Headlines

ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ, ರೈಲು ಸಂಚಾರ ಸ್ಥಗಿತ! – Kannada News | Hassan Rains Trigger Sakleshpur Landslide: Railway Tracks Blocked, Trains Halted

ಹಾಸನ, ಆಗಸ್ಟ್​​ 02: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಸಕಲೇಶಪುರ ತಾಲೂಕಿನ ಯಡಕುಮಾರಿ ಟು ಶಿರವಾಗಿಲು ನಡುವಿನ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿರುವಂತಹ ಘಟನೆ ನಡೆದಿದೆ. ರೈಲ್ವೆ ಹಳಿ ಪಕ್ಕದಲ್ಲಿ ಮೇಲಿನಿಂದ‌ ನೀರು ಬೀಳುತ್ತಿದ್ದು, ಇಡೀ ಸ್ಥಳ ಸಂಪೂರ್ಣ ಕೆಸರುಮಯವಾಗಿದೆ. ಧಾರಾಕಾರ ಮಳೆ ನಡುವೆಯೂ ರೈಲ್ವೆ ಸಿಬ್ಬಂದಿ ಹಿಟಾಚಿ ಯಂತ್ರಗಳ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ನಡೆಸಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಮತ್ತೆ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತೆರವು…

Read More

ಜೀ ಎಂಟರ್ಟೈನ್​​ಮೆಂಟ್​​ಗೆ ಭಾರಿ ದಂಡ ಮತ್ತು ನಿಷೇಧ ಹೇರಿದ ವಿಧಿಸಿದ ಸೆಬಿ – Kannada News | SEBI imposes penalty to Zee Entertainment and also banned it from share market

ಜೀ ಸಂಸ್ಥೆ (ZEEL) ಭಾರತದ ಬಲು ಜನಪ್ರಿಯ ಮತ್ತು ಬಹು ದೊಡ್ಡ ಎಂಟರ್ಟೈನ್​​ಮೆಂಟ್ ಸಂಸ್ಥೆ. ಹಲವಾರು ಭಾಷೆಗಳಲ್ಲಿ ಜನಪ್ರಿಯ ಟಿವಿ ಚಾನೆಲ್ಗಳು, ಸಿನಿಮಾ ನಿರ್ಮಾಣ ಸಂಸ್ಥೆ, ಒಟಿಟಿ, ಮಾಧ್ಯಮ ಸಂಸ್ಥೆ, ಮ್ಯೂಸಿಕ್ ಸಂಸ್ಥೆ ಇನ್ನೂ ಹಲವನ್ನು ಜೀ ಹೊಂದಿದೆ. ಆದರೆ ಇದೀಗ ಜೀ ಎಂಟರ್ಟೈನ್​​ಮೆಂಟ್ ಮೇಲೆ ಸೆಬಿಯು ಭಾರಿ ದೊಡ್ಡ ದಂಡವನ್ನು ಹಾಕಿರವುದು ಮಾತ್ರವಲ್ಲದೆ ಜೀ ಸಂಸ್ಥೆಗೆ ನಿಷೇಧವನ್ನು ಸಹ ಹೇರಿದೆ. ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ…

Read More

ಕೈಯಲ್ಲಿ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು – Kannada News | Police Win Hearts by Caring for 8 Month Old Baby While mother writing Constable exam In bengaluru

ಬೆಂಗಳೂರು, (ಆಗಸ್ಟ್ 02): ಇದು ಕನಸುಗಳ ಬೆನ್ನತ್ತಿ ಬಂದ ಬಾಣಂತಿಯೊಬ್ಬಳ ಹೋರಾಟದ ಕಥೆ. ಒಂದೆಡೆ ಬದುಕಿಗೆ ಭದ್ರತೆ ನೀಡುವ ಸರ್ಕಾರಿ ಉದ್ಯೋಗದ ಹಂಬಲ, ಮತ್ತೊಂದೆಡೆ ಎದೆಯ ಮೇಲಿದ್ದ ಎಂಟು ತಿಂಗಳ ಹಸುಗೂಸಿನ ಮಮತೆ. ಈ ಮಾನವೀಯತೆಗೆ ಬೆಂಗಳೂರಿನ ಕೃಷ್ಣಾ ಕಾಲೇಜು ಪರೀಕ್ಷಾ ಕೇಂದ್ರ ಸಾಕ್ಷಿಯಾಗಿದೆ. ಹೌದು….ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ಬಂದ ತಾಯಿಯೊಬ್ಬರು ತನ್ನ ಎಂಟು ತಿಂಗಳ ಮಗುವನ್ನು ಹೊರಗೆ ಬಿಡಬೇಕಾಯಿತು. ತಾಯಿಗಾಗಿ ಅಳುತ್ತಿದ್ದ ಮಗುವನ್ನು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಮಡಿಲಿಗೆ ತೆಗೆದುಕೊಂಡು, ಜೋಗುಳ…

Read More

ಕಾವೇರಿ ವಿವಾದ: ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ; ಕಾಂಗ್ರೆಸ್ ಎಂಪಿ ಮಾಣಿಕಂ ಟ್ಯಾಗೋರ್ – Kannada News | Cauvery Water Dispute: Karnataka and Tamil Nadu Are Not India and Pakistan, Says Congress MP Manickam Tagore

ಬೆಂಗಳೂರು, ಆಗಸ್ಟ್​​ 02: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುವಂತೆ CWMA ನೀಡಿರುವ ಆದೇಶಕ್ಕೆ ಸದ್ಯ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್​​, ‘ತಮಿಳುನಾಡು ಮತ್ತು ಕರ್ನಾಟಕ ಭಾರತ-ಪಾಕಿಸ್ತಾನವಲ್ಲ, ಕರ್ನಾಟಕ ಸಿಎಂ ಜತೆ ತಮಿಳುನಾಡು ಸಿಎಂ ಚರ್ಚಿಸುವುದೇ ಪರಿಹಾರ’ ಎಂದು ಹೇಳಿದ್ದಾರೆ. ತಮಿಳುನಾಡಿನ ಹಿತಾಸಕ್ತಿಯೇ ಮುಖ್ಯ: ಮಾಣಿಕಂ ಟ್ಯಾಗೋರ್​​ ಕಾವೇರಿ ನೀರು ಹಂಚಿಕೆ…

Read More

IBPS CSA Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ 11,403 ಹುದ್ದೆಗಳ ಬಂಪರ್ ನೇಮಕಾತಿ; ಕರ್ನಾಟಕದಲ್ಲೇ 1,414 ಹುದ್ದೆಗಳು! – Kannada News | IBPS CSA Recruitment 2026: Apply Online for 11,403 Customer Service Associate Posts; 1,414 Vacancies in Karnataka

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಸಿಹಿ ಸುದ್ದಿ ನೀಡಿದೆ. ದೇಶದ ಪ್ರಮುಖ ಸರ್ಕಾರಿ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಬೃಹತ್ 11,403 ಗ್ರಾಹಕ ಸೇವಾ ಸಹವರ್ತಿ (Customer Service Associate – CSA) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. 2024 ರಲ್ಲಿ IBPS ಕ್ಲರ್ಕ್ ಹುದ್ದೆಯನ್ನು ‘ಗ್ರಾಹಕ ಸೇವಾ ಸಹವರ್ತಿ (CSA)’ ಎಂದು ಮರುನಾಮಕರಣ ಮಾಡಲಾಗಿರುವುದು ಗಮನಿಸಬೇಕಾದ ವಿಷಯ. ಆಸಕ್ತರು ಆಗಸ್ಟ್ 21 ರವರೆಗೆ ಅಧಿಕೃತ…

Read More

IND vs SL: ಟೆಸ್ಟ್ ಸರಣಿಯಿಂದ ಬುಮ್ರಾ ಔಟ್; ತಂಡದಲ್ಲಿ ಯಾರಿಗೆ ಸಿಗಲಿದೆ ಅವಕಾಶ?

ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಗಾಯದಿಂದ ಬಳಲುತ್ತಿರುವ ಬುಮ್ರಾ ಇನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಈ ಟೆಸ್ಟ್ ಸರಣಿಯಿಂದ ಹೊರಗಿಟ್ಟು ಚೇತರಿಸಿಕೊಳ್ಳಲು ಸಮಯಾವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ(PC-PTI). ಈ ಟೆಸ್ಟ್ ಸರಣಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯತೆ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ದೃಷ್ಟಿಯಿಂದ ಲಂಕಾ ವಿರುದ್ಧದ ಈ ಸರಣಿಯನ್ನು ಟೀಂ…

Read More

ನಾನು ಕೂಡ ಕಾವೇರಿ ಕಣಿವೆಯಲ್ಲಿ ಹುಟ್ಟಿ ಬೆಳೆದಿದ್ದೇನೆ: ರೈತರಿಗೆ ಡಿಕೆಶಿ ಮಹತ್ವದ ಭರವಸೆ – Kannada News | DK Shivakumar Press conference details after All Party Meeting about Cauvery Water Dispute

ಬೆಂಗಳೂರು, (ಆಗಸ್ಟ್ 02): ಈ ಭಾನುವಾರ ರಾಜ್ಯದ ಗಮನಸೆಳೆಯುವ ಐತಿಹಾಸಿಕ ದಿನ. ಸಿಎಂ ಆಗಿ ಎರಡು ತಿಂಗಳು ಕಳೆದಿವೆ. ಸಿಎಂ ಜೊತೆಗೆ ನಾನು ಕೂಡ ಕಾವೇರಿ ಕಣಿವೆಯಲ್ಲಿ ಹುಟ್ಟಿಬೆಳೆದಿದ್ದೇನೆ.ನಾನು ಕೂಡ ರೈತನ ಮಗನಾಗಿದ್ದೇನೆ. ಕಾವೇರಿ ವಿಚಾರದಲ್ಲಿ ರೈತರ ರಕ್ಷಣೆಗೆ ನಾನು ಮತ್ತು ನಮ್ಮ ಸರಕಾರ ಬದ್ಧವಾಗಿದೆ. ರಾಜ್ಯದ ಏಳುವರೆ ಕೋಟಿ ಜನರಿಗೆ ಯಾವುದೇ ಅನುಮಾನ ಬೇಡ. ಎಲ್ಲ ಸಂದರ್ಭದಲ್ಲಿ ಜನರ ಹಿತ ಕಾಪಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ…

