ತಮನ್ನಾ ಭಾಟಿಯಾ ದೇಹದ ಬಗ್ಗೆ ಕೀಳು ಹೇಳಿಕೆ, ಕಾಲಿಗೆ ಬೀಳಲು ರೆಡಿ ಎಂದ ನಟ – Kannada News | Annu Kapoor said he is ready to touch the feet of Tamannah Bhatia

ಅನ್ನು ಕಪೂರ್ (Annu Kapoor), ಬಾಲಿವುಡ್​ ಮತ್ತು ಹಿಂದಿ ಟಿವಿ ರಂಗದ ಬಲು ಹಿರಿಯ ನಟ. ರಾಜ್​ಶ್ರೀ ಪಾನ್ ಮಸಾಲ ಜಾಹೀರಾತುಗಳಿಂದ ಅಂತೂ ಭಾರಿ ಜನಪ್ರಿಯತೆಯನ್ನು ಅನ್ನು ಕಪೂರ್ ಪಡೆದುಕೊಂಡಿದ್ದಾರೆ. ಒಂದಿಲ್ಲೊಂದು ಸಂದರ್ಶನ, ಪಾಡ್​​ಕಾಸ್ಟ್​​ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ಅನ್ನು ಕಪೂರ್, ಇತರೆ ನಟ-ನಟಿಯರ ಬಗ್ಗೆ ಮಾತನಾಡುವುದು ತುಸು ಹೆಚ್ಚು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಟಿ ತಮನ್ನಾ ಭಾಟಿಯಾ ಅವರ ದೇಹದ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿದ್ದರು. ನೆಟ್ಟಿಗರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಹಿರಿಯ ನಟ ಅನ್ನು ಕಪೂರ್ ಒಂದು ಸಂದರ್ಶನದಲ್ಲಿ ತಮನ್ನಾ ಅವರ ‘ಆಜ್ ಕಿ ರಾತ್’ ಐಟಂ ಹಾಡಿನ ಬಗ್ಗೆ ಮಾತನಾಡುತ್ತಾ, ಅವರ ದೇಹವನ್ನು ಹಿಂದಿಯಲ್ಲಿ ‘ದೂಧಿಯಾ ಬದನ್’ (ಹಾಲಿನಂಥ ಮೈಮಾಟ) ಎಂದು ಬಣ್ಣಿಸಿದ್ದರು. ಹಿಂದಿಯಲ್ಲಿ ಇದು ತುಸು ಅಶ್ಲೀಲ ಅರ್ಥ ನೀಡುವ ಮಾತಾಗಿದೆ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು ಮತ್ತು ಅನೇಕರು ಇದನ್ನು ‘ಅಶ್ಲೀಲ’, ಮಹಿಳೆಯ ಬಗ್ಗೆ ಅಗೌರವ ಎಂದು ಟೀಕಿಸಿದ್ದರು.

ಅನ್ನು ಕಪೂರ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, ‘ಇಂಗ್ಲಿಷ್‌ನಲ್ಲಿ ‘ಮಿಲ್ಕಿ ಬಾಡಿ’ ಎಂದರೆ ಯಾರೂ ಆಕ್ಷೇಪಿಸುವುದಿಲ್ಲ, ಆದರೆ ನಾನು ಹಿಂದಿಯಲ್ಲಿ ಹೇಳಿದ್ದಕ್ಕೆ ಜನರಿಗೆ ಸಮಸ್ಯೆಯಾಗಿದೆ. ನಮ್ಮ ಸ್ವಂತ ಭಾಷೆಯಲ್ಲಿ ಹೇಳಿದ್ದು ಹೆಚ್ಚು ಚುಚ್ಚಿದಂತೆ ಕಾಣುತ್ತದೆ’ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ‘ನಾನು ಅವರ ದೇಹವನ್ನು ಕೇವಲ ಶ್ಲಾಘಿಸಿದ್ದೇನೆಯೇ ಹೊರತು ಯಾವುದೇ ಕೆಟ್ಟ ದೃಷ್ಟಿಯಿಂದ ಅಥವಾ ಕಾಮದ ದೃಷ್ಟಿಯಿಂದ ನೋಡಿಲ್ಲ. 71 ವರ್ಷದ ವ್ಯಕ್ತಿಯಾದ ನನಗೆ ಅವರ ವಯಸ್ಸಿನ ಮಕ್ಕಳಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಶಾರುಖ್ ಖಾನ್ ಪುತ್ರನೊಟ್ಟಿಗೆ ತಮನ್ನಾ ಭಾಟಿಯಾ ಮಾತುಕತೆ

