕ್ಕೆ ಮರಳುತ್ತಾರೆ ಎಂದು ತಂಡದ ಆಡಳಿತ ಮಂಡಳಿ ಹೇಳಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಸತತ ಪ್ರಯತ್ನದ ಬಳಿಕವೂ ಧೋನಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ಲೀಗ್ ಹಂತ ಮುಗಿಯುವ ಹಂತದಲ್ಲಿದ್ದಾಗ ಧೋನಿ ಮತ್ತೆ ಗಾಯಕ್ಕೆ ಒಳಗಾದರು. ಹೀಗಾಗಿ ಧೋನಿ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ತಂಡವನ್ನು ತೊರೆದು ರಾಂಚಿಗೆ ಮರಳಿದ್ದಾರೆ ಎಂದು ವರದಿಯಾಗಿತ್ತು. ಇಂದಿನ ಪಂದ್ಯದಲ್ಲಿ ಧೋನಿ ಆಡದಿರುವುದನ್ನು ನೋಡಿದರೆ ಅವರು ರಾಂಚಿಗೆ ಮರಳಿರುವುದು ಖಚಿತವೆನ್ನಲಾಗುತ್ತಿದೆ.

ಅಂಪೈರ್ ವೈಡ್ ನೀಡಿ; ಸಾಕ್ಷಿ ಧೋನಿ ರಿಯಾಕ್ಷನ್ ವೈರಲ್

ಒಂದು ಪಂದ್ಯವನ್ನು ಆಡಲಿಲ್ಲ

ಎಂಎಸ್ ಧೋನಿ ಐಪಿಎಲ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಲ್ಲಿ ಒಬ್ಬರು. ಧೋನಿ ಪ್ರತಿ ಐಪಿಎಲ್ ಆವೃತ್ತಿಯಲ್ಲಿ 10 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಆದರೆ ಧೋನಿ ಒಂದೇ ಒಂದು ಲೀಗ್ ಪಂದ್ಯವನ್ನು ಆಡದೆ ಕೊನೆಗೊಂಡಿರುವುದು ಇದೇ ಮೊದಲು. ಧೋನಿ ಇದುವರೆಗೆ ಐಪಿಎಲ್‌ನಲ್ಲಿ 278 ಪಂದ್ಯಗಳನ್ನು ಆಡಿದ್ದು, 5439 ರನ್ ಗಳಿಸಿದ್ದಾರೆ. ಅವರು ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಚ್ಚುತ್ತಿರುವ ಬಿಸಿಲು ಮತ್ತು ಉಷ್ಣಾಂಶದಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತಾ? ಏನ್ ಹೇಳ್ತಾರೆ ತಜ್ಞರು – Kannada News | Summer Heat And Your Heart: Why Cardiac Events Spike During Heatwaves

ದೇಶದ ಹಲವು ಭಾಗಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತೀವ್ರ ಬಿಸಿಲು ಮತ್ತು ಬಿಸಿಗಾಳಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆಸ್ಪತ್ರೆಗಳಲ್ಲಿ ಡಿಹೈಡ್ರೇಶನ್ ಮತ್ತು ಹೀಟ್ ಸ್ಟ್ರೋಕ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ, ಹೆಚ್ಚುತ್ತಿರುವ ಬಿಸಿಲಿನಿಂದ ಹೃದಯಾಘಾತದ ಅಪಾಯವೂ ಹೆಚ್ಚುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ದೆಹಲಿ ರಾಜೀವ್ ಗಾಂಧಿ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಅಜಿತ್ ಜೈನ್ ಅವರ ಪ್ರಕಾರ, ಬಿಸಿಲು ನೇರವಾಗಿ ಹೃದಯಾಘಾತಕ್ಕೆ (Heart Attack) ಕಾರಣವಾಗುವುದಿಲ್ಲ. ಆದರೆ ಅತಿಯಾದ ಉಷ್ಣಾಂಶ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ವಿಶೇಷವಾಗಿ ಈಗಾಗಲೇ ಹೃದಯ ಸಂಬಂಧಿತ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ. ಹಾಗಾದರೆ ಬಿಸಿಲು ಮತ್ತು ಹೃದಯದ ಆರೋಗ್ಯಕ್ಕೂ ಇರುವ ಸಂಬಂಧವೇನು, ಈ ಅಪಾಯ ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಿಸಿಲು ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವೇನು?

