ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ಗೆದ್ದ ಪಾಕಿಸ್ತಾನಕ್ಕೆ ನಡುಕ! – Kannada News | T20 World Cup 2026: Pakistan vs United States of America Match Today

T20 World Cup 2026: ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಕಿಸ್ತಾನ್ ಶುಭಾರಂಭ ಮಾಡಿದೆ. ಈ ಶುಭಾರಂಭ ರೋಚಕ ಗೆಲುವಿನೊಂದಿಗೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ನೆದರ್​ಲೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಪಾಕ್ ಪಡೆ ಅಂತಿಮ ಓವರ್​ನಲ್ಲಿ ಗೆಲುವು ದಾಖಲಿಸಿತ್ತು. ಅದು ಸಹ 3 ವಿಕೆಟ್​ಗಳಿಂದ.

ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೆದರ್​ಲೆಂಡ್ಸ್ ತಂಡವು ಕಲೆಹಾಕಿದ್ದು ಕೇವಲ 147 ರನ್​ಗಳು ಮಾತ್ರ.

ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ಪಾಕ್ ಪಡೆ ಅಕ್ಷರಶಃ ಒದ್ದಾಡಿದರು. ಅದರಲ್ಲೂ ಕೊನೆಯ 2 ಓವರ್​ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ 29 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಮ್ಯಾಕ್ಸ್ ಒಡೌಡ್ ಬಿಟ್ಟ ಕ್ಯಾಚ್ ನೆದರ್​ಲೆಂಡ್ಸ್ ಪಾಲಿಗೆ ಮುಳುವಾಯಿತು.

ಅಂತಿಮ ಹಂತದಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಯೀಮ್ ಅಶ್ರಫ್ 19ನೇ ಓವರ್​ನಲ್ಲಿ 24 ರನ್ ಚಚ್ಚಿದರು. ಅಲ್ಲದೆ ಕೊನೆಯ ಓವರ್​ನ 3ನೇ ಎಸೆತದಲ್ಲಿ ಫೋರ್ ಬಾರಿಸಿ ಪಾಕಿಸ್ತಾನ್ ತಂಡಕ್ಕೆ 3 ವಿಕೆಟ್​ಗಳ ರೋಚಕ ಗೆಲುವು ತಂದು ಕೊಟ್ಟರು.

ಅಂದರೆ ಇಲ್ಲಿ ನೆದರ್​ಲೆಂಡ್ಸ್ ಫೀಲ್ಡರ್ ಮಾಡಿದ ತಪ್ಪಿನಿಂದಾಗಿ ಪಾಕಿಸ್ತಾನ್ ತಂಡ ಗೆಲ್ಲುವಂತಾಯಿತು ಎಂದರೆ ತಪ್ಪಾಗಲಾರದು. ಏಕೆಂದರೆ ಫಯೀಮ್ ಅಶ್ರಫ್ ವಿಕೆಟ್ ಪಡೆದಿದ್ದರೆ, ಪಂದ್ಯವು ಸಂಪೂರ್ಣ ನೆದರ್​ಲೆಂಡ್ಸ್ ಪರ ವಾಲುತ್ತಿತ್ತು. ಆದರೆ ಅಂತಿಮ ಹಂತದಲ್ಲಿ ಮ್ಯಾಕ್ಸ್​ ಒಡೌಡ್ ಮಾಡಿದ ತಪ್ಪಿನಿಂದಾಗಿ ನೆದರ್​ಲೆಂಡ್ಸ್ ಸೋಲನುಭವಿಸಿತು.

ಇದೀಗ ಪಾಕಿಸ್ತಾನ್ ತಂಡವು ತನ್ನ 2ನೇ ಪಂದ್ಯವಾಡಲು ಸಜ್ಜಾಗಿದೆ. ಇಂದು (ಫೆ.10) ನಡೆಯಲಿರುವ ಟಿ20 ವಿಶ್ವಕಪ್​ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಯುಎಸ್​ಎ ಮುಖಾಮುಖಿಯಾಗಲಿದೆ. ಮೊದಲ ಪಂದ್ಯದಲ್ಲೇ ಎದ್ದು ಬಿದ್ದು ಗೆದ್ದಿರುವ ಪಾಕ್ ಪಡೆಗೆ ಇದೀಗ ಇತಿಹಾಸದ್ದೇ ಚಿಂತೆ.

ಮರುಕಳಿಸಲಿದೆಯಾ ಇತಿಹಾಸ?

ಪಾಕಿಸ್ತಾನ್ ಮತ್ತು ಯುಎಸ್​ಎ ಟಿ20 ಕ್ರಿಕೆಟ್​ನಲ್ಲಿ ಈವರೆಗೆ ಒಮ್ಮೆ ಮಾತ್ರ ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಗೆದ್ದಿರುವುದು ಯುಎಸ್​ಎ ಎಂಬುದು ವಿಶೇಷ. ಅಂದರೆ 2024 ರಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಯುಎಸ್​ಎ ಯಶಸ್ವಿಯಾಗಿತ್ತು.

ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವು ಅಂತಿಮ ಓವರ್​ನಲ್ಲಿ 14 ರನ್​ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು.

ಇನ್ನು ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್​ಎ ತಂಡವು 18 ರನ್ ಕಲೆಹಾಕಿದ್ದರು. 19 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ 13 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಯುಎಸ್​ಎ ತಂಡ 5 ರನ್​ಗಳ ವಿಜಯ ಸಾಧಿಸಿತ್ತು.

ಇದನ್ನೂ ಓದಿ: IPL 2026: ಬೆಂಗಳೂರು ಯುನೈಟೆಡ್ ಆಗಲಿದೆಯಾ RCB?

ಇದೀಗ ಮತ್ತೊಮ್ಮೆ ಪಾಕಿಸ್ತಾನ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ ಯುಎಸ್​ಎ. ಅದರಲ್ಲೂ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಭಾರತ ತಂಡವನ್ನೇ ಕಾಡಿದ್ದ ಯುಎಸ್​ಎ ಬೌಲರ್​ಗಳು ಪಾಕಿಸ್ತಾನ್ ತಂಡವನ್ನು ಸಹ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವುದರಲ್ಲಿ ಅನುಮಾನವೇ ಇಲ್ಲ.

