ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸಲು ಜಸ್ಟ್‌ ಈ ಸರಳ ಮಾರ್ಗಗಳನ್ನು ಅನುಸರಿಸಿ – Kannada News | You can easily dry clothes during the rainy season with this simple method

ಒಂದೆರಡು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೆರೆ, ಗುಡ್ಡ ಕುಸಿತದಂತಹ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಒಗೆದ ಬಟ್ಟೆ (Cloth) ಒಣಗುತ್ತಿಲ್ಲ ಅನ್ನೋ ಟೆನ್ಷನ್‌. ಹೌದು ಸೂರ್ಯನ ಬೆಳಕಿನ ಕೊರತೆ, ತೇವಯುಕ್ತ ವಾತಾವರಣ ಇವೆಲ್ಲದರ ಕಾರಣದಿಂದಾಗಿ ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದೇ ಇಲ್ಲ. ಬಟ್ಟೆ ಸರಿಯಾಗಿ ಒಣಗದಿದ್ದರೆ ಕೆಟ್ಟ ವಾಸನೆ ಕೂಡ ಬರುತ್ತದೆ. ಹೀಗಿರುವಾಗ ಈ ಕೆಲವೊಂದು ಸರಳ ವಿಧಾನಗಳ ಮೂಲಕ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ಬಟ್ಟೆಗಳನ್ನು ಒಣಗಿಸುವ ಸುಲಭ ವಿಧಾನ:

ಹೇರ್ ಡ್ರೈಯರ್ ಬಳಕೆ: ಒಗೆದ ಬಟ್ಟೆಗಳಿಂದ ಹೆಚ್ಚುವರಿ ನೀರನ್ನು ಹಿಂಡಿ ಹೊರತೆಗೆಯಿರಿ. ನಂತರ ಹೇರ್ ಡ್ರೈಯರ್ ಬಳಸಿ ಅವುಗಳನ್ನು ಚೆನ್ನಾಗಿ ಒಣಗಿಸಿ. ಶರ್ಟ್‌ಗಳು, ಸಾಕ್ಸ್‌ಗಳು ಮತ್ತು ಕರವಸ್ತ್ರಗಳಂತಹ ಸಣ್ಣ ವಸ್ತುಗಳನ್ನು ಒಣಗಿಸಲು ಈ ವಿಧಾನವು ಉತ್ತಮವಾಗಿದೆ. ಆದರೆ ಹೇರ್ ಡ್ರೈಯರ್ ಅನ್ನು ಬಟ್ಟೆಯ ಯಾವುದೇ ಭಾಗದಲ್ಲಿ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಬೇಡಿ, ಏಕೆಂದರೆ ಅತಿಯಾದ ಶಾಖವು ಬಟ್ಟೆಗಳಿಗೆ ಹಾನಿ ಮಾಡುತ್ತದೆ.

ಇಸ್ತ್ರಿ ಮಾಡುವುದು: ಈ ಮಳೆಗಾಲದಲ್ಲಿ ಬಿಸಿಲಿನ ಕೊರತೆಯಿಂದ ಒದ್ದೆಯಾದ ಬಟ್ಟೆಗಳು ಸರಿಯಾಗಿ ಒಣಗದಿದ್ದರೆ, ಅವುಗಳನ್ನು ಇಸ್ತ್ರಿ ಮಾಡಿ. ಇಸ್ತ್ರಿ ಮಾಡುವಾಗ ಉತ್ಪತ್ತಿಯಾಗುವ ಶಾಖವು ಬಟ್ಟೆಯಲ್ಲಿರುವ ತೇವಾಂಶ ಬೇಗನೆ ಆವಿಯಾಗುತ್ತದೆ. ಜೀನ್ಸ್ ಅಥವಾ ಸ್ವೆಟರ್‌ಗಳಂತಹ ದಪ್ಪ ಬಟ್ಟೆಗಳನ್ನು ಒಣಗಿಸಲು ಈ ವಿಧಾನವು ಉಪಯುಕ್ತವಾಗಿದೆ.

ಫ್ಯಾನ್ ಬಳಸಿ: ಮಳೆಗಾಲದಲ್ಲಿ ಎಲ್ಲರೂ ಸಾಮಾನ್ಯವಾಗಿ ಮನೆಯೊಳಗೆಯೇ ಬಟ್ಟೆಗಳನ್ನು ಒಣಗಿಸುತ್ತಾರೆ. ಹೀಗಿರುವಾಗ ಕೋಣೆಯಲ್ಲಿ ಟೇಬಲ್ ಫ್ಯಾನ್ ಅಥವಾ ಸೀಲಿಂಗ್ ಫ್ಯಾನ್ ಅನ್ನು ಆನ್ ಮಾಡಿ. ಫ್ಯಾನ್ ಗಾಳಿಯು ಬಟ್ಟೆಗಳಿಂದ ತೇವಾಂಶವನ್ನು ಸುಲಭವಾಗಿ ಆವಿಯಾಗಿಸಲು ಸಹಾಯ ಮಾಡುತ್ತದೆ.  ಮತ್ತು ಬಟ್ಟೆಗಳು ವೇಗವಾಗಿ ಒಣಗುತ್ತವೆ.

ಹೀಟರ್ ಬಳಸಿ: ಸಾಮಾನ್ಯವಾಗಿ ಚಳಿಗಾಲದಲ್ಲಿ ಹೀಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಬಟ್ಟೆಗಳನ್ನು ಒಣಗಿಸಲು ನೀವು ಅವುಗಳನ್ನು ಬಳಸಬಹುದು. ನಿಮ್ಮ ಹೀಟರ್ ಅನ್ನು ಕೋಣೆಯಲ್ಲಿ ಇರಿಸಿ ಮತ್ತು ಬಟ್ಟೆ ಒಣಗಲು ಬಿಡಿ. ಹೀಟರ್‌ನಿಂದ ಬರುವ ಶಾಖವು ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸುತ್ತದೆ ಮತ್ತು ವಾಸನೆಯನ್ನು ನಿವಾರಿಸುತ್ತದೆ.

ಬಟ್ಟೆಗಳನ್ನು ಚೆನ್ನಾಗಿ ಹಿಂಡಿ:  ಒಗೆದ ಬಟ್ಟೆಗಳಿಂದ ನೀರನ್ನು ಹಿಂಡಿ ತೆಗೆಯುವುದು ತುಂಬಾನೇ ಮುಖ್ಯ. ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆಯುತ್ತಿದ್ದೀರಿ ಎಂದಾದ್ರೆ ಎಕ್ಸ್‌ಟ್ರಾ ಸ್ಪಿನ್ ಅಥವಾ ಡ್ರೈಯರ್ ಮೋಡ್ ಅನ್ನು ಬಳಸಿಕೊಂಡು ಬಟ್ಟೆಗಳನ್ನು ಡ್ರೈ ಮಾಡಿ ನಂತರ ಒಣಗಲು ಹಾಕಿ. ವಾಷಿಂಗ್‌ ಮೆಷಿನ್‌ ಇಲ್ಲ ಎಂದಾದ್ರೆ ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ಪೈಪ್‌ನಲ್ಲಿ ಪೈಪ್‌ನಲ್ಲಿ ನೇತುಹಾಕಿ. ಬಟ್ಟೆಯಿಂದ ನೀರು ಸಂಪೂರ್ಣವಾಗಿ ಬರಿದಾಗಲು ಬಿಡಿ ಮತ್ತು ನಂತರ ಅವುಗಳನ್ನು ಒಣಗಲು ಹಾಕಿ.

