Headlines

IND vs SL: ಕಾಲಿಸ್ ದಾಖಲೆ ಮುರಿದು ಗೇಲ್ ದಾಖಲೆಯನ್ನು ಸರಿಗಟ್ಟಿದ ಪಂತ್

ಭಾರತ ಹಾಗೂ ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 288 ರನ್ ಕಲೆಹಾಕಿದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಆದರೆ ಮಳೆಯಿಂದಾಗಿ ಎರಡನೇ ದಿನದಾಟದ ಮೊದಲ ಸೆಷನ್​ ನಡೆಯಲಿಲ್ಲ. ಆದಾಗ್ಯೂ ಎರಡನೇ ಸೆಷನ್ ಶುರುವಾಗಿದ್ದು, ಪಡಿಕ್ಕಲ್ ಹಾಗೂ ಪಂತ್ ಬ್ಯಾಟಿಂಗ್‌ ಮುಂದುವರೆಸಿದ್ದಾರೆ(PC-PTI). ಮೊದಲ ದಿನದಾಟದ ಅಂತ್ಯಕ್ಕೆ ದೇವದತ್ ಪಡಿಕ್ಕಲ್ 131 ರನ್‌ ಮತ್ತು ರಿಷಭ್…

Read More

ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು – Kannada News | Ramayana Trailer Chinese viewers praise Ranbir Kapoor Yash Sai Pallavi starrer movie

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬಜೆಟ್‌ನ ಮಹಾಕಾವ್ಯವಾಗಿ ಹೊರಹೊಮ್ಮುತ್ತಿದೆ. ಹಾಲಿವುಡ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಶೈಲಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಚೀನಾದಲ್ಲೂ ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಟ್ರೇಲರ್ ಈಗ ಚೀನಾದಲ್ಲಿ (China) ಸೃಷ್ಟಿಸಿರುವ ಕ್ರೇಜ್ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ. ಯೂಟ್ಯೂಬ್ ಹಾಗೂ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರೇಲರ್ ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು…

Read More

RRB Recruitment 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 3,993 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | RRB JE Recruitment 2026: 3993 Indian Railways Jr. Engineer and DMS Vacancies Out

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿImage Credit source: Getty Images ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN 04/2026) ಮೂಲಕ ಜೂನಿಯರ್ ಎಂಜಿನಿಯರ್ (JE) ಹಾಗೂ ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 3,993 ಹುದ್ದೆಗಳು ಖಾಲಿಯಿದ್ದು, ಅದರಲ್ಲಿ ಸಿಕಂದರಾಬಾದ್ ರೈಲ್ವೆ ವಲಯಕ್ಕೆ 110 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಎಂಜಿನಿಯರಿಂಗ್, ಎಲೆಕ್ಟ್ರಿಕಲ್,…

Read More

ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣ: ಮೃತರ ಕುಟುಂಬಸ್ಥರ ಒಪ್ಪಿಗೆ ಇಲ್ಲದೆಯೇ ಮುಗಿಯಿತಾ ಪೋಸ್ಟ್​ಮಾರ್ಟಮ್? – Kannada News | Hanur Forest Firing: Family Alleges Post Mortem Conducted Without Consent

ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣಕ್ಕೆ ಟ್ವಿಸ್ಟ್ ಮೈಸೂರು, ಆಗಸ್ಟ್ 16: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಆಂಥೋನಿ, ಪೀಟರ್ ಹಾಗೂ ಕುಮಾರ್ ಬಲಿಯಾದ ಪ್ರಕರಣ ತೀವ್ರ ಗಂಭೀರ ತಿರುವು ಪಡೆದುಕೊಂಡಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗೆ (Post-Mortem) ಕುಟುಂಬಸ್ಥರು ಒಪ್ಪಿಗೆ ನೀಡದಿರುವ ನಡುವೆಯೇ, ಪೊಲೀಸರು ಹಾಗೂ ಜಿಲ್ಲಾಡಳಿತ ಅಮಾಯಕರನ್ನು ಯಾಮಾರಿಸಿ ಪೋಸ್ಟ್​ಮಾರ್ಟಮ್ ಮುಗಿಸಿದ್ದಾರೆ ಎಂದು ಮೃತ ಪೀಟರ್ ಅವರ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ…

Read More

ವಾರಣಾಸಿ ಏರ್​ಪೋರ್ಟ್​ನಲ್ಲಿ ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಫೈರ್ ಆದ ಬಂದೂಕು; ಇಬ್ಬರು ಸಿಬ್ಬಂದಿಗೆ ಗಾಯ – Kannada News | Varanasi International Airport witnesses accidental firing during security screening, injuring two

ವಾರಣಾಸಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣImage Credit source: Nicolas Economou/NurPhoto via Getty Images ವಾರಣಾಸಿ, ಆಗಸ್ಟ್ 16: ವಿಮಾನ ಪ್ರಯಾಣಿಕರೊಬ್ಬರು ಭದ್ರತಾ ತಪಾಸಣೆ ವೇಳೆ ತಮ್ಮಲ್ಲಿದ್ದ ಪಿಸ್ತೂಲನ್ನು ಆಕಸ್ಮಿಕವಾಗಿ ಫೈರ್ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆ ಉತ್ತರಪ್ರದೇಶದ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Varanasi international airport) ಇಂದು (ಆಗಸ್ಟ್ 16) ಸಂಭವಿಸಿದೆ. ಮುಂಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ (IX-1810) ಪ್ರಯಾಣಿಕರೊಬ್ಬರು ತಂದಿದ್ದ ಪಿಸ್ತೂಲು ಭದ್ರತಾ ತಪಾಸಣೆ ವೇಳೆ…

Read More

WTC ಅಂಕಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ್ – Kannada News | WTC Points Table update after Bangladesh beat Australia

ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳ ಬೃಹತ್ ಅಂತರದಿಂದ ಮಣಿಸಿ ಬಾಂಗ್ಲಾದೇಶ್ ತಂಡ ಐತಿಹಾಸಿಕ ಜಯ ಸಾಧಿಸಿದೆ. ಇದು ಆಸ್ಟ್ರೇಲಿಯಾ ಮಣ್ಣಿನಲ್ಲಿ ಬಾಂಗ್ಲಾದೇಶ್ ತಂಡಕ್ಕೆ ಸಿಕ್ಕ ಮೊದಲ ಟೆಸ್ಟ್ ಗೆಲುವುವಾಗಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಬಾಂಗ್ಲಾ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಅಂಕಪಟ್ಟಿಯಲ್ಲೂ ಮೇಲೇರಿದೆ. ಅಗ್ರಸ್ಥಾನದಲ್ಲೇ ಉಳಿದ ಆಸ್ಟ್ರೇಲಿಯಾ! ಈ ಆಘಾತಕಾರಿ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಅಂಕಪಟ್ಟಿಯಲ್ಲಿ ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಆದರೆ,…

Read More

Pranav Ilango: ಭಾರತದ ಪ್ರತಿಭೆಗೆ ಅಮೆರಿಕದ ಮನ್ನಣೆ; 17 ವರ್ಷದ ಪ್ರಣವ್‌ಗೆ 3.55 ಕೋಟಿ ರೂ. ವಿದ್ಯಾರ್ಥಿವೇತನ – Kannada News | Pranav Ilango: 3.55 Cr Rs Brown University Full Scholarship Beyond JEE/NEET

3.55 ಕೋಟಿ ವಿದ್ಯಾರ್ಥಿವೇತನ ಗೆದ್ದ 17ರ ಹರೆಯದ ಯುವಕ ಭಾರತದಲ್ಲಿ 12 ನೇ ತರಗತಿ ಮುಗಿಯುತ್ತಿದ್ದಂತೆಯೇ ಬಹುತೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ಗಾಗಿ ನಡೆಸುವ JEE ಅಥವಾ ವೈದ್ಯಕೀಯ ಶಿಕ್ಷಣಕ್ಕಾಗಿ ಬರೆಯುವ NEET ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುತ್ತಾರೆ. ಆದರೆ, ತಮಿಳುನಾಡಿನ 17 ವರ್ಷದ ಪ್ರಣವ್ ಇಳಂಗೊ ಈ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ತಮ್ಮದೇ ಆದ ವಿಶಿಷ್ಟ ಹಾದಿಯನ್ನು ನಿರ್ಮಿಸಿಕೊಂಡಿದ್ದಾರೆ. ಶೈಕ್ಷಣಿಕ ಗಡಿಯನ್ನು ಮೀರಿ ಸಂಶೋಧನೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಪರಿಣಾಮ, ಇಂದು ಅವರು ಅಮೆರಿಕದ ಅತ್ಯಂತ ಪ್ರತಿಷ್ಠಿತ ಬ್ರೌನ್…

Read More

ಹನೂರಿನಲ್ಲಿ ಗುಂಡೇಟಿಗೆ ಮೂವರು ಬಲಿ ಪ್ರಕರಣ: ನ್ಯಾಯಾಂಗ ತನಿಖೆಗೆ ಆರ್​​. ಅಶೋಕ್​​ ಆಗ್ರಹ – Kannada News | Hanur Forest Firing: Leader of Opposition R. Ashok Demands Judicial Inquiry

ಆರ್​​. ಅಶೋಕ್​​ ( ಫೈಲ್​​ ಚಿತ್ರ)Image Credit source: R Ashoka Facebook Page ಬೆಂಗಳೂರು, ಆಗಸ್ಟ್​​ 16: ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್​​.ಅಶೋಕ್​​ ಆಗ್ರಹಿಸಿದ್ದಾರೆ. ಹನೂರಿನಲ್ಲಿ ಮೂವರು ರೈತರ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಉತ್ತರಗಳೇ ಪರಸ್ಪರ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡುತ್ತದೆ. ಸ್ಥಳೀಯ ಜನಪ್ರತಿನಿಧಿಗಳ ಹೇಳಿಕೆ ಮತ್ತೊಂದು ಕಥೆ ಹೇಳುತ್ತದೆ….

Read More

ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು! – Kannada News | Congress MLA K Shadakshari On Tiptur As Seperate District

ತುಮಕೂರು, ಆಗಸ್ಟ್ 16: ಕಾಂಗ್ರೆಸ್ ಹಿರಿಯ ಶಾಸಕ ಕೆ. ಷಡಕ್ಷರಿ ಅವರು ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಪ್ರಬಲ ಕೂಗು ಎತ್ತಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. “ಸಚಿವ ಸ್ಥಾನ ನೀಡಿ, ಇಲ್ಲವಾದರೆ ಪ್ರತ್ಯೇಕ ಜಿಲ್ಲೆ ಮಾಡಿ” ಎಂದು ಈ ಹಿಂದೆ ಆಗ್ರಹಿಸಿದ್ದ ಕೆ. ಷಡಕ್ಷರಿ ಅವರಿಗೆ ಸಚಿವ ಸ್ಥಾನ ದೊರೆಯದ ಕಾರಣ, ಈಗ ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲೇಬೇಕು ಎಂದು ತೀರ್ಮಾನಿಸಿದ್ದಾರೆ. ತಿಪಟೂರು ಕ್ಷೇತ್ರದ ಶಾಸಕರಾಗಿರುವ ಕೆ. ಷಡಕ್ಷರಿ ಅವರು,…

Read More

ನಮ್ಮ ಸೋಲಿಗೆ ಮೊದಲ ದಿನವೇ ಮುನ್ನಡಿ ಬರೆದಿದ್ದರು: ಪ್ಯಾಟ್ ಕಮಿನ್ಸ್​ – Kannada News | Pat Cummins Admits Day 1 Flop Sparked Historic Loss to Bangladesh

ಡಾರ್ವಿನ್​ನ ಮರಾರಾ ಓವಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಪರಾಜಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ಪಂದ್ಯದ ಮೊದಲ ದಿನವೇ ತಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಮೊದಲ ದಿನದ ಮುನ್ನುಡಿ! ಪಂದ್ಯದ ನಂತರ ಮಾತನಾಡಿದ ಕಮಿನ್ಸ್, “ಪಂದ್ಯದ ಮೊದಲ ದಿನವೇ ನಾವು ಹಿನ್ನಡೆ ಅನುಭವಿಸಿದೆವು. ಪಂದ್ಯಕ್ಕೆ ನಮ್ಮ ಸಿದ್ಧತೆಗಳು ಅತ್ಯುತ್ತಮವಾಗಿದ್ದವು. ಆದ್ದರಿಂದ…

Read More