Category Archives: Blog

Your blog category

ಆರೋಗ್ಯ ಮಾಹಿತಿ ಪಡೆಯಲು ಎಐ ಬಳಕೆ ಹೆಚ್ಚಳ: ಪ್ರತಿ 4ರಲ್ಲಿ ಒಬ್ಬರು ಎಐ ಮೇಲೆ ಅವಲಂಬನೆ – Kannada News | AI Health Advice Trend: Benefits, Risks, and What Medical Experts Say

ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಜನರು ಆರೋಗ್ಯ ಸಂಬಂಧಿತ ಮಾಹಿತಿಗಾಗಿ ಕೂಡ ಎಐ ಸಾಧನಗಳನ್ನು ಹೆಚ್ಚು ಬಳಸುತ್ತಿರುವುದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಹೌದು, ಹೆಮಟಾಲಜಿ ಅಡ್ವೈಸರ್ (Hematology Advisor) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಆರೋಗ್ಯದ ಬಗ್ಗೆ ಮಾಹಿತಿಗಾಗಿ ಎಐ ಆಧಾರಿತ ಟೂಲ್ಸ್ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಯುವಜನತೆ ಆರೋಗ್ಯ ವಿಷಯದಲ್ಲಿ ಎಐ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ.

ಅನಾರೋಗ್ಯದ ಲಕ್ಷಣಗಳು, ಆಹಾರ ಪದ್ಧತಿ, ಔಷಧಿಗಳ ಮಾಹಿತಿ, ತೂಕ ಇಳಿಕೆ ಸಲಹೆಗಳು ಮತ್ತು ಮಾನಸಿಕ ಆರೋಗ್ಯದ ಕುರಿತ ಪ್ರಶ್ನೆಗಳಿಗೆ ಜನರು ಎಐ ನೆರವು ಪಡೆಯುತ್ತಿದ್ದಾರೆ. ತಕ್ಷಣ ಉತ್ತರ ಸಿಗುವುದು ಮತ್ತು ಸುಲಭ ಭಾಷೆಯಲ್ಲಿ ಮಾಹಿತಿ ಲಭ್ಯವಾಗುವುದು ಇದರ ಜನಪ್ರಿಯತೆಗೆ ಪ್ರಮುಖ ಕಾರಣವಾಗಿದೆ. ಆದರೆ ವೈದ್ಯಕೀಯ ತಜ್ಞರು ಕೇವಲ ಎಐ ಮಾಹಿತಿಯನ್ನು ಸಂಪೂರ್ಣವಾಗಿ ನಂಬಬಾರದು ಎಂದು ಎಚ್ಚರಿಸಿದ್ದಾರೆ. ಎಐ ಸಾಮಾನ್ಯ ಮಾಹಿತಿ ನೀಡಬಹುದಾದರೂ, ಪ್ರತಿಯೊಬ್ಬರ ಆರೋಗ್ಯ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಎಐ ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ. ಜೊತೆಗೆ ಸ್ವಯಂ ಔಷಧಿ ಸೇವನೆಯ ಅಪಾಯವೂ ಹೆಚ್ಚಬಹುದು.

ಆರೋಗ್ಯ ಸಲಹೆಗೆ ಕೇವಲ ಎಐ ಅವಲಂಬಿಸುವುದು ಸರಿಯೇ?

ತಜ್ಞರ ಪ್ರಕಾರ, ಜ್ವರ, ಉಸಿರಾಟದ ತೊಂದರೆ, ತೀವ್ರ ನೋವು ಅಥವಾ ದೀರ್ಘಕಾಲದ ಕಾಯಿಲೆಗಳಂತಹ ಗಂಭೀರ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಎಐ ನೀಡುವ ಮಾಹಿತಿಯನ್ನು ಕೇವಲ ಸಾಮಾನ್ಯ ಮಾರ್ಗದರ್ಶನವಾಗಿ ಮಾತ್ರ ಪರಿಗಣಿಸಬೇಕು. ಇದಲ್ಲದೆ, ಆರೋಗ್ಯ ಮಾಹಿತಿ ಪಡೆಯುವಾಗ ವಿಶ್ವಾಸಾರ್ಹ ಮೂಲಗಳನ್ನು ಮಾತ್ರ ಬಳಸುವುದು ಮುಖ್ಯ. ಯಾವುದೇ ಔಷಧಿ ಅಥವಾ ಸಪ್ಲಿಮೆಂಟ್ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಎಂದು ತಜ್ಞರು ಸೂಚಿಸಿದ್ದಾರೆ. ತಂತ್ರಜ್ಞಾನ ಆರೋಗ್ಯ ಜಾಗೃತಿ ಹೆಚ್ಚಿಸಲು ಸಹಾಯಕವಾದರೂ, ವೈದ್ಯಕೀಯ ಪರಿಣಿತರಿಗೆ ಪರ್ಯಾಯವಲ್ಲ ಎಂಬ ಅರಿವು ಜನರಲ್ಲಿ ಮೂಡುವುದು ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RR vs GT: ಶತಕದ ಮೇಲೆ ಶತಕ.. ಗಿಲ್- ಸುದರ್ಶನ್ ಜೊತೆಯಾಟಕ್ಕೆ ದಾಖಲೆಗಳೆಲ್ಲ ಧ್ವಂಸ – Kannada News | Sai Sudharsan and Shubman Gill Break IPL Record: Fastest Duo to Six Century Opening Stands for GT

ಗಮನಾರ್ಹವಾಗಿ, ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಕೇವಲ 28 ಪಂದ್ಯಗಳಲ್ಲಿ ಆರು ಶತಕ ಪಾಲುದಾರಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ, ಇವರಿಬ್ಬರ ನಡುವೆ ಇದುವರೆಗೆ 9 ಶತಕದ ಜೊತೆಯಾಟಗಳು ನಡೆದಿವೆ. ಆದರೆ ಉಳಿದ 3 ಶತಕದ ಜೊತೆಯಾಟಗಳು ಅರಂಭಿಕ ವಿಕೆಟ್​ಗೆ ಬಂದಿಲ್ಲ (PC- PTI).

Source link

ಬಿಎಸ್​​​ವೈ ಅಭಿಮಾನೋತ್ಸವ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ; ಪ್ರಲ್ಹಾದ್​ ಜೋಶಿ – Kannada News | BSY Abhimanotsava: BJP Will Return to Power in Karnataka Under Yediyurappa’s Leadership, Says Pralhad Joshi

ಚಿತ್ರದುರ್ಗ, ಮೇ 09: ಕರ್ನಾಟಕದಲ್ಲಿ ಮುಂದೆ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ. ನಗರದಲ್ಲಿ ನಡೆದ ಬಿಎಸ್​ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 21ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದೆ. ಮುಂದೆ ಮತ್ತೆ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದರು. ರೈತರಿಗೆ ‌ನ್ಯಾಯ ಒದಗಿಸಿದ ರಾಜಾಹುಲಿ ಯಾರಾದರೂ ಇದ್ದರೆ ಅದು ಯಡಿಯೂರಪ್ಪ. ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪರವರಿಗೆ ಶುಭಾಶಯ ಕೋರಿ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಿದರು. ಇನ್ನು ಇಂದಿನ ಹೋರಾಟ ಸಾಮಾಜಿಕ ಜಾಲತಾಣಕ್ಕೆ‌ ಸೀಮಿತ ಆಗಿದೆ. ಆದರೆ ಹೋರಾಟಕ್ಕೆ ಹೊಸ ಪರಿಕಲ್ಪನೆ ಕೊಟ್ಟಿದ್ದು ಬಿಎಸ್​ ಯಡಿಯೂರಪ್ಪ ಅವರು. ನಾವೆಲ್ಲಾ ಅವರಿಂದ ಪ್ರೇರಣೆ ಪಡೆಯಬೇಕು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹೈಕಮಾಂಡ್​​ ಸಭೆ ಬಳಿಕವೂ ಆಗದ ಅಂತಿಮ ನಿರ್ಧಾರ: ಕೇರಳದ ನೂನತ ಸಿಎಂ ಯಾರೆಂಬುದು ಇನ್ನೂ ಸಸ್ಪೆನ್ಸ್​! – Kannada News | Kerala CM Race: UDF Wins Big, But Congress High Command Delays Final Decision

ಸಿಎಂ ರೇಸ್​​ನಲ್ಲಿರುವ ನಾಯಕರು.Image Credit source: mathrubhumi.com

ತಿರುವನಂತಪುರಂ/ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ 140 ಕ್ಷೇತ್ರಗಳ ಪೈಕಿ ಕಾಂಗ್ರೆಸ್​​ (Congress) ನೇತೃತ್ವದ ಯುಡಿಎಫ್​​ (UDF) 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಹೀಗಿದ್ದರೂ ಕೇರಳದ ಮುಂದಿನ ಮುಖ್ಯಮಂತ್ರಿ (Chief Minister) ಯಾರು ಎಂಬ ಕುತೂಹಲ ಇನ್ನೂ ಮುಂದುವರಿದಿದ್ದು, ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ನಡೆಸಿದ ಸುದೀರ್ಘ ಸಭೆ ಬಳಿಕವೂ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಹೊರಬಂದಿಲ್ಲ.

ಸಭೆ ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪಾ ದಾಸ್ ಮುನ್ಶಿ, ಮುಖ್ಯಮಂತ್ರಿ ಆಯ್ಕೆ ಕುರಿತ ಚರ್ಚೆ ಇನ್ನೂ ನಡೆಯುತ್ತಿದೆ. ಯುಡಿಎಫ್ ಸರ್ಕಾರದ ನಾಯಕರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡುವ ಕುರಿತ ನಿರ್ಣಯಕ್ಕೆ ಎಲ್ಲಾ ಕಾಂಗ್ರೆಸ್ ಶಾಸಕರು ಸಹಿ ಹಾಕಿದ್ದಾರೆ. ಹೀಗಾಗಿ ಸಿಎಂ ಯಾರಾಗಲಿದ್ದಾರೆ ಎಂಬ ಅಂತಿಮ ನಿರ್ಣಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ; ಸಮಯ, ಸ್ಥಳದ ಮಾಹಿತಿ ಇಲ್ಲಿದೆ

ಸಭೆಯಲ್ಲಿ ಯಾರೆಲ್ಲ ಭಾಗಿ?

ಸಿಎಂ ಆಯ್ಕೆ ಸಂಬಂಧ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪದಾಸ್ ಮುನ್ಶಿ, ಕೇರಳಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್, ಶಾಸಕರಾದ ಸತೀಸನ್, ರಮೇಶ್ ಚೆನ್ನಿತ್ತಲ ಸೇರಿದಂತೆ ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕೆನ್ ಕೂಡ​ ಉಪಸ್ಥಿತರಿದ್ದರು.

ಗದ್ದುಗೆಗಾಗಿ ಗುದ್ದಾಟ

ಯುಡಿಎಫ್ ಭರ್ಜರಿ ಗೆಲುವಿನ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಒಳಗಡೆ ಭಾರೀ ಲಾಬಿ ಹಾಗೂ ಗುಂಪು ರಾಜಕೀಯ ಜೋರಾಗಿದೆ. ಸತೀಶನ್, ವೇಣುಗೋಪಾಲ್ ಮತ್ತು ಚೆನ್ನಿತ್ತಲ ಪರ ಬೆಂಬಲಿಗರು ಪೋಸ್ಟರ್, ಫ್ಲೆಕ್ಸ್‌, ಮೆರವಣಿಗೆಗಳ ಮೂಲಕ ತಮ್ಮ ನಾಯಕರ ಪರ ಅಭಿಯಾನ ನಡೆಸುತ್ತಿದ್ದಾರೆ. 140 ಸದಸ್ಯರ ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಬೀಗಿದೆ. ಎಲ್‌ಡಿಎಫ್ 35 ಸ್ಥಾನಗಳಿಗೆ ಕುಸಿದರೆ, ಬಿಜೆಪಿ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಜನರ ಚಿತ್ತ ದೆಹಲಿಯತ್ತ ನೆಟ್ಟಿದ್ದು, ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಘೋಷಿಸಲಿರುವ ಕೇರಳದ ಮುಂದಿನ ಮುಖ್ಯಮಂತ್ರಿ ಯಾರೆಂಬ ಕುತೂಹಲ ಹೆಚ್ಚಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯ್ ರಾಘವೇಂದ್ರ ‘ರುದ್ರಾಭಿಷೇಕಂ’ ಹಾಡು ಬಿಡುಗಡೆ: ಗಮನ ಸೆಳೆದ ‘ನವರತ್ನ’ಗಳು – Kannada News | Vijay Raghavendra starrer Rudrabishekam movie song released

ವಿಜಯ್ ರಾಘವೇಂದ್ರ (Vijay Raghavendra) ನಟಿಸಿರುವ ‘ರುದ್ರಾಭಿಷೇಕಂ’ ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹಾಡೊಂದು ಇಂದು (ಮೇ 09) ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ನಗರದ ಜಿಟಿ ಮಾಲ್​​ನಲ್ಲಿ ಅದ್ಧೂರಿಯಾಗಿ ಆಯೋಜಿಸಿತ್ತು. ವಿಜಯ್ ರಾಘವೇಂದ್ರ, ಸಂಗೀತ ನಿರ್ದೇಶಕ ವಿ ಮನೋಹರ್ ಸೇರಿದಂತೆ ಚಿತ್ರತಂಡದ ಹಲವು ಪ್ರಮುಖರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ‘ನ್ಯಾಚುರಲ್ ಸ್ಟಾರ್’ ಎಂಬ ಬಿರುದನ್ನು ಸಹ ನೀಡಲಾಯ್ತು. ಭಿನ್ನ ಕತೆಯುಳ್ಳ ಈ ಸಿನಿಮಾವನ್ನು ‘ನವರತ್ನ’ಗಳು ನಿರ್ಮಾಣ ಮಾಡಿರುವುದು ವಿಶೇಷ.

‘ರುದ್ರಾಭಿಷೇಕಂ’, ಹೆಸರೇ ಸೂಚಿಸುತ್ತಿರುವಂತೆ ಪೌರಾಣಿಕ ಹಿನ್ನೆಲೆಯುಳ್ಳ, ಗ್ರಾಮ್ಯ ಕತೆಯನ್ನು ಸಿನಿಮಾ ಒಳಗೊಂಡಿದ್ದು, ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ರೊಮ್ಯಾಂಟಿಕ್ ಹಾಡೊಂದನ್ನು ಚಿತ್ರತಂಡ ಒಟ್ಟಿಗೆ ಬಿಡುಗಡೆ ಮಾಡಿದ್ದು, ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಿನಿಮಾದ ಒಂಬತ್ತು ನಿರ್ಮಾಪಕರು ಗಮನ ಸೆಳೆದರು. ಸಿನಿಮಾದ ಸಂಗೀತ ನಿರ್ದೇಶಕ ವಿ ಮನೋಹರ್, ಒಂಬತ್ತು ಉತ್ಸಾಹಿ ನಿರ್ಮಾಪಕರನ್ನು ‘ನವರತ್ನ’ಗಳೆಂದು ಕರೆದು ಕೊಂಡಾಡಿದರು.

