ಆಸ್ತಿ ವರ್ಗಾವಣೆಗೆ 9,950 ರೂ. ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ – Kannada News | Hagaraga Gram Panchayat Secretary Vedang Arrested by Lokayukta in Kalaburagi Bribe Case
ಕಲಬುರಗಿ ಆ. 4: ಖಾಲಿ ನಿವೇಶನದ ಆಸ್ತಿ ವರ್ಗಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದಾಗ ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೇದಾಂಗ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್ ಆಗಿ ಬಿದ್ದಿದ್ದಾರೆ. ಕಿಶನ್ ಪವಾರ್ ಅವರ ಹೆಸರಿನಲ್ಲಿದ್ದ ಖಾಲಿ ನಿವೇಶನವನ್ನು ಅವರ ಮರಣದ ನಂತರ ಕುಟುಂಬದವರ ಹೆಸರಿಗೆ ವರ್ಗಾಯಿಸಲು ಅರ್ಜಿ ಸಲ್ಲಿಸಲಾಗಿತ್ತು. ಮರಣ ಪ್ರಮಾಣಪತ್ರ ಹಾಗೂ ಅಗ್ರಿಕಲ್ಚರಲ್/ಸ್ಟಾಂಪ್ ಪತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಿದ್ದರೂ, ಕಾರ್ಯದರ್ಶಿ ವೇದಾಂಗ್ ಅವರು ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ…