Chamundeshwari Vardhanti Mahotsav: ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಸಂಭ್ರಮ! – Kannada News | Grand Chamundeshwari Vardhanti Mahotsav Celebrated at Mysurus Chamundi Hills

ಮೈಸೂರು, ಆಗಸ್ಟ್ 04: ನಾಡದೇವಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಚಾಮುಂಡೇಶ್ವರಿ ದೇವಸ್ಥಾನವು ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು. ಈ ಮಹತ್ವದ ದಿನದಂದು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 5 ಗಂಟೆಯಿಂದಲೇ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಅಭಿಷೇಕ ಮತ್ತು ಪೂಜೆಗಳನ್ನು ನೆರವೇರಿಸಲಾಯಿತು. ವರ್ಧಂತಿ ಮಹೋತ್ಸವದ ಪ್ರಯುಕ್ತ ದೇವಾಲಯವನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಮುಖ್ಯದ್ವಾರದಲ್ಲಿ ತೆಂಗಿನ ಗರಿಗಳು, ಕಬ್ಬು ಮತ್ತು ವಿವಿಧ ಬಗೆಯ ಸುಂದರ ಹೂವುಗಳನ್ನು ಬಳಸಿ ಭವ್ಯವಾದ ಮಂಟಪವನ್ನು ನಿರ್ಮಿಸಲಾಗಿತ್ತು. ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪ್ರಮೋದಾದೇವಿ ಒಡೆಯರ್ ಅವರು ಈ ವರ್ಧಂತಿ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Kottankulangara Temple: ಈ ದೇವಾಲಯದಲ್ಲಿ ಪುರುಷರು ಸೀರೆ ಉಡಲೇಬೇಕು; ಇಲ್ಲದಿದ್ದರೆ ದೇವಿಯ ದರ್ಶನ ಸಿಗಲ್ಲ, ಕಾರಣವೇನು ಗೊತ್ತಾ? – Kannada News | Kottankulangara Temple: Where Men Don Sarees and Makeup to Seek Goddess Devi’s Blessings

ಭಾರತದ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಆಚರಣೆಗಳಿವೆ. ಆದರೆ ಕೇರಳದ ಕೊಲ್ಲಂ ಜಿಲ್ಲೆಯ ಚವಲಕರ ಬಳಿ ಇರುವ ‘ಕೊಟ್ಟಂಕುಳಂಗರ ಶ್ರೀದೇವಿ ದೇವಾಲಯ’ದ ಸಂಪ್ರದಾಯ ಇಡೀ ಜಗತ್ತಿನ ಗಮನ ಸೆಳೆದಿದೆ. ಈ ದೇವಾಲಯದಲ್ಲಿ ದೇವಿಯ ದರ್ಶನ ಪಡೆಯಲು ಬಯಸುವ ಪುರುಷರು ಸಾಮಾನ್ಯ ಉಡುಪುಗಳನ್ನು ಧರಿಸಿ ಪ್ರವೇಶಿಸುವಂತಿಲ್ಲ. ಬದಲಿಗೆ, ಸೀರೆಯನ್ನುಟ್ಟು, ಸಂಪೂರ್ಣವಾಗಿ ಮಹಿಳೆಯಂತೆ ಶೃಂಗಾರಗೊಂಡ ನಂತರವೇ ದೇವಿಯ ಸನ್ನಿಧಿ ಪ್ರವೇಶಿಸಲು ಅವಕಾಶ ಸಿಗುತ್ತದೆ.

ಚಮಯವಿಳಕ್ಕು ಹಬ್ಬ:

ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ದೇವಾಲಯದಲ್ಲಿ ‘ಚಮಯವಿಳಕ್ಕು’ (Chamayavillakku) ಎಂಬ ವಾರ್ಷಿಕ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೆ, ವಿದೇಶಗಳಿಂದಲೂ ಸಾವಿರಾರು ಪುರುಷರು ದೇವಾಲಯಕ್ಕೆ ಆಗಮಿಸುತ್ತಾರೆ. ದೇವಾಲಯದ ನಿಯಮದಂತೆ ಪ್ಯಾಂಟ್, ಶರ್ಟ್, ಕುರ್ತಾ ಅಥವಾ ಯಾವುದೇ ಸಾಂಪ್ರದಾಯಿಕ ಪುರುಷರ ಉಡುಪಿನಲ್ಲಿ ಬರಲು ಅವಕಾಶವಿಲ್ಲ. ದೇವಿಯ ಕೃಪೆಗೆ ಪಾತ್ರರಾಗಲು ಪ್ರತಿಯೊಬ್ಬ ಭಕ್ತನೂ ಸೀರೆ ಉಟ್ಟು, ಮುಖಕ್ಕೆ ಮೇಕಪ್ ಹಚ್ಚಿ, ಕೈಗೆ ಬಳೆ, ಕೂದಲಿಗೆ ಹೂವಿನ ಹಾರ ಮತ್ತು ಆಭರಣಗಳನ್ನು ಧರಿಸಿ ಮಹಿಳೆಯ ರೂಪ ತಳೆಯುತ್ತಾರೆ. ರಾತ್ರಿಯಿಡೀ ಕೈಯಲ್ಲಿ ದೀಪ (ವಿಳಕ್ಕು) ಹಿಡಿದು ದೇವಿಯ ಪ್ರದಕ್ಷಿಣೆ ಹಾಕುವುದು ಈ ಹಬ್ಬದ ಮುಖ್ಯ ವೈಶಿಷ್ಟ್ಯ.

ದೇವಾಲಯದ ಆವರಣದಲ್ಲಿ ತಾತ್ಕಾಲಿಕ ಬ್ಯೂಟಿ ಪಾರ್ಲರ್‌ಗಳು:

ಹಬ್ಬದ ದಿನಗಳಲ್ಲಿ ಲಕ್ಷಾಂತರ ಪುರುಷರು ಮಹಿಳೆಯರ ವೇಷ ಧರಿಸುವುದರಿಂದ, ದೇವಾಲಯದ ಸುತ್ತಮುತ್ತ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ದೇವಾಲಯದ ಸುತ್ತ ನೂರಾರು ತಾತ್ಕಾಲಿಕ ಬ್ಯೂಟಿ ಪಾರ್ಲರ್‌ಗಳು ಮತ್ತು ಮೇಕಪ್ ಸ್ಟಾಲ್‌ಗಳು ತಲೆಯೆತ್ತುತ್ತವೆ. ಪರಿಣಿತ ಮೇಕಪ್ ಕಲಾವಿದರು ಪುರುಷರಿಗೆ ಅಚ್ಚುಕಟ್ಟಾಗಿ ಸೀರೆ ಕಟ್ಟುವುದು, ಮೇಕಪ್ ಮಾಡುವುದು ಹಾಗೂ ಆಭರಣಗಳನ್ನು ತೊಡಿಸಲು ಸಹಾಯ ಮಾಡುತ್ತಾರೆ. ವಯಸ್ಸಿನ ಭೇದವಿಲ್ಲದೆ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾವುದೇ ಹಿಂಜರಿಕೆಯಿಲ್ಲದೆ ಭಕ್ತಿಯಿಂದ ಈ ಅಲಂಕಾರ ಮಾಡಿಕೊಂಡು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಈ ಸುಂದರ ಆಚರಣೆಯ ಹಿಂದಿರುವ ಜಾನಪದ ಐತಿಹ್ಯ:

ಈ ಅಪರೂಪದ ಆಚರಣೆಯ ಹಿಂದೆ ಒಂದು ಕುತೂಹಲಕಾರಿ ಹಿನ್ನೆಲೆಯಿದೆ. ಬಹಳ ಹಿಂದೆ, ಈ ಪ್ರದೇಶದಲ್ಲಿದ್ದ ದನಗಾಹಿ ಹುಡುಗರು ಆಟವಾಡುತ್ತಾ ಹುಡುಗಿಯರಂತೆ ವೇಷ ಧರಿಸಿ ಇಲ್ಲಿನ ಸ್ವಯಂಭೂ ಕಲ್ಲಿಗೆ (ದೇವಿಯ ಸಂಕೇತ) ಹೂವುಗಳನ್ನು ಅರ್ಪಿಸಿ ಪೂಜಿಸುತ್ತಿದ್ದರು. ಅವರ ಮುಗ್ಧ ಭಕ್ತಿಗೆ ಒಲಿದ ದೇವಿಯು ಪ್ರತ್ಯಕ್ಷಳಾಗಿ ಅವರಿಗೆ ಆಶೀರ್ವದಿಸಿದಳು ಎಂಬ ನಂಬಿಕೆಯಿದೆ. ಆ ಘಟನೆಯ ನೆನಪಿಗಾಗಿ ಮತ್ತು ದೇವಿಯನ್ನು ಪ್ರಸನ್ನಗೊಳಿಸಲು ಅಂದಿನಿಂದ ಪುರುಷರು ಮಹಿಳೆಯರ ವೇಷ ಧರಿಸಿ ಪೂಜಿಸುವ ಸಂಪ್ರದಾಯ ಆರಂಭವಾಯಿತು.

ಇಷ್ಟಾರ್ಥ ಸಿದ್ಧಿಸುವ ಪವಿತ್ರ ಕ್ಷೇತ್ರ:

ಈ ದೇವಾಲಯಕ್ಕೆ ಭೇಟಿ ನೀಡಿ, ಸ್ತ್ರೀ ರೂಪದಲ್ಲಿ ದೇವಿಯನ್ನು ಆರಾಧಿಸಿದರೆ ಭಕ್ತರ ಪ್ರತಿಯೊಂದು ಇಷ್ಟಾರ್ಥಗಳೂ ಈಡೇರುತ್ತವೆ ಎಂಬ ದೃಢ ನಂಬಿಕೆಯಿದೆ. ಉತ್ತಮ ಉದ್ಯೋಗ, ಆರೋಗ್ಯ, ಕೌಟುಂಬಿಕ ಶಾಂತಿ, ವಿವಾಹ ಯೋಗ ಹಾಗೂ ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಿ ಸಹಸ್ರಾರು ಭಕ್ತರು ಈ ಹಬ್ಬದಲ್ಲಿ ಭಾಗವಹಿಸುತ್ತಾರೆ. ಧರ್ಮ, ಭಕ್ತಿ ಮತ್ತು ಲಿಂಗ ನಿರಪೇಕ್ಷಿತ ಸಂಸ್ಕೃತಿಯನ್ನು ಬೆಸೆಯುವ ಈ ಆಚರಣೆ ಕೇರಳದ ಅತ್ಯಂತ ಅಪರೂಪದ ಆಧ್ಯಾತ್ಮಿಕ ಪರಂಪರೆಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

3.5 ತಿಂಗಳ ನಂತರ ಮನೆಗೆ ಮರಳಿದ ಸಾಕುನಾಯಿ: ಅಂಬಾಜಿ ದೇವಿ ಹರಕೆ ತೀರಿಸಲು 60 ಕಿ.ಮೀ ನಡೆದ ಮಾಲೀಕ – Kannada News | Missing Dog Returns: Owner Walks 60km to Ambaji Temple for Vow Fulfilment

ಅಹಮದಾಬಾದ್, ಆಗಸ್ಟ್​ 04: ಸಾಕುಪ್ರಾಣಿ ಮತ್ತು ಅದರ ಮಾಲೀಕರ ನಡುವಿನ ಮುರಿಯಲಾಗದ ಪ್ರೀತಿ ಹಾಗೂ ನಂಬಿಕೆಗೆ ಸಾಕ್ಷಿಯಾಗುವ ಹೃದಯಸ್ಪರ್ಶಿ ಘಟನೆಯೊಂದು ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ. ಸುಮಾರು ಮೂರೂವರೆ ತಿಂಗಳಿನಿಂದ ಕಾಣೆಯಾಗಿದ್ದ ‘ಟೈಗರ್’ ಹೆಸರಿನ ಲ್ಯಾಬ್ರಡಾರ್ ತಳಿಯ ಸಾಕು ನಾಯಿ(Dog) ಅಚ್ಚರಿಯ ರೀತಿಯಲ್ಲಿ ಮನೆಗೆ ಮರಳಿದ್ದು, ಹರಕೆ ತೀರಿಸಲು ಮಾಲೀಕ ಹಾಗೂ ಸಿಬ್ಬಂದಿ ಪ್ರಸಿದ್ಧ ಅಂಬಾಜಿ ದೇವಸ್ಥಾನಕ್ಕೆ 60 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಪಾದಯಾತ್ರೆ ನಡೆಸಿದ್ದಾರೆ.

ಮೂರು ತಿಂಗಳ ಶೋಧ ಮತ್ತು ಹರಕೆ
ಹೋಟೆಲ್ ಮಾಲೀಕರಾಗಿದ್ದ ಬನಸ್ಕಾಂತ ನಿವಾಸಿಯೊಬ್ಬರ ಪ್ರೀತಿಯ ನಾಯಿ ‘ಟೈಗರ್’ ಮೂರು ತಿಂಗಳ ಹಿಂದೆ ದಿಢೀರ್ ಕಣ್ಮರೆಯಾಗಿತ್ತು. ಮಾಲೀಕರು ಆ ಪ್ರದೇಶದಾದ್ಯಂತ ಹುಡುಕಾಟ ನಡೆಸಿದರೂ ನಾಯಿ ಪತ್ತೆಯಾಗಿರಲಿಲ್ಲ. ಕೊನೆಗೆ ಭರವಸೆ ಕಳೆದುಕೊಳ್ಳದ ಮಾಲೀಕರು, ಪ್ರಸಿದ್ಧ ಶ್ರೀ ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ನನ್ನ ಪ್ರೀತಿಯ ನಾಯಿ ಸುರಕ್ಷಿತವಾಗಿ ಮರಳಿ ಬಂದರೆ ಹೋಟೆಲ್ ಸಿಬ್ಬಂದಿಯೊಂದಿಗೆ 60 ಕಿ.ಮೀ ನಡೆದುಕೊಂಡು ಬಂದು ದರ್ಶನ ಪಡೆಯುತ್ತೇನೆ ಎಂದು ಹರಕೆ ಹೊತ್ತಿದ್ದರು.

