Headlines

ಅಭಿಮಾನಿಗಳು ಒದ್ದೆ ಆಗ್ತಿರೋದನ್ನು ನೋಡಿ ತಾವೂ ಮಳೆಯಲ್ಲಿ ನೆನೆದ ಕಿಚ್ಚ ಸುದೀಪ್ – Kannada News | Kiccha Sudeep Drenches in Rain for Fans at Ramanagara Karaga Event

ಕಿಚ್ಚ ಸುದೀಪ್ ಅವರಿಗೆ  (Kichcha Sudeep) ಅಭಿಮಾನಿಗಳ ಮೇಲೆ ವಿಶೇಷ ಪ್ರೀತಿ ಇದೆ. ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಇದು ಮತ್ತೊಮ್ಮೆ ಸಾಬೀತಾಗಿದೆ. ರಾಮನಗರ ಕರಗ ಉತ್ಸವಕ್ಕೆ ಸುದೀಪ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಮಳೆ ಬಂದಿದೆ. ಅಭಿಮಾನಿಗಳ ಜೊತೆ ಅವರೂ ಮಳೆಯಲ್ಲಿ ನೆನೆದಿದ್ದಾರೆ. ಸುದೀಪ್ ಅವರು ಕರಗ ಉತ್ಸವದಲ್ಲಿ ಮಾತನಾಡಲು ವೇದಿಕೆ ಏರಿದರು. ಆಗ ಮಳೆ ಬರುತ್ತಾ ಇತ್ತು. ಅವರ ಸಹಾಯಕರು ಇವರಿಗೆ ಛತ್ರಿ ಹಿಡಿದಿದ್ದರು. ‘ಪರವಾಗಿಲ್ಲ ನಾವೂ ಸ್ವಲ್ಪ ಒದ್ದೆ…

Read More

ಮೆಟಾ ವಿರುದ್ಧ ಕೇಂದ್ರದ ಕಠಿಣ ನಿಲುವು: ಮಕ್ಕಳ ಮೇಲಿನ ದೌರ್ಜನ್ಯ, AI ಕಂಟೆಂಟ್‌ ಬಗ್ಗೆ ಸ್ಪಷ್ಟನೆ ಕೇಳಿದ ಸರ್ಕಾರ – Kannada News | Centre to Question Meta on CSAM, AI Content and Post Takedown Safeguards

ಮೆಟಾ (ಸಾಂದರ್ಭಿಕ ಚಿತ್ರ)Image Credit source: TV9 Network ನವದೆಹಲಿ, ಆಗಸ್ಟ್ 5: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್‌ (CSAM), ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಯಾಗುವ ಕಂಟೆಂಟ್‌ (AI-generated content) ಹಾಗೂ ಪ್ರಮುಖ ವ್ಯಕ್ತಿಗಳ ಪೋಸ್ಟ್‌ಗಳನ್ನು ತೆಗೆದುಹಾಕುವ ಕ್ರಮಗಳ ಕುರಿತು ಕೇಂದ್ರ ಸರ್ಕಾರ ಮೆಟಾ ಸಂಸ್ಥೆಯಿಂದ ಸ್ಪಷ್ಟನೆ ಕೇಳಲು ಮುಂದಾಗಿದೆ. ಮೆಟಾದ ಹಿರಿಯ ಅಧಿಕಾರಿಗಳು ಈ ವಾರ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಲಿದ್ದು, ಈ ವೇಳೆ ಭಾರತೀಯ ಕಾನೂನುಗಳ ಪಾಲನೆ ಸೇರಿದಂತೆ ಹಲವು…

Read More

Vasthu Tips: ವಾರದ ಈ ಎರಡು ದಿನ ಮಣ್ಣಿನ ಮಡಕೆ ಖರೀದಿಸಲೇಬೇಡಿ; ವಾಸ್ತು ನಿಯಮ ಇಲ್ಲಿದೆ – Kannada News | Vastu Rules for Buying Clay Pots: Days to Avoid and Healthy Selection Tips

