ಮೆಷಿನ್ಗಳು ಮನುಷ್ಯನ ಮಟ್ಟದ ಬುದ್ಧಿವಂತಿಕೆ ಹೊಂದಲು ಇನ್ನೆಷ್ಟು ವರ್ಷ ಬೇಕು? ಎಜಿಐ ಪಿತಾಮಹ ಬೆನ್ ಗರ್ಟ್ಜೆಲ್ ಹೇಳೋದಿದು – Kannada News | AI researcher Ben Goertzel predicts years for machine to have Human level intelligence
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್Image Credit source: Shutterstock ನವದೆಹಲಿ, ಏಪ್ರಿಲ್ 19: ಎಲ್ಲೆಡೆ ಎಐನದ್ದೇ ಸುದ್ದಿ. ಎಲ್ಲೇ ಕೆಲಸ ಹೋದರೂ ಅದು ಎಐ ಎಫೆಕ್ಟ್ ಎನ್ನಲಾಗುತ್ತಿದೆ. ಯಂತ್ರದ ಬುದ್ಧಿವಂತಿಕೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಸಂಚಲನ ಸೃಷ್ಟಿಸುತ್ತೆ ಎನ್ನಲಾಗುತ್ತಿದೆ. ಅದರಲ್ಲೂ ಎಜಿಐ (AGI- ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್) ಆಗಮನವಾಗಿಬಿಟ್ಟರೆ ಮನುಷ್ಯರ ಕೆಲಸಗಳನ್ನೆಲ್ಲಾ ಯಂತ್ರಗಳು, ರೋಬೋಗಳು, ಇಂಟೆಲಿಜೆಂಟ್ ಸಾಫ್ಟ್ವೇರ್ಗಳೇ ಮಾಡಿ ಮುಗಿಸುತ್ತವೆ ಎಂದು ಪರಿಣಿತರುಗಳೇ ಹೇಳುತ್ತಿದ್ದಾರೆ. ಆದರೆ, ಮನುಷ್ಯರ ಬುದ್ಧಿಮತ್ತೆಯ ಮಟ್ಟವನ್ನು ಎಐಗೆ ಮುಟ್ಟಲು ಸಾಧ್ಯವಾಗಿಲ್ಲ. ಜನರೇಟಿವ್ ಎಐ ಅಥವಾ ಎಜಿಐನ…