ಬೆಂಗಳೂರು, ಮಾರ್ಚ್ 08: ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ (Weather Forecast) ವಾತಾವರಣವೇ ಕಂಡುಬಂದಿದೆ. ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಬೆಂಗಳೂರಿನಲ್ಲಿ ತಾಪಮಾನದಲ್ಲಿ ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಒಣ ಹವೆ?
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಮಾರ್ಚ್ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ
ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.
ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.
ಮಂಡ್ಯ/ ಬಳ್ಳಾರಿ, ಮಾರ್ಚ್ 08: ಪಕ್ಕದ ಊರಿಗೆ ಪೂಜೆಗೆ ಹೋಗುತ್ತಿರೋದಾಗಿ ತಿಳಿಸಿ ಹೊರಟಿದ್ದ ಅರ್ಚಕರೋರ್ವರ ಶವ ನಗ್ನ ಸ್ಥಿತಿಯಲ್ಲಿ ನಾಲೆಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ ನಡೆದಿದೆ. ಸಿದ್ದಲಿಂಗಪ್ಪ (46) ಮೃತ ವ್ಯಕ್ತಿ. ಪಕ್ಕದ ಶೆಟ್ಟಿಹಳ್ಳಿ ಗ್ರಾಮಕ್ಕೆ ಪೂಜೆಗೆ ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದ ಸಿದ್ದಲಿಂಗಪ್ಪ ಅವರ ಸ್ಕೂಟರ್ ಸಿಡಿಎಸ್ ನಾಲೆಯಲ್ಲಿ ತೇಲುತ್ತಿರೋದನ್ನು ಕಂಡ ಗ್ರಾಮಸ್ಥರು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು. ಹೀಗಾಗಿ ನಾಪತ್ತೆಯಾದ ಸಿದ್ದಲಿಂಗಪ್ಪಗಾಗಿ ಹುಡುಕಾಟ ನಡೆಸಿದಾಗ ಮೈಮೇಲೆ ಬಟ್ಟೆ ಇಲ್ಲದ ರೀತಿ ಮೃತದೇಹ ಪತ್ತೆಯಾಗಿದೆ. ಅಲ್ಲದೆ ನಾಲೆ ಬಳಿ ರಕ್ತದ ಕಲೆಗಳು ಕಂಡುಬಂದ ಕಾರಣ, ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.
ದೇವಸ್ಥಾನವೊಂದರ ಅರ್ಚಕರಾಗಿದ್ದ ಸಿದ್ದಲಿಂಗಪ್ಪ, ತಾನಾಯ್ತು, ತನ್ನ ವೃತ್ತಿ ಆಯ್ತು ಅಂತ ಪೂಜೆ-ಪುನಸ್ಕಾರ ಮಾಡಿಕೊಂಡು ಇದ್ದವರು. ಹೀಗಿರುವಾಗ ಪೂಜೆಗೆಂದು ಪಕ್ಕದ ಊರಿಗೆ ಹೋಗಿದ್ದ ಅವರಿಗೆ ಆಗಿದ್ದೇನು ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡತೊಡಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿದ ಕುಟುಂಬಸ್ಥರು, ಏನಾಯ್ತು ಅಂತ ಗೊತ್ತಿಲ್ಲ. ಪೂಜೆಗೆ ಎಂದು ಹೋದವರು ಈ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಸಿದ್ದಲಿಂಗಪ್ಪ ಅವರಿಗೆ ಯಾರು ಕೂಡ ವೈರಿಗಳು ಇರಲಿಲ್ಲ ಎಂದಿದ್ದಾರೆ. ಸದ್ಯ ಶ್ರೀರಂಗಪಟ್ಟಣದ ಗ್ರಾಮಾಂತರ ಠಾಣಾ ಪೊಲೀಸರು, ಮಂಡ್ಯ ಮಿಮ್ಸ್ನಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಅರ್ಚಕರದ್ದು ಆಕಸ್ಮಿಕ ಸಾವೋ ಅಥವಾ ಹತ್ಯೆಯೋ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಳ್ಳಾರಿಯ ಖಾಸಗಿ ಶಾಲೆಗೆ ಸೇರಿದ ಹಾಸ್ಟೆಲ್ನಲ್ಲಿ ನಡೆದಿದೆ. ಗಲಾಟೆ ವೇಳೆ 9ನೇ ತರಗತಿ ವಿದ್ಯಾರ್ಥಿ ಹಲವರ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದರೆ, 7 ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಹಾಸ್ಟೆಲ್ ವಾರ್ಡನ್ ಮೇಲೂ ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 8, ಭಾನು ವರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಪಂಚಮಿ, ಸ್ವಾತಿ ನಕ್ಷತ್ರ, ಧ್ರುವ ಯೋಗ ಮತ್ತು ಕೌಲವ ಕರಣ ಇರುತ್ತದೆ. ರಾಹುಕಾಲ ಸಂಜೆ 4 ಗಂಟೆ 59 ನಿಮಿಷದಿಂದ 6 ಗಂಟೆ 29 ನಿಮಿಷದವರೆಗೆ ಇರಲಿದೆ. ಬೆಳಗಿನ ಜಾವ 11 ಗಂಟೆ 1 ನಿಮಿಷದಿಂದ 12 ಗಂಟೆ 30 ನಿಮಿಷದವರೆಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲ ಇರಲಿದೆ.
