ರಾಮ್ ಚರಣ್​ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು? – Kannada News | Paparazzi Confused Ram Charan As Yash call Him as Yash Yash

ನಟ ರಾಮ್ ಚರಣ್ ಅವರು ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಈದ್​​ಗೆ ರಿಲೀಸ್ ಆಗಲಿದೆ ಎಂಬ ಟಾಕ್ ಇದೆ. ಈ ಮಧ್ಯೆ ರಾಮ್ ಚರಣ್ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಲುಕ್ ನೋಡಿ ಅವರನ್ನು ಅನೇಕರು ಯಶ್ (Yash) ಎಂದು ಭಾವಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಯಶ್ ಹಾಗೂ ರಾಮ್ ಚರಣ್ ಮಧ್ಯೆ ಹೋಲಿಕೆ ಕಂಡು ಬಂದಿದೆ. ರಾಮ್ ಚರಣ್ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟಿದ್ದಾರೆ. ಯಶ್ ಕೂಡ ಇದೇ ಹೇರ್​​ಸ್ಟೈಲ್ ಹಾಗೂ ಉದ್ದನೆಯ ಗಡ್ಡ ಬಿಟ್ಟು ಕಾಣಿಸಿಕೊಳ್ಳುತ್ತಾರೆ. ಈ ಕಾರಣದಿಂದ ರಾಮ್ ಚರಣ್ ಅವರನ್ನು ಕೆಲವರು ಯಶ್ ಎಂದು ಕನ್​​ಫ್ಯೂಸ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್​​’ಗೆ ಹೆದರಿ ಸಂಪ್ರದಾಯ ಮುರಿದ ನಟ ಸಲ್ಮಾನ್ ಖಾನ್; ಇದು ಯಶ್ ಪವರ್

ಮುಂಬೈನಲ್ಲಿ ರಾಮ್​ ಚರಣ್ ಅವರು ಕಾಣಿಸಿಕೊಂಡಿದ್ದರು. ಈ ವೇಳೆ ಕಾರನ್ನು ಮುತ್ತಿಕೊಂಡ ಪಾಪರಾಜಿಗಳು, ‘ಯಶ್ ಯಶ್’ ಎಂದು ಕೂಗಿದ್ದಾರೆ. ಇದರಿಂದ ರಾಮ್ ಚರಣ್​​ಗೆ ಮುಜುಗರ ಆಗಿದೆ. ತಮಗೆ ಬೇರೆ ನಟರ ಹೆಸರಿಂದ ಕರೆಯುತ್ತಿರುವುದಕ್ಕೆ ಅವರು ಬೇಸರ ಮಾಡಿಕೊಂಡಿದ್ದಾರೆ. ನಂತರ ತಪ್ಪಿನ ಅರಿವಾಗಿ, ‘ರಾಮ್ ಚರಣ್’ ಎಂದು ಕರೆಯಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.

‘ರಾಮ್ ಚರಣ್ ಯಾರು ಹಾಗೂ ಯಶ್ ಯಾರು ಎಂದು ಗೊತ್ತಿಲ್ಲದೆ ಇದ್ದವರು ಮಾಡುವ ಎಡವಟ್ಟು ಅಷ್ಟೇ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಇಬ್ಬರ ಮಧ್ಯೆ ಸಾಮ್ಯತೆ ಇದೆ’ ಎಂದಿದ್ದಾರೆ. ಇನ್ನೂ ಕೆಲವರು, ಯಶ್ ನಟನೆಯ ‘ಟಾಕ್ಸಿಕ್’ ಹಾಗೂ ‘ಪೆದ್ದಿ’ ಸಿನಿಮಾ ಒಂದೇ ದಿನ ಬರಬಾರದು ಏಕೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

New Year 2026: ಮೋಜು-ಮಸ್ತಿ ಮಾತ್ರವಲ್ಲ, ಈ ರೀತಿಯೂ ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಬಹುದು – Kannada News | New Year 2026: If you don’t like parties, celebrate New Year this way

