ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು – Kannada News | RBI MPC meeting updates, repo and other rates, GDP, inflation and other estimates

ನವದೆಹಲಿ, ಆಗಸ್ಟ್ 5: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC) ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದು, ಪ್ರಮುಖ ಬಡ್ಡಿದರವಾದ ರೆಪೋ ದರವನ್ನು ಶೇ. 5.25 ರಲ್ಲಿ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ. ಜಾಗತಿಕ ಅಸ್ಥಿರತೆ ಮತ್ತು ಹಣದುಬ್ಬರದ ಕಳವಳಗಳ ನಡುವೆಯೂ ಆರ್‌ಬಿಐ ತನ್ನ ‘ತಟಸ್ಥ’ (Neutral) ನೀತಿ ನಿಲುವನ್ನು ಮುಂದುವರಿಸಿದೆ. ಆಗಸ್ಟ್ 3ರಿಂದ ನಡೆದ ಎಂಪಿಸಿ ಸಭೆ ಇಂದು ಮುಕ್ತಾಯಗೊಂಡಿದ್ದು, ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿಯಲ್ಲಿ ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಆರ್​ಬಿಐನ ವಿವಿಧ ದರಗಳು

  • ರೆಪೋ ದರ (Repo Rate): ಶೇ. 5.25
  • ನೀತಿ ನಿಲುವು (Policy Stance): ತಟಸ್ಥ (Neutral)
  • ಎಸ್‌ಡಿಎಫ್ ದರ (Standing Deposit Facility): ಶೇ. 5.00
  • ಎಂಎಸ್‌ಎಫ್ ದರ (Marginal Standing Facility: ಶೇ. 5.50

ಇದನ್ನೂ ಓದಿ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಹಣ ಫಿಕ್ಸೆಡ್ ಡೆಪಾಸಿಟ್ ಇಡಬಹುದು?

ಹಣದುಬ್ಬರ ಈ ವರ್ಷ ಶೇ. 5 ಎಂದು ಅಂದಾಜು

ರೀಟೇಲ್ ಹಣದುಬ್ಬರ ಅಥವಾ ಸಿಪಿಐ ಆಧಾರಿತ ಹಣದುಬ್ಬರವು ನಿಗದಿತ ಗುರಿಗಿಂತ ಹೆಚ್ಚು ಇರಲಿದೆ ಎಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದರು. ಆರ್​ಬಿಐನ ಎಂಪಿಸಿ ಸಭೆಯು ಈ ವರ್ಷದಲ್ಲಿ ಹಣದುಬ್ಬರ ಶೇ. 5ರಷ್ಟು ಇರಬಹುದು ಎಂದು ಅಂದಾಜು ಮಾಡಿದೆ. ಆರ್​ಬಿಐ ಹಣದುಬ್ಬರ ಅಂದಾಜು ಈ ರೀತಿ ಇದೆ.

2026-27ರಲ್ಲಿ ಹಣದುಬ್ಬರ ಹೀಗಿರಬಹುದು:

ಒಟ್ಟು ರೀಟೇಲ್ ಹಣದುಬ್ಬರ ಶೇ. 5

  • ಕ್ವಾರ್ಟರ್ 1: ಶೇ. 5.3
  • ಕ್ವಾರ್ಟರ್ 2: ಶೇ. 4.7
  • ಕ್ವಾರ್ಟರ್ 3: ಶೇ. 4.9
  • ಕ್ವಾರ್ಟರ್ 4: ಶೇ. 5.5

ಇದನ್ನೂ ಓದಿ: ಎಂಡಿಆರ್ ಶುಲ್ಕ ಜಾರಿಯಾದರೆ 3,000 ರೂಗಿಂತ ಹೆಚ್ಚಿನ ಪಾವತಿಗೆ ಶೇ. 53 ಮಂದಿ ಹಿಂದೇಟು; ಸಮೀಕ್ಷೆ ಅಭಿಪ್ರಾಯ

ಜಿಡಿಪಿ ಈ ಹಣಕಾಸು ವರ್ಷ ಶೇ. 6.7: ಆರ್​ಬಿಐ ಎಂಪಿಸಿ

ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯು ಭಾರತದ ಜಿಡಿಪಿ ಬೆಳವಣಿಗೆ ಈ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಹೆಚ್ಚಬಹುದು ಎಂದು ಅಂದಾಜು ಮಾಡಿದೆ. ಇದು ಉತ್ತಮ ಬೆಳವಣಿಗೆ ಎನಿಸಲಿದೆ. ತ್ರೈಮಾಸಿಕವಾರು ಜಿಡಿಪಿ ಅಂದಾಜು ದರ ಇಂತಿದೆ:

  • ಕ್ವಾರ್ಟರ್ 1: ಶೇ. 7
  • ಕ್ವಾರ್ಟರ್ 2: ಶೇ. 6.4
  • ಕ್ವಾರ್ಟರ್ 3: ಶೇ. 6.5
  • ಕ್ವಾರ್ಟರ್ 4: ಶೇ. 6.8

ಸಾಲಗಾರರ ಮೇಲಾಗುವ ಪರಿಣಾಮ: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದರಿಂದ ಬ್ಯಾಂಕ್‌ಗಳ ಗೃಹ ಸಾಲ (Home Loan), ವಾಹನ ಸಾಲ (Car Loan) ಮತ್ತು ವೈಯಕ್ತಿಕ ಸಾಲಗಳ (Personal Loan) ಮಾಸಿಕ ಕಂತುಗಳ (EMI) ದರಗಳಲ್ಲಿ ಯಾವುದೇ ಹೆಚ್ಚಳವಾಗದೆ ಸಾಲಗಾರರಿಗೆ ಸ್ಥಿರತೆ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೆಕಲಂ ತಲೆದಂಡಕ್ಕೆ ನಾನೇ ಕಾರಣ: ಬೆನ್ ಸ್ಟೋಕ್ಸ್! – Kannada News | Ben Stokes Takes Blame For McCullum’s England Test Exit

ಇಂಗ್ಲೆಂಡ್ ಕ್ರಿಕೆಟ್‌ನ ಯಶಸ್ವಿ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಟೆಸ್ಟ್ ತಂಡದ ಮುಖ್ಯ ತರಬೇತುದಾರ ಹುದ್ದೆಯಿಂದ ಬ್ರೆಂಡನ್ ಮೆಕಲಂ ಅವರನ್ನು ವಜಾಗೊಳಿಸಲು ತಾನೇ ನೇರ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಫಾರ್ ದಿ ಲವ್ ಆಫ್ ಕ್ರಿಕೆಟ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ತಮ್ಮ ದಿಢೀರ್ ನಿವೃತ್ತಿಯ ನಿರ್ಧಾರವೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದಿದ್ದಾರೆ.

ಬೆನ್ ಸ್ಟೋಕ್ಸ್ ಹೇಳಿದ್ದೇನು?

ಸಂದರ್ಶನದಲ್ಲಿ ಸ್ಟುವರ್ಟ್ ಬ್ರಾಡ್ ಮತ್ತು ಜೋಸ್ ಬಟ್ಲರ್ ಅವರೊಂದಿಗೆ ಮಾತನಾಡುತ್ತಾ ಸ್ಟೋಕ್ಸ್ ಭಾವುಕರಾದರು. “ನಾನು ನಾಲ್ಕು ವಾರಗಳ ಹಿಂದೆ ಆ ನಿರ್ಧಾರವನ್ನು (ಅಂತರರಾಷ್ಟ್ರೀಯ ನಿವೃತ್ತಿ) ತೆಗೆದುಕೊಳ್ಳದಿದ್ದರೆ, ಬ್ರೆಂಡನ್ ಮೆಕಲಂ ಇಂದಿಗೂ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿರುತ್ತಿದ್ದರು. ಹಾಗಾಗಿ ಈ ಎಲ್ಲದಕ್ಕೂ ನಾನೇ ಕಾರಣ, ಅದೆಲ್ಲ ನನ್ನ ತಪ್ಪು!” ಎಂದು ಸ್ಟೋಕ್ಸ್ ಮುಕ್ತವಾಗಿ ಹೇಳಿದ್ದಾರೆ.

ಮೆಕಲಂ ವಜಾಕ್ಕೆ ಕಾರಣವಾದ ಅಂಶಗಳಾವುವು?

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಜುಲೈ 2026 ರಲ್ಲಿ ಬ್ರೆಂಡನ್ ಮೆಕಲಂ ಅವರನ್ನು ರೆಡ್-ಬಾಲ್ ಕೋಚ್ ಹುದ್ದೆಯಿಂದ ತೆಗೆದುಹಾಕಿತು. ಇದಕ್ಕೆ ಕಾರಣವಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

  • ನೈಟ್‌ಕ್ಲಬ್ ವಿವಾದ: ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲಿ ಬೆನ್ ಸ್ಟೋಕ್ಸ್ ಮತ್ತು ಬೌಲರ್ ಗಸ್ ಅಟ್ಕಿನ್ಸನ್ ಕರ್ಫ್ಯೂ ನಿಯಮ ಮೀರಿ ನೈಟ್‌ಕ್ಲಬ್ ವಿವಾದದಲ್ಲಿ ಸಿಲುಕಿದ್ದರು. ಇದರ ಬೆನ್ನಲ್ಲೇ ಸ್ಟೋಕ್ಸ್ ದಿಢೀರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು.
  • ಬಾಝ್​ಬಾಲ್ ವೈಫಲ್ಯ: ಇಂಗ್ಲೆಂಡ್ ತಂಡದ ಆಕ್ರಮಣಕಾರಿ ಆಟದ ಶೈಲಿ ಬಾಝ್​ಬಾಲ್ ಇತ್ತೀಚಿನ ದಿನಗಳಲ್ಲಿ ಸತತ ವೈಫಲ್ಯ ಕಂಡಿತು. ಆಡಿದ ಕೊನೆಯ 10 ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ಗೆದ್ದಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ. ಆ್ಶಶಸ್ ಸರಣಿಯಲ್ಲಿ 4-1 ಅಂತರದ ಸೋಲು ಮತ್ತು ನ್ಯೂಝಿಲೆಂಡ್ ವಿರುದ್ಧ ತಾಯ್ನಾಡಿನಲ್ಲೇ ಸೋತಿದ್ದು ಮೆಕಲಂ ಪಾಲಿಗೆ ಹಿನ್ನಡೆಯಾಯಿತು.

ಕೋಚ್ ಹುದ್ದೆಯಿಂದ ವಜಾಗೊಂಡಿದ್ದರೂ ಇಬ್ಬರ ನಡುವೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಈಗಲೂ ಈ ಹಿಂದಿನಂತೆ ಉತ್ತಮ ಬಾಂಧವ್ಯವಿದೆ ಎಂದು ಬೆನ್ ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ.

ಬ್ರೆಂಡನ್ ಮೆಕಲಂ ಸದ್ಯ ಇಂಗ್ಲೆಂಡ್‌ನ ಏಕದಿನ ಮತ್ತು ಟಿ20 ತಂಡಗಳ ಮುಖ್ಯ ಕೋಚ್ ಆಗಿ ಮುಂದುವರಿದಿದ್ದಾರೆ. ಇತ್ತ 35 ವರ್ಷದ ಬೆನ್ ಸ್ಟೋಕ್ಸ್ ತಮ್ಮ ನಿವೃತ್ತಿ ಜೀವನದಿಂದ ಸಂತೋಷವಾಗಿದ್ದು, ಭವಿಷ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಕೋಚ್ ಆಗುವ ಕನಸಿನೊಂದಿಗೆ ‘ಲೆವೆಲ್ 3’ ಕೋಚಿಂಗ್ ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ ಬಾಬರ್ ಆಝಂ

ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಜೋ ರೂಟ್ ಮತ್ತೆ ನಾಯಕರಾಗಿದ್ದು, ನ್ಯೂಝಿಲೆಂಡ್‌ನ ಮಾಜಿ ಆಟಗಾರ ಸ್ಟಿಫನ್ ಫ್ಲೆಮಿಂಗ್ ಹೊಸ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Source link

ಝಹೀರ್ ಖಾನ್ ಎಂಟ್ರಿ: ಅರ್ಧದಲ್ಲೇ LPL ತಂಡದ ಹೆಸರು ಬದಲು! – Kannada News | Zaheer Khan Buys Jaffna Franchise; Rebranded as Anchor Jaffna Kings

ಲಂಕಾ ಪ್ರೀಮಿಯರ್ ಲೀಗ್ (LPL) ಇತಿಹಾಸದಲ್ಲೇ ಅತ್ಯಂತ ರೋಚಕ ಟ್ವಿಸ್ಟ್ ಸಿಕ್ಕಿದೆ. ಮ್ಯಾಚ್ ಫಿಕ್ಸಿಂಗ್ ಆರೋಪ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ್ದ ಜಾಫ್ನಾ ಫ್ರಾಂಚೈಸಿಯನ್ನು ಭಾರತದ ಮಾಜಿ ವೇಗಿ ಝಹೀರ್ ಖಾನ್ ಖರೀದಿ ಮಾಡಿದ್ದಾರೆ. ಝಹೀರ್ ಖಾನ್ ಅವರ ಒಡೆತನದ ‘ಆಂಕರ್ ಸ್ಪೋರ್ಟ್ಸ್ AB’ ಸಂಸ್ಥೆಯು ಜಾಫ್ನಾ ತಂಡದ ಹೊಸ ಮಾಲೀಕತ್ವವನ್ನು ಪಡೆದುಕೊಂಡಿದ್ದು, ತಂಡಕ್ಕೆ ಈಗ ‘ಆಂಕರ್ ಜಾಫ್ನಾ ಕಿಂಗ್ಸ್’ ಎಂದು ಮರುನಾಮಕರಣ ಮಾಡಲಾಗಿದೆ.

ಝಹೀರ್ ಎಂಟ್ರಿಗೆ ಕಾರಣವೇನು?

ಕೆಲವು ದಿನಗಳ ಹಿಂದಷ್ಟೇ ಜಾಫ್ನಾ ಕಿಂಗ್ಸ್ ತಂಡದ ಸಹ-ಮಾಲೀಕ ಹಾಗೂ ಭಾರತದ ಮಾಜಿ ಅಂಡರ್-19 ಆಟಗಾರ ಮಂಜೋತ್ ಕಲ್ರಾ ಅವರನ್ನು ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಕೊಲಂಬೊದಲ್ಲಿ ಬಂಧಿಸಿದ್ದರು. ತಮ್ಮದೇ ತಂಡದ ಆಟಗಾರರಿಗೆ ಪಂದ್ಯ ಫಿಕ್ಸ್ ಮಾಡಲು ಲಂಚದ ಆಮಿಷ ಒಡ್ಡಿದ ಗಂಭೀರ ಆರೋಪ ಕಲ್ರಾ ಮೇಲಿತ್ತು.

ಈ ಹಗರಣದ ಬೆನ್ನಲ್ಲೇ ಜಾಫ್ನಾ ತಂಡದ ಹಿಂದಿನ ಮಾಲೀಕತ್ವ ಸಂಸ್ಥೆಯಾದ ‘ಸ್ಪೋರ್ಟ್ಸ್ ಕಮ್ಯೂನ್’ ಆರ್ಥಿಕವಾಗಿ ದಿವಾಳಿಯಾಯಿತು. ಆಟಗಾರರಿಗೆ ಸಂಬಳ ನೀಡಲು ವಿಫಲವಾದ ಕಾರಣ, ಆಟಗಾರರು ಜೆರ್ಸಿ ಮೇಲಿದ್ದ ಪ್ರಾಯೋಜಕರ ಲೋಗೋಗಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದು ಪ್ರತಿಭಟನೆ ನಡೆಸಿದ್ದರು.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಹಳೆಯ ಒಪ್ಪಂದವನ್ನು ರದ್ದುಗೊಳಿಸಿ, ಝಹೀರ್ ಖಾನ್ ಅವರ ಸಂಸ್ಥೆಗೆ ಮಾಲೀಕತ್ವ ಹಸ್ತಾಂತರಿಸಿದೆ.

‘ಆಂಕರ್ ಜಾಫ್ನಾ ಕಿಂಗ್ಸ್’ ಕಣಕ್ಕೆ:|

ಸ್ವೀಡನ್‌ನ ಸ್ಟಾಕ್‌ಹೋಮ್ ಮೂಲದ ಕ್ರೀಡಾ ಹೂಡಿಕೆ ಸಂಸ್ಥೆಯಾದ ‘ಆಂಕರ್ ಸ್ಪೋರ್ಟ್ಸ್ AB’ ಮೂಲಕ ಝಹೀರ್ ಖಾನ್ ಮತ್ತು ಉದ್ಯಮಿ ನಾಗೇಂದ್ರ ಸಿದ್ದೂಟಮ್ ಈ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಿವಾದಗಳಿಂದ ಕಂಗೆಟ್ಟಿದ್ದ ಲಂಕಾ ಲೀಗ್‌ಗೆ ಝಹೀರ್ ಖಾನ್ ಅವರಂತಹ ದಿಗ್ಗಜ ಕ್ರಿಕೆಟಿಗನ ಎಂಟ್ರಿಯು ಹೊಸ ಕಳೆ ಹಾಗೂ ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿದೆ.

ಆಫ್-ಫೀಲ್ಡ್ ವಿವಾದಗಳ ನಡುವೆಯೂ ಜಾಫ್ನಾ ಕಿಂಗ್ಸ್ ತಂಡವು ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಆಡಿದ 8 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 11 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ ಬಾಬರ್ ಆಝಂ

ಇದೀಗ ಜಾಫ್ನಾ ಕಿಂಗ್ಸ್ ತಂಡವು ಹೊಸ ಹೆಸರಿನೊಂದಿಗೆ ಅಂದರೆ, ‘ಆಂಕರ್ ಜಾಫ್ನಾ ಕಿಂಗ್ಸ್’ ಹೆಸರಿನಲ್ಲಿ ಮುಂಬರುವ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

Source link

ಜೆನ್ ಜಿ, ಜೆನ್ ಅಲ್ಫಾ ಜತೆ ನಾಳೆ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ – Kannada News | Mohan Bhagwat to Interact with Gen Z on August 6 at IIMUN Event

ನವದೆಹಲಿ, ಆಗಸ್ಟ್ 5: ಆಗಸ್ಟ್ 6ರಂದು ಜೆನ್ ಜಿ (Gen Z) ಮತ್ತು ಜೆನ್ ಅಲ್ಫಾ (Gen Alpha) ಯುವಜನರೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮಕ್ಕೆ ಅವರು ಖುದ್ದಾಗಿ ಹಾಜರಾಗಲಿದ್ದು, ಯುವಜನರ ಜತೆ ಚರ್ಚೆ, ಸಂವಾದ ನಡೆಸಿದ್ದಾರೆ. ಈ ಮೂಲಕ ಭಾರತೀಯತೆಯ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉದ್ದೇಶವಿದೆ ಎಂದು IIMUN (India’s International Movement to Unite Nations) ಸಂಸ್ಥಾಪಕ ರಿಷಭ್ ಶಾ ತಿಳಿಸಿದ್ದಾರೆ. ಯುವಜನರಿಗಾಗಿ ಇಂತಹ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆ ಕಳೆದ 15 ವರ್ಷಗಳಿಂದ ಆಯೋಜಿಸುತ್ತಿದೆ ಎಂದು ರಿಷಭ್ ಶಾ ತಿಳಿಸಿದ್ದಾರೆ.

ಪ್ರತಿ ವರ್ಷ ಆಗಸ್ಟ್​​ನಲ್ಲಿ ಕಾರ್ಯಕ್ರಮ

ಪ್ರತಿ ವರ್ಷ ಆಗಸ್ಟ್ 1ರಿಂದ 15ರ ನಡುವಿನ ಅವಧಿಯಲ್ಲಿ ಸಂಸ್ಥೆಯ ಪ್ರಮುಖ ಕಾರ್ಯಕ್ರಮ ನಡೆಯುತ್ತದೆ. ವರ್ಷವಿಡೀ ಭಾರತ ಸೇರಿದಂತೆ ಹಲವು ದೇಶಗಳಲ್ಲಿ 11ರಿಂದ 19 ವರ್ಷದ ಮಕ್ಕಳು ಮತ್ತು ಯುವಜನರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂದಿನ ಸಂದರ್ಭದಲ್ಲಿ ಈ ವಯೋಮಾನದವರನ್ನು Gen Z ಮತ್ತು Gen Alpha ಎಂದು ಕರೆಯಲಾಗುತ್ತದೆ ಎಂದು ರಿಷಭ್ ಶಾ ವಿವರಿಸಿದ್ದಾರೆ.