ತಾಪಮಾನ ಹೆಚ್ಚಾದಾಗ ದೇಹವನ್ನು ತಂಪಾಗಿಡಲು ದೇಹ ಹೆಚ್ಚು ಶ್ರಮಿಸುತ್ತದೆ. ಈ ಸಮಯದಲ್ಲಿ ಹೃದಯವು ರಕ್ತ ಸಂಚಾರವನ್ನು ವೇಗವಾಗಿ ನಡೆಸಬೇಕಾಗುತ್ತದೆ. ಹೆಚ್ಚು ಬೆವರು ಬರುತ್ತಿರುವುದರಿಂದ ದೇಹದಲ್ಲಿ ನೀರು ಮತ್ತು ಅಗತ್ಯ ಖನಿಜಗಳ ಕೊರತೆ ಉಂಟಾಗಬಹುದು. ಇದರಿಂದ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಬದಲಾವಣೆ ಸಂಭವಿಸಬಹುದು. ತಜ್ಞರ ಪ್ರಕಾರ, ದೀರ್ಘಕಾಲ ಡಿಹೈಡ್ರೇಶನ್ ಇದ್ದರೆ ರಕ್ತ ಗಟ್ಟಿಯಾಗುವ ಸಾಧ್ಯತೆ ಹೆಚ್ಚುತ್ತದೆ. ಕೆಲ ಸಂದರ್ಭಗಳಲ್ಲಿ ಇದರಿಂದ ರಕ್ತನಾಳಗಳಲ್ಲಿ ರಕ್ತದ ಗುಡ್ಡೆ (Blood Clot) ಉಂಟಾಗಿ ಹೃದಯಾಘಾತಕ್ಕೂ ಕಾರಣವಾಗಬಹುದು.

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

  • ಹೈ ಬಿಪಿ ಇರುವವರಲ್ಲಿ
  • ಹೃದಯರೋಗಿಗಳಲ್ಲಿ
  • ವೃದ್ಧರಲ್ಲಿ
  • ಹೆಚ್ಚು ಸಮಯ ಬಿಸಿಲಿನಲ್ಲಿ ಕೆಲಸ ಮಾಡುವವರಲ್ಲಿ
  • ಡಿಹೈಡ್ರೇಶನ್ ಸಮಸ್ಯೆ ಇರುವವರಲ್ಲಿ ಈ ಅಪಾಯ ಹೆಚ್ಚು

ಇದನ್ನೂ ಓದಿ: ಹೃದಯಾಘಾತ ಆಗುವ 30 ದಿನಗಳ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ

ಗಮನಿಸಬೇಕಾದ ಲಕ್ಷಣಗಳು:

  • ಅಚಾನಕ್ ಹೆಚ್ಚು ಬೆವರು ಬರುವುದು
  • ಹೃದಯ ಬಡಿತ ವೇಗವಾಗುವುದು
  • ಎದೆನೋವು
  • ಉಸಿರಾಟದ ತೊಂದರೆ
  • ದೌರ್ಬಲ್ಯ ಮತ್ತು ತಲೆಸುತ್ತು

ಬಿಸಿಲಿನ ಸಮಯದಲ್ಲಿ ಹೇಗೆ ಜಾಗರೂಕರಾಗಬೇಕು?

ತಜ್ಞರ ಸಲಹೆಯಂತೆ, ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ತೆಳುವಾದ ಹಾಗೂ ಹಗುರವಾದ ಬಟ್ಟೆ ಧರಿಸುವುದು ಉತ್ತಮ. ಹೃದಯ ಸಂಬಂಧಿತ ಕಾಯಿಲೆ ಇರುವವರು ತಮ್ಮ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಜೊತೆಗೆ ಹೆಚ್ಚುತ್ತಿರುವ ಬಿಸಿಲಿನ ಪರಿಣಾಮವನ್ನು ಲಘುವಾಗಿ ತೆಗೆದುಕೊಳ್ಳದೆ, ದೇಹದಲ್ಲಿ ಕಂಡುಬರುವ ಯಾವುದೇ ಅಸಹಜ ಲಕ್ಷಣಗಳನ್ನು ತಕ್ಷಣ ವೈದ್ಯರಿಗೆ ತೋರಿಸುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮರಗಳು ಧರೆಗೆ, ನೀರು ರಸ್ತೆಗೆ: ಬೆಂಗಳೂರಿನಲ್ಲಿ ಮಳೆಯ ಅವಾಂತರಗಳು ಒಂದೆರಡಲ್ಲ – Kannada News | Bengaluru Rains: Wreak Havoc; Trees Uprooted, Roads Flooded Across City

