Category Archives: Blog

Your blog category

NPCIL Recruitment 2026: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್‌ನಲ್ಲಿ ನೇಮಕಾತಿ; ತಿಂಗಳಿಗೆ 55,932 ರೂ. ಸಂಬಳ – Kannada News | NPCIL Recruitment 2026: 114 Scientific Assistant and Trainee Jobs Apply Now!

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್‌

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸೈಂಟಿಫಿಕ್ ಅಸಿಸ್ಟೆಂಟ್, ಸ್ಟೈಪೆಂಡಿಯರಿ ಟ್ರೈನಿ, ಅಸಿಸ್ಟೆಂಟ್ ಗ್ರೇಡ್-1 ಇತ್ಯಾದಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 114 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಎಲ್ಲಾ ಹುದ್ದೆಗಳು ಮೆಕ್ಯಾನಿಕಲ್, ಇನ್ಸ್ಟ್ರುಮೆಂಟೇಶನ್, ಎಲೆಕ್ಟ್ರಿಕಲ್, ಹೆಲ್ತ್ ಫಿಸಿಕ್ಸ್, ಎಲೆಕ್ಟ್ರಾನಿಕ್ಸ್, ಪ್ಲಾಂಟ್ ಆಪರೇಟರ್, ಮೆಷಿನಿಸ್ಟ್, ಫಿಟ್ಟರ್, ಟರ್ನರ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ಹುದ್ದೆಗಳಲ್ಲಿ ಖಾಲಿ ಇವೆ. ಅರ್ಹ ಅಭ್ಯರ್ಥಿಗಳು ಜನವರಿ 15 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:

  • ವೈಜ್ಞಾನಿಕ ಸಹಾಯಕ/ಬಿ(ಸಿವಿಲ್) ಹುದ್ದೆಗಳ ಸಂಖ್ಯೆ: 2
  • ಸ್ಟೈಪೆಂಡಿಯರಿ ಟ್ರೈನಿ/ಟೆಕ್ನಿಷಿಯನ್ ಹುದ್ದೆಗಳ ಸಂಖ್ಯೆ: 95
  • ಎಕ್ಸ್-ರೇ ತಂತ್ರಜ್ಞ ಹುದ್ದೆಗಳ ಸಂಖ್ಯೆ: 2
  • ಸಹಾಯಕ ದರ್ಜೆ 1 ಹುದ್ದೆಗಳ ಸಂಖ್ಯೆ: 15

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಐಟಿಐ, ಡಿಪ್ಲೊಮಾ, ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಧಿಸೂಚನೆಯಲ್ಲಿ ಸೂಚಿಸಿದಂತೆ ಅವರು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳ ವಯಸ್ಸಿನ ಮಿತಿ ಫೆಬ್ರವರಿ 4, 2026 ರಂತೆ 18 ರಿಂದ 30 ವರ್ಷಗಳ ನಡುವೆ ಇರಬೇಕು. ಈ ಅರ್ಹತೆಗಳನ್ನು ಹೊಂದಿರುವ ಯಾರಾದರೂ ಫೆಬ್ರವರಿ 4, 2026 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ತಲಾ 150 ರೂ. ಪಾವತಿಸಬೇಕಾಗುತ್ತದೆ. ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳ ಅಂತಿಮ ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೈಜ್ಞಾನಿಕ ಸಹಾಯಕ ಉದ್ಯೋಗಗಳಿಗೆ ಮಾಸಿಕ 55,932 ರೂ., ತಂತ್ರಜ್ಞ ಉದ್ಯೋಗಗಳಿಗೆ 34,286 ರೂ., ಎಕ್ಸ್-ರೇ ತಂತ್ರಜ್ಞ ಉದ್ಯೋಗಗಳಿಗೆ 40,290 ರೂ. ಮತ್ತು ಸಹಾಯಕ ಗ್ರೇಡ್-1 ಉದ್ಯೋಗಗಳಿಗೆ 40,290 ರೂ. ವೇತನವನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೇ 4.4ರ ವಿತ್ತೀಯ ಕೊರತೆ ಗುರಿ ಮುಟ್ಟುವುದು ಸರ್ಕಾರಕ್ಕೆ ಸಲೀಸು: ಏಜೆನ್ಸಿ ವರದಿ – Kannada News | India can achieve 4 4pc fiscal deficit target for this fy says pwc

ನವದೆಹಲಿ, ಜನವರಿ 11: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 4.4ರಷ್ಟು ವಿತ್ತೀಯ ಕೊರತೆಯ (Fiscal Deficit) ಗುರಿಯನ್ನು ಸರ್ಕಾರ ಮುಟ್ಟುವ ಸಾಧ್ಯತೆ ಬಹಳ ಹೆಚ್ಚು ಎಂದು ಪಿಡಬ್ಲ್ಯುಸಿ ಪಾರ್ಟ್ನರ್ ಮತ್ತು ಎಕನಾಮಿಕ್ ಅಡ್ವೈಸರಿ ಸರ್ವಿಸಸ್ ಮುಖಂಡ ರಾನೆನ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಇವರ ಪ್ರಕಾರ ಶೇ. 4.4 ಅಲ್ಲ, ಅದಕ್ಕಿಂತಲೂ ಕಡಿಮೆ ವಿತ್ತೀಯ ಕೊರತೆಯ ಸ್ಥಿತಿಯನ್ನು ಭಾರತ ತಲುಪಬಲ್ಲುದು. ಕಳೆದ ಬಾರಿಯ ಬಜೆಟ್​ನಲ್ಲಿ ಸರ್ಕಾರವು 2025-26ರ ವರ್ಷಕ್ಕೆ ವಿತ್ತೀಯ ಕೊರತೆ ಗುರಿಯನ್ನು ಶೇ. 4.4 ಎಂದು ನಿಗದಿ ಮಾಡಿತ್ತು.

ಈ ಬಾರಿ ಭಾರತದ ನಾಮಿನಲ್ ಜಿಡಿಪಿ ನಿರೀಕ್ಷೆಗಿಂತಲೂ ಕಡಿಮೆ ಇರಬಹುದು ಎಂದು ಸರ್ಕಾರವೇ ಅಂದಾಜು ಮಾಡಿದ್ದು ವಿತ್ತೀಯ ಕೊರತೆ ಹಿಗ್ಗುವ ಭಯ ಇತ್ತು. ಆದರೆ, ಆರ್ಥಿಕತೆಯ ಹಣದ ಮೌಲ್ಯವು ಸರಿಯಾದ ಪ್ರಮಾಣದಲ್ಲಿದೆ. ಹೀಗಾಗಿ, ಬಜೆಟ್​ನಲ್ಲಿ ಮಾಡಿದ್ದ ಅಂದಾಜಿನ ಪ್ರಕಾರ ವಿತ್ತೀಯ ಕೊರತೆ ಇರುವುದರಲ್ಲಿ ಯಾವ ಸಮಸ್ಯೆ ಇಲ್ಲ ಎಂದು ಪಿಡಬ್ಲ್ಯುಸಿ ಹೇಳಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು

2024-25ರ ವರ್ಷಕ್ಕೆ ಫಿಸ್ಕಲ್ ಡೆಫಿಸಿಟ್ ಅಥವಾ ವಿತ್ತೀಯ ಕೊರತೆ ಗುರಿಯನ್ನು ಶೇ. 4.9 ಎಂದು ನಿಗದಿ ಮಾಡಲಾಗಿತ್ತು. ಸರ್ಕಾರವು ಶೇ 4.8 ವಿತ್ತೀಯ ಕೊರತೆ ಸ್ಥಿತಿ ಸಾಧಿಸಿತ್ತು. 2025-26ರ ವರ್ಷಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 15.69 ಲಕ್ಷ ಕೋಟಿ ರೂ ವಿತ್ತೀಯ ಕೊರತೆ ಬರಬಹುದು ಎಂದು ಅಂದಾಜಿಸಿದ್ದರು. ಅಂದರೆ, ಅದು ಜಿಡಿಪಿಯ ಶೇ. 4.4ರಷ್ಟು. ಪಿಡಬ್ಲ್ಯುಸಿ ಪ್ರಕಾರ ವಿತ್ತೀಯ ಕೊರತೆ ಶೇ. 4.3ಕ್ಕೆ ಹೋಗಿ ಇಳಿಯಬಹುದು.

ವಿತ್ತೀಯ ಕೊರತೆ ಎಂದರೇನು?

ಸರ್ಕಾರದ ಆದಾಯ ಹಾಗೂ ಅದು ಮಾಡುವ ವ್ಯಯದ ನಡುವಿರುವ ವ್ಯತ್ಯಾಸವೇ ವಿತ್ತೀಯ ಕೊರತೆ. ಈ ವ್ಯತ್ಯಾಸದ ಹಣವು ದೇಶದ ಜಿಡಿಪಿಗೆ ಹೋಲಿಸಿದರೆ ಎಷ್ಟು ಎಂದು ವಿತ್ತೀಯ ಕೊರತೆಯನ್ನು ಅಳೆಯಲಾಗುತ್ತದೆ. ಇಷ್ಟು ಕೊರತೆಯ ಹಣವನ್ನು ಸರ್ಕಾರ ಸಾಲದ ಮೂಲಕ ಭರಿಸುತ್ತದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು

ಸರ್ಕಾರ ತನ್ನ ಶಕ್ತ್ಯಾನುಸಾರ ಎಷ್ಟು ವಿತ್ತೀಯ ಕೊರತೆ ಇರಬಹುದು ಎಂದು ಅಂದಾಜಿಸಿ ಟಾರ್ಗೆಟ್ ಫಿಕ್ಸ್ ಮಾಡಿಕೊಳ್ಳುತ್ತದೆ. ಅದರ ವೆಚ್ಚವನ್ನು ಅದಕ್ಕೆ ಅನುಗುಣವಾಗಿ ಕಡಿಮೆ ಅಥವಾ ಹೆಚ್ಚು ಮಾಡುತ್ತದೆ. ಸರ್ಕಾರವು ವಿತ್ತೀಯ ಕೊರತೆ ವಿಚಾರದಲ್ಲಿ ಶಿಸ್ತು ಕಾಯ್ದುಕೊಂಡಾಗ ಹೂಡಿಕೆದಾರರಿಗೆ ವಿಶ್ವಾಸ ಹೆಚ್ಚಾಗಿ, ಹೂಡಿಕೆಗಳು ಹೆಚ್ಚೆಚ್ಚು ಬರಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

BBL: ಆಮೆಗತಿಯ ಬ್ಯಾಟಿಂಗ್‌; ಬಾಬರ್- ರಿಜ್ವಾನ್ ನಡುವೆ ಜಿದ್ದಾಜಿದ್ದಿನ ಪೈಪೋಟಿ

Source link

ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ? – Kannada News | Bagalkot: Mentally Ill Woman physically Assaulted Near Hunagunda Highway

ಬಾಗಲಕೋಟೆ, ಜನವರಿ 11: ವಿಚ್ಛೇದಿತ ಮಹಿಳೆ‌ ಮೇಲೆ ಲೈಂಗಿಕ ದೌರ್ಜನ್ಯ (physically harassment) ನಡೆದಿರುವಂತಹ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್​​​ನಲ್ಲಿ ನಡೆದಿದೆ. ಜನವರಿ 5ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 40 ವರ್ಷದ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ದೌರ್ಜನ್ಯವೆಸಗಿ ರಾಷ್ಟ್ರೀಯ ಹೆದ್ದಾರಿ ಬಳಿ ಬಿಸಾಕಿ ಹೋಗಲಾಗಿದೆ. ಸದ್ಯ ಮಹಿಳೆ ಮೇಲೆ ಗ್ಯಾಂಗ್​ನಿಂದ​ ಅಥವಾ ಒಬ್ಬರಿಂದ ಅತ್ಯಾಚಾರ ನಡೆಯಿತಾ ಎಂಬುವುದು ಪೊಲೀಸ್​ ತನಿಖೆ ನಡೆಸಿದ್ದಾರೆ. ಹುನಗುಂದ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ.

