Category Archives: Blog

Your blog category

ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಆತ್ಮಹತ್ಯೆಗೆ ಶರಣು – Kannada News | Davanagere BJP Leader Chandrasekhar Sunkol Commits Suicide

ಚಂದ್ರಶೇಖರ್ ಸಂಕೋಳ್ ಶಾಮನೂರು ಗ್ರಾಮದಲ್ಲಿ ಸಿಮೆಂಟ್, ಕಬ್ಬಿಣದ ಅಂಗಡಿಯನ್ನು ನಡೆಸುತ್ತ ಇಡೀ ಜಿಲ್ಲೆಗೆ ಹೆಸರುವಾಸಿಯಾಗಿದ್ದರು. ಅಲ್ಲದೇ ಬಿಜೆಪಿಯ ಪ್ರಮುಖ ಮುಂಖಂಡನಾಗಿ ಪಕ್ಷ ಸಂಘಟನೆಯಲ್ಲಿ ಕೂಡ ಹೆಚ್ಚು ತೊಡಗಿಸಿಕೊಂಡಿದ್ದರು. ಅಲ್ಲದೆ ಅಡಿಕೆ ತೋಟ, ಕಾಂಪ್ಲೆಕ್ಸ್ ಗಳನ್ನು ಕೂಡ ಹೊಂದಿದ್ದ ಚಂದ್ರಶೇಖರ್, ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

Source link

ಬೇಡ್ತಿ-ವರದಾ ನದಿ ಜೋಡಣೆಗೆ ಸಿಡಿದೆದ್ದ ಮಠಾಧೀಶರು, ಜನಪ್ರತಿನಿಧಿಗಳು: ತಮ್ಮ ನಿಲುವು ಸ್ಪಷ್ಟಪಡಿಸಿದ ರಾಜಕಾರಣಿಗಳು – Kannada News | Uttara Kannada: Bedthi Varada River Linking Protest; Sirsi Rallies Against Project

ನದಿ ಜೋಡಣೆ ವಿರೋಧಿಸಿ ಬೃಹತ್ ಸಮಾವೇಶ

ಕಾರವಾರ, ಜನವರಿ 11: ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯಿಂದ (River Diversion Project) ಅನಕೂಲಕ್ಕಿಂತ ಅನಾನುಕೂಲ ಹೆಚ್ಚು. ಹಾಗಾಗಿ ಇಂತಹ ಯೋಜನೆ ಆದಷ್ಟು ಬೇಗ ಕೈಬಿಡಬೇಕು. ಈ ಯೋಜನೆ ಜಿಲ್ಲೆಗೆ ಮಾರಕ ಆಗುತ್ತೆ ಎಂಬುವುದು ಖಚಿತವಾಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಮಂಕಾಳು ವೈದ್ಯ (Mankal Vaidya) ಹೇಳಿದ್ದಾರೆ.

ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಬೃಹತ್ ಸಮಾವೇಶ

ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಮಂಕಾಳು ವೈದ್ಯ, ಈ ಯೋಜನೆಯ ವಿರುದ್ದವಾಗಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ನಮ್ಮನ್ಮ ಜನ ಪ್ರತಿನಿಧಿಯಾಗಿ ನೀವು ಆಯ್ಕೆ ಮಾಡಿದ್ದೀರಿ. ನಿಮಗೆ ಮಾರಕಾವಾಗುವ ಯೋಜನೆಗಳಿಗೆ ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನದಿ ತಿರುವು ಯೋಜನೆಗಳಿಗೆ ವಿರೋಧ: ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ

ಈ ಹಿಂದೆ ಬಿಎಸ್​ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಅಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸಾಹೇಬ್ರು ಸ್ಪೀಕರ್ ಆಗಿದ್ದರು. ಆಗ ರಾಜ್ಯ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಕೊಡದೆ ಇದ್ದಿದ್ದರೆ ಇಂದು ಸ್ವಾಮಿಜಿಯವರು ಹಾಗೂ ನಾವು, ನೀವು ಈ ಬಿಸಿಲಲ್ಲಿ ಬರುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.

ರಾಜಕೀಯ ಏನೇ ಇರಲಿ, ಇಂದು ಜಿಲ್ಲೆಗಾಗಿ ಇಲ್ಲಿ ಸೇರಿದ್ದೇವೆ. ಈ ವೇದಿಕೆಯಲ್ಲಿ ಸ್ವಾಮಿಜಿಯವರ ನೆತೃತ್ವದಲ್ಲಿ ಆಗುವ ನಿರ್ಣಯಕ್ಕೆ ಬದ್ಧರಾಗಿರಬೇಕು. ಇಲ್ಲೊಂದು ಹೇಳುವುದು ಹೊರಗೆ ಹೋಗಿ ಇನ್ನೊಂದು ಹೇಳುವುದು ಸರಿ ಅಲ್ಲ. ಜಿಲ್ಲೆಗಾಗಿ ನಾವು ಇಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿರಬೇಕು. ಈ ಯೋಜನೆ ಇಡಿ ಜಿಲ್ಲೆಗೆ ಹಾನಿ ಆಗುವ ಯೋಜನೆ ಆಗಿದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.

ಈಗಲೂ ನಮ್ಮ ಮಾತಿಗೆ ಬದ್ಧ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಸಮಾವೇಶದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದ್ದು, ನಾನು ಈ ಹಿಂದೆ ಕೊಟ್ಟ ಮಾತಿಗೆ ಈಗಲೂ ಕೂಡ ಬದ್ಧನಿದ್ದೇನೆ. ಈ ವೇದಿಕೆಯಲ್ಲಿ ನನ್ನ ಬಗ್ಗೆ ಕೆಲವು ಮಾತುಗಳು ಬಂದಿವೆ, ಆದರೆ ಈ ಯೋಜನೆ ವಿರುದ್ಧವಾಗಿ ನಾನು ಯಾವಾಗಲೂ ಇದ್ದೇನೆ. ಕೆಲವರ ಮಾತಿಗೆ ಉತ್ತರ ಕೊಡಲು ಬರಲ್ಲ ಅಂತ ಅಲ್ಲ, ಸೂಕ್ತ ಉತ್ತರ ಕೊಡುವುದು ನನಗೂ ಗೊತ್ತಿದೆ. ಆದರೆ ಈ ಸುಂದರ ವೇದಿಕೆಯಲ್ಲಿ ಉತ್ತರ ಕೊಡುವುದು ಸರಿ ಅಲ್ಲ ಎಂದಿದ್ದಾರೆ.

