ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ – Kannada News | Cauvery Row: water released for ensure kabini dam safety Says CM dk shivakumar

ಬೆಂಗಳೂರು, (ಆಗಸ್ಟ್ 02): ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಗಳು ವ್ಯಕ್ತವಾಗಿದ್ದು, ಕರ್ನಾಟಕ ಬಂದ್​​ಗೆ ಕರೆ ನೀಡಲಾಗಿದೆ.  ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಸರ್ವಪಕ್ಷ ಸಭೆಯ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಬಿನಿ ಜಲಾಶಯ (Kabini Dam) ಸಂಪೂರ್ಣ ಭರ್ತಿಯಾಗಿದೆ. ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ಎರಡರಿಂದ ಮೂರು ಅಡಿ ಕಾಯ್ದುಕೊಂಡು ನಿನ್ನೆ (ಆಗಸ್ಟ್ 01) ಮಧ್ಯಾಹ್ನದ ನಂತರ ನೀರನ್ನು ಹೊರಗೆ ಬಿಡಲಾಗಿದೆ ಇದುವರೆಗೆ ಯಾವುದೇ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿರಲಿಲ್ಲ. ಆದರೆ ಕಬಿನಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ನೀರು ಹರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆಶಿ ಮನವಿಗೂ ಡೋಂಟ್ ಕೇರ್: ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್ – Kannada News | Cauvery Water Row: Will Not Step back from Karnataka Bandh Says Vatal Nagaraj

ಮೈಸೂರು, (ಆಗಸ್ಟ್ 02): ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿಂದು ಸರ್ವಪಕ್ಷಗಳ ಸಭೆ ನಡೆದಿದ್ದು, ರೈತರ ಪರವಾಗಿ ತೀರ್ಮಾನ ಕೈಗೊಳ್ಳಲಾಗುವುದು. ಹೀಗಾಗಿ ಪ್ರತಿಭಟನೆ ಆಗಸ್ಟ್ 13ರ ಕರ್ನಾಟಕ ಬಂದ್​​ ಮಾಡದಂತೆ ಸಂಘಟನೆಗಳಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.ಅಖಂಡ ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ. ಸಿಎಂ ಡಿಕೆ ಶಿವಕುಮಾರ್ ಕೂಡ ಬರಲಿ, ವೀಳ್ಯದೆಲೆ ನೀಡಿ ಸ್ವಾಗತಿಸ್ತೇವೆ. ಮಳೆ ಆಗಿದೆ ಅಂತಾ ತಮಿಳುನಾಡಿಗೆ ನೀರು ಬಿಡಬೇಡಿ. ನಮ್ಮ ನಾಲೆಗಳಿಗೆ ನೀರು ಹರಿಸಬೇಕೆಂದು ಈ ಬಂದ್. ಕರ್ನಾಟಕ ಬಂದ್‌ನಿಂದ ಯಾರಿಗೂ ನಷ್ಟ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Dream Science: ಕನಸಿನಲ್ಲಿ ಕೊಳಕು ಅಥವಾ ಹರಿದ ಬಟ್ಟೆ ಧರಿಸಿದಂತೆ ಕಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು? – Kannada News | Dream Astrology: What Does it Mean to See Dirty or Torn Clothes in Your Dreams?

ಸ್ವಪ್ನ ಶಾಸ್ತ್ರದ (Dream Science) ಪ್ರಕಾರ, ಒಬ್ಬ ವ್ಯಕ್ತಿಯು ನಿದ್ದೆಯಲ್ಲಿ ಕಾಣುವ ಪ್ರತಿಯೊಂದು ಕನಸೂ ಆತನ ಭವಿಷ್ಯದಲ್ಲಿ ನಡೆಯಬಹುದಾದ ಶುಭ ಅಥವಾ ಅಶುಭ ಘಟನೆಗಳ ಸಂಕೇತವಾಗಿರುತ್ತದೆ. ಕೆಲವು ಕನಸುಗಳು ಮನಸ್ಸಿಗೆ ಮುದ ನೀಡಿದರೆ, ಇನ್ನು ಕೆಲವು ಆತಂಕವನ್ನು ಹುಟ್ಟುಹಾಕುತ್ತವೆ. ಅನೇಕ ಬಾರಿ ಜನರು ತಮ್ಮ ಕನಸಿನಲ್ಲಿ ಕೊಳಕು ಅಥವಾ ಹರಿದ ಬಟ್ಟೆಗಳನ್ನು ಧರಿಸಿದಂತೆ ಕಾಣುತ್ತಾರೆ. ಅಂತಹ ಕನಸುಗಳು ಶುಭವೇ ಅಥವಾ ಅಶುಭವೇ? ಅವು ಭವಿಷ್ಯದ ಬಗ್ಗೆ ಯಾವ ರೀತಿಯ ಎಚ್ಚರಿಕೆಯನ್ನು ನೀಡುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೊಳಕು ಬಟ್ಟೆ ಧರಿಸಿದಂತೆ ಕನಸು ಬಿದ್ದರೆ ಎಚ್ಚರ ವಹಿಸಿ:

ಕನಸಿನಲ್ಲಿ ಕೊಳಕು ಅಥವಾ ಮಲಿನವಾದ ಬಟ್ಟೆಗಳನ್ನು ಧರಿಸಿರುವಂತೆ ನಿಮ್ಮನ್ನು ನೀವೇ ಕಂಡರೆ, ಅದನ್ನು ಸ್ವಪ್ನ ಶಾಸ್ತ್ರದಲ್ಲಿ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಈ ಕನಸು ನೀವು ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂಬುದನ್ನು ಸೂಚಿಸುತ್ತದೆ. ನಿಮ್ಮ ನಡವಳಿಕೆ ಅಥವಾ ಸಮಾಜದಲ್ಲಿ ನಿಮ್ಮ ಗೌರವ-ಖ್ಯಾತಿಗೆ ಧಕ್ಕೆ ಬರಬಹುದು ಎಂಬುದರ ಮುನ್ಸೂಚನೆ ಇದಾಗಿದೆ. ಜೊತೆಗೆ, ನಿಮಗೆ ಅತ್ಯಂತ ಹತ್ತಿರವಿರುವವರಿಂದಲೇ ನೋವು ಅನುಭವಿಸುವ ಸಾಧ್ಯತೆಯಿರುತ್ತದೆ.