Source link

ಪೋಷಕರು ಕಾಲಿಗೆ ಬಿದ್ದು ಗೋಗರೆದರೂ ಕರಗದ ಮಗಳು! ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ – Kannada News | Vijayapura Love Story: Adult Daughter Chooses Muslim Husband Over Crying Parents

‘ನಾನು ಅವನ ಜೊತೆಗೇ ಹೋಗ್ತೀನಿ, ನಿಮ್ಮ ಜೊತೆ ಬರಲ್ಲ’ ಪೋಷಕರ ಕಣ್ಣೀರಿಗೂ ಕರಗದ ಮಗಳು!

ವಿಜಯಪುರ, ಫೆಬ್ರವರಿ 10: ಪ್ರೀತಿಸಿದ ಯುವಕನೊಂದಿಗೆ ಪರಾರಿಯಾದ ಮಗಳಿಗಾಗಿ ಆಕೆಯ ಪೋಷಕರು ಪೊಲೀಸ್ ಠಾಣೆ ಮುಂದೆ ಕಣ್ಣಿರು ಹಾಕಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ. ಹೆತ್ತವರನ್ನು ಬಿಟ್ಟು ಪರಾರಿಯಾದ ಯುವತಿ, ಅನ್ಯಧರ್ಮೀಯನನ್ನು ಮದುವೆ ಆಗಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಪೊಲೀಸ್ ಠಾಣೆಯ ಎದುರಿಗೆ ಕೂತು ಗೋಳಿಟ್ಟಿದ್ದಾರೆ.

ಮೊಹಮದ್ ಸಲಿಂ ಸುತಾರ್ ಎಂಬ ಯುವಕನನ್ನು ಪ್ರೀತಿಸಿದ್ದ ಹುಡುಗಿ, ತಂದೆ ತಾಯಿಯನ್ನು ಎದುರುಹಾಕಿಕೊಂಡು ಆತನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆ ಮಗಳು ಕಾಣೆಯಾಗಿದ್ದಾಳೆಂದು ಫೆಬ್ರವರಿ 2ರಂದು ಯುವತಿಯ ಪೋಷಕರು ವಿಜಯನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಇದೀಗ ಅದೇ ಠಾಣೆಗೆ ಸ್ವಯಂಪ್ರೇರಿತವಾಗಿ ಪ್ರಿಯಕರನೊಂದಿಗೆ ಬಂದ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ.

ಪೊಲೀಸ್ ವಾಹನದ ಮುಂದೆ ಅಡ್ಡ ಬಿದ್ದು ಗೋಳಾಡಿದ ತಂದೆ-ತಾಯಿ

ಈ ವೇಳೆ ಠಾಣೆಗೆ ಬಂದ ತಂದೆ-ತಾಯಿ, ಮನೆಗೆ ವಾಪಸ್ ಬರುವಂತೆ ಮಗಳಲ್ಲಿ ಅಂಗಲಾಚಿದ್ದಾರೆ. ಆದರೆ ಯುವತಿ ಮಾತ್ರ ಹೆತ್ತವರ ಕಣ್ಣೀರಿಗೂ ಕರಗದೆ, ನಾನು ನನ್ನ ಗಂಡನ ಜೊತೆಗೆ ಹೋಗುತ್ತೇನೆ, ನಿಮ್ಮ ಜೊತೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಯುವತಿಯೂ ಪ್ರಾಪ್ತ ವಯಸ್ಸಿನವಳಾದ್ದರಿಂದ ಪೊಲೀಸರು ಆಕೆಯನ್ನು ಪತಿಯ ಜೊತೆಗೇ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ ಸಾವಿರ ರೂಪಾಯಿಗೆ ಹೆಂಡತಿಯನ್ನು ಸ್ನೇಹಿತರಿಗೆ ಮಾರಿದ ವ್ಯಕ್ತಿ, ಆಮೇಲೆ ನಡೀಬಾರದ್ದು ನಡೆದೇ ಹೋಯ್ತು

ಪೋಷಕರು ಎಷ್ಟೇ ಕರೆದರೂ ಒಪ್ಪದ ಮಗಳು ಗಂಡನೊಂದಿಗೇ ಹೋದಾಗ, ಆಕೆಯಿದ್ದ ಪೊಲೀಸ್ ವಾಹನಕ್ಕೂ ಅಡ್ಡಬಿದ್ದು ಮಗಳನ್ನು ಓಲೈಸಲು ಪೋಷಕರು ಪ್​ರಯತ್ನಿಸಿದ್ದಾರೆ. ಆದರೂ ಹೆತ್ತ ಕರುಳಿಗೆ ಸಮಾಧಾನವಾಗದೇ ಪೊಲೀಸ್ ಠಾಣೆಯ ಮುಂದೇ ಕುಳಿತು ತಂದೆ ತಾಯಿಯಿಬ್ಬರೂ ಗೋಗರೆದಿದ್ದಾರೆ. ಮಗಳು ಮಾತ್ರ ತಂದೆ ತಾಯಿಯ ಮುಖವನ್ನೂ ನೋಡದೆ ಅನ್ಯಕೋಮಿನ ಪ್ರಿಯಕರನೊಂದಿಗೆ ಹೊರಟು ಹೋಗಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Pearl Ring: ಮುತ್ತಿನ ಉಂಗುರ ಧರಿಸುವ ಮುನ್ನ ಈ ವಿಚಾರ ತಿಳಿದಿರಲಿ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Pearl for Weak Moon: Astrological Remedies for Mental Peace and Zodiac Benefits

ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರ ನಿಗೆ ತನ್ನದೇ ಆದ ಮಹತ್ವದ ಸ್ಥಾನವಿದೆ. ನಮ್ಮ ಆಲೋಚನೆಗಳು, ಭಾವನೆಗಳು, ನಿದ್ರೆ ಮತ್ತು ಮನಸ್ಥಿತಿಯ ಮೇಲೆ ಚಂದ್ರನ ಪ್ರಭಾವ ಬಹಳ ಗಟ್ಟಿಯಾಗಿರುತ್ತದೆ. ಜಾತಕದಲ್ಲಿ ಚಂದ್ರನು ದುರ್ಬಲವಾಗಿದ್ದರೆ ಮಾನಸಿಕ ಗೊಂದಲ, ಅತಿಯಾದ ಕೋಪ, ಆತಂಕ, ನಿರ್ಧಾರಗಳಲ್ಲಿ ಅಸ್ಥಿರತೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಮುತ್ತು (Pearl) ಧರಿಸುವುದು ಅತ್ಯಂತ ಪರಿಣಾಮಕಾರಿ ಪರಿಹಾರವೆಂದು ಜ್ಯೋತಿಷಿಗಳು ಸೂಚಿಸುತ್ತಾರೆ. ಬೆಳ್ಳಿಯ ಉಂಗುರದಲ್ಲಿ ನೈಸರ್ಗಿಕ ಮುತ್ತು ಧರಿಸುವುದರಿಂದ ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಶಕ್ತಿ ದೊರೆಯುತ್ತದೆ.

