Horoscope Today 28 December: ಇಂದು ಈ ರಾಶಿಯವರಿಗೆ ಹಿತಶತ್ರುಗಳ ಕಾಟವಿರಬಹುದು

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 28, ಭಾನುವಾರದ ದೈನಿಕ ರಾಶಿಫಲವನ್ನು ನೀಡಿದ್ದಾರೆ. ಇದು ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷದ ಅಷ್ಟಮಿ, ಉತ್ತರಾಭಾದ್ರ ಮತ್ತು ರೇವತಿ ನಕ್ಷತ್ರ ಹಾಗೂ ವರಿಯನ್ ಯೋಗವಿರುವ ದಿನವಾಗಿದೆ. ಇಂದು ಮಧ್ಯಾಹ್ನ 4:37 ರಿಂದ 6:03 ರವರೆಗೆ ರಾಹುಕಾಲವಿದ್ದು, ಮಧ್ಯಾಹ್ನ 1:46 ರಿಂದ 3:11 ರವರೆಗೆ ಶುಭ ಮತ್ತು ಸಂಕಲ್ಪ ಕಾಲವಿದೆ. ಸೂರ್ಯನು ಧನುಸ್ಸು ರಾಶಿಯಲ್ಲಿ ಮತ್ತು ಚಂದ್ರನು ಮೀನ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ.

ಡಾ. ಬಸವರಾಜ ಗುರೂಜಿ ಅವರು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ಕುಂಭ ಮತ್ತು ಮೀನ ರಾಶಿಗಳ ಪ್ರಮುಖ ಫಲಾಫಲಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ ಗ್ರಹಗಳ ಶುಭ ಫಲ, ವ್ಯವಹಾರ, ಉದ್ಯೋಗ, ಆರ್ಥಿಕ ಸ್ಥಿತಿ, ಆರೋಗ್ಯ ಮತ್ತು ಸಂಬಂಧಗಳ ಕುರಿತು ನಿರ್ದಿಷ್ಟ ಭವಿಷ್ಯವನ್ನು ನೀಡಲಾಗಿದೆ. ಉದಾಹರಣೆಗೆ, ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭ ಫಲವಿದ್ದು, ಕುಟುಂಬದಲ್ಲಿ ಪೂರ್ಣ ಸಹಕಾರ ಹಾಗೂ ಉದ್ಯೋಗದಲ್ಲಿ ಶುಭವಾಗಲಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today 28 December: ಇಂದು ಈ ರಾಶಿಯವರು ತಂತ್ರಕ್ಕೆ ಬಲಿ ಹಾಗೂ ಅತಿಯಾದ ಪ್ರಯತ್ನದಿಂದ ಗೆಲವು – Kannada News | Horoscope Today in Kannada on 28 December Sunday; Dina Bhavishya Tithi Panchanga Details here

ಮೇಷ ರಾಶಿ:

ಸ್ವಾಭಿಮಾನ ಇಂದು ನಿಮ್ಮ ಆತ್ಮರಕ್ಷಣೆಗೆ ದಾರಿ. ಶತ್ರುಕಾಟ ಇದ್ದರೂ ಮನೋಬಲ ಕುಗ್ಗಿಸಿಕೊಳ್ಳಬೇಡಿ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಮತ್ತು ಸಹಾನುಭೂತಿ. ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ಇಂದು ಕೆಲಸದಲ್ಲಿ ಯಾವುದೇ ಅನಾನುಕೂಲತೆ ಇರುವುದಿಲ್ಲ. ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು.‌ ಹಿಂದಿನ ತಪ್ಪುಗಳು ಪಾಠವಾಗುವುದು. ದೈವಾನುಗ್ರಹವನ್ನು ಪಡೆದು ಮುಂದಿನ ಹೊಸ ಕಾರ್ಯಕ್ಕೆ ಅಣಿಯಾಗಿ. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಇಂದು ತಂದೆ ಹೇಳಿದ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಅಪವಾದದಿಂದ ಸಂಘರ್ಷ ಸಾಧ್ಯ. ರಾಜಕೀಯ ವಿಷಯಗಳು ಗೊಂದಲ ತರುತ್ತವೆ. ಸ್ವಾವಲಂಬನೆಯಿಂದ ಸೋಲು ದೂರವಾಗಿ ಗೆಲುವು ಸಮೀಪಿಸುತ್ತದೆ. ಕೆಲವು ಸಮಯದಲ್ಲಿ ಪರಿಸ್ಥಿತಿ ಸಹ ಸಾಮಾನ್ಯವಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ಆರ್ಥಿಕವಾಗಿ ಉತ್ತಮ ದಿನವಾಗಿದೆ. ಹೊಸ ಪ್ರದೇಶದಿಂದ ನಿಮಗೆ ಉತ್ಸಾಹ ಬರಲಿದೆ. ಇಂದು ವಿಘಟನೆಗೆ ಆಗಲು ಅವಕಾಶವು ಕೊಡುವುದು ಬೇಡ.

ವೃಷಭ ರಾಶಿ:

ಅಪವಾದದ ಮಾತುಗಳು ಪರಿಸ್ಥಿತಿ ಕಠಿಣಗೊಳಿಸಬಹುದು. ಶತ್ರುಕಾಟದಿಂದ ಸಂಘರ್ಷ ಅವಕಾಶವಾಗಲಿದೆ. ಅಪರಿಚಿತ ವ್ಯಕ್ತಿಯಿಂದ ಅಚ್ಚರಿ ಸಹಾಯ ಸಿಗುತ್ತದೆ. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ಪರಸ್ಥಳದಲ್ಲಿ ವಾಸ ಮಾಡುವ ಸಂದರ್ಭವು ಬರಲಿಸೆ. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ಖಾಸಗಿ ಸಂಸ್ಥೆ ದೂರದೃಷ್ಟಿಯ ಯೋಜನೆಯು ಪ್ರಯೋಜನವಾದೀತು. ರಾಜಕೀಯ ಸ್ಥಿತಿಯಲ್ಲಿ ಅಸ್ಥಿರತೆ. ನಿಮ್ಮ ಸ್ವಾಭಿಮಾನ ಬಲವಾಗಿರಲಿ. ಹೊಸ ತಂತ್ರಗಳಿಂದ ಸೋಲನ್ನು ಗೆಲುವಾಗಿ ಮಾಡಬಹುದು. ಇಂದು ಅವಲಂಬನೆ ತಪ್ಪಿಸಲಾಗದು. ಬೇಗನೆ ಹಣವನ್ನು ಸಂಪಾದಿಸಲು ಅನ್ಯ ಮಾರ್ಗವನ್ನು ಹಿಡಿಯಬಹುದು. ಹೊಸ ಸಂಪರ್ಕದಿಂದ ಅದೃಷ್ಟ ಬದಲಾಗುತ್ತದೆ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹಳೆಯ ವಸ್ತುವನ್ನು ಪುನಃ ಉಪಯೋಗಿಸುವಿರಿ.

ಮಿಥುನ ರಾಶಿ:

ಇಂದಿನ ಸಂಘರ್ಷ ನಿಮ್ಮ ಸಹನೆಯನ್ನು ಪರೀಕ್ಷಿಸುತ್ತದೆ. ಶತ್ರುಕಾಟ ಇದ್ದರೂ ವರ್ತನೆಯಿಂದ ವ್ಯಕ್ತಿತ್ವ ಪರಿಚಯವಾಗಲಿದೆ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಮತ್ತು ಸಂಪರ್ಕ ಸಾಧ್ಯತೆ. ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ದೈವದ ಭೀತಿಯು ನಿಮ್ಮನ್ನು ಕಾಡಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಕೈ ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಂಡು ದೈನಂದಿನ ಕೆಲಸಗಳೂ ಕಷ್ಟವಾದೀತು. ಇಂದು ವ್ಯವಹಾರದಲ್ಲಿ, ಮಾತುಗಳು ಹೆಚ್ಚು ತೀವ್ರವಾಗಿರಲಿದ್ದು, ಅದರ ಸರಿಯಾದ ಪ್ರಯೋಜನು ವಿಳಂಬದಿಂದ ಬರುವುದು. ರಾಜಕೀಯ ಜವಾಬ್ದಾರಿ ಹೆಚ್ಚಾಗುತ್ತದೆ. ಸ್ವಾಭಿಮಾನ ಉಳಿಸಿಕೊಂಡರೆ ಸೋಲಿನ ಅನಂತರವೂ ಅಂತಿಮ ಗೆಲುವು ನಿಮ್ಮದೇ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಕಾಣಿಸಿಕೊಳ್ಳುವುದು. ಹಿರಿಯ ಅಧಿಕಾರಿಗಳ ಜೊತಡ ವೈಮನಸ್ಸು ಬರಬಹುದು. ಹಿರಿಯರ ಎದುರು ವಿನಯದಿಂದ ಮಾತನಾಡಿ.

ಕರ್ಕಾಟಕ ರಾಶಿ:

ರಾಜಕೀಯದಲ್ಲಿ ಅವಕಾಶಗಳು ನಿಮ್ಮತ್ತ ಬರುತ್ತವೆ. ಅಪರಿಚಿತ ವ್ಯಕ್ತಿಯಿಂದ ಮಾರ್ಗದರ್ಶನ ಸಿಗಬಹುದು. ಶತ್ರುಕಾಟದ ಮಾತುಗಳು ಸಂಘರ್ಷಕ್ಕೆ ಕಾರಣವಾಗಬಹುದು. ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ಮಕ್ಕಳಿಂದ ಧನಸಹಾಯದ ನಿರೀಕ್ಷೆ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಈ ದಿನ ನೀವು ಸಂತೋಷವಾಗಿರುವಿರಿ. ಆದರೆ ಅಸಭ್ಯ ವರ್ತನೆಯು ಕೆಲವರಿಂದ ಮಾತುಗಳು ಕೇಳಿಬರಬಹುದು. ಅಪವಾದದಿಂದ ದೂರವಿರಲು ಪ್ರಯತ್ನಿಸುವಿರಿ. ಸ್ವಾಭಿಮಾನ ಕಾಪಾಡಿಕೊಂಡರೆ ಸೋಲು ನಿಮ್ಮನ್ನು ಮುಟ್ಟದು. ಅತಿಯಾದ ಅವಲಂಬನೆ ಬಿಟ್ಟು ಸ್ವತಂತ್ರ ನಿರ್ಧಾರ ಕೈಗೊಳ್ಳಿ. ಕೆಲಸದ ಬಿಡುವಿಲ್ಲದಿದ್ದರೂ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸುವಿರಿ. ಇಂದು ನೀವು ಯಾವುದೇ ಒಂದು ಸರಿಯಾದ ನಿರ್ಧಾರಕ್ಕೆ ಬರಲಾಗದು. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು.

ಸಿಂಹ ರಾಶಿ :

ಶತ್ರುಕಾಟ ಇಂದು ತೀವ್ರವಾದಂತೆ ಅನುಭವಕ್ಕೆ ಬರಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭ. ಅಪವಾದದಿಂದ ಸಂಘರ್ಷ ಉಂಟಾಗುವ ಸಾಧ್ಯತೆ. ನಿಮ್ಮ ಸಂಕಟವನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನ ಪಟ್ಟುಕೊಳ್ಳುವಿರಿ. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ಈ ದಿನ ನೀವು ತಾಳ್ಮೆಯನ್ನು ಅಭ್ಯಾಸ ಮಾಡುವುದರ ಮೂಲಕ ನಿರೀಕ್ಷೆಗಿಂತ ಹೆಚ್ಚಿನದನ್ನು ಗಳಿಸಬಹುದು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು. ಈ ಕಾರಣದಿಂದಾಗಿ ಜನರಿಂದ ಟೀಕೆ ಬರುವುದು. ಇಂದು, ನೀವು ವಾಸ್ತವಕ್ಕಿಂತ ಕಾಲ್ಪನಿಕತೆಯಲ್ಲಿ ಹೆಚ್ಚು ಇರುತ್ತೀರಿ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಇದ್ದರೂ ಎಚ್ಚರ. ರಾಜಕೀಯ ವಿಚಾರಗಳು ಒತ್ತಡ ತರುತ್ತವೆ. ತಾತ್ಕಾಲಿಕ ಸೋಲಿನ ಅನಂತರ ದೃಢ ನಿಲುವಿನಿಂದ ಗೆಲುವು ಸಾಧ್ಯ. ಖರ್ಚು ಆದಾಯಕ್ಕಿಂತ ಹೆಚ್ಚಾಗುತ್ತದೆ. ದೇಶೀಯ ಸಂತೋಷ ಮತ್ತು ಆನಂದದ ಸಾಧನಗಳನ್ನು ಪ್ರದರ್ಶನಕ್ಕಾಗಿ, ಹವ್ಯಾಸಗಳಿಗಾಗಿ ಖರ್ಚು ಮಾಡಲಾಗುವುದು.

ಕನ್ಯಾ ರಾಶಿ:

ಆಕರ್ಷಣೆ ಮತ್ತು ವಿರೋಧ ಎರಡೂ ಒಂದೇ ಸಮಯದಲ್ಲಿ ಎದುರಾಗಬಹುದು. ಶತ್ರುಕಾಟದಿಂದ ಸಂಘರ್ಷ ಉಂಟಾಗುವ ಸಾಧ್ಯತೆ. ಅಪವಾದದ ಭಯ ಇದೆ. ಅಧಿಕಾರಿಗಳಿಗೆ ಬೇಕಾದುದನ್ನು ನೀಡಿ ಅವರನ್ನು ಖುಷಿಪಡಿಸುವಿರಿ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಇಂದು ನಿಮಗೆ ಸಾಮಾಜಿಕವಾಗಿ ಗೌರವವನ್ನು ಪಡೆಯುವಿರಿ. ಆದರೆ ಕೆಲವು ತಪ್ಪುಗ್ರಹಿಕೆಯಿಂದಾಗಿ ಅಸಮಾಧಾನ ಇರಲಿದೆ. ಇಂದಿನ ಉದ್ಯಮವು ನಿಮ್ಮ ಹಿಡಿತದಲ್ಲಿ ಇರುತ್ತದೆ. ಲಾಭವೂ ಹೆಚ್ಚಾಗುವುದು. ರಾಜಕೀಯ ಚರ್ಚೆಗಳಿಂದ ಒಂದು ತೀರ್ಮಾನಕ್ಕೆ ಬರುವಿರಿ. ಸ್ವಾಭಿಮಾನ ಸಮತೋಲನದಲ್ಲಿರಲಿ. ಸೋಲು, ಗೆಲವು ಎರಡರ ಅನಂತರವೂ ನ್ಯಾಯವೇ ನಿಮ್ಮ ಜಯ. ಕಾರ್ಯಕ್ಷೇತ್ರದ ಗೆಳೆಯರು ನಿಮ್ಮ ನಡವಳಿಕೆಯಿಂದ ಸಂತೋಷವಾಗಿರುತ್ತಾರೆ. ಇದರಿಂದ ಅವರು ತಮ್ಮ ಕೆಲಸವನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ಪೂರ್ಣವಾಗುವುದು. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಬಹುದು.

ತುಲಾ ರಾಶಿ:

ಸಂಘರ್ಷ ತಪ್ಪಿಸಲು ಇಂದು ಜಾಣ್ಮೆ ತೋರಿಸುವಿರಿ. ಅಪವಾದದ ಮಾತುಗಳು ಮನಸ್ಸನ್ನು ಕಾಡಬಹುದು. ಅಪರಿಚಿತ ವ್ಯಕ್ತಿಯಿಂದ ಸಹಕಾರ ಸಿಗುವ ಸೂಚನೆ. ರಾಜಕೀಯ ವಿಷಯಗಳಲ್ಲಿ ಎಚ್ಚರ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆ ಕಾಡಬಹುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಒಪ್ಪಿಸಿ ಮಾಡಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಎಲ್ಲಾ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮನಸ್ಸಿನ ನಕಾರಾತ್ಮಕ ಭಾವನೆಗಳು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡುತ್ತವೆ. ಶತ್ರುಕಾಟದ ನಡುವೆ ಲೆಕ್ಕಾಚಾರದಿಂದ ನಡೆದು ಸೋಲು ತಪ್ಪಿಸಬಹುದು. ಸ್ವಾಭಿಮಾನ ಕಾಪಾಡಿ, ಅವಲಂಬನೆ ಕಡಿಮೆ ಮಾಡಿರಿ. ಮನೆಯವರ ಸಮಸ್ಯೆ ಬಗೆಹರಿಯಲಿದ್ದು, ಮುಖಂಡರ ಸಹಾಯವನ್ನೂ ಪಡೆಯಬೇಕಾಗುವುದು. ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಕೋಪವನ್ನು ನಿಯಂತ್ರಿಸಿ.

ವೃಶ್ಚಿಕ ರಾಶಿ :

ಸ್ವಾಭಿಮಾನ ಇಂದು ಪ್ರಮುಖ ಪಾತ್ರ ವಹಿಸುತ್ತದೆ. ಶತ್ರುಕಾಟ ಎದುರಾದರೂ ನಿಮ್ಮ ಪ್ರಭಾವ ಕಡಿಮೆಯಾಗದು. ರಾಜಕೀಯ ವಿಚಾರಗಳು ಚರ್ಚೆಗೆ ಬರುತ್ತವೆ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಬರಲಿದೆ. ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ಸ್ವಯಂಕೃತ ಅಪರಾಧಗಳಿಂದ ಕಿಂಚಿತ್ತೂ ಬೇಸರವಾಗದು. ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ದೈಹಿಕ ದೋಷಗಳನ್ನು ಸಕಾರಾತ್ಮಕವಾಗಿ ಎದುರಿಸುವಿರಿ. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸಕ್ಕೆ ಕಷ್ಟವಾಗುವುದು. ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು. ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಚಿತ್ರಣವನ್ನು ಬದಲಿಸುವಿರಿ. ಅಪವಾದದಿಂದ ಸಂಘರ್ಷ ಸಾಧ್ಯ. ಸೋಲು ಕಂಡರೂ ನಾಯಕತ್ವದಿಂದ ಮತ್ತೆ ಗೆಲುವು ನಿಮ್ಮದಾಗುತ್ತದೆ. ಹಣವು ಒಮ್ಮೆ ಕೈಗೆ ಬಂದರೆ, ಸಾಹಸಕಾರ್ಯಗಳಲ್ಲಿ ತೊಡಗುವಿರಿ. ಸ್ವಲ್ಪ ಕುಟುಂಬದ ಸಮಸ್ಯೆಗಳಿಂದಾಗಿ, ಮನಸ್ಸು ಚಂಚಲವಾಗಿರುತ್ತದೆ.

