ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು! – Kannada News | Congress MLA K Shadakshari On Tiptur As Seperate District

ತುಮಕೂರು, ಆಗಸ್ಟ್ 16: ಕಾಂಗ್ರೆಸ್ ಹಿರಿಯ ಶಾಸಕ ಕೆ. ಷಡಕ್ಷರಿ ಅವರು ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಪ್ರಬಲ ಕೂಗು ಎತ್ತಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. “ಸಚಿವ ಸ್ಥಾನ ನೀಡಿ, ಇಲ್ಲವಾದರೆ ಪ್ರತ್ಯೇಕ ಜಿಲ್ಲೆ ಮಾಡಿ” ಎಂದು ಈ ಹಿಂದೆ ಆಗ್ರಹಿಸಿದ್ದ ಕೆ. ಷಡಕ್ಷರಿ ಅವರಿಗೆ ಸಚಿವ ಸ್ಥಾನ ದೊರೆಯದ ಕಾರಣ, ಈಗ ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲೇಬೇಕು ಎಂದು ತೀರ್ಮಾನಿಸಿದ್ದಾರೆ.

ತಿಪಟೂರು ಕ್ಷೇತ್ರದ ಶಾಸಕರಾಗಿರುವ ಕೆ. ಷಡಕ್ಷರಿ ಅವರು, ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕಾಗಿ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಪಟ್ಟವರ ಮನವೊಲಿಸಿ ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿಸುವ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ, “ಕಲ್ಪತರು ನಾಡು” ಎಂದೇ ಪ್ರಸಿದ್ಧವಾಗಿರುವ ತಿಪಟೂರು ಪ್ರದೇಶಕ್ಕೆ ಅಗತ್ಯವಿರುವ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ತಂದು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಘೋಷಣೆಯು ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಸೋಲಿಗೆ ಮೊದಲ ದಿನವೇ ಮುನ್ನಡಿ ಬರೆದಿದ್ದರು: ಪ್ಯಾಟ್ ಕಮಿನ್ಸ್​ – Kannada News | Pat Cummins Admits Day 1 Flop Sparked Historic Loss to Bangladesh

ಡಾರ್ವಿನ್​ನ ಮರಾರಾ ಓವಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಪರಾಜಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ಪಂದ್ಯದ ಮೊದಲ ದಿನವೇ ತಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಮೊದಲ ದಿನದ ಮುನ್ನುಡಿ!

ಪಂದ್ಯದ ನಂತರ ಮಾತನಾಡಿದ ಕಮಿನ್ಸ್, “ಪಂದ್ಯದ ಮೊದಲ ದಿನವೇ ನಾವು ಹಿನ್ನಡೆ ಅನುಭವಿಸಿದೆವು. ಪಂದ್ಯಕ್ಕೆ ನಮ್ಮ ಸಿದ್ಧತೆಗಳು ಅತ್ಯುತ್ತಮವಾಗಿದ್ದವು. ಆದ್ದರಿಂದ ಸೋಲಿಗೆ ಯಾವುದೇ ನೆಪಗಳನ್ನು ಹೇಳಲು ಬಯಸುವುದಿಲ್ಲ. ಬಾಂಗ್ಲಾದೇಶ್ ಅತ್ಯುತ್ತಮವಾಗಿ ಆಡಿತು. ಮೊದಲ ದಿನ ಪಿಚ್‌ನಲ್ಲಿ ಬೌಲರ್‌ಗಳಿಗೆ ಕೊಂಚ ನೆರವಿತ್ತು ನಿಜ, ಆದರೆ ನಮ್ಮ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವ ದಾರಿ ಹುಡುಕಬೇಕಿತ್ತು. ಬಳಿಕ ನಮಗೂ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ,

ಬಾಂಗ್ಲಾ ಶಿಸ್ತಿನ ಆಟಕ್ಕೆ ಶ್ಲಾಘನೆ:

ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಿದ ಬಾಂಗ್ಲಾದೇಶ್ ತಂಡದ ಆಟವನ್ನು ಕಮಿನ್ಸ್ ಮುಕ್ತಕಂಠದಿಂದ ಶ್ಲಾಘಿಸಿದರು. “ಅವರು ಪಂದ್ಯದ ಎಲ್ಲಾ ವಿಭಾಗಗಳಲ್ಲೂ ನಮಗಿಂತ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ತೋರಿದ ತಾಳ್ಮೆ ಮತ್ತು ಶಿಸ್ತು ಅದ್ಭುತವಾಗಿತ್ತು. ಒಮ್ಮೆ ನಾವು ಪಂದ್ಯದಲ್ಲಿ ಹಿಂದೆ ಬಿದ್ದ ನಂತರ, ಮರಳಿ ಕಮ್‌ಬ್ಯಾಕ್ ಮಾಡುವುದು ನಮಗೆ ತುಂಬಾ ಕಷ್ಟವಾಯಿತು” ಎಂದರು.

ತಂಡದಲ್ಲಿ ಬದಲಾವಣೆಯ ಸುಳಿವು:

ಮುಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆಗಳಾಗಲಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಿನ್ಸ್, “ಇಂತಹ ಪಂದ್ಯಗಳು ಮುಗಿದಾಗ ಮುಂದಿನ ಪಂದ್ಯಕ್ಕಾಗಿ ತಂಡದ ಸಂಯೋಜನೆ ಮತ್ತು ಆಟಗಾರರ ಮ್ಯಾಚ್-ಅಪ್‌ಗಳನ್ನು ಪರಿಶೀಲಿಸುವುದು ಸಹಜ. ಪಂದ್ಯ ಈಗಷ್ಟೇ ಮುಗಿದಿರುವುದರಿಂದ ಈ ಬಗ್ಗೆ ನಾವು ಯೋಚಿಸುತ್ತೇವೆ.

ನಮ್ಮ ತಂಡವು ಬಲಿಷ್ಠವಾಗಿ ಪುನರಾಗಮನ ಮಾಡುವುದರಲ್ಲಿ ಹೆಸರುವಾಸಿಯಾಗಿದೆ. ಬ್ಯಾಟಿಂಗ್ ವಿಭಾಗ ಸೇರಿದಂತೆ ಇಡೀ ತಂಡ ಒಟ್ಟಾಗಿ ಕುಳಿತು ನಾವು ಎಲ್ಲೆಲ್ಲಿ ಸುಧಾರಿಸಬೇಕು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ” ಎಂದು ಪ್ಯಾಟ್ ಕಮಿನ್ಸ್ ತಿಳಿಸಿದ್ದಾರೆ.