ಶಿರೂರು ಗುಡ್ಡ ಕುಸಿತ ಸೇರಿದಂತೆ ಹತ್ತಾರು ಕಷ್ಟ ನೋಡಿದ್ದೇವೆ. ನಾವು ಅನೇಕ ತೊಂದರೆ ತೊಡಕುಗಳನ್ನ ಅನುಭವಿಸಿ ಹೇಳುತ್ತಿದ್ದೇವೆ. ಈ ಜಿಲ್ಲೆಯ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ‌ ಆಗಬೇಕು. ಧಾರಣಾ ಸಾಮರ್ಥ್ಯ ಬಗ್ಗೆ ಈ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಹೇಳಿದ್ದೆ. ನಾನು ಹೇಳಿಲ್ಲ ಅಂತಾ ಯಾರಾದ್ರೂ ಹೇಳಿದ್ರೆ ಪ್ರೂವ್ ಮಾಡೋಕೆ ಸಿದ್ಧ ಎಂದರು.

ಹೋರಾಟ ಅವಶ್ಯಕ ಎಂದ ಶಾಸಕ ಶಿವರಾಂ ಹೆಬ್ಬಾರ್

ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಮಾತನಾಡಿದ್ದು, ಈ ವೇದಿಕೆಯಲ್ಲಿ ನಾನು ಯಾವುದೇ ರಾಜಕೀಯ ಮಾತು ಹೇಳಲ್ಲ. ಇಂದು ನಮ್ಮ ಜಿಲ್ಲೆಗಾಗಿ ನಾವೆಲ್ಲಾ ಒಂದಾಗುವ ಅವಶ್ಯಕತೆ ಇದೆ. ನಮ್ಮ ಒಗ್ಗಟ್ಟಿನಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರಬಾರದು. ಈ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಹೋರಾಟ ಅವಶ್ಯಕ. ಸ್ವಾಮಿಜಿಗಳ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರೋಣ ಎಂದಿದ್ದಾರೆ.

ಯೋಜನೆ ಜಾರಿಯಾದರೆ ನಮ್ಮ ಪರಿಸ್ಥಿತಿ ಏನು? ಶಾಸಕ ಭಿಮಣ್ಣಾ ನಾಯ್ಕ್ ಪ್ರಶ್ನೆ

ಶಿರಸಿ ಶಾಸಕ ಭಿಮಣ್ಣಾ ನಾಯ್ಕ್ ಮಾತನಾಡಿದ್ದು, ಇಡಿ ರಾಜ್ಯಕ್ಕೆ ಜಲ ಶಕ್ತಿ, ವಿದ್ಯುತ್ ಶಕ್ತಿ ನೀಡುವ ಜಿಲ್ಲೆ ನಮ್ಮದು. ನಮ್ಮ ಜಿಲ್ಲೆಯ ಸುಂದರ ಪರಿಸರ ತ್ಯಾಗ ಮಾಡಿದ್ದೇವೆ. ನೌಕಾನೆಲೆ ಹಾಗೂ ಕೈಗಾ ಯೋಜನೆಗೆ ಅನೇಕ ಹಳ್ಳಿಗಳ ಜನ ಮನೆ ಜಮೀನು ಕಳೆದುಕೊಂಡಿದ್ದಾರೆ. ನಿರಂತರವಾಗಿ ಯೋಜನೆ ಹೆಸರಿನಲ್ಲಿ ನಮ್ಮ ಮೇಲೆ ಅನ್ಯಾಯ ಆಗುತ್ತಿದೆ. ತಜ್ಞರು ಮತ್ತು ಪರಿಸರವಾದಿಗಳು ನೀಡಿರುವ ಸಲಹೆ ಮೇರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಆದರೆ ಈ ಯೋಜನೆ ಜಾರಿಗೆ ಬಂದರೆ ನಮ್ಮ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?: ಪ್ರಮುಖ 11 ಕಾರಣ ಇಲ್ಲಿವೆ

ಕೇಂದ್ರ ಇರಬಹುದು, ರಾಜ್ಯ ಇರಬಹುದು ಸ್ಥಳಿಯರ ಕೂಗು ಕೇಳಬೇಕು. ಸ್ಥಳಿಯರ ಅನುಭವಿಸುತ್ತಿರುವ ಸಮಸ್ಯೆಗಳನ್ನ ಕೇಳಬೇಕು. ಪ್ರಕೃತಿ ವಿಕೋಪದಿಂದ ಜಿಲ್ಲೆಯ ಅನ್ನದಾತ ಸಂಕಷ್ಟದಲ್ಲಿದ್ದಾನೆ. ಸಾಲ ಮನ್ನಾ ಮಾಡುವಂತೆ ನಾವು ಮನವಿ ಕೊಡುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಈ ಯೋಜನೆ ಬೇಕಾ? ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಗೆ ತರಬಾರದು. ಸ್ವಾಮೀಜಿಯವರ ನೆತೃತ್ವದಲ್ಲಿ ನಾವು ಒಗ್ಗಟ್ಟಾಗಿ ಈ ಯೋಜನೆ ಖಂಡಿಸೋಣ, ಜಿಲ್ಲೆಯ ಜನಪ್ರತಿನಿಧಿಗಳು ಸ್ವಾಮೀಜಿಯವರ ಜೊತೆಗೆ ಇದ್ದೇವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ – Kannada News | India is the fastest growing economy, says PM Narendra Modi at Vibrant Gujarat

ರಾಜಕೋಟ್, ಜನವರಿ 11: ದೊಡ್ಡ ದೊಡ್ಡ ಸುಧಾರಣೆಗಳನ್ನು ತರುವ ಮೂಲಕ ವಿಕಸಿತ ಭಾರತದ ಗುರಿಯತ್ತ ದೇಶ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೈಬ್ರೆಂಟ್ ಗುಜರಾತ್ (Vibrant Gujarat) ಸಮಾವೇಶದ ಭಾಗವಾಗಿ ರಾಜಕೋಟ್​ನಲ್ಲಿ ಟ್ರೇಡ್ ಶೋ ಉದ್ಘಾಟಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ (Narendra Modi), ಭಾರತ ಬಹಳ ವೇಗವಾಗಿ ಮುಂದುವರಿದ ದೇಶವಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕಳೆದ 11 ವರ್ಷದಲ್ಲಿ ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ಬಳಕೆದಾರ ದೇಶವಾಗಿತ್ತು. ಈಗ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವೆನಿಸಿದೆ’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಶೇ 4.4ರ ವಿತ್ತೀಯ ಕೊರತೆ ಗುರಿ ಮುಟ್ಟುವುದು ಸರ್ಕಾರಕ್ಕೆ ಸಲೀಸು: ಏಜೆನ್ಸಿ ವರದಿ

‘ಭಾರತ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿದೆ. ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆ ಹೊಂದಿದೆ. ವಿಶ್ವದ ಮೂರು ಅತಿದೊಡ್ಡ ಮೆಟ್​ರೋ ರೈಲು ನೆಟ್ವರ್ಕ್​ಗಳಲ್ಲಿ ಒಂದೆನಿಸಿದೆ’ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್​ನ ಮಾಜಿ ಮುಖ್ಯಮಂತ್ರಿಯೂ ಆದ ನರೇಂದ್ರ ಮೋದಿ ಅವರು ಭಾರತದ ಬೆಳವಣಿಗೆಯಲ್ಲಿ ಗುಜರಾತ್ ಕೊಡುಗೆ ಹೆಚ್ಚುತ್ತಿರುವುದನ್ನು ಗುರುತಿಸಿದ್ದಾರೆ.

‘ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಧಾವಿಸುತ್ತಿದೆ. ಈ ಪ್ರಯಾಣದಲ್ಲಿ ಗುಜರಾತ್ ಪ್ರಮುಖ ಪಾತ್ರ ವಹಿಸಿದೆ. ದೇಶ ವಿದೇಶಗಳ ಹೂಡಿಕೆದಾರರಿಗೆ ಪ್ರಮುಖ ಬೆಳವಣಿಗೆ ಎಂಜಿನ್ ಆಗಿ ಗುಜರಾತ್ ಹೊಮ್ಮಿದೆ. ಎಂಎಸ್​ಎಂಇಗಳಿಂದ ಹಿಡಿದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳವರೆಗೆ ಎಲ್ಲರೂ ಗುಜರಾತ್ ಜೊತೆ ಬೆಳೆಯುತ್ತಿದ್ದಾರೆ’ ಎಂದು ಪಿಎಂ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು

ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಮೊದಲಾದ ವಿವಿಧ ಉದ್ಯಮಿಗಳು ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರ ದೂರದೃಷ್ಟಿಯು ಮುಂದಿನ 50 ವರ್ಷಗಳಿಗೆ ಭಾರತಕ್ಕೆ ದಾರಿ ಹಾಕಿದೆ. ದೇಶದ ಸ್ವಾಭಿಮಾನ ಮರಳಿ ಪಡೆಯುವಂತೆ ಮಾಡಿದೆ. ಭಾರತದ ಇತಿಹಾಸದಲ್ಲಿ ಯಾವತ್ತೂ ಇಷ್ಟು ಆತ್ಮವಿಶ್ವಾಸ, ಭರವಸೆ ಇದ್ದಿದ್ದನ್ನು ನಾವು ಕಂಡಿಲ್ಲ’ ಎಂದು ರಿಲಾಯನ್ಸ್ ಇಂಡಸ್ಟ್ರೀಸ್​ನ ಛೇರ್ಮನ್ ಆದ ಅಂಬಾನಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎಚ್ಐವಿ , ಟಿಬಿ ರೋಗಿಗಳಿಗೆ ಗುಡ್​​​ ನ್ಯೂಸ್: ಸ್ಮಾರ್ಟ್ ಮಾತ್ರೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು – Kannada News | Digital Pills: MIT’s Biodegradable Chip Tracks Drug Delivery in Stomach

ಜಗತ್ತಿನಲ್ಲಿ ವಿಜ್ಞಾನ ಎಷ್ಟು ಮುಂದುವರಿದೆ ಎಂದರೆ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಗ್ಯಾಜೆಟ್‌ಗಳಲ್ಲಿ ಚಿಪ್‌ಗಳನ್ನು ಅಳವಡಿಸುವ ರೀತಿ ಮಾತ್ರೆಗಳಿಗೂ ಚಿಪ್‌ ಅಳವಡಿಸುವ ಹೊಸ ತಂತ್ರವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಮಾತ್ರೆ ಹೊಟ್ಟೆಗೆ ಹೋದ ತಕ್ಷಣ ದೀರ್ಘಕಾಲದವರೆಗೆ ಮಾತನಾಡ ವ್ಯಕ್ತಿ ಮಾತನಾಡುತ್ತಾನೆ ಎಂದು ಹೇಳಲಾಗಿದೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸಂಶೋಧಕರು ಈ ಮಾತ್ರೆಯನ್ನು ಅಭಿವೃದ್ಧಿಪಡಿಸಿದ್ದಾರೆ. ವರದಿಯ ಪ್ರಕಾರ, ಹೊಟ್ಟೆಗೆ ಪ್ರವೇಶಿಸಿದ ನಂತರ, ಮಾತ್ರೆ ಕರಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ. ಅನಾರೋಗ್ಯದಿಂದಾಗಿ ದೀರ್ಘಕಾಲದವರೆಗೆ ಔಷಧಿ ತೆಗೆದುಕೊಳ್ಳಬೇಕಾದ ರೋಗಿಗಳಿಗೆ ಈ ತಂತ್ರಜ್ಞಾನ ಸಹಾಯಕವಾಗಬಹುದು ಎಂದು ಹೇಳಲಾಗಿದೆ. MIT ನ್ಯೂಸ್ ವರದಿಯ ಪ್ರಕಾರ, ಈ ಮಾತ್ರೆಯು ಚಿಪ್ ತರಹದ ರೇಡಿಯೋ ಫ್ರೀಕ್ವೆನ್ಸಿ ಆಂಟೆನಾವನ್ನು ಹೊಂದಿದೆ. ಇದು ಜೈವಿಕ ವಿಘಟನೀಯವಾಗಿದೆ.

