ಬಾಗಲಕೋಟೆ, ಏಪ್ರಿಲ್ 18: ಬಾಡಿಗೆ ವಿಚಾರದಲ್ಲಿ ನಡೆದ ಗಲಾಟೆ ಹಿನ್ನೆಲೆ ಯುವಕನೊಬ್ಬ ಟೆಲಿಫೋನ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ನವನಗರದಲ್ಲಿ ನಡೆದಿದೆ. ನಿನ್ನೆ ಬಾಡಿಗೆ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಸೆಕ್ಟರ್ 35ರ ಮನೆಯ ಮಾಲೀಕರ ಮಗ ಭೀಮು ಬಸಪ್ಪ ವಡ್ಡರ್, ಬಾಡಿಗೆದಾರ ಮಹಿಳೆಯೊಂದಿಗೆ ನಡೆದ ವಾಗ್ವಾದದಿಂದ ಮನನೊಂದು ಸೆಕ್ಟರ್ 36ರ ಟವರ್ ಏರಿದ್ದಾನೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನವನಗರ ಪೊಲೀಸ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಐಸ್ ಫ್ಯಾಕ್ಟರಿ ಸಮೀಪದ ಟವರ್ ಮೇಲೆ ಯುವಕ ಕುಳಿತಿದ್ದು, ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ.
ಮಗಳು ಲಾಡ್ಜ್‌ನಲ್ಲಿ ಪ್ರಿಯಕರನ ಜೊತೆ ಪತ್ತೆImage Credit source: Twitter
“ಅಮ್ಮಾ ಕಾಲೇಜಿಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟ ಮಗಳೊಬ್ಬಳು, ದಾರಿ ಮಧ್ಯೆ ಪ್ರಿಯಕರನ ಕೈ ಹಿಡಿದು ಹೋಟೆಲ್ ರೂಮ್ ಸೇರಿದ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಗ್ರಾಮಸ್ಥರ ನೆರವಿನಿಂದ ಮಗಳು ಎಲ್ಲಿದ್ದಾಳೆ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಆಕೆಯ ತಾಯಿ ಸ್ಥಳಕ್ಕೆ ಧಾವಿಸಿದ್ದು, ಅಲ್ಲಿ ನಡೆದ ಹೈಡ್ರಾಮಾ ಈಗ ಎಲ್ಲೆಡೆ ವೈರಲ್ಆಗಿದೆ.
ಲಾಡ್ಜ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ:
ಮಗಳ ಮೇಲೆ ಅನುಮಾನಗೊಂಡ ತಾಯಿ, ಗ್ರಾಮದ ಕೆಲವರ ಸಹಾಯದೊಂದಿಗೆ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ. ರೂಮಿನ ಬಾಗಿಲು ತೆರೆದಾಗ ಮಗಳು ತನ್ನ ಪ್ರಿಯಕರನ ಜೊತೆ ಇರುವುದು ಕಂಡುಬಂದಿದೆ. ಇದನ್ನು ಕಂಡು ಆಕ್ರೋಶಗೊಂಡ ತಾಯಿ, ಸ್ಥಳದಲ್ಲೇ ಮಗಳ ಕೆನ್ನೆಗೆ ಬಾರಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆಕೆಯ ಜೊತೆಗಿದ್ದ ಯುವಕನಿಗೂ ಸರಿಯಾಗಿಯೇ ಧರ್ಮದೇಟು ನೀಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
मां आई पुलिस लेकर होटल में बेटी कॉलेज जाने को बोलकर प्रेमी के साथ रंगे हाथ पकड़ाई pic.twitter.com/ZhZZpQcnu7
ಹೋಟೆಲ್ ರೂಮ್‌ನಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಅಲ್ಲಿಗೆ ಬಂದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಕೋಪಗೊಂಡ ತಾಯಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ವಾತಾವರಣ ತೀರಾ ಉದ್ವಿಗ್ನಗೊಂಡಿದ್ದು, ರೂಮಿನಲ್ಲಿದ್ದ ಯಾರೋ ಒಬ್ಬರು ಈ ಇಡೀ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ‘ಎಕ್ಸ್’ (ಟ್ವಿಟ್ಟರ್) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
@desHi__chora ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಕೇವಲ ಒಂದೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಆದರೆ, ವಿಡಿಯೋ ನೋಡಿದ ಬಹುಪಾಲು ನೆಟ್ಟಿಗರು ಇದು ನಿಜವಾದ ಘಟನೆಯಲ್ಲ ಎಂದು ವಾದಿಸುತ್ತಿದ್ದಾರೆ. “ಇದು ಕೇವಲ ಸೋಷಿಯಲ್ ಮೀಡಿಯಾದಲ್ಲಿ ವ್ಯೂಸ್ ಮತ್ತು ಸಬ್‌ಸ್ಕ್ರೈಬರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಮಾಡಿದ ‘ಸ್ಕ್ರಿಪ್ಟೆಡ್’ ಅಥವಾ ನಕಲಿ ವಿಡಿಯೋ ಇರಬಹುದು” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಚಾರಕ್ಕಾಗಿ ನಾಟಕೀಯ ವಿಡಿಯೋಗಳನ್ನು ಚಿತ್ರೀಕರಿಸಿ ವೈರಲ್ ಮಾಡುವುದು ಸಾಮಾನ್ಯವಾಗುತ್ತಿರುವುದು ಜನರ ಈ ಅನುಮಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ‘ಹೈಡ್ರಾಮಾ’ ವಿಡಿಯೋ ಮಾತ್ರ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ಆವೃತ್ತಿಯಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೊಳಿಸುವಂತಹ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಒಬ್ಬ ಆಟಗಾರ ತಂಡದಿಂದ ಹೊರಹೋದಾಗ ಅವರ ಜಾಗಕ್ಕೆ ‘ಬದಲಿ’ (Replacement) ಆಟಗಾರ ಬರುತ್ತಾರೆ. ಆದರೆ, ಏಪ್ರಿಲ್ 17 ರಂದು ಲಾಹೋರ್ ಖಲಂದರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ತನ್ನ ‘ಬದಲಿ’ ಆಟಗಾರ ದಿನೇಶ್ ಚಂಡಿಮಲ್ ಮತ್ತು ‘ಹೊರಹೋಗಬೇಕಿದ್ದ’ ಬೆವನ್ ಜೇಕಬ್ಸ್ ಇಬ್ಬರನ್ನೂ ಒಂದೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಣಕ್ಕಿಳಿಸಿದೆ.
ಯಾಕೆ ಹೀಗಾಯ್ತು?
ನ್ಯೂಝಿಲೆಂಡ್‌ನ ಯುವ ಆಟಗಾರ ಬೆವನ್ ಜೇಕಬ್ಸ್ ಅವರು ರಾಷ್ಟ್ರೀಯ ತಂಡದ ಜವಾಬ್ದಾರಿಗಾಗಿ ಪಿಎಸ್‌ಎಲ್‌ನಿಂದ ಅರ್ಧದಲ್ಲೇ ನಿರ್ಗಮಿಸಬೇಕಿತ್ತು. ಈ ಹಿನ್ನೆಲೆಯಲ್ಲಿ, ಏಪ್ರಿಲ್ 16 ರಂದು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮ್ಯಾನೇಜ್‌ಮೆಂಟ್ ಶ್ರೀಲಂಕಾದ ಹಿರಿಯ ಆಟಗಾರ ದಿನೇಶ್ ಚಂಡಿಮಲ್ ಅವರನ್ನು ಜೇಕಬ್ಸ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಿತ್ತು. ಆದರೆ, ಮಾರನೇ ದಿನದ ಪಂದ್ಯದ ಲೈನ್‌ಅಪ್ ನೋಡಿದ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು – ಅಲ್ಲಿ ಇಬ್ಬರೂ ಆಟಗಾರರ ಹೆಸರಿತ್ತು!
ಈ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ತಂಡದ ಜನರಲ್ ಮ್ಯಾನೇಜರ್ ನಬೀಲ್ ಹಶ್ಮಿ, ಪಂದ್ಯದ ದಿನದಂದು ಸ್ಟಾರ್ ಆಟಗಾರ ಟಾಮ್ ಕರ್ರನ್ ಅವರು ಹಠಾತ್ ಅನಾರೋಗ್ಯಕ್ಕೆ ಒಳಗಾದರು. ಕರ್ರನ್ ಹೋಟೆಲ್‌ನಲ್ಲಿಯೇ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ, ತಂಡವು ತನ್ನ ಲಭ್ಯವಿರುವ ಅತ್ಯುತ್ತಮ ಆಯ್ಕೆಯನ್ನು ಬಳಸಿಕೊಳ್ಳಲು ನಿರ್ಧರಿಸಿತು.
ಹೀಗಾಗಿ, ಜೇಕಬ್ಸ್ ನಿರ್ಗಮನಕ್ಕೂ ಮುನ್ನವೇ ಚಂಡಿಮಲ್ ಅವರನ್ನು ಟಾಮ್ ಕರ್ರನ್ ಅವರ ಸ್ಥಾನಕ್ಕೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಯಿತು. ಈ ಅನಿರೀಕ್ಷಿತ ಬದಲಾವಣೆಯಿಂದಾಗಿ ‘ಮೂಲ’ ಮತ್ತು ‘ಬದಲಿ’ ಆಟಗಾರ! ಇಬ್ಬರೂ ಏಕಕಾಲದಲ್ಲಿ ಮೈದಾನಕ್ಕಿಳಿಯುವಂತಾಯಿತು.
ಪಂದ್ಯದಲ್ಲಿ ಜೇಕಬ್ಸ್ ಪ್ರದರ್ಶನ:
ಇನ್ನು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕೊನೆಯ ಪಂದ್ಯವಾಡಿದ ಬೆವನ್ ಜೇಕಬ್ಸ್, ಕೇವಲ 6 ಎಸೆತಗಳಲ್ಲಿ 14 ರನ್ ಗಳಿಸುವ ಮೂಲಕ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಇದಾದ ಬೆನ್ನಲ್ಲೇ ಅವರು ಬಾಂಗ್ಲಾದೇಶ ವಿರುದ್ಧದ ಸರಣಿಗಾಗಿ ನ್ಯೂಝಿಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮತ್ತೊಂದೆಡೆ ಬದಲಿಯಾಗಿ ಬಂದ ದಿನೇಶ್ ಚಂಡಿಮಲ್ ಕೇವಲ 3 ರನ್ಗಳಿಸಿ ನಿರಾಸೆ ಮೂಡಿಸಿದರು.
ಇದಾಗ್ಯೂ ಈ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ನೀಡಿದ 135 ರನ್ಗಳ ಗುರಿಯನ್ನು ಬೆನ್ನತ್ತಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ 6 ವಿಕೆಟ್ಗಳ ಜಯ ಸಾಧಿಸಿದೆ.
ಅಂದಹಾಗೆ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ತಾಂತ್ರಿಕ ಬದಲಾವಣೆಗಳು ಅಪರೂಪವಾಗಿದ್ದು, ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಈ ನಿರ್ಧಾರವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಐಪಿಎಲ್ 2026 ರ 26 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಂದ್ಯವನ್ನು ತಮ್ಮ ತವರು ಮೈದಾನವಾದ MA ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿದೆ. ಈ ಪಂದ್ಯದಲ್ಲಿ, ಆರ್ಸಿಬಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಗುರಿಯನ್ನು ಹೊಂದಿದೆ. ಏತನ್ಮಧ್ಯೆ, ದೆಹಲಿ ತಂಡವು ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಸೋಲುಗಳಿಂದ ಹೊರಬರಲು ಪ್ರಯತ್ನಿಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 27ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯಲಿದ್ದಾರಾ? ಎಂಬುದೇ ಪ್ರಶ್ನೆ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಧೋನಿ ಒಂದೇ ಒಂದು ಪಂದ್ಯವಾಡಿಲ್ಲ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅವರು ಆಡುವ ಸಾಧ್ಯತೆ ತೀರಾ ಕಡಿಮೆ ಎಂದು ವರದಿಯಾಗಿದೆ.