ಮೇಷ ಮತ್ತು ಕರ್ಕ ರಾಶಿ:

ಮೇಷ ಮತ್ತು ಕರ್ಕ ರಾಶಿಯವರಿಗೆ ಮುತ್ತು ಧರಣೆ ವಿಶೇಷವಾಗಿ ಶುಭಕರವಾಗಿದೆ. ಮೇಷ ರಾಶಿಯವರಿಗೆ ಚಂದ್ರನು ನಾಲ್ಕನೇ ಪಾದದ ಅಧಿಪತಿ ಆಗಿರುವುದರಿಂದ, ಮುತ್ತು ಧರಿಸಿದರೆ ಮನೆ, ವಾಹನ ಮತ್ತು ಇತರೆ ಭೌತಿಕ ಸೌಕರ್ಯಗಳಲ್ಲಿ ಪ್ರಗತಿ ಕಾಣಬಹುದು. ಕುಟುಂಬ ಜೀವನದಲ್ಲಿ ಸ್ಥಿರತೆ ಹೆಚ್ಚಾಗಿ, ಜೀವನದಲ್ಲಿ ರಾಜಯೋಗದಂತಾದ ಫಲಿತಾಂಶಗಳು ದೊರೆಯುವ ಸಾಧ್ಯತೆ ಇದೆ. ಕರ್ಕ ರಾಶಿಯವರು ಚಂದ್ರನ ಸ್ವರಾಶಿಯವರಾಗಿರುವುದರಿಂದ ಮುತ್ತು ಅವರಿಗೆ ಅತ್ಯಗತ್ಯ. ಇದು ಮಾನಸಿಕ ಗೊಂದಲವನ್ನು ಕಡಿಮೆ ಮಾಡಿ, ಕುಟುಂಬದಲ್ಲಿ ಸಾಮರಸ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವೃತ್ತಿಜೀವನದಲ್ಲಿಯೂ ಉತ್ತಮ ಪ್ರಗತಿ ಕಾಣಬಹುದು.

ವೃಶ್ಚಿಕ ಮತ್ತು ಮೀನ ರಾಶಿ:

ವೃಶ್ಚಿಕ ಮತ್ತು ಮೀನ ರಾಶಿಯವರಿಗೂ ಮುತ್ತು ಧರಣೆ ಬಹಳ ಉಪಕಾರಿಯಾಗಿದೆ. ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಹಠಾತ್ ಮತ್ತು ತೀವ್ರ ಸ್ವಭಾವ ಹೊಂದಿರುತ್ತಾರೆ. ಮುತ್ತು ಧರಿಸುವುದರಿಂದ ಕೋಪ ನಿಯಂತ್ರಣದಲ್ಲಿದ್ದು, ಆಲೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. ಸಂಬಂಧಗಳಲ್ಲಿ ಮಧುರತೆ ಹೆಚ್ಚಾಗಿ, ಆರ್ಥಿಕ ಸ್ಥಿರತೆ ಕೂಡ ದೊರೆಯುತ್ತದೆ. ಮೀನ ರಾಶಿಯವರು ಮುತ್ತಿನಿಂದ ಮಾನಸಿಕ ಸ್ಪಷ್ಟತೆ ಮತ್ತು ಆತ್ಮಶಾಂತಿ ಪಡೆಯುತ್ತಾರೆ. ಗೊಂದಲಮಯ ಸಂದರ್ಭಗಳಲ್ಲಿಯೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ವೃದ್ಧಿಯಾಗುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಆರಂಭವಾಗುತ್ತವೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಮುತ್ತು ಧರಿಸುವ ವಿಧಾನ:

ಮುತ್ತು ಧರಿಸುವ ವಿಧಾನವೂ ಮಹತ್ವದ್ದಾಗಿದೆ. ಯಾವಾಗಲೂ ಬೆಳ್ಳಿ ಲೋಹದಲ್ಲೇ ಮುತ್ತು ಹೂಡಿಸಬೇಕು. ಶುಕ್ಲ ಪಕ್ಷದ ಸೋಮವಾರದಂದು ಹಾಲು ಮತ್ತು ಗಂಗಾಜಲದಿಂದ ಶುದ್ಧೀಕರಿಸಿ ‘ಓಂ ಸೌಂ ಸೋಮಾಯ ನಮಃ’ ಮಂತ್ರವನ್ನು ಜಪಿಸಿದ ನಂತರ ಬಲಗೈಯ ಕಿರುಬೆರಳಿಗೆ ಧರಿಸುವುದು ಶುಭಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಲಾಭಗಳ ಜೊತೆಗೆ, ಮುತ್ತು ಧರಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯವಾಗುತ್ತದೆ ಎಂಬ ನಂಬಿಕೆಯೂ ಇದೆ. ಆದ್ದರಿಂದ ನೈಸರ್ಗಿಕ ಹಾಗೂ ಗುಣಮಟ್ಟದ ಮುತ್ತುಗಳನ್ನು ಮಾತ್ರ ಆಯ್ಕೆ ಮಾಡುವುದು ಉತ್ತಮ. ಒಟ್ಟಾರೆ, ಮುತ್ತು ಧರಣೆ ಚಂದ್ರನ ಶಕ್ತಿಯನ್ನು ಬಲಪಡಿಸಿ ಮನಸ್ಸಿಗೆ ಶಾಂತಿ, ಆರೋಗ್ಯಕ್ಕೆ ಬಲ ಮತ್ತು ಜೀವನದಲ್ಲಿ ಅದೃಷ್ಟವನ್ನು ತರಬಲ್ಲ ಸರಳವಾದ ಆದರೆ ಪರಿಣಾಮಕಾರಿ ಜ್ಯೋತಿಷ್ಯ ಪರಿಹಾರವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:36 am, Tue, 10 February 26

Source link

ಸ್ಪೀಕರ್​ಗೆ ಪತ್ರ ಬರೆದ ಬಿಜೆಪಿಯ ಮಹಿಳಾ ಸಂಸದರು – Kannada News | BJP Women MPs Seek Speaker’s Intervention Over House Disruption

ನವದೆಹಲಿ, ಫೆಬ್ರವರಿ 10: ಲೋಕಸಭೆ(LokSabha)ಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿಪಕ್ಷಗಳ ಮಹಿಳಾ ಸಂಸದರ ನಂತರ ಬಿಜೆಪಿ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್​ಗೆ ಪತ್ರ ಬರೆದಿದ್ದಾರೆ. ಫೆಬ್ರವರಿ 4ರಂದು ಸದನದೊಳಗೆ ಪ್ರಧಾನಿ ಮೋದಿ ಕುರ್ಚಿಯನ್ನು ಸುತ್ತುವರೆದು ಅವರು ಭಾಷಣ ಮಾಡದಂತೆ ತಡೆದ ಮಹಿಳಾ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿಯ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಫೆಬ್ರವರಿ 4ರಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ನಡವಳಿಕೆಯನ್ನು ಬಿಜೆಪಿ ಮಹಿಳಾ ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ ಮತ್ತು ಲೋಕಸಭೆ ಕೊಠಡಿಯೊಳಗಿನ ಘಟನೆಯನ್ನು ಬೆಳಕಿಗೆ ತಂದಿದ್ದಾರೆ. ಲೋಕಸಭೆಯ ಕೊಠಡಿಯೊಳಗೆ ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ ಘಟನೆಗಳಲ್ಲಿ ಒಂದನ್ನು ನಾವು ನೋಡಿದ್ದೇವೆ. ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗೆ ಪ್ರವೇಶಿಸಿದ್ದಲ್ಲದೆ, ಮೇಜುಗಳ ಮೇಲೆ ಹತ್ತುವುದು, ಕಾಗದಗಳನ್ನು ಹರಿದು ಕುರ್ಚಿಯ ಕಡೆಗೆ ಎಸೆಯುವುದನ್ನು ನಾವು ನೋಡಿದ್ದೇವೆ ಎಂದು ಬರೆಯಲಾಗಿದೆ.

ಈ ಗಂಭೀರ ಪ್ರಚೋದನೆಯಿಂದ ತೀವ್ರ ಕೋಪಗೊಂಡಿದ್ದರೂ, ತಮ್ಮ ಹಿರಿಯ ನಾಯಕರ ಆದೇಶದ ಮೇರೆಗೆ ಸಂಯಮವನ್ನು ಕಾಯ್ದುಕೊಂಡರು ಮತ್ತು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ ಎಂದು ಮಹಿಳಾ ಸಂಸದರು ಹೇಳುತ್ತಾರೆ. ನಾವು ಸಂಯಮವನ್ನು ಕಾಯ್ದುಕೊಳ್ಳದಿದ್ದರೆ, ಗಂಭೀರ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಲೋಕಸಭೆಯಲ್ಲಿ ನಡೆದ ಈ ಅಪಾಯಕಾರಿ ಘಟನೆ ನಮ್ಮೆಲ್ಲರಿಗೂ ತೊಂದರೆಯುಂಟು ಮಾಡಿದೆ.

ಮತ್ತಷ್ಟು ಓದಿ: ಲೋಕಸಭೆ ಅಧಿವೇಶನದಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದ 8 ಸಂಸದರ ಅಮಾನತು

ಸದನದೊಳಗೆ ಇಂತಹ ಹೇಯ ಕೃತ್ಯಗಳನ್ನು ಎಸಗಿದ ವಿರೋಧ ಪಕ್ಷದ ಸಂಸದರ ವಿರುದ್ಧ ನಿಯಮಗಳ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಹಿಳಾ ಸಂಸದರು ಲೋಕಸಭೆ ಸ್ಪೀಕರ್‌ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ವಿರೋಧ ಪಕ್ಷದ ಮಹಿಳಾ ಸಂಸದರು ಕೂಡ ಪತ್ರ ಬರೆದಿದ್ದರು

ಸೋಮವಾರದಂದು ವಿರೋಧ ಪಕ್ಷಗಳ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ತಮ್ಮ ತೀವ್ರ ಅಸಮಾಧಾನ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದರು. ತಮಿಳುನಾಡು ಲೋಕಸಭಾ ಸಂಸದ ಎಸ್. ಜೋತಿಮಣಿ ಅವರ ಲೆಟರ್‌ಹೆಡ್‌ನಲ್ಲಿ ಬರೆಯಲಾದ ಈ ಪತ್ರಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ, ಆರ್. ಸುಧಾ, ಜ್ಯೋತ್ಸ್ನಾ ಚರಂದಾಸ್ ಮಹಾಂತ್ ಮತ್ತು ವರ್ಷಾ ಏಕನಾಥ್ ಗಾಯಕ್ವಾಡ್ ಸೇರಿದಂತೆ ಹಲವಾರು ಮಹಿಳಾ ಸಂಸದರು ಸಹಿ ಮಾಡಿದ್ದಾರೆ.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಭಾಷಣದ ಕುರಿತು ಲೋಕಸಭೆಯಲ್ಲಿ ಮುಂದುವರೆದ ಬಿಕ್ಕಟ್ಟಿನ ನಡುವೆಯೇ ಈ ವಿವಾದ ತೆರೆದುಕೊಂಡಿದೆ. 2020 ರ ಚೀನಾದೊಂದಿಗಿನ ಬಿಕ್ಕಟ್ಟನ್ನು ಉಲ್ಲೇಖಿಸುವಾಗ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಉಲ್ಲೇಖಿಸಲು ಗಾಂಧಿ ಪ್ರಯತ್ನಿಸಿದ ನಂತರ ಬಿಕ್ಕಟ್ಟು ಉದ್ಭವಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸರಿಯಾಗಿ ವರ್ತಿಸಿ, ಇದು ಥಿಯೇಟರ್ ಅಲ್ಲ’; ಅಭಿಮಾನಿಗಳ ಮೇಲೆ ಕೂಗಾಡಿದ ನಟ ಅಜಿತ್ – Kannada News | Ajith Kumar’s Racing Focus: Why Fans Are Upset Over His Recent Behavior and Abu Dhabi Incident

ತಮಿಳು ನಟ ಅಜಿತ್ ಕುಮಾರ್ (Ajith Kumar) ಅವರು ಇತ್ತೀಚೆಗೆ ನಟನೆಗಿಂತ ರೇಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ವಿವಿಧ ಕಡೆಗಳಲ್ಲಿ ತೆರಳಿ ಕಾರ್ ರೇಸ್​ ಅಲ್ಲಿ ಭಾಗಿ ಆಗುತ್ತಿದ್ದಾರೆ. ಈಗ ಅವರು ಅಭಿಮಾನಿಗಳ ಮೇಲೆ ಸಿಟ್ಟಾಗಿದ್ದಾರೆ. ಅಜಿತ್ ಅವರನ್ನು ನೋಡಲು ಬಂದ ಫ್ಯಾನ್ಸ್ ಮೇಲೆ ತಿರುಗಿ ಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಅವರು ಸಾಕಷ್ಟು ಟೀಕೆ ಎದುರಿಸಿದ್ದಾರೆ.

ಅಜಿತ್ ಕುಮಾರ್ ಅವರು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಕೂಡ ನೀಡಿದ್ದಾರೆ. 2025ರಲ್ಲಿ ಅವರು ‘ವಿದುಮುಯಾರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳು ತೆರೆಗೆ ಬಂದವು. ಎರಡೂ ಸಿನಿಮಾಗಳು ಸಾಧಾರಣ ಎನಿಸಿಕೊಂಡವು. ‘ವಿದುಮುಯಾರ್ಚಿ’ ರಿಲೀಸ್ ಆಗಿ ವರ್ಷ ಕಳೆದಿದೆ. ಆದಾಗ್ಯೂ ಅವರು ಹೊಸ ಸಿನಿಮಾ ಘೋಷಣೆ ಆಗಿಲ್ಲ. ಬದಲಿಗೆ ಅವರು ವಿದೇಶದಲ್ಲಿ ಕಾರ್​ ರೇಸ್ ಅಲ್ಲಿ ಭಾಗಿ ಆಗುತ್ತಿದ್ದಾರೆ.

ಅಬುಧಾಬಿಯಲ್ಲಿ ನಡೆದ ರೇಸ್​​ನಲ್ಲಿ ಅಜಿತ್ ಭಾಗಿ ಆಗಿದ್ದರು. ಈ ವೇಳೆ ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಆಗ ಸಿಟ್ಟಾದ ಅಜಿತ್, ‘ಸರಿಯಾಗಿ ವರ್ತಿಸಿ. ಇದು ಥಿಯೇಟರ್​ ಅಲ್ಲ’ ಎಂದು ಖಾರವಾಗಿಯೇ ಹೇಳಿದ್ದಾರೆ. ಇದಕ್ಕೆ ಕೆಲವರು ಕೋಪ ಹೊರಹಾಕಿದ್ದಾರೆ. ‘ಅಭಿಮಾನಿಗಳನ್ನು ಹೀಗೆ ಟ್ರೀಟ್ ಮಾಡಬಾರದು’ ಎಂದು ಖಡಕ್ ಆಗಿಯೇ ಉತ್ತರಿಸಲಾಗಿದೆ.

ಅಜಿತ್ ಅವರು ಅಭಿಮಾನಿಗಳ ಕೈಗೆ ಸಿಗದೇ ಅದೆಷ್ಟೋ ವರ್ಷಗಳೇ ಕಳೆದಿವೆ. ಅವರು ಸಿನಿಮಾ ಮಾಡಿದ ಬಳಿಕ ಅದರ ಪ್ರಚಾರಕ್ಕೆ ತೆರಳೋದಿಲ್ಲ. ಅಭಿಮಾನಿಗಳ ಜೊತೆ ಸಿನಿಮಾ ನೋಡೋಕೆ ತೆರಳೋದಿಲ್ಲ. ಈ ಎಲ್ಲಾ ಕಾರಣದಿಂದ ಅಜಿತ್ ಅವರು ಕಂಡಾಗ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಆದರೆ, ಇದನ್ನು ಅವರು ಸಹಿಸಿಕೊಳ್ಳೋದೇ ಇಲ್ಲ.

ಇದನ್ನೂ ಓದಿ: ಕಮಲ್ ಹಾಸನ್, ಅಜಿತ್ ಕುಮಾರ್ ಬಳಿಕ ದಿಟ್ಟ ನಿರ್ಧಾರ ಕೈಗೊಂಡ ನಟಿ ನಯನತಾರಾ 

ಈ ಮೊದಲು ಕೂಡ ಅಜಿತ್ ಅವರು ಅನೇಕ ಬಾರಿ ಕೋಪ ಹೊರಹಾಕಿದ್ದು ಇದೆ. ಅಜಿತ್ ಸೋಶಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿಲ್ಲ. ಹೀಗಾಗಿ, ಅವರು ಅಭಿಮಾನಿಗಳ ಕೈಗೂ ಸಿಗೋದೆ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:20 am, Tue, 10 February 26

Source link

ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಇದ್ದ ಬ್ಯಾಗ್ ಕಳವು! – Kannada News | Gold Cash Theft Inside Minister Byrathi Suresh Office at Vidhana Soudha; D Group Employee Arrested

ಬೆಂಗಳೂರು, ಫೆಬ್ರವರಿ 10: ಅತಿಹೆಚ್ಚಿನ ಭದ್ರತೆ ಇರುವ ಸ್ಥಳಗಳಲ್ಲಿ ಒಂದಾದ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಕಳವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ, ಕೈಚೀಲದಲ್ಲಿದ್ದ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ನಗದು ಸಹಿತ ಕಚೇರಿಯಲ್ಲೇ ಮರೆತು ಹೊರಟಿದ್ದರು. ಮಾರನೇ ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಕೈಚೀಲ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಗಾಬರಿಗೊಂಡ ನವೀನ್ ತಕ್ಷಣ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ವೇಳೆ, ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ಹೊತ್ತುಕೊಂಡು ಹೋಗಿರುವುದು ಪತ್ತೆಯಾಗಿದೆ.

ತಕ್ಷಣ ಕಾರ್ಯಾಚರಣೆ ನಡೆಸಿದ ವಿಧಾನಸೌಧ ಪೊಲೀಸರು ಆರೋಪಿ ಡಿ ಗ್ರೂಪ್ ನೌಕರನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಭದ್ರತಾ ವ್ಯವಸ್ಥೆಗಳ ಕುರಿತು ಸಹ ಪ್ರಶ್ನೆಗಳು ಎದ್ದಿವೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Pulses Day 2026: ದ್ವಿದಳ ಧಾನ್ಯಗಳ ಸೇವನೆ ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿ – Kannada News | World Pulses Day 2026: Why is World Pulses Day celebrated? Here is the information

ವಿಶ್ವ ದ್ವಿದಳ ಧಾನ್ಯ ದಿನImage Credit source: vecteezy

ಕಡಲೆ, ತೊಗರಿ, ಉದ್ದಿನ ಬೇಳೆ, ಅವರೆ, ಸೋಯಾಬೀನ್‌, ರಾಜ್ಮಾ, ಹುರುಳಿ, ಬಟಾಣಿ ಇವೆಲ್ಲವೂ ದ್ವಿದಳ ಧಾನ್ಯಗಳಾಗಿದ್ದು (Pulses), ಹೆಚ್ಚಿನ ಅಡುಗೆಗಳಲ್ಲಿ ಈ ಎಲ್ಲಾ ಧಾನ್ಯಗಳನ್ನು ಬಳಸಲಾಗುತ್ತದೆ. ದ್ವಿದಳ ಧಾನ್ಯಗಳು ಕೇವಲ ಕಾಳುಗಳಲ್ಲ,  ಪೌಷ್ಟಿಕಾಂಶದ ನಿಧಿಯೂ ಹೌದು.  ಇವುಗಳಲ್ಲಿ ಅಮೈನೋ ಆಮ್ಲ, ಪ್ರೋಟೀನ್‌, ಕಬ್ಬಿಣ, ಪೋಲಿಕ್‌ ಆಮ್ಲ ಇತ್ಯಾದಿ ಪೋಷಕಾಂಶಗಳಿದ್ದು, ಇವು ಹೃದಯ ಮತ್ತು ಸಂಪೂರ್ಣ ದೇಹಾರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಹಾಗಾಗಿ ದ್ವಿದಳ ಧಾನ್ಯಗಳ ಪೌಷ್ಟಿಕಾಂಶ ಮೌಲ್ಯಗಳು ಮತ್ತು ಅವುಗಳ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಪ್ರತಿವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ದ್ವಿದಳ ಧಾನ್ಯ ದಿನದ ಇತಿಹಾಸವೇನು?

ದ್ವಿದಳ ಧಾನ್ಯಗಳ ಮಹತ್ವವನ್ನು ಎತ್ತಿ ತೋರಿಸಲು ಮತ್ತು ಜನರಿಗೆ ಅವುಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು, 2016 ನೇ ವರ್ಷವನ್ನು ಅಂತರರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷವೆಂದು ಘೋಷಿಸಲಾಯಿತು. ಇದರ ನಂತರ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಫೆಬ್ರವರಿ 10 ಅನ್ನು ವಿಶ್ವ ದ್ವಿದಳ ಧಾನ್ಯಗಳ ದಿನವೆಂದು ಗೊತ್ತುಪಡಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ, ಫೆಬ್ರವರಿ 10 ಅನ್ನು ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಏಕೆ ಆಚರಿಸಲಾಗುತ್ತದೆ ?

ಆಧುನಿಕತೆಯ ಓಟದಲ್ಲಿ, ತ್ವರಿತ ಆಹಾರದ ವ್ಯಾಪಕತೆಯು ನಮ್ಮ ಆಹಾರಕ್ರಮದಲ್ಲಿ ದ್ವಿದಳ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡುತ್ತಿದೆ. ಇದು ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ನೀಡದೆ ವಂಚಿತಗೊಳಿಸುತ್ತದೆ, ಇದು ಜನರ, ವಿಶೇಷವಾಗಿ ಮಕ್ಕಳು ಮತ್ತು ಯುವಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಾನವನ ಆರೋಗ್ಯ ಮತ್ತು ಆಹಾರ ಸುರಕ್ಷತೆಗಾಗಿ ದ್ವಿದಳ ಧಾನ್ಯಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರು ತಮ್ಮ ಆಹಾರಕ್ರಮದಲ್ಲಿ ಅವುಗಳನ್ನು ಸೇರಿಸಿಕೊಳ್ಳಲು ಪ್ರೋತ್ಸಾಹಿಸಲು ಅಂತರರಾಷ್ಟ್ರೀಯ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ಭಾಗವಾಗಿದ್ದು ಹೇಗೆ? ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

 ದ್ವಿದಳ ಧಾನ್ಯಗಳು ನಮ್ಮ ಆರೋಗ್ಯದ ನಿಧಿ:

ದ್ವಿದಳ ಧಾನ್ಯಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಅವು ಕಡಿಮೆ ಕೊಬ್ಬು ಮತ್ತ ಫೈಬರ್‌ನಲ್ಲಿ ಸಮೃದ್ಧವಾಗಿವೆ, ಗ್ಲುಟನ್-ಮುಕ್ತವಾಗಿವೆ. ಅವುಗಳಲ್ಲಿ ಕಡಿಮೆ ಸೋಡಿಯಂ ಅಂಶವಿದ್ದು, ಇದು ಹೃದಯ ರೋಗಿಗಳು ಮತ್ತು ಮಧುಮೇಹದಿಂದ ಬಳಲುತ್ತಿರುವವರಿಗೆ ಸೂಕ್ತವಾದ ಸೂಪರ್‌ಫುಡ್ ಆಗಿದೆ. ಅಲದೆ ದ್ವಿದಳ ಧಾನ್ಯಗಳು ಖನಿಜಗಳು, ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು, ಪ್ರೋಟೀನ್‌ ಮತ್ತು ನಾರಿನಾಂಶ ಹೆಚ್ಚಿದ್ದು, ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಸ್ನಾಯುಗಳನ್ನು ನಿರ್ಮಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಜೊತೆಗೆ ದ್ವಿದಳ ಧಾನ್ಯಗಳು ದೇಹಕ್ಕೆ ಕಬ್ಬಿಣಾಂಶವನ್ನು ಪೂರೈಸುತ್ತವೆ, ಶಕ್ತಿಯನ್ನು ಉತ್ಪಾದಿಸಲು ಮತ್ತು ಚಯಾಪಚಯಕ್ರಿಯೆಯನ್ನು ಉತ್ತೇಜಿಸಲೂ ಸಹಾಯ ಮಾಡುತ್ತದೆ.

ವಿಶ್ವ ದ್ವಿದಳ ಧಾನ್ಯಗಳ ದಿನದ ಮಹತ್ವವೇನು?

  • ವಿಶ್ವ ದ್ವಿದಳ ಧಾನ್ಯಗಳ ದಿನದ ಪ್ರಮುಖ ಉದ್ದೇಶವೆಂದರೆ ಜಾಗತಿಕವಾಗಿ ಅಪೌಷ್ಟಿಕತೆ ಮತ್ತು ಹಸಿವನ್ನು ಕಡಿಮೆ ಮಾಡಲು ದ್ವಿದಳ ಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವುದು.
  • ಹೆಚ್ಚುವರಿಯಾಗಿ, ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಲು ಮತ್ತು ದ್ವಿದಳ ಧಾನ್ಯಗಳ ಪರಿಸರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವು ಸಹಾಯ ಮಾಡುತ್ತದೆ.
  • ದ್ವಿದಳ ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೊಲೆರೋಗೆ ಹಿಂದಿನಿಂದ ಡಿಕ್ಕಿ ಹೊಡೆದು ಅರ್ಧ ಕಿಲೋಮೀಟರ್ ತಳ್ಳಿಕೊಂಡು ಹೋಗಿ ಉರುಳಿಬಿದ್ದ ಕಂಟೇನರ್! – Kannada News | Container Lorry Rams Bolero on NH 44 Near Chikkaballapur, Driver Killed After Vehicle Dragged Half a Kilometer

ಚಿಕ್ಕಬಳ್ಳಾಪುರ, ಫೆಬ್ರವರಿ 10: ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರ ಚಿಕ್ಕಬಳ್ಳಾಪುರದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂದೆ ಹೋಗುತ್ತಿದ್ದ ಬೊಲೇರೊ ಜೀಪ್​ಗೆ ಕಂಟೇನರ್ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದು ಅರ್ಧಕಿಲೋ ಮೀಟರ್ ದೂರ ತಳ್ಳಿಕೊಂಡು ಹೋಗಿ ನಂತರ ಬೊಲೇರೊ ಮೇಲೆ ಉರುಳಿ ಬಿದ್ದಿದೆ. ಬೊಲೆರೋದಲ್ಲಿದ್ದ ಬೆಂಗಳೂರಿನ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Parijatha Plant: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Parijatha Plant at Home: Unveiling Its Spiritual and Scientific Significance

ಪ್ರಕೃತಿಯಲ್ಲಿರುವ ಪ್ರತಿಯೊಂದು ಸಸ್ಯವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಅನೇಕ ಗಿಡಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ತುಳಸಿ, ಬಿಲ್ವಪತ್ರೆಯಂತೆ, ಪಾರಿಜಾತ ಗಿಡವು ವಿಶೇಷ ಸ್ಥಾನವನ್ನು ಹೊಂದಿದೆ. ಇದನ್ನು ದೇವಲೋಕದ ಗಿಡ, ದೈವಿಕ ವೃಕ್ಷ ಎಂದೂ ಕರೆಯಲಾಗುತ್ತದೆ. ಮನೆಯ ಹತ್ತಿರ ಪಾರಿಜಾತ ಗಿಡವನ್ನು ಬೆಳೆಸುವುದು ಉತ್ತಮವೇ, ಇದರ ನಿರ್ವಹಣೆ ಹೇಗೆ, ಇದರ ಮಹತ್ವವೇನು ಮತ್ತು ಇದರ ಹಿಂದಿನ ಇತಿಹಾಸವೇನು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಪಾರಿಜಾತ ಗಿಡವು ಭಗವಂತನಿಗೆ ಹೂವುಗಳನ್ನು ಅರ್ಪಿಸಲು ಬಳಸಲಾಗುವ ಒಂದು ಪವಿತ್ರ ಸಸ್ಯ. ಇದರ ಹೂವುಗಳು ಮನಸ್ಸಿಗೆ ಧನಾತ್ಮಕ ಚಿಂತನೆಗಳನ್ನು ನೀಡುತ್ತವೆ. ಮನೆಯ ಸುತ್ತಲೂ ಪಾರಿಜಾತ ಗಿಡವನ್ನು ಬೆಳೆಸುವುದರಿಂದ ಹಲವು ಪ್ರಯೋಜನಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಉತ್ತರ-ಈಶಾನ್ಯ ದಿಕ್ಕಿನಲ್ಲಿ ಅಥವಾ ಸಾಧ್ಯವಾದರೆ ದಕ್ಷಿಣ-ನೈರುತ್ಯ ದಿಕ್ಕಿನಲ್ಲಿ ಬೆಳೆಸುವುದು ಅತ್ಯಂತ ಶುಭಕರ. ಇದು ವಾಸ್ತು ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಮನೆಯ ಮೇಲೆ ಬೀಳುವ ಯಾವುದೇ ನಕಾರಾತ್ಮಕ ದೃಷ್ಟಿ ಅಥವಾ ಮಾಟ ಮಂತ್ರದಂತಹ ಪ್ರಭಾವಗಳನ್ನು ಹೀರಿಕೊಳ್ಳುವ ಶಕ್ತಿ ಈ ಗಿಡಕ್ಕಿದೆ ಎಂದು ನಂಬಲಾಗಿದೆ.

ಪುರಾಣಗಳ ಪ್ರಕಾರ, ಪಾರಿಜಾತ ಗಿಡವು ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ಒಂದಾಗಿದೆ. ಈ ಕಾರಣಕ್ಕಾಗಿ, ಇದನ್ನು ಮಹಾಲಕ್ಷ್ಮಿಯ ಸಹೋದರ ಎಂದೂ ಕರೆಯಲಾಗುತ್ತದೆ. ಮನೆಯಲ್ಲಿ ಪಾರಿಜಾತ ಗಿಡವಿದ್ದರೆ, ಮಹಾಲಕ್ಷ್ಮಿ, ಮಹಾಸರಸ್ವತಿ ಮತ್ತು ಮಹಾಕಾಳಿ ಈ ತ್ರಿಶಕ್ತಿಗಳ ಅನುಗ್ರಹ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. “ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪನಾಶನಂ” ಎಂಬ ಮಾತು ಈ ಗಿಡಕ್ಕೆ ಅನ್ವಯಿಸುತ್ತದೆ. ರಾತ್ರಿಯ ಸಮಯದಲ್ಲಿ ಈ ಗಿಡದ ಸುತ್ತಲೂ ಹರಡುವ ಸುಗಂಧವು ಮನಸ್ಸಿಗೆ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಪಾರಿಜಾತ ಗಿಡಕ್ಕೆ ಸೂರ್ಯನ ಕಿರಣಗಳು ಚೆನ್ನಾಗಿ ಬೀಳುವುದು ಅತ್ಯವಶ್ಯಕ. ಸೂರ್ಯನ ಕಿರಣಗಳಿಲ್ಲದೆ ಗಿಡದ ಬೆಳವಣಿಗೆ ಕಷ್ಟವಾಗಬಹುದು. ಇದರ ಮತ್ತೊಂದು ವಿಶೇಷವೆಂದರೆ, ಸಾಮಾನ್ಯವಾಗಿ ನಾವು ಗಿಡಗಳಿಂದ ನೇರವಾಗಿ ಹೂವುಗಳನ್ನು ಬಿಡಿಸಿಕೊಳ್ಳುತ್ತೇವೆ. ಆದರೆ ಪಾರಿಜಾತದ ಹೂವುಗಳು ಮರದಿಂದ ಉದುರಿ ನೆಲಕ್ಕೆ ಬಿದ್ದ ನಂತರವೂ ಅವುಗಳನ್ನು ಪೂಜೆಗೆ ಬಳಸಬಹುದು. ಇದು ಇಂದ್ರನ ನಂದನವನದಲ್ಲಿದ್ದ ಗಿಡವಾಗಿದ್ದು, ಶ್ರೀಕೃಷ್ಣ ಭಗವಾನರು ಇಂದ್ರನೊಂದಿಗೆ ಹೋರಾಡಿ ಇದನ್ನು ಭೂಲೋಕಕ್ಕೆ ತಂದರು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಪ್ರೀತಿ, ಭಕ್ತಿ, ಭಾವನೆ, ತ್ಯಾಗ ಮತ್ತು ಆತ್ಮವಿಶ್ವಾಸದಿಂದ ಈ ಗಿಡವನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಆಯುರ್ವೇದದಲ್ಲಿಯೂ ಸಹ ಪಾರಿಜಾತದ ಮಹತ್ವವನ್ನು ವಿವರಿಸಲಾಗಿದೆ. ಮನೆಯ ಅಂಗಳದಲ್ಲಿ, ತೋಟದಲ್ಲಿ ಅಥವಾ ಹೊಲಗಳಲ್ಲಿ ಕನಿಷ್ಠ ಒಂದು ಪಾರಿಜಾತ ಗಿಡವನ್ನು ಬೆಳೆಸುವುದು ಬಹಳಷ್ಟು ಶುಭವನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:44 am, Tue, 10 February 26

Source link

3 ಭರ್ಜರಿ ಸಿಕ್ಸ್, 7 ಫೋರ್: ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ – Kannada News | Mohammed Shami Smashes 32 Ball Half Century In Ranji Match

ರಣಜಿ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದಿದ್ದಾರೆ. ಬೆಂಗಾಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಆಂಧ್ರ ಪ್ರದೇಶ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ತಂಡದ ನಾಯಕ ಅಭಿಮನ್ಯು ಈಶ್ವರನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಂಧ್ರ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 295 ರನ್​ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬೆಂಗಾಲ್ ಪರ ಸುದೀಪ್ ಕುಮಾರ್ ದ್ವಿಶತಕ ಸಿಡಿಸಿದರು. ಇನ್ನು ಸುಮಂತ ಗುಪ್ತಾ 81 ರನ್ ಬಾರಿಸಿದರೆ, ಶಕೀರ್ ಹಬೀಬಿ 95 ರನ್​ಗಳ ಇನಿಂಗ್ಸ್ ಆಡಿದರು. ಹಾಗೆಯೇ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮೊಹಮ್ಮದ್ ಶಮಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಹೊಡಿಬಡಿ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದ ಶಮಿ 33 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 53 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನೊಂದಿಗೆ ಬೆಂಗಾಲ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 629 ರನ್ ಕಲೆಹಾಕಿದೆ. ಇದೀಗ ದ್ವಿತೀಯ ಇನಿಂಗ್ಸ್ ಶುರು ಮಾಡಿರುವ ಆಂಧ್ರ ತಂಡವು 30 ಓವರ್​ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 83 ರನ್ ಕಲೆಹಾಕಿದೆ.

ಇತ್ತ ಐದನೇ ದಿನದಾಟ ಚಾಲ್ತಿಯಲ್ಲಿರುವ ಕಾರಣ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಅಥವಾ ಬೆಂಗಾಲ್ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು. ಹೀಗಾಗಿ 3ನೇ ಕ್ವಾರ್ಟರ್ ಫೈನಲ್ ಮೂಲಕ ಬೆಂಗಾಲ್ ತಂಡವು ಸೆಮಿಫೈನಲ್​ಗೆ ಅರ್ಹತೆ ಪಡೆಯುವುದನ್ನು ನಿರೀಕ್ಷಿಸಬಹುದು.

 

Source link

Exit mobile version