ಗಾಳಿ ಮಳೆಯಿಂದಾಗಿ ಅವಾಂತರImage Credit source: tv9 kannada

ಬೆಂಗಳೂರು, ಮೇ 21: ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ವಾತಾವರಣ ಬದಲಾಗಿದ್ದು, ಮಹಾನಗರದ ಬಹುತೇಕ ಭಾಗಗಳಲ್ಲಿ ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ಕರಾವಳಿ ಮತ್ತು ಒಳನಾಡಿನಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿರುವ ಬೆನ್ನಲ್ಲೇ ಇತ್ತ ಸಿಟಿ ಜನರಿಗೆ ವರುಣ ತಂಪೆರೆದಿದ್ದಾನೆ. ಇನ್ನು ದಿಢೀರ್ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ಸಾರ್ವಜನಿಕರು ಮತ್ತು ಸವಾರರು ತೀವ್ರ ಪರದಾಡುವಂತಾಗಿದೆ.

ಏಲ್ಲೆಲ್ಲಿ ಮಳೆ?

ವಿಜಯನಗರ, ಶಾಂತಿನಗರ, ಲಾಲ್​ಬಾಗ್, ಕಬ್ಬನ್​ಪಾರ್ಕ್​, ಕೆ.ಆರ್.ಮಾರ್ಕೆಟ್, ಜಯನಗರ, ರಾಜಾಜಿನಗರ, ವಸಂತನಗರ, ವಿಧಾನಸೌಧ, ಮೈಸೂರು ರಸ್ತೆ, ಮಾಗಡಿ ರಸ್ತೆ, ಬಸವೇಶ್ವರನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ವಿಲ್ಸನ್​ಗಾರ್ಡನ್, ಮೆಜೆಸ್ಟಿಕ್​ ಸುತ್ತಮುತ್ತ, ಮೈಸೂರು ಬ್ಯಾಂಕ್ ವೃತ್ತ, ಕನ್ನಿಂಗ್​ಹ್ಯಾಮ್ ರಸ್ತೆಯಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ.

ಬಸ್ ನಿಲ್ದಾಣ, ಸ್ಕೈವಾಕ್‌ಗಳೇ ಆಶ್ರಯ

ಧಾರಾಕಾರ ಮಳೆ ಹಿನ್ನೆಲೆ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿದೆ. ಕನ್ನಿಂಗ್‌ಹ್ಯಾಮ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಬೈಕ್‌ಗಳನ್ನು ನಿಲ್ಲಿಸಿದ ಸವಾರರು, ಮಳೆ ನಿಲ್ಲುವವರೆಗೂ ಬಸ್ ನಿಲ್ದಾಣಗಳ ಕೆಳಗೆ ಆಶ್ರಯ ಪಡೆದರು. ಇನ್ನು ಮಾರುಕಟ್ಟೆಗೆ ಬಂದಿದ್ದ ಸಾರ್ವಜನಿಕರು ಮತ್ತು ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದವರು ಅಂಗಡಿ ಮುಂಗಟ್ಟುಗಳ ಮುಂದೆ ಹಾಗೂ ಸ್ಕೈವಾಕ್‌ಗಳ ಕೆಳಗೆ ನಿಂತು ಮಳೆಯಿಂದ ಆಶ್ರಯ ಪಡೆದರು.

ಭಾರೀ ಮಳೆಗೆ ಅಂಡರ್​ ಪಾಸ್​ ಬಂದ್​

ಇನ್ನು ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್‌ ಸಿಲುಕಿದ್ದಾರೆ. ಕೇವಲ ಅರ್ಧ ಗಂಟೆ ಸುರಿದ ಮಳೆಗೇ ನಗರದ ಹೃದಯಭಾಗ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ ರಸ್ತೆ, ನೃಪತುಂಗ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಕಬ್ಬನ್ ಪಾರ್ಕ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕಿ.ಮೀಟರ್‌ಗಟ್ಟಲೆ ವಾಹನ ದಟ್ಟಣೆ ಉಂಟಾಗಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Source link