Headlines

2 ಲಕ್ಷಕ್ಕಾಗಿ 14 ವರ್ಷದ ಮಗಳನ್ನು ಕೋಲಾರದ 54 ವರ್ಷದ ವ್ಯಕ್ತಿಗೆ ಮಾರಿದ ತಾಯಿ! – Kannada News | Mother Sold 14 year old Daughter for Rs 2 Lakhs to 54 year Old Kolar Man in Andhra Pradesh

ಹೈದರಾಬಾದ್, ಫೆಬ್ರವರಿ 10: ಆಂಧ್ರಪ್ರದೇಶದ (Andhra Pradesh) ಅಣ್ಣಮಯ್ಯ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ತಾಯಿಯೊಬ್ಬಳು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. 2 ಲಕ್ಷ ರೂ.ಗೆ ತಾಯಿ ತನ್ನನ್ನೇ ನಂಬಿಕೊಂಡಿದ್ದ ಮಗಳ ಜೀವನವನ್ನೇ ಹಾಳು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುಂಗನೂರಿನ ಬೀಡಿ ಕಾಲೋನಿಯ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ರಾಜಶೇಖರ್ ರೆಡ್ಡಿ ಎಂಬ 54 ವರ್ಷದ ವ್ಯಕ್ತಿಗೆ ಮಾರಾಟ ಮಾಡಲಾಗಿದೆ. ಬೀಡಿ ಕಾಲೋನಿಯಲ್ಲಿ ವಾಸಿಸುವ ರಾಮರಾಜು ಹಾಗೂ ಶೋಭಾ…

Read More

ಚಿತ್ರರಂಗದ 93ನೇ ವರ್ಷದ ಸಂಭ್ರಮಾಚರಣೆ ಬೇಡ: ಪ್ರಿಯಾ ಹಾಸನ್ – Kannada News | Priya Hassan said sandalwood 93 year celebration is not needed

ಕನ್ನಡ ಚಿತ್ರರಂಗದ (Sandalwood) 93ನೇ ವರ್ಷದ ಸಂಭ್ರಮಾಚರಣೆ ಮಾಡಬೇಕು ಎಂಬ ನಿರ್ಣಯದ ಬಗ್ಗೆ ಈಗ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಫಿಲಂ ಚೇಂಬರ್ ವತಿಯಿಂದ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಕೆಲವು ನಿರ್ಮಾಪಕರುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು (ಫೆಬ್ರವರಿ 10) ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕಿ ಪ್ರಿಯಾ ಹಾಸನ್, 93ರ ಸಂಭ್ರಮಾಚರಣೆ ಬೇಡ, ಚಿತ್ರರಂಗ ಈಗ ಸಂಕಷ್ಟದಲ್ಲಿದೆ, ಹೀಗಿರುವಾಗ ದುಂದು ವೆಚ್ಚ ಬೇಡ, 100ನೇ ವರ್ಷದ ಆಚರಣೆ ಮಾಡುವುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂಬ…

Read More

ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್​​ಬೀರ್ ಕಪೂರ್: ಸಿನಿಮಾ ಯಾವುದು? – Kannada News | Ranbir Kapoor to act in Dhoom 4 as villain here is the detail in Kannada

ರಣ್​​ಬೀರ್ ಕಪೂರ್ (Ranbir Kapoor) ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಕಳೆದ ಕೆಲ ವರ್ಷಗಳಲ್ಲಿ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ. ಪ್ರಸ್ತುತ ‘ರಾಮಾಯಣ’ ಸಿನಿಮಾನಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಅನಿಮಲ್ ಪಾರ್ಕ್’ ಚಿತ್ರೀಕರಣವೂ ಶೀಘ್ರವೇ ಪ್ರಾರಂಭ ಆಗಲಿದೆ. ಬಾಲಿವುಡ್​ನ ಸೂಪರ್ ಸ್ಟಾರ್ ಆಗಿರುವ ರಣ್​​ಬೀರ್ ಕಪೂರ್ ವಿಲನ್ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಆದರೆ ರಣ್​​ಬೀರ್ ನಟಿಸುತ್ತಿರುವುದು ಸಾಮಾನ್ಯ ವಿಲನ್ ಆಗಿ ಅಲ್ಲ. ರಣ್​​ಬೀರ್ ಕಪೂರ್ ವಿಲನ್ ಆಗುತ್ತಿರುವುದು ‘ಧೂಮ್’ ಸಿನಿಮಾ ಸರಣಿಯ ಹೊಸ ಸಿನಿಮಾನಲ್ಲಿ….