‘ಈ ಹೇಳಿಕೆಯಿಂದ ನಟಿ ತಮನ್ನಾ ಅವರಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸಲು ತಮಗೆ ಯಾವುದೇ ಮುಜುಗರವಿಲ್ಲ. ಒಂದು ವೇಳೆ ಅವರು ನಾನು ಆ ರೀತಿ ಹೇಳಿದ್ದೇನೆಯೇ ಎಂದು ಕೇಳಿದರೆ, ಹೌದು ಎಂದು ಒಪ್ಪಿಕೊಳ್ಳುತ್ತೇನೆ. ನಿಮಗೆ ಅದರಿಂದ ನೋವಾಗಿದ್ದರೆ ನಾನು ನಿಮ್ಮ ಪಾದ ಮುಟ್ಟಿ ಕ್ಷಮೆಯಾಚಿಸುತ್ತೇನೆ. ನನ್ನ ಉದ್ದೇಶ ತಪ್ಪಾಗಿಲ್ಲದಿರುವಾಗ ನನಗೆ ಕ್ಷಮೆ ಕೇಳಲು ಹಿಂಜರಿಕೆಯಿಲ್ಲ’ ಎಂದು ಹೇಳಿದ್ದಾರೆ.

‘ಸ್ತ್ರೀ 2’ ಸಿನಿಮಾನಲ್ಲಿ ತಮನ್ನಾ ಭಾಟಿಯಾ ‘ಆಜ್ ಕಿ ರಾತ್’ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ನೃತ್ಯವನ್ನು ಹೊಗಳು ಭರದಲ್ಲಿ ಅನ್ನು ಕಪೂರ್ ಈ ವಿವಾದಾತ್ಮಕ ಶಬ್ದಗಳನ್ನು ಬಳಸಿದ್ದರು. ಅಲ್ಲದೆ, ತಮನ್ನಾ ಅವರ ಹಾಡು ಮತ್ತು ಅವರ ಮೈಮಾಟವನ್ನು ನೋಡಿ ಮಕ್ಕಳು ಚೆನ್ನಾಗಿ ನಿದ್ರಿಸುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದ್ದು ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ಇಬ್ಬರು ಡೆಲಿವರಿ ಬಾಯ್ಸ್ ಅರೆಸ್ಟ್​​ – Kannada News | Two Delivery Boys Arrested for Harassing a Female Pedestrian in Bengaluru

ಬೆಂಗಳೂರು ಏಪ್ರಿಲ್​​ 24: ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಯ ಜೊತೆ ಅಸಭ್ಯ ವರ್ತನೆ ಮತ್ತು ಕಿರುಕುಳ ನೀಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ (Bengaluru) ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕರು ಆನ್‌ಲೈನ್ ಗ್ರೋಸರಿ ಡೆಲಿವರಿ ಕೆಲಸ ಮಾಡಿಕೊಂಡಿದ್ದವರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಮಂಗಳವಾರ ಮಧ್ಯಾಹ್ನ ಮಾರುತಿನಗರದ ಕೋಗಿಲು ಮುಖ್ಯ ರಸ್ತೆಯಲ್ಲಿ ಆರೋಪಿಗಳು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದರು.

ಬೈಕ್​​ನಲ್ಲಿ ತೆರಳುತ್ತಿದ್ದ ಆರೋಪಿಗಳು ಪಾದಚಾರಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​​ ಆಗಿತ್ತು. ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯಲಹಂಕ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ (ಸುಮೋಟೋ ಕೇಸ್​​) ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಸಿಂಗನಾಯಕನಹಳ್ಳಿ ನಿವಾಸಿ ಹರೀಶ್ ಮತ್ತು ಆವಲಹಳ್ಳಿ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ತುಮಕೂರು ಜಿಲ್ಲೆಯ ಪಾವಗಡ ಮೂಲದವರಾಗಿದ್ದು, 10ನೇ ತರಗತಿ ಉತ್ತೀರ್ಣರಾಗದ ಹಿನ್ನೆಲೆ ನಗರಕ್ಕೆ ಬಂದು ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ ಗ್ಯಾಂಗ್!

ಯಲಹಂಕದಿಂದ ಬಾಗಲೂರು ಕಡೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಹತ್ತಿರ ಹೋಗಿ ಅಸಭ್ಯವಾಗಿ ಸ್ಪರ್ಶಿಸಿ ಆರೋಪಿಗಳು ಕಿರುಕುಳ ನೀಡಿದ್ದರು. ಈ ಘಟನೆ ಆರೋಪಿಗಳ ಸ್ಕೂಟರ್ ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ನಂತರ ಬೆಳಕಿಗೆ ಬಂದಿತ್ತು. ಯುವತಿ ಮತ್ತೊಬ್ಬಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳು ಪಕ್ಕದಿಂದ ಹಾದು ಹೋಗುವ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು. ಹೀಗಿದ್ದರೂ ಘಟನೆ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಸ್ಕೂಟರ್‌ನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ, ಕೂಡಲೇ ಬಂದು ಅಪಾಯ ತಪ್ಪಿಸಿದ ಪೊಲೀಸ್ – Kannada News | Swift Action: Cop Saves Woman and Child After Escalator Slip

