ಶ್ರೀರಾಮನ ಕುರಿತು ವ್ಯಂಗ್ಯ ಆರೋಪ, ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಜ್ – Kannada News | Prakash Raj reaction on allegation on him of hurting Hindu sentiments
ಇತ್ತೀಚೆಗಷ್ಟೆ ನಟ ಪ್ರಕಾಶ್ ರಾಜ್ (Prakash Raj) ಅವರು ರಾಮಾಯಣದ ಬಗ್ಗೆ ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋನಲ್ಲಿ ನಟ ಪ್ರಕಾಶ್ ರಾಜ್ ಅವರು ರಾಮನಿಗೆ, ರಾಮಾಯಣಕ್ಕೆ ಅವಮಾನ ಆಗುವಂತೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ ಎಂದು ಹಲವರು ಆರೋಪಿಸಿದ್ದರು. ಪ್ರಕಾಶ್ ರಾಜ್ ವಿರುದ್ಧ ಕ್ರಮಕ್ಕೆ ಸಹ ಒತ್ತಾಯಿಸಲಾಗಿತ್ತು. ಇದೀಗ ನಟ ಪ್ರಕಾಶ್ ರಾಜ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಪ್ರಕಾಶ್ ರಾಜ್ ಉತ್ತರ ನೀಡಿದ್ದಾರೆ. ‘ಒಂದು ಸಾಹಿತ್ಯೋತ್ಸವದಲ್ಲಿ ‘ಕಲೆ ಮತ್ತು…