ಈ ಮಾತ್ರೆ ಹೊಟ್ಟೆಯಲ್ಲಿ ಹೋದ ತಕ್ಷಣ ವೈದ್ಯರು ನೀಡಿದ ಮಾತ್ರೆಗಳು ಕರಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ. ತನ್ನ ಕೆಲಸವನ್ನು ಮಾಡಿದ ನಂತರ, ಆಂಟೆನಾ ಅಥವಾ ಚಿಪ್ ದೇಹದಿಂದ ನಿರ್ಗಮಿಸುತ್ತದೆ. ಈ ರೀತಿಯ ಮಾತ್ರೆ ಕಸಿ ಮಾಡಿಸಿಕೊಂಡವರಿಗೆ ಪ್ರಯೋಜನಕಾರಿಯಾಗಲಿದೆ ಎಂದು ವರದಿ ಹೇಳುತ್ತದೆ. ಅಂತಹ ರೋಗಿಗಳು ದೀರ್ಘಕಾಲದವರೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಎಚ್ಐವಿ ಮತ್ತು ಟಿಬಿ ರೋಗಿಗಳಿಗೆ ಈ ಮಾತ್ರೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಲಾಗಿದೆ. ಈ ಮಾತ್ರೆಯನ್ನು ಕೆಲವೊಂದು ಕ್ಯಾಪ್ಸುಲ್‌ಗೆ ಸೇರಿಸಿದ ನಂತರ ಇದನ್ನು ನುಂಗಲು ನೀಡಲಾಗುತ್ತದೆ. ಇದು ಔಷಧಿಯೊಂದಿಗೆ ಕೆಲಸ ಮಾಡುತ್ತದೆ ಮತ್ತು ಹೊಟ್ಟೆಯೊಳಗೆ ಒಮ್ಮೆ ಅದರ ಆಂಟೆನಾ ರೋಗಿಯೊಂದಿಗೆ ಸಂವಹನ ನಡೆಸಲು ಸಕ್ರಿಯಗೊಳ್ಳುತ್ತದೆ.

ಇದನ್ನೂ ಓದಿ: ಹೃದಯ ಚೆನ್ನಾಗಿರಬೇಕು ಅಂದ್ರೆ ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ 3 ಆಹಾರಗಳನ್ನು ಸೇವಿಸಬೇಡಿ

ಜನರು ತಮ್ಮ ಆರೋಗ್ಯವನ್ನು ಸುಧಾರಿಸಲು ಅಗತ್ಯವಿರುವ ಚಿಕಿತ್ಸೆಯನ್ನು ಪಡೆಯುವುದು ಈ ಸಂಶೋಧನೆಯ ಮುಖ್ಯ ಗುರಿಯಾಗಿದೆ ಎಂದು MIT ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಬ್ರಿಗ್ಯಾಮ್ ಮತ್ತು ಮಹಿಳಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಜಿಯೋವಾನಿ ಟ್ರಾವೆರ್ಸೊ ಹೇಳಿದ್ದಾರೆ. ಸಂಶೋಧಕರು ಕೆಲವು ಸತುವನ್ನು ಬಳಸಿ ಮಾತ್ರೆ ರಚಿಸಿದ್ದಾರೆ. ಹೊಟ್ಟೆಗೆ ಹೋದ ನಂತರ ಮಾತ್ರೆಯ ಹೊರ ಭಾಗ ಕರಗುತ್ತದೆ ಮತ್ತು ಚಿಪ್ ಹೊಟ್ಟೆಯಲ್ಲಿ ಇರುತ್ತದೆ. ಇದರಿಂದ ದಿರ್ಘಾಕಾಲದವರೆಗೆ ಮಾತನಾಡದ ರೋಗಿಯೊಂದಿಗೆ ಸಂವಹನ ನಡೆಸಲು ಪ್ರಾರಂಭಿಸುತ್ತದೆ. ನುಂಗಿದ 10 ನಿಮಿಷಗಳ ನಂತರ ರೋಗಿ ಮತ್ತು ಮಾತ್ರೆ ನಡುವಿನ ಕೆಲಸ ಮಾಡಲು ಶುರು ಮಾಡುತ್ತದೆ. ಇದು ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಮೂರು ಲಕ್ಷಣಗಳು ಕಂಡು ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ; ಇದು ಥೈರಾಯ್ಡ್ ಸಮಸ್ಯೆ ಬರುವ ಮುನ್ಸೂಚನೆಯಾಗಿರಬಹುದು – Kannada News | Symptoms of Thyroid Problems in Females

ಇತ್ತೀಚಿನ ದಿನಗಳಲ್ಲಿ, ಮಹಿಳೆಯರಲ್ಲಿ ಥೈರಾಯ್ಡ್ (Thyroid) ಸಮಸ್ಯೆ ವೇಗವಾಗಿ ಹೆಚ್ಚುತ್ತಿವೆ. ಜಾಗತಿಕವಾಗಿ, ಪುರುಷರಿಗಿಂತ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ನಿಮಗೆ ತಿಳಿದಿರಬಹುದು, ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸುವ ಕುತ್ತಿಗೆಯಲ್ಲಿರುವ ಒಂದು ಸಣ್ಣ ಗ್ರಂಥಿ. ಇದು ದೇಹದ ಚಯಾಪಚಯ, ಶಕ್ತಿ ಮತ್ತು ಹಾರ್ಮೋನ್ ಸಮತೋಲನಕ್ಕೆ ಅತ್ಯಗತ್ಯ. ಆದರೆ ನಾವು ಜೀವನಶೈಲಿಯಲ್ಲಿ ಮಾಡಿಕೊಂಡಂತಹ ಬದಲಾವಣೆ, ಕಳಪೆ ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡ ಥೈರಾಯ್ಡ್ ಸಮಸ್ಯೆಗಳಿಗೆ ಪ್ರಮುಖ ಕಾರಣಗಳೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಸಮಯಕ್ಕೆ ಸರಿಯಾಗಿ ಪತ್ತೆಯಾಗದಿದ್ದರೆ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಅದರ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಮತ್ತು ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡುವುದು ಬಹಳ ಮುಖ್ಯ. ಹಾಗಾದರೆ ಈ ಆರೋಗ್ಯ ಸಮಸ್ಯೆಯ ಆರಂಭಿಕ ಲಕ್ಷಣ ಹೇಗಿರುತ್ತದೆ, ಯಾವಾಗ ವೈದ್ಯರ ಸಲಹೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಿ.

ಥೈರಾಯ್ಡ್‌ನ 3 ಆರಂಭಿಕ ಲಕ್ಷಣಗಳು:

ಹಠಾತ್ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು: ತೂಕದಲ್ಲಿ ಕಂಡುಬರುವ ಅಸಹಜ ಬದಲಾವಣೆಗಳು ಥೈರಾಯ್ಡ್‌ ಬರುವ ಮುನ್ಸೂಚನೆಯಾಗಿರಬಹುದು. ಆದರೆ ಸಾಮಾನ್ಯವಾಗಿ ಈ ರೋಗಲಕ್ಷಣವನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ, ಆದರೆ ಸಮಯಕ್ಕೆ ಸರಿಯಾಗಿ ಈ ಲಕ್ಷಣವನ್ನು ಗುರುತಿಸುವುದು ಬಹಳ ಮುಖ್ಯವಾಗುತ್ತದೆ.

ಆಯಾಸ ಮತ್ತು ದೌರ್ಬಲ್ಯ: ನಿದ್ರೆ ಸರಿಯಾಗಿ ಆಗಿದ್ದರೂ ಕೂಡ ನಿರಂತರವಾಗಿ ದಣಿದ ಭಾವನೆ ದೇಹದ ಶಕ್ತಿ ಕಡಿಮೆ ಆದಂತೆ ಅನಿಸುವುದು ಥೈರಾಯ್ಡ್‌ನ ಆರಂಭಿಕ ಲಕ್ಷಣಗಳಾಗಿವೆ. ಇದು ದೈನಂದಿನ ದಿನಚರಿ ಮತ್ತು ಕೆಲಸದ ಮೇಲೆ ಪರಿಣಾಮ ಬೀರುತ್ತದೆ.

ಕೂದಲು ಮತ್ತು ಚರ್ಮದಲ್ಲಿನ ಬದಲಾವಣೆಗಳು: ಕೂದಲು ಉದುರುವುದು, ಸುಕ್ಕುಗಳು ಅಥವಾ ಒಣ ಚರ್ಮವು ಥೈರಾಯ್ಡ್‌ನ ಆರಂಭಿಕ ಲಕ್ಷಣಗಳಾಗಿರಬಹುದು. ಕೆಲವರಲ್ಲಿ ಚರ್ಮದ ಬಣ್ಣ ಮಾಸುವುದು ಮತ್ತು ಉಗುರುಗಳು ಪದೇ ಪದೇ ಕಟ್ಟಾಗುವುದು ಸಹ ಕಂಡುಬರಬಹುದು.

ಈ ಮೂರು ಲಕ್ಷಣಗಳನ್ನು ಹಗುರವಾಗಿ ಪರಿಗಣಿಸಬೇಡಿ. ಸಮಯಕ್ಕೆ ಸರಿಯಾಗಿ ಗುರುತಿಸಿ ವೈದ್ಯರನ್ನು ಸಂಪರ್ಕಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಮತ್ತು ಥೈರಾಯ್ಡ್ ಚಿಕಿತ್ಸೆಯನ್ನು ಸುಲಭಗೊಳಿಸಬಹುದು.

ಇದನ್ನೂ ಓದಿ: ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ

ಥೈರಾಯ್ಡ್ ಸಮಸ್ಯೆಗೆ ಅಪಾಯಕಾರಿಯಾಗುವ ಅಂಶಗಳು:

ಮಹಿಳೆಯರಲ್ಲಿ ಥೈರಾಯ್ಡ್ ಕಾಯಿಲೆ ಬರಲು ಹಲವಾರು ಅಪಾಯಕಾರಿ ಅಂಶಗಳಿವೆ. ಕುಟುಂಬದ ಇತಿಹಾಸದಲ್ಲಿ ಥೈರಾಯ್ಡ್ ಸಮಸ್ಯೆಗಳು ಮತ್ತು ಅಯೋಡಿನ್ ಕೊರತೆ ಇರುವುದು ಸಾಮಾನ್ಯ ಕಾರಣಗಳಾಗಿವೆ. ಅದರಲ್ಲಿಯೂ ಗರ್ಭಾವಸ್ಥೆಯಲ್ಲಿ ಅಥವಾ ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಥೈರಾಯ್ಡ್ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸಬಹುದು. ಮಾನಸಿಕ ಒತ್ತಡ, ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಹಲವಾರು ಬದಲಾವಣೆಗಳು ಸಹ ಪರಿಣಾಮ ಬೀರುತ್ತವೆ. ಪುರುಷರಿಗಿಂತ ಮಹಿಳೆಯರಲ್ಲಿ ಥೈರಾಯ್ಡ್ ಹೆಚ್ಚಾಗಿ ಕಂಡುಬರುತ್ತದೆ, ಹಾಗಾಗಿ ಅವರು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ? – Kannada News | Big Twist TO Gadag Ancient treasure : gold unearthed in historic Lakkundi village draws statewide attention

ಗದಗ, (ಜನವರಿ 11): ರಾಜ ಮಹರಾಜರು ಆಳಿದ ಗದಗದ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಎಂಬುವವರ ಮನೆ ಜಾಗದಲ್ಲಿ ಮನೆ ಕಟ್ಟಲು ಪಾಯ ಆಗೆಯುವಾಗ ತಂಬಿಗೆಯಲ್ಲಿ ತುಂಬಿಡಲಾಗಿದ್ದ ನಿಧಿ ಪತ್ತೆಯಾಗಿದೆ. ಸುಮಾರು 466 ಗ್ರಾಂ ಚಿನ್ನಾಭರಣ ಪತ್ತೆಯಾಗಿದ್ದು, ಕುಟುಂಬವದರು ಜಿಲ್ಲಾಡಳಿತಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಚಿನ್ನ ಪತ್ತೆಯಾದ ಲಕ್ಕುಂಡಿ ಗ್ರಾಮಕ್ಕೆ ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ್ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯನವರೇ ಮಾಹಿತಿ ಪಡೆದು ಚಿನ್ನ ರಕ್ಷಿಸುವಂತೆ ಸೂಚನೆ ನೀಡಿದ್ರು. ಹೀಗಾಗಿ ಜಿಲ್ಲಾಡಳಿತ ಚಿನ್ನ ರಕ್ಷಿಸಿದೆ. ಸದ್ಯ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನಾಭರಣ 11 ಅಥವಾ 12ನೇ ಶತಮಾನದ ಚಿನ್ನಾಭರಣ ಅಂತಾ ಅಂದಾಜಿಸಲಾಗಿದೆ. ಚಿನ್ನಾಭರಣ ಸ್ವರೂಪ ನೋಡಿದ್ರೆ ಸಾಮಾನ್ಯ ಕುಟುಂಬಕ್ಕೆ ಸೇರಿದ್ದು ಎಂದು ಸಂಶೋಧಕರು ಹೇಳ್ತಿದ್ದಾರೆ. ಇನ್ನು ಈ ಬಗ್ಗೆ ಧಾರವಾಡದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕ ರಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿದ್ದು ನಿಧಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಗ್ರಾಮಸ್ಥರು ಆ ಚಿನ್ನವನ್ನು ನಮಗೆ ಕೊಡಿ ಎಂದು ಪಟ್ಟು ಹಿಡಿದ್ದಾರೆ. ಅದು ನಮ್ಮ ಪುರ್ವಜರು ಇಟ್ಟಿದ್ದ ಚಿನ್ನ . ಹೀಗಾಗಿ ನಮ್ಮ ಚಿನ್ನ ನಮಗೆ ಕೊಡಿ ಎಂದ ಕುಟುಂಬಸ್ಥರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿಕ್ಕ ನಿಧಿಯನ್ನು ಸರ್ಕಾರಕ್ಕೊಪ್ಪಿಸಿ ಈಗ ವಾಪಸ್ ಕೇಳುತ್ತಿರುವುದೇಕೆ ಕುಟುಂಬ?