ಹೇಝಲ್‌ವುಡ್ ಹಾಗೂ ಗ್ರೀನ್ ಸಾಧನೆಗೆ ಮೆಚ್ಚುಗೆ:

ಆಸ್ಟ್ರೇಲಿಯಾ ತಂಡದ ಸೋಲಿನ ನಡುವೆಯೂ ಪ್ಯಾಟ್ ಕಮಿನ್ಸ್ ಇಬ್ಬರು ಆಟಗಾರರ ವೈಯಕ್ತಿಕ ಸಾಧನೆಯನ್ನು ಕೊಂಡಾಡಿದರು. ಕಳೆದ ಎರಡು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ, ಈ ಪಂದ್ಯದಲ್ಲಿ 6 ಪ್ರಮುಖ ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಜೋಶ್ ಹೇಝಲ್‌ವುಡ್ ಅವರನ್ನು ಶ್ಲಾಘಿಸಿದರು.

ಹಾಗೆಯೇ, ಜವಾಬ್ದಾರಿಯುತ ಶತಕ ಸಿಡಿಸಿದ ಕ್ಯಾಮರೂನ್ ಗ್ರೀನ್ ಅವರ ಆಟದ ಶೈಲಿಯನ್ನು ಕೊಂಡಾಡಿದ ಕಮಿನ್ಸ್, “ಗ್ರೀನ್‌ಗೆ ಮತ್ತೊಂದು ತುದಿಯಲ್ಲಿ ಇತರ ಬ್ಯಾಟರ್‌ಗಳು ಸೂಕ್ತ ಸಾಥ್ ನೀಡಬೇಕಿತ್ತು. ಆದರೆ, ನಮ್ಮ ಬ್ಯಾಟರ್‌ಗಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಇದಾಗ್ಯೂ, ಗ್ರೀನ್ ಅವರ ಹೋರಾಟದ ಆಟವೇ ಪಂದ್ಯವನ್ನು 4ನೇ ಇನಿಂಗ್ಸ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು” ಎಂದು ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!

ಒಟ್ಟಾರೆಯಾಗಿ ಹೇಳುವುದಾದರೆ, ಈ ಐತಿಹಾಸಿಕ ಸೋಲು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಆದರೆ, ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್ ಪಡೆ ಕಂಬ್ಯಾಕ್ ಮಾಡಲು ಹೆಸರುವಾಸಿ. ಮೆಕಾಯ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಬ್ಯಾಟಿಂಗ್ ವೈಫಲ್ಯಗಳನ್ನು ಸರಿಪಡಿಸಿಕೊಂಡು ಹೇಗೆ ತಿರುಗೇಟು ನೀಡಲಿದೆ ಮತ್ತು ಬಾಂಗ್ಲಾದೇಶf ತನ್ನ ಐತಿಹಾಸಿಕ ಗೆಲುವಿನ ಲಯವನ್ನು ಹೇಗೆ ಕಾಯ್ದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Source link

‘ನಾನು ಭ್ರಷ್ಟ ಅಲ್ಲ’- ಮಮತಾ ಬ್ಯಾನರ್ಜಿ ಆಪ್ತ ಆಶಿಶ್ ಬ್ಯಾನರ್ಜಿ ಡೆತ್​ನೋಟ್ ಬರೆದಿಟ್ಟು ಸಾವು – Kannada News | Mamata Banjerjee’s close aide and ex TMC MLA Ashish Banerjee found dead inside party office

ರಾಮಪುರಹತ್ ಮೆಡಿಕಲ್ ಕಾಲೇಜಿನಲ್ಲಿ ಆಶಿಶ್ ಬ್ಯಾನರ್ಜಿ ಬೆಂಬಲಿಗರು…Image Credit source: X user @ani

ಕೋಲ್ಕತಾ, ಆಗಸ್ಟ್ 16: ಪಶ್ಚಿಮ ಬಂಗಾಳ ರಾಜ್ಯದ ಮಾಜಿ ಉಪಸಭಾಪತಿ ಮತ್ತು ಹಿರಿಯ ಟಿಎಂಸಿ (TMC) ನಾಯಕ ಆಶಿಶ್ ಬ್ಯಾನರ್ಜಿ (Ashish Banerjee) ಅವರು ಇಂದು ಭಾನುವಾರ ಬೆಳಿಗ್ಗೆ (ಆಗಸ್ಟ್ 16) ಬಿರ್ಭೂಮ್ ಜಿಲ್ಲೆಯ ರಾಂಪುರಹತ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅವರು ಮೃತಪಟ್ಟಿರುವ ಟಿಎಂಸಿ ಕಚೇರಿಯು ಅವರ ಮನೆಯ ಪಕ್ಕದಲ್ಲೇ ಇದೆ.

ನಾನು ಭ್ರಷ್ಟ ಅಲ್ಲ; ಡೆತ್​ನೋಟ್​ನಲ್ಲಿ ಏನಿದೆ?

ಘಟನಾ ಸ್ಥಳದಲ್ಲಿ ಒಂದು ಪತ್ರ ಪತ್ತೆಯಾಗಿದ್ದು, ಅದರಲ್ಲಿ ಅವರು “ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ” ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ತಮ್ಮ ರಾಜಕೀಯ ಜೀವನದಲ್ಲಿ ತಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಪ್ರವೇಶಿಸಿದ್ದೇ ಒಂದು ತಪ್ಪು ಎಂದು ಬೇಸರ ವ್ಯಕ್ತಪಡಿಸಿರುವ ಅವರು, ತಮ್ಮನ್ನು ಅವಮಾನಿಸಲು ಮತ್ತು ತೇಜೋವಧೆ ಮಾಡಲು ಪ್ರಯತ್ನಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಆಶಿಶ್ ಬ್ಯಾನರ್ಜಿ ರಾಜಕೀಯ ಹಿನ್ನೆಲೆ

ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿದ್ದ ಆಶಿಶ್ ಬ್ಯಾನರ್ಜಿ ಅವರು ರಾಂಪುರಹತ್ ಕ್ಷೇತ್ರದಿಂದ ಸತತ ಐದು ಬಾರಿ (2001 ರಿಂದ 2026ರವರೆಗೆ) ಶಾಸಕರಾಗಿ ಆಯ್ಕೆಯಾಗಿದ್ದರು. 25 ವರ್ಷ ಕಾಲ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು, ಮಮತಾ ಬ್ಯಾನರ್ಜಿ ಅವರ ಸರ್ಕಾರದಲ್ಲಿ ಸಚಿವರಾಗಿ ಮತ್ತು ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆಯನ್ನು ಬಹಿರಂಗಪಡಿಸಿದ ಅಜಿತ್ ದೋವಲ್

2026ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ಧ್ರುವ ಸಾಹಾ ವಿರುದ್ಧ ಸೋತಿದ್ದರು. ಸೋಲಿನ ನಂತರ ಅವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಲಿಲ್ಲ. ಜೂನ್ ತಿಂಗಳಲ್ಲಿ ಅವರು ಟಿಎಂಸಿಯ ಬಿರ್ಭೂಮ್ ಜಿಲ್ಲಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿದಿನ ಒಂದು ಕಪ್ ತುಳಸಿ ಟೀ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತಾ? ಇಲ್ಲಿದೆ ತಜ್ಞರ ಸಲಹೆ – Kannada News | Tulsi Tea for Immunity: Can One Cup a Day Help Protect Against Infections?

ಮಳೆಗಾಲ ಅಥವಾ ಹವಾಮಾನ ಬದಲಾವಣೆಯ ಸಮಯದಲ್ಲಿ ನೆಗಡಿ, ಕೆಮ್ಮು, ಗಂಟಲು ನೋವು ಸೇರಿದಂತೆ ಹಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹೀಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಲವರು ಮನೆಮದ್ದು ಮತ್ತು ಗಿಡಮೂಲಿಕೆಗಳ ಮೊರೆ ಹೋಗುತ್ತಾರೆ. ಅವುಗಳಲ್ಲಿ ತುಳಸಿ ಟೀ ಕೂಡ ಜನಪ್ರಿಯವಾಗಿದೆ. ತುಳಸಿಯಲ್ಲಿ ವಿವಿಧ ಸಸ್ಯಜನ್ಯ ಸಂಯುಕ್ತಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ತುಳಸಿ ಟೀ ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಿ ಸೇವಿಸಿದಾಗ ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡಬಹುದು. ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಈ ಸ್ಟೋರಿಯಲ್ಲಿದೆ.

ತುಳಸಿ ಟೀ ಕುಡಿಯುವುದರಿಂದ ಸಿಗುವ ಪ್ರಯೋಜನ?

ಸಾಮಾನ್ಯವಾಗಿ ತುಳಸಿಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಸಸ್ಯಜನ್ಯ ಸಂಯುಕ್ತಗಳಿವೆ. ಇವು ದೇಹದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡಬಹುದು. ಆರೋಗ್ಯಕರ ಆಹಾರದ ಜೊತೆಗೆ ತುಳಸಿಯನ್ನು ಸೇವಿಸುವುದು ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗಬಹುದು. ಕೆಲವರಿಗೆ ತುಳಸಿ, ಶುಂಠಿ ಮತ್ತು ಮೆಣಸಿನಕಾಯಿ ಸೇರಿಸಿದ ಬಿಸಿ ಪಾನೀಯವು ಗಂಟಲಿನ ಅಸ್ವಸ್ಥತೆ ಅಥವಾ ನೆಗಡಿಯ ಸಂದರ್ಭದಲ್ಲಿ ಆರಾಮದ ಅನುಭವ ನೀಡಬಹುದು. ಆದರೆ ವೈರಸ್ ಸೋಂಕನ್ನು ಗುಣಪಡಿಸುತ್ತದೆ ಎಂಬುದಾಗಿ ಇದನ್ನು ಪರಿಗಣಿಸಬಾರದು.

ಒತ್ತಡ ಕಡಿಮೆ ಮಾಡಲು ಸಹಾಯವಾಗುತ್ತದೆಯೇ?

ತುಳಸಿಯನ್ನು ಆಯುರ್ವೇದದಲ್ಲಿ ಬಹುಕಾಲದಿಂದ ಬಳಸಲಾಗುತ್ತಿದೆ. ತುಳಸಿಯಲ್ಲಿರುವ ಕೆಲವು ಸಸ್ಯಜನ್ಯ ಸಂಯುಕ್ತಗಳು ಒತ್ತಡ ಮತ್ತು ಮಾನಸಿಕ ನೆಮ್ಮದಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಹೊಂದಿರಬಹುದು ಎಂಬ ಸಂಶೋಧನೆಗಳಿವೆ. ಆದರೆ ಆತಂಕ ಅಥವಾ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುಳಸಿ ಟೀಯನ್ನೇ ಮದ್ದಾಗಿ ಅವಲಂಬಿಸಬಾರದು.

ಇದನ್ನೂ ಓದಿ: ಬೆಳಗ್ಗೆ ಬಾರ್ಲಿ ನೀರು ಕುಡಿಯುವ ಅಭ್ಯಾಸ ಒಳ್ಳೆಯದೇ? ತಜ್ಞರು ಹೇಳುವುದೇನು?

ಜೀರ್ಣಕ್ರಿಯೆಗೂ ಪ್ರಯೋಜನಕಾರಿ?

ಶುಂಠಿ ಮತ್ತು ತುಳಸಿಯಂತಹ ಪದಾರ್ಥಗಳನ್ನು ಒಳಗೊಂಡ ಬಿಸಿ ಹರ್ಬಲ್ ಟೀ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಜೀರ್ಣಕ್ರಿಯೆಯ ಅಸ್ವಸ್ಥತೆಯಲ್ಲಿ ಆರಾಮ ನೀಡಬಹುದು. ಆದರೆ ಪದೇಪದೇ ಅಜೀರ್ಣ ಅಥವಾ ಹೊಟ್ಟೆ ನೋವು ಕಾಣಿಸಿಕೊಂಡರೆ ಅದರ ಮೂಲ ಕಾರಣವನ್ನು ವೈದ್ಯರಿಂದ ಪರಿಶೀಲಿಸಿಕೊಳ್ಳುವುದು ಮುಖ್ಯ.

ಯಾರು ತುಳಸಿ ಟೀ ಸೇವಿಸುವಾಗ ಎಚ್ಚರಿಕೆ ವಹಿಸಬೇಕು?

ಡಯಾಬಿಟಿಸ್‌ಗೆ ಔಷಧಿ ಸೇವಿಸುವವರು ತುಳಸಿಯಂತಹ ಗಿಡಮೂಲಿಕೆಗಳನ್ನು ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಅದೇ ರೀತಿ ಗರ್ಭಿಣಿಯರು, ಸ್ತನ್ಯಪಾನ ಮಾಡಿಸುವ ತಾಯಂದಿರು, ರಕ್ತ ತೆಳುವಾಗಿಸುವ ಔಷಧಿ ಸೇವಿಸುವವರು ಅಥವಾ ಯಾವುದೇ ದೀರ್ಘಕಾಲದ ಕಾಯಿಲೆ ಇರುವವರು ನಿಯಮಿತವಾಗಿ ತುಳಸಿ ಟೀ ಸೇವಿಸುವ ಮೊದಲು ವೈದ್ಯರೊಂದಿಗೆ ಚರ್ಚಿಸುವುದು ಸೂಕ್ತ.