ಹರಿದ ಬಟ್ಟೆ ಕಾಣುವುದು ಆರ್ಥಿಕ ನಷ್ಟದ ಮುನ್ಸೂಚನೆ:

ನೀವು ಹರಿದ ಬಟ್ಟೆಗಳನ್ನು ಧರಿಸಿರುವಂತೆ ಕನಸು ಬಿದ್ದರೆ, ಅದು ಕೂಡ ಅಶುಭ ಸಂಕೇತವಾಗಿದೆ. ಇದು ಮುಖ್ಯವಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಎಂಬುದನ್ನು ಸೂಚಿಸುತ್ತದೆ. ಅನಗತ್ಯ ವೆಚ್ಚಗಳು ಹೆಚ್ಚಾಗುವುದು, ಕೈಗೊಂಡ ಪ್ರಮುಖ ಕೆಲಸಗಳು ಅಥವಾ ಯೋಜನೆಗಳು ವಿಫಲವಾಗುವುದು ಈ ಕನಸಿನ ಸಂಕೇತ. ಆದ್ದರಿಂದ ಹಣಕಾಸಿನ ವಹಿವಾಟು ಹಾಗೂ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಇನ್ನು ಬೇರೊಬ್ಬ ವ್ಯಕ್ತಿ ಕೊಳಕು ಬಟ್ಟೆಯಲ್ಲಿ ಕಾಣಿಸಿಕೊಂಡರೆ, ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ಜಾಗರೂಕರಾಗಿರಬೇಕು ಎಂದರ್ಥ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಬಟ್ಟೆ ಒಗೆಯುತ್ತಿರುವ ಕನಸು ಬಿದ್ದರೆ ಸಕಾರಾತ್ಮಕ ಬದಲಾವಣೆ:

ಕನಸಿನಲ್ಲಿ ಕೊಳಕು ಬಟ್ಟೆಗಳನ್ನು ಕಾಣುವುದು ಅಶುಭವಾದರೂ, ನೀವು ಬಟ್ಟೆಗಳನ್ನು ಒಗೆಯುತ್ತಿರುವಂತೆ (ತೊಳೆಯುತ್ತಿರುವಂತೆ) ಕನಸು ಕಂಡರೆ ಅದನ್ನು ಅತ್ಯಂತ ಶುಭ ಮತ್ತು ಸಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಸುದೀರ್ಘ ಕಾಲದಿಂದ ಇದ್ದ ಸಮಸ್ಯೆಗಳು, ಮನಃಶಾಂತಿ ಕೆಡಿಸಿದ್ದ ಒತ್ತಡಗಳು ಮತ್ತು ಸಂಘರ್ಷಗಳು ಕ್ರಮೇಣ ಬಗೆಹರಿಯಲಿವೆ ಎಂಬುದನ್ನು ಈ ಕನಸು ಸೂಚಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಹೊಸ ಆಶಾದಾಯಕರ ಆರಂಭ ಹಾಗೂ ಉತ್ತಮ ಅವಕಾಶಗಳ ಸೂಚನೆಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಳೆಗಾಲದಲ್ಲಿ ಹಾವುಗಳು ಮನೆ ಸುತ್ತ ಬರದಂತೆ ತಡೆಯಲು ಈ ಸುರಕ್ಷಾತ ಕ್ರಮಗಳನ್ನು ಅನುಸರಿಸಲೇಬೇಕು – Kannada News | Do these things to prevent snakes from entering your home during the rainy season

ಮಳೆಗಾಲದ ತಂಪಾದ ವಾತಾರಣ ಮನಸ್ಸಿಗೆ ಮುದ ನೀಡುವುದೇನೋ ನಿಜ ಆದರೆ ಈ ಸಮಯದಲ್ಲಿ ಸೊಳ್ಳೆ, ನೊಣ, ಕೀಟಗಳ ಕಾಟವೂ ಹೆಚ್ಚಾಗುತ್ತದೆ. ಹಾವುಗಳು (snake) ಕೂಡ ಇದಕ್ಕೆ ಹೊರತಿಲ್ಲ. ನಿರಂತರ ಮಳೆಯಿಂದಾಗಿ ಬಿಲಗಳು ಒದ್ದೆಯಾಗುತ್ತವೆ. ಆದ್ದರಿಂದ ಹಾವುಗಳು ಶುಷ್ಕ ಮತ್ತು ಸುರಕ್ಷಿತ ಸ್ಥಳವನ್ನು ಹಾಗೂ ಆಹಾರವನ್ನು ಹುಡುಕುತ್ತಾ ಜನವಸತಿ ಪ್ರದೇಶಗಳ ಬಳಿ ಹೋಗುತ್ತವೆ. ಮತ್ತು ಶೂ ಒಳಗೆ, ಹೆಲ್ಮೆಟ್‌ ಒಳಗೆ ಅವಿತು ಕುಳಿತುಬಿಡುತ್ತವೆ, ಇಲ್ಲವೇ ಮನೆಯೊಳಗೆಯೇ ಪ್ರವೇಶಿಸುತ್ತವೆ. ಹೀಗಿರುವಾಗ ಹೆಚ್ಚಿನವರು ಹಾವುಗಳು ಮನೆಯೊಳಗೆ ಬಾರದಂತೆ ನೋಡಿಕೊಳ್ಳಲು ಬೆಳ್ಳುಳ್ಳಿ, ಬೇವಿನ ಎಣ್ಣೆಯಂತಹ ಮನೆಮದ್ದುಗಳ ಮೊರೆ ಹೋಗುತ್ತಾರೆ. ಆದರೆ ಇವು ಅಷ್ಟೇನೂ ಪರಿಣಾಮಕಾರಿಯಲ್ಲ. ಈ ಮನೆಮದ್ದುಗಳ ಬದಲು ಈ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಾವುಗಳು ಮನೆ ಸುತ್ತ ಸುಳಿಯದಂತೆ ನೋಡಿಕೊಳ್ಳಬಹುದು.

ಹಾವುಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಲು ಪಾಲಿಸಬೇಕಾದ ಕ್ರಮಗಳು:

ಮನೆ ಮತ್ತು ಬಾಲ್ಕನಿಯಲ್ಲಿ ತ್ಯಾಜ್ಯ ಸಂಗ್ರಹವಾಗಲು ಬಿಡಬೇಡಿ: ಮಳೆಗಾಲದಲ್ಲಿ, ಹಳೆಯ ಮಡಕೆ, ಪಾಟ್‌ಗಳು, ಇಟ್ಟಿಗೆಗಳು, ರಟ್ಟಿನ ಪೆಟ್ಟಿಗೆಗಳನ್ನು ಬಾಲ್ಕನಿ ಮತ್ತು ಮನೆಯ ಹೊರ ಭಾಗದಲ್ಲಿ ಸಂಗ್ರಹಿಸಡಬೇಡಿ, ಜೊತೆಗೆ ಮರದಿಂದ ಬಿದ್ದಂತಹ ಒಣ ಎಲೆಗಳನ್ನು ಅಂಗಳದಲ್ಲಿ ಸಂಗ್ರಹವಾಗಲು ಬಿಡಬೇಡಿ. ಹೀಗೆ ತ್ಯಾಜ್ಯಗಳನ್ನು ಅಲ್ಲಲ್ಲಿ ಸಂಗ್ರಹಿಸುವುದರಿಂದ ಹಾವುಗಳು ತ್ಯಾಜ್ಯಗಳ ಒಳಗೆ ಬಂದು ಅವಿತುಕೊಳ್ಳುತ್ತವೆ. ಆದ್ದರಿಂದ, ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಅನಗತ್ಯ ವಸ್ತುಗಳನ್ನು ತೆಗೆದುಹಾಕಿ, ಬಾಲ್ಕನಿ, ಮನೆ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಸಿ. ಜೊತೆಗೆ  ನಿಮ್ಮ ಮನೆ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ನೀವು ಗಿಡಗಳಿದ್ದರೆ ಅವುಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ ಮತ್ತು ಅತಿಯಾದ ಹುಲ್ಲು ಅಥವಾ ಬಳ್ಳಿಗಳು ಬೆಳೆಯದಂತೆ ನೋಡಿಕೊಳ್ಳಿ. ನಿಮ್ಮ ತೋಟ ಅಥವಾ ಅಂಗಳದಲ್ಲಿ ನಿಯಮಿತವಾಗಿ ಹುಲ್ಲು ಕತ್ತರಿಸುತ್ತಿರಿ. ಯಾವಾಗಲೂ ಕಸವನ್ನು ಮುಚ್ಚಿಡಿ ಮತ್ತು ಆಗಾಗ್ಗೆ ವಿಲೇವಾರಿ ಮಾಡಿ.

ಮನೆಯಲ್ಲಿ ಬಿರುಬಿಟ್ಟ ಸ್ಥಳಗಳನ್ನು ಮುಚ್ಚಿ:  ಸಣ್ಣ ರಂಧ್ರಗಳು ಮತ್ತು ಬಿರುಕುಗಳು ಸಹ ಹಾವುಗಳ ಸಂತಾನೋತ್ಪತ್ತಿಯ ಸ್ಥಳವಾಗಬಹುದು. ಬಾಗಿಲುಗಳ ಕೆಳಗಿನ ಅಂತರಗಳು, ಗೋಡೆಗಳಲ್ಲಿನ ಬಿರುಕುಗಳು, ಒಳಚರಂಡಿ ಹೊರಹರಿವುಗಳು ಇವೆಲ್ಲದ ಮೂಲಕವೂ ಹಾವುಗಳು ಪ್ರವೇಶಿಸಬಹುದು. ಆದ್ದರಿಂದ ಬಿರುಕುಬಿಟ್ಟ ಗೋಡೆಗಳನ್ನು ಮುಚ್ಚಿ, ಯಾವಾಗಲೂ ಕಿಟಕಿ ಬಾಗಿಲುಗಳನ್ನು ಮುಚ್ಚಿಡಿ.

ನೀರು ಸಂಗ್ರಹವಾಗಲು ಬಿಡಬೇಡಿ: ಮಳೆಗಾಲದಲ್ಲಿ ಮಡಿಕೆ, ಬಕೆಟ್‌ಗಳು, ಟೈರ್‌ಗಳು ಅಥವಾ ಇತರ ಪಾತ್ರೆಗಳಲ್ಲಿ ನೀರು ಸಂಗ್ರಹವಾಗುವುದು ಸಾಮಾನ್ಯ. ಇದರಲ್ಲಿ ಸೊಳ್ಳೆಗಳನ್ನು ಸಂತಾನೋತ್ಪತ್ತಿ ಮಾಡುವುದಲ್ಲದೆ, ಇದು  ಕಪ್ಪೆಗಳು ಮತ್ತು ಕೀಟಗಳನ್ನು ಸಹ ಆಕರ್ಷಿಸುತ್ತದೆ. ಹಾವುಗಳು ಈ ಜೀವಿಗಳನ್ನು ಬೇಟೆಯಾಡುವುದರಿಂದ, ಅವು ಆಹಾರವನ್ನರಸುತ್ತಾ ನಿಮ್ಮ ಮನೆ ಬಳಿಯೂ ಬರಬಹುದು. ಆದ್ದರಿಂದ ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಆದಷ್ಟು ಮನೆ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ.  ಇದಲ್ಲದೆ ಇಲಿಗಳು ಇದ್ದರೂ ಹಾವುಗಳು ಬರುತ್ತದೆ. ಆದ್ದರಿಂದ ಸಾಕುಪ್ರಾಣಿಗಳ ಆಹಾರವನ್ನು ತೆರೆದ ಸ್ಥಳದಲ್ಲಿ ಇಡುವುದನ್ನು ತಪ್ಪಿಸಿ, ಕಸದ ಡಬ್ಬಿಗಳನ್ನು ಮುಚ್ಚಿಡಿ, ಯಾವುದೇ ಇಲಿ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ.

ಇದನ್ನೂ ಓದಿ: ಮಹಿಳೆಯರೇ… ಬೆಳಗೆದ್ದು ಅಡುಗೆ ಮನೆ ಸ್ವಚ್ಛಗೊಳಿಸುವಾಗ ಕ್ರಮಗಳನ್ನು ಅನುಸರಿಸಿ

ಮರಗಳ ಕೊಂಬೆಗಳು ಮತ್ತು ಬಳ್ಳಿಗಳನ್ನು ಸಮಯಕ್ಕೆ ಸರಿಯಾಗಿ ಕತ್ತರಿಸಿ: ಮರದ ಕೊಂಬೆಗಳು ನಿಮ್ಮ ಬಾಲ್ಕನಿ ಅಥವಾ ಟೆರೇಸ್ ತಲುಪಿದರೆ, ಅಥವಾ ನಿಮ್ಮ ಗೋಡೆಗಳ ಮೇಲೆ ದಟ್ಟವಾದ ಬಳ್ಳಿಗಳು ಬೆಳೆಯುತ್ತಿದ್ದರೆ, ಅವುಗಳನ್ನು ಕತ್ತರಿಸಬೇಕು. ಇಲ್ಲದಿದ್ದರೆ ಆ ಕೊಂಬೆಗಳು, ಬಳ್ಳಿಯ ಮೂಲಕ ಹಾವುಗಳು ನಿಮ್ಮ ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಯಾವುದೇ ಕೊಂಬೆಗಳು ಅಥವಾ ಬಳ್ಳಿಗಳು ನಿಮ್ಮ ಮನೆಯ ಟೆರೇಸ್‌ ಅಥವಾ ಗೋಡೆಗಳನ್ನು ಮುಟ್ಟದಂತೆ ನೋಡಿಕೊಳ್ಳಿ.

ಬೆಳಕಿನ ಬಗ್ಗೆಯೂ ಕಾಳಜಿ ವಹಿಸಿ: ಹಾವುಗಳು ಕತ್ತಲೆ ಮತ್ತು ತೇವಾಂಶವುಳ್ಳ ಸ್ಥಳಗಳನ್ನು ಬಯಸುತ್ತವೆ. ನಿಮ್ಮ ಮನೆಯ ಒಳಗೆ ಮತ್ತು ಹೊರಗೆ, ವಿಶೇಷವಾಗಿ ರಾತ್ರಿಯಲ್ಲಿ ದೀಪಗಳನ್ನು ಆನ್ ಮಾಡಿಡಿ. ಇದು ಹಾವುಗಳು ನಿಮ್ಮ ಮನೆಸುತ್ತ ಸುಳಿಯದಂತೆ ನೋಡಿಕೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

9 ರನ್‌, 4 ವಿಕೆಟ್.. ಜೋಫ್ರಾ ಆರ್ಚರ್ ಮಾರಕ ದಾಳಿಗೆ ತತ್ತರಿಸಿದ ಎದುರಾಳಿ – Kannada News | Jofra Archer’s Record Spell: Southern Brave Dominates London Spirit in The Hundred

ದಿ ಹಂಡ್ರೆಡ್‌ (The Hundred) ಲೀಗ್​ನ 16ನೇ ಪಂದ್ಯದಲ್ಲಿ ಇಂದು ಲಂಡನ್ ಸ್ಪಿರಿಟ್ ಮತ್ತು ಸದರ್ನ್ ಬ್ರೇವ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ತಂಡವನ್ನು ಸದರ್ನ್ ಬ್ರೇವ್ 5 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಸದರ್ನ್ ಬ್ರೇವ್ ತಂಡದ ಈ ಗೆಲುವಿನಲ್ಲಿ ಅನುಭವಿ ವೇಗದ ಬೌಲರ್ ಜೋಫ್ರಾ ಆರ್ಚರ್ (Jofra Archer) ಪ್ರಮುಖ ಪಾತ್ರ ವಹಿಸಿದರು. ಆರ್ಚರ್ ಈ ಪಂದ್ಯದಲ್ಲಿ ತಮ್ಮ ದಿ ಹಂಡ್ರೆಡ್ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಡನ್ ಸ್ಪಿರಿಟ್‌ ಕೇವಲ 105 ರನ್​ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸದರ್ನ್ ಬ್ರೇವ್ ಏಕಪಕ್ಷೀಯ ಗೆಲುವು ದಾಖಲಿಸಿತು.

9 ರನ್‌ ನೀಡಿ 4 ವಿಕೆಟ್ ಕಬಳಿಸಿದ ಆರ್ಚರ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಡನ್ ಸ್ಪಿರಿಟ್ ತಂಡವು ಆರ್ಚರ್ ದಾಳಿಗೆ ತತ್ತರಿಸಿತು. ತಂಡದ ಕೊನೆಯ ಐದು ವಿಕೆಟ್‌ಗಳು ಕೇವಲ ಎರಡು ರನ್‌ಗಳಿಗೆ ಬಿದ್ದವು. ಇದರ ಪರಿಣಾಮವಾಗಿ 103 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಲಂಡನ್ ಸ್ಪಿರಿಟ್ ತಂಡವು 105 ರನ್‌ಗಳಿಗೆ ಆಲೌಟ್ ಆಯಿತು. ಜೋಫ್ರಾ ಆರ್ಚರ್ ಲಂಡನ್ ಸ್ಪಿರಿಟ್ ತಂಡದ ಕೊನೆಯ ಐದು ವಿಕೆಟ್‌ಗಳಲ್ಲಿ ಮೂರನ್ನು ಪಡೆದರು.

20 ಎಸೆತಗಳಲ್ಲಿ 11 ಡಾಟ್ ಬಾಲ್ಸ್

ಜೋಫ್ರಾ ಆರ್ಚರ್ ಈ ಪಂದ್ಯದಲ್ಲಿ ಎಸೆದ 20 ಎಸೆತಗಳಲ್ಲಿ 11 ಡಾಟ್ ಬಾಲ್‌ಗಳನ್ನು ಎಸೆದು ಕೇವಲ 9 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ದಿ ಹಂಡ್ರೆಡ್‌ನಲ್ಲಿ ಇದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಆರ್ಚರ್ ಅವರ ಮಾರಕ ದಾಳಿಗೆ ನಲುಗಿದ ಲಂಡನ್ ಸ್ಪಿರಿಟ್ ಪೂರ್ಣ 100 ಎಸೆತಗಳನ್ನು ಆಡಲಾಗದೆ 92 ಎಸೆತಗಳಲ್ಲಿ ಆಲೌಟ್ ಆಯಿತು. ತಂಡದ ಪರ ಅನುಭವಿ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ 56 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಅವರು ಕೂಡ ಆರ್ಚರ್‌ಗೆ ಬಲಿಯಾದರು.

ಸದರ್ನ್ ಬ್ರೇವ್​ಗೆ 5 ವಿಕೆಟ್‌ ಜಯ

100 ಎಸೆತಗಳಲ್ಲಿ 106 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಸದರ್ನ್ ಬ್ರೇವ್ಸ್ 97 ಎಸೆತಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಜಯದ ದಡ ಮುಟ್ಟಿತು. ಸದರ್ನ್ ಬ್ರೇವ್ಸ್ ಪರ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ ಜೇಮೀ ಸ್ಮಿತ್ 36 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ 39 ರನ್ ಗಳಿಸಿ ಅಜೇಯರಾಗಿ ಉಳಿದರು. ಹೀಗಾಗಿ ಸದರ್ನ್ ಬ್ರೇವ್ಸ್ ಇನ್ನು ಮೂರು ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು. ಜೋಫ್ರಾ ಆರ್ಚರ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:48 pm, Sun, 2 August 26

Source link

Vastu Tips: ಅಡುಗೆಮನೆಗೆ ಯಾವ ದಿಕ್ಕು ಅತ್ಯುತ್ತಮ? ವಾಸ್ತು ಪ್ರಕಾರ ಮನೆ ಸಮೃದ್ಧಿಗೆ ಕಿಚನ್ ಹೀಗಿರಲಿ! – Kannada News | Vastu Tips for Kitchen: Best Direction, Gas Stove Placement, and Rules for Prosperity

ಅಡುಗೆಮನೆಗೆ ಯಾವ ದಿಕ್ಕು ಅತ್ಯುತ್ತಮ? Image Credit source: livspace.com

ಮನೆಯನ್ನು ನಿರ್ಮಿಸುವಾಗ ಪ್ರತಿಯೊಂದು ಕೋಣೆಯ ದಿಕ್ಕೂ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಕೇವಲ ಅಡುಗೆ ಮಾಡುವ ಸ್ಥಳ ಮಾತ್ರವಲ್ಲ, ಅದು ಮನೆಯ ಜನರ ಆರೋಗ್ಯ, ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಮೇಲೂ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಅಡುಗೆಮನೆಯನ್ನು ನಿರ್ಮಿಸುವಾಗ ಅದಕ್ಕೆ ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದು ಅತ್ಯಂತ ಅಗತ್ಯ.

ಆಗ್ನೇಯ ಮೂಲೆ ಅಡುಗೆಮನೆಗೆ ಅತ್ಯಂತ ಮಂಗಳಕರ:

ವಾಸ್ತು ಶಾಸ್ತ್ರದಲ್ಲಿ ಆಗ್ನೇಯ ದಿಕ್ಕನ್ನು (South-East) ‘ಅಗ್ನಿ ಕೋನ’ ಎಂದು ಕರೆಯಲಾಗುತ್ತದೆ. ಈ ದಿಕ್ಕನ್ನು ಅಗ್ನಿ ದೇವರು ಆಳುವುದರಿಂದ ಮತ್ತು ಅಡುಗೆಮನೆಯಲ್ಲಿ ಬೆಂಕಿಯ ಬಳಕೆಯು ಪ್ರಧಾನವಾಗಿರುವುದರಿಂದ, ಆಗ್ನೇಯ ಮೂಲೆಯನ್ನು ಅಡುಗೆಮನೆಗೆ ಅತ್ಯಂತ ಸೂಕ್ತ ಹಾಗೂ ಶುಭಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಕಿಚನ್ ಇರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ.

ಅಡುಗೆ ಮಾಡುವಾಗ ಯಾವ ದಿಕ್ಕಿಗೆ ಮುಖ ಮಾಡಬೇಕು?

ಅಡುಗೆಮನೆಯ ದಿಕ್ಕಿನಷ್ಟೇ ಗ್ಯಾಸ್ ಸ್ಟೌವ್ (ಒಲೆ) ಇಡುವ ಸ್ಥಳವೂ ಪ್ರಮುಖವಾದದ್ದು. ವಾಸ್ತು ಪ್ರಕಾರ, ಅಡುಗೆ ಮಾಡುವಾಗ ವ್ಯಕ್ತಿಯು ಪೂರ್ವ ದಿಕ್ಕಿಗೆ ಮುಖ ಮಾಡುವಂತೆ ಗ್ಯಾಸ್ ಸ್ಟೌವ್ ಅನ್ನು ಇರಿಸಬೇಕು. ಪೂರ್ವಕ್ಕೆ ಮುಖ ಮಾಡಿ ಅಡುಗೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ಮತ್ತು ಸಕಾರಾತ್ಮಕ ವಾತಾವರಣ ಉಂಟಾಗುತ್ತದೆ ಎಂಬ ಬಲವಾದ ನಂಬಿಕೆಯಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಅಡುಗೆಮನೆಯಲ್ಲಿ ನೀರು ಮತ್ತು ಬೆಂಕಿಯ ಸಮತೋಲನ ಹೇಗೆ?

ಬೆಂಕಿ ಮತ್ತು ನೀರು ಪರಸ್ಪರ ವಿರುದ್ಧ ಅಂಶಗಳಾಗಿವೆ. ಆದ್ದರಿಂದ, ಗ್ಯಾಸ್ ಸ್ಟೌವ್ ಮತ್ತು ಸಿಂಕ್ (ನೀರಿನ ಸ್ಥಳ) ಒಂದೇ ಹತ್ತಿರ ಇರುವುದನ್ನು ತಪ್ಪಿಸಬೇಕು. ಒಂದು ವೇಳೆ ಜಾಗದ ಕೊರತೆಯಿಂದ ಬೇರೆ ಬೇರೆ ಇಡಲು ಸಾಧ್ಯವಾಗದಿದ್ದರೆ, ಅವುಗಳ ನಡುವೆ ಕನಿಷ್ಠ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುವುದು ಸೂಕ್ತ. ಇದು ಅಡುಗೆಮನೆಯಲ್ಲಿ ಶಕ್ತಿಯ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಆಗ್ನೇಯ ಸಾಧ್ಯವಾಗದಿದ್ದರೆ ವಾಯುವ್ಯ (North-West) ಪರ್ಯಾಯ ಆಯ್ಕೆ:

ಮನೆಯ ವಾಸ್ತು ರಚನೆಯಿಂದಾಗಿ ಆಗ್ನೇಯ ದಿಕ್ಕಿನಲ್ಲಿ ಅಡುಗೆಮನೆ ನಿರ್ಮಿಸಲು ಸಾಧ್ಯವಾಗದಿದ್ದಲ್ಲಿ, ವಾಯುವ್ಯ ದಿಕ್ಕನ್ನು (North-West) ಎರಡನೇ ಉತ್ತಮ ಆಯ್ಕೆಯಾಗಿ ಪರಿಗಣಿಸಬಹುದು. ಆದಾಗ್ಯೂ, ವಾಸ್ತು ನಿಯಮಗಳ ಪ್ರಕಾರ ಆಗ್ನೇಯವೇ ಪ್ರಥಮ ಮತ್ತು ಶ್ರೇಷ್ಠ ಆದ್ಯತೆಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

PPF: ದೀರ್ಘಾವಧಿ ಹೂಡಿಕೆ ಸ್ಕೀಮ್ ಪಿಪಿಎಫ್​ನಲ್ಲಿ ಮಾಡಬಾರದ 5 ತಪ್ಪುಗಳಿವು – Kannada News | PPF, 5 mistakes people should avoid while investing in Public Provident Fund

ಆದಾಯ ತೆರಿಗೆ ಪಾವತಿದಾರರ ಪಾಲಿಗೆ ನೆಚ್ಚಿನ ಹೂಡಿಕೆ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF) ಒಂದು. ಇದು ದೀರ್ಘಕಾಲೀನ ಉಳಿತಾಯ ನೀಡುವ ಮತ್ತು ತೆರಿಗೆ ಲಾಭವನ್ನೂ ತಂದುಕೊಡುವ ಸ್ಕೀಮ್. 15 ವರ್ಷಗಳ ಲಾಕ್-ಇನ್ ಅವಧಿ ಇರುವ ಪಿಪಿಎಫ್ ಯೋಜನೆ ವಾರ್ಷಿಕ ಶೇ. 7.1 ಬಡ್ಡಿ ನೀಡುತ್ತದೆ. ಇದರ ಮೇಲಿನ ಹೂಡಿಕೆ, ಬಡ್ಡಿ ಹಾಗೂ ಮೆಚ್ಯೂರಿಟಿ ಹಣ ಇವೆಲ್ಲವೂ ಸಂಪೂರ್ಣ ತೆರಿಗೆ ವಿನಾಯಿತಿ ಹೊಂದಿರುತ್ತವೆ. ಈ ಯೋಜನೆಯಲ್ಲಿ ಹೂಡಿಕೆದಾರರು ಬೇರೆ ಬೇರೆ ಕಾರಣಕ್ಕೆ ಕೆಲ ತಪ್ಪುಗಳನ್ನು ಮಾಡುವ ಸಾಧ್ಯತೆ ಇದೆ. ಈ ತಪ್ಪುಗಳ ವಿಚಾರದಲ್ಲಿ ಎಚ್ಚರ ವಹಿಸಬೇಕು.

1. ವಾರ್ಷಿಕ ಕನಿಷ್ಠ ₹500 ಹೂಡಿಕೆ ಮಾಡದಿರುವುದು

PPF ಖಾತೆ ಚಾಲ್ತಿಯಲ್ಲಿರಲು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ₹500 ಜಮಾ ಮಾಡುವುದು ಕಡ್ಡಾಯ. ಹಣಕಾಸು ವರ್ಷದಲ್ಲಿ ಈ ಕನಿಷ್ಠ ಮೊತ್ತವನ್ನು ಜಮಾ ಮಾಡದಿದ್ದರೆ ಖಾತೆಯು ಇನ್ಆಕ್ಟಿವ್ (Inactive/Lapsed) ಆಗುತ್ತದೆ. ಇದರಿಂದ ಹಣ ಹಿಂಪಡೆಯುವಿಕೆ ಅಥವಾ ಸಾಲ ಸೌಲಭ್ಯ ಸ್ಥಗಿತಗೊಳ್ಳುತ್ತದೆ.