ಒಟ್ಟು ನಾಲ್ಕು ದಿನಗಳ ಕಾರ್ಯಕ್ರಮ

ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ Gen Z ಮತ್ತು Gen Alpha ಪೀಳಿಗೆಯವರು ವಿವಿಧ ವಿಚಾರಗಳ ಕುರಿತು ಚರ್ಚೆ ಹಾಗೂ ಸಂವಾದಗಳಲ್ಲಿ ಭಾಗವಹಿಸುತ್ತಾರೆ. ಮೊದಲ ದಿನ ಪ್ರಮುಖ ಗಣ್ಯರ ಭಾಷಣಗಳು ನಡೆಯಲಿದ್ದು, ಎರಡನೇ, ಮೂರನೇ ಮತ್ತು ನಾಲ್ಕನೇ ದಿನಗಳಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆ ಮತ್ತು ಡಿಬೇಟ್‌ಗಳು ನಡೆಯಲಿವೆ ಎಂದು ರಿಷಭ್ ಶಾ ಮಾಹಿತಿ ನೀಡಿದ್ದಾರೆ.

ರಿಷಭ್ ಶಾ ಮಾತಿನ ವಿಡಿಯೋ

ಇದೇ ಮಾದರಿಯ ಕಾರ್ಯಕ್ರಮಗಳನ್ನು ದೇಶದ 108 ನಗರಗಳು ಹಾಗೂ 15 ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಆಗಸ್ಟ್‌ನಲ್ಲಿ ನಡೆಯುವ ಕಾರ್ಯಕ್ರಮವು ಈ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವಾಗಿದೆ ಎಂದು ರಿಷಭ್ ಶಾ ಹೇಳಿದ್ದಾರೆ.

2000 ಮಂದಿ ಭಾಗವಹಿಸುವ ಕಾರ್ಯಕ್ರಮ

ಈ ಬಾರಿಯ ಕಾರ್ಯಕ್ರಮದಲ್ಲಿ ಒಟ್ಟು 2,000 ಮಂದಿ ಭಾಗವಹಿಸಲಿದ್ದು, ಅವರೆಲ್ಲರೂ Gen Z ಪೀಳಿಗೆಗೆ ಸೇರಿದವರು ಎಂದು ಅವರು ತಿಳಿಸಿದ್ದಾರೆ. Gen Z ಕೇಂದ್ರಿತ ಚರ್ಚೆಯಾಗಿರುವುದರಿಂದ ಈ ಕಾರ್ಯಕ್ರಮ ಇದೀಗ ಹೆಚ್ಚಿನ ಗಮನ ಸೆಳೆಯುತ್ತಿದೆ ಎಂದು ರಿಷಭ್ ಶಾ ಹೇಳಿದ್ದಾರೆ.

ಖುದ್ದಾಗಿ ಭಾಗವಹಿಸಲಿರುವ ಮೋಹನ್ ಭಾಗವತ್

ಮೋಹನ್ ಭಾಗವತ್ ಅವರು ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸುತ್ತಾರೆಯೇ ಅಥವಾ ನೇರವಾಗಿ ಹಾಜರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಿಷಭ್ ಶಾ, ಖುದ್ದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

2016ರಲ್ಲೂ ಯುವಜನತೆ ಜತೆ ಸಂವಾದ ನಡೆಸಿದ್ದ ಭಾಗವತ್

ಈ ಹಿಂದೆ 2016 ಮತ್ತು 2020ರಲ್ಲಿಯೂ ಯುವಜನರೊಂದಿಗೆ ಸಂವಾದ ನಡೆಸಲು ಮೋಹನ್ ಭಾಗವತ್ ಅವರನ್ನು ಆಹ್ವಾನಿಸಲಾಗಿತ್ತು. ಆ ಸಂದರ್ಭಗಳಲ್ಲಿಯೂ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಯುವಜನರಿಗೆ ಮಾರ್ಗದರ್ಶನ ನೀಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು ಎಂದು ರಿಷಭ್ ಶಾ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಜತೆಗೂ ನಡೆದಿತ್ತು ಸಂವಾದ

ವಿವಿಧ ಕ್ಷೇತ್ರಗಳ ಹಲವು ಪ್ರಮುಖ ವ್ಯಕ್ತಿಗಳು ಈ ವೇದಿಕೆಯಲ್ಲಿ ಈ ಹಿಂದೆ ಭಾಗವಹಿಸಿ ಯುವಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ IIMUN ನಾಯಕತ್ವ ತಂಡದೊಂದಿಗೆ ಸಂವಾದ ನಡೆಸಿದ್ದಾರೆ ಎಂದು ರಿಷಭ್ ಶಾ ಹೇಳಿದ್ದಾರೆ. ಮುಂದಿನ ಪೀಳಿಗೆಗೆ ‘ಭಾರತೀಯತೆ’ಯ ಮನೋಭಾವವನ್ನು ಕೊಂಡೊಯ್ಯುವುದು ಈ ವೇದಿಕೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪಳಾರ್ ಚಿತ್ರಕ್ಕೂ ಬಿಗ್ ಬಾಸ್ ರೀತಿಯೇ ಬೆಂಬಲ ನೀಡಿ’: ಅಭಿಮಾನಿಗಳಲ್ಲಿ ಗಿಲ್ಲಿ ನಟ ಮನವಿ – Kannada News | Bigg Boss Fame Gilli Nata Request Fans to Support His Upcoming Movie Palar

ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಮೂಲಕ ಗಿಲ್ಲಿ ನಟ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈಗ ಅವರು ಸಿನಿಮಾದಲ್ಲಿ ಹೀರೋ ಆಗಿ ನಟಿಸೋಕೆ ರೆಡಿ ಆಗಿದ್ದಾರೆ. ಮುಂಬರುವ ಅವರ ಚಿತ್ರಕ್ಕೆ ‘ಪಳಾರ್’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಬಗ್ಗೆ ಅವರು ವೇದಿಕೆ ಒಂದರಲ್ಲಿ ಮಾತನಾಡಿದ್ದಾರೆ. ರಾಮನಗರ ಹಾಗೂ ಕನಕಪುರ ಸುತ್ತಮುತ್ತ ಸುಮಾರು 15 ರಿಂದ 20 ದಿನಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಗ್ ಬಾಸ್ ರೀತಿಯೇ ಪ್ರೋತ್ಸಾಹಿಸಿ

ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾವಿರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಗಿಲ್ಲಿ, ‘ನನಗೆ ಬಿಗ್ ಬಾಸ್‌ನಲ್ಲಿದ್ದಾಗ ಎಷ್ಟು ಪ್ರೋತ್ಸಾಹ ಮತ್ತು ಪ್ರೀತಿ ನೀಡಿದಿರೋ, ಅದೇ ರೀತಿ ನಮ್ಮ ‘ಪಳಾರ್’ ಸಿನಿಮಾ ರಿಲೀಸ್ ಆದಾಗಲೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಬೆಂಬಲಿಸಬೇಕು’ ಎಂದು ಮನವಿ ಮಾಡಿಕೊಂಡರು. ಇದಕ್ಕೆ ನೆರೆದಿದ್ದ ಜನಸ್ತೋಮ ಕರತಾಡನದ ಮೂಲಕ ಧ್ವನಿಗೂಡಿಸಿತು.