2025 ನೇ ವರ್ಷ ಮುಗಿಯುತ್ತಾ ಬಂತು ಇನ್ನೇನೂ ಹೊಸ ಭರವಸೆ, ಉತ್ಸಾಹದೊಂದಿಗೆ 2026 ಕ್ಕೆ ಕಾಲಿಡುತ್ತಿದ್ದೇವೆ. ಹೆಚ್ಚಿನವರು ಹೊಸ ವರ್ಷವನ್ನು (New Year) ಪಾರ್ಟಿ,  ತಮ್ಮ ನೆಚ್ಚಿನ ಸ್ಥಳಕ್ಕೆ ಟ್ರಿಪ್‌ ಹೋಗುವ ಮೂಲಕ ಅಲ್ಲಿ ಮೋಜಿ-ಮಸ್ತಿ ಮಾಡುತ್ತಾ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ. ಆದ್ರೆ ಕೆಲವರಿಗೆ ಈ ಗದ್ದಲಗಳು ಇಷ್ಟವಾಗುವುದಿಲ್ಲ, ಮನಸ್ಸಿಗೆ ನೆಮ್ಮದಿ, ತೃಪ್ತಿ ಸಿಗುವಂತಹ ಕಾರ್ಯಗಳನ್ನು ಮಾಡಲು ಮಾಡಲು ಬಯಸುತ್ತಾರೆ. ನೀವು ಕೂಡ ಈ ಬಾರಿ ತಡರಾತ್ರಿಯ ಮೋಜು-ಮಸ್ತಿನಿಂದ ಕೊಂಚ ದೂರವಿದ್ದು, ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಲು ಬಯಸುತ್ತೀರಾ? ಹಾಗಿದ್ರೆ ನೀವು ಈ ರೀತಿ ಸರಳವಾಗಿ ನ್ಯೂ ಇಯರ್‌ ಆಚರಿಸಿ.

ಹೊಸ ವರ್ಷವನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸಿ:

ಪ್ರಕೃತಿಯೊಂದಿಗೆ ಸಮಯವನ್ನು ಕಳೆಯಿರಿ: ಗದ್ದಲಗಳಿಂದ ದೂರವಿದ್ದು, ಶಾಂತ ಮನಸ್ಸಿನಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆಸೆಯಿದ್ದರೆ ನೀವು ಪ್ರಕೃತಿಯೊಂದಿಗೆ ಸಮಯವನ್ನು ಕಳೆಯಬಹುದು. ಹೊಸ ವರ್ಷದ ದಿನದಂದು ಮುಂಜಾನೆ ಬೇಗ ಎದ್ದು, ಒಂದೊಳ್ಳೆ ಸ್ಥಳಕ್ಕೆ ಸೂರ್ಯೋದಯವನ್ನು ವೀಕ್ಷಿಸಲು ಹೋಗಬಹುದು, ಉದ್ಯಾನವನ, ಸರೋವರ  ಸೇರಿದಂತೆ ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಿಯಿ. ಇದು ನಿಮ್ಮ ಮನಸ್ಸಿನ ಒತ್ತಡವನ್ನೆಲ್ಲಾ ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

ಡಿಜಿಟಲ್ ಡಿಟಾಕ್ಸ್: ನಾವು ಫೋನನ್ನು ಬಿಟ್ಟು ಇರುವುದೇ ಇಲ್ಲ. ಹೀಗಿರುವಾಗ ಹೊಸ ವರ್ಷವನ್ನು ಡಿಜಿಟಲ್‌ ಡಿಟಾಕ್ಸ್‌ ದಿನವನ್ನಾಗಿ ಮಾಡಿ. ಫೋನ್‌, ಲ್ಯಾಪ್‌ಟಾಪ್‌ ಪರದೆಯಿಂದ ಸ್ವಲ್ಪ ದೂರವಿದ್ದು, ನಿಮ್ಮ ನೆಚ್ಚಿನ ಪುಸ್ತಕವನ್ನು ಓದಿ ಅಥವಾ ಮನಸ್ಸಿಗೆ ಶಾಂತಿ ನೀಡುವ ಸ್ಥಳಕ್ಕೆ ಭೇಟಿ ನೀಡಿ.  ಖಂಡಿತವಾಗಿಯೂ ಇದು ಪಾರ್ಟಿಗಳಿಗಿಂತ ಹೆಚ್ಚಿನ ತೃಪ್ತಿಯನ್ನು ಮನಸ್ಸಿಗೆ ನೀಡುತ್ತದೆ.

ಗುರಿಗಳನ್ನು ಹೊಂದಿಸಿ: ಹೊಸ ವರ್ಷದ ಮೊದಲ ದಿನವು ನಿಮ್ಮೊಂದಿಗೆ ನೀವು ಮಾತನಾಡಲು ಒಂದು ದಿನ. ಒಂದು ಡೈರಿಯನ್ನು ಖರೀದಿಸಿ ಮತ್ತು ಕಳೆದ ವರ್ಷ ಹೇಗೆ ಹೋಯಿತು,  ಮುಂಬರುವ ವರ್ಷದಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ, ಜೀವನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಲು ಬಯಸುತ್ತೀರಿ ಎಂಬುದನ್ನು ಬರೆಯಿರಿ. ಹೀಗೆ ನಿಮ್ಮ ಆಲೋಚನೆಗಳನ್ನು ಪುಸ್ತಕದ ಮೇಲೆ ಗೀಚಿದಾಗ ನಿಮ್ಮ ಮನಸ್ಸು ಸ್ಪಷ್ಟ ಮತ್ತು ಶಾಂತವಾಗಿರುತ್ತದೆ.

ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ: ಪಾರ್ಟಿ ಪಬ್‌ ಅಂತೆಲ್ಲಾ ಹೋಗಲು ಇಷ್ಟವಿಲ್ಲದಿದ್ದರೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನೆಯಲ್ಲಿ ಆಟವಾಡುತ್ತಾ, ಮೂವಿಗಳನ್ನು ನೋಡುತ್ತಾ, ಎಲ್ಲರೂ ಜೊತೆಗೂಡಿ ತಮಾಷೆ ಮಾಡುತ್ತಾ ಸಮಯವನ್ನು ಕಳೆಯಬಹುದು. ಇದು ನಿಮ್ಮ ಒತ್ತಡವನ್ನೆಲ್ಲಾ ದೂರ ಮಾಡಿ, ಮನಸ್ಸಿಗೆ ಖುಷಿ ನೀಡುವಂತೆ ಮಾಡುತ್ತದೆ. ಜೊತೆಗೆ ಹೊಸ ವರ್ಷವನ್ನು ಸಕಾರಾತ್ಮಕತೆಯೊಂದಿಗೆ ಆರಂಭಿಸಲು ಅನುವುಮಾಡಿಕೊಡುತ್ತದೆ.

ಇದನ್ನೂ ಓದಿ: ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ

ಸೇವೆ ಮತ್ತು ದಾನ: ಹೊಸ ವರ್ಷವನ್ನು ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸಲು ಬಯಸಿದರೆ, ಈ ದಿನದಂದು ಅನಾಥಾಶ್ರಮ, ವೃದ್ಧಾಶ್ರಮ ಅಥವಾ ಪ್ರಾಣಿಗಳ ಆಶ್ರಯ ತಾಣಕ್ಕೆ ಭೇಟಿ ನೀಡಿ, ಅಲ್ಲಿ ಅವರೊಂದಿಗೆ ಸಮಯ ಕಳೆಯುತ್ತಾ ನಿಮ್ಮ ಕೈಲಾದಷ್ಟು ಅವರಿಗೆ ಸಹಾಯ ಮಾಡಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ಹೀಗೆ ಇತರರ ಮುಖದಲ್ಲಿ ನಗು ತರಿಸುವುದು ಹೊಸ ವರ್ಷದ ಅತ್ಯಂತ ಸುಂದರ ಮತ್ತು ಅರ್ಥಪೂರ್ಣ ಆರಂಭವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:01 am, Mon, 29 December 25

Source link

Optical Illusion: ಈ ಚಿತ್ರದಲ್ಲಿ ಮರೆಮಾಡಲಾಗಿರುವ ತೆಂಗಿನಕಾಯಿಯನ್ನು ಗುರುತಿಸಿ ನೋಡೋಣ – Kannada News | Optical Illusion: Can you find the hidden coconut in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್ ಟೀಸರ್ ಸೇರಿದಂತೆ ಒಗಟಿನ ಚಿತ್ರಗಳೇ ಹಾಗೆ, ಒಂದು ಕ್ಷಣ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಈ ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ನೀಡುವುದರ ಜತೆಗೆ ನಿಮ್ಮನ್ನು ರಿಲ್ಯಾಕ್ಸ್ ಆಗಿಸುತ್ತದೆ. ಆದರೆ, ಬುದ್ಧಿವಂತರು ಮಾತ್ರ ಕಡಿಮೆ ಸಮಯದಲ್ಲಿ ಉತ್ತರ ಕಂಡುಹಿಡಿಯುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿನ ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ನೋಡಿ.  ನೀವು ಈ ಚಿತ್ರದಲ್ಲಿ ತೆಂಗಿನಕಾಯಿ ಎಲ್ಲಿದೆ ಎಂದು ಹೇಳಬೇಕು. ಈ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಏನಿದೆ?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ನೋಡಿದಾಗ ಕೂಡಲೇ ನಿಮ್ಮನ್ನು ಭ್ರಮೆಗೆ ಸಿಲುಕಿಸುತ್ತದೆ. ಈ ಚಿತ್ರವು ಅದೇ ರೀತಿಯಿದ್ದು, ಇಲ್ಲಿ ಮೇಕೆ, ಹುಂಜ ಹಾಗೂ ಹೆಂಟೆ ಇರುವುದನ್ನು ಕಾಣಬಹುದು. 10 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ತೆಂಗಿನಕಾಯಿಯನ್ನು ಕಂಡುಹಿಡಿಯಬೇಕು.