ಜೈಪುರ, ಏಪ್ರಿಲ್ 24: ಜೈಪುರದ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್​ ಹತ್ತುವಾಗ ಕೈಯಲ್ಲಿದ್ದ ಮಗು ಸಮೇತ ಮಹಿಳೆಯೊಬ್ಬರು ಬೀಳೋಕಾದ ಘಟನೆ ನಡೆದಿದೆ. ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಬ್ಯಾಗ್ ಇದ್ದುದರಿಂದ ಅವರಿಗೆ ಎಸ್ಕಲೇಟರ್‌ನ ಹ್ಯಾಂಡಲ್ ಹಿಡಿಯಲು ಸಾಧ್ಯವಾಗಲಿಲ್ಲ. ಅವರು ಮಗುವಿನೊಂದಿಗೆ ಹಿಂದಕ್ಕೆ ಬೀಳಲು ಪ್ರಾರಂಭಿಸಿದರು.

ಅವರು ಕೆಳಕ್ಕೆ ಬಿದ್ದರೆ ಮಗು ಮತ್ತು ತಾಯಿ ಇಬ್ಬರಿಗೂ ಗಂಭೀರ ಗಾಯಗಳಾಗುವುದು ನಿಶ್ಚಿತವಾಗಿತ್ತು. ಕೆಳಗೆ ನಿಂತಿದ್ದ ಪೊಲೀಸ್ ಮಹಿಳೆಯನ್ನು ಕಂಡ ತಕ್ಷಣ, ಒಂದು ಕ್ಷಣವೂ ವ್ಯರ್ಥ ಮಾಡದೆ ಎಸ್ಕಲೇಟರ್ ಕಡೆಗೆ ಓಡಿದರು. ಅವರು ಎಸ್ಕಲೇಟರ್ ಮೇಲೆ ಹತ್ತುವ ಬದಲು, ಮಹಿಳೆ ಕೆಳಕ್ಕೆ ಉರುಳದಂತೆ ತಡೆಯಲು ಕೆಳಗಿನಿಂದಲೇ ಜಿಗಿದು ಆಕೆಯನ್ನು ಭದ್ರವಾಗಿ ಹಿಡಿದರು.

ಅಲ್ಲಿ ನೆರೆದಿದ್ದ ಪ್ರಯಾಣಿಕರು ಕೆಲವು ಸೆಕೆಂಡುಗಳ ಕಾಲ ಉಸಿರು ಬಿಗಿಹಿಡಿದು ನೋಡುತ್ತಿದ್ದರು. ತಕ್ಷಣ ಎಸ್ಕಲೇಟರ್ ಅನ್ನು ನಿಲ್ಲಿಸಿ, ಮಹಿಳೆಯನ್ನು ಸುರಕ್ಷಿತವಾಗಿ ಕೆಳಕ್ಕೆ ಕರೆತರಲಾಯಿತು. ಎಸ್ಕಲೇಟರ್ ಬಳಸುವಾಗ ಸಣ್ಣ ಮಕ್ಕಳನ್ನು ಎತ್ತಿಕೊಂಡಿದ್ದರೆ ಅಥವಾ ಕೈಯಲ್ಲಿ ಹೆಚ್ಚು ಬ್ಯಾಗ್‌ಗಳಿದ್ದರೆ ಹೆಚ್ಚಿನ ಜಾಗರೂಕತೆ ವಹಿಸಿ, ಸಾಧ್ಯವಾದಷ್ಟು ಲಿಫ್ಟ್ ಬಳಸಲು ಆದ್ಯತೆ ನೀಡಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು? – Kannada News | MC Sudhakar on CET Exam Janivara Issue

ಬೆಂಗಳೂರು, ಏಪ್ರಿಲ್ 24: ನಗರದ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲಾಗಿದೆ ಎಂಬ ಆರೋಪಗಳ ಕುರಿತು ಸಚಿವ ಎಂ.ಸಿ. ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಯಾವುದೇ ಅಧಿಕೃತ ವರದಿ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಆರೋಪಗಳು ನಿಜವೆಂದು ಸಾಬೀತಾದರೆ ತೀವ್ರ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಪರೀಕ್ಷೆಗಳನ್ನು ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ನಡೆಸಲಾಗುತ್ತದೆ, ಮತ್ತು ಸಿಬ್ಬಂದಿಯನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಸಿಬ್ಬಂದಿ ಅತಿರೇಕದ ವರ್ತನೆ ತೋರಿದ್ದರೆ ಅಥವಾ ಉದ್ದೇಶಪೂರ್ವಕವಾಗಿ ವ್ಯವಸ್ಥೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.

 

Source link

ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು, ಮುಂದೇನು? – Kannada News | Koppal hirehalla reservoir Empty And full dry over Summer temperature

ಕೊಪ್ಪಳ, (ಏಪ್ರಿಲ್ 24): ಕೊಪ್ಪಳ ತಾಲೂಕಿನ ಕಿನ್ನಾಳ ಬಳಿ ಇರೋ ಹಿರೇಹಳ್ಳ ಜಲಾಶಯ (hirehalla reservoir) 1.67 ಟಿಎಮ್ ಸಿ ನೀರು ಸಂಗ್ರಹ ಸಾಮರ್ಥ ಹೊಂದಿದೆ. 20 ಸಾವಿರಕ್ಕೂ ಅಧಿಕ ಎಕರೆ ಪ್ರದೇಶಕ್ಕೆ ನೀರಾವರಿ ಹಾಗೂ ಕುಡಿಯೋ ನೀರಿಗಾಗಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ, ಈ ಬಾರಿಯ ಬೇಸಿಗೆ ಬಿಸಿಲಿನ ತಾಪಕ್ಕೆ ಹಿರೇಹಳ್ಳ ಜಲಾಶಯ ಬತ್ತಿ ಹೋಗಿದೆ. ಅಲ್ಲದೇ ಬಿಸಿಲಿನ ಹೊಡೆತಕ್ಕೆ ಬರಡು ಭೂಮಿಯಂತಾಗಿದೆ. ಸದ್ಯ ಜಲಾಶಯದಲ್ಲಿ ಕೇವಲ ಶೇಕಡಾ 20 ರಷ್ಟು ನೀರು ಸಂಗ್ರಹವಿದ್ದು, ಒಂದು ತಿಂಗಳಲ್ಲೇ ಈ ನೀರು ಸಹ ಖಾಲಿಯಾಗಲಿದೆ. ಬಳಿಕ ಜಲಾಶವೇ ಖಾಲಿ ಖಾಲಿಯಾಗಲಿದೆ. ಇದರಿಂದ ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಬರ ಎದುರಾಗಲಿದೆ. ಈ ಕುರಿತು ನಮ್ಮ ಪ್ರತಿನಿಧಿ ಶಿವಕುಮಾರ್ ಪತ್ತಾರ ನೀಡಿರೋ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ಇದನ್ನೂ ನೋಡಿ: ಹೊರಗೆ ಬಂದು ಮಾತಾಡ್ಲಿ: ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

Source link

ಹೀಟ್ ವೇವ್ ಎದುರಿಸಲು ಮೈಸೂರಿನ ಆಸ್ಪತ್ರೆ ಸನ್ನದ್ಧ; ರೋಗಿಗಳಿಗಾಗಿ ಬೆಡ್ ಮೀಸಲು, ವಾರ್ಡ್‌ನಲ್ಲಿ ಎಸಿ, ಫ್ಯಾನ್ ಅಳವಡಿಕೆ! – Kannada News | Mysore Heatwave Health Alert: Hospitals Set Up Special Units for Children and Elderly Care

ಮೈಸೂರು, ಏಪ್ರಿಲ್ 24: ನಗರದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ತೀವ್ರತೆಗೆ ಜನರಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಮಕ್ಕಳು ಮತ್ತು ಹಿರಿಯರು ಹೆಚ್ಚು ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆ ಮತ್ತು ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕೆ.ಆರ್ ಆಸ್ಪತ್ರೆಯಲ್ಲಿ 20 ಬೆಡ್‌ಗಳು ಹಾಗೂ ಚೆಲುವಾಂಬ ಆಸ್ಪತ್ರೆಯಲ್ಲಿ 15 ಬೆಡ್‌ಗಳನ್ನು ಬಿಸಿಲಿನ ಪರಿಣಾಮದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ, ಮಕ್ಕಳ ವಾರ್ಡ್‌ನಲ್ಲಿ ಎಸಿ ಹಾಗೂ ಫ್ಯಾನ್ ವ್ಯವಸ್ಥೆ ಮಾಡಲಾಗಿದ್ದು, ರೋಗಿಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಅಗತ್ಯ ಸಲಹೆಗಳನ್ನು ನೀಡುತ್ತಿದೆ.

