ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್ಗೆ ಗೊತ್ತಾಗೋದು ಹೇಗೆ? – Kannada News | Google maps how it knows your travel mode speed data ai secrets revealed
ತಂತ್ರಜ್ಞಾನ, ದತ್ತಾಂಶ ಮತ್ತು ಬುದ್ಧಿಮತ್ತೆ ಸೇರಿದರೆ ಅದ್ಭುತ ಸೇವೆ ಸೃಷ್ಟಿಯಾಗುತ್ತದೆ. ಅದುವೇ ಗೂಗಲ್ ಮ್ಯಾಪ್ಸ್. ಬಹುತೇಕ ಮೊಬೈಲ್ ಬಳಕೆದಾರರು ಮ್ಯಾಪ್ಸ್ ಬಳಸುತ್ತಾರೆ. ಅಷ್ಟರಮಟ್ಟಿಗೆ ಗೂಗಲ್ನ ಈ ನಕ್ಷೆಯ ಆ್ಯಪ್ (Google Maps) ಉಪಯುಕ್ತ ಎನಿಸಿದೆ. ಗೂಗಲ್ ಈ ಭೂಮಿಯ ಮೂಲೆ ಮೂಲೆಯನ್ನೂ ಹೊಕ್ಕಿ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸೆಟಿಲೈಟ್, ವಿಮಾನ, ಸ್ಟ್ರೀಟ್ವ್ಯೂ ವಾಹನಗಳು ಸೆರೆಹಿಡಿಯುವ ಚಿತ್ರಗಳನ್ನು ಬಳಸುತ್ತದೆ. ಅದರ ಜೊತೆಗೆ ಏಜೆನ್ಸಿ ಫೀಡ್ಗಳು, ಸರ್ಕಾರಗಳು ಒದಗಿಸುವ ದತ್ತಾಂಶ, ಮೊಬೈಲ್ ಬಳಕೆದಾರರ ಲೊಕೇಶನ್ ಮಾಹಿತಿ ಇತ್ಯಾದಿ ಅಗಾಧ ದತ್ತಾಂಶವನ್ನು ಬಹಳ…