ಇದನ್ನೂ ಓದಿ:ನೀವು ಜಾಣರಾಗಿದ್ರೆ ಈ ಚಿತ್ರದಲ್ಲಿರುವ ಸೂಜಿಯನ್ನು ಕಂಡು ಹಿಡಿಯಿರಿ

ತೆಂಗಿನಕಾಯಿಯನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ನೀವು ಎಷ್ಟೇ ಪ್ರಯತ್ನಿಸಿದರೂ ತೆಂಗಿನಕಾಯಿ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ. ನಾವು ಹೇಳುವಂತೆ ನೀವು ಮಾಡಿ, ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಪ್ರತಿಯೊಂದು ಭಾಗಗಳನ್ನು ಸ್ಕ್ಯಾನ್ ಮಾಡಿ. ಒಂದು ವೇಳೆ ತೆಂಗಿನಕಾಯಿ ಗುರುತಿಸಲು ಸಾಧ್ಯವಾಗಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ತೆಂಗಿನಕಾಯಿಯನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ, ಭಯಾನಕ ವಿಡಿಯೋ – Kannada News | Fatal Road Mishap as Truck Loses Balance and Lands on Vehicle

ರಾಂಪುರ, ಡಿಸೆಂಬರ್ 29: ಲಾರಿಯೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಘಟನೆ ರಾಂಪುರದಲ್ಲಿ ನಡೆದಿದೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಭಾನುವಾರ ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಚಲಿಸುತ್ತಿದ್ದ ಬೊಲೆರೊ ಮೇಲೆ ಉರುಳಿಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ವರದಿಯಾಗಿದೆ. ಪಹಾಡಿ ಗೇಟ್ ಬಳಿಯ ಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಪೊಲೀಸರ ಪ್ರಕಾರ, ಹೊಟ್ಟು ಸಾಗಿಸುತ್ತಿದ್ದ ಟ್ರಕ್ ಹೆದ್ದಾರಿಯಲ್ಲಿ ಹಾದುಹೋಗುವಾಗ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಚಲಿಸುತ್ತಿದ್ದ ಬೊಲೆರೊ ವಾಹನದ ಮೇಲೆ ಉರುಳಿಬಿದ್ದಿತು. ಡಿಕ್ಕಿಯ ಪರಿಣಾಮ ಮಾರಕವಾಗಿದ್ದು, ಬೊಲೆರೊ ಚಾಲಕ ತಕ್ಷಣವೇ ಸಾವನ್ನಪ್ಪಿದ್ದಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣ; ಇದರ ಹಿಂದಿದ್ಯಾ ಕೆಮಿಕಲ್ ಇಂಜಿನಿಯರ್ ಮಾಸ್ಟರ್ ಮೈಂಡ್!? – Kannada News | Bangalore Drug Factory seized; Is a chemical engineer the mastermind

ಡ್ರಗ್ಸ್ ತಯಾರಿಕೆಗೆ ಬೇಕಾದ ಫಾರ್ಮುಲಾ ನೀಡುತ್ತಿದ್ದನಾ ಪ್ರಶಾಂತ್?

ಬೆಂಗಳೂರು, ಡಿಸೆಂಬರ್ 29: ಮಹಾರಾಷ್ಟ್ರ ANTF, ಬೆಂಗಳೂರು ಪೊಲೀಸರು ಹಾಗೂ ಎನ್‌ಸಿಬಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರಿನ (Bengaluru) ಮೂರು ಕಡೆಗಳಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದ್ದು, 55.88 ಕೋಟಿ ರೂ. ಮೌಲ್ಯದ ಡ್ರಗ್ಸ್​ ಸೀಜ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಲಾಗಿತ್ತು. ಈತ ಕೆಮಿಕಲ್ ಇಂಜಿನಿಯರ್ ಆಗಿದ್ದು, ಡ್ರಗ್ಸ್ ಜಾಲದಲ್ಲಿ ಈತನೇ ಮಖ್ಯಪಾತ್ರಧಾರಿಯೇ ಎಂಬ ಶಂಕೆ ವ್ಯಕ್ತವಾಗಿದೆ.

ಡ್ರಗ್ಸ್ ತಯಾರಿಕೆಗೆ ಬೇಕಾದ ಫಾರ್ಮುಲಾ ನೀಡುತ್ತಿದ್ದನಾ ಪ್ರಶಾಂತ್?

ಬೆಂಗಳೂರಿನಲ್ಲಿ RJ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾದ ಬೆನ್ನಲ್ಲೇ 4.1 ಕೆಜಿ ಘನ MDMA ಮತ್ತು 17 ಕೆಜಿ ದ್ರವ MDMA ಸೇರಿ 55.88 ಕೋಟಿ ರೂ. ಮೌಲ್ಯದ ಒಟ್ಟು 21.4 ಕೆಜಿ‌ ಡ್ರಗ್ಸ್​​ನ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್, ಪ್ರಶಾಂತ್ ಯಲ್ಲಪ್ಪ ಪಾಟೀಲ್ರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಶಾಂತ್, ಕೊಲ್ಲಾಪುರ ಮೂಲದವನಾಗಿದ್ದು, ಕೆಮಿಕಲ್ ಇಂಜಿನಿಯರ್ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ತಯಾರಿಕೆಗೆ ಬೇಕಾದ ರಾಸಾಯನಿಕಗಳ ಸಾಗಣೆ, ಫಾರ್ಮುಲಾ ನೀಡುವಲ್ಲಿ ಪ್ರಶಾಂತ್ ಪ್ರಮುಖ ಪಾತ್ರ ವಹಿಸಿದ್ದಾನೆಯೇ ಎಂಬ ಅನುಮಾನ ತನಿಖಾಧಿಕಾರಿಗಳ ತಲೆ ಹೊಕ್ಕಿದೆ.