ಇದನ್ನೂ ಓದಿ: ಮಳೆಗಾಲದಲ್ಲಿ ಸ್ನಾನಗೃಹದ ನೆಲ ಜಾರದಂತೆ ತಡೆಯಲು ಸಲಹೆಗಳನ್ನು ಪಾಲಿಸಿ

ದಪ್ಪ ಮತ್ತು ತೆಳುವಾದ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಣಗಿಸಿ: ಜೀನ್ಸ್, ಟವೆಲ್ ಮತ್ತು ಕಂಬಳಿಗಳಂತಹ ದಪ್ಪ ಬಟ್ಟೆಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಉತ್ತಮ ಗಾಳಿಯ ಹರಿವನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಹಗುರವಾದ ಬಟ್ಟೆಗಳಿಂದ ಪ್ರತ್ಯೇಕವಾಗಿ ಒಣಗಿಸಿ. ಜೊತೆಗೆ ಎಲ್ಲಾ ಬಟ್ಟೆಗಳನ್ನು ದೂರ ದೂರ ಇಟ್ಟು ಒಣಗಲು ಬಿಡಿ. ಏಕೆಂದರೆ ತುಂಬಾ ಹತ್ತಿರದಲ್ಲಿ ಒಣ ಹಾಕಿದರೆ, ಬಟ್ಟೆಗಳು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಒದ್ದೆಯಾಗುವ ಸ್ಥಳದಲ್ಲಿ ಬಟ್ಟೆಗಳನ್ನು ಒಣಗಿಸಬೇಡಿ: ನಗೃಹ ಅಥವಾ ಮುಚ್ಚಿದ ಕೋಣೆಯಲ್ಲಿ ಬಟ್ಟೆಗಳನ್ನು ಒಣಗಿಸುವುದರಿಂದ ಅವು ನಿಧಾನವಾಗಿ ಒಣಗುತ್ತವೆ ಮತ್ತು ಇದರಿಂದಾಗಿ ಬಟ್ಟೆಯಿಂದ ಕೆಟ್ಟ ವಾಸನೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಉತ್ತಮ ಗಾಳಿಯ ಪ್ರಸರಣ ಇರುವ ಕೋಣೆಯಲ್ಲಿ ಬಟ್ಟೆ ಒಣಗಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಬೈಲ್ ಇದ್ರೆ ಸಾಕು ರೇಷನ್ ಕಾರ್ಡ್‌ ಇ-ಕೆವೈಸಿ ಸ್ಥಿತಿ ಪರಿಶೀಲಿಸ್ಬಹುದು – Kannada News | Ration Card: Check your ration card status on your mobile from the comfort of your home.

ರೇಷನ್ ಕಾರ್ಡ್ ಇ-ಕೆವೈಸಿಯೂ (Ration Card E-KYC) ಪಡಿತರ ಚೀಟಿದಾರರ ಗುರುತನ್ನು ಆಧಾರ್  ಕಾರ್ಡ್‌ ಮೂಲಕ ದೃಢೀಕರಿಸುವ ಪ್ರಕ್ರಿಯೆಯಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ನಕಲಿ ಕಾರ್ಡ್‌ಗಳನ್ನು ತಪ್ಪಿಸಲು ಹಾಗೂ ಅರ್ಹರಿಗೆ ನೇರವಾಗಿ ಸಬ್ಸಿಡಿ ತಲುಪಿಸಲು ರೇಷನ್ ಕಾರ್ಡ್ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಆದರೆ ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗಿದೆಯೇ ಎಂದು ನೀವು ಮೊಬೈಲ್‌ನಲ್ಲಿ ಪರಿಶೀಲಿಸಬಹುದು.

ಆನ್ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

ಹಂತ 1: ನೀವು ಅಧಿಕೃತ ಆಹಾರ ಕರ್ನಾಟಕ ವೆಬ್‌ಸೈಟ್ ಗೆ ಭೇಟಿ ನೀಡಿ.

ಹಂತ 2: ಆಹಾರ ಕರ್ನಾಟಕ ಇ-ಸರ್ವಿಸಸ್ ಪೋರ್ಟಲ್ ತೆರೆಯಿರಿ.

ಹಂತ 3: ಇ-ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಸ್ಥಿತಿ ವಿಭಾಗಕ್ಕೆ ಹೋಗಿ.

ಹಂತ 4: ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಅಥವಾ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ.

ಹಂತ 5: ಸ್ಕ್ರೀನ್ ಮೇಲೆ ಕುಟುಂಬದ ಸದಸ್ಯರ ಪಟ್ಟಿ ಹಾಗೂ ಸದಸ್ಯರ ವಿವರಗಳಲ್ಲಿ ಆಧಾರ್ ಲಿಂಕ್ ಹಾಗೂ ಇ-ಕೆವೈಸಿ ಸ್ಥಿತಿ ಕಾಣಿಸುತ್ತದೆ.

ಆಫ್‌ಲೈನ್ ಮೂಲಕ ರೇಷನ್ ಕಾರ್ಡ್ ಇ-ಕೆವೈಸಿ ಸ್ಥಿತಿ ಹೀಗೆ ಪರಿಶೀಲಿಸಿ

ಹಂತ 1: ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ.

ಹಂತ 2: ಅಂಗಡಿದಾರರ ಬಳಿ ಇರುವ ಇ-ಪೋಸ್ ಯಂತ್ರದ ಮೂಲಕ ನಿಮ್ಮ ಬೆರಳಚ್ಚು ನೀಡಿ ಆಧಾರ್ ಮತ್ತು ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಬಹುದು.

ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸುವುದು ಹೇಗೆ?

ಹಂತ 1: ಗೂಗಲ್ ಪ್ಲೇ ಸ್ಟೋರ್‌ನಿಂದ ಮೇರಾ ರೇಷನ್ ಆ್ಯಪ್ ಡೌನ್‌ಲೋಡ್ ಮಾಡಿ.

ಹಂತ 2: ನಿಮ್ಮ ಆಧಾರ್ ಅಥವಾ ರೇಷನ್ ಕಾರ್ಡ್ ಸಂಖ್ಯೆ ಬಳಸಿ ಲಾಗಿನ್ ಆಗಿ ಲಿಂಕ್ ಸ್ಥಿತಿ ತಿಳಿಯಬಹುದು.

ಇದನ್ನೂ ಓದಿ: mAadhaar ಆ್ಯಪ್​ನಲ್ಲಿ ಐವರ ಪ್ರೊಫೈಲ್ ಸೇರಿಸಲು ಅವಕಾಶ; ಷರತ್ತುಗಳು, ಅನುಕೂಲಗಳು ಇತ್ಯಾದಿ ವಿವರ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ರೇಷನ್ ಕಾರ್ಡ್ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

ಉತ್ತರ: ರೇಷನ್ ಕಾರ್ಡ್ ಇ-ಕೆವೈಸಿ ಸ್ಥಿತಿಯನ್ನು ಆನ್ಲೈನ್ ಅಥವಾ ಆಫ್ ಲೈನ್‌ನಲ್ಲಿ ಪರಿಶೀಲಿಸಲು ಸಾಧ್ಯ.

ಪ್ರಶ್ನೆ: ರೇಷನ್ ಕಾರ್ಡ್ ಇ -ಕೆವೈಸಿ ಎಂದರೇನು?

ಉತ್ತರ: ರೇಷನ್ ಕಾರ್ಡ್ ಇ-ಕೆವೈಸಿಯೂ ಪಡಿತರ ಚೀಟಿದಾರರ ಗುರುತನ್ನು ಆಧಾರ್ ಮೂಲಕ ದೃಢೀಕರಿಸುವ ಪ್ರಕ್ರಿಯೆಯಾಗಿದೆ.