ಮಾಲೀಕರ ಧ್ವನಿ ಕೇಳಿ ಓಡಿ ಬಂದ ‘ಟೈಗರ್‘: ಇತ್ತೀಚೆಗೆ ರಸ್ತೆಯಲ್ಲಿ ಹಾದುಹೋಗುತ್ತಿದ್ದ ರಿಕ್ಷಾವೊಂದರಲ್ಲಿದ್ದ ಟೈಗರ್, ತನ್ನ ಮಾಲೀಕರ ಧ್ವನಿಯನ್ನು ಗುರುತಿಸಿ ತಕ್ಷಣವೇ ಕೆಳಗಿಳಿದು ನೇರವಾಗಿ ಮಾಲೀಕರ ಬಳಿಗೆ ಓಡಿಬಂದಿದೆ. ತಿಂಗಳುಗಳ ನಂತರ ನಡೆದ ಈ ಅದ್ಭುತ ಮರುಮಿಲನ ಕುಟುಂಬಸ್ಥರಲ್ಲಿ ಸಂತಸ ತಂದಿದೆ.

ಮತ್ತಷ್ಟು ಓದಿ: Video: ಲಿಫ್ಟ್​ ಒಳಗೆ ಯುವತಿಯರ ಮೇಲೆ ಸಾಕು ನಾಯಿ ದಾಳಿ

ಕೊಟ್ಟ ಮಾತಿನಂತೆ ಹೋಟೆಲ್ ಮಾಲೀಕರು ತಮ್ಮ ಸಮಸ್ತ ಸಿಬ್ಬಂದಿ ಹಾಗೂ ಮರಳಿ ಬಂದ ನಾಯಿ ‘ಟೈಗರ್’ ಜೊತೆ ಅಂಬಾಜಿ ದೇವಸ್ಥಾನಕ್ಕೆ 60 ಕಿ.ಮೀ ಪಾದಯಾತ್ರೆ ಕೈಗೊಂಡರು. ದಾರಿಯುದ್ದಕ್ಕೂ ಸ್ಪೀಕರ್‌ಗಳಲ್ಲಿ ಭಕ್ತಿಗೀತೆಗಳನ್ನು ಹಾಕಿ, ನಾಯಿಯೊಂದಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಾ ಸಾಗುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿವೆ.

ಗುಜರಾತ್‌ನ ಅರಾವಳಿ ಪರ್ವತ ಶ್ರೇಣಿಯಲ್ಲಿರುವ ‘ಅಂಬಾಜಿ ದೇವಾಲಯ’ವು ಭಾರತದ ಪ್ರಮುಖ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಪಾದಯಾತ್ರೆ (Padayatra) ನಡೆಸಿ ತಮ್ಮ ಹರಕೆ ತೀರಿಸುತ್ತಾರೆ. ಲ್ಯಾಬ್ರಡಾರ್ ತಳಿಯ ನಾಯಿಗಳು ತಮ್ಮ ಮಾಲೀಕರ ಧ್ವನಿ, ವಾಸನೆ ಮತ್ತು ವರ್ತನೆಯನ್ನು ವರ್ಷಗಳ ಕಾಲ ನೆನಪಿಟ್ಟುಕೊಳ್ಳುವ ಅದ್ಭುತ ಶಕ್ತಿಯನ್ನು ಹೊಂದಿರುತ್ತವೆ ಎಂಬುದಕ್ಕೆ ಈ ಘಟನೆ ಜೀವಂತ ನಿದರ್ಶನವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..! – Kannada News | Women’s Asia Cup 2026 Date and Schedule

ಮಹಿಳಾ ಟಿ20 ಏಷ್ಯಾಕಪ್ 2026 ರ ಪಂದ್ಯಾವಳಿಯು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಈ ಟೂರ್ನಿಗಾಗಿ ಡೇಟ್ ಫಿಕ್ಸ್ ಮಾಡಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಎಸಿಸಿ ಇಮೇಲ್ ಮತ್ತು ಲೋಗೋ ಹಂಚಿಕೆ:

ಜುಲೈ 22 ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಅಧಿಕೃತ ಇಮೇಲ್ ಒಂದನ್ನು ಕಳುಹಿಸಿದೆ. ಅದರಲ್ಲಿ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ಹಂಚಿಕೊಳ್ಳಲಾಗಿದ್ದು, ಆತಿಥೇಯ ದೇಶದ ಕ್ರೀಡಾಂಗಣಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇದರೊಂದಿಗೆ, ಎಲ್ಲಾ ತಂಡಗಳು ಆಗಸ್ಟ್ 27 ರೊಳಗೆ ಯುಎಇ ತಲುಪಬೇಕು ಮತ್ತು ಸೆಪ್ಟೆಂಬರ್ 13 ರಂದು ಫೈನಲ್ ಪಂದ್ಯ ಜರುಗಲಿದೆ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪಿಸಿಬಿ  ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಅವರು ಎಸಿಸಿ ಅಧ್ಯಕ್ಷರಾಗಿದ್ದು, ಅವರ ಅಂತಿಮ ಅನುಮೋದನೆ ಸಿಕ್ಕ ತಕ್ಷಣ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಬಿಸಿಸಿಐ ಎಡವಟ್ಟು!

ಈ ಪಂದ್ಯಾವಳಿಯ ಸಿದ್ಧತೆ ಎಷ್ಟು ವೇಗವಾಗಿ ನಡೆಯುತ್ತಿದೆ ಎಂದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗೆ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಿತ್ತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಈ ತಾತ್ಕಾಲಿಕ ತಂಡದಲ್ಲಿ ಪ್ರೇಮಾ ರಾವತ್ ಸೇರಿದಂತೆ ಪ್ರಮುಖ ಆಟಗಾರ್ತಿಯರ ಹೆಸರಿತ್ತು. ಆದರೆ, ಎಸಿಸಿ ಇನ್ನು ಅಧಿಕೃತವಾಗಿ ವಿಂಡೋ ತೆರೆಯದ ಕಾರಣ ಬಿಸಿಸಿಐ ತಕ್ಷಣವೇ ಆ ಪೋಸ್ಟ್ ಅನ್ನು ತನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದೆ.

8 ದೇಶಗಳ ಕದನ:

ಮುಂಬರುವ ಮಹಿಳಾ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳಾವುವು ಎಂದರೆ…

ಮುಖಾಮುಖಿಯಾಗಲಿರುವ 8 ಬಲಿಷ್ಠ ತಂಡಗಳು

  1. ಭಾರತ
  2. ಶ್ರೀಲಂಕಾ
  3. ಪಾಕಿಸ್ತಾನ್
  4. ಬಾಂಗ್ಲಾದೇಶ್
  5. ನೇಪಾಳ
  6. ಮಲೇಷ್ಯಾ
  7.  ಥಾಯ್ಲೆಂಡ್
  8. ಯುಎಇ

ಇದನ್ನೂ ಓದಿ: ಪಾಕಿಸ್ತಾನ್​ ಸೂಪರ್ ಲೀಗ್​ನಲ್ಲಿ ಮೊಹಮ್ಮದ್ ಅಮಿರ್ ‘ವಿದೇಶಿ ಆಟಗಾರ’!

ಈ ಏಷ್ಯಾ ಕಪ್ ವೇಳಾಪಟ್ಟಿಯು ಫೈನಲ್ ತಲುಪುವ ತಂಡಗಳಿಗೆ ಹೊಸ ಸಮಸ್ಯೆಯನ್ನುಂಟು ಮಾಡಲಿದೆ. ಏಕೆಂದರೆ ಜಪಾನ್‌ನ ನಾಗೋಯಾದಲ್ಲಿ ನಡೆಯಲಿರುವ 2026 ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 17 ರಿಂದ 24 ರವರೆಗೆ ನಿಗದಿಯಾಗಿದೆ. ಏಷ್ಯಾ ಕಪ್ ಫೈನಲ್ ಮುಗಿದ ಕೇವಲ 4 ದಿನಗಳಲ್ಲಿ ಆಟಗಾರ್ತಿಯರು ಯುಎಇಯಿಂದ ಜಪಾನ್‌ಗೆ ಪ್ರಯಾಣ ಬೆಳೆಸಿ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.

Source link

ಅಜಿತ್ ಕುಮಾರ್ 64ನೇ ಸಿನಿಮಾಗೆ ‘ಡೇರ್‌ಡೆವಿಲ್’ ಶೀರ್ಷಿಕೆ; ರೇಸಿಂಗ್ ಸಾಕ್ಷ್ಯಚಿತ್ರ ‘ಗ್ಲಾಡಿಯೇಟರ್ಸ್’ ಫಸ್ಟ್ ಲುಕ್ ಔಟ್ – Kannada News | Ajith Kumar’s AK64 Titled ‘Daredevil’; First Look of Racing Documentary ‘Gladiators’ Released

ತಮಿಳು ಚಿತ್ರರಂಗದ ನಟ ಅಜಿತ್ ಕುಮಾರ್ (Ajit Kumar) ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ಈಗ ಅವರು ಹೊಸ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಸಿಹಿ ಸುದ್ದಿ ಸಿಕ್ಕಿದೆ. ಅಜಿತ್ ಅವರ 64ನೇ ಸಿನಿಮಾಗೆ ‘ಡೇರ್‌ಡೆವಿಲ್’ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಜೊತೆಗೆ ಅಜಿತ್ ಅವರ ಕಾರು ರೇಸಿಂಗ್ ಪಯಣದ ಕುರಿತ ‘ಗ್ಲಾಡಿಯೇಟರ್ಸ್’ ಸಾಕ್ಷ್ಯಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.

ಶಾಲಿನ್ ನಿರ್ಮಾಣದ ‘ಡೇರ್‌ಡೆವಿಲ್’

ಅಜಿತ್ ಅಭಿನಯದ ‘ಎಕೆ 64’ ಸಿನಿಮಾವನ್ನು ಅಧಿಕೃತವಾಗಿ ‘ಡೇರ್‌ಡೆವಿಲ್’ ಎಂದು ಕರೆಯಲಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಅಧಿಕ್ ರವಿಚಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅಜಿತ್ ಅವರ ಪತ್ನಿ ಶಾಲಿನ್ ಚಿತ್ರರಂಗಕ್ಕೆ ಮರಳಿದ್ದಾರೆ. ಅವರು ‘ಬ್ರೇವ್ ಹಾರ್ಟ್ಸ್ ಪ್ರೊಡಕ್ಷನ್’ ಎಂಬ ಹೊಸ ಬ್ಯಾನರ್ ಆರಂಭಿಸಿದ್ದಾರೆ. ಈ ಬ್ಯಾನರ್ ಅಡಿಯಲ್ಲೇ ಸಿನಿಮಾ ನಿರ್ಮಾಣವಾಗಲಿದೆ. ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ಇಂಗಿತವನ್ನು ತಂಡ ವ್ಯಕ್ತಪಡಿಸಿದೆ.

ಸಿನಿಮಾದ ಚಿತ್ರಕಥೆ ಈಗಾಗಲೇ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಇದು ಅಜಿತ್ ಮತ್ತು ಅನಿರುದ್ಧ್ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾವಾಗಿದೆ.

ರೇಸಿಂಗ್ ಸಾಕ್ಷ್ಯಚಿತ್ರ ‘ಗ್ಲಾಡಿಯೇಟರ್ಸ್’ ಫಸ್ಟ್ ಲುಕ್

ಅಜಿತ್ ಅವರ ಮೋಟಾರ್ ಸ್ಪೋರ್ಟ್ಸ್ ರೇಸಿಂಗ್ ಜೀವನದ ಕುರಿತು ಸಾಕ್ಷ್ಯಚಿತ್ರ ತಯಾರಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ‘ಗ್ಲಾಡಿಯೇಟರ್ಸ್: ಇನ್ ಪರ್ಸ್ಯೂಟ್ ಆಫ್ ಚಾಲೆಂಜಸ್’ ಎಂದು ಹೆಸರಿಡಲಾಗಿದೆ. ಸೋಮವಾರ ಇದರ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಇದನ್ನೂ ಓದಿ: ಅಜಿತ್​ಗೆ ದೊಡ್ಡ ಮೊತ್ತದ ಸಂಭಾವನೆ ಕೊಡಲು ನಿರ್ಮಾಪಕರ ಹಿಂದೇಟು? ಶುರುವಾಗಿದೆ ಭಯ

ಈ ಸಾಕ್ಷ್ಯಚಿತ್ರವನ್ನು ಎ.ಎಲ್. ವಿಜಯ್ ನಿರ್ದೇಶಿಸಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಇದು ಸುಮಾರು 90 ನಿಮಿಷಗಳ ಸಾಕ್ಷ್ಯಚಿತ್ರವಾಗಿದೆ. ದುಬೈ ಮತ್ತು ಯುರೋಪ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ರೇಸಿಂಗ್ ಟ್ರ್ಯಾಕ್‌ಗಳ ದೃಶ್ಯಗಳು ಇದರಲ್ಲಿವೆ. ಅಜಿತ್ ಕುಮಾರ್ ಸ್ವತಃ ‘ಅಜಿತ್ ಕುಮಾರ್ ರೇಸಿಂಗ್’ ತಂಡದ ಮಾಲೀಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೀದಿ ಬದಿ ವ್ಯಾಪಾರಿಗಳ ಎತ್ತಂಗಡಿಯಾದರೂ ಪಾದಚಾರಿಗಳಿಗೆ ಜಾಗವಿಲ್ಲ! ಗಾಂಧಿ ಬಜಾರ್‌ನಲ್ಲಿ ಅಕ್ರಮ ಪಾರ್ಕಿಂಗ್ ಕಾಟ – Kannada News | Bengaluru Gandhi Bazaar Footpath Encroachment and Illegal Parking Trouble Pedestrians