‘ರುದ್ರಾಭಿಷೇಕಂ’ ಸಿನಿಮಾವನ್ನು ಒಂಬತ್ತು ಮಂದಿ ಗೆಳೆಯರು ಸೇರಿ ನಿರ್ಮಿಸಿದ್ದಾರೆ. ವಿಶೇಷವೆಂದರೆ ಆ ಒಂಬತ್ತೂ ಮಂದಿಯೂ ಕೃಷಿಯ ಹಿನ್ನೆಲೆಯಿಂದ ಬಂದವರು. ಕೃಷಿಕರೇ ಸೇರಿ ನಿರ್ಮಾಣ ಮಾಡಿರುವ ಸಿನಿಮಾ ‘ರುದ್ರಾಭಿಷೇಕಂ’. ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ಸಿನಿಮಾದ ಬಗೆಗಿನ ತಮ್ಮ ಪ್ರೀತಿ, ಆಸಕ್ತಿಯನ್ನು ವಿವರಿಸಿದರು. ನಾಯಕ ವಿಜಯ್ ರಾಘವೇಂದ್ರ, ನಾಯಕಿ ಪ್ರಿಯಾಂಕಾ ಸೇರಿದಂತೆ ಇತರೆ ಕಲಾವಿದರು, ತಂತ್ರಜ್ಞರು ನೀಡಿದ ಬೆಂಬಲ, ಸಿನಿಮಾ ನಿರ್ಮಾಣದಲ್ಲಿ ಹಾಕಿದ ಶ್ರಮವನ್ನು ಕೊಂಡಾಡಿದರು.

ಇದನ್ನೂ ಓದಿ:ವೀರಗಾಸೆ ವೇಷದಲ್ಲಿ ವಿಜಯ್ ರಾಘವೇಂದ್ರ: ‘ರುದ್ರಾಭಿಷೇಕಂ’ ಅದ್ಧೂರಿ ಕ್ಲೈಮ್ಯಾಕ್ಸ್

ನಟ ವಿಜಯ್ ರಾಘವೇಂದ್ರ ಮಾತನಾಡಿ, ಇಂಥಹಾ ಒಂದು ಪಾತ್ರದಲ್ಲಿ ನಟಿಸಲು ಬಹಳ ವರ್ಷಗಳಿಂದಲೂ ಕಾಯುತ್ತಿದ್ದುದಾಗಿ ಹೇಳಿದರು. ಸಿನಿಮಾನಲ್ಲಿ ಅವರು ಹಲವು ಶೇಡ್​​ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಅದರಲ್ಲೂ ವೀರಗಾಸೆಯ ಲುಕ್ ಹಾಗೂ ವೀರಗಾಸೆಯ ದೃಶ್ಯಗಳು ಇಡೀ ಸಿನಿಮಾದ ಹೈಲೆಟ್ ಎಂದರು. ನಿರ್ಮಾಪಕರು ತಮಗಿತ್ತ ಸಹಕಾರ, ನೋಡಿಕೊಂಡ ರೀತಿಯನ್ನು ಕೊಂಡಾಡಿದ ಅವರು ಇಂಥಹಾ ನಿರ್ಮಾಪಕರುಗಳು ಚಿತ್ರರಂಗಕ್ಕೆ ಬೇಕೆಂದರು.

ನಾಯಕಿ ಪ್ರಿಯಾಂಕಾ ತಿಮ್ಮೇಶ್, ನಿರ್ದೇಶಕ ವಸಂತ್ ಕುಮಾರ್, ಸಂಗೀತ ನಿರ್ದೇಶಕ ವಿ ಮನೋಹರ್, ನಟ ಬಾಲರಾಜ್ವಾಡಿ ಇನ್ನೂ ಹಲವರು ಸಿನಿಮಾದ ಬಗ್ಗೆ, ಸಿನಿಮಾ ಶೂಟಿಂಗ್​​ನ ಅನುಭವಗಳ ಬಗ್ಗೆ ಮಾತನಾಡಿದರು. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ವತಿಯಿಂದ ನಿರ್ಮಾಣ ಮಾಡಲಾಗಿದ್ದು, ಲಾಯರ್ ಜಯರಾಮ್, ವೆಂಕಟೇಶ್, ಮಂಜುನಾಥ್, ರವಿಕುಮಾರ್, ಸುರೇಶ್ ಬಾಬು, ಚಿದಾನಂದ ಮೂರ್ತಿ, ಅಶ್ವತ್ಥನಾರಾಯಣ, ಶಿವಕುಮಾರ್, ಕುಸುಮಾ ವಸಂತ್ ಅವರುಗಳು ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RR vs GT: ಗುಜರಾತ್ ವಿರುದ್ಧ ಮೊದಲ ಓವರ್​ನಲ್ಲೇ ಬೇಡದ ದಾಖಲೆ ಬರೆದ ಆರ್ಚರ್ – Kannada News | Jofra Archer’s IPL 2026 unwanted Record: 11 Ball First Over Shocks RR vs GT