 

 

Source link

ಗ್ಯಾಸ್ ಸಿಲಿಂಡರ್ ಬುಕಿಂಗ್‌ಗೆ ಮುಗಿಬಿದ್ದಿದ್ದ ಜನ ಈಗ ಸೈಲೆಂಟ್: ಕರ್ನಾಟಕದಲ್ಲಿ ಎಲ್‌ಪಿಜಿ ಬೇಡಿಕೆ ದಿಢೀರ್ ಕುಸಿತ! ಕಾರಣವೇನು? – Kannada News | LPG Shortage Fears in Karnataka Ease: Adequate Supply and Reduced Artificial Demand

ಬೆಂಗಳೂರು, ಏ.24: ಅಮೆರಿಕ, ಇಸ್ರೇಲ್, ಇರಾನ್​ ಯುದ್ಧದಿಂದ ದೇಶದಲ್ಲಿ ಗ್ಯಾಸ್​​​ ಸಿಲಿಂಡರ್​​​​ ಕೊರೆತೆ ಉಂಟಾಗಿತ್ತು. ಇದರಿಂದ ರಾಜ್ಯದಲ್ಲೂ ದೊಡ್ಡ ಆತಂಕ ಸೃಷ್ಟಿಯಾಗಿತ್ತು. ಜನ ಸಾಲು ನಿಂತು ಗ್ಯಾಸ್​​​​ ಪಡೆದುಕೊಳ್ಳಲು ಪರಾಡುತ್ತಿದ್ದರು. ಇದೀಗ ಈ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಾಗಬಹುದು ಎಂಬ ಭೀತಿಯಿಂದ ಗ್ರಾಹಕರು ಮುಗಿಬಿದ್ದು ಬುಕಿಂಗ್ ಮಾಡುತ್ತಿರುವ ಘಟನೆಗಳು ಈಗ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ದೈನಂದಿನ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೇಡಿಕೆಯು ಗರಿಷ್ಠ ಮಟ್ಟದಲ್ಲಿದ್ದಾಗ ದಿನಕ್ಕೆ 3.75 ಲಕ್ಷ ಇತ್ತು. ಆದರೆ, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂಬ ಭರವಸೆ ಮತ್ತು ಮಾರುಕಟ್ಟೆ ಸ್ಥಿರಗೊಂಡ ನಂತರ ಈ ಬೇಡಿಕೆಯು ಈಗ ದಿನಕ್ಕೆ 3.06 ಲಕ್ಷಕ್ಕೆ ಕುಸಿದಿದೆ. ಅಂದರೆ ದಿನವೊಂದಕ್ಕೆ ಸುಮಾರು 69,000 ಸಿಲಿಂಡರ್‌ಗಳಷ್ಟು ಬೇಡಿಕೆ ಕಡಿಮೆಯಾಗಿದೆ.

ಇತ್ತೀಚೆಗೆ ಕೆವೈಸಿ (e-KYC) ಅಪ್‌ಡೇಟ್ ಮಾಡದಿದ್ದರೆ ಗ್ಯಾಸ್ ಕನೆಕ್ಷನ್ ಕಟ್ ಆಗುತ್ತದೆ ಅಥವಾ ಸಬ್ಸಿಡಿ ನಿಲ್ಲುತ್ತದೆ ಎಂಬ ವದಂತಿಗಳು ಹರಡಿದ್ದವು. ಜೊತೆಗೆ ವಿತರಣೆಯಲ್ಲಿ ವಿಳಂಬವಾಗಬಹುದು ಎಂಬ ಆತಂಕದಿಂದ ಜನರು ತಮಗೆ ಅಗತ್ಯವಿಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಆರಂಭಿಸಿದ್ದರು. ಇದು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಲು ಕಾರಣವಾಗಿತ್ತು.

ಇದನ್ನೂ ಓದಿ: ಬಡವರಿಗೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿ ದಂಧೆಕೋರರ ಪಾಲು: 2,000ಕ್ಕೂ ಹೆಚ್ಚು ಮೂಟೆಗಳು ವಶಕ್ಕೆ

“ರಾಜ್ಯದಲ್ಲಿ ಎಲ್‌ಪಿಜಿ ಸಂಗ್ರಹ ಸಾಕಷ್ಟಿದೆ ಮತ್ತು ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲ. ಗ್ರಾಹಕರು ಅನಗತ್ಯವಾಗಿ ಆತಂಕಕ್ಕೊಳಗಾಗಿ ಹೆಚ್ಚಿನ ಸಿಲಿಂಡರ್‌ಗಳನ್ನು ಬುಕ್ ಮಾಡುವ ಅಗತ್ಯವಿಲ್ಲ” ಎಂದು ತೈಲ ಮಾರುಕಟ್ಟೆ ಕಂಪನಿಗಳು (OMCs) ಗ್ರಾಹಕರಿಗೆ ಮನವಿ ಮಾಡಿದ್ದವು. ಈ ಸ್ಪಷ್ಟನೆಯ ನಂತರ ಈಗ ಬುಕಿಂಗ್ ಪ್ರಕ್ರಿಯೆ ಸಹಜ ಸ್ಥಿತಿಗೆ ಮರಳುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಕಿಮ್ಸ್‌ನಲ್ಲಿ ರೋಗಿಗಳಿಗೆ ಓಪಿಡಿ ಸಂಕಷ್ಟ: ಚಿಕಿತ್ಸೆಗೂ ಮುನ್ನ ಚೀಟಿಗಾಗಿ ಗಂಟೆಗಟ್ಟಲೆ ಕ್ಯೂ! – Kannada News | Hubballi KIMS Crisis: Patients Wait for Hours in Long Queues for OPD Slips Due to Server Issues

ಓಪಿಡಿ ಚೀಟಿ ಮಾಡಿಸಿಕೊಳ್ಳಲು ಸರದಿಯಲ್ಲಿ ಕಾಯುತ್ತಿರುವ ಜನImage Credit source: tv9

ಹುಬ್ಬಳ್ಳಿ, ಏಪ್ರಿಲ್ 24: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿಯಾಗಿರುವ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಚಿಕಿತ್ಸೆ ಪಡೆಯುವ ಮೊದಲು ಓಪಿಡಿ (OPD) ಚೀಟಿ ಮಾಡಿಸಿಕೊಳ್ಳುವುದೇ ರೋಗಿಗಳಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ವರ್ ಸಮಸ್ಯೆಯಿಂದಾಗಿ ರೋಗಿಗಳು ಮತ್ತು ಅವರ ಕುಟುಂಬದವರು ನರಕಯಾತನೆ ಅನುಭವಿಸುವಂತಾಗಿದೆ. ಚೀಟಿ ಪಡೆಯಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂಥ ಪರಿಸ್ಥಿತಿ ಉದ್ಭವಿಸಿದೆ.

ಗಂಟೆಗಟ್ಟಲೆ ಕಾಯುವ ಅನಿವಾರ್ಯತೆ

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪ್ರತಿನಿತ್ಯ 2,000ಕ್ಕೂ ಹೆಚ್ಚು ರೋಗಿಗಳು ಕಿಮ್ಸ್‌ಗೆ ಆಗಮಿಸುತ್ತಾರೆ. ಇಲ್ಲಿ ಚಿಕಿತ್ಸೆ ಪಡೆಯಲು ಮೊದಲು ಓಪಿಡಿ ಚೀಟಿ ಪಡೆಯಬೇಕು. ಇದಕ್ಕಾಗಿ ಆಸ್ಪತ್ರೆಯಲ್ಲಿ ಆರು ಕೌಂಟರ್‌ಗಳ ವ್ಯವಸ್ಥೆ ಇದ್ದರೂ, ಪ್ರತಿಯೊಬ್ಬ ರೋಗಿಯೂ ಕನಿಷ್ಠ ಎರಡು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಮುಂಜಾನೆ 9 ಗಂಟೆಗೆ ಕ್ಯೂ ನಿಂತರೆ, ಚೀಟಿ ಕೈ ಸೇರುವ ಹೊತ್ತಿಗೆ ಮಧ್ಯಾಹ್ನ 12 ಗಂಟೆಯಾಗಿರುತ್ತದೆ. ವೈದ್ಯರು ಊಟಕ್ಕೆ ಹೋಗುವ ಸಮಯವಾಗುವುದರಿಂದ ರೋಗಿಗಳು ಒಂದೇ ದಿನದಲ್ಲಿ ಚಿಕಿತ್ಸೆ ಪಡೆದು ಹಿಂತಿರುಗುವುದು ಅಸಾಧ್ಯವಾಗಿದೆ.

ಸರ್ವರ್ ಸಮಸ್ಯೆಯೇ ವಿಳಂಬಕ್ಕೆ ಕಾರಣ

ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಮಾಹಿತಿ ಸಂಗ್ರಹಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಕಳೆದ ಎರಡು ತಿಂಗಳಿನಿಂದ ಸರ್ವರ್ ಸಮಸ್ಯೆ ಪದೇ ಪದೇ ಕಾಡುತ್ತಿದೆ. ಆನ್‌ಲೈನ್‌ನಲ್ಲಿ ಒಬ್ಬರ ಹೆಸರನ್ನು ಎಂಟ್ರಿ ಮಾಡಲು ಸುಮಾರು 5 ರಿಂದ 10 ನಿಮಿಷಗಳು ತಗಲುತ್ತಿವೆ. ಇದರಿಂದಾಗಿ ಸರದಿ ಸಾಲು ಕಿಲೋಮೀಟರ್‌ಗಟ್ಟಲೆ ಬೆಳೆಯುತ್ತಿದೆ. ವೃದ್ಧರು, ಮಹಿಳೆಯರು ಮತ್ತು ಪುಟ್ಟ ಮಕ್ಕಳನ್ನು ಕರೆತಂದ ಪೋಷಕರು ಕ್ಯೂನಲ್ಲಿ ನಿಂತು ನಿಂತು ಸುಸ್ತಾಗಿ ನೆಲದ ಮೇಲೆಯೇ ಕುಳಿತುಕೊಳ್ಳುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದೆ.