ಗಾಂಧಿ ಬಜಾರ್‌ನಲ್ಲಿ ಅಕ್ರಮ ಪಾರ್ಕಿಂಗ್ ಕಾಟImage Credit source: tv9

ಬೆಂಗಳೂರು, ಆಗಸ್ಟ್ 4: ಬೆಂಗಳೂರು (Bengaluru) ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಪಾದಚಾರಿಗಳ ಸುರಕ್ಷತೆಗೆ ಅಗತ್ಯವಾದ ಮೂಲಸೌಕರ್ಯ ಮಾತ್ರ ಇನ್ನೂ ಸಮರ್ಪಕವಾಗಿಲ್ಲ. ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಫುಟ್‌ಪಾತ್‌ಗಳನ್ನೇ ವಾಹನಗಳ ಪಾರ್ಕಿಂಗ್ ಹಾಗೂ ಅತಿಕ್ರಮಣಕ್ಕೆ ಬಳಸುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಂಧಿ ಬಜಾರ್‌ನ ಹಲವು ಕಡೆ ಫುಟ್‌ಪಾತ್‌ಗಳ ಮೇಲೆ ಕಾರು, ಬೈಕ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಮತ್ತೊಂದೆಡೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರ ಅತಿಕ್ರಮಣಗಳಿಂದ ಪಾದಚಾರಿಗಳಿಗೆ ಫುಟ್‌ಪಾತ್ ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರು ವಾಹನಗಳ ನಡುವೆಯೇ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ಅಪಘಾತದ ಆತಂಕ ಎದುರಾಗಿದೆ.

ವಿಶೇಷವಾಗಿ ಜನನಿಬಿಡ ಪ್ರದೇಶವಾಗಿರುವ ಗಾಂಧಿ ಬಜಾರ್‌ನಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಡುತ್ತಾರೆ. ಆದರೆ ಪಾದಚಾರಿಗಳಿಗಾಗಿ ಮೀಸಲಿರುವ ಜಾಗವೇ ವಾಹನಗಳ ಪಾಲಾಗಿರುವುದರಿಂದ ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಎಲ್ಲರೂ ಸಮಸ್ಯೆ ಎದುರಿಸುವಂತಾಗಿದೆ.

ಫುಟ್​ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದರೂ ಮತ್ತದೇ ಸಮಸ್ಯೆ

ಫುಟ್‌ಪಾತ್ ಅತಿಕ್ರಮಣ ಹಾಗೂ ಅಕ್ರಮ ಪಾರ್ಕಿಂಗ್ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಆಗಾಗ್ಗೆ ಕಾರ್ಯಾಚರಣೆ ನಡೆಸುತ್ತಾರೆ. ಆದರೆ ಕಾರ್ಯಾಚರಣೆ ಮುಗಿದ ಕೆಲವೇ ದಿನಗಳಲ್ಲಿ ಮತ್ತೆ ಫುಟ್‌ಪಾತ್‌ಗಳಲ್ಲಿ ವಾಹನಗಳ ನಿಲುಗಡೆ ಹಾಗೂ ಅತಿಕ್ರಮಣ ಮುಂದುವರಿಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ಪಾದಚಾರಿಗಳಿಗಾಗಿ ನಿರ್ಮಿಸಿರುವ ಫುಟ್‌ಪಾತ್‌ಗಳನ್ನು ಅದೇ ಉದ್ದೇಶಕ್ಕೆ ಬಳಸುವಂತೆ ನೋಡಿಕೊಳ್ಳಬೇಕು. ಅಕ್ರಮ ಪಾರ್ಕಿಂಗ್ ಮತ್ತು ಅತಿಕ್ರಮಣದ ವಿರುದ್ಧ ನಿರಂತರ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 490 ಕಿ.ಮೀ. ಗಡಿ ದಾಟಿದ ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ: ಜಿಬಿಎ ಗುರಿ ಎಷ್ಟು ಗೊತ್ತಾ?

ವಾಹನಗಳ ಸಂಚಾರಕ್ಕೆ ನೀಡುವಷ್ಟೇ ಆದ್ಯತೆಯನ್ನು ಪಾದಚಾರಿಗಳ ಸುರಕ್ಷತೆಗೂ ನೀಡಬೇಕು. ಫುಟ್‌ಪಾತ್ ಇದ್ದರೂ ಅದನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿ ಮುಂದುವರಿದರೆ, ನಗರದಲ್ಲಿ ಪಾದಚಾರಿಗಳ ಸುರಕ್ಷತೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ; ರಾಜೀನಾಮೆ ಎಚ್ಚರಿಕೆ, ಬೆಂಬಲಿಗರ ಪ್ರತಿಭಟನೆ – Kannada News | Karnataka Cabinet Expansion: Congress MLAs Protest Over Denied Ministerial Berths

ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಂದರ್ಭದ ಚಿತ್ರImage Credit source: tv9

ಬೆಂಗಳೂರು, ಆಗಸ್ಟ್ 4: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ನಡೆದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕಿಚ್ಚು ಹೊತ್ತಿಕೊಂಡಿದೆ. ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದು ಅದು ಹುಸಿಯಾದ ಬೆನ್ನಲ್ಲೇ ಹಲವು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ಶಾಸಕ ಸ್ಥಾನ ಹಾಗೂ ನಿಗಮ-ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಶಾಸಕರ ಬೆಂಬಲಿಗರು ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ. ಪಾಟೀಲ್, ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕರು ಹಾಗೂ ಪಕ್ಷದ ನಿಷ್ಠಾವಂತರಿಗೆ ಇದು ಕಾಲವಲ್ಲ ಎಂದು ಅಸಮಾಧಾನ ಹೊರಹಾಕಿರುವ ಅವರು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಇನ್ನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ತಮಗೆ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ಆರೋಪಿಸಿರುವ ಅವರು, ಶಾಸಕ ಸ್ಥಾನ ಹಾಗೂ ನಿಗಮ-ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ನಾರಾಯಣಸ್ವಾಮಿ, ನಂಜೇಗೌಡ, ಸಂಗಮೇಶ್ ಅಸಮಾಧಾನ

ಕೋಲಾರದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲಿಗ ಹರೀಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನ ತಪ್ಪಿಸಿದ್ದಕ್ಕೆ ಕೆ.ಎಚ್. ಮುನಿಯಪ್ಪ ಅವರ ವಿರುದ್ಧವೂ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಲೂರು ಶಾಸಕ ಕೆ.ವೈ. ನಂಜೇಗೌಡ ಕೂಡ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಕೂಡ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಬೆಂಬಲಿಗರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಕಡೆಯಿಂದ ಆಮಿಷ ಬಂದಿದ್ದರೂ ತಾನು ಪಕ್ಷ ತೊರೆದಿಲ್ಲ ಎಂದು ಹೇಳಿರುವ ಅವರು, ಕ್ಷೇತ್ರದ ಜನರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರೆ ಆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಹಿರಿಯ ಶಾಸಕ ಡಿ.ಜಿ. ಶಾಂತನಗೌಡ ಕೂಡ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ. ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಮಹದೇವಪ್ಪ ಬೆಂಬಲಿಗರಿಂದಲೂ ಒತ್ತಡ

ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವುದು ಅವರ ಬೆಂಬಲಿಗರಲ್ಲೂ ಅಸಮಾಧಾನ ಮೂಡಿಸಿದೆ. ಮಹದೇವಪ್ಪ ಅವರ ಪುತ್ರ ಹಾಗೂ ಸಂಸದ ಸುನಿಲ್ ಬೋಸ್ ಅವರಿಗೆ ರಾಜೀನಾಮೆ ನೀಡುವಂತೆ ಬೆಂಬಲಿಗರು ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಪಕ್ಷದೊಳಗಿನ ಅಸಮಾಧಾನ ಮತ್ತಷ್ಟು ಬಹಿರಂಗವಾಗಿದೆ.