ಮಾರ್ಚ್ 8 ಭಾನುವಾರವು ಸೂರ್ಯನ ದಿನವಾಗಿದ್ದು, ಸರ್ಕಾರಿ ರಜೆಯ ದಿನವೂ ಆಗಿದೆ. ಈ ದಿನ ರಂಗ ಪಂಚಮಿ ಇರುವುದರಿಂದ ಕಾರ್ಯಸಿದ್ಧಿಗೆ ಶುಭ ಎಂದು ತಿಳಿಸಲಾಗಿದೆ. ಪಂಚಮಿ ತಿಥಿಯು ಎಲ್ಲ ರಾಶಿಗಳವರಿಗೂ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರಿಗೆ ಎಲ್ಲ ವಯಸ್ಸಿನ ಅಭಿಮಾನಿಗಳು ಇದ್ದಾರೆ. ಈ ಜೋಡಿಯನ್ನು ಕೋಟ್ಯಂತರ ಮಂದಿ ಇಷ್ಟಪಡುತ್ತಾರೆ. ಪುಟ್ಟ ಮಕ್ಕಳು ಕೂಡ ಇವರಿಗೆ ಫ್ಯಾನ್ ಆಗಿದ್ದಾರೆ. ಇತ್ತೀಚೆಗೆ ವಿಜಯ್ ಮತ್ತು ರಶ್ಮಿಕಾ ಅವರು ರಾಜಸ್ಥಾನದ ಉದಯಪುರದಲ್ಲಿ ಮದುವೆ ಮಾಡಿಕೊಂಡರು. ನಂತರ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಲಾಯಿತು. ತನ್ನನ್ನು ಈ ಮದುವೆಗೆ ಆಹ್ವಾನಿಸಿಲ್ಲ ಎಂದು ಪುಟ್ಟ ಬಾಲಕಿಯೊಬ್ಬಳು ಕೋಪ ಮಾಡಿಕೊಂಡಿದ್ದಾಳೆ. ಆಕೆಗೆ ವಿಜಯ್ ದೇವರಕೊಂಡ (Vijay Devarakonda) ಸಮಾಧಾನ ಮಾಡಿದ್ದಾರೆ.
ಈಗಿನ ಕಾಲದ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವುದರಲ್ಲಿ ಮುಂದಿದ್ದಾರೆ. ಮೊಬೈಲ್ ಎತ್ತಿಕೊಂಡ ಬಾಲಕಿಯೊಬ್ಬಳು ವಿಡಿಯೋ ಮಾಡಿದ್ದಾರೆ. ‘ನಾವು ಕೂಡ ಫ್ಯಾನ್ಸ್ ಅಲ್ಲವಾ? ನಮಗೆ ಯಾಕೆ ಸ್ವೀಟ್ಸ್ ಕೊಟ್ಟಿಲ್ಲ’ ಎಂದು ಕೋಪದಲ್ಲಿ ಮಾತನಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವಿಜಯ್ ದೇವರಕೊಂಡ ಅವರ ಗಮನ ಸೆಳೆದಿದೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವ ವಿಜಯ್ ದೇವರಕೊಂಡ ಅವರು, ‘ಕಂದಾ.. ಊಟಕ್ಕೆ ನಿನ್ನನ್ನು ಮನೆಗೆ ಕರೆಯುತ್ತೇನೆ. ನಿನ್ನ ಇಷ್ಟದ ಊಟ ಮತ್ತು ಸಿಹಿ ತಿಂಡಿ ಯಾವುದು ಅಂತ ಹೇಳು. ಮನೆಯಲ್ಲೇ ಆ ಅಡುಗೆ ಮಾಡಿಸಿ ಖುಷಿಯಿಂದ ತಿನ್ನೋಣ’ ಎಂದು ಕಮೆಂಟ್ ಮಾಡಿದ್ದಾರೆ. ಇದೇ ವಿಡಿಯೋವನ್ನು ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹಲವು ವರ್ಷಗಳ ಕಾಲ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಡೇಟಿಂಗ್ ಮಾಡುತ್ತಿದ್ದರು. ಆದರೆ ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ಮಾತ್ರ ಅವರು ಆ ವಿಷಯವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು. ಫೆಬ್ರವರಿ 26ರಂದು ಉದಯಪುರದ ಖಾಸಗಿ ಹೋಟೆಲ್ನಲ್ಲಿ ಅವರಿಬ್ಬರು ಮದುವೆ ಮಾಡಿಕೊಂಡರು. ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.