ಗಾಯದ ಸಮಸ್ಯೆ:
ಸೀಸನ್ ಆರಂಭಕ್ಕೂ ಮುನ್ನ ತರಬೇತಿಯ ಅವಧಿಯಲ್ಲಿ ಉಂಟಾದ ಸ್ನಾಯು ಸೆಳೆತದಿಂದ (Calf Strain) ಧೋನಿ ಬಳಲುತ್ತಿದ್ದಾರೆ. ಇದೇ ಕಾರಣದಿಂದ ಅವರು ಈ ಆವೃತ್ತಿಯ ಮೊದಲ ಐದು ಪಂದ್ಯಗಳಿಂದ ಹೊರಗುಳಿದಿದ್ದರು. ಇಂದಿನ ಪಂದ್ಯಕ್ಕಾಗಿ ಅವರು ತಂಡದೊಂದಿಗೆ ಹೈದರಾಬಾದ್‌ಗೆ ಪ್ರಯಾಣಿಸಿದ್ದಾರಾದರೂ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ:
ಶುಕ್ರವಾರ ಸಂಜೆ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಅವರು ಲಯಬದ್ಧವಾಗಿ ಬ್ಯಾಟ್ ಬೀಸುತ್ತಿರುವುದು ಅಭಿಮಾನಿಗಳಲ್ಲಿ ಆಶಾವಾದ ಮೂಡಿಸಿದೆಯಾದರೂ, ಟೂರ್ನಿಯ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು ಮ್ಯಾನೇಜ್‌ಮೆಂಟ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ.
ಧೋನಿ ಬದಲು ಯಾರು?
ಧೋನಿ ಅವರ ಗೈರುಹಾಜರಿಯಲ್ಲಿ ಕೇರಳದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ. ಪ್ರಸ್ತುತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಚೆನ್ನೈ ತಂಡಕ್ಕೆ ಇಂದಿನ ಪಂದ್ಯ ಗೆಲ್ಲುವುದು ಅತ್ಯಂತ ಅವಶ್ಯಕವಾಗಿದೆ.
ವಾಪಸಾತಿ ಯಾವಾಗ?
ಮೂಲಗಳ ಪ್ರಕಾರ, ಏಪ್ರಿಲ್ 23 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಮೂಲಕ ಧೋನಿ ಮೈದಾನಕ್ಕೆ ಮರಳುವ ಸಾಧ್ಯತೆಯಿದೆ. ಹೀಗಾಗಿ ಥಲಾ ಕಂಬ್ಯಾಕ್ಗಾಗಿ ಸಿಎಸ್ಕೆ ಅಭಿಮಾನಿಗಳು ಮತ್ತಷ್ಟು ದಿನಗಳು ಕಾಯಬೇಕಾಗಿ ಬರಬಹುದು.
ಬಳ್ಳಾರಿ, ಏಪ್ರಿಲ್ 18: ಪ್ಯಾರಚೂಟ್ ತರಬೇತಿ ಪಡೆಯುತ್ತಿದ್ದ ವೇಳೆ ಆಯತಪ್ಪಿ 50 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿ ಹೊರವಲಯದ ಪಿ.ಡಿ. ಹಳ್ಳಿ ಭಾಗದಲ್ಲಿ ನಡೆದಿದೆ. 25 ವರ್ಷದ ಯೋಧ ಚಿನ್ನರಾಜ್ ಗಾಯಗೊಂಡ ದುರ್ದೈವಿ. ಶುಕ್ರವಾರ ಬೆಳಿಗ್ಗೆ ಸುಮಾರು 417 ಸೈನಿಕರ ತಂಡ ಪ್ಯಾರಚೂಟ್ ಜಿಗಿತದ ತರಬೇತಿಯಲ್ಲಿ ನಿರತವಾಗಿತ್ತು. ಈ ವೇಳೆ ಚಿನ್ನರಾಜ್ ಅವರು ಪ್ಯಾರಚೂಟ್ ಮೂಲಕ ಜಿಗಿಯುವಾಗ ತಾಂತ್ರಿಕ ತೊಂದರೆ ಅಥವಾ ಆಯತಪ್ಪಿದ ಕಾರಣ ಸುಮಾರು 50 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ. ಘಟನೆಯ ತೀವ್ರತೆಗೆ ಅವರ ಕಾಲಿನ ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿಗೆ ಏರ್‌ಲಿಫ್ಟ್
ಗಾಯಗೊಂಡ ಸೈನಿಕನನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಅದರಂತೆ ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಯೋಧನನ್ನು ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿವಾಹ ಆಗಿದ್ದಾರೆ. ಈಗ ಅವರು ಬ್ಯಾಂಕಾಕ್ ತೆರಳಿದ್ದಾರೆ. ಹಾಗಂತ ಅವರು ತೆರಳಿದ್ದು ಹನಿಮೂನ್ ವೆಕೇಶನ್ಗಾಗಿ ಅಲ್ಲ, ಬದಲಿಗೆ ಸಿನಿಮಾಗಾಗಿ.