ಭಾವೋದ್ವೇಗದಿಂದ ನಿರ್ಧಾರ ಕೈಗೊಳ್ಳಬೇಡಿ: ಹರಿಪ್ರಸಾದ್ ಮನವಿ

ಈ ನಡುವೆ, ಸಚಿವ ಸ್ಥಾನ ಸಿಗದಿರುವುದಕ್ಕೆ ಶಾಸಕರು ಭಾವೋದ್ವೇಗದಿಂದ ರಾಜೀನಾಮೆಯಂತಹ ನಿರ್ಧಾರ ಕೈಗೊಳ್ಳಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮನವಿ ಮಾಡಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರೊಂದಿಗೆ ವೈಯಕ್ತಿಕವಾಗಿ ಮಾತನಾಡಿ, ಅವರ ನೋವು ಮತ್ತು ಅಭಿಪ್ರಾಯಗಳನ್ನು ಹೈಕಮಾಂಡ್ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮೈಸೂರಿನಲ್ಲಿ ತನ್ವೀರ್ ಸೇಠ್ ಬೆಂಬಲಿಗರ ಪ್ರತಿಭಟನೆ

ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡದಿರುವುದು ಮೈಸೂರಿನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಟೌನ್‌ಹಾಲ್ ಸುತ್ತಮುತ್ತಲೂ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆ ವೇಳೆ ತನ್ವೀರ್ ಸೇಠ್ ಅವರ ಬೆಂಬಲಿಗ ತಬ್ರೇಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಲ್ಲೂ ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರಿಂದ ಪ್ರತಿಭಟನೆಗಳು ನಡೆದಿವೆ. ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಅವರ ಬೆಂಬಲಿಗರು ಇಬ್ಬರಿಗೂ ಸಚಿವ ಸ್ಥಾನ ಸಿಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗರಬಾವಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಬೆಂಬಲಿಗರು, ಟೋಲ್‌ಗೇಟ್ ಸರ್ಕಲ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಫೋಟೋ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲೂ ಶಾಸಕ ಅಶೋಕ ಪಟ್ಟಣ ಅವರಿಗೆ ಸಚಿವ ಸ್ಥಾನ ಸಿಗದಿರುವುದನ್ನು ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಶಾಸಕ ನಾಡಗೌಡ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರೆ, ಮುಧೋಳದಲ್ಲಿ ಶಾಸಕ ಆರ್.ಬಿ. ತಿಮ್ಮಾಪುರ ಅವರ ಬೆಂಬಲಿಗರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲೂ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಬಾಗೇಪಲ್ಲಿಯಲ್ಲಿ ಮೂರು ತಾಲೂಕು ಬಂದ್‌ಗೆ ಕರೆ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿವಿಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿರುವ ಬೆಂಬಲಿಗರು, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಬಂದ್ ನಡೆಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: “ತಾಳ್ಮೆಯೇ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ, ಅಸಮಾಧಾನದ ಪ್ರಶ್ನೆಯೇ ಇಲ್ಲ”: ನೂತನ ಸಂಪುಟ ಸಭೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ

ಹೀಗೆ ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಸರಣಿ ಮುಂದುವರಿದಿದ್ದು, ಹಲವು ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಬೆಂಬಲಿಗರ ಪ್ರತಿಭಟನೆ, ರಾಜೀನಾಮೆ ಎಚ್ಚರಿಕೆ ಹಾಗೂ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ಪಕ್ಷದ ನಾಯಕತ್ವಕ್ಕೆ ಹೊಸ ಸವಾಲು ತಂದಿವೆ. ಈ ಅಸಮಾಧಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಹೇಗೆ ಶಮನಗೊಳಿಸಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:29 am, Tue, 4 August 26

Source link

Karnataka Dam Water Level: ಕೆಆರ್‌ಎಸ್, ಆಲಮಟ್ಟಿಗೆ ಬೃಹತ್‌ ಒಳಹರಿವು! ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ – Kannada News | Karnataka Reservoir Water Level on August 03; KRS, Almatti, Hemavathi Inflow Increases

ಬೆಂಗಳೂರು, ಆಗಸ್ಟ್ 04: ಕಾವೇರಿ, ಕೃಷ್ಣಾ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ರೈತರ ಮುಖದಲ್ಲಿ ಹರ್ಷ ಮೂಡಿಸುವ ಜೊತೆಗೆ, ಕೆಲವು ಕಡೆ ಕಾಲುವೆ ದುರಸ್ತಿ ಕೊರತೆಯಿಂದ ಭೀತಿಯೂ ಎದುರಾಗಿದೆ.

1. ಕೆಆರ್‌ಎಸ್ ಜಲಾಶಯ

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಡ್ಯಾಂಗೆ ಬೃಹತ್ ಪ್ರಮಾಣದ ಒಳಹರಿವು ದಾಖಲಾಗಿದೆ.

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 103.40 ಅಡಿ
  • ಒಳಹರಿವು: 31,122 ಕ್ಯೂಸೆಕ್
  • ಹೊರಹರಿವು: 1,882 ಕ್ಯೂಸೆಕ್ (ಕುಡಿಯುವ ನೀರಿಗಾಗಿ)
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 25.594 ಟಿಎಂಸಿ

2. ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 518.89 ಮೀಟರ್
  • ಒಳಹರಿವು: 1,40,257 ಕ್ಯೂಸೆಕ್
  • ಹೊರಹರಿವು: 1,49,597 ಕ್ಯೂಸೆಕ್

3. ಹೇಮಾವತಿ ಜಲಾಶಯ (ಹಾಸನ)

ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲೂ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಭರವಸೆ ಮೂಡಿಸಿದೆ.

  • ಗರಿಷ್ಠ ಮಟ್ಟ: 2922 ಅಡಿ (37 ಟಿಎಂಸಿ)
  • ಇಂದಿನ ಮಟ್ಟ: 2911.24 ಅಡಿ (28.409 ಟಿಎಂಸಿ)
  • ಒಳಹರಿವು: 5,041 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್ (ಕಾಲುವೆಗೆ: 00 ಕ್ಯೂಸೆಕ್)

ಕಳೆದ ವರ್ಷ ಇದೇ ದಿನ 2921.80 ಅಡಿ ಅಂದರೆ 36.910 ಟಿಎಂಸಿ ನೀರಿತ್ತು ಹಾಗೂ 9,859 ಕ್ಯೂಸೆಕ್ ಒಳಹರಿವಿತ್ತು.