ಕೃತ್ಯವೆಸಗಿ ಬಿಸಾಕಿ ಹೋದ ದುಷ್ಟರು

ವಿಚ್ಚೇದಿತ ಮಹಿಳೆ ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದವರು. ರಾಷ್ಟ್ರೀಯ ಹೆದ್ದಾರಿ ಬಳಿ ಬಿಸಾಕಿ ಹೋದ ಮಹಿಳೆಯನ್ನು ನೋಡಿದ ಸಾರ್ವಜನಿಕರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಅವರನ್ನು ಮೊದಲಿಗೆ ಹುನಗುಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ‌ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರಿದಿದೆ.

ದೌರ್ಜನ್ಯ ನೆನೆದು ಬಿಕ್ಕಿಬಿಕ್ಕಿ ಅತ್ತ ಮಹಿಳೆಯ ಸಹೋದರ  

ಇನ್ನು ಮಹಿಳೆಯ ಸಹೋದರ ತಮ್ಮ ಸಹೋದರಿ ಮೇಲಾದ ದೌರ್ಜನ್ಯ ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾತನಾಡಿದ ಸಹೋದರ ರವಿ ಮಾದರ, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಬಿಕ್ಕಿಬಿಕ್ಕಿ ಅತ್ತರು. ಯಾರು ಇಂತಹ ಕೆಲಸ ಮಾಡಿದ್ದಾರೆ ಅವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಾಯಿ ಮೇಲಿನ ದ್ವೇಷಕ್ಕೆ ಮಗು ಬಲಿ; ಕೊಲೆಗೂ ಮುನ್ನ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ್ದ ಪಾಪಿ!

ಸಂತ್ರಸ್ತೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪರೀಕ್ಷೆ ಮಾಡಲಾಗಿದ್ದು, ಗುಪ್ತಾಂಗದ ಮೇಲೆ‌ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅತ್ಯಾಚಾರ ಆಗಿದೆಯಾ ಎಂಬ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಖಚಿತವಾಗಲಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಬಾಗಲಕೋಟೆ ಎಸ್​ಪಿ ಸಿದ್ದಾರ್ಥ ಗೋಯಲ್‌ ಹೇಳಿದ್ದಿಷ್ಟು

ಇನ್ನು ಘಟನೆ ಬಗ್ಗೆ ಬಾಗಲಕೋಟೆ ಎಸ್​ಪಿ ಸಿದ್ದಾರ್ಥ ಗೋಯಲ್‌ ಪ್ರತಿಕ್ರಿಯಿಸಿದ್ದು, ಈ ವಿಚಾರವಾಗಿ ಈಗಾಗಲೇ ಎಫ್​ಐಆರ್​​ ದಾಖಲಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದು, 72 ಜನರ ಪಟ್ಟಿ ಸಿದ್ಧಪಡಿಸಿದ್ದೇವೆ. ಆ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಿದ್ದೇವೆ. ಆದಷ್ಟು ಬೇಗ ಆರೋಪಿಗಳ ಪತ್ತೆ ಹಚ್ಚುತ್ತೇವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:12 pm, Sun, 11 January 26

Source link

Lohri Attire Ideas: ಹೆಂಗಳೆಯರೇ… ಹಬ್ಬದ ದಿನ ಸುಂದರವಾಗಿ ಕಾಣಿಸಿಕೊಳ್ಳಲು ನಿಮ್ಮ ಉಡುಗೆ ಹೀಗಿರಲಿ – Kannada News | Lohri Outfit ideas: If you want to look beautiful on a festive day, try this traditional dress idea

ಭಾರತದಲ್ಲಿ ಸುಗ್ಗಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ನಮ್ಮ ಕರ್ನಾಟಕದಲ್ಲಿ ಈ ಹಬ್ಬವನ್ನು ಸಂಕ್ರಾತಿ, ತಮಿಳುನಾಡಿನಲ್ಲಿ ಪೊಂಗಲ್‌, ಪಂಜಾಬ್‌ನಲ್ಲಿ ಲೋಹ್ರಿ ಹಬ್ಬ ಎಂದು ಆಚರಿಸಲಾಗುತ್ತದೆ. ವರ್ಷದ ಈ ಮೊದಲ ಹಬ್ಬದ ದಿನ ವಿಶೇಷವಾಗಿ ಹೆಂಗಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಚೆಂದವಾಗಿ ರೆಡಿಯಾಗುತ್ತಾರೆ. ಈ ಬಾರಿಯ ಹಬ್ಬದಂದು ಯಾವ ರೀತಿಯ ಬಟ್ಟೆ ಉಡೋದು, ಯಾವ ಡ್ರೆಸ್‌ (Outfit ideas) ಸೂಕ್ತ ಎಂಬ ಗೊಂದಲದಲ್ಲಿ ಇದ್ದೀರಾ? ಹಾಗಿದ್ದರೆ ಈ ಟ್ರೆಡೀಷನಲ್‌ ಡ್ರೆಸ್‌ ಐಡಿಯಾಗಳನ್ನೊಮ್ಮೆ ಪ್ರಯತ್ನಿಸಿ.

ಹಬ್ಬದ ದಿನ ಸುಂದರವಾಗಿ ಕಾಣಿಸಿಕೊಳ್ಳಲು ನಿಮ್ಮ ಉಡುಗೆ ಹೀಗಿರಲಿ:

ಸೀರೆ:

ಹಬ್ಬದ ದಿನ ಸೊಗಸಾದ, ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದು ಉತ್ತಮ. ಅದಕ್ಕಾಗಿ ನೀವು ಸೀರೆ ಧರಿಸಬಹುದು. ರೇಷ್ಮೆ ಸೀರೆಗಳು, ಕಾಂಜೀವರಂ ಸೀರೆಗಳು ಅಥವಾ ಕಾಟನ್‌ ಸಿಲ್ಕ್‌ ಸೀರೆಗಳು ಈ ಸಂದರ್ಭಕ್ಕೆ ಸೂಕ್ತವಾಗಿವೆ.

ಲಂಗ ದಾವಣಿ:

ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದಾಗ ಲಂಗದಾವಣಿ ಹಬ್ಬದ ದಿನ ಉಡಲು ಹೇಳಿ ಮಾಡಿಸಿದಂತಹ ಉಡುಗೆಯಾಗಿದೆ. ಸೀರೆ ಉಡಲು ಇಷ್ಟಪಡದ ಹೆಣ್ಣು ಮಕ್ಕಳು ಲಂಗದಾವಣಿ ತೊಡಬಹುದು. ಲಂಗದಾವಣಿ ಜೊತೆಗೆ ಜಡೆಗೆ ಮಲ್ಲಿಗೆ, ಕೈತುಂಬಾ ಹಸಿರು ಗಾಜಿನ ಬಳೆಗಳನ್ನು ತೊಡುವುದರಿಂದ ನೀವು ಇನ್ನಷ್ಟು ಲಕ್ಷಣವಾಗಿ, ಮುದ್ದಾಗಿ ಕಾಣುವಿರಿ.

ಉದ್ದನೆಯ ಸ್ಕರ್ಟ್:

ಹಬ್ಬದ ದಿನ ಸಿಂಪಲ್‌ ಆಗಿ ಡ್ರೆಸ್‌ ಮಾಡಿಕೊಳ್ಳಲು ಬಯಸಿದರೆ ನಿಮಗೆ ಉದ್ದನೆಯ ಸ್ಕರ್ಟ್ ಉತ್ತಮ ಆಯ್ಕೆಯಾಗಿದೆ. ಸ್ಕರ್ಟ್ ಮತ್ತು ಟಾಪ್ ಸೊಗಸಾದ ಮತ್ತು ಆರಾಮದಾಯಕ ನೋಟವನ್ನುನೀಡುತ್ತದೆ.  ನೀವು ವಿವಿಧ ಬಣ್ಣಗಳ ಅಥವಾ ಹೂವಿನ ಮಾದರಿಗಳ ಸ್ಕರ್ಟ್‌ಗಳನ್ನು ಆಯ್ಕೆ ಮಾಡಬಹುದು.

ಕುರ್ತಿ ಜೊತೆ ಪಲಾಝೋ:

ಸೀರೆಗಳನ್ನು ಧರಿಸಲು ಇಷ್ಟಪಡದವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಕುರ್ತಿ ಮತ್ತು ಪಲಾಝೋ ಪ್ಯಾಂಟ್‌ ಕಾಂಬಿನೇಷನ್‌ ನಿಮ್ಮನ್ನು ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ. ಅದನ್ನು ಉದ್ದವಾದ ಕುರ್ತಾ ಮತ್ತು ಡಿಸೈನರ್ ದುಪಟ್ಟಾ ಜೊತೆ ಜೋಡಿಸುವುದರಿಂದ ಇನ್ನಷ್ಟು ಅದ್ಭುತವಾದ ನೋಟ ದೊರೆಯುತ್ತದೆ.

ಶರಾರಾ ಸೂಟ್:

ಟ್ರೆಡೀಷನಲ್ ಹಾಗೆಯೇ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವವರು ಶರಾರಾ ಸೂಟ್‌ ಧರಿಸಬಹುದು. ಇದು ನಿಮಗೆ ಖಂಡಿತವಾಗಿಯೂ ವಿಶಿಷ್ಟವಾದ ಲುಕ್‌ ನೀಡುತ್ತದೆ.

ಇದನ್ನೂ ಓದಿ: ಆರೋಗ್ಯಯುತವಾಗಿ ಹೆಚ್ಚು ಕಾಲ ಬದುಕಲು ಬಯಸಿದರೆ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ

ಪಟಿಯಾಲ ಸೂಟ್:‌

ಲೋಹ್ರಿ ಹಬ್ಬಕ್ಕೆ ನೀವು ಪಂಜಾಬ್‌ನ ಸಾಂಪ್ರದಾಯಿಕ ಉಡುಗೆಯಾದ ಪಟಿಯಾಲ ಸೂಟ್‌ ಧರಿಸಬಹುದು. ಪಂಜಾಬಿ ಲುಕ್‌ಗೆ ಪರಿಪೂರ್ಣವಾದ ಕೇಶವಿನ್ಯಾಸದ ಅಗತ್ಯವಿದೆ.

ಅನಾರ್ಕಲಿ ಸೂಟ್:‌

ಅನಾರ್ಕಲಿ ಸೂಟ್‌ಗಳು ಕ್ಲಾಸಿ ಮತ್ತು ಆರಾಮದಾಯಕ ಆಯ್ಕೆಯಾಗಿದೆ. ಇವು ಸಾಂಪ್ರದಾಯಿಕ ನೋಟವನ್ನು ನೀಡುವುದರ ಜೊತೆಗೆ ಆರಾಮದಾಯಕವೂ ಆಗಿರುತ್ತವೆ. ಹಾಗಾಗಿ ಈ ಬಾರಿಯ ಹಬ್ಬಕ್ಕೆ ಅನಾರ್ಕಲಿ ಸೂಟ್‌ ಸಹ ಧರಿಸಬಹುದು.