Source link

ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ? – Kannada News | Benefits of eating one Indian gooseberry every day

ನೆಲ್ಲಿಕಾಯಿಯ ಪ್ರಯೋಜನಗಳುImage Credit source: Pinterest

ಹೇರಳ ಪೋಷಕಾಂಶಗಳು, ಔಷಧೀಯ ಗುಣಗಳನ್ನು ಹೊಂದಿರುವ ನೆಲ್ಲಿಕಾಯಿಯನ್ನು (gooseberry) ಆಯುರ್ವೇದ ಔಷಧಗಳಲ್ಲಿ ಅಮೃತವೆಂದು ಪರಿಗಣಿಸಲಾಗುತ್ತದೆ. ಹೌದು ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ, ಟ್ಯಾನಿನ್‌, ರಂಜಕ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ದಿನಕ್ಕೊಂದರಂತೆ ಹಿತಮಿತವಾಗಿ ನೆಲ್ಲಿಕಾಯಿಯನ್ನು ಸೇವನೆ ಮಾಡುವ ಮೂಲಕ ಸಾಕಷ್ಟು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗಿದ್ರೆ ನೆಲ್ಲಿಕಾಯಿ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನೆಲ್ಲಿಕಾಯಿಯ ಆರೋಗ್ಯ ಪ್ರಯೋಜನಗಳೇನು?

ರೋಗನಿರೋಧಕ ಶಕ್ತಿಯ ಹೆಚ್ಚಳ: ಕಿತ್ತಳೆಗಿಂತ ಹಲವು ಪಟ್ಟು ಹೆಚ್ಚು ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇದೆ. ಖಾಲಿ ಹೊಟ್ಟೆಯಲ್ಲಿ ಒಂದು ನೆಲ್ಲಿಕಾಯಿಯನ್ನು ಸೇವಿಸಿದಾಗ, ದೇಹವು ಅದನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುವ ಶೀತ, ಕೆಮ್ಮು ಮತ್ತು ಜ್ವರಕ್ಕೆ ಕಡಿಮೆ ಒಳಗಾಗುವಂತೆ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ನೀವು ಆಗಾಗ್ಗೆ ಗ್ಯಾಸ್, ಮಲಬದ್ಧತೆ ಅಥವಾ ಆಮ್ಲೀಯತೆಯಿಂದ ಬಳಲುತ್ತಿದ್ದರೆ ಪ್ರತಿನಿತ್ಯ ಒಂದು ನೆಲ್ಲಿಕಾಯಿಯನ್ನು ಸೇವನೆ ಮಾಡಿ. ಫೈಬರ್‌ನಿಂದ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ  ಹೊಟ್ಟೆ ಮತ್ತು ಕರುಳುಗಳು ಶುದ್ಧವಾಗುತ್ತವೆ. ಅಲ್ಲದೆ ಇದು  ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಇದರಿಂದ ನೀವು ದಿನವಿಡೀ ಏನು ತಿಂದರೂ ಅದು ಸುಲಭವಾಗಿ ಜೀರ್ಣವಾಗುತ್ತದೆ.

ತೂಕ ಇಳಿಕೆಗೆ ಸಹಕಾರಿ: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿನಿತ್ಯ ಒಂದು ಎನಲ್ಲಿಕಾಯಿಯನ್ನು ಸೇವನೆ ಮಾಡಿ. ಅಥವಾ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್‌ ಕೂಡ ಸೇವನೆ ಮಾಡಬಹುದು. ಇದು ಚಯಾಪಚಯಕ್ರಿಯೆಯನ್ನು ಹೆಚ್ಚಿಸುತ್ತದೆ, ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ: ನೆಲ್ಲಿಕಾಯಿ ನೈಸರ್ಗಿಕವಾಗಿ ರಕ್ತವನ್ನು ಶುದ್ಧೀಕರಿಸುತ್ತದೆ.  ಮೊಡವೆಗಳನ್ನು ಕಡಿಮೆ ಮಾಡುತ್ತದೆ ಮತ್ತು  ಇದರ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಸದಾ ಯೌವ್ವನದಿಂದ ಇಡುತ್ತವೆ ಮತ್ತು ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತವೆ. ಹಾಗಾಗಿ ಪ್ರತಿನಿತ್ಯ ಒಂದು ನೆಲ್ಲಿಕಾಯಿ ಸೇವನೆ ಮಾಡಿ.

ಕೂದಲಿಗೆ ಪ್ರಯೋಜನಕಾರಿ: ಆಮ್ಲಾ ವಿಟಮಿನ್ ಸಿ ಯ ನಿಧಿಯಾಗಿದ್ದು, ನಮ್ಮ ದೇಹದಲ್ಲಿ ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಾಲಜನ್ ನಮ್ಮ ಚರ್ಮ ಮತ್ತು ಕೂದಲಿಗೆ ಅಗತ್ಯವಾದ ಪ್ರೋಟೀನ್ ಆಗಿದೆ. ಇದು ಕೂದಲನ್ನು ಬೇರಿನಿಂದ ಬಲಪಡಿಸುತ್ತದೆ,  ಕೂದಲು ಉದುರುವುದನ್ನು ಮತ್ತು ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: ಊಟ ಮಾಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಎಷ್ಟು ಡೇಂಜರ್‌ ನೋಡಿ

ದೃಷ್ಟಿ ಸುಧಾರಿಸುತ್ತದೆ: ನೆಲ್ಲಿಕಾಯಿ ಕಣ್ಣುಗಳಿಗೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಎ ಮತ್ತು ಕ್ಯಾರೊಟಿನಾಯ್ಡ್‌ಗಳಿದ್ದು, ಇದು ರೆಟಿನಾದ ಆರೋಗ್ಯಕ್ಕೆ ಅತ್ಯಗತ್ಯ. ನಿಯಮಿತವಾಗಿ ನೆಲ್ಲಿಕಾಯಿ ಸೇವಿಸುವುದರಿಂದ ಕಣ್ಣಿನ ಪೊರೆಗಳಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ದೃಷ್ಟಿ ಸುಧಾರಿಸಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ:  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ನೆಲ್ಲಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ,  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ನಿಯಮಿತವಾಗಿ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ ಮತ್ತು ಇದು ಅಪಧಮನಿಗಳಲ್ಲಿ ಪ್ಲೇಕ್‌ ನಿರ್ಮಾಣದ ಅಪಾಯವನ್ನು ಕಡಿಮೆ ಮಾಡುತ್ತದೆ, ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್: ಅದು ನಮ್ಮ ಬಂಗಾರ ವಾಪಸ್​ ನೀಡಿ – Kannada News | Archaeological Department Declares Gadag Gold Not Ancient Treasure, Family Seeks Ownership