ಮದುವೆ ಬಳಿಕ ಅಭಿಮಾನಿಗಳನ್ನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮರೆಯಲಿಲ್ಲ. ದೇಶಾದ್ಯಂತ ಹಲವು ನಗರಗಳಲ್ಲಿ ಅನ್ನದಾನ ಮಾಡಿದರು. ಮದುವೆಯ ಸಿಹಿಯನ್ನು ವಿವಿಧ ನಗರಗಳಲ್ಲಿ ವಿತರಣೆ ಮಾಡಿದರು. ಹೈದರಾಬಾದ್ನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್, ಚಿರಂಜೀವಿ, ಡಿಕೆ ಶಿವಕುಮಾರ್, ರಾಮ್ ಚರಣ್, ಕರಣ್ ಜೋಹರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದರು.
ನವದೆಹಲಿ, ಮಾರ್ಚ್ 08: ಮಾಡಿದ್ದುಣ್ಣೋ ಮಹಾರಾಯ ಎಂದು ಇಂಥವರನ್ನೇ ನೋಡಿ ಹೇಳಿರಬೇಕು,ಹೋಳಿ ಆಚರಣೆ ಮಾಡುತ್ತಿದ್ದ ಜನರ ಮೇಲೆ ತಾರಸಿ ಮೇಲಿಂದ ಕಸ ಸುರಿಯಲು ಹೋದ ವ್ಯಕ್ತಿಯೊಬ್ಬ ಕಸದ ಸಮೇತ ಕೆಳಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ದೇಶಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗಿತ್ತು. ಹಾಗೆಯೇ ಒಬ್ಬರಿಗೊಬ್ಬರು ಬಣ್ಣ ಎರಚಿಕೊಳ್ಳುತ್ತಾ ಸಂತೋಷವಾಗಿದ್ದವರ ಮೇಲೆ ಕಸ, ಮಣ್ಣನ್ನು ಸುರಿಯಲು ಹೋಗಿದ್ದ ವ್ಯಕ್ತಿಯೊಬ್ಬ ಮನೆಯ ತಾರಸಿಯಿಂದ ಕೆಳಗೆ ಬಿದ್ದಿದ್ದಾರೆ. ಬೇರೆ ಯಾರಿಗೋ ಕೆಟ್ಟದ್ದನ್ನು ಬಯಸಿದರೆ ನಮಗೂ ಕಷ್ಟ ಕಟ್ಟಿಟ್ಟ ಬುತ್ತಿ ಎಂಬುದು ಈ ವಿಡಿಯೋ ನೋಡಿ ಕಲಿಯಬೇಕಿದೆ.
ಬೆಂಗಳೂರು, ಮಾರ್ಚ್ 08: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನಮ್ಮ ನೆರಳನ್ನ ನಾವೇ ತುಳಿಯಬಾರದು ಯಾಕೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ನೆರಳು ನಮ್ಮನ್ನು ಸದಾ ಹಿಂಬಾಲಿಸುತ್ತದೆ ಮತ್ತು ನಮ್ಮ ಒಳ್ಳೆಯ ಹಾಗೂ ಕೆಟ್ಟ ಕಾರ್ಯಗಳನ್ನು ದಾಖಲಿಸುತ್ತದೆ. ನಂಬಿಕೆಯ ಪ್ರಕಾರ, ನಮ್ಮ ನೆರಳು ಮೃತ್ಯುವಿನ ತನಕ ನಮ್ಮ ಜೊತೆಗಿದ್ದು, ಯಮನಿಗೆ ನಮ್ಮ ಲೆಕ್ಕಾಚಾರಗಳನ್ನು ತಲುಪಿಸುತ್ತದೆ. ಅಕಸ್ಮಿಕ ಕಂಟಕಗಳು ಬರುವಾಗ ನೆರಳು ಸೂಕ್ಷ್ಮ ಸೂಚನೆಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಧನಾತ್ಮಕ ಜೀವನ ನಡೆಸುವ ಮೂಲಕ, ಪಾಪ ಭೀತಿ ಮತ್ತು ಧರ್ಮ ಭೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬಹುದು ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