ತುಳಸಿ ಟೀ ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಬಹುದು. ಆದರೆ “ಒಂದು ಕಪ್ ಕುಡಿದರೆ ಯಾವುದೇ ವೈರಸ್ ಬರುವುದಿಲ್ಲ” ಅಥವಾ “ಎಲ್ಲಾ ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ” ಎಂಬ ಹೇಳಿಕೆಗಳಿಗೆ ವೈಜ್ಞಾನಿಕ ಆಧಾರವಿಲ್ಲ. ಉತ್ತಮ ರೋಗನಿರೋಧಕ ಶಕ್ತಿಗಾಗಿ ಸಮತೋಲಿತ ಆಹಾರ, ಸಾಕಷ್ಟು ನಿದ್ರೆ, ವ್ಯಾಯಾಮ, ಸ್ವಚ್ಛತೆ ಮತ್ತು ಅಗತ್ಯವಿದ್ದಾಗ ಲಸಿಕೆ ಹಾಗೂ ವೈದ್ಯಕೀಯ ಆರೈಕೆ ಕೂಡ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಚಿತ್ರದ 4 ಸಾವಿರ ಕೋಟಿ ರೂ. ಬಜೆಟ್ ರಹಸ್ಯ ಬಿಚ್ಚಿಟ್ಟ ಯಶ್: ಇದು ಹಾಲಿವುಡ್ ಲೆಕ್ಕಾಚಾರ – Kannada News | Yash clarifies Rs 4000 Crore Ramayana Movie budget Hollywood Math Aap Ki Adalat

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana) ಚಿತ್ರವು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಈ ಚಿತ್ರಕ್ಕೆ ತಗುಲಲಿರುವ 4 ಸಾವಿರ ಕೋಟಿ ರೂಪಾಯಿ ಬಜೆಟ್ (Ramayana Movie Budget) ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ಕೆಲವರಿಗೆ ಈ ಸಂಖ್ಯೆಯ ಮೇಲೆ ಅನುಮಾನ ಇದೆ. ಇದೀಗ ಈ ಬೃಹತ್ ಮೊತ್ತದ ಹಿಂದಿರುವ ಸತ್ಯಾಸತ್ಯತೆ ಮತ್ತು ಹಾಲಿವುಡ್ ಲೆಕ್ಕಾಚಾರವನ್ನು ನಟ ಹಾಗೂ ಚಿತ್ರದ ಸಹ-ನಿರ್ಮಾಪಕ ಯಶ್ (Yash) ಸ್ಪಷ್ಟಪಡಿಸಿದ್ದಾರೆ.

‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ಯಶ್, ಈ 4 ಸಾವಿರ ಕೋಟಿ ಬಜೆಟ್ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿದೆ ಎಂದು ಸ್ಪಷ್ಟಪಡಿಸಿದರು. ‘4 ಸಾವಿರ ಕೋಟಿ ರೂಪಾಯಿ ಎಂಬುದು ರಾಮಾಯಣ ಚಿತ್ರದ ಮೊದಲ ಭಾಗದ ನಿರ್ಮಾಣ ವೆಚ್ಚ ಮಾತ್ರವಲ್ಲ. ಇದು ಈ ಸಿನಿಮಾದ ಎರಡು ಭಾಗಗಳ ಸಂಪೂರ್ಣ ನಿರ್ಮಾಣ, ಜಾಗತಿಕ ಮಟ್ಟದ ಬಿಡುಗಡೆ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಒಳಗೊಂಡ ಒಟ್ಟು ಬಜೆಟ್ ಆಗಿದೆ. ಇದು ಹಾಲಿವುಡ್ ಮಾದರಿಯ ಲೆಕ್ಕಾಚಾರ’ ಎಂದು ಯಶ್ ಹೇಳಿದ್ದಾರೆ.

ಹಾಲಿವುಡ್ ತಂತ್ರಜ್ಞಾನ ಹಾಗೂ ಮಾರ್ಕೆಟಿಂಗ್

‘ಜಾಗತಿಕ ಮಟ್ಟದ ಪ್ರೇಕ್ಷಕರನ್ನು ತಲುಪಲು ಹಾಲಿವುಡ್ ಮಾದರಿಯಲ್ಲೇ ಪ್ರಚಾರ ಮತ್ತು ವಿತರಣೆಗೆ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಲಾಗುತ್ತಿದೆ. ಹಾಗಾಗಿ, ಬರುವ ಆದಾಯವೂ ಜಾಗತಿಕ ಮಟ್ಟದಲ್ಲೇ ಇರಲಿದೆ’ ಎಂದು ಯಶ್ ಅವರು ವಿವರಿಸಿದ್ದಾರೆ. ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಕೂಡ ‘ರಾಮಾಯಣ’ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

‘ಸಿನಿಮಾ ಎನ್ನುವುದು ನಮ್ಮ ಸಾಫ್ಟ್ ಪವರ್’

ಭಾರತೀಯ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ಇಂತಹ ಬೃಹತ್ ಹೂಡಿಕೆ ಅತ್ಯಗತ್ಯ ಎಂದು ಯಶ್ ಪ್ರತಿಪಾದಿಸಿದ್ದಾರೆ. ‘ಸಿನಿಮಾ ಎನ್ನುವುದು ದೇಶದ ಸಾಫ್ಟ್ ಪವರ್. ರಾಮಾಯಣ ಹಾಗೂ ನನ್ನ ಮುಂಬರುವ ಟಾಕ್ಸಿಕ್ ಸಿನಿಮಾಗಳು ಭಾರತೀಯ ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿ ನೆಲೆಗೊಳಿಸುವ ಸಣ್ಣ ಪ್ರಯತ್ನಗಳಾಗಿವೆ’ ಎಂದು ಯಶ್ ಹೆಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ: ‘ಯಶ್ ಮಿಸ್ಟರ್ ಶೋಆಫ್’ ಎಂದಿದ್ದ ರಶ್ಮಿಕಾಗೆ ಈಗ ಪ್ರತಿಕ್ರಿಯೆ ನೀಡಿದ ರಾಕಿ ಭಾಯ್

‘ರಾಮಾಯಣ’ ಸಿನಿಮಾದ ಪಾತ್ರವರ್ಗ:

ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲು ಸಜ್ಜಾಗಿರುವ ‘ರಾಮಾಯಣ’ ಚಿತ್ರದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಅವರು ಸೀತೆಯಾಗಿ ಅಭಿನಯಿಸುತ್ತಿದ್ದಾರೆ. ಇವರ ಜೊತೆಗೆ ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್ ಹಾಗೂ ರವಿ ದುಬೆ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಶಾಸಕ ಎನ್​.ವೈ. ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ – Kannada News | Molakalmuru MLA N.Y. Gopalakrishnas Controversial Call: Merge Constituency with Andhra Pradesh or Challakere