ಗದಗ, ಜ.11: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆಯ ಅಡಿಪಾಯ ಹಾಕುವಾಗ ದೊರೆತ ಚಿನ್ನದ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ಆರಂಭದಲ್ಲಿ, ಇದು ನಿಧಿ ಎಂದು ಪರಿಗಣಿಸಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಲಾಗಿತ್ತು. ಆದರೆ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಇದು ನಿಧಿ ಅಲ್ಲ, ಬದಲಿಗೆ ಕುಟುಂಬದ ಹಿರಿಯರು ತಮ್ಮ ಮನೆಯಲ್ಲೇ ಇಟ್ಟಿದ್ದ ಬಂಗಾರ ಎಂದು ಸ್ಪಷ್ಟಪಡಿಸಿದ್ದಾರೆ. ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಮೂಲಿಮನಿ ಅವರು, ಪತ್ತೆಯಾದ ಚಿನ್ನವು ಪ್ರಾಚೀನ ನಿಧಿಯ ವರ್ಗಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಯು ಇಡೀ ಗ್ರಾಮಸ್ಥರು ಮತ್ತು ಚಿನ್ನ ಸಿಕ್ಕ ಕುಟುಂಬದ ಮನಸ್ಥಿತಿಯನ್ನು ಬದಲಾಯಿಸಿದೆ. ಅಧಿಕಾರಿಗಳ ಸ್ಪಷ್ಟನೆ ಬೆನ್ನಲ್ಲೇ, ಇದು ನಿಧಿ ಅಲ್ಲದಿದ್ದರೆ, ನಮ್ಮದೇ ಆದ ಚಿನ್ನವನ್ನು ನಮಗೆ ವಾಪಸ್ ಕೊಡಿ ಎಂದು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಈಗ ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಮೊದಲಿಗೆ ಸರ್ಕಾರಕ್ಕೆ ಒಪ್ಪಿಸಲು ಸಮ್ಮತಿಸಿದ್ದ ಕುಟುಂಬ, ಈಗ ಚಿನ್ನದ ಮರುಪಡೆಯುವಿಕೆಗೆ ಪಟ್ಟು ಹಿಡಿದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಸ್ಪರ್ಧೆ ತಪ್ಪಿಸಿಕೊಂಡ ‘ಪರಾಶಕ್ತಿ’ಗೆ ಆರಂಭಿಕ ಗೆಲುವು – Kannada News | Sivakarthikeyan starrer Parasakthi movie collection day 1 report

ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜನವರಿ 09ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿ ಕಾರಣಗಳಿಂದಾಗಿ ಸಿನಿಮಾ ಬಿಡುಗಡೆ ಆಗಲಿಲ್ಲ. ಅದರ ಮರುದಿನ ಅಂದರೆ ಜನವರಿ 10 ರಂದು ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಯ್ತು. ಶಿವಕಾರ್ತಿಕೇಯನ್, ಜಯಂ ರವಿ ಮತ್ತು ಕನ್ನಡತಿ ಶ್ರೀಲೀಲಾ ನಟಿಸಿರುವ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಸುಧಾ ಕೊಂಗರ. ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ನಡೆದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ನಿನ್ನೆ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನದ ಕಲೆಕ್ಷನ್ ಉತ್ತಮವಾಗಿಯೇ ಇದೆ.

‘ಜನ ನಾಯಗನ್’ ಸಿನಿಮಾದ ಸ್ಪರ್ಧೆಯನ್ನು ಅದೃಷ್ಟವಶಾತ್ ತಪ್ಪಿಸಿಕೊಂಡಿರುವ ‘ಪರಾಶಕ್ತಿ’ ಸಿನಿಮಾಕ್ಕೆ ತಮಿಳುನಾಡು ಮಾತ್ರವೇ ಅಲ್ಲದೆ, ಕರ್ನಾಟಕ, ಕೇರಳದಲ್ಲಿಯೂ ಚಿತ್ರಮಂದಿರಗಳು ಸಿಕ್ಕಿದ್ದು, ಪ್ರೇಕ್ಷಕರು ಸಹ ಆಸಕ್ತಿವಹಿಸಿ ನೋಡಿದ್ದಾರೆ. ಇದೇ ಕಾರಣಕ್ಕೆ ‘ಪರಾಶಕ್ತಿ’ ಸಿನಿಮಾದ ಮೊದಲ ದಿನದ ಕಲೆಕ್ಷನ್ 14 ಕೋಟಿಗೂ ಹೆಚ್ಚಾಗಿದೆ. ಇನ್ನು ವಿಶ್ವ ಬಾಕ್ಸ್ ಆಫೀಸ್​ ಕಲೆಕ್ಷನ್ ಮೊದಲ ದಿನ 24 ಕೋಟಿಗೂ ಹೆಚ್ಚಾಗಿದೆ. ಶಿವಕಾರ್ತಿಕೇಯನ್ ಸಿನಿಮಾ ಒಂದು ಮೊದಲ ದಿನ ಇಷ್ಟು ದೊಡ್ಡ ಗಳಿಕೆ ಮಾಡಿರುವುದು ಇದೇ ಮೊದಲು.

ಇದನ್ನೂ ಓದಿ:ಸುಖಾಂತ್ಯವಾಯ್ತು ‘ಜನ ನಾಯಗನ್’ ವಿವಾದ, ‘ಪರಾಶಕ್ತಿ’ ಕತೆ ಏನಾಯ್ತು?

‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿದ್ದಿದ್ದರೆ ‘ಪರಾಶಕ್ತಿ’ ಸಿನಿಮಾದ ಕಲೆಕ್ಷನ್ ಇಷ್ಟು ದೊಡ್ಡದಾಗಿರುತ್ತಿರುತ್ತಿರಲಿಲ್ಲ ಎಂಬುದು ಖಾತ್ರಿ. ಆದರೆ ಚಿತ್ರತಂಡದ ಅದೃಷ್ಟವೋ, ಉದ್ದೇಶಪೂರ್ವಕ ಯೋಜನೆಯೋ ಒಟ್ಟಾರೆ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿಲ್ಲ. ಅದರ ಲಾಭ ‘ಪರಾಶಕ್ತಿ’ ಸಿನಿಮಾಕ್ಕೆ ಆಗಿದೆ. ಮೊದಲ ದಿನ ಭಾರತ ಸೇರಿದಂತೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 24 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ.