ನೆಲಮಂಗಲ, ಮಾರ್ಚ್ 08: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಪ್ರೇಯಸಿ ಸೇರಿದಂತೆ ಮೂವರ ಮೇಲೆ ಪೆಟ್ರೋಲ್ ಸುರಿದು ವ್ಯಕ್ತಿಯೋರ್ವ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತರಬನಹಳ್ಳಿಯಲ್ಲಿ ನಡೆದಿದೆ. ಆರೋಪಿಯ ಪ್ರೇಯಸಿ ಸುಮಲತಾ, ಆಕೆಯ ತಂದೆ ಶ್ರೀರಾಮ(48) ಹಾಗೂ ತಾಯಿ ಮಂಜಮ್ಮ(42) ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಆರೋಪಿ ಪಾಂಡುರಂಗ(29)ನನ್ನು ಬಂಧಿಸಲಾಗಿದ್ದು, ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
4 ವರ್ಷದ ಹಿಂದೆ ಗಂಡನಿಂದ ದೂರವಾಗಿದ್ದ ಸುಮಲತಾ, ಯಶವಂತಪುರದ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಇನ್ಸ್ಟಾಗ್ರಾಂನಲ್ಲಿ ಈಕೆಗೆ ಪಾಂಡುರಂಗನ ಪರಿಚಯವಾಗಿತ್ತು. ಬಳಿಕ ಆತನ ಜೊತೆಗೆ ಮನೆ ಬಿಟ್ಟು ಹೋಗಿದ್ದ ಸುಮಲತಾ, 4 ವರ್ಷದಿಂದ ಲೀವಿಂಗ್ ಇನ್ ರಿಲೇಷನ್ಶಿಪ್ನಲ್ಲಿದ್ದಳು. ಮಹಾಲಕ್ಷ್ಮೀ ಲೇಔಟ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರೂ ವಾಸವಿದ್ದರು. ಆದರೆ, ಪಾಂಡುವಿನ ಜೊತೆಗೂ ವಿರಸ ಉಂಟಾಗಿ ಕಳೆದ ಎರಡು ತಿಂಗಳ ಹಿಂದೆ ಆತನಿಂದಲೂ ಸುಮಲತಾ ದೂರವಾಗಿದ್ದಳು. ಈಕೆಯ ಜೊತೆ ಇದ್ದುಕೊಂಡೇ ಪಾಂಡುರಂಗ ಮತ್ತೊಂದು ಯುವತಿಯ ಸಹವಾಸ ಮಾಡಿದ್ದ ಕಾರಣ, ಗಲಾಟೆ ಮಾಡಿಕೊಂಡು ಈಕೆ ತಾಯಿ ಮನೆಯನ್ನು ಸೇರಿದ್ದಳು ಎನ್ನಲಾಗಿದೆ.
ಹೀಗಿರುವಾಗ ಮೊನ್ನೆ ತರಬನಹಳ್ಳಿಯ ಸುಮಲತಾ ಮನೆ ಬಳಿ ಬಂದಿದ್ದ ಆರೋಪಿ ಪಾಡುರಂಗ ಸುಮಲತಾಳಿಗೆ ದ್ವಿಚಕ್ರ ವಾಹನ ಕೊಡು ಎಂದಿದ್ದ. ಈ ವೇಳೆ ಅದು ತನ್ನ ಅಕ್ಕನದ್ದು, ನಾನು ಕೊಡಲ್ಲ ಎಂದು ಸುಮಲತಾ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಗಲಾಟೆ ಮಾಡಿದ್ದಾನೆ. ಸುಮಲತಾ, ಆಕೆಯ ತಂದೆ ಮತ್ತು ತಾಯಿ ಮೂವರೂ ಈ ವೇಳೆ ಬೈದಿದ್ದಾರೆ. ಹೀಗಾಗಿ ಇನ್ನಷ್ಟು ಕೋಪಗೊಂಡಿದ್ದ ಪಾಡುರಂಗ ಸ್ಥಳದಿಂದ ತೆರಳಿದ್ದು, ಸುಮಾರು ಅರ್ಧಗಂಟೆ ಬಳಿಕ ವಾಪಾಸ್ ಆಗಿದ್ದಾನೆ. ಮತ್ತೆ ಗಲಾಟೆ ಶುರುಮಾಡಿ ಸುಮಲತಾ ಮತ್ತು ಆಕೆಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಆಟೋದಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಬೆಂಕಿಯಲ್ಲಿ ಸುಟ್ಟ ಮೂವರ ಸ್ಥಿತಿ ಗಂಭೀರವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ಕಂಡುಕೊಳ್ಳುವುದು ಅವಶ್ಯಕ. ಶಾರೀರಿಕ ಅಸೌಖ್ಯದ ಕೊರತೆ ಕಾಡಲಿದ್ದು ಔಷಧೋಪಚಾರವನ್ನು ಮಾಡುವಿರಿ. ಒಪ್ಪಂದವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ನಿಮ್ಮ ಪಾಲಿಗೆ ಬಂದಿದ್ದನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ. ಬಂಧುಗಳ ಅನಿರೀಕ್ಷಿತ ಭೇಟಿಯಾಗಬಹುದು.
ವೃಷಭ ರಾಶಿ :
ಬಹುದಿನಗಳಿಂದ ಇದ್ದ ಚಿಂತೆ ದೂರವಾಗಲಿದೆ. ದಾನ ಕಾರ್ಯಗಳಲ್ಲಿ ಭಾಗಿಯಾಗಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಯಾರನ್ನೋ ಹಿಂದಿಕ್ಕಿ ಮುಂಬರುವ ಯೋಚನೆ ಸಾಧುವಾಗದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಅನಪೇಕ್ಷಿತ ವಿಚಾರದಲ್ಲಿ ಮೂಗುತೂರಿಸುವುದು ಬೇಡ. ನಿಮ್ಮ ಮಾತನಿಂದ ಇನ್ನೊಬ್ಬರನ್ನು ಘಾಸಿ ಮಾಡುವಿರಿ. ಕಿವಿಯ ನೋವಿನಿಂದ ಸಂಕಟವಾಗುವುದು. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸಿ ಸಿಗದೇ ಬೇಸರಗೊಳ್ಳುವಿರಿ.
ಮಿಥುನ ರಾಶಿ :
ಇಂದು ನಿಮಗೆ ಪ್ರಗತಿಯ ಹೊಸ ಮಾರ್ಗಗಳನ್ನು ಕಾಣುತ್ತವೆ. ಸಹಿಸಲಾಗದ ದೇಹಪೀಡೆಯಿಂದ ಒದ್ದಾಡುವಿರಿ. ಕೆಲವರು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ವೃತ್ತಿಯನ್ನು ಬಿಟ್ಟು ಹೆಚ್ಚಿನ ಆದಾಯದ ಕಡೆಗೆ ಗಮನಹರಿಸುವಿರಿ. ಎಲ್ಲರಿಂದ ದೂರವಾಗಲು ಬಯಸುವಿರಿ. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನೀವು ಮನೆಯನ್ನು ಖರೀದಿಸುವ ಅಲೋಚನೆಯಲ್ಲಿ ಇರುವಿರಿ.
ಕರ್ಕಾಟಕ ರಾಶಿ :
ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಮನಸ್ಸು ಚಂಚಲವಾಗಿ ಇರಬಹುದು. ಕುಟುಂಬ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಕಾರಣವಿಲ್ಲದೆ ಯಾರೊಂದಿಗೂ ಜಗಳವಾಡಬೇಡಿ. ಕೆಲವು ಸನ್ನಿವೇಶವನ್ನು ನೀವು ನಗಣ್ಯ ಮಾಡುವುದು ಉತ್ತಮ. ಸಂಗಾತಿಯ ಸಲಹೆಯನ್ನೂ ಪಡೆದು ಉತ್ತಮ ನಿರ್ಧಾರಕ್ಕೆ ಬನ್ನಿ. ಇಂದು ಸ್ತ್ರೀಯರಿಗೆ ಸೌಂದರ್ಯಪ್ರಜ್ಞೆಯು ಅಧಿಕವಾಗಿ ಇರುವುದು.
ಸಿಂಹ ರಾಶಿ :
ಉದ್ಯೋಗದಲ್ಲಿ ಅಭಿವೃದ್ಧಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಪಾಲುದಾರಿಕೆಯಲ್ಲಿ ಅಸಹಜ ಮಾತುಕತೆಗಳು ಬರಬಹುದು. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾದೀತು. ಕಣ್ಣಿನ ತೊಂದರೆಯು ಹೆಚ್ಚಾಗಬಹುದು. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಅಸಮಾಧಾನಗೊಳ್ಳಬಹುದು.
ಕನ್ಯಾ ರಾಶಿ :
ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ ಇಂದಿನ ಲಾಭವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸುಮ್ಮನೇ ನಿಮ್ಮಷ್ಟಕ್ಕೆ ಇರಿ. ವಾಹನದ ಕಾರಣ ಕಲಹವಾಗುವುದು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಇಟ್ಟುಕೊಳ್ಳುವುದು ಉತ್ತಮ. ಹಿರಿಯರ ತಿಳಿವಳಿಕೆಯು ಅಪಮಾನದಂತೆ ಕಾಣಬಹುದು.