ಈ ಡ್ರಗ್ಸ್ ಜಾಲದಲ್ಲಿ ರಾಜಸ್ಥಾನ ಮೂಲದ ಉದ್ಯಮಿಗಳಾದ ಯೋಗಿರಾಜ್ ಕುಮಾರ್ ಮತ್ತು ನಯಾನ್ ಪವರ್ ಕಿಂಗ್‌ಪಿನ್‌ಗಳಾಗಿದ್ದು, ಫ್ಯಾಕ್ಟರಿಗೆ ಬೇಕಾದ ಯಂತ್ರೋಪಕರಣ ಹಾಗೂ ಕಟ್ಟಡ ವ್ಯವಸ್ಥೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ರಾಮಲಾಲ್ ಬಿಷ್ಣೋಯ್ ಪ್ರಶಾಂತ್ ಸೂಚನೆ ಮೇರೆಗೆ ಡ್ರಗ್ಸ್ ತಯಾರಿಸುತ್ತಿದ್ದರೆ, ಯರಪ್ಪನಹಳ್ಳಿಯಿಂದ ವಿವಿಧ ಕಡೆಗಳಿಗೆ ಅಬ್ದುಲ್ ಎಂಬಾತ ಸರಬರಾಜು ಮಾಡುತ್ತಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.\

ಇದನ್ನೂ ಓದಿ ಡ್ರಗ್ಸ್​​ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?: 55.88 ಕೋಟಿ ರೂ. ಮೌಲ್ಯದ MDMA ಸೀಜ್​​; ನಾಲ್ವರು ಅರೆಸ್ಟ್​​

ಹೇಗಿತ್ತು ಆರೋಪಿಗಳ ಮಾಸ್ಟರ್ ಪ್ಲಾನ್‌!

ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣದಲ್ಲಿ ಆರೋಪಿಗಳ ಮಾಸ್ಟರ್ ಪ್ಲಾನ್‌ ಬಯಲಾಗಿದೆ. ಪೊಲೀಸರಿಗೆ ಅನುಮಾನ ಬಾರದಂತೆ ಡ್ರಗ್ಸ್ ತಯಾರಿಸಲು ಅವರು ಅತೀ ಸೂಕ್ಷ್ಮವಾಗಿ ಸ್ಥಳ ಆಯ್ಕೆ ಮಾಡಿಕೊಂಡಿದ್ದು, ಎರಡು ಪೊಲೀಸ್ ಡಿವಿಷನ್‌ಗಳ ವ್ಯಾಪ್ತಿಯಲ್ಲಿ ಮೂರು ಪೊಲೀಸ್ ಠಾಣೆಗಳ ನಡುವೆ ಸುಮಾರು 8 ಕಿಲೋಮೀಟರ್‌ ಅಂತರದಲ್ಲಿ ಫ್ಯಾಕ್ಟರಿ ಹಾಗೂ ಗೋಡೌನ್‌ಗಳನ್ನು ಸ್ಥಾಪಿಸಲಾಗಿತ್ತು.

ಅವಲಹಳ್ಳಿ, ಬಾಗಲೂರು ಮತ್ತು ಕೊತ್ತನೂರು ಠಾಣೆಗಳ ಗಡಿ ಭಾಗದಲ್ಲೇ ಫ್ಯಾಕ್ಟರಿಯನ್ನು ತೆರೆಯಲಾಗಿದ್ದು, ಮೂರು ಠಾಣೆಗಳ ಪೊಲೀಸರು ಸುಲಭವಾಗಿ ಪ್ರವೇಶಿಸದ ನಿರ್ಜನ ಪ್ರದೇಶವನ್ನು ಟಾರ್ಗೆಟ್ ಮಾಡಲಾಗಿತ್ತು. ಗಸ್ತು ಕಡಿಮೆ ಇರುವುದನ್ನು ಗಮನಿಸಿ ಆರೋಪಿಗಳು ಧೈರ್ಯವಾಗಿ ಡ್ರಗ್ಸ್ ಉತ್ಪಾದನೆ ನಡೆಸಿದ್ದರು. ಠಾಣಾ ವ್ಯಾಪ್ತಿಗಳ ಗಡಿ ಪ್ರದೇಶಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡು, ಪೊಲೀಸರ ಕಣ್ಣೆದುರೇ ತಪ್ಪಿಸಿಕೊಳ್ಳುವ ಮಾಸ್ಟರ್ ಪ್ಲಾನ್‌ ಮೂಲಕ ಫ್ಯಾಕ್ಟರಿ ನಡೆಸಿದ್ದುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ ಬೆಂಗಳೂರಲ್ಲಿ 55 ಕೋಟಿ ರೂ ಡ್ರಗ್ಸ್​​ ಪತ್ತೆ: ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್