4. ತುಂಗಭದ್ರಾ ಜಲಾಶಯ

ಮಲೆನಾಡಿನ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, 105 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 50 ಟಿಎಂಸಿ ನೀರು ಸಂಗ್ರಹವಾಗಿದೆ. ಸರ್ಕಾರ ಯಾವುದೇ ಕ್ಷಣದಲ್ಲಿ ಕೃಷಿಗೆ ನೀರು ಹರಿಸಲು ಸಿದ್ಧತೆ ನಡೆಸಿದೆಯಾದರೂ, ಕಾಲುವೆ ಒಡೆಯುವ ಭೀತಿ ಎದುರಾಗಿದೆ.

ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಈಗಾಗಲೇ ಕುಸಿದಿದ್ದು, ದುರಸ್ತಿ ಮಾಡದೆ ನೀರು ಬಿಟ್ಟರೆ ಕಾಲುವೆ ಕಟ್ಟೆಯೊಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಬಸಾಪುರ ಬಳಿ ಕಾಲುವೆ ಒಡೆದಿದ್ದನ್ನು ನೆನಪಿಸಿಕೊಳ್ಳುತ್ತಿರುವ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ರೈತರು, ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನೀರು ಹರಿಸುವ ಮುನ್ನ ತಕ್ಷಣವೇ ಕಾಲುವೆ ದುರಸ್ತಿಗೊಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗೂಗ್ಲಿ’ಯಲ್ಲಿ ಯಶ್​​ಗೆ ಬರೆದ ಡೈಲಾಗ್ ನಿಜವಾಯ್ತು; ಜಾಗತಿಕ ಮಟ್ಟದಲ್ಲಿ ‘ಟಾಕ್ಸಿಕ್’ ಹವಾ – Kannada News | From Googly to Toxic: Yash Global Success Proves Pavan Wadeyar Dialogue Right

ರಾಕಿಂಗ್ ಸ್ಟಾರ್ ಯಶ್ ಅವರ ‘ಕೆಜಿಎಫ್’ ಸರಣಿಯ ಯಶಸ್ಸಿನ ನಂತರ, ಅವರ ಪ್ರತಿಯೊಂದು ಸಿನಿಮಾ ಕೂಡ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಾಲಿಗೆ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic Movie) ಸೇರ್ಪಡೆಯಾಗಿದೆ . ಚಿತ್ರದ ಗ್ಲೋಬಲ್ ಮಟ್ಟದ ಕ್ರೇಜ್ ನೋಡಿದ ‘ಗೂಗ್ಲಿ’ ಚಿತ್ರದ ನಿರ್ದೇಶಕ ಪವನ್ ಒಡೆಯರ್, ಅಂದು ತಾವು ಸಿನಿಮಾಗಾಗಿ ಬರೆದಿದ್ದ ಡೈಲಾಗ್‌ ಒಂದನ್ನು ನೆನಪಿಸಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

‘ಗೂಗ್ಲಿ’ಯ ಆ ಒಂದು ಮಾತು ಇಂದು ಅಕ್ಷರಶಃ ಸತ್ಯ

ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಪವನ್ ಒಡೆಯರ್, ‘ಗೂಗ್ಲಿ ಸಿನಿಮಾ ನೋಡಿದವರಿಗೆ ಖಂಡಿತ ಆ ಡೈಲಾಗ್ ನೆನಪಿರುತ್ತದೆ. ಹಿರಿಯ ನಟ ಅನಂತ್ ನಾಗ್ ಅವರ ಪಾತ್ರದ ಮೂಲಕ, ‘ನಮ್ಮ ಭವಿಷ್ಯ ಬಿಡು, ನನ್ನ ಮಗನ ಭವಿಷ್ಯ ಸ್ಟಡಿ ಮಾಡಿಕೊಂಡು ಬಂದಿದ್ದೀನಿ, ಇಡೀ ಪ್ರಪಂಚವೇ ಕೊಂಡಾಡುವ ಹಾಗೆ ಆಗ್ತಾನೆ ಅವನು’ ಎಂದು ಹೇಳಿಸಿದ್ದೆವು’ ಎಂಬುದಾಗಿ ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.

‘ಅದು ಯಾವ ಗಳಿಗೆಯಲ್ಲಿ ಬರೆದಿದ್ದೆವೋ ಗೊತ್ತಿಲ್ಲ, ಆದರೆ ಇಂದು ಯಶ್ ಬೆಳೆದಿರುವ ಎತ್ತರ ಮತ್ತು ಟಾಕ್ಸಿಕ್ ಸಿನಿಮಾ ಜಾಗತಿಕ ಮಟ್ಟಕ್ಕೆ ತಲುಪಿರುವುದನ್ನು ನೋಡಿದರೆ ಆ ಮಾತು ಅಕ್ಷರಶಃ ನಿಜವಾಗಿದೆ’ ಎಂದು ಮೆಲಕು ಹಾಕಿದ್ದಾರೆ.

ಪ್ರಪಂಚವೇ ಕೊಂಡಾಡುವಂತೆ ಕಂಬ್ಯಾಕ್ ಮಾಡುತ್ತಿದ್ದಾರೆ ಯಶ್

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಳ್ಳುತ್ತಿದ್ದು, ಹಾಲಿವುಡ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಅತ್ಯಂತ ಅದ್ದೂರಿಯಾಗಿ ತಯಾರಾಗುತ್ತಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಂತಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಯಶ್ ‘ಟಾಕ್ಸಿಕ್’ ಪ್ರಚಾರ ನಡೆಸಿ ವಿಶ್ವಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ಗಾಗಿ ರವಿ ಬಸ್ರೂರು ಪ್ಲ್ಯಾನ್; 100 ಮಂದಿಯ ಆರ್ಕೆಸ್ಟ್ರಾ ಕಣಕ್ಕಿಳಿಸಿದ ಸಂಗೀತ ನಿರ್ದೇಶಕ

ಅಂದು ‘ಗೂಗ್ಲಿ’ ಚಿತ್ರದ ಶರತ್ ಆಗಿ ತೆರೆಮೇಲೆ ಮೆರೆದಿದ್ದ ಯಶ್, ಇಂದು ನಿಜ ಜೀವನದಲ್ಲೂ ಭಾರತೀಯ ಚಿತ್ರರಂಗದ ಗಡಿಯನ್ನು ದಾಟಿ ಜಾಗತಿಕ ಮಟ್ಟದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿರುವುದು ಇಡೀ ಸ್ಯಾಂಡಲ್‌ವುಡ್ ಹೆಮ್ಮೆಪಡುವಂತೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನ್​ ಸೂಪರ್ ಲೀಗ್​ನಲ್ಲಿ ಮೊಹಮ್ಮದ್ ಅಮಿರ್ ‘ವಿದೇಶಿ ಆಟಗಾರ’! – Kannada News | Mohammad Amir to play as overseas player in PSL 2027

ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮಿರ್ ಮುಂಬರುವ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ವಿದೇಶಿ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಅಮಿರ್ ಬ್ರಿಟನ್ ಪೌರತ್ವ ಪಡೆದುಕೊಂಡಿರುವುದೇ ಇದಕ್ಕೆ ಕಾರಣ. ಇತ್ತ ಬ್ರಿಟನ್ ಪ್ರಜೆಯಾಗಿರುವ ಮೊಹಮ್ಮದ್ ಅಮಿರ್ ಅವರನ್ನು ಇನ್ಮುಂದೆ ವಿದೇಶಿ ಕೋಟಾದಲ್ಲಿ ಆಡಿಸಬೇಕಾದ ಅನಿವಾರ್ಯತೆ ರಾವಲ್ಪಿಂಡಿ ಫ್ರಾಂಚೈಸಿಗೆ ಎದುರಾಗಿದೆ. ಅಂದರೆ ಕಳೆದ ಬಾರಿ ಅಮಿರ್ ಸ್ಥಳೀಯ ಆಟಗಾರನಾಗಿ ಕಣಕ್ಕಿಳಿದಿದ್ದರು. ಇದೀಗ ಅವರನ್ನು ರಿಟೈನ್ ಮಾಡಿಕೊಂಡರೆ, ವಿದೇಶಿ ಆಟಗಾರನಾಗಿ ಆಡಿಸಬೇಕಾಗುತ್ತದೆ. ಇದುವೇ ಈಗ ಹೊಸ ಗೊಂದಲಕ್ಕೆ ಕಾರಣವಾಗಿದೆ.

ಏನಿದು ಗೊಂದಲ?

ಪಿಎಸ್‌ಎಲ್ ನಿಯಮಗಳ ಪ್ರಕಾರ ಪ್ರತಿ ತಂಡದಲ್ಲಿ ಇಂತಿಷ್ಟೇ ವಿದೇಶಿ ಆಟಗಾರರು ಇರಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಮೊಹಮ್ಮದ್ ಅಮಿರ್ ಅವರ ಈ ಹೊಸ ಪೌರತ್ವದ ಬದಲಾವಣೆ ಲೀಗ್‌ನಲ್ಲಿ ಮೂರು ಪ್ರಮುಖ ಸಮಸ್ಯೆಗಳನ್ನು ಸೃಷ್ಟಿಸಿದೆ.

  • ಒಪ್ಪಂದದ ಗೊಂದಲ: ಪಿಎಸ್‌ಎಲ್ 2026ರ ಹರಾಜಿನಲ್ಲಿ ಅಮಿರ್ ಅವರನ್ನು ರಾವಲ್ಪಿಂಡಿ ಫ್ರಾಂಚೈಸಿ 5.4 ಕೋಟಿ PKR ಮೊತ್ತಕ್ಕೆ ಎರಡು ವರ್ಷಗಳ ಒಪ್ಪಂದದ ಆಧಾರದ ಮೇಲೆ ಖರೀದಿ ಮಾಡಿತ್ತು. ಆಗ ಅವರು ಪಾಕಿಸ್ತಾನದ ಸ್ಥಳೀಯ ಆಟಗಾರನಾಗಿದ್ದರು. ಈಗ ಪೌರತ್ವ ಬದಲಾಗಿರುವುದರಿಂದ ಈ ಹಳೆಯ ಒಪ್ಪಂದ ಮುಂದುವರಿಯುತ್ತದೆಯೇ ಅಥವಾ ರದ್ದಾಗುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
  • ವಿದೇಶಿ ಕೋಟಾದ ನಷ್ಟ: ಒಂದು ವೇಳೆ ರಾವಲ್ಪಿಂಡಿ ತಂಡ ಅಮಿರ್ ಅವರನ್ನೇ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದರೆ, ತಂಡವು ತನ್ನ ಅಮೂಲ್ಯವಾದ ವಿದೇಶಿ ಆಟಗಾರರ ಕೋಟಾದಲ್ಲಿ ಒಂದು ಸ್ಥಾನವನ್ನು ಅಮಿರ್​ಗಾಗಿ ತ್ಯಾಗ ಮಾಡಬೇಕಾಗುತ್ತದೆ. ಇದು ತಂಡದ ಒಟ್ಟಾರೆ ಸಮತೋಲನವನ್ನು ಕೆಡಿಸಬಹುದು.
  • ಹರಾಜಿಗೆ ಲಭ್ಯತೆ: ಒಂದು ವೇಳೆ ಫ್ರಾಂಚೈಸಿಯು ಅವರನ್ನು ವಿದೇಶಿ ಕೋಟಾದಡಿ ಉಳಿಸಿಕೊಳ್ಳಲು ನಿರಾಕರಿಸಿದರೆ, ಅಮಿರ್​ ಕಡ್ಡಾಯವಾಗಿ ಹರಾಜಿನ ಪೂಲ್‌ಗೆ ಮರಳಬೇಕಾಗುತ್ತದೆ. ಅದು ಸಹ ಫಾರಿನ್ ಪ್ಲೇಯರ್ ಆಗಿ ಎಂಬುದು ವಿಶೇಷ.

ಬ್ರಿಟನ್ ಪೌರತ್ವ ಸಿಕ್ಕಿದ್ದು ಹೇಗೆ?

ಮೊಹಮ್ಮದ್ ಅಮಿರ್ ಬ್ರಿಟಿಷ್ ಮೂಲದ ವಕೀಲೆ ನರ್ಜಿಸ್ ಖಾನ್ ಅವರನ್ನು ವಿವಾಹವಾಗಿದ್ದಾರೆ. ಈ ವೈವಾಹಿಕ ಸಂಬಂಧದ ಆಧಾರದ ಮೇಲೆ ಅವರಿಗೆ ಬ್ರಿಟನ್ ಪಾಸ್‌ಪೋರ್ಟ್ ದೊರೆತಿದೆ. ಇದರ ಪರಿಣಾಮವಾಗಿ ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡವು ಅಮಿರ್ ಅವರನ್ನು ಸ್ಥಳೀಯ ಆಟಗಾರನನ್ನಾಗಿಯೇ ಪರಿಗಣಿಸಿ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: ಕ್ರಿಕೆಟ್‌ನಿಂದ ಅಖಿಲೇಶ್ ರೆಡ್ಡಿಗೆ 8 ವರ್ಷಗಳ ನಿಷೇಧ!

ಅತ್ತ ಇಂಗ್ಲೆಂಡ್​ನಲ್ಲಿ ಸ್ಥಳೀಯ ಆಟಗಾರನಾಗಿ ಕಣಕ್ಕಿಳಿಯುತ್ತಿರುವುದರಿಂದ ಮೊಹಮ್ಮದ್ ಅಮಿರ್ ಪಾಕಿಸ್ತಾನದಲ್ಲಿ ವಿದೇಶಿ ಆಟಗಾರನಾಗಿ ಬದಲಾಗಿದ್ದಾರೆ. ಹೀಗಾಗಿಯೇ ಮುಂಬರುವ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ಅವರನ್ನು ವಿದೇಶಿ ಕೋಟಾದಡಿ ಆಡಿಸಬೇಕಾದ ಅನಿವಾರ್ಯತೆ ರಾವಲ್ಪಿಂಡಿ ಫ್ರಾಂಚೈಸಿಗೆ ಎದುರಾಗಿದೆ.

Source link

Exit mobile version