ತುಲಾ ರಾಶಿ:
ಉದ್ಯೋಗ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ದಾಯಾದಿಗಳು ನಿಮ್ಮ ಮೇಲೆ ಅಪವಾದವನ್ನು ಮಾಡಬಹುದು. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ಇಂದು ಮೌಲ್ಯಯುತವಾದ ವಸ್ತುಗಳನ್ನು ಖರೀದಿಸುವಿರಿ.
ವೃಶ್ಚಿಕ ರಾಶಿ:
ಅನಿರೀಕ್ಷಿತ ಗೆಲುವಿನಿಂದ ಹಿಗ್ಗುವ ಅವಶ್ಯಕತೆ ಇಲ್ಲ. ವಿವಾಹಿತರ ಸಂಬಂಧ ಬಲಗೊಳ್ಳುತ್ತದೆ. ಪ್ರೇಮಿಗಳಿಗೆ ಈ ದಿನ ಆಹ್ಲಾದಕರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಪ್ರೀತಿ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸಿದ್ಧರಿರುವಿರಿ. ತಪ್ಪನ್ನು ನೀವು ಒಪ್ಪಿಕೊಳ್ಳಲಾರಿರಿ. ಸಹೋದರರ ನಡುವೆ ವಾಗ್ವಾದವು ಆಗಬಹುದು. ಇಂದಿನ ವ್ಯವಹಾರವು ಎಚ್ಚರಿಕೆಯಿಂದ ಇರಲಿ.
ಧನು ರಾಶಿ:
ನಿಮ್ಮ ಸಂಗಾತಿಯಿಂದ ನಿಮಗೆ ಕೆಲಸದಲ್ಲಿ ಬೆಂಬಲ ಸಿಗುತ್ತದೆ. ಮನಸ್ಸು ಅಪರಿಚಿತ ಭಯಗಳಿಂದ ಪೀಡಿತವಾಗಬಹುದು. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯದು. ಬಹಳ ದಿನಗಳ ಅನಂತರ ಮನೆಯಲ್ಲಿ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಬರಬಹುದು. ಸಣ್ಣ ವಿಚಾರಕ್ಕೆ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ.
ಮಕರ ರಾಶಿ:
ಆಪ್ತರಿಂದ ಅಮೂಲ್ಯ ಉಡುಗೊರೆ ಪಡೆಯುವ ಅವಕಾಶವಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನ ಬರಬಹುದು. ಸತ್ಯಸಂಗತಿಯನ್ನು ನಂಬುವ ಸ್ಥಿತಿಯಲ್ಲಿ ನೀವಿರಲಾರಿರಿ. ಇಂದು ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿ ಎಂಬ ನಿರೀಕ್ಷೆ ಬೇಡ. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿ ಅವರ ಮನಸ್ಸನ್ನು ನೋಯಿಸುವಿರಿ.
ಕುಂಭ ರಾಶಿ:
ಹೊಸ ಹೂಡಿಕೆಗಳನ್ನು ಮಾಡಲು ಈ ಸಮಯ ಶುಭವಾಗಿರುತ್ತದೆ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಇದರಿಂದಾಗಿ ಮನೆಯ ವಾತಾವರಣ ಸಂತೋಷವಾಗಿರುತ್ತದೆ. ನೀವು ಪ್ರೀತಿಯ ಮನಃಸ್ಥಿತಿಯಲ್ಲಿರುವಿರಿ. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ತೊಂದರೆ ಆಗಬಹುದು. ಬಂದ ಅವಕಾಶವನ್ನು ಬಿಟ್ಟು ಅನಂತರ ದುಃಖಿಸುವುದರಲ್ಲಿ ಅರ್ಥವಿರದು.