ಐಪಿಎಲ್ 2026 (IPL 2026) ರ 52 ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ (RR vs GT) ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಗಿಲ್ ಹಾಗೂ ಸುದರ್ಶನ್ ಇನ್ನಿಂಗ್ಸ್ ಆರಂಭಿಸಿದರೆ, ಇತ್ತ ರಾಜಸ್ಥಾನ್ ಪರ ವೇಗಿ ಜೋಫ್ರಾ ಆರ್ಚರ್ (Jofra Archer) ಮೊದಲ ಓವರ್ ಬೌಲ್ ಮಾಡಿದರು. ಈ ಸೀಸನ್​ನಲ್ಲಿ ಮೊದಲ ಓವರ್​ನಲ್ಲೇ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದಿದ್ದ ಆರ್ಚರ್, ಈ ಪಂದ್ಯದಲ್ಲಿ ಮಾತ್ರ ಅತ್ಯಂತ ಕಳಪೆ ದಾಖಲೆ ಬರೆದರು. ಗುಜರಾತ್ ವಿರುದ್ಧ ಮೊದಲ ಓವರ್ ಎಸೆದ ಆರ್ಚರ್ ಈ ಓವರ್​ನಲ್ಲಿ 6 ಎಸೆತಗಳ ಬದಲಿಗೆ ಬರೋಬ್ಬರಿ 11 ಎಸೆತಗಳನ್ನು ಬೌಲ್ ಮಾಡಿ ಬೇಡದ ದಾಖಲೆಗೆ ಕೊರಳೊಡ್ಡಿದರು.

ದೀರ್ಘ ಓವರ್ ಎಸೆದ ಆರ್ಚರ್

ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಆರು ಕಾನೂನುಬದ್ಧ ಚೆಂಡುಗಳನ್ನು ಎಸೆಯಲು ಜೋಫ್ರಾ ಆರ್ಚರ್ ಒಟ್ಟು 11 ಎಸೆತಗಳನ್ನು ಎಸೆಯಬೇಕಾಯಿತು. ಈ ಓವರ್​ನಲ್ಲಿ ಅವರು ವೈಡ್‌ಗಳು, ನೋ-ಬಾಲ್‌ಗಳನ್ನು ಎಸೆದರು. ವೇಗ ಮತ್ತು ನಿಖರವಾದ ಲೈನ್ ಮತ್ತು ಲೆಂತ್‌ಗೆ ಹೆಸರುವಾಸಿಯಾದ ಆರ್ಚರ್, ಈ ಪಂದ್ಯದಲ್ಲಿ ತಮ್ಮ ಲಯವನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಐಪಿಎಲ್ ಪಂದ್ಯದ ಮೊದಲ ಓವರ್‌ನಲ್ಲಿ ಆರ್ಚರ್ 11 ಎಸೆತಗಳನ್ನು ಎಸೆದಿರುವುದು ಇದೇ ಮೊದಲು. ಐಪಿಎಲ್‌ನಲ್ಲಿ ಒಟ್ಟು ಆರು ಬೌಲರ್‌ಗಳು ಈ ಹಿಂದೆ ಒಂದು ಓವರ್‌ನಲ್ಲಿ 11 ಎಸೆತಗಳನ್ನು ಎಸೆದಿದ್ದಾರೆ, ಆದರೆ ಇನ್ನಿಂಗ್ಸ್‌ನ ಆರಂಭಿಕ ಓವರ್‌ನಲ್ಲಿ ಯಾರೂ ಹೀಗೆ ಮಾಡಿರಲಿಲ್ಲ.

ಐಪಿಎಲ್‌ನಲ್ಲಿ ಅತಿ ದೀರ್ಘ ಓವರ್ ಬೌಲ್ ಮಾಡಿದವರು

  • 11 ಚೆಂಡುಗಳು- ಮೊಹಮ್ಮದ್ ಸಿರಾಜ್ vs ಎಂಐ, ಬೆಂಗಳೂರು, 2023 (19ನೇ ಓವರ್)
  • 11 ಚೆಂಡುಗಳು- ತುಷಾರ್ ದೇಶಪಾಂಡೆ vs ಎಲ್‌ಎಸ್‌ಜಿ, ಚೆನ್ನೈ, 2023 (4ನೇ ಓವರ್)
  • 11 ಚೆಂಡುಗಳು- ಶಾರ್ದೂಲ್ ಠಾಕೂರ್ vs ಕೆಕೆಆರ್, ಕೋಲ್ಕತ್ತಾ, 2025 (13ನೇ ಓವರ್)
  • 11 ಚೆಂಡುಗಳು – ಸಂದೀಪ್ ಶರ್ಮಾ vs ಡಿಸಿ, ದೆಹಲಿ, 2025 (20ನೇ ಓವರ್)
  • 11 ಚೆಂಡುಗಳು- ಹಾರ್ದಿಕ್ ಪಾಂಡ್ಯ vs ಜಿಟಿ, ವಾಂಖೆಡೆ, 2025 (8ನೇ ಓವರ್)
  • 11 ಚೆಂಡುಗಳು- ಅರ್ಶ್‌ದೀಪ್ ಸಿಂಗ್ vs ಜಿಟಿ, ಮುಲ್ಲನ್‌ಪುರ, 2026 (20ನೇ ಓವರ್)
  • 11 ಎಸೆತಗಳು- ಜೋಫ್ರಾ ಆರ್ಚರ್ vs ಜಿಟಿ, ಜೈಪುರ, 2026 (ಮೊದಲನೇ ಓವರ್)