ರಶ್ಮಿಕಾ ಮಂದಣ್ಣ ಅವರು ‘ಮೈಸಾ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆಯಂತೆ. ಅದನ್ನು ಕಲಿಯುವ ಅನಿವಾರ್ಯತೆ ರಶ್ಮಿಕಾಗೆ ಎದುರಾಗಿದೆ.
‘ಮೈಸಾ’ ಶೂಟಿಂಗ್ ಆರಂಭಕ್ಕೂ ಮೊದಲು ರಶ್ಮಿಕಾ ಅವರು ಆ್ಯಕ್ಷನ್ ಕಲಿಯಬೇಕಿತ್ತು. ಹೀಗಾಗಿ, ಬ್ಯಾಂಕಾಕ್ ತೆರಳಿ ದಿನಕ್ಕೆ 8 ಗಂಟೆ ಟ್ರೇನಿಂಗ್ ಪಡೆಯುತ್ತಿದ್ದಾರೆ.
ಹ್ಯಾಂಡ್ ಟು ಹ್ಯಾಂಡ್ ಕಾಂಬ್ಯಾಟ್ ಟ್ರೇನಿಂಗ್ ಅನ್ನು ರಶ್ಮಿಕಾ ಪಡೆಯುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಈ ಮೂಲಕ ಗಮನ ಸೆಳೆದಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ವಿವಾಹ ಆದ ಬಳಿಕ ಹಾಯಾಗಿ ಹನಿಮೂನ್ ಮಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಅವರು ತಮ್ಮ ಕೆಲಸದ ಮೇಲೆ ಗಮನ ಹರಿಸುತ್ತಿದ್ದಾರೆ.
ಭಾರತದ 161 ಟಿ20 ಪಂದ್ಯಗಳನ್ನಾಡಿರುವ ಸ್ಮೃತಿ ಮಂಧಾನ ಒಟ್ಟು 4,244 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರು, ಏಪ್ರಿಲ್ 18: ದಕ್ಷಿಣ ಆಫ್ರಿಕಾದಿಂದ ತರಲಾಗಿರುವ ನಾಲ್ಕು ಚೀತಾಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ಆಗಮಿಸಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಡರಾತ್ರಿ ತರಲಾಗಿರುವ ಈ ಎರಡು ಗಂಡು ಹಾಗೂ ಎರಡು ಹೆಣ್ಣು ಚೀತಾಗಳನ್ನು 40 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ.
ಉದ್ಯಾನವನದ ವೈದ್ಯರ ನಿಗಾದಲ್ಲಿ ಅವುಗಳ ಆರೋಗ್ಯ ಮತ್ತು ಚಲನವಲನಗಳನ್ನು ನಿಗಾ ವಹಿಸಲಾಗುತ್ತಿದೆ. ಈ ಅವಧಿ ಬಳಿಕ ತಜ್ಞರ ಪರಿಶೀಲನೆ ನಡೆಸಿ, ಚೀತಾಗಳು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಬಳಿಕ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಸದ್ಯ ಚೀತಾಗಳು ಪುನರ್ವಸತಿ ಕೇಂದ್ರದ ಕ್ವಾರಂಟೈನ್ ಪಂಜರದಲ್ಲಿ ಸುರಕ್ಷಿತವಾಗಿವೆ.
ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಶಾಶ್ವತ ಸಮೃದ್ಧಿಯ ಸಂಕೇತ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಬರುವ ಈ ದಿನದಂದು ಯಾವುದೇ ಕೆಲಸ ಮಾಡಿದರೂ ಅದು ‘ಕ್ಷಯ’ವಾಗುವುದಿಲ್ಲ (ನಾಶವಾಗುವುದಿಲ್ಲ) ಎಂಬ ನಂಬಿಕೆಯಿದೆ. ಆದರೆ ಈ ಬಾರಿ ಹಬ್ಬದ ದಿನಾಂಕದ ಬಗ್ಗೆ ಜನರಲ್ಲಿ ಗೊಂದಲವಿದೆ. ಅದಕ್ಕೆ ಪಂಚಾಂಗ ರೀತ್ಯಾ ಉತ್ತರ ಇಲ್ಲಿದೆ.
ಮುಹೂರ್ತ ಮತ್ತು ಸರಿಯಾದ ದಿನಾಂಕ:
ಪಂಚಾಂಗದ ಪ್ರಕಾರ, ಈ ಬಾರಿಯ ಸಮಯ ಹೀಗಿದೆ:
ದಿನಾಂಕ: ಏಪ್ರಿಲ್ 19, 2026 (ಭಾನುವಾರ)
ತೃತೀಯಾ ತಿಥಿ ಆರಂಭ: ಏಪ್ರಿಲ್ 19ರ ಬೆಳಿಗ್ಗೆ 10:49 ಗಂಟೆಗೆ.
ತೃತೀಯಾ ತಿಥಿ ಅಂತ್ಯ: ಏಪ್ರಿಲ್ 20ರ ಬೆಳಿಗ್ಗೆ 07:27 ಗಂಟೆಗೆ.
ಪೂಜೆ ಮತ್ತು ಖರೀದಿಗೆ ಶುಭ ಮುಹೂರ್ತ: ಏಪ್ರಿಲ್ 19ರ ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:20 ರವರೆಗೆ.
ಏಪ್ರಿಲ್ 20ರಂದು ಆಚರಿಸುವುದು ಏಕೆ?
ಶಾಸ್ತ್ರದ ಪ್ರಕಾರ, ಸೂರ್ಯೋದಯದ ಸಮಯದಲ್ಲಿ ಯಾವ ತಿಥಿ ಇರುತ್ತದೆಯೋ, ಅಂದೇ ಹಬ್ಬವನ್ನು ಆಚರಿಸುವ ‘ಉದಯ ತಿಥಿ’ ಸಂಪ್ರದಾಯವೂ ಇದೆ. ಏಪ್ರಿಲ್ 20ರ ಸೂರ್ಯೋದಯದ ಸಮಯದಲ್ಲಿ ತೃತೀಯಾ ತಿಥಿ ಇರುವುದರಿಂದ ಕೆಲವರು ಅಂದು ಆಚರಿಸುತ್ತಾರೆ.
ಪರಶುರಾಮ ಜಯಂತಿ: ಅಕ್ಷಯ ತೃತೀಯದಂದೇ ಶ್ರೀವಿಷ್ಣುವಿನ ಆರನೇ ಅವತಾರವಾದ ಭಗವಾನ್ ಪರಶುರಾಮರ ಜನ್ಮದಿನವನ್ನು ಆಚರಿಸಲಾಗುತ್ತದೆ.
ಸರ್ವಸಿದ್ಧಿ ದಿನ: ಇದು ವರ್ಷದ ಅತ್ಯಂತ ಶಕ್ತಿಶಾಲಿ ಮತ್ತು ಸಕಾರಾತ್ಮಕ ದಿನಗಳಲ್ಲಿ ಒಂದಾಗಿದೆ. ಮದುವೆ, ಗೃಹಪ್ರವೇಶ, ಹೊಸ ಉದ್ಯೋಗ ಅಥವಾ ಉದ್ಯಮ ಆರಂಭಿಸಲು ಈ ದಿನದಂದು ಬೇರೆ ಯಾವುದೇ ವಿಶೇಷ ಮುಹೂರ್ತ ನೋಡುವ ಅಗತ್ಯವಿಲ್ಲ (ಅಬೂಜ ಮುಹೂರ್ತ).
ಖರೀದಿಯ ಮಹತ್ವ: ಈ ದಿನ ಕಾರು, ಮನೆ ಅಥವಾ ಆಭರಣಗಳನ್ನು ಖರೀದಿಸುವುದರಿಂದ ಜೀವನದಲ್ಲಿ ಅಭಿವೃದ್ಧಿ ಮತ್ತು ಯಶಸ್ಸು ಲಭಿಸುತ್ತದೆ ಎಂಬುದು ಜನರ ನಂಬಿಕೆ.
ಅಕ್ಷಯ ಎಂದರೆ ಏನು?
‘ಅಕ್ಷಯ’ ಎಂದರೆ ಎಂದಿಗೂ ಕಡಿಮೆಯಾಗದ್ದು. ಈ ದಿನದಂದು ಮಾಡಿದ ಪ್ರಾರ್ಥನೆ, ದಾನ ಮತ್ತು ಪೂಜೆಯ ಫಲವು ಭಕ್ತರೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಇದು ಕೇವಲ ಸಂಪತ್ತಿನ ಹಬ್ಬವಲ್ಲ, ಇದು ಸಕಾರಾತ್ಮಕತೆಯ ಸಂಕೇತವೂ ಹೌದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