Category Archives: Blog

Your blog category

SRH vs KKR: ಸುನಿಲ್ ನರೈನ್ ‘ಡಬಲ್ ಸೆಂಚುರಿ’; ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿಗ

Source link

ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ:ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ? – Kannada News | Counting for Bagalkot, Davanagere South bypolls on May 4 amid tight security

ದಾವಣಗೆರೆ, (ಮೇ 03) : ತೀವ್ರ ಜಿದ್ದಾಜಿದ್ದಿನಿಂದ ನಡೆದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ನಾಳೆ ಅಂದರೆ ಮೇ 04ರಂದು ಬೆಳಗ್ಗೆ 8 ಗಂಟೆಯಿಂದ ಎರಡೂ ಕಡೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಇನ್ನು  ದಾವಣಗೆರೆ ನಗರದ ಡಿಆರ್‌ಆರ್ ವಿದ್ಯಾಸಂಸ್ಥೆಯಲ್ಲಿ ನಾಳೆ(ಮೇ 04) ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಇಂದು (ಮೇ 03) ಡಿಆರ್‌ಆರ್ ವಿದ್ಯಾಸಂಸ್ಥೆಗೆ ಚುನಾವಣಾಧಿಕಾರಿ ಸಂತೋಷ್ ಕುಮಾರ್ ಭೇಟಿ ನೀಡಿ ಮತ ಎಣಿಕೆ ಕೇಂದ್ರವನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚುನಾವಣಾ ಅಧಿಕಾರಿ ಸಂತೋಷ ಕುಮಾರ್, ನಾಳೆ ಅಂದರೆ ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 7.35 ರಿಂದ 7.45 ರೊಳಗೆ ಅಭ್ಯರ್ಥಿ ಗಳ ಎಜೆಂಟರ್ ಸಮ್ಮುಖದಲ್ಲಿ ಇವಿಎಂ ಇಟ್ಟಿರುವ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗುವುದು. ಮೊದಲಿಗೆ ಅಂಚೆ ಮತ ಮತಗಳಿ ಎಣಿಕೆ ಮಾಡಲಾಗುವುದು. ಒಟ್ಟು 217 ಅಂಚೆ ಮತಗಳಿವೆ. ಸೇವಾ ಮತದಾರು ಇನ್ನೂ 25 ಮತಗಳ ಬೇಕು. ನಾಳೆ 7.45 ವರೆಗೆ ಬರುವ ಇಂತಹ ಮತಗಳನ್ನ ಸ್ವೀಕರಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SRH vs KKR: ಕನ್ನಡಿಗ ಸ್ಮರಣ್​ಗೆ ಸ್ಮರಣೀಯವಾಗದ ಚೊಚ್ಚಲ ಐಪಿಎಲ್ ಪಂದ್ಯ – Kannada News | IPL 2026: Smaran Ravichandran’s SRH Debut vs KKR; Kannada Star’s First Match

ಐಪಿಎಲ್ 2026 (IPL 2026) ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (SRH vs KKR )​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳು ಕನ್ನಡಿಗರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಿದ್ದವು. ಸನ್‌ರೈಸರ್ಸ್ ಪರ ಸ್ಮರಣ್ ರವಿಚಂದ್ರನ್ (Smaran Ravichandran) ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದರೆ, ಇತ್ತ ಕೆಕೆಆರ್ ಪರ ಮನೀಶ್ ಪಾಂಡೆ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಪರ ಸ್ಮರಣ್​ಗೆ ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿತು. ಆದರೆ ಸಿಕ್ಕ ಜೊಚ್ಚಲ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸ್ಮರಣ್ ಎಡವಿದರು.

ಬದಲಿ ಆಟಗಾರನಾಗಿ ಆಯ್ಕೆ

ನಿತೀಶ್ ಕುಮಾರ್ ರೆಡ್ಡಿ ಅನುಪಸ್ಥಿತಿಯಿಂದಾಗಿ ಸ್ಮರಣ್​ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು. ವಾಸ್ತವವಾಗಿ 2025 ರ ಐಪಿಎಲ್‌ನಲ್ಲಿ ಆಡಮ್ ಜಂಪಾ ಗಾಯಗೊಂಡ ನಂತರ ಸ್ಮರಣ್ ಅವರನ್ನು ಸನ್‌ರೈಸರ್ಸ್ ಫ್ರಾಂಚೈಸಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ ಆ ಆವೃತ್ತಿಯಲ್ಲಿ ಸ್ಮರಣ್​ಗೆ ಆಡುವ ಅವಕಾಶ ಸಿಗಲಿಲ್ಲ. ಇದರ ಹೊರತಾಗಿಯೂ ಸನ್‌ರೈಸರ್ಸ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಇದೀಗ ಪ್ಲೇಯಿಂಗ್​ 11 ನಲ್ಲಿ ಆಡುವ ಅವಕಾಶ ಪಡೆದ ಸ್ಮರಣ್ 4 ಎಸೆತಗಳಲ್ಲಿ 1 ಬೌಂಡರಿ ಸಹಿತ 4 ರನ್ ಕಲೆಹಾಕಲಷ್ಟೇ ಶಕ್ತರಾಗಿ ವಿಕೆಟ್ ಒಪ್ಪಿಸಿದರು. ಅಂದರೆ ಸ್ಮರಣ್​ಗೆ ತಮ್ಮ ಚೊಚ್ಚಲ ಐಪಿಎಲ್ ಪಂದ್ಯ ಸ್ಮರಣೀಯವಾಗಲಿಲ್ಲ.

ದೇಶಿ ಟೂರ್ನಿಯಲ್ಲಿ ಅಬ್ಬರ

ದೇಶಿ ಟೂರ್ನಿಯಲ್ಲಿ ಕರ್ನಾಟಕದ ಪರ ಆಡುವ ಸ್ಮರಣ್, ತಮ್ಮ ಅಲ್ಪ ವೃತ್ತಿಜೀವನದಲ್ಲೇ ತಂಡದ ನಂಬಿಕಸ್ತ ಆಟಗಾರನಾಗಿದ್ದಾರೆ. 2024 ರಲ್ಲಿ ಕರ್ನಾಟಕ ಪರ ದೇಶೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಮರಣ್, 2024-25 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ 72.16 ಸರಾಸರಿಯಲ್ಲಿ ಮತ್ತು 100 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 433 ರನ್ ಗಳಿಸಿದರು ಮತ್ತು ಕರ್ನಾಟಕ ಟ್ರೋಫಿ ಗೆಲ್ಲಲು ಸಹಾಯ ಮಾಡಿದರು.