ಧನು ರಾಶಿ :

ಇಂದು ಅವಲಂಬನೆ ನಿಮ್ಮ ದುರ್ಬಲತೆಯಾಗಲಿದೆ. ಶತ್ರುಕಾಟ ಗುಪ್ತವಾಗಿ ನಡೆಯುತ್ತದೆ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಇದ್ದರೂ ನಂಬಿಕೆಗೆ ಪರೀಕ್ಷಿಸುವಿರಿ. ಅಪವಾದದ ಮೂಲಕ ಸಂಘರ್ಷ ಸಾಧ್ಯ. ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ. ನಷ್ಟದ ಪ್ರಮಾಣಗಳು ಅಧಿಕವಾಗಬಹುದು. ಮರೆವಿನಿಂದ ನಿಮ್ಮ ವಸ್ತುಗಳು ಕಷ್ಟವಾಗಬಹುದು. ಅಪರಿಚಿತರ ವ್ಯವಹಾರವನ್ನು ಕಡಿಮೆ ಮಾಡಿ. ಅಧಿಕಾರಿ ವರ್ಗದವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ರಾಜಕೀಯ ಮಾತುಗಳಿಂದ ದೂರವಿರುವುದು ಒಳಿತು. ಸ್ವಾಭಿಮಾನ ಕಾಯ್ದುಕೊಂಡರೆ ಸೋಲನ್ನು ಗೆಲುವಾಗಿ ಮಾಡಬಹುದು. ಲೇಖನ ಸಾಮಗ್ರಿಗಳು ಅಥವಾ ಮುದ್ರಣ ಕೆಲಸಕ್ಕೆ ಸಂಬಂಧಿಸಿದ ಜನರು ಹೊಸ ಉದ್ಯೋಗಗಳನ್ನು ಪಡೆಯುವರು.

ಮಕರ ರಾಶಿ :

ಸೋಲು, ಗೆಲವು ಒಂದೇ ದಿನ ಕಂಡುಬರುವ ಸೂಚನೆ. ಅಪರಿಚಿತ ವ್ಯಕ್ತಿಯಿಂದ ಸಹಾಯ ಸಿಗಬಹುದು. ಶತ್ರುಕಾಟದ ಮಾತುಗಳು ಸಂಘರ್ಷ ಹುಟ್ಟುಹಾಕಬಹುದು. ಅಪವಾದದಿಂದ ಹೆಸರು ಹಾನಿಯಾಗುವ ಸಾಧ್ಯತೆ. ಮಾನಸಿಕ ಅಸಮತೋಲನದಿಂದ ಎಲ್ಲ ಕಾರ್ಯವೂ ಅಸ್ತವ್ಯಸ್ತ ಆಗಬಹುದು. ಸ್ನೇಹಿತರಿಂದ ಸಹಾಯದ ನಿರೀಕ್ಷೆ ಇದ್ದು, ಹುಸಿಯಾಗುವುದು. ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ನಾನಾ ಪ್ರಕಾರದ ಖರ್ಚುಗಳಿಂದ ಇಂದಿನ ದಿನದ ಸಮಯವು ದುಬಾರಿ ಎನಿಸಬಹುದು. ನಿಮ್ಮ ಲಾಭಕ್ಕೆ ಪೂರಕವಾದ ಅವಕಾಶಗಳು ಸಿಗುತ್ತವೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಬೇಡ. ರಾಜಕೀಯ ವಿಷಯಗಳಲ್ಲಿ ತಟಸ್ಥವೇ ಇಂದು ಉತ್ತಮ. ಸ್ವಾಭಿಮಾನ ಉಳಿಸಿಕೊಂಡರೆ ಪರಿಸ್ಥಿತಿ ನಿಮ್ಮತ್ತ ತಿರುಗುತ್ತದೆ. ಸಹೋದರಿಯರು ಮತ್ತು ಸಂಗಾತಿಯ ಬೆಂಬಲ ಪಡೆಯುವಿರಿ. ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಲು ಅವಕಾಶ ಬರುವುದು.

ಕುಂಭ ರಾಶಿ :

ಆಕರ್ಷಣೆಯಿಂದ ಹೊಸ ಪರಿಚಯ ಆರಂಭವಾಗಬಹುದು. ಅಪವಾದದಿಂದ ಮನಸ್ತಾಪ ಸಾಧ್ಯ. ಶತ್ರುಕಾಟ ಹೆಚ್ಚಾದರೂ ರಾಜಕೀಯ ಚಟುವಟಿಕೆಯಲ್ಲಿ ಎಚ್ಚರ ಅಗತ್ಯ. ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಆರೋಗ್ಯವು ಸಾಮಾನ್ಯವಾಗಿ ಇರಲಿದೆ. ಇಂದು ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ಹಣ ಗಳಿಸುವ ಬಯಕೆ ಅಪೂರ್ಣವಾಗಬಹುದು. ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅನಂತರವೂ ಕೆಲಸ ತಡವಾಗಿ ಪೂರ್ಣಗೊಳ್ಳುತ್ತದೆ. ಸಂಘರ್ಷ ತಪ್ಪಿಸಲು ಮಿತವಾದ ಸಂಭಾಷಣೆ ಮುಖ್ಯ. ಸ್ವಾಭಿಮಾನ ಕಾಯ್ದುಕೊಂಡರೆ ತಾತ್ಕಾಲಿಕ ಸೋಲಿನ ಬಳಿಕ ಗೆಲುವು ಸಾಧ್ಯ. ಅನವಶ್ಯಕ ಅವಲಂಬನೆ ಕಡಿಮೆ ಮಾಡಿರಿ. ಹೊಸ ಸಂಬಂಧದ ಮೂಲಕ ಅದೃಷ್ಟ ಬರಬಹುದು. ಸಾಮಾಜಿಕ ಕಾರ್ಯಕ್ಕೆ ಗೌರವ ನಿಮ್ಮನ್ನು ಅರಸಿ ಬರಲಿದೆ. ಮನೆಯವರು ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು.

ಮೀನ ರಾಶಿ :

ಇಂದು ಶತ್ರುಕಾಟ ಸ್ಪಷ್ಟವಾಗಿ ಗೊತ್ತಾಗಬಹುದು. ಸ್ವಾಭಿಮಾನಕ್ಕೆ ಸವಾಲು ಬಂದರೂ ಹಿಂದೆ ಸರಿಯಬೇಡಿ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಉಂಟಾಗುತ್ತದೆ. ರಾಜಕೀಯ ವಿಚಾರಗಳು ಸಂಘರ್ಷಕ್ಕೆ ಕಾರಣವಾಗಬಹುದು. ನಿಮಗೆ ಹಿರಿಯರ ಆಸೆಯನ್ನು ಪೂರೈಸಿದ ಸಂತೃಪ್ತಿ ಇರುವುದು. ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು.‌ ತಂದೆಯಿಂದ ಮಾನಸಿಕವಾಗಿ ನೋವಾಗಲಿದೆ. ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಇಂದು ಉತ್ತಮವಾಗಿದೆ.‌ ಅಪವಾದದ ಭಯ ಇದೆ. ಸೋಲು, ಗೆಲವು ಎರಡೂ ಅನುಭವಿಸಿ ಕೊನೆಗೆ ಧೈರ್ಯವೇ ಜಯ ತರುತ್ತದೆ. ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಂಪತ್ತಿನ ಮೂಲವು ಹೆಚ್ಚಾಗುತ್ತವೆ. ಸಾಮಾಜಿಕ ಚಟುವಟಿಕೆಗಳಿಗೆ ಸಮಯವನ್ನು ಕೊಡಲಾಗದೇ ಜನರು ನಿಮ್ಮಿಂದ ದೂರವಿರಬಹುದು.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಭಾನುವಾರ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಭ, ಕರಣ : ಬವ, ಸೂರ್ಯೋದಯ – 06 – 48 am, ಸೂರ್ಯಾಸ್ತ – 06 – 03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:39 – 18:04, ಯಮಗಂಡ ಕಾಲ 12:26 – 13:50, ಗುಳಿಕ ಕಾಲ 15:15 – 16:39

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಪರ್ಸನಾಲಿಟಿ ಡೆವಲಪ್ ಮೆಂಟ್ ಸೆಷನ್ ಗಳಲ್ಲಿ ಭಾಗವಹಿಸುವ ನಿರ್ಧಾರ ಮಾಡುತ್ತೀರಿ. ನಿಮ್ಮ ಉದ್ಯೋಗ- ವೃತ್ತಿ ಜೀವನದಲ್ಲಿನ ಬದಲಾವಣೆಗಳು ನಿಧಾನವಾದರೂ ಸ್ಥಿರವಾಗಿ ಆಗಲಿದೆ. ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿನ ತಾಕಲಾಟಗಳಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗಲಿದೆ. ಹಳೆಯ ವಿಚಾರಗಳು ಮತ್ತೆ ನೆನಪಾಗಲಿವೆ, ಆದರೆ ಅವುಗಳಿಂದ ಪಾಠ ಕಲಿಯುವ ಸಮಯ ಇದು. ಕೆಲಸದ ವಿಷಯದಲ್ಲಿ ಅತಿಯಾದ ಆತುರ ಬೇಡ; ತಾಳ್ಮೆ ಮತ್ತು ಕ್ರಮಬದ್ಧ ಪ್ರಯತ್ನದಿಂದ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ. ಕುಟುಂಬದ ಒಳಗೆ ಖರ್ಚಿನ ವಿಚಾರದಲ್ಲಿ ಸಣ್ಣ- ಪುಟ್ಟ ಮಾತುಕತೆಗಳು ಆದರೂ ಸಂಯಮದಿಂದ ವರ್ತಿಸಿದರೆ ಸಮಸ್ಯೆಗಳು ಪರಿಹಾರ ಆಗುತ್ತವೆ. ಆರ್ಥಿಕವಾಗಿ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೇ ಈ ದಿನ ನಿಮ್ಮ ಶಕ್ತಿಯಾಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕುಟುಂಬದೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ಇದೆ. ನಿಮ್ಮ ಆಲೋಚನೆಗಳು ಹೆಚ್ಚು ಗಹನವಾಗಿ ಇರುತ್ತವೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎರಡು ಬಾರಿ ಯೋಚಿಸುವ ನಿಮ್ಮ ಗುಣ ನಿಮಗೆ ಲಾಭ ತರುತ್ತದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಗಮನಿಸಿ, ಪ್ರಮುಖ ಜವಾಬ್ದಾರಿ ವಹಿಸುವಂಥ ಸೂಚನೆ ಸಿಗಲಿದೆ. ಆದರೆ ನಿಮ್ಮ ಎದುರಿಗೆ ಪ್ರಶಂಸೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮೈ ಮರೆಯಬೇಡಿ. ಕಾಲು ನೆಲದ ಮೇಲೆ ಇರಲಿ. ಪ್ರಮುಖವಾದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಕುಟುಂಬದ ಹಿರಿಯರ ನೀಡುವಂಥ ಸಲಹೆ ಮಹತ್ವದ ದಾರಿ ದೀಪ ಆಗುತ್ತದೆ. ಹಣಕಾಸಿನ ವಿಷಯದಲ್ಲಿ ಅಗತ್ಯವಿಲ್ಲದ ಖರ್ಚು ತಪ್ಪಿಸುವುದು ಒಳಿತು. ಭುಜದ ನೋವು, ಬೆನ್ನಿನ ನೋವು ಇರುವಂಥವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ವಿಶ್ರಾಂತಿ ಅಗತ್ಯ ಇದೆ ಎನಿಸಿದಾಗ ಪಡೆದುಕೊಳ್ಳಿ. ನಿಮ್ಮ ಸಹನೆ ಮತ್ತು ಶಾಂತ ಸ್ವಭಾವ ಸಂತೋಷ ಹಾಗೂ ಯಶಸ್ಸಿನ ದಾರಿ ಮಾಡಿಕೊಡುತ್ತವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮ ಒಳಗಿನ ಆತ್ಮವಿಶ್ವಾಸ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ. ಈ ಹಿಂದೆ ನಿಮಗೆ ಅಸಾಧ್ಯ ಎಂದು ಕಂಡಿದ್ದ ಕೆಲಸ- ಕಾರ್ಯಗಳು ಈಗ ಸಲೀಸಾಗಿ ಮಾಡಿ ಮುಗಿಸುವಂಥ ವಿಶ್ವಾಸ ಮೂಡಲಿದೆ. ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ ಇಂಥವುಗಳಿಗೆ ನಿಮ್ಮಲ್ಲಿ ಕೆಲವರಿಗೆ ಆಹ್ವಾನ ಬರಲಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಜವಾಬ್ದಾರಿಗಳು ಹುಡುಕಿಬರುವ ಸೂಚನೆ ಸಿಗಲಿದೆ. ಅವುಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಸ್ವೀಕರಿಸಿದರೆ ಉತ್ತಮ ಫಲ ಸಿಗುತ್ತದೆ. ಕುಟುಂಬದಲ್ಲಿ ಸಣ್ಣಮಟ್ಟದ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಆದರೆ ನಿಮ್ಮ ಸಮಯೋಚಿತ ಮಾತಿನ ಮೂಲಕವೇ ಸಮಸ್ಯೆಗೆ ಪರಿಹಾರ ನೀಡುತ್ತೀರಿ. ಹಣಕಾಸಿನ ವಿಷಯದಲ್ಲಿ ಆಮೇಲೆ ಮಾಡಿದರಾಯಿತು ಎಂಬ ಧೋರಣೆ ಬೇಡ. ಹಳೆಯ ಬಾಕಿ ಹಣ ವಾಪಸ್ ಬರುವ ಸೂಚನೆ ಇದೆ, ಆ ಕಡೆ ಪ್ರಯತ್ನ ಪಡುವುದು ಮುಖ್ಯ. ಕಣ್ಣಿನ ಆರೋಗ್ಯದ ಕಡೆ ಗಮನ ಇರಲಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಮಾಡುತ್ತಿರುವ ಪ್ರಯತ್ನ ಹಾಗೂ ಹಾಕುತ್ತಿರುವ ಶ್ರಮಕ್ಕೆ ಪ್ರತಿಫಲವು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಆದರೆ ದೀರ್ಘಾವಧಿಗೆ ಇದು ನಿಮ್ಮ ಕೈ ಹಿಡಿಯಲಿದೆ. ನಿಮ್ಮ ಸಾಧನೆಯನ್ನು ಬಾಯಿ ಬಿಟ್ಟು ಹೇಳುವ ಅಗತ್ಯ ಇಲ್ಲದಂತೆ ಸಂಬಂಧಪಟ್ಟವರ ಗಮನಕ್ಕೆ ಬರಲಿದೆ. ಒಂದು ಕೆಲಸಕ್ಕೆ ಇತರರ ಮೇಲೆ ಅವಲಂಬಿತರಾಗುವ ಮೊದಲಿಗೆ ನಿಮ್ಮ ಮನಸ್ಸು ಹೇಳುವ ಮಾತನ್ನು ಸಹ ಕೇಳಿಸಿಕೊಳ್ಳಿ. ಹಣ ಬರುವುದೊಂದೇ ಕೆಲಸದಲ್ಲಿ ಸಿಗುವ ತೃಪ್ತಿ ಅಲ್ಲ ಎಂಬುದು ಈ ದಿನ ಹಲವು ಸಲ ನಿಮಗೆ ಅನಿಸುತ್ತದೆ. ಅದೇ ವೇಳೆ, ಅದರಾಚೆಗೆ ಬೇರೆ ಏನೋ ಇದೆ ಎಂಬ ಹುಡುಕಾಟ ಹೊಸ ಎತ್ತರಕ್ಕೆ ಏರುವುದಕ್ಕೆ ಸ್ಫೂರ್ತಿ ಆಗಲಿದೆ. ಅನುಭವದಿಂದ ನೀವು ಕಲಿತ ಪಾಠವನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿ. ಅತ್ಯುತ್ಸಾಹದಲ್ಲಿ ಈ ಹಿಂದೆ ಯಾವಾಗಲೋ ನೀಡಿದ್ದ ಮಾತನ್ನು ಈಡೇರಿಸವುದಕ್ಕೆ ಬಹಳ ಶ್ರಮ ಹಾಕುವಂತೆ ಆಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ಆತ್ಮವಿಶ್ವಾಸ ಇರುವಂಥ ಕೆಲಸ- ಕಾರ್ಯ ಮಾಡುವುದಕ್ಕೂ ಒಂದು ಬಗೆಯ ಹಿಂಜರಿಕೆ ಕಾಡಲಿದೆ. ಯಾವುದಕ್ಕೂ ಇರಲಿ ಸ್ನೇಹಿತರ ಸಲಹೆಯನ್ನು ಕೇಳೋಣ ಎಂಬ ಪರಿಸ್ಥಿತಿ ಉದ್ಭವಿಸುತ್ತದೆ. ‘ನನ್ನಿಂದ ಆದ ಸಹಾಯವನ್ನು ನಿಮಗೆ ಮಾಡಲಾ?’ ಎಂಬ ಪ್ರಶ್ನೆಯನ್ನು ಯಾರಿಗೇ ಕೇಳಬೇಕಾದರೂ ಸಾವಿರ ಬಾರಿ ಆಲೋಚಿಸುವುದು ಒಳ್ಳೆಯದು. ಏಕೆಂದರೆ ಇದೊಂದು ಮಾತು ನಿಮ್ಮ ಇಡೀ ದಿನದ ಸಮಯವನ್ನು ತೆಗೆದುಕೊಂಡು ಬಿಡಬಹುದು. ಸಂಬಂಧಗಳ ವಿಚಾರ ಬಂದಾಗ ಮೌನವಾಗಿ ಇದ್ದುಬಿಡುವುದೇ ಪರಿಹಾರ ಎಂದು ನೀವೇನಾದರೂ ಭಾವಿಸಿದ್ದಲ್ಲಿ ದೀರ್ಘಾವಧಿ ಸಮಸ್ಯೆಗಳನ್ನು ಅನುಭವಿಸುತ್ತೀರಿ. ವಿವಾಹ ವಯಸ್ಸಿನ ಮಕ್ಕಳಿದ್ದು, ಅವರ ಮದುವೆಗೆ ಪ್ರಯತ್ನ ಮಾಡುತ್ತಾ ಇದ್ದೀರಿ ಎಂದಾದಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಬಂಧದ ರೆಫರೆನ್ಸ್ ಸ್ನೇಹಿತರ ಮೂಲಕ ಬರಲಿದೆ. ಪ್ರಯಾಣ ಮಾಡುವಂಥವರು ನೀರು- ಆಹಾರದ ಸೇವನೆ ಮೇಲೆ ಸರಿಯಾದ ಗಮನವನ್ನು ನೀಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನೀವು ಕೊಟ್ಟಿದ್ದೇನು ಹಾಗೂ ನಿಮಗೆ ಸಿಕ್ಕಿದ್ದೇನು ಎಂಬ ವಿಚಾರವೇ ಬಹುವಾಗಿ ಕಾಡುತ್ತದೆ. ಇದು ಇನ್ನು ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬ ವಿಚಾರದಲ್ಲಿ ಅಳತೆಗೋಲಿನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಿನಿಮಾ, ರೆಸ್ಟೋರೆಂಟ್, ರೆಸಾರ್ಟ್ ಇಂಥ ಕಡೆಗೆ ಕುಟುಂಬದ ಜೊತೆಗೆ ತೆರಳುವಂಥ ಯೋಗ ಇದೆ. ಫ್ಯಾಷನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಏರಿಕೆ ಆಗುವ ಕೆಲವು ಆಫರ್ ಗಳು ಹುಡುಕಿಕೊಂಡು ಬರಲಿವೆ. ಇನ್ನು ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸ್ನೇಹಿತರು ಅಥವಾ ಸಂಬಂಧಿಗಳಿಂದ ಬಹಳ ಮುಖ್ಯವಾದ ಮಾಹಿತಿ ದೊರೆಯಲಿದ್ದು, ಅದರಿಂದ ಅನುಕೂಲ ಆಗಲಿದೆ. ಆಹಾರ ಪಥ್ಯದಲ್ಲಿ ಜಾಗ್ರತೆಯಿಂದ ಇರಬೇಕು. ವೈದ್ಯರು ಸೂಚಿಸಿದಂಥ ಆಹಾರ ಕ್ರಮವನ್ನು ಕಡ್ಡಾಯವಾಗಿ ಅನುಸರಿಸಿ. ಕ್ರೆಡಿಟ್ ಕಾರ್ಡ್ ಬಳಸಿ ಖರ್ಚು ಮಾಡುತ್ತಾ ಇದ್ದೀರಿ ಅಂತಾದಲ್ಲಿ ಅಗತ್ಯದಷ್ಟು ಮಾತ್ರ ಖರೀದಿ ಮಾಡಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಯಾವುದು ನಿಮಗೆ ಒತ್ತಡ ಹಾಗೂ ಯಾವುದು ನಿಮ್ಮ ಪರವಾಗಿ ಇರುವ ಸನ್ನಿವೇಶ ಎಂಬುದನ್ನು ನಿರ್ಧರಿಸುವುದಕ್ಕೆ ಸಾಧ್ಯ ಆಗುವುದಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಬಹಳ ಮುಖ್ಯ. ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಆಗಿದೆ ಎಂಬ ಕಾರಣಕ್ಕೆ ಆಲೋಚನೆಯಲ್ಲಿ- ನಿರ್ಧಾರದಲ್ಲಿಯೂ ನಿಮಗೆ ಅನುಕೂಲ ಆಗುವಂತೆ ನಡೆದುಕೊಂಡಲ್ಲಿ ದೀರ್ಘಾವಧಿಗೆ ಪರಿಣಾಮ ಬೀರುತ್ತದೆ ಎಂಬುದು ನೆನಪಿನಲ್ಲಿ ಇರಲಿ. ಮಕ್ಕಳ ಶಿಕ್ಷಣಕ್ಕೆ ಬೇಕಾದ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧತೆಯನ್ನು ಆರಂಭಿಸುತ್ತೀರಿ. ಆದಾಯಕ್ಕೆ ಬೇಕಾದಂಥ ಮೂಲಗಳನ್ನು ಮಾಡಿಕೊಳ್ಳಲು ಪ್ರಯತ್ನ ಮಾಡಲಿದ್ದೀರಿ. ಮನೆದೇವರ ಪೂಜೆ, ಉತ್ಸವ, ಜಾತ್ರೆ ಇಂಥವುಗಳಿಗೆ ದೇಣಿಗೆಯನ್ನು ನೀಡುವಂಥ ಯೋಗ ನಿಮ್ಮ ಪಾಲಿಗೆ ಒದಗಿ ಬರಲಿದೆ. ಇನ್ನು ಯಾಕೆ, ಏನು ಮತ್ತು ಎಲ್ಲಿ ಈ ರೀತಿ ಪ್ರಶ್ನೆಗಳನ್ನು ಕೇಳದೆ ಯಾವುದೇ ಕೆಲಸ- ಕಾರ್ಯವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮ ವಿಶ್ಲೇಷಣೆ, ಯಾವುದೇ ವಿಷಯವನ್ನು ಆಳಕ್ಕೆ ಹೋಗಿ ನೋಡುವ ರೀತಿ ಒಳ್ಳೆ ರಿಟರ್ನ್ಸ್ ನೀಡಲಿದೆ. ನಿಮಗೇ ಕಿರಿಕಿರಿ ಆಗುವಂಥ ಸನ್ನಿವೇಶ ಸಹ ನಿಭಾಯಿಸುವ ರೀತಿಯಲ್ಲಿ ಯಶಸ್ಸು ಪಡೆದುಕೊಳ್ಳುತ್ತೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರು ಹೊಸದರ ಕಡೆಗೆ ಹೊರಳುವಂಥ ಯೋಗ ಇದೆ. ಹೂಡಿಕೆಯಲ್ಲಿ ಸ್ವಲ್ಪ ಭಾಗವನ್ನು ಹಿಂತೆಗೆದುಕೊಂಡು ಕೆಲವು ಪ್ರಯೋಗ ಮಾಡಲು ಮನಸ್ಸು ಮಾಡಲಿದ್ದೀರಿ. ಅದರಲ್ಲೂ ಹೋಟೆಲ್, ಹೋಮ್ ಸ್ಟೇ, ಸರ್ವೀಸ್ ಅಪಾರ್ಟ್ ಮೆಂಟ್ ಇಂಥವುಗಳನ್ನು ಮಾಡುತ್ತಾ ಇರುವವರಿಗೆ ಪ್ರಮುಖವಾದ ತೀರ್ಮಾನವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ವಹಿಸ ಬೇಕೆಂದಿದ್ದ ಕೆಲಸವೊಂದನ್ನು ಕೊನೆ ಕ್ಷಣದಲ್ಲಿ ಬೇರೆಯವರು ಪಡೆದುಕೊಂಡರು ಎಂಬ ಮಾಹಿತಿ ನಿಮ್ಮ ಕಿವಿಗೆ ಬೀಳಲಿದ್ದು, ಇಂಥವುಗಳಿಗೆ ಹೆಚ್ಚು ರಿಯಾಕ್ಟ್ ಮಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಸಂಗೀತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಆದಾಯ ದೊಡ್ಡ ಮಟ್ಟದಲ್ಲಿ ಹೆಚ್ಚಳ ಆಗುವುದಕ್ಕೆ ದಾರಿ ತೆರೆದುಕೊಳ್ಳುತ್ತದೆ. ಮದುವೆಗಾಗಿ ಪ್ರಯತ್ನ ಮಾಡುತ್ತಾ ಇರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ಹುಡುಕಿಕೊಂಡು ಬರಲಿದೆ. ಮಕ್ಕಳ ಮೇಲೆ ಈ ದಿನ ಸಿಟ್ಟು ಮಾಡಿಕೊಳ್ಳಬೇಡಿ. ಸಾಧ್ಯವಾದಷ್ಟು ಪ್ರೀತಿಯ ಮಾತಿನಿಂದಲೇ ಅವರಿಗೆ ಅರ್ಥ ಮಾಡಿಸುವುದಕ್ಕೆ ಪ್ರಯತ್ನಿಸಿ. ಕೃಷಿಕರು ಜಮೀನಿನಲ್ಲಿ ತಂತಿ- ಬೇಲಿ ಹಾಕಿಸುವುದು, ಬೋರ್ ವೆಲ್ ಕೊರೆಸುವುದು ಇಂಥ ಕೆಲವು ಕೆಲಸ- ಕಾರ್ಯ ಮಾಡಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ಸಾಲ ಪಡೆದುಕೊಳ್ಳುವ ಆಲೋಚನೆ ಸಹ ಬರಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಉದ್ಯೋಗದ ಆಫರ್ ಹುಡುಕಿಕೊಂಡು ಬರಲಿದೆ. ಅದನ್ನು ಒಪ್ಪಿಕೊಳ್ಳಬೇಕಾ ಬೇಡವಾ ಎಂಬ ವಿಚಾರಕ್ಕೆ ಸ್ವಲ್ಪ ಮಟ್ಟಿಗೆ ಗೊಂದಲ ಏರ್ಪಡಲಿದೆ.

ಲೇಖನ- ಎನ್‌.ಕೆ.ಸ್ವಾತಿ

Source link

IND-W vs SL-W: ಭಾರತ- ಲಂಕಾ ನಡುವಿನ 4ನೇ ಟಿ20 ಪಂದ್ಯ ಎಲ್ಲಿ ಯಾವಾಗ ಎಷ್ಟು ಗಂಟೆಗೆ ಆರಂಭ? – Kannada News | India vs Sri Lanka Women 4th T20: Date, Time, Venue and How to Watch

ಭಾರತ ಹಾಗೂ ಶ್ರೀಲಂಕಾ (India Women vs Sri Lanka Women) ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ. ಮುಂದಿನ ವರ್ಷ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ ದೃಷ್ಟಿಯಿಂದ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಹರ್ಮನ್​ ಪಡೆ ನಿರೀಕ್ಷಿತ ಪ್ರದರ್ಶನ ನೀಡಿ ಸರಣಿಯನ್ನು ವಶಪಡಿಸಿಕೊಂಡಿದೆ. ಈಗಾಗಲೇ ಆಡಿರುವ ಮೊದಲ ಮೂರು ಪಂದ್ಯಗಳಲ್ಲಿ ಮೂರನ್ನೂ ತಂಡ ಗೆದ್ದಿದೆ. ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಆ ನಂತರ ತಿರುವನಂತಪುರದಲ್ಲಿ ನಡೆದ ಮೂರನೇ ಪಂದ್ಯವನ್ನು ಭಾರತೀಯ ಮಹಿಳಾ ತಂಡ 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದೀಗ 4ನೇ ಪಂದ್ಯದ ಮೇಲೂ ಹರ್ಮನ್​ ಪಡೆ ಕಣ್ಣಿಟ್ಟಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯ ಡಿಸೆಂಬರ್ 28 ರ ಭಾನುವಾರ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯ ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ನೋಡಬಹುದು?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ವೀಕ್ಷಿಸಬಹುದು?

ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಸಿ ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ತಂಡ: ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್, ಶ್ರೀ ಚರಣಿ, ಜಿ ಕಮಲಿನಿ, ಹರ್ಲೀನ್ ಡಿಯೋಲ್, ಅರುಂಧಾ ರೆಡ್ಡಿ, ಸ್ನೇಹ್ ರೆಡ್ಡಿ.

ಶ್ರೀಲಂಕಾ ತಂಡ: ಚಾಮರಿ ಅಟಪಟ್ಟು (ನಾಯಕಿ), ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಕೌಶಿನಿ ನುತ್ಯಾಂಗನಾ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಶಶಿನಿ ಗಿಮ್ಹಾನಿ, ನಿಮೇಶ್ ಮದುಶಾನಿ, ಕಾವ್ಯಾ ಕವಿಂದಿ, ರಶ್ಮಿಕಾ ಸೆವ್ವಂದಿ, ಮಾಲ್ಕಿ ಮಾದರ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಸುಳ್ಳು ಧರ್ಮನಿಂದನೆ ಆರೋಪಗಳು; 6 ತಿಂಗಳಲ್ಲಿ 71 ಹಲ್ಲೆ ಘಟನೆಗಳು – Kannada News | Bangladesh, 71 attacks on Hindus in 6 months, Malaysian MPs condemn violence against minorities

ಢಾಕಾ, ಡಿಸೆಂಬರ್ 27: ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ (Bangladesh) ಅಲ್ಪಸಂಖ್ಯಾತರ ಮೇಲೆ ದಾಳಿಯಾಗುವುದು (Attack on minorities) ತೀರಾ ಸಾಮಾನ್ಯವಾಗಿ ಹೋಗಿದೆ. ಆ ದೇಶದ ಅಲ್ಪಸಂಖ್ಯಾತ ಮಾನವ ಹಕ್ಕು ಸಂಸ್ಥೆಯಾದ ಎಚ್​ಆರ್​ಸಿಬಿಎಂ (HRCBM) ಪ್ರಕಾರ, ಕಳೆದ ವರ್ಷದ ಡಿಸೆಂಬರ್​ನಿಂದ ಈ ವರ್ಷದ ಜೂನ್​ವರೆಗೆ ಆರು ತಿಂಗಳಲ್ಲಿ ಧರ್ಮನಿಂದನೆ ಆರೋಪದ ಮೇಲೆ ಹಿಂದೂಗಳ ಮೇಲೆ ಹಲ್ಲೆಯಾಗಿರುವ 71ಕ್ಕೂ ಹೆಚ್ಚು ಘಟನೆಗಳು ಸಂಭವಿಸಿವೆಯಂತೆ.

ಬಾಂಗ್ಲಾದೇಶದ ವಿವಿಧ ಪ್ರದೇಶಗಳಲ್ಲಿರುವ ರಂಗಪುರ್, ಚಾಂದಪುರ್, ಚತ್ತೋಡಗ್ರಾಮ್, ದಿನಾಜ್​ಪುರ್, ಲಾಲ್ಮೋನಿರ್ಹತ್, ಸುನಾಮ್​ಗಂಜ್, ಖುಲ್ನಾ, ಕಾಮಿಲ್ಲಾ, ಗಾಜಿಪುರ್, ತಾಂಗೇಲ್, ಸೈಲತ್ ಸೇರಿದಂತೆ 30ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಆಧರಿಸಿ ಈ ವರದಿಯು ಅಂಕಿ ಅಂಶ ನೀಡಿದೆ. ಗಮನಾರ್ಹ ಅಂಶ ಎಂದರೆ ಅಲ್ಲೋ ಇಲ್ಲೋ ಕೆಲವೇ ಕಡೆ ಮಾತ್ರ ಇಂಥ ಘಟನೆಗಳು ನಡೆದಿಲ್ಲ. ಬದಲಾಗಿ, ಬಾಂಗ್ಲಾದೇಶದ ಹೆಚ್ಚಿನ ಪ್ರದೇಶಗಳಲ್ಲಿ, ಮತ್ತು ಬಾರಿ ಬಾರಿ ಈ ಹಲ್ಲೆ ಘಟನೆಗಳು ಸಂಭವಿಸಿವೆ. ಇದನ್ನು ಗಮನಿಸಿದಾಗ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆಯ ಸ್ಥಿತಿ ಇರುವುದು ಕಾಣುತ್ತದೆ ಎಂಬುದು ಮಾನವ ಹಕ್ಕುಗಳ ಈ ವರದಿಯು ಹೇಳುತ್ತದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ದುರುಳರ ಹಿಂಸಾಚಾರಕ್ಕೆ 29 ವರ್ಷದ ಸಾಮ್ರಾಟ್ ಬಲಿ

ಇತ್ತೀಚೆಗೆ ದೀಪ್ ಚಂದ್ರ ದಾಸ್ ಎಂಬ ಹಿಂದೂ ವ್ಯಕ್ತಿಯನ್ನು ಧರ್ಮನಿಂದನೆ (Blasphemy charges) ಆರೋಪದ ಮೇಲೆ ಹಲ್ಲೆ ಮಾಡಿ ಸಜೀವವಾಗಿ ಸುಟ್ಟುಹಾಕಿದ್ದರು. ಆದರೆ, ದೀಪು ಚಂದ್ರ ದಾಸ್ ಯಾವುದೇ ಧರ್ಮನಿಂದನೆ ಮಾಡಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಮಾನವ ಹಕ್ಕು ಆಯೋಗದ ವರದಿ ಕೂಡ ಅದು ತಿಳಿಸಿದ 71 ಪ್ರಕರಣಗಳಲ್ಲಿ ಹೆಚ್ಚಿನವುಗಳು ಸುಳ್ಳು ಆರೋಪವೇ ಆಗಿವೆ ಎಂದಿದೆ.

ಬಾಂಗ್ಲಾದೇಶೀ ಹಿಂದೂಗಳಿಗೆ ಮಲೇಷ್ಯನ್ ಸಂಸದರ ಬೆಂಬಲ

ದೀಪುಚಂದ್ರ ದಾಸ್​ನನ್ನು ಸಜೀವವಾಗಿ ಸುಟ್ಟುಹಾಕಿದ ಪ್ರಕರಣವು ಮಲೇಷ್ಯಾ ಸಂಸತ್​ನಲ್ಲಿ ಸದ್ದು ಮಾಡಿದೆ. ಅಲ್ಲಿಯ ಅನೇಕ ಸಂಸದರು ಬಾಂಗ್ಲಾದೇಶದ ಹಿಂದೂ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷಾತೀತವಾಗಿ ಸಂಸದರು ಬೆಂಬಲ ಕೊಡುತ್ತಿದ್ದಾರೆ ಎಂದು ಸಂಸದ ಆರ್.ಎಸ್.ಎನ್. ರಾಯರ್ ಅವರು ಹೇಳಿದ್ದಾರೆ. ಹಾಗೆಯೇ, ಬಾಂಗ್ಲಾದೇಶೀ ವೀಸಾ ನೀಡಲು ಮತ್ತು ಮಲೇಷ್ಯಾಗೆ ಬಾಂಗ್ಲಾದೇಶಿಗರ ಪ್ರವೇಶಕ್ಕೆ ನಿರ್ಬಂಧ ಏರುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅನೇಕ ಸಂಸದರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಠಿಣ ಶಿಕ್ಷೆಯಾಗಲಿ; ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಅಲ್ಪಸಂಖ್ಯಾತರ ಹಿಂಸಾಚಾರಕ್ಕೆ ಭಾರತ ಖಂಡನೆ

‘ಧಾರ್ಮಿಕ ಗುರುತಿನ ಕಾರಣಕ್ಕೆ ಯಾವುದೇ ವ್ಯಕ್ತಿಯ ಮೇಲೂ ಹಿಂಸಾಚಾರ ಆಗಬಾರದು. ಅಲ್ಪಸಂಖ್ಯಾತರ ಹಕ್ಕು ಮತ್ತು ಸುರಕ್ಷತೆಯನ್ನು ಸದಾ ಕಾಪಾಡಬೇಕು. ಆ ರೀತಿಯ ದ್ವೇಷ ಮತ್ತು ಅಸಹನೆಗೆ ಯಾವುದೇ ಸಮಾಜದಲ್ಲೂ ಜಾಗ ಇರಬಾರದು’ ಎಂದು ಮಲೇಷ್ಯಾ ಸಂಸದರಾದ ರಾಯರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶನಿವಾರವರೇ ನಡೆಯಿತು ಎಲಿಮಿನೇಷನ್; ಪ್ರಮುಖ ಸ್ಪರ್ಧಿಯೇ ಔಟ್ – Kannada News | BBK12 Shock: Unexpected Saturday Elimination, Suraj Out Early

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಕಿಚ್ಚ ಸುದೀಪ್ ಇರಲಿಲ್ಲ. ಈ ಬೇಸರದ ಮಧ್ಯೆಯೇ ಶನಿವಾರದ ಎಪಿಸೋಡ್​​ನಲ್ಲಿ ಒಬ್ಬರನ್ನು ಹೊರಕ್ಕೆ ಕಳುಹಿಸಲಾಗಿದೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಬಿಗ್ ಬಾಸ್ ಮೊದಲೇ ಘೋಷಣೆ ಮಾಡಿದ್ದರು. ಎಲ್ಲರೂ ಭಾನುವಾರ ಈ ಎಲಿಮಿನೇಷನ್ ನಡೆಯುತ್ತದೆ ಎಂದುಕೊಂಡಿದ್ದರು. ಆದರೆ ಶನಿವಾರವೇ ಒಂದು ಎಲಿಮಿನೇಷನ್ ನಡೆದಿದೆ. ಸೂರಜ್ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಈ ವಿಷಯ ಮನೆಯವರಿಗೆ ಶಾಕಿಂಗ್ ಎನಿಸಿದೆ.

ಬಿಗ್ ಬಾಸ್​​ನಲ್ಲಿ ಈ ವಾರ ಕಾವ್ಯಾ ಹೊರತುಪಡಿಸಿ ಉಳಿದ 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ಪೈಕಿ ಹಂತ ಹಂತವಾಗಿ ಒಬ್ಬೊಬ್ಬರನ್ನು ಸೇವ್ ಮಾಡುತ್ತಾ ಬರಲಾಯಿತು. ಮೊದಲು ಭಾಗ್ಯಲಕ್ಷ್ಮೀ ತಂಡದವರು ಬಂದು ಗಿಲ್ಲಿಯನ್ನು ಸೇವ್ ಮಾಡಿದರು. ಆ ಬಳಿಕ ಪ್ರೇಮ್ ಅವರು ಬಂದು, ಅಶ್ವಿನಿ ಅವರನ್ನು ಸೇವ್ ಮಾಡಿದರು. ನಂತರ ಚಟುವಟಿಕೆ ನೀಡಲಾಗಿತ್ತು. ಇದರಲ್ಲಿ ರಘು ಸೇವ್ ಆದರು.

ಇನ್ನು, ಬೆಳಿಗ್ಗೆ ಏಳ್ಳುತ್ತಿದ್ದಂತೆ ಮನೆಯವರಿಗೆ ಒಂದು ಶಾಕ್ ಇತ್ತು. ಎಲ್ಲರಿಗೂ ಗಾರ್ಡನ್ ಏರಿಯಾಗೆ ಬರುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಅದರಂತೆಯೇ ಎಲ್ಲರೂ ಬಂದರು. ಈ ವೇಳೆ ಮುಖ್ಯದ್ವಾರದ ಬಳಿ ಒಂದು ತಿರುಗುವ ವಸ್ತುವನ್ನು ಇಡಲಾಗಿತ್ತು. ಇದರ ಮೇಲೆ ನಾಲ್ಕು ಜನರನ್ನು ನಿಲ್ಲಿಸಲಾಯಿತು. ಈ ವೇಳೆ ಕಡಿಮೆ ಮತ ಪಡೆದ ಸೂರಜ್ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. ಇದು ಶಾಕಿಂಗ್ ಎನಿಸಿದೆ.

ಇದನ್ನೂ ಓದಿ: ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್?

ಸೂರಜ್ ಅವರು ಇತ್ತೀಚೆಗೆ ಡಲ್ ಆಗಿದ್ದರು. ಅವರಿಂದ ಎಲ್ಲರೂ ಹೆಚ್ಚಿನದ್ದನ್ನು ನಿರೀಕ್ಷೆ ಮಾಡಿದ್ದರು. ಆದರೆ, ಇದರಲ್ಲಿ ಅವರು ಯಶಸ್ಸು ಕಂಡಿಲ್ಲ. ಅಲ್ಲದೆ, ರಾಶಿಕಾ ಹಾಗೂ ಅವರ ನಡುವಿನ ಗೆಳೆತನ ಮುಳುವಾಗಬಹುದು ಎಂದು ಸುದೀಪ್ ಮೊದಲೇ ಎಚ್ಚರಿಕೆ ನೀಡಿದ್ದರೂ ಅದನ್ನು ಅವರು ನಿರ್ಲಕ್ಷಿಸಿದ್ದರು. ಈಗ ಅವರು ದೊಡ್ಡ ದಂಡ ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಭಾನುವಾರದ ಎಪಿಸೋಡ್​​ನಲ್ಲಿ ಇನ್ನೂ ಒಬ್ಬರು ಎಲಿಮಿನೇಟ್ ಆಗುತ್ತಿದ್ದು, ಅದು ಸ್ಪಂದನಾ ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO: ಎಗ್ಗಿಲ್ಲದೆ ಬಸ್​​ಗಳಲ್ಲಿ ಗೂಡ್ಸ್ ಸಾಗಾಟ – Kannada News | Chitradruga Bus Incident: private buses continued Transports goods material to various places From Bengaluru

ಬೆಂಗಳೂರು, (ಡಿಸೆಂಬರ್ 27): ಚಿತ್ರದುರ್ಗದ ಗೊರ್ಲುತ್ತು ಕ್ರಾಸ್ ಬಳಿ ಸೀ ಬರ್ಡ್ ಬಸ್ ದುರಂತ ಪ್ರಕರಣ (Chitradruga Bus Incident) ಪ್ರಯಾಣಿಕರನ್ನೇ ಬೆಚ್ಚಿ ಬೀಳಿಸಿದೆ. ಆದ್ರೆ ಇಷ್ಟೆಲ್ಲ ಅವಾಂತರವಾದ್ರೂ ಇನ್ನೂ ಕೂಡ ಆರ್ ಟಿ ಓ ಅಧಿಕಾರಿಗಳು ಎಚ್ಚೆತ್ತುಕೊಳ್ತಿಲ್ಲ. ಬೆಂಗಳೂರಿನಿಂದ ಬೇರೆ ಬೇರೆ ಸ್ಥಳಗಳಿಗೆ ಹೋಗುವಂತಹ ಖಾಸಗಿ ಬಸ್ ಗಳಲ್ಲಿ (private buses) ಪರ್ಮಿಷನ್ ಇಲ್ಲದೆ ಗೂಡ್ಸ್ ಮೆಟಿರಿಯಲ್ ಸಾಗಾಟ ಮಾಡಲಾಗ್ತಿದೆ. ಬಸ್ ಗಳ ಟಾಪ್ ಹಾಗೂ ಲಗೇಜ್ ಬಾಕ್ಸ್ ಗಳಲ್ಲಿ ಎಲ್ಲಿ ನೋಡಿದ್ರೂ ಕೂಡ ಗೂಡ್ಸ್ ಮೆಟಿರಿಯಲ್ ತುಂಬಿಕೊಂಡು ಹೋಗ್ತಾರೆ, ಪ್ರಯಾಣಿಕರ ಲಗೇಜ್ ಇಡೋದಕ್ಕೂ ಜಾಗ ಇಲ್ಲದಂತದ ಪರಿಸ್ಥಿತಿ ಎದುರಾಗಿದೆ ಅಂತ ಪ್ರಯಾಣಿಕರು ಆರೋಪ ಮಾಡ್ತಿದ್ದಾರೆ. ರಾಜಾರೋಷವಾಗಿ ಎಷ್ಟೇ ಗೂಡ್ಸ್ ಮೆಟಿರಿಯಲ್ ತುಂಬಿದ್ರೂ ಆರ್ ಟಿ ಓ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೇರ್ ಲೆಸ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs PAK: 2026 ರಲ್ಲಿ ಕನಿಷ್ಠ 3 ಬಾರಿ ಮುಖಾಮುಖಿಯಾಗಲಿವೆ ಭಾರತ- ಪಾಕ್ – Kannada News | India vs Pakistan 2026: T20 World Cup, U19, Women’s Match Dates and Details

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯಕ್ಕಾಗಿಯೇ ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ. 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದವು. ಈ ಮೂರು ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿತ್ತು. ಇತ್ತ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿತ್ತು. ಇದೀಗ 2026 ರ ಹೊಸ ವರ್ಷದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವಾಗ ನಡೆಯಲಿದೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

2026 ರ ಟಿ20 ವಿಶ್ವಕಪ್

2026 ರ ಆರಂಭದಲ್ಲೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಫೆಬ್ರವರಿ 15 ರಂದು ಕೊಲಂಬೊ ಮೈದಾನದಲ್ಲಿ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದ್ದು, ಮತ್ತೊಮ್ಮೆ ಪಾಕಿಸ್ತಾನವನ್ನು ಮಣಿಸುವ ಇರಾದೆಯಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು, ಈ ಗುಂಪಿನ ಎರಡು ತಂಡಗಳಿಗೆ ಮುಂದಿನ ಸುತ್ತಿನಲ್ಲಿ ಅವಕಾಶ ಸಿಗಲಿದೆ.

2026 ರ ಅಂಡರ್ 19 ವಿಶ್ವಕಪ್

ಅಂಡರ್-19 ವಿಶ್ವಕಪ್ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಈ ಪಂದ್ಯಾವಳಿ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೆ ಟೀಂ ಇಂಡಿಯಾವನ್ನು ಘೋಷಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಆಯುಷ್ ಮ್ಹಾತ್ರೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಗುಂಪು ಹಂತದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸುವುದಿಲ್ಲ. ಆದರೆ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಯಿದೆ. ಭಾರತದ ಮೊದಲ ಪಂದ್ಯ ಜನವರಿ 15 ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ನಡೆಯಲಿದೆ.

ಜೂನ್ 14 ರಂದು ಮತ್ತೆ ಮುಖಾಮುಖಿ

ಇಂಗ್ಲೆಂಡ್ 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿವೆ. ಜೂನ್ 12 ರಿಂದ ಪಂದ್ಯಾವಳಿ ಆರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯದ ವೇಳಾಪಟ್ಟಿಯನ್ನು ಬಹಿರಂಗಪಡಿಸಲಾಗಿಲ್ಲ. ಇತ್ತೀಚಿನ ಏಕದಿನ ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್! – Kannada News | New Year 2026: Liquor To Be Sold From 6 AM On December 31st Says bengaluru police commissioner Seemant Kumar Singh

ಬೆಂಗಳೂರು, ಡಿಸೆಂಬರ್ 27):  2025ಕ್ಕೆ ಗುಡ್​​ಬೈ ಹೇಳಿ 2026 ಅನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನ ಸಿದ್ಧರಾಗಿದ್ದಾರೆ. ಈ ಹೊಸ ವರ್ಷಾಚರಣೆಯ (New Year 2026) ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ (Seemant Kumar Singh) ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ. ಎಣ್ಣೆ ಪ್ರಿಯರಿಗಾಗಿ ಹೊಸ ವರ್ಷ ಆಗಮನಕ್ಕಾಗಿ ಹಿಂದಿನ ದಿನ ಅಂದರೆ ಡಿಸೆಂಬರ್ 31ರ ಬೆಳಗ್ಗೆ ಸೂರ್ಯೋದಯ ಆಗುವ ಮುನ್ನವೇ ಬಾರ್​​​​​ಗಳು ಓಪನ್ ಆಗಿರುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಮರ್ಯಾದೆ ಹತ್ಯೆ: ಮೇಲ್ಜಾತಿ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಲಿಂಗದೀಕ್ಷೆ ಪಡೆದಿದ್ದ ದಲಿತ ಕುಟುಂಬ – Kannada News | Hubballi Honour Killing Case: vivekananda Dalit Family Follows Basava tatva Said By Minister Santosh Lad

ಹುಬ್ಬಳ್ಳಿ, (ಡಿಸೆಂಬರ್ 27): ಇದೇ ಡಿಸೆಂಬರ್ 21ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ (Hubballi Honour Killing Case) ದೇಶವೇ ಬೆಚ್ಚಿಬೀಳಿಸಿದೆ. ಇನಾಂವೀರಾಪುರ ಗ್ರಾಮದ ದಲಿತ ಸಮುದಾಯದ (Dalit Family )ವಿವೇಕಾನಂದ (vivekananda) ಎನ್ನುವ ಯುವಕನನ್ನು ಮೇಲ್ಜಾತಿಯ ಯುವತಿ ಮಾನ್ಯ ಪ್ರೀತಿಸಿ ಮದ್ವೆಯಾಗಿದ್ದು, ಇದು ಮಾನ್ಯಳ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಮಾನ್ಯಳ ತಂದೆ, ಯುವಕನ ಮನೆಗೆ ನುಗಿದ್ದು, ಆರು ತಿಂಗಳು ಗರ್ಭಿಣಿ ಎನ್ನುವುದನ್ನು ನೋಡದೇ ಮಾನ್ಯಳನ್ನು ಕೊಚ್ಚಿ ಕೊಂದಿದ್ದಾನೆ. ಆದ್ರೆ, ಇದೀಗ ಹೊಸ ಅಂಶವೊಂದು ಬೆಳಕಿಗೆ ಬಂದಿದೆ. ಮೇಲ್ಜಾತಿ ಯುವತಿಯನ್ನು ಮದುವೆ ಆಗಿರುವುದಕ್ಕೆ ವಿವೇಕಾಂನದ ದಲಿತ ಸಮುದಾಯವಾಗಿದ್ದರೂ ಸಹ ಲಿಂಗದೀಕ್ಷೆ ಪಡೆದುಕೊಂಡಿದ್ದು, ಬಸವ ತತ್ವ ಪಾಲನೆ ಮಾಡುತ್ತಿತ್ತು ಎನ್ನುವುದನ್ನು ಸ್ವತಃ ಸಚಿವ ಸಂತೋಷ್ ಲಾಡ್ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಬಸವತತ್ವ ಪಾಲಿಸುತ್ತಿರುವ ದಲಿತ ಕುಟುಂಬ

ಹೌದು.. ಇಂದು (ಡಿಸೆಂಬರ್ 27) ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ಕುಟುಂಬಸ್ಥರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ಕುಟುಂಬಕ್ಕೆ ತಮ್ಮ ವ್ಯಯಕ್ತಿಕವಾಗಿ ಎರಡುವರೆ ಲಕ್ಷ ಪರಿಹಾರ ನೀಡಿದರು. ಬಳಿಕ ಘಟನೆ ನಡೆದ ಇನಾಂವೀರಾಪುರ ಗ್ರಾಮಕ್ಕೆ ತೆರಳಿ ವಿವೇಕಾನಂದ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಇನ್ನು ಇದೇ ವೇಳೆ ವಿವೇಕಾನಂದ ಕುಟುಂಬ ಬಸವತತ್ವ ಪಾಲಿಸುತ್ತಿದ್ದಿದ್ದನ್ನು ನೋಡಿ ಅಚ್ಚರಿಯಾಗಿದ್ದಾರೆ.

ಇದನ್ನೂ ನೋಡಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ

ಈ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ದಲಿತ ಸಮುದಾಯದ ಕುಟುಂಬ, ತಮ್ಮ ಮನೆಯಲ್ಲಿ ಬಸವಣ್ಣ ಮತ್ತು ಅಂಬೇಡ್ಕರ ಭಾವಚಿತ್ರ ಇಟ್ಟುಕೊಂಡಿದ್ದಾರೆ. ಬಸವತತ್ವ ಪಾಲನೆ ಮಾಡಿದ್ದಾರೆ. ಇಂತಹ ಕುಟುಂಬದ ಯುವಕನನ್ನು ಮದುವೆಯಾಗಿದ್ದಕ್ಕೆ ತಂದೆಯೇ ಬರ್ಬರ ಕೊಲೆ ಮಾಡಿದ್ದು ದುರ್ದೈವದ ಸಂಗತಿಯಾಗಿದೆ. ಮನುಷ್ಯತ್ವ ಬಿಟ್ಟು ಯಾರು ಬದುಕಬಾರದು ಎಂದರು.

ಇನಾಂವೀರಾಪುರ ಗ್ರಾಮದ ಲಿಂಗಾಯತ ಸಮುದಾಯದ ಮಾನ್ಯಾ ಮತ್ತು ಅದೇ ಗ್ರಾಮದ ದಲಿತ ಸಮುದಾಯದ ವಿವೇಕಾನಂದ್ ಕಳೆದ ಜೂನ್ ನಲ್ಲಿ ಮದುವೆಯಾಗಿದ್ದರು. ಇದು ಮಾನ್ಯಾ ತಂದೆ ಪ್ರಕಾಶಗೌಡ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಡಿಸೆಂಬರ್ 21 ರಂದು ಆರು ತಿಂಗಳ ಗರ್ಭಿಣಿ ಮಗಳನ್ನು ಕೊಲೆ ಮಾಡಿದ್ದ.ಜೊತೆಗೆ ವಿವೇಕಾನಂದ ಕುಟುಂಬದ ಮೇಲೆ ಕೂಡಾ ಮಾರಣಾಂತಿಕ ಹಲ್ಲೆಯಾಗಿತ್ತು.

ಗ್ರಾಮದಲ್ಲಿ ಭಯದ ವಾತಾರವಣ

ಘಟನೆ ನಡೆದು ಒಂದು ವಾರವಾದರೂ ಸಹ ಇನಾಂವೀರಾಪುರ ಗ್ರಾಮದಲ್ಲಿ ಭಯದ ವಾತಾರವಣ ಕಡಿಮೆಯಾಗಿಲ್ಲ. ಇತ್ತ ವಿವೇಕಾನಂದ ಕುಟುಂಬ ಆಸ್ಪತ್ರೆಯಲ್ಲಿದ್ದರೆ, ಆರೋಪಿ ಪ್ರಕಾಶಗೌಡ್ ಮತ್ತು ಆತನ ಅನೇಕ ಸಂಬಂಧಿಗಳು ಜೈಲಿನಲ್ಲಿದ್ದಾರೆ. ಇನ್ನು ಅನೇಕರು ಗ್ರಾಮ ಬಿಟ್ಟು ಹೋಗಿದ್ದು, ಪ್ರಕಾಶಗೌಡ ಮನೆಗೆ ವಾರದಿಂದ ಬಿದ್ದಿರೋ ಬೀಗ ತಗೆದಿಲ್ಲ. ಇನ್ನೊಂದೆಡೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್​​ ಮುಂದುರೆದಿದೆ. ಹೀಗಾಗಿ ಗ್ರಾಮದ ಜನರು ಯಾರು ಕೂಡ ಈ ಘಟನೆ ಬಗ್ಗೆ ಮಾತನಾಡುತ್ತಿಲ್ಲ. ಅಲ್ಲದೇ ಹೊರಗಡೆ ಬರಲು ಸಹ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ಇನಾಂವೀರಾಪುರ ಗ್ರಾಮದಲ್ಲಿ ಇನ್ನು ಆತಂಕದ ವಾತಾವರಣವಿದೆ. ಈ ನಿಟ್ಟಿನಲ್ಲಿ ಪೊಲೀಸರು ವಿವೇಕಾನಂದ ಕುಟುಂಬಕ್ಕೆ ಸೂಕ್ತ ಬಂದೂಬಸ್ತ್​​ ನೀಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version