100 ದಿನ ಓಡಿಸುವ ಭರವಸೆ

ಕಾರ್ಯಕ್ರಮದ ನಿರೂಪಕರು ಮಾತನಾಡಿ, ‘ಅಭಿಮಾನಿಗಳು ಬಿಗ್ ಬಾಸ್‌ನಲ್ಲಿ ಗಿಲ್ಲಿ ಅವರನ್ನು ಗೆಲ್ಲಿಸಿದ ರೀತಿಯೇ, ಈ ಪಳಾರ್ ಚಿತ್ರವನ್ನೂ 100 ಅಥವಾ 200 ದಿನಗಳ ಕಾಲ ಓಡಿಸಿ ಖಂಡಿತ ಗೆಲ್ಲಿಸುತ್ತಾರೆ’ ಎಂದು ಸಭಿಕರ ಪ್ರೀತಿಯನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ: ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?

ಅವರದ್ದೇ ಟೈಟಲ್

‘ಪಳಾರ್’ ಸಿನಿಮಾ ಟೈಟಲ್ ಇಡೋದಕ್ಕೂ ಒಂದು ಕಾರಣ ಇದೆ. ‘ಬಿಗ್ ಬಾಸ್’ ಮನೆಯಲ್ಲಿ ಇದ್ದಾಗ ಎಲ್ಲರೂ ಗಿಲ್ಲಿಗೆ ಪಳಾರ್ ಎಂದು ಕರೆದರು. ಸ್ಥಳೀಯ ಪ್ರಾದೇಶಿಕ ಆಡುಭಾಷೆಯಲ್ಲಿ ‘ಪಳಾರ್’ ಎಂದರೆ ಚುರುಕಾದ, ಖಡಕ್ ಆದ ಅಥವಾ ರಫ್, ಮಾಸ್ ವ್ಯಕ್ತಿತ್ವದವ ಎಂಬ ಅರ್ಥದಲ್ಲೂ ಬಳಸಲಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಚೋದನಕಾರಿ ಭಾಷಣ ಕೇಸ್: ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್​ಗೆ ಜೈಲು ಶಿಕ್ಷೆ! – Kannada News | Hate Speech Case: SDPI Leader Riyaz Parangipete Sentenced to Jail

ಬೆಳ್ತಂಗಡಿ, ಆಗಸ್ಟ್ 05: ಸುಮಾರು 11 ವರ್ಷಗಳ ಹಳೆಯ ಪ್ರಚೋದನಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆಗೆ (Riyaz Parangipete) ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ. ರೋಪಿ ವಿರುದ್ಧ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಪ್ರಿನ್ಸಿಪಲ್ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ರಿಯಾಜ್ ಪರಂಗೀಪೇಟೆಗೆ 6 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಲಾಗಿದೆ.

11 ವರ್ಷಗಳ ಹಿಂದೆ ಏನಾಗಿತ್ತು?

2015ರ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕಚೇರಿ ಬಳಿ ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ವತಿಯಿಂದ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದ ರಿಯಾಜ್ ಪರಂಗೀಪೇಟೆ, ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಹಾಗೂ ಸಮಾಜದಲ್ಲಿ ಪ್ರಚೋದನೆ ಸೃಷ್ಟಿಸುವ ರೀತಿಯಲ್ಲಿ ಮಾತುಗಳನ್ನಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಆಗಿನ ಐಪಿಸಿ (IPC) ಕಾಯ್ದೆಯ ಕಲಂ 153(A) (ಕೋಮು ಸೌಹಾರ್ದತೆಗೆ ಧಕ್ಕೆ ತರುವುದು) ಹಾಗೂ 295(A) (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ದೋಷಾರೋಪಣೆ ಸಾಬೀತು

ಪ್ರಕರಣದ ತನಿಖೆ ನಡೆಸಿದ ಅಂದಿನ ಬೆಳ್ತಂಗಡಿ ಠಾಣೆಯ ಉಪನಿರೀಕ್ಷಕರು (PSI) ಗೂ ತನಿಖಾಧಿಕಾರಿ ರವಿ ಬಿ.ಎಸ್. ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಆಶೀತಾ ಅವರು ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಕಲಂ 153(A) ಅಡಿಯಲ್ಲಿ ಶಿಕ್ಷೆ ಪ್ರಕಟಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Solar Eclipse: ಗ್ರಹಣ ಸಮಯದಲ್ಲಿ ದೇವರ ವಿಗ್ರಹ ಸ್ಪರ್ಶ ನಿಷೇಧ ಏಕೆ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ – Kannada News | Why Are Idols Not Touched During Eclipse in Sawan? Rules and Cleansing Rituals

ಶೀಘ್ರದಲ್ಲೇ (ಆ.12) ಸೂರ್ಯಗ್ರಹಣ ಸಂಭವಿಸಲಿದೆ. ಹಿಂದೂ ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಗ್ರಹಣದ ಸಮಯದಲ್ಲಿ ಬ್ರಹ್ಮಾಂಡದಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ಸನ್ನಿವೇಶದಲ್ಲಿ ದೇವತೆಗಳ ಪವಿತ್ರ ವಿಗ್ರಹಗಳನ್ನು ಸ್ಪರ್ಶಿಸುವುದು ನಿಷಿದ್ಧ. ಈ ಕಾರಣಕ್ಕಾಗಿಯೇ ದೇವಾಲಯಗಳಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಭಕ್ತರು ಈ ಸಮಯದಲ್ಲಿ ವಿಗ್ರಹಗಳನ್ನು ನೇರವಾಗಿ ಮುಟ್ಟುವ ಬದಲು, ದೂರದಿಂದಲೇ ದರ್ಶನ ಪಡೆದು ಮಾನಸಿಕವಾಗಿ ದೇವರನ್ನು ಸ್ಮರಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.

ಸೂತಕ ಅವಧಿ ಎಂದರೇನು ಮತ್ತು ಅದರ ಸಮಯವೇನು?

ಸೂರ್ಯ ಅಥವಾ ಚಂದ್ರ ಗ್ರಹಣಕ್ಕೆ ಮುಂಚಿನ ನಿರ್ದಿಷ್ಟ ಅವಧಿಯನ್ನು ‘ಸೂತಕ ಅವಧಿ’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಸೂರ್ಯಗ್ರಹಣಕ್ಕೆ ಸುಮಾರು 12 ಗಂಟೆಗಳ ಮೊದಲು ಮತ್ತು ಚಂದ್ರಗ್ರಹಣಕ್ಕೆ ಸುಮಾರು 9 ಗಂಟೆಗಳ ಮೊದಲು ಈ ಸೂತಕವು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆದರೆ, ಈ ನಿಯಮವು ಭಾರತದಲ್ಲಿ ಗ್ರಹಣ ಗೋಚರಿಸುವ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಗ್ರಹಣವು ಭಾರತದಲ್ಲಿ ಕಾಣಿಸದಿದ್ದರೆ ಸೂತಕ ಅವಧಿಯ ನಿಯಮಗಳು ಅನ್ವಯಿಸುವುದಿಲ್ಲ ಮತ್ತು ಸಾಮಾನ್ಯ ಪೂಜೆಗಳನ್ನು ಮುಂದುವರಿಸಬಹುದು.