RR vs GT IPL 2026 Live Score: ಗುಜರಾತ್ ಮೊದಲ ವಿಕೆಟ್ ಪತನ

ಆರ್ಚರ್ ಅವರ ಕಳಪೆ ಬೌಲಿಂಗ್​ನ ಲಾಭ ಪಡೆದ ಗುಜರಾತ್ ಟೈಟಾನ್ಸ್‌ ಉತ್ತಮ ಆರಂಭ ಪಡೆಯಿತು. ಪವರ್‌ಪ್ಲೇನಲ್ಲಿ ಜೋಫ್ರಾ ಆರ್ಚರ್ ಒಟ್ಟು ಎರಡು ಓವರ್‌ಗಳನ್ನು ಬೌಲ್ ಮಾಡಿ, 16.50 ರ ಎಕಾನಮಿ ರೇಟ್​ನಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟರು. ಇದರಿಂದಾಗಿ ಗುಜರಾತ್ ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 82 ರನ್‌ಗಳಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ

ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು (ಮೇ 09) ಧ್ರುವ ಸರ್ಜಾ ಅವರು ತುಮಕೂರಿನಲ್ಲಿ ‘ಕೆಡಿ’ ಸಿನಿಮಾ ಪ್ರದರ್ಶನವಾಗುತ್ತಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಧ್ರುವ ಸರ್ಜಾ, ‘ತುಮಕೂರು ನಮ್ಮ ಮೂಲ ಊರು, ಇಲ್ಲಿ ಸಾಕಷ್ಟು ನೆನಪುಗಳಿವೆ’ ಎಂದರು. ಜೊತೆಗೆ ತಮ್ಮ ನಟನೆಯ ‘ಕೆಡಿ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ – Kannada News | PM Narendra Modi Bengaluru Visit on May 10: HAL Speech and Art of Living Inauguration; Here Are the Details

ಪ್ರಧಾನಿ ನರೇಂದ್ರ ಮೋದಿImage Credit source: tv9 kannada

ಬೆಂಗಳೂರು, ಮೇ 09: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೇ 10ರಂದು ಕರ್ನಾಟಕ್ಕೆ ಆಗಮಿಸುತ್ತಿದ್ದಾರೆ. ಆರ್ಟ್ ಆಫ್ ಲೀವಿಂಗ್ ಆಶ್ರಮದಲ್ಲಿ ಧ್ಯಾನ ಮಂದಿರ ಮತ್ತು ವಿವಿಧ ಕಾರ್ಯಕ್ರಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಈ ನಿಟ್ಟಿನಲ್ಲಿ ನಗರದಲ್ಲಿ ಪೊಲೀಸ ಇಲ್ಲಾಖೆ ಕೂಡ ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದೆ.

ಮುಖ್ಯಾಂಶಗಳು

  • ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ
  • ಹೆಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ
  • ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೂ ಭೇಟಿ

ಪ್ರಧಾನಿ ಮೋದಿ ಭೇಟಿ ವಿವರ ಹೀಗಿದೆ

  • ಬೆಳಗ್ಗೆ 9.40ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಆಗಮನ
  • ಬೆಳಗ್ಗೆ 9.45 ರಿಂದ 10.15ರವರೆಗೆ ಹೆಚ್​​ಎಎಲ್ ಏರ್​​ಪೋರ್ಟ್ ಮುಂಭಾಗ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
  • ನಂತರ ಹೆಚ್​ಎಎಲ್ ಏರ್​​ಪೋರ್ಟ್​ನಿಂದ ಹೆಲಿಕಾಪ್ಟರ್ ಮೂಲಕ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲೀವಿಂಗ್ ಆಶ್ರಮಕ್ಕೆ ತೆರಳಲಿರುವ ಮೋದಿ, ಧ್ಯಾನ ಮಂದಿರ ಮತ್ತು ವಿವಿಧ ಕಾರ್ಯಕ್ರಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಒಂದೂವರೆ ಗಂಟೆ ಕಾಲ ಆಶ್ರಮದಲ್ಲಿ ಇರಲಿದ್ದಾರೆ.
  • ಮಧ್ಯಾಹ್ನ 01.40ಕ್ಕೆ ಬೆಂಗಳೂರಿನಿಂದ ಹೈದರಾಬಾದ್​ಗೆ ನಿರ್ಗಮಿಸಲಿದ್ದಾರೆ.

ಪ್ರಧಾನಿ ಮೋದಿ ಬೆಂಗಳೂರು ಭೇಟಿ ಬಗ್ಗೆ ಆರ್​​ ಅಶೋಕ್​ ಮಾಹಿತಿ

ಇನ್ನು ಪ್ರಧಾನಿ ಮೋದಿ ಬೆಂಗಳೂರು ಭೇಟಿ ಬಗ್ಗೆ ಇತ್ತೀಚೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾಹಿತಿ ನಿಡಿದ್ದರು. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಹಿನ್ನೆಲೆ ಹಾಗೂ ಕೇರಳದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಿದ ಹಿನ್ನೆಲೆಯಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದಿದ್ದರು.

ಮೇ 10ರಂದು ಪ್ರಧಾನಿ ಮೋದಿ ಅವರು ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿ ಸೇರುವ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ 10 ರಿಂದ 15 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಮೇ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಏನು ವಿಶೇಷ?

ಇದೊಂದು ಸಂಪೂರ್ಣ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದ್ದು, ಬಳಿಕ ಪ್ರಧಾನಿ ಮೋದಿ ಅವರು ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs MI: ಆರ್​​ಸಿಬಿ- ಮುಂಬೈ ಪಂದ್ಯಕ್ಕೆ ಮಳೆ ಅಡ್ಡಿ? ಹೇಗಿರಲಿದೆ ಹವಾಮಾನ? ಪಿಚ್ ಯಾರಿಗೆ ಸಹಕಾರಿ – Kannada News | IPL 2026: RCB vs MI 54th Match head to head, pitch and weather report

ಐಪಿಎಲ್ 2026 (IPL 2026) ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವೆ ನಡೆಯಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ, ಮುಂಬೈ ತಂಡವನ್ನು ಸುಲಭವಾಗಿ ಮಣಿಸಿತ್ತು. ಹೀಗಾಗಿ ಮುಂಬೈಗೆ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದ್ದರೆ, ಇತ್ತ ಆರ್​ಸಿಬಿಗೆ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ಅವಕಾಶವಿದೆ.

ಒಂದೆಡೆ ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ತಂಡವು ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದ್ದು, ನಾಲ್ಕರಲ್ಲಿ ಸೋತಿದೆ. ಈ ಮೂಲಕ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲ. ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದಿದ್ದರೆ, ಏಳು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು, ಮುಂಬೈ ಇಂಡಿಯನ್ಸ್ ಯಾವುದೇ ಬೆಲೆ ತೆತ್ತಾದರೂ ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕು.

ಮುಖಾಮುಖಿ ದಾಖಲೆ

ಆರ್‌ಸಿಬಿ ಮತ್ತು ಮುಂಬೈ ತಂಡಗಳು ಇಲ್ಲಿಯವರೆಗೆ ಒಟ್ಟು 35 ಪಂದ್ಯಗಳನ್ನು ಆಡಿದ್ದು, ಮುಂಬೈ ತಂಡ 19 ಪಂದ್ಯಗಳಲ್ಲಿ ಗೆದ್ದಿದ್ದರೆ, ಆರ್‌ಸಿಬಿ 16 ಪಂದ್ಯಗಳಲ್ಲಿ ಗೆದ್ದಿದೆ. ಐಪಿಎಲ್ 2026 ರ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ತಂಡವನ್ನು 18 ರನ್‌ಗಳಿಂದ ಸೋಲಿಸಿತ್ತು.

ಪಿಚ್ ಹಾಗೂ ಹವಾಮಾನ ವರದಿ

ಇನ್ನು ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣವು ಬ್ಯಾಟಿಂಗ್‌ ಹಾಗೂ ಬೌಲಿಂಗ್ ಎರಡಕ್ಕೂ ಸಮನಾಗಿ ನೆರವಾಗಲಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 191 ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 181 ಆಗಿದೆ. ಅಕ್ಯೂವೆದರ್ ಪ್ರಕಾರ, ಭಾನುವಾರ ರಾಯ್‌ಪುರದಲ್ಲಿ ಹವಾಮಾನವು ಸ್ಪಷ್ಟ ಮತ್ತು ಬಿಸಿಲಿನಿಂದ ಕೂಡಿರುತ್ತದೆ. ಮಳೆ ಬರುವ ಸಾಧ್ಯತೆ ಕಡಿಮೆ. ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

IPL 2026: ತನ್ನ 2ನೇ ತವರು ಮೈದಾನದಲ್ಲಿ ಚೊಚ್ಚಲ ಪಂದ್ಯವನ್ನಾಡಲಿದೆ ಆರ್​ಸಿಬಿ; ಎದುರಾಳಿ ಯಾರು?

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ. ಇಂಪ್ಯಾಕ್ಟ್ ಪ್ಲೇಯರ್: ರಾಸಿಖ್ ಸಲಾಂ.

ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ಹಾರ್ದಿಕ್ ಪಾಂಡ್ಯ/ ಸೂರ್ಯಕುಮಾರ್ ಯಾದವ್ (ನಾಯಕ), ವಿಲ್ ಜಾಕ್ಸ್, ತಿಲಕ್ ವರ್ಮಾ, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಅಲ್ಲಾ ಘಜನ್ಫರ್, ರಘು ಶರ್ಮಾ. ಇಂಪ್ಯಾಕ್ಟ್ ಪ್ಲೇಯರ್: ರಾಜ್ ಬಾವಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ: ಸಮಯ, ಸ್ಥಳದ ಮಾಹಿತಿ ಇಲ್ಲಿದೆ – Kannada News | Vijay’s CM Oath Ceremony: Tamil Nadu Set for New Era with TVK Government on May 10

ಚೆನ್ನೈ, ಮೇ 09: ಕೊನೆಗೂ ತಮಿಳುನಾಡು ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ದಳಪತಿ ವಿಜಯ್​​ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಿದೆ. TVK ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲವನ್ನು ಸಂಪಾದಿಸಿದ ಹಿನ್ನೆಲೆ, ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ನಾಳೆ ಚೆನ್ನೈನ ನೆಹರು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3.15ಕ್ಕೆ ಸಿಎಂ ಆಗಿ ವಿಜಯ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಜಯ್​ ಜೊತೆ ಪ್ರಮಾಣವಚನ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ವಿಜಯ್ ಹಿರಿಯ ಟಿವಿಕೆ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ 120 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದ್ದರು. ವಿದುತಲೈ ಚಿರತೈಗಲ್ ಕಚ್ಚಿ (VCK), ಭಾರತೀಯ ಕಮ್ಯುನಿಸ್ಟ್ ಪಕ್ಷ (CPI), ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿದ ನಂತರ ಕಗ್ಗಂಟಾಗಿದ್ದ ಸರ್ಕಾರ ರಚನೆಯ ದಾರಿ ಸುಗಮವಾಗಿತ್ತು. 59 ವರ್ಷಗಳ ಬಳಿಕ ದ್ರಾವಿಡ ರಾಜಕೀಯೇತರ ನಾಯಕನೊಬ್ಬ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವುದು ವಿಶೇಷವಾಗಿದ್ದು, ವಿಜಯ್ ಮೊದಲ ದ್ರಾವಿಡೇತರ ಸಿಎಂ ಆಗಿ ಇತಿಹಾಸ ನಿರ್ಮಿಸಲಿದ್ದಾರೆ.

ಇದನ್ನೂ ಓದಿ: ವಿಜಯ್ ಸಿಎಂ ಆಗುವುದು ಖಚಿತ; ಕೊನೆಗೂ ಟಿವಿಕೆಗೆ ವಿಸಿಕೆ, ಮುಸ್ಲಿಂ ಲೀಗ್ ಬೆಂಬಲ

ಏಪ್ರಿಲ್ 23ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಆದರೆ ಈಗ ವಿಸಿಕೆ, ಸಿಪಿಐ, ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಬೆಂಬಲದಿಂದ ಮೈತ್ರಿಕೂಟದ ಬಲ 120ಕ್ಕೆ ಏರಿದೆ. ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ವಿಜಯ್ ಒಂದು ಸ್ಥಾನ ತ್ಯಜಿಸಬೇಕಿರುವುದರಿಂದ ಟಿವಿಕೆ ಬಲ 107ಕ್ಕೆ ಇಳಿಯಲಿದೆ. ಕಾಂಗ್ರೆಸ್‌ನ 5 ಶಾಸಕರು ಹಾಗೂ ಸಿಪಿಐ, ಸಿಪಿಐ(ಎಂ), ವಿಟಿಕೆ ಮತ್ತು ಐಯುಎಂಎಲ್ ಪಕ್ಷಗಳ ತಲಾ 2 ಶಾಸಕರು ವಿಜಯ್​​ರನ್ನು ಬೆಂಬಲಿಸಿದ್ದಾರೆ.

‘ರಾಷ್ಟ್ರಪತಿ ಆಡಳಿತ ತಪ್ಪಿಸಲು ಬೆಂಬಲ’

ಈ ನಡುವೆ ಟಿವಿಕೆಗೆ ಬೆಂಬಲ ಘೋಷಣೆ ಮಾಡಿರುವ ಬಗ್ಗೆ ಚೆನ್ನೈನಲ್ಲಿ ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಸ್ಪಷ್ಟನೆ ನೀಡಿದ್ದಾರೆ. ನಮ್ಮಿಂದ ವಿಜಯ್​ಗೆ ಅಧಿಕಾರ ತಪ್ಪಿತೆಂಬ ಅಪವಾದ ಬರಬಾರದು. ಅಲ್ಲದೆ ರಾಷ್ಟ್ರಪತಿ ಆಡಳಿತ ತಪ್ಪಿಸಬೇಕಿರುವ ಕಾರಣ ವಿಜಯ್​​ಗೆ ಭೇಷರತ್​​ ಬೆಂಬಲ ಘೋಷಿಸಿದ್ದೇವೆ ಎಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link