ಡಿಕೆ ಹೇಳಿಕೆ, ಸಿಎಂ ನಡೆ ನೋಡಿದ್ರೆ ಕಾಂತ್ರಿ ಆಗುತ್ತೆ, ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ – Kannada News | Political Kranti after May 5th And President rule will be coming In Karnataka Says BJP MLA B Suresh Gowda

ತುಮಕೂರು, (ಏಪ್ರಿಲ್ 24): ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಸಂಬಂಧ ಕರ್ನಾಟಕ ಕಾಂಗ್ರೆಸ್​​ನಲ್ಲಿ ರಾಜಕೀಯ ಪ್ರಹಸನಗಳು ನಡೆಯುತ್ತಿವೆ. ಇದರ ಮಧ್ಯೆ ಬಿಜೆಪಿ ಶಾಸಕ ಬಿ.ಸುರೇಶ್​​ ಗೌಡ ಮಾತನಾಡಿ, ಡಿಕೆ ಹೇಳಿಕೆ, ಸಿಎಂ ನಡೆ ನೋಡಿದರೆ ಮೇ 5ರ ನಂತರ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗುತ್ತದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದ್ದು, ಡಿಕೆ ಹೇಳಿಕೆ, ಸಿಎಂ ನಡೆ ನೋಡಿದರೆ ಪಂಚರಾಜ್ಯ ಚುನಾವಣೆ ನಂತರ ರಾಜಕೀಯ ಬದಲಾವಣೆ ಆಗುತ್ತೆ. ಮುಖ್ಯಮಂತ್ರಿ ಆಗಬೇಕು ಅಂತ ಜಿ.ಪರಮೇಶ್ವರ್ ರೇಸ್​ನಲ್ಲಿದ್ದಾರೆ. ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ರೇಸ್​ನಲ್ಲಿ ಇದ್ದಾರೆ. ಅತ್ತ ಎಂ.ಬಿ.ಪಾಟೀಲ್ ಸಹ ಮುಖ್ಯಮಂತ್ರಿ ಆಗಬೇಕು ಅಂತಿದ್ದಾರೆ. ಡಿ.ಕೆ.ಶಿವಕುಮಾರ್​ ಈಗಾಗಲೇ ಮುಖ್ಯಮಂತ್ರಿ ಆಗೋಗಿದ್ದಾರೆ. ಮೇ 10ಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

30 ವರ್ಷಗಳ ಬಳಿಕ ಕಿಸ್ ಮಾಡಲು ಕಾಜೋಲ್ ಒಪ್ಪಿಕೊಂಡಿದ್ದೇಕೆ? ಸಿಕ್ತು ಉತ್ತರ – Kannada News | Kajol breaks silence on kissing scene in The Trial web series reason revealed

ಬಾಲಿವುಡ್‌ ನಟಿ ಕಾಜೋಲ್ (Kajol) ಅವರು ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳೇ ಕಳೆದಿವೆ. ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’, ‘ಕುಚ್ ಕುಚ್ ಹೋತಾ ಹೈ’ ರೀತಿಯ ಐಕಾನಿಕ್ ಸಿನಿಮಾಗಳ ಮೂಲಕ ಮನೆಮಾತಾಗಿರುವ ಈ ನಟಿ 30 ವರ್ಷಗಳ ಕಾಲ ಒಂದು ಕಟ್ಟುನಿಟ್ಟಿನ ನಿಯಮ ಪಾಲಿಸಿದ್ದರು. ಸಿನಿಮಾದಲ್ಲಿ ಅವರು ಸಹ-ನಟರ ಜೊತೆ ಕಿಸ್ (Kiss) ಮಾಡಿರಲಿಲ್ಲ. ಆದರೆ ‘ದಿ ಟ್ರಯಲ್’ (The Trial) ವೆಬ್ ಸರಣಿಯ ಮೂಲಕ ಒಟಿಟಿ ಲೋಕಕ್ಕೆ ಕಾಲಿಟ್ಟ ಕಾಜೋಲ್ ಅವರು ಮೊದಲ ಬಾರಿಗೆ ಕಿಸ್ ಮಾಡಿದರು. ಆ ಬಗ್ಗೆ ಅವರೀಗ ಪ್ರತಿಕ್ರಿಯೆ ನೀಡಿದ್ದಾರೆ.

‘ದಿ ಟ್ರಯಲ್’ ಸರಣಿಯು ಬಿಡುಗಡೆಯಾದಾಗ ಕಾಜೋಲ್ ಅವರ ಕಿಸ್ಸಿಂಗ್ ಸೀನ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಸಿನಿಮಾರಂಗದಲ್ಲಿ ಸುಮಾರು 30 ವರ್ಷಗಳಿಂದ ತಾವು ಪಾಲಿಸಿಕೊಂಡು ಬಂದಿದ್ದ ನಿಯಮವನ್ನು ಕಾಜೋಲ್ ಅದೇ ಮೊದಲ ಬಾರಿಗೆ ಮುರಿದಿದ್ದರು. ಸಹ-ನಟ ಜಿಶು ಸೇನ್‌ಗುಪ್ತಾ ಅವರೊಂದಿಗೆ ಅವರು ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತಾವು ಅಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ಅವರು ಈಗ ಬಹಿರಂಗಪಡಿಸಿದ್ದಾರೆ.