ಚಿತ್ರದುರ್ಗ, ಆಗಸ್ಟ್​​ 16: ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಲಿ ಎಂದು ಕಾಂಗ್ರೆಸ್​​ ಶಾಸಕ ಎನ್.ವೈ. ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಂಬೇಡ್ಕರ್ ಭವನ ಸ್ಥಳ ಪರಿಶೀಲನೆ ವೇಳೆ ಅವರು ನೀಡಿದ್ದ ಹೇಳಿಕೆ ವೈರಲ್ ಆಗಿದ್ದು, ಆಂಧ್ರಪ್ರದೇಶಕ್ಕೆ ಸೇರಿಸಲಾಗದಿದ್ದರೆ ಚಳ್ಳಕೆರೆ ಕ್ಷೇತ್ರಕ್ಕಾದರೂ ಸೇರಿಸಲಿ ಎಂದವರು ಆಗ್ರಹಿಸಿದ್ದಾರೆ. ಮೊಳಕಾಲ್ಮೂರು ಯಾವುದೋ ಒಂದು ಮೂಲೆಯಲ್ಲಿದ್ದು, ದೊಡ್ಡ ದೊಡ್ಡವರಿಗೆ ಕ್ಷೇತ್ರ ಇರುವುದೇ ಕಾಣುವುದಿಲ್ಲ. ಇಲ್ಲಿನ ಶಾಸಕರಿಗೆ ಗೌರವವೇ ಇರೋದಿಲ್ಲ. ಮೊಳಕಾಲ್ಮೂರು ಹಣೆಬರಹ ಎಲ್ಲಿತ್ತೋ ಅಲ್ಲೇ ಇದೆ ಎಂದವರು ಬೇಸರವನ್ನೂ ಹೊರಹಾಕಿದ್ದಾರೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡೋಣ. ನೂತನ ಸಚಿವರಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿರುವೆ ಎಂದವರು ಹೇಳಿರುವ ವಿಡಿಯೋ ವೈರಲ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತೆರಿಗೆದಾರರಿಗೆ FAST-DS ಸ್ಕೀಮ್; ವಿದೇಶಿ ಆಸ್ತಿಗಳನ್ನು ಸ್ವಯಂ ಆಗಿ ಘೋಷಿಸಲು ಹೊಸ ಯೋಜನೆ – Kannada News | Government launches FAST DS scheme, a one time window for small tax payers to disclose foreign assets

ನವದೆಹಲಿ, ಆಗಸ್ಟ್ 16: ಬಹಿರಂಗಪಡಿಸದೆ ಇದ್ದ ವಿದೇಶೀ ಆಸ್ತಿಗಳನ್ನು ತೆರಿಗೆ ಪಾವತಿಸುವ ಮೂಲಕ ಸಕ್ರಮ ಮಾಡುವ ಒಂದು ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಕೇಂದ್ರ ಆದಾಯ ತೆರಿಗೆ ಇಲಾಖೆ (CBDT) ಸಣ್ಣ ತೆರಿಗೆದಾರರಿಗಾಗಿ FAST-DS (Foreign Assets of Small Taxpayers – Disclosure Scheme) ನಿಯಮಗಳನ್ನು ರೂಪಿಸಿದೆ. ವಿದೇಶಿ ಆಸ್ತಿ ಘೋಷಣೆಗೆ ಏಕಕಾಲಿಕ ಅವಕಾಶ (One-Time Window) ನೀಡಿದೆ. ಇದರೊಂದಿಗೆ, ಭಾರತೀಯರ ವಿದೇಶೀ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಕೆಲಸಕ್ಕೆ ಕೈಹಾಕಿದೆ. ಈ FAST-DS ಸ್ಕೀಮ್ ಇಂದೇ (ಆಗಸ್ಟ್ 16) ಜಾರಿಗೆ ಬಂಇದಿದ್ದು, ವಿದೇಶೀ ಆಸ್ತಿಗಳ ಘೋಷಣೆಗೆ ಅರ್ಜಿ ಸಲ್ಲಿಸಲು ಈ ವರ್ಷದ ಕೊನೆಯವರೆಗೆ (ಡಿ. 31) ಕಾಲಾವಕಾಶ ಕೊಡಲಾಗಿದೆ.

ವಿದ್ಯಾರ್ಥಿಗಳು, ಟೆಕ್ ನೌಕರರು ಮತ್ತು ಭಾರತಕ್ಕೆ ಮರಳಿದ ಎನ್‌ಆರ್‌ಐ (NRI) ಗಳಂತಹ ಸಣ್ಣ ತೆರಿಗೆದಾರರು ತಪ್ಪಿನಿಂದ ಅಥವಾ ಮಾಹಿತಿಯ ಕೊರತೆಯಿಂದ ವಿದೇಶಿ ಬ್ಯಾಂಕ್ ಖಾತೆ, ಶೇರು ಅಥವಾ ಆಸ್ತಿಗಳನ್ನು ತೆರಿಗೆ ಸಲ್ಲಿಕೆಯಲ್ಲಿ ತೋರಿಸದಿದ್ದರೆ, ದಂಡ ಅಥವಾ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಈ ಯೋಜನೆಯಡಿ ಸ್ವಯಂಪ್ರೇರಿತವಾಗಿ ಘೋಷಿಸಬಹುದು.

ಇದನ್ನೂ ಓದಿ: ಭಾರತದ 5ನೇ ತಲೆಮಾರಿನ ಫೈಟರ್ ಜೆಟ್​ಗೆ ದೇಶೀಯ ಇಂಜಿನ್ ಅಭಿವೃದ್ಧಿ: ರಿಲಯನ್ಸ್, ರೋಲ್ಸ್ ರಾಯ್ಸ್ ಪಾಲುದಾರಿಕೆ

ನಿಯಮಗಳು ಮತ್ತು ಪಾವತಿ ವಿವರ

ಘೋಷಿಸದ ಆಸ್ತಿ/ಆದಾಯ (₹1 ಕೋಟಿಯವರೆಗೆ): ತೆರಿಗೆದಾರರು ಆಸ್ತಿಯ ಮೌಲ್ಯದ ಮೇಲೆ 30% ತೆರಿಗೆ ಮತ್ತು 30% ಹೆಚ್ಚುವರಿ ಶುಲ್ಕ ಸೇರಿದಂತೆ ಒಟ್ಟು 60% ತೆರಿಗೆ ಪಾವತಿಸಬೇಕಾಗುತ್ತದೆ.