ಲಾಂಗ್‌ ಕುರ್ತಾ:

ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸೀರೆಯನ್ನು ತೊಡಲು ಇಷ್ಟಪಡದವರು ಕುರ್ತಾ ಧರಿಸಬಹುದು. ಇದು ನಿಮಗೆ ಸರಳ ಮತ್ತು ಸೊಗಸಾದ ನೋಟವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ – Kannada News | An Unattended Bag, A Moment of Alarm Outside a Minister’s Home in Mumbai

ಮುಂಬೈ, ಜನವರಿ 11: ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ಮನೆ ಎದುರು ನಿಗೂಢ ಬ್ಯಾಕ್ ಪತ್ತೆಯಾಗಿದೆ. ಇದರಿಂದಾಗಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು. ಭದ್ರತಾ ಸಿಬ್ಬಂದಿ ಅನುಮಾನಾಸ್ಪದ ಬ್ಯಾಗ್ ಗಮನಿಸಿದ ತಕ್ಷಣ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದರು, ಪೊಲೀಸರು ಸಂಪೂರ್ಣ ಪರಿಶೀಲನೆಗಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆರಂಭಿಕ ತಪಾಸಣೆಯಲ್ಲಿ ಯಾವುದೇ ಸ್ಫೋಟಕಗಳು ಅಥವಾ ಬೆದರಿಕೆಗಳು ಕಂಡುಬಂದಿಲ್ಲವಾದರೂ, ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಬಿಜೆಪಿ ನಾಯಕರಾಗಿರುವ ಸಚಿವ ನಿತೇಶ್ ರಾಣೆ ತಮ್ಮ ಉಗ್ರ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರೆಸ್ಟೋರೆಂಟ್​ಗಿಂತ ಜೊಮಾಟೋದಲ್ಲಿ ಭಾರೀ ರೇಟ್; ಆನ್​ಲೈನ್​ನಲ್ಲಿ ಡಿಬೇಟ್; ಕರ್ಮ ಫುಡ್ ಆ್ಯಪ್​ನದ್ದೋ, ಹೋಟೆಲ್​ನದ್ದೋ? – Kannada News | X user shows price difference in Zomato and Restaurant, netizens react

ನವದೆಹಲಿ, ಜನವರಿ 11: ಸ್ವಿಗ್ಗಿ, ಜೊಮಾಟೋ ಇತ್ಯಾದಿ ಫುಡ್ ಆ್ಯಪ್​ಗಳು (food delivery platforms) ಜನರ ಮನೆ ಬಾಗಿಲಿಗೆ ಆಹಾರವನ್ನು ತಂದೊದಗಿಸುವ ಸೇವೆ ನೀಡುತ್ತವೆ. ಪ್ಲಾಟ್​ಫಾರ್ಮ್ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಲು ವಿವಿಧ ಶುಲ್ಕ ಸೇರಿ ಹೆಚ್ಚಿನ ಹಣವನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ. ಆದರೆ, ರೆಸ್ಟೋರೆಂಟ್​ಗೆ ಹೋಗಿ ಊಟ ಮಾಡುವುದಕ್ಕೂ ಆನ್ಲೈನ್​ನಲ್ಲಿ ಆರ್ಡರ್ ಮಾಡಿ ಊಟ ಮಾಡುವುದಕ್ಕೂ ಬೆಲೆಯಲ್ಲಿ ನೂರಾರು ರೂ ವ್ಯತ್ಯಾಸ ಆಗಿ ಹೋದರೆ? ಆನ್​ಲೈನ್​ನಲ್ಲಿ ಇಂಥದ್ದುಂದು ಡಿಬೇಟ್ ನಡೆದಿದೆ.

ನಳಿನಿ ಉನಾಗರ್ ಎಂಬಾಕೆ ಜೊಮಾಟೋ ಹೇಗೆ ವಿಪರೀತ ಬೆಲೆ ಹಾಕುತ್ತಿದೆ ಎಂದು ವಿವರಿಸಿ ಎಕ್ಸ್​ನಲ್ಲಿ ಟ್ವೀಟ್ ಮಾಡಿದ್ದಾಳೆ. ರೆಸ್ಟೋರೆಂಟ್​ನಲ್ಲಿ 320 ರೂ ಬೆಲೆಯ ಆಹಾರವು ಜೊಮಾಟೊದಲ್ಲಿ 655 ರೂ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್

ಒಂದೇ ಆಹಾರವನ್ನು ರೆಸ್ಟೋರೆಂಟ್ ಹಾಗೂ ಜೊಮಾಟೊ ಎರಡರಲ್ಲೂ ಬೆಲೆ ಹೋಲಿಕೆ ಮಾಡಿದ್ದಾರೆ. ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ರೆಸ್ಟೋರೆಂಟ್​ನಿಂದ ಪಾರ್ಸಲ್ ಕಟ್ಟಿಸಿಕೊಂಡು, ಅದರ ಬಿಲ್ 320 ರೂ ಆಗಿದೆ. ಅದೇ ರೆಸ್ಟೋರೆಂಟ್​ನಲ್ಲಿ ಅದೇ ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ಬುಕ್ ಮಾಡಿದಾಗ ಅವುಗಳ ಬೆಲೆ 600 ರೂ ಸೇರಿ ಒಟ್ಟು ಬಿಲ್ 655 ರು ಆಗಿದೆ. ಇದರ ಫೋಟೋವನ್ನು ನಳಿನಿ ಅವರು ಶೇರ್ ಮಾಡಿದ್ದಾರೆ.