Read More

ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ ಹೊತ್ತಿ ಉರಿದ ಹಡಗು: ಐವರು ಸಜೀವ ದಹನ, 41 ಮಂದಿ ನಾಪತ್ತೆ – Kannada News | Indonesia Ship Fire: 5 Dead, 41 Missing Near Madura Island Coast

ಜಕಾರ್ತಾ,ಆಗಸ್ಟ್​ 02: : ದಕ್ಷಿಣ ಏಷ್ಯಾದ ಪ್ರಮುಖ ದ್ವೀಪ ರಾಷ್ಟ್ರವಾದ ಇಂಡೋನೇಷ್ಯಾದ ಮಧುರಾ ದ್ವೀಪದ ಕರಾವಳಿಯಲ್ಲಿ ಪ್ರಯಾಣಿಕರ ಹಡಗಿನಲ್ಲಿ ದಿಢೀರ್ ಭೀಕರ ಬೆಂಕಿ ಕಾಣಿಸಿಕೊಂಡು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 41 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ದೇಶದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ದೃಢಪಡಿಸಿದೆ. ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆಯೇ ನೌಕಾಪಡೆ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದು, ಕಾಣೆಯಾದವರಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮಧುರಾ ದ್ವೀಪದಿಂದ ಹೊರಟಿದ್ದ ಪ್ರಯಾಣಿಕರ ಹಡಗಿನಲ್ಲಿ…

Read More

Anil Ambani vs EPFO: ಇಪಿಎಫ್​ಒಗೆ ಅಂಬಾನಿಯಿಂದ 1,816 ಕೋಟಿ ರೂ ನಷ್ಟ; ಸಿಬಿಐನಿಂದ ಪ್ರಕರಣ ದಾಖಲು – Kannada News | Anil Ambani Reliance Capital allegedly cause loss for EPFO, CBI books case

ನವದೆಹಲಿ, ಆಗಸ್ಟ್ 2: ಕೇಂದ್ರ ತನಿಖಾ ದಳವಾದ ಸಿಬಿಐ (CBI) ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ (RCL) ಮತ್ತು ಅದರ ಮಾಜಿ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ₹1,816.22 ಕೋಟಿ ನಷ್ಟ ಉಂಟುಮಾಡಿದ ಆರೋಪದ ಮೇರೆಗೆ ಎಫ್‌ಐಆರ್ (FIR) ದಾಖಲಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅನುಮೋದನೆಯೊಂದಿಗೆ ಇಪಿಎಫ್‌ಒ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಸಿಬಿಐ ಈ ಕ್ರಮ ಕೈಗೊಂಡಿದೆ. ವಂಚನೆ, ಅಪರಾಧ ಸಂಚು ಹಾಗೂ ಇಪಿಎಫ್‌ಒಗೆ ನಷ್ಟ…

Read More

ಬಿಡದಿ ಟೌನ್‌ಶಿಪ್‌ ವಿರುದ್ಧ ಜೆಡಿಎಸ್‌ ರಣಕಹಳೆ: ದಳಪತಿಗಳ ಪಾದಯಾತ್ರೆಗೆ ಮರುದಿನಾಂಕ ಫಿಕ್ಸ್ – Kannada News | Nikhil Kumaraswamy Announces JD(S) Padayatra Against Bidadi Township Project from August 9

ನಿಖಿಲ್ ಕುಮಾರಸ್ವಾಮಿImage Credit source: tv9 kannada ರಾಮನಗರ, ಆಗಸ್ಟ್​​ 02: ಬಿಡದಿ ಟೌನ್​ಶಿಪ್ ಯೋಜನೆ (Bidadi Township) ವಿಚಾರವಾಗಿ ಪರ, ವಿರೋಧ ಮುಂದುವರೆದಿದೆ. ಇದೀಗ ಜೆಡಿಎಸ್​​ ಪಕ್ಷ ಪಾದಯಾತ್ರೆಗೆ ಸಜ್ಜಾಗಿದೆ. ‘ಆಗಸ್ಟ್ 9 ರಿಂದ 11ರವರೆಗೆ ಅಂದರೆ 3 ದಿನಗಳ ಕಾಲ ಬೈರಮಂಗಲದಿಂದ ಫ್ರೀಡಂಪಾರ್ಕ್​ವರೆಗೆ ಒಟ್ಟು 38 ಕಿ. ಮೀ ಪಾದಯಾತ್ರೆ ಮಾಡುತ್ತೇವೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ. ಪಾದಯಾತ್ರೆಯಲ್ಲಿ ದೇವೇಗೌಡ, ಕುಮಾರಸ್ವಾಮಿ ಭಾಗಿ ರಾಮನಗರದ ಖಾಸಗಿ…

Read More