ಬೆಂಗಳೂರು ಪೊಲೀಸರ ಸ್ಪಷ್ಟನೆ

ಬೆಂಗಳೂರಿನ ಮೂರು ಕಡೆಗಳಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ. ಇದು ಕೇವಲ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ಅಲ್ಲದೆ, ಬೆಂಗಳೂರು ಪೊಲೀಸರು ಹಾಗೂ ಎನ್‌ಸಿಬಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಾಗಿದೆ. ದಾಳಿ ವೇಳೆ ಸುರೇಶ್ ಯಾದವ್ ಮತ್ತು ಮಲ್ಟಾನ್ ರಾಮಲಾಲ್ ಬಿಷ್ಟೋಯಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಯರಪ್ಪನಹಳ್ಳಿ ಗ್ರಾಮದ ಮನೆಯೊಂದರಲ್ಲಿ 4.2 ಕಿಲೋಗ್ರಾಂ ಮೆಫೆಡೋನ್, ದ್ರವ ರೂಪದಲ್ಲಿದ್ದ 17 ಕೆಜಿ ಕಚ್ಚಾ ವಸ್ತು ಹಾಗೂ ತಯಾರಿಕಾ ಉಪಕರಣಗಳನ್ನು ಸೀಜ್ ಮಾಡಲಾಗಿದೆ. ಮಾವಿನ ತೋಪಿನಲ್ಲಿ ಮತ್ತೊಂದು ಮಿಕ್ಸರ್ ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಖಾನೆ ಪತ್ತೆಯಾಗಿಲ್ಲ. ಬಾಗಲೂರಿನ ಶೆಡ್‌ನಲ್ಲಿ ಸಂಗ್ರಹಿಸಿದ್ದ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. SOCO ತಂಡದ ಪರೀಕ್ಷೆಯಲ್ಲಿ MD ಡ್ರಗ್ಸ್ ವಿಶೇಷ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದಿದ್ದು, ಅಶುದ್ಧ ವಸ್ತುವಾಗಿರಬಹುದೆಂದು ತಿಳಿಸಲಾಗಿದೆ. ವಶಪಡಿಸಿಕೊಂಡ ಮೆಫೆಡೋನ್ ಮೌಲ್ಯ 1.2 ಕೋಟಿ ರೂ.ಎಂದು ಅಂದಾಜಿಸಲಾಗಿದೆ.

 ಪ್ರದೀಪ್​​, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರು: ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್ ಪೀಸ್

ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನ ಕತ್ರಿಗುಪ್ಪೆ ಪ್ರದೇಶದಲ್ಲಿ ಇಬ್ಬರು ಯುವಕರ ಮೇಲೆ ಲಾಂಗು ಮಚ್ಚುಗಳಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಭಾನುವಾರ ರಾತ್ರಿ 8:30ರ ಸುಮಾರಿಗೆ ಬಷೀರ್ ಮತ್ತು ಆತನ ಸ್ನೇಹಿತ ಟೀ ಅಂಗಡಿಯ ಬಳಿ ಇದ್ದಾಗ, ವೆಂಕಟೇಶ್ ಎಂಬಾತನ ನೇತೃತ್ವದ ಏಳರಿಂದ ಎಂಟು ಜನರ ಗ್ಯಾಂಗ್ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಇಬ್ಬರೂ ಕಾರಿನಲ್ಲಿ ಅಡಗಿಕೊಂಡಿದ್ದಾರೆ. ಆದರೆ, ಗ್ಯಾಂಗ್ ಲಾಂಗು, ಮಚ್ಚು ಮತ್ತು ಕಲ್ಲುಗಳಿಂದ ಕಾರಿನ ಮೇಲೆ ಹಲ್ಲೆ ನಡೆಸಿದೆ. ನಂತರ ಯುವಕರು ಕಾರಿನಿಂದ ತಪ್ಪಿಸಿಕೊಂಡು ಮುಖ್ಯ ರಸ್ತೆಯಲ್ಲಿದ್ದ ಪಾನ್ ಅಂಗಡಿಯಲ್ಲಿ ಅಡಗಲು ಪ್ರಯತ್ನಿಸಿದ್ದಾರೆ. ದುಷ್ಕರ್ಮಿಗಳು ಪಾನ್ ಅಂಗಡಿಯ ಮೇಲೂ ದಾಳಿ ನಡೆಸಿ, ಗಾಜುಗಳನ್ನು ಪುಡಿ ಮಾಡಿ ದಾಂಧಲೆ ಎಬ್ಬಿಸಿದ್ದಾರೆ.

ಈ ಘಟನೆ ಬಷೀರ್ ಮತ್ತು ವೆಂಕಟೇಶ್ ನಡುವಿನ ಹಳೆಯ ದ್ವೇಷದ ಪರಿಣಾಮ ಎಂದು ತಿಳಿದುಬಂದಿದೆ. ಹಿಂದೆ ಈ ಕುರಿತು ದೂರು ಮತ್ತು ಪ್ರತಿದೂರು ಕೂಡ ದಾಖಲಾಗಿತ್ತು. ಘಟನೆಯಿಂದ ಏರಿಯಾದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು – Kannada News | BJP MLA Sharanu Salagar Booked in Cheque Bounce Case

ಬೀದರ್, ಡಿ.29: ಬಿಜೆಪಿ ಶಾಸಕ ಶರಣು ಸಲಗರ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದ್ದು, ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಎಂಬುವರು ಶಾಸಕರ ವಿರುದ್ಧ ದೂರು ನೀಡಿದ್ದಾರೆ. ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಶಾಸಕ ಶರಣು ಸಲಗರ ಅವರು ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಅವರಿಂದ 99 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಹಣ ಪಡೆದ ಸಮಯದಲ್ಲಿ ಶಾಸಕರು ಭದ್ರತೆಗಾಗಿ ಖಾಲಿ ಚೆಕ್ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿಗದಿತ ಅವಧಿಯೊಳಗೆ ಹಣವನ್ನು ಮರುಪಾವತಿಸದ ಕಾರಣ, ಉದ್ಯಮಿ ನೀಡಿದ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ ಅದು ಬೌನ್ಸ್ ಆಗಿದೆ. ಈ ಘಟನೆಯ ನಂತರ, ಸಂಜೀವ್ ಕುಮಾರ್ ಸುಗುರೆ ಅವರು ಶಾಸಕ ಶರಣು ಸಲಗರ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ಪೊಲೀಸರು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೆರಡಲ್ಲ, ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಹಲವು ಬ್ಯಾಂಕ್ ದರೋಡೆ ಪ್ರಕರಣಗಳ ಮಾಹಿತಿ ಇಲ್ಲಿದೆ ನೋಡಿ! – Kannada News | Major Bank Robbery Cases Across Karnataka in 2025: Bengaluru and Statewide Timeline

ಬೆಂಗಳೂರು, ಡಿಸೆಂಬರ್ 29: 2025ರಲ್ಲಿ ಕರ್ನಾಟಕದಾದ್ಯಂತ ಸರಣಿ ದರೋಡೆ ಪ್ರಕರಣಗಳು ನಡೆದಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಈ ಭಯಾನಕ ಕೃತ್ಯಗಳು ಜನರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿದ್ದು, ಅದರಲ್ಲೂ ಬ್ಯಾಂಕ್​ ದರೋಡೆ ಪ್ರಕರಣಗಳೇ ಹೆಚ್ಚು ಗಮನ ಸೆಳೆದಿವೆ. ರಾಷ್ಟ್ರೀಕೃತ ಬ್ಯಾಂಕ್​ಗಳಿಂದಲೇ ಡಕಾಯಿತರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ್ದಾರೆ.

ಬೆಂಗಳೂರಿನಲ್ಲಿ 7.11 ಕೋಟಿ ರೂಪಾಯಿ ಮೌಲ್ಯದ ಎಟಿಎಂ ವಾಹನ ಹೈಜಾಕ್ ಪ್ರಕರಣ, ವಿಜಯಪುರದ ಚಡಚಣದಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 1.5 ಕೋಟಿ ರೂ. ನಗದು ದರೋಡೆ, ದಾವಣಗೆರೆಯ ನಾಯಕತಿಯಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ 13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣಗಳು ಪ್ರಮುಖವಾಗಿವೆ. ಕಲಬುರಗಿಯಲ್ಲಿ ಎಟಿಎಂ ಯಂತ್ರಿಂದ 18 ಲಕ್ಷ ರೂಪಾಯಿ ಕಳ್ಳತನ ಮತ್ತು ರಾಮ್ ಜ್ಯುವೆಲ್ಲರಿ ಶಾಪ್‌ನಲ್ಲಿ 18 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ ಇತರೆ ಪ್ರಮುಖ ಪ್ರಕರಣಗಳಾಗಿವೆ. ಈ ಘಟನೆಗಳು 2025 ಅನ್ನು ಹಲವರ ಪಾಲಿಗೆ ಕರಾಳ ವರ್ಷವನ್ನಾಗಿ ಮಾಡಿವೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಸರಕಾರ ಮತ್ತು ಪೊಲೀಸ್‌ ಇಲಾಖೆ ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಟರ್​​ನ್ಯಾಷನಲ್ ಲೀಗ್ ಟಿ20 ಟೂರ್ನಿಯ 30ನೇ ಪಂದ್ಯದಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಅಬುಧಾಬಿ ಪಡೆ ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿದೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಗಲ್ಫ್ ಜೈಂಟ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ಫಿಲ್ ಸಾಲ್ಟ್ ಹಾಗೂ ಮೈಕೆಲ್ ಪೆಪ್ಪರ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಮೊದಲ ವಿಕೆಟ್​ಗೆ 131 ರನ್​ಗಳ ಜೊತೆಯಾಟವಾಡಿದರು.

ಈ ಹಂತದಲ್ಲಿ 51 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 83 ರನ್ ಬಾರಿಸಿದ್ದ ಮೈಕೆಲ್ ಪೆಪ್ಪರ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಸಾಲ್ಟ್ 56 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 72 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಅಬುಧಾಬಿ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 179 ರನ್ ಕಲೆಹಾಕಿತು.

180 ರನ್​ಗಳ ಗುರಿ ಬೆನ್ನತ್ತಿದ ಗಲ್ಫ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 147 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಅಬುಧಾಬಿ ನೈಟ್ ರೈಡರ್ಸ್ ತಂಡವು 32 ರನ್​ಗಳ ಜಯ ಸಾಧಿಸಿ ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

 

 

Source link

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ವಿದ್ಯುತ್ ವ್ಯತ್ಯಯ – Kannada News | Bangalore Power cut: Power outage in these areas of Bangalore on 29th of December

ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ವಿದ್ಯುತ್ ವ್ಯತ್ಯಯ

ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನಲ್ಲಿ ಬೆಸ್ಕಾಂನಿಂದ (BESCOM)ಚಳ್ಳಕೆರೆ ವಿಭಾಗ ವ್ಯಾಪ್ತಿಯಲ್ಲಿ ಮೂರು ತಿಂಗಳ ಕಾಲ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೇಳಿಕೊಂಡಿದೆ. ಅದರೊಂದಿಗೆ ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಯ ಮೂಲಕ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಲು ಸಾರ್ವಜನಿಕರಿಗೆ ಸಬ್ಸಿಡಿ ನೀಡುತ್ತಿದೆ.

ಎಲ್ಲೆಲ್ಲಿ ಪವರ್ ಕಟ್?

ಚಳ್ಳಕೆರೆ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ನಿನ್ನೆ (ಡಿ.28) ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಇಂದೂ ಸಹ ಇದೇ ಕಾರಣಕ್ಕೆ ಬೆಳಗ್ಗೆ 10 ರಿಂದ ಸಂಜೆ 5ರ ತನಕ ವಿದ್ಯುತ್‌ ಸ್ಥಗಿತವಾಗಲಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಎಇಇ ಜಿ.ಶಿವಪ್ರಸಾದ್ ಮನವಿ ಮಾಡಿದ್ದಾರೆ. ನಿನ್ನೆ ಚಳ್ಳಕೆರೆ ನಗರ ವ್ಯಾಪ್ತಿಯ ಬೆಂಗಳೂರು, ಬಳ್ಳಾರಿ ರಸ್ತೆ, ಬುಡ್ನಹಟ್ಟಿ, ನಗರಂಗೆರೆ, ನನ್ನಿವಾಳ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಪವರ್ ಕಟ್ ಇತ್ತು. ಹಾಗೆಯೇ ಇಂದು ಸಾಣಿಕೆರೆ, ಸೋಮಗುದ್ದು, ಗೋಪನಹಳ್ಳಿ, ಸಾಣಿಕೆರೆ ಶಾಖೆವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಸೂರ್ಯಘರ್ ಯೋಜನೆಗೆ ಸಿಗುತ್ತಿದೆ ಸಬ್ಸಿಡಿ

2025ರ ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯಡಿ ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕ ಅಳವಡಿಸಿ ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರವು 1kW ಗೆ 30,000ರೂ. 2kW ಗೆ 60,000 ರೂ. ಮತ್ತು 3kW ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯಕ್ಕೆ ಗರಿಷ್ಠ 78,000 ರೂ. ಸಬ್ಸಿಡಿ ನೀಡುತ್ತಿದೆ. ಆಸಕ್ತರು ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://pmsuryaghar.gov.in ನೋಂದಾಯಿಸಿಕೊಳ್ಳಬಹುದು ಹಾಗೂ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡಬಹುದು.

ಬೆಂಗಳೂರು ನಗರ

ದಕ್ಷಿಣ ವೃತ್ತ : 8277884011

ಪಶ್ಚಿಮ ವೃತ್ತ:8277884012

ಪೂರ್ವ ವೃತ್ತ : 8277884013

ಉತ್ತರ ವೃತ್ತ :8277884014

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version