ಪರಿಹಾರ: ಸಂಬಂಧಪಟ್ಟ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗೆ ಭೇಟಿ ನೀಡಿ, ಬಾಕಿ ಮೊತ್ತ ಹಾಗೂ ದಂಡದ ಶುಲ್ಕ ಪಾವತಿಸಿ ಖಾತೆಯನ್ನು ಮರುಸಕ್ರಿಯಗೊಳಿಸಬಹುದು.

ಇದನ್ನೂ ಓದಿ: ಇಪಿಎಫ್​ಒಗೆ ಅಂಬಾನಿಯಿಂದ 1,816 ಕೋಟಿ ರೂ ನಷ್ಟ; ಸಿಬಿಐನಿಂದ ಪ್ರಕರಣ ದಾಖಲು

2. ತಿಂಗಳ 5ನೇ ತಾರೀಖಿನ ನಂತರ ಹೂಡಿಕೆ ಮಾಡುವುದು

ಪಿಪಿಎಫ್​ನಲ್ಲಿ ವರ್ಷಕ್ಕೆ 1.5 ಲಕ್ಷ ರೂ ಹಣವನ್ನು ಒಮ್ಮೆಗೇ ಜಮೆ ಮಾಡಬಹುದು. ಅಥವಾ ಪ್ರತೀ ತಿಂಗಳು ಇಂತಿಷ್ಟು ಹಣವೆಂದು ಸೇರಿಸುತ್ತಾ ಹೋಗಬಹುದು. PPF ನಲ್ಲಿ ಬಡ್ಡಿಯನ್ನು ತಿಂಗಳ 5ನೇ ತಾರೀಖಿನಿಂದ ಕೊನೆಯ ದಿನದವರೆಗಿನ ಕನಿಷ್ಠ ಬ್ಯಾಲೆನ್ಸ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ನೀವು ಪ್ರತಿ ತಿಂಗಳ 5ನೇ ತಾರೀಖಿನ ಒಳಗಾಗಿ ಹಣ ಜಮಾ ಮಾಡಿದರೆ ಮಾತ್ರ ಅದೇ ತಿಂಗಳ ಬಡ್ಡಿ ಲೆಕ್ಕಾಚಾರಕ್ಕೆ ಸೇರ್ಪಡೆಯಾಗುತ್ತದೆ.

ಆಗಸ್ಟ್ 5ರ ನಂತರ ಜಮಾ ಮಾಡಿದರೆ, ಆ ಹಣಕ್ಕೆ ಆಗಸ್ಟ್ ತಿಂಗಳ ಬಡ್ಡಿ ಸಿಗುವುದಿಲ್ಲ; ಅದರ ಲೆಕ್ಕಾಚಾರ ಸೆಪ್ಟೆಂಬರ್‌ನಿಂದ ಪ್ರಾರಂಭವಾಗುತ್ತದೆ. ಅಂದರೆ, ಒಂದು ತಿಂಗಳ ಬಡ್ಡಿ ಆದಾಯ ಕೈತಪ್ಪುತ್ತದೆ.

3. ವಾರ್ಷಿಕ ₹1.5 ಲಕ್ಷದ ಮಿತಿಗಿಂತ ಹೆಚ್ಚು ಜಮಾ ಮಾಡುವುದು

ಒಂದು ಹಣಕಾಸು ವರ್ಷದಲ್ಲಿ PPF ಗೆ ಗರಿಷ್ಠ ₹1.5 ಲಕ್ಷ ಹೂಡಿಕೆ ಮಾಡಲು ಮಾತ್ರ ಅವಕಾಶವಿದೆ. ₹1.5 ಲಕ್ಷಕ್ಕಿಂತ ಹೆಚ್ಚುವರಿಯಾಗಿ ಜಮಾ ಮಾಡಿದ ಮೊತ್ತಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ ಮತ್ತು Section 80C ಅಡಿಯಲ್ಲಿ ತೆರಿಗೆ ವಿನಾಯಿತಿಯೂ ಸಿಗುವುದಿಲ್ಲ. ನಿಮ್ಮ ಸ್ವಂತ ಖಾತೆ ಮತ್ತು ನಿಮ್ಮ ಅಪ್ರಾಪ್ತ (ಮೈನರ್) ಮಕ್ಕಳ ಖಾತೆ ಎರಡನ್ನೂ ಸೇರಿಸಿ ಒಟ್ಟು ಮಿತಿ ₹1.5 ಲಕ್ಷ ಮಾತ್ರವಾಗಿರಬೇಕು.

4. ಒಂದಕ್ಕಿಂತ ಹೆಚ್ಚು ಸ್ವಂತ PPF ಖಾತೆಗಳನ್ನು ತೆರೆಯುವುದು

ಕೇಂದ್ರ ಹಣಕಾಸು ಸಚಿವಾಲಯದ ನಿಯಮಾವಳಿಗಳ ಪ್ರಕಾರ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಒಂದೇ ಒಂದು PPF ಖಾತೆಯನ್ನು ಮಾತ್ರ ಹೊಂದಿರಬಹುದು (ಜಂಟಿ/Joint Accounts ಗೆ ಅವಕಾಶವಿಲ್ಲ). ಬೇರೆ ಬೇರೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗಳಲ್ಲಿ PAN ಕಾರ್ಡ್ ಬಳಸಿ ಎರಡನೇ ಖಾತೆ ತೆರೆದರೆ, ಅದನ್ನು ಅಕ್ರಮ (Irregular) ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿ ಖಾತೆಗೆ ಯಾವುದೇ ಬಡ್ಡಿ ದೊರೆಯುವುದಿಲ್ಲ.

ಇದನ್ನೂ ಓದಿ: EPFO rules: 2-3 ವರ್ಷ ಕೆಲಸ ಇಲ್ಲದಿದ್ದಾಗ ಹಳೆಯ ಇಪಿಎಫ್ ಖಾತೆ ಏನಾಗುತ್ತದೆ?

5. ನಿಯಮಗಳು ತಿಳಿಯದೆ ಅವಧಿಗೂ ಮುನ್ನ ಖಾತೆ ಮುಚ್ಚುವುದು

PPF 15 ವರ್ಷಗಳ ಯೋಜನೆ. ಆದರೆ, ಖಾತೆ ತೆರೆದು 5 ಹಣಕಾಸು ವರ್ಷಗಳು ಪೂರ್ಣಗೊಂಡ ನಂತರ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವಧಿಗೆ ಮುನ್ನ ಖಾತೆ ಮುಚ್ಚಲು (Premature Closure) ಅವಕಾಶವಿದೆ.

ಖಾತೆದಾರರು/ಕುಟುಂಬಸ್ಥರ ಗಂಭೀರ ಕಾಯಿಲೆಯ ಚಿಕಿತ್ಸೆ, ಉನ್ನತ ಶಿಕ್ಷಣ, ಅಥವಾ ವಿದೇಶಿ ಪೌರತ್ವ ಪಡೆಯುವ ಸಂದರ್ಭದಲ್ಲಿ ಮಾತ್ರ ಪ್ರೀಮೆಚ್ಯೂರ್ ಆಗಿ ಪಿಪಿಎಫ್ ವಿತ್​ಡ್ರಾ ಮಾಡಬಹುದು.

ಅವಧಿಗೆ ಮುನ್ನ ಮುಚ್ಚಿದರೆ, ನೀವು ಇಲ್ಲಿಯವರೆಗೆ ಗಳಿಸಿದ ಬಡ್ಡಿ ದರದಲ್ಲಿ ಶೇ. 1 ರಷ್ಟು ಕಡಿತ (Penalty) ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ, ರೈಲು ಸಂಚಾರ ಸ್ಥಗಿತ! – Kannada News | Hassan Rains Trigger Sakleshpur Landslide: Railway Tracks Blocked, Trains Halted

ಹಾಸನ, ಆಗಸ್ಟ್​​ 02: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಸಕಲೇಶಪುರ ತಾಲೂಕಿನ ಯಡಕುಮಾರಿ ಟು ಶಿರವಾಗಿಲು ನಡುವಿನ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿರುವಂತಹ ಘಟನೆ ನಡೆದಿದೆ. ರೈಲ್ವೆ ಹಳಿ ಪಕ್ಕದಲ್ಲಿ ಮೇಲಿನಿಂದ‌ ನೀರು ಬೀಳುತ್ತಿದ್ದು, ಇಡೀ ಸ್ಥಳ ಸಂಪೂರ್ಣ ಕೆಸರುಮಯವಾಗಿದೆ. ಧಾರಾಕಾರ ಮಳೆ ನಡುವೆಯೂ ರೈಲ್ವೆ ಸಿಬ್ಬಂದಿ ಹಿಟಾಚಿ ಯಂತ್ರಗಳ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ನಡೆಸಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಮತ್ತೆ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತೆರವು ಕಾರ್ಯ ಮುಗಿಯುವವರೆಗೆ ಈ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ರೈಲ್ವೆ ಇಲಾಖೆ ಸಂಪೂರ್ಣವಾಗಿ ಬಂದ್ ಮಾಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜೀ ಎಂಟರ್ಟೈನ್​​ಮೆಂಟ್​​ಗೆ ಭಾರಿ ದಂಡ ಮತ್ತು ನಿಷೇಧ ಹೇರಿದ ವಿಧಿಸಿದ ಸೆಬಿ – Kannada News | SEBI imposes penalty to Zee Entertainment and also banned it from share market

ಜೀ ಸಂಸ್ಥೆ (ZEEL) ಭಾರತದ ಬಲು ಜನಪ್ರಿಯ ಮತ್ತು ಬಹು ದೊಡ್ಡ ಎಂಟರ್ಟೈನ್​​ಮೆಂಟ್ ಸಂಸ್ಥೆ. ಹಲವಾರು ಭಾಷೆಗಳಲ್ಲಿ ಜನಪ್ರಿಯ ಟಿವಿ ಚಾನೆಲ್ಗಳು, ಸಿನಿಮಾ ನಿರ್ಮಾಣ ಸಂಸ್ಥೆ, ಒಟಿಟಿ, ಮಾಧ್ಯಮ ಸಂಸ್ಥೆ, ಮ್ಯೂಸಿಕ್ ಸಂಸ್ಥೆ ಇನ್ನೂ ಹಲವನ್ನು ಜೀ ಹೊಂದಿದೆ. ಆದರೆ ಇದೀಗ ಜೀ ಎಂಟರ್ಟೈನ್​​ಮೆಂಟ್ ಮೇಲೆ ಸೆಬಿಯು ಭಾರಿ ದೊಡ್ಡ ದಂಡವನ್ನು ಹಾಕಿರವುದು ಮಾತ್ರವಲ್ಲದೆ ಜೀ ಸಂಸ್ಥೆಗೆ ನಿಷೇಧವನ್ನು ಸಹ ಹೇರಿದೆ.

ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI), ಭದ್ರತಾ ಕಾನೂನುಗಳ ಉಲ್ಲಂಘನೆ ಮತ್ತು ಅಧಿಕೃತ ಅನುಮತಿಯಿಲ್ಲದೆ ಕಂಪನಿಯ ಆಸ್ತಿಯನ್ನು ಅಡಮಾನವಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 1.48 ಕೋಟಿ ರೂಪಾಯಿಗಳ (14.8 ಮಿಲಿಯನ್ ರೂಪಾಯಿ) ಭಾರಿ ದಂಡವನ್ನು ‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ ಗೆ ವಿಧಿಸಿದೆ. ಅಲ್ಲದೆ ಕಂಪೆನಿ ಮತ್ತು ಅದರ ಕೆಲವು ಪ್ರಮುಖರ ಮೇಲೆ ನಿಷೇಧವನ್ನು ಹೇರಿದೆ.

ಏನಿದು ಪ್ರಕರಣ?

ಹೈದರಾಬಾದ್‌ನಲ್ಲಿರುವ ಝೀ ಎಂಟರ್‌ಟೈನ್‌ಮೆಂಟ್ ಕಂಪನಿಗೆ ಸೇರಿದ ಭೂಮಿಯನ್ನು, ಎಸೆಲ್ ಗ್ರೂಪ್‌ನ (Essel Group) ಇತರೆ ಕಂಪನಿಗಳು ಪಡೆದಿದ್ದ ಸುಮಾರು 726 ಕೋಟಿ ರೂ.ಗಳ ಸಾಲಕ್ಕೆ ಯಾವುದೇ ಅಧಿಕೃತ ಅನುಮೋದನೆ ಪಡೆಯದೆ ಹೆಚ್ಚುವರಿ ಭದ್ರತೆಯಾಗಿ (ಕೊಲ್ಯಾಟರಲ್) ಅಡಮಾನವಿಡಲಾಗಿತ್ತು. ಈ ಸಂಬಂಧ ನಡೆಸಿದ ಸುದೀರ್ಘ ತನಿಖೆಯ ಬಳಿಕ ಸೆಬಿ ಶುಕ್ರವಾರ ರಾತ್ರಿ ಸುಮಾರು 150 ಪುಟಗಳ ಅಂತಿಮ ಆದೇಶವನ್ನು ಹೊರಡಿಸಿದೆ. ಆದೇಶದಂತೆ ‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ (ZEEL) ದಂಡದ ಜೊತೆಗೆ ನಿರ್ದಿಷ್ಟ ಅವಧಿಯ ವರೆಗೆ ನಿಷೇಧವನ್ನು ಸಹ ಹೇರಲಾಗಿದೆ.

ಇದನ್ನೂ ಓದಿ:ಅತಿಯಾಗಿ ಟಿವಿ ನೋಡ್ತೀರಾ?: ನಿಮ್ಮ ಮೆದುಳು ಕುಗ್ಗಬಹುದು ಹುಷಾರ್!; ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಸತ್ಯ

ಜೀ ಎಂಟರ್ಟೈನ್​​ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (MD & CEO) ಪುನೀತ್ ಗೋಯೆಂಕಾ ಮತ್ತು ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಎಮೆರಿಟಸ್ ಸುಭಾಷ್ ಚಂದ್ರ ಅವರಿಗೆ ಸೆಬಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ಒಂದು ವರ್ಷದ ಕಾಲಾವಧಿಗೆ ನಿರ್ಬಂಧ ವಿಧಿಸಿದೆ. ಕಂಪನಿಗೂ ಕೂಡ ಎರಡು ತಿಂಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿಷೇಧ ಹೇರಲಾಗಿದೆ.

ಕಂಪನಿಯ ಆಸ್ತಿಗಳನ್ನು ಹೂಡಿಕೆದಾರರ ಹಿತಾಸಕ್ತಿಗೆ ವಿರುದ್ಧವಾಗಿ, ಸರಿಯಾದ ಷೇರುದಾರರ ಅಥವಾ ಆಡಿಟ್ ಸಮಿತಿಯ ಅನುಮೋದನೆ ಪಡೆಯದೆ ಪ್ರಮೋಟರ್‌ಗಳ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಸೆಬಿ ಮಾಡಿರುವ ತನಿಖೆಯಿಂದ ತಿಳಿದುಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ ಎಸೆಲ್ ಗ್ರೂಪ್‌ನ ಘಟಕಗಳಿಗೆ ನೆರವಾಗಲು ಕಂಪನಿಯ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸೆಬಿ ತನ್ನ ಆದೇಶದಲ್ಲಿ ಕಟುವಾಗಿ ಟೀಕಿಸಿದೆ.

ಜೀ ಎಂಟರ್‌ಟೈನ್‌ಮೆಂಟ್ (ZEEL)ಗೆ 30 ಲಕ್ಷ ರೂಪಾಯಿ ದಂಡ ಮತ್ತು 2 ತಿಂಗಳು ಷೇರು ಮಾರುಕಟ್ಟೆ ನಿಷೇಧ. ಸಂಸ್ಥೆಯ ಸಂಸ್ಥಾಪಕ ಮತ್ತು ಚೇರ್​​ಮನ್ ಸುಭಾಷ್ ಚಂದ್ರ ಅವರಿಗೆ 60 ಲಕ್ಷ ರೂ. ದಂಡ ಮತ್ತು 1 ವರ್ಷ ಷೇರು ಮಾರುಕಟ್ಟೆಯಿಂದ ನಿಷೇಧ. ಸಂಸ್ಥೆಯ ವ್ಯವಸ್ಥಾಪಕ ಮತ್ತು ಸಿಇಓ ಪುನೀತ್ ಗೋಯೆಂಕಾ ಅವರಿಗೆ 58 ಲಕ್ಷ ರೂಪಾಯಿ ದಂಡ ಮತ್ತು 1 ವರ್ಷ ಷೇರು ಮಾರುಕಟ್ಟೆಗೆ ನಿಷೇಧವನ್ನು ಸೆಬಿ ಹೇರಿದೆ.

‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ ಷೇರು ದರ ಈಗ 114.8 ರೂಪಾಯಿಗಳಿದೆ. ಸೋಮವಾರ ಮಾರುಕಟ್ಟೆ ತೆರೆದ ಬಳಿಕ ಷೇರು ದರ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಜೀ ಮೀಡಿಯಾ ಕಾರ್ಪೊರೇಷನ್ ಲಿಮಿಟೆಡ್​​ನ ಷೇರು ದರ 7.54 ರೂಪಾಯಿಗಳಿದೆ. ಕಳೆದ ಕೆಲವು ವರ್ಷಗಳಿಂದಲೂ ಈ ಷೇರು ಕಳಪೆ ಪ್ರದರ್ಶನವನ್ನೇ ತೋರುತ್ತಾ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೈಯಲ್ಲಿ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು – Kannada News | Police Win Hearts by Caring for 8 Month Old Baby While mother writing Constable exam In bengaluru

ಬೆಂಗಳೂರು, (ಆಗಸ್ಟ್ 02): ಇದು ಕನಸುಗಳ ಬೆನ್ನತ್ತಿ ಬಂದ ಬಾಣಂತಿಯೊಬ್ಬಳ ಹೋರಾಟದ ಕಥೆ. ಒಂದೆಡೆ ಬದುಕಿಗೆ ಭದ್ರತೆ ನೀಡುವ ಸರ್ಕಾರಿ ಉದ್ಯೋಗದ ಹಂಬಲ, ಮತ್ತೊಂದೆಡೆ ಎದೆಯ ಮೇಲಿದ್ದ ಎಂಟು ತಿಂಗಳ ಹಸುಗೂಸಿನ ಮಮತೆ. ಈ ಮಾನವೀಯತೆಗೆ ಬೆಂಗಳೂರಿನ ಕೃಷ್ಣಾ ಕಾಲೇಜು ಪರೀಕ್ಷಾ ಕೇಂದ್ರ ಸಾಕ್ಷಿಯಾಗಿದೆ. ಹೌದು….ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ಬಂದ ತಾಯಿಯೊಬ್ಬರು ತನ್ನ ಎಂಟು ತಿಂಗಳ ಮಗುವನ್ನು ಹೊರಗೆ ಬಿಡಬೇಕಾಯಿತು. ತಾಯಿಗಾಗಿ ಅಳುತ್ತಿದ್ದ ಮಗುವನ್ನು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಮಡಿಲಿಗೆ ತೆಗೆದುಕೊಂಡು, ಜೋಗುಳ ಹಾಡಿ ಆರೈಕೆ ಮಾಡಿದರು. ಈ ಮಾನವೀಯ ಘಟನೆಯು ತಾಯಿ ನಿರಾಳವಾಗಿ ಪರೀಕ್ಷೆ ಬರೆಯಲು ನೆರವಾಯಿತು.

ಪರೀಕ್ಷೆ ಬರೆಯಲು ಕೃಷ್ಣಾ ಕಾಲೇಜಿಗೆ ಅಭ್ಯರ್ಥಿಯೊಬ್ಬರು ತಮ್ಮ 8 ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಆದರೆ, ಪರೀಕ್ಷಾ ಕೊಠಡಿಗೆ ಹೋಗುವ ಕ್ಷಣದಲ್ಲಿ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ಅಳು ನಿಲ್ಲಿಸಿಲ್ಲ. ಪರೀಕ್ಷೆ ಬರೆಯಬೇಕೋ ಅಥವಾ ಮಗುವನ್ನು ನೋಡಿಕೊಳ್ಳಬೇಕೋ ಎಂದು ಸಂಕಟಪಡುತ್ತಿದ್ದ ತಾಯಿಯನ್ನು ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಮಹಿಳಾ ಸಿಬ್ಬಂದಿ ಗಮನಿಸಿ ನೀವು ನಿಶ್ಚಿಂತೆಯಿಂದ ಪರೀಕ್ಷೆ ಬರೆಯಿರಿ, ಮಗುವನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ” ಎಂದು ಬಟ್ಟೆ ತೊಟ್ಟಿಲು ಕಟ್ಟಿ ಹಾರೈಕೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version