ವರದಿ ಮಾಡದ ಕಾನೂನುಬದ್ಧ ಆಸ್ತಿ (₹5 ಕೋಟಿಯವರೆಗೆ): ಆಸ್ತಿಯು ಕಾನೂನುಬದ್ಧವಾಗಿದ್ದು, ಐಟಿಆರ್ (Schedule FA) ನಲ್ಲಿ ನಮೂದಿಸಲು ಮರೆತಿದ್ದರೆ, ₹1 ಲಕ್ಷದ ನಿಗದಿತ ಶುಲ್ಕ (Flat Fee) ಪಾವತಿಸಿ ಕಾಯ್ದೆಗೊಳಿಸಬಹುದು.

ಈ ಯೋಜನೆಯಡಿ ಸರಿಯಾಗಿ ಮಾಹಿತಿ ನೀಡಿದ ತೆರಿಗೆದಾರರಿಗೆ ಕಪ್ಪು ಹಣ ಕಾಯ್ದೆ (Black Money Act, 2015) ಅಡಿಯಲ್ಲಿ ಕಠಿಣ ದಂಡ (90%) ಹಾಗೂ ಶಿಕ್ಷೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ.

ಈ ಯೋಜನೆಯು ವಿದೇಶಿ ಆಸ್ತಿ ಮತ್ತು ಆದಾಯವನ್ನು ಬಹಿರಂಗಪಡಿಸಲು ತೆರಿಗೆದಾರರಿಗೆ ನೀಡಲಾದ ಒಂದು ಅವಕಾಶವಾಗಿದೆ. ಆದರೆ, ಈ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ.

₹1 ಕೋಟಿಯ ಆಸ್ತಿ ಬಹಿರಂಗಪಡಿಸಲು ₹60 ಲಕ್ಷ ಏಕೆ?

₹1 ಕೋಟಿ ರೂ ಆಸ್ತಿ ಘೋಷಣೆಗೆ ₹60 ಲಕ್ಷ ಪಾವತಿಸಬೇಕು ಎಂದರೆ ಅದು 60% ತೆರಿಗೆ ಎಂದು ತಪ್ಪಾಗಿ ಭಾವಿಸಬಹುದು. ವಾಸ್ತವದಲ್ಲಿ ಅದರ ಲೆಕ್ಕಾಚಾರ ಹೀಗೆ ಇರುತ್ತದೆ:

30% ತೆರಿಗೆ: ಮೂಲ ಆದಾಯ ಅಥವಾ ಆಸ್ತಿಯ ಮೇಲೆ 30% ತೆರಿಗೆ ಬೀಳುತ್ತದೆ.

30% ಹೆಚ್ಚುವರಿ ಶುಲ್ಕ: ಅಷ್ಟೇ ಮೊತ್ತದ (ಅಂದರೆ ತೆರಿಗೆಯ 100% ರಷ್ಟು) ದಂಡ ಅಥವಾ ಹೆಚ್ಚುವರಿ ಮೊತ್ತವನ್ನು ವಿಧಿಸಲಾಗುತ್ತದೆ.

ಒಟ್ಟು ಸೇರಿದರೆ, ₹1 ಕೋಟಿ ಮೌಲ್ಯದ ಆಸ್ತಿ ಘೋಷಣೆಗೆ ₹60 ಲಕ್ಷ ಪಾವತಿಸಬೇಕಾಗುತ್ತದೆ. ಇದು ‘ಅಘೋಷಿತ’ ವಿದೇಶಿ ಆಸ್ತಿಗಳಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ: ನಿಮ್ಮ ಬಳಿ ಈ ದಾಖಲೆಗಳಿದ್ರೆ ಮೃತ ವ್ಯಕ್ತಿಯ ಬ್ಯಾಂಕ್ ಖಾತೆಗಳ ವಿವರ ಪಡೆಯೋದು ಸುಲಭ

ಎರಡು ವಿಧದ ವರ್ಗೀಕರಣಗಳಿವೆ, ಗಮನಿಸಿ

ಎಲ್ಲಾ ಪ್ರಕರಣಗಳಿಗೂ 60% ದಂಡ ಬೀಳುವುದಿಲ್ಲ. ಯೋಜನೆಯಲ್ಲಿ ಎರಡು ಪ್ರಮುಖ ವಿಭಾಗಗಳಿವೆ:

ಮೊದಲನೇ ವಿಭಾಗ (Category 1): ಅಘೋಷಿತ ವಿದೇಶಿ ಆಸ್ತಿ ಅಥವಾ ಆದಾಯ. ಅಂದರೆ, ಈ ಆಸ್ತಿ ಹೇಗೆ ಬಂತು ಎಂಬುದಕ್ಕೆ ಸಮಂಜಸವಾದ ವಿವರಣೆ ಇಲ್ಲದಿದ್ದಲ್ಲಿ. ಇಲ್ಲಿ ಗರಿಷ್ಠ ಮಿತಿ ₹1 ಕೋಟಿ. ಇದಕ್ಕೆ ಮೇಲೆ ಹೇಳಿದಂತೆ 60% ವೆಚ್ಚವಾಗಬಹುದು.

ಎರಡನೇ ವಿಭಾಗ (Category 2): ಒಂದು ವೇಳೆ ನಿಮ್ಮ ವಿದೇಶಿ ಆಸ್ತಿ ಈಗಾಗಲೇ ತೆರಿಗೆ ಪಾವತಿಸಿದ ಹಣದಿಂದ ಬಂದಿರಬಹುದು ಅಥವಾ ನೀವು ಅನಿವಾಸಿ ಭಾರತೀಯರಾಗಿದ್ದಾಗ (NRI) ಗಳಿಸಿರಬಹುದು. ಆದರೆ ಅದನ್ನು ನಿಮ್ಮ ಐಟಿಆರ್ (Income Tax Return) ನಲ್ಲಿ ತೋರಿಸಲು ಮರೆತಿದ್ದರೆ, ಅದಕ್ಕೆ ಅಂತಹ ಭಾರಿ ತೆರಿಗೆ ಇರುವುದಿಲ್ಲ. ಈ ವರ್ಗಕ್ಕೆ ₹5 ಕೋಟಿಯವರೆಗಿನ ಆಸ್ತಿಯನ್ನು ತೋರಿಸಬಹುದು. ಇದಕ್ಕೆ ಕೇವಲ ₹1 ಲಕ್ಷದ ನಿಗದಿತ ಶುಲ್ಕ ಪಾವತಿಸಿದರೆ ಸಾಕು.

ಯಾರಿಗೆ ಈ ಯೋಜನೆ ಸೂಕ್ತ?