ಮೀನ ರಾಶಿ:
ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ಮುಟ್ಟುವ ಅವಕಾಶ ನಿಮಗೆ ಸಿಗಬಹುದು. ನೀವು ಉದ್ಯೋಗ ಮಾಡುತ್ತಿದ್ದರೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಸಾಧ್ಯತೆಯಿದೆ. ವ್ಯಾಪಾರ ಮಾಡುವವರು ಸಹ ದೊಡ್ಡ ಲಾಭ ಗಳಿಸಬಹುದು. ಸ್ವಾದಿಷ್ಟವಾದ ಭೋಜನದಿಂದ ಸಂತೃಪ್ತಿ ಇರಲಿದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಆತ್ಮೀಯರ ಭೇಟಿಯಿಂದ ನಿಮಗೆ ಸಮಾಧಾನ ಸಿಗಲಿದೆ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಶತ್ರುತ್ವ ಬರಬಹುದು. ಸಂತೋಷದ ಸಮಯವನ್ನು ನೆನಪಿಸಿಕೊಳ್ಳುವಿರಿ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಧ್ರುವ, ಕರಣ : ತೈತಿಲ, ಸೂರ್ಯೋದಯ – 06 – 37 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:03 – 18:33, ಯಮಗಂಡ ಕಾಲ 12:35 – 14:05, ಗುಳಿಕ ಕಾಲ 15:34 – 17:03
ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಅಥವಾ ಮೊಬೈಲ್ ಚಾರ್ಜ್ ಮಾಡುವ ಮೊದಲು “ಓಂ ಗಂ ಗಣಪತಯೇ ನಮಃ” ಎಂದು ಸ್ಮರಿಸಿ. ಈ ದಿನ ಮನೆಯಲ್ಲಿ ದೀಪ ಹಚ್ಚುವಾಗ ಅಥವಾ ವಿದ್ಯುತ್ ಕೆಲಸ ಮಾಡುವಾಗ ಅತಿಯಾದ ಅವಸರ ಬೇಡ. ಜಾಗರೂಕತೆಯೇ ಈ ದಿನದ ದೊಡ್ಡ ಪರಿಹಾರ.
ದಾಂಪತ್ಯದಲ್ಲಿ ಒಂದು ಮಾತು ಬರುತ್ತದೆ, ಒಂದು ಮಾತು ಹೋಗುತ್ತದೆ. ಈ ಕಾರಣಕ್ಕೆ ವಿರಸ ವಿಕೋಪಕ್ಕೆ ಹೋಗಿ, ದಂಪತಿ ಮಧ್ಯೆ ಮಾತನಾಡದೆ ಇರುವಂಥ ಸನ್ನಿವೇಶ ನಿಮ್ಮಲ್ಲಿ ಕೆಲವರಿಗೆ ಸೃಷ್ಟಿ ಆಗಲಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಿ. ಏಕಾಏಕಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಅಗತ್ಯ ಕಂಡುಬರಲಿದ್ದು, ಅದಕ್ಕಾಗಿ ಸಮಯ ಮೀಸಲಿಡಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ.
ವಿದೇಶಗಳಲ್ಲಿ ಇರುವಂಥವರು ವಾಪಸ್ ತಾಯ್ನಾಡಿಗೆ ಕೆಲವು ಸಮಯದ ಮಟ್ಟಿಗೆ ವಾಪಸ್ ಬರಲಿದ್ದೀರಿ. ಅದು ರಜಾ ದಿನಗಳ ಕಾರಣಕ್ಕೆ ಇರಬಹುದು. ಅಥವಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಕಾರಣಕ್ಕಾದರೂ ಇರಬಹುದು. ಇನ್ನು ಕೃಷಿ ಭೂಮಿ ಅಥವಾ ದೊಡ್ಡ ಅಳತೆಯ ಸೈಟನ್ನು ಹುಡುಕುತ್ತಾ ಇರುವವರು ಈ ದಿನ ಅಂಥ ಕೆಲವು ಆಸ್ತಿಗಳನ್ನು ಖರೀದಿಗಾಗಿ ನೋಡಲಿದ್ದೀರಿ.
ರೆಸಾರ್ಟ್, ರೆಸ್ಟೋರೆಂಟ್ ಅಥವಾ ಮಾಲ್ ಗಳಿಗೆ ಕುಟುಂಬ ಸಮೇತ ತೆರಳುವಂಥ ಯೋಗ ಇದೆ. ಹೊಸ ರುಚಿ ಖಾದ್ಯಗಳನ್ನು ಸವಿಯಲಿದ್ದೀರಿ. ಬಹಳ ಕಾಲದಿಂದ ತೆರಳಬೇಕು ಎಂದುಕೊಂಡಿದ್ದ ಧಾರ್ಮಿಕ ಕೇಂದ್ರಗಳಿಗೆ ನಿಮ್ಮಲ್ಲಿ ಕೆಲವರು ಭೇಟಿ ನೀಡಲಿದ್ದೀರಿ. ಆರೋಗ್ಯಕರ ಜೀವನಕ್ಕೆ ಸಹಾಯ ಮಾಡುವಂಥ ಕೆಲವು ಹವ್ಯಾಸಗಳನ್ನು ಇಂದಿನಿಂದ ಆರಂಭಿಸಲಿದ್ದೀರಿ. ಸೈಕ್ಲಿಂಗ್, ಜಿಮ್, ಅಥವಾ ಯೋಗಾಭ್ಯಾಸ ಇಂಥವುಗಳಿಗೆ ಸೇರ್ಪಡೆ ಆಗುವಂಥ ಯೋಗ ಇದೆ.
