ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ವಿರೋಧಿಗಳಿಗೆ ಜಮೀರ್​​ ಹೇಳಿದ್ದೇನು? – Kannada News | Zameer Ahmed Khan Secures Minister Berth Despite Viral Audio; Sends Strong Message to Rivals

ಬೆಂಗಳೂರು, ಆಗಸ್ಟ್​​ 03: ಫಸ್ಟ್​​ ಲಿಸ್ಟ್​​ನಲ್ಲಿಯೇ ತಮ್ಮ ಹೆಸರು ಬರುವ ನಿರೀಕ್ಷೆ ಇತ್ತಾದರೂ ಆಡಿಯೋ ರಿಲೀಸ್​​ ಹಿನ್ನೆಲೆ ಹಿನ್ನಡೆಯಾಗಿದೆ ಎಂದು ಹಿಂದೆಯೇ ಹೇಳಿದ್ದೆ. ಎರಡನೇ ಪಟ್ಟಿಯ ಬಗ್ಗೆ ನಿರೀಕ್ಷೆ ಇತ್ತಾದರೂ ಹೈಕಮಾಂಡ್​​ ನಿರ್ಧಾರಕ್ಕೆ ಬದ್ಧವಾಗಿದ್ದೆ. 2028ರ ಚುನಾವಣೆಗೆ ಕೆಲಸ ಮಾಡು ಎಂದು ಪಕ್ಷ ಹೇಳಿದ್ದರೂ ತಯಾರಿದ್ದೆ. ಆದರೆ ಪಕ್ಷ ಇವತ್ತು ತನಗೆ ಜವಾಬ್ದಾರಿ ನೀಡಿದೆ ಎಂದು ಶಾಸಕ ಜಮೀರ್​​ ಅಹ್ಮದ್​​ ಖಾನ್​​ ತಿಳಿಸಿದ್ದಾರೆ. ವಿರೋಧಿಗಳು ಏನೇನು ಪ್ರಯತ್ನ ಮಾಡಿದರು ಎಂಬುದೆಲ್ಲ ಈಗ ಬೇಡ. ಪಕ್ಷ ನೀಡಿರುವ ಹೊಣೆಗಾರಿಕೆ ನಿಭಾಯಿಸುತ್ತೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಗಡಿಗಳಲ್ಲಿ ಪ್ರಬಲ ರೈಲು ಜಾಲ ಅಳವಡಿಕೆಗೆ ಭಾರತ ಯೋಜನೆ; 45,000 ಕೋಟಿ ರೂ ಹೂಡಿಕೆ ಸಾಧ್ಯತೆ – Kannada News | India to strengthen border regions by upgrading railway infrastructure

ನವದೆಹಲಿ, ಆಗಸ್ಟ್ 3: ಪ್ರಾದೇಶಿಕ ಭದ್ರತೆ ಮತ್ತು ಗಡಿ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಭಾರತ ಸರ್ಕಾರವು ಒಂದು ಬೃಹತ್ ಯೋಜನೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ರೈಲ್ವೆ ಮೂಲಸೌಕರ್ಯಗಳನ್ನು (Railway infrastructure) ಆಧುನೀಕರಿಸಲು ಹಾಗೂ ನೂತನ ರೈಲು ಮಾರ್ಗಗಳನ್ನು ನಿರ್ಮಿಸಲು ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಸುಮಾರು ₹45,000 ಕೋಟಿ (ಸುಮಾರು $4.7 ಬಿಲಿಯನ್) ಹೂಡಿಕೆ ಮಾಡಲು ಯೋಜನೆ ರೂಪಿಸಲಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ರೈಲ್ವೆ ಕೈಗೊಳ್ಳಲಿರುವ ಒಟ್ಟು ಮೂಲಸೌಕರ್ಯ ವೆಚ್ಚದಲ್ಲಿ ಶೇ. 22 ರಷ್ಟು ಭಾಗವನ್ನು ಈ ಗಡಿ ರಾಜ್ಯಗಳ ಯೋಜನೆಗಳಿಗಾಗಿಯೇ ವಿನಿಯೋಗಿಸಲಾಗುತ್ತಿರುವುದು ಈ ಯೋಜನೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಪ್ರಮುಖ ರಾಜ್ಯಗಳು ಮತ್ತು ಯೋಜನೆಯ ವಿವರಗಳು

ಈ ಯೋಜನೆಯಡಿ ನೂತನ ರೈಲು ಹಳಿಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಹಾಗೂ ಹಾಲಿ ಇರುವ ನೆಟ್‌ವರ್ಕ್‌ಗಳನ್ನು ಬಲಪಡಿಸುವ ಕಾರ್ಯಗಳು ನಡೆಯಲಿವೆ. ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಪ್ರಮುಖ ಗಡಿ ರಾಜ್ಯಗಳಲ್ಲಿ ಈ ಯೋಜನೆಗಳು ಇರಲಿವೆ.

ಇದನ್ನೂ ಓದಿ: ಭಾರತ-ಟಿಬೆಟ್ ಪುರಾತನ ರೇಷ್ಮೆ ಮಾರ್ಗಕ್ಕೆ ಮರುಜೀವ; ಇಲ್ಲಿ ವ್ಯಾಪಾರಕ್ಕೆ ಹಣ ಅಲ್ಲ, ಬಾರ್ಟರ್ ಸಿಸ್ಟಂ

ಟು ಇನ್ ಒನ್ (Dual-Use Infrastructure): ಈ ರೈಲ್ವೆ ಜಾಲವು ಸಾಮಾನ್ಯ ಸಾರ್ವಜನಿಕ ಪ್ರಯಾಣಿಕರಿಗಷ್ಟೇ ಅಲ್ಲದೆ, ಸೇನಾ ಪಡೆಗಳು, ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳನ್ನು ತುರ್ತು ಸಂದರ್ಭಗಳಲ್ಲಿ ವೇಗವಾಗಿ ಗಡಿಭಾಗಕ್ಕೆ ಸಾಗಿಸಲು (Military Logistics) ನೆರವಾಗಲಿದೆ.

ಆಯಕಟ್ಟಿನ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ

ಭಾರತದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ಸಿಲಿಗುರಿ ಕಾರಿಡಾರ್ (Chicken’s Neck) ಹಾಗೂ ಹಿಮಾಲಯನ್ ಗಡಿ ಪ್ರದೇಶಗಳಲ್ಲಿ ಎಲ್ಲಾ ಹವಾಮಾನಕ್ಕೂ ಸೂಕ್ತವಾದ ರೈಲ್ವೆ ಜಾಲವನ್ನು ರೂಪಿಸಲಾಗುತ್ತದೆ.

ಈ ಯೋಜನೆಯು ಜಾರಿಯಾದ ನಂತರ ಗಡಿಭಾಗದಲ್ಲಿ ಸೈನಿಕರ ನಿಯೋಜನೆಗೆ ತಗಲುವ ಸಮಯ ಗಮನಾರ್ಹವಾಗಿ ಕಡಿಮೆಯಾಗಲಿದೆ. ಅಂದರೆ, ಗಡಿಭಾಗದಲ್ಲಿ ಅಗತ್ಯ ಬಿದ್ದಾಗ ಬಹಳ ಕ್ಷಿಪ್ರವಾಗಿ ಸೇನಾ ತುಕಡಿಗಳನ್ನು ಕಳುಹಿಸಬಹುದು.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ 4,504 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

ಇಂಥ ಸೌಕರ್ಯಗಳಲ್ಲಿ ಬಹಳ ಮುಂದಿರುವ ಚೀನಾ

ನೆರೆಯ ದೇಶವಾದ ಚೀನಾ ತನ್ನ ಭಾರತದ ಗಡಿಭಾಗದಲ್ಲಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಹಾಗೂ ರೈಲು ಮಾರ್ಗಗಳನ್ನು ವೇಗವಾಗಿ ನಿರ್ಮಿಸುತ್ತಿದೆ. ಅದರ ಸಮರ ಸನ್ನದ್ಧತೆ ಬಹಳ ಉತ್ತಮವಾಗಿದೆ. ಹೀಗಾಗಿ, ಭಾರತವೂ ಕಳೆದ ಕೆಲ ವರ್ಷಗಳಿಂದ ತನ್ನ ಗಡಿ ರಕ್ಷಣಾ ಕಾರ್ಯತಂತ್ರವನ್ನು ಚುರುಕುಗೊಳಿಸಿದೆ. ಕಳೆದ ದಶಕದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಸುಮಾರು 1,700 ಕಿಲೋಮೀಟರ್‌ಗಳಷ್ಟು ನೂತನ ರೈಲು ಮಾರ್ಗಗಳನ್ನು ಸೇರಿಸಲಾಗಿದ್ದು, ಈ ಹೊಸ ₹45,000 ಕೋಟಿಯ ಯೋಜನೆಯು ಗಡಿ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಐಪಿಎಲ್ ಟ್ರೇಡ್ ವಿಂಡೋ: ತೆರೆಮರೆಯ ರಣತಂತ್ರಗಳು – Kannada News | IPL 2027: BCCI Green Signals Trade Window Ahead of Mini Auction

ಐಪಿಎಲ್ 2027ರ ಸೀಸನ್‌ಗಾಗಿ ಬಿಸಿಸಿಐ (BCCI) ಅಧಿಕೃತ ಟ್ರೇಡ್ ವಿಂಡೋವನ್ನು ಮುಕ್ತಗೊಳಿಸಿದ್ದು, ಫ್ರಾಂಚೈಸಿಗಳು ಹರಾಜಿಗೂ ಮುನ್ನವೇ ಆಟಗಾರರ ಅದಲು-ಬದಲಿಗೆ ಭರ್ಜರಿ ರಣತಂತ್ರ ರೂಪಿಸುತ್ತಿವೆ. ಮುಂಬರುವ ಮಿನಿ ಹರಾಜಿಗೂ ಮುನ್ನ ತಂಡಗಳ ಸಮತೋಲನವನ್ನು ಸರಿಪಡಿಸಿಕೊಳ್ಳಲು ಈ ವಿಂಡೋ ಅತ್ಯಂತ ನಿರ್ಣಾಯಕವಾಗಿದೆ. ಐಪಿಎಲ್ ಟ್ರೇಡ್ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂಪೂರ್ಣ ನಿಯಮಗಳು ಮತ್ತು ವಿವರಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ಟ್ರೇಡ್ ವಿಂಡೋ ಎಂದರೇನು?

ಐಪಿಎಲ್ ಟ್ರೇಡ್ ವಿಂಡೋ ಎಂದರೆ ಹರಾಜಿನಲ್ಲಿ ಭಾಗವಹಿಸದೆ, ಫ್ರಾಂಚೈಸಿಗಳು ಪರಸ್ಪರ ಒಪ್ಪಂದದ ಮೂಲಕ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ವಿಶೇಷ ಪ್ರಕ್ರಿಯೆ.

ಸಾಮಾನ್ಯವಾಗಿ ಐಪಿಎಲ್​ ಸೀಸನ್ ಮುಗಿದ ಒಂದು ತಿಂಗಳ ನಂತರ ಈ ವಿಂಡೋ ಆರಂಭವಾಗುತ್ತದೆ. ಅಲ್ಲದೆ ಮುಂದಿನ ಸೀಸನ್‌ನ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಲು ಇನ್ನು 7 ದಿನಗಳು ಬಾಕಿ ಇರುವಾಗ ಈ ವಿಂಡೋ ಅಧಿಕೃತವಾಗಿ ಮುಚ್ಚಲ್ಪಡುತ್ತದೆ.

ಟ್ರೇಡ್ ಮಾಡುವ ವಿಧಾನಗಳು:

ಐಪಿಎಲ್ ಫ್ರಾಂಚೈಸಿಗಳು ಪ್ರಮುಖವಾಗಿ ಎರಡು ಆಯ್ಕೆಗಳ ಮೂಲಕ ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಬಹುದು.

  • ನೇರ ನಗದು ಒಪ್ಪಂದ: ಖರೀದಿಸುವ ತಂಡವು ಆಟಗಾರನ ಸಂಪೂರ್ಣ ಹರಾಜು ಮೊತ್ತವನ್ನು ನಗದಾಗಿ ನೀಡಿ, ಆತನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು.
  • ಆಟಗಾರರ ವಿನಿಮಯ: ಎರಡು ತಂಡಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಇಬ್ಬರು ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಈ ವೇಳೆ ಇಬ್ಬರ ಸಂಭಾವನೆಯಲ್ಲಿ ವ್ಯತ್ಯಾಸವಿದ್ದರೆ, ಆ ಮೊತ್ತವನ್ನು ಹಣದ ರೂಪದಲ್ಲಿ ಸರಿದೂಗಿಸಲು ಅವಕಾಶವಿದೆ.

ಬಿಸಿಸಿಐನ ಕಟ್ಟುನಿಟ್ಟಿನ ನಿಯಮಗಳು:

ಟ್ರೇಡ್ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿರಲು ಬಿಸಿಸಿಐ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

  • ಆಟಗಾರನ ಒಪ್ಪಿಗೆ ಕಡ್ಡಾಯ: ಯಾವುದೇ ತಂಡವು ಆಟಗಾರನಿಗೆ ಇಷ್ಟವಿಲ್ಲದೆ ಬಲವಂತವಾಗಿ ಬೇರೆ ತಂಡಕ್ಕೆ ಮಾರಾಟ ಮಾಡಲು ಸಾಧ್ಯವಿಲ್ಲ. ಆಟಗಾರನು ಅಧಿಕೃತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವುದು ಕಡ್ಡಾಯ.
  • ಹರಾಜು ಪರ್ಸ್ ನಿಯಮ: ಆಟಗಾರನ ಮೂಲ ಹರಾಜು ಬೆಲೆ ಎಷ್ಟಿರುತ್ತದೆಯೋ, ಅಷ್ಟು ಮೊತ್ತ ಮಾತ್ರ ಖರೀದಿಸುವ ತಂಡದ ಹರಾಜು ಪರ್ಸ್‌ನಿಂದ ಕಡಿತಗೊಳ್ಳುತ್ತದೆ. ಹಾಗೆಯೇ ಮಾರಾಟ ಮಾಡಿದ ತಂಡದ ಪರ್ಸ್‌ಗೆ ಮರಳಿ ಸೇರುತ್ತದೆ.
  • ವರ್ಗಾವಣೆ ಶುಲ್ಕ: ಆಟಗಾರನನ್ನು ಸೆಳೆಯಲು ಫ್ರಾಂಚೈಸಿಗಳು ಮೂಲ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ‘ವರ್ಗಾವಣೆ ಶುಲ್ಕ’ವಾಗಿ ನೀಡಬಹುದು. ಈ ಹೆಚ್ಚುವರಿ ಹಣ ಹರಾಜು ಪರ್ಸ್‌ಗೆ ಒಳಪಡುವುದಿಲ್ಲ.
  • ಫಿಟ್‌ನೆಸ್ ಮತ್ತು ಅನುಮೋದನೆ: ಟ್ರೇಡ್ ಆಗುವ ಆಟಗಾರನು ವೈದ್ಯಕೀಯವಾಗಿ ಫಿಟ್ ಇರಬೇಕು. ಪ್ರತಿಯೊಂದು ಟ್ರೇಡ್ ಒಪ್ಪಂದಕ್ಕೂ ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನ ಅಂತಿಮ ಅನುಮೋದನೆ ಅತ್ಯಗತ್ಯ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಜಮ್ಮು-ಕಾಶ್ಮೀರ ವೇಗಿ ಎಂಟ್ರಿ

ಈ ಬಾರಿ ಯಾರ ಮೇಲೆ ಕಣ್ಣು?

ಪ್ರಸಕ್ತ ಸೀಸನ್‌ನಲ್ಲಿ ನಾಯಕತ್ವದ ಬದಲಾವಣೆ, ಆಟಗಾರರ ಅಸಮಾಧಾನ ಮತ್ತು ತಂಡದ ಸಂಯೋಜನೆಯ ಕಾರಣಗಳಿಂದಾಗಿ ಕೆಲವು ಹೈ-ಪ್ರೊಫೈಲ್ ಆಟಗಾರರು ಟ್ರೇಡ್ ವಿಂಡೋ ಮೂಲಕ ಬೇರೆ ತಂಡ ಸೇರುವ ಸಾಧ್ಯತೆ ದಟ್ಟವಾಗಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಟ್ರೇಡ್ ವಿಂಡೋದಲ್ಲಿ ಸಕ್ರಿಯವಾಗಿವೆ ಎಂದು ವರದಿಯಾಗಿದೆ.

Source link

ಬ್ರಷ್ ಮಾಡುವಾಗ ಒಸಡುಗಳಿಂದ ರಕ್ತ ಬರುತ್ತಿದ್ದು ಈ ಲಕ್ಷಣ ಕಂಡುಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ! – Kannada News | Healthy Gums, Healthy Smile: Tips to Prevent Gum Disease

ಒಸಡುಗಳ ರಕ್ತಸ್ರಾವಕ್ಕೆ ಕಾರಣImage Credit source: Getty Images

ಹಲ್ಲುಗಳನ್ನು ಬ್ರಷ್ ಮಾಡುವಾಗ ಅಥವಾ ಗಟ್ಟಿಯಾದ ಆಹಾರವನ್ನು ಜಗಿಯುವ ವೇಳೆ ಒಸಡುಗಳಿಂದ (Gums) ರಕ್ತಸ್ರಾವವಾಗುವುದು ಅನೇಕರು ಅನುಭವಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುವುದು ಅಪಾಯಕಾರಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಪದೇಪದೇ ಒಸಡುಗಳಿಂದ ರಕ್ತ ಬರುತ್ತಿದ್ದರೆ ಅದು ಬಾಯಿಯ ಆರೋಗ್ಯ ಮಾತ್ರವಲ್ಲ, ದೇಹದ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಮುನ್ನೆಚ್ಚರಿಕೆಯ ಸಂಕೇತವಾಗಿರಬಹುದು. ಒಸಡುಗಳು ಹಲ್ಲುಗಳನ್ನು ಗಟ್ಟಿಯಾಗಿ ಹಿಡಿದಿಡುವ ಪ್ರಮುಖ ಅಂಗಗಳಾಗಿವೆ. ಅವು ಆರೋಗ್ಯವಾಗಿದ್ದರೆ ಮಾತ್ರ ಹಲ್ಲುಗಳು ದೀರ್ಘಕಾಲ ಬಲವಾಗಿ ಉಳಿಯುತ್ತವೆ. ಸರಿಯಾದ ಬಾಯಿಯ ಸ್ವಚ್ಛತೆ ಇಲ್ಲದಿರುವುದು, ಪ್ಲಾಕ್ (Plaque) ಮತ್ತು ಟಾರ್ಟರ್ (Tartar) ಸಂಗ್ರಹವಾಗುವುದು, ವಿಟಮಿನ್ ಕೊರತೆ, ಮಧುಮೇಹ ಅಥವಾ ಧೂಮಪಾನದಂತಹ ಅಭ್ಯಾಸಗಳಿಂದ ಒಸಡುಗಳ ಸಮಸ್ಯೆ ಉಂಟಾಗಬಹುದು.

ಒಸಡುಗಳಿಂದ ರಕ್ತಸ್ರಾವಕ್ಕೆ ಕಾರಣವಾಗುವ ಪ್ರಮುಖ ಸಮಸ್ಯೆಗಳು

ಜಿಂಜಿವೈಟಿಸ್ (Gingivitis)

  • ಒಸಡುಗಳಲ್ಲಿ ಉರಿಯೂತ ಉಂಟಾಗುವ ಆರಂಭಿಕ ಹಂತವೇ ಜಿಂಜಿವೈಟಿಸ್.
  • ಈ ಹಂತದಲ್ಲಿ ಬ್ರಷ್ ಮಾಡುವಾಗ ರಕ್ತ ಬರುವುದು
  • ಒಸಡುಗಳು ಕೆಂಪಾಗುವುದು
  • ಊತ ಕಾಣಿಸಿಕೊಳ್ಳುವುದು
  • ಬಾಯಿಯಲ್ಲಿ ದುರ್ವಾಸನೆ ಉಂಟಾಗುವುದು

ಇದನ್ನೂ ಓದಿ: 40 ವರ್ಷಕ್ಕಿಂತ ಮೊದಲು ಮೆನೋಪಾಸ್ ಆದರೆ ಹೈ ಬಿಪಿ ಅಪಾಯ ಹೆಚ್ಚುತ್ತದೆಯೇ? ತಜ್ಞರು ಹೇಳಿರುವ ಸತ್ಯ ಸಂಗತಿ ಇಲ್ಲಿದೆ

ಪೆರಿಯೊಡೊಂಟೈಟಿಸ್ (Periodontitis)

  • ಜಿಂಜಿವೈಟಿಸ್‌ಗೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ಪೆರಿಯೊಡೊಂಟೈಟಿಸ್ ಆಗಿ ಬೆಳೆಯಬಹುದು.
  • ಈ ಹಂತದಲ್ಲಿ ಒಸಡು ಮತ್ತು ಹಲ್ಲಿನ ನಡುವೆ ಅಂತರ ಉಂಟಾಗುತ್ತದೆ.
  • ಬ್ಯಾಕ್ಟೀರಿಯಾಗಳು ಆ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತವೆ.
  • ಹಲ್ಲುಗಳನ್ನು ಹಿಡಿದಿಟ್ಟಿರುವ ಮೂಳೆ ಮತ್ತು ಟಿಶ್ಯೂಗಳಿಗೆ ಹಾನಿಯಾಗುತ್ತದೆ.
  • ಗಂಭೀರ ಸ್ಥಿತಿಯಲ್ಲಿ ಹಲ್ಲುಗಳು ಅಲುಗಾಡಲು ಅಥವಾ ಉದುರುವ ಸಾಧ್ಯತೆ ಇರುತ್ತದೆ.

ಯಾವಾಗ ದಂತ ವೈದ್ಯರನ್ನು ಸಂಪರ್ಕಿಸಬೇಕು?

  • ಹಲವು ದಿನಗಳವರೆಗೆ ನಿರಂತರವಾಗಿ ರಕ್ತಸ್ರಾವವಾಗುವುದು
  • ಒಸಡುಗಳಲ್ಲಿ ತೀವ್ರ ನೋವು ಅಥವಾ ಊತ
  • ಬಾಯಿಯಿಂದ ದುರ್ವಾಸನೆ ಹೋಗದೇ ಇರುವುದು
  • ಒಸಡುಗಳಿಂದ ಕೀವು (Pus) ಹೊರಬರುವುದು
  • ಹಲ್ಲುಗಳು ಅಲುಗಾಡುವುದು
  • ಒಸಡುಗಳು ಹಲ್ಲಿನಿಂದ ದೂರವಾಗುತ್ತಿರುವುದು
  • ಬ್ರಷ್ ಅಥವಾ ಫ್ಲಾಸ್ ಮಾಡಿದಾಗ ಪ್ರತಿಸಾರಿ ಹೆಚ್ಚು ರಕ್ತ ಬರುವುದು

ಒಸಡುಗಳನ್ನು ಆರೋಗ್ಯವಾಗಿಡಲು ಪಾಲಿಸಬೇಕಾದ ಕ್ರಮಗಳು

  • ದಿನಕ್ಕೆ ಕನಿಷ್ಠ ಎರಡು ಬಾರಿ ಮೃದುವಾದ ಬ್ರಷ್‌ನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಿ.
  • ಪ್ರತಿದಿನ ಡೆಂಟಲ್ ಫ್ಲಾಸ್ ಬಳಸಿ.
  • ಮೂರು ತಿಂಗಳಿಗೊಮ್ಮೆ ಟೂತ್‌ಬ್ರಷ್ ಬದಲಾಯಿಸಿ.
  • ತಂಬಾಕು, ಗುಟ್ಕಾ ಮತ್ತು ಧೂಮಪಾನದಿಂದ ದೂರವಿರಿ.
  • ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವಿಸಿ.
  • ಆರು ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿಸಿಕೊಳ್ಳಿ.
  • ಸಕ್ಕರೆ ಅಂಶ ಹೆಚ್ಚಿರುವ ಆಹಾರವನ್ನು ಮಿತವಾಗಿ ಸೇವಿಸಿ.

ಒಸಡುಗಳಿಂದ ರಕ್ತ ಬರಲು ವಿಟಮಿನ್ ಕೊರತೆಯೂ ಕಾರಣವಾಗಬಹುದು

ತಜ್ಞರ ಪ್ರಕಾರ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಕೊರತೆಯಿದ್ದರೂ ಒಸಡುಗಳಿಂದ ರಕ್ತಸ್ರಾವವಾಗಬಹುದು.

ವಿಟಮಿನ್ ಸಿ ಇರುವ ಆಹಾರಗಳು:

  • ಕಿತ್ತಳೆ
  • ನೆಲ್ಲಿಕಾಯಿ
  • ನಿಂಬೆ
  • ಪೇರಳೆ
  • ಕ್ಯಾಪ್ಸಿಕಂ

ವಿಟಮಿನ್ ಕೆ ಇರುವ ಆಹಾರಗಳು:

  • ಪಾಲಕ್
  • ಮೆಂತ್ಯೆ ಸೊಪ್ಪು
  • ಬ್ರೋಕೋಲಿ
  • ಹಸಿರು ಸೊಪ್ಪುಗಳು

ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದು ಒಸಡುಗಳ ಆರೋಗ್ಯಕ್ಕೆ ಸಹಕಾರಿ.

ಸೂಚನೆ: ಈ ಲೇಖನವು ಸಾರ್ವಜನಿಕ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿರಂತರ ರಕ್ತಸ್ರಾವ ಅಥವಾ ತೀವ್ರ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:15 pm, Mon, 3 August 26

Source link

44 ಲಕ್ಷ ರೂ. ವಿಮಾ ಹಣಕ್ಕಾಗಿ ಪತ್ನಿಯ ಭೀಕರ ಕೊಲೆ: ಅಪಘಾತವೆಂದು ಬಿಂಬಿಸಲು ಹೋಗಿ ಜೈಲುಪಾಲಾದ ಗಂಡ – Kannada News | Insurance Greed Ends in Tragedy as Husband Held Over Woman’s Death in UP

ಹಮೀರ್‌ಪುರ, ಆಗಸ್ಟ್ 03: ಹಣದ ದುರಾಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ 44 ಲಕ್ಷ ರೂ. ವಿಮಾ ಮೊತ್ತವನ್ನು ಪಡೆಯಲು ಆಕೆಯನ್ನೇ ಭೀಕರವಾಗಿ ಕೊಲೆ(Murder) ಮಾಡಿ, ನಂತರ ಅಪಘಾತವೆಂದು ಬಿಂಬಿಸಲು ಮೃತದೇಹದ ಮೇಲೆ ಕಾರು ಹರಿಸಿ ಸುಟ್ಟುಹಾಕಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ರೀಟಾ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಅಮರ್ ಸಿಂಗ್ ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಕಾಣೆಯಾಗಿದ್ದಾಳೆ ಎಂದು ಆರೋಪಿ ಅಮರ್ ಸಿಂಗ್ ಸ್ವತಃ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ. ಆದರೆ ಆತನ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ನೈಜ ಕೃತ್ಯ ಬಯಲಾಗಿದೆ.

ಲಾಲ್‌ಪುರ ಪ್ರದೇಶದ ಬೈತ್ಕಾ ಧಾಮ್ ದೇವಾಲಯದ ಬಳಿ ಪತ್ನಿಯನ್ನು ಕೋಲು ಮತ್ತು ದೊಣ್ಣೆಗಳಿಂದ ಅಮಾನವೀಯವಾಗಿ ಹೊಡೆದು ಕೊಂದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕೊಲೆಯ ನಂತರ ಅದನ್ನು ರಸ್ತೆ ಅಪಘಾತವೆಂದು ತೋರಿಸಲು ಶವದ ಮೇಲೆ ಕಾರು ಹರಿಸಿ, ನಂತರ ಬೆಂಕಿ ಹಚ್ಚಿ ಸುಟ್ಟುಹಾಕಲು ಯತ್ನಿಸಿದ್ದರು.

12 ಕ್ಕೂ ಹೆಚ್ಚು ತೀವ್ರ ಗಾಯಗಳು: ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ರೀಟಾ ಅವರ ದೇಹದ ಮೇಲೆ 12 ಕ್ಕೂ ಹೆಚ್ಚು ಭೀಕರ ಹೊರಗಾಯಗಳಿದ್ದವು. ಮೂತ್ರಪಿಂಡಗಳನ್ನು ಹೊರತುಪಡಿಸಿ ದೇಹದ ಬಹುತೇಕ ಎಲ್ಲಾ ಆಂತರಿಕ ಅಂಗಾಂಗಗಳು ತೀವ್ರವಾಗಿ ಜಜ್ಜಲ್ಪಟ್ಟು ಹಾನಿಗೊಳಗಾಗಿದ್ದವು.

ಮತ್ತಷ್ಟು ಓದಿ: ಧರ್ಮದ ಹೆಸರಿನಲ್ಲಿ ಕ್ರೂರತೆ; ಅಂಕಿತ್ ಶರ್ಮಾ ಕೊಲೆ ಪ್ರಕರಣದಲ್ಲಿ ಆಪ್ ನಾಯಕ ತಾಹಿರ್ ಹುಸೇನ್​ಗೆ ಜೀವಾವಧಿ ಶಿಕ್ಷೆ

44 ಲಕ್ಷದ ವಿಮೆ ಮತ್ತು ತಂದೆಯ ಆಕ್ರೋಶ
ಮೊದಲ ಪತಿಯ ಮರಣದ ನಂತರ ರೀಟಾ ಕಾನ್ಪುರದಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಅಮರ್ ಸಿಂಗ್‌ನನ್ನು ಭೇಟಿಯಾಗಿ, ಎರಡು ವರ್ಷಗಳ ಹಿಂದೆ ಆತನನ್ನು ಮದುವೆಯಾಗಿದ್ದರು. ರೀಟಾಗೆ ಮೊದಲ ಮದುವೆಯಿಂದ ನಾಲ್ವರು ಮಕ್ಕಳಿದ್ದಾರೆ. ರೀಟಾ ಅವರ ತಂದೆ ಸರ್ವೇಶ್ ಕುಮಾರ್ ನೀಡಿರುವ ಮಾಹಿತಿಯಂತೆ, ಅಮರ್ ಸಿಂಗ್ ಎರಡು ತಿಂಗಳ ಹಿಂದೆಯಷ್ಟೇ ಪತ್ನಿಯ ಹೆಸರಿನಲ್ಲಿ44 ಲಕ್ಷ ರೂ. ಜೀವವಿಮೆ ಪಾಲಿಸಿ ಮಾಡಿಸಿ, 2.60 ಲಕ್ಷ ರೂ. ಪ್ರಥಮ ಪ್ರೀಮಿಯಂ ಪಾವತಿಸಿದ್ದ. ವಿಮಾ ಹಣ ಕೈಸೇರಿದ ತಕ್ಷಣ ಆಕೆಯನ್ನು ಮುಗಿಸಲು ಪ್ಲಾನ್ ಮಾಡಿದ್ದ.

ಇತ್ತೀಚಿನ ದಿನಗಳಲ್ಲಿ ಜೀವವಿಮೆ ಹಣಕ್ಕಾಗಿ ಕುಟುಂಬದವರನ್ನೇ ಕೊಲೆ ಮಾಡುವ ಪ್ರಕರಣಗಳು ದೇಶದ ಹಲವೆಡೆ ಹೆಚ್ಚುತ್ತಿವೆ. ಹಮೀರ್‌ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಅರವಿಂದ್ ಕುಮಾರ್ ವರ್ಮಾ ಅವರು ಮಾತನಾಡಿ, ಆರೋಪಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರೂ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಕೇವಲ 24 ಗಂಟೆಗಳಲ್ಲಿ ಪ್ರಕರಣ ಭೇದಿಸಿ, ಎಲ್ಲರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ರೀಟಾ ಅವರ ನಾಲ್ವರು ಮಕ್ಕಳು ಪ್ರಸ್ತುತ ಮೈನ್‌ಪುರಿಯಲ್ಲಿ ತಮ್ಮ ಅಜ್ಜ-ಅಜ್ಜಿಯ ಆಸರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

WI vs PAK: 21 ವರ್ಷಗಳ ಬಳಿಕ 49 ರನ್​ಗಳ ಜೊತೆಯಾಟ! – Kannada News | 49 Run Stand Ends West Indies’ 21 Year Opener Drought Against Pakistan

ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ್ ನಡುವೆ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರರು ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಕೇವಲ 49 ರನ್​​ಗಳ ಜೊತೆಯಾಟದೊಂದಿಗೆ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಬ್ರಾಂಡನ್ ಕಿಂಗ್ ಮತ್ತು ತೇಜ್​ನರೈನ್ ಚಂದರ್‌ಪಾಲ್ ಕೇವಲ 1 ರನ್‌ನಿಂದ ಅರ್ಧಶತಕದ ಜೊತೆಯಾಟವನ್ನು ಮಿಸ್ ಮಾಡಿಕೊಂಡರು. ಇದಾಗ್ಯೂ ಕೆರಿಬಿಯನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 21 ವರ್ಷಗಳ ಸುದೀರ್ಘ ಕಾಯುವಿಕೆಗೆ ಈ ಜೋಡಿಯು ತೆರೆ ಎಳೆದಿದ್ದಾರೆ.

49 ರನ್‌ಗಳ ದಾಖಲೆಯ ಜೊತೆಯಾಟ:

ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡಕ್ಕೆ ಬ್ರಾಂಡನ್ ಕಿಂಗ್ ಮತ್ತು ತೇಜ್​ನರೈನ್ ಚಂದರ್‌ಪಾಲ್ ಬಿರುಸಿನ ಆರಂಭ ಒದಗಿಸಿದ್ದರು. ಪಾಕಿಸ್ತಾನದ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಕೇವಲ 9.5 ಓವರ್‌ಗಳಲ್ಲಿ 49 ರನ್‌ಗಳನ್ನು ಕಲೆಹಾಕಿತು. ಕೇವಲ 1 ರನ್‌ನಿಂದ ಈ ಜೋಡಿ 50 ರನ್‌ಗಳ ಗಡಿ ತಲುಪಲು ವಿಫಲವಾಯಿತಾದರೂ, ಈ 49 ರನ್‌ಗಳ ಜೊತೆಯಾಟವೇ ವೆಸ್ಟ್ ಇಂಡೀಸ್ ಪಾಲಿಗೆ ಮೈಲಿಗಲ್ಲಾಗಿ ಮೂಡಿಬಂದಿದೆ.

21 ವರ್ಷಗಳ ಬಳಿಕ ಮೂಡಿದ ಶ್ರೇಷ್ಠ ದಾಖಲೆ:

ಕಳೆದ 21 ವರ್ಷಗಳಲ್ಲಿ (2005ರ ನಂತರ) ಪಾಕಿಸ್ತಾನದ ವಿರುದ್ಧ ತಾಯ್ನಾಡಿನಲ್ಲಿ (ವೆಸ್ಟ್ ಇಂಡೀಸ್‌ನಲ್ಲಿ) ನಡೆದ ಟೆಸ್ಟ್ ಪಂದ್ಯಗಳ ಪೈಕಿ ವೆಸ್ಟ್ ಇಂಡೀಸ್ ತಂಡ ದಾಖಲಿಸಿದ ಅತ್ಯುನ್ನತ ಆರಂಭಿಕ ಜೊತೆಯಾಟ ಇದಾಗಿದೆ. ಅಂದರೆ ಕಳೆದ 19 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ವೆಸ್ಟ್ ಇಂಡೀಸ್‌ನ ಯಾವುದೇ ಆರಂಭಿಕ ಜೋಡಿಗೆ ಪಾಕಿಸ್ತಾನದ ವಿರುದ್ಧ ಕೆರಿಬಿಯನ್ ಮಣ್ಣಿನಲ್ಲಿ ಇಷ್ಟು ರನ್ ಗಳಿಸಲು ಸಾಧ್ಯವಾಗಿರಲಿಲ್ಲ.

2005ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರರಾದ ಕ್ರಿಸ್ ಗೇಲ್ ಮತ್ತು ಡೆವೊನ್ ಸ್ಮಿತ್ ಜೋಡಿಯು ಮೊದಲ ವಿಕೆಟ್‌ಗೆ 59 ರನ್‌ಗಳನ್ನು ಸೇರಿಸಿದ್ದೇ ಈ ಹಿಂದಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದಾದ ಬಳಿಕ ಯಾವುದೇ ಜೋಡಿಯು ಪಾಕ್ ವಿರುದ್ಧ ಅರ್ಧಶತಕದ ಗಡಿ ಮುಟ್ಟಿರಲಿಲ್ಲ.

ಆದರೆ ಈ ಬಾರಿ ತೇಜ್​ನರೈನ್ ಚಂದ್ರಪಾಲ್ ಹಾಗೂ ಬ್ರಾಂಡನ್ ಕಿಂಗ್ 49 ರನ್​ಗಳ ಜೊತೆಯಾಟವಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಪಾಕಿಸ್ತಾನ್ ವಿರುದ್ಧ 21 ವರ್ಷಗಳ ಬಳಿಕ ಅರ್ಧಶತಕದ ಗಡಿ ತಲುಪುವಲ್ಲಿ ವಿಂಡೀಸ್ ಆರಂಭಿಕರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸತತ 10 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಅಮಿರ್!

ಈ ಪಂದ್ಯದಲ್ಲಿ 32 ಎಸೆತಗಳನ್ನು ಎದುರಿಸಿದ ತೇಜ್​ನರೈನ್ ಚಂದ್ರಪಾಲ್ 15 ರನ್​ಗಳಿಸಿದರೆ, ಬ್ರಾಂಡನ್ ಕಿಂಗ್ 50 ಎಸೆತಗಳಲ್ಲಿ 46 ರನ್ ಬಾರಿಸಿದರು.  ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 74 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 239 ರನ್ ಕಲೆಹಾಕಿದೆ.

Source link

‘ಇದು ನಿರಾಶಾದಾಯಕ ಪಟ್ಟಿ’: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತನ್ವೀರ್ ಸೇಠ್ ತೀವ್ರ ಬೇಸರ – Kannada News | Tanveer Sait Disappointed Over Missing Cabinet Berth, Calls Karnataka Minister List Disappointing

ಬೆಂಗಳೂರು, ಆಗಸ್ಟ್ 3: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಅಧಿಕೃತ ಘೋಷಣೆ ನಂತರ ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಟ್ಟಿಯನ್ನು ‘ಆಶಾದಾಯಕವಲ್ಲ, ನಿರಾಶಾದಾಯಕ ಪಟ್ಟಿ’ ಎಂದು ಬಣ್ಣಿಸಿದ್ದಾರೆ. ಸಚಿವ ಸಂಪುಟ ರಚನೆಯಲ್ಲಿ ಮೈಸೂರು ಪ್ರಾಂತ್ಯಕ್ಕೆ ಅನ್ಯಾಯವಾಗಿದೆ ಎಂಬ ಭಾವನೆ ವ್ಯಕ್ತಪಡಿಸಿರುವ ಸೇಠ್, ತಮ್ಮ ಬೆಂಬಲಿಗರ ಆಕ್ರೋಶ ಮತ್ತು ಪ್ರತಿಭಟನೆಯ ನಡುವೆಯೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.

ಇದೇ ವೇಳೆ, ಕೆಎನ್ ರಾಜಣ್ಣ ಅವರ ಉದಾಹರಣೆ ಮತ್ತು ಪಕ್ಷದೊಳಗಿನ ಇತರ ಚಟುವಟಿಕೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ಸಚಿವ ಸ್ಥಾನ ವಂಚಿತರಾದ ಬಗ್ಗೆ ಈಗಲೇ ವಿಶ್ಲೇಷಣೆ ಮಾಡುವುದಿಲ್ಲ, ಸೂಕ್ತ ಸಮಯ ಬಂದಾಗ ಮಾತನಾಡುತ್ತೇನೆ ಎಂದಿದ್ದಾರೆ. ಸಂಪುಟದಲ್ಲಿ ಸ್ಥಾನ ಪಡೆದ ಎಲ್ಲ ಶಾಸಕರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಏತನ್ಮಧ್ಯೆ, ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕರಾಗಿರುವ ತನ್ವೀರ್ ಸೇಠ್ ಅವರ ಬೆಂಬಲಿಗರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್: ಪಟ್ಟಿಯಲ್ಲಿ ಹೆಸರಿದ್ದರೂ ಮಂಕಾಳು ವೈದ್ಯಗೆ ತಪ್ಪಿದ ಮಂತ್ರಿಗಿರಿ; ಟೈಪಿಂಗ್ ಮಿಸ್ಟೇಕ್ ಎಂದ ಎಐಸಿಸಿ! – Kannada News | Cabinet Mega Twist: ‘Typing Mistake’ Costs Mankalu Vaidya a Berth; SS Mallikarjun Gets Last Minute Entry

ಬೆಂಗಳೂರು, ಆಗಸ್ಟ್​​ 03: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ಸಂಬಂಧ 20 ಜನ ನೂತನ ಮಂತ್ರಿಗಳ ಹೆಸರನ್ನು ಎಐಸಿಸಿ ಪ್ರಕಟಿಸಿದ ಬಳಿಕವೂ ಭಾರಿ ಬದಲಾವಣೆ ನಡೆದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಪಟ್ಟಿಯಲ್ಲಿ ಹೆಸರಿದ್ದ ಹೊರತಾಗಿಯೂ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಈ ವಿಚಾರವಾಗಿ ಎಐಸಿಸಿ ಸ್ಪಷ್ಟನೆ ನೀಡಿದ್ದು, ನೂತನ ಸಚಿವರ ಪಟ್ಟಿಯಲ್ಲಿ ಮಂಕಾಳು ವೈದ್ಯ ಹೆಸರಿರಲಿಲ್ಲ. ಇದು ಕೇವಲ ಟೈಪಿಂಗ್ ಮಿಸ್ಟೇಕ್ ಎಂದು ತಿಳಿಸಿದೆ. ಆದರೆ ಕೊನೇ ಕ್ಷಣದಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿರುವ ಎಸ್.ಎಸ್.ಮಲ್ಲಿಕಾರ್ಜುನಗೆ ಸ್ಥಾನ ನೀಡಲಾಗಿದೆ.

ಡಿಕೆಶಿ ಜೊತೆ ಮಾತುಕತೆ ಯತ್ನ

ಸಚಿವಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಮಂಕಾಳು ವೈದ್ಯ ಭೇಟಿ ನೀಡಿದ್ದಾರೆ. ಕೊನೇ ಕ್ಷಣದ ನಿರ್ಧಾರದ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆಗೆ ಅವರು ಆಗಮಿಸಿದ್ದರಾದರೂ ಡಿಕೆಶಿ ಜೊತೆ ಮಾತುಕತೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್​​ ಶಾಸಕ ಪ್ರತಿಕ್ರಿಯೆ ನೀಡಿದ್ದು, ನಾನು ಸಿಎಂ ಅವರನ್ನ ಭೇಟಿ ಆಗಿಲ್ಲ, ಅವರು ಸಿಕ್ಕಿಲ್ಲ. ಮತ್ತೊಮ್ಮೆ ಬರುತ್ತೇನೆ ಎಂದಷ್ಟೇ ಹೇಳಿ ಸಿಎಂ ಮನೆಯಿಂದ ಸಿಟ್ಟಲ್ಲೇ ಹೊರಟ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್​

ಎಸ್​.ಎಸ್​​. ಮಲ್ಲಿಕಾರ್ಜುನ್​​ಗೆ ಸಚಿವ ಸ್ಥಾನ ನೀಡಿದ್ದೇಕೆ?

ಮಂತ್ರಿಗಿರಿಗಾಗಿ ಪಟ್ಟು ಹಿಡಿದಿದ್ದ ಎಸ್​​.ಎಸ್​​. ಮಲ್ಲಿಕಾರ್ಜುನ್​​ ಅವರು ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡೋದಾಗಿ ತಿಳಿಸಿದ್ದಾರೆ. ಸಂಸದರಾಗಿರುವ ಪತ್ನಿ ಮತ್ತು ಶಾಸಕರಾಗಿರುವ ಮಗ ಕೂಡ ಸ್ಥಾನ ತೊರೆಯಲಿದ್ದಾರೆ ಎಂದು ಹೈಕಮಾಂಡ್​​ ಮೇಲೆ ಒತ್ತಡ ಹಾಕಿದ್ದಾರೆ. ಇದೇ ಕಾರಣಕ್ಕೆ ಮಂಕಾಳು ವೈದ್ಯಗೆ ಕೊನೇ ಕ್ಷಣದಲ್ಲಿ ಕೊಕ್​​ ನೀಡಿ ಮಲ್ಲಿಕಾರ್ಜುನ್​​ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಮಾಹಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ನೂತನ ಸಚಿವರ ಕಿರು ಪರಿಚಯ ಇಲ್ಲಿದೆ – Kannada News | Karnataka Cabinet Expansion: Profile and Details of New Ministers Taking Oath Today

ಬೆಂಗಳೂರು, ಆಗಸ್ಟ್ 03: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಶುರುವಾಗಿದ್ದು, ಅಧಿಕೃತವಾಗಿ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಇಂದು ಸಂಜೆ 4 ಗಂಟೆಗೆ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಸಚಿವರಿಗೆ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ. ಅಧಿಕೃತ ಪಟ್ಟಿ ಪ್ರಕಟವಾಗುತ್ತಿದ್ದಂತೆ ಆಯಾ ಕ್ಷೇತ್ರದ ನೂತನ ಸಚಿವರ ಬೆಂಬಲಿಗರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದ್ದು, ವಿಜಯೋತ್ಸವ ಆಚರಿಸುತ್ತಿದ್ದಾರೆ. ನೂತನ ಸಚಿವರ ಕಿರು ಪರಿಚಯ ಇಲ್ಲಿದೆ.

ನೂತನ ಸಚಿವರ ಕಿರು ಪರಿಚಯ ಹಾಗೂ ರಾಜಕೀಯ ಹಿನ್ನೆಲೆ

1. ಹೆಚ್. ಸಿ. ಬಾಲಕೃಷ್ಣ

ಮಾಗಡಿ ಕ್ಷೇತ್ರದ ಶಾಸಕರಾದ ಹೆಚ್. ಸಿ. ಬಾಲಕೃಷ್ಣ ಅವರು ಒಟ್ಟು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಕೆಆರ್‌ಡಿಸಿಎಲ್ (KRDCL) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ರಾಜಕೀಯ ಜೀವನವನ್ನು 1994ರಲ್ಲಿ ಬಿಜೆಪಿಯಿಂದ ಆರಂಭಿಸಿ, ಬಳಿಕ ಜೆಡಿಎಸ್ ಸೇರಿ ಸತತವಾಗಿ ಗೆಲುವು ಸಾಧಿಸಿದ್ದರು. ನಂತರ 2018ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪ್ರಸ್ತುತ ಸಚಿವರಾಗುತ್ತಿದ್ದಾರೆ.

2. ಶಿವರಾಜ ಸಂಗಪ್ಪ ತಂಗಡಗಿ

ಕನಕಗಿರಿ ಕ್ಷೇತ್ರದ ಶಿವರಾಜ ಸಂಗಪ್ಪ ತಂಗಡಗಿ ಅವರು ಬಿಎಸ್‌ಸಿ (B.Sc) ಪದವೀಧರರಾಗಿದ್ದು, 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು, ತದನಂತರ 2013ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ.

3. ಸಂತೋಷ್ ಲಾಡ್

ಕಲಘಟಗಿ ಕ್ಷೇತ್ರದ ಸಂತೋಷ್ ಲಾಡ್ ಅವರು ವಾಣಿಜ್ಯ ಪದವೀಧರರಾಗಿದ್ದು, 4 ಬಾರಿ ಶಾಸಕರಾಗಿ ಹಾಗೂ 2 ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು 2003ರಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದಿಂದ ಸಂಡೂರು ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ನಂತರ 2007ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪ್ರಸ್ತುತ ಕಾರ್ಮಿಕ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ ಸಚಿವ ಸಂಪುಟ ವಿಸ್ತರಣೆ ಇಂದು ಸಂಜೆ 4ಕ್ಕೆ; ನೂತನ ಸಚಿವರು ಯಾರ್ಯಾರು ಗೊತ್ತಾ? ಇಲ್ಲಿದೆ ಪಟ್ಟಿ

4. ಬಸವರಾಜ ರಾಯರೆಡ್ಡಿ

ಯಲಬುರ್ಗಾ ಕ್ಷೇತ್ರದ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಅವರು 6 ಬಾರಿ ಶಾಸಕರಾಗಿ ಹಾಗೂ 11ನೇ ಲೋಕಸಭೆಯ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಇವರು 1980ರ ದಶಕದಲ್ಲಿ ಜನತಾದಳ ಹಾಗೂ ಜನತಾದಳ (ಯು) ಮೂಲಕ ಶಾಸಕ ಹಾಗೂ ಸಂಸದರಾಗಿದ್ದು, 2000ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಇವರು ಸಿಎಂ ಆರ್ಥಿಕ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

5. ಬಿ. ನಾಗೇಂದ್ರ

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ. ನಾಗೇಂದ್ರ ಅವರು ಬಿಕಾಂ ಪದವೀಧರರಾಗಿದ್ದು, ಒಟ್ಟು 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು 2008ರಲ್ಲಿ ಪಕ್ಷೇತರರಾಗಿ ಗೆದ್ದು, 2013ರಲ್ಲಿ ಬಿಜೆಪಿಯಿಂದ ಹಾಗೂ 2018ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಗೆಲುವು ಸಾಧಿಸಿದ್ದರು. ಹಿಂದೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

6. ಎನ್. ಚೆಲುವರಾಯಸ್ವಾಮಿ

ನಾಗಮಂಗಲ ಕ್ಷೇತ್ರದ ಎನ್. ಚೆಲುವರಾಯಸ್ವಾಮಿ ಅವರು 4 ಬಾರಿ ಶಾಸಕರಾಗಿ ಹಾಗೂ 1 ಬಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದು, ಆರೋಗ್ಯ ಮತ್ತು ಸಾರಿಗೆ ಸಚಿವರಾಗಿದ್ದ ಇವರು, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ

7. ರುದ್ರಪ್ಪ ಲಮಾಣಿ

ಹಾವೇರಿ ಎಸ್‌ಸಿ ಮೀಸಲು ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರು ಬಿ.ಎ. ಎಲ್‌ಎಲ್‌ಬಿ (B.A. LLB) ಪದವೀಧರರಾಗಿದ್ದು, ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಂಜಾರ ಸಮುದಾಯದ ಪ್ರಮುಖ ನಾಯಕರಾದ ಇವರು ಪ್ರಸ್ತುತ ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದು, ಹಿಂದೆ ಜವಳಿ ಮತ್ತು ಮುಜರಾಯಿ ಸಚಿವರಾಗಿದ್ದರು.

8. ಟಿ. ರಘುಮೂರ್ತಿ

ಚಳ್ಳಕೆರೆ ಎಸ್‌ಟಿ ಮೀಸಲು ಕ್ಷೇತ್ರದ ಟಿ. ರಘುಮೂರ್ತಿ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮೂರು ಬಾರಿ (2013, 2018, 2023) ಗೆದ್ದು ‘ಹ್ಯಾಟ್ರಿಕ್ ಹೀರೋ’ ಎನಿಸಿಕೊಂಡಿದ್ದಾರೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

9. ಡಾ. ಅಜಯ್ ಸಿಂಗ್

ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯ್ ಸಿಂಗ್ ಅವರು ಮಾಜಿ ಸಿಎಂ ಧರಂ ಸಿಂಗ್ ಅವರ ಪುತ್ರರಾಗಿದ್ದು, ಆರಂಭದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು ಸತತ ಮೂರು ಬಾರಿ ಗೆಲುವು ಸಾಧಿಸಿ ಕಲಬುರಗಿ ಜಿಲ್ಲೆಯ ಪ್ರಾತಿನಿಧ್ಯವಾಗಿ ಸಂಪುಟ ಸೇರುತ್ತಿದ್ದಾರೆ.

10. ವಿಜಯಾನಂದ ಕಾಶಪ್ಪನವರ್

ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕರಾಗಿದ್ದು, ಸಾಮಾಜಿಕ ಹಾಗೂ ಪರಿಸರ ಕಾಳಜಿಯ ಕೆಲಸಗಳಿಗಾಗಿ ಇಂದಿರಾ ಗಾಂಧಿ ರಾಷ್ಟ್ರೀಯ ಸೇವಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್

11. ಗಾಯತ್ರಿ ಶಾಂತೇಗೌಡ

ವಿಧಾನ ಪರಿಷತ್ ಸದಸ್ಯೆ (MLC) ಗಾಯತ್ರಿ ಶಾಂತೇಗೌಡ ಅವರು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಅನುಭವ ಹೊಂದಿದ್ದು, ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸ್ಥಳೀಯ ಸಂಸ್ಥೆಗಳಿಂದ 2 ಬಾರಿ ಪರಿಷತ್‌ಗೆ ಆಯ್ಕೆಯಾಗಿ ನೂತನ ಮಹಿಳಾ ಪ್ರಾತಿನಿಧ್ಯವಾಗಿ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

12. ರಿಜ್ವಾನ್ ಅರ್ಷದ್

ಶಿವಾಜಿನಗರ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಬಿ.ಕಾಂ ಪದವೀಧರರಾಗಿದ್ದು, 1995-96ರಲ್ಲಿ NSUI ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದ ಇವರು, ಡಿಸೆಂಬರ್ 2019ರ ಶಿವಾಜಿನಗರ ಉಪಚುನಾವಣೆಯಲ್ಲಿ ಗೆದ್ದು ಪ್ರಥಮ ಬಾರಿಗೆ ಶಾಸಕರಾದರು. 2014 ಮತ್ತು 2019ರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸದ್ಯ ಯುವ ನಾಯಕತ್ವದ ಸಂಕೇತವಾಗಿ ರಾಜಧಾನಿ ಬೆಂಗಳೂರಿನಿಂದ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

13. ಎಸ್. ಎಸ್. ಮಲ್ಲಿಕಾರ್ಜುನ್

ದಾವಣಗೆರೆಯ ಹಿರಿಯ ನಾಯಕ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬಿಕಾಂ ಪದವೀಧರರಾಗಿದ್ದು, 1996, 1999, 2013 ಹಾಗೂ 2023ರಲ್ಲಿ ಶಾಸಕರಾಗಿ ಒಟ್ಟು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಪುತ್ರರಾದ ಇವರು, ಹಿಂದೆ ಎಸ್.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರಗಳಲ್ಲಿ ಯುವಜನ ಸೇವೆ, ತೋಟಗಾರಿಕೆ ಹಾಗೂ ಗಣಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಇವರು ಇದೀಗ ನಾಲ್ಕನೇ ಬಾರಿಗೆ ಸಂಪುಟ ಸೇರುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಮಗೆ ಮೊದಲು ರಾಮಾಯಣ ಸಿನಿಮಾ ತೋರಿಸಿ’: ರಾಮಲೀಲಾ ಮಹಾಸಂಘದ ಖಡಕ್ ಎಚ್ಚರಿಕೆ – Kannada News | Ramlila Mahasangh Threatens Protests; Demands Special Screening of Ranbir Kapoor Ramayana

ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಆದರೆ ಈ ಚಿತ್ರಕ್ಕೆ ಈಗ ಹೊಸ ಸಂಕಷ್ಟ ಎದುರಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ತಮಗೆ ವಿಶೇಷ ಪ್ರದರ್ಶನ ಏರ್ಪಡಿಸಬೇಕು ಎಂದು ಶ್ರೀ ರಾಮಲೀಲಾ ಮಹಾಸಂಘವು ಚಿತ್ರತಂಡವನ್ನು ಒತ್ತಾಯಿಸಿದೆ. ಒಂದು ವೇಳೆ ಪ್ರದರ್ಶನ ನೀಡದಿದ್ದರೆ ದೇಶಾದ್ಯಂತ ಚಿತ್ರಮಂದಿರಗಳ ಮುಂದೆ ಭಾರಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯು ಎಚ್ಚರಿಕೆ ನೀಡಿದೆ.

ಈ ಕುರಿತು ಮಹಾಸಂಘದ ಅಧ್ಯಕ್ಷ ಅರ್ಜುನ್ ಕುಮಾರ್ ಅವರು ಚಿತ್ರದ ನಿರ್ಮಾಪಕರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ತಮಗೆ ಪ್ರತ್ಯೇಕ ಪ್ರಿವ್ಯೂ ಶೋ ನೀಡುವಂತೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಆದಿಪುರುಷ್’ ಸಿನಿಮಾದ ವಿವಾದವನ್ನು ಅವರು ನೆನಪಿಸಿದ್ದಾರೆ. ‘ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದ ಸಂಭಾಷಣೆ, ಸೆಟ್ ಮತ್ತು ಕಾಸ್ಟ್ಯೂಮ್‌ಗಳ ವಿರುದ್ಧ ಸನಾತನ ಧರ್ಮದವರು ತೀವ್ರ ಆಕ್ಷೇಪ ಎತ್ತಿದ್ದರು. ಚಿನ್ನದ ಲಂಕೆಯನ್ನು ಕಪ್ಪಾಗಿ ತೋರಿಸಿದ್ದು ಮತ್ತು ರಾವಣನ ಪಾತ್ರದ ಚಿತ್ರಣವು ಹಿಂದೂಗಳ ಭಾವನೆಗೆ ಧಕ್ಕೆ ತಂದಿತ್ತು. ಇದರಿಂದ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸೋಲನ್ನು ಅನುಭವಿಸಬೇಕಾಯಿತು’ ಎಂದು ಅವರು ನೆನಪಿಸಿದ್ದಾರೆ.

‘ನಿರ್ದೇಶಕ ನಿತೇಶ್ ತಿವಾರಿ ಅವರ ಈ ಹೊಸ ರಾಮಾಯಣ ಚಿತ್ರದಲ್ಲೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ದೃಶ್ಯಗಳಿವೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಹೀಗಾಗಿ ಸಿನಿಮಾವನ್ನು ಮೊದಲೇ ವೀಕ್ಷಿಸಿ, ಆಕ್ಷೇಪಾರ್ಹ ದೃಶ್ಯಗಳಿದ್ದರೆ ಅವುಗಳನ್ನು ತೆಗೆದುಹಾಕಲು ನಾವು ಬಯಸುತ್ತೇವೆ’ ಎಂದು ಮಹಾಸಂಘ ಹೇಳಿದೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್​​ ಬೆನ್ನಲ್ಲೇ ರಾವಣನ ಪ್ರತಿಮೆ ಎದುರು ಪೋಸ್​ ಕೊಟ್ಟ ರಾಧಿಕಾ ಪಂಡಿತ್

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಸಿನಿಮಾ ಈ ವರ್ಷದ ದೀಪಾವಳಿಗೆ ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಚಿತ್ರದ ಆಧುನಿಕ ಕಾಸ್ಟ್ಯೂಮ್‌ಗಳ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಅಪಸ್ವರ ಎತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version