  • ಹಿಂದೆ ವಿದೇಶದಲ್ಲಿ ಕೆಲಸ ಮಾಡಿ ಭಾರತಕ್ಕೆ ಮರಳಿದವರು.
  • ಮರೆತುಹೋದ ಸಣ್ಣ ಪ್ರಮಾಣದ ವಿದೇಶಿ ಬ್ಯಾಂಕ್ ಖಾತೆಗಳು, ESOP ಅಥವಾ RSU (ಷೇರುಗಳು) ಹೊಂದಿರುವವರು.
  • ಅಕಸ್ಮಾತಾಗಿ ಮಾಹಿತಿ ನೀಡಲು ಮರೆತವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ! – Kannada News | Jammanna Swamiji Accused Of Indecent Behaviour With Woman At Chitradurga

ಚಿತ್ರದುರ್ಗ, ಆಗಸ್ಟ್ 16: ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಮಠದ ಜಮ್ಮಣ್ಣ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಪ್ರಮುಖ ಆರೋಪದ ಮೇಲೆ ಸ್ವಾಮೀಜಿಗೆ ಸ್ಥಳೀಯರು ಸರಿಯಾಗಿ ಥಳಿಸಿದ್ದಾರೆ. ಬಳ್ಳಾರಿ ಮೂಲದ ಮಹಿಳೆಯ ಸಂಬಂಧಿಕರು ಈ ಹಲ್ಲೆಯನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ. ಸ್ವಾಮೀಜಿ ವಾಮಾಚಾರ ಮತ್ತು ಅನಾರೋಗ್ಯ ನಿವಾರಣೆ ಮಾಡುವ ನೆಪದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ದೂರುಗಳೂ ಈ ಹಿಂದೆಯೇ ಇದ್ದವು. ಈ ಆರೋಪಗಳು ಸಾಬೀತಾಗುವ ಮೊದಲೇ, ಮಹಿಳೆಯ ಜೊತೆ ಅನುಚಿತ ವರ್ತನೆ ತೋರಿದ್ದಾರೆ ಎಂಬ ಘಟನೆ ನಡೆದು, ಅದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳೆಯ ಸಂಬಂಧಿಕರು ಜಮ್ಮಣ್ಣ ಸ್ವಾಮೀಜಿಯವರನ್ನು ಭೇಟಿ ಮಾಡಲು ಹೋಗಿದ್ದಾಗ, ಅವರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿದ ಕೂಡಲೇ ಆಕೆಯ ಸಂಬಂಧಿಕರು ಸ್ವಾಮೀಜಿ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ಘಟನೆಗಳು ಸಮಾಜದಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತವೆ. ಸಮಾಜದ ಭಾವನೆಗಳ ಜೊತೆ ಆಟವಾಡುವವರ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದು ನ್ಯಾಯ ಒದಗಿಸಲು ಮುಂದಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎ ಡೇಟ್’ ಸಿನಿಮಾದ ‘ಬ್ಯಾಡ್ ಗೈ ಆ್ಯಂಥಮ್’ ಹಾಡು ಹೇಗಿದೆ ನೋಡಿ.. – Kannada News | Kannada Movie A Date Bad Guy Anthem song released PVR Inox to distribute the Film

ಹೊಸಬರ ಸಿನಿಮಾದಲ್ಲಿ ಹೊಸತನ ಇದ್ದೇ ಇರುತ್ತದೆ. ಆ ರೀತಿಯ ಮುನ್ಸೂಚನೆ ನೀಡುತ್ತಲೇ ಬರುತ್ತಿದೆ ‘ಎ ಡೇಟ್’ (A Date) ಸಿನಿಮಾ. ಈ ಸಿನಿಮಾದಲ್ಲಿ ಹೊಸ ತಲೆಮಾರಿನ ಯುವಕ-ಯುವತಿಯ ಕಹಾನಿ ಇದೆ. ಅದರ ಝಲಕ್ ತೋರಿಸಲು ಈ ಸಿನಿಮಾದಿಂದ ‘ಬ್ಯಾಡ್ ಗೈ ಆ್ಯಂಥಮ್’ (Bad Guy Anthem) ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಕಾಲದಲ್ಲಿ ಡೇಟಿಂಗ್ ಎಂಬುದು ಕಾಮನ್. ಅಂಥದ್ದೇ ಒಂದು ಕಥೆಯನ್ನು ಇಟ್ಟುಕೊಂಡು ‘ಎ ಡೇಟ್’ ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ಸುಜನಿತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಮಹಾನಗರಿ ಬೆಂಗಳೂರಿನಲ್ಲಿ ಒಂದು ದಿನದ ಅವಧಿಯಲ್ಲಿ ನಡೆಯುವ, ಎರಡು ಪ್ರಮುಖ ಪಾತ್ರಗಳ ಸುತ್ತ ಸಾಗುವ ಕಥೆ ‘ಎ ಡೇಟ್’ ಸಿನಿಮಾದಲ್ಲಿದೆ. ವಿಮಲ್ ರಾಜ್ ಎನ್. ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಮತ್ತು ನಂತರದ ತಾಂತ್ರಿಕ ಕಾರ್ಯಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಈಗ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.

ಚಿತ್ರದ ರಿಲೀಸ್ ಹತ್ತಿರ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರಚಾರದ ಭಾಗವಾಗಿ ‘ಬ್ಯಾಡ್ ಗೈ ಆಂಥಮ್’ ಹಾಡನ್ನು ‘ಎ ಡೇಟ್’ ಚಿತ್ರತಂಡ ಬಿಡುಗಡೆ ಮಾಡಿದೆ. ಈಗಿನ ಯುವ ಸಮುದಾಯಕ್ಕೆ ನೇರವಾಗಿ ತಲುಪಿಕೊಳ್ಳುವ ರ‍್ಯಾಪ್ ಶೈಲಿಯಲ್ಲಿರುವ ಈ ಹಾಡಿಗೆ ಸುಜನಿತ್ ಶೆಟ್ಟಿ ಹಾಗೂ ವಿಮಲ್ ರಾಜ್ ಎನ್. ಅವರು ಸಾಹಿತ್ಯ ರಚಿಸಿದ್ದಾರೆ. ಮೋಕ್ಷ ಬೀಟ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಬ್ಯಾಡ್ ಗೈ ಆ್ಯಂಥಮ್’ ಹಾಡು:

ಈ ಹಾಡಿನ ಮೂಲಕ ‘ಎ ಡೇಟ್’ ಸಿನಿಮಾದತ್ತ ಪ್ರೇಕ್ಷಕರು ಕುತೂಹಲದ ದೃಷ್ಟಿ ಹಾಯಿಸುತ್ತಾರೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಮೂಲತಃ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ವಿಮಲ್ ರಾಜ್ ಎನ್. ಅವರು ಯೂಟ್ಯೂಬ್​ನಲ್ಲಿ ಹಲವು ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ತಮ್ಮದೇ ಆದ ಪ್ರೇಕ್ಷಕವರ್ಗವನ್ನು ಹೊಂದಿದ್ದಾರೆ. ಕಿರುಚಿತ್ರಗಳ ಮೂಲಕ ಕಥೆ ಹೇಳುವ ತಮ್ಮದೇ ಶೈಲಿಯನ್ನು ರೂಪಿಸಿಕೊಂಡಿರುವ ಅವರು ಈಗ ‘ಎ ಡೇಟ್’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ: ‘ಯಶ್ ಮಿಸ್ಟರ್ ಶೋಆಫ್’ ಎಂದಿದ್ದ ರಶ್ಮಿಕಾಗೆ ಈಗ ಪ್ರತಿಕ್ರಿಯೆ ನೀಡಿದ ರಾಕಿ ಭಾಯ್

ಚಿತ್ರದ ಕಥೆಯ ಬಗ್ಗೆ ತಂಡ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗುವ ಉತ್ತರ ಭಾರತದ ಯುವತಿ ಮತ್ತು ದಕ್ಷಿಣ ಭಾರತದ ಯುವಕನ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಭಯ, ಕುತೂಹಲ, ಹಿಂಜರಿಕೆ, ನಂಬಿಕೆ ಮತ್ತು ಭಾವನಾತ್ಮಕ ಸಂಘರ್ಷಗಳ ನಡುವೆ ಅವರ ಒಂದು ದಿನದ ಪಯಣ ಹೇಗೆ ಹೊಸ ತಿರುವು ಪಡೆದುಕೊಳ್ಳುತ್ತದೆ ಎಂಬುದು ಈ ಸಿನಿಮಾದ ಕಥಾಹಂದರ. ಇಂದಿನ ಸಿಟಿ ಲೈಫ್, ಬದಲಾಗುತ್ತಿರುವ ಸಂಬಂಧಗಳು ಮತ್ತು ವಿಭಿನ್ನ ಭಾಷೆ-ಸಂಸ್ಕೃತಿಗಳಿಗೆ ಸೇರಿದ ಇಬ್ಬರ ನಡುವಿನ ಮಾನವೀಯ ಸಂಪರ್ಕವನ್ನು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಈ ಚಿತ್ರ ಕಟ್ಟಿಕೊಡಲಿದೆ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs SL: 2ನೇ ದಿನದ ಮೊದಲ ಸೆಷನ್ ಸಂಪೂರ್ಣ ಮಳೆಗೆ ಆಹುತಿ – Kannada News | IND vs SL: Rain washes out Day 2 first session

ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆರಾಯ ಭಾರಿ ಅಡ್ಡಿಪಡಿಸಿದ್ದಾನೆ. ಇಂದು (ಆಗಸ್ಟ್ 16, ಭಾನುವಾರ) ಬೆಳಿಗ್ಗೆಯಿಂದಲೇ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ, ಪಂದ್ಯದ ಎರಡನೇ ದಿನದ ಮೊದಲ ಸೆಷನ್ ಆಟವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಶನಿವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತ್ತು. ಆದರೆ, ಎರಡನೇ ದಿನದಂದು ಭಾರತ ತಂಡ ಬೃಹತ್ ಮೊತ್ತ ಪೇರಿಸುವ ಯೋಜನೆಗೆ ಮಳೆ ತಣ್ಣೀರು ಎರಚಿದೆ.

ಗಾಲೆಯಲ್ಲಿ ಸದ್ಯ ಪಿಚ್ ಮತ್ತು ಇನ್‌ಫೀಲ್ಡ್ ಅನ್ನು ಸಂಪೂರ್ಣವಾಗಿ ಕವರ್‌ಗಳಿಂದ ಮುಚ್ಚಲಾಗಿದ್ದು, ಅಂಪೈರ್‌ಗಳು ಮೈದಾನದ ಪರಿಶೀಲನೆಗಾಗಿ ಕಾಯುತ್ತಿದ್ದಾರೆ. ಇನ್ನು ಪಂದ್ಯ ಶುರುವಾದರೂ ಎರಡನೇ ಸೆಷನ್​ನಿಂದ ಆರಂಭವಾಗಲಿದೆ.

ಮೊದಲ ದಿನವೂ ಕಾಡಿದ್ದ ವರುಣ:

ಪಂದ್ಯದ ಮೊದಲ ದಿನದ ಆಟದಲ್ಲೂ ಮಳೆ ತನ್ನ ಪ್ರಭಾವ ಬೀರಿತು. ಲಂಚ್ ವಿರಾಮದ ವೇಳೆ ಹಾಗೂ ಟೀ ವಿರಾಮದ ಬಳಿಕ ಸುರಿದ ಮಳೆಯಿಂದಾಗಿ ಮೊದಲ ದಿನ ಕೇವಲ 73 ಓವರ್‌ಗಳ ಆಟ ಮಾತ್ರ ಸಾಧ್ಯವಾಗಿತ್ತು. ಆದರೂ ಭಾರತೀಯ ಬ್ಯಾಟರ್‌ಗಳು ಲಂಕಾ ಬೌಲರ್‌ಗಳನ್ನು ದಂಡಿಸುವಲ್ಲಿ ಯಶಸ್ವಿಯಾಗಿದ್ದರು.

ಪಡಿಕ್ಕಲ್ ಭರ್ಜರಿ ಶತಕದ ವೈಭವ:

ಮೊದಲ ದಿನದಾಟದ ಪ್ರಮುಖ ಆಕರ್ಷಣೆಯಾಗಿದ್ದು ಕನ್ನಡಿಗ ದೇವದತ್ ಪಡಿಕ್ಕಲ್ ಅವರ ಆಕರ್ಷಕ ಶತಕ. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಪಡಿಕ್ಕಲ್ 131 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಅವರಿಗೆ ಉತ್ತಮ ಸಾಥ್ ನೀಡುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 27 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (32) ಅರ್ಧಶತಕ ಗಳಿಸಿ ಔಟಾಗಿದ್ದರೆ, ಶುಭ್‌ಮನ್ ಗಿಲ್ 16 ರನ್ ಕೊಡುಗೆ ನೀಡಿದ್ದಾರೆ. ಇನ್ನು ಕೆಎಲ್ ರಾಹುಲ್ 77 ರನ್​ ಗಳಿಸಿ ರಿಟೈರ್ಡ್​ ಹರ್ಟ್ ಆಗಿದ್ದು, ಎರಡನೇ ದಿನದಾಟದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!

ಶ್ರೀಲಂಕಾ ಪ್ಲೇಯಿಂಗ್ XI: ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.

Source link

Exit mobile version