‘ಪರಾಶಕ್ತಿ’ ಸಿನಿಮಾ ರಾಜಕೀಯ ವಿಷಯ ವಸ್ತುವುಳ್ಳ ಸಿನಿಮಾ ಆಗಿದೆ. ತಮಿಳುನಾಡಿನಲ್ಲಿ ದಶಕಗಳ ಹಿಂದೆ ನಡೆದ ಹಿಂದಿ ವಿರುದ್ಧ ಹೋರಾಟದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಶಿವಕಾರ್ತಿಕೇಯನ್ ನಾಯಕ, ಶ್ರೀಲೀಲಾ ನಾಯಕಿ. ಜಯಂ ರವಿ ಇದೇ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ದಿನ ಸಿನಿಮಾ ನೋಡಿದ ಮಂದಿ ಮಿಶ್ರ ಪ್ರತಿಕ್ರಿಯೆಗಳನ್ನು ಸಿನಿಮಾ ಬಗ್ಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಚಿತ್ರಕತೆ ಇನ್ನಷ್ಟು ಗಟ್ಟಿಯಾಗಿ ಇರಬೇಕಿತ್ತು ಎಂದಿದ್ದಾರೆ. ಕೆಲವು ಉತ್ತರ ಭಾರತೀಯರು ಸಹ ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದು, ‘ಪರಾಶಕ್ತಿ’ ಸಿನಿಮಾ, ಉತ್ತರ ಭಾರತದವರ ಬಗ್ಗೆ ದ್ವೇಷವನ್ನು ಪಸರಿಸುತ್ತಿದೆ ಎಂದಿದ್ದಾರೆ. ಏನೇ ಆಗಲಿ ಸಿನಿಮಾ ಮೊದಲ ದಿನ ಒಳ್ಳೆಯ ಗಳಿಕೆಯನ್ನು ಮಾಡಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಭಾರತದ ನೆಲದಲ್ಲಿ 27 ವರ್ಷಗಳ ಹಳೆಯ ದಾಖಲೆ ಮುರಿದ ಕಿವೀಸ್ ಆರಂಭಿಕರು – Kannada News | India vs NZ ODI: Conway Nicholls Break 27 Year Record Century Stand

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಶುಭ್​ಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ 27 ವರ್ಷಗಳಲ್ಲಿ ಭಾರತದ ವಿರುದ್ಧ ಮಾಡಲಾಗದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

27 ವರ್ಷಗಳ ನಂತರ ದಾಖಲೆ ನಿರ್ಮಾಣ

ಈ ಪಂದ್ಯದಲ್ಲಿ, ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ನೀಡಿದರು. ಇವರಿಬ್ಬರ ಜೊತೆಯಾಟವನ್ನು ಮುರಿಯಲು ಟೀಂ ಇಂಡಿಯಾಕ್ಕೆ 21.4 ಓವರ್‌ಗಳು ಬೇಕಾದವು. ಈ ಸಮಯದಲ್ಲಿ, ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ಮೊದಲ ವಿಕೆಟ್‌ಗೆ 117 ರನ್‌ ಕಲೆಹಾಕಿದರು. ಇದು 27 ವರ್ಷಗಳ ನಂತರ ಭಾರತದಲ್ಲಿ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಕಿವೀಸ್ ದಾಖಲಿಸಿದ ಮೊದಲ ಶತಕದ ಪಾಲುದಾರಿಕೆಯಾಗಿದೆ. ಇದಕ್ಕೂ ಮೊದಲು 1999 ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ನಾಥನ್ ಆಸ್ಟಲ್ ಮತ್ತು ಕ್ರೇಗ್ ಸ್ಪಿಯರ್‌ಮ್ಯಾನ್ 115 ರನ್‌ಗಳ ಜೊತೆಯಾಟವನ್ನಾಡಿ ಈ ದಾಖಲೆ ನಿರ್ಮಿಸಿದ್ದರು. ಅಂದಿನಿಂದ, ಭಾರತೀಯ ಬೌಲರ್‌ಗಳು ನ್ಯೂಜಿಲೆಂಡ್ ಆರಂಭಿಕರಿಗೆ ಇಷ್ಟು ದೀರ್ಘ ಪಾಲುದಾರಿಕೆಯನ್ನು ನಿರ್ಮಿಸಲು ಅವಕಾಶ ನೀಡಿರಲಿಲ್ಲ.

ಕಾನ್ವೇ ಮತ್ತು ನಿಕೋಲ್ಸ್ ತಲಾ ಅರ್ಧಶತಕ

ಕಾನ್ವೇ ಮತ್ತು ನಿಕೋಲ್ಸ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರಾದರೂ ಅದನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ನಿಕೋಲ್ಸ್ 69 ಎಸೆತಗಳಲ್ಲಿ ಎಂಟು ಬೌಂಡರಿ ಸೇರಿದಂತೆ 62 ರನ್ ಗಳಿಸಿದರೆ, ಡೆವೊನ್ ಕಾನ್ವೇ 67 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಭಾರತದ ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಎಲ್ಲರೂ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರಾದರೂ ಇವರಿಬ್ಬರ ಶತಕದ ಜೊತೆಯಾಟ ಮುರಿಯಲು ಸಾಧ್ಯವಾಗಲಿಲ್ಲ. ಆದಾಗ್ಯೂ ಆರಂಭದಲ್ಲೇ ಈ ಜೊತೆಯಾಟ ಮುರಿಯುವ ಅವಕಾಶವಿತ್ತು. ಆದರೆ ಭಾರತ ತಂಡ ಎರಡು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ನ್ಯೂಜಿಲೆಂಡ್‌ಗೆ ಲಾಭವಾಯಿತು. ಅಂತಿಮವಾಗಿ ಹರ್ಷಿತ್ ರಾಣಾ, ಹೆನ್ರಿ ನಿಕೋಲ್ಸ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು.

ಉಭಯ ತಂಡಗಳು

ಭಾರತ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್.

ನ್ಯೂಜಿಲೆಂಡ್: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಕ್ರಿಶ್ಚಿಯನ್ ಕ್ಲಾರ್ಕ್, ಮೈಕೆಲ್ ರೇ, ಕೈಲ್ ಜೇಮಿಸನ್, ಆದಿತ್ಯ ಅಶೋಕ್, ಜ್ಯಾಕ್ ಫಾಕ್ಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link