ಬೆಳಗ್ಗೆ ಸ್ನಾನದ ನಂತರ ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸೂರ್ಯನಿಗೆ ಅರ್ಪಿಸಿ (ಅರ್ಘ್ಯ ನೀಡುವುದು). ಇದರಿಂದ ಮನಸ್ಸಿನ ಗೊಂದಲಗಳು ನಿವಾರಣೆಯಾಗಿ, ದಿನವಿಡೀ ಚೈತನ್ಯ ಇರುತ್ತದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಲ್ಯಾಪ್ ಟಾಪ್- ಮೊಬೈಲ್ ಫೋನ್ ಇಂಥವುಗಳನ್ನು ಚಾರ್ಜ್ ಗೆ ಹಾಕುವಾಗ ಸಹ ಮುಂಜಾಗ್ರತೆಯನ್ನು ವಹಿಸಿ. ಈ ಹಿಂದೆ ನಿಮಗೆ ಕೆಲವು ಹುದ್ದೆ- ಸ್ಥಾನಮಾನ ಸಿಗದ ರೀತಿಯಲ್ಲಿ ನೋಡಿಕೊಂಡಿದ್ದ ವ್ಯಕ್ತಿಗಳು ಯಾರು ಹಾಗೂ ನಿಮಗೆ ಅಡ್ಡಗಾಲು ಹಾಕುವುದಕ್ಕೆ ಏನೆಲ್ಲ ಮಾಡಿದರು ಎಂಬ ಬಗ್ಗೆ ವಿಶ್ವಾಸಾರ್ಹ ಆದ ಮೂಲಗಳಿಂದ ಮಾಹಿತಿ ದೊರೆಯಲಿದೆ. ವಾಹನಗಳ ಕಲಿಕೆ ಆರಂಭಿಸಬೇಕು ಅಂದುಕೊಂಡವರು ಅಥವಾ ಈಗ ಡ್ರೈವಿಂಗ್ ಕ್ಲಾಸ್ ಸೇರಿಕೊಂಡಂತಹವರು ಹೆಚ್ಚು ಏಕಾಗ್ರತೆಯಿಂದ ತೊಡಗಿಸಿಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಒಂದು ವೇಳೆ ನೀವೇನಾದರೂ ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಾದಲ್ಲಿ ವರ್ಷಗಳಿಂದ ಗಮನಕ್ಕೆ ಬಾರದೆ ಉಳಿದುಹೋದ ಹಣಕಾಸಿನ ಅವ್ಯವಹಾರವೊಂದು ನಿಮ್ಮ ಗಮನಕ್ಕೆ ಬರಲಿದೆ. ಇದನ್ನು ಮೇಲಧಿಕಾರಿಗಳಿಗೆ ತಿಳಿಸಬಾರದು ಎಂದು ನಿಮ್ಮ ಜೊತೆಗೆ ಕೆಲಸ ಮಾಡುವವರು ಕೇಳಿಕೊಳ್ಳಲಿದ್ದಾರೆ. ಎಲೆಕ್ಟ್ರಿಕಲ್ ವಸ್ತುಗಳ ಬಳಕೆ ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ವಿದ್ಯುತ್ ಶಾಕ್, ಶಾರ್ಟ್ ಸರ್ಕೀಟ್ ಇಂಥದ್ದೇನಾದರೂ ಈ ದಿನ ಸಂಭವಿಸುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮಲ್ಲಿ ಕೆಲವರು ಪುಸ್ತಕ ಬರೆಯುವುದಕ್ಕೆ ಅಂತಲೇ ಕೆಲವು ಸ್ಥಳಗಳಿಗೆ ಪ್ರವಾಸ ತೆರಳಲಿದ್ದೀರಿ. ಇನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಯೂಟ್ಯೂಬ್ ಚಾನೆಲ್ ಒಂದನ್ನು ಶುರು ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಈ ನಿಮ್ಮ ನಿರ್ಧಾರಕ್ಕೆ ಸಂಗಾತಿಯ ಬೆಂಬಲ ಇರಲಿದೆ. ಪ್ರೀತಿಯಲ್ಲಿ ಇರುವಂಥವರು ತಮ್ಮ ಮದುವೆ ಬಗ್ಗೆ ಮನೆಯಲ್ಲಿ ಪ್ರಸ್ತಾವ ಮಾಡುವ ಬಗ್ಗೆ ನಿರ್ಧರಿಸಲಿದ್ದೀರಿ.