‘ಜೊಮಾಟೊದವರೆ, ನನ್ನ ಆರ್ಡರ್​ನ ವಾಸ್ತವ ಬೆಲೆ 320 ರೂ. ಆದರೆ, ಜೊಮಾಟೊದಲ್ಲಿ 655 ರು ಆಗಿದೆ. ಎಲ್ಲಾ ಡಿಸ್ಕೌಂಟ್​ಗಳನ್ನು ಹಾಕಿಯೂ ನಾನು 550 ರೂ ಪಾವತಿಸಬೇಕು. ಇಷ್ಟು ಬೆಲೆ ವ್ಯತ್ಯಾಸ ನಿಜಕ್ಕೂ ಅಸಹಜ. ಗ್ರಾಹಕರಿಂದ ಸಿಕ್ಕಾಪಟ್ಟೆ ವಸೂಲಿ ಮಾಡಲಾಗುತ್ತಿದೆ’ ಎಂದು ಈ ಮಹಿಳೆ ಟ್ವೀಟ್ ಮಾಡಿದ್ದಾರೆ.

ಇವರ ಟ್ವೀಟ್​ಗೆ ಜೊಮಾಟೊ ಪ್ರತಿಕ್ರಿಯಿಸಿದೆ. ನಮ್ಮ ಪ್ಲಾಟ್​ಫಾರ್ಮ್​ನಲ್ಲಿ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್ ಪಾರ್ಟ್ನರ್​ಗಳೇ. ಗ್ರಾಹಕರು ಹಾಗು ರೆಸ್ಟೋರೆಂಟ್​ಗಳಿಗೆ ಮಧ್ಯವರ್ತಿಯಾಗಷ್ಟೇ ಜೊಮಾಟೊ ಕೆಲಸ ಮಾಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಬಿಲ್​ನಲ್ಲಿ ನಕಲಿ ಜಿಎಸ್​ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?

ಇದು ಆನ್​ಲೈನ್​ನಲ್ಲಿ ಚರ್ಚೆ ಹುಟ್ಟುಹಾಕಿದೆ. ರೆಸ್ಟೋರೆಂಟ್ ಪ್ಲಾಟ್​ಫಾರ್ಮ್​ಗಳಿಂದ ಜೊಮಾಟೊ ಶೇ. 35ರಷ್ಟು ಕಮಿಷನ್ ಪಡೆಯುತ್ತದೆ ಎಂದು ಹಲವರು ಎತ್ತಿತೋರಿಸಿದ್ದಾರೆ.

ನಳಿನಿ ಅವರ ಟ್ವೀಟ್

ಪ್ಲಾಟ್​ಫಾರ್ಮ್​ಗಳಲ್ಲಿ ಕಾಣುವ ಆಹಾರಗಳ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್​ಗಳೇ. ಆದರೆ, ಭಾರೀ ದೊಡ್ಡ ಮೊತ್ತದ ಕಮಿಷನ್ ಅನ್ನು ಸರಿದೂಗಿಸಲು ರೆಸ್ಟೋರೆಂಟ್​ಗಳು ಬೆಲೆ ಏರಿಸುತ್ತವೆ. ರೆಸ್ಟೋರೆಂಟ್ ಬೆಲೆ ಏರಿಸಿದರೆ ಅದರಿಂದಲೂ ಫುಡ್ ಪ್ಲಾಟ್​ಫಾರ್ಮ್​ಗಳಿಗೆ ಲಾಭವಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಹೊರೆ ಆಗುವುದು ಎಂದು ಹಲವು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ: ವಿಡಿಯೋ – Kannada News | Bigg Boss Kannada 12: Ashwini against asks Rakshita’s apology

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯುವ ಹಂತ ಬಂದಿದೆ. ಇನ್ನೊಂದು ವಾರವಷ್ಟೆ ಬಾಕಿ ಇದೆ. ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳೂ ಸಹ ತಮಗೆ ತೋಚಿದಂತೆ ಆಡಿಕೊಂಡು ಬಂದಿದ್ದಾರೆ. ಆದರೆ ಈ ಹಂತದಲ್ಲಿ ನಿಂತು ತಾವು ಹೀಗೆ ಆಡಬಹುದಿತ್ತು, ಅದೊಂದನ್ನು ಬದಲಾಯಿಸಬೇಕಿತ್ತು ಎಂಬ ಯೋಚನೆ ಸಹಜ, ಇಂದಿನ (ಭಾನುವಾರ) ಎಪಿಸೋಡ್​​ನಲ್ಲಿ ಸುದೀಪ್, ಸ್ಪರ್ಧಿಗಳಿಗೆ ಅಂಥಹದ್ದೊಂದು ಅವಕಾಶ ಕೊಟ್ಟಿದ್ದಾರೆ. ಸೀಸನ್​​ನಲ್ಲಿ ಯಾವುದಾದರೂ ಒಂದು ದಿನಕ್ಕೆ ಹೋಗಿ ಏನಾದರೂ ಬದಲಾವಣೆ ಮಾಡುವ ಅವಕಾಶ ಸಿಕ್ಕರೆ ಏನು ಬದಲಾವಣೆ ಮಾಡುತ್ತೀರ ಎಂದು ಕೇಳಿದ್ದಾರೆ. ಸ್ಪರ್ಧಿಗಳ ಉತ್ತರಗಳನ್ನು ಕೇಳಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Mark Movie: ಮೂರು ವಾರಗಳಲ್ಲಿ ‘ಮಾರ್ಕ್’ ಸಿನಿಮಾ ಗಳಿಸಿದ್ದೆಷ್ಟು? – Kannada News | Sudeep starrer Mark collects 51 crore rs in three weeks of its release

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಯ್ತು. 2025 ರಲ್ಲಿ ಏಕೈಕ ಸುದೀಪ್ ಸಿನಿಮಾ ‘ಮಾರ್ಕ’. ಅದರ ಜೊತೆಗೆ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಹ ಬಿಡುಗಡೆ ಆಗಿತ್ತು. ಈ ಎರಡೂ ಸಿನಿಮಾಗಳ ಬಿಡುಗಡೆಗೆ ಕೆಲ ದಿನಗಳ ಮುಂಚೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಸಹ ತೆರೆಗೆ ಬಂದಿತ್ತು. ಇವೆಲ್ಲವುದರ ಜೊತೆಗೆ ‘ಮಾರ್ಕ್’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಸಹ ಎದುರಾಗಿತ್ತು. ಇಷ್ಟೆಲ್ಲ ಸ್ಪರ್ಧೆ, ಬೆದರಿಕೆಗಳ ಮಧ್ಯವೂ ‘ಮಾರ್ಕ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಇದೀಗ ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು, ಸಿನಿಮಾ ಗಳಿಸಿರುವುದೆಷ್ಟು?

ಮೂರನೇ ವಾರದ ಬಳಿಕವೂ ‘ಮಾರ್ಕ್’ ಮೇನಿಯಾ ಹಲವೆಡೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಸಹ ಮೂರನೇ ವಾರದ ಬಳಿಕವೂ ಹಲವು ಚಿತ್ರಮಂದಿರಗಳಲ್ಲಿ ‘ಮಾರ್ಕ್’ ಸಿನಿಮಾದ ಶೋಗಳು ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿವೆ. ಮೊದಲ ಎರಡು ವಾರ ಉತ್ತಮ ಕಲೆಕ್ಷನ್ ಮಾಡಿರುವ ಸಿನಿಮಾವೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದ ವೇಳೆಗೆ ‘ಮಾರ್ಕ್’ ಸಿನಿಮಾದ ಒಟ್ಟು ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆ.

ಇಲ್ಲಿಯವರೆಗೆ ‘ಮಾರ್ಕ್’ ಸಿನಿಮಾ ಬರೋಬ್ಬರಿ 51 ಕೋಟಿ 30 ಲಕ್ಷವನ್ನು ಬಾಚಿಕೊಂಡಿದೆ. ಸುದೀಪ್ ಅವರ ಅಭಿಮಾನಿಗಳ ಜೊತೆಗೆ ಕುಟುಂಬ ಪ್ರೇಕ್ಷಕರು ಸಹ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. 2024ರ ಅಂತ್ಯದಲ್ಲಿ ಬಿಡುಗಡೆ ಆಗಿದ್ದ ‘ಮ್ಯಾಕ್ಸ್’ ಸಿನಿಮಾ ಸಹ ಇದೇ ರೀತಿಯ ಮೋಡಿ ಮಾಡಿತ್ತು. ಆ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಇದೀಗ ‘ಮಾರ್ಕ್’ ಸಿನಿಮಾ ಸಹ ‘ಮ್ಯಾಕ್ಸ್’ನ ಹಾದಿಯಲ್ಲೇ ಇದೆ.

ಇದನ್ನೂ ಓದಿ:‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್​ಗೆ ಸುದೀಪ್ ವಿಶ್

ಟೈಟ್ ಆದ ಚಿತ್ರಕತೆ ಹೊಂದಿರುವ ‘ಮಾರ್ಕ್’ ಸಿನಿಮಾವನ್ನು ನಿರ್ದೇಶನ ಮಾಡಿರುವುದು ವಿಜಯ್ ಕಾರ್ತಿಕೇಯ. ‘ಮ್ಯಾಕ್ಸ್’ ಸಿನಿಮಾಕ್ಕೂ ಇವರದ್ದೆ ನಿರ್ದೇಶನ. ಈ ಸಿನಿಮಾದಲ್ಲಿ ಸುದೀಪ್ ಜೊತೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ ಮೊದಲಾದವರು ನಟಿಸಿದ್ದಾರೆ. ನಾಯಕಿಯರಾಗಿ ನಿಶ್ವಿಕಾ ನಾಯ್ಡು, ರೋಶಿಕಾ ಅವರುಗಳು ಇದ್ದಾರೆ. ಸಿನಿಮಾಕ್ಕೆ ಸತ್ಯಜ್ಯೋತಿ ಕ್ರಿಯೇಷನ್ಸ್ ಮತ್ತು ಸ್ವತಃ ಸುದೀಪ್ ಅವರ ನಿರ್ಮಾಣ ಸಂಸ್ಥೆಯಾದ ಕಿಚ್ಚ ಕ್ರಿಯೇಷನ್ಸ್ ಬಂಡವಾಳ ಹೂಡಿದೆ. ಸಿನಿಮಾದ ವಿತರಣೆಯಲ್ಲಿ ಸುದೀಪ್ ಪುತ್ರಿ ಸಾನ್ವಿ ಸಹ ಕೈಜೋಡಿಸಿರುವುದು ವಿಶೇಷ.

ಸುದೀಪ್ ಅವರು ಪ್ರಸ್ತುತ ಬಿಗ್​​ಬಾಸ್ ನಿರೂಪಣೆ ಮಾಡುತ್ತಿದ್ದು, ಮುಂದಿನ ವಾರ ಅದು ಸಹ ಅಂತ್ಯಗೊಳ್ಳಲಿದೆ. ಪ್ರಸ್ತುತ ಸುದೀಪ್ ಅವರು ‘ಬಿಲ್ಲ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಸ್ಕೇಲ್​​ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ ಇದಾಗಿದ್ದು, ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅದರ ಬಳಿಕ ರೊಮ್ಯಾಂಟಿಕ ಕಾಮಿಡಿ ಸಿನಿಮಾ ಒಂದರಲ್ಲಿ ಕಿಚ್ಚ ನಟಿಸಲಿದ್ದು, ತಮಿಳಿನ ಹೆಸರಾಂತ ನಿರ್ದೇಶಕರೊಬ್ಬರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪರಶುರಾಮ ಥೀಮ್​ ಪಾರ್ಕ್​​ನ ತಾಮ್ರ ಹೊದಿಕೆ ಕದ್ದಿದ್ದ ಕಳ್ಳರಿಬ್ಬರು ಸೆರೆ: ಕದ್ದವರು ಕಾಂಗ್ರೆಸ್ ಬ್ರದರ್ಸ್‌ ಎಂದ ಶಾಸಕ – Kannada News | Karkala Parashurama Park Copper Theft: Two Arrested, mla sunil kumar spark on congress

ಉಡುಪಿ, ಜನವರಿ 11: ಕಾರ್ಕಳದ ಉಮಿಕಲ್ ಬೆಟ್ಟದ ಮೇಲಿರುವ ಪರಶುರಾಮ ಥೀಮ್ ಪಾರ್ಕ್ (parashurama theme park) ತಾಮ್ರ ಹೊದಿಕೆ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ (arrest). ಮಂಗಳೂರು ಮೂಲದ ಆರಿಫ್(37) ಮತ್ತು ಅಬ್ದುಲ್ ಹಮೀದ್(32) ಬಂಧಿತರು. ಬಂಧಿತರಿಂದ 45 ಸಾವಿರ ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ, ಎರಡು ಸೀಲಿಂಗ್ ಫ್ಯಾನ್, ಕೃತ್ಯಕ್ಕೆ ಬಳಸಿದ ಗೂಡ್ಸ್ ಆಟೋ, ಬೈಕ್ ವಶಕ್ಕೆ ಪಡೆಯಲಾಗಿದ್ದು, ಇತರೆ ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ ಮುಂದುವರಿದಿದೆ.

ಪ್ರತಿಮೆಯ ವಿಚಾರದಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಯೋಜನಾ ಸ್ಥಳವನ್ನು ಮುಚ್ಚಲಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ದುಷ್ಕರ್ಮಿಗಳು, ಪರಶುರಾಮ ಸನ್ನಿಧಾನದ ಮೇಲ್ಚಾವಣಿಯಿಂದ ತಾಮ್ರದ ತಗಡುಗಳನ್ನು ಎಗರಿಸಿದ್ದರು. ಜನವರಿ 3ರಂದು ಘಟನೆ ನಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು 3 ತಂಡ ರಚಿಸಿ ತನಿಖೆ ನಡೆಸಿದ್ದರು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೋಧ ಕಾರ್ಯ ನಡೆಸಿ ಇದೀಗ ಇಬ್ಬರನ್ನು ಬಂಧಿಸಿದ್ದಾರೆ.

ಶಾಸಕ ಸುನಿಲ್ ಕುಮಾರ್ ಟ್ವೀಟ್​ 

ಮೇಲ್ಚಾವಣಿ ಕದ್ದವರು ಕಾಂಗ್ರೆಸ್​ನ ಬ್ರದರ್ಸ್: ಶಾಸಕ ಸುನಿಲ್ ಕುಮಾರ್

ಇನ್ನು ಈ ಬಗ್ಗೆ ಟ್ವೀಟ್​ ಮಾಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ಪರಶುರಾಮ ಥೀಂ ಪಾರ್ಕ್ ಮೇಲ್ಚಾವಣಿ ಕದ್ದವರು ಕಾಂಗ್ರೆಸ್​ನ ಬ್ರದರ್ಸ್..! ಥೀಂಪಾರ್ಕ್ ಪಾಳು ಬೀಳುವಂತೆ ಮಾಡಿದ್ದು ಕಾಂಗ್ರೆಸ್. ಕಳೆದ ವಾರ ಥೀಂ ಪಾರ್ಕ್​ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ.

‘ಭಾರತದ ಶ್ರದ್ಧಾ ಕೇಂದ್ರಗಳನ್ನು ಘಜ್ನಿ, ಘೋರಿ, ಖಿಲ್ಜಿ, ಮೊಘಲರು ಒಡೆದರೆ ಥೀಂ ಪಾರ್ಕ್​ನ ಮೇಲ್ಚಾವಣಿ ಕದ್ದವರು ಅವರ ವಂಶಸ್ಥರು. ಕಾರ್ಕಳ ಕಾಂಗ್ರೆಸ್ ಮಖಂಡರು ಈಗ ಏನೆನ್ನುತ್ತಾರೆ? ಪರಶುರಾಮ ಸೃಷ್ಟಿ ಎಂದು ಹೆಸರಾದ ಕರಾವಳಿಯಲ್ಲಿ ಪರಶುರಾಮನ ಹೆಜ್ಜೆಗುರುತುಗಳು ಇರಬಾರದು ಎಂದು ಥೀಂ ಪಾರ್ಕ್ ಕಾಮಗಾರಿಯನ್ನು ನೀವು ಅರ್ಧಕ್ಕೆ ನಿಲ್ಲಿಸಿದ್ದಿರಿ’ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: Udupi: ಕಾರ್ಕಳದ ವಿವಾದಿತ ಪರಶುರಾಮ ಥೀಮ್ ಪಾರ್ಕ್​​ನ ತಾಮ್ರದ ತಗಡಿಗೆ ಕನ್ನ

‘ಹಿಂದು ಭಾವನೆಗಳಿಗೆ ಘಾಸಿ ಮಾಡಿರುವ ಜತೆಗೆ ಪ್ರವಾಸೋದ್ಯಮಕ್ಕೆ ಅಡ್ಡಿ ಮಾಡಿದ ನಿಮ್ಮ ತಪ್ಪು ಮುಂದಿನ ಚುನಾವಣೆಯವರೆಗಲ್ಲ, ಶತಶತಮಾನಗಳವರೆಗೂ ಸ್ಥಾಯಿಯಾಗಿರುತ್ತದೆ. ಇಲ್ಲಿಂದಲೇ ಕಾಂಗ್ರೆಸ್ ಅಧಃಪತನದ ಕ್ಷಣಗಣನೆ ಪ್ರಾರಂಭ’ ಎಂದು ಶಾಸಕ ಸುನಿಲ್ ಕುಮಾರ್​​ ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link