CSK vs DC: ಸಿಎಸ್​​ಕೆ ವಿರುದ್ಧ ಸೋತ ಮುಂಬೈ ಐಪಿಎಲ್​ನಿಂದ ಭಾಗಶಃ ಔಟ್

ರಣಜಿಯಲ್ಲಿ ರನ್ ಮಳೆ

ಅದೇ ಆವೃತ್ತಿಯಲ್ಲಿ ಸ್ಮರಣ್, ಕರ್ನಾಟಕ ಪರ ಏಳು ರಣಜಿ ಟ್ರೋಫಿ ಪಂದ್ಯಗಳಲ್ಲಿ 64.50 ಸರಾಸರಿಯಲ್ಲಿ 516 ರನ್ ಗಳಿಸಿದ್ದರು. ಇನ್ನು ಕಳೆದ ರಣಜಿ ಟ್ರೋಫಿಯಲ್ಲಿ ರನ್​ಗಳ ಶಿಖರ ಕಟ್ಟಿದ್ದ ಸ್ಮರಣ್, ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳೊಂದಿಗೆ 86.36 ಸರಾಸರಿಯೊಂದಿಗೆ 950 ರನ್ ಗಳಿಸಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದರು. ಅವರ ವಿಜಯ್ ಹಜಾರೆ ಟ್ರೋಫಿ ಅಭಿಯಾನವು ಅಷ್ಟೇನೂ ಯಶಸ್ವಿಯಾಗಲಿಲ್ಲ, ಆದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಆಡಿದ ಏಳು ಪಂದ್ಯಗಳಲ್ಲಿ 63.80 ಸರಾಸರಿ ಮತ್ತು 158.70 ಸ್ಟ್ರೈಕ್ ರೇಟ್‌ನಲ್ಲಿ ವೃತ್ತಿಜೀವನದ ಅತ್ಯಧಿಕ 319 ರನ್ ಕಲೆಹಾಕಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ನಿಂದನೆ: ಹಲವು ಕಷ್ಟ ಹೇಳಿಕೊಂಡ ದರ್ಶನ್ – Kannada News | Actor Darshan Supreme Court Bail plea prison hardships and health issues update

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಜಾಮೀನು (Bail) ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜಾಮೀನಿಗಾಗಿ ಅವರು ಸುಪ್ರೀಂ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದು, ಹತ್ತು ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ ಹಾಕಲಾಗುತ್ತಿದೆ. ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ತಮ್ಮನ್ನು ಕ್ವಾರಂಟೈನ್ ಸೆಲ್​ನಲ್ಲಿಡಲಾಗಿದೆ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ಹಾನಿಕಾರಕ ಪರಿಣಾಮವಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ದರ್ಶನ್ (Darshan) ಅವರು ಕಷ್ಟ ಹೇಳಿಕೊಂಡಿದ್ದಾರೆ.

ಜೈಲಿನಲ್ಲಿ ಸಹ-ಕೈದಿಗಳು ನಿಂದನೆ, ಮೂದಲಿಸುವುದು ಸೇರಿ ಹಲವು ರೀತಿ ಪ್ರಚೋದನೆ ನೀಡುತ್ತಿದ್ದಾರೆ. ಮಾಧ್ಯಮದಲ್ಲಿ ನೆಗೆಟಿವ್ ಪ್ರಚಾರದಿಂದ ಸಮಸ್ಯೆ ಬಿಗಡಾಯಿಸಿದೆ. ಜೈಲಿನಲ್ಲಿ ಇತರೆ ಕೈದಿಗಳಿಗಿಂತ ತಾರತಮ್ಯ ಮಾಡಲಾಗುತ್ತಿದೆ. ಕುಟುಂಬದವರ ಭೇಟಿಗೆ ಸಮಾನ ಸಮಯ ನೀಡುತ್ತಿಲ್ಲ. ಆಹಾರ, ಬಟ್ಟೆ, ಹಾಸಿಗೆ ಪಡೆಯಲೂ ಬಿಡುತ್ತಿಲ್ಲ. ಜೈಲು ಸೆಲ್​ನ ಕಾರಿಡಾರ್​​ನಲ್ಲಿ ಮಾತ್ರ ವಾಕ್ ಮಾಡಲು ಬಿಡುತ್ತಿದ್ದಾರೆ. ಬೆನ್ನು ನೋವಿದ್ದರೂ ಕೇವಲ 2-3 ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.

ಸುದೀರ್ಘ ಜೈಲುವಾಸದಿಂದ ಜೀವನೋಪಾಯಕ್ಕೂ ಸಮಸ್ಯೆ ಆಗಿದೆ. ಪ್ರತಿ ವರ್ಷ 2 ಅಥವಾ 3 ಚಿತ್ರಗಳಿಗೆ ಸಹಿ ಮಾಡುತ್ತಿದ್ದೆ. ಜಾಮೀನು ರದ್ದುಪಡಿಸುವ ವೇಳೆಯೂ 3 ಸಿನಿಮಾಗಳಿಗೆ ಸಹಿ ಮಾಡಿದ್ದೆ. ಕೆವಿಎನ್ ಪ್ರೊಡಕ್ಷನ್ಸ್, ಮೀಡಿಯಾ ಹೌಸ್ ಸ್ಟೂಡಿಯೋಸ್​ನ ಸಿನಿಮಾಗಳಿಗೆ ಸಹಿ ಮಾಡಲಾಗಿತ್ತು. ನಿರ್ಮಾಪಕರು 6 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಜೈಲು ಸೇರಿದ್ದರಿಂದ ಸಿನಿಮಾ ನಿಂತುಹೋಗಿದೆ ಎಂದು ದರ್ಶನ್ ಸಮಸ್ಯೆ ಹೇಳಿಕೊಂಡಿದ್ದಾರೆ.

ಹೊಸ ಚಿತ್ರಗಳನ್ನೂ ಕಳೆದುಕೊಂಡಿರುವುದರಿಂದ ನಷ್ಟ ಆಗಿದೆ. ಸುದೀರ್ಘ ಜೈಲುವಾಸವು ವೃತ್ತಿಜೀವನಕ್ಕೆ ಮರಣಗಂಟೆಯಾಗಲಿದೆ. ವೃತ್ತಿ ನಡೆಸುವ ಮೂಲಭೂತ ಹಕ್ಕಿನ ಹರಣವಾಗಲಿದೆ. 262 ಸಾಕ್ಷಿಗಳ ವಿಚಾರಣೆ ಆಗಬೇಕೆಂದು ಆರೋಪಪಟ್ಟಿ ಸಲ್ಲಿಸಲಾಗಿದೆ. 8 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ಆಗಿದೆ
ಶೀಘ್ರದಲ್ಲಿ ಸಾಕ್ಷ್ಯ ವಿಚಾರಣೆ ಮುಗಿಯುವ ಲಕ್ಷಣಗಳಿಲ್ಲ. ಹೀಗಾಗಿ ಜಾಮೀನು ನೀಡುವಂತೆ ದರ್ಶನ್ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ಸುಪ್ರೀಂಕೋರ್ಟ್ ಮೊರೆ ಹೋದ ದರ್ಶನ್

ಸೋಮವಾರ (ಮೇ 4) ಸುಪ್ರೀಂಕೋರ್ಟ್​​ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಮೊದಲು ಅವರಿಗೆ ನೀಡಿದ್ದ ಜಾಮೀನನ್ನು ರದ್ದು ಮಾಡಲಾಗಿತ್ತು. ಈ ಬಾರಿ ಅವರಿಗೆ ರಿಲೀಫ್ ಸಿಗುತ್ತಾ ಅಥವಾ ಇಲ್ಲವಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 5:08 pm, Sun, 3 May 26

Source link

ICAI CA Exam: CA ವಿದ್ಯಾರ್ಥಿಗಳ ಗಮನಕ್ಕೆ; ಸೆಪ್ಟೆಂಬರ್ – ನವೆಂಬರ್ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ – Kannada News | ICAI CA Exam Schedule Sep Nov 2026: Foundation, Inter, Final Dates and Application Details

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) 2026 ರ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿಯಲ್ಲಿ ನಡೆಯಲಿರುವ ಚಾರ್ಟರ್ಡ್ ಅಕೌಂಟೆನ್ಸಿ (CA) ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಫೈನಲ್ ಪರೀಕ್ಷೆಗಳ ದಿನಾಂಕಗಳ ಜೊತೆಗೆ ಅರ್ಜಿಯ ವಿವರಗಳನ್ನು ಸಂಸ್ಥೆಯು ಹಂಚಿಕೊಂಡಿದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಜುಲೈ 6 ರಿಂದ ತಮ್ಮ ಪರೀಕ್ಷಾ ನಮೂನೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ICAI ನ ಅಧಿಕೃತ ಸ್ವಯಂ ಸೇವಾ ಪೋರ್ಟಲ್ (eservices.icai.org) ಬಳಸಬಹುದು. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಅಥವಾ ಹಿಂದಿ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಪರೀಕ್ಷಾ ವೇಳಾಪಟ್ಟಿ ಹೀಗಿದೆ:

ಪರೀಕ್ಷೆಯ ವಿವರ ಪರೀಕ್ಷಾ ದಿನಾಂಕಗಳು
CA ಫೌಂಡೇಶನ್ ಸೆಪ್ಟೆಂಬರ್ 2, 5, 7, 9
CA ಇಂಟರ್ಮೀಡಿಯೇಟ್ (ಗ್ರೂಪ್ I) ಸೆಪ್ಟೆಂಬರ್ 1, 3, 6
CA ಇಂಟರ್ಮೀಡಿಯೇಟ್ (ಗ್ರೂಪ್ II) ಸೆಪ್ಟೆಂಬರ್ 8, 10, 12
CA ಫೈನಲ್ (ಗುಂಪು I) ನವೆಂಬರ್ 2, 4, 6
CA ಫೈನಲ್ (ಗುಂಪು II) ನವೆಂಬರ್ 9, 11, 13
INTT-AT ಪರೀಕ್ಷೆ ನವೆಂಬರ್ 11, 13
IRM ತಾಂತ್ರಿಕ ಪರೀಕ್ಷೆ ನವೆಂಬರ್ 6, 9, 11, 13

ವೇಳಾಪಟ್ಟಿಯಲ್ಲಿ ಬದಲಾವಣೆ ಇರುವುದಿಲ್ಲ:

ಪರೀಕ್ಷಾ ದಿನಗಳಂದು ಸರ್ಕಾರವು ಸಾರ್ವಜನಿಕ ರಜಾದಿನ ಘೋಷಿಸಿದರೂ ಸಹ, ನಿಗದಿತ ವೇಳಾಪಟ್ಟಿಯಲ್ಲೇ ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ICAI ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಒಎನ್‌ಜಿಸಿ ವಿದ್ಯಾರ್ಥಿವೇತನ; ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 48,000ರೂ. ಆರ್ಥಿಕ ನೆರವು

ಪರೀಕ್ಷಾ ಸಮಯ ಮತ್ತು ಅವಧಿ

  • ಹೆಚ್ಚಿನ ಪರೀಕ್ಷೆಗಳು ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ನಡೆಯಲಿವೆ.

  • ಫೌಂಡೇಶನ್ ಪೇಪರ್ 3 ಮತ್ತು 4 ಕ್ಕೆ 2 ಗಂಟೆಗಳ ಕಾಲಾವಕಾಶವಿರುತ್ತದೆ.

  • ಫೈನಲ್ ಪೇಪರ್ 6 ಮತ್ತು ಅಂತರರಾಷ್ಟ್ರೀಯ ತೆರಿಗೆ ಮೌಲ್ಯಮಾಪನ ಪರೀಕ್ಷೆಗೆ 4 ಗಂಟೆಗಳ ಕಾಲಾವಕಾಶ ನೀಡಲಾಗಿದೆ.

  • ಪ್ರಶ್ನೆ ಪತ್ರಿಕೆ ಓದಲು ಹೆಚ್ಚಿನ ಪರೀಕ್ಷೆಗಳಿಗೆ 15 ನಿಮಿಷಗಳ ಹೆಚ್ಚುವರಿ ಸಮಯ (ಮಧ್ಯಾಹ್ನ 1:45 ರಿಂದ) ನೀಡಲಾಗುವುದು.

ಪರೀಕ್ಷಾ ಅರ್ಜಿ ಶುಲ್ಕದ ವಿವರಗಳು:

  • CA ಫೌಂಡೇಶನ್: 1,500 ರೂ.

  • CA ಇಂಟರ್ಮೀಡಿಯೇಟ್: ಒಂದು ಗ್ರೂಪ್‌ಗೆ 1,500 ರೂ., ಎರಡೂ ಗ್ರೂಪ್‌ಗಳಿಗೆ 2,700 ರೂ.

  • CA ಫೈನಲ್: ಒಂದು ಗ್ರೂಪ್‌ಗೆ 1,800 ರೂ., ಎರಡೂ ಗ್ರೂಪ್‌ಗಳಿಗೆ 3,300 ರೂ.

ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಅಪ್‌ಡೇಟ್‌ಗಳಿಗಾಗಿ ನಿಯಮಿತವಾಗಿ ICAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ಬೆಂಗಳೂರು ಎಕ್ಸ್‌‍‌ಪ್ರೆಸ್‌ವೇನಲ್ಲಿ ವಾಹನ ಪಲ್ಟಿ, ಕಾರಿನ ಡ್ಯಾಶ್ ಕ್ಯಾಮ್ ನಲ್ಲಿ ಭೀಕರ ದೃಶ್ಯ ಸೆರೆ – Kannada News | Tender coconut vehicle overturns In mysuru bengaluru expressway, here is Video

ಮಂಡ್ಯ, (ಮೇ 03): ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎಳನೀರು ತುಂಬಿಕೊಂಡು ಹೋಗುತ್ತಿದ್ದ ಪಿಕ್ಅಪ್ ವಾಹನ ಏಕಾಏಕಿ ಪಲ್ಟಿಯಾಗಿದೆ. ಅತೀಯಾದ ಲೋಡ್, ಜೊತೆಗೆ ಅತೀಯಾದ ಬಿಸಿಲಿನ ವಾತಾವರಣದಿಂದ ಪಿಕ್ಅಪ್ ವಾಹನದ ಟೈಯರ್ ಸ್ಪೋಟಗೊಂಡಿದೆ. ಪರಿಣಾಮ ಪಿಕ್ ಅಪ್ ವಾಹನದ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಎಳನೀರು ಹೆದ್ದಾರಿಯಲ್ಲಿ ಚೆಲ್ಲಿದೆ. ಅತೀ ವೇಗವಾಗಿ ಬರುತ್ತಿದ್ದ ಇತರ ವಾಹನಗಳು ಸಹ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಈ ಘಟನೆಯ ದೃಶ್ಯ ಕಾರಿನ ಡ್ಯಾಶ್ ಕ್ಯಾಮ್​​ನಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆಗೆ ಬಿಜೆಪಿಯಿಂದ ಹೊಸ ತಗಾದೆ: ಇಲ್ಲಿದೆ ಅಸಲಿ ಕಾರಣ – Kannada News | Hubballi Dharwad Corporation Split Controversy: whats BJP’s demand; Here is the real reason

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ Image Credit source: tv9 kannada

ಧಾರವಾಡ, ಮೇ 03: ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರವೇ (Hubballi-Dharwad Corporation) ದೊಡ್ಡದು. ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಧಾರವಾಡಕ್ಕೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಅನ್ನೋ ಕಾರಣಕ್ಕೆ ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ನಡೆಯಿತು. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಧಾರವಾಡ (Dharwad) ಪ್ರತ್ಯೇಕ ಪಾಲಿಕೆಗೆ ನಿರ್ಣಯ ಮಂಡಿಸಿ, ಸರಕಾರಕ್ಕೆ ಕಳಿಸಲಾಗಿತ್ತು. ಒತ್ತಡ ಹೆಚ್ಚಾಗಿದ್ದರಿಂದಾಗಿ ಸಿಎಂ ಸಿದ್ದರಾಮಯ್ಯ ಕಳೆದ ವರ್ಷವಷ್ಟೇ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿದ್ದರು. ಆದರೆ ಇದೀಗ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ (Bjp) ಪ್ರತ್ಯೇಕ ಪಾಲಿಕೆ ಬೇಡ ಅಂತಾ ನಿರ್ಣಯಿಸಿ, ಬೃಹತ್ ಮಹಾನಗರ ಪಾಲಿಕೆಗೆ ಬೇಡಿಕೆ ಇಟ್ಟು, ನಿರ್ಣಯ ಮಂಡಿಸಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಮಹಾನಗರ ಪಾಲಿಕೆ ಅನ್ನೋ ಖ್ಯಾತಿಗೆ ಒಳಗಾಗಿದ್ದು, ಒಟ್ಟು 82 ವಾರ್ಡ್​ಗಳನ್ನು ಹೊಂದಿದೆ. ಸದ್ಯಕ್ಕೆ ಯೋಜಿತ 13 ಲಕ್ಷ ಜನಸಂಖ್ಯೆ ಹೊಂದಿರುವ ಈ ಪಾಲಿಕೆಯಿಂದ ಧಾರವಾಡವನ್ನು ಪ್ರತ್ಯೇಕ ಪಾಲಿಕೆಯನ್ನಾಗಿ ಮಾಡಬೇಕೆನ್ನೋದು ಹಲವಾರು ವರ್ಷಗಳ ಬೇಡಿಕೆ. ಹುಬ್ಬಳ್ಳಿ ರಾಜಕೀಯ ಕೇಂದ್ರವಾಗಿರೋದ್ರಿಂದಾಗಿ ಅಲ್ಲಿಗೆ ಹೆಚ್ಚಿನ ಅನುದಾನ ಬಳಕೆಯಾಗುತ್ತೆ ಅನ್ನೋದು ಧಾರವಾಡಿಗರ ಆಕ್ಷೇಪ. ಅಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟೇ ಅನುದಾನ ಬಳಕೆಯಾದರೂ ಹೆಚ್ಚಿನ ಪಾಲು ಹುಬ್ಬಳ್ಳಿಗೆ ಹೋಗುತ್ತೆ ಅನ್ನೋದು ಕೂಡ ಧಾರವಾಡಿಗರ ಆಕ್ರೋಶ. ಇದೇ ಕಾರಣಕ್ಕೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಅನ್ನೋ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು.

ಬಿಜೆಪಿ ಹೊಸ ವರಸೆ

ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಸೇರಿಕೊಂಡು ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ಪಾಲಿಕೆಗೆ ನಿರ್ಣಯ ಮಂಡಿಸಿ, ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದವು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಪ್ರತ್ಯೇಕ ಪಾಲಿಕೆಯ ಘೋಷಣೆ ಮಾಡಿದ್ದರು. ಆದರೆ ಇದೀಗ ಅದೇ ಆಡಳಿತಾರೂಢ ಬಿಜೆಪಿ ಹೊಸ ವರಸೆಯೊಂದನ್ನು ತೆಗೆದಿದ್ದು, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬದಲು ಇದೇ ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಅಂತಾ ಘೋಷಿಸಲು ನಿರ್ಣಯ ಮಂಡಿಸಿದೆ. ಇದು ಧಾರವಾಡ ಜನರ ಕಂಗೆಣ್ಣಿಗೆ ಗುರಿಯಾಗಿದೆ.

ಬಿಜೆಪಿಗರ ವಾದವೇನು?

ಪಾಲಿಕೆಯ ಈ ಹೊಸ ನಿರ್ಣಯದ ಹಿಂದೆ ಬೇರೆಯದೇ ಆದ ಉದ್ದೇಶವಿದೆ ಅನ್ನೋದು ಬಿಜೆಪಿಗರ ಹೇಳಿಕೆ. ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆಯಾದಾಗ ಈಗಿರುವ ವಾರ್ಡುಗಳನ್ನು ಸಮಾನಾಂತರವಾಗಿ ವಿಭಜಿಸಲಾಗುತ್ತೆ ಅಂದುಕೊಳ್ಳಲಾಗಿತ್ತು. ಅದರೆ 82 ವಾರ್ಡುಗಳಲ್ಲಿ ಧಾರವಾಡಕ್ಕೆ ಕೇವಲ 26 ವಾರ್ಡುಗಳನ್ನು ಬಿಟ್ಟುಕೊಟ್ಟರೆ ಪಾಲಿಕೆಯ ಆರ್ಥಿಕ ಪರಿಸ್ಥಿತಿಯ ಕಥೆ ಏನು ಅನ್ನೋದು ಬಿಜೆಪಿ ಸದಸ್ಯರ ವಾದ. ಅಲ್ಲದೇ ಧಾರವಾಡ ತಾಲೂಕಿನ ನಾಲ್ಕು ಗ್ರಾಮ ಪಂಚಾಯತ್​​ಗಳನ್ನು ಧಾರವಾಡ ಪಾಲಿಕೆಗೆ ಸೇರಿಸಬೇಕು ಅನ್ನೋದು ಸರಕಾರದ ಲೆಕ್ಕಾಚಾರವಾಗಿತ್ತು. ಆದರೆ ಆ ಗ್ರಾಮ ಪಂಚಾಯತ್​ನವರು ಇದಕ್ಕೆ ಒಪ್ಪಲೇ ಇಲ್ಲ. ಇದೇ ಕಾರಣಕ್ಕೆ ಗ್ರಾಮ ಪಂಚಾಯತ್ ಜಾಗವನ್ನಷ್ಟೇ ಪಾಲಿಕೆಗೆ ಸೇರಿಸಿ, ಆ ನಾಲ್ಕೂ ಗ್ರಾಮ ಪಂಚಾಯತ್​ಗಳನ್ನು ಹಾಗೆಯೇ ಬಿಡಲು ಯೋಜನೆ ರೂಪಿಸಲಾಯಿತು. ಇದರಿಂದಾಗಿ ಸಮಸ್ಯೆ ಹೆಚ್ಚಾಗುತ್ತೆಯೇ ಹೊರತು ಪರಿಹಾರ ಸಿಗುವುದಿಲ್ಲ.

ಇದನ್ನು ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ಫೈಟ್: ಬೃಹತ್ ಪಾಲಿಕೆಗೆ ಬಿಜೆಪಿ ಪಟ್ಟು, ವಿಭಜನೆಯೇ ಲೇಸು ಎಂದ ಕಾಂಗ್ರೆಸ್

ಅಲ್ಲದೇ ಮೈಸೂರು ಮಹಾನಗರ ಪಾಲಿಕೆಗಿಂತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ದೊಡ್ಡದು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ಹೊರಟಿದ್ದಾರೆ. ಒಂದು ವೇಳೆ ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆ ಅಸ್ವಿತ್ವದಲ್ಲಿದ್ದರೆ ಮೊದಲಿಗೆ ಇದನ್ನೇ ಬೃಹತ್ ಮಹಾನಗರ ಪಾಲಿಕೆ ಮಾಡಬೇಕಾಗುತ್ತೆ. ಹೀಗಾಗಿ ಇದನ್ನು ಒಡೆದು, ಬಳಿಕ ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ತಂತ್ರ ರೂಪಿಸಿದ್ದಾರೆ ಅನ್ನೋದು ಬಿಜೆಪಿ ಮುಖಂಡರ ಆರೋಪ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರತ್ಯೇಕ ಪಾಲಿಕೆ ಮಾಡೋದು ಬೇಡ ಅನ್ನೋದು ಅವರ ವಾದ.

ಅನುದಾನಕ್ಕೂ ಕೊರತೆ?

ಇನ್ನು 16ನೇ ಹಣಕಾಸು ಆಯೋಗದಿಂದ ಸುಮಾರು 56 ಸಾವಿರ ಕೋಟಿ ರೂ ಅನುದಾನ ಬರುತ್ತೆ. ಈ ಅನುದಾನ ಸಿಗಬೇಕೆಂದರೆ ಪಾಲಿಕೆಯ ವ್ಯಾಪ್ತಿಯಲ್ಲಿ 10 ರಿಂದ 40 ಲಕ್ಷ ಜನಸಂಖ್ಯೆ ಇರಬೇಕು ಅನ್ನೋ ನಿಯಮವಿದೆ. ಇದೀಗ ಅವಳಿ ನಗರದ ಪಾಲಿಕೆ ವಿಭಜನೆಯಾದರೆ ಎರಡರಲ್ಲೂ 10 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಆಗುತ್ತೆ. ಇದರಿಂದಾಗಿ ಅನುದಾನ ಸಿಗುವುದಿಲ್ಲ. ಅಲ್ಲದೇ ಇಂಥ ಅನೇಕ ತಾಂತ್ರಿಕ ಸಮಸ್ಯೆಗಳು ತಲೆದೋರೋದರಿಂದಾಗಿ ಎರಡೂ ಪಾಲಿಕೆಗಳಿಗೆ ಅನುದಾನ ಸಿಗೋದೇ ಕಡಿಮೆಯಾಗುತ್ತೆ ಅನ್ನೋದು ಕೂಡ ಆಡಳಿತಾರೂಢ ಬಿಜೆಪಿ ಸದಸ್ಯರ ವಾದ. ಒಟ್ಟಿನಲ್ಲಿ ಈ ಪ್ರಕರಣ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದೇ ಇದೀಗ ಕುತೂಹಲಕಾರಿ ವಿಚಾರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Vastu Tips: ಮನಿ ಪ್ಲಾಂಟ್ ಇಟ್ಟರೂ ಹಣದ ಕೊರತೆಯೇ? ಹಾಗಿದ್ದರೆ ಈ 5 ವಾಸ್ತು ತಪ್ಪುಗಳ ಬಗ್ಗೆ ತಿಳಿಯಿರಿ – Kannada News | Money Plant Vastu: Avoid These Placement Mistakes for Financial Prosperity

ಅನೇಕ ಜನರು ಮನೆಗೆ ಸಮೃದ್ಧಿ ಬರಲಿ ಎಂದು ಮನಿ ಪ್ಲಾಂಟ್ (Money Plant) ಬೆಳೆಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ಲಾಭದ ಬದಲು ಭಾರಿ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಮನಿ ಪ್ಲಾಂಟ್ ಇಡುವಾಗ ನಾವು ಮಾಡುವ ಸಾಮಾನ್ಯ ತಪ್ಪುಗಳು ಮತ್ತು ಅವುಗಳ ಪರಿಣಾಮಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ.

ಈಶಾನ್ಯ ಮೂಲೆಯಲ್ಲಿ ಎಂದಿಗೂ ಇಡಬೇಡಿ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಈಶಾನ್ಯ (North-East) ಮೂಲೆಯಲ್ಲಿ ಮನಿ ಪ್ಲಾಂಟ್ ಅನ್ನು ಎಂದಿಗೂ ಇಡಬಾರದು. ಈ ದಿಕ್ಕಿನಲ್ಲಿ ಗಿಡವನ್ನು ಇಟ್ಟರೆ ಸಾಲದ ಹೊರೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಮನೆಯ ಆದಾಯದ ಬಹುಭಾಗವು ಅನಗತ್ಯ ವೈದ್ಯಕೀಯ ವೆಚ್ಚಗಳು ಮತ್ತು ಅನಾರೋಗ್ಯದ ಕಾರಣಕ್ಕೆ ಖರ್ಚಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಆರ್ಥಿಕ ಸ್ಥಿರತೆಗಾಗಿ ಈ ದಿಕ್ಕನ್ನು ತಪ್ಪಿಸುವುದು ಉತ್ತಮ.

ಸ್ನಾನಗೃಹದ ಹತ್ತಿರ ಬೇಡವೇ ಬೇಡ:

ಮನೆ ಅಲಂಕಾರಕ್ಕಾಗಿ ಇಂದು ಅನೇಕರು ಸ್ನಾನಗೃಹದ (Bathroom) ಒಳಗೆ ಅಥವಾ ಹತ್ತಿರ ಮನಿ ಪ್ಲಾಂಟ್ ಇಡುತ್ತಾರೆ. ಆದರೆ ಇದು ವಾಸ್ತು ಪ್ರಕಾರ ದೋಷಪೂರಿತವಾಗಿದೆ. ಮನಿ ಪ್ಲಾಂಟ್ ಐಶ್ವರ್ಯ ಕಾರಕನಾದ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ, ಆದರೆ ಸ್ನಾನಗೃಹವು ರಾಹುವಿನ ಸ್ಥಾನವೆಂದು ಪರಿಗಣಿಸಲಾಗಿದೆ. ಇವೆರಡರ ಸಂಯೋಗದಿಂದ ಆದಾಯದ ಮೂಲಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗಬಹುದು.

ಮಲಗುವ ಕೋಣೆಯಲ್ಲಿ ಈ ಎಚ್ಚರಿಕೆ ಇರಲಿ:

ಮಲಗುವ ಕೋಣೆಯಲ್ಲಿ ಮನಿ ಪ್ಲಾಂಟ್ ಇಡುವುದಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ನೀವು ಮಲಗುವ ದಿಕ್ಕಿನಲ್ಲಿ ಅಥವಾ ಬೆಡ್‌ನ ಹೆಡ್‌ಬೋರ್ಡ್ ಬಳಿ ಈ ಗಿಡವನ್ನು ಇಡಬೇಡಿ. ಹೀಗೆ ಮಾಡುವುದರಿಂದ ದಂಪತಿಗಳ ನಡುವೆ ಅನಗತ್ಯ ಜಗಳ ಮತ್ತು ಮನಸ್ತಾಪಗಳು ಉಂಟಾಗಬಹುದು. ಅಷ್ಟೇ ಅಲ್ಲದೆ, ಇದು ಮಾನಸಿಕ ಒತ್ತಡ ಮತ್ತು ಉದ್ವೇಗವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕತ್ತಲೆಯಾದ ಸ್ಥಳದಿಂದ ದೂರವಿಡಿ:

ಮನಿ ಪ್ಲಾಂಟ್ ಎಲ್ಲಿಟ್ಟರೂ ಬೆಳೆಯುತ್ತದೆ ಎಂಬುದು ನಿಜ, ಆದರೆ ಅದು ಸಕಾರಾತ್ಮಕ ಫಲ ನೀಡಬೇಕಾದರೆ ಬೆಳಕು ಮುಖ್ಯ. ಕತ್ತಲೆಯಾದ ಅಥವಾ ಮಂದ ಬೆಳಕಿರುವ ಸ್ಥಳದಲ್ಲಿ ಮನಿ ಪ್ಲಾಂಟ್ ಇಟ್ಟರೆ ಅದು ಆರ್ಥಿಕ ಸಂಕಷ್ಟಗಳನ್ನು ಆಕರ್ಷಿಸುತ್ತದೆ. ಗಿಡವು ಸರಿಯಾಗಿ ಬೆಳೆಯದೆ ಬಾಡಿ ಹೋದರೆ, ಅದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಬಳ್ಳಿಗಳು ನೆಲವನ್ನು ಮುಟ್ಟದಂತೆ ನೋಡಿಕೊಳ್ಳಿ:

ಮನಿ ಪ್ಲಾಂಟ್‌ನ ಬಳ್ಳಿಗಳು ಯಾವಾಗಲೂ ಮೇಲ್ಮುಖವಾಗಿ ಬೆಳೆಯಬೇಕು. ಒಂದು ವೇಳೆ ಬಳ್ಳಿಗಳು ಕೆಳಕ್ಕೆ ನೇತಾಡಿ ನೆಲವನ್ನು ಮುಟ್ಟುತ್ತಿದ್ದರೆ, ಅದನ್ನು ತಕ್ಷಣವೇ ಸರಿಪಡಿಸಿ. ಬಳ್ಳಿಗಳು ನೆಲ ಮುಟ್ಟುವುದು ಲಕ್ಷ್ಮಿ ದೇವಿಗೆ ಮಾಡುವ ಅವಮಾನ ಎಂದು ನಂಬಲಾಗಿದೆ. ಇದು ಮನೆಯಲ್ಲಿ ವಾಸ್ತು ದೋಷ ಉಂಟುಮಾಡಿ, ಬರಬೇಕಾದ ಐಶ್ವರ್ಯ ಮತ್ತು ಸಮೃದ್ಧಿಯನ್ನು ತಡೆಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯರಿಲ್ಲದ ವಿಶ್ವ ಏಕದಿನ XI ಪ್ರಕಟಿಸಿದ ಬಾಬರ್ ಆಝಂ – Kannada News | Babar Azam’s World ODI XI Sparks Debate: Shocking Exclusion of Indian Cricketers

ಭಾರತದಲ್ಲಿ ಐಪಿಎಲ್ ನಡೆಯುತ್ತಿರುವಂತೆ ಪಾಕಿಸ್ತಾನದಲ್ಲಿ ಪಿಎಸ್​ಎನ್ ನಡೆಯುತ್ತಿದೆ. ಈ ಲೀಗ್‌ನಲ್ಲಿ ಬಾಬರ್ ಆಝಂ ನಾಯಕತ್ವದ ಪೇಶಾವರ್ ಜಲ್ಮಿ ತಂಡ ಫೈನಲ್​ಗೇರಿದ್ದು, ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಆದರೆ ಅದಕ್ಕೂ ಮುನ್ನ ತಂಡದ ಪಾಡ್‌ಕ್ಯಾಸ್ಟ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದ ಬಾಬರ್ ಆಝಂಗೆ ತಮ್ಮ ವಿಶ್ವ ಏಕದಿನ 11 ಹೆಸರಿಸುವಂತೆ ಕೇಳಿಕೊಳ್ಳಲಾಗಿದೆ. ಅದರಂತೆ ಬಾಬರ್ ತಮ್ಮ ವಿಶ್ವ ಏಕದಿನ XI ಅನ್ನು ಆಯ್ಕೆ ಮಾಡಿದ್ದಾರೆ. ಆಶ್ಚರ್ಯಕರವಾಗಿ, ಬಾಬರ್ ಅವರ ಈ ತಂಡದಲ್ಲಿ ಯಾವುದೇ ಭಾರತೀಯ ಆಟಗಾರನಿಗೆ ಸ್ಥಾನ ನೀಡಲಾಗಿಲ್ಲ.

ಏಕದಿನ ಕ್ರಿಕೆಟ್​ಗೆ ಹೇಳಿ ಮಾಡಿಸಿರುವಂತಹ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಅದರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಏಕದಿನ ತಂಡದಿಂದ ಹೊರಗಿಟ್ಟು ನೋಡಲು ಯಾರಿಗೂ ಸಾಧ್ಯವಿಲ್ಲ. ಹೀಗಿರುವಾಗ ಬಾಬರ್ ತಮ್ಮ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಆಟಗಾರನಿಗೆ ಅವಕಾಶ ನೀಡಿಲ್ಲ. ಹಾಗಿದ್ದರೆ, ಬಾಬರ್ ಹೆಸರಿಸಿದ ತಂಡದಲ್ಲಿ ಯಾವ್ಯಾವ ದೇಶದ ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..

ಒಂದು ದೇಶದಿಂದ ಇಬ್ಬರು ಆಟಗಾರರ ಆಯ್ಕೆ

ಬಾಬರ್ ಆಝಂ ಅವರ ವಿಶ್ವ ಏಕದಿನ XI ನಲ್ಲಿ ಆಸ್ಟ್ರೇಲಿಯಾದ ಆಟಗಾರರಿಗೆ ಆರಂಭಿಕ ಸ್ಥಾನವನ್ನು ನೀಡಲಾಗಿದೆ. ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್​ಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಲಾಗಿದೆ. ದಕ್ಷಿಣ ಆಫ್ರಿಕಾದಿಂದ ಕಗಿಸೊ ರಬಾಡ ಮತ್ತು ಐಡೆನ್ ಮಾರ್ಕ್ರಾಮ್ ಆಯ್ಕೆಯಾಗಿದ್ದರೆ, ನ್ಯೂಜಿಲೆಂಡ್‌ ತಂಡದಿಂದ ರಚಿನ್ ರವೀಂದ್ರ ಮತ್ತು ಮಿಚೆಲ್ ಸ್ಯಾಂಟ್ನರ್ ಹಾಗೂ ಇಂಗ್ಲೆಂಡ್‌ ತಂಡದಿಂದ ಹ್ಯಾರಿ ಬ್ರೂಕ್ ಮತ್ತು ಜೋಫ್ರಾ ಆರ್ಚರ್, ಪಾಕಿಸ್ತಾನದಿಂದ ಶಾಹಿದ್ ಅಫ್ರಿದಿ ಮತ್ತು ಮೊಹಮ್ಮದ್ ರಿಜ್ವಾನ್ ಮತ್ತು ಅಫ್ಘಾನಿಸ್ತಾನದಿಂದ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ. ತಂಡದ 12 ನೇ ಆಟಗಾರನಾಗಿ ಬಾಬರ್ ಆಝಂ ತಮ್ಮ ಹೆಸರನ್ನು ಆಯ್ಕೆ ಮಾಡಿದ್ದಾರೆ.

ಭಾರತೀಯರಿಲ್ಲದ ವಿಶ್ವ 11

ಈಗ ಪ್ರಶ್ನೆ ಏನೆಂದರೆ, ಇದು ಯಾವ ರೀತಿಯ ವಿಶ್ವ ಏಕದಿನ XI, ಇದರಲ್ಲಿ ಭಾರತ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಅಥವಾ ಶ್ರೀಲಂಕಾದ ಒಬ್ಬರು ಆಟಗಾರರಿಲ್ಲ?. ವಾಸ ಬಾಬರ್ ಪ್ರತಿ ದೇಶದಿಂದ ಇಬ್ಬರು ಆಟಗಾರರನ್ನು ಆಯ್ಕೆ ಮಾಡಬೇಕಿದ್ದರಿಂದ ಪ್ರತಿ ದೇಶದಿಂದ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ವಿಶ್ವ ಏಕದಿನ 11 ವಿಷಯಕ್ಕೆ ಬಂದಾಗ, ಭಾರತೀಯ ಆಟಗಾರರಿಲ್ಲದೆ ಅದು ಅಪೂರ್ಣವೆನಿಸುತ್ತದೆ. ಬಾಬರ್‌ಗಿಂತ ಮೊದಲು, ತಮ್ಮ ವಿಶ್ವ XI ಅನ್ನು ರಚಿಸಿದ ಯಾರಾದರೂ ಯಾವಾಗಲೂ ತಮ್ಮ ಏಕದಿನ ತಂಡಗಳಲ್ಲಿ ರೋಹಿತ್, ವಿರಾಟ್ ಅಥವಾ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಬಾಬರ್​ಗೆ ಮಾತ್ರ ಭಾರತೀಯ ಆಟಗಾರರು ನೆನಪಿಗೆ ಬಂದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Assembly Election Results 2026: ಐದು ರಾಜ್ಯಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ, ನಾಳೆ ವಿಧಾನಸಭಾ ಚುನಾವಣಾ ಫಲಿತಾಂಶ – Kannada News | Five State Assembly Election Results 2026, date and time Vote Counting, Political Future Decided

ಸಾಂದರ್ಭಿಕ ಚಿತ್ರ Image Credit source: Deccan Chronicle

ನವದೆಹಲಿ, ಮೇ 03: ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ(Assembly Election Result)ಕ್ಕೆ ಕ್ಷಣಗಣನೆ ಶುರುವಾಗಿದೆ. ಚುನಾವಣಾ ಆಯೋಗವು 2026 ರ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಮೇ 4 ರಂದು ಘೋಷಿಸಲಿದೆ. ಸೋಮವಾರ ಸಂಜೆಯ ವೇಳೆಗೆ ಫಲಿತಾಂಶ ಬರುವ ನಿರೀಕ್ಷೆಯಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ ನಂತರ ಇವಿಎಂಗಳಲ್ಲಿ ದಾಖಲಾಗಿರುವ ಮತಗಳನ್ನು ಎಣಿಕೆ ಮಾಡುವ ಪ್ರಮಾಣಿತ ಪ್ರಕ್ರಿಯೆಯನ್ನು ನಡೆಯುತ್ತದೆ. ಎಲ್ಲಾ ಎಣಿಕೆ ಕೇಂದ್ರಗಳಲ್ಲಿ ಬಹುಹಂತದ ಭದ್ರತಾ ಕವಚವನ್ನು ಅಳವಡಿಸಲಾಗಿದ್ದು, ಏಕಕಾಲದಲ್ಲಿ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿಧಾನಸಭಾ ಚುನಾವಣೆಗಳ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಸುದೀರ್ಘ ಮತದಾನ ಪ್ರಕ್ರಿಯೆಯ ನಂತರ, ನಾಳೆ ಬೆಳಿಗ್ಗೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಚಿತ್ರಣ ಸ್ಪಷ್ಟವಾಗಲಿದೆ. ನಿಖರ ಮಾಹಿತಿಗಾಗಿ results.eci.gov.in ಗೆ ಭೇಟಿ ನೀಡಬಹುದು.

ಈ ಬಾರಿಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಫಾಲ್ಟಾ ಕ್ಷೇತ್ರವು ವಿಶೇಷ ಗಮನ ಸೆಳೆದಿದೆ. ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಇಲ್ಲಿ ಆಯೋಗವು ಮಹತ್ವದ ನಿರ್ಧಾರ ಕೈಗೊಂಡಿದೆ. ಫಾಲ್ಟಾ ಕ್ಷೇತ್ರದ ಎಲ್ಲಾ 285 ಬೂತ್‌ಗಳಲ್ಲಿ ಮೇ 21 ರಂದು ಹೊಸದಾಗಿ ಮತದಾನ ನಡೆಸಲು ಆಯೋಗ ಆದೇಶಿಸಿದೆ. ಹಿಂದಿನ ಸುತ್ತಿನ ಮತದಾನದ ಸಮಯದಲ್ಲಿ ನಡೆದ ತೀವ್ರವಾದ ಚುನಾವಣಾ ಅಪರಾಧಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಬುಡಮೇಲು ಮಾಡುವಿಕೆಯ ವರದಿಗಳಿಂದಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ದಿಷ್ಟ ಸ್ಥಾನದ ಮತ ಎಣಿಕೆಯು ಮೇ 24 ರಂದು ನಡೆಯಲಿದೆ.

ಮತ್ತಷ್ಟು ಓದಿ: ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ, ಬೆಳಗ್ಗೆ 8ರಿಂದ ಮತ ಎಣಿಕೆ

ಐದು ರಾಜ್ಯಗಳಲ್ಲಿ ಹರಡಿರುವ 824 ಕ್ಷೇತ್ರಗಳ ಈ ಚುನಾವಣಾ ಫಲಿತಾಂಶವು ಕೇವಲ ಅಧಿಕಾರ ಹಸ್ತಾಂತರವಲ್ಲ. ಪ್ರಮುಖ ರಾಜಕೀಯ ಪಕ್ಷಗಳಿಗೆ ಇದು ರಾಷ್ಟ್ರಮಟ್ಟದ ಜನಬೆಂಬಲವನ್ನು ಅಳೆಯುವ ಮಾಪಕವಾಗಿದೆ. ಮೇ 4ರ ಫಲಿತಾಂಶವು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಜನತೆಯ ತೀರ್ಪನ್ನು ಜಗತ್ತಿನ ಮುಂದೆ ತೆರೆದಿಡಲಿದೆ. ಪ್ರಜಾಪ್ರಭುತ್ವದ ಈ ದೊಡ್ಡ ಹಬ್ಬದ ಅಂತಿಮ ಫಲಿತಾಂಶವು ಭಾರತದ ರಾಜಕೀಯ ಭೂಪಟದಲ್ಲಿ ಹೊಸ ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ.

ಅಸ್ಸಾಂನಲ್ಲಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ, ಪುನರುಜ್ಜೀವನಗೊಳ್ಳುತ್ತಿರುವ ವಿರೋಧ ಪಕ್ಷದ ಮೈತ್ರಿಕೂಟದ ಸವಾಲಿನ ನಡುವೆಯೂ ತನ್ನ ಭದ್ರಕೋಟೆಯನ್ನು ರಕ್ಷಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿ ಮತದಾರರ ಮನಗೆಲ್ಲಲು ಕಸರತ್ತು ನಡೆಸಿವೆ. ಆದರೆ ಈಗಾಗಲೇ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು ಎಲ್ಲರ ಚಿತ್ತ ಫಲಿತಾಂಂಸದತ್ತ ಕೇಂದ್ರಿಕೃತವಾಗಿದೆ.

ಚುನಾವಣೆ ಘೋಷಣೆಯಾದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದ್ದ ಈ ಚುನಾವಣೆ ಹೆಚ್ಚು ಕುತೂಹಲ ಕೆರಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಪಾರುಮತ್ಯ ಮೆರೆದಿದ್ದು, ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ ಬುಡ ಅಲುಗಾಡಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಅಖಾಡದಲ್ಲಿ ಎರಡು ಪಕ್ಷಗಳು ಸೆಡ್ಡು ಹೊಡೆದಿರುವುದರಿಂದ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ.

ಮತ ಎಣಿಕೆಗಾಗಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಂಡಿದೆ. ಮೊದಲು ಅಂಚೆ ಮತಪತ್ರಗಳನ್ನು (Postal Ballots) ಎಣಿಸಲಾಗುತ್ತದೆ, ನಂತರ ಇವಿಎಂ (EVM) ಮತಗಳ ಎಣಿಕೆ ನಡೆಯಲಿದೆ. ಮರು ಮತದಾನದ ಕಾರಣದಿಂದಾಗಿ ಪಶ್ಚಿಮ ಬಂಗಾಳದ ಫಾಲ್ಟಾ ಕ್ಷೇತ್ರದ ಫಲಿತಾಂಶ ಮಾತ್ರ ಮೇ 24ಕ್ಕೆ ಪ್ರಕಟವಾಗಲಿದ್ದು, ಉಳಿದೆಲ್ಲಾ ಕ್ಷೇತ್ರಗಳ ಫಲಿತಾಂಶ ನಾಳೆ ಸಂಜೆಯೊಳಗೆ ಲಭ್ಯವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link