ಗ್ರಹಣ ಸಮಯದಲ್ಲಿ ದೇವಾಲಯಗಳ ಬಾಗಿಲುಗಳನ್ನು ಏಕೆ ಮುಚ್ಚಲಾಗುತ್ತದೆ?

ಸೂತಕ ಅವಧಿ ಆರಂಭವಾಗುತ್ತಿದ್ದಂತೆ ದೇವಾಲಯಗಳಲ್ಲಿ ನಿಯಮಿತ ಪೂಜೆ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ದೇವತೆಗಳ ವಿಗ್ರಹಗಳನ್ನು ಪವಿತ್ರ ಬಟ್ಟೆಯಿಂದ ಮುಚ್ಚಲಾಗುತ್ತದೆ ಮತ್ತು ಗರ್ಭಗುಡಿಗೆ ಯಾರ ಪ್ರವೇಶವೂ ಇರುವುದಿಲ್ಲ. ಗ್ರಹಣ ಮುಗಿಯುವವರೆಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಿಡುವುದು ಪರಂಪರೆಯಿಂದ ಬಂದ ಪದ್ಧತಿಯಾಗಿದೆ.

ಆಕಸ್ಮಿಕವಾಗಿ ವಿಗ್ರಹವನ್ನು ಮುಟ್ಟಿದರೆ ಏನು ಮಾಡಬೇಕು?

ಒಂದು ವೇಳೆ ಗ್ರಹಣದ ಸಮಯದಲ್ಲಿ ಅಥವಾ ಸೂತಕದ ಅವಧಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಅಥವಾ ತಿಳಿಯದೆ ದೇವತೆಯ ವಿಗ್ರಹವನ್ನು ಮುಟ್ಟಿದರೆ ಭಯಪಡುವ ಅಗತ್ಯವಿಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣ ಮುಗಿದ ತಕ್ಷಣ ನಿಗದಿತ ಶುದ್ಧೀಕರಣ ಆಚರಣೆಗಳನ್ನು ಮಾಡುವುದರಿಂದ ಈ ದೋಷವು ನಿವಾರಣೆಯಾಗುತ್ತದೆ.

ಗ್ರಹಣ ಮುಗಿದ ನಂತರ ಪಾಲಿಸಬೇಕಾದ ಪವಿತ್ರ ಆಚರಣೆಗಳು:

ಗ್ರಹಣ ಮುಗಿದ ತಕ್ಷಣ ಸ್ನಾನ ಮಾಡಿ, ಶುದ್ಧ ಬಟ್ಟೆಗಳನ್ನು ಧರಿಸುವುದು ಅತ್ಯಂತ ಶುಭ. ಮನೆಯಲ್ಲಿರುವ ದೇವರ ವಿಗ್ರಹಗಳಿಗೆ ಗಂಗಾಜಲ ಅಥವಾ ಶುದ್ಧ ನೀರನ್ನು ಸಿಂಪಡಿಸಿ ಶುದ್ಧೀಕರಿಸಬೇಕು ಹಾಗೂ ದೇವರಿಗೆ ಅಭಿಷೇಕ ಮಾಡಬೇಕು. ದೇವಾಲಯಗಳಲ್ಲಿ ವಿಶೇಷ ಶುಚಿಗೊಳಿಸುವಿಕೆಯ ನಂತರವೇ ಪೂಜಾ ವಿಧಿಗಳನ್ನು ಪುನರಾರಂಭಿಸಲಾಗುತ್ತದೆ. ಜೊತೆಗೆ, ಗ್ರಹಣದ ನಂತರ ಅಗತ್ಯವಿರುವವರಿಗೆ ಆಹಾರ, ಬಟ್ಟೆ ಅಥವಾ ಧಾನ್ಯಗಳನ್ನು ದಾನ ಮಾಡುವುದು ಅತ್ಯಂತ ಪುಣ್ಯದಾಯಕ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

TV9 Kannada News Live: ಹೈಕಮಾಂಡ್ ನಡೆಗೆ ಕೈ ನಾಯಕರು ಗರಂ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 05 August 2026 Monsoon, Cabinet expansion, congress MLAs, Politics Cinema Latest Updates Online

Breaking News Today Live Updates in Kannada: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರಚನೆ ಅಸಮಾಧಾನ ತೀವ್ರಗೊಂಡಿದ್ದು, ಶಾಸಕ ಆರ್. ಬಿ. ತಿಮ್ಮಾಪುರ ಹಾಗೂ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ‘ಪೇಮೆಂಟ್ ಸೀಟ್’ ಕುರಿತ ಆಡಿಯೋ ವೈರಲ್ ಆಗಿದೆ. ಮತ್ತೊಂದೆಡೆ, ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಇಂದು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 6 ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ನಡುವೆ, ತಮಿಳುನಾಡಿನಲ್ಲಿ ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್, ಟಿವಿಕೆ ಸರ್ಕಾರ ತಮ್ಮನ್ನು ಬಂಧಿಸಿ ಭಯೋತ್ಪಾದಕನಂತೆ ನಡೆಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

‘ಅವರನ್ನು ಸಿಎಂ ವಿಜಯ್ ಅಂತಲೇ ಕರೆಯಬೇಕು’; ಮಾಧವನ್ ನೇರ ಮಾತು – Kannada News | R Madhavan Calls Thalapathy Vijay CM Vijay, Rules Out His Own Political Entry

ತಮಿಳುನಾಡಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಚಿತ್ರರಂಗದ ಸಹನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ಕುರಿತು ನಟ ಆರ್‌. ಮಾಧವನ್ ಅವರು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ವಿಜಯ್ ಅವರನ್ನು ಉತ್ತಮ ಗೆಳೆಯ ಎಂದು ಕರೆದಿದ್ದು, ವಿಜಯ್ ಅವರನ್ನು ‘ಸಿಎಂ ವಿಜಯ್’ ಎಂದು ಕರೆಯಬೇಕು ಎಂದಿದ್ದಾರೆ.

ಸಂದರ್ಶನದಲ್ಲಿ ತಮಿಳುನಾಡು ರಾಜಕೀಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಧವನ್, ‘ಚಿತ್ರರಂಗದಲ್ಲಿ ನಮ್ಮೊಂದಿಗೇ ಬೆಳೆದು ಬಂದ ನಟ ವಿಜಯ್ ರಾಜಕೀಯ ರಂಗಕ್ಕೆ ಬಂದಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ. ವಿಜಯ್ ನನಗೆ ಆತ್ಮೀಯ ಗೆಳೆಯ. ಇಷ್ಟೊಂದು ವೇಗವಾಗಿ ರಾಜಕೀಯದಲ್ಲಿ ಬದಲಾವಣೆಗಳು ಆಗುತ್ತಿರುವುದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಅವರನ್ನು ಸಿಎಂ ವಿಜಯ್ ಎಂದೇ ಕರೆಯಬೇಕು’ ಎಂದು ಅವರು ಹೇಳಿದ್ದಾರೆ.