ಪ್ರಶ್ನೆ: ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸುವುದು ಎಷ್ಟು ಮುಖ್ಯ?

ಉತ್ತರ: ರೇಷನ್ ಕಾರ್ಡ್ ಇ-ಕೆವೈಸಿ ಉಚಿತ ರೇಷನ್ ರದ್ದಾಗದಿರಲು, ನಕಲಿ ಕಾರ್ಡ್‌ಗಳನ್ನು ತಡೆಯಲು ಹಾಗೂ ಅರ್ಹರಿಗೆ ನೇರವಾಗಿ ಸಬ್ಸಿಡಿ ತಲುಪಿಸಲು ಕಡ್ಡಾಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:38 pm, Mon, 3 August 26

Source link

ಕಾಂಗ್ರೆಸ್​​ ಪಕ್ಷದ ಲೆಟರ್​​ ಹೆಡ್​​ನಲ್ಲಿ ಸಾಂವಿಧಾನಿಕ ಹುದ್ದೆಗಳ ನೇಮಕದ ಬಗ್ಗೆ ಉಲ್ಲೇಖ: ಬಿಜೆಪಿ ಶಾಸಕ ಸುರೇಶ್​​ ಕುಮಾರ್​​ ಕಿಡಿ – Kannada News | BJP MLA Suresh Kumar Questions Congress Over Speaker, Council Chairman Appointments on Party Letterhead

ಸುರೇಶ್​​ ಕುಮಾರ್​​Image Credit source: Tv9 Kannada

ಬೆಂಗಳೂರು, ಆಗಸ್ಟ್​​ 03: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಶಾಸಕರ ಹೆಸರಿನ ಜೊತೆಗೆ ವಿಧಾನಸಭೆಯ ಸ್ಪೀಕರ್​​, ಡೆಪ್ಯೂಟಿ ಸ್ಪೀಕರ್​​ ಮತ್ತು ಸಭಾಪತಿ, ಉಪ ಸಭಾಪತಿ ಹುದ್ದೆಗಳಿಗೂ ನೇಮಕ ಸಂಬಂಧ ಪಕ್ಷದ ಪತ್ರ ಶೀರ್ಷಿಕೆಯಲ್ಲಿ (ಲೆಟರ್‌ಹೆಡ್) ಕಾಂಗ್ರೆಸ್​​ ಹೈಕಮಾಂಡ್​​ ಉಲ್ಲೇಖಿಸಿರುವುದೀಗ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಎಸ್​​. ಸುರೇಶ್​​ ಕುಮಾರ್​​, ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್ ಪಕ್ಷ ನಾಂದಿ ಹಾಡಿದೆ ಎಂದು ಕಿಡಿ ಕಾರಿದ್ದಾರೆ.

‘ಸಾಂವಿಧಾನಿಕ ಹುದ್ದೆಗಳ ಘನತೆಗೆ ಧಕ್ಕೆ’

ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರು, ಮಾನ್ಯ ಉಪಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳು ಮತ್ತು ಉಪಸಭಾಪತಿ ಹುದ್ದೆಗಳು ಯಾವುದೇ ರಾಜಕೀಯ ಪಕ್ಷದ ವ್ಯಾಪ್ತಿಗೆ ಸೀಮಿತವಾಗದ, ಅತ್ಯುನ್ನತ ಸಾಂವಿಧಾನಿಕ ಸ್ಥಾನಗಳಾಗಿವೆ. ಈ ಹುದ್ದೆಗಳು ತಮ್ಮದೇ ಆದ ಘನತೆ, ಗೌರವ, ನಿಷ್ಪಕ್ಷಪಾತತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿನಿಧಿಸುವ ಪರಂಪರೆಯನ್ನು ಹೊಂದಿವೆ. ಆದರೆ, ಕಾಂಗ್ರೆಸ್ ತನ್ನ ಅಧಿಕೃತ ಪಕ್ಷದ ಪತ್ರ ಶೀರ್ಷಿಕೆಯಲ್ಲಿ ಈ ಸಾಂವಿಧಾನಿಕ ಹುದ್ದೆಗಳ ಹೆಸರನ್ನು ಬಳಸಿರುವುದು ಅತ್ಯಂತ ಆಕ್ಷೇಪಾರ್ಹ. ಇಂತಹ ನಡೆ ಈ ಹುದ್ದೆಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ಘನತೆ ಮತ್ತು ಗೌರವಕ್ಕೂ ಕಳಂಕ ತರುವ ಪ್ರಯತ್ನವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್‌ ಸಂಪುಟ ಸೇರಿದ 19 ಸಚಿವರು: ಹೊಸಬರಿಗೆ ಅವಕಾಶ; ಹಳಬರಿಗೂ ಮಣೆ!

‘ಕಾಂಗ್ರೆಸ್‌ನ ದ್ವಂದ್ವ ನೀತಿ ಮತ್ತೊಮ್ಮೆ ಬಹಿರಂಗ’

ತನಗೆ ಗೊತ್ತಿರುವಂತೆ ಮುಂದೆ ಆಯ್ಕೆಯಾಗಬೇಕಿರುವ ಸಭಾಧ್ಯಕ್ಷರ, ಉಪಸಭಾಧ್ಯಕ್ಷರ, ಸಭಾಪತಿಗಳ ಹಾಗೂ ಉಪ ಸಭಾಪತಿಗಳ ಹೆಸರುಗಳನ್ನು ಆಳುವ ಪಕ್ಷದ ಲೆಟರ್ ಹೆಡ್ ನಲ್ಲಿ ದೆಹಲಿಯಿಂದಲೇ ಕಳುಹಿಸುತ್ತಿರುವುದು ಇದೇ ಮೊದಲ ಬಾರಿ. ಇದು ಕೇವಲ ಸಂಸದೀಯ ಸಂಪ್ರದಾಯಗಳ ಉಲ್ಲಂಘನೆಯಷ್ಟೇ ಅಲ್ಲ; ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಮೇಲಿನ ನಿರ್ಲಕ್ಷ್ಯದ ಪ್ರತೀಕವಾಗಿದೆ. ಬಾಯಲ್ಲಿ ಸಂವಿಧಾನದ ರಕ್ಷಣೆ ಎಂದು ಹೇಳಿಕೊಂಡು, ಆಚರಣೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ಉನ್ನತ ಹುದ್ದೆಗಳನ್ನು ಪಕ್ಷದ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾಂಗ್ರೆಸ್‌ನ ದ್ವಂದ್ವ ನೀತಿ ಮತ್ತೊಮ್ಮೆ ಬಹಿರಂಗವಾಗಿದೆ ಎಂದವರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪದೇಪದೇ ಹುಳಿ ತೇಗು ಬರುತ್ತಿದ್ದರೆ ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ – Kannada News | Best Diet for Acidity: Expert Tips to Reduce Acid Reflux

