ಕಾವೇರಿ ವಿವಾದ: ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ; ಕಾಂಗ್ರೆಸ್ ಎಂಪಿ ಮಾಣಿಕಂ ಟ್ಯಾಗೋರ್ – Kannada News | Cauvery Water Dispute: Karnataka and Tamil Nadu Are Not India and Pakistan, Says Congress MP Manickam Tagore

ಬೆಂಗಳೂರು, ಆಗಸ್ಟ್​​ 02: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುವಂತೆ CWMA ನೀಡಿರುವ ಆದೇಶಕ್ಕೆ ಸದ್ಯ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್​​, ‘ತಮಿಳುನಾಡು ಮತ್ತು ಕರ್ನಾಟಕ ಭಾರತ-ಪಾಕಿಸ್ತಾನವಲ್ಲ, ಕರ್ನಾಟಕ ಸಿಎಂ ಜತೆ ತಮಿಳುನಾಡು ಸಿಎಂ ಚರ್ಚಿಸುವುದೇ ಪರಿಹಾರ’ ಎಂದು ಹೇಳಿದ್ದಾರೆ.

ತಮಿಳುನಾಡಿನ ಹಿತಾಸಕ್ತಿಯೇ ಮುಖ್ಯ: ಮಾಣಿಕಂ ಟ್ಯಾಗೋರ್​​

ಕಾವೇರಿ ನೀರು ಹಂಚಿಕೆ ವಿಚಾರ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಜಟಾಪಟಿ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಮುಖ್ಯಮಂತ್ರಿಗೆ ತಮ್ಮ ರಾಜ್ಯದ ಹಿತಾಸಕ್ತಿ ಹೇಗೆ ಮುಖ್ಯವೋ, ಅದೇ ರೀತಿ ನಮಗೆ ತಮಿಳುನಾಡಿನ ಹಿತಾಸಕ್ತಿಯೇ ಅತ್ಯಂತ ಮುಖ್ಯ’ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಒಗ್ಗಟ್ಟು, ತಮಿಳುನಾಡಿನಲ್ಲಿ ಭಿನ್ನಮತ

‘ಕಾವೇರಿ ವಿಷಯಕ್ಕೆ ಬಂದರೆ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ನಾಯಕರು ಒಂದಾಗಿ ನಿಲ್ಲುತ್ತಾರೆ. ಆದರೆ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಪ್ರತ್ಯೇಕವಾಗಿ ನ್ಯಾಯಾಲಯದ ಮೊರೆ ಹೋಗುತ್ತಿವೆ. ಈಗಾಗಲೇ ತಮಿಳುನಾಡು ವಿಧಾನಸಭೆಯಲ್ಲಿ ಎಲ್ಲಾ ಪಕ್ಷಗಳು ಒಮ್ಮತದಿಂದ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಿವೆ. ಹೀಗಿರುವಾಗ ಈಗ ಮತ್ತೆ ಸರ್ವಪಕ್ಷ ಸಭೆ ಕರೆಯಬೇಕೆಂದು ಕೇಳುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ತಮಿಳುನಾಡಿನ ರಾಜಕೀಯ ಪಕ್ಷಗಳ ಕಚ್ಚಾಟ

‘ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ನೀರು ತರುವುದಕ್ಕಿಂತ ಹೆಚ್ಚಾಗಿ ರಾಜ್ಯದ ಒಳಗಿನ ಆಂತರಿಕ ರಾಜಕೀಯವೇ ಜಾಸ್ತಿಯಾಗಿದೆ. ತಮಿಳುನಾಡಿನ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟ ಹೆಚ್ಚುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Cauvery Water Dispute: ‘ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ, ಆದರೆ ಡ್ಯಾಂ ತುಂಬುವ ಹಂತದಲ್ಲಿದೆ’ ಎಂದ ಡಿ.ಕೆ ಶಿವಕುಮಾರ್

ಇನ್ನು ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್. ಅವರ ಹಾದಿಯಲ್ಲೇ ಪ್ರಸ್ತುತ ತಮಿಳುನಾಡು ಸಿಎಂ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕರ್ನಾಟಕ ಸಿಎಂ ಡಿಕೆ ಶಿವಕುಮಾರ್​​ ಮತ್ತು ತಮಿಳುನಾಡು ಸಿಎಂ ವಿಜಯ್​​ ಮಾತುಕತೆಗೆ ತಮಿಳುನಾಡು ಕಾಂಗ್ರೆಸ್​​ನ ಸಂಪೂರ್ಣ ಬೆಂಬಲವಿದೆ’ ಎಂದಿದ್ದಾರೆ.

ರಾಹುಲ್ ಗಾಂಧಿ ತಮಿಳುನಾಡಿಗೆ ಬಂದ ತಕ್ಷಣ ನೀರು ಬಂದಿದೆ: ಮಾಣಿಕಂ ಟ್ಯಾಗೋರ್​​

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಅವರು ತಮಿಳುನಾಡಿಗೆ ಭೇಟಿ ನೀಡಿದ ತಕ್ಷಣವೇ ನೀರು ಬಂದಿದೆ. ಅವರು ಮತ್ತೆ ರಾಜ್ಯಕ್ಕೆ ಬಂದಾಗ ಇನ್ನೂ ಹೆಚ್ಚಿನ ಮಳೆಯಾಗಲಿದೆ’ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IBPS CSA Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ 11,403 ಹುದ್ದೆಗಳ ಬಂಪರ್ ನೇಮಕಾತಿ; ಕರ್ನಾಟಕದಲ್ಲೇ 1,414 ಹುದ್ದೆಗಳು! – Kannada News | IBPS CSA Recruitment 2026: Apply Online for 11,403 Customer Service Associate Posts; 1,414 Vacancies in Karnataka

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಸಿಹಿ ಸುದ್ದಿ ನೀಡಿದೆ. ದೇಶದ ಪ್ರಮುಖ ಸರ್ಕಾರಿ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಬೃಹತ್ 11,403 ಗ್ರಾಹಕ ಸೇವಾ ಸಹವರ್ತಿ (Customer Service Associate – CSA) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. 2024 ರಲ್ಲಿ IBPS ಕ್ಲರ್ಕ್ ಹುದ್ದೆಯನ್ನು ‘ಗ್ರಾಹಕ ಸೇವಾ ಸಹವರ್ತಿ (CSA)’ ಎಂದು ಮರುನಾಮಕರಣ ಮಾಡಲಾಗಿರುವುದು ಗಮನಿಸಬೇಕಾದ ವಿಷಯ. ಆಸಕ್ತರು ಆಗಸ್ಟ್ 21 ರವರೆಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಅಭ್ಯರ್ಥಿಗಳಿಗೆ ಸುವರ್ಣಾವಕಾಶ:

ಈ ಬೃಹತ್ ನೇಮಕಾತಿಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1,731 ಹುದ್ದೆಗಳಿದ್ದರೆ, ಕರ್ನಾಟಕದಲ್ಲಿ 1,414 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ 1,051, ಪಶ್ಚಿಮ ಬಂಗಾಳದಲ್ಲಿ 946 ಹಾಗೂ ದೆಹಲಿ-ಎನ್‌ಸಿಆರ್‌ನಲ್ಲಿ 415 ಹುದ್ದೆಗಳು ಲಭ್ಯವಿವೆ. ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇತರ ಭತ್ಯೆಗಳೊಂದಿಗೆ ಆರಂಭಿಕವಾಗಿ ಸುಮಾರು 24,050 ರೂ. ಮೂಲ ವೇತನ ಸಿಗಲಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಪೂರ್ಣಗೊಳಿಸಿರಬೇಕು. ಜೊತೆಗೆ ಸಾಮಾನ್ಯ ಕಂಪ್ಯೂಟರ್ ಜ್ಞಾನ ಮತ್ತು ಆಯಾ ರಾಜ್ಯದ ಸ್ಥಳೀಯ ಭಾಷೆಯನ್ನು (ಕನ್ನಡ) ಓದಲು, ಬರೆಯಲು ಹಾಗೂ ಮಾತನಾಡಲು ತಿಳಿದಿರಬೇಕು. ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷದೊಳಗಿರಬೇಕು. ನಿಯಮಗಳ ಪ್ರಕಾರ SC, ST, OBC ಹಾಗೂ ಇತರೆ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ಮಹತ್ವದ ಬದಲಾವಣೆ:

ಈ ಬಾರಿ ಪ್ರಾಥಮಿಕ ಪರೀಕ್ಷೆಯ (Prelims) ಮಾದರಿಯಲ್ಲಿ ಯಾವುದೇ ಬದಲಾವಣೆಯಿಲ್ಲ, ಆದರೆ ಮುಖ್ಯ ಪರೀಕ್ಷೆಯನ್ನು (Mains) ಪರಿಷ್ಕರಿಸಲಾಗಿದೆ. ಇನ್ಮುಂದೆ ಮುಖ್ಯ ಪರೀಕ್ಷೆಯಲ್ಲಿ 155 ರ ಬದಲಾಗಿ 160 ಪ್ರಶ್ನೆಗಳು ಇರಲಿವೆ. ಸಮಯವನ್ನು 120 ನಿಮಿಷಗಳಿಂದ 125 ನಿಮಿಷಗಳಿಗೆ ಹೆಚ್ಚಿಸಲಾಗಿದೆ. ಪರಿಮಾಣಾತ್ಮಕ ಸಾಮರ್ಥ್ಯ (Quantitative Aptitude) ವಿಭಾಗದಲ್ಲಿ ಪ್ರಶ್ನೆಗಳ ಸಂಖ್ಯೆಯನ್ನು 35 ರಿಂದ 40 ಕ್ಕೆ ಏರಿಸಲಾಗಿದೆ. ಪ್ರಾಥಮಿಕ ಪರೀಕ್ಷೆಯು ಅಕ್ಟೋಬರ್ 2026 ರಲ್ಲಿ ಹಾಗೂ ಮುಖ್ಯ ಪರೀಕ್ಷೆಯು ಡಿಸೆಂಬರ್ 2026 ರಲ್ಲಿ ನಡೆಯಲಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ:

ಅಭ್ಯರ್ಥಿಗಳ ಆಯ್ಕೆಯನ್ನು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳ ಮೂಲಕ ಮಾಡಲಾಗುತ್ತದೆ. ಪ್ರಾಥಮಿಕ ಪರೀಕ್ಷೆಯು ಕೇವಲ ಅರ್ಹತಾ (Qualifying) ಸ್ವರೂಪದ್ದಾಗಿದ್ದು, ಮುಖ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. 10 ನೇ ತರಗತಿ ಅಥವಾ ಅದಕ್ಕಿಂತ ಮೇಲಿನ ಹಂತದಲ್ಲಿ ಸ್ಥಳೀಯ ಭಾಷೆಯನ್ನು ಅಭ್ಯಾಸ ಮಾಡದವರಿಗೆ ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (LLPT) ಇರಲಿದೆ. SC, ST, PWD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175ರೂ., ಸಾಮಾನ್ಯ (General), OBC ಮತ್ತು EWS ವರ್ಗಗಳ ಅಭ್ಯರ್ಥಿಗಳಿಗೆ 850 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

IND vs SL: ಟೆಸ್ಟ್ ಸರಣಿಯಿಂದ ಬುಮ್ರಾ ಔಟ್; ತಂಡದಲ್ಲಿ ಯಾರಿಗೆ ಸಿಗಲಿದೆ ಅವಕಾಶ?

Source link

ನಾನು ಕೂಡ ಕಾವೇರಿ ಕಣಿವೆಯಲ್ಲಿ ಹುಟ್ಟಿ ಬೆಳೆದಿದ್ದೇನೆ: ರೈತರಿಗೆ ಡಿಕೆಶಿ ಮಹತ್ವದ ಭರವಸೆ – Kannada News | DK Shivakumar Press conference details after All Party Meeting about Cauvery Water Dispute

ಬೆಂಗಳೂರು, (ಆಗಸ್ಟ್ 02): ಈ ಭಾನುವಾರ ರಾಜ್ಯದ ಗಮನಸೆಳೆಯುವ ಐತಿಹಾಸಿಕ ದಿನ. ಸಿಎಂ ಆಗಿ ಎರಡು ತಿಂಗಳು ಕಳೆದಿವೆ. ಸಿಎಂ ಜೊತೆಗೆ ನಾನು ಕೂಡ ಕಾವೇರಿ ಕಣಿವೆಯಲ್ಲಿ ಹುಟ್ಟಿಬೆಳೆದಿದ್ದೇನೆ.ನಾನು ಕೂಡ ರೈತನ ಮಗನಾಗಿದ್ದೇನೆ. ಕಾವೇರಿ ವಿಚಾರದಲ್ಲಿ ರೈತರ ರಕ್ಷಣೆಗೆ ನಾನು ಮತ್ತು ನಮ್ಮ ಸರಕಾರ ಬದ್ಧವಾಗಿದೆ. ರಾಜ್ಯದ ಏಳುವರೆ ಕೋಟಿ ಜನರಿಗೆ ಯಾವುದೇ ಅನುಮಾನ ಬೇಡ. ಎಲ್ಲ ಸಂದರ್ಭದಲ್ಲಿ ಜನರ ಹಿತ ಕಾಪಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶದ ಜನತೆ ಆತಂಕ ಪಡುವುದು ಬೇಡ. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿ ನಿರ್ಧಾರ ಕೈಗೊಳ್ಳಲಿದೆ. ತಮಿಳುನಾಡಿಗೆ 15 ದಿನ 3,500 ಕ್ಯೂಸೆಕ್ ನೀರು ಹರಿಸಲು ಆದೇಶಿಸಿದ್ದು, CWRC ಶಿಫಾರಸನ್ನು ಸಿಡಬ್ಲ್ಯುಎಂಎ ಆದೇಶವಾಗಿ ಮಾರ್ಪಡಿಸಿತ್ತು. ಪ್ರಕೃತಿ ನಮಗೆ ನೆರವು ನೀಡಿದ್ದರಿಂದ ಸದ್ಯದ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮಳೆ ಬರದೆ ಬರದ ಛಾಯೆ ಇದೆ. 35% ಮಳೆ ಮಾತ್ರ ರಾಜ್ಯದಲ್ಲಿ ಬಂದಿದೆ. CWMA 3500 ಕ್ಯೂಸೆಕ್ ಬಿಡುವ ಆದೇಶ ಸಂಕಟ ತಂದಿತ್ತು. 9.5 ಟಿಎಂಸಿ ಬಿಡಬೇಕು ಎಂದು ತಮಿಳುನಾಡು ಸರಕಾರ ವಾದಿಸಿತ್ತು. ರಾಜ್ಯದ ಜನರ ಪ್ರಾರ್ಥನೆಯಂತೆ ಮಳೆ ಬಂದಿದೆ. ಕಬಿನಿಯಲ್ಲಿ 24 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಕೆಆರ್ ಎಸ್ ನಲ್ಲಿ 22 ಕ್ಯೂಸೆಕ್ ನೀರು ಹರಿದು ಬರದುತ್ತಿದೆ. ಕೊಡಗು ಭಾಗದಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿದೆ. ಕುಡಿಯುವ ನೀರಿಗೆ 40 ಟಿಎಂಸಿ ಇಡಬೇಕು ಎಂದು ವಿವರಿಸಿದರು.

ಇದನ್ನೂ ಓದಿ: ರಾಜಕೀಯಕ್ಕಿಂತ ರಾಜ್ಯದ ರೈತರು, ಜನರ ಹಿತ ಮುಖ್ಯ: ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅಭಿಮತ

ಸರ್ವ ಪಕ್ಷಗಳ ಸಭೆಯಲ್ಲಿ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಮಾಜಿ ಸಿಎಂಗಳು ಸಲಹೆ, ಮಾರ್ಗದರ್ಶನ ಕೊಟ್ಟಿದ್ದಾರೆ. ದೆಹಲಿಯ ರಾಜ್ಯದ ವಕೀಲರ ಟೀಂ ಬಂದಿದೆ. ಅಡ್ವೊಕೆಟ್ ಜನರ್ ಕೂಡ ಸಭೆಯಲ್ಲಿ ಭಾಗಿಯಾಗಿದ್ರು.ಕೆಆರ್ ಎಸ್‌ ಡ್ಯಾಂ ನಲ್ಲಿ ಒಳಹರಿವು ಮಧ್ಯಾಹ್ನದಿಂದ ಕಡಿಮೆ ಆಗಿದೆ. ಕೆರೆಗಳನ್ನು ತುಂಬಲು ಕುಡಿಯುವ ನೀರಿಗೆ ನೀರು ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ. ಕುಡಿಯುವ ನೀರಿಗೆ ಒತ್ತು ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಸಂಕಷ್ಟದ ಸೂತ್ರದ ಅನ್ವಯ ಕಾನೂನಿನ ಮೂಲಕವೇ ಹೋರಾಟ ಮಾಡಬೇಕು ಎಂದಿದ್ದಾರೆ ಎಂದು ತಿಳಿಸಿದರು.

ಜೂನ್ ನಲ್ಲಿ‌ 2.9 ಟಿಎಂಸಿ ಬಿಟಗಟಿದ್ದೇವು. ಜುಲೈನಲ್ಲಿ 1.5 ಟಿಎಂಸಿ ಬಿಟ್ಟಿದ್ದೇವೆ ಇಲ್ಲಿವರೆಗೆ ಯಾವುದೇ ಡ್ಯಾಂನಿಂದ ಬಿಟ್ಟಿರಲಿಲ್ಲ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ನಿನ್ನೆ ಮಧ್ಯಾಹ್ನ ನಂತರ ಡ್ಯಾಂ ಸೇಫ್ಟಿಗೋಸ್ಕರ ಕಬಿನಿಯಿಂದ ನೀರು ಬಿಟ್ಟಿದ್ದೇವೆ ಎಂದರು.

ಕರ್ನಾಟಕ ಬಂದ್ ಕೈಬಿಡುವಂತೆ ಮನವಿ

ಸಂಸದರು ಕಾನೂನು ಸಲಹೆ ಕೊಟ್ಟಿದ್ದಾರೆ. ಪ್ರತಿಭಟನೆ ಮಾಡಿದ್ದಾರೆ.ಬಿಜೆಪಿಯವರು ಕೆಆರ್ ಎಸ್ ಬಳಿ ಪ್ರತಿಭಟನೆ ಮಾಡಿದ್ದಾರೆ. ಆಗಸ್ಟ್ 13ಕ್ಕೆ ಬಂದ್ ಮಾಡುವ ಘೋಷಣೆ ಮಾಡಿದ್ದಾರೆ. ಎಲ್ಲ ಸಂಘಟನೆಗಳಿಗೂ ನನ್ನ ಮನವಿ. ಬಂದ್ ಗೆ ಅವಕಾಶ ಕೊಡುವುದು ಬೇಡ. ಸರ್ವಪಕ್ಷಗಳ ಸಭೆಯಲ್ಲಿ ಇದೆ ಅಭಿಪ್ರಾಯ ಒತ್ತಾಯವಾಗಿದೆ. ಸರಕಾರ ಮತ್ತು ಪ್ರಕೃತಿ ನಿಮ್ಮ ಪರವಾಗಿ ನಿಂತಿದೆ ಎಂದು ಕರ್ನಾಟಕ ಬಂದ್ ಕೈಬಿಡುವಂತೆ ಮನವಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:23 pm, Sun, 2 August 26

Source link

ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ ಹೊತ್ತಿ ಉರಿದ ಹಡಗು: ಐವರು ಸಜೀವ ದಹನ, 41 ಮಂದಿ ನಾಪತ್ತೆ – Kannada News | Indonesia Ship Fire: 5 Dead, 41 Missing Near Madura Island Coast

ಜಕಾರ್ತಾ,ಆಗಸ್ಟ್​ 02: : ದಕ್ಷಿಣ ಏಷ್ಯಾದ ಪ್ರಮುಖ ದ್ವೀಪ ರಾಷ್ಟ್ರವಾದ ಇಂಡೋನೇಷ್ಯಾದ ಮಧುರಾ ದ್ವೀಪದ ಕರಾವಳಿಯಲ್ಲಿ ಪ್ರಯಾಣಿಕರ ಹಡಗಿನಲ್ಲಿ ದಿಢೀರ್ ಭೀಕರ ಬೆಂಕಿ ಕಾಣಿಸಿಕೊಂಡು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 41 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ದೇಶದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ದೃಢಪಡಿಸಿದೆ.
ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆಯೇ ನೌಕಾಪಡೆ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದು, ಕಾಣೆಯಾದವರಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಮಧುರಾ ದ್ವೀಪದಿಂದ ಹೊರಟಿದ್ದ ಪ್ರಯಾಣಿಕರ ಹಡಗಿನಲ್ಲಿ ಮಧ್ಯಾಹ್ನ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆ ಹಾಗೂ ದಟ್ಟ ಹೊಗೆ ಆವರಿಸಿದ್ದರಿಂದ ದೋಣಿಯಲ್ಲಿದ್ದ ಪ್ರಯಾಣಿಕರು ಪ್ರಾಣಭಯದಿಂದ ನೀರಿಗೆ ಜಿಗಿದಿದ್ದಾರೆ. ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಕೆಲವರನ್ನು ರಕ್ಷಿಸಿವೆಯಾದರೂ, ಐದು ಜನರ ಶವಗಳು ಸಮುದ್ರದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಹಡಗಿನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರಿದ್ದರೆನ್ನಲಾಗಿದ್ದು, ಸದ್ಯ 41 ಜನರು ಕಾಣೆಯಾಗಿದ್ದಾರೆ. ಇವರಲ್ಲಿ ಹಲವರು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಸಂಸ್ಥೆಯ ಹೆಲಿಕಾಪ್ಟರ್‌ಗಳು ಹಾಗೂ ಹೈ-ಸ್ಪೀಡ್ ಬೋಟ್‌ಗಳು ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಬದುಕುಳಿದವರ ಹುಡುಕಾಟ ತೀವ್ರಗೊಳಿಸಲಾಗಿದೆ.

ದೋಣಿಯ ಇಂಜಿನ್‌ನಲ್ಲಾದ ತಾಂತ್ರಿಕ ದೋಷ ಹಾಗೂ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.ಸುಮಾರು 17,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಜನರಿಗೆ ಹಾಗೂ ಸರಕು ಸಾಗಣೆಗೆ ಹಡಗುಗಳೇ ಮುಖ್ಯ ಸಾರಿಗೆ ಮಾರ್ಗವಾಗಿವೆ. ಆದರೆ, ಭದ್ರತಾ ನಿಯಮಗಳ ಕೊರತೆ, ಮಿತಿಮೀರಿದ ಪ್ರಯಾಣಿಕರ ಏರಿಕೆ ಮತ್ತು ಹಳೆಯ ಬೋಟ್‌ಗಳ ಬಳಕೆಯಿಂದಾಗಿ ದೇಶದಲ್ಲಿ ಆಗಾಗ ಇಂತಹ ಭೀಕರ ಜಲ ದುರಂತಗಳು ಸಂಭವಿಸುತ್ತಿರುತ್ತವೆ.

ಮತ್ತಷ್ಟು ಓದಿ: ಜಬಲ್ಪುರ ದೋಣಿ ದುರಂತ, ಸಾವು ಬಂದ್ರೂ, ತಬ್ಬಿಕೊಂಡ ಮಗನನ್ನು ಬಿಡದ ತಾಯಿ

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಸಮುದ್ರದ ಅಲೆಗಳ ಭೋರ್ಗರೆತ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಭಾರಿ ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Anil Ambani vs EPFO: ಇಪಿಎಫ್​ಒಗೆ ಅಂಬಾನಿಯಿಂದ 1,816 ಕೋಟಿ ರೂ ನಷ್ಟ; ಸಿಬಿಐನಿಂದ ಪ್ರಕರಣ ದಾಖಲು – Kannada News | Anil Ambani Reliance Capital allegedly cause loss for EPFO, CBI books case

ನವದೆಹಲಿ, ಆಗಸ್ಟ್ 2: ಕೇಂದ್ರ ತನಿಖಾ ದಳವಾದ ಸಿಬಿಐ (CBI) ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ (RCL) ಮತ್ತು ಅದರ ಮಾಜಿ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ₹1,816.22 ಕೋಟಿ ನಷ್ಟ ಉಂಟುಮಾಡಿದ ಆರೋಪದ ಮೇರೆಗೆ ಎಫ್‌ಐಆರ್ (FIR) ದಾಖಲಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅನುಮೋದನೆಯೊಂದಿಗೆ ಇಪಿಎಫ್‌ಒ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಸಿಬಿಐ ಈ ಕ್ರಮ ಕೈಗೊಂಡಿದೆ. ವಂಚನೆ, ಅಪರಾಧ ಸಂಚು ಹಾಗೂ ಇಪಿಎಫ್‌ಒಗೆ ನಷ್ಟ (wrongful loss) ಉಂಟುಮಾಡಿದ ಆರೋಪಗಳನ್ನು ಹೊರಿಸಲಾಗಿದೆ.

ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅನಿಲ್ ಅಂಬಾನಿ ತಳ್ಳಿಹಾಕಿದ್ದಾರೆ. “ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ಬೋರ್ಡ್‌ನ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ನಾನು 2005ರಿಂದ ನವೆಂಬರ್ 2021ರವರೆಗೆ ಮಾತ್ರ ಕಾರ್ಯನಿರ್ವಹಿಸಿದ್ದೇನೆ. ಆ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಂಪನಿಯ ನಿರ್ದೇಶಕರ ಮಂಡಳಿಯನ್ನು ವಹಿಸಿಕೊಂಡು ನಿರ್ವಾಹಕರನ್ನು ನೇಮಿಸಿತು. ಅನಿಲ್ ಅಂಬಾನಿ ಯಾವುದೇ ತಪ್ಪು ಮಾಡಿಲ್ಲ ಮತ್ತು ಕಾನೂನುಬದ್ಧವಾಗಿ ಲಭ್ಯವಿರುವ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದ್ದಾರೆ” ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: EPFO rules: 2-3 ವರ್ಷ ಕೆಲಸ ಇಲ್ಲದಿದ್ದಾಗ ಹಳೆಯ ಇಪಿಎಫ್ ಖಾತೆ ಏನಾಗುತ್ತದೆ?

ಅನಿಲ್ ಅಂಬಾನಿಯಿಂದ ಇಪಿಎಫ್​ಒಗೆ ವಂಚನೆಯಾಗಿದ್ದು ಹೇಗೆ?

ರಿಲಯನ್ಸ್ ಕ್ಯಾಪಿಟಲ್​ನ ಸಾಲಪತ್ರಗಳ ಮೇಲೆ ಮಾಡಿದ ಹೂಡಿಕೆಯಿಂದ ಇಪಿಎಫ್​ಒಗೆ ಸಾಕಷ್ಟು ನಷ್ಟವಾಗಿತ್ತು. 2013 ಮತ್ತು 2014ರ ಅವಧಿಯಲ್ಲಿ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯು ಸುರಕ್ಷಿತ ನಾನ್-ಕನ್ವರ್ಟಿಬಲ್ ಡಿಬೆಂಚರ್‌ಗಳನ್ನು (NCDs) ಹೊರಡಿಸಿತ್ತು. ಇದರಡಿ ಇಪಿಎಫ್‌ಒ ಪರವಾಗಿ ಪೋರ್ಟ್‌ಫೋಲಿಯೋ ನಿರ್ವಾಹಕರು ಒಟ್ಟು ₹2,500 ಕೋಟಿ ಹೂಡಿಕೆ ಮಾಡಿದ್ದರು. ಈ ಡಿಬೆಂಚರ್‌ಗಳು 2023 ಮತ್ತು 2024ರಲ್ಲಿ ಮೆಚ್ಯೂರಿಟಿ (Maturity) ಹೊಂದಬೇಕಿದ್ದವು.

ಜಾರಿ ನಿರ್ದೇಶನಾಲಯ (ED) ಮತ್ತು ಆಡಿಟ್ ವರದಿ: ಜಾರಿ ನಿರ್ದೇಶನಾಲಯವು (ED) ಈ ಹೂಡಿಕೆಗೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಗಳನ್ನು ಪತ್ತೆಹಚ್ಚಿ ಕಾರ್ಮಿಕ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. BDO India LLP ನಡೆಸಿದ ವಹಿವಾಟಿನ ಆಡಿಟ್ ವರದಿಯ ಪ್ರಕಾರ, ಡಿಸೆಂಬರ್ 7, 2019 ರಿಂದ ಡಿಸೆಂಬರ್ 6, 2021ರ ಅವಧಿಯಲ್ಲಿ ರಿಲಯನ್ಸ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಹಲವು ಶಂಕಿತ ಹಾಗೂ ವಂಚನೆಯ ವಹಿವಾಟುಗಳನ್ನು ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಇದನ್ನೂ ಓದಿ: ಭಾರತ-ಟಿಬೆಟ್ ಪುರಾತನ ರೇಷ್ಮೆ ಮಾರ್ಗಕ್ಕೆ ಮರುಜೀವ; ಇಲ್ಲಿ ವ್ಯಾಪಾರಕ್ಕೆ ಹಣ ಅಲ್ಲ, ಬಾರ್ಟರ್ ಸಿಸ್ಟಂ

ಹಣ ತಿರುಚುವಿಕೆ (Diversion of Funds): ರಿಲಯನ್ಸ್ ಕ್ಯಾಪಿಟಲ್ ಲಿ ಕಂಪನಿಯು ಸಾಲದ ಹಣವನ್ನು ಅಕ್ರಮವಾಗಿ ಬೇರೆಡೆಗೆ ತಿರುಗಿಸುವುದು (Diversion of funds) ಮುಂತಾದ ಕಾರಣಗಳಿಂದ ಆರ್ಥಿಕ ಸ್ಥಿತಿ ಹದಗೆಟ್ಟಿತು. ಇದರಿಂದಾಗಿ ಡಿಬೆಂಚರ್ ಹೊಂದಿರುವವರಿಗೆ ಹಣ ಮರಳಿಸಲು ವಿಫಲವಾಯಿತು ಮತ್ತು ಇಪಿಎಫ್‌ಒಗೆ ₹1,816.22 ಕೋಟಿ ಭಾರಿ ನಷ್ಟ ಉಂಟಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಡದಿ ಟೌನ್‌ಶಿಪ್‌ ವಿರುದ್ಧ ಜೆಡಿಎಸ್‌ ರಣಕಹಳೆ: ದಳಪತಿಗಳ ಪಾದಯಾತ್ರೆಗೆ ಮರುದಿನಾಂಕ ಫಿಕ್ಸ್ – Kannada News | Nikhil Kumaraswamy Announces JD(S) Padayatra Against Bidadi Township Project from August 9

ನಿಖಿಲ್ ಕುಮಾರಸ್ವಾಮಿImage Credit source: tv9 kannada

ರಾಮನಗರ, ಆಗಸ್ಟ್​​ 02: ಬಿಡದಿ ಟೌನ್​ಶಿಪ್ ಯೋಜನೆ (Bidadi Township) ವಿಚಾರವಾಗಿ ಪರ, ವಿರೋಧ ಮುಂದುವರೆದಿದೆ. ಇದೀಗ ಜೆಡಿಎಸ್​​ ಪಕ್ಷ ಪಾದಯಾತ್ರೆಗೆ ಸಜ್ಜಾಗಿದೆ. ‘ಆಗಸ್ಟ್ 9 ರಿಂದ 11ರವರೆಗೆ ಅಂದರೆ 3 ದಿನಗಳ ಕಾಲ ಬೈರಮಂಗಲದಿಂದ ಫ್ರೀಡಂಪಾರ್ಕ್​ವರೆಗೆ ಒಟ್ಟು 38 ಕಿ. ಮೀ ಪಾದಯಾತ್ರೆ ಮಾಡುತ್ತೇವೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.

ಪಾದಯಾತ್ರೆಯಲ್ಲಿ ದೇವೇಗೌಡ, ಕುಮಾರಸ್ವಾಮಿ ಭಾಗಿ

ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಇಂದು ನಿಖಿಲ್ ಕುಮಾರಸ್ವಾಮಿ ಪೂರ್ವಭಾವಿ ಸಭೆ ಮಾಡಿದರು. ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,‘ ಆಗಸ್ಟ್ 9ರಿಂದ 11ರವರೆಗೆ 3 ದಿನ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆಯಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಭಾಗಿಯಾಗುತ್ತಾರೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ವಿವಾದದ ನಡುವೆಯೇ ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ

‘ರೈತರ ಸಮಸ್ಯೆಗೆ ಧ್ವನಿಯಾಗಿ ಜೆಡಿಎಸ್​ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ರೈತರ ಸಮಸ್ಯೆ ತಿಳಿಯಲು ಮತ್ತು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಾದಯಾತ್ರೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲ, ಕಿವಿಯೂ ಕೇಳಿಸುತ್ತಿಲ್ಲ. ಹೀಗಾಗಿ ರೈತರ ಪರ ನಿಲ್ಲುವುದು ನಮ್ಮ ಧರ್ಮ. ಟೌನ್​ಶಿಪ್​ ಬಗ್ಗೆ ಸ್ಥಳೀಯ ಶಾಸಕರು ಏನು ಬೇಕಾದರೂ ಮಾತಾಡಲಿ, ಯೋಜನೆ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದ್ದೇವೆ’ ಎಂದರು.

ಜೆಡಿಎಸ್, ಬಿಜೆಪಿ ಪ್ರತ್ಯೇಕ ಪಾದಯಾತ್ರೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದಿಷ್ಟು

ಇನ್ನು ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ನಡೆಸುತ್ತಿರುವ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ‘ಕೆಲವೊಮ್ಮೆ ಪ್ರತ್ಯೇಕವಾಗಿ, ಇನ್ನು ಕೆಲವೊಮ್ಮೆ ಒಟ್ಟಾಗಿ ಹೋರಾಟ ಮಾಡಬೇಕಾಗುತ್ತದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

DRDO SSPL Recruitment 2026: ಐಟಿಐ, ಡಿಪ್ಲೊಮಾ, ಪದವೀಧರರಿಗೆ ಡಿಆರ್‌ಡಿಒ ಸಂಸ್ಥೆಯಲ್ಲಿ ಉದ್ಯೋಗಾವಕಾಶ – Kannada News | DRDO SSPL Recruitment 2026: Apply Offline for Apprentice Posts; Check Eligibility and Details

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲ್ಯಾಬೋರೇಟರಿ (SSPL) ಐಟಿಐ, ಡಿಪ್ಲೊಮಾ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಚಾಲನೆ ನೀಡಿದೆ. ಈ ನೇಮಕಾತಿಯು ಯುವಜನರಿಗೆ 12 ತಿಂಗಳ ಅವಧಿಯ ಉದ್ಯೋಗ ಆಧಾರಿತ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಒದಗಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರತಿ ತಿಂಗಳು ಸ್ಟೈಫಂಡ್ ದೊರೆಯಲಿದೆ.

41ಕ್ಕೂ ಹೆಚ್ಚು ಹುದ್ದೆಗಳು; ಪ್ರಮುಖ ಟ್ರೇಡ್‌ಗಳ ವಿವರ ಇಲ್ಲಿದೆ:

ಈ ನೇಮಕಾತಿ ಡ್ರೈವ್‌ನಲ್ಲಿ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಒಟ್ಟು 41 ಸೀಟುಗಳನ್ನು ಕಾಯ್ದಿರಿಸಲಾಗಿದೆ. ಇನ್ನು ಐಟಿಐ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಸೀಟುಗಳನ್ನು ಸಂಸ್ಥೆಯ ಅಗತ್ಯಕ್ಕೆ ತಕ್ಕಂತೆ ಭರ್ತಿ ಮಾಡಲಾಗುತ್ತದೆ. ಐಟಿಐ ಅಭ್ಯರ್ಥಿಗಳು 10 ನೇ ತರಗತಿಯ ಜೊತೆಗೆ ಫಿಟ್ಟರ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಕಂಪ್ಯೂಟರ್ ಆಪರೇಟರ್ (COPA), ಮೆಷಿನಿಸ್ಟ್ ಅಥವಾ ಕಾರ್ಪೆಂಟರ್ ಟ್ರೇಡ್‌ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು. ಇನ್ನು ಡಿಪ್ಲೊಮಾ ಮತ್ತು ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸಂಬಂಧಿತ ವಿಷಯದಲ್ಲಿ ಪ್ರಥಮ ದರ್ಜೆ ಪದವಿ ಪಡೆದಿರಬೇಕು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಶೈಕ್ಷಣಿಕ ವರ್ಷ ಮತ್ತು ಪೋರ್ಟಲ್ ನೋಂದಣಿ ನಿಯಮಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2022, 2023, 2024, 2025, ಅಥವಾ 2026 ರಲ್ಲಿ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವುದು ಕಡ್ಡಾಯ. 2022 ಕ್ಕಿಂತ ಮೊದಲು ತೇರ್ಗಡೆಯಾದವರು ಈ ಹುದ್ದೆಗಳಿಗೆ ಅರ್ಹರಾಗಿರುವುದಿಲ್ಲ. ಅರ್ಜಿ ಸಲ್ಲಿಸುವ ಮುನ್ನ ಡಿಪ್ಲೊಮಾ ಮತ್ತು ಗ್ರಾಜುಯೇಟ್ ಅಭ್ಯರ್ಥಿಗಳು NATS ಪೋರ್ಟಲ್ನಲ್ಲಿ ಹಾಗೂ ಐಟಿಐ ಅಭ್ಯರ್ಥಿಗಳು Apprenticeship India ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು. ನಿಯಮಾವಳಿಗಳ ಪ್ರಕಾರ SC, ST, OBC, EWS ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾತಿ ಸೌಲಭ್ಯ ದೊರೆಯಲಿದೆ.

ಅಂಚೆ ಮೂಲಕ ಅರ್ಜಿ ಸಲ್ಲಿಸುವ ಸರಳ ವಿಧಾನ:

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ಶೈಕ್ಷಣಿಕ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ (Self-attested copies) ಅಂಚೆ ಮೂಲಕ ಕಳುಹಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ‘ನಿರ್ದೇಶಕರು, SSPL, DRDO, ಲಕ್ನೋ ರಸ್ತೆ, ತಿಮಾರ್ಪುರ್, ದೆಹಲಿ-110054’ ಈ ವಿಳಾಸಕ್ಕೆ ಆಗಸ್ಟ್ 21 ರೊಳಗೆ ತಲುಪುವಂತೆ ಕಳುಹಿಸಬೇಕು. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಅಭ್ಯರ್ಥಿಗಳ ಇಮೇಲ್ ಮೂಲಕ ತಿಳಿಸಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ – Kannada News | Abhijit Dipke Under RTI Scanner: Foreign Education, Funding Investigation

ನವದೆಹಲಿ, ಆಗಸ್ಟ್​ 02: ‘ನೀಟ್-ಯುಜಿ’ (NEET-UG) ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗಳ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಸಿದ್ಧಿ ಪಡೆದ ‘ಕಾಕ್ರೋಚ್ ಜನತಾ ಪಾರ್ಟಿ’ ಸ್ಥಾಪಕ ಅಭಿಜೀತ್ ದೀಪ್ಕೆ ಅವರ ವಿದೇಶಿ ಶಿಕ್ಷಣದ ಖರ್ಚು ಹಾಗೂ ನಿಧಿ ಸಂಗ್ರಹಣೆಯ ಕುರಿತು ಆರ್‌ಟಿಐ (RTI) ಕಾರ್ಯಕರ್ತರೊಬ್ಬರು ಚುನಾವಣಾ ಆಯೋಗ ಮತ್ತು ಜಿಎಸ್‌ಟಿ (GST) ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಎಂಬುವವರು, ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನ್‌ರಾವ್ ದೀಪ್ಕೆ ಅವರ ಆರ್ಥಿಕ ಹಿನ್ನೆಲೆ ಹಾಗೂ ಸಿಜೆಪಿ ಸಂಸ್ಥೆಯ ನಿಧಿ ಸಂಗ್ರಹಣೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಯಾರೀ ಅಭಿಜೀತ್ ದೀಪ್ಕೆ? ಅವರ ಶಿಕ್ಷಣ ಮತ್ತು ಹಿನ್ನೆಲೆ
ಆಮ್ ಆದ್ಮಿ ಪಾರ್ಟಿಯಲ್ಲಿ ಕಾರ್ಯ: 2020 ರಿಂದ2023 ರವರೆಗೆ ಆಮ್ ಆದ್ಮಿ ಪಾರ್ಟಿಯ (AAP) ಡಿಜಿಟಲ್ ಹಾಗೂ ಮೀಮ್ಸ್ ಪ್ರಚಾರ ಪಡೆಗಳಲ್ಲಿ ಅಭಿಜೀತ್ ಕೆಲಸ ಮಾಡಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ ಪತ್ರಿಕೋದ್ಯಮ ಮುಗಿಸಿದ ನಂತರ, ಬೋಸ್ಟನ್ ವಿಶ್ವವಿದ್ಯಾಲಯದಿಂದ ‘ಸಾರ್ವಜನಿಕ ಸಂಪರ್ಕ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಲಡಾಖ್ ಮೂಲದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರೊಂದಿಗೆ ‘ನೀಟ್’ ಪರೀಕ್ಷಾ ಅಕ್ರಮದ ವಿರುದ್ಧ ಜಂಟಿ ಆನ್‌ಲೈನ್ ಅಭಿಯಾನ ನಡೆಸಿ ರಾಷ್ಟ್ರಮಟ್ಟದ ಗಮನ ಸೆಳೆದಿದ್ದರು.

ಆರ್‌ಟಿಐ ಕಾರ್ಯಕರ್ತನಿಂದ ಸಾಲು ಸಾಲು ದೂರುಗಳು
ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ಅಭಿಜೀತ್ ಅವರ ತಂದೆ, ತಮ್ಮ ಮಗನನ್ನು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಓದಿಸಲು ಭಾರಿ ವೆಚ್ಚ ಭರಿಸಿದ್ದು ಹೇಗೆ? ಅವರ ಆಸ್ತಿ ವಿವರ ತನಿಖೆಯಾಗಬೇಕು ಎಂದು ತಿವಾರಿ ಒತ್ತಾಯಿಸಿದ್ದಾರೆ. ಸಿಜೆಪಿಯು ‘ಜನಪ್ರತಿನಿಧಿ ಕಾಯ್ದೆ 1951’ರ ಅಡಿಯಲ್ಲಿ ನೋಂದಾಯಿತ ರಾಜಕೀಯ ಪಕ್ಷವಲ್ಲದಿದ್ದರೂ ರಾಜಕೀಯ ಪಕ್ಷದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಮನವಿ ಮಾಡಲಾಗಿದೆ.

ಮತ್ತಷ್ಟು ಓದಿ: ಬಿಹಾರ, ಅಸ್ಸಾಂ ಬೆನ್ನಲ್ಲೇ ಪಶ್ಚಿಮ ಬಂಗಾಳದಿಂದಲೂ ನೀಟ್ ಪ್ರತಿಭಟನಾಕಾರರಿಗೆ ಅಭಯ: ಪ್ರಕರಣ ಹಿಂಪಡೆಯಲು ನಿರ್ಧಾರ, ಕ್ರಿಮಿನಲ್‌ಗಳಿಗೆ ಇಲ್ಲ ವಿನಾಯಿತಿ

ನೀಟ್ ಪ್ರತಿಭಟನಾಕಾರರ ಕಾನೂನು ಹೋರಾಟಕ್ಕಾಗಿ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು 1 ಕೋಟಿ ರೂ. ಕೊಡುಗೆ ನೀಡುವುದಾಗಿ ಘೋಷಿಸಿದ್ದರು. ಈ ಹಣಕ್ಕೆ ಶೇ. 18 ರಷ್ಟು ಜಿಎಸ್‌ಟಿ ಅನ್ವಯಿಸುತ್ತದೆಯೇ ಎಂದು ಪರಿಶೀಲಿಸುವಂತೆ ಕೇಂದ್ರ ಜಿಎಸ್‌ಟಿ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮೀಮ್ಸ್‌ ಮತ್ತು ವಿಡಂಬನೆಯ ಮೂಲಕ ಯುವಜನತೆಯನ್ನು ತಲುಪುವುದು ಭಾರತೀಯ ರಾಜಕೀಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ, ನೋಂದಾಯಿತವಲ್ಲದ ಇಂತಹ ಡಿಜಿಟಲ್ ವೇದಿಕೆಗಳು ‘ಕಾನೂನು ರಕ್ಷಣಾ ನಿಧಿ’ಹೆಸರಿನಲ್ಲಿ ಹಣ ಸಂಗ್ರಹಿಸುವುದು ಕಾನೂನು ಮತ್ತು ತೆರಿಗೆ ವ್ಯಾಪ್ತಿಗೆ ಬರುತ್ತದೆಯೇ ಎಂಬ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಜನೀಕಾಂತ್​​ಗಾಗಿ ನಿಯಮ ಮುರಿದ ನಟ ವಿಜಯ್ ಸೇತುಪತಿ – Kannada News | Vijay Sethupathi breaks rules for Rajinikanth

ವಿಜಯ್ ಸೇತುಪತಿ (Vijay Sethupati), ದಕ್ಷಿಣದ ಬಲು ಬೇಡಿಕೆಯ ನಟ. ನಾಯಕನಾಗಿ, ವಿಲನ್ ಆಗಿ, ಪೋಷಕ ನಟನಾಗಿ ಎಲ್ಲ ರೀತಿಯ ಪಾತ್ರಗಳಲ್ಲೂ ವಿಜಯ್ ನಟಿಸುತ್ತಾರೆ. ಇತ್ತೀಚೆಗೆ ನಾಯಕನಾಗಿ ನಟಿಸುವುದು ತುಸು ಹೆಚ್ಚು ಮಾಡಿದ್ದಾರೆ. ವಿಜಯ್ ಸೇತುಪತಿ ಈ ಮೊದಲೆಲ್ಲ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದರು. ಸಣ್ಣ-ಪುಟ್ಟ ಸಿನಿಮಾಗಳಲ್ಲಿಯೂ ವಿಜಯ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಕೆಲ ವರ್ಷಗಳಿಂದ ಯಾವುದೇ ಸಿನಿಮಾನಲ್ಲೂ ಅತಿಥಿ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ನಿಯಮ ಹೇರಿಕೊಂಡಿದ್ದರು. ಆದರೆ ಈಗ ಆ ನಿಯಮವನ್ನು ರಜನೀಕಾಂತ್ ಅವರಿಗಾಗಿ ಮುರಿದಿದ್ದಾರೆ.

ವಿಜಯ್ ಸೇತುಪತಿ ಅವರು ಅತಿಥಿ ಪಾತ್ರಗಳಲ್ಲಿ (ಕೇಮಿಯೋ) ನಟಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಆದರೆ ರಜನಿಕಾಂತ್ ಅವರ ‘ಜೈಲರ್ 2’ ಚಿತ್ರಕ್ಕಾಗಿ ಅವರು ತಮ್ಮ ಈ ನಿಯಮವನ್ನು ಮುರಿದ್ದಾರೆ. ಕೇವಲ ರಜನೀಕಾಂತ್ ಅವರಿಗಾಗಿ ಮಾತ್ರವೇ ಈ ನಿಯಮವನ್ನು ಮುರಿದಿರುವುದಾಗಿ ವಿಜಯ್ ಸೇತುಪತಿ ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ಸಹ ವಿಜಯ್ ಸೇತುಪತಿ ವಿವರಿಸಿದ್ದಾರೆ.

‘ನಾನು ಅತಿಥಿ ಪಾತ್ರಗಳಲ್ಲಿ ನಟಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ‘ಜೈಲರ್ 2’ ಇದಕ್ಕೆ ಏಕೈಕ ವಿನಾಯಿತಿ, ಏಕೆಂದರೆ ಇದು ರಜನಿಕಾಂತ್ ಸರ್ ಅವರ ಸಿನಿಮಾ. ‘ಜೈಲರ್ 2’ ಸಿನಿಮಾದ ಪೋಸ್ಟರ್​​ನಲ್ಲಿ ಒಂದು ವೇಳೆ ನನ್ನ ಫೋಟೊ ಹಾಕಿದರೂ ಸಹ ಜನ ನೋಡುವುದು ರಜನೀಕಾಂತ್ ಅವರನ್ನು ಮಾತ್ರ. ಪ್ರೇಕ್ಷಕರ ಗಮನ ಸಹಜವಾಗಿಯೇ ರಜನೀಕಾಂತ್ ಅವರ ಮೇಲೆ ಹೋಗುತ್ತದೆ. ಆದರೆ ಚಿಕ್ಕಪುಟ್ಟ ಸಿನಿಮಾಗಳು ಪ್ರಚಾರಕ್ಕಾಗಿ ನನ್ನ ಅತಿಥಿ ಪಾತ್ರವನ್ನು ಬಳಸಿಕೊಂಡಾಗ, ನನ್ನ ಫೋಟೊ ಅನ್ನು ಪೋಸ್ಟರ್​​ನಲ್ಲಿ ಬಳಸಿಕೊಳ್ಳುತ್ತಾರೆ. ಅದು ನಾನು ನಾಯಕನಾಗಿ ನಟಿಸುವ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ವಿಜಯ್ ಸೇತುಪತಿ ತಿಳಿಸಿದರು.

ಇದನ್ನೂ ಓದಿ:ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂ ವಿಜಯ್‌ಗೆ ವಿಜಯ್ ಸೇತುಪತಿ ಮನವಿ

ಅತಿಥಿ ಪಾತ್ರಗಳಲ್ಲಿ ನಟಿಸಿದರೆ ತಾವು ನಾಯಕನಾಗಿ ನಟಿಸುವ ಸಿನಿಮಾಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ವಿಜಯ್ ಸೇತುಪತಿ ಅವರು ಅತಿಥಿ ಪಾತ್ರಗಳಲ್ಲಿ ನಟಿಸುವುದನ್ನೇ ನಿಲ್ಲಿಸಿದ್ದಾರೆ. ಈ ಹಿಂದೆ ಅವರು ಕೆಲವಾರು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಈಗ ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದೇ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಮೋಹನ್​​ಲಾಲ್, ಹೃತಿಕ್ ರೋಷನ್ ಅವರುಗಳು ಸಹ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ಪ್ರಸ್ತುತ ಮಣಿರತ್ನಂ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ‘ಸ್ಲಂ ಡಾಗ್’ ಸಿನಿಮಾನಲ್ಲಿ ನಟಿಸಿದ್ದಾರೆ. ಅದೇ ಸಿನಿಮಾನಲ್ಲಿ ದುನಿಯಾ ವಿಜಯ್ ಸಹ ಇದ್ದಾರೆ. ವೆಟ್ರಿಮಾರನ್ ನಿರ್ದೇಶನದ ‘ಅರಸನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಿಸ್ಕಿನ್ ನಿರ್ದೇಶನದ ‘ಟ್ರೈನ್’ ಹೆಸರಿನ ಸಿನಿಮಾನಲ್ಲೂ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version