Read More

Patanjali: ನಿಮ್ಮ ಜೀವನದಿಂದ ಈ ವಸ್ತುಗಳು ದೂರವೇ ಇರಲಿ: ಬಾಬಾ ರಾಮದೇವ್ ಸಲಹೆ – Kannada News | Baba Ramdev recommends quitting few things for healthier life

ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ಸ್ವದೇಶಿ ಉತ್ಪನ್ನಗಳ ಅಳವಡಿಕೆಗೆ ಒತ್ತು ನೀಡುತ್ತಾರೆ. ಅವರು ಯೋಗ ಮತ್ತು ಆಯುರ್ವೇದ ಎರಡನ್ನೂ ಪ್ರತಿ ಮನೆಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಪತಂಜಲಿ ವೆಲ್ನೆಸ್ ಮೂಲಕ, ಅವರು ಆಗಾಗ್ಗೆ ಆರೋಗ್ಯದ ವಿಚಾರಗಳಲ್ಲಿ ಸಲಹೆ ನೀಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ನಮ್ಮ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆರೋಗ್ಯಕ್ಕೆ ಹಾನಿ ಆಗುತ್ತಿದೆ. ವಯಸ್ಸಾದಾಗ ಬರುತ್ತಿದ್ದ ಕಾಯಿಲೆಗಳು ಈಗ ಕಿರಿಯ ವಯಸ್ಸಿನವರಲ್ಲೇ ಕಾಣಿಸಿಕೊಳ್ಳುತ್ತಿವೆ. ಹಿಂದಿನ ಕಾಲದಲ್ಲಿ, ಜನರು ಆಯುರ್ವೇದ ಉತ್ಪನ್ನಗಳು ಮತ್ತು ಮನೆಯಲ್ಲಿ…

Read More

ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’: ಸತತ 3 ಗಂಟೆಗಳ ಮನರಂಜನೆ – Kannada News | BBK 12 Gilli Nata Colors Dodmane Habba special show on 14 February on Colors Kannada

ಬಿಗ್ ಬಾಸ್ ಮುಗಿಯಿತು, ಮುಂದೇನು ಎಂದು ಕೇಳುತ್ತಿದ್ದ ವೀಕ್ಷಕರಿಗೆ ಇಲ್ಲಿದೆ ಮಸ್ತ್ ಅವಕಾಶ. ‘ಬಿಗ್ ಬಾಸ್ ಕನ್ನಡ 12’ (BBK 12) ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’ (Colors Dodmane Habba) ಎಂಬ ಅದ್ದೂರಿ ಕಾರ್ಯಕ್ರಮ ಪ್ರಸಾರ ಆಗಲಿದೆ. ಸತತ ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ ಈ ಕಾರ್ಯಕ್ರಮ. ಫೆಬ್ರವರಿ 14ರಂದು ಕರುನಾಡಿನ…

Read More

ಲಾಟರಿ ಹೊಡೆಯುತ್ತಿದ್ದ ಸುಚಿತ್ರಾ ಜೀವನವನ್ನೇ ಬದಲಾಯಿಸಿದ್ದೇಗೆ ಕಮಲಾಕರ್​​ ಭಟ್​​ ಪರಿಚಯ? ಸತ್ಯ ಬಿಚ್ಚಿಟ್ಟ ಸ್ನೇಹಿತೆ – Kannada News | Suchitra’s Life Transformed from Lottery to Luxury After Relationship with Kamalakar Bhat

ಕಮಲಾಕರ್​​ ಭಟ್​ ಮತ್ತು ಸುಚಿತ್ರಾ ಕಾರವಾರ, ಫೆಬ್ರವರಿ 10: ಸಿದ್ದಾಪುರದ ವಸಂತ್​​ ನಾಯ್ಕ್​​ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ ಸುಚಿತ್ರಾಳ ಕುರಿತ ಒಂದೊಂದೇ ಮಾಹಿತಿಯೀಗ ಬಯಲಾಗುತ್ತಿದೆ. ಜ್ಯೋತಿಷಿ ಕಮಲಾಕರ್​​ ಭಟ್​​ ಸೇರಿದಂತೆ ಸಿರಿವಂತರನ್ನು ಬುಟ್ಟಿಗೆ ಹಾಕಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಇದೇ ಸುಚಿತ್ರಾ ಒಂದು ಕಾಲದಲ್ಲಿ 10 ರೂಪಾಯಿಗೂ ಲಾಟರಿ ಹೊಡೆಯುತ್ತಿದ್ದಳು. ಅಷ್ಟಕ್ಕೂ ಈಕೆ ಜ್ಯೋತಿಷಿ ಕಮಲಾಕರ್​​ ಭಟ್​​ಗೆ ಪರಿಚಯವಾಗಿದ್ದು ಹೇಗೆ ಎಂಬ ಮಾಹಿತಿಯೀಗ ಬಹಿರಂಗಗೊಂಡಿದೆ. ಸುಚಿತ್ರಾಳನ್ನು ಕಮಲಾಕರ ಭಟ್​ಗೆ ಪರಿಚಯಿಸಿದ್ದು ನಾನೇ ಎಂದು ಉತ್ತರ ಕನ್ನಡ…

Read More

ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿ ಗಂಧದ ಮರ ಕಡಿದು ರೈತ ಆಕ್ರೋಶ – Kannada News | Chikkamagaluru Farmer Protest Against Governmnet via a Cutting Sandalwood Tree Near Vidhana Soudha

ಬೆಂಗಳೂರು, (ಫೆಬ್ರವರಿ 10): ಅಭಿವೃದ್ಧಿ ಹೆಸರಿನಲ್ಲಿ ಜಮೀನಿನಲ್ಲಿ 30 ಮರಗಳನ್ನು ಕಡಿದು ಪರಿಹಾರ ಕೊಡದ ಸರ್ಕಾರದ ವಿರುದ್ಧ ರೈತ ಆಕ್ರೋಶಗೊಂಡಿದ್ದು, ವಿಧಾನಸೌಧದ ಮುಂದೆ ಇರುವ ಶ್ರೀಗಂಧದ ಮರ ಕಡಿದು ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ವಿಶುಕುಮಾರ್ ಎನ್ನುವರ ಜಮೀನಿನಲ್ಲಿ 30 ಮರಗಳನ್ನು ಕಡಿಯಲಾಗಿದೆ. ಆದ್ರೆ, ಇದಕ್ಕೆ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸೇಡಿಗಾಗಿ ವಿಧಾನಸೌಧದ ಬಳಿ ಇರುವ ಗಂಧದ ಮರವನ್ನು ಕಡಿದು ಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಶುಕುಮಾರ್,ಪರಿಹಾರ ಕೊಟ್ಟಿಲ್ಲ, ನನ್ನ ಮಕ್ಕಳ ಬರ್ತಡೆ ನೆನಪಿಗಾಗಿ ಗಿಡ ನೆಟ್ಟಿದ್ದೆ. ಹೆದ್ದಾರಿ…

Read More

ಬೆಂಗಳೂರು: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ ಯುವಕ – Kannada News | Bangalore Basavanagudi Crime: 241g Gold Stolen, Recovered After Police Catch Accused

ಬೆಂಗಳೂರು, ಫೆ.10: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಯುವಕನೊಬ್ಬ ಕನ್ನ ಹಾಕಿದ್ದಾನೆ. ಈ ಘಟನೆ ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿದ್ದ 241 ಗ್ರಾಂ ಚಿನ್ನಾಭರಣ, 2.8 ಕೆಜಿ ಬೆಳ್ಳಿ 1.3 ಲಕ್ಷ ನಗದು ಕಳ್ಳತನ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದರು. ಮಾಲೀಕರು ಆಕೆಯ ಮೇಲೆ ಅತೀವ ನಂಬಿಕೆ ಇಟ್ಟು ಮನೆಯ ಕೀಲಿ ಕೈಯನ್ನು ಆಕೆಯ ಬಳಿಯೇ ನೀಡುತ್ತಿದ್ದರು. ಈ ಮಹಿಳೆಯ ಜೊತೆಗೆ ಆಕೆಯ ತಂಗಿಯ ಮಗನೂ…

Read More

ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ; ಏನಿದು ಪ್ರಕರಣ? – Kannada News | Assam CM Himanta Biswa Sarma files Rs 500 crore defamation case against Congress leaders

ನವದೆಹಲಿ, ಫೆಬ್ರವರಿ 10: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (Himanta Biswa Sarma) ಇಂದು ತಮ್ಮ ವಿರುದ್ಧ ಮಾಡಲಾದ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳ ಹಿನ್ನೆಲೆಯಲ್ಲಿ  ಹಿರಿಯ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಎಕ್ಸ್​​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ, “ಇಂದು ಪತ್ರಿಕಾಗೋಷ್ಠಿಯ ಮೂಲಕ ನನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಮತ್ತು…

Read More

ಸೌದಿ ಸಿನಿಮಾನಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್: ಸಿನಿಮಾ ಯಾವುದು? – Kannada News | Salman Khan and Sanjay Dutt acted in Saudi movie The seven dogs

ಭಾರತದ ಸ್ಟಾರ್ ನಟರುಗಳಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಅರಬ್ ದೇಶಗಳಲ್ಲಿ ಭಾರತೀಯ ಸಿನಿಮಾಗಳಿಗೆ (Indian Movies) ಭಾರಿ ದೊಡ್ಡ ಮಾರುಕಟ್ಟೆ ಇದೆ. ಯಾವ ಮಟ್ಟಿಗೆಂದರೆ ಅರಬ್ ದೇಶದ ಚಿತ್ರರಂಗದಲ್ಲಿ ನಿರ್ಮಾಣಗೊಂಡ ಸಿನಿಮಾಗಳಲ್ಲಿ ಭಾರತದ ಸ್ಟಾರ್ ನಟರುಗಳು ನಟಿಸಿದ್ದಾರೆ. ಅದುವೇ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್. ಬಾಲಿವುಡ್​ನ ಈ ಇಬ್ಬರು ಸ್ಟಾರ್ ನಟರು ಇದೀಗ ಸೌದಿಯ ಸಿನಿಮಾನಲ್ಲಿ ನಟಿಸಿದ್ದಾರೆ. ಸೌದಿ ಚಿತ್ರರಂಗದಲ್ಲಿ ನಿರ್ಮಾಣಗೊಂಡಿರುವ ‘ದಿ ಸೆವೆನ್ ಡಾಗ್ಸ್’ ಹೆಸರಿನ ಭರ್ಜರಿ ಆಕ್ಷನ್ ಸಿನಿಮಾನಲ್ಲಿ ಸಲ್ಮಾನ್ ಖಾನ್ ಮತ್ತು…

Read More