ಇತ್ತೀಚಿನ ದಿನಗಳಲ್ಲಿ ಆಸಿಡಿಟಿ (Acidity) ಅಥವಾ ಎದೆ ಉರಿ ಸಮಸ್ಯೆ ಸಾಮಾನ್ಯವಾಗಿದೆ. ಎದೆ ಉರಿ, ಹುಳಿ ತೇಗು, ಗಂಟಲಿನಲ್ಲಿ ಉರಿ, ಹೊಟ್ಟೆ ಭಾರವಾದ ಅನುಭವ, ಹೊಟ್ಟೆ ಉಬ್ಬರ ಮುಂತಾದ ಲಕ್ಷಣಗಳು ಅನೇಕ ಮಂದಿಯನ್ನು ಕಾಡುತ್ತಿವೆ. ಕೆಲವರು ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಪದೇಪದೇ ಆಸಿಡಿಟಿ ಕಾಣಿಸಿಕೊಳ್ಳುತ್ತಿದ್ದರೆ ಅದರ ಹಿಂದೆ ಆಹಾರ ಪದ್ಧತಿ ಮತ್ತು ಜೀವನಶೈಲಿಯೇ ಪ್ರಮುಖ ಕಾರಣವಾಗಿರಬಹುದು. ತಜ್ಞರ ಪ್ರಕಾರ, ಕೆಲವು ಆಹಾರಗಳು ಹೊಟ್ಟೆಯಲ್ಲಿ ಆಮ್ಲ (ಸ್ಟಮಕ್ ಆಸಿಡ್) ಉತ್ಪಾದನೆಯನ್ನು ಹೆಚ್ಚಿಸಿ ಆಸಿಡಿಟಿ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಆದ್ದರಿಂದ ಯಾವ ಆಹಾರಗಳನ್ನು ಮಿತವಾಗಿ ಸೇವಿಸಬೇಕು ಮತ್ತು ಯಾವ ಆಹಾರಗಳು ಹೊಟ್ಟೆಗೆ ಆರಾಮ ನೀಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಆಸಿಡಿಟಿ ಹೆಚ್ಚಿಸುವ ಆಹಾರಗಳು ಯಾವುವು?

ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸ್ (NIDDK) ಪ್ರಕಾರ ಈ ಕೆಳಗಿನ ಆಹಾರಗಳು ಕೆಲವು ಜನರಲ್ಲಿ ಆಸಿಡಿಟಿ ಹೆಚ್ಚಿಸಬಹುದು.

ಎಣ್ಣೆಯಲ್ಲಿ ಕರಿದ ಆಹಾರಗಳು: ಬಜ್ಜಿ, ಪಕೋಡಾ, ಸಮೋಸಾ, ಚಿಪ್ಸ್, ಫಾಸ್ಟ್ ಫುಡ್ ಹಾಗೂ ಹೆಚ್ಚು ಕೊಬ್ಬು ಹೊಂದಿರುವ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ಹೊಟ್ಟೆಯಲ್ಲಿ ಆಮ್ಲ ಹೆಚ್ಚಾಗಿ ಎದೆ ಉರಿ ಕಾಣಿಸಿಕೊಳ್ಳಬಹುದು.

ಹೆಚ್ಚು ಖಾರದ ಆಹಾರ: ಅತಿಯಾದ ಮೆಣಸಿನಕಾಯಿ ಮತ್ತು ಮಸಾಲೆ ಇರುವ ಆಹಾರಗಳು ಹೊಟ್ಟೆಯ ಒಳಪದರವನ್ನು ಕೆರಳಿಸಿ ಆಸಿಡಿಟಿಯನ್ನು ಹೆಚ್ಚಿಸಬಹುದು.

ಟೊಮೆಟೊ ಹಾಗೂ ಹುಳಿ ಹಣ್ಣುಗಳು: ಸಾಮಾನ್ಯವಾಗಿ ಟೊಮೆಟೊ, ಕಿತ್ತಳೆ, ನಿಂಬೆ, ಗ್ರೇಪ್‌ಫ್ರೂಟ್ ಮೊದಲಾದ ಹುಳಿ ಹಣ್ಣುಗಳಲ್ಲಿ ಆಮ್ಲದ ಪ್ರಮಾಣ ಹೆಚ್ಚಿರುವುದರಿಂದ ಕೆಲವರಲ್ಲಿ ಎದೆ ಉರಿ ಹೆಚ್ಚಾಗಬಹುದು.

ಚಹಾ, ಕಾಫಿ ಮತ್ತು ಕ್ಯಾಫಿನ್ ಇರುವ ಪಾನೀಯಗಳು: ಅತಿಯಾಗಿ ಕಾಫಿ, ಟೀ, ಎನರ್ಜಿ ಡ್ರಿಂಕ್ಸ್ ಸೇವಿಸುವುದರಿಂದ ಹೊಟ್ಟೆಯ ಆಮ್ಲ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಚಾಕೊಲೇಟ್ ಮತ್ತು ಪುದೀನಾ: ಚಾಕೊಲೇಟ್ ಹಾಗೂ ಪುದೀನಾ ಕೆಲವರಲ್ಲಿ ಹೊಟ್ಟೆಯ ಆಮ್ಲವನ್ನು ಆಹಾರನಾಳಕ್ಕೆ ಹಿಂತಿರುಗುವಂತೆ (Acid Reflux) ಮಾಡಬಹುದು.

ಕಾರ್ಬೊನೇಟೆಡ್ ಪಾನೀಯಗಳು: ಸಾಫ್ಟ್ ಡ್ರಿಂಕ್ಸ್ ಮತ್ತು ಗ್ಯಾಸ್ ಇರುವ ಪಾನೀಯಗಳು ಹೊಟ್ಟೆ ಉಬ್ಬರ ಹಾಗೂ ಆಸಿಡಿಟಿಯನ್ನು ಹೆಚ್ಚಿಸಬಹುದು.

ಆಸಿಡಿಟಿ ಇದ್ದರೆ ಯಾವ ಆಹಾರ ಸೇವಿಸುವುದು ಉತ್ತಮ?

ಹೊಟ್ಟೆಗೆ ಹಗುರವಾದ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಆಯ್ಕೆ ಮಾಡುವುದು ಉತ್ತಮ.

ಆಹಾರದಲ್ಲಿ ಇವುಗಳನ್ನು ಸೇರಿಸಬಹುದು:

  • ಓಟ್ಸ್
  • ಬಾಳೆಹಣ್ಣು
  • ಹಸಿರು ತರಕಾರಿಗಳು
  • ಸಂಪೂರ್ಣ ಧಾನ್ಯಗಳು
  • ಕಡಿಮೆ ಕೊಬ್ಬಿನ ಮೊಸರು
  • ಬೇಳೆಕಾಳುಗಳು
  • ನಾರು (Fiber) ಸಮೃದ್ಧ ಆಹಾರ
  • ಸಾಕಷ್ಟು ನೀರು

ಒಮ್ಮೆ ಹೆಚ್ಚು ತಿನ್ನುವ ಬದಲು ದಿನಕ್ಕೆ 4–5 ಬಾರಿ ಸ್ವಲ್ಪ ಪ್ರಮಾಣದಲ್ಲಿ ಊಟ ಮಾಡುವುದು ಸಹ ಪ್ರಯೋಜನಕಾರಿ.

ಇದನ್ನೂ ಓದಿ: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆಯೇ? ಡೆಂಗ್ಯೂ, ಮಲೇರಿಯಾದಿಂದ ತಪ್ಪಿಸಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ

ಆಸಿಡಿಟಿ ಇದ್ದಾಗ ತಪ್ಪಿಸಬೇಕಾದ ಅಭ್ಯಾಸಗಳು

  • ಒಮ್ಮೆಲೇ ಅತಿಯಾಗಿ ಊಟ ಮಾಡಬೇಡಿ.
  • ಊಟ ಮಾಡಿದ ತಕ್ಷಣ ಮಲಗಬೇಡಿ.
  • ರಾತ್ರಿ ಊಟವನ್ನು ಮಲಗುವ 2–3 ಗಂಟೆಗಳ ಮೊದಲು ಮುಗಿಸಿ.
  • ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರಿ.
  • ತುಂಬಾ ಬಿಗಿಯಾದ ಬಟ್ಟೆ ಧರಿಸಬೇಡಿ.
  • ಊಟವನ್ನು ನಿಧಾನವಾಗಿ ಚೆನ್ನಾಗಿ ಜಗಿದು ಸೇವಿಸಿ.
  • ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ

ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ

  • ಪದೇಪದೇ ಎದೆ ಉರಿ
  • ಹುಳಿ ತೇಗು
  • ಆಹಾರ ನುಂಗಲು ತೊಂದರೆ
  • ಗಂಟಲಿನಲ್ಲಿ ನಿರಂತರ ಉರಿ
  • ಕಾರಣವಿಲ್ಲದೆ ತೂಕ ಕಡಿಮೆಯಾಗುವುದು
  • ಔಷಧಿ ತೆಗೆದುಕೊಂಡರೂ ಆಸಿಡಿಟಿ ಕಡಿಮೆಯಾಗದಿರುವುದು
  • ರಾತ್ರಿ ವೇಳೆ ಎದೆ ಉರಿ ಹೆಚ್ಚಾಗುವುದು

ಇವು GERD (Gastroesophageal Reflux Disease) ಸೇರಿದಂತೆ ಗಂಭೀರ ಜೀರ್ಣಾಂಗ ಸಮಸ್ಯೆಗಳ ಸೂಚನೆಯಾಗಿರಬಹುದು.

ಆಸಿಡಿಟಿ ಕಡಿಮೆ ಮಾಡಲು ಮನೆಯಲ್ಲೇ ಅನುಸರಿಸಬಹುದಾದ ಸಲಹೆಗಳು

  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೆಚ್ಚು ಕಾಫಿ ಕುಡಿಯಬೇಡಿ.
  • ಸಾಕಷ್ಟು ನೀರು ಕುಡಿಯಿರಿ.
  • ದಿನಕ್ಕೆ ಕನಿಷ್ಠ 30 ನಿಮಿಷ ನಡೆಯಿರಿ.
  • ಒತ್ತಡ (Stress) ಕಡಿಮೆ ಮಾಡಿಕೊಳ್ಳಿ.
  • ಆರೋಗ್ಯಕರ ತೂಕ ಕಾಪಾಡಿಕೊಳ್ಳಿ.
  • ಮಲಗುವಾಗ ತಲೆಯನ್ನು ಸ್ವಲ್ಪ ಎತ್ತರದಲ್ಲಿ ಇರಿಸಿ.
  • ಆಹಾರ ಸೇವಿಸಿದ ತಕ್ಷಣ ವ್ಯಾಯಾಮ ಮಾಡಬೇಡಿ.

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ನಿರಂತರ ಆಸಿಡಿಟಿ ಅಥವಾ ತೀವ್ರ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘70 ಜನ ಒಂದೇ ಟಾಯ್ಲೆಟ್ ಬಳಸಬೇಕಿತ್ತು’: ಜೈಲು ದಿನಗಳ ಕಷ್ಟ ನೆನೆದ ಸಲ್ಮಾನ್ ಖಾನ್ – Kannada News | Salman Khan Recalls Harsh Jail Experience on Alliance Show

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ‘ಪ್ರೈಮ್ ವೀಡಿಯೋ’ ಒಟಿಟಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಅಲೈಯನ್ಸ್’ (Alliance) ಸಂಚಿಕೆಯಲ್ಲಿ ಅತಿಥಿಯಾಗಿ ಆಗಮಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ತಮ್ಮ ಸಹೋದರ ಸೊಹೈಲ್ ಖಾನ್ ಅವರನ್ನು ಬೆಂಬಲಿಸಲು ವೇದಿಕೆಗೆ ಬಂದ ಸಲ್ಲು, ತಾವೇ ಖುದ್ದಾಗಿ ಜೈಲಿನಲ್ಲಿ ಅನುಭವಿಸಿದ ಕಠಿಣ ದಿನಗಳ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರು ಜೈಲಿಗೆ (Jail) ಹೋಗಿದ್ದರು. ಆ ಕಷ್ಟದ ಸಮಯವನ್ನು ನೆನಪು ಮಾಡಿಕೊಂಡರು.

ಇತ್ತೀಚಿನ ಎಪಿಸೋಡ್ ಕೊನೆಯಲ್ಲಿ ‘ಅಲೈಯನ್ಸ್’ ಹೆಡ್‌ಕ್ವಾರ್ಟರ್ಸ್‌ಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್, ‘ಚಿಂತಿಸಬೇಡಿ, ನಾನು ಇಲ್ಲಿ ನಿರೂಪಣೆ ಮಾಡಲು ಬಂದಿಲ್ಲ’ ಎಂದು ತಮಾಷೆ ಮಾಡುತ್ತಾ ಸ್ಪರ್ಧಿಗಳಲ್ಲಿ ನಗು ಮೂಡಿಸಿದರು. ನಂತರ ಹಿರಿಯ ಸ್ಪರ್ಧಿಗಳ ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಓರ್ವ ಸ್ಪರ್ಧಿಗೆ ಅವರು ಕ್ಲಾಸ್ ತಗೆದುಕೊಂಡರು. ಮಿನಿ ಮಾಥುರ್ ಅವರ ಬಳಿ ‘ಕಬೀರ್ ಖಾನ್ ನಿನ್ನನ್ನು ಕಂಡು ಏಕೆ ಅಷ್ಟೊಂದು ಹೆದರುತ್ತಾರೆ ಎಂಬುದು ನನಗೀಗ ಅರ್ಥವಾಯಿತು’ ಎಂದು ಸಲ್ಮಾನ್ ಹಾಸ್ಯ ಮಾಡಿದರು.

ಜೈಲಿನ ದಿನ ನೆನಪು ಮಾಡಿಕೊಂಡ ಸಲ್ಮಾನ್ ಖಾನ್:

ಶೋನ ಇತ್ತೀಚಿನ ಪ್ರೋಮೋ ಒಂದರಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಜೈಲುವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ‘ವರ್ಷಗಳ ಹಿಂದೆ ನಾನು ಜೈಲಿಗೆ ಹೋದಾಗ, ನಮ್ಮ ಮುಂದೆ ಗ್ರಿಲ್ ಕಂಬಿಗಳಿದ್ದವು. ಅದು ತುಂಬಾ ಸಣ್ಣ ಜಾಗವಾಗಿತ್ತು. ಸುಮಾರು 50ರಿಂದ 70 ಜನರು ಒಂದೇ ಶೌಚಾಲಯ ಬಳಸಬೇಕಿತ್ತು. ಅದು ಇಂಡಿಯನ್ ಶೈಲಿಯ ಶೌಚಾಲಯವಾಗಿದ್ದು, ಕೆಲವೊಮ್ಮೆ ಅಲ್ಲಿ ಪಲ್ಲಿಗಳಿರುತ್ತಿದ್ದವು. ಯಾವಾಗಲೂ ಗಲೀಜು ತುಂಬಿರುತ್ತಿತ್ತು’ ಎಂದು ಜೈಲಿನ ಪರಿಸ್ಥಿತಿಯನ್ನು ಸಲ್ಮಾನ್ ವಿವರಿಸಿದ್ದಾರೆ.