ರಾಜಕೀಯವು ‘ಎರಡು ಅಂಚಿನ ಕತ್ತಿ’

ರಾಜಕೀಯದ ಸವಾಲುಗಳ ಬಗ್ಗೆ ಮಾತನಾಡಿದ ಮಾಧವನ್, ‘ರಾಜಕೀಯ ಎಂಬುದು ಎರಡು ಅಂಚಿನ ಕತ್ತಿ ಇದ್ದಂತೆ. ನೀವು ಒಳ್ಳೆಯದನ್ನು ಮಾಡಿದರೂ ಟೀಕೆಗಳು ಬರುತ್ತವೆ, ತಪ್ಪು ಮಾಡಿದರೂ ಟೀಕೆಗಳು ಬರುತ್ತವೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ವಿರೋಧಿಸುವ ಒಂದು ವರ್ಗ ಇದ್ದೇ ಇರುತ್ತದೆ’ ಎಂದು ವಿಶ್ಲೇಷಿಸಿದ್ದಾರೆ.

ರಾಜಕೀಯಕ್ಕೆ ಬರಲ್ಲ

‘ನಿಮಗೂ ರಾಜಕೀಯಕ್ಕೆ ಬರುವ ಆಸಕ್ತಿ ಇದೆಯೇ?’ ಎಂದು ಸಂದರ್ಶಕರು ಕೇಳಿದಾಗ, ನಟ ಮಾಧವನ್ ನಗುತ್ತಾ ‘ಖಂಡಿತ ಇಲ್ಲ, ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಮಾಧವನ್ ಅವರು ದುಬೈನಲ್ಲಿ ಸೆಟಲ್ ಆಗಿದ್ದಾರೆ. ಸಿನಿಮಾ ಕೆಲಸ ಇದ್ದಾಗ ಅವರು ಭಾರತಕ್ಕೆ ಬರುತ್ತಾರೆ.

ಇದನ್ನೂ ಓದಿ: ‘ಭಾರತದ ಎಡಿಸನ್’ ಜಿ.ಡಿ. ನಾಯ್ಡು ಬಯೋಪಿಕ್; ಟ್ರೇಲರ್​ನಲ್ಲಿ ಗಮನ ಸೆಳೆದ ಆರ್. ಮಾಧವನ್

ಸಿನಿಮಾ ಜರ್ನಿ

ಈ ವರ್ಷ ರಿಲೀಸ್ ಆದ ‘ಧುರಂಧರ್ 2’ ಚಿತ್ರದಲ್ಲಿ ಐಬಿ ಮುಖ್ಯಸ್ಥ ಅಜಯ್ ಸನ್ಯಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಿಡಿಎನ್ ಸಿನಿಮಾದಲ್ಲಿ ಜಿಡಿ ನಾಯ್ಡು ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Spiritual Tips: ಸೂರ್ಯಗ್ರಹಣದಂದು ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಆಧ್ಯಾತ್ಮಿಕ ಮುನ್ನೆಚ್ಚರಿಕೆಗಳಿವು – Kannada News | Solar Eclipse Precautions for Pregnant Women: Spiritual Tips and Rules

ಖಗೋಳ ಶಾಸ್ತ್ರದ ಪ್ರಕಾರ ಗ್ರಹಣ ಎಂಬುದು ಒಂದು ನೈಸರ್ಗಿಕ ವಿದ್ಯಮಾನವಾದರೂ, ಸನಾತನ ಧರ್ಮ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಇದಕ್ಕೆ ಅತ್ಯಂತ ವಿಶೇಷ ಮಹತ್ವವಿದೆ. ಶೀಘ್ರದಲ್ಲೇ ಸಂಭವಿಸಲಿರುವ (ಆ.12) ಸೂರ್ಯಗ್ರಹಣದ ಹಿನ್ನೆಲೆಯಲ್ಲಿ, ಗರ್ಭಿಣಿಯರು ತಮ್ಮ ಹಾಗೂ ಹುಟ್ಟಲಿರುವ ಮಗುವಿನ ಆರೋಗ್ಯ, ಕ್ಷೇಮ ಮತ್ತು ಧನಾತ್ಮಕ ಶಕ್ತಿಗಾಗಿ ಕೆಲವೊಂದು ಸರಳ ಮುನ್ನೆಚ್ಚರಿಕೆಗಳನ್ನು ವಹಿಸುವುದು ಸೂಕ್ತ ಎಂದು ವಿದ್ವಾಂಸರು ಹಾಗೂ ಹಿರಿಯರು ಸಲಹೆ ನೀಡುತ್ತಾರೆ. ಗ್ರಹಣದ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಉಂಟಾಗುವ ಶಕ್ತಿಯ ವ್ಯತ್ಯಾಸಗಳು ಮನಸ್ಸು ಮತ್ತು ಶರೀರದ ಮೇಲೆ ಪ್ರಭಾವ ಬೀರಬಲ್ಲವು ಎಂಬ ನಂಬಿಕೆ ಇದೆ. ಆದ್ದರಿಂದ, ಯಾವುದೇ ಭಯವಿಲ್ಲದೆ ಆಧ್ಯಾತ್ಮಿಕ ಚಿಂತನೆಯೊಂದಿಗೆ ಈ ಸಮಯವನ್ನು ಕಳೆಯುವುದು ಒಳಿತು.

ಗೃಹ ಬಂಧನ ಮತ್ತು ಮನಸ್ಸಿನ ಪ್ರಶಾಂತತೆ:

ಗ್ರಹಣದ ಸಮಯದಲ್ಲಿ ಸೂರ್ಯನಿಂದ ಹೊರಹೊಮ್ಮುವ ವಿಕಿರಣಗಳು ಮತ್ತು ಸೂಕ್ಷ್ಮ ಶಕ್ತಿಗಳು ಗರ್ಭಿಣಿಯರ ಮೇಲೆ ನೇರ ಪ್ರಭಾವ ಬೀರದಂತೆ ತಡೆಯಲು ಮನೆಯ ಒಳಗಿರುವುದು ಅತ್ಯಂತ ಕ್ಷೇಮಕರ. ಈ ಸಮಯದಲ್ಲಿ ನೇರವಾಗಿ ಸೂರ್ಯನನ್ನು ಬರಿಗಣ್ಣಿನಿಂದ ವೀಕ್ಷಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು, ಏಕೆಂದರೆ ಇದು ಕಣ್ಣಿನ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಅಲ್ಲದೆ, ಗ್ರಹಣದ ಬಗ್ಗೆ ಅನಗತ್ಯ ಭಯ ಅಥವಾ ಆತಂಕವನ್ನು ಮನಸ್ಸಿಗೆ ತಂದುಕೊಳ್ಳದೆ, ಪ್ರಶಾಂತ ಹಾಗೂ ಧನಾತ್ಮಕ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿಕೊಳ್ಳುವುದು ಗರ್ಭದಲ್ಲಿರುವ ಮಗುವಿನ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಚೂಪಾದ ವಸ್ತುಗಳಿಂದ ಅಂತರ ಕಾಯ್ದುಕೊಳ್ಳುವುದು:

ಪ್ರಾಚೀನ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಗ್ರಹಣದ ಅವಧಿಯಲ್ಲಿ ಗರ್ಭಿಣಿಯರು ಯಾವುದೇ ಚೂಪಾದ ಅಥವಾ ಕತ್ತರಿಸುವ ವಸ್ತುಗಳನ್ನು ಬಳಸಬಾರದು. ಗ್ರಹಣ ಮುಗಿಯುವವರೆಗೆ ತರಕಾರಿ ಕತ್ತರಿಸುವುದು, ಅಡುಗೆ ಮಾಡುವುದು, ಹೊಲಿಗೆ ಕೆಲಸ ಮಾಡುವುದು ಅಥವಾ ಕತ್ತರಿ, ಚಾಕು, ಸೂಜಿ ಹಾಗೂ ಪಿನ್‌ಗಳಂತಹ ವಸ್ತುಗಳನ್ನು ಮುಟ್ಟುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಈ ರೀತಿಯ ದೈಹಿಕ ಶ್ರಮದ ಕೆಲಸಗಳಿಂದ ದೂರವಿದ್ದು ವಿಶ್ರಾಂತಿ ಪಡೆಯುವುದರಿಂದ, ದೇಹ ಮತ್ತು ಮನಸ್ಸು ಎರಡೂ ಸ್ಥಿರವಾಗಿರಲು ಸಹಾಯವಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಸಾತ್ವಿಕ ಆಹಾರ ಮತ್ತು ದರ್ಭೆ ಹುಲ್ಲಿನ ಪವಿತ್ರತೆ:

ಗ್ರಹಣ ಆರಂಭವಾಗುವ ಮೊದಲು ಸುಲಭವಾಗಿ ಜೀರ್ಣವಾಗುವ ಹಗುರವಾದ ಸಾತ್ವಿಕ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ. ಆಧ್ಯಾತ್ಮಿಕ ಹಾಗೂ ವಿಜ್ಞಾನದ ನೈಸರ್ಗಿಕ ತತ್ವಗಳ ಪ್ರಕಾರ ದರ್ಭೆ ಅತ್ಯಂತ ಪವಿತ್ರ ಹಾಗೂ ಧನಾತ್ಮಕ ಶಕ್ತಿಯನ್ನು ಕಾಯ್ದುಕೊಳ್ಳುವ ಶೋಧಕ ವಸ್ತುವಾಗಿದೆ. ಗ್ರಹಣಕ್ಕೂ ಮೊದಲು ಮನೆಯಲ್ಲಿರುವ ಕುಡಿಯುವ ನೀರು, ಹಾಲು ಮತ್ತು ಸಂಗ್ರಹಿಸಿಟ್ಟ ಆಹಾರ ಧಾನ್ಯಗಳ ಮೇಲೆ ದರ್ಭೆ ಹುಲ್ಲನ್ನು ಹಾಕಿಡುವುದರಿಂದ, ಗ್ರಹಣದ ಅವಧಿಯಲ್ಲಿ ಅವುಗಳ ಸತ್ತ್ವ ಹಾಳಾಗುವುದಿಲ್ಲ ಮತ್ತು ಕಲುಷಿತಗೊಳ್ಳುವುದಿಲ್ಲ ಎಂಬ ಬಲವಾದ ನಂಬಿಕೆ ಇದೆ.

ಸಾಧನೆ, ಜಪ ಮತ್ತು ಆಧ್ಯಾತ್ಮಿಕ ಚಿಂತನೆ:

ಗ್ರಹಣದ ಸಮಯವನ್ನು ಭಯ ಅಥವಾ ಆತಂಕದಿಂದ ಕಳೆಯುವ ಬದಲು, ಅದನ್ನು ಒಂದು ದಿವ್ಯ ‘ಸಾಧನಾ ಸಮಯ’ವನ್ನಾಗಿ ಮಾರ್ಪಡಿಸಿಕೊಳ್ಳುವುದು ಶ್ರೇಷ್ಠ. ಈ ಸಮಯದಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೆ ವಿಶ್ರಾಂತಿ ಪಡೆಯುತ್ತಾ, ನಿಮ್ಮ ಇಷ್ಟದೇವತೆಯ ನಾಮಸ್ಮರಣೆ, ‘ಓಂ ನಮಃ ಶಿವಾಯ’ ಅಥವಾ ‘ಗಾಯತ್ರಿ ಮಂತ್ರ’ದಂತಹ ಪವಿತ್ರ ಮಂತ್ರಗಳನ್ನು ಜಪಿಸುವುದು ಮಗುವಿಗೆ ಉತ್ತಮ ಸಂಸ್ಕಾರ ನೀಡುತ್ತದೆ. ಪ್ರಶಾಂತ ಮನಸ್ಸಿನಿಂದ ಮಾಡುವ ಪ್ರಾರ್ಥನೆ ಮತ್ತು ಶುಭ ಮಂತ್ರಗಳ ಶ್ರವಣವು ತಾಯಿ ಹಾಗೂ ಮಗುವಿನ ಸುತ್ತ ಒಂದು ದಿವ್ಯ ರಕ್ಷಣಾ ಕವಚವನ್ನು ನಿರ್ಮಿಸುತ್ತದೆ.

ಸೂರ್ಯಗ್ರಹಣವು ಪ್ರಕೃತಿಯ ಒಂದು ಸುಂದರ ನಿಯಮವಾಗಿದ್ದು, ಇದರ ಬಗ್ಗೆ ಆತಂಕ ಪಡುವ ಅಗತ್ಯವೇನೂ ಇಲ್ಲ. ಹಿರಿಯರು ಮತ್ತು ಜ್ಯೋತಿಷ್ಯ ವಿದ್ವಾಂಸರು ತಿಳಿಸಿರುವ ಈ ಸರಳ ಸಾಂಪ್ರದಾಯಿಕ ಮುನ್ನೆಚ್ಚರಿಕೆಗಳನ್ನು ಗೌರವದಿಂದ ಪಾಲಿಸಿ, ಮನಸ್ಸನ್ನು ಭಗವಂತನ ಧ್ಯಾನದಲ್ಲಿ ತೊಡಗಿಸಿದರೆ ನಿಮ್ಮ ಗರ್ಭಾವಸ್ಥೆಯ ಪ್ರಯಾಣವು ಅತ್ಯಂತ ಮಂಗಳಕರವೂ ಮತ್ತು ಸುಖಕರವೂ ಆಗಿರುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version