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಬೇಸಿಗೆಯಲ್ಲಷ್ಟೇ ಅಲ್ಲದೆ, ವರ್ಷವಿಡೀ ಕುಡಿಯುವ ನೀರಿಗಾಗಿ ಮಣ್ಣಿನ ಮಡಕೆಗಳನ್ನು ಬಳಸುವುದು ಸಾಮಾನ್ಯವಾಗಿದೆ. ಮಣ್ಣಿನ ಪಾತ್ರೆಯ ನೀರು ಆರೋಗ್ಯಕ್ಕೆ ಅತ್ಯಂತ ಹಿತಕರ. ಆದರೆ, ವಾಸ್ತು ಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಹೊಸ ಮಣ್ಣಿನ ಮಡಕೆಯನ್ನು ಯಾವಾಗ ಖರೀದಿಸಬೇಕು, ಯಾವ ದಿನಗಳಲ್ಲಿ ಖರೀದಿಸಬಾರದು ಮತ್ತು ಅದನ್ನು ಆಯ್ಕೆ ಮಾಡುವ ಸರಿಯಾದ ವಿಧಾನ ಯಾವುದು ಎಂಬುದು ಅತ್ಯಂತ ಮುಖ್ಯವಾಗಿದೆ. ಮಣ್ಣಿನ ಮಡಕೆ ಖರೀದಿಸಲು ಈ ದಿನಗಳು ಅಶುಭವೇ? ವಾಸ್ತು ಶಾಸ್ತ್ರದ ಪ್ರಕಾರ ಭಾನುವಾರ ಮತ್ತು…

Read More

ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು – Kannada News | RBI MPC meeting updates, repo and other rates, GDP, inflation and other estimates

ನವದೆಹಲಿ, ಆಗಸ್ಟ್ 5: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC) ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದು, ಪ್ರಮುಖ ಬಡ್ಡಿದರವಾದ ರೆಪೋ ದರವನ್ನು ಶೇ. 5.25 ರಲ್ಲಿ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ. ಜಾಗತಿಕ ಅಸ್ಥಿರತೆ ಮತ್ತು ಹಣದುಬ್ಬರದ ಕಳವಳಗಳ ನಡುವೆಯೂ ಆರ್‌ಬಿಐ ತನ್ನ ‘ತಟಸ್ಥ’ (Neutral) ನೀತಿ ನಿಲುವನ್ನು ಮುಂದುವರಿಸಿದೆ. ಆಗಸ್ಟ್ 3ರಿಂದ ನಡೆದ ಎಂಪಿಸಿ ಸಭೆ ಇಂದು ಮುಕ್ತಾಯಗೊಂಡಿದ್ದು, ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿಯಲ್ಲಿ ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆರ್​ಬಿಐನ…

Read More

ಮೆಕಲಂ ತಲೆದಂಡಕ್ಕೆ ನಾನೇ ಕಾರಣ: ಬೆನ್ ಸ್ಟೋಕ್ಸ್! – Kannada News | Ben Stokes Takes Blame For McCullum’s England Test Exit

ಇಂಗ್ಲೆಂಡ್ ಕ್ರಿಕೆಟ್‌ನ ಯಶಸ್ವಿ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಟೆಸ್ಟ್ ತಂಡದ ಮುಖ್ಯ ತರಬೇತುದಾರ ಹುದ್ದೆಯಿಂದ ಬ್ರೆಂಡನ್ ಮೆಕಲಂ ಅವರನ್ನು ವಜಾಗೊಳಿಸಲು ತಾನೇ ನೇರ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಫಾರ್ ದಿ ಲವ್ ಆಫ್ ಕ್ರಿಕೆಟ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ತಮ್ಮ ದಿಢೀರ್ ನಿವೃತ್ತಿಯ ನಿರ್ಧಾರವೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದಿದ್ದಾರೆ. ಬೆನ್ ಸ್ಟೋಕ್ಸ್ ಹೇಳಿದ್ದೇನು? ಸಂದರ್ಶನದಲ್ಲಿ ಸ್ಟುವರ್ಟ್ ಬ್ರಾಡ್ ಮತ್ತು ಜೋಸ್ ಬಟ್ಲರ್ ಅವರೊಂದಿಗೆ ಮಾತನಾಡುತ್ತಾ ಸ್ಟೋಕ್ಸ್ ಭಾವುಕರಾದರು. “ನಾನು…

Read More

ಝಹೀರ್ ಖಾನ್ ಎಂಟ್ರಿ: ಅರ್ಧದಲ್ಲೇ LPL ತಂಡದ ಹೆಸರು ಬದಲು! – Kannada News | Zaheer Khan Buys Jaffna Franchise; Rebranded as Anchor Jaffna Kings

ಲಂಕಾ ಪ್ರೀಮಿಯರ್ ಲೀಗ್ (LPL) ಇತಿಹಾಸದಲ್ಲೇ ಅತ್ಯಂತ ರೋಚಕ ಟ್ವಿಸ್ಟ್ ಸಿಕ್ಕಿದೆ. ಮ್ಯಾಚ್ ಫಿಕ್ಸಿಂಗ್ ಆರೋಪ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ್ದ ಜಾಫ್ನಾ ಫ್ರಾಂಚೈಸಿಯನ್ನು ಭಾರತದ ಮಾಜಿ ವೇಗಿ ಝಹೀರ್ ಖಾನ್ ಖರೀದಿ ಮಾಡಿದ್ದಾರೆ. ಝಹೀರ್ ಖಾನ್ ಅವರ ಒಡೆತನದ ‘ಆಂಕರ್ ಸ್ಪೋರ್ಟ್ಸ್ AB’ ಸಂಸ್ಥೆಯು ಜಾಫ್ನಾ ತಂಡದ ಹೊಸ ಮಾಲೀಕತ್ವವನ್ನು ಪಡೆದುಕೊಂಡಿದ್ದು, ತಂಡಕ್ಕೆ ಈಗ ‘ಆಂಕರ್ ಜಾಫ್ನಾ ಕಿಂಗ್ಸ್’ ಎಂದು ಮರುನಾಮಕರಣ ಮಾಡಲಾಗಿದೆ. ಝಹೀರ್ ಎಂಟ್ರಿಗೆ ಕಾರಣವೇನು? ಕೆಲವು ದಿನಗಳ ಹಿಂದಷ್ಟೇ ಜಾಫ್ನಾ ಕಿಂಗ್ಸ್ ತಂಡದ…

Read More

ಜೆನ್ ಜಿ, ಜೆನ್ ಅಲ್ಫಾ ಜತೆ ನಾಳೆ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ – Kannada News | Mohan Bhagwat to Interact with Gen Z on August 6 at IIMUN Event

ನವದೆಹಲಿ, ಆಗಸ್ಟ್ 5: ಆಗಸ್ಟ್ 6ರಂದು ಜೆನ್ ಜಿ (Gen Z) ಮತ್ತು ಜೆನ್ ಅಲ್ಫಾ (Gen Alpha) ಯುವಜನರೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮಕ್ಕೆ ಅವರು ಖುದ್ದಾಗಿ ಹಾಜರಾಗಲಿದ್ದು, ಯುವಜನರ ಜತೆ ಚರ್ಚೆ, ಸಂವಾದ ನಡೆಸಿದ್ದಾರೆ. ಈ ಮೂಲಕ ಭಾರತೀಯತೆಯ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉದ್ದೇಶವಿದೆ ಎಂದು IIMUN (India’s International Movement to Unite Nations) ಸಂಸ್ಥಾಪಕ ರಿಷಭ್ ಶಾ ತಿಳಿಸಿದ್ದಾರೆ. ಯುವಜನರಿಗಾಗಿ ಇಂತಹ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆ…

Read More

‘ಪಳಾರ್ ಚಿತ್ರಕ್ಕೂ ಬಿಗ್ ಬಾಸ್ ರೀತಿಯೇ ಬೆಂಬಲ ನೀಡಿ’: ಅಭಿಮಾನಿಗಳಲ್ಲಿ ಗಿಲ್ಲಿ ನಟ ಮನವಿ – Kannada News | Bigg Boss Fame Gilli Nata Request Fans to Support His Upcoming Movie Palar

ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಮೂಲಕ ಗಿಲ್ಲಿ ನಟ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈಗ ಅವರು ಸಿನಿಮಾದಲ್ಲಿ ಹೀರೋ ಆಗಿ ನಟಿಸೋಕೆ ರೆಡಿ ಆಗಿದ್ದಾರೆ. ಮುಂಬರುವ ಅವರ ಚಿತ್ರಕ್ಕೆ ‘ಪಳಾರ್’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಬಗ್ಗೆ ಅವರು ವೇದಿಕೆ ಒಂದರಲ್ಲಿ ಮಾತನಾಡಿದ್ದಾರೆ. ರಾಮನಗರ ಹಾಗೂ ಕನಕಪುರ ಸುತ್ತಮುತ್ತ ಸುಮಾರು 15 ರಿಂದ 20 ದಿನಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಿಗ್ ಬಾಸ್ ರೀತಿಯೇ ಪ್ರೋತ್ಸಾಹಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದ…

Read More

ಪ್ರಚೋದನಕಾರಿ ಭಾಷಣ ಕೇಸ್: ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್​ಗೆ ಜೈಲು ಶಿಕ್ಷೆ! – Kannada News | Hate Speech Case: SDPI Leader Riyaz Parangipete Sentenced to Jail

ಬೆಳ್ತಂಗಡಿ, ಆಗಸ್ಟ್ 05: ಸುಮಾರು 11 ವರ್ಷಗಳ ಹಳೆಯ ಪ್ರಚೋದನಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆಗೆ (Riyaz Parangipete) ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ. ರೋಪಿ ವಿರುದ್ಧ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಪ್ರಿನ್ಸಿಪಲ್ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ರಿಯಾಜ್ ಪರಂಗೀಪೇಟೆಗೆ 6 ತಿಂಗಳ ಸಾದಾ…

Read More

Solar Eclipse: ಗ್ರಹಣ ಸಮಯದಲ್ಲಿ ದೇವರ ವಿಗ್ರಹ ಸ್ಪರ್ಶ ನಿಷೇಧ ಏಕೆ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ – Kannada News | Why Are Idols Not Touched During Eclipse in Sawan? Rules and Cleansing Rituals

ಶೀಘ್ರದಲ್ಲೇ (ಆ.12) ಸೂರ್ಯಗ್ರಹಣ ಸಂಭವಿಸಲಿದೆ. ಹಿಂದೂ ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಗ್ರಹಣದ ಸಮಯದಲ್ಲಿ ಬ್ರಹ್ಮಾಂಡದಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ಸನ್ನಿವೇಶದಲ್ಲಿ ದೇವತೆಗಳ ಪವಿತ್ರ ವಿಗ್ರಹಗಳನ್ನು ಸ್ಪರ್ಶಿಸುವುದು ನಿಷಿದ್ಧ. ಈ ಕಾರಣಕ್ಕಾಗಿಯೇ ದೇವಾಲಯಗಳಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಭಕ್ತರು ಈ ಸಮಯದಲ್ಲಿ ವಿಗ್ರಹಗಳನ್ನು ನೇರವಾಗಿ ಮುಟ್ಟುವ ಬದಲು, ದೂರದಿಂದಲೇ ದರ್ಶನ ಪಡೆದು ಮಾನಸಿಕವಾಗಿ ದೇವರನ್ನು ಸ್ಮರಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಸೂತಕ ಅವಧಿ ಎಂದರೇನು ಮತ್ತು ಅದರ ಸಮಯವೇನು? ಸೂರ್ಯ ಅಥವಾ ಚಂದ್ರ ಗ್ರಹಣಕ್ಕೆ ಮುಂಚಿನ…

Read More