ಸಲ್ಮಾನ್ ಖಾನ್ ಜೈಲುವಾಸದ ವರ್ಷ:

1998ರ ಕೃಷ್ಣಮೃಗ ಮತ್ತು ಚಿಂಕಾರ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ವಿವಿಧ ಹಂತಗಳಲ್ಲಿ ಬಂಧನಕ್ಕೊಳಗಾಗಿದ್ದರು. ಅವರು 1998ರಲ್ಲಿ 3 ದಿನ, 2006ರಲ್ಲಿ 6 ದಿನ, 2007ರಲ್ಲಿ 6 ದಿನ ಹಾಗೂ 2018ರಲ್ಲಿ 2 ದಿನಗಳ ಕಾಲ ಕಸ್ಟಡಿಯಲ್ಲಿದ್ದರು. ಸದ್ಯಕ್ಕೆ ಪ್ರೋಮೋದಲ್ಲಿ ಅವರು ಮಾತನಾಡಿರುವುದು ಸ್ವಲ್ಪ ಮಾತ್ರ ಇದೆ. ಪೂರ್ತಿ ಸಂಚಿಕೆಯಲ್ಲಿ ಹೆಚ್ಚಿನ ವಿವರ ಇರಲಿದೆ.

ಇದನ್ನೂ ಓದಿ:  ಸಲ್ಮಾನ್ ಖಾನ್ ಸಂಭಾವನೆಯಲ್ಲಿ ಭಾರಿ ಇಳಿಕೆ; 120 ಕೋಟಿ ರೂಪಾಯಿ ಬದಲು 70 ಕೋಟಿ ರೂ.?

ಅಲೈಯನ್ಸ್ ರಿಯಾಲಿಟಿ ಶೋ ಫಿನಾಲೆ:

ಮುಂದಿನ ಸಂಚಿಕೆಯಲ್ಲಿ ಸಲ್ಮಾನ್ ಖಾನ್, ಸೊಹೈಲ್ ಖಾನ್ ಹಾಗೂ ಅವರ ಮಾಜಿ ಪತ್ನಿ ಸೀಮಾ ಸಜ್ದೇ ಅವರ ಸಂಬಂಧದ ಕುರಿತಾಗಿಯೂ ಮಾತನಾಡಲಿದ್ದಾರೆ ಎನ್ನಲಾಗಿದೆ. ಕುನಾಲ್ ಖೇಮು ನಿರೂಪಣೆ ಮಾಡುತ್ತಿರುವ ‘ಅಲೈಯನ್ಸ್’ ರಿಯಾಲಿಟಿ ಶೋನ ಗ್ರಾಂಡ್ ಫಿನಾಲೆ ಆಗಸ್ಟ್ 7ರಂದು ನಡೆಯಲಿದೆ. ಈಗಾಗಲೇ ಆಲಿ ಗೋನಿ ಮೊದಲ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಮಿನಿ ಮಾಥುರ್ ಮತ್ತು ನೀತಿ ಅವರು ಫಿನಾಲೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲೋಕಭವನದ ಆವರಣದಲ್ಲಿ ನೂತನ ಸಚಿವರ ಪದಗ್ರಹಣ: ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು – Kannada News | Siddaramaiah Skips Karnataka Cabinet Oath Ceremony Amidst Speculation

ಬೆಂಗಳೂರು, ಆಗಸ್ಟ್​​ 03: ಕರ್ನಾಟಕ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಭಾರಿ ಟ್ವಿಸ್ಟ್​​ಗಳ ಬಳಿಕ ಅಂತಿಮವಾಗಿ 19 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಈ ಪ್ರಮುಖ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗೈರಾಗಿದ್ದಾರೆ. ಮಧ್ಯಾಹ್ನವೇ ತಮ್ಮ ಆಪ್ತರೊಂದಿಗೆ ಪ್ರಮಾಣ ವಚನ ಸಮಾರಂಭಕ್ಕೆ ತಾನು ಹೋಗುವುದಿಲ್ಲ ಎಂದು ಅವರು ಹೇಳಿದ್ದರಂತೆ. ಈ ಗೈರಿಗೆ ನಿಖರ ಕಾರಣ ಮಾತ್ರ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕಕ್ಕೆ ಮತ್ತೆ ಸಂಕಷ್ಟ; ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸಿಎಂ ವಿಜಯ್ – Kannada News | Tamil Nadu CM Vijay moves to Supreme Court over Cauvery water Dispute with Karnataka

ನವದೆಹಲಿ, ಆಗಸ್ಟ್ 3: ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ರಾಜ್ಯಗಳ ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ (Cauvery Water Dispute) ಹಲವು ದಶಕಗಳ ಇತಿಹಾಸವಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕ ತಮಿಳುನಾಡಿಗೆ ನಮ್ಮ ಪಾಲಿನ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ವಿಜಯ್ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದೆ. ಇದರಿಂದಾಗಿ ಡಿಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಜುಲೈ 28ರಂದು ನಡೆದ ತನ್ನ 139ನೇ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಹವಾಮಾನ ಮತ್ತು ನೀರಿನ ಲಭ್ಯತೆಯನ್ನು ಪರಿಶೀಲಿಸಿದ್ದ CWRC ಕೃಷ್ಣರಾಜಸಾಗರ (KRS) ಮತ್ತು ಕಬಿನಿ ಜಲಾಶಯಗಳಿಂದ ಜುಲೈ 29ರಿಂದ ಆಗಸ್ಟ್ 12ರವರೆಗೆ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ದಿನಕ್ಕೆ 3,500 ಕ್ಯೂಸೆಕ್ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ಧಾರವನ್ನು CWMA ಜುಲೈ 30ರಂದು ನಡೆದ ತನ್ನ 54ನೇ ತುರ್ತು ಸಭೆಯಲ್ಲಿ ಎತ್ತಿಹಿಡಿದಿತ್ತು.

ತಮಿಳುನಾಡು ಸರ್ಕಾರದ ಆರೋಪವೇನು?:

ಈ ಆದೇಶದ ಹೊರತಾಗಿಯೂ ಜುಲೈ 29ರಿಂದ ಆಗಸ್ಟ್ 2ರವರೆಗೆ ಬಿಳಿಗುಂಡ್ಲುವಿನಲ್ಲಿ ದಾಖಲಾದ ನೀರಿನ ಒಳಹರಿವು ಕೇವಲ 158 ರಿಂದ 550 ಕ್ಯೂಸೆಕ್​ನಷ್ಟಿದ್ದು, ನಿಗದಿಪಡಿಸಿದ 3,500 ಕ್ಯೂಸೆಕ್‌ಗಿಂತ ತೀರಾ ಕಡಿಮೆಯಾಗಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ. ಅಲ್ಲದೆ, ಕರ್ನಾಟಕದ ಜಲಾಶಯಗಳಲ್ಲಿ ಆದೇಶವನ್ನು ಪಾಲಿಸಲು ಅಗತ್ಯವಿರುವಷ್ಟು ನೀರಿದೆ ಎಂದು ತಮಿಳುನಾಡು ವಾದಿಸಿದೆ.

ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ; ಕಾಂಗ್ರೆಸ್ ಎಂಪಿ ಮಾಣಿಕಂ ಟ್ಯಾಗೋರ್

ಆಗಸ್ಟ್ 3ರ ವೇಳೆಗೆ ಕೃಷ್ಣರಾಜಸಾಗರ ಜಲಾಶಯದಲ್ಲಿ 23.078 ಟಿಎಂಸಿ, ಕಬಿನಿಯಲ್ಲಿ 18.610 ಟಿಎಂಸಿ, ಹಾರಂಗಿಯಲ್ಲಿ 7.827 ಟಿಎಂಸಿ ಮತ್ತು ಹೇಮಾವತಿಯಲ್ಲಿ 28.022 ಟಿಎಂಸಿ ನೀರು ಸಂಗ್ರಹವಿತ್ತು. ನಾಲ್ಕೂ ಜಲಾಶಯಗಳಲ್ಲಿ ಸೇರಿ ಒಟ್ಟು 77.537 ಟಿಎಂಸಿ ನೀರಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಕರ್ನಾಟಕದ ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಒಳಹರಿವು ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ಪ್ರಮಾಣಾನುಗುಣವಾಗಿ ನೀರು ಹಂಚಿಕೆ ಸೂತ್ರದಂತೆ ಬಿಳಿಗುಂಡ್ಲುವಿನಲ್ಲಿ ತಮಗೆ 26.954 ಟಿಎಂಸಿ ನೀರು ಸಿಗಬೇಕು. ಆದರೆ, CWMA ಪ್ರಸ್ತುತ ಅವಧಿಗೆ ನಿಗದಿಪಡಿಸಿರುವ 4.536 ಟಿಎಂಸಿ ನೀರು ತೀರಾ ಕಡಿಮೆಯಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಕಾವೇರಿ ಪ್ರಾಧಿಕಾರಗಳ ಆದೇಶಗಳನ್ನು ಕರ್ನಾಟಕ ಅನುಸರಿಸುವಂತೆ ಮತ್ತು ನಿಗದಿತ ಕಾಲಮಿತಿಯಲ್ಲಿ ತಮಿಳುನಾಡಿಗೆ ತನ್ನ ಹಕ್ಕಿನ ನೀರು ಸಿಗುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾದ ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ

ಈ ಬಗ್ಗೆ ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲ ಬಿ. ಕರುಣಾಕರನ್ ದೃಢಪಡಿಸಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನಿಗದಿಪಡಿಸಿದ ಪರಿಮಾಣಕ್ಕಿಂತ ಕರ್ನಾಟಕ ಬಿಡುಗಡೆ ಮಾಡಿದ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ. ಕಾವೇರಿ ನೀರು ವಿವಾದದ ಕುರಿತು ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತೆ ಸಿಎಂ ವಿಜಯ್ ಅವರು ಸೂಚಿಸಿದ್ದರು.

ಡಿಎಂಕೆ ಮನವಿ:

ಈ ಮಧ್ಯೆ, ತಮಿಳುನಾಡಿನ ಮುಖ್ಯ ವಿರೋಧ ಪಕ್ಷವಾದ ಡಿಎಂಕೆ ಕೂಡ ಶನಿವಾರ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದು, ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿತ್ತು. 2018ರ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪನ್ನು ಕರ್ನಾಟಕವು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅದು ಹೇಳಿತ್ತು. ಅದರ ಬೆನ್ನಲ್ಲೇ ತಮಿಳುನಾಡು ಸರ್ಕಾರವೂ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಕರ್ನಾಟಕ ಸರ್ಕಾರದ ತಲೆಬಿಸಿಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Slippery Bathroom Floor: ಮಳೆಗಾಲದಲ್ಲಿ ಸ್ನಾನಗೃಹದ ನೆಲ ಜಾರದಂತೆ ತಡೆಯಲು ಈ ಸಲಹೆಗಳನ್ನು ಪಾಲಿಸಿ – Kannada News | Follow these tips to prevent bathroom floors from slipping during the rainy season

ಮಳೆಗಾಲವು ಆಹ್ಲಾದಕರವಾಗಿದ್ದರೂ, ಈ ಋತುವಿನಲ್ಲಿ ಹಲವು ಸಮಸ್ಯೆಗಳು ಕೂಡ ಎದುರಾಗುತ್ತವೆ. ಕೀಟ, ಸೊಳ್ಳೆ, ಹಾವುಗಳ ಕಾಟ ಒಂದೆಡೆಯಾದರೆ ಇನ್ನೊಂದೆಡೆ ತೇವಾಂಶದ ಕಾರಣದಿಂದಾಗಿ ನೆಲ ಜಾರುವ ಸಮಸ್ಯೆಯೂ ಇರುತ್ತವೆ. ವಿಶೇಷವಾಗಿ ಸ್ನಾನಗೃಹದ (bathroom) ನೆಲ ಪದೇ ಪದೇ ಒದ್ದೆಯಾಗಿ ಒಣಗದೇ ಇರುವುದರಿಂದ ಪಾಚಿಗಟ್ಟಿ ಜಾರಿದಂತಾಗುತ್ತದೆ. ಇದು ನೈರ್ಮಲ್ಯಕ್ಕೆ ಅಡ್ಡಿ ಉಂಟುಮಾಡುವುದಲ್ಲದೆ ಗಂಭೀರ ಅಪಘಾತಗಳಿಗೂ ಕಾರಣವಾಗುತ್ತದೆ. ಅದರಲ್ಲೂ ಮಕ್ಕಳು ಮತ್ತು ವೃದ್ಧರಿಗೆ ತುಂಬಾನೇ ಅಪಾಯಕಾರಿ. ಹೀಗಿರುವಾಗ ಬಾತ್‌ರೂಮ್‌ನ ನೆಲದ ಟೈಲ್ಸ್‌ ಜಾರದಂತೆ ನೋಡಿಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕೇನು ಹೆಚ್ಚು ಖರ್ಚು ಮಾಡಬೇಕೆಂದಿಲ್ಲ, ಈ ಸುಲಭ ಪರಿಹಾರದ ಮುಖಾಂತರ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ಬಾತ್‌ರೂಮ್‌ ಟೈಲ್ಸ್‌ ಜಾರದಂತೆ ಜಾಗ್ರತೆ ವಹಿಸುವುದು ಹೇಗೆ?

ಟೈಲ್ಸ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ: ಮಳೆಗಾಲದಲ್ಲಿ ಟೈಲ್ಸ್‌ಗಳ ಮೇಲೆ ಎಣ್ಣೆ ಮತ್ತು ಪಾಚಿ ಸಂಗ್ರಹವಾಗುವುದರಿಂದ ಅವು ಜಾರಿದಂತಾಗುತ್ತದೆ. ಆದ್ದರಿಂದ, ಸ್ನಾನಗೃಹದ ಟೈಲ್ಸ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ನೆಲವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸ್ನಾನಗೃಹ ಸ್ವಚ್ಛವಾಗಿರುತ್ತದೆ ಜೊತೆಗೆ ಜಾರಿ ಬೀಳುವ ಅಪಾಯವೂ ಇರೋದಿಲ್ಲ.

ವಿನೆಗರ್:  ಒಂದು ಬಕೆಟ್‌ನಲ್ಲಿ ಬಿಳಿ ವಿನೆಗರ್ ಮತ್ತು ನೀರನ್ನು 1:2 ಅನುಪಾತದಲ್ಲಿ ಮಿಶ್ರಣ ಮಾಡಿ. ನಂತರ, ನೆಲವನ್ನು ಸ್ವಚ್ಛಗೊಳಿಸಲು ಈ ದ್ರಾವಣವನ್ನು ಬಳಸಿ. ವಿನೆಗರ್ ಸ್ವಲ್ಪ ಹುಳಿ ರುಚಿಯನ್ನು ಹೊಂದಿರುತ್ತದೆ, ಇದು ನೆಲದಿಂದ ಜಿಡ್ಡು ಮತ್ತು ಜಾರುವಿಕೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಅಡಿಗೆ ಸೋಡಾ ಮತ್ತು ವಿನೆಗರ್: ಸ್ನಾನಗೃಹದ ನೆಲದ ಮೇಲೆ ಸ್ವಲ್ಪ ಅಡಿಗೆ ಸೋಡಾ ಸಿಂಪಡಿಸಿ ಮತ್ತು ನಂತರ ಅದರ ಮೇಲೆ ಸ್ವಲ್ಪ ವಿನೆಗರ್ ಸುರಿಯಿರಿ. ಇವೆರಡೂ ಮಿಶ್ರಣವಾದ ತಕ್ಷಣ ನೊರೆ ಬರಲು ಪ್ರಾರಂಭಿಸುತ್ತದೆ. ಇದನ್ನು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಈ ವಿಧಾನವು ಗ್ರೀಸ್‌ ಅನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.

ಉಪ್ಪಿನ ಬಳಕೆ: ಸ್ನಾನಗೃಹದ ನೆಲ ಹೆಚ್ಚು ಜಾರುತ್ತಿದ್ದರೆ, ಉಪ್ಪಿನ ಸಹಾಯದಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು. ಇದಕ್ಕಾಗಿ ನೆಲದ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ. ಕೆಲವು ನಿಮಿಷಗಳ ನಂತರ, ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ.

ನಿಂಬೆ ಮತ್ತು ಉಪ್ಪು: ನಿಂಬೆ ರಸಕ್ಕೆ 3-4 ಟೀ ಚಮಚ ಉಪ್ಪನ್ನು ಸೇರಿಸಿ. ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಸ್ನಾನಗೃಹದ ನೆಲದ ಮೇಲೆ ಹಚ್ಚಿ. 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸ್ಕ್ರಬ್ಬರ್‌ ಸಹಾಯದಿಂದ ನೆಲವನ್ನು ಚೆನ್ನಾಗಿ ಉಜ್ಜಿ  ಒಂದು ಬಕೆಟ್ ಬೆಚ್ಚಗಿನ ನೀರಿನಿಂದ ನೆಲವನ್ನು ತೊಳೆಯಿರಿ. ಇದು ನೆಲದ ಮೇಲಿನ ಗ್ರೀಸ್‌ ಅನ್ನು ತೆಗೆದುಹಾಕುತ್ತದೆ.  ಅಲ್ಲದೆ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ನೆಲವನ್ನು ಹೊಳೆಯುವಂತೆ ಮಾಡಲು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಹಾವುಗಳು ಮನೆ ಸುತ್ತ ಬರದಂತೆ ತಡೆಯಲು ಸುರಕ್ಷತಾ ಕ್ರಮಗಳನ್ನು ಅನುಸರಿಸಲೇಬೇಕು

ಆಂಟಿ-ಸ್ಲಿಪ್ ಮ್ಯಾಟ್‌ ಬಳಕೆ: ಮತ್ತೊಂದು ಪರಿಣಾಮಕಾರಿ ವಿಧಾನವೆಂದರೆ ಸ್ಲಿಪ್-ವಿರೋಧಿ ಮ್ಯಾಟ್‌ಗಳನ್ನು ಬಳಸುವುದು. ಸ್ನಾನಗೃಹದ ಶವರ್ ಮತ್ತು ಬಾಗಿಲಿನ ಬಳಿ ಆಂಟಿ ಸ್ಲಿಪ್‌ ಮ್ಯಾಟ್‌ಗಳನ್ನು ಇಡುವುದರಿಂದ ಪಾದಗಳಿಗೆ ಉತ್ತಮ ಗ್ರಿಪ್‌ ಸಿಗುತ್ತದೆ. ಇದರಿಂದ ಜಾರಿ ಬೀಳುವ ಅಪಾಯವೂ ಕಡಿಮೆಯಾಗುತ್ತದೆ.

ಸಿಲಿಕಾನ್‌ ಮ್ಯಾಟ್‌: ನಿಮ್ಮ ಮನೆಯ ಸ್ನಾನಗೃಹದ ಟೈಲ್ಸ್‌ ಜಾರುತ್ತಿದ್ದರೆ ನೀವು ಸಿಲಿಕಾನ್‌ ಮ್ಯಾಟ್‌ ಬಳಸಿ, ಇದು ಪರಿಣಾಮಕಾರಿ ಪರಿಹಾರವಾಗಿದೆ. ಶವರ್ ಮತ್ತು ಬಾಗಿಲಿನ ಬಳಿ ಸಿಲಿಕೋನ್ ಮ್ಯಾಟ್‌ಗಳನ್ನು ಇಡುವುದರಿಂದ ಜಾರಿ ಬೀಳುವ ಅಪಾಯ ತುಂಬಾನೇ ಕಡಿಮೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್‌ ಸಂಪುಟ ಸೇರಿದ 19 ಸಚಿವರು: ಹೊಸಬರಿಗೆ ಅವಕಾಶ; ಹಳಬರಿಗೂ ಮಣೆ! – Kannada News | Karnataka Cabinet Expansion: 19 New Ministers to Join CM D.K. Shivakumar’s Cabinet Today

ಸಚಿವರಾಗಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಬುದ್ದ, ಬಸವ, ಅಂಬೇಡ್ಕರ್ ಸೇರಿದಂತೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಇಂಗ್ಲಿಷ್​​ನಲ್ಲಿ ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Source link

5.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಎಸಿ ಕಾವ್ಯಾರಾಣಿ – Kannada News | Mysuru Lokayukta Traps Hunsur AC Kavyarani Taking Rs 5.5 Lakh Bribe for Land Appeal

ಮೈಸೂರು, ಆ.3: ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಭಾರಿ ಮೊತ್ತದ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು 5.50 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನಲ್ಲಿರುವ ನಾಲ್ಕೂವರೆ ಎಕರೆ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು ನ್ಯಾಯಾಲಯದ ಆದೇಶವಿತ್ತು. ಆದರೂ ಕೆಲಸ ಮಾಡಿಕೊಡಲು ಎಸಿ ಕಾವ್ಯಾರಾಣಿ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ಬೆಂಗಳೂರು ಮೂಲದ ದೂರುದಾರೆ ಡಾ. ರೂಪಾ ಅವರು ಮೈಸೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಧ್ಯಾಹ್ನದ ಊಟದ ಸಮಯದಲ್ಲಿ ಎಸಿ ಕಾವ್ಯಾರಾಣಿ ಅವರು ತಮ್ಮ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಯೋಜನೆಯಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ ದಾಳಿ ಸಂಘಟಿಸಿತು.

ಇದನ್ನೂ ಓದಿ: ನಕಲಿ ಪಿಯುಸಿ ಅಂಕಪಟ್ಟಿ ನೀಡಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದಿದ್ದ ನಾಲ್ವರಿಗೆ ಶಾಕ್​​: 2 ವರ್ಷ ಜೈಲು ಶಿಕ್ಷೆ

ಎಸಿ ಕಚೇರಿಯ ಗುಮಾಸ್ತ ಶಿವಕುಮಾರ್ ಅವರಿಗೆ ದೂರುದಾರೆ ಡಾ. ರೂಪಾ ಅವರು 5.50 ಲಕ್ಷ ರೂ. ಲಂಚದ ಹಣವನ್ನು ನೀಡಿದ್ದರು. ಗುಮಾಸ್ತನಿಂದ ಹಣ ಪಡೆದು ಮನೆಯಲ್ಲಿದ್ದ ಎಸಿ ಕಾವ್ಯಾರಾಣಿ ಸ್ವೀಕರಿಸುತ್ತಿದ್ದಂತೆಯೇ, ಲೋಕಾಯುಕ್ತ ಡಿವೈಎಸ್‌ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ 3 ಜೀಪ್‌ಗಳಲ್ಲಿ ಬಂದಿದ್ದ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿ ಹಣ ಸಮೇತ ಅಧಿಕಾರಿಗಳನ್ನು ವಶಕ್ಕೆ ಪಡೆಯಿತು. ಪ್ರಸ್ತುತ ಲೋಕಾಯುಕ್ತ ಅಧಿಕಾರಿಗಳು ಎಸಿ ಕಾವ್ಯಾರಾಣಿ ಹಾಗೂ ಗುಮಾಸ್ತ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version