ವೃದ್ಧರ ಪಾಡು ದೇವರಿಗೇ ಪ್ರೀತಿ

ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕೌಂಟರ್ ಇದ್ದರೂ ಸಹ, ಅಲ್ಲಿ ಎಲ್ಲಾ ವಯೋಮಾನದವರು ಸಾಲಿನಲ್ಲಿ ನಿಲ್ಲುತ್ತಿರುವುದು ವೃದ್ಧರ ಆಕ್ರೋಶಕ್ಕೆ ಕಾರಣವಾಗಿದೆ. ಬಿಲ್ ಪಾವತಿ ಮತ್ತು ವಿವಿಧ ತಪಾಸಣಾ ವರದಿಗಳನ್ನು ಪಡೆಯುವ ಕೌಂಟರ್‌ಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ, ‘ಕೆಲವೊಮ್ಮೆ ಸರ್ವರ್ ಡೌನ್ ಆಗುತ್ತಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸರ್ವರ್ ಸುಧಾರಣೆಗೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ: ಪೊಲೀಸ್ ಕಮಿಷನರ್ ಹೇಳಿದ್ದೇನು ನೋಡಿ

ಆದರೆ, ಕೇವಲ ಭರವಸೆ ನೀಡಿದರೆ ಸಾಲದು, ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯುವ ಮೂಲಕ ಮತ್ತು ತಾಂತ್ರಿಕ ದೋಷಗಳನ್ನು ಶೀಘ್ರವಾಗಿ ಸರಿಪಡಿಸುವ ಮೂಲಕ ಬಡ ರೋಗಿಗಳ ಪರದಾಟಕ್ಕೆ ಕಿಮ್ಸ್ ಆಡಳಿತ ಮಂಡಳಿ ಮುಕ್ತಿ ನೀಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಷ್ಮೀಪುರ ಬಿಡಿಎ ಲೇಔಟ್​ನಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿಬಿದ್ದ ಜನ – Kannada News | Bengaluru: Decomposed Body Found in Gunny Bag at Lakshmipura BDA Layout Nelamangala; Police Launch Investigation

ನೆಲಮಂಗಲ, ಏಪ್ರಲ್ 24: ನೆಲಮಂಗಲದ ಲಕ್ಷ್ಮೀಪುರ ಬಿಡಿಎ ಲೇಔಟ್‌ನಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಚೀಲಕ್ಕೆ ತುಂಬಿ ಇಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗಿನ ಜಾವ ವಾಕಿಂಗ್‌ಗೆ ಬಂದ ಸ್ಥಳೀಯರೊಬ್ಬರು ನಾಯಿಗಳು ಚೀಲವನ್ನು ಎಳೆಯುತ್ತಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ವಾಯುವ್ಯ ವಿಭಾಗದ ಗಂಗಮ್ಮಗುಡಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಸೋಕೋ (ಸೀನ್ ಆಫ್ ಕ್ರೈಂ ಆಫೀಸರ್) ತಂಡ ಕೂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪತ್ತೆಯಾದ ಶವ ಪುರುಷನದ್ದು ಎಂದು ಗುರುತಿಸಲಾಗಿದೆ. ಈ ಪ್ರದೇಶವು ನಿರ್ಜನವಾಗಿದ್ದು, ಖಾಲಿ ಸೈಟ್‌ಗಳಿಂದ ಕೂಡಿದೆ. ಪೊಲೀಸರು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಸೋಕೋ ತಂಡದ ಪರಿಶೀಲನೆ ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ನಂತರ ತನಿಖೆ ಮುಂದುವರಿಸಲಾಗುವುದು ಎಂದು ತಿಳಿಸಲಾಗಿದೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಂಎಸ್ ಧೋನಿಗಾಗಿ ಕಾದ ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಬ್ಯಾಡ್ ನ್ಯೂಸ್ – Kannada News | MS Dhoni’s IPL Return: CSK Coach Reveals Injury Update, Fans Await Comeback

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸಮನ್ ಹಾಗೂ ಕೀಪರ್ ಎಂಸ್ ಧೋನಿಗೆ ಸ್ನಾಯು ಸೆಳೆತವಿದ್ದು, ಐಪಿಎಲ್ ಆರಂಭ ಆದ ಮೊದಲ ಎರಡು ವಾರ ಅವರು ಲಭ್ಯವಿರುವುದಿಲ್ಲ ಎಂದು ಕೇಳಿ ಅಭಿಮಾನಿಗಳು ಬೇಸರಗೊಂಡರು. ಆದರೆ, ಈಗ ಧೋನಿ ಈಗ ಸತತ ಏಳು ಮ್ಯಾಚ್​​ಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಈಗ ಅವರ ಬರುವಿಕೆಗಾಗಿ ಕಾದು ಕುಳಿತ ಫ್ಯಾನ್ಸ್​​ಗೆ ಬೇಸರ ಆಗುವ ಸುದ್ದಿಯೊಂದು ಬಂದಿದೆ.

ಧೋನಿ ಅವರು ಇತ್ತೀಚೆಗೆ ಪ್ರ್ಯಾಕ್ಟಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಧೋನಿ ಮುಂಬೈ ವಿರುದ್ಧದ ಪಂದ್ಯಕ್ಕೆ ಫೀಲ್ಡ್​ಗೆ ಇಳಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಅವರು ಮುಂಬೈ ವಿರುದ್ಧದ ಪಂದ್ಯ ಮಿಸ್ ಮಾಡಿಕೊಂಡಿದ್ದಾರೆ. ಅವರು ಫೀಲ್ಡ್​​ಗೆ ಇಳಿಯದ್ದಕ್ಕೆ ಕಾರಣ ಸಿಕ್ಕಿದೆ.

ಸಿಎಸ್​​ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಈ ವಿಷಯ ರಿವೀಲ್ ಮಾಡಿದ್ದಾರೆ. ‘ಧೋನಿ ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದಾರೆ. ಅವರು ನೂರಕ್ಕೆ ನೂರು ಪರ್ಸೆಂಟ್ ರೆಡಿ ಆದರು ಎಂದು ಅನಿಸುವವರೆಗೂ ಅವರು ಮೈದಾನಕ್ಕೆ ಇಳಿಯುವುದಿಲ್ಲ’ ಎಂದಿದ್ದಾರೆ.

‘ಧೋನಿ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ ಎಂಬುದು ನಿಜ. ಅವರು ಸಾಧ್ಯವಾದಷ್ಟು ಬೇಗ ತಂಡಕ್ಕೆ ಮರಳಲು ಶ್ರಮಿಸುತ್ತಿದ್ದಾರೆ. ಅಭಿಮಾನಿಗಳು ಎಂಎಸ್ ಧೋನಿ ಮತ್ತೆ ಮೈದಾನಕ್ಕೆ ಇಳಿಯವುದನ್ನು ನೋಡಲು ಕಾದಿದ್ದಾರೆ. ಮುಂದಿನ ಕೆಲವು ಪಂದ್ಯಗಳಲ್ಲಿ ಅದು ಘಟಿಸಬಹುದು. ಆದರೆ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಂಪೂರ್ಣವಾಗಿ ಚೇತರಿಕೆ ಕಾಣಬೇಕಿದೆ’ ಎಂದು ಮೈಕಲ್ ಹಸ್ಸಿ ಹೇಳಿದ್ದಾರೆ.

‘ನೆಟ್ ಪ್ರ್ಯಾಕ್ಟಿಸ್​​​ನಲ್ಲಿ ಧೋನಿ ಬ್ಯಾಟಿಂಗ್ ಉತ್ತಮವಾಗಿ ಮಾಡುತ್ತಿದ್ದಾರೆ ನಿಜ. ಆದರೆ, ರನ್ ತೆಗೆಯಲು ಅವರಿಂದ ಓಡಲು ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆ’ ಎಂದಿದ್ದಾರೆ.

ಇದನ್ನೂ ಓದಿ: ಧೋನಿ ಇಲ್ಲದೆ ಸಿಎಸ್​ಕೆ ನಿಷ್ಪ್ರಯೋಜಕ: ರುತುರಾಜ್-ಸ್ಯಾಮ್ಸನ್​ಗೆ 36 ಕೋಟಿ ಹಾಕಿದ್ದು ವೇಸ್ಟ್..?

ಧೋನಿ ಸಂಪೂರ್ಣವಾಗಿ ಚೇತರಿಕೆ ಕಾಣೋದು ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ. ಮುಂದಿನ ಪಂದ್ಯದಲ್ಲೇ ಅವರು ಮೈದಾನಕ್ಕೆ ಇಳಿಯಬಹುದು ಅಥವಾ ಇನ್ನೂ ಕೆಲವು ಪಂದ್ಯ ಅವರು ಫೀಲ್ಡ್​​ಗೆ ಇಳಿಯಲು ಸಾಧ್ಯವಾಗದೆ ಇರಬಹುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಯಲಿದೆ. ಲೀಗ್ ಪಂದ್ಯಗಳಲ್ಲಿ ಚೆನ್ನೈಗೆ ಇನ್ನು ಏಳು ಮ್ಯಾಚ್​​ಗಳು ಉಳಿದಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version