ಖ್ಯಾತ ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕಾಜೋಲ್, ಈ ನಿರ್ಧಾರದ ಬಗ್ಗೆ ಕೇಳಿದಾಗ ಕೆಲ ಕ್ಷಣ ಮೌನಕ್ಕೆ ಶರಣಾದರು. ನಂತರ ಉತ್ತರಿಸುತ್ತಾ, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ನಾನು ನಿರ್ವಹಿಸುತ್ತಿದ್ದ ಪಾತ್ರದ ಬೇಡಿಕೆಯಾಗಿತ್ತು. ಅದು ಕೇವಲ ಒಂದು ಮುತ್ತಿನ ದೃಶ್ಯವಾಗಿರಲಿಲ್ಲ. ಆಕೆಯ (ಪಾತ್ರ) ಆಲೋಚನೆಗಳು, ಆಕೆಯ ನಂಬಿಕೆಗಳು ಮತ್ತು ಆಕೆ ಏನನ್ನು ಬಯಸುತ್ತಿದ್ದಳು ಎಂಬುದನ್ನು ತೋರಿಸಲು ಅದು ಅನಿವಾರ್ಯವಾಗಿತ್ತು’ ಎಂದಿದ್ದಾರೆ.

‘ಅದು ಚಿತ್ರಕಥೆಯ ಅವಿಭಾಜ್ಯ ಅಂಗವಾಗಿತ್ತು. ಆ ದೃಶ್ಯವನ್ನು ತೆಗೆದುಹಾಕಿದ್ದರೆ ಆ ಪಾತ್ರದ ಆಳವನ್ನೇ ಕಳೆದುಕೊಳ್ಳಬೇಕಾಗುತ್ತಿತ್ತು. ಹಾಗಾಗಿಯೇ ನಾನು ಆ ನಿರ್ಧಾರ ಮಾಡಿದೆ’ ಎಂದು ಕಾಜೋಲ್ ಸ್ಪಷ್ಟಪಡಿಸಿದ್ದಾರೆ. ‘ವೈಯಕ್ತಿಕವಾಗಿ ನೀವು ಬದಲಾಗಿದ್ದರಿಂದ ಈ ದೃಶ್ಯಕ್ಕೆ ಒಪ್ಪಿಕೊಂಡಿರಾ’ ಎಂದು ಕೇಳಿದಾಗ ಕಾಜೋಲ್ ಕುತೂಹಲಕಾರಿ ಉತ್ತರ ನೀಡಿದರು.

ಇದನ್ನೂ ಓದಿ: ರಾಮೋಜಿ ಫಿಲ್ಮ್​ ಸಿಟಿಯಲ್ಲಿ ದೆವ್ವ ಇದೆ ಎಂದು ಹೇಳಿ ಉಲ್ಟಾ ಹೊಡೆದ ಕಾಜೋಲ್

‘ನಾನು ಆ ದೃಶ್ಯದ ಬಗ್ಗೆ ಅತೀವ ಮುಜುಗರ ಅನುಭವಿಸುತ್ತಿದ್ದೆ. ಸೆಟ್‌ನಲ್ಲಿ ನಿಲ್ಲುವವರೆಗೂ ನನಗೆ ಆ ಕಲ್ಪನೆಯೇ ಸರಿ ಅನ್ನಿಸುತ್ತಿರಲಿಲ್ಲ. ಸ್ಕ್ರಿಪ್ಟ್ ಓದುವಾಗ ಚೆನ್ನಾಗಿದೆ ಅನ್ನಿಸಿತ್ತು, ಆದರೆ ಅದನ್ನು ಮಾಡುವಾಗ ಮಾತ್ರ – ಕಟ್! ಇದು ನನ್ನಿಂದ ಸಾಧ್ಯವಿಲ್ಲ- ಎಂದು ಹೇಳಿಬಿಡೋಣ ಅಂತ ಯೋಚಿಸುತ್ತಿದ್ದೆ. ಆದರೆ ಅಂತಿಮವಾಗಿ ಅದೊಂದು ವೃತ್ತಿಪರ ನಿರ್ಧಾರವಾಗಿತ್ತು’ ಎಂದು ಕಾಜೋಲ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ – Kannada News | PM Narendra Modi called West Bengal phase 1 polling is beginning of end for TMCs jungle raj

ಕೊಲ್ಕತ್ತಾ, ಏಪ್ರಿಲ್ 24: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Assembly Elections) ಮೊದಲ ಹಂತದ ದಾಖಲೆಯ ಮತದಾನವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಜಂಗಲ್ ರಾಜ್​ನ ಅಂತ್ಯದ ಆರಂಭ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರರೆ. ಮೇ 4ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಖಂಡಿತವಾಗಿಯೂ ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಮಹಿಳಾ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಟಿಎಂಸಿಯನ್ನು ಮಹಿಳಾ ವಿರೋಧಿ ಪಕ್ಷ ಎಂದು ಮೋದಿ ಟೀಕಿಸಿದ್ದಾರೆ. ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ ಮಹಿಳೆಯರು ಬೆಳೆಯುವುದನ್ನು ಬಯಸುವುದಿಲ್ಲ. ಆದರೆ, ಮಹಿಳೆಯರ ಸುರಕ್ಷತೆಯೇ ಬಿಜೆಪಿಯ ಆದ್ಯತೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೊದಲ ಸಂಪುಟ ಸಭೆಯ ನಂತರ ಪಶ್ಚಿಮ ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯಡಿ ಫಲಾನುಭವಿಗಳಿಗೆ 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವುದು. ಬಿಜೆಪಿ ಕೊನೆಯ ಹಂತದ ವಿತರಣೆಯ ಮೇಲೆ ಕೇಂದ್ರೀಕರಿಸಿದೆ. ಅದಕ್ಕಾಗಿಯೇ ಅದು ನಿರಂತರವಾಗಿ ಜನರ ಬೆಂಬಲವನ್ನು ಪಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CBSE 10 Second Board Exam: CBSE 10ನೇ ತರಗತಿ ಎರಡನೇ ಬಾರಿಯ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಮೇ 15ರಿಂದ ಪರೀಕ್ಷೆ ಆರಂಭ – Kannada News | CBSE Class 10th 2026 Second Board Exam Date Sheet Released: May 15 21 Schedule

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ರ ಸಾಲಿನ 10ನೇ ತರಗತಿಯ ಎರಡನೇ ಬಾರಿಯ ಬೋರ್ಡ್ ಪರೀಕ್ಷೆಯ ದಿನಾಂಕ ಪಟ್ಟಿಯನ್ನು (Date Sheet) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮೊದಲ ಪ್ರಯತ್ನದಲ್ಲಿ ಅಂಕಗಳನ್ನು ಸುಧಾರಿಸಿಕೊಳ್ಳಲು ಬಯಸುವ ಅಥವಾ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಇದು ಸುವರ್ಣವಕಾಶವಾಗಲಿದೆ.

ಪರೀಕ್ಷಾ ಅವಧಿ ಮತ್ತು ವೇಳಾಪಟ್ಟಿ:

ಮಂಡಳಿಯ ಪ್ರಕಟಣೆಯಂತೆ, ಈ ವಿಶೇಷ ಪರೀಕ್ಷೆಗಳು ಮೇ 15 ರಿಂದ ಪ್ರಾರಂಭವಾಗಿ ಮೇ 21ರವರೆಗೆ ನಡೆಯಲಿವೆ. ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕೇವಲ ಒಂದು ವಾರದ ಅವಧಿಯಲ್ಲಿ ಎಲ್ಲಾ ಪ್ರಮುಖ ವಿಷಯಗಳ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಸಿಬಿಎಸ್‌ಇ ನಿರ್ಧರಿಸಿದೆ. ಪ್ರತಿ ವಿಷಯಕ್ಕೂ ಸಾಕಷ್ಟು ಸಮಯಾವಕಾಶ ಸಿಗುವಂತೆ ವೇಳಾಪಟ್ಟಿಯನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳು ಆಯಾ ದಿನಾಂಕಕ್ಕೆ ಅನುಗುಣವಾಗಿ ಸಿದ್ಧತೆ ನಡೆಸಬಹುದಾಗಿದೆ.

ಪ್ರಮುಖ ವಿಷಯಗಳ ಪರೀಕ್ಷಾ ದಿನಾಂಕಗಳು:

ಪರೀಕ್ಷೆಯ ಮೊದಲ ದಿನವಾದ ಮೇ 15 ರಂದೇ ಗಣಿತ (Standard & Basic) ಪತ್ರಿಕೆ ನಡೆಯಲಿದೆ. ಮೇ 16 ರಂದು ಇಂಗ್ಲಿಷ್ ಭಾಷೆಯ ಎರಡೂ ಪತ್ರಿಕೆಗಳು ಹಾಗೂ ಮೇ 18 ರಂದು ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ. ಮೇ 19 ರಂದು ಹಿಂದಿ, ಉರ್ದು, ಪಂಜಾಬಿ, ಬಂಗಾಳಿ ಸೇರಿದಂತೆ ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಯ ಅವಧಿಯು ವಿಷಯಗಳ ಆಧಾರದ ಮೇಲೆ ಎರಡು ಅಥವಾ ಮೂರು ಗಂಟೆಗಳ ಕಾಲ ಇರಲಿದೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

ಅಂತಿಮ ಹಂತದ ಪರೀಕ್ಷೆಗಳು:

ಮೇ 20 ರಂದು ಸಂಸ್ಕೃತ, ಮಾಹಿತಿ ತಂತ್ರಜ್ಞಾನ (IT), ಕೃತಕ ಬುದ್ಧಿಮತ್ತೆ (AI) ಮತ್ತು ಚಿತ್ರಕಲೆಯಂತಹ ಐಚ್ಛಿಕ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಸರಣಿಯ ಅಂತಿಮ ದಿನವಾದ ಮೇ 21 ರಂದು ಸಮಾಜ ವಿಜ್ಞಾನ ಪತ್ರಿಕೆಯೊಂದಿಗೆ 2026ರ ಎರಡನೇ ಬೋರ್ಡ್ ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಮುಂದಿನ ಹಂತಕ್ಕೆ ತ್ವರಿತವಾಗಿ ಸಿದ್ಧರಾಗಲು ಅನುಕೂೂಲವಾಗಲಿದೆ.

ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಸಲಹೆ:

ಈ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದ್ದು, ಸರಿಯಾದ ಅಧ್ಯಯನ ಯೋಜನೆ ಮತ್ತು ನಿರಂತರ ಅಭ್ಯಾಸದ ಮೂಲಕ ಉತ್ತಮ ಅಂಕ ಗಳಿಸಲು ಮಂಡಳಿ ಉತ್ತೇಜಿಸಿದೆ. ನಿಗದಿತ ಸಮಯದೊಳಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿ, ಪರೀಕ್ಷಾ ಕೇಂದ್ರದ ನಿಯಮಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:54 pm, Fri, 24 April 26

Source link

‘ಜನ ನಾಯಗನ್’ ಸಿನಿಮಾಕ್ಕೆ ಅಂದುಕೊಳ್ಳದೆ ಸಿಕ್ತು ‘ಗೋಲ್ಡನ್ ಟೈಮ್?’ – Kannada News | Is this good time to release Thalapathy Vijay’s Jana Nayagan movie

ತಮಿಳುನಾಡಿನ (Tamil Nadu) ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಉತ್ತಮ ಶೇಕಡಾವಾರು ಮತದಾನ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಮತ್ತು ಅವರ ರಾಜಕೀಯ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಚುನಾವಣಾ ಫಲಿತಾಂಶಕ್ಕೆ ಇನ್ನೂ ಹತ್ತು ದಿನಗಳು ಬಾಕಿ ಇದೆ. ಮತದಾನ ಮುಗಿದ ಕಾರಣ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಇದ್ದ ಅಡ್ಡಿ ಆತಂಕ ತೊಲಗಿದೆ ಎನ್ನಲಾಗುತ್ತಿದ್ದು, ಶೀಘ್ರವೇ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ವಿಜಯ್ ರಾಜಕೀಯಕ್ಕೆ ಧುಮುಕಿದ್ದರಿಂದ ‘ಜನ ನಾಗಯನ್’ ಅವರ ಕೊನೆಯ ಸಿನಿಮಾ ಎನ್ನಲಾಗಿತ್ತು. ಆದರೆ ಕೆಲವು ರಾಜಕೀಯ ಪ್ರಭಾವಗಳಿಂದಾಗಿ ಅವರ ಸಿನಿಮಾ ಕಳೆದ ನಾಲ್ಕು ತಿಂಗಳಿಂದ ಬಿಡುಗಡೆ ಆಗದೆ ಡಬ್ಬದಲ್ಲೇ ಸಿಲುಕಿದೆ.

‘ಜನ ನಾಯಗನ್’ ಸಿನಿಮಾ ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ಸಿಯು ಕೊನೆ ಕ್ಷಣದಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರ ನಿರಾಕರಿಸಿತು. ನ್ಯಾಯಾಲಯದಲ್ಲಿ ಅನುಮತಿ ದೊರಕಿತಾದರೂ, ಸಿಬಿಎಫ್​ಸಿ ಭಾರಿ ಪ್ರಯತ್ನ ನಡೆಸಿ ಸಿಕ್ಕ ಅನುಮತಿಯ ಮೇಲೆ ತಡೆ ಆದೇಶ ತಂದಿತು. ಕಳೆದ ನಾಲ್ಕು ತಿಂಗಳಿಂದಲೂ ಸಿನಿಮಾದ ನಿರ್ಮಾಪಕರು ಅವರ ಕಾನೂನು ತಂಡ ‘ಜನ ನಾಯಗನ್’ ಸಿನಿಮಾಕ್ಕೆ ಪ್ರಮಾಣ ಪತ್ರ ಕೊಡಿಸಲು ನಾನಾ ಪ್ರಯತ್ನ ಮಾಡುತ್ತಿದ್ದರೂ ಸಹ ಅದು ಯಶಸ್ವಿ ಆಗಿಲ್ಲ. ಆದರೆ ಈಗ ಮತದಾನ ಮುಗಿದಿರುವ ಕಾರಣ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾ ಮೊದಲು ಬಿಡುಗಡೆ ಆಗಿದ್ದರೆ ಅದು ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು, ವಿಜಯ್​​ಗೆ ಹೆಚ್ಚಿನ ಜನ ಬೆಂಬಲ ಲಭ್ಯವಾಗಬಹುದು ಎಂಬ ಕಾರಣದಿಂದಾಗಿಯೇ ಸಿನಿಮಾ ಬಿಡುಗಡೆ ಆಗದಂತೆ ಕೆಲ ರಾಜಕೀಯ ಶಕ್ತಿಗಳು ತಡೆದಿದ್ದವು ಎಂಬುದು ಗುಟ್ಟೇನೂ ಅಲ್ಲ. ಇದಕ್ಕೆ ಸಿಬಿಎಫ್​​ಸಿಯನ್ನು ದಾಳವನ್ನಾಗಿ ಬಳಸಿಕೊಳ್ಳಲಾಗಿತ್ತು. ಈಗ ವಿಜಯ್ ರಾಜಕೀಯ ಎದುರಾಳಿಗಳ ಉದ್ದೇಶ ಈಡೇರಿದ್ದು, ಈಗ ಸಿನಿಮಾ ಬಿಡುಗಡೆ ಆದರೂ ಸಹ ಎದುರಾಳಿಗಳಿಗೆ ಯಾವುದೇ ಹಾನಿ ಇಲ್ಲ.

ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾ ಸೋರಿಕೆ: ಮೂವರ ಬಂಧನ

ಆದರೆ ಚುನಾವಣಾ ಫಲಿತಾಂಶಗಳು ಹೊರಬೀಳುವ ಮೊದಲೇ ಈ ಚಿತ್ರ ಬಿಡುಗಡೆಯಾದರೆ ಚಿತ್ರತಂಡಕ್ಕೆ ಲಾಭವಾಗಲಿದೆ. ಒಂದು ವೇಳೆ ಫಲಿತಾಂಶದ ನಂತರ ಸಿನಿಮಾ ಬಿಡುಗಡೆಯಾಗಿ, ರಾಜಕೀಯವಾಗಿ ವಿಜಯ್ ಅವರಿಗೆ ಹಿನ್ನಡೆಯಾದರೆ ಅದು ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಈ ಹಿಂದೆ ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ದೃಶ್ಯಗಳು ಸೋರಿಕೆಯಾಗಿ ಈಗಾಗಲೇ ಸಿನಿಮಾದ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗಿದೆ. ಈಗ ಈ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು, ಚಿತ್ರತಂಡ ಸೆನ್ಸಾರ್ ಕ್ಲಿಯರೆನ್ಸ್ ನಿರೀಕ್ಷೆಯಲ್ಲಿದೆ.

ವಿಜಯ್ ಅವರು ರಾಜಕೀಯ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಇದು ಅವರ ನಟನೆಯ ಕೊನೆಯ ಚಿತ್ರವೆಂದು ಪ್ರಚಾರ ಮಾಡಲಾಗಿತ್ತು, ಹೀಗಾಗಿ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿದೆ. ಎಚ್ ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಸ್ಥಾನ ವಿಧಾನಸಭೆಗೆ ಆತ್ಮಾಹುತಿ ಬಾಂಬ್ ಬೆದರಿಕೆ; 3 ಗಂಟೆ ಶೋಧ ಕಾರ್ಯಾಚರಣೆ – Kannada News | Suicide Bomb attack threat in Rajasthan Assembly House triggers 3 hour search

ಜೈಪುರ, ಏಪ್ರಿಲ್ 24: ರಾಜಸ್ಥಾನ ವಿಧಾನಸಭೆಯ (Rajasthan Assembly) ಅಧಿಕೃತ ಇಮೇಲ್ ಖಾತೆಗೆ ಬಾಂಬ್ ಬೆದರಿಕೆ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ರಾಜಸ್ಥಾನದ ವಿಧಾನಸಭೆಯ ಆವರಣದಲ್ಲಿ ಸಮಗ್ರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಬೆದರಿಕೆ ಇಮೇಲ್ ಅನ್ನು ಸ್ವೀಕರಿಸಲಾಗಿತ್ತು. ಬೆಳಿಗ್ಗೆ 9.15ರ ಸುಮಾರಿಗೆ ಬಂದ ಇಮೇಲ್‌ನಲ್ಲಿ ವಿಧಾನಸಭೆ ಕಟ್ಟಡದೊಳಗೆ ಮಧ್ಯಾಹ್ನ 1 ಗಂಟೆಗೆ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ಹೀಗಾಗಿ, ಭದ್ರತಾ ಸಂಸ್ಥೆಗಳು ವಿಧಾನಸಭೆ ಕಟ್ಟಡದಿಂದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಿ ವಿವರವಾದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಬಾಂಬ್ ನಿಷ್ಕ್ರಿಯ ದಳ ಮತ್ತು ಇತರ ಭದ್ರತಾ ಸಿಬ್ಬಂದಿ ಸೇರಿದಂತೆ ತಂಡಗಳು ಸುಮಾರು 3 ಗಂಟೆಗಳ ಕಾಲ ಆವರಣದ ಸಂಪೂರ್ಣ ಪರಿಶೀಲನೆ ನಡೆಸಿದವು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ.

ಇದನ್ನೂ ಓದಿ: Assembly Elections 2026: ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆ, ಮತದಾನ ಶುರು, ಯಾರ್ಯಾರ ನಡುವೆ ಪೈಪೋಟಿ

ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸಭೆ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಶೋಧ ಮುಗಿದ ನಂತರ ಮತ್ತು ಆವರಣವನ್ನು ಸುರಕ್ಷಿತವೆಂದು ಘೋಷಿಸಿದ ನಂತರವೇ ವಿಧಾನಸಭೆಯೊಳಗೆ ಜನರನ್ನು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ಆವರಣದಾದ್ಯಂತ ಕಮಾಂಡೋಗಳು ಮತ್ತು ಬಾಂಬ್ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿತ್ತು. ಶ್ವಾನ ದಳಗಳು ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಉದ್ಯಾನಗಳು, ಪಾರ್ಕಿಂಗ್ ಪ್ರದೇಶಗಳು, ಕಾರಿಡಾರ್‌ಗಳು ಮತ್ತು ಕಚೇರಿ ಕೊಠಡಿಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಯಿತು.

ಇದನ್ನೂ ಓದಿ: ಬಿಹಾರ ವಿಧಾನಸಭೆಗೆ ಬಾಂಬ್ ಬೆದರಿಕೆ; ತೀವ್ರ ಶೋಧ ಕಾರ್ಯಾಚರಣೆ ಆರಂಭ

ಮುನ್ನೆಚ್ಚರಿಕೆ ಕ್ರಮವಾಗಿ, ವಿಧಾನಸಭೆಯೊಳಗೆ ಇದ್ದ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತಕ್ಷಣವೇ ಸ್ಥಳಾಂತರಿಸಲಾಯಿತು. ಕರ್ತವ್ಯಕ್ಕಾಗಿ ಆಗಮಿಸುತ್ತಿದ್ದವರನ್ನು ಮುಖ್ಯ ದ್ವಾರದಲ್ಲಿ ನಿಲ್ಲಿಸಲಾಯಿತು. ಯಾವುದೇ ಅನುಮಾನಾಸ್ಪದ ಸಂಗತಿ ಕಂಡುಬಂದಿಲ್ಲ. ಅಧಿಕಾರಿಗಳು ಇಮೇಲ್‌ನ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಗರದ ಸೂಕ್ಷ್ಮ ಸ್ಥಳಗಳಲ್ಲಿಯೂ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮನೆಗೆ ಹೋಗ್ಬಿಡಿ; ಸ್ಟೇಡಿಯಂ ತೊರೆಯುವಂತೆ ಫ್ಯಾನ್ಸ್​ಗೆ ಸನ್ನೆ ಮಾಡಿದ ಆಕಾಶ್ ಅಂಬಾನಿ – Kannada News | Mumbai Indians’ Biggest IPL Loss: Akash Ambani Walks Out Mid Match, Video Viral

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಯಾರೂ ನಿರೀಕ್ಷಿಸದ ಪ್ರದರ್ಶನ ನೀಡಿತು. ಇದಕ್ಕೆ ಫಲವಾಗಿ ಐಪಿಎಲ್ ಇತಿಹಾಸದಲ್ಲೇ ಮುಂಬೈ ತಂಡ ಅತಿದೊಡ್ಡ ಸೋಲು ಅನುಭವಿಸಿತು. ತನ್ನ ಹಿಂದಿನ ಪಂದ್ಯದಲ್ಲಿ 99 ರನ್​ಗಳ ದಾಖಲೆಯ ಗೆಲುವು ದಾಖಲಿಸಿದ್ದ ಮುಂಬೈ, ಅದರ ನಂತರದ ಪಂದ್ಯದಲ್ಲೇ ಹೀನಾಯ ಸೋಲು ಅನುಭವಿಸಿತು. ತನ್ನ ತವರು ಮೈದಾನದಲ್ಲೇ ಮುಂಬೈ ತಂಡ ಈ ರೀತಿಯ ಪ್ರದರ್ಶನ ನೀಡಿದ್ದು, ತಂಡದ ಮಾಲೀಕ ಆಕಾಶ್ ಅಂಬಾನಿಯನ್ನು ಸಹ ಅಸಮಾಧಾನಗೊಳ್ಳುವಂತೆ ಮಾಡಿತು. ಹೀಗಾಗಿ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಆಕಾಶ್, ಆಟದ ಮಧ್ಯದಲ್ಲೇ ಕ್ರೀಡಾಂಗಣದಿಂದ ಎದ್ದು ಹೊರನಡೆದರು. ತಾವು ಹೊರಹೋಗುವುದರ ಜೊತೆಗೆ ಮುಂಬೈ ತಂಡದ ಅಭಿಮಾನಿಗಳನ್ನು ಸಹ ಮನೆಗೆ ಹೋಗುವಂತೆ ಕೈಸನ್ನೆ ಮಾಡಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Source link

ಅನಾಥಾಶ್ರಮದಲ್ಲಿ ಮದ್ವೆ ಸಂಭ್ರಮ: ಅನಾಥೆ ಬಾಳಲ್ಲಿ ಹೊಸ ಬೆಳಕು, ತುಂಬು ಮನೆ ಸೇರಿದ ಮೈನಾ – Kannada News | Madikeri Tanal Ashram Wedding: Maina Finds New Life and Family in Heartwarming Kodava Ceremony

ಬದುಕಿನಲ್ಲಿ ಎಲ್ಲವೂ ಮುಗಿಯಿತು, ಎಲ್ಲರನ್ನು ಕಳೆದುಕೊಂಡು ಅನಾಥರಾಗಿದ್ದೇವೆ ಎನ್ನುವ ಭಾವನೆಯಲ್ಲಿ ಅನಾಥಾಶ್ರಮಕ್ಕೆ ಬರುತ್ತಾರೆ. ಆದರೆ ಅಂತಹ ಆಶ್ರಮವೊಂದರಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಅನಾಥೆಯಾಗಿದ್ದ ಯುವತಿಯ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಹಸೆಮಣೆ ಏರುವ ಮೂಲಕ ತುಂಬು ಕುಟುಂಬವನ್ನು ಕೂಡಿದ್ದಾರೆ.

ಹೆಸರೆ ಸೂಚಿಸುವಂತೆ ತನಲ್ ಅಂದ್ರೆ ನೆರಳು. ಅಂದರೆ ಬದುಕಿನಲ್ಲಿ ಯಾರು ಇಲ್ಲ ಎನ್ನುವವರಿಗೆ ಆಶ್ರಯ ನೀಡುವ ಆಶ್ರಮ ಇದು. ಮಡಿಕೇರಿಯ ಈ ಆಶ್ರಮದಲ್ಲಿ ಗುರುವಾರ ಮದುವೆ ಸಂಭ್ರಮ ಮನೆ ಮಾಡಿತ್ತು. ಹಸಿರು ತಳಿರು ತೋರಣ, ಹೂವುಗಳಿಂದ ಸಿಂಗಾರಗೊಂಡಿತ್ತು. ತೆಂಗಿನ ಗರಿ, ಗೊನೆತೂಗುವ ಬಾಳೆ ಮರಗಳ ನಿಲ್ಲಿಸಿ ಚಪ್ಪರ ಹಾಕಲಾಗಿತ್ತು. 

ತನಲ್ ಆಶ್ರಮ ಸೇರಿ ನಾಲ್ಕು ವರ್ಷಗಳಿಂದ ಇಲ್ಲಿಯೇ ಬದುಕು ದೂಡುತ್ತಿದ್ದ ಮೈನಾ ಅವರ ಮದುವೆ ಸಂಭ್ರಮ ಮನೆ ಮಾಡಿತ್ತು. ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನ ಪೂವಣ್ಣ ಅವರೊಂದಿಗೆ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ತನಲ್ ಸಂಸ್ಥೆ ತವರು ಮನೆಯಂತೆ, ಸಂಸ್ಥೆಯ ವ್ಯವಸ್ಥಾಪಕ ಮೊಹಮ್ಮದ್ ಅವರು ವಧು ಮೈನಾ ಅವರ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದರು.

ಮೊಹಮ್ಮದ್ ಅವರು ಕೊಡವ ಸಂಪ್ರದಾಯದಂತೆ ಮದುವೆ ಮಾಡಿದ್ದು ಮಾತ್ರ ವಿಶೇಷ. ಹಿಂದೂ- ಮುಸಲ್ಮಾನರು ಎನ್ನುವ ಯಾವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಮದುವೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದೆ. 

ಮೈನಾ ಮತ್ತು ಪೂವಣ್ಣ ಕೊಡವ ಧಿರಿಸಿನಲ್ಲಿ ಸಿಂಗಾರಗೊಂಡಿದ್ದರು. ನವಜೋಡಿಗೆ ಅಕ್ಷತೆ ಹಾಕಿ, ಉಡುಗೊರೆ ನೀಡಿ ಹರಸಿ, ಹಾರೈಸಿದರು. ಮದುವೆಗೆ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶುಭ, ರಾಜಕೀಯ ಮುಖಂಡರು, ಬಂಧು ಬಳಗ ಎಲ್ಲರೂ ಸಾಕ್ಷಿಯಾದರು.

ತನ್ನವರು ಯಾರೂ ಇಲ್ಲ, ನನ್ನದೆನ್ನುವ ಮನೆಯಿಲ್ಲ ಎಂದು ಆಶ್ರಮದಲ್ಲಿ ಬದುಕುತ್ತಿದ್ದ ಮೈನಾ ಇದೀಗ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟಿದ್ದು, ನವಜೋಡಿಯ ಬದುಕು ಖುಷಿಯಾಗಿರಲಿ ಎಂಬುವುದು ಎಲ್ಲರ ಆಶಯವಾಗಿದೆ. 

Published On – 3:28 pm, Fri, 24 April 26

Source link

ಬಿಳಿ ಶರ್ಟ್, ಖಾಕಿ ಪ್ಯಾಂಟ್‌: ಡ್ರೆಸ್ ಕೋಡ್ ಪಾಲಿಸಿ ಮತ ಹಾಕಿ ವಿಜಯ್​ಗೆ ಬೆಂಬಲ ಸೂಚಿಸಿದ ಸೆಲೆಬ್ರಿಟಿಗಳು – Kannada News | Tamil celebrities who voted for TVK Thalapathy Vijay by wearing white shirt khaki pant dress code

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ (ಏಪ್ರಿಲ್ 23) ನಡೆದ ಮತದಾನವು ಅತ್ಯಂತ ಶಾಂತಿಯುತವಾಗಿ ಜರುಗಿತು. ಕಾಲಿವುಡ್ ತಾರೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಆದರೆ ಈ ಬಾರಿಯ ಚುನಾವಣೆಯಲ್ಲಿ (Tamil Nadu Election) ಒಂದು ವಿಶೇಷ ಸಂಗತಿ ಎಲ್ಲರ ಗಮನ ಸೆಳೆಯಿತು. ಹಲವಾರು ಯುವ ನಟರು ಮತ್ತು ಸೆಲೆಬ್ರಿಟಿಗಳು ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ ಮತಗಟ್ಟೆಗೆ ಬಂದಿದ್ದು, ಇದು ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ನೀಡಿದ ಬೆಂಬಲ ಎಂದು ವಿಶ್ಲೇಷಿಸಲಾಗುತ್ತಿದೆ.

ನಟ ವಿಜಯ್ ಅವರ ರಾಜಕೀಯ ಪ್ರವೇಶದ ನಂತರದ ಮೊದಲ ಚುನಾವಣೆ ಇದಾಗಿದ್ದು, ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಒಂದು ನಿರ್ದಿಷ್ಟ ಡ್ರೆಸ್ ಕೋಡ್ ಅನುಸರಿಸುತ್ತಿದ್ದಾರೆ. ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಅನ್ನು ಟಿವಿಕೆ ಪಕ್ಷದ ಕಾರ್ಯಕರ್ತರು ಬಳಸುತ್ತಿದ್ದಾರೆ. ಮತದಾನದ ದಿನದಂದು ಅನೇಕ ಸೆಲೆಬ್ರಿಟಿಗಳು ಇದೇ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಅವರ ರಾಜಕೀಯ ಹಾದಿಗೆ ಬೆಂಬಲ ಸೂಚಿಸಿದಂತೆ ತೋರುತ್ತಿದೆ.

ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ದಳಪತಿ ವಿಜಯ್ ಅವರ ಪರವಾಗಿ ಬಹಿರಂಗ ಪ್ರಚಾರ ಮಾಡದೇ ಇರಬಹುದು. ಆದರೆ ಬಿಳಿ ಶರ್ಟ್ ಅಥವಾ ಖಾಕಿ ಪ್ಯಾಂಟ್ ಧರಿಸಿ ಮತಗಟ್ಟೆಗೆ ಬರುವ ಮೂಲಕ ಪರೋಕ್ಷವಾಗಿ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಸೂಚಿಸಿದರು. ಅದನ್ನು ನೋಡಿದ ಅಭಿಮಾನಿಗಳಿಗೆ ಎಲ್ಲವೂ ಅರ್ಥ ಆಗಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಚಿಯಾನ್ ವಿಕ್ರಮ್, ಸಿಂಬು, ಪ. ರಂಜಿತ್, ಸಿಬಿ ಸತ್ಯರಾಜ್, ಜೈ, ವಿಜಯ್ ಕುಮಾರ್, ಅರುಣ್ ವಿಜಯ್, ಐಶ್ವರ್ಯಾ ರಜನಿಕಾಂತ್ ಸೇರಿದಂತೆ ಹಲವರು ಇದೇ ಡ್ರೆಸ್​ ಕೋಡ್​ ಅನುಸರಿಸಿದ್ದಾರೆ. ಹಾಗಾಗಿ ಇವರೆಲ್ಲರೂ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬುದು ಅಭಿಮಾನಿಗಳು ಅಭಿಪ್ರಾಯ. ಈ ಕುರಿತು ಹಲವು ವಿಡಿಯೋಗಳು ವೈರಲ್ ಆಗಿವೆ.

ಇದನ್ನೂ ಓದಿ: ಪತ್ನಿ ಫೋಟೋ ನೋಡಿ ಮೌನ ತಾಳಿದ ದಳಪತಿ ವಿಜಯ್; ವಿಡಿಯೋ ವೈರಲ್

ಇದೇ ಮೊದಲ ಬಾರಿಗೆ ದಳಪತಿ ವಿಜಯ್ ಅವರು ರಾಜಕೀಯದ ಕಣದಲ್ಲಿ ಸ್ಪರ್ಧಿಸಿದ್ದಾರೆ. ತಮ್ಮದೇ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಅವರು ಚುನಾವಣೆಗೆ ನಿಂತಿದ್ದಾರೆ. ಮೇ 4ರಂದು ಫಲಿತಾಂಶ ಪ್ರಕಟ ಆಗಲಿದೆ. ಮೊದಲ ಪ್ರಯತ್ನದಲ್ಲೇ ವಿಜಯ್ ಅವರಿಗೆ ಗೆಲುವು ಸಿಗುತ್ತಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಲು ಅಭಿಮಾನಿಗಳು ಮತ್ತು ಬೆಂಬಲಿಗರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಓಹ್ ಈಗ ಸಿಕ್ದೆ ನೋಡು, ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹೆಂಡತಿಯನ್ನು ಮತಗಟ್ಟೆಯಲ್ಲಿ ಕಂಡ ಪತಿ ಮಾಡಿದ್ದೇನು? – Kannada News | West Bengal: Missing Wife Found at Polling Booth, Husband’s Election Day Confrontation Drama

ಕೋಲ್ಕತ್ತಾ, ಏಪ್ರಿಲ್ 24: ಓಹ್ ಈಗ ಸಿಕ್ದೆ ನೋಡು ಎಲ್ಲಿದ್ದೆ ಇಷ್ಟು ದಿನ? ಇದು ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಪತ್ನಿಯನ್ನು ಮತಗಟ್ಟೆಯಲ್ಲಿ ಕಂಡಾಗಿ ಪತಿ ಕೇಳಿದ ಪ್ರಶ್ನೆ ಇದು. ಪಶ್ಚಿಮ ಬಂಗಾಳ(West Bengal)ದಲ್ಲಿ ಏಪ್ರಿಲ್ 23ರಂದು ನಡೆದ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಪತ್ನಿಯನ್ನು ಪತಿ ಕಂಡಿದ್ದಾರೆ.

ತಾರಾಬರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 25/238 ರ ಹೊರಗೆ ಒಬ್ಬ ವ್ಯಕ್ತಿ ಅತಿಯಾದ ಬಿಸಿಲನ್ನೂ ಲೆಕ್ಕಿಸದೆ ಗಂಟೆಗಟ್ಟಲೆ ಓಡಾಡುತ್ತಿದ್ದ. ಬೆವರಿನಿಂದ ಮೈ ನೆನೆದಿದ್ದರೂ ಅವರ ಕಣ್ಣುಗಳು ಮಾತ್ರ ಮತಗಟ್ಟೆಯ ಒಳಗೆ ಬರುವ ಪ್ರತಿಯೊಬ್ಬ ಮಹಿಳೆಯ ಮುಖವನ್ನೂ ಜಾಲಾಡುತ್ತಿದ್ದವು.

ಮಧ್ಯಾಹ್ನ ಸರಿಯಾಗಿ 2 ಗಂಟೆಯ ಸಮಯ. ಒಬ್ಬ ಮಹಿಳೆ ಕೈಯಲ್ಲಿ ಮತದಾರರ ಗುರುತಿನ ಚೀಟಿ (Voter ID) ಹಿಡಿದು ಸಂಭ್ರಮದಿಂದ ಮತಗಟ್ಟೆಯತ್ತ ಹೆಜ್ಜೆ ಹಾಕಿದಳು. ಅವಳು ಹತ್ತಿರ ಬರುತ್ತಿದ್ದಂತೆಯೇ, ಗಂಟೆಗಟ್ಟಲೆ ಹಸಿದ ಹುಲಿಯಂತೆ ಕಾಯುತ್ತಿದ್ದ ಆ ವ್ಯಕ್ತಿ ಒಮ್ಮೆಗೆ ಅವಳ ಮೇಲೆ ಎರಗಿದ, ಹಿಂದಿನಿಂದ ಅವಳ ಕೂದಲನ್ನು ಹಿಡಿದು ಎಳೆದ ಆತ, ಎಲ್ಲರ ಮುಂದೆ ಅವಳನ್ನು ನಿಂದಿಸಲು ಶುರು ಮಾಡಿದ.

ಮತಗಟ್ಟೆಯಲ್ಲಿ ಭದ್ರತೆಗೆ ನಿಂತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (CAPF) ಸಿಬ್ಬಂದಿ ಕೂಡಲೇ ಧಾವಿಸಿ ಬಂದು ಮಹಿಳೆಯನ್ನು ಆತನ ಹಿಡಿತದಿಂದ ಬಿಡಿಸಿದರು. ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂತು. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಆ ಮಹಿಳೆಯ ಪತಿ, ಎರಡು ವರ್ಷಗಳ ಹಿಂದೆ ಆಕೆ ಮನೆ ಬಿಟ್ಟು ಓಡಿಹೋಗಿದ್ದಳು. ಇನ್ನೊಬ್ಬ ಪುರುಷನೊಂದಿಗೆ ಹೊಸ ಜೀವನ ಆರಂಭಿಸಿದ್ದ ಆಕೆ ಪತಿಯ ನೆನಪೇ ಇರಲಿಲ್ಲ.

ಮತ್ತಷ್ಟು ಓದಿ: Video: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ

ಅವಳನ್ನು ಪತ್ತೆಹಚ್ಚಲು ಆತ ಬಳಸಿದ ತಂತ್ರ ನಿಜಕ್ಕೂ ಅದ್ಭುತವಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಕಟ್ಟುನಿಟ್ಟಿನ ಚುನಾವಣಾ ನಿಯಮಗಳ ಪ್ರಕಾರ, ಮತದಾನ ಮಾಡಲು ಆಕೆ ತನ್ನ ಹಳೆಯ ವಿಳಾಸದ ಮತಗಟ್ಟೆಗೆ ಬರಲೇಬೇಕು ಎಂದು ಆತ ಲೆಕ್ಕ ಹಾಕಿದ್ದ. ಆತನ ಲೆಕ್ಕಾಚಾರ ಹುಸಿಯಾಗಲಿಲ್ಲ; ಮತದಾನದ ಹಕ್ಕು ಚಲಾಯಿಸಲು ಬಂದ ಪತ್ನಿ ಪತಿಯ ಬಲೆಗೆ ಬಿದ್ದಿದ್ದಳು.

ಪೋಲೀಸರು ಆತನನ್ನು ವಶಕ್ಕೆ ಪಡೆದಾಗ ಆತ ಒಂದು ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾನೆ, ಈಕೆಯ ವೋಟರ್ ಐಡಿಯಲ್ಲಿರುವ ನನ್ನ ಹೆಸರನ್ನು ಮೊದಲು ಅಳಿಸಿಹಾಕಿ, ಅದು ಅಳಿಸಿಹೋಗುವವರೆಗೆ ಈಕೆಗೆ ಮತ ಹಾಕಲು ಬಿಡಬೇಡಿ ಎಂದು ಕಿರುಚಾಡಿದ್ದ. ಆದರೆ ಚುನಾವಣಾ ಸಿಬ್ಬಂದಿ ಆತನ ಬೇಡಿಕೆಯನ್ನು ತಿರಸ್ಕರಿಸಿ, ಮಹಿಳೆಗೆ ಮತ ಚಲಾಯಿಸಲು ಅವಕಾಶ ನೀಡಿದರು.

ರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:17 pm, Fri